Tag: vaishnavi

  • ನಿಶ್ಚಿತಾರ್ಥ ಮಾಡಿಕೊಂಡ ‘ಮಿಲನ’ ಸೀರಿಯಲ್ ನಟ ಪ್ರಶಾಂತ್ ಭಾರದ್ವಾಜ್

    ನಿಶ್ಚಿತಾರ್ಥ ಮಾಡಿಕೊಂಡ ‘ಮಿಲನ’ ಸೀರಿಯಲ್ ನಟ ಪ್ರಶಾಂತ್ ಭಾರದ್ವಾಜ್

    ಕಿರುತೆರೆಯಲ್ಲಿ ಮೋಡಿ ಮಾಡಿದ್ದ ಒಬ್ಬೊಬ್ಬರೇ ಕಲಾವಿದರು ಹೊಸ ಜೀವನಕ್ಕೆ ಕಾಲಿಡುತ್ತಿದ್ದಾರೆ. ಇದೀಗ ಸರದಿ ‘ಮಿಲನ’ (Milana) ಸೀರಿಯಲ್ ನ ಹೀರೋ ಪ್ರಶಾಂತ್ ಭಾರದ್ವಾಜ್ (Prashant) ಅವರದ್ದು. ಈ ನಟ ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದು, ವೈಷ್ಣವಿ (Vaishnavi) ಜೊತೆ ಪ್ರಶಾಂತ್ ನಿಶ್ಚಿತಾರ್ಥ ಮಾಡಿಕೊಳ್ಳುವ ಮೂಲಕ ಹ್ಯಾಪಿ ಅಭಿಮಾನಿಗಳ ಸಂಭ್ರಮಕ್ಕೆ ಕಾರಣರಾಗಿದ್ದಾರೆ.

    ಪ್ರಶಾಂತ್ ಭಾರದ್ವಾಜ್ ಅವರು ವೈಷ್ಣವಿ ಮಧುಸೂದನ್ ಅವರ ಜೊತೆ ನಿಶ್ಚಿತಾರ್ಥ (Engaged) ಮಾಡಿಕೊಂಡಿದ್ದು, ವೈಷ್ಣವಿ ಯಾರು ಎಂಬುದು ರಿವೀಲ್ ಆಗಬೇಕಿದೆ. ಅಷ್ಟೇ ಅಲ್ಲದೆ ಇದು ಅರೇಂಜ್ ಮ್ಯಾರೇಜ್? ಅಥವಾ ಲವ್ ಎನ್ನುವ ಬಗ್ಗೆ ಕೂಡ ಮಾಹಿತಿ ಇಲ್ಲ. ಸೋಶಿಯಲ್ ಮೀಡಿಯಾದಲ್ಲಿ ಈ ಜೋಡಿಗೆ ಎಲ್ಲರೂ ಶುಭಕೋರುತ್ತಿದ್ದಾರೆ. ಪ್ರಶಾಂತ್ ಜೊತೆ ಮದುವೆ ಆಗುತ್ತಿರುವ ಹುಡುಗಿಯ ಪರಿಚಯವನ್ನು ಕೇಳಿದ್ದಾರೆ. ಇದನ್ನೂ ಓದಿ:Bigg Boss Kannada 10 ಆರಂಭ- ಈ 3 ಸೀರಿಯಲ್‌ಗೆ ಗೇಟ್ ಪಾಸ್

    ಒಲವೇ ಜೀವನ ಸಾಕ್ಷಾತ್ಕಾರ’, ‘ಆತ್ಮ ಬಂಧನ’, ‘ಯಜಮಾನಿ’ ಧಾರಾವಾಹಿ ಸೇರಿದಂತೆ ಸಾಕಷ್ಟು ಟಿವಿ ಕಾರ್ಯಕ್ರಮಗಳಲ್ಲೂ ಪ್ರಶಾಂತ್ ಕಾಣಿಸಿಕೊಂಡಿದ್ದಾರೆ. ತಮ್ಮದೇ ಆದ ಅಭಿಮಾನಿ ವರ್ಗವನ್ನೂ ಅವರು ಹೊಂದಿದ್ದಾರೆ. ಪ್ರಶಾಂತ್ ಅವರಿಗೆ ಈಗ ಪರಭಾಷೆಯಲ್ಲಿ ಕೂಡ ಬೇಡಿಕೆ ಇದ್ದು, ಅಲ್ಲೂ ಆ್ಯಕ್ಟಿವ್ ಆಗಿದ್ದಾರೆ.

    ಮಿಲನ‌ ಸೀರಿಯಲ್ ಮೂಲ ಬಣ್ಣದ ಬದುಕಿಗೆ ಎಂಟ್ರಿ ಕೊಟ್ಟ ಇದೀಗ ಹೊಸ ಬಾಳಿಗೆ ಕಾಲಿಡಲು ತಯಾರಿ ನಡೆಸಿದ್ದಾರೆ. ಸದ್ಯಕ್ಕೆ ನಿಶ್ಚಿತಾರ್ಥ ನೆರವೇರಿದ್ದು, ಸದ್ಯದಲ್ಲೇ ಮದುವೆ ಬಗ್ಗೆ ಅಪ್ ಡೇಟ್ ಹಂಚಿಕೊಳ್ಳಲಿದ್ದಾರೆ. ನೆಚ್ಚಿನ ನಟನೆ ಹೊಸ ಬದುಕಿಗೆ ಅಭಿಮಾನಿಗಳು ಶುಭ ಹಾರೈಸಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ರಕ್ತದಲ್ಲಿ ಸುದೀಪ್ ಚಿತ್ರ ಬಿಡಿಸಿದ ಮಹಿಳಾ ಅಭಿಮಾನಿ: ಕೈ ಮುಗಿದ ಕಿಚ್ಚ

    ರಕ್ತದಲ್ಲಿ ಸುದೀಪ್ ಚಿತ್ರ ಬಿಡಿಸಿದ ಮಹಿಳಾ ಅಭಿಮಾನಿ: ಕೈ ಮುಗಿದ ಕಿಚ್ಚ

    ಕಿಚ್ಚ ಸುದೀಪ್ ಅಭಿಮಾನಿಗಳು (Fans)ಒಂದಿಲ್ಲೊಂದು ರೀತಿಯಲ್ಲಿ ನೆಚ್ಚಿನ ನಟಿಗೆ ಪ್ರೀತಿ ತೋರಿಸುತ್ತಲೇ ಇರುತ್ತಾರೆ. ಇದೀಗ ಶಿವಮೊಗ್ಗದ (Shimoga) ಅಭಿಮಾನಿ ವೈಷ್ಣವಿ (Vaishnavi) ಎನ್ನುವವರು ತಮ್ಮದೇ ರಕ್ತದಿಂದ ಸುದೀಪ್ ಅವರ ಚಿತ್ರ ಬಿಡಿಸಿದ್ದಾರೆ. ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಕೂಡ ಮಾಡಿದ್ದಾರೆ. ಈ ಚಿತ್ರವನ್ನು ಮರುಹಂಚಿಕೊಂಡಿರುವ ಸುದೀಪ್, ಕೈ ಮುಗಿಯುವ ಎಮೋಜಿ ಹಾಕಿದ್ದಾರೆ.

    ಮಹಿಳಾ ಅಭಿಮಾನಿಯ ರಕ್ತದಲ್ಲಿ (Blood) ತಯಾರಾದ ಚಿತ್ರಕ್ಕೆ ಹಲವರು ಮೆಚ್ಚುಗೆ ಸೂಚಿಸಿದ್ದರೆ ಇನ್ನೂ ಹಲವರು ರಕ್ತ ಅಮೂಲ್ಯವಾದದ್ದು ಅದನ್ನು ಈ ರೀತಿ ಹಾಳು ಮಾಡಬೇಡಿ. ಅಭಿಮಾನಿವನ್ನು ರಕ್ತದಾನ ಮಾಡುವ ಮೂಲಕ ತೋರಿಸಿ ಎಂದು ಕಾಮೆಂಟ್ ಮಾಡಿದ್ದಾರೆ. ಕಾಮೆಂಟ್ಸ್ ಏನೇ ಬರುತ್ತಿದ್ದರೂ ಅಭಿಮಾನಿಯ ಬಗ್ಗೆ ಸಾಕಷ್ಟು ಜನರು ಮೆಚ್ಚುಗೆಯನ್ನು ವ್ಯಕ್ತ ಪಡಿಸಿದ್ದಾರೆ. ಇದನ್ನೂ ಓದಿ:‘ಬಿಗ್ ಬಾಸ್ ಶೋ’ ಸೆನ್ಸಾರ್ ಕುರಿತು ಹೈಕೋರ್ಟ್ ಕಳವಳ

    ಚಿತ್ರೀಕರಣಕ್ಕೆ ಹೊರಟು ನಿಂತ ಸುದೀಪ್

    ಸ್ಯಾಂಡಲ್‌ವುಡ್‌ನಲ್ಲಿ ಕಿಚ್ಚ ಸುದೀಪ್(Kiccha Sudeep)- ನಿರ್ಮಾಪಕ ಕುಮಾರ್ ಕಾಲ್‌ಶೀಟ್ ಕದನಕ್ಕೆ ಪೂರ್ಣ ವಿರಾಮ ಬೀಳುವ ಮುಂಚಯೇ ಕಿಚ್ಚನ 46 ಸಿನಿಮಾಗೆ ಸಿದ್ಧತೆ ನಡೆಯುತ್ತಿದೆ. ಕುಮಾರ್ ಜೊತೆಗಿನ ಸಂಧಾನದ ಮಾತುಕತೆ ನಡೆಯುತ್ತಿದೆ. ಈ ವಾರದ ಅಂತ್ಯದಲ್ಲಿ ಎಲ್ಲದಕ್ಕೂ ಉತ್ತರ ಸಿಗಲಿದೆ. ಈ ಬೆನ್ನಲ್ಲೇ ವಿವಾದ ಬದಿಗಿಟ್ಟು ಕಾಯಕವೇ ಕೈಲಾಸ ಅಂತಾ ಸುದೀಪ್ ಹೊಸ ಸಿನಿಮಾದ ಶೂಟಿಂಗ್‌ನತ್ತ ಮುಖ ಮಾಡಿದ್ದಾರೆ.‌

    ‘ವಿಕ್ರಾಂತ್ ರೋಣ’ ಸಿನಿಮಾದ ಬಳಿಕ ತನ್ನ ಜೊತೆ ಸಿನಿಮಾ ಮಾಡ್ತಾರೆ ಅಂತಾ ಮಾತುಕತೆ ಆಗಿತ್ತು. ಹಣ ಪಡೆದು ಸಾಕಷ್ಟು ಸಮಯದಿಂದ ಕಾಲ್‌ಶೀಟ್ ನೀಡದೇ ಸುದೀಪ್ ಸತಾಯಿಸುತ್ತಿದ್ದಾರೆ ಎಂದು ನಿರ್ಮಾಪಕ ಕುಮಾರ್ (Producer Kumar) ಆರೋಪಿಸಿದ್ದರು. ಇದಾದ ಬಳಿಕ ಸುದೀಪ್ ಕಾನೂನು ಸಮರ ಸಾರಿದ್ದರು. ಬಳಿಕ ರವಿಚಂದ್ರನ್ (Ravichandran) ಅವರ ಜೊತೆ ಕುಮಾರ್-ಸುದೀಪ್ ಇಬ್ಬರ ಸಂಧಾನ ಸಭೆ ನಡೆದಿತ್ತು. ಆದರೆ ಇದು ಇನ್ನೂ ಅಂತಿಮ ಹಂತಕ್ಕೆ ತಲುಪಿಲ್ಲ. ಕೊನೆಯ ಮೀಟಿಂಗ್‌ನಲ್ಲಿ ಶಿವಣ್ಣ (Shivarajkumar) ಕೂಡ ಭಾಗಿಯಾಗಲಿದ್ದಾರೆ. ಬಳಿಕ ಕಾಲ್‌ಶೀಟ್ ಕದನಕ್ಕೆ ಬ್ರೇಕ್ ಸಿಗಲಿದೆ.

     

    ʼವಿಕ್ರಾಂತ್ ರೋಣ’ (Vikrant Rona) ಸಿನಿಮಾ 2022ರಲ್ಲಿ ರಿಲೀಸ್ ಆಯಿತು. ಇದಾದ ಬಳಿಕ ಸುದೀಪ್ ಒಂದು ಬ್ರೇಕ್ ಪಡೆದರು. ವೃತ್ತಿ ಜೀವನದಲ್ಲಿ ಅವರು ಪಡೆದ ಮೊದಲ ಬ್ರೇಕ್ ಇದು ಅನ್ನೋದು ವಿಶೇಷ. ಈ ಸಮಯದಲ್ಲಿ ಸುದೀಪ್ ಅವರು ಕುಟುಂಬಕ್ಕೆ ಹೆಚ್ಚು ಆದ್ಯತೆ ಕೊಟ್ಟರು. ಚುನಾವಣಾ ಪ್ರಚಾರದಲ್ಲಿ ಭಾಗಿ ಆದರು. ಬಿಜೆಪಿ ಕ್ಷೇತ್ರದ ಪರ ಪ್ರಚಾರಕ್ಕೆ ಕಣಕ್ಕೆ ಇಳಿದರು. ಈಗ ಅವರು ಶೂಟಿಂಗ್ ಹೊರಡೋಕೆ ರೆಡಿ ಆಗಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಎಂಗೇಜ್ ಮೆಂಟ್ ವಿಚಾರದಲ್ಲಿ ನಾನು ಡಿಪ್ರೆಷನ್ ಗೆ ಹೋಗಿರಲಿಲ್ಲ: ನಟಿ ವೈಷ್ಣವಿ

    ಎಂಗೇಜ್ ಮೆಂಟ್ ವಿಚಾರದಲ್ಲಿ ನಾನು ಡಿಪ್ರೆಷನ್ ಗೆ ಹೋಗಿರಲಿಲ್ಲ: ನಟಿ ವೈಷ್ಣವಿ

    ವಿದ್ಯಾಭರಣ್ ಜೊತೆಗಿನ ನಿಶ್ಚಿತಾರ್ಥ ವಿಚಾರವಾಗಿ ನಟಿ ವೈಷ್ಣವಿ ಹಲವು ದಿನಗಳ ಕಾಲ ಕಾಣಿಸಿಕೊಂಡಿರಲಿಲ್ಲ. ಮಾಧ್ಯಮಗಳ ಜೊತೆ ಅವರ ತಾಯಿ ಮಾತನಾಡಿ, ‘ಮಗಳ ಮನಸ್ಸು ಸರಿಯಿಲ್ಲ. ಹಾಗಾಗಿ ಮಾಧ್ಯಮಗಳ ಮುಂದೆ ಆಕೆ ಕಾಣಿಸಿಕೊಳ್ಳುತ್ತಿಲ್ಲ’ ಎಂದಿದ್ದರು. ವೈಷ್ಣವಿ ಆಚೆ ಬಾರದೇ ಇರುವ ಕಾರಣಕ್ಕಾಗಿ ಅವರು ಡಿಪ್ರೆಷನ್ ಗೆ ಹೋಗಿದ್ದಾರೆ ಎಂದು ಹೇಳಲಾಗಿತ್ತು. ಅದರಿಂದ ಆಚೆ ಬರಲು ಅವರು ಟ್ಯಾಟೋ ಹಾಕಿಸಿಕೊಂಡರು ಎಂದು ಚರ್ಚೆ ನಡೆದಿತ್ತು. ಈ ಕುರಿತು ವೈಷ್ಣವಿ ಮೊದಲ ಬಾರಿಗೆ ಸ್ಪಷ್ಟನೆ ನೀಡಿದ್ದಾರೆ.

    ವಿದ್ಯಾಭರಣ್ ಕುರಿತಾದ ಆಡಿಯೋ ಬಹಿರಂಗವಾದಾಗ ಅವರ ಮನಸಿಗೆ ನೋವು ಆಗಿದ್ದು ನಿಜವಂತೆ. ಆದರೆ, ಯಾವುದೇ ಕಾರಣಕ್ಕೂ ಡಿಪ್ರೆಷನ್ ಗೆ ಹೋಗಿರಲಿಲ್ಲ ಎಂದು ಅವರು ಸ್ಪಷ್ಟ ಪಡಿಸಿದ್ದಾರೆ. ಕೆಲವರು ಈ ರೀತಿಯಲ್ಲಿ ಮಾತನಾಡಿದರು. ಅದರಿಂದ ಆಚೆ ಬರುವುದಕ್ಕಾಗಿ ಟ್ಯಾಟೋ ಹಾಕಿಸಿಕೊಂಡರು ಎಂದೆಲ್ಲ ಮಾತನಾಡಿದ್ದನ್ನು ಕೇಳಿದ್ದೇನೆ. ಆದರೆ, ನಾನು ತುಂಬಾ ಸ್ಟ್ರಾಂಗ್. ನನ್ನ ಬದುಕಿಗೆ ಬಗ್ಗೆ ನನಗೆ ಸ್ಪಷ್ಟತೆ ಇದೆ ಎಂದು ಅವರು ಹೇಳಿದ್ದಾರೆ.

    ಸದ್ಯ ವೈಷ್ಣವಿ ಮತ್ತೊಂದು ಹೊಸ ಧಾರಾವಾಹಿಯನ್ನು ಒಪ್ಪಿಕೊಂಡಿದ್ದಾರೆ. ಸದ್ಯದಲ್ಲೇ ಆ ಧಾರಾವಾಹಿಯ ಚಿತ್ರೀಕರಣದಲ್ಲೂ ಅವರು ತೊಡಗಿಕೊಳ್ಳಲಿದ್ದಾರೆ. ‘ನನ್ನ ಬದುಕಿನ ಬಗ್ಗೆ ಸ್ಪಷ್ಟತೆ ಇದೆ. ನಾನು ಗೆಲ್ಲುತ್ತೀನೋ ಅಥವಾ ಜೀವನ ಗೆಲ್ಲತ್ತೋ ನೋಡೇ ಬಿಡೋಣ’ ಎಂದೂ ಅವರು ಹೇಳಿಕೊಂಡಿದ್ದಾರೆ. ಮದುವೆಯ ಬಗ್ಗೆ ತಮಗಿರುವ ಕನಸುಗಳ ಬಗ್ಗೆಯೂ ಅವರು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ನಟಿ ಅಶು ರೆಡ್ಡಿ ಕಾಲು ಹಿಡಿದ ರಾಮ್ ಗೋಪಾಲ್ ವರ್ಮಾ: ನೆಟ್ಟಿಗರು ಶಾಕ್

    ವಿದ್ಯಾಭರಣ್ ಜೊತೆ ತಮಗೆ ನಿಶ್ಚಿತಾರ್ಥ ಆಗಿರಲಿಲ್ಲ. ಮದುವೆಗೂ ತಾವು ಒಪ್ಪಿರಲಿಲ್ಲ ಎಂದೂ ಹೇಳಿರುವ ವೈಷ್ಣವಿ ಆದ ಘಟನೆಯ ಬಗ್ಗೆ ವಿಷಾದವನ್ನೂ ಅವರು ವ್ಯಕ್ತ ಪಡಿಸಿದ್ದಾರೆ. ಸದ್ಯ ಕೆರಿಯರ್ ಬಗ್ಗೆ ಫೋಕಸ್ ಮಾಡಿಕೊಂಡು, ಧಾರಾವಾಹಿಯನ್ನು ಅವರು ಒಪ್ಪಿಕೊಂಡಿದ್ದಾರೆ. ಈ ವಿಚಾರದಿಂದ ಮತ್ತೆ ಅವರು ದೂರ ಇರುವುದಾಗಿಯೂ ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ವೈಷ್ಣವಿ ಎಂಗೇಜ್‌ಮೆಂಟ್: ಅಚ್ಚರಿ ಮೂಡಿಸಿದ ನಟಿಯ ತಾಯಿ ಮಾತು

    ವೈಷ್ಣವಿ ಎಂಗೇಜ್‌ಮೆಂಟ್: ಅಚ್ಚರಿ ಮೂಡಿಸಿದ ನಟಿಯ ತಾಯಿ ಮಾತು

    ವೈಷ್ಣವಿ ಗೌಡ ಮತ್ತು ವಿದ್ಯಾಭರಣ್ ಎಂಗೇಜ್‌ಮೆಂಟ್‌ಗೆ ಸಂಬಂಧ ಪಟ್ಟಂತೆ ಎಲ್ಲವೂ ಮುಗಿದು ಹೋದ ಅಧ್ಯಾಯ ಎಂದೇ ಬಣ್ಣಿಸಲಾಗಿತ್ತು. ಈ ವಿಷಯವನ್ನು ಇಲ್ಲಿಗೆ ಬಿಟ್ಟು, ಬಿಡಿ ಎಂದು ವೈಷ್ಣವಿ ಮತ್ತು ವಿದ್ಯಾಭರಣ್ ಹೇಳಿಕೊಂಡಿದ್ದರು. ಆದರೆ, ವೈಷ್ಣವಿ ತಾಯಿ ಹೇಳುತ್ತಿರುವ ಮಾತೇ ಬೇರೆ ಇದೆ. ಎಂಗೇಜ್‌ಮೆಂಟ್‌ಗೆ ವಿಚಾರವನ್ನು ಇನ್ನೂ ಜೀವಂತವಾಗಿ ಇಡುವ ಪ್ರಯತ್ನ ಕೂಡ ನಡೆಯುತ್ತಿದೆ.

    ಇಂದು ನಡೆದ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ವೈಷ್ಣವಿ ತಾಯಿ, ‘ಮೊನ್ನೆ ನಡೆದಿರುವುದು ನಿಶ್ಚಿತಾರ್ಥವಲ್ಲ. ಗಂಡಿನ ಕಡೆಯವರು ನಮ್ಮ ಮನೆಗೆ ಬಂದಿದ್ದರೂ, ಇನ್ನೂ ನಾವು ಅವರ ಮನೆಗೆ ಹೋಗಿಲ್ಲ. ಹೋಗಬೇಕು ಎನ್ನುವಷ್ಟರಲ್ಲಿ ಈ ರಾದ್ಧಾಂತ ಆಯಿತು. ವಿದ್ಯಾಭರಣ್ ತಾಯಿ ಕೂಡ ನಮ್ಮ ಜೊತೆ ಮಾತನಾಡಿದ್ದಾರೆ. ನನ್ನ ಮಗ ಅಂಥವನಲ್ಲ ಎಂದು ವಾಯ್ಸ್ ನೋಟ್‍ ಕಳುಹಿಸಿದ್ದಾರೆ. ನಮಗೂ ಆ ಹುಡುಗ ಒಳ್ಳೆಯವನು ಅನಿಸಿದ್ದಾನೆ’ ಎಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದಾರೆ. ಇದನ್ನೂ ಓದಿ:ಪ್ರಭಾಸ್ ಲವ್ ಲೈಫ್ ಬಗ್ಗೆ ಸುಳಿವು ಕೊಟ್ಟ ವರುಣ್ ಧವನ್

    ಆಡಿಯೋ ಕಳುಹಿಸಿದ ಹುಡುಗಿಯ ಬಗ್ಗೆಯೂ ಮಾತನಾಡಿದ ಅವರು, ‘ನಮ್ಮ ಮೇಲೆ ಆ ಹುಡುಗಿಗೆ ಕಾಳಜಿ ಇದ್ದರೆ, ನೇರವಾಗಿ ನಮ್ಮ ಜೊತೆಯೇ ಮಾತನಾಡಬೇಕಿತ್ತು. ಆ ಹುಡುಗಿ ಮಾತನಾಡುತ್ತಿಲ್ಲ ಅಂದರೆ, ಅದರ ಹಿಂದೆ ಬೇರೆ ಏನೋ ಇರಬಹುದು. ನಾವು ಹುಡುಗಿಯ ಮಾತನ್ನು ನಂಬುವುದಿಲ್ಲ’ ಎಂದು ಹೇಳುವ ಮೂಲಕ ಅಚ್ಚರಿಯ ಹೇಳಿಕೆಯನ್ನು ನೀಡಿದ್ದಾರೆ. ಅಲ್ಲಿಗೆ ಮುಂದೊಂದು ದಿನ ವೈಷ್ಣವಿ ಮತ್ತು ವಿದ್ಯಾಭರಣ್ ಎಂಗೇಜ್‌ಮೆಂಟ್‌ಗೆ ಆದರೂ, ಅಚ್ಚರಿ ಪಡಬೇಕಿಲ್ಲ.

    ಈ ವಿಚಾರದಲ್ಲಿ ವೈಷ್ಣವಿ ನೊಂದುಕೊಂಡಿದ್ದಾರೆ. ಮೊದಲಿನಿಂದಲೂ ಅವರು ವಿದ್ಯಾಭರಣ್ ಬಗ್ಗೆ ಅಂತರ ಕಾಪಾಡಿಕೊಳ್ಳುತ್ತಲೇ ಬಂದಿದ್ದರು. ಪಬ್ಲಿಕ್ ಟಿವಿ ಜೊತೆ ಮಾತನಾಡಿದ್ದ ಅವರು, ‘ನಾನು ಎಂಗೇಜ್ ಮೆಂಟ್ ಮಾಡಿಕೊಂಡಿಲ್ಲ. ಅದಕ್ಕೆ ಅನುಮತಿಯನ್ನೂ ಕೊಟ್ಟಿಲ್ಲ. ಆ ಹುಡುಗ ಹೇಗೆ, ಏನು ಅಂತ ಅರ್ಥ ಮಾಡಿಕೊಳ್ಳಬೇಕು. ಆನಂತರವೇ ಹೇಳುತ್ತೇನೆ’ ಎಂದಿದ್ದರು. ಅಲ್ಲಿಗೆ ವೈಷ್ಣವಿಗೆ ಹಲವು ವಿಚಾರಗಳು ಗೊತ್ತಿದ್ದವು ಎಂದು ಅವರ ಆಪ್ತರ ಮಾತು.

    Live Tv
    [brid partner=56869869 player=32851 video=960834 autoplay=true]

  • ವೈಷ್ಣವಿ ಮತ್ತು ವಿದ್ಯಾಭರಣ್ ಮಧ್ಯ ಹುಳಿ ಹಿಂಡಿದೋರ ಹುಡುಕಾಟ

    ವೈಷ್ಣವಿ ಮತ್ತು ವಿದ್ಯಾಭರಣ್ ಮಧ್ಯ ಹುಳಿ ಹಿಂಡಿದೋರ ಹುಡುಕಾಟ

    ಟ ವಿದ್ಯಾಭರಣ್ ಮೇಲೆ ಗುರುತರ ಆರೋಪ ಮಾಡಿ ಆಡಿಯೋ ಹರಿಬಿಟ್ಟವರ ಹುಡುಕಾಟ ಶುರುವಾಗಿದೆ. ನಿನ್ನೆಯಷ್ಟೇ ವಿದ್ಯಾಭರಣ್ ಆಡಿಯೋ ಮಾಡಿದವರ ವಿರುದ್ಧ ದೂರು ದಾಖಲಿಸಿದ್ದರು. ಅದನ್ನು ಗಂಭೀರವಾಗಿ ತಗೆದುಕೊಂಡಿರುವ ಪೊಲೀಸರು, ಆ ಆಡಿಯೋದಲ್ಲಿ ಇರುವವರ ಗುರುತಿಗೆ ಬಲೆ ಬೀಸಿದ್ದಾರೆ. ಈ ಆಡಿಯೋದಿಂದಾಗಿ ವೈಷ್ಣವಿ ಮತ್ತು ವಿದ್ಯಾಭರಣ್ ನಿಶ್ಚಿತಾರ್ಥವೇ ಮುರಿದು ಬಿದ್ದಿದೆ. ಆಡಿಯೋದಲ್ಲಿ ತಮ್ಮ ಬಗ್ಗೆ ಸಲ್ಲದ ಮಾತುಗಳನ್ನು ಆಡಲಾಗಿದೆ. ಅವರು ಯಾರು ಎನ್ನುವುದು ನನಗೆ ಗೊತ್ತಿಲ್ಲ. ಅವರ ಮಾತುಗಳಿಂದಾಗಿ ತಮಗೂ ಮತ್ತು ತಮ್ಮ ಕುಟುಂಬಕ್ಕೂ ಮುಜುಗರ ಉಂಟಾಗಿದೆ. ಆಡಿಯೋದಲ್ಲಿ ಮಾತನಾಡಿದವರು ಯಾರು ಎಂಬುದನ್ನು ಪತ್ತೆ ಮಾಡಬೇಕು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ ವಿದ್ಯಾಭರಣ್.

    ನಟಿ ವೈಷ್ಣವಿ ಗೌಡ ನಿಶ್ಚಿತಾರ್ಥ ವಿಷಯ ನಾನಾ ರೂಪಗಳನ್ನು ಪಡೆದುಕೊಳ್ಳುತ್ತಿದೆ. ವೈಷ್ಣವಿ ಗೌಡ ಮತ್ತು ನಟ ವಿದ್ಯಾಭರಣ್ ಇಬ್ಬರೂ ಪ್ರತ್ಯೇಕ ಹೇಳಿಕೆಗಳನ್ನು ನೀಡಿದ್ದು, ಅದು ನಿಶ್ಚಿತಾರ್ಥ ಅಲ್ಲ, ಕೇವಲ ಹಣ್ಣು ಕಾಯಿ ಇಡುವ ಶಾಸ್ತ್ರ ಎಂದು ಸ್ಪಷ್ಟ ಪಡಿಸಿದ್ದಾರೆ. ಆದರೆ, ವಿದ್ಯಾಭರಣ್ ಬಗ್ಗೆ ನಟಿಯೊಬ್ಬಳು ಮಾತನಾಡಿದ್ದಾಳೆ ಎನ್ನಲಾದ ಆಡಿಯೋ ಮಾತ್ರ ನಾನಾ ಅನುಮಾನಗಳನ್ನು ಹುಟ್ಟು ಹಾಕಿದೆ.

    ಈ ಕುರಿತಂತೆ ಪಬ್ಲಿಕ್‌ ಟಿವಿ ಜೊತೆಗೆ ಮಾತನಾಡಿದ ವಿದ್ಯಾಭರಣ್ ಅವರು, ವೈಷ್ಣವಿ ಜೊತೆಗೆ ನನ್ನ ನಿಶ್ಚಿತಾರ್ಥ ನಡೆದಿಲ್ಲ. ಎರಡು ಕುಟುಂಬದ ನಡುವೆ ಪ್ರಾಥಮಿಕ ಮಾತುಕತೆಯಾಗಿತ್ತು. ಆದರೆ ಈ ಫೋಟೋ ಎಲ್ಲಿಂದ ವೈರಲ್ ಆಯಿತು ಎನ್ನುವುದು ಗೊತ್ತಿಲ್ಲ. ನಮ್ಮ ಕುಟುಂಬದವರ ವರ್ಚಸ್ಸನ್ನು ಹಾಳು ಮಾಡಲು ಪ್ಲಾನ್ ಮಾಡಿದ್ದಾರೆ. ನಾನು ಯಾವುದೇ ಹುಡುಗಿಯರೊಂದಿಗೆ ತಪ್ಪಾಗಿ ನಡೆದುಕೊಂಡಿಲ್ಲ. ಆಕೆ ನೇರವಾಗಿ ಬಂದು ಆರೋಪವನ್ನು ಮಾಡಬಹುದಿತ್ತು. ನನ್ನ ಮೊದಲ ಫಿಲ್ಮ್ ಬಂದಾಗಲೇ ಇವರು ಆರೋಪ ಮಾಡಬಹುದಿತ್ತು. ಹೆಸರು ಹೇಳಲು ಧೈರ್ಯವಿಲ್ಲದಿರುವ ಆಕೆ ಆರೋಪ ಮಾಡುತ್ತಿದ್ದಾಳೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ:ಪ್ರಭಾಸ್ ಲವ್ ಲೈಫ್ ಬಗ್ಗೆ ಸುಳಿವು ಕೊಟ್ಟ ವರುಣ್ ಧವನ್

    ನನ್ನ ಮೇಲೆ ಇಷ್ಟೆಲ್ಲ ಆರೋಪ ಮಾಡುವ ಬದಲು ಆಕೆಯೇ ಕಂಪ್ಲೆಂಟ್ ಕೊಡಬಹುದಿತ್ತು. ನಮ್ಮ ಏಳಿಗೆಯನ್ನು ಸಹಿಸಲು ಸಾಧ್ಯವಾಗದೇ ಇರುವ ಹಿತಶತ್ರುಗಳು ಹೀಗೆ ಮಾಡುತ್ತಿದ್ದಾರೆ. ನಾನು ಇನ್‍ಸ್ಟಾಗ್ರಾಮ್ ಅನ್ನು ಮೊದಲೇ ಡಿಲೀಟ್ ಮಾಡಿದ್ದೇನೆ. ನನ್ನ ಇನ್‍ಸ್ಟಾಗ್ರಾಮ್ ಹ್ಯಾಕ್ ಆಗಿತ್ತು. ತುಂಬಾ ಹಿಂದೆಯೇ ಡಿಲೀಟ್ ಆಗಿದೆ. ಇಂತಹ ಅಪಪ್ರಚಾರ ಮಾಡುವವರ ವಿರುದ್ಧ ಕಾನೂನು ಹೋರಾಟ ಮಾಡುತ್ತೇನೆ ಎಂದು ತಿಳಿಸಿದ್ದಾರೆ.  ಆಡಿಯೋದಲ್ಲಿ ಮಾತನಾಡಿದವರು ಕಿರುತೆರೆ ನಟಿ ಎಂದು ಹೇಳಲಾಗುತ್ತಿದ್ದು, ಆದರೆ, ಆ ವಾಯ್ಸು ತಮಗೆ ಗೊತ್ತಿಲ್ಲ ಎಂದು ವಿದ್ಯಾಭರಣ್ ತಿಳಿಸಿದ್ದಾರೆ.

    ನನ್ನ ರೀತಿ ಬೇರೆ ಯಾವ ಹುಡುಗನಿಗೂ ಹೀಗೆ ಆಗಬಾರದು. ಇವತ್ತು ಬುದ್ಧಿ ಕಲಿಸಿಲ್ಲ ಅಂದರೆ, ನಾಳೆ ಇದೇ ರೀತಿ ಸಾಕಷ್ಟು ಜನರಿಗೆ ಆಗುತ್ತದೆ. ನಾನು ಮೂರು ತಿಂಗಳು ಯಾವ ಹುಡುಗಿಯನ್ನು ಕೂಡ ಕರೆದುಕೊಂಡು ಬಂದಿಲ್ಲ. ನೇರವಾಗಿ ಬಂದು ದೂರು ಕೊಡದೇ ಈ ರೀತಿ ಮಾಡಿರುವುದರಿಂದ ತುಂಬಾ ಬೇಸರವಾಗಿದೆ ಎಂದು ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಆಡಿಯೋ ನಟಿ ವಿರುದ್ಧ ಪೊಲೀಸರಿಗೆ ದೂರು ನೀಡಿದ ವಿದ್ಯಾಭರಣ್

    ಆಡಿಯೋ ನಟಿ ವಿರುದ್ಧ ಪೊಲೀಸರಿಗೆ ದೂರು ನೀಡಿದ ವಿದ್ಯಾಭರಣ್

    ಮ್ಮ ಮೇಲೆ ಗುರುತರ ಆರೋಪ ಮಾಡಿದ ಆಡಿಯೋ ವಿರುದ್ಧ ನಟ ವಿದ್ಯಾಭರಣ್ ಇಂದು ದೂರು ದಾಖಲಿಸಿದ್ದಾರೆ. ಆಡಿಯೋದಲ್ಲಿ ತಮ್ಮ ಬಗ್ಗೆ ಸಲ್ಲದ ಮಾತುಗಳನ್ನು ಆಡಲಾಗಿದೆ. ಅವರು ಯಾರು ಎನ್ನುವುದು ನನಗೆ ಗೊತ್ತಿಲ್ಲ. ಅವರ ಮಾತುಗಳಿಂದಾಗಿ ತಮಗೂ ಮತ್ತು ತಮ್ಮ ಕುಟುಂಬಕ್ಕೂ ಮುಜುಗರ ಉಂಟಾಗಿದೆ. ಆಡಿಯೋದಲ್ಲಿ ಮಾತನಾಡಿದವರು ಯಾರು ಎಂಬುದನ್ನು ಪತ್ತೆ ಮಾಡಬೇಕು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ ವಿದ್ಯಾಭರಣ್.

    ನಟಿ ವೈಷ್ಣವಿ ಗೌಡ ನಿಶ್ಚಿತಾರ್ಥ ವಿಷಯ ನಾನಾ ರೂಪಗಳನ್ನು ಪಡೆದುಕೊಳ್ಳುತ್ತಿದೆ. ವೈಷ್ಣವಿ ಗೌಡ ಮತ್ತು ನಟ ವಿದ್ಯಾಭರಣ್ ಇಬ್ಬರೂ ಪ್ರತ್ಯೇಕ ಹೇಳಿಕೆಗಳನ್ನು ನೀಡಿದ್ದು, ಅದು ನಿಶ್ಚಿತಾರ್ಥ ಅಲ್ಲ, ಕೇವಲ ಹಣ್ಣು ಕಾಯಿ ಇಡುವ ಶಾಸ್ತ್ರ ಎಂದು ಸ್ಪಷ್ಟ ಪಡಿಸಿದ್ದಾರೆ. ಆದರೆ, ವಿದ್ಯಾಭರಣ್ ಬಗ್ಗೆ ನಟಿಯೊಬ್ಬಳು ಮಾತನಾಡಿದ್ದಾಳೆ ಎನ್ನಲಾದ ಆಡಿಯೋ ಮಾತ್ರ ನಾನಾ ಅನುಮಾನಗಳನ್ನು ಹುಟ್ಟು ಹಾಕಿದೆ. ಇದನ್ನೂ ಓದಿ: ಮದುವೆ ಬಗ್ಗೆ ವೈಷ್ಣವಿ ತುಂಬಾ ಕನಸು ಕಂಡಿದ್ದಳು: ತಂದೆ ರವಿಕುಮಾರ್

    ಈ ಕುರಿತಂತೆ ಪಬ್ಲಿಕ್‌ ಟಿವಿ ಜೊತೆಗೆ ಮಾತನಾಡಿದ ವಿದ್ಯಾಭರಣ್ ಅವರು, ವೈಷ್ಣವಿ ಜೊತೆಗೆ ನನ್ನ ನಿಶ್ಚಿತಾರ್ಥ ನಡೆದಿಲ್ಲ. ಎರಡು ಕುಟುಂಬದ ನಡುವೆ ಪ್ರಾಥಮಿಕ ಮಾತುಕತೆಯಾಗಿತ್ತು. ಆದರೆ ಈ ಫೋಟೋ ಎಲ್ಲಿಂದ ವೈರಲ್ ಆಯಿತು ಎನ್ನುವುದು ಗೊತ್ತಿಲ್ಲ. ನಮ್ಮ ಕುಟುಂಬದವರ ವರ್ಚಸ್ಸನ್ನು ಹಾಳು ಮಾಡಲು ಪ್ಲಾನ್ ಮಾಡಿದ್ದಾರೆ. ನಾನು ಯಾವುದೇ ಹುಡುಗಿಯರೊಂದಿಗೆ ತಪ್ಪಾಗಿ ನಡೆದುಕೊಂಡಿಲ್ಲ. ಆಕೆ ನೇರವಾಗಿ ಬಂದು ಆರೋಪವನ್ನು ಮಾಡಬಹುದಿತ್ತು. ನನ್ನ ಮೊದಲ ಫಿಲ್ಮ್ ಬಂದಾಗಲೇ ಇವರು ಆರೋಪ ಮಾಡಬಹುದಿತ್ತು. ಹೆಸರು ಹೇಳಲು ಧೈರ್ಯವಿಲ್ಲದಿರುವ ಆಕೆ ಆರೋಪ ಮಾಡುತ್ತಿದ್ದಾಳೆ ಎಂದು ಕಿಡಿಕಾರಿದ್ದಾರೆ.

    ನನ್ನ ಮೇಲೆ ಇಷ್ಟೆಲ್ಲ ಆರೋಪ ಮಾಡುವ ಬದಲು ಆಕೆಯೇ ಕಂಪ್ಲೆಂಟ್ ಕೊಡಬಹುದಿತ್ತು. ನಮ್ಮ ಏಳಿಗೆಯನ್ನು ಸಹಿಸಲು ಸಾಧ್ಯವಾಗದೇ ಇರುವ ಹಿತಶತ್ರುಗಳು ಹೀಗೆ ಮಾಡುತ್ತಿದ್ದಾರೆ. ನಾನು ಇನ್‍ಸ್ಟಾಗ್ರಾಮ್ ಅನ್ನು ಮೊದಲೇ ಡಿಲೀಟ್ ಮಾಡಿದ್ದೇನೆ. ನನ್ನ ಇನ್‍ಸ್ಟಾಗ್ರಾಮ್ ಹ್ಯಾಕ್ ಆಗಿತ್ತು. ತುಂಬಾ ಹಿಂದೆಯೇ ಡಿಲೀಟ್ ಆಗಿದೆ. ಇಂತಹ ಅಪಪ್ರಚಾರ ಮಾಡುವವರ ವಿರುದ್ಧ ಕಾನೂನು ಹೋರಾಟ ಮಾಡುತ್ತೇನೆ ಎಂದು ತಿಳಿಸಿದ್ದಾರೆ.  ಆಡಿಯೋದಲ್ಲಿ ಮಾತನಾಡಿದವರು ಕಿರುತೆರೆ ನಟಿ ಎಂದು ಹೇಳಲಾಗುತ್ತಿದ್ದು, ಆದರೆ, ಆ ವಾಯ್ಸು ತಮಗೆ ಗೊತ್ತಿಲ್ಲ ಎಂದು ವಿದ್ಯಾಭರಣ್ ತಿಳಿಸಿದ್ದಾರೆ.

    ನನ್ನ ರೀತಿ ಬೇರೆ ಯಾವ ಹುಡುಗನಿಗೂ ಹೀಗೆ ಆಗಬಾರದು. ಇವತ್ತು ಬುದ್ಧಿ ಕಲಿಸಿಲ್ಲ ಅಂದರೆ, ನಾಳೆ ಇದೇ ರೀತಿ ಸಾಕಷ್ಟು ಜನರಿಗೆ ಆಗುತ್ತದೆ. ನಾನು ಮೂರು ತಿಂಗಳು ಯಾವ ಹುಡುಗಿಯನ್ನು ಕೂಡ ಕರೆದುಕೊಂಡು ಬಂದಿಲ್ಲ. ನೇರವಾಗಿ ಬಂದು ದೂರು ಕೊಡದೇ ಈ ರೀತಿ ಮಾಡಿರುವುದರಿಂದ ತುಂಬಾ ಬೇಸರವಾಗಿದೆ ಎಂದು ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಉಕ್ರೇನ್‍ನಿಂದ ಬಂದು ಪೋಷಕರನ್ನು ನೋಡ್ತೇನೆ ಅಂದುಕೊಂಡಿರಲಿಲ್ಲ: ವಿದ್ಯಾರ್ಥಿನಿ

    ಉಕ್ರೇನ್‍ನಿಂದ ಬಂದು ಪೋಷಕರನ್ನು ನೋಡ್ತೇನೆ ಅಂದುಕೊಂಡಿರಲಿಲ್ಲ: ವಿದ್ಯಾರ್ಥಿನಿ

    ಬೀದರ್: ಉಕ್ರೇನ್‍ನಿಂದ ಬಂದು ಪೋಷಕರು ಹಾಗೂ ಬೀದರ್ ಜನರನ್ನು ನೋಡುತ್ತೇನೆ ಅಂದುಕೊಂಡಿರಲಿಲ್ಲ ಎಂದು ಉಕ್ರೇನ್‍ನಲ್ಲಿ ಸಿಲುಕಿದ್ದ ಬಸವಕಲ್ಯಾಣಕ್ಕೆ ವಿದ್ಯಾರ್ಥಿನಿ ವೈಷ್ಣವಿ ತಿಳಿಸಿದರು.

    ಉಕ್ರೇನ್‍ನಿಂದ ಬಸವ ಕಲ್ಯಾಣಕ್ಕೆ ಬಂದಿಳಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ನಾನು ಬೀದರ್‌ಗೆ ಬರುತ್ತೇನೆ ಅಂದುಕೊಂಡಿರಲಿಲ್ಲಾ. ಸದ್ಯ ನನಗೆ ಬಹಳ ಸಂತೋಷವಾಗುತ್ತಿದೆ ಎಂದು ಹೇಳಿದರು.

    ನಮ್ಮ ತಂದೆ ಕೃಷಿಕರಾದರು. ನನ್ನ ಆಸೆಯಂತೆ ಎಂಬಿಬಿಎಸ್ ಮಾಡಲು ಉಕ್ರೇನ್‍ಗೆ ಕಳಿಸಿದ್ದರು. ಆದರೆ ನಾನು ಉಕ್ರೇನ್‍ಗೆ ಹೋದ ಮೂರು ತಿಂಗಳಲ್ಲಿ ಈ ರೀತಿ ಪರಿಸ್ಥಿತಿ ಬಂತು. ರಷ್ಯಾದಿಂದ ಅತಿ ಹೆಚ್ಚು ದಾಳಿಯಾದ ಉಕ್ರೇನ್‍ನ ಖಾರ್ಕಿವ್‍ನಲ್ಲೆ ನಾವು ಇದ್ದೆವು. ಆದರೆ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಸಹಾಯದಿಂದ ನಾವು ಭಾರತಕ್ಕೆ ತಲುಪಲು ಸಾಧ್ಯವಾಯಿತು. ಈ ಸಮಯದಲ್ಲಿ ಪ್ರಧಾನಿ ಮೋದಿಯವರು ಪುಟಿನ್ ಜೊತೆ ಮಾತನಾಡಿ ನಮಗೆ ತೊಂದರೆಯಾಗದಂತೆ ನೋಡಿಕೊಂಡರು ಎಂದು ಸಂತಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಮಹಿಳಾ ದಿನಾಚರಣೆ – ಸೀರೆ, ಶೂ ತೊಟ್ಟು ಮಹಿಳೆಯರ ಓಟ

    ಉಕ್ರೇನ್‍ನಲ್ಲಿದ್ದ ವೇಳೆ ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಶಾಸಕರು, ತಹಶೀಲ್ದಾರ್ ಅವರು ನಿರಂತರ ಸಂಪರ್ಕದಲ್ಲಿ ಇದ್ದರು ಎಂದ ಅವರು, ನಮ್ಮ ಸ್ನೇಹಿತರು ಇನ್ನೂ ಅಲ್ಲೇ ಇದ್ದಾರೆ. ಅವರು ಸುರಕ್ಷಿತವಾಗಿ ಬಂದರೆ ಅವರ ಪೋಷಕರಿಗೆ ಖುಷಿಯಾಗುತ್ತದೆ ಎಂದರು. ಇದನ್ನೂ ಓದಿ : ಹರ್ಷ ಕುಟುಂಬಕ್ಕೆ 25 ಲಕ್ಷ ರೂ. ನೆರವು ನೀಡಿದ ಬಿಎಸ್‍ವೈ

  • ವೈನ್ ಸ್ಟೋರ್ ಫ್ಯಾಮಿಲಿಯನ್ನು ಭೇಟಿಯಾದ ವೈಷ್ಣವಿ

    ವೈನ್ ಸ್ಟೋರ್ ಫ್ಯಾಮಿಲಿಯನ್ನು ಭೇಟಿಯಾದ ವೈಷ್ಣವಿ

    ಬೆಂಗಳೂರು: ಬಿಗ್‍ಬಾಸ್ ಕಾರ್ಯಕ್ರಮದ ನಂತರ ಇದೇ ಮೊದಲ ಬಾರಿಗೆ ವೈಷ್ಣವಿ ಗೌಡ, ರಘು ಫ್ಯಾಮಿಲಿಯನ್ನು ಮೀಟ್ ಮಾಡಿದ್ದಾರೆ.

    ಬಿಗ್‍ಬಾಸ್ ಸೀಸನ್-8ರ ಬೆಸ್ಟ್ ಫ್ರೆಂಡ್ಸ್ ಅಂದರೆ ಅದು ರಘು ಹಾಗೂ ವೈಷ್ಣವಿ. ಬಿಗ್‍ಬಾಸ್ ಕಾರ್ಯಕ್ರಮದ ಆರಂಭದಿಂದಲೂ ಅಂತ್ಯದವರೆಗೂ ದೊಡ್ಮನೆಯಲ್ಲಿ ಎಲ್ಲರ ನಡುವೆ ಇವರ ಸ್ನೇಹ ಪ್ರೇಕ್ಷಕರ ಹೃದಯ ಗೆದ್ದಿತ್ತು. ಇಬ್ಬರ ನಡುವೆ ಕೆಲವೊಂದಷ್ಟು ಜಗಳ, ಮನಸ್ತಾಪ ಬಂದರೂ ಒಬ್ಬರಿಗೊಬ್ಬರು ಬಿಟ್ಟು ಕೊಡದೇ ಅದನ್ನು ಚರ್ಚಿಸಿ ಹೊಂದಾಣಿಕೆಯಿಂದ ಆಟ ಆಡುತ್ತಿದ್ದ ಇವರಿಬ್ಬರ ಕಾಂಬಿನೇಷನ್ ನೋಡಿ ಅಭಿಮಾನಿಗಳು ನಿಜವಾದ ಫ್ರೆಂಡ್ಸ್ ಅಂದರೆ ಇವರಂತೆ ಇರಬೇಕು ಎಂದು ಮಾತನಾಡಿಕೊಂಡಿದ್ದು ಇದೆ. ಇದನ್ನೂ ಓದಿ: ಕೆಪಿಎಸ್‌ಸಿಯನ್ನು ಹಾಳು ಮಾಡಿದ್ದು ಬಿಜೆಪಿ, ಕಾಂಗ್ರೆಸ್‌ : ಜೆಡಿಎಸ್‌ ತಿರುಗೇಟು

    ರಘು ತಮ್ಮ ಕಷ್ಟದ ದಿನಗಳನ್ನು ಹೇಳಿಕೊಂಡಿದ್ದಾಗ ವೈಷ್ಣವಿ ಸಮಾಧಾನ ಹೇಳಿ ಅವರಿಗೆ ಆತ್ಮಸ್ಥೈರ್ಯ ತುಂಬಿದ್ದರು. ಅಲ್ಲದೇ ದೊಡ್ಮನೆಯಲ್ಲಿ ಯಾವುದೇ ಟಾಸ್ಕ್ ಬಂದಗಲೂ ರಘು ವೈಷ್ಣವಿಗೆ, ವೈಷ್ಣವಿ ರಘುಗೆ ಪ್ರೋತ್ಸಾಹ ನೀಡುತ್ತಾ ಆಟ ಆಡುತ್ತಿದ್ದರು. ಆದರೆ ಬಿಗ್‍ಬಾಸ್ ಕಾರ್ಯಕ್ರಮದ ನಂತರ ರಘು, ವೈಷ್ಣ ವಿಎಲ್ಲೂ ಅಷ್ಟಾಗಿ ಒಟ್ಟಿಗೆ ಕಾಣಿಸಿಕೊಂಡಿರಲಿಲ್ಲ. ಇದನ್ನೂ ಓದಿ: ಹೆಸರುಬೇಳೆ ಪಾಯಸ ಮಾಡುವ ಸರಳ ವಿಧಾನ ನಿಮಗಾಗಿ

     

    View this post on Instagram

     

    A post shared by Vaishnavi (@iamvaishnavioffl)

    ಇದೀಗ ಹಲವು ದಿನಗಳ ಬಳಿಕ ದಸರಾ ಹಬ್ಬದ ಹಿನ್ನೆಲೆ ರಘು ಹಾಗೂ ಅವರ ಕುಟುಂಬವನ್ನು ಭೇಟಿ ಮಾಡಿದ್ದಾರೆ. ಈ ಕುರಿತಂತೆ ವೈಷ್ಣವಿ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಫೋಟೋ ಶೇರ್ ಮಾಡಿಕೊಂಡಿದ್ದು, ಫೋಟೋದಲ್ಲಿ ರಘು ಅವರ ಮಗನನ್ನು ಎತ್ತಿಕೊಂಡಿದ್ದು, ರಘು, ಪತ್ನಿ ವಿದ್ಯಾಶ್ರೀ ಹಾಗೂ ವೈಷ್ಣವಿ ನಗುತ್ತಾ ಫೋಟೋಗೆ ಪೋಸ್ ನೀಡಿರುವುದನ್ನು ಕಾಣಬಹುದಾಗಿದೆ. ಜೊತೆಗೆ ವೈನ್ ಸ್ಟೋರ್ ಫ್ಯಾಮಿಲಿ ಜೊತೆಗೆ ದಸರಾ ವಿಶೇಷ ಎಂದು ಶೀರ್ಷಿಕೆಯಲ್ಲಿ ಬರೆದುಕೊಂಡಿದ್ದಾರೆ.

  • ಕಿರುತೆರೆ ಖಡಕ್ ಖಳನಟ ಈಗ ಬೆಳ್ಳಿತೆರೆಯ ನಾಯಕನಟ – ‘ಬಹುಕೃತಂ ವೇಷಂ’ನಲ್ಲಿ ಶಶಿಕಾಂತ್ ಹೊಸ ಅವತಾರ

    ಕಿರುತೆರೆ ಖಡಕ್ ಖಳನಟ ಈಗ ಬೆಳ್ಳಿತೆರೆಯ ನಾಯಕನಟ – ‘ಬಹುಕೃತಂ ವೇಷಂ’ನಲ್ಲಿ ಶಶಿಕಾಂತ್ ಹೊಸ ಅವತಾರ

    ಬೆಂಗಳೂರು: ಕಿರುತೆರೆಯ ನಟ-ನಟಿಯರು ಚಂದನವನದತ್ತ ಮುಖ ಮಾಡೋದು ಕಾಮನ್. ಆದರೆ ಇತ್ತೀಚಿನ ದಿನಗಳಲ್ಲಿ ಇದರ ಸಂಖ್ಯೆ ಬಹುಪಾಲು ಹೆಚ್ಚಾಗಿದೆ. ಕಿರುತೆರೆಯಲ್ಲಿ ಜನರ ಮನೆ ಮನಸ್ಸುಗಳಲ್ಲಿ ಬೇರೂರುವ ಮೂಲಕ ಬೆಳ್ಳಿ ಪರೆದೆ ಮೇಲೆ ಪ್ರಯೋಗಕ್ಕೆ ಮುಂದಾಗಿಗುತ್ತಿದ್ದಾರೆ. ಆ ಸಾಲಿಗೆ ಮತ್ತೊಬ್ಬ ನಟ ಸೇಪರ್ಡೆಯಾಗಿದ್ದಾರೆ. ಅವರೇ ಕುಲವಧು ಧಾರಾವಾಹಿ ಖ್ಯಾತಿಯ ಖಳನಟ ಶಶಿಕಾಂತ್.

    ‘ಬಹುಕೃತ ವೇಷಂ’ ಸಿನಿಮಾ ಮೂಲಕ ನಾಯಕ ನಟನಾಗಿ ಸಿಲ್ವರ್ ಸ್ಕ್ರೀನ್ ಮೇಲೆ ಮಿಂಚಲು ಸಜ್ಜಾಗಿದ್ದಾರೆ. ಕಿರುತೆರೆಯ ಖಡಕ್ ಖಳನಟ ಶಶಿಕಾಂತ್. ಖಾಸಗಿ ವಾಹಿನಿಯ ಕುಲವಧು ಧಾರಾವಾಹಿಯಲ್ಲಿ ವಿಲನ್ ರೋಲ್ ನಲ್ಲಿ ಜನಮನ್ನಣೆ ಪಡೆದ ಶಶಿಕಾಂತ್ ನಾಯಕನಟನಾಗಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಹಾಗಂತ ಇದೇನು ಇವರ ಮೊದಲ ಸಿನಿಮಾವಲ್ಲ. ಇದಕ್ಕೂ ಮುನ್ನ ರಣರಣಕ, ಗೌಡ್ರು ಸೈಕಲ್ ಸಿನಿಮಾಗಳಲ್ಲಿ ನಟನಾಗಿ ಭರವಸೆ ಮೂಡಿಸಿದ್ದಾರೆ. ಇದೀಗ ‘ಬಹುಕೃತ ವೇಷಂ’ ಸಿನಿಮಾ ಮೂಲಕ ಮತ್ತೊಮ್ಮೆ ಸೌಂಡ್ ಮಾಡಲು ಸಜ್ಜಾಗಿದ್ದಾರೆ. ಈಗಾಗಲೇ ಚಿತ್ರದ ಫಸ್ಟ್ ಲುಕ್, ಟೀಸರ್ ಹಾಗೂ ಒಂದು ಹಾಡನ್ನು ಚಿತ್ರತಂಡ ಬಿಡುಗಡೆ ಮಾಡಿ ಗಮನ ಸೆಳೆಯುತ್ತಿದೆ. ಬಿಡುಗಡೆಯ ಅಂಚಿನಲ್ಲಿರುವ ಈ ಚಿತ್ರ ಸೆನ್ಸಾರ್ ಅಂಗಳದಲ್ಲಿದೆ.

    ಎಲ್ಲರೂ ಜೀವನದಲ್ಲಿ ಒಂದಲ್ಲ ಒಂದು ಕಾರಣಕ್ಕೆ ಮುಖವಾಡ ಹಾಕುತ್ತಾರೆ. ಹಾಗೆಯೇ ಪ್ರೀತಿಯನ್ನು ಪಡೆಯಲು ಮುಖವಾಡ ಹಾಕಬೇಕಾಗುತ್ತೆ. ಇದನ್ನೇ ಚಿತ್ರದ ಎಳೆಯಾಗಿಟ್ಟುಕೊಂಡು ಚೆಂದದ ಪ್ರೇಮ್ ಕಹಾನಿ ಹೆಣೆದಿದ್ದಾರೆ ಅಧ್ಯಾಯ್ ತೇಜ್. ಚಿತ್ರಕಥೆ ಕೂಡ ಇವರದ್ದೇ. ಕ್ಯೂಟ್ ಲವ್ ಸ್ಟೋರಿ ಜೊತೆಗೆ ಸೈಕಲಾಜಿಕಲ್ ಥ್ರಿಲ್ಲರ್ ಸಬ್ಜೆಕ್ಟ್ ಒಳಗೊಂಡ ಈ ಚಿತ್ರಕ್ಕೆ ಪ್ರಶಾಂತ್ ಯಲ್ಲಂಪಳ್ಳಿ ಆಕ್ಷನ್ ಕಟ್ ಹೇಳಿದ್ದಾರೆ. ನಾಯಕ ನಟಿಯಾಗಿ ಅಗ್ನಿಸಾಕ್ಷಿ ಖ್ಯಾತಿಯ ವೈಷ್ಣವಿ ನಟಿಸಿದ್ದಾರೆ. ಇದನ್ನೂ ಓದಿ: ಮದುವೆಗೆ ಸ್ಥಳ ಹುಡುಕುತ್ತ ಜೈಪುರಗೆ ಬಂದ್ರು ಲವ್ ಬರ್ಡ್ಸ್

    ಕಿರುತೆರೆಯಿಂದ ಹಿರಿತೆರೆಗೆ ಕಾಲಿಟ್ಟಿರುವ ಶಶಿಕಾಂತ್ ಬೆಳ್ಳಿಪರದೆ ಮೇಲೆ ತಮ್ಮದೇ ಛಾಪನ್ನು ಒತ್ತಬೇಕೆಂಬ ಮಹದಾಸೆಯನ್ನು ಹೊಂದಿದ್ದಾರೆ. ಹಾಗಂತ ಇಲ್ಲಿವರೆಗೆ ನಡೆದುಬಂದ ಸುಲಭದಲ್ಲ. ಮೂಲತಃ ಮಂಡ್ಯದವರಾದ ಶಶಿಕಾಂತ್ ರೈತ ಕುಟುಂಬದವರು. ಬಿಎಸ್ಸಿ ಓದಿಕೊಂಡಿರುವ ಶಶಿಕಾಂತ್ ಗೆ ಕಾಲೇಜು ದಿನಗಳಿಂದ ರಂಗಭೂಮಿ ನಂಟು. ಆಗಲೇ ನಟನಾಗಬೇಕು ಎಂದು ಕನಸು ಕಂಡವರು. ಬಿಎಸ್‍ಸಿ ಮುಗಿಯುತ್ತಿದ್ದಂತೆ ಉದ್ಯೋಗ ಅರಸಿ ಬಂದ ಶಶಿಕಾಂತ್ ಪ್ರೊಫೇಶನ್ ಬಿಟ್ಟು ಆಯ್ಕೆ ಮಾಡಿಕೊಂಡಿದ್ದು ಫ್ಯಾಶನ್. ಬೆಂಗಳೂರಿಗೆ ಬಂದವರೇ ಸೀದಾ ರಂಗಭೂಮಿ ತಂಡ ಸೇರಿ ನಟನೆಗೆ ಬೇಕಾದ ಕಸರತ್ತುಗಳನ್ನು ಕಲಿತುಕೊಂಡ್ರು. ಬಣ್ಣದ ಲೋಕದಲ್ಲಿ ಅವಕಾಶ ಪಡೆಯಲು ಅಲೆದಾಟ ನಡೆಸುತ್ತಿರುವಾಗ ಸಿಕ್ಕಿದ್ದು ಕಿರುತೆರೆಯ ಅವಕಾಶ. ಮೀರಾ ಮಾಧವ, ಖುಷಿ, ಮಿಸ್ಟರ್ ಅಂಡ್ ಮಿಸಸ್ ರಂಗೇಗೌಡ, ಕುಲವಧು ಮುಂತಾದ ಧಾರಾವಾಹಿಗಳಲ್ಲಿ ಶಶಿಕಾಂತ್ ನಟಿಸಿದ್ದಾರೆ. ಇದನ್ನೂ ಓದಿ: ನಾಗಚೈತನ್ಯ ‘ಲವ್ ಸ್ಟೋರಿ’ ಲೀಕ್ ಆಯ್ತು

    ನಟಿಸಿದ ಎಲ್ಲಾ ಧಾರಾವಾಹಿಗಳಲ್ಲಿ ರಗಡ್ ವಿಲನ್ ಪಾತ್ರಗಳಲ್ಲೇ ಮಿಂಚಿದ ಶಶಿಕಾಂತ್ ರಣರಣಕ ಚಿತ್ರದ ಮೂಲಕ ನಾಯಕ ನಟನಾಗಿ ಸ್ಯಾಂಡಲ್‍ವುಡ್ ಅಂಗಳಕ್ಕೆ ಪಾದಾರ್ಪಣೆ ಮಾಡಿದ್ರು. ಇದೀಗ ಬಣ್ಣದ ಲೋಕದಲ್ಲೇ ಬದುಕುಕಟ್ಟಿಕೊಳ್ಳಲು ಮುಂದಾಗಿರುವ ಶಶಿಕಾಂತ್ ಗೆ ಹಲವು ಸಿನಿಮಾ ಆಫರ್ ಗಳು ಒಲಿದು ಬರುತ್ತಿದೆ. ಇದನ್ನೂ ಓದಿ: ಒಳ ಉಡುಪು ಜಾಹೀರಾತಿನಲ್ಲಿ ಅಭಿನಯ – ಟ್ರೋಲ್ ಕೆಂಗಣ್ಣಿಗೆ ಗುರಿಯಾದ ರಶ್ಮಿಕಾ ಮಂದಣ್ಣ

  • ಸಾಯೋಕಿಂತ ಮುಂಚೆ ನನ್ನ ಅಪ್ಪನ ನೋಡ್ಬೇಕು: ವೈಷ್ಣವಿ

    ಸಾಯೋಕಿಂತ ಮುಂಚೆ ನನ್ನ ಅಪ್ಪನ ನೋಡ್ಬೇಕು: ವೈಷ್ಣವಿ

    ಬೆಂಗಳೂರು: ಬಿಗ್‍ಬಾಸ್ ಮಿನಿ ಸೀಸನ್‍ನಲ್ಲಿ ಸ್ಪರ್ಧಿಯಾಗಿರುವ ಧಾರಾವಾಹಿ ನಟಿ ವೈಷ್ಣವಿ ತಮ್ಮ ತಂದೆಯನ್ನು ಒಮ್ಮೆ ನೋಡಬೇಕು ಎಂದು ಹೇಳುತ್ತಾ ಕಣ್ಣೀರು ಹಾಕಿದ್ದಾರೆ.

    ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಮಿಥುನ ರಾಶಿ ಸೀರಿಯಲ್ ಮೂಲಕ ಫೇಮಸ್ ಆದ ನಟಿ ವೈಷ್ಣವಿ ಅವರು ಇತ್ತೀಚೆಗೆ ದೊಡ್ಮನೆಯಲ್ಲಿ ಮಕ್ಕಳಂತೆ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ತಮ್ಮ ಮನದಾಳದ ನೋವನ್ನು ಎಲ್ಲರ ಎದುರು ಹೇಳಿಕೊಂಡಿದ್ದಾರೆ. ವೈಷ್ಣವಿ ಮಾತನಾಡಿರುವುದು ಹೃದಯಸ್ಪರ್ಶಿ ಆಗಿದೆ. ಅದನ್ನು ಕೇಳಿ ಬಿಗ್‍ಬಾಸ್ ಮನೆಯ ಇನ್ನುಳಿದ ಸದಸ್ಯರು ಕೂಡ ಕಣ್ಣೀರು ಸುರಿಸಿದ್ದಾರೆ. ಅಪ್ಪನನ್ನು ನೋಡಬೇಕು ಎಂದು ಕಣ್ಣೀರು ಹಾಕುತ್ತೀರುವ ದೃಶ್ಯ ವೀಕ್ಷಕರ ಕಣ್ಣು ಒದ್ದೆ ಮಾಡುವಂತಿದೆ.

    ನನಗೆ ಅಪ್ಪನ ಹೆಸರು ಗೊತ್ತಾಗಿದ್ದು 10ನೇ ಕ್ಲಾಸ್‍ನಲ್ಲಿ. ನನಗೆ ಅಪ್ಪ ಇದ್ದಾರೆ ಎನಿಸುತ್ತದೆ. ಅವರು ಸತ್ತಿಲ್ಲ. ಅವರು ನಮ್ಮ ಜೊತೆ ಕೂಡ ಇಲ್ಲ. ನಾನು ಅವರನ್ನು ನೋಡಿಯೇ ಇಲ್ಲ. ಇವಳಿಗೆ ಇವರ ಅಪ್ಪನ ಹೆಸರೇ ಗೊತ್ತಿಲ್ಲ ಎಂದು ನನ್ನ ಎದುರಿಗೇ ಜನರು ಆಡಿಕೊಳ್ಳುತ್ತಿದ್ದರು. ನಮ್ಮ ಅಪ್ಪ ಸಾಯುವುದಕ್ಕಿಂತ ಮುಂಚೆ ನಾನು ಅವರನ್ನ ನೋಡಬೇಕು. ಒಂದೇ ಒಂದು ಬಾರಿ ಅವರನ್ನು ನಾನು ಅಪ್ಪ ಎಂದು ಕರೆಯಬೇಕು ಅಂತ ತುಂಬ ಆಸೆ ಇದೆ ಎನ್ನುತ್ತ ವೈಷ್ಣವಿ ಕಣ್ಣೀರು ಸುರಿಸಿದ್ದಾರೆ. ಇದನ್ನೂ ಓದಿ: ದೈಹಿಕ ಹಾಗೂ ಮಾನಸಿಕ ಅತ್ಯಾಚಾರಕ್ಕೆ ಕೊನೆ ಯಾವಾಗ?: ಶ್ರುತಿ

    ತೆರೆಮೇಲೆ ಖುಷಿಖುಷಿಯಾಗಿ ಮನರಂಜಿಸುವ ನಟ-ನಟಿಯರ ರಿಯಲ್ ಲೈಫ್ ಬಗ್ಗೆ ಅಭಿಮಾನಿಗಳಿಗೆ ಹೆಚ್ಚೇನೂ ಗೊತ್ತಿರುವುದಿಲ್ಲ. ಸೆಲೆಬ್ರಿಟಿಗಳ ಬದುಕಿನಲ್ಲಿಯೂ ಹೇಳಿಕೊಳ್ಳಲಾಗದಂತಹ ನೋವಿನ ಘಟನೆಗಳು ಇರುತ್ತವೆ. ಬಿಗ್‍ಬಾಸ್ ಮಿನಿ ಸೀಸನ್‍ನಲ್ಲಿ ಭಾಗವಹಿಸಿರುವ ಕೆಲವು ಕಲಾವಿದರು ತಮ್ಮ ಬದುಕಿನ ಅಂತಹ ಕೆಲವು ನೋವುಗಳನ್ನು ಪ್ರೇಕ್ಷಕರ ಮುಂದೆ ಹಂಚಿಕೊಂಡಿದ್ದಾರೆ.