Tag: Vaibhavi Joshi

  • WWW.ಮೀನಾ ಬಜಾರ್.COM ಚಿತ್ರದ ಟ್ರೇಲರ್ ಔಟ್

    WWW.ಮೀನಾ ಬಜಾರ್.COM ಚಿತ್ರದ ಟ್ರೇಲರ್ ಔಟ್

    WWW.ಮೀನಾ ಬಜಾರ್.COM ಚಿತ್ರದ ಬಹು ನಿರೀಕ್ಷಿತ ಟ್ರೇಲರ್ ಬಿಡುಗಡೆಯಾಗಿದೆ. ಈ ಹಿಂದೆ ಟೀಸರ್ ಹಾಗೂ ಲಿರಿಕಲ್ ವಿಡಿಯೋ ಮೂಲಕ ಕ್ಯೂರಿಯಾಸಿಟಿ ಕ್ರಿಯೇಟ್ ಮಾಡಿದ್ದ ಈ ಚಿತ್ರದ ಟ್ರೇಲರ್ ಸಖತ್ ಇಂಟ್ರಸ್ಟಿಂಗ್ ಅಂಡ್ ಸಸ್ಪೆನ್ಸ್ ಎಲಿಮೆಂಟ್ ಗಳಿಂದ ಕೂಡಿದೆ. ಲವ್, ಸಸ್ಪೆನ್ಸ್, ಥ್ರಿಲ್ ಕೊಡೋ WWW.ಮೀನಾ ಬಜಾರ್.COM ಚಿತ್ರದ ಟ್ರೇಲರ್ ಸಖತ್ ಕಿಕ್ ಕೊಡ್ತಿದೆ.

    WWW.ಮೀನಾ ಬಜಾರ್.COM ರಾಣಾ ಸುನೀಲ್ ಕುಮಾರ್ ಸಿಂಗ್ ನಿರ್ದೇಶನದಲ್ಲಿ ಮೂಡಿ ಬಂದಿದೆ. ಕಥೆ ಚಿತ್ರಕಥೆ ಸಂಭಾಷಣೆ, ಸಾಹಿತ್ಯ ಎಲ್ಲಾ ಜವಾಬ್ದಾರಿಯನ್ನು ನಿಭಾಯಿಸಿರೋ ಇವ್ರು ಚಿತ್ರದಲ್ಲಿ ನಟನೆ ಕೂಡ ಮಾಡಿದ್ದಾರೆ.

    ವೈಭವಿ ಜೋಷಿ, ಶ್ರೀಜಿತಾ ಘೋಷ್, ಆಲಿಶಾ ಆ್ಯಂಡ್ರೇಡ್ ಮೂವರು ನಾಯಕಿಯರು ಚಿತ್ರದಲ್ಲಿ ನಟಿಸಿದ್ದಾರೆ. ರಾಜೇಶ್ ನಟರಂಗ, ಅರವಿಂದ್ ರಾವ್, ಜೀವ, ಚಿತ್ರದ ಮುಖ್ಯ ಪಾತ್ರಗಳಲ್ಲಿ ಬಣ್ಣಹಚ್ಚಿದ್ದಾರೆ. ಕದ್ರಿ ಮಣಿಕಾಂತ್ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ. ಸಿಂಗ್ ಸಿನಿಮಾಸ್ ಬ್ಯಾನರ್ ನಡಿ ನಿರ್ಮಾಣವಾಗಿರೋ ಈ ಚಿತ್ರಕ್ಕೆ ನಾಗೇಂದ್ರ ಸಿಂಗ್ ಬಂಡವಾಳ ಹೂಡಿದ್ದಾರೆ. ಮ್ಯಾಥಿವ್ ಕ್ಯಾಮೆರಾ ಕೈಚಳಕ ಚಿತ್ರಕ್ಕಿದೆ.

  • ಮೋಹಕ ನಿಗೂಢ ಬಚ್ಚಿಟ್ಟುಕೊಂಡ ಮೀನಾಬಜಾರ್ ಟೀಸರ್!

    ಮೋಹಕ ನಿಗೂಢ ಬಚ್ಚಿಟ್ಟುಕೊಂಡ ಮೀನಾಬಜಾರ್ ಟೀಸರ್!

    ಬೆಂಗಳೂರು: ಕಿರುತೆರೆ ಜಗತ್ತಿನಲ್ಲಿ ಅದ್ದೂರಿತನದ ಸೂಪರ್ ಹಿಟ್ ಮೆಗಾ ಧಾರಾವಾಹಿಗಳನ್ನು ನಿರ್ದೇಶನ ಮಾಡಿ ಸೈ ಅನ್ನಿಸಿಕೊಂಡಿದ್ದವರು ರಾಣಾ ಸುನೀಲ್ ಕುಮಾರ್ ಸಿಂಗ್. ಅವರು ಧಾರಾವಾಹಿ ಲೋಕದಿಂದ ಹಿರಿತೆರೆಯತ್ತ ಮುಖ ಮಾಡಿ ಒಂದಷ್ಟು ವರ್ಷಗಳೇ ಕಳೆದಿವೆ. ಈ ಹಿಂದೆ ‘ಮದುವೆ ಮನೆ’ ಎಂಬ ಚಿತ್ರ ನಿರ್ದೇಶನ ಮಾಡಿದ್ದ ಅವರು ಇದೀಗ ತಮ್ಮ ಜೀವಿತದ ಮಹಾ ಕನಸಿನಂಥಾ ‘www.ಮೀನಾ ಬಜಾರ್.ಕಾಮ್’ ಎಂಬ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಅದ್ದೂರಿ ಮೇಕಿಂಗ್ ಸೂಚನೆಗಳೊಂದಿಗೇ ಮನಸೆಳೆದಿರೋ ಈ ಚಿತ್ರವೀಗ ಬಿಡುಗಡೆಗೆ ಸಜ್ಜಾಗಿದೆ. ಇದೀಗ ‘ಮೀನಾ ಬಜಾರ್’ನ ಮೋಹಕವಾದ ಟೀಸರ್ ಬಿಡುಗಡೆಗೊಂಡಿದೆ.

    ಹೇಳಿಕೇಳಿ ರಾಣಾ ಸುನೀಲ್ ಕುಮಾರ್ ಸಿಂಗ್ ಎಂದರೆ ಅದ್ದೂರಿತನ ಎಂಬಂಥಾ ಇಮೇಜ್ ಇದೆ. ಅದಕ್ಕೆ ತಕ್ಕುದಾಗಿಯೇ ಈ ಟೀಸರ್ ರೂಪುಗೊಂಡಿದೆ. ರೋಮಾಂಚಕ ಸನ್ನಿವೇಶಗಳ ಆಳದಲ್ಲಿ ರೌದ್ರ ಲೋಕದ ಕಥೆಯೊಂದಿರೋ ಸುಳಿವಿನೊಂದಿಗೆ ಈ ಟೀಸರ್ ಈಗ ವ್ಯಾಪಕ ಮೆಚ್ಚುಗೆಯನ್ನೂ ಪಡೆದುಕೊಳ್ಳುತ್ತಿದೆ. ಎಲ್ಲವನ್ನೂ ಕಾಣಿಸಿ ಏನೂ ಗೊತ್ತಾಗದಂಥಾ ಭಾವ ಹುಟ್ಟಿಸಿ ಅಚ್ಚರಿ ಮತ್ತು ಸಿನಿಮಾದೆಡೆಗಿನ ಕುತೂಹಲ ಕಾಯ್ದಿಟ್ಟುಕೊಳ್ಳುವ ತಂತ್ರಗಾರಿಕೆಯೊಂದಿಗೆ ಮೂಡಿ ಬಂದಿರೋ ಈ ಟೀಸರ್ ನಿಜಕ್ಕೂ ಪ್ರಾಮಿಸಿಂಗ್ ಆಗಿದೆ.

    ಸಿ.ಎನ್.ನಾಗೇಂದ್ರ ಸಿಂಗ್ ನಿರ್ಮಾಣ ಮಾಡಿರೋ ‘ಮೀನಾ ಬಜಾರ್’ ಏಕ ಕಾಲದಲ್ಲಿಯೇ ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ನಿರ್ಮಾಣಗೊಂಡಿದೆ. ಅತ್ಯಂತ ಸಾವಕಾಶದಿಂದ ವರ್ಷಗಟ್ಟಲೆ ಸಮಯ ತೆಗೆದುಕೊಂಡೇ ಸುನೀಲ್ ಕುಮಾರ್ ಸಿಂಗ್ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಮುಖ್ಯ ಪಾತ್ರದಲ್ಲಿಯೂ ನಟಿಸಿದ್ದಾರೆ. ಈ ಟೀಸರ್‍ನಲ್ಲಿಯೇ ಈ ಸಿನಿಮಾ ಮೂಡಿ ಬಂದಿರೋ ರೀತಿಯೂ ಸ್ಪಷ್ಟವಾಗಿ ಜಾಹೀರಾಗಿದೆ. ಪ್ರತಿ ದೃಶ್ಯಗಳೂ ಕಣ್ಣಿಗೆ ಹಬ್ಬದಂತೆ ಕಾಣಿಸುತ್ತಾ, ಮೋಹಕ್ಕೀಡು ಮಾಡುತ್ತಲೇ ಬೆಚ್ಚಿ ಬೀಳೋ ಹೊಳಹುಗಳನ್ನೂ ನೀಡುವ ಮೂಲಕ ಮೀನಾ ಬಜಾರ್ ಟೀಸರ್ ಇದೀಗ ಎಲ್ಲೆಡೆ ಹರಿದಾಡಲಾರಂಭಿಸಿದೆ.