Tag: Vaikunta Ekadasi

  • ಕೊರೊನಾ ಆತಂಕದ ನಡುವೆಯೂ ವೈಕುಂಠ ಏಕಾದಶಿ ಸಂಭ್ರಮ – ಮಾಸ್ಕ್‌ ಮರೆತ ಜನ

    ಕೊರೊನಾ ಆತಂಕದ ನಡುವೆಯೂ ವೈಕುಂಠ ಏಕಾದಶಿ ಸಂಭ್ರಮ – ಮಾಸ್ಕ್‌ ಮರೆತ ಜನ

    ಬೆಂಗಳೂರು: ಸ್ವರ್ಗದ ಬಾಗಿಲು ತೆರೆಯುವ ಪುಣ್ಯದಿನವಾದ ಇಂದು ನಾಡಿನಾದ್ಯಂತ ವೈಕುಂಠ ಏಕಾದಶಿಯ (Vaikunta Ekadasi) ಸಂಭ್ರಮ ಮನೆ ಮಾಡಿದೆ. ಈ ದಿನ ಭಕ್ತರು ವೆಂಕಟೇಶ್ವರನ ದೇಗುಲಕ್ಕೆ ಭೇಟಿ ಕೊಟ್ಟು ಸ್ವರ್ಗದ ದ್ವಾರ ಹಾದು ಹೋಗಿ, ಪುನೀತರಾಗುವ ಕ್ಷಣ ಎಂದೇ ಈ ದಿನವನ್ನ ಭಾವಿಸಲಾಗಿದೆ.

    ಕೊರೊನಾ ಆತಂಕದ ನಡುವೆಯೂ ಭಕ್ತರು ದೇಗುಲಗಳಿಗೆ (Temples) ಭೇಟಿ ನೀಡಿ ಪೂಜೆ ಸಲ್ಲಿಸುತ್ತಿದ್ದಾರೆ. ಕೊರೊನಾ ಇರೋದ್ರಿಂದ ಏಕಾದಶಿಯ ಸಂಭ್ರಮದ ಜೊತೆಗೆ ಮುನ್ನೆಚ್ಚರಿಕಾ ಕ್ರಮಗಳನ್ನ ಪಾಲಿಸಲಾಗುತ್ತಿದೆ. ಆದ್ರೆ ಕೆಲ ಭಕ್ತರು ಮಾಸ್ಕ್‌ ಧರಿಸದೇ ದೇವಸ್ಥಾನಕ್ಕೆ ಆಗಮಿಸಿದ್ದ ದೃಶ್ಯಗಳು ಕಂಡುಬಂದಿವೆ.

    ಈಗಾಗಲೇ ಬೆಂಗಳೂರಿನ ರಾಜಾಜಿನಗರದ (Bengaluru Rajajinagar) ಇಸ್ಕಾನ್ ದೇಗುಲದಲ್ಲಿ 60 ವರ್ಷ ಮೇಲ್ಪಟ್ಟವರು ಕಡ್ಡಾಯವಾಗಿ ಮಾಸ್ಕ್ ಧರಿಸಿ ದೇವರ ದರ್ಶನಕ್ಕೆ ಬರುವಂತೆ ಮನವಿ ಮಾಡಲಾಗಿದೆ. ಅಲ್ಲದೇ ಮಾಸ್ಕ್ ಧರಿಸುವ ಬಗ್ಗೆ ನಿಗಾ ಇಡಲು, ಜನಜಂಗುಳಿ ನಿಯಂತ್ರಣಕ್ಕೆ ಭದ್ರತಾ ಸಿಬ್ಬಂದಿಯನ್ನ ಹೆಚ್ಚುವರಿಯಾಗಿ ನಿಯೋಜಿಸಲಾಗಿದೆ. ಇದನ್ನೂ ಓದಿ: ಆಗಸ್ಟ್‌ 15 ರಷ್ಟೇ ಜನವರಿ 22 ಮಹತ್ವದ ದಿನ: ಶ್ರೀರಾಮ ಜನ್ಮಭೂಮಿ ಟ್ರಸ್ಟ್‌ ಕಾರ್ಯದರ್ಶಿ

    ನಗರದ ವೈಯಾಲಿಕಾವಲ್‌ನ ಟಿಟಿಡಿ ದೇಗುಲದಲ್ಲಿ ಕೋವಿಡ್‌ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಬರುವ ಭಕ್ತರಿಗೆ ದೇಗುಲ ವತಿಯಿಂದಲೇ ಮಾಸ್ಕ್ ವ್ಯವಸ್ಥೆ ಕೂಡ ಮಾಡಲಾಗಿದೆ. ದೇಗುಲದ ಮುಂಭಾಗದಲ್ಲೇ ಮಾಸ್ಕ್‌, ಸ್ಯಾನಿಟೈಸ್ ವ್ಯವಸ್ಥೆ ಮಾಡಲಾಗಿದೆ. ಇದನ್ನೂ ಓದಿ: ಅಂದ್ರಹಳ್ಳಿ ಶಾಲೆಯಲ್ಲಿ ಮಕ್ಕಳಿಂದ ಟಾಯ್ಲೆಟ್‌ ಕ್ಲೀನ್‌ – ಮುಖ್ಯಶಿಕ್ಷಕಿ ಅರೆಸ್ಟ್‌

  • ವೈಕುಂಠ ಏಕಾದಶಿ – ಭಕ್ತರಿಗಾಗಿ 1 ಲಕ್ಷಕ್ಕೂ ಹೆಚ್ಚು ಲಡ್ಡು ತಯಾರಿ

    ವೈಕುಂಠ ಏಕಾದಶಿ – ಭಕ್ತರಿಗಾಗಿ 1 ಲಕ್ಷಕ್ಕೂ ಹೆಚ್ಚು ಲಡ್ಡು ತಯಾರಿ

    ಬೆಂಗಳೂರು: ದರ್ನುಮಾಸದ ವೈಕುಂಠ ಏಕಾದಶಿ ಹಿನ್ನೆಲೆಯಲ್ಲಿ ನಗರದ ವಿಷ್ಣು ದೇವಾಲಯಗಳಲ್ಲಿ ಅದ್ಧೂರಿ ಅಲಂಕಾರ ಮಾಡಲಾಗಿದೆ. ವೈಯಾಲಿಕಾವಲ್‍ನ ತಿರುಮಲ ತಿರುಪತಿ ದೇವಾಸ್ಥಾನದಲ್ಲಿ ವೆಂಕಟೇಶ್ವರನಿಗೆ ವಿಶೇಷ ಅಲಂಕಾರ ಮಾಡಲಾಗಿದೆ.

    ಏಕಾಂತ ಸೇವೆ, ಶ್ರೀನಿವಾಸ ಕಲ್ಯಾಣೋತ್ಸವ, ವಿಷ್ಣು ನಾಮ ಪರಾಯಣ ಮಾಡಲಾಗುತ್ತಿದೆ. ದೇವರಿಗೆ ವಿಶೇಷ ಹೂವಿನ, ಆಭರಣಗಳಿಂದ ಸಿಂಗಾರ ಮಾಡಲಾಗಿದೆ. ಹೆಜ್ಜೆ ಹೆಜ್ಜೆಗೂ ಗೋವಿಂದ ನಾಮ ಪಸರಿಸಿದೆ. ದೇವಾಲಯವನ್ನು ವಿಶೇಷ ಅಲಂಕಾರಿಕ ಹೂವಿಗಳಿಂದ ಅಲಂಕಾರಗೊಳಿಸಲಾಗಿದೆ.

    ಬೆಳಗ್ಗೆಯಿಂದಲೇ 4 ಕಿಮೀ ದೂರದಿಂದ ಸಾರ್ವಜನಿಕರು ದೇವರ ದರ್ಶನಕ್ಕೆ ಸಾಲು ಗಟ್ಟಿ ನಿಂತಿದ್ದಾರೆ. ಬರುವ ಭಕ್ತಾಧಿಗಳಿಗಾಗಿಯೇ 1 ಲಕ್ಷಕ್ಕೂ ಹೆಚ್ಚು ಲಡ್ಡು ಪ್ರಸಾದವನ್ನು ತಯಾರಿಸಲಾಗಿದೆ. ತಿರುಪತಿಯ ಲಡ್ಡುಗಳು ಸಹ ದೇವಾಲಯದಲ್ಲಿ ಮಾರಾಟಕ್ಕೆ ಇಡಲಾಗಿದೆ.

    ಇಂದು ಬೆಳಗ್ಗೆ 5 ಗಂಟೆಯಿಂದ ಆರಂಭವಾಗಿರುವ ವೈಕುಂಠ ದ್ವಾರದ ಪ್ರವೇಶ ರಾತ್ರಿ 9 ಗಂಟೆವರೆಗೂ ತೆರೆದಿರಲಿದೆ. ಇಂದು ಶ್ರೀನಿವಾಸ ದರ್ಶನ ಪಡೆದು ವೈಕುಂಠ ದ್ವಾರ ಪ್ರವೇಶ ಮಾಡಿದರೆ ಸ್ವರ್ಗ ಪ್ರಾಪ್ತಿಯಾಗಿ ಪುಣ್ಯ ಬರಲಿದೆ ಡಂಬ ನಂಬಿಕೆಯೂ ಇದೆ.

  • ಇಂದು ವೈಕುಂಠ ಏಕಾದಶಿ – ನಂಬಿಕೆ ಏನು? ಯಾಕೆ ಆಚರಿಸುತ್ತಾರೆ?

    ಇಂದು ವೈಕುಂಠ ಏಕಾದಶಿ – ನಂಬಿಕೆ ಏನು? ಯಾಕೆ ಆಚರಿಸುತ್ತಾರೆ?

    ಇಂದು ವೈಕುಂಠ ಏಕಾದಶಿ. ವೈಕುಂಠದ ದ್ವಾರದ ಮೂಲಕ ಶ್ರೀಮನ್ ನಾರಾಯಣನ ದರ್ಶನ ಪಡೆದರೆ ಪಾಪ ಕರ್ಮಗಳು ದೂರವಾಗಿ ಪುಣ್ಯ ಪ್ರಾಪ್ತಿಯಾಗುತ್ತದೆ ಎನ್ನುವ ನಂಬಿಕೆ  ಹಿಂದೂ ಸಂಪ್ರದಾಯದಲ್ಲಿದೆ. ಹೀಗಾಗಿ ಇಂದು ಎಲ್ಲಾ  ವೈಷ್ಣವ ದೇವಾಲಯಗಳಲ್ಲಿ ವಿಶೇಷ ಅಲಂಕಾರ ಮಾಡಿದ್ದು, ವೈಕುಂಠ ದ್ವಾರ ನಿರ್ಮಿಸಲಾಗಿದೆ. ಬೆಳಗ್ಗೆಯಿಂದಲೇ ಬರುತ್ತಿರುವ ಭಕ್ತರು ವಿಶೇಷ ಪೂಜೆ, ಪ್ರಾರ್ಥನೆಯಲ್ಲಿ ತೊಡಗಿದ್ದಾರೆ.

    ವರ್ಷಕೊಮ್ಮೆ ಗಣೇಶನ ಚೌತಿ, ಮಹಾಶಿವರಾತ್ರಿ ಬರುತ್ತದೋ ಅದೇ ರೀತಿ ಈ ವೈಕುಂಠ ಏಕಾದಶಿ ವರ್ಷಕ್ಕೊಮ್ಮೆ ಬರುತ್ತದೆ. ಈ ಧನುರ್ ಮಾಸದಲ್ಲಿ ಬರುವ ವಿಶೇಷ ವೈಕುಂಠ ಏಕಾದಶಿಯ ದಿನ ವಿಷ್ಣುವಿನ ದರ್ಶನ ಮಾಡಿದರೆ ದೇವರ ಕೃಪೆ ಬೀಳುತ್ತದೆ ಎನ್ನುವ ನಂಬಿಕೆಯಿದೆ.

    ನಂಬಿಕೆ ಏನು?
    ಏಕಾದಶಿ ದಿನ ಬೆಳಗ್ಗೆಯೇ ಎದ್ದು ಸ್ನಾನ ಮಾಡಿ ಉಪವಾಸದಿಂದ ವಿಷ್ಣು ದಶಾವತಾರದ ದೇವಾಲಯಕ್ಕೆ ಹೋಗಿ ವೈಕುಂಠ ದ್ವಾರದ ಮೂಲಕವೇ ದೇವರ ದರ್ಶನ ಪಡೆಯಬೇಕು. ಆ ನಂತರ ಸನ್ನಿಧಿಯಲ್ಲಿ ನೀಡುವ ಪ್ರಸಾದವನ್ನು ಸ್ವೀಕರಿಸಬೇಕು. ಇದರಿಂದ ಹರಿ ನಾರಾಯಣನು ಸಂತೃಪ್ತನಾಗಿ ಭಕ್ತರಿಗೆ ಒಳಿತನ್ನ ಮಾಡುತ್ತಾನೆ.

    ಏಕಾದಶಿ ದಿನ ಉಪವಾಸವನ್ನು ಭಕ್ತರು ಮಾಡುತ್ತಾರೆ. ಅದರಲ್ಲೂ ವೈಕುಂಠ ಏಕಾದಶಿ ದಿನ ಉಪವಾಸ ವೃತ ಅನುಸರಿಸಿ ರಾಮಕೃಷ್ಣರ ದರ್ಶನ ಪಡೆಯುವುದರಿಂದ ದೇವರ ಆಶೀರ್ವಾದ ದೊರೆಯಲಿದೆ ಎನ್ನುವ ನಂಬಿಕೆಯಿದೆ.

    ದೇಹವೇ ದೇವಾಲಯ ಎನ್ನುವ ಮಾತಿದೆ. ದೇವಾಲಯಕ್ಕೆ ಹೋಗಲು ಸಾಧ್ಯವಾಗದವರು ಮನೆಯಲ್ಲೇ ಪೂಜೆ ಮಾಡಬಹುದು. ನಿರ್ಮಲ ಚಿತ್ತದಿಂದ ಆ ಹರಿಯ 108 ನಾಮವನ್ನು ಸ್ಮರಣೆ ಮಾಡಬಹುದು.

  • ರಾಜ್ಯಾದ್ಯಂತ ವೈಕುಂಠ ಏಕಾದಶಿ ಸಂಭ್ರಮ – ಇಸ್ಕಾನ್‍ ನಲ್ಲಿ ವಿಶೇಷ ಪೂಜೆ ಪುನಸ್ಕಾರ

    ರಾಜ್ಯಾದ್ಯಂತ ವೈಕುಂಠ ಏಕಾದಶಿ ಸಂಭ್ರಮ – ಇಸ್ಕಾನ್‍ ನಲ್ಲಿ ವಿಶೇಷ ಪೂಜೆ ಪುನಸ್ಕಾರ

    ಬೆಂಗಳೂರು: ಇಂದು ವೈಕುಂಠ ಏಕಾದಶಿ. ಈ ದಿನ ವೆಂಕಟೇಶ್ವರ ದರ್ಶನ ಮಾಡಿದರೆ ಮುಕ್ತಿ ಸಿಗುತ್ತೆ ಎನ್ನುವ ನಂಬಿಕೆ ಇದೆ. ಹೀಗಾಗಿ ಆಂಧ್ರ ಪ್ರದೇಶದ ತಿರುಪತಿ ಸೇರಿದಂತೆ ರಾಜ್ಯದ ವಿವಿಧ ವೆಂಕಟೇಶ್ವರನ ದೇವಾಲಯಗಳಲ್ಲಿ ವಿಶೇಷ ಪೂಜೆ ಪುನಸ್ಕಾರ ನಡೀತಿದೆ.

    ಭಕ್ತರು ಮುಂಜಾನೆಯಿಂದಲೇ ದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದಾರೆ. ಇತ್ತ ಬೆಂಗಳೂರಿನ ಇಸ್ಕಾನ್‍ನಲ್ಲಿ ಮುಂಜಾನೆಯಿಂದಲೇ ವಿಶೇಷ ಪೂಜೆ ನಡಿಯುತ್ತಿದ್ದು, ಭಕ್ತ ಸಾಗರ ಸೇರುತ್ತಿದೆ.

    ಬಳ್ಳಾರಿಯ ವೆಂಕಟೇಶ್ವರ ದೇವಾಲಯದಲ್ಲಿ ಭರ್ಜರಿ ಲಡ್ಡು ಮಾಡಲಾಗಿದೆ. ಭಕ್ತರಿಗೆ ಒಂದು ಲಕ್ಷ ಲಡ್ಡು ವಿತರಣೆ ಮಾಡಲಿದ್ದು, ಇದಕ್ಕಾಗಿ 550 ಕೆಜಿ ಕಡ್ಲೆಹಿಟ್ಟು, 900 ಕೆಜಿ ಸಕ್ಕರೆ, 30 ಕೆಜಿ ಗೊಡಂಬಿ ದಾಕ್ಷಿ, ಏಲಕ್ಕಿ ಬಳಸಿ ಲಕ್ಷ ಲಡ್ಡು ತಯಾರಿಸಲಾಗಿದೆ. ಕಳೆದ ಒಂದು ವಾರದಿಂದ 300 ಮಹಿಳೆಯರು ಲಡ್ಡು ಪ್ರಸಾದ ತಯಾರಿಕೆ ಮಾಡಿದ್ದು, ಇಂದು ದೇವರ ದರ್ಶನ ಪಡೆಯೋ ಭಕ್ತರಿಗೆ ಲಡ್ಡು ವಿತರಿಸಲಿದ್ದಾರೆ. ದಾವಣಗೆರೆ, ನೆಲಮಂಗಲದಲ್ಲೂ ಭಕ್ತರು ಬೆಳ್ಳಂಬೆಳಗ್ಗೆ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದ್ದಾರೆ.

    ವೈಕುಂಠ ಏಕಾದಶಿ ವಿಶೇಷವಾಗಿ ದಾವಣಗೆರೆಯ ಎಂಸಿಸಿ ‘ಬಿ’ ಬ್ಲಾಕ್ ನಲ್ಲಿರುವ ಲಕ್ಷ್ಮಿ ವೆಂಕಟೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು. ಭಕ್ತರು ಕೊರೆಯುವ ಚಳಿಯನ್ನು ಲೆಕ್ಕಿಸದೆ ಬೆಳಿಗ್ಗೆ ನಾಲ್ಕು ಗಂಟೆಗಳಿಂದ ಸಾಲು ಸಾಲಾಗಿ ನಿಂತಿದ್ದು, ದೇವರ ದರ್ಶನ ಪಡೆದರು.

    ವೆಂಕಟೇಶ್ವರನಿಗೆ ಬೆಳಿಗ್ಗೆಯಿಂದಲೇ ವಿಶೇಷ ಪೂಜಾ ಕೈಂಕರ್ಯಗಳು ನಡೆಯುತ್ತಿದೆ. ಭಕ್ತರಿಗಾಗಿ ದೇವಾಲಯಗಳಲ್ಲಿ ಸ್ವರ್ಗದ ಬಾಗಿಲು ತೆರೆದಿದ್ದು, ಬಾಗಿಲನ್ನು ಪ್ರವೇಶಿಸಿ ಭಕ್ತರು ಪುನೀತರಾದರು. ಅಲ್ಲದೇ ಉಪವಾಸವಿದ್ದು ದೇವರ ದರ್ಶನ ಪಡೆದು ಸ್ವರ್ಗದ ಬಾಗಿಲು ದರ್ಶನ ಪಡೆದರೆ ಸ್ವರ್ಗ ಪ್ರಾಪ್ತವಾಗುತ್ತೆ ಎನ್ನುವುದು ಭಕ್ತರ ನಂಬಿಕೆ.