Tag: Vajubhai Wala

  • ಐಎಂಎ ಪ್ರಕರಣದಲ್ಲಿ ರೋಷನ್ ಬೇಗ್ ಆರೋಪಿಯೋ? ಸಾಕ್ಷಿಯೋ?

    ಐಎಂಎ ಪ್ರಕರಣದಲ್ಲಿ ರೋಷನ್ ಬೇಗ್ ಆರೋಪಿಯೋ? ಸಾಕ್ಷಿಯೋ?

    -ಗೊಂದಲಕ್ಕೆ ಕಾರಣವಾಯ್ತು ರಾಜ್ಯಪಾಲರು ಬರೆದ ಪತ್ರ

    ಬೆಂಗಳೂರು: ರಾಜ್ಯಪಾಲ ವಜುಭಾಯಿ ವಾಲಾ ಅವರು ಬರೆದ ಪತ್ರವೊಂದು ಹಲವು ಅನುಮಾನ ಮತ್ತು ಗೊಂದಲಕ್ಕೆ ಕಾರಣವಾಗಿದೆ. ಐಎಂಎ ಪ್ರಕರಣದಲ್ಲಿ ಮಾಜಿ ಸಚಿವ, ರೋಷನ್ ಬೇಗ್ ಆರೋಪಿಯೋ ಅಥವಾ ಸಾಕ್ಷಿಯೋ ಎಂಬ ಗೊಂದಲವನ್ನು ಹುಟ್ಟು ಹಾಕಿದೆ.

    ರಾಜ್ಯಪಾಲರು ರೋಷನ್ ಬೇಗ್ ಪರವಾಗಿ ತನಿಖಾಧಿಕಾರಿ ರವಿಕಾಂತೇಗೌಡರಿಗೆ ಪತ್ರವನ್ನು ಬರೆದಿದ್ದಾರೆ. ಪತ್ರದಲ್ಲಿ ರೋಷನ್ ಬೇಗ್ ತಮ್ಮ ಶಾಸಕ ಸ್ಥಾನಕ್ಕೆ ಈಗಾಗಲೇ ರಾಜೀನಾಮೆ ನೀಡಿದ್ದಾರೆ. ಐಎಂಎ ಪ್ರಕರಣದಲ್ಲಿ ಸಾಕ್ಷಿಯಾಗಿರುವ ರೋಷನ್ ಬೇಗ್ ಅವರಿಗೆ ಸೂಕ್ತ ಭದ್ರತೆ ಮತ್ತು ಮುಕ್ತವಾಗಿ ಓಡಾಡಲು ಅವಕಾಶ ಕಲ್ಪಿಸಬೇಕು ಎಂದು ಬರೆದಿದ್ದಾರೆ. ಪತ್ರದಲ್ಲಿ ರೋಷನ್ ಬೇಗ್ ಸಾಕ್ಷಿ ಎಂದು ಉಲ್ಲೇಖಿಸಲಾಗಿದೆ.

    ಐಎಂಎ ಪ್ರಕರಣದಲ್ಲಿ ರೋಷನ್ ಬೇಗ್ ಸಾಕ್ಷಿಯೋ ಅಥವಾ ಆರೋಪಿಯೋ ಎಂಬುವುದು ನಿರ್ಧಾರ ಆಗಿಲ್ಲ. ತನಿಖಾಧಿಕಾರಿಗಳ ನಿರ್ಧಾರ ಮುನ್ನವೇ ರಾಜ್ಯಪಾಲರು ಸಾಕ್ಷಿ ಅಂದಿದ್ದು ಯಾಕೆ? ರೋಷನ್ ಬೇಗ್ ಪರ ರಾಜ್ಯಪಾಲರು ನಿಂತಿದ್ಯಾಕೆ ಎಂಬ ಪ್ರಶ್ನೆಗಳು ಹುಟ್ಟಿಕೊಂಡಿವೆ.

    2019 ಜುಲೈ 16ರಂದು ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರೋಷನ್ ಬೇಗ್ ಅವರನ್ನು ವಶಕ್ಕೆ ಪಡೆದುಕೊಂಡಿದ್ದರು. ಅಂದು ರಾತ್ರಿ ವಶಕ್ಕೆ ಪಡೆದು ಪ್ರಕರಣಕ್ಕೆ ಸಂಬಂಧಿಸಿದ ಮಾಹಿತಿ ಪಡೆದುಕೊಂಡು ಮರುದಿನ ಮಧ್ಯಾಹ್ನ ಕಳುಹಿಸಿದ್ದರು.

     

  • ದೋಸ್ತಿಗೆ ರಾಜ್ಯಪಾಲರಿಂದ ವಾರ್ನಿಂಗ್

    ದೋಸ್ತಿಗೆ ರಾಜ್ಯಪಾಲರಿಂದ ವಾರ್ನಿಂಗ್

    ಬೆಂಗಳೂರು: ದೋಸ್ತಿ ಸರ್ಕಾರ ಅಳಿವಿನ ಅಂಚಿನಲ್ಲಿದ್ದರೂ ಎಗ್ಗಿಲ್ಲದೇ ಕಡತ ವಿಲೇವಾರಿ ನಡೆಯುತ್ತಿದೆ. ಅಲ್ಲದೆ ಯದ್ವಾತದ್ವಾ ಅಧಿಕಾರಿಗಳ ವರ್ಗಾವಣೆಯನ್ನೂ ಮಾಡಲಾಗುತ್ತಿದೆ.

    ಈ ಸಂಬಂಧ ರಾಜ್ಯಪಾಲರು ಈಗ ಎಂಟ್ರಿ ಕೊಟ್ಟಿದ್ದಾರೆ. ಸದ್ಯದ ಸನ್ನಿವೇಶದಲ್ಲಿ ಯಾವುದೇ ಮಹತ್ವದ ನಿರ್ಣಯ ಕೈಗೊಳ್ಳಬೇಡಿ. ಯಾವುದೇ ಫೈಲ್ ಕ್ಲಿಯರ್ ಮಾಡಬೇಡಿ. ಅಲ್ಲದೆ ವರ್ಗಾವಣೆ ಆದೇಶ ನೀಡಬಾರದು ಎಂದು ರಾಜ್ಯಪಾಲ ವಜೂಭಾಯ್ ವಾಲಾ ಅವರು ದೋಸ್ತಿ ಸರ್ಕಾರಕ್ಕೆ ನಿರ್ದೇಶನ ನೀಡಿದ್ದಾರೆ.

    ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ವಿಜಯ್ ಭಾಸ್ಕರ್‍ ಗೆ ರಾಜ್ಯಪಾಲರು ಈ ಪತ್ರ ರವಾನಿಸಿದ್ದಾರೆ. ಒಟ್ಟಿನಲ್ಲಿ ವಿಶ್ವಾಸ ಮತಯಾಚನೆಗೆ 2 ಬಾರಿ ಗಡುವು ಕೊಟ್ಟರೂ ಕ್ಯಾರೇ ಎನ್ನದ ದೋಸ್ತಿಗಳು ಇದೀಗ ಈ ವಿಚಾರದಲ್ಲಿ ಮೈತ್ರಿ ನಾಯಕರು ರಾಜ್ಯಪಾಲರಿಗೆ ಗೌರವ ಕೊಡುತ್ತಾರಾ ಎಂಬುದನ್ನು ಕಾದು ನೋಡಬೇಕು.

  • ಸುಧಾಕರ್ ಕರೆತರಲು ಸೂಚಿಸಿದ ರಾಜ್ಯಪಾಲರು

    ಸುಧಾಕರ್ ಕರೆತರಲು ಸೂಚಿಸಿದ ರಾಜ್ಯಪಾಲರು

    ಬೆಂಗಳೂರು: ರಾಜೀನಾಮೆ ನೀಡಿದ ಬಳಿಕ ಚಿಕ್ಕಬಳ್ಳಾಪುರ ಶಾಸಕ ಕೆ.ಸುಧಾಕರ್ ಅವರಿಗೆ ಕಾಂಗ್ರೆಸ್ ನಾಯಕರು ದಿಗ್ಭಂದನ ಹಾದ್ದಾರೆ. ವಿಧಾನಸೌಧದಲ್ಲಿ ಪರಿಸ್ಥಿತಿ ಗಲಾಟೆಯಾಗಿ ಬದಲಾಗುತ್ತಿದ್ದಂತೆ ರಾಜ್ಯಪಾಲ ವಜೂಬಾಯಿ ವಾಲಾ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಅವರಿಗೆ ಶಾಸಕರಿಗೆ ರಕ್ಷಣೆ ನೀಡಿ ಕರೆತರಬೇಕೆಂದು ಸೂಚಿಸಿದ್ದಾರೆ.

    ರಾಜ್ಯಪಾಲರ ಸೂಚನೆ ಮೇರೆಗೆ ಅಲೋಕ್ ಕುಮಾರ್ ಅವರು 1 ಸಾವಿರ ಪೊಲೀಸರನ್ನು ವಿಧಾನಸೌಧಕ್ಕೆ ನಿಯೋಜನೆ ಮಾಡಿದ್ದಾರೆ. ಸ್ವತಃ ಅಲೋಕ್ ಕುಮಾರ್ ಅವರೇ ವಿಧಾನಸೌಧಕ್ಕೆ ಆಗಮಿಸಿದರು. ಇತ್ತ ಬಿಜೆಪಿ ಶಾಸಕರು ಸಹ ವಿಧಾನಸೌಧ ಕೊಠಡಿಗೆ ಆಗಮಿಸಿ ಸುಧಾಕರ್ ಅವರನ್ನು ರಕ್ಷಿಸಿ, ರಕ್ಷಿಸಿ ಎಂದು ಘೋಷಣೆ ಕೂಗುತ್ತಿದ್ದಾರೆ.

    ವಿಧಾನಸೌಧ ಗಲಾಟೆ ಸೌಧವಾಗಿ ಬದಲಾಗುತ್ತಿದ್ದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸರು ಎಲ್ಲ ಪ್ರವೇಶ ದ್ವಾರಗಳನ್ನು ಬಂದ್ ಮಾಡಿದ್ದಾರೆ. ಕೆ.ಜೆ.ಜಾರ್ಜ್ ಅವರ ಕೊಠಡಿಯಲ್ಲಿ ಸುಧಾಕರ್ ಜೊತೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಸಚಿವರಾದ ಎಂ.ಬಿ.ಪಾಟೀಲ್ ಮತ್ತು ಪ್ರಿಯಾಂಕ್ ಖರ್ಗೆ ಮಾತುಕತೆ ನಡೆಸುತ್ತಿದ್ದಾರೆ.

    ವಿಧಾನಸೌಧಕ್ಕೆ ಆಗಮಿಸಿದ ಅಲೋಕ್ ಕುಮಾರ್ ಬಿಗಿ ಪೊಲೀಸ್ ಭದ್ರತೆಯಲ್ಲಿ ಶಾಸಕ ಸುಧಾಕರ್ ಅವರನ್ನು ಕೆ.ಜೆ.ಜಾರ್ಜ್ ಕೊಠಡಿಯಿಂದ ಹೊರ ಕರೆದುಕೊಂಡು ಬಂದರು. ಸುಧಾಕರ್ ಅವರನ್ನು ನೇರವಾಗಿ ರಾಜಭವನಕ್ಕೆ ಕರೆದುಕೊಂಡು ಹೋದರು.