Tag: vaira

  • ನಿಮ್ಮೆಲ್ಲರನ್ನು ಬೆಚ್ಚಿ ಬೀಳಿಸಲು ಬರಲಿದೆ ಹಾರರ್ `ವೈರ’

    ನಿಮ್ಮೆಲ್ಲರನ್ನು ಬೆಚ್ಚಿ ಬೀಳಿಸಲು ಬರಲಿದೆ ಹಾರರ್ `ವೈರ’

    ಬೆಂಗಳೂರು: ತನ್ನ ಟ್ರೇಲರ್ ನಿಂದ ಕುತೂಹಲ ಹುಟ್ಟುಹಾಕಿರುವ ಹಾರರ್ ಮತ್ತು ಸಸ್ಪೆನ್ಸ್ ಕಥಾನಕವುಳ್ಳ ವೈರ ಶುಕ್ರವಾರ ಬಿಡುಗಡೆಯಾಗಲಿದೆ.

    ಸಿನಿಮಾ ಒಂದು ಕೊಲೆಯ ರಹಸ್ಯವನ್ನು ಬೇಧಿಸುವ ಕಥೆಯನ್ನು ಹೊಂದಿದೆ. ಕೊಲೆಯಾದ ಯುವತಿಯ ರಹಸ್ಯವನ್ನು ಬೆನ್ನತ್ತುವ ನಾಯಕನಿಗೆ ಆಗುವ ವಿಭಿನ್ನ ಅನುಭವಗಳು ಚಿತ್ರದಲ್ಲಿ ತೋರಿಸಲಾಗಿದೆ.

    ಈ ಭಯಾನಕ ಅನುಭವಗಳ ಜೊತೆಯಲ್ಲಿ ತಬಲಾ ನಾಣಿಯವರ ಕಾಮಿಡಿ ನಿಮ್ಮನ್ನು ನಗಿಸಲಿದೆ. ನಾಯಕ ನಟರಾಗಿರುವ ನವರಸನ್ ಅವರೇ ಚಿತ್ರಕಥೆ, ಸಂಭಾಷಣೆ, ನಿರ್ದೇಶನ ಮಾಡಿದ್ದಾರೆ. ನವರಸನ್ ಗೆ ನಾಯಕಿಯಾಗಿ ಪ್ರಿಯಾಂಕಾ ಬಲ್ಲಾಳ್ ಜೊತೆಯಾಗಿದ್ದಾರೆ.

    ಸಿನಿಮಾದ ಹೆಚ್ಚಿನ ಚಿತ್ರೀಕರಣ ಮಡಿಕೇರಿಯಲ್ಲಿ ನಡೆದಿದೆ. ನಿತಿನ್ ಮಡಿಕೇರಿ ಚಿತ್ರಣವನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ. ರವಿ ಬಸ್ಸೂರ್ ಸಂಗೀತದಲ್ಲಿ ಹಾಡುಗಳು ಮೂಡಿ ಬಂದಿವೆ. ಶರಣ್, ಅಜಯ್, ತಬಲಾನಾಣಿ, ಭರತ್ ಸಿಂಗ್, ಹ್ಯಾರಿ, ಕೃಷ್ಣಶ್ರೀ, ಸುಜಿತ್ ಮುಂತಾದ ತಾರಾಗಣವನ್ನು ಚಿತ್ರತಂಡ ಹೊಂದಿದೆ.

  • ಸೆಲೆಬ್ರಿಟಿಗಳ ಜೊತೆ ವೈರ ಸಿನಿಮಾ ನೋಡಿ ಸ್ಕೂಟಿ ಗೆಲ್ಲಿ

    ಸೆಲೆಬ್ರಿಟಿಗಳ ಜೊತೆ ವೈರ ಸಿನಿಮಾ ನೋಡಿ ಸ್ಕೂಟಿ ಗೆಲ್ಲಿ

    ಬೆಂಗಳೂರು: ಇದೇ ಅಕ್ಟೋಬರ್ 6 ರ ಶುಕ್ರವಾರ ತೆರೆಗೆ ಬರಲಿರುವ ಬಹುನಿರೀಕ್ಷಿತ ಚಿತ್ರ ‘ವೈರ’ ಈಗಾಗಲೇ ಚಿತ್ರರಸಿಕರಲ್ಲಿ ಬಹಳಷ್ಟು ಕುತೂಹಲ ಹೆಚ್ಚಿಸಿದೆ. ಅದಕ್ಕೂ ಮುನ್ನ ಚಿತ್ರತಂಡದವರು ಪೇಯ್ಡ್ ಪ್ರೀಮಿಯರ್ ಶೋ ವನ್ನು ಬೆಂಗಳೂರಿನ ಒರಿಯನ್ ಮಾಲ್ ನಲ್ಲಿ ಪ್ರದರ್ಶನ ಮಾಡಲಿದ್ದು, ಅಭಿಮಾನಿಗಳಿಗೆ ಹಲವು ಸೆಲೆಬ್ರಿಟಿಗಳ ಜೊತೆಗೆ ಸಿನಿಮಾ ನೋಡುವ ಅವಕಾಶವನ್ನು ಕಲ್ಪಿಸಿರುವುದಲ್ಲದೇ, ಬಹುಮಾನ ಗೆಲ್ಲುವ ಸುವರ್ಣಾವಕಾಶವನ್ನು ಕಲ್ಪಿಸಿದೆ.

    ಹೌದು, ಅಕ್ಟೋಬರ್ 4 ರ ಸಂಜೆ 6 ಗಂಟೆಗೆ ರಾಜಾಜಿನಗರದ ಒರಿಯನ್ ಮಾಲ್ ನಲ್ಲಿ ಪ್ರಿವ್ಯೂ ಶೋ ನೋಡುವ ಭಾಗ್ಯವನ್ನು ವೈರ ಚಿತ್ರತಂಡ ಒದಗಿಸಲಿದೆ. ಚಿತ್ರ ಬಿಡುಗಡೆಯಾದ ಒಂದುವಾರದ ನಂತರ ನಡೆಯುವ ಲಕ್ಕಿಡಿಪ್ ನಲ್ಲಿ ಅದೃಷ್ಟಶಾಲಿಗಳ ಆಯ್ಕೆ ಲಕ್ಕಿಡಿಪ್ ಮೂಲಕ ನೆಡೆಯಲಿದೆ. ವಿಜೇತರಿಗೆ ಪ್ರಥಮ ಬಹುಮಾನವಾಗಿ ಸ್ಕೂಟಿ, ದ್ವಿತೀಯ ಹಾಗೂ ತೃತೀಯ ಬಹುಮಾನವಾಗಿ ಮೊಬೈಲ್ ದೊರೆಯಲಿದೆ ಎಂದು ಚಿತ್ರತಂಡ ಪ್ರಕಟಣೆಯಲ್ಲಿ ತಿಳಿಸಿದೆ.

    ಆ ಅದೃಷ್ಟಶಾಲಿಗಳು ನೀವೂ ಆಗಬೇಕಿದ್ದಲ್ಲಿ ಮಾಡಬೇಕಾದ್ದಿಷ್ಟೇ!!! ಪೇಯ್ಡ್ ಪ್ರೀಮಿಯರ್ ಶೋ ನೋಡಿದ ಟಿಕೇಟ್ ನ ಅರ್ಧಭಾಗವನ್ನು ಜೋಪಾನವಾಗಿ ಇಟ್ಟುಕೊಳ್ಳಿ. ಇನ್ನುಳಿದ ಅರ್ಧಭಾಗ ಲಕ್ಕಿಡಿಪ್ ನ ಬಾಕ್ಸ್ ನಲ್ಲಿರುತ್ತದೆ. ಆರಿಸಿದ ಆಯ್ಕೆ ನಿಮ್ಮ ನಂಬರ್ ಆಗಿದ್ದರೆ ನೀವೇ ವಿಜೇತರು. ಹಾಗಿದ್ದರೆ ತಡವೇಕೆ?? ಈಗಲೇ ನಿಮ್ಮ ಟಿಕೇಟನ್ನು ಪ್ರೀಮಿಯರ್ ಶೋ ಗಾಗಿ ಕಾಯ್ದಿರಿಸಿ…ಬಹುಮಾನ ಗೆಲ್ಲಿ…