ಬಿಗ್ ಬಾಸ್ ಖ್ಯಾತಿಯ ವೈಷ್ಣವಿಗೌಡ (Vaishnavi Gowda) ಯಾವಾಗಲೂ ಸಾಮಾಜಿಕ ಜಾಲತಾಣದಲ್ಲಿ ಫುಲ್ ಆ್ಯಕ್ಟಿವ್ ಆಗಿರ್ತಾರೆ. ಮದುವೆಯ ಬಳಿಕ ಪತಿ ಜೊತೆಗೆ ರೀಲ್ಸ್ ಮಾಡಿ ಆಗಾಗ ಹಂಚಿಕೊಳ್ತಿರ್ತಾರೆ. ಅವರ ವಿಡಿಯೋಗಳಿಗೆ ಸಾಕಷ್ಟು ಮೆಚ್ಚುಗೆ ಕೂಡಾ ವ್ಯಕ್ತವಾಗುತ್ತವೆ. ಇದೀಗ ಡೆವಿಲ್ ಸಿನಿಮಾದ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಇದ್ರೆ ನೆಮ್ಮದಿಯಾಗ್ ಇರ್ಬೇಕು ಎಂದು ಮಸ್ತ್ ಸ್ಟೆಪ್ ಹಾಕಿದ್ದಾರೆ ವೈಷ್ಣವಿಗೌಡ.
ವೈಷ್ಣವಿಗೌಡ ಡೆವಿಲ್ ಹಾಡಿನ ಹುಕ್ ಸ್ಟೆಪ್ ಹಾಕಿರುವ ವಿಡಿಯೋ ಜಾಲತಾಣದಲ್ಲಿ ಸಖತ್ ಅಟ್ರ್ಯಾಕ್ಟ್ ಮಾಡ್ತಿದೆ. ಈ ವಿಡಿಯೋಗೆ ತಹರೇವಾರಿ ಕಮೆಂಟ್ಸ್ ಬರುತ್ತಿವೆ. ಬಹುತೇಕರು ವಿಡಿಯೋಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನುಳಿದಂತೆ ಕೆಲವರು ವೈಷ್ಣವಿ ಅವರ ಕಾಲೆಳೆದಿದ್ದಾರೆ. ಕೆಲವರು ವೈಷ್ಣವಿ ಅವರು ಮದುವೆ ಆದ್ಮೇಲೆ ದಪ್ಪ ಆಗಿದ್ದಾರೆ ಅಂತಾ ಕಮೆಂಟ್ಸ್ ಮಾಡಿದ್ದಾರೆ. ಇದನ್ನೂ ಓದಿ: ಕಲಾವಿದ ಅಂತ ಲೋನ್ ಸಿಗ್ಲಿಲ್ಲ, ಅಕ್ಕನ ಸ್ಯಾಲರಿ ಮೇಲೆ ಸಾಲ ಪಡೆದು ಫ್ಲಾಟ್ ಖರೀದಿಸಿದ್ದೆ: ರಂಜಿತ್
ಸದ್ಯ ವೈವಾಹಿಕ ಜೀವನಕ್ಕೆ ಕಾಲಿಟ್ಟಿರುವ ವೈಷ್ಣವಿಗೌಡ ಜಾಲತಾಣದಲ್ಲಿ ಸಖತ್ ಆ್ಯಕ್ಟಿವ್ ಆಗಿದ್ದಾರೆ. ಕಿರುತೆರೆ ಜಗತ್ತಿನಿಂದ ಅಂತರ ಕಾಯ್ದುಕೊಂಡು ಪತಿಯ ಜೊತೆಗೆ ಸುಖಿ ಜೀವನ ನಡೆಸುತ್ತಿದ್ದಾರೆ. ಡೆವಿಲ್ ಚಿತ್ರದ ಟ್ರೆಂಡಿಂಗ್ ಸಾಂಗ್‌ಗೆ ಮೈ ಬಳುಕಿಸಿದ್ದಾರೆ.
ಕಿರುತೆರೆ ಧಾರಾವಾಹಿ ಹಾಗೂ ಬಿಗ್‌ಬಾಸ್ ಖ್ಯಾತಿಯ ವೈಷ್ಣವಿ ಗೌಡ (Vaishnavi Gowda) 2025ರ ಜೂನ್ ತಿಂಗಳು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಅನುಕೂಲ್ ಮಿಶ್ರಾ ಜೊತೆ ಹಸೆಮಣೆ ಏರಿದ್ದ ನಟಿ ವೈಷ್ಣವಿ ಗೌಡ ಸದ್ಯ ಹನಿಮೂನ್ ಟ್ರಿಪ್‌ನಲ್ಲಿದ್ದಾರೆ. ಪತಿ ಜೊತೆ ಇತ್ತೀಚಿಗೆ ಉತ್ತರಾಖಂಡ್ (Uttarakhand) ಋಷಿಕೇಶ್ ಬಳಿಯಿರುವ ಶಿವಪುರಿಯಲ್ಲಿ ಬಂಗೀ ಜಂಪ್ ಮಾಡಿ ಸಂಭ್ರಮಿಸಿದ್ದರು.
ಉತ್ತರಾಖಂಡ್ ಋಷಿಕೇಶ್ ಬಳಿಯಿರುವ ಶಿವಪುರಿಯಲ್ಲಿ ವೈಷ್ಣವಿ ಗೌಡ ಹಾಗೂ ಪತಿ ಅನುಕೂಲ್ ಮಿಶ್ರಾ ಬರೋಬ್ಬರಿ 117 ಅಡಿ ಎತ್ತರದಿಂದ ಜಿಗಿದು ಸಂಭ್ರಮ ಪಟ್ಟಿದ್ದರು. ಉತ್ತರ ಭಾರತದಲ್ಲಿ ಹನಿಮೂನ್ ಪ್ರವಾಸವನ್ನ ಕೈಗೊಂಡಿರುವ ವೈಷ್ಣವಿ ಗೌಡ ಹಾಗೂ ಅನುಕೂಲ್ ಮಿಶ್ರಾ ಮನಾಲಿಯಲ್ಲಿ ಬಗೆ ಬಗೆಯ ಬಟ್ಟೆತೊಟ್ಟು ಪೋಸ್ ಕೊಟ್ಟಿದ್ದರು. ಆ ಫೋಟೋಗಳನ್ನ ಜಾಲತಾಣದಲ್ಲಿ ಹಂಚಿಕೊಂಡಿದ್ದರು ವೈಷ್ಣವಿ.
ವೈಷ್ಣವಿ ಗೌಡ ಹನಿಮೂನ್ ಟ್ರಿಪ್ ಅನ್ನ ಸಖತ್ ಎಂಜಾಯ್ ಮಾಡ್ತಿದ್ದು, ಡ್ಯಾನ್ಸ್ ಮಾಡಿರುವ ವಿಡಿಯೋವನ್ನ ಪೋಸ್ಟ್ ಮಾಡಿದ್ದಾರೆ. ವಿಡಿಯೋ ಕ್ರೆಡಿಟ್ ಹಸ್ಬಂಡ್ ಎಂದು ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋ ನೋಡಿದ ವೈಷ್ಣವಿ ಫ್ಯಾನ್ಸ್ ಕಮೆಂಟ್ ಮಾಡುತ್ತಿದ್ದಾರೆ. ಕೆಲವರು ಖುಷಿಯಿಂದ ಲೈಕ್ ಮಾಡಿದ್ರೆ ಇನ್ನು ಕೆಲವ್ರು ಈ ಆಷಾಡ ಮಾಸದಲ್ಲಿ ಯಾಕೆ ಹನಿಮೂನ್ ಬೇರೆ ಟೈಂ ಇರಲಿಲ್ಲವಾ ಅಂತಾ ಪ್ರಶ್ನೆ ಮಾಡಿದ್ದಾರೆ.
ವೈಷ್ಣವಿ ಗೌಡ ಮನಾಲಿ, ಉತ್ತರಾಖಂಡ್‌ನ ಶಿವಪುರಿ ಹಾಗೂ ಮುಂತಾದ ಜಾಗಗಳಿಗೆ ಪತಿ ಅನುಕೂಲ್ ಮಿಶ್ರಾ ಜೊತೆ ಭೇಟಿ ನೀಡಿದ್ದಾರೆ. ಅಲ್ಲಿನ ಸುಂದರ ಕ್ಷಣಗಳನ್ನ ಸೆರೆಹಿಡಿದು ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
ಕೈತುಂಬಾ ಮೆಹಂದಿ ಹಚ್ಚಿಕೊಂಡು ಫ್ಲೋರಲ್ ಜ್ಯುವೆಲರಿ ಧರಿಸಿ ಅರಿಶಿಣ ಶಾಸ್ತ್ರಕ್ಕೆ ಸಿದ್ಧವಾಗೋಕೂ ಮುನ್ನ ತಮ್ಮ ಲುಕ್‌ನ್ನ ರೀಲ್ಸ್ ಮೂಲಕ ರಿವೀಲ್ ಮಾಡಿದ್ದಾರೆ ವೈಷ್ಣವಿ. ತಮಿಳಿನ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಜೂನ್ 4 ರಂದು ವೈಷ್ಣವಿ ಗೌಡ ಅನುಕೂಲ್ ಮಿಶ್ರಾ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಸೋಶಿಯಲ್ ಮೀಡಿಯಾದಲ್ಲಿ ಭಾರೀ ಫಾಲೋವರ್ಸ್ ಹೊಂದಿರುವ ವೈಷ್ಣವಿ ರೀಲ್ಸ್ ಮೂಲಕ ಫಾಲೋವರ್ಸ್‌ಗಳ ಸಂಪರ್ಕದಲ್ಲೇ ಇರುತ್ತಾರೆ. ಮದುವೆ ಬಳಿಕ ವೈಷ್ಣವಿ ಒಂದೊಂದಾಗೇ ಲುಕ್ ರಿವೀಲ್ ಮಾಡುತ್ತಿದ್ದಾರೆ. ಇದು ವೈಷ್ಣವಿಯ ಹಳದಿ ಲುಕ್ ಆಗಿದೆ.ಇದನ್ನೂ ಓದಿ: ಮಾದಕ ವಸ್ತು ಸೇವನೆ ಆರೋಪ – ಹೆಸರಾಂತ ತಮಿಳು ನಟ ಶ್ರೀಕಾಂತ್ ಅರೆಸ್ಟ್
ಇತ್ತೀಚೆಗೆ ಮದುವೆಯಾದ ಸೀರಿಯಲ್ ನಟಿ ವೈಷ್ಣವಿ ಗೌಡ (Vaishnavi Gowda) ಅವರು ಪತಿ ಅನುಕೂಲ್ ಮಿಶ್ರಾ (Ankool Mishra) ಜೊತೆಗೂಡಿ ಬಂಗೀ ಜಂಪ್ (Bungee Jump) ಮಾಡಿದ್ದಾರೆ.
ಉತ್ತರಾಖಂಡ ಋಷಿಕೇಶ ಬಳಿ ಇರುವ ಶಿವಪುರಿಯಲ್ಲಿ ಹಿಮಾಲಯನ್ ಬಂಗೀಯಲ್ಲಿ (Himalayan Bungee Jumping) ದಂಪತಿ ಬಂಗೀ ಜಂಪ್ ಮಾಡಿ ಸಂಭ್ರಮಿಸಿದ್ದಾರೆ. ಈ ಹಿಂದೆ ಅನುಕೂಲ್ ಮಿಶ್ರಾ ಅವರು ಒಬ್ಬರೇ ಬಂಗೀ ಜಂಪ್ ಮಾಡಿದ್ದರು. ಈಗ ಪತ್ನಿ ವೈಷ್ಣವಿ ಜೊತೆಗೆ ಬಂಗೀ ಜಂಪ್ ಮಾಡಿದ್ದಾರೆ. ಇದನ್ನೂ ಓದಿ: ನಮ್ದು ಅರೇಂಜ್ ಮ್ಯಾರೇಜ್ – ನಾವು ಬೆಂಗಳೂರಿನಲ್ಲೇ ಇರ‍್ತೀವಿ: ವೈಷ್ಣವಿ ಗೌಡ
ಹಿಮಾಲಯನ್ ಬಂಗೀ, ಹಿಮಾಲಯನ್ ಫ್ರೀಸ್ಟೈಲ್ ಬಂಗೀ, ಹಿಮಾಲಯನ್ ಜೋಡಿ ಬಂಗೀ ಹೆಸರಿನಲ್ಲಿ ಇಲ್ಲಿ ಜಂಪ್ ಮಾಡಬಹುದು. ದಂಪತಿ 111 ಮೀಟರ್ ಎತ್ತರದಿಂದ ಜಂಪ್ ಮಾಡಬೇಕಾಗುತ್ತದೆ. ಈ ಜೋಡಿ ಬಂಗೀ ಜಂಪಿಗೆ ಇಬ್ಬರಿಗೆ ಸೇರಿ 8,000 ರೂ. ಶುಲ್ಕ ವಿಧಿಸಲಾಗುತ್ತದೆ. ಇದನ್ನೂ ಓದಿ: ಇಬ್ರು ಹುಡ್ಗೀರು ನನ್ನ ಮಗಳ ಜೀವನ ಸರಿ ಮಾಡಿದ್ದಾರೆ: ವೈಷ್ಣವಿ ಗೌಡ ತಾಯಿ
ಆರೋಗ್ಯ ಹೊಂದಿರುವ 14 – 99 ವರ್ಷದ ಒಳಗಿನ ವ್ಯಕ್ತಿಗಳು ಬಂಗೀ ಜಂಪ್ ಮಾಡಬಹುದು. ಪ್ರತಿ ವ್ಯಕ್ತಿಗೆ 45 – 120 ಕೆಜಿ ತೂಕದ ಒಳಗಿರಬೇಕು. ಜೋಡಿಯಾಗಿ ಹಾರುವಾಗ ಗರಿಷ್ಠ ಒಟ್ಟು ತೂಕ 205 ಕೆಜಿ ಮೀರಬಾರದು.
ಗರ್ಭಿಣಿಯರು, ಹೃದಯದ ಸಮಸ್ಯೆ ಹೊಂದಿರುವವರು, ಇತ್ತೀಚಿಗೆ ಶಸ್ತ್ರಚಿಕಿತ್ಸೆಗೆ ಒಳಗಾದವರು. ಮೂಳೆ ಸಮಸ್ಯೆ ಹೊಂದಿರುವವರು, ಜಿಗಿತದ ಮೊದಲು ಮದ್ಯ ಸೇವನೆ ಮಾಡಿದವರಿಗೆ ಬಂಗೀ ಬಂಗೀ ಜಂಪ್ ಮಾಡಲು ನಿರ್ಬಂಧವಿದೆ.
ಹಸೆಮಣೆ ಏರಲು ಸಜ್ಜಾಗಿರುವ ಕನ್ನಡದ ಖ್ಯಾತ ಕಿರುತೆರೆ ನಟಿ ವೈಷ್ಣವಿ ಗೌಡ (Vaishnavi Gowda) ಅವರು ಮದುವೆ ಶಾಸ್ತ್ರಗಳ ಫೋಟೋಗಳನ್ನು ಇನ್ಸ್ಟಾದಲ್ಲಿ ಹಂಚಿಕೊಂಡಿದ್ದಾರೆ.
ಕೆಲವು ದಿನಗಳ ಹಿಂದೆ ವೈಷ್ಣವಿ ಗೌಡ, ಅನುಕೂಲ್ ಮಿಶ್ರಾ ಅವರ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಈಗ ಇಬ್ಬರ ಮನೆಗಳಲ್ಲೂ ಮದುವೆಗೆ ಸಕಲ ತಯಾರಿಗಳು ನಡೆಯುತ್ತಿವೆ. ವಿವಾಹಪೂರ್ವ ಶಾಸ್ತ್ರಗಳು ಆರಂಭವಾಗಿದ್ದು, ವೈಷ್ಣವಿ ಹಳದಿ ಶಾಸ್ತ್ರದ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ‘ಅಗ್ನಿಸಾಕ್ಷಿ’ ನಟಿ ವೈಷ್ಣವಿ ಗೌಡ ಎಂಗೇಜ್‌ಮೆಂಟ್ ಫೋಟೋ ಗ್ಯಾಲರಿ
ಹಲವು ವರ್ಷಗಳಿಂದ ವೈಷ್ಣವಿ ಗೌಡ ಅವರು ಸೀರಿಯಲ್ ಲೋಕದಲ್ಲಿ ಇದ್ದಾರೆ. ‘ಬಿಗ್ ಬಾಸ್ ಕನ್ನಡ’ ರಿಯಾಲಿಟಿ ಶೋನಲ್ಲಿ ಸಹ ಅವರು ಸ್ಪರ್ಧಿಸಿದ್ದರು. ಇನ್ನೂ ಅನುಕೂಲ್ ಮಿಶ್ರಾ ಅವರು, ಏರ್ ಫೋರ್ಸ್ನಲ್ಲಿ ಅವರು ಕೆಲಸ ಮಾಡುತ್ತಿದ್ದಾರೆ. ಅವರು ಉತ್ತರ ಭಾರತದ ಛತ್ತಿಸ್ಗಡದವರು. ಅಂದಹಾಗೆ, ಇದು ಅರೇಂಜ್ ಮ್ಯಾರೇಜ್. ಕುಟುಂಬದವರೇ ಮಾತುಕಥೆ ಮಾಡಿ ನಿಶ್ಚಯಿಸಿದ ಮದುವೆ ಎಂದು ವೈಷ್ಣವಿ ಹೇಳಿಕೊಂಡಿದ್ದರು.
ಮದುವೆ ಬಳಿಕವೂ ನಟಿಸುವ ಬಗ್ಗೆ ಮಾತಾಡಿದ್ದ ವೈಷ್ಣವಿ, ಮದುವೆಯ ಬಳಿಕವೂ ನಟನೆಗೆ ಅನುಮತಿ ಇದೆ. ಅವರು ನನ್ನ ಸೀರಿಯಲ್ ದಿನಾ ನೋಡುತ್ತಾರಂತೆ. ಸೀರಿಯಲ್ ಬಗ್ಗೆ ನನಗಿಂತ ಹೆಚ್ಚು ಅವರು ಅಪ್‌ಡೇಟ್ ಇದ್ದಾರೆ. ಮದುವೆ ಬಗ್ಗೆ ಅಮೂಲ್ಯ ಸೇರಿ ಕೆಲವರಿಗೆ ಮಾತ್ರ ಗೊತ್ತಿತ್ತು. ಅನುಕೂಲ್ ಅವರು ಬೆಂಗಳೂರಿನಲ್ಲೇ ಇರೋದ್ರಿಂದ ಮದುವೆ ಬಳಿಕವೂ ಇಲ್ಲೇ ಇರುತ್ತೇವೆ. ದೇವರು ತಡ ಮಾಡೋದು ಒಳ್ಳೆಯದನ್ನ ಮಾಡೋದಕ್ಕಾಗಿ ಎಂದು ನಂಬುತ್ತೇನೆ ಎಂದು ಹೇಳಿದ್ದರು.
ವೈಷ್ಣವಿ ಗೌಡ, ‘ಅಗ್ನಿಸಾಕ್ಷಿ’, ‘ಸೀತಾ ರಾಮ’ ಸೇರಿದಂತೆ ಅನೇಕ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ರೀಲ್ಸ್ ಮೂಲಕ ಆಗಾಗ ಅಭಿಮಾನಿಗಳನ್ನು ಸೆಳೆಯುವ ವೈಷ್ಣವಿ ತಮ್ಮದೇ ಫ್ಯಾನ್ಸ್ ಫಾಲೋವರ್ಸ್‌ನ್ನು ಹೊಂದಿದ್ದಾರೆ. ಇದನ್ನೂ ಓದಿ: ನಮ್ದು ಅರೇಂಜ್ ಮ್ಯಾರೇಜ್ – ನಾವು ಬೆಂಗಳೂರಿನಲ್ಲೇ ಇರ‍್ತೀವಿ: ವೈಷ್ಣವಿ ಗೌಡ
ಕಿರುತೆರೆ ನಟಿ ವೈಷ್ಣವಿ ಗೌಡ (Vaishnavi Gowda) ಇತ್ತೀಚೆಗೆ ಅದ್ಧೂರಿಯಾಗಿ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದರು. ಈ ಬೆನ್ನಲ್ಲೇ ನಟಿಯ ಫ್ಯಾನ್ಸ್‌ಗೆ ಕಹಿ ಸುದ್ದಿ ಸಿಕ್ಕಿದೆ. ಸೀತಾ ಪಾತ್ರ ಅಂತ್ಯವಾಗಿರೋದರ ಬಗ್ಗೆ ನಟಿ ಭಾವುಕವಾಗಿ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಯಶ್ ಜೊತೆಗಿನ ರೊಮ್ಯಾಂಟಿಕ್ ಫೋಟೋ ಶೇರ್ ಮಾಡಿ ದಾಂಪತ್ಯದ ಪಾಠ ಹೇಳಿದ ರಾಧಿಕಾ ಪಂಡಿತ್
ಒಂದು ಅಂತ್ಯವು ಹೊಸ ಆರಂಭಕ್ಕೆ ಮುನ್ನುಡಿ. ನನ್ನ ವೃತ್ತಿ ಜೀವನದಲ್ಲಿ ‘ಸೀತಾ ರಾಮ’ (Seetha Rama) ಎಂದಿಗೂ ನೆನಪಲ್ಲಿಟ್ಟುಕೊಳ್ಳುವಂತಹ ಪ್ರಾಜೆಕ್ಟ್. ಈ ಸೀರಿಯಲ್ ಮಾಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮೆಲ್ಲರ ಪ್ರೀತಿಗೆ ಥ್ಯಾಂಕ್ಯೂ. ಶೀಘ್ರದಲ್ಲಿ ಅದ್ಭುತವಾದ ಪ್ರಾಜೆಕ್ಟ್ ಜೊತೆ ನಿಮ್ಮ ಮುಂದೆ ಬರುತ್ತೇನೆ ಎಂದು ಭರವಸೆ ನೀಡುತ್ತೇನೆ ಎಂದು ವೈಷ್ಣವಿ ಗೌಡ ಭಾವುಕವಾಗಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ:‘ಜಯಹೇ ಕರ್ನಾಟಕ ಮಾತೆ’ ಎಂದು ಕನ್ನಡದಲ್ಲಿ ಮಾತನಾಡಿದ ಪವನ್ ಕಲ್ಯಾಣ್
ಪ್ರಸ್ತುತ ‘ಸೀತಾ ರಾಮ’ ಸೀರಿಯಲ್ ಪ್ರಸಾರ ಕಾಣುತ್ತಿದೆ. ಈ ಸೀರಿಯಲ್ ಸದ್ಯದಲ್ಲೇ ಅಂತ್ಯ ಕಾಣಲಿದೆಯಾ ಎಂಬುದನ್ನು ವಾಹಿನಿ ಆಗಲಿ ಕಲಾವಿದರಾಗಲಿ ತಿಳಿಸಿಲ್ಲ. ಈ ಸೀರಿಯಲ್ ಅಂತ್ಯವಾಗಿದೆ ಎನ್ನಲಾದ ಕೆಲ ಪೋಸ್ಟ್‌ಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿವೆ. ಅದಕ್ಕೆ ಪೂರಕವೆಂಬಂತೆ ವೈಷ್ಣವಿ ‘ಸೀತಾ’ ಪಾತ್ರಕ್ಕೆ ಗುಡ್ ಬೈ ಹೇಳಿರುವ ಪೋಸ್ಟ್ ನೋಡಿ ಫ್ಯಾನ್ಸ್ ಬೇಸರಗೊಂಡಿದ್ದಾರೆ.
ಈ ಸೀರಿಯಲ್‌ನಲ್ಲಿ ಸೀತಾ ಆಗಿ ವೈಷ್ಣವಿ, ರಾಮ ಪಾತ್ರದಲ್ಲಿ ಗಗನ್ ಗೌಡ, ಮಗಳ ಪಾತ್ರದಲ್ಲಿ ಸಿಹಿ ಅಲಿಯಾಸ್ ರೀತು ಸಿಂಗ್ ಮತ್ತು ಹಿರಿಯ ನಟ ಮುಖ್ಯಮಂತ್ರಿ ಚಂದ್ರು ನಟಿಸಿದ್ದಾರೆ.
‘ಸೀತಾರಾಮ’ ನಟಿ ವೈಷ್ಣವಿ ಗೌಡ (Vaishnavi Gowda) ಇತ್ತೀಚೆಗೆ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದರು. ಈ ಬೆನ್ನಲ್ಲೇ ಭಾವಿ ಪತಿ ಜೊತೆಗೆ ವೈಷ್ಣವಿ ಡಿನ್ನರ್ ಡೇಟ್‌ಗೆ ತೆರಳಿದ್ದಾರೆ. ಇಬ್ಬರ ರೊಮ್ಯಾಂಟಿಕ್ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:18ನೇ ಆ್ಯನಿವರ್ಸರಿ ಸಂಭ್ರಮ: ಪತಿಯೊಂದಿಗಿನ ಫೋಟೋ ಹಂಚಿಕೊಂಡ ಐಶ್ವರ್ಯಾ ರೈ
ಅನುಕೂಲ್ ಮಿಶ್ರಾ (Anukool Mishra) ಜೊತೆ ನಟಿ ಸ್ವಿಮ್ಮಿಂಗ್ ಪೂಲ್ ಬಳಿ ಊಟ ಸವಿದಿದ್ದಾರೆ. ರೊಮ್ಯಾಂಟಿಕ್ ಆಗಿ ಸಮಯ ಕಳೆದಿದ್ದಾರೆ. ಈ ಕುರಿತು ಅನುಕೂಲ್ ಪೋಸ್ಟ್ ಹಂಚಿಕೊಂಡಿದ್ದಾರೆ. ಈ ಹೊಸ ಜೋಡಿ ಸದಾ ಚೆನ್ನಾಗಿರಲಿ, ಸೂಪರ್ ಜೋಡಿ ಅಂತ ಅಭಿಮಾನಿಗಳು ವಿಶ್ ಮಾಡುತ್ತಿದ್ದಾರೆ. ಇದನ್ನೂ ಓದಿ:ಆಗೋದೆಲ್ಲಾ ಒಳ್ಳೆಯದಕ್ಕೆ ಭಗವಂತ ನಮ್ಮೊಂದಿಗೆ ಇದ್ದಾನೆ: ಕಹಿ ಘಟನೆ ನೆನೆದ ವೈಷ್ಣವಿ
ಏ.14ರಂದು ಏರ್‌ಫೋರ್ಸ್ ಲೆಫ್ಟಿನೆಂಟ್ ಆಗಿರುವ ಛತ್ತೀಸ್‌ಗಢ ಮೂಲದ ಅನುಕೂಲ್ ಜೊತೆ ವೈಷ್ಣವಿ ಗೌಡ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಒಂದು ವರ್ಷದಿಂದ ಅನುಕೂಲ್ ಪರಿಚಯವಿದೆ. ಇದು ಲವ್ ಮ್ಯಾರೇಜ್ ಎಂದು ಎಲ್ಲರೂ ಅಂದುಕೊಂಡಿದ್ದಾರೆ. ಆದರೆ ಇದು ಅರೇಂಜ್ ಮ್ಯಾರೇಜ್. ಇದು ಹಿರಿಯರು ನೋಡಿ ನಿಶ್ಚಯಿಸಿದ ಮದುವೆ ಎಂದು ವೈಷ್ಣವಿ ಕ್ಲ್ಯಾರಿಟಿ ನೀಡಿದ್ದಾರೆ.
ಮ್ಯಾಟ್ರಿಮೋನಿ ಮೂಲಕ ಜಾತಕ ಶೇರ್ ಆದ ಬಳಿಕ ಪೋಷಕರು ಈ ಮದುವೆ ನಿಶ್ಚಯಿಸಿದರು. ನಾವಿಬ್ಬರೂ ಒಬ್ಬರಿಗೊಬ್ಬರು ಅರ್ಥ ಮಾಡಿಕೊಳ್ಳಲು 1 ವರ್ಷ ಸಮಯ ತೆಗೆದುಕೊಂಡಿದ್ದೆವು. ಮದುವೆ ತಯಾರಿ ನಡೀತಿದೆ. ಶೀಘ್ರದಲ್ಲೇ ಮದುವೆ ಆಗುತ್ತೇನೆ ಎಂದರು.
‘ಸೀತಾರಾಮ’ ಸೀರಿಯಲ್ ನಟಿ ವೈಷ್ಣವಿ ಗೌಡ (Vaishnavi Gowda) ಅವರು ಅನುಕೂಲ್ ಮಿಶ್ರಾ ಜೊತೆ ಹಸೆಮಣೆ ಏರಲು ಸಜ್ಜಾಗಿದ್ದಾರೆ. ಮದುವೆಯಾಗೋ ಭಾವಿ ಪತಿ ಬಗ್ಗೆ ಓಪನ್ ಆಗಿ ‘ಪಬ್ಲಿಕ್ ಟಿವಿ’ ಜೊತೆ ನಟಿ ಹಂಚಿಕೊಂಡಿದ್ದಾರೆ. ಈ ವೇಳೆ, ಈ ಹಿಂದೆ ಮುರಿದುಬಿದ್ದ ಸಂಬಂಧದ ಬಗ್ಗೆ ನಟಿ ಮೌನ ಮುರಿದಿದ್ದಾರೆ. ಜೀವನದಲ್ಲಿ ಆಗೋದೆಲ್ಲಾ ಒಳ್ಳೆಯದಕ್ಕೆ ಎಂದು ನಟಿ ವೈಷ್ಣವಿ ರಿಯಾಕ್ಟ್ ಮಾಡಿದ್ದಾರೆ. ಇದನ್ನೂ ಓದಿ:ನಮ್ದು ಅರೇಂಜ್ ಮ್ಯಾರೇಜ್ – ನಾವು ಬೆಂಗಳೂರಿನಲ್ಲೇ ಇರ‍್ತೀವಿ: ವೈಷ್ಣವಿ ಗೌಡ
ನನ್ನ ಜೀವನದಲ್ಲಿ ಒಂದನ್ನೇ ನಂಬಿರೋದು. ಆಗೋದೆಲ್ಲಾ ಒಳ್ಳೆಯದಕ್ಕೆ ಭಗವಂತ ನಮ್ಮ ಜೊತೆ ಇದ್ದಾನೆ. ಅವರು ಯಾವತ್ತೂ ನನ್ನ ಕೈಬಿಡೋದಿಲ್ಲ. ಅದನ್ನು ಅಷ್ಟೇ ನಂಬಿದ್ದೀನಿ. ಒಳ್ಳೆಯ ಮನಸ್ಸಿದ್ದರೆ ಒಳ್ಳೆಯದು ಆಗುತ್ತದೆ ಎಂದಿದ್ದಾರೆ. ಈ ಹಿಂದೆ ನಟ ವಿದ್ಯಾಭರಣ (Vidyabharan) ಜೊತೆ ಮುರಿದುಬಿದ್ದ ಮದುವೆ ವಿಚಾರಕ್ಕೆ ನಟಿ ಕ್ಲ್ಯಾರಿಟಿ ನೀಡಿದ್ದಾರೆ. ಕಹಿ ಘಟನೆ ಮರೆತು ಈಗ ಅನುಕೂಲ್ ಜೊತೆ ಹೊಸ ಅದ್ಯಾಯಕ್ಕೆ ಮುನ್ನುಡಿ ಬರೆಯಲು ವೈಷ್ಣವಿ ರೆಡಿಯಾಗಿದ್ದಾರೆ. ಇದನ್ನೂ ಓದಿ:ಇಬ್ರು ಹುಡ್ಗೀರು ನನ್ನ ಮಗಳ ಜೀವನ ಸರಿ ಮಾಡಿದ್ದಾರೆ: ವೈಷ್ಣವಿ ಗೌಡ ತಾಯಿ
ಕಳೆದ ಸೋಮವಾರವಷ್ಟೇ ಏರ್‌ಫೋರ್ಸ್ ಲೆಫ್ಟಿನೆಂಟ್ ಆಗಿರುವ ಛತ್ತೀಸ್‌ಗಢ ಮೂಲದ ಅನುಕೂಲ್ (Anukool Mishra) ಜೊತೆ ವೈಷ್ಣವಿ ಗೌಡ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಒಂದು ವರ್ಷದಿಂದ ಅನುಕೂಲ್ ಪರಿಚಯವಿದೆ. ಇದು ಲವ್ ಮ್ಯಾರೇಜ್ ಎಂದು ಎಲ್ಲರೂ ಅಂದುಕೊಂಡಿದ್ದಾರೆ. ಆದರೆ ಇದು ಅರೇಂಜ್ ಮ್ಯಾರೇಜ್. ಇದು ಹಿರಿಯರು ನೋಡಿ ನಿಶ್ಚಯಿಸಿದ ಮದುವೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಮ್ಯಾಟ್ರಿಮೋನಿ ಮೂಲಕ ಜಾತಕ ಶೇರ್ ಆದ ಬಳಿಕ ಅಪ್ಪ ಅಮ್ಮ ಈ ಮದುವೆ ನಿಶ್ಚಯಿಸಿದ್ದಾರೆ. ನಾವಿಬ್ಬರೂ ಒಬ್ಬರಿಗೊಬ್ಬರು ಅರ್ಥ ಮಾಡಿಕೊಳ್ಳಲು 1 ವರ್ಷ ಸಮಯ ತೆಗೆದುಕೊಂಡಿದ್ದೆವು. ಮದುವೆ ತಯಾರಿ ನಡೀತಿದೆ. ಶೀಘ್ರದಲ್ಲೇ ಮದುವೆ ಆಗುತ್ತೇನೆ ಎಂದರು.
ಈಗ ಎಲ್ಲರಿಗೂ ಉತ್ತರ ಸಿಕ್ಕಿದೆ. ನನಗೆ ಯಾವ ಥರದ ಹುಡುಗ ಬೇಕಿತ್ತು ಎಂದು. ಅನುಕೂಲ್ ಅವರು ಏರ್‌ಫೋರ್ಸ್‌ನಲ್ಲಿ ಇರೋದ್ರಿಂದ ಎತ್ತರವಾಗಿದ್ದಾರೆ. ಹೈಟ್ ಮ್ಯಾಚ್ ಆಗದೇ ಇದ್ದರೂ ಹಾರ್ಟ್ ಮ್ಯಾಚ್ ಆಗಿದೆ ಎನ್ನುತ್ತಾ ಭಾವಿ ಪತಿ ನೆನೆದು ವೈಷ್ಣವಿ ನಾಚಿನೀರಾಗಿದ್ದಾರೆ.
– ಮಿಲಿಟರಿ ಹುಡುಗ ಬೇಕು ಅಂತಾ ನಮ್ಮ ತಂದೆ ಆಸೆ: ಭಾನು ರವಿಕುಮಾರ್ – ಮಗಳ ಬಗ್ಗೆ ಸುಮ್ನೆ ಟ್ರೋಲ್ ಮಾಡ್ಬೇಡಿ ವೈಷ್ಣವಿ ತಂದೆ ಮನವಿ
ಬೆಂಗಳೂರು: ನನ್ನ ಮಗಳ ಜೀವನ ಸರಿ ಆಗಲಿ ಎಂದು ಇಬ್ರು ಹುಡುಗಿಯರು ಮುಂದೆ ಬಂದು ನಿಜ ಸ್ಥಿತಿ ಅರಿವು ಮಾಡಿಕೊಟ್ಟರು. ಅವರಿಗೆ ಧನ್ಯವಾದ ಹೇಳುತ್ತೇನೆ ಎಂದು ವೈಷ್ಣವಿ ಗೌಡ (Vaishnavi Gowda) ಅವರ ತಾಯಿ ಭಾನು ರವಿಕುಮಾರ್ ಹೇಳಿದರು.
ಈ ಹಿಂದೆ ಮಗಳ ನಿಶ್ಚಯವಾಗಿ ಮುರಿದು ಬಿದ್ದ ಕುರಿತು ಮಾತನಾಡಿದ ಅವರು, ವೈಷ್ಣವಿ ತನ್ನದಲ್ಲದ ತಪ್ಪಿಗೆ ಏನೇನೋ ಅನುಭವಿಸಬೇಕಾಯ್ತು. ಆ ಹುಡುಗನ ಬಗ್ಗೆ ಆ ಸಮಯದಲ್ಲಿ ಮಾತನಾಡಿ, ನಮಗೆ ಉಪಕಾರ ಮಾಡಿರುವ ಇಬ್ಬರು ಹುಡುಗಿಯರಿಗೆ ಧನ್ಯವಾದ ಹೇಳುತ್ತೇನೆ. ಏನೂ ಅನ್ನೋದನ್ನ ಗೊತ್ತು ಮಾಡಿದ್ದೀರಿ. ಆ ಹುಡುಗಿಯರು ಯಾರೂ ಅಂತ ಗೊತ್ತಿಲ್ಲ. ವೈಷ್ಣವಿ ಕಷ್ಟದ ಸಮಯದಲ್ಲಿ ನೀವೆಲ್ಲಾ ಅವಳ ಜೊತೆ ಇದ್ರಿ. ನಿಮಗೂ ಧನ್ಯವಾದ ಎಂದು ಕೃತಜ್ಞತೆ ಸಲ್ಲಿಸಿದರು. ಇದನ್ನೂ ಓದಿ: ನಮ್ದು ಅರೇಂಜ್ ಮ್ಯಾರೇಜ್ – ನಾವು ಬೆಂಗಳೂರಿನಲ್ಲೇ ಇರ‍್ತೀವಿ: ವೈಷ್ಣವಿ ಗೌಡ
ಈಗ ನಿಶ್ಚಯವಾಗಿರುವ ಮಗಳ ಮದುವೆ ಬಗ್ಗೆ ಪ್ರತಿಕ್ರಿಯಿಸಿ, ಉತ್ತರದಿಂದ ದಕ್ಷಿಣದ ಸಂಬಂಧ ಇದು. ದೇವರು ಎಲ್ಲಾ ನಿಶ್ಚಯ ಮಾಡಿರುತ್ತಾನೆ. ವೈಷ್ಣವಿಗೆ ಈ ಗಂಡು ನಾವು ನೋಡಿರೋದು. ಮ್ಯಾಟ್ರಿಮೋನಿಯಲ್ಲಿ (Matrimony) ನೋಡಿ ನಿಶ್ಚಯ ಮಾಡಿರುವುದು. ಅವರಿಬ್ಬರಿಗೂ ಒಬ್ಬರಿಗೊಬ್ಬರು ಅರ್ಥ ಮಾಡಿಕೊಳ್ಳಲು ಸಮಯ ಕೊಟ್ಟದ್ದೆವು ಎಂದು ತಿಳಿಸಿದರು.
ಮಿಲಿಟರಿ ಹುಡುಗ ಬೇಕು:
ಮಿಲಿಟರಿಯಲ್ಲಿ ಕೆಲಸ ಮಾಡೋ ಹುಡುಗ ಬೇಕು ಎಂದು ನಮ್ಮ ತಂದೆಗೆ ಆಸೆ ಇತ್ತು. ನಮ್ಮ ಫ್ಯಾಮಿಲಿಯಲ್ಲಿ ಹಿಂದೆ ಯಾರೂ ಇರಲಿಲ್ಲ. ಈಗ ದೇಶಸೇವೆ ಮಾಡೋವ್ರು ಬಂದ್ರು ಅನ್ನೋದು ಖುಷಿ ಇದೆ. ಕೆಲವರು ಮಗಳ ಬಗ್ಗೆ ಏನೇನೋ ಮಾತಾಡ್ತಾರೆ. ಟ್ರೋಲ್ ಮಾಡುತ್ತಾರೆ. ನಿಜಾಂಶ ಏನೂ ಎಂದು ಸರಿಯಾಗಿ ತಿಳಿದುಕೊಂಡಿರಬೇಕಾಗುತ್ತದೆ ಎಂದರು. ಇದನ್ನೂ ಓದಿ: ‘ಅಗ್ನಿಸಾಕ್ಷಿ’ ನಟಿ ವೈಷ್ಣವಿ ಗೌಡ ಎಂಗೇಜ್‌ಮೆಂಟ್ ಫೋಟೋ ಗ್ಯಾಲರಿ
ನಾವು 2017ರಲ್ಲಿ ಎಲ್‌ಎಲ್‌ಬಿ ಓದಿ ವಕೀಲೆ ಆಗಿದ್ದೀನಿ. ಜೊತೆಗೆ ಸೈಕಾಲಜಿಯಲ್ಲಿ ಎಂಎಸ್‌ಸಿ ಓದಿದ್ದೇನೆ. ನನ್ನಂತೆ ನನ್ನ ಮಗಳಿಗೂ ಮದುವೆ ಬಳಿಕ ಪ್ರೋತ್ಸಾಹ ಕೊಡುವ ಗಂಡ ಸಿಕ್ಕಿದ್ದಾರೆ ಎಂದು ಖುಷಿ ಇದೆ. ಆಗೋದೆಲ್ಲ ಒಳ್ಳೆಯದಕ್ಕೆ ಅನ್ನೋದಕ್ಕೆ ಇದುವೇ ಸಾಕ್ಷಿ ಎಂದು ಸಂತಸ ವ್ಯಕ್ತಪಡಿಸಿದರು.
ಮಗಳು ಬಯಸಿದಂತೆ ಸಂಬಂಧ ಸಿಕ್ಕಿದೆ
ವೈಷ್ಣವಿ ತಂದೆ ರವಿಕುಮಾರ್ ಅವರು ಮಗಳ ಮದುವೆ (Marriage) ಬಗ್ಗೆ ಪ್ರತಿಕ್ರಿಯಿಸಿ, ನಮಗೆ ಒಳ್ಳೆಯ ಅಳಿಯ ಸಿಕ್ಕಿದ್ದಾರೆ. ವೈಷ್ಣವಿ ನಿಮ್ಮೆಲ್ಲರ ಮನೆ ಮಗಳು ಎಲ್ಲರಿಗೂ ತಿಳಿಸಿಯೇ ಮದುವೆ ಮಾಡುತ್ತೇವೆ. ಅವಳು ಬಯಸಿದಂತೆ ಸಂಬMಧ ಸಿಕ್ಕಿದೆ. ದೇಶ ಸೇವೆ ಮಾಡುವ ಅಳಿಯ ಸಿಕ್ಕಿದ್ದಾರೆ ಎಂದರು.
ಮಗಳ ಬಗ್ಗೆ ಸುಮ್ನೆ ಟ್ರೋಲ್ ಮಾಡ್ಬೇಡಿ
ಇಬ್ಬರಿಗೂ ಇಕ್ವೇಲ್ ಆಗಿಯೇ, ಗಂಡು ಹೆಣ್ಣಿಗೆ ಏನು ವಯಸ್ಸಿರಬೇಕೋ ಅದು ಇದೆ. ಮಿಲಿಟರಿ ಅಂದ್ಮೇಲೆ, ಹೈಟ್, ವೆಯಿಟ್, ಕಲರ್ ಎಲ್ಲಾ ಸರಿ ಇದೆ. ಮ್ಯಾಚ್ ಆಗಿದೆ. ಅದೇ ಥರ ಜೋಡಿ ಸರಿಯಾಗಿದೆ. ಸುಮ್ನೆ ಏನೇನೋ ಟ್ರೋಲ್ ಮಾಡಬೇಡಿ ಎಂದು ಟ್ರೋರ‍್ಸ್ಗಳಲ್ಲಿ ಮನವಿ ಮಾಡಿದರು. ಇದನ್ನೂ ಓದಿ: ಅದ್ಧೂರಿಯಾಗಿ ಎಂಗೇಜ್‌ಮೆಂಟ್ ಮಾಡಿಕೊಂಡ ನಟಿ ವೈಷ್ಣವಿ ಗೌಡ
ಮೊದಲು ನನ್ನ ಮಗಳು ದೇವಿ ಸೀರಿಯಲ್‌ಗೆ ಸೆಲೆಕ್ಟ್ ಆಗಿ, ಇಲ್ಲಿವರೆಗೂ ಅಭಿನಯಿಸಿಕೊಂಡು ಬಂದಿದ್ದಾಳೆ. ನನ್ನ ಮಗಳು ನಾನ್ ವೆಜ್ (Non-Veg) ತಿನ್ನಲ್ಲ. ಅವರೂ ವೆಜಿಟೇರಿಯನ್ ಕುಟುಂಬ. ಅಲ್ಲಿಗೆ ಸರಿ ಹೋಯ್ತು ನೋಡಿ. ದೇವರೇ ಒಬ್ಬರಿಗೊಬ್ಬರನ್ನ ಜೋಡಿ ಮಾಡಿರುತ್ತಾನೆ. ವೈಷ್ಣವಿ ನಿಮ್ಮ ಮನೆ ಮಗಳು ಎಲ್ಲರನ್ನೂ ಕರೆದು ಮುಚ್ಚುಮರೆ ಏನೂ ಇಲ್ಲದೇ, ಮದುವೆ ಮಾಡುತ್ತೇವೆ ಎಂದರು.
– ಮದುವೆ ಆದ್ಮೇಲೂ ಆಕ್ಟ್ ಮಾಡುತ್ತೇನೆ – ನಾನು ಬಯಸಿದಂಥ ಹುಡುಗ ಸಿಕ್ಕಿದ್ದಾರೆ
ಬೆಂಗಳೂರು: ನನ್ನದು ಲವ್ ಮ್ಯಾರೇಜ್ ಅಲ್ಲ, ಅರೇಂಜ್ ಮ್ಯಾರೇಜ್ ಎಂದು ಸೀತಾರಾಮ ಖ್ಯಾತಿಯ ನಟಿ ವೈಷ್ಣವಿ ಗೌಡ (Vaishnavi Gowda) ಎಲ್ಲಾ ಗಾಸಿಪ್‌ಗಳಿಗೆ ತೆರೆ ಎಳೆದಿದ್ದಾರೆ.
ಕಳೆದ ಸೋಮವಾರವಷ್ಟೇ ಏರ್‌ಫೋರ್ಸ್ ಲೆಫ್ಟಿನೆಂಟ್ ಆಗಿರುವ ಛತ್ತೀಸ್‌ಗಢ (Chhattisgarh) ಮೂಲದ ಅನುಕೂಲ್ ಜೊತೆ ವೈಷ್ಣವಿ ಗೌಡ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಈ ಬಗ್ಗೆ ನಟಿ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿ, ಒಂದು ವರ್ಷದಿಂದ ಅನುಕೂಲ್ ಪರಿಚಯವಿದೆ. ಇದು ಲವ್ ಮ್ಯಾರೇಜ್ ಎಂದು ಎಲ್ಲರೂ ಅಂದುಕೊಂಡಿದ್ದಾರೆ. ಆದರೆ ಇದು ಅರೇಂಜ್ ಮ್ಯಾರೇಜ್. ಇದು ಹಿರಿಯರು ನೋಡಿ ನಿಶ್ಚಯಿಸಿದ ಮದುವೆ ಎಂದು ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ಅದ್ಧೂರಿಯಾಗಿ ಎಂಗೇಜ್‌ಮೆಂಟ್ ಮಾಡಿಕೊಂಡ ನಟಿ ವೈಷ್ಣವಿ ಗೌಡ
ಮ್ಯಾಟ್ರಿಮೋನಿ (Matrimony) ಮೂಲಕ ಜಾತಕ ಶೇರ್ ಆದ ಬಳಿಕ ಅಪ್ಪ ಅಮ್ಮ ಈ ಮದುವೆ ನಿಶ್ಚಯಿಸಿದ್ದಾರೆ. ನಾವಿಬ್ಬರೂ ಒಬ್ಬರಿಗೊಬ್ಬರು ಅರ್ಥ ಮಾಡಿಕೊಳ್ಳಲು 1 ವರ್ಷ ಸಮಯ ತೆಗೆದುಕೊಂಡಿದ್ದೆವು. ಮದುವೆ ತಯಾರಿ ನಡೀತಿದೆ. ಶೀಘ್ರದಲ್ಲೇ ಮದುವೆ ಆಗುತ್ತೇನೆ ಎಂದರು. ಇದನ್ನೂ ಓದಿ: ‘ಅಗ್ನಿಸಾಕ್ಷಿ’ ನಟಿ ವೈಷ್ಣವಿ ಗೌಡ ಎಂಗೇಜ್‌ಮೆಂಟ್ ಫೋಟೋ ಗ್ಯಾಲರಿ
ಮದುವೆ ಬಳಿಕವೂ ಆಕ್ಟಿಂಗ್
ಮದುವೆಯ ಬಳಿಕವೂ ಆಕ್ಟ್ ಮಾಡಲು ಅನುಮತಿ ಇದೆ. ಅವರು ನನ್ನ ಸೀರಿಯಲ್ ದಿನಾ ನೋಡುತ್ತಾರಂತೆ. ಸೀರಿಯಲ್ ಬಗ್ಗೆ ನನಗಿಂತ ಹೆಚ್ಚು ಅವರು ಅಪ್‌ಡೇಟ್ ಇದ್ದಾರೆ. ಮದುವೆ ಬಗ್ಗೆ ಅಮೂಲ್ಯ ಸೇರಿ ಕೆಲವರಿಗೆ ಮಾತ್ರ ಗೊತ್ತಿತ್ತು. ಅನುಕೂಲ್ ಅವರು ಬೆಂಗಳೂರಿನಲ್ಲೇ ಇರೋದ್ರಿಂದ ಮದುವೆ ಬಳಿಕವೂ ಇಲ್ಲೇ ಇರುತ್ತೇವೆ. ದೇವರು ತಡ ಮಾಡೋದು ಒಳ್ಳೆಯದನ್ನ ಮಾಡೋದಕ್ಕಾಗಿ ಎಂದು ನಂಬುತ್ತೇನೆ ಎಂದು ಹೇಳಿದರು.
ಅವರು ನನ್ನ ವೈಶ್ ಅಂತಾರೆ
ನಾನು ಅವರನ್ನು ಹೆಸರು ಹೇಳೇ ಕರೆಯುತ್ತೇನೆ. ಅವರು ನನ್ನ ವೈಶ್ ಅಂತಾರೆ. 300 ಪ್ರಪೋಸಲ್ ಬಂದ್ರೂ ಇಷ್ಟ ಆಗಿಲ್ಲ ಅಂತ ಸುದೀಪ್ ಸರ್ ಬಳಿ ಹೇಳಿದ್ದೆ ಅಲ್ವಾ. ಯೋಚನೆ ಮಾಡಿ ಇವರು ಎಂಥಾ ಹುಡುಗ ಅಂತ. ನಾನು ಎಂಥಾ ಹುಡುಗ ಸಿಗ್ಬೇಕು ಅಂತ ಬಯಸಿದ್ನೋ ಅದೇ ಥರ ಹುಡುಗ ಇವರು ಎಂದು ಭಾವಿ ಪತಿಯ ಬಗ್ಗೆ ಮಾತನಾಡಿದರು. ಇದನ್ನೂ ಓದಿ: ಮುದ್ದು ಮಗಳಿಗೆ ಸುಂದರ ಹೆಸರಿಟ್ಟ ಅಥಿಯಾ ಶೆಟ್ಟಿ ದಂಪತಿ- ಅದರ ಅರ್ಥವೇನು ಗೊತ್ತಾ?
ಕೆಲವರು ಟ್ರೋಲ್ ಮಾಡುತ್ತಾರೆ. ಅವರಿಗೆ ಸರಿಯಾಗಿ ಏನು ಮಾಹಿತಿ ಇರಲ್ಲ. ತಪ್ಪು ಅದು, ನಾವು ಹೇಳೋವರೆಗೂ ಕಾಯಬೇಕಲ್ಲ. ನನ್ನ ಹಿಂದೆ ಏನೇನಾಗಿತ್ತೋ ಅದೆಲ್ಲಾ ಪಾಠ ನನಗೆ. ಆಗೋದೆಲ್ಲ ಒಳ್ಳೆಯದಕ್ಕೆ ಅನ್ನೋದು ಇದಕ್ಕೆ ಅಲ್ವೇ. ನನ್ನದಲ್ಲದ ತಪ್ಪಿಗೆ ನಾನು ತೊಂದರೆ ಅನುಭವಿಸುವಂತಾಯಿತು. ಮದುವೆ ಆದ್ಮೇಲೂ ಹೀಗೇ ಆಕ್ಟ್ ಮಾಡುತ್ತೇನೆ ಎಂದು ಹೇಳುವ ಮೂಲಕ ಅಭಿಮಾನಿಗಳಿಗೆ ಗುಡ್‌ನ್ಯೂಸ್ ನೀಡಿದರು.