Tag: Vaishali

  • ಬಿಹಾರದಲ್ಲಿ ಕನ್ವರ್ ಯಾತ್ರೆ ವೇಳೆ ಡಿಜೆ ವಾಹನಕ್ಕೆ ವಿದ್ಯುತ್ ಸ್ಪರ್ಶ – 9 ಮಂದಿ ದುರ್ಮರಣ

    ಬಿಹಾರದಲ್ಲಿ ಕನ್ವರ್ ಯಾತ್ರೆ ವೇಳೆ ಡಿಜೆ ವಾಹನಕ್ಕೆ ವಿದ್ಯುತ್ ಸ್ಪರ್ಶ – 9 ಮಂದಿ ದುರ್ಮರಣ

    ಪಾಟ್ನ: ಕನ್ವರ್ ಯಾತ್ರೆ (Kanwar Yatra) ವೇಳೆ ಡಿಜೆ ವಾಹನಕ್ಕೆ (DJ Vehicle) ಹೈಟೆನ್ಷನ್ ತಂತಿ ತಗುಲಿದ ಪರಿಣಾಮ ಕರೆಂಟ್ ಶಾಕ್ (Electrocuted) ಹೊಡೆದು 9 ಮಂದಿ ಕನ್ವರ್ ಯಾತ್ರಿಗಳು ಸಾವನ್ನಪ್ಪಿದ ಘಟನೆ ಬಿಹಾರದ (Bihar) ವೈಶಾಲಿಯಲ್ಲಿ ನಡೆದಿದೆ.

    ಹಾಜಿಪುರ ಕೈಗಾರಿಕ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, 10ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಸುಲ್ತಾನ್‌ಪುರ ಗ್ರಾಮದ ಯುವಕರನ್ನು ಒಳಗೊಂಡ ತಂಡವು ಸೋನ್‌ಪುರ ಬಾಬಾ ಹರಿಹರನಾಥದಲ್ಲಿ ‘ಜಲಾಭಿಷೇಕ’ ಮಾಡಲು ಗಂಗಾಜಲವನ್ನು ಹೊತ್ತು ಸರನ್‌ನ ಪಹೇಲಜಾ ಘಾಟ್‌ಗೆ ತೆರಳುತ್ತಿತ್ತು. ಈ ವೇಳೆ ಡಿಜೆ ಹಾಡುಗಳೊಂದಿಗೆ ಮೆರವಣಿಗೆ ತೆರಳುತ್ತಿದ್ದ ವೇಳೆ 11,000 ವೋಲ್ಟ್ನ ಹೈಟೆನ್ಷನ್ ತಂತಿಗೆ ಡಿಜೆ ವಾಹನದ ಮೇಲ್ಭಾಗ ತಾಗಿ ದುರಂತ ಸಂಭವಿಸಿದೆ. ಇದನ್ನೂ ಓದಿ: ನಿಗದಿಯಾಗಿದ್ದ ಕೊಪ್ಪಳ, ವಿಜಯನಗರ ಸಿಎಂ ಪ್ರವಾಸ ದಿಢೀರ್‌ ರದ್ದು

    ಕನ್ವರಿಯಾಗಳು ಅಥವಾ ಶಿವಭಕ್ತರು ಡಿಜೆ ವಾಹನದಲ್ಲಿ ತೆರಳುತ್ತಿದ್ದರು. ವಾಹನ ತುಂಬಾ ಎತ್ತರವಾಗಿದ್ದರಿಂದ ಹೈಟೆನ್ಷನ್ ತಂತಿಗೆ ಸಿಕ್ಕಿಹಾಕಿಕೊಂಡು ಘಟನೆ ಸಂಭವಿಸಿದೆ. ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಹಾಜಿಪುರ ಉಪವಿಭಾಗೀಯ ಪೊಲೀಸ್ ಅಧಿಕಾರಿ ಓಂ ಪ್ರಕಾಶ್ ತಿಳಿಸಿದ್ದಾರೆ. ಇದನ್ನೂ ಓದಿ: ರಾಮೇಶ್ವರಂ ಕೆಫೆ ಸ್ಫೋಟ – ಎನ್‌ಐಎಯಿಂದ ಸ್ಪಾಟ್‌ ಮಹಜರು

    ಘಟನೆಯಲ್ಲಿ ಆರು ಮಂದಿಗೆ ಗಾಯಗಳಾಗಿದ್ದು, ಅವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ. ಅವರು ಹಾಜಿಪುರದ ಸದರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ತಮಿಳುನಾಡಿಗೂ ಕಾವೇರಿ ಹರಿದರೂ ರೈತರಿಗೆ ತಪ್ಪದ ಕಂಟಕ!

    ಕನ್ವಾರಿಯಾಗಳು ಅಥವಾ ಶಿವಭಕ್ತರು ಶ್ರಾವಣ ಮಾಸದಲ್ಲಿ ದೇವರಿಗೆ ಅರ್ಪಿಸಲು ತಮ್ಮ ಊರಿನಿಂದ ಗಂಗಾಜಲವನ್ನು ಒಯ್ಯುತ್ತಾರೆ. ಕನ್ವರ್ ಯಾತ್ರೆಯು ಪ್ರತಿ ವರ್ಷ ನಡೆಯುವ ಅತಿ ದೊಡ್ಡ ಧಾರ್ಮಿಕ ಯಾತ್ರೆಗಳಲ್ಲಿ ಒಂದಾಗಿದೆ. ಇದನ್ನೂ ಓದಿ: 45 ದಿನದಿಂದ ಕರೆಂಟ್ ಇಲ್ಲದೆ ಕತ್ತಲಲ್ಲಿ ಕಾಫಿನಾಡ ಅತ್ತಿಗುಂಡಿ ಗ್ರಾಮ

  • ನಿರ್ಜನ ಪ್ರದೇಶದಲ್ಲಿ ಅವರದ್ದೇ ಕಾರಿನಲ್ಲಿ ಸಿಕ್ಕಿದೆ ಜನಪ್ರಿಯ ಗಾಯಕಿ ವೈಶಾಲಿ ಮೃತದೇಹ

    ನಿರ್ಜನ ಪ್ರದೇಶದಲ್ಲಿ ಅವರದ್ದೇ ಕಾರಿನಲ್ಲಿ ಸಿಕ್ಕಿದೆ ಜನಪ್ರಿಯ ಗಾಯಕಿ ವೈಶಾಲಿ ಮೃತದೇಹ

    ಗುಜರಾತ್ ನ ಜನಪ್ರಿಯ ಗಾಯಕಿ, ನಟಿಯೂ ಆಗಿದ್ದ ವೈಶಾಲಿ ಬುಲ್ಸಾರ್ ಕಾಣೆಯಾಗಿದ್ದರು. ಎರಡು ದಿನಗಳ ಹಿಂದೆಯಷ್ಟೇ ನನ್ನ ಪತ್ನಿ ಕಾಣೆಯಾಗಿದ್ದಾಳೆ ಎಂದು ವೈಶಾಲಿ ಪತಿ ದೂರು ನೀಡಿದ್ದರು. ದೂರಿನ ಹಿನ್ನೆಲೆಯಲ್ಲಿ ಪೊಲೀಸರು ವೈಶಾಲಿಗಾಗಿ ಹುಡುಕಾಟ ನಡೆಸಿದ್ದರು. ಕೊನೆಗೂ ವೈಶಾಲಿ ಹೆಣವಾಗಿ ದೊರೆತಿದ್ದಾರೆ. ಗುರಜಾರ್ ನ ಪರ್ಡಿ ತಾಲ್ಲೂಕಿನ ನಿರ್ಜನ ಪ್ರದೇಶವೊಂದರಲ್ಲಿ ನಿಂತಿದ್ದ ಅವರದ್ದೇ ಕಾರಿನಲ್ಲಿ ಅವರ ಮೃತದೇಹ ಸಿಕ್ಕಿದೆ.

    ವೈಶಾಲಿಯ ಕಾರು ವಲ್ಸಾಡ್ ಜಿಲ್ಲೆಯ ಪರ್ಡಿ ತಾಲ್ಲೂಕಿನ ಪಾರ್ ನದಿ ತೀರದಲ್ಲಿನ ನಿರ್ಜನ ಪ್ರದೇಶದಲ್ಲಿ ಕಂಡಿದ್ದು, ಕಾರು ನೋಡಿದ್ದ ಸ್ಥಳಿಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗುತ್ತಿದೆ. ಪೊಲೀಸರು ಸ್ಥಳಕ್ಕೆ ಧಾವಿಸಿದಾಗ ಕಾರಿನ ಹಿಂಬದಿಯ ಸೀಟಿನಲ್ಲಿ ವೈಶಾಲಿಯ ಮೃತದೇಹ ದೊರೆತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಆರ್ಯವರ್ಧನ್ ಗುರೂಜಿಯವರಲ್ಲಿ ಅಪ್ಪನ ಪ್ರೀತಿ ಕಂಡೆ: ರೂಪೇಶ್ ಭಾವುಕ

    ಪೊಲೀಸರ ಮಾಹಿತಿ ಪ್ರಕಾರ, ಗಾಯಕಿಯನ್ನು ಉಸಿರುಗಟ್ಟಿಸಿ ಕೊಂದಿರುವುದು ಮೇಲ್ನೋಟಕ್ಕೆ ಗೊತ್ತಾಗಿದ್ದು, ಆಕೆಯ ಮೈಮೇಲೆ ಯಾವುದೇ ಗಾಯಗಳಿಲ್ಲ ಎಂದಿದ್ದಾರೆ. ಅಲ್ಲದೇ, ಸಾಯುವ ಸಂದರ್ಭದಲ್ಲಿ ಯಾವುದೇ ಪ್ರತಿರೋಧ ತೋರಿಸಿದ ಕುರುಹುಗಳೂ ಕಾಣುತ್ತಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

    ಪತಿಯ ಹೇಳಿಕೆ ಪ್ರಕಾರ ವಲ್ಸಾಡ್ ನ ತಮ್ಮ ಮನೆಯಿಂದ ಹೊರಡುವಾಗ ಸ್ಥಳಿಯ ಅಯ್ಯಪ್ಪ ದೇವಸ್ಥಾನದ ಬಳಿ ಗೆಳೆಯರನ್ನು ಕಾಣಲು ಹೋಗುತ್ತಿರುವುದಾಗಿ ತಿಳಿಸಿದ್ದರಂತೆ ವೈಶಾಲಿ. ಆನಂತರ ಮನೆಗೆ ಬಾರದ ಹಿನ್ನೆಲೆಯಲ್ಲಿ ಪತಿ ದೂರು ದಾಖಲಿಸಿದ್ದರು. ಗಾಯಕಿಯಷ್ಟೇ ಅಲ್ಲ, ಸಂಗೀತ ಶಾಲೆಯನ್ನೂ ವೈಶಾಲಿ ನಡೆಸುತ್ತಿದ್ದು, ಅಪಾರ ಅಭಿಮಾನಿಗಳನ್ನು ಅವರು ಹೊಂದಿದ್ದರು.

    Live Tv
    [brid partner=56869869 player=32851 video=960834 autoplay=true]

  • ಅಳಿಯನ ಜೊತೆ ಅತ್ತೆಯ ಕಳ್ಳ ಸಂಬಂಧ- ಅಡ್ಡಿಯಾದ ಗಂಡನನ್ನೇ ಕೊಂದ್ಳು

    ಅಳಿಯನ ಜೊತೆ ಅತ್ತೆಯ ಕಳ್ಳ ಸಂಬಂಧ- ಅಡ್ಡಿಯಾದ ಗಂಡನನ್ನೇ ಕೊಂದ್ಳು

    -ಕೊಂದು ಪಕ್ಕದ್ಮನೆಯಲ್ಲಿ ಶವ ನೇತಾಕಿದ್ರು
    -ಅತ್ತೆ ಮೇಲಿನ ವ್ಯಾಮೋಹಕ್ಕೆ ತನ್ನೂರು ತೊರೆದಿದ್ದ ಅಳಿಯ
    -ಸುಳ್ಳು ಕಥೆ ಹೇಳಿದ ಅಪ್ರಾಪ್ತ ಮಗ

    ಪಾಟ್ನಾ/ವೈಶಾಲಿ: ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಪತಿಯನ್ನು ಅಳಿಯನ ಜೊತೆ ಸೇರಿ ಮಹಿಳೆ ಕೊಲೆ ಮಾಡಿರುವ ಘಟನೆ ವೈಶಾಲಿ ಜಿಲ್ಲೆಯ ದೇಸ್ರಿ ಠಾಣಾ ವ್ಯಾಪ್ತಿಯ ಮುರೌವತಪುರನಲ್ಲಿ ನಡೆದಿದೆ.

    50 ವರ್ಷದ ತಿಲಕ್ ರಾಯ್ ಕೊಲೆಯಾದ ವ್ಯಕ್ತಿ. ತಿಲಕ್ ಪತ್ನಿ ಸವಿತಾ ಅಳಿಯ ಮೋಹನ್ ರಾಯ್ ಜೊತೆ ಅಕ್ರಮ ಸಂಬಂಧ ಹೊಂದಿದ್ದಳು. ಅಳಿಯ ಮೋಹನ್ ನಿಂದ ದೂರವಿರುವಂತೆ ತಿಲಕ್ ಪತ್ನಿಗೆ ಎಚ್ಚರಿಕೆ ಸಹ ನೀಡಿದ್ದನು. ರಾತ್ರಿ ನಶೆಯಲ್ಲಿ ಪತಿಯನ್ನು ಸವಿತಾ ಮತ್ತು ಮೋಹನ್ ಥಳಿಸಿ ಕೊಂದಿದ್ದಾರೆ. ತಮ್ಮ ಮೇಲೆ ಅನುಮಾನ ಬರದಿರಲಿ ಅಂತ ಪಕ್ಕದಲ್ಲಿಯ ನಿರ್ಮಾಣ ಹಂತಹ ಮನೆಯಲ್ಲಿ ಶವವನ್ನ ನೇತು ಹಾಕಿ ಮನೆ ಸೇರಿದ್ದಾರೆ. ಬೆಳಗ್ಗೆ ಗ್ರಾಮಸ್ಥರು ಶವ ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.

    ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಈ ವೇಳೆ ಸವಿತಾಳ ಅಪ್ರಾಪ್ತ ಮಗ, ತಂದೆ ಪ್ರತಿದಿನ ಕುಡಿದು ಬಂದು ನಮ್ಮ ಮೇಲೆ ಹಲ್ಲೆ ನಡೆಸುತ್ತಿದ್ದರು. ನಿನ್ನೆ ರಾತ್ರಿಯೂ ಪಾನಮತ್ತನಾಗಿ ಬಂದ ತಂದೆ ನಮ್ಮ ಮೇಲೆ ಹಲ್ಲೆ ನಡೆಸಿ ಮನೆಯಿಂದ ಹೊರ ಹೋಗಿದ್ದರು. ಈ ವೇಳೆ ನೇಣು ಹಾಕಿಕೊಂಡಿರಬಹುದು ಎಂದು ಹೇಳಿದ್ದನು. ಇದನ್ನೂ ಓದಿ: ಸೊಸೆ ಜೊತೆ ಮಾವನ ಸರಸ- ವಿಷ್ಯ ತಿಳಿದು ಇಬ್ಬರನ್ನೂ ಬರ್ಬರವಾಗಿ ಕೊಂದ ಮಗ

    ಶವದ ಮೇಲೆ ಗಾಯದ ಗುರುತುಗಳು ಕಂಡು ಅನುಮಾನಗೊಂಡ ತಿಲಕ್ ಸೋದರ ಪೊಲೀಸ್ ಠಾಣೆಗೆ ತೆರಳಿ ಅತ್ತಿಗೆ, ಅಳಿಯ ಮೋಹನ್ ಮತ್ತು ಮಗನ ವಿರುದ್ಧ ದೂರು ದಾಖಲಿಸಿದ್ದರು. ಅನುಮಾನದ ಮೇಲೆ ಮೂವರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಮಾವನ ಜೊತೆ 10 ತಿಂಗ್ಳ ಮಗುವಿನ ಸಮೇತ ಸೊಸೆ ಎಸ್ಕೇಪ್

    ಅಳಿಯ ಮೋಹನ್ ಜೊತೆ ಅಕ್ರಮ ಸಂಬಂಧ ಹೊಂದಿರೋದನ್ನ ಅತ್ತೆ ಸವಿತಾ ಒಪ್ಪಿಕೊಂಡಿದ್ದಾಳೆ. ಅತ್ತೆಯ ಮೇಲಿನ ವ್ಯಾಮೋಹದಿಂದ ಸಮಸ್ತಿಪುರದ ನಿವಾಸಿಯಾಗಿದ್ದ ಮೋಹನ್ ರಾಯ್ ಮುರೌವತಪುರನಲ್ಲಿಯೇ ಉಳಿದುಕೊಂಡಿದ್ದನು. ಇಬ್ಬರ ಅಕ್ರಮ ಸಂಬಂಧ ವಿಷಯ ತಿಳಿದ ತಿಲಕ್ ಕುಡಿದು ಬಂದು ಗಲಾಟೆ ಮಾಡುತ್ತಿದ್ದನು.  ಇದನ್ನೂ ಓದಿ: ಮಗನೊಂದಿಗೆ ಸೆಕ್ಸ್ ಮಾಡದಂತೆ ಸೊಸೆಯನ್ನ ತಡೆದ ಮಾವ