Tag: vajrakaya film

  • ಕೈತುಂಬಾ ಅವಕಾಶವಿರುವಾಗಲೇ ನನಗೆ ಆಕ್ಸಿಡೆಂಟ್‌ ಆಯ್ತು: ನಭಾ ನಟೇಶ್

    ಕೈತುಂಬಾ ಅವಕಾಶವಿರುವಾಗಲೇ ನನಗೆ ಆಕ್ಸಿಡೆಂಟ್‌ ಆಯ್ತು: ನಭಾ ನಟೇಶ್

    ಜ್ರಕಾಯ, ಇಸ್ಮಾರ್ಟ್ ಶಂಕರ್ ಖ್ಯಾತಿಯ ನಟಿ ನಭಾ ನಟೇಶ್ (Nabha Natesh) ಮತ್ತೆ ಸಿನಿಮಾಗೆ ಕಮ್‌ಬ್ಯಾಕ್ ಮಾಡಿದ್ದಾರೆ. ‘ಡಾರ್ಲಿಂಗ್’ ಸಿನಿಮಾ ಮೂಲಕ ಸದ್ದು ಮಾಡ್ತಿದ್ದಾರೆ. ಈ ಚಿತ್ರದ ಪ್ರಚಾರ ಕಾರ್ಯದಲ್ಲಿ 2 ವರ್ಷಗಳ ಹಿಂದೆ ತನಗೆ ಆದ ಆಕ್ಸಿಡೆಂಡ್ ಕುರಿತು ನಟಿ ಮಾತನಾಡಿದ್ದಾರೆ. ಕರಾಳ ದಿನಗಳ ನೆನೆದು ನಭಾ ಭಾವುಕರಾಗಿದ್ದಾರೆ.

    2 ವರ್ಷಗಳ ಹಿಂದೆ ನಟಿಗೆ ಅಪಘಾತದಲ್ಲಿ ಎಡಗೈ ಮತ್ತು ಎಡಭುಜಕ್ಕೆ ಪೆಟ್ಟು ಮಾಡಿಕೊಂಡರು. ಶಸ್ತ್ರಚಿಕಿತ್ಸೆಗೆ ಒಳಗಾದ ನಭಾ ಇದರಿಂದ ಚೇತರಿಸಿಕೊಳ್ಳಲು ಒಂದೂವರೆ ವರ್ಷ ಕಳೆಯಿತು. ಅಂದಿನ ಆ ದಿನ ಹೇಗಿತ್ತು? ಎಂದು ನಟಿ ವಿವರಿಸಿದರು. ಕೈ ತುಂಬಾ ಅವಕಾಶ ಇರುವ ಸಮಯದಲ್ಲಿಯೇ ನನಗೆ ಆಕ್ಸಿಡೆಂಟ್ ಆಯಿತು. ಆ ನಂತರ ಸಿನಿಮಾ ಮಾಡಲು ಸಾಧ್ಯವಾಗಲಿಲ್ಲ. ಆಗ ನನ್ನ ಮನಸ್ಥಿತಿಯೇ ಸಂಪೂರ್ಣ ಬದಲಾಗಿ ಹೋಗಿತ್ತು. ಆಪರೇಷನ್ ಆದ ಹತ್ತು ದಿನಗಳ ನಂತರ ಶೂಟಿಂಗ್ ನಲ್ಲಿ ಭಾಗವಹಿಸಿದ್ದೆ ಆದರೆ ಅದರಿಂದ ಮತ್ತೆ ನನ್ನ ಆರೋಗ್ಯ ಹದಗೆಟ್ಟಿತ್ತು ಎಂದರು. ಆ ನಂತರ ನನಗೆ ಮತ್ತೊಂದು ಶಸ್ತ್ರಚಿಕಿತ್ಸೆ ಮಾಡಲಾಯಿತು ಎಂದು ನಟಿ ಭಾವುಕರಾಗಿದ್ದಾರೆ.

    ನನ್ನ ದೇಹಕ್ಕೆ ಖಂಡಿತವಾಗಿಯೂ ವಿಶ್ರಾಂತಿ ಬೇಕು. ಆರೋಗ್ಯವಾಗಿದ್ದರೆ ಮಾತ್ರ ಏನು ಬೇಕಾದರೂ ಮಾಡಬಹುದು ಎಂದು ನನಗೆ ಅರಿವು ಆಗಿದ್ದು ಆಗಲೇ ಹೀಗಾಗಿಯೇ ಗ್ಯಾಪ್ ತೆಗೆದುಕೊಂಡು ಆರೋಗ್ಯದ ಕಡೆ ಹೆಚ್ಚೆಚ್ಚು ಗಮನ ವಹಿಸಿದೆ. ಅವಕಾಶಗಳನ್ನು ನಾನು ಮತ್ತೆ ಎದುರು ನೋಡುತ್ತಿದ್ದಾಗ ಸಿಕ್ಕ ಸಿನಿಮಾನೇ ಈ ‘ಡಾರ್ಲಿಂಗ್’ ಎಂದಿದ್ದಾರೆ. ಇದನ್ನೂ ಓದಿ:ಬೀದಿಯಲ್ಲಿ ಕುಡಿದು ತೂರಾಡಿದ ಉರ್ಫಿ ಜಾವೇದ್

    ಇನ್ನೂ ‘ಇಸ್ಮಾರ್ಟ್ ಶಂಕರ್’ ಅಂತಹ ಕಮರ್ಷಿಯಲ್ ಸಿನಿಮಾ ಮಾಡಿದ ನಂತರ, ‘ಡಾರ್ಲಿಂಗ್’ನಂತಹ ಪ್ರಯತ್ನಕ್ಕೆ ಮುಂದಾಗಿದ್ದೇಕೆ ಎಂದು ಅನೇಕರು ಪ್ರಶ್ನಿಸಿದ್ದರು. ಈಗ ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಕಥೆಯೇ ಚಿತ್ರಕ್ಕೆ ಬಹುಮುಖ್ಯವಾದದ್ದು ಎಂದಿದ್ದಾರೆ. ನಿರ್ದೇಶಕ ಅಶ್ವಿನ್ ಅವರು ನನ್ನನ್ನು ಸಂಪರ್ಕಿಸಿದ ರೀತಿ ಮತ್ತು ಅವರು ನನ್ನ ಪಾತ್ರವನ್ನು ಹೆಣೆದ ರೀತಿ ಇಷ್ಟವಾಗಿ ಈ ಚಿತ್ರಕ್ಕೆ ನಾನು ಓಕೆ ಎಂದೆ. ನನ್ನ ಪಾತ್ರ ತುಂಬಾ ಡಿಫರೆಂಟ್‌ ಆಗಿದೆ. ನಿಮಗೆಲ್ಲ ಈ ಚಿತ್ರ ಗ್ಯಾರಂಟಿ ಇಷ್ಟವಾಗುತ್ತೆ ಎಂದು ನಭಾ ಭಾವುಕರಾಗಿಯೇ ಮಾತನಾಡಿದ್ದಾರೆ.

    ಅಂದಹಾಗೆ, ‘ಡಾರ್ಲಿಂಗ್’ ಸಿನಿಮಾದಲ್ಲಿ ವಿಭಿನ್ನ ಪಾತ್ರದಲ್ಲಿ ನಭಾ ನಟಿಸಿದ್ದಾರೆ. ಜು.19ಕ್ಕೆ ಸಿನಿಮಾ ರಿಲೀಸ್ ಆಗಲಿದೆ. ಈ ಹಿಂದೆ ನಟಿಸಿರುವ ಸಿನಿಮಾಗಳಿಗಿಂತ ಈ ಚಿತ್ರ ಭಿನ್ನವಾಗಿದೆ.

  • ದುಬಾರಿ ಸಂಭಾವನೆ ಕೇಳಿ, ಅವಕಾಶ ಕಳೆದುಕೊಂಡ `ವಜ್ರಕಾಯ’ ನಟಿ ನಭಾ ನಟೇಶ್

    ದುಬಾರಿ ಸಂಭಾವನೆ ಕೇಳಿ, ಅವಕಾಶ ಕಳೆದುಕೊಂಡ `ವಜ್ರಕಾಯ’ ನಟಿ ನಭಾ ನಟೇಶ್

    `ವಜ್ರಕಾಯ’ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ಚೆಲುವೆ ನಭಾ ನಟೇಶ್ ನಂತರ ಟಾಲಿವುಡ್‌ನಲ್ಲಿ ಗುರುತಿಸಿಕೊಂಡರು. ಇದೀಗ ದುಬಾರಿ ಸಂಭಾವನೆ ಕೇಳಿರುವ ವಿಚಾರಕ್ಕೆ ನಭಾ ನಟೇಶ್ ಸುದ್ದಿಯಲ್ಲಿದ್ದಾರೆ. ಯಾವುದೇ ಅವಕಾಶ ಇಲ್ಲದೆ ಖಾಲಿ ಕೂತಿದ್ದಾರಂತೆ.

     

    View this post on Instagram

     

    A post shared by Nabha Natesh (@nabhanatesh)

    ಶಿವರಾಜ್‌ಕುಮಾರ್‌ಗೆ ನಾಯಕಿಯಾಗುವ ಮೂಲಕ ಚಂದನವನಕ್ಕೆ ಪರಿಚಿತರಾದ ನಟಿ ನಭಾ ನಟೇಶ್ ನಂತರ ಕನ್ನಡದ ಕೆಲವು ಸಿನಿಮಾಗಳಲ್ಲಿ ಕಾಣಿಸಿಕೊಂಡರು. ನಟಿಸಿದ ಮೊದಲ ಚಿತ್ರದಲ್ಲೇ ನಭಾ ಸೈ ಎನಿಸಿಕೊಂಡಿದ್ದರು. ಬಳಿಕ ತೆಲುಗಿನತ್ತ ಮುಖ ಮಾಡಿದ್ದರು. `ಇಸ್ಮಾರ್ಟ್ ಶಂಕರ್’ ಚಿತ್ರದ ಯಶಸ್ಸಿನ ನಂತರ ಸಂಭಾವನೆ ಹೆಚ್ಚಿಸಿಕೊಂಡಿದ್ದ ನಭಾಗೆ ಈಗ ಸಿನಿಮಾಗಳೇ ಇಲ್ವಂತೆ. ಇದನ್ನೂ ಓದಿ:ಬಿಗ್ ಬಾಸ್: ಹೋಟೆಲ್ ಊಟದತ್ತ ವಾಲಿದ ಜಶ್ವಂತ್- ನಂದು ಕಣ್ಣೀರು

    `ಇಸ್ಮಾರ್ಟ್ ಶಂಕರ್’ ಚಿತ್ರದ ಭರ್ಜರಿ ಯಶಸ್ಸಿನ ನಂತರ ನಭಾಗೆ ತೆಲುಗಿನಲ್ಲಿ ಗಟ್ಟಿ ನೆಲೆ ಗಿಟ್ಟಿಸಿಕೊಟ್ಟಿತ್ತು. ಇದಾದ ಬಳಿಕ ಒಂದೊAದು ಚಿತ್ರಕ್ಕೂ ಒಂದು ಕೋಟಿ ಬೇಡಿಕೆ ಇಡುತ್ತಿದ್ದರಂತೆ. ಇದಾದ ಬಳಿಕ ನಭಾ ನಟಿಸಿದ ಸಾಕಷ್ಟು ಚಿತ್ರಗಳು ಗಲ್ಲಾಪೆಟ್ಟಿಗೆ ಫ್ಲಾಪ್ ಆಗಿದೆ. ಇದೀಗ ನಿರ್ಮಾಪಕರು ತಮ್ಮ ಸಿನಿಮಾಗೆ ನಭಾಗೆ ಅವಕಾಶ ಕೊಡಲು ಹಿಂದೆ ಸರಿಯುತ್ತಿದ್ದಾರೆ.

    ದುಬಾರಿ ಸಂಭಾವನೆ ಕೇಳಿ, ತಮಗೆ ಸಿಕ್ಕ ಅವಕಾಶಗಳನ್ನ ನಭಾ ನಟೇಶ್ ಕಳೆದುಕೊಂಡಿದ್ದಾರೆ ಎಂಬ ಟಾಲಿವುಡ್ ಗಲ್ಲಿಯಲ್ಲಿ ಸಿಕ್ಕಾಪಟ್ಟೆ ಚರ್ಚೆ ಆಗುತ್ತಿದೆ. ಇದೀಗ ತಮ್ಮ ಲಿಸ್ಟ್ನಲ್ಲಿ ಯಾವುದೇ ಸಿನಿಮಾ ಇಲ್ಲದೆ ನಭಾ ನಟೇಶ್ ಖಾಲಿ ಕೂತಿದ್ದಾರೆ. ತಮ್ಮ ಸಂಭಾವನೆಯಲ್ಲಿ ರಾಜಿ ಆಗಿ, ಮುಂದಿನ ದಿನಗಳಲ್ಲಿ ಭಿನ್ನ ಪಾತ್ರಗಳಲ್ಲಿ ನಭಾ ಕಾಣಿಸಿಕೊಳ್ಳುತ್ತಾರಾ ಅಂತಾ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ಹೊಸ ಫೋಟೋಶೂಟ್‌ನಲ್ಲಿ ಪಡ್ಡೆಹುಡುಗರ ಟೆಂಪ್ರೇಚರ್‌ ಹೆಚ್ಚಿಸಿದ ನಭಾ ನಟೇಶ್

    ಹೊಸ ಫೋಟೋಶೂಟ್‌ನಲ್ಲಿ ಪಡ್ಡೆಹುಡುಗರ ಟೆಂಪ್ರೇಚರ್‌ ಹೆಚ್ಚಿಸಿದ ನಭಾ ನಟೇಶ್

    `ವಜ್ರಕಾಯ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ನಟಿ ನಭಾ ನಟೇಶ್ ಸದ್ಯ ಟಾಲಿವುಡ್‌ನಲ್ಲಿ ಬ್ಯುಸಿಯಾಗಿದ್ದಾರೆ. ಈ ಮಧ್ಯೆಫೋಟೋಶೂಟ್‌ನಲ್ಲಿ ಹಾಟ್ ಆಗಿ ಕಾಣಿಸಿಕೊಂಡು, ಪಡ್ಡೆಹುಡುಗರ ಟೆಂಪ್ರೇಚರ್ ಹೆಚ್ಚಿಸಿದ್ದಾರೆ. ಸದ್ಯ ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

     

    View this post on Instagram

     

    A post shared by Nabha Natesh (@nabhanatesh)

    ತೆಲುಗಿನ `ಇಸ್ಮಾರ್ಟ್ ಶಂಕರ್’, `ಡಿಸ್ಕೋ ರಾಜಾ’, ಹೀಗೆ ಸಾಕಷ್ಟು ಸಿನಿಮಾಗಳಲ್ಲಿ ಗಮನ ಸೆಳೆದಿರುವ ನಟಿ ನಭಾ ನಟೇಶ್ ಇತ್ತೀಚೆಗಷ್ಟೇ ಹಾಟ್ ಫೋಟೋಶೂಟ್ ಮಾಡಿಸಿದ್ದಾರೆ. ಮಾದಕ ಲುಕ್ಕಿನಲ್ಲಿ ಸಖತ್ ಬೋಲ್ಡ್ ಆಗಿ ಕ್ಯಾಮೆರಾ ಕಣ್ಣಿಗೆ ಪೋಸ್ ಮಾಡಿದ್ದಾರೆ. ಇದನ್ನೂ ಓದಿ:ದುಲ್ಕರ್ ಸಲ್ಮಾನ್ ಜೊತೆ `ಗಟ್ಟಿಮೇಳ’ ನಿಶಾ ರವಿಕೃಷ್ಣನ್

     

    View this post on Instagram

     

    A post shared by Nabha Natesh (@nabhanatesh)

    ಒಂದಿಷ್ಟು ಸಿನಿಮಾಗಳು ನಭಾ ಕೈಯಲ್ಲಿದ್ದು, ತೆರೆಮರೆಯಲ್ಲಿ ಹೊಸ ಸಿನಿಮಾಗಾಗಿ ತಯಾರಿ ಮಾಡಿಕೊಳ್ತಿದ್ದಾರೆ. ಸದ್ಯ ನಟಿಯ ಹಾಟ್ ಫೋಟೋಶೂಟ್ ಮೂಲಕ ಟಾಲಿವುಡ್‌ನಲ್ಲಿ ಸಖತ್ ಸೌಂಡ್ ಮಾಡ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]