Tag: Vairamudi Brahmotsava

  • ಮೇಲುಕೋಟೆಯ ವೈರಮುಡಿ ಬ್ರಹ್ಮೋತ್ಸವ ಸಂಪನ್ನ

    ಮೇಲುಕೋಟೆಯ ವೈರಮುಡಿ ಬ್ರಹ್ಮೋತ್ಸವ ಸಂಪನ್ನ

    – ವಜ್ರದ ಕಿರೀಟ ತೊಟ್ಟು ಕಂಗೊಳಿಸಿದ ಚೆಲುವನಾರಾಯಣಸ್ವಾಮಿ

    ಮಂಡ್ಯ: ಐತಿಹಾಸಿಕ ಧಾರ್ಮಿಕ ಕ್ಷೇತ್ರ ಮೇಲುಕೋಟೆಯಲ್ಲಿ (Melukote) ವೈರಮುಡಿ ಬ್ರಹ್ಮೋತ್ಸವ (Vairamudi Brahmotsava) ವಿಜೃಂಭಣೆಯಿಂದ ನೆರವೇರಿತು. ರಾಜ್ಯವಲ್ಲದೆ ನೆರೆ ರಾಜ್ಯಗಳಿಂದಲೂ ಬಂದಿದ್ದ ಲಕ್ಷಾಂತರ ಭಕ್ತರು ವಜ್ರ ಖಚಿತ ವೈರಮುಡಿ ಕಿರೀಟ ಹಾಗೂ ಆಭರಣ ತೊಟ್ಟು ಕಂಗೊಳಿಸುತ್ತಿದ್ದ ಚೆಲುವನಾರಾಯಣಸ್ವಾಮಿಯನ್ನು ಕಣ್ತುಂಬಿಕೊಂಡು ಪುನೀತರಾದರು.

    ದಕ್ಷಿಣ ಬದರಿ ಕ್ಷೇತ್ರ ಎಂದೇ ಪ್ರಸಿದ್ದಿ ಪಡೆದಿರುವ ಮಂಡ್ಯ ಜಿಲ್ಲೆಯ ಮೇಲುಕೋಟೆಯಲ್ಲಿ ವೈರಮುಡಿ ಬ್ರಹ್ಮೋತ್ಸವದ ಸಂಭ್ರಮ ಮನೆ ಮಾಡಿತ್ತು. ವಜ್ರ ಖಚಿತ ವೈರಮುಡಿ ಕಿರೀಟ ಹಾಗೂ ಆಭರಣಗಳನ್ನ ಧರಿಸಿ ಶ್ರೀದೇವಿ, ಭೂದೇವಿ ಜೊತೆ ಗರುಢಾರೂಡನಾದ ಚೆಲುವನಾರಾಯಣಸ್ವಾಮಿ ಮೇಲುಕೋಟೆಯ ರಾಜಬೀದಿಯಲ್ಲಿ ಸಾಗುತ್ತಿದ್ದರೆ ಭಕ್ತರು ಭಗವಂತನನ್ನು ಕಣ್ತುಂಬಿಕೊಂಡರು. ಇದನ್ನೂ ಓದಿ:  ಆರ್‌ಸಿಬಿ ಗೆದ್ದ ಮೂರು ಗೆಲುವು ಸಾಮಾನ್ಯ ಗೆಲುವಲ್ಲ!

    ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ, ಶಾಸಕ ದರ್ಶನ್ ಪುಟ್ಟಣ್ಣಯ್ಯ ಪೂಜೆ ಸಲ್ಲಿಸುವ ಮೂಲಕ ವೈರಮುಡಿ ಕಿರೀಟವನ್ನು ಬರಮಾಡಿಕೊಂಡರು. ಬಳಿಕ ಚೆಲುವನಾರಾಯಣಸ್ವಾಮಿ ಸನ್ನಿಧಿಯ ನವರಂಗದಲ್ಲಿ ಜಿಲ್ಲಾಧಿಕಾರಿ ಸಮ್ಮುಖದಲ್ಲಿ ವಜ್ರಾಭರಣಗಳನ್ನು ಪರಿಶೀಲನೆ ಮಾಡಲಾಯಿತು. ನಂತರ ಚೆಲುವನಾರಾಯಣಸ್ವಾಮಿ ಉತ್ಸವ ಮೂರ್ತಿಗೆ ವಜ್ರಖಚಿತ ವೈರಮುಡಿ ಕಿರೀಟವನ್ನು ಧಾರಣೆ ಮಾಡಲಾಯಿತು. ಇದನ್ನೂ ಓದಿ: ಬೇಸಿಗೆಯಲ್ಲಿ ದೇಹವನ್ನು ತಂಪಾಗಿರಿಸಬೇಕೆ? – ಒಂದು ಕ್ಲಿಕ್‌ನಲ್ಲಿದೆ ಸಿಂಪಲ್‌ ಟಿಪ್ಸ್‌

    ಸೋಮವಾರ ರಾತ್ರಿ 8 ಗಂಟೆ 10 ನಿಮಿಷಕ್ಕೆ ಮಹಾ ಮಂಗಳಾರತಿ ಮಾಡುವ ಮೂಲಕ ಉತ್ಸವಕ್ಕೆ ಚಾಲನೆ ನೀಡಲಾಯಿತು. ಉತ್ಸವ ದೇಗುಲದಿಂದ ಹೊರಬರುತ್ತಿದ್ದಂತೆ ಭಕ್ತರ ಹರ್ಘೋದ್ಘಾರ ಮುಗಿಲುಮುಟ್ಟುವಂತಿತ್ತು. ಸರ್ವಾಲಂಕಾರದೊಂದಿಗೆ ಕಂಗೊಳಿಸುತ್ತಿದ್ದ ಚೆಲುವನಾರಾಯಣಸ್ವಾಮಿ ಉತ್ಸವ ಮೇಲುಕೋಟೆಯ ರಾಜಬೀದಿಗಳಲ್ಲಿ ತೆರಳಿತು. ಈ ವೇಳೆ ರಸ್ತೆಯ ಎರಡೂ ಬದಿಗಳಲ್ಲಿ ನಿಂತ ಭಕ್ತರು ಸ್ವಾಮಿಯ ದರ್ಶನ ಪಡೆದು ಪುನೀತರಾದರು. ಇದನ್ನೂ ಓದಿ: ಮುಡಾ ಹಗರಣ – ಇಂದು ಸಿಎಂ ಸಿದ್ದರಾಮಯ್ಯಗೆ ನಿರ್ಣಾಯಕ ದಿನ

  • ಇಂದು ವಿಶ್ವವಿಖ್ಯಾತ ಮೇಲುಕೋಟೆ ವೈರಮುಡಿ ಉತ್ಸವ

    ಇಂದು ವಿಶ್ವವಿಖ್ಯಾತ ಮೇಲುಕೋಟೆ ವೈರಮುಡಿ ಉತ್ಸವ

    ಮಂಡ್ಯ: ಇಂದು ಮಂಡ್ಯ (Mandya) ಜಿಲ್ಲೆಯ ಪಾಂಡವಪುರ (Pandavapura) ತಾಲೂಕಿನ ಮೇಲುಕೋಟೆಯಲ್ಲಿ (Melukote) ವಿಶ್ವವಿಖ್ಯಾತ ವೈರಮುಡಿ ಬ್ರಹ್ಮೋತ್ಸವ (Vairamudi Brahmotsava) ಜರುಗಲಿದೆ. ಈ ವೈರಮುಡಿ ಉತ್ಸವದಲ್ಲಿ ಶ್ರೀದೇವಿ, ಭೂದೇವಿಯರೊಂದಿಗೆ ಚೆಲುವನಾರಾಯಣಸ್ವಾಮಿ ಭಕ್ತರಿಗೆ ದರ್ಶನ ನೀಡಿಲಿದ್ದಾರೆ.

    ಮಂಡ್ಯ ಜಿಲ್ಲಾಡಳಿತ ವತಿಯಿಂದ ನಡೆಯಲಿರುವ ವೈರಮುಡಿ ಉತ್ಸವಕ್ಕೆ ಬೆಳಗ್ಗೆ 8:30ಕ್ಕೆ ಚಾಲನೆ ಸಿಗಲಿದೆ. ಶ್ರೀದೇವಿ, ಭೂದೇವಿಯರ ಜೊತೆಗೆ ರತ್ನ ಖಚಿತ ವೈರಮುಡಿ ಕಿರೀಟ ಧರಿಸಿ ಭಕ್ತರಿಗೆ ದರ್ಶನ ನೀಡಲಿರುವ ಗರುಢಾರೂಢನಾದ ಚೆಲುವನಾರಾಯಣಸ್ವಾಮಿಯನ್ನು ನೋಡಿದರೆ ಸಾಕ್ಷಾತ್ ಭಗವಂತನೇ ಧರೆಗಿಳಿದು ವೈರಮುಡಿ ಕಿರೀಟ ಧರಿಸಿ ಭಕ್ತರಿಗೆ ದರ್ಶನ ನೀಡಿದಂತೆ ಭಾಸವಾಗುತ್ತದೆ. ಇದನ್ನೂ ಓದಿ: ಆಸ್ಪತ್ರೆಯಲ್ಲೇ ಹಿರಿಯ ವೈದ್ಯ ನೇಣಿಗೆ ಶರಣು

    ಇಂದು ಚೆಲುವನಾರಾಯಣಸ್ವಾಮಿಯನ್ನು ಕಣ್ತುಂಬಿಕೊಳ್ಳಲು ಹೊರರಾಜ್ಯದಿಂದಲೂ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಲಿದ್ದಾರೆ. ಇಂದಿನ ವೈರಮುಡಿ ಉತ್ಸವಕ್ಕೆ ಲಕ್ಷಾಂತರ ಜನರು ಸಾಕ್ಷಿಯಾಗಲಿದ್ದಾರೆ. ಈಗಾಗಲೇ ಜಿಲ್ಲಾ ಖಜಾನೆಯಿಂದ ಆಭರಣಗಳು ದೇವಸ್ಥಾನದ ಆಡಳಿತ ಮಂಡಳಿಗೆ ಹಸ್ತಾಂತರ ಮಾಡಲಾಗಿದೆ. ಇದನ್ನೂ ಓದಿ: ಇಂದಿನಿಂದ ಬಿಜೆಪಿ ‘ಜನಾಕ್ರೋಶ ಕಹಳೆ’ – ಹಳೇ ಮೈಸೂರು ಭಾಗದಿಂದಲೇ ಯಾತ್ರೆ

    ಖಜಾನೆಯಿಂದ ಆಭರಣಗಳನ್ನು ಡಿಸಿ ಡಾ.ಕುಮಾರ್, ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಅವರು ತಂದು ಹಸ್ತಾಂತರ ಮಾಡಿದ್ದಾರೆ. ಜಿಲ್ಲಾಡಳಿತದಿಂದ ಹಸ್ತಾಂತರವಾಗಿರುವ ವೈರಮುಡಿ ಆಭರಣಗಳನ್ನು ಬಿಗಿ ಭದ್ರತೆಯೊಂದಿಗೆ ತೆಗೆದುಕೊಂಡು ಹೋಗಲಾಗಿದೆ. ಇದನ್ನೂ ಓದಿ: ಯುವತಿಯೆಂದು ಯುವಕನಿಗೆ ಅಶ್ಲೀಲ ಮೆಸೇಜ್ – ಕಾಮುಕನಿಗೆ ಬಿತ್ತು ಧರ್ಮದೇಟು

    ಮಂಡ್ಯ ನಗರದ ಪ್ರಮುಖ ಬೀದಿಯಲ್ಲಿ ಹಾದು ಹೋಗುವ ವೈರಮುಡಿ ಆಭರಣಗಳನ್ನು ಹೊತ್ತ ವಾಹನ ಬಳಿಕ ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ತೆರಳಲಿದೆ. ನಂತರ ಬಾಬುರಾಯನಕೊಪ್ಪಲಿಗೆ ತೆರಳಿ ಅಲ್ಲಿಂದ ಪಾಂಡವಪುರಕ್ಕೆ ತೆರಳಿಲಿದೆ. ಬಳಿಕ ಜಕ್ಕನಹಳ್ಳಿಗೆ ತೆರಳಿ ಅಲ್ಲಿಂದ ಮೇಲುಕೋಟೆಗೆ ತೆರಳಲಿದೆ. ಈ ವೇಳೆ ದಾರಿ ಮಧ್ಯದಲ್ಲಿ ಸಿಗುವ ಗ್ರಾಮಗಳಲ್ಲಿ ವೈರಮುಡಿಗೆ ಪೂಜೆಸಲ್ಲಿಸಲಾಗುತ್ತದೆ. ಇದನ್ನೂ ಓದಿ: ಅಮೆರಿಕಕ್ಕೆ ಭಾರತದಿಂದ 5 ವಿಮಾನ ಭರ್ತಿ ಐಫೋನ್‌ ಕಳುಹಿಸಿದ ಆಪಲ್‌