Tag: vaishnavi

  • ತಂಡದ ಸದಸ್ಯರ ಮುಂದೆ ಗಳಗಳನೆ ಅತ್ತ ಅರವಿಂದ್

    ತಂಡದ ಸದಸ್ಯರ ಮುಂದೆ ಗಳಗಳನೆ ಅತ್ತ ಅರವಿಂದ್

    ಬಿಗ್‍ಬಾಸ್ ಮನೆಯಲ್ಲಿ ಗ್ರೂಪ್ ಟಾಸ್ಕ್ ಜಿದ್ದಾಜಿದ್ದಿನಲ್ಲಿ ನಡೆಯುತ್ತಿದೆ. ಮಂಜು ಮತ್ತು ಅರವಿಂದ್ ಅವರು ಎರಡು ತಂಡದ ಕ್ಯಾಪ್ಟನ್‍ಗಳಾಗಿ ತಂಡವನ್ನು ಮುನ್ನಡೆಸುತ್ತಿದ್ದಾರೆ. ಈ ನಡುವೆ ಅರವಿಂದ್ ತಮ್ಮ ತಂಡದ ಸದಸ್ಯರೊಂದಿಗೆ ಮಾತನಾಡುತ್ತಿರುವಾಗ ಗಳಗಳನೆ ಅತ್ತಿದ್ದಾರೆ.

    ಅರವಿಂದ್ ತಂಡದ ಸದಸ್ಯೆ ದಿವ್ಯಾ ಉರುಡುಗ, ಗ್ರೂಪ್ ಟಾಸ್ಕ್‍ನಲ್ಲಿ ನಾವು ಜಯಗಳಿಸುವ ಸಾಕಷ್ಟು ಅವಕಾಶಗಳಿದ್ದರೂ ಕೂಡ ನಾವು ಸೋತಿದ್ದು ನನಗೆ ಬೇಸರವಾಯಿತು. ಅದೇ ರೀತಿ ಅರವಿಂದ್ ಮತ್ತು ನಿಧಿ ಜಗಳದಲ್ಲಿ ಅರವಿಂದ್ ನಿಧಿಗೆ ನೀನು ಮುಚ್ಚುಕೊಂಡು ಹೋಗು ಅಂದಿದ್ದು ನನಗೆ ತಪ್ಪು ಎಂದು ಅನಿಸಿತು. ನಾವು ಗೆಲ್ಲುವಂತಹ ಟಾಸ್ಕ್ ಗಳನ್ನು ಸೋತಿದ್ದೇವೆ. ನಮ್ಮಲ್ಲಿ ಹೊಂದಾಣಿಕೆಯ ಕೊರತೆ ಕಾಡುತ್ತಿದೆ ಎಂದು ನನಗೆ ಅನಿಸುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

    ವೈಷ್ಣವಿ, ನಾವು ಗೆಲ್ಲುತ್ತೇವೆ ಎಂದು ಗೊತ್ತಿದ್ದರೂ ಕೂಡ ನಾವು ಸೋತಿದ್ದು ಬೇಸರವಾಗಿದೆ. ಮುಂದಿನ ಟಾಸ್ಕ್ ಗಳಲ್ಲಿ ಇದನ್ನು ಮರುಕಳಿಸುವುದು ಬೇಡ ಎಂದರು. ಇದಕ್ಕೆ ಶಮಂತ್ ಮತ್ತು ಇತರ ಸದಸ್ಯರು ಕೂಡ ಒಪ್ಪಿಗೆ ಸೂಚಿಸಿದ್ದಾರೆ. ಇದನ್ನೂ ಓದಿ: ನಾ ನಿನ್ನ ಮರೆಯಲಾರೆ ರೀತಿ ತೆರೆಮೇಲೆ ಬರಲಿದ್ಯಾಂತೆ ಅರ್ವಿಯಾ ಸಿನಿಮಾ

    ವೈಷ್ಣವಿ ಮಾತಿನ ಬಳಿಕ ಮತ್ತೆ ಮಾತಿಗಿಳಿದ ದಿವ್ಯಾ, ನಿಧಿ ಬಗ್ಗೆ ಆ ಸಮಯದಲ್ಲಿ ಕೆಪಿ ಹೇಳಿದ ಪದ ನನಗೆ ಸರಿ ಅನಿಸಲಿಲ್ಲ ಎಂದರು. ಇದಕ್ಕೆ ಸಂಬರಗಿ, ಕೆಪಿ ಜೋಕ್ ಮಾಡಿದಾಗ ಹಲವು ಬಾರಿ ಮುಚ್ಚುಕೊಂಡು ಇರು ಅಂತ ಹೇಳಿದ್ದಾನೆ. ನಾನು ಹೇಳಿದ್ದೇನೆ ಇದು ಸಾಮಾನ್ಯವಾಗಿ ಮಾತಿನಲ್ಲಿ ಬರುವ ಪದ ಎಂದಿದ್ದಾರೆ. ಇದನ್ನು ಕೇಳಿದ ದಿವ್ಯಾ ಅದು ಬಿಡಿ ಗ್ರೂಪ್ ಟಾಸ್ಕ್ ಸಮಯದಲ್ಲಿ ಆ ಟೈಮ್‍ಗೆ ಅರವಿಂದ್ ಹೇಳಿದ ಮಾತು ಸರಿಯಲ್ಲ ಎಂದರು. ಈ ಮಾತನ್ನು ಕೇಳಿಸಿಕೊಂಡ ಅರವಿಂದ್ ಗಳಗಳನೆ ಅತ್ತರು ಮತ್ತೆ ದಿವ್ಯಾ ಅವರನ್ನು ಸಮಾಧಾನ ಪಡಿಸಿದರು.

    ಇದಾದ ಬಳಿಕ ರಿಂಗರಣ ಆಟದಲ್ಲಿ ತಂಡ ಮಾಡಿದ ತಪ್ಪನ್ನು ಹೇಳಿಕೊಂಡು ಪರಸ್ಪರ ಚರ್ಚೆ ನಡೆಸಿದರು. ಮತ್ತೆ ತಂಡದ ಸದಸ್ಯರು ಇದನೆಲ್ಲ ಬಿಟ್ಟುಬಿಡಿ ಮುಂದಿನ ಟಾಸ್ಕ್‍ನಲ್ಲಿ ಉತ್ತಮವಾಗಿ ಆಡಿ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

  • ರಘುಗೆ  ಹುಚ್ಚುನಾಯಿ ಕಚ್ಚಿದ್ಯಾ ಎಂದಿದ್ಯಾಕೆ ವೈಷ್ಣವಿ..?

    ರಘುಗೆ ಹುಚ್ಚುನಾಯಿ ಕಚ್ಚಿದ್ಯಾ ಎಂದಿದ್ಯಾಕೆ ವೈಷ್ಣವಿ..?

    ಬಿಗ್ ಮನೆಯಲ್ಲಿ ಸ್ಪರ್ಧಿಗಳ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದೆ. ಈ ನಡುವೆ ತುಂಬಾ ಚೆನ್ನಾಗಿ ಮಾತನಾಡಿಕೊಂಡಿದ್ದ ರಘು ಮತ್ತು ವೈಷ್ಣವಿ ಅವರಲ್ಲಿ ಕೂಡ ಮೋಡ ಆವರಿಸಿತ್ತು. ಇದನ್ನು ಸರಿಪಡಿಸಿಕೊಳ್ಳಲು ಈ ಇಬ್ಬರು ಕೂಡ ಒಬ್ಬರಿಗೊಬ್ಬರು ಕೂತು ಮಾತನಾಡಿಕೊಂಡಿದ್ದಾರೆ.

    ತಡರಾತ್ರಿ ಮಾತಿಗಿಳಿದ ವೈಷ್ಣವಿ ಮತ್ತು ರಘು ತಮ್ಮಲ್ಲಿದ್ದ ಭಿನ್ನಾಭಿಪ್ರಾಯಗಳ ಬಗ್ಗೆ ಹೇಳಿಕೊಂಡರು. ನಾನು ನಿಮ್ಮೊಂದಿಗೆ ಮೂರ್ನಾಲ್ಕು ಬಾರಿ ಮಾತನಾಡಿಸಲು ಬಂದೆ ನೀವು ಮಾತನಾಡದೆ ನನ್ನನ್ನು ನೋಡದೆ ಹೋಗಿದ್ದಿರಿ ಎಂದು ವೈಷ್ಣವಿ ರಘುಗೆ ಹೇಳಿದ್ದಾರೆ.

    ಇದಕ್ಕೆ ಉತ್ತರಿಸಿದ ರಘು, ನಾನು ನಿಮ್ಮೊಂದಿಗೆ ಮಾತನಾಡಲು ಬಂದೆ. ನಿಮ್ಮನ್ನು ಹೊರಗಡೆ ಮೋಡ ನೋಡಲು ಕರೆದಿದ್ದೆ ನೀವು ಬಂದಿರಲಿಲ್ಲ. ನಾನು ಮತ್ತೆ ಸುಮ್ಮನಾದೆ ಎಂದರು. ಇದನ್ನು ಕೇಳಿಸಿಕೊಂಡ ವೈಷ್ಣವಿ ನಾನು ಕೂಡ ನಿಮ್ಮನ್ನು ಮಾತನಾಡಿಸಲು ಬಂದೆ. ಏನಾಗಿದೆ ಎಂದು ಕೇಳಿದೆ ನೀವು ಏನಿಲ್ಲ ಎಂದು ಹೇಳಿದಾಗ ನಾನು ನಿಮಗೆ ಹುಚ್ಚುನಾಯಿ ಕಚ್ಚಿದ್ಯಾ ಎಂದು ಕೇಳಿದೆ ಎಂದು ವಿವರಿಸಿದರು. ಇದನ್ನೂ ಓದಿ: ದೊಡ್ಮನೆ ಒಳಗಿನ ಗುಂಪುಗಾರಿಕೆ ಕಂಡು ಬೇಸರ ವ್ಯಕ್ತಪಡಿಸಿದ ಶಮಂತ್

    ನನಗೆ ನೀವು ಕೇಳಿದ್ದು ಕೇಳಿಸಿಲ್ಲ. ನಿಮಗೆ ಹುಚ್ಚುನಾಯಿ ಕಚ್ಚಿತ್ತ ಎಂದು ವೈಷ್ಣವಿಗೆ ಮರು ಪ್ರಶ್ನೆ ಹಾಕಿದ್ದಾರೆ. ವೈಷ್ಣವಿ ಇಲ್ಲ ಪರಿಸ್ಥಿತಿ ಹಾಗೆ ಅನಿಸುತ್ತಿತ್ತು. ಇಲ್ಲಿನ ಕೆಲವು ಘಟನೆಗಳನ್ನು ನೋಡಿದಾಗ ಮನಸ್ಥಿತಿ ಬದಲಾಗಬೇಕು ಎಂದು ಅಂದುಕೊಂಡಿದ್ದೇನೆ ಎಂದರು. ಬಳಿಕ ಪರಸ್ಪರ ಕ್ಷಮೆ ಯಾಚಿಸುತ್ತಾ ಮುಖದಲ್ಲಿ ನಗು ತರಿಸಿಕೊಂಡರು.

  • ವೈಷ್ಣವಿ ಧರಿಸೋದು ಮಾತ್ರ ಬಿಟ್ಟಿ ಬಟ್ಟೆ- ಹೇಗೆಂದು ವಿವರಿಸಿದ ಕಣ್ಮಣಿ

    ವೈಷ್ಣವಿ ಧರಿಸೋದು ಮಾತ್ರ ಬಿಟ್ಟಿ ಬಟ್ಟೆ- ಹೇಗೆಂದು ವಿವರಿಸಿದ ಕಣ್ಮಣಿ

    ಟ, ನಟಿಯರು ಬಟ್ಟೆಗಳನ್ನು ಹೇಗೆ ನಿರ್ವಹಿಸುತ್ತಾರೆ. ಎಲ್ಲವನ್ನೂ ಅವರೇ ಕೊಳ್ಳುತ್ತಾರಾ, ಇಲ್ಲವೇ ಸ್ಪಾನ್ಸರ್ ಮಾಡುತ್ತಾರೋ ಅಥವಾ ಯಾರಾದರೂ ಡಿಸೈನರ್ಸ್ ಕೊಲ್ಯಾಬರೇಶನ್ ಮಾಡುತ್ತಾರೋ ಎಂಬ ಹಲವು ಪ್ರಶ್ನೆಗಳು ಜನಸಾಮಾನ್ಯರಿಗೆ ಕಾಡುತ್ತಿರುತ್ತವೆ. ಇದಕ್ಕೆ ಇದೀಗ ಬಿಗ್ ಬಾಸ್ ಮನೆಯಲ್ಲಿ ಉತ್ತರ ಸಿಕ್ಕಿದೆ. ಹೌದು ವೈಷ್ಣವಿ ಅವರ ಬಟ್ಟೆ ಕುರಿತು ಕೇಳಿದಾಗ ಹಲವು ವಿಚಾರಗಳನ್ನು ಕಣ್ಮಣಿ ತೆರೆದಿಟ್ಟಿದ್ದಾರೆ.

    ಸ್ಪರ್ಧಿಗಳನ್ನು ಶೂಟಿಂಗ್‍ಗೆ ಕರೆದು ಇಂದೂ ಸಹ ಕಣ್ಮಣಿ ಹಲವು ವಿಚಾರದ ಕುರಿತು ಚರ್ಚಿಸಿದ್ದಾರೆ. ಅಲ್ಲದೆ ಇದು ಕೊನೇಯ ದಿನದ ಎಪಿಸೋಡ್ ಆಗಿದ್ದರಿಂದ ವೀಕ್ಷಕರು ಸಹ ಅಷ್ಟೇ ಕುತೂಹಲದಿಂದ ಬಿಗ್ ಬಾಸ್ ಶೋ ವೀಕ್ಷಿಸಿದ್ದಾರೆ. ಇದೆಲ್ಲದರ ಮಧ್ಯೆ ಕಣ್ಮಣಿ ಹಲವು ಇಂಟರೆಸ್ಟಿಂಗ್ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಮಾತು ಆರಂಭಿಸುತ್ತಿದ್ದಂತೆ ಸ್ಪರ್ಧಿಗಳ ಬಟ್ಟೆ ಬಗ್ಗೆ ಮಾತನಾಡಿದ್ದಾರೆ. ಎಲ್ಲ ಹೆಣ್ಣು ಮಕ್ಕಳು ತುಂಬಾ ಮುದ್ದಾಗಿ ಕಾಣಿಸುತ್ತಿದ್ದೀರಿ. ಗಂಡು ಮಕ್ಕಳಲ್ಲಿ ಪ್ರಶಾಂತ್ ಹಾಗೂ ಅರವಿಂದ್ ಚೆನ್ನಾಗಿ ಕಾಣುತ್ತಿದ್ದಾರೆ ಎಂದು ಹೇಳಿದ್ದಾರೆ. ಚಕ್ರವರ್ತಿಯವರು ಯಾಕೋ ಮೂಡಲ್ಲೇ ಇಲ್ಲ ಎಂದು ಕಾಲೆಳೆದಿದ್ದಾರೆ.

    ಬಳಿಕ ವೈಷ್ಣವಿ ಬಟ್ಟೆ ಬಗ್ಗೆ ಕಣ್ಮಣಿ ಮಾತನಾಡಿದ್ದಾರೆ. ನಿಮಗೆ ಹಳದಿ ಬಣ್ಣ ಇಷ್ಟಾನಾ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ವೈಷ್ಣವಿ ಹಾ ಇಷ್ಟ, ಆದರೆ ಬ್ಲ್ಯಾಕ್ ತುಂಬಾ ಇಷ್ಟ ಎಂದಿದ್ದಾರೆ. ತಕ್ಷಣವೇ ತುಂಬಾ ಚೆನ್ನಾಗಿ ಕಾಣುತ್ತಿದ್ದೀರಿ, ಎಲ್ಲಿ ತಗೋಂಡಿದ್ದು ಎಂದು ಕಣ್ಮಣಿ ಪ್ರಶ್ನಿಸಿದ ತಕ್ಷಣ ಕೊಲ್ಯಾಬರೇಶನ್ ಎಂದು ಸ್ಪರ್ಧಿಗಳು ಹೇಳುತ್ತಾರೆ. ಈ ಕೊಲ್ಯಾಬರೇಶನ್ ಬಗ್ಗೆ ನಮ್ಮ ವೀಕ್ಷಕರಿಗೆ ಗೊತ್ತಿಲ್ಲ ಸ್ವಲ್ಪ ವಿವರಿಸುತ್ತೀರಾ ಎಂದು ಕಣ್ಮಣಿ ಪ್ರಶ್ನಿಸಿದ್ದಾರೆ.

    ಇದಕ್ಕೆ ಉತ್ತರಿಸಿದ ವೈಷ್ಣವಿ, ತುಂಬಾ ಪ್ರೀತಿಯಿಂದ ನನ್ನ ಡಿಸೈನರ್ಸ್, ಸ್ಟೈಲಿಸ್ಟ್ ನನಗೆ ಬಟ್ಟೆಗಳನ್ನು ಕಳುಹಿಸಿಕೊಡುತ್ತಾರೆ. ಯಾವುದೇ ರೀತಿಯ ಹಣವನ್ನು ಅಪೇಕ್ಷಿಸದ್ದಕ್ಕೆ ಕೊಲಾಬರೇಶನ್ ಇಂದು ಇವರು ಕರೆಯುತ್ತಾರೆ. ಆದರೆ ಅವರು ನನಗೋಸ್ಕರ ಪ್ರೀತಿಯಿಂದ ಮಾಡಿಕೊಡುತ್ತಾರೆ ಎಂದು ಹೇಳುತ್ತಾರೆ. ಮಧ್ಯ ಪ್ರವೇಶಿಸಿದ ಮಂಜು ಪಾವಗಡ, ಅಂದರೆ ಇದಕ್ಕೆ ದುಡ್ಡು ಏನೂ ಇಲ್ಲ, ಸುಮ್ಮನೇ ಕೊಟ್ಟು ಮತ್ತೆ ವಾಪಸ್ ಅವರೇ ತೆಗೆದುಕೊಂಡು ಹೋಗುತ್ತಾರೆ ಎನ್ನುತಾರೆ. ಇದಕ್ಕೆ ಧ್ವನಿಗೂಡಿಸಿದ ಪ್ರಶಾಂತ್ ಸಂಬರಗಿ ಸೆಲೆಬ್ರಿಟಿ, ಅಗ್ನಿಸಾಕ್ಷಿ ಹಿರೋಯಿನ್ ಅಲ್ವಾ ಎಂದು ಹೇಳುತ್ತಾರೆ. ಚಕ್ರವರ್ತಿ ಸಹ ಮಾತನಾಡಿ, ಅಂಗಡಿಗಳಲ್ಲಿ ಗೊಂಬೆಗೆ ಹಾಕುವ ಬದಲು ಇಲ್ಲಿ ಹಾಕಿ, ವಾಪಸ್ ಕೊಂಡೊಯ್ಯುತ್ತಾರೆ. ಇವರು ಗೊಂಬೆ ಥರ ಇದ್ದಾರಲ್ಲಾ ಅದಕ್ಕೆ ಇವರಿಗೆ ಕೊಡುತ್ತಾರೆ ಎನ್ನುತ್ತಾರೆ.

    ಬಳಿಕ ಕಣ್ಮಣಿ ಎಷ್ಟು ಜನ ಕೊಲಾಬರೇಶನ್ ಇಲ್ಲಿ ಎಂದು ಪ್ರಶ್ನಿಸಿದ್ದಾರೆ, ಆಗ ವೈಷ್ಣವಿ ಮಾತ್ರ ಕೈ ಎತ್ತಿದ್ದಾರೆ. ತಕ್ಷಣವೇ ಮಾತನಾಡಿದ ಕಣ್ಮಣಿ ಹಾಗಾದ್ರೆ ಬಿಟ್ಟಿ ಬಟ್ಟೆ ಸಿಗುತ್ತಿರುವುದು ವೈಷ್ಣವಿಗೆ ಮಾತ್ರ ಎಂದು ಕಣ್ಮಣಿ ಕಾಲೆಳೆದಿದ್ದಾರೆ.

  • ವೈಷ್ಣವಿಯಿಂದ ಇರಿಟೇಟ್ ಆಗ್ತಿದೆ ಅಂದ ಅರವಿಂದ್, ಶಮಂತ್

    ವೈಷ್ಣವಿಯಿಂದ ಇರಿಟೇಟ್ ಆಗ್ತಿದೆ ಅಂದ ಅರವಿಂದ್, ಶಮಂತ್

    ಕೊರೊನಾದಿಂದ ಬಿಗ್‍ಬಾಸ್ ಕಾರ್ಯಕ್ರಮ ಅಂತಿಮ ಹಂತಕ್ಕೆ ತಲುಪಿದೆ. ಸದ್ಯ ವಾರದ ಕೊನೆಯ ದಿನ ಮನೆಮಂದಿಗೆ ಕಣ್ಮಣಿ ಕೇಳಿದ ಪ್ರಶ್ನೆಯೊಂದಕ್ಕೆ ಶಮಂತ್ ಹಾಗೂ ಅರವಿಂದ್ ವೈಷ್ಣವಿಯನ್ನು ಸಹಿಸಿಕೊಂಡು ಇದ್ದೀವಿ ಎಂದಿದ್ದಾರೆ.

    ಬಿಗ್‍ಬಾಸ್ ಮನೆಯಲ್ಲಿ ನಿಧಿ ಹಾಗೂ ಶುಭಾ ಇವರಿಬ್ಬರ ನಡುವೆ ಯಾರು, ಯಾರನ್ನು ಹೆಚ್ಚಾಗಿ ಸಹಿಸಿಕೊಳ್ಳುತ್ತಾರೆ ಎಂದು ಕಣ್ಮಣಿ ಪ್ರಶ್ನಿಸಿದೆ. ಆಗ ಮನೆಯ ಸದಸ್ಯರು ಒಬ್ಬೊಬ್ಬರಾಗಿಯೇ ತಮ್ಮ ಅಭಿಪ್ರಾಯವನ್ನು ತಿಳಿಸುತ್ತಾ ಬರುತ್ತಾರೆ. ಈ ವೇಳೆ ಶಮಂತ್ ಸರದಿ ಬಂದಾಗ, ನನಗೆ ಮೊನ್ನೆಯಿಂದ ವೈಷ್ಣವಿಯವರು ಬ್ರೂಸ್ಲಿ, ಬ್ರೂಸ್ಲಿ ಅಂತಾ ಒಂದು ಜೋಕ್ ಹೇಳುತ್ತಿದ್ದಾರೆ. ಅದನ್ನು ಕೇಳಿ ತಲೆಯನ್ನ ಹೋಗಿ ಗೋಡೆಗೆ ಗುದ್ದಿಕೊಳ್ಳೋಣ ಎನ್ನುವಷ್ಟು ತಲೆ ಕೆಟ್ಟು ಹೋಗಿದೆ. ಅದರಲ್ಲಿ ಉತ್ತರ ಯಾವುದೋ, ಪ್ರಶ್ನೆ ಯೂವುದೋ ಅಂತ ಗೊತ್ತೆ ಆಗುತ್ತಿರಲಿಲ್ಲ. ಆದರೆ ಸಖತ್ ಆಗಿ ಇತ್ತು. ಸ್ವಲ್ಪನಾದರೂ ತಲೆಗೆ ಕೆಲಸ ಕೊಟ್ಟರು. ಸೋ ವೈಷ್ಣವಿಯವರನ್ನು ಸಹಿಸಿಕೊಳ್ಳುತ್ತಿದ್ದೇನೆ ಎಂದು ಹೇಳುತ್ತಾರೆ.

    ನಂತರ ಅರವಿಂದ್, ಸಹಿಸಿಕೊಳ್ಳುವುದೆಂದರೆ ಶಮಂತ್ ಹೇಳಿದಂತೆ ವೈಷ್ಣವಿ. ಯಾಕೆಂದರೆ ಕೆಲವೊಂದು ಬಾರಿ ಪಾಯಿಂಟ್ ಇಲ್ಲದಿರುವ ಜೋಕ್ ಹೇಳುತ್ತಿರುತ್ತಾರೆ. ಅದು ಡೈರೆಕ್ಷನ್‍ನಲ್ಲಿಯೂ ಇರುವುದಿಲ್ಲ. ಅದನ್ನು ಸ್ವಲ್ಪ ನುಂಗಿ, ನುಂಗಿ ಹೇಳುತ್ತಿರುತ್ತಾರೆ. ಅದಕ್ಕೆ ನಾನು ರೇಗಾಡಿಕೊಂಡು ಸಹಿಸಿಕೊಳ್ಳುತ್ತಿರುತ್ತೇನೆ. ಪಾಯಿಂಟ್ ಇಲ್ಲದೇ ಇರುವುದಕ್ಕೆ ರೇಗಾಡುತ್ತಿರುತ್ತೇವೆ ಹೊರತು ಜೋಕ್‍ಗೆ ರೇಗಾಡುವುದಿಲ್ಲ ಎನ್ನುತ್ತಾರೆ.

  • ಅರವಿಂದ್ ಕೆಲ್ಸ ನೋಡಿ ಶಾಕ್ – ಮತ್ತೊಮ್ಮೆ ದಿವ್ಯಾ ಕ್ಲೀನ್ ಬೌಲ್ಡ್

    ಅರವಿಂದ್ ಕೆಲ್ಸ ನೋಡಿ ಶಾಕ್ – ಮತ್ತೊಮ್ಮೆ ದಿವ್ಯಾ ಕ್ಲೀನ್ ಬೌಲ್ಡ್

    ಬಿಗ್‍ಬಾಸ್ ಮನೆಯ ಕ್ಯೂಟ್ ಕಪಲ್ ಅಂದರೆ ಅರವಿಂದ್ ಹಾಗೂ ದಿವ್ಯಾ ಉರುಡುಗ ಎಂದೇ ಹೇಳಬಹುದು. ಬಿಗ್‍ಬಾಸ್ ಮನೆಯಲ್ಲಿ ಎಲ್ಲೆ ನೋಡಿದರು ಈ ಜೋಡಿ ಒಟ್ಟಿಗೆ ಕಾಣಿಸಿಕೊಳ್ಳುತ್ತಾರೆ. ಯಾವುದೇ ಟಾಸ್ಕ್ ನೀಡಿದರೂ ಇಬ್ಬರು ಅದನ್ನು ಬಹಳ ಚೆನ್ನಾಗಿ ನಿಭಾಯಿಸುತ್ತಾರೆ. ಇವಬ್ಬರ ನಡುವಿನ ಹೊಂದಾಣಿಕೆ, ಕಾಳಜಿ, ಪ್ರೀತಿ ನೋಡಿದ ಮನೆಮಂದಿ ಈ ಜೋಡಿ ಒಂದಾದರೆ ಎಷ್ಟು ಚೆಂದ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.

    ಸದ್ಯ ಕೆಲವು ದಿನಗಳಿಂದ ದಿವ್ಯಾ ಉರುಡುಗ ಅನಾರೋಗ್ಯಕ್ಕೆ ಒಳಗಾಗಿದ್ದಾರೆ. ಹೀಗಾಗಿ ದಿವ್ಯಾ ಉರುಡಗ ಬಗ್ಗೆ ಅರವಿಂದ್ ಹೆಚ್ಚು ಕಾಳಜಿ ತೋರಿತ್ತಿದ್ದಾರೆ. ಇದಕ್ಕೆ ಉದಾಹರಣೆ ಎಂಬಂತೆ ನಿನ್ನೆ ಅರವಿಂದ್ ದಿವ್ಯಾ ಉರುಡುಗ ಬಟ್ಟೆಯನ್ನು ಒಗೆದಿದ್ದಾರೆ.

    ನಿನ್ನೆ ಅರವಿಂದ್ ಬಟ್ಟೆ ಒಗೆದಿರುವುದನ್ನು ನೋಡಿ ದಿವ್ಯಾ ಉರುಡುಗ ಶಾಕ್ ಆಗಿದ್ದಾರೆ. ಇದಕ್ಕೆ ವೈಷ್ಣವಿ ದಿವ್ಯಾ ಉರುಡುಗ ಯಾಕೆ ಶಾಕ್ ಆಗಿದ್ದಾರೆ ಎಂದು ಅರವಿಂದ್‍ಗೆ ಕೇಳುತ್ತಾರೆ. ಆಗ ಅರವಿಂದ್ ಏನಿಲ್ಲಾ ಇಷ್ಟೇ ಎಂದು ದಿವ್ಯಾ ಉರುಡುಗ ಪ್ಯಾಟ್ ಒಗೆದಿರುವುದನ್ನು ತೋರಿಸುತ್ತಾರೆ.

     

    ಬಳಿಕ ಏನಾಗಿಲ್ಲ, ಬಟ್ಟೆ ಅಷ್ಟೇ ಒಗೆದಿರುವುದು ಎಂದು ಅರವಿಂದ್ ದಿವ್ಯಾ ಉರುಡುಗಗೆ ಸಮಾಧಾನ ಪಡಿಸುತ್ತಾ, ಬಟ್ಟೆ ಕೊಟ್ಟು ಇಚೆ ಒಣಗಾಕು ಎನ್ನುತ್ತಾರೆ. ಆಗ ದಿವ್ಯಾ ಯಾಕೆ ಹೀಗೆ ಮಾಡಿದ್ರಿ ಎಂದಾಗ ಅನ್ನುತ್ತಾ ಅರವಿಂದ್ ಕೆನ್ನೆ ಮೇಲೆ ಕೈನಿಂದ ಪ್ರೀತಿಯಿಂದ ಸವರಿ ಹೋಗುತ್ತಾರೆ.

    ನಂತರ ನನಗೆ ಒಂಥರಾ ಅನಿಸುತ್ತಿದೆ ಎಂದು ವೈಷ್ಣವಿ ಬಳಿ ಹೇಳುತ್ತಾರೆ. ಅದಕ್ಕೆ ವೈಷ್ಣವಿ ಮತ್ತೊಂದು ಬಾರಿ ನೀವು ಒಗೆದು ಕೊಡಿ ಅಷ್ಟೇ ಎಂದು ಸಲಹೆ ನೀಡುತ್ತಾರೆ.

  • ವೈಷ್ಣವಿಗೆ ಚಿನ್ನ ಎಂದ ಶಮಂತ್ !

    ವೈಷ್ಣವಿಗೆ ಚಿನ್ನ ಎಂದ ಶಮಂತ್ !

    ಬಿಗ್‍ಬಾಸ್ ಮನೆಯಲ್ಲಿ ಇತ್ತೀಚೆಗೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವ ಶಮಂತ್ ಇದೀಗ ವೈಷ್ಣವಿಗೆ ಚಿನ್ನ ಎಂದು ಕರೆಯುವ ಮೂಲಕ ಸಖತ್ ಸದ್ದು ಮಾಡುತ್ತಿದ್ದಾರೆ.

    ನಿಧಿ ಹಾಗೂ ವೈಷ್ಣವಿ ಬಾತ್ ರೂಮ್ ಏರಿಯಾದಲ್ಲಿ ನಿಂತು ಮುಖಕ್ಕೆ ಫೇಸ್ ಪ್ಯಾಕ್ ಹಾಗೂ ಕ್ರೀಮ್ ಹಚ್ಚಿಕೊಳ್ಳುತ್ತಿದ್ದ ವೇಳೆ ಶಮಂತ್ ಇಬ್ಬರ ಮಧ್ಯೆ ನಿಂತು ಕುಡಿದವರಂತೆ ನಟಿಸಿದ್ದಾರೆ. ಅಲ್ಲದೇ ನಿಧಿ ಸುಬ್ಬಯ್ಯಗೆ ಫೇಸ್ ಪ್ಯಾಕ್ ಹಾಕಿಕೊಳ್ಳಬೇಕಾದರೆ ಚಿನ್ನ ಹುಷಾರು ಕಣ್ಣಿಗೆ ಹೋಗಿ ಬಿಟ್ಟತ್ತು ಎನ್ನುತ್ತಾರೆ. ಆಗ ವೈಷ್ಣವಿ ಎಷ್ಟು ಕಾಳಜಿ ಎಂದು ಹೇಳಿದಾಗ ಶಮಂತ್ ಚಿನ್ನ ನೀನು ಹಾಗೇ ಮಾತನಾಡಬೇಡ ಎಂದು ಹೇಳುತ್ತಾರೆ.

    ಆಗ ನಿಧಿ ಎಷ್ಟು ಚಿನ್ನ ನಿನಗೆ ಎಂದು ಶಮಂತ್ ಕೇಳುತ್ತಾರೆ. ಆಗ ಶಮಂತ್ ನಿಧಿಗೆ ನೀನು ನನ್ನ ಚಿನ್ನ, ವೈಷ್ಣವಿ ನನ್ನ ರನ್ನ ಎಂದು ಹೇಳುತ್ತಾರೆ. ಈ ವೇಳೆ ವೈಷ್ಣವಿ ನೀನು ಯಾರು ಹಾಗಾದ್ರೆ ಅಂದಾಗ, ನಾನು ಮುನ್ನ. ನೀನು ಹೀಗೆ ಹೆಚ್ಚಿಗೆ ಮಾತನಾಡುತ್ತಿದ್ದರೆ ನಿನಗೆ ಗುನ್ನ ಇಟ್ಟು ಬಿಡುತ್ತೇನೆ ಎಂದು ವೈಷ್ಣವಿಗೆ ಹೇಳುತ್ತಾರೆ.

    ನೀನು 6 ವರ್ಷ ವಿಲನ್‍ನನ್ನು ಮನೆಯಲ್ಲಿಯೇ ಇಟ್ಟುಕೊಂಡು ಕಣ್ಣಾ ಮುಚ್ಚಾಲೆ ಆಟ ಆಡಿದ್ಯಾ? ತಾಕತ್ತು ಇರಬೇಕು ಯಾವಾಗಲೂ, ಒಂದೇ ಒಂದು ಸುಳಿವು ನೀನು ಸಿದ್ದಾರ್ಥ್‍ಗೆ ಕೊಟ್ಟಿದ್ದರೆ ನೀನು ಎಲ್ಲೋ ಹೋಗಿ ಬಿಡುತ್ತಿದ್ದೆ ಎಂದು ವಾಲಾಡುತ್ತಾ ಶಮಂತ್ ವೈಷ್ಣವಿಗೆ ಅಗ್ನಿ ಸಾಕ್ಷಿ ಸಿರಿಯಲ್ ಬಗ್ಗೆ ಮಾತನಾಡುತ್ತಾರೆ.

    ಚಿನ್ನ ಆರುವರೆ ವರ್ಷ ನನ್ನ ಲೈಫ್‍ನಲ್ಲಿ ಅರ್ಧಗಂಟೆ 8 ರಿಂದ 8.30ವರೆಗೂ ನಿನಗೋಸ್ಕರ ಎತ್ತಿಟ್ಟು ಬಿಟ್ಟಿದ್ದೆ. ನಂತರ ಬಾರ್ ಕಡೆಗೆ ಹೋಗುತ್ತಿದ್ದೆ ಎಂದು ಹಾಸ್ಯ ಮಾಡಿದ್ದಾರೆ.

  • ಬಿಗ್‍ಬಾಸ್ ಮನೆಯಲ್ಲಿ ಶುಭಾ, ವೈಷ್ಣವಿ ‘ಮೇಕಪ್’ ಮಾತು

    ಬಿಗ್‍ಬಾಸ್ ಮನೆಯಲ್ಲಿ ಶುಭಾ, ವೈಷ್ಣವಿ ‘ಮೇಕಪ್’ ಮಾತು

    ಬೆಂಗಳೂರು: ಬಿಗ್ ಮನೆಯಲ್ಲಿ ಇರುವ ಸ್ಪರ್ಧಿಗಳು ಮನೆಯಲ್ಲಿ ದಿನಕಳೆಯುತ್ತಿದ್ದಂತೆ ಹೊಸತನವನ್ನು ಕಲಿಯುತ್ತಿದ್ದಾರೆ. ಅದರಲ್ಲೂ ಮೇಕಪ್ ಇಲ್ಲದೆ ಹೊರಬರದೆ ಇರುವಂತಹ ಕೆಲ ಸ್ಪರ್ಧಿಗಳು ಇದೀಗ ಮೇಕಪ್ ಮಾಡುವುದಿಲ್ಲವಂತೆ ಹೀಗೆ ತಮ್ಮ ಮೇಕಪ್ ಅನುಭವಗಳನ್ನು ಶುಭಾ ಮತ್ತು ವೈಷ್ಣವಿ ಜೊತೆಗೆ ಕೂತು ಮಾತನಾಡಿಕೊಂಡಿದ್ದಾರೆ.

    ಬಿಗ್‍ಮನೆಯಲ್ಲಿ ಆರಂಭದ ದಿನಗಳಲ್ಲಿ ಮೇಕಪ್ ಬಗ್ಗೆ ಭಾರೀ ಸುದ್ದಿಯಾಗುತ್ತಿತ್ತು. ಆ ಬಳಿಕ ಸ್ವಲ್ಪ ಕಡಿಮೆಯಾಗಿತ್ತು ಇದೀಗ ಮೇಕಪ್ ಕುರಿತು ಮತ್ತೆ ಶುಭಾ ಮತ್ತು ವೈಷ್ಣವಿ ಮಾತೆತ್ತಿದ್ದಾರೆ. ಶುಭಾ ಮೊದಲು ಸ್ನಾನ ಮಾಡಿ ಬಂದ ಮೇಲೆ ಮೇಕಪ್ ಹಾಕದೆ ಇರುವಂತಹ ಒಂದು ವಿಷಯ ನನಗೆ ಸರಿಯಾಗಿ ಅರಿವಾಗಿದ್ದು ಈ ವಾರ. ಬಿಗ್ ಮನೆಯಲ್ಲಿ ಇದೀಗ ಮೇಕಪ್ ಇಲ್ಲದೆ ಇರುವಂತಹ ದಿನಗಳನ್ನು ಕಳೆಯುತ್ತಿದ್ದೇವೆ ಇದು ಖುಷಿ ಕೊಟ್ಟಿದೆ ಎಂದರು. ಇದಕ್ಕೆ ವೈಷ್ಣವಿ, ನಾನು ಹೊರಗಡೆ ಹೋಗಬೇಕಾದರೆ ಮೇಕಪ್ ಇಲ್ಲದೆ ಹೋಗುತ್ತಿರಲಿಲ್ಲ. ಅದು ಬೇಕೇ ಬೇಕು ಎನ್ನುವ ಭಾವನೆ ಇತ್ತು. ಆದರೆ ಇಲ್ಲಿಗೆ ಬಂದ ನಂತರ ಆ ಭಾವನೆ ಬದಲಾಗಿದೆ ಎಂದು ಅಭಿಪ್ರಾಯ ಹಂಚಿಕೊಂಡರು.

    ನಂತರ ಮಾತು ಮುಂದುವರಿಸಿದ ಶುಭಾ ಬಿಗ್‍ಬಾಸ್‍ಗೆ ಬಂದ ಮೊದಲ ದಿನ ನನಗೆ ಮೇಕಪ್ ಬೇಕೇ ಬೇಕು ಅನಿಸುತ್ತಿತ್ತು ನಂತರದ ದಿನಗಳಲ್ಲಿ ಇದು ಇಲ್ಲದೆ ಇರಬಹುದು ಎಂಬುದನ್ನು ಅರಿತುಕೊಂಡೆ. ಇಲ್ಲಿ ಕಳೆಯುತ್ತಿರುವ ದಿನಗಳು ತುಂಬಾ ಅನುಭವಗಳನ್ನು ಕೊಡುತ್ತಿದೆ. ನಾವು ಇಲ್ಲಿ ಹಲವು ರೀತಿಯಲ್ಲಿ ಹೊಸತನವನ್ನು ಕಲಿಯುತ್ತಿದ್ದೇವೆ ಎಂದರು.

    ಇಲ್ಲಿನ ದಿನಗಳು ತುಂಬಾ ಅನುಭಗಳನ್ನು ಕಲಿಸಿಕೊಡುತ್ತಿದೆ. ಇದು ಬಿಗ್‍ಬಾಸ್ ಮನೆಯಲ್ಲಿ ಬಿಟ್ಟು ಬೇರೆ ಎಲ್ಲೂ ಸಿಗಲ್ಲ. ತುಂಬಾ ಖುಷಿಕೊಡುತ್ತಿದೆ ಎಂದು ವೈಷ್ಣವಿ ಮತ್ತು ಶುಭಾ ಒಬ್ಬರಿಗೊಬ್ಬರು ಮಾತು ಹಂಚಿಕೊಂಡರು.

    ಪ್ರತಿ ಸ್ಪರ್ಧಿಗಳು ಕೂಡ ಬಿಗ್ ಮನೆಗೆ ಬಂದ ನಂತರ ಹೊಸತನವನ್ನು ಕಲಿಯುತ್ತಿದ್ದಾರೆ. ಇತರೊಂದಿಗೆ ಬೆರೆಯುತ್ತಿದ್ದಾರೆ ಇದೆಲ್ಲದರೊಂದಿಗೆ ಜಗಳ, ಹರಟೆ, ಪ್ರೀತಿ ವಾತ್ಸಲ್ಯ ಎಲ್ಲವೂ ಜೊತೆಯಾಗಿದೆ. ಇದನ್ನು ನೋಡಿ ಬಿಗ್‍ಬಾಸ್ ಅಭಿಮಾನಿಗಳು ಖುಷಿ ಪಡುತ್ತಿದ್ದಾರೆ.

  • ಮನೆಯ ಗಾಜಿನ ಬೌಲ್‍ನ್ನು ಒಡೆದಿದಕ್ಕೆ ವೈಷ್ಣವಿಗೆ ಸಿಕ್ಕ ಶಿಕ್ಷೆ ಏನು ಗೊತ್ತಾ?

    ಮನೆಯ ಗಾಜಿನ ಬೌಲ್‍ನ್ನು ಒಡೆದಿದಕ್ಕೆ ವೈಷ್ಣವಿಗೆ ಸಿಕ್ಕ ಶಿಕ್ಷೆ ಏನು ಗೊತ್ತಾ?

    ಬೆಂಗಳೂರು: ಬಿಗ್‍ಮನೆಯಲ್ಲಿ ಟಾಸ್ಕ್, ಹರಟೆ, ಮಾತು, ಕವನ ಹೀಗೆ ಸಂತೋಷದಿಂದ ಇರುವ ಸ್ಪರ್ಧಿಗಳು ಸ್ಪರ್ಧೆಯಲ್ಲಿ ಸೋತಾಗ ಅಥವಾ ಏನಾದರು ತಪ್ಪು ಮಾಡಿದರೆ ಅವರಿಗೆ ಬಿಗ್‍ಬಾಸ್ ಶಿಕ್ಷೆ ಕೂಡ ಕೊಡುತ್ತಾರೆ. ಬಿಗ್ ಮನೆಯಲ್ಲಿದ್ದ ಗಾಜಿನ ಬೌಲ್‍ನ್ನು ಒಡೆದು ಹಾಕಿದ್ದ ಮನೆಯ ಸದಸ್ಯೆ ವೈಷ್ಣವಿ ಇದೀಗ ಬಿಗ್ ಕೆಂಗಣ್ಣಿಗೆ ಗುರಿಯಾಗಿ ಶಿಕ್ಷೆ ಅನುಭವಿಸಲು ತಯಾರಾಗಿದ್ದಾರೆ.

    ಬಿಗ್ ಮನೆಯಲ್ಲಿ ತುಂಬಾ ಲವಲವಿಕೆಯಿಂದ ಓಡಾಡಿಕೊಂಡು ಸ್ಪರ್ಧೆಯಲ್ಲಿ ಉತ್ತಮವಾಗಿ ತಮ್ಮ ಸಾಮರ್ಥ್ಯ ವನ್ನು ತೋರಿಸುತ್ತಿರುವ ವೈಷ್ಣವಿ ಮನೆಯ ಗಾಜಿನ ಬೌಲ್‍ನ್ನು ಒಡೆದು ಹಾಕಿದ್ದರು. ಇದರಿಂದ ಕೆರಳಿರುವ ಬಿಗ್‍ಬಾಸ್ ಇದೀಗ ಶಿಕ್ಷೆಯ ಆಜ್ಞೆ ಪತ್ರವನ್ನು ಬಿಗ್ ಮನೆಗೆ ತಲುಪಿಸಿದ್ದಾರೆ. ಈ ಪತ್ರದಲ್ಲಿರುವ ಶಿಕ್ಷೆಯ ಸವಿವರವನ್ನು ಪ್ರಶಾಂತ್ ವೈಷ್ಣವಿಗೆ ಓದಿ ತಿಳಿಸಿದ್ದಾರೆ.

    ಬಿಗ್‍ಬಾಸ್, ವೈಷ್ಣವಿ ಕುರಿತು ಪತ್ರದಲ್ಲಿ ನೀವು ಚೆನ್ನಾಗಿ ನೃತ್ಯ ಮಾಡುತ್ತೀರಿ ಎಂದು ಗೊತ್ತಿದೆ. ಹಾಗಾಗಿ ಇನ್ನು ಮುಂದೆ ನಿಮಗೆ ನೀರು ಕುಡಿಯಬೇಕು ಎಂದಾಗ ಮನೆಯ ಸದಸ್ಯರೊಬ್ಬರಿಗೆ ಒಂದು ಡ್ಯಾನ್ಸ್ ಸ್ಟೆಪ್ ಹೇಳಿಕೊಡಬೇಕು. ಅದೊಂದು ಸಂಪೂರ್ಣ ಸ್ಟೆಪ್ ಆಗಿರಬೇಕು. ಈ ಸ್ಟೆಪ್‍ನ್ನು ಅವರು ಕಲಿತು ನಿಮಗೆ ತೋರಿಸಬೇಕು. ಅದು ಸರಿಯಾಗಿದ್ದರೆ ಮಾತ್ರ ಅವರು ನಿಮಗೆ ನೀರು ಕುಡಿಸಬೇಕು. ನೀವಾಗಿ ಲೋಟವನ್ನು ಮುಟ್ಟುವಂತಿಲ್ಲ ಅವರೇ ನಿಮಗೆ ನೀರು ಕುಡಿಸಬೇಕು ಇದು ಮನೆಯ ಗಾಜಿನ ಬೌಲ್‍ನ್ನು ಒಡೆದು ಹಾಕಿದ್ದಕ್ಕಾಗಿ ಈ ಶಿಕ್ಷೆ. ಬಿಗ್‍ಬಾಸ್ ಮುಂದಿನ ಆದೇಶದವರೆಗೆ ಈ ಶಿಕ್ಷೆ ಮುಂದುವರಿಯುತ್ತದೆ ಎಂದು ಬರೆದುಕೊಂಡು ಶಿಕ್ಷೆಯನ್ನು ತಿಳಿಸಿದ್ದಾರೆ.

    ಶಿಕ್ಷೆಯ ಆದೇಶ ಪತ್ರವನ್ನು ತಿಳಿದುಕೊಂಡ ಬಳಿಕ ವೈಷ್ಣವಿ ಬಿಗ್‍ಬಾಸ್ ಕ್ಯಾಮೆರಾದ ಮುಂದೆ ನಿಂತು ನಿಮ್ಮ ಶಿಕ್ಷೆಯನ್ನು ಸ್ವೀಕರಿಸಿದ್ದೇನೆ ಇನ್ನು ಮುಂದೆ ಯಾವತ್ತು ಆ ರೀತಿ ತಪ್ಪು ಮಾಡುವುದಿಲ್ಲ ಎಂದು ಮನವಿ ಮಾಡಿಕೊಂಡರು.

  • ಅರವಿಂದ್‍ಗೆ ಆನೆ, ಇರುವೆ ಜೋಕ್ ಹೇಳಿದ ವೈಷ್ಣವಿ!

    ಅರವಿಂದ್‍ಗೆ ಆನೆ, ಇರುವೆ ಜೋಕ್ ಹೇಳಿದ ವೈಷ್ಣವಿ!

    ದೊಡ್ಮನೆಯಲ್ಲಿರುವ ಪ್ರಾಪರ್ಟಿಗಳಿಗೆ ಹಾನಿಯಾದರೆ ಸ್ಪರ್ಧಿಗಳಿಗೆ ಶಿಕ್ಷೆಯಂತೂ ಖಂಡಿತ ಆಗೇ ಆಗುತ್ತದೆ. ಅದರಂತೆ ಪಾತ್ರೆ ತೊಳೆಯುವ ವೇಳೆ ಗ್ಲಾಸ್ ಹೊಡೆದು ಹಾಕಿದ್ದ ವೈಷ್ಣವಿಗೆ ಬಿಗ್‍ಬಾಸ್ ಚಿಕ್ಕ ಗ್ಲಾಸ್ ಕಳುಹಿಸಿ ತಮ್ಮ ಮುಂದಿನ ಆದೇಶದವರೆಗೂ ಆ ಚಿಕ್ಕ ಗ್ಲಾಸ್‍ನಲ್ಲಿಯೇ ನೀರು ಕುಡಿಯಬೇಕು ಎಂದು ತಿಳಿಸಿದ್ದರು. ಟ್ವಿಸ್ಟ್ ಏನಪ್ಪಾ ಅಂದರೆ ವೈಷ್ಣವಿ ನೀರು ಕುಡಿಯುವ ಮುನ್ನ ಮನೆಯ ಸದಸ್ಯರಿಗೆ ಒಂದು ಜೋಕ್ ಹೇಳಿ, ಅವರನ್ನು ನಗಿಸಿದ ನಂತರ ನೀರು ಕುಡಿಯಬೇಕು ಎಂದು ಬಿಗ್‍ಬಾಸ್ ಸೂಚಿಸಿದ್ದಾರೆ.

    ಅದರಂತೆ ನಿನ್ನೆಯಿಂದ ನೀರು ಕುಡಿಯಬೇಕೆಂದು ಅನಿಸಿದಾಗಲೆಲ್ಲ ವೈಷ್ಣವಿ ಮನೆಯ ಓರ್ವ ಸದಸ್ಯರಿಗೆ ಜೋಕ್ ಹೇಳಿ ನೀರು ಕುಡಿಯುತ್ತಿದ್ದಾರೆ. ಸದ್ಯ ನಿನ್ನೆ ಅರವಿಂದ್‍ಗೆ ವೈಷ್ಣವಿ ಆನೆ ಇರುವೆ ಜೋಕ್ ಹೇಳಿದ್ದಾರೆ.

    ಒಮ್ಮೆ ಆನೆ ಇರುವೆ ಹೋಗುತ್ತಿರುತ್ತದೆ. ಇರುವೆ ಚೆನ್ನಾಗಿ ಡ್ರೆಸ್ ಮಾಡಿಕೊಂಡಿರುತ್ತದೆ. ಆದರೆ ಆನೆ ಮರೆತು ಹೋಗಿ ನಾರ್ಮಲ್ ಬಟ್ಟೆ ಹಾಕಿಕೊಂಡು ಹಾಗೆಯೇ ಹೋಗಿರುತ್ತದೆ ಎಂದಾಗ, ಅರವಿಂದ್ ಎರಡು ಇರುವೆ ಒಂದು ಆನೆನಾ ಎಂದು ಕೇಳುತ್ತಾರೆ. ಇಲ್ಲ ಒಂದು ಇರುವೆ ಒಂದು ಆನೆ ಇಬ್ಬರೂ ಕೂಡ ಬೆಸ್ಟ್ ಫ್ರೆಂಡ್ಸ್ ಎಂದು ವೈಷ್ಣವಿ ಹೇಳುತ್ತಾರೆ. ನಂತರ ಇರುವೆ ಆನೆಗೆ ಕೇಳುತ್ತದೆ ಯಾಕೆ ನೀನು ನಾರ್ಮಲ್ ಬಟ್ಟೆ ಹಾಕಿಕೊಂಡಿದ್ಯಾ? ಇನ್ನೊಂದು ಬಟ್ಟೆ ಏನಾಯಿತು ಅಂತಾ ಅದಕ್ಕೆ ಆನೆ ಏನು ಹೇಳಬಹುದು ಎಂದು ವೈಷ್ಣವಿ ಅರವಿಂದ್‍ಗೆ ಕೇಳುತ್ತಾರೆ.

    ಆಗ ಅರವಿಂದ್ ನಾನು ನಿನ್ನನ್ನು ಏಪ್ರಿಲ್ ಫೂಲ್ ಮಾಡಿದೆ ಎಂದು ಹೇಳಬಹುದು ಎನ್ನುತ್ತಾರೆ. ಆಗ ವೈಷ್ಣವಿ ಇಲ್ಲ. ಆನೆ ಹೇಳುತ್ತದೆ ನನ್ನ ಬಟ್ಟೆ ಕಳೆದುಹೋಗಿದೆ ಎಂದು ನಗುತ್ತಾ ಹಾಸ್ಯಮಯವಾಗಿ ಹೇಳುತ್ತಾರೆ. ಈ ಜೋಕ್ ಕೇಳಿ ಅರವಿಂದ್ ಅಚ್ಚರಿಯಿಂದ ಜೋರಾಗಿ ನಗುತ್ತಾರೆ.

    ಒಟ್ಟಾರೆ ಬಿಗ್‍ಬಾಸ್ ವೈಷ್ಣವಿಗೆ ಶಿಕ್ಷೆ ನೀಡಿದ್ದರೆ, ವೈಷ್ಣವಿ ಜೋಕ್ ಹೇಳುವ ಮೂಲಕ ಮನೆಮಂದಿಗೆ ಗೋಳೋಯ್ದುಕೊಳ್ಳುತ್ತಿದ್ದಾರೆ ಎಂದೇ ಹೇಳಬಹುದು.

  • ವೈಷ್ಣವಿ ಡಬ್ಬಾ ಜೋಕ್‍ಗೆ ಬಿದ್ದು ಬಿದ್ದು ಹೊರಳಾಡಿದ ಶುಭಾ

    ವೈಷ್ಣವಿ ಡಬ್ಬಾ ಜೋಕ್‍ಗೆ ಬಿದ್ದು ಬಿದ್ದು ಹೊರಳಾಡಿದ ಶುಭಾ

    ಬಿಗ್‍ಬಾಸ್ ಮನೆಯಲ್ಲಿ ಕೆಲವು ರೂಲ್ಸ್‍ಗಳಿವೆ ಅವುಗಳನ್ನು ಮನೆಯ ಸದಸ್ಯರು ಪಾಲಿಸಬೇಕು. ಇಲ್ಲವಾದರೆ ಬಿಗ್‍ಬಾಸ್ ಕಡೆಯಿಂದ ಎಚ್ಚರಿಕೆ ಗಂಟೆ ಅಥವಾ ಶಿಕ್ಷೆಯನ್ನು ನೀಡುತ್ತಾರೆ. ಇದೀಗ ವೈಷ್ಣವಿಗೆ ನೀಡಿರುವ ಶಿಕ್ಷೆ ಸಖತ್ ಮಜವಾಗಿದೆ.

    ಬಿಗ್‍ಬಾಸ್ ರೂಲ್ಸ್ ಅಂದ್ರೆನೆ ಹಾಗೇ ಎಲ್ಲರಿಗೂ ಒಂದೇ ಆಗಿರುತ್ತದೆ. ಅದನ್ನು ಎಲ್ಲರೂ ಚಾಚು ತಪ್ಪದೇ ಪಾಲಿಸಬೇಕು. ಈ ಹಿಂದೆ ಬಿಗ್‍ಬಾಸ್ ಮನೆಯ ಕಪ್ ಒಡೆದ ಅರವಿಂದ್, ಮಂಜುಗೆ ಚಿಕ್ಕ ಕಪ್‍ಗಳನ್ನು ಕಳಿಸಿ ಮುಂದಿನ ಆದೇಶದವರೆಗೆ ಇದೆ ಕಪ್‍ಅನ್ನು ಬಳಕೆ ಮಾಡುವಂತೆ ಹೇಳಿದ್ದರು. ಇದೀಗ ವೈಷ್ಣವಿಗೆ ಒಂದು ಫನ್ನಿಯಾಗಿರುವ ಶಿಕ್ಷೆಯನ್ನು ಬಿಗ್‍ಬಾಸ್‍ಕೊಟ್ಟಿದ್ದಾರೆ.

    ಕೆಲವುದಿನಗಳ ಹಿಂದೆ ವೈಷ್ಣವಿ ಬಿಗ್‍ಬಾಸ್ ಮನೆಯಲ್ಲಿ ಒಂದು ಗ್ಲಾಸ್ ಒಡೆದುಹಾಕಿದ್ದರು. ಇದಕ್ಕೆ ಬಿಗ್‍ಬಾಸ್ ಒಂದು ಶಿಕ್ಷೆಯನ್ನು ಕೊಟ್ಟಿದ್ದಾರೆ. ವೈಷ್ಣವಿಗೆ ನೀಡಿರುವ ಶಿಕ್ಷೆ ಇಡೀ ಮನೆ ಮಂದಿಯೇ ಅನುಭವಿಸುತ್ತಿದ್ದಾರೆ. ವೈಷ್ಣವಿಗೆ ನೀರು ಕುಡಿಯಬೇಕು ಎಂದು ಅನ್ನಿಸಿದಾಗ ಒಂದು ಜೋಕ್ ಹೇಳುವಂತೆ ಹೇಳಿದ್ದರು. ಬೇರಯವರು ಮಾಡುವ ಜೋಕ್‍ಗೆ ಸದಾ ನಗುತ್ತಾ ಇರುವ ವೈಷ್ಣವಿಗೆ ತಾನೇ ಜೋಕ್ ಹೇಳಿ ಬೇರೆಯವರನ್ನು ನಗಿಸುವಂತಾಗಿದೆ.

    ವೈಷ್ಣವಿ ಮಾಡುತ್ತಿರುವ ಜೋಕ್‍ನಾ ಸ್ಪರ್ಧಿಗಳಿಗೆ ತಡೆಯಲು ಆಗುತ್ತಿಲ್ಲ. ಸ್ಪರ್ಧಿಗಳು ನಗು ಬರದೇ ಇದ್ದರು ವೈಷ್ಣವಿ ಪಾಡನ್ನು ನೋಡಿ ನಗುವಂತಾಗಿದೆ. ವೈಷ್ಣವಿ ಆನೆ… ಇರುವೆ ಜೋಕ್ ಹೇಳಿದ್ದಾರೆ ಮನೆಂದಿಗೆ ಜೋಕ್ ಅರ್ಥವಾಗವಾದೇ ವೈಷ್ಣವಿ ಅವರ ಮುಖ ನೋಡಿದ್ದಾರೆ. ವೈಷ್ಣವಿಗೆ ನೀರು ಬೇಕು.. ಬಿಗ್‍ಬಾಸ್‍ಗೆ ಸ್ಪರ್ಧಿಗಳ ನಗು ಬೇಕು.. ವೈಷ್ಣವಿ ಜೋಕ್ ಹೇಳಿ ನಗಿಸಬೇಕು. ಆದರೆ ವೈಷ್ಣವಿ ಹೇಳುವ ಜೋಕ್ ಮಾತ್ರ ಕಥೆ ಹೇಳಿದಂತಿದೆ.

    ವೈಷ್ಣವಿ ಮಂಜು ಬಳಿ ಜೋಕ್ ಹೇಳುವಾಗ ವೈಷ್ಣವಿ ಕಣ್ಣುಬಿಟ್ಟು ಹೆದರಿಸುತ್ತಾ ನಗುವಂತೆ ಸನ್ನೆ ಮಾಡಿದ್ದಾರೆ. ಮಂಜು ಏನ್ ಕಣ್ಣು ಬಿಡ್ತಿಯಾ ನಾನು ನಗುವುದಿಲ್ಲ ಎಂದು ಹೇಳಿದ್ದಾರೆ. ಇಷ್ಟು ಡಬ್ಬಾ ಜೋಕ್ ಅನ್ನು ನಾನು ಲೈಫ್‍ನಲ್ಲಿ ಕೇಳಿಲ್ಲ ಅವಳಿಗೆ ಒಂದುವಾರ ನೀರು ಕೊಡಬೇಡಿ ಎಂದು ಶುಭಾ ಹೇಳಿದ್ದಾರೆ.

    ಈ ಹಿಂದೆ ಶುಭಾ ಮಳೆಗೆ ನೆನೆಯಲು ಅವಕಾಶ ನೀಡದ್ದಕ್ಕೆ ಸಿಟ್ಟಾಗಿ ಗಾರ್ಡನ್ ಏರಿಯಾದಲ್ಲಿ ಬಿದ್ದು ಹೊರಳಾಡಿದ್ದರು, ಇದೀಗ ವೈಷ್ಣವಿಯ ಡಬ್ಬಾ ಜೋಕ್‍ಗೂ ಬಿದ್ದು ಹೊರಳಾಡಿದ್ದಾರೆ. ಬಿಗ್‍ಬಾಸ್‍ಮನೆಯಲ್ಲಿ ವೈಷ್ಣವಿ ಯಾವೆಲ್ಲಾ ಜೋಕ್ ಹೇಳಿದ್ದಾರೆ ಎನ್ನುವುದನ್ನು ಕಾದುನೋಡಬೇಕು.

    ಬಿಗ್‍ಬಾಸ್ ನಿಯಮಗಳು ಸಾಕಷ್ಟಿರುತ್ತವೆ ಅವುಗಳನ್ನು ತಿಳಿದು ಚೆನ್ನಾಗಿ ಆಟ ಆಡಿ ವೀಕ್ಷಕರಿಗೆ ಯಾರು ಮೆಚ್ಚುಗೆಯಾಗುತ್ತಾರೋ ಅವರು ಕೊನೆಯ ಹಂತದವರೆಗೆ ಉಳಿಯುತ್ತಾರೆ.