ಮಲಯಾಳಂ ಸಿನಿಮಾ ರಂಗ ಕಂಡ ಹೆಸರಾಂತ ನಟ ಫಹಾದ್ ಫಾಸಿಲ್ (Fahad Faasil), ಇದೀಗ ಮತ್ತೊಂದು ತಮಿಳು ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ. ಈ ಹಿಂದೆ ಮಾಮಣ್ಣಾನ್ ಸಿನಿಮಾದಲ್ಲಿ ವಡಿವೇಲು ಜೊತೆ ನಟಿಸಿದ್ದ ಫಹಾದ್, ಈ ಹೊಸ ಸಿನಿಮಾದಲ್ಲೂ ಮತ್ತೊಮ್ಮೆ ವಡಿವೇಲು ಜೊತೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಈ ಜೋಡಿಯ ಚಿತ್ರಕ್ಕೆ ಮಾರೀಸನ್ ಎಂದು ಟೈಟಲ್ ಇಡಲಾಗಿದೆ.
ಮಾಮಣ್ಣಾನ್ ಸಿನಿಮಾದಲ್ಲಿ ವಡಿವೇಲು ತಮ್ಮ ಎಂದಿನಂತೆ ಹಾಸ್ಯ ಪಾತ್ರಬಿಟ್ಟು ಗಂಭೀರ ಪಾತ್ರವನ್ನು ಆಯ್ಕೆ ಮಾಡಿಕೊಂಡಿದ್ದರು. ಕೀರ್ತಿ ಸುರೇಶ್, ಉದಯನಿಧಿ ಸ್ಟಾಲಿನ್ ಮುಖ್ಯ ಪಾತ್ರ ಮಾಡಿದ್ದರು. ಈ ಸಿನಿಮಾದಲ್ಲಿನ ಫಹಾದ್ ಪಾತ್ರ ಸಾಕಷ್ಟು ಮೆಚ್ಚುಗೆಗೆ ಪಾತ್ರವಾಗಿತ್ತು. ಈ ಗೆಲುವಿನ ಬೆನ್ನಲ್ಲೇ ಫಹಾದ್ ಮಾರೀಸನ್ ಒಪ್ಪಿಕೊಂಡಿದ್ದಾರೆ.
ಕೇರಳದ ಮೂಲದ ಸುಧೀಶ್ ಶಂಕರ್ ಹೊಸ ಚಿತ್ರದ ನಿರ್ದೇಶಕರು. ಸೂಪರ್ ಗುಡ್ ಫಿಲ್ಮ್ಸ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ. ಯುವನ್ ಶಂಕರ್ ರಾಜಾ ಸಂಗೀತ ಸಂಯೋಜನೆ ಚಿತ್ರಕ್ಕೆ ಇರಲಿದೆ. ತಾರಾಗಣ ಇನ್ನೂ ಆಯ್ಕೆಯಾಗಿಲ್ಲವಾದರೂ, ಸಿನಿಮಾದ ಬಗ್ಗೆ ಈಗಾಗಲೇ ಕುತೂಹಲ ಶುರುವಾಗಿದೆ.
ಚೆನ್ನೈ: ತಮಿಳಿನ ಹಾಸ್ಯ ನಟ ವಡಿವೇಲು ಅವರು ಅವರು ಕೊರೊನಾ ಸೋಂಕಿಗೆ ತುತ್ತಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದಾರೆ.
ವಡಿವೇಲು ಅವರು ಇತ್ತೀಚೆಗಷ್ಟೇ ಲಂಡನ್ ನಿಂದ ವಾಪಸ್ಸಾಗಿದ್ದರೆ. ಸೋಂಕು ಅಲ್ಲಿಂದಲೇ ವಡಿವೇಲು ಅವರಿಗೆ ಕಾಣಿಸಿಕೊಂಡಿದೆ ಎಂದು ತಿಳಿದುಬಂದಿದೆ.
ತಮಿಳಿನ ನಾಯ್ ಶೇಖರ್ ರಿಟರ್ನ್ಸ್ ಚಿತ್ರದ ಚಿತ್ರೀಕರಣಕ್ಕೆಂದು ವಡಿವೇಲು ಲಂಡನ್‌ಗೆ ತೆರಳಿದ್ದರು. ವಿದೇಶದಿಂದ ವಾಪಸ್ ಆದಾಗಲೇ ಅವರಲ್ಲಿ ಕೊರೊನಾ ಲಕ್ಷಣಗಳು ಕಾಣಿಸಿಕೊಂಡಿತ್ತು ಎಂದು ವಡಿವೇಲು ಮನೆಯವರು ತಿಳಿಸಿದ್ದಾರೆ. ಇದನ್ನೂ ಓದಿ:ರಾಯನ್ ರಾಜ್ ಸರ್ಜಾ ಕ್ರಿಸ್‍ಮಸ್ ಸಂಭ್ರಮ ಹೇಗಿತ್ತು ಗೊತ್ತಾ?
ವಡಿವೇಲು ಅವರ ಆರೋಗ್ಯ ತೀರಾ ಹದಗೆಟ್ಟಿದ್ದು, ವಡಿವೇಲು ಅವರಿಗೆ ಓಮಿಕ್ರಾನ್ ಸೋಂಕು ಕೂಡ ತಗುಲಿರುವ ಶಂಕೆ ವ್ಯಕ್ತವಾಗಿದೆ. ವಡಿವೇಲು 200ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಅದ್ಭುತ ನಟನೆಯಿಂದ ಸಾಕಷ್ಟು ಪ್ರಶಸ್ತಿಗಳು ಇವರ ಪಾಲಾಗಿವೆ. ಇದನ್ನೂ ಓದಿ:1.83 ಕೋಟಿ ಮೌಲ್ಯದ 3.6 ಕೆ.ಜಿ ಚಿನ್ನ ತಿರುಪತಿ ತಿಮ್ಮಪ್ಪನಿಗೆ ಅರ್ಪಣೆ
ಚೆನ್ನೈ: ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಪದೇ ಪದೇ ಟ್ರೋಲ್ ಆಗುತ್ತಾನೆ ಇರುತ್ತಾರೆ. ಇದೀಗ ರಶ್ಮಿಕಾ ಅವರು ಹೊಸ ಫೋಟೋಶೂಟ್ ಮಾಡಿಸಿದ್ದು, ಅವರ ಫೋಟೋವನ್ನು ನೆಟ್ಟಿಗರು ತಮಿಳಿನ ಹಾಸ್ಯ ನಟ ವಡಿವೇಲು ಅವರಿಗೆ ಹೋಲಿಕೆ ಮಾಡಿ ಟ್ರೋಲ್ ಮಾಡುತ್ತಿದ್ದಾರೆ.
ಇತ್ತೀಚೆಗೆ ರಶ್ಮಿಕಾ ತಿಳಿಗುಲಾಬಿ ಬಣ್ಣದ ಫ್ಲೋರಲ್ ಡಿಸೈನ್ ಡ್ರೆಸ್ ಧರಿಸಿ ಅದಕ್ಕೆ ಫಿಶ್‍ಟೇಲ್ ಹೇರ್ ಸ್ಟೈಲ್ ಮಾಡಿಸಿ ವಿವಿಧ ಎಕ್ಸ್‌ಪ್ರೆಶನ್ ಕೊಡುವ ಮೂಲಕ ವಿಭಿನ್ನವಾಗಿ ಫೋಟೋಶೂಟ್ ಮಾಡಿಸಿದ್ದಾರೆ. ಅಲ್ಲದೆ ಈ ಫೋಟೋವನ್ನು ತಮ್ಮ ಇನ್‍ಸ್ಟಾದಲ್ಲೂ ಹಂಚಿಕೊಂಡಿದ್ದಾರೆ.
ಈ ಫೋಟೋ ನೋಡಿದ ನೆಟ್ಟಿಗರು ರಶ್ಮಿಕಾರಂತೆ ಎಕ್ಸ್‌ಪ್ರೆಶನ್ ನೀಡಿದ ವಡಿವೇಲು ಅವರ ಫೋಟೋ ಜೊತೆ ಹೋಲಿಕೆ ಮಾಡಿದ್ದಾರೆ. ಅಲ್ಲದೆ ವಡಿವೇಲು ಫಾರ್ ಲೈಫ್ ಎಂಬ ಹ್ಯಾಶ್‍ಟ್ಯಾಗ್ ಬಳಸಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುತ್ತಿದ್ದಾರೆ. ರಶ್ಮಿಕಾ ಹಾಗೂ ವಡಿವೇಲು ಅವರ ಫೋಟೋ ನೋಡಿ ಕೆಲವರು ರಶ್ಮಿಕಾ ಇನ್ನೂ ಮಗುವಿನಂತೆ ವರ್ತಿಸುತ್ತಾರೆ ಎಂದು ಕಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು, ರಶ್ಮಿಕಾ ಯಾವಾಗಲೂ ಓವರ್ ಆ್ಯಕ್ಟಿಂಗ್ ಮಾಡುತ್ತಾರೆ ಎಂದು ಕಮೆಂಟ್ ಮಾಡುತ್ತಿದ್ದಾರೆ.
ಈ ಹಿಂದೆ ಹೈದರಾಬಾದ್‍ನಲ್ಲಿ ರಶ್ಮಿಕಾ, ಪ್ರಿನ್ಸ್ ಮಹೇಶ್ ಬಾಬು ಅವರ ಜೊತೆ ನಟಿಸಿದ ‘ಸರಿಲೇರು ನೀಕ್ಕೆವ್ವರು’ ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವೇಳೆ ವೇದಿಕೆ ಮೇಲೆ ರಶ್ಮಿಕಾ ಭಾಷಣ ಕೇಳಿ ತೆಲುಗು ಪ್ರೇಕ್ಷಕರು ಅವರನ್ನು ಟ್ರೋಲ್ ಮಾಡಿದ್ದರು. ಚಿತ್ರದ ಟ್ರೈಲರ್ ಬಿಡುಗಡೆ ವೇಳೆ ರಶ್ಮಿಕಾ ಮಾತನಾಡಿದ ವಿಡಿಯೋ ನೋಡಿದ ಪ್ರೇಕ್ಷಕರು ಅವರಿಗೆ ‘ಓವರ್ ಆ್ಯಕ್ಟಿಂಗ್’, ‘ಓವರ್ ಆ್ಯಕ್ಟಿಂಗ್‍ಗೆ ಮುಖ ಏನಾದರೂ ಇದ್ದರೆ ಅದು ರಶ್ಮಿಕಾ ರೀತಿ ಇರುತಿತ್ತು’ ಎಂದು ಸಾಕಷ್ಟು ಟ್ರೋಲ್ ಮಾಡಿದ್ದರು.
ಸದ್ಯ ರಶ್ಮಿಕಾ ತೆಲುಗಿನಲ್ಲಿ ನಟ ನಿತಿನ್ ಜೊತೆ ನಟಿಸಿದ ‘ಭೀಷ್ಮ’ ಚಿತ್ರ ಬಿಡುಗಡೆಯಾಗಿದ್ದು, ಬಾಕ್ಸ್ ಆಫೀಸ್‍ನಲ್ಲಿ ಭರ್ಜರಿ ಕಲೆಕ್ಷನ್ ಆಗುತ್ತಿದೆ. ಈ ಸಿನಿಮಾ ಸಿತಾರಾ ಎಂಟರ್ ಟೇನ್‍ಮೆಂಟ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿದ್ದು, ವೆಂಕಿ ಕುದುಮುಲ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ.