Tag: Vacuum Bomb

  • ರಷ್ಯಾ ಉಕ್ರೇನ್ ಮೇಲೆ ವ್ಯಾಕ್ಯೂಮ್ ಬಾಂಬ್ ಹಾಕುವುದು ಖಚಿತ ಎಂದ ಬ್ರಿಟನ್

    ರಷ್ಯಾ ಉಕ್ರೇನ್ ಮೇಲೆ ವ್ಯಾಕ್ಯೂಮ್ ಬಾಂಬ್ ಹಾಕುವುದು ಖಚಿತ ಎಂದ ಬ್ರಿಟನ್

    ಲಂಡನ್: ರಷ್ಯಾ ಉಕ್ರೇನ್ ಯುದ್ಧ ಕಳೆದ 16 ದಿನಗಳಿಂದ ನಡೆಯುತ್ತಿದ್ದು, ಇದೀಗ ರಷ್ಯಾ ಉಕ್ರೇನ್ ಮೇಲೆ ಟಿಒಎಸ್-1ಎ (TOS-1A) ಆಯುಧವನ್ನು ಬಳಸುವುದು ಖಚಿತವಾಗಿದೆ ಎಂದು ಯುನೈಟೆಡ್ ಕಿಂಗ್ಡಮ್(ಬ್ರಿಟನ್)ನ ರಕ್ಷಣಾ ಸಚಿವಾಲಯ ತಿಳಿಸಿದೆ.

    ಟಿಒಎಸ್-1ಎ ಥರ್ಮೋಬಾರಿಕ್ ರಾಕೆಟ್ ಹಾಗೂ ನಿರ್ವಾತ(ವ್ಯಾಕ್ಯೂಮ್) ಬಾಂಬ್ ಒಳಗೊಂಡಿದೆ. ಈ ಆಯುಧ ಬಳಕೆಯಿಂದ ಬೆಂಕಿ ಹಾಗೂ ಭಯಾನಕ ಸ್ಫೋಟ ಸಂಭವಿಸಲಿದೆ ಎಂದು ಮೂಲಗಳು ತಿಳಿಸಿವೆ. ಮಿನಿಸ್ಟ್ರಿ ಆಫ್ ಡಿಫೆನ್ಸ್ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಈ ಆಯುಧದ ಬಗ್ಗೆ ತಿಳಿಸಿದೆ. ಇದನ್ನೂ ಓದಿ: ಉಕ್ರೇನ್ ಮೇಲೆ ರಷ್ಯಾ ವ್ಯಾಕ್ಯೂಮ್ ಬಾಂಬ್ ಪ್ರಯೋಗ ಆರೋಪ – ಏನಿದರ ವಿಶೇಷ?

    ಜಾಗತಿಕವಾಗಿ ತಯಾರಿಸಲಾಗಿರುವ ಎಲ್ಲಾ ಬಾಂಬುಗಳಿಗಿಂತಲೂ ವ್ಯಾಕ್ಯೂಮ್ ಬಾಂಬ್ ಅತ್ಯಂತ ಶಕ್ತಿಶಾಲಿಯಾಗಿದೆ. ಇದನ್ನು ಥರ್ಮೋಬಾರಿಕ್ ವೆಪನ್ ಎಂತಲೂ ಕರೆಯಲಾಗುತ್ತಿದ್ದು, ಇದು ವಾತಾವರಣದ ಆಮ್ಲಜನಕವನ್ನು ಹೀರಿಕೊಂಡು ಸ್ಫೋಟಿಸುತ್ತದೆ. ಇದನ್ನೂ ಓದಿ: ರಷ್ಯಾದಿಂದ ತೈಲ ಆಮದಿಗೆ ಮಾತ್ರ ಅಮೆರಿಕ ನಿರ್ಬಂಧ – ಯುರೇನಿಯಂಗೆ ಇಲ್ಲ ನಿಷೇಧ

    ಅಣು ಬಾಂಬ್‌ನ ಬಳಿಕ ಬರುವ ಅತ್ಯಂತ ಭಯಾನಕ ಬಾಂಬ್ ಇದಾಗಿದ್ದು, ಇದನ್ನು ಪ್ರಯೋಗಿಸಿದ ಬಳಿಕ ಮನುಷ್ಯನ ದೇಹವನ್ನೇ ಆವಿಯಾಗಿಸುತ್ತದೆ. ಈ ಬಾಂಬ್ ಅನ್ನು ಮೊದಲಿಗೆ ಅಮೆರಿಕ ತಯಾರಿಸಿತ್ತು. ಬಳಿಕ 2007ರಲ್ಲಿ ರಷ್ಯಾ ಈ ಬಾಂಬ್ ಅನ್ನು ಅಭಿವೃದ್ಧಿ ಮಾಡಿ ಸಿರಿಯಾ ಮೇಲೆ ಪ್ರಯೋಗ ಮಾಡಿತ್ತು ಎಂಬ ಆರೋಪ ಇದೆ.

  • ಉಕ್ರೇನ್ ಮೇಲೆ ರಷ್ಯಾ ವ್ಯಾಕ್ಯೂಮ್ ಬಾಂಬ್ ಪ್ರಯೋಗ ಆರೋಪ – ಏನಿದರ ವಿಶೇಷ?

    ಉಕ್ರೇನ್ ಮೇಲೆ ರಷ್ಯಾ ವ್ಯಾಕ್ಯೂಮ್ ಬಾಂಬ್ ಪ್ರಯೋಗ ಆರೋಪ – ಏನಿದರ ವಿಶೇಷ?

    ವಾಷಿಂಗ್ಟನ್: ಉಕ್ರೇನ್, ರಷ್ಯಾ ನಡುವೆ ಯುದ್ಧದಲ್ಲಿ ನಿನ್ನೆ ಅಣುಬಾಂಬ್‍ನ ಚರ್ಚೆ ಆಗಿತ್ತು. ಈ ಬೆನ್ನಲ್ಲೇ, ಉಕ್ರೇನ್ ರಾಜಧಾನಿ ಕೀವ್ ಮೇಲೆ ರಷ್ಯಾ ಕ್ಲಸ್ಟರ್ ಮತ್ತು ವ್ಯಾಕ್ಯೂಮ್ ಬಾಂಬ್ ಪ್ರಯೋಗಿಸಿದೆ ಎಂದು ಅಮೆರಿಕದಲ್ಲಿರುವ ಉಕ್ರೇನ್ ರಾಯಭಾರಿ ಒಕ್ಸಾನಾ ಮಾರ್ಕರೋವಾ ಗಂಭೀರ ಆರೋಪ ಮಾಡಿದ್ದಾರೆ.

    ಏನಿದು ವ್ಯಾಕ್ಯೂಮ್ ಬಾಂಬ್?
    ಜಾಗತೀಕವಾಗಿ ಬಲಿಷ್ಠ ಬಾಂಬ್ ಎಂದು ಕರೆಯಲ್ಪಡುವ ಬಾಂಬ್ ವ್ಯಾಕ್ಯೂಮ್ ಬಾಂಬ್. ಇದನ್ನು ಥರ್ಮೋಬಾರಿಕ್ ವೆಪನ್ ಅಂತಲೂ ಕರೆಯಲಾಗುತ್ತದೆ. ಆಕ್ಸಿಜನ್ ಹೈಟೆಂಪರೇಚರ್ ಸ್ಫೋಟಕ ತುಂಬಿರುವ ಬಾಂಬ್ ಇದಾಗಿದ್ದು, ಈ ಬಾಂಬ್ ಸ್ಫೋಟಿಸಿದಾಗ ಆಮ್ಲಜನಕವನ್ನು ಹೀರಿಕೊಳ್ಳುತ್ತದೆ. ಸ್ಫೋಟಗೊಂಡರೆ ಅಲ್ಟ್ರಾಸಾನಿಕ್ ಡೇಂಜರಸ್ ತರಂಗಗಳನ್ನು ಹೊರಸೂಸುತ್ತದೆ. ಮನುಷ್ಯರ ದೇಹಗಳನ್ನು ಆವಿಯಾಗಿಸುವ ಸಾಮರ್ಥ್ಯ ಈ ಬಾಂಬ್‍ಗಿದೆ. ದೀರ್ಘಕಾಲ, ಅತಿ ಹೆಚ್ಚು ಸ್ಫೋಟವಾಗುತ್ತದೆ ಮಾರಣಾಂತಿಕ, ವಿನಾಶಕಾರಿ ಬಾಂಬ್ ಎಂಬ ಖ್ಯಾತಿ ವ್ಯಾಕ್ಯೂಮ್ ಬಾಂಬ್‍ಗಿದೆ. ಇದನ್ನೂ ಓದಿ: ಊಟ ತರಲು ನನ್ನ ಬಳಿ ದುಡ್ಡಿಲ್ಲ, ಸ್ವಲ್ಪ ಹಣ ಹಾಕು ಅಂದ ಅದೇ ನವೀನ್‍ನ ಕೊನೆ ಮಾತು: ಶ್ರೀಕಾಂತ್

    ವ್ಯಾಕ್ಯೂಮ್ ಬಾಂಬ್ ಸಾಮಾನ್ಯವಾಗಿ 7,100 ಕೆ.ಜಿ ತೂಕ ಇದ್ದು, 300 ಮೀ.ವರೆಗೂ ಭಾರಿ ಹಾನಿ ಉಂಟು ಮಾಡುವ ಸಾಮರ್ಥ್ಯವಿದೆ. ಪರಮಾಣು ರಹಿತ ಅತ್ಯಾಧುನಿಕ ಬಾಂಬ್ ಎಂದು ವ್ಯಾಕ್ಯೂಮ್ ಬಾಂಬ್‍ನ್ನು ಕರೆಯಲಾಗುತ್ತದೆ. 2007ರಲ್ಲಿ ವ್ಯಾಕ್ಯೂಮ್ ಬಾಂಬ್ ಅಭಿವೃದ್ಧಿ ಮಾಡಿದ್ದ ರಷ್ಯಾ. 2016ರಲ್ಲಿ ಸಿರಿಯಾ ಮೇಲೆ ಪ್ರಯೋಗ ಮಾಡಿತ್ತು ಎಂಬ ಆರೋಪ ಇದೆ. ವಿಶ್ವದಲ್ಲೇ ಮೊದಲಿಗೆ ಅಮೆರಿಕ ಈ ಬಾಂಬ್ ತಯಾರಿಸಿತ್ತು. ಇದನ್ನೂ ಓದಿ: ಉಕ್ರೇನ್‌ನಲ್ಲಿ ಶೆಲ್ ದಾಳಿಗೆ ಮಡಿದ ಕನ್ನಡಿಗನಿಗೆ ಸ್ಯಾಂಡಲ್ ವುಡ್ ಕಣ್ಣೀರು

    ಇದೀಗ ಉಕ್ರೇನ್ ಮೇಲೆ ರಷ್ಯಾ, ವ್ಯಾಕ್ಯೊಮ್ ಬಾಂಬ್‍ನ್ನು ನಿರಾಶ್ರಿತರು ಆಶ್ರಯ ಪಡೆದಿರುವ ಶಾಲೆಯೊಂದರ ಮೇಲೆ ದಾಳಿ ನಡೆಸಿದೆ ಎಂದು ಮಾನವ ಹಕ್ಕುಗಳ ಸಂಘ ಆರೋಪಿಸಿದೆ. ಅಲ್ಲದೇ ಉಕ್ರೇನ್ ಸೈನಿಕರ ಮೇಲೆ ಕೂಡ ವ್ಯಾಕ್ಯೂಮ್ ಬಾಂಬ್ ಎಸೆಯಲಾಗಿದ್ದು, ಪುಟಿನ್ ಉಕ್ರೇನ್‍ನನ್ನು ನಾಶ ಪಡಿಸುವ ಉದ್ದೇಶದಿಂದ ಈ ದಾಳಿ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ.

  • ಉಕ್ರೇನ್‍ನ ಶಾಲಾ- ಕಾಲೇಜುಗಳ ಮೇಲೆ ರಷ್ಯಾದಿಂದ ಫಿರಂಗಿ ದಾಳಿ

    ಉಕ್ರೇನ್‍ನ ಶಾಲಾ- ಕಾಲೇಜುಗಳ ಮೇಲೆ ರಷ್ಯಾದಿಂದ ಫಿರಂಗಿ ದಾಳಿ

    ಕೀವ್: ಉಕ್ರೇನ್ ಮೇಲೆ ರಷ್ಯಾ ದಾಳಿ 6ನೇ ದಿನಕ್ಕೆ ಕಾಲಿಟ್ಟಿದ್ದು, ಇಂದು ಯುದ್ಧದ ತೀವ್ರವಾಗಿದೆ. ಉಕ್ರೇನ್‍ನ ಶಾಲಾ- ಕಾಲೇಜುಗಳ ಮೇಲೆ ರಷ್ಯಾ ಫಿರಂಗಿ ದಾಳಿ ನಡೆಸಿದೆ.

    ರಷ್ಯಾ ಉಕ್ರೇನ್‍ನ ನಾಗರಿಕ ಪ್ರದೇಶಗಳನ್ನು ಹೆಚ್ಚು ಗುರಿಯಾಗಿಸಿಕೊಂಡಿದೆ. ಈಗಾಗಲೇ ಉಕ್ರೇನ್‍ನ ಮಿಲಿಟರಿ ನೆಲೆಗಳ ರಷ್ಯಾ ಫಿರಂಗಿ ದಾಳಿ ನಡೆಸಿದೆ. ಈ ವೇಳೆ ಉಕ್ರೇನ್‍ನ 70 ಸೈನಿಕರ ಹತ್ಯೆ ಮಾಡಲಾಗಿದೆ. ಅಷ್ಟೇ ಅಲ್ಲದೇ ಶಾಲಾ- ಕಾಲೇಜುಗಳ ಮೇಲೂ ದಾಳಿ ನಡೆಸಿದೆ. ಇದರಲ್ಲಿ 10 ಮಕ್ಕಳ ಸಾವನ್ನಪ್ಪಿದ್ದು, ಉಕ್ರೇನ್‍ನ 6 ಶಾಲೆಗಳು ಧ್ವಂಸವಾಗಿದೆ.

    ರಾಜಧಾನಿ ಕೀವ್‍ನಲ್ಲಿ ರಷ್ಯಾದಿಂದ ವ್ಯಾಕ್ಯೂಮ್ ಬಾಂಬ್ ಪ್ರಯೋಗ ಮಾಡಲಾಗಿದೆ ಎಂಬ ಮಾತು ಕೇಳಿ ಬರುತ್ತಿದೆ. ವ್ಯಾಕ್ಯೂಮ್ ಬಾಂಬ್ ಅಪ್ಪಳಿಸಿದರೆ ವಾತಾವರಣದ ಆಮ್ಲಜನಕ ಗ್ರಹಿಸಿ ಹೆಚ್ಚಿನ ಅನಾಹುತವಾಗುತ್ತದೆ. 300ಮೀ ದೂರಕ್ಕೆ ಭಾರೀ ಹಾನಿ ಉಂಟು ಮಾಡಬಲ್ಲದು. ಇದನ್ನು ಕೀವ್ ಮೇಲೆ ಪ್ರಯೋಗಿಸಲಾಗಿದೆ ಜೊತೆಗೆ ರಷ್ಯಾದಿಂದ ಪರಮಾಣು ರಹಿತ ಅತ್ಯಾಧುನಿಕ ಬಾಂಬ್‍ಗಳನ್ನು ಪ್ರಯೋಗ ಮಾಡಲಾಗುತ್ತಿದೆ ಎಂದು ಉಕ್ರೇನ್ ಆರೋಪಿಸಿದೆ.

    ಉಕ್ರೇನ್ ಮೇಲೆ ಇನ್ನಷ್ಟು ಭೀಕರ ದಾಳಿಗೆ ರಷ್ಯಾ ಸನ್ನದ್ಧವಾಗಿದೆ. ರಾಜಧಾನಿ ಕೀವ್ ಹೊರಭಾಗದಲ್ಲಿ 40 ಮೈಲಿಯಷ್ಟು ಮಿಲಿಟರಿ ವಾಹನಗಳ ಸಾಲು ನಿಂತಿವೆ. 40 ಮೈಲಿ ದೂರದಷ್ಟು ಮಿಲಿಟರಿ ವಾಹನಗಳನ್ನು ರಷ್ಯಾ ಸನ್ನದ್ಧಗೊಳಿಸಿದೆ. ಯಾವುದೇ ಕ್ಷಣದಲ್ಲಾದರೂ ಉಕ್ರೇನ್ ಮೇಲೆ ಇನ್ನಷ್ಟು ಭೀಕರ ದಾಳಿ ನಿರೀಕ್ಷೆಯಿದೆ. ಇದನ್ನೂ ಓದಿ: ಅನ್ನ, ನೀರು, ಮೊಬೈಲ್ ಚಾರ್ಜಿಂಗ್ ಮಾಡಲಾಗದೆ ವಿದ್ಯಾರ್ಥಿಗಳ ಪರದಾಟ

    ಈ ಬಗ್ಗೆ ಅಮೆರಿಕ ಗುಪ್ತಚರ ಮತ್ತು ರಕ್ಷಣಾ ಸಚಿವಾಲಯದಿಂದ ಮಾಹಿತಿ ಹೊರಡಿಸಿದ್ದು, ಉಕ್ರೇನ್‍ನಲ್ಲಿ ಇನ್ನಷ್ಟು ಭೀಕರ ರಕ್ತಸಿಕ್ತ ಯುದ್ಧ ಆಗಬಹುದು. ಕೀವ್‍ನಲ್ಲಿ ಇನ್ನಷ್ಟು ರಕ್ತಸಿಕ್ತ, ದೀಘಕಾಲದ ದಾಳಿ ಆಗಲಿದೆ ಎಂದು ಅಮೆರಿಕ ಸಂಸದರಿಗೆ ವಿವರಣೆ ನೀಡಿದೆ. ಇದನ್ನೂ ಓದಿ: ಬಿಬಿಎಂಪಿಯಲ್ಲಿ ಭ್ರಷ್ಟಾಚಾರ ಬಯಲು- 1000 ಕೋಟಿಗೂ ಅಧಿಕ ಅಕ್ರಮ ಪತ್ತೆ