Tag: Vaccine Certificate

  • ವಾಟ್ಸಪ್‌ನಲ್ಲೂ ಪಡೆಯಬಹುದು ಕೋವಿಡ್-19 ಲಸಿಕೆ ಪ್ರಮಾಣಪತ್ರ

    ವಾಟ್ಸಪ್‌ನಲ್ಲೂ ಪಡೆಯಬಹುದು ಕೋವಿಡ್-19 ಲಸಿಕೆ ಪ್ರಮಾಣಪತ್ರ

    ದೇಶದಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚಾಗುತ್ತಲೇ ಇದೆ. ಕೋವಿಡ್‌ನ ಮೂರನೇ ಅಲೆ ಪ್ರಾರಂಭವಾಗಿ, ದಿನಕ್ಕೆ ಲಕ್ಷಕ್ಕೂ ಅಧಿಕ ಪ್ರಕರಣಗಳು ಪತ್ತೆಯಾಗುತ್ತಿವೆ. ವೈರಸ್ ಹರಡುವುದನ್ನು ತಡೆಗಟ್ಟಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಲವು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುತ್ತಿದೆ. ಇದರಲ್ಲಿ ಸಾರ್ವಜನಿಕ ಪ್ರದೇಶಗಳಲ್ಲಿ ಓಡಾಡುವಾಗ ಕೋವಿಡ್ ಲಸಿಕೆಗಳ ಪ್ರಮಾಣಪತ್ರವನ್ನು ತೋರಿಸುವುದು ಅಗತ್ಯವಾಗಿದೆ.

    ಆರೋಗ್ಯ ಸೇತು ಅಪ್ಲಿಕೇಶನ್ ಇಲ್ಲವೇ ಕೋವಿನ್ ಪೋರ್ಟಲ್‌ನಿಂದ ಕೋವಿಡ್-19 ಲಸಿಕೆಯ ಪ್ರಮಾಣಪತ್ರವನ್ನು ಡೌನ್ಲೋಡ್ ಮಾಡುವುದು ನಿಮಗೆ ತಿಳಿದಿರಬಹುದು. ಇದೀಗ ಸರ್ಕಾರ ವಾಟ್ಸಪ್‌ನಲ್ಲೂ ಲಸಿಕೆಯ ಪ್ರಮಾಣಪತ್ರವನ್ನು ಪಡೆದುಕೊಳ್ಳಲು ಅನುವು ಮಾಡಿದೆ. ಇದನ್ನೂ ಓದಿ: ಕಂಪನಿಗೆ ಮರಳುವ ಉದ್ಯೋಗಿಗಳಿಗೆ ಬೂಸ್ಟರ್ ಡೋಸ್ ಕಡ್ಡಾಯ – ಫೇಸ್‌ಬುಕ್ ಆದೇಶ

    ಕೇವಲ ಒಂದು ಕ್ಲಿಕ್‌ನಿಂದ ಪ್ರಮಾಣಪತ್ರವನ್ನು ಪಡೆಯುವಂತಹ ಸೌಲಭ್ಯವನ್ನು ಸರ್ಕಾರ ಒದಗಿಸಿದ್ದು, ರೈಲು ಅಥವಾ ವಿಮಾನದಲ್ಲಿ ಪ್ರಯಾಣಿಸುವವರಿಗೆ ಈ ಸೇವೆ ಬಹಳ ಉಪಯುಕ್ತವಾಗಲಿದೆ. ಇದನ್ನು ಬಳಸುವ ಸುಲಭ ವಿಧಾನ ಹೀಗಿದೆ:

    ಮೊದಲಿಗೆ ನಿಮ್ಮ ಮೊಬೈಲಿನಲ್ಲಿ 90131 51515 ಸಹಾಯವಣಿ ಸಂಖ್ಯೆಯನ್ನು ಉಳಿಸಿಕೊಳ್ಳಬೇಕು. ಚ್ಯಾಟ್ ಆಯ್ಕೆಯಲ್ಲಿ ಈ ಸಹಾಯವಾಣಿ ನಂಬರ್ ತೆಗೆದು ಅದರಲ್ಲಿ Certificate ಎಂದು ಟೈಪ್ ಮಾಡಿ ಕಳುಹಿಸಿ. ಎಸ್‌ಎಂಎಸ್ ಮೂಲಕ ನಿಮ್ಮ ಫೋನ್‌ಗೆ 6 ಅಂಕಿಯ ಒಟಿಪಿ ಬರುತ್ತದೆ. 3 ನಿಮಿಷಗಳ ಒಳಗಾಗಿ ಒಟಿಪಿ ನಂಬರ್ ಅನ್ನು ನಮೂದಿಸಿ, ಕಳುಹಿಸಿ. ಇದನ್ನೂ ಓದಿ: ವಾಟ್ಸಪ್ ಕಾರ್ಯ ಸ್ಥಗಿತ – ಆಂಡ್ರಾಯ್ಡ್, ಐಫೋನ್ ಫೋನ್‌ಗಳ ಪಟ್ಟಿ ಇಲ್ಲಿದೆ

    ನಿಮ್ಮ ಫೋನ್ ನಂಬರ್‌ನಿಂದ ನೋಂದಾಯಿಸಿ, ಲಸಿಕೆ ಹಾಕಿಸಿಕೊಂಡ ವ್ಯಕ್ತಿಯ ಹೆಸರು ಕಾಣಿಸುತ್ತದೆ. ಅಂದರೆ ನಿಮ್ಮ ಫೋನ್ ನಂಬರ್‌ನಿಂದ ಒಬ್ಬರಿಗಿಂತ ಹೆಚ್ಚಿನವರು ನೋಂದಾಯಿಸಿದ್ದರೂ ಅವರ ಹೆಸರು ಗೋಚರಿಸುತ್ತದೆ. ನಿಮಗೆ ಯಾರ ಲಸಿಕೆಯ ಪ್ರಮಾಣ ಪತ್ರ ಬೇಕು ಅವರ ಹೆಸರಿನ ಮುಂದೆ ಇರುವ ಸಂಖ್ಯೆಯನ್ನು ಬರೆದು ಕಳುಹಿಸಿ. ಈಗ ನಿಮ್ಮ ಕೋವಿಡ್ ಲಸಿಕೆಯ ಪ್ರಮಾಣಪತ್ರವನ್ನು ಕೇವಲ 30 ಸೆಕೆಂಡುಗಳಲ್ಲಿ ಪಿಡಿಎಫ್ ಆವೃತ್ತಿಯಲ್ಲಿ ಪಡೆಯಬಹುದು.

  • ವ್ಯಾಕ್ಸಿನ್ ಪ್ರಮಾಣ ಪತ್ರದಲ್ಲಿ ಮೋದಿ ಫೋಟೊ ತೆರವು ಕೋರಿ ಸಲ್ಲಿಸಿದ್ದ ಅರ್ಜಿ ವಜಾ

    ವ್ಯಾಕ್ಸಿನ್ ಪ್ರಮಾಣ ಪತ್ರದಲ್ಲಿ ಮೋದಿ ಫೋಟೊ ತೆರವು ಕೋರಿ ಸಲ್ಲಿಸಿದ್ದ ಅರ್ಜಿ ವಜಾ

    ತಿರುವನಂತಪುರಂ : ಕೋವಿಡ್ ಲಸಿಕಾ ಪ್ರಮಾಣ ಪತ್ರದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರವನ್ನು ತೆಗೆದುಹಾಕುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಕೇರಳ ಹೈಕೋರ್ಟ್ ವಜಾ ಮಾಡಿದ್ದು, ಅರ್ಜಿದಾರ ಪೀಟರ್ ಮೈಲಿಪರಂಪಿಲ್‍ಗೆ ಒಂದು ಲಕ್ಷ ರೂಪಾಯಿ ದಂಡ ವಿಧಿಸಿ ಆದೇಶ ಹೊರಡಿಸಿದೆ.

    ಸಾಮಾಜಿಕ ಕಾರ್ಯಕರ್ತ ಪೀಟರ್ ಮೈಲಿಪರಂಪಿಲ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಪಿವಿ ಪಿವಿ ಕುಂಞಿಕೃಷ್ಣನ್ ನೇತೃತ್ವದ ಏಕ ಸದಸ್ಯ ಪೀಠ ವಿಚಾರಣೆ ನಡೆಸಿತು. ವಿಚಾರಣೆ ವೇಳೆ ಈ ಅರ್ಜಿ ದುರುದ್ದೇಶದಿಂದ ಸಲ್ಲಿಕೆಯಾಗಿರುವ ಕ್ಷುಲ್ಲಕ ಅರ್ಜಿಯಾಗಿದೆ. ರಾಜಕೀಯ ಉದ್ದೇಶಗಳಿರುವಂತೆ ತೋರುತ್ತಿದ್ದು ಇದು ಪ್ರಚಾರಕ್ಕಾಗಿ ಸಲ್ಲಿಸಿದಂತಿದೆ ಎಂದು ನ್ಯಾಯಮೂರ್ತಿಗಳು ಅಭಿಪ್ರಾಯಪಟ್ಟರು. ಇದನ್ನೂ ಓದಿ: ದೇಶದಲ್ಲಿ 200 ಗಡಿ ದಾಟಿದ ಓಮಿಕ್ರಾನ್ ಸೋಂಕಿತರ ಸಂಖ್ಯೆ – ನಾಲ್ಕನೇ ಸ್ಥಾನದಲ್ಲಿ ಕರ್ನಾಟಕ

    ವ್ಯಕ್ತಿಗಳ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ಸಾವಿರಾರು ವಿಷಯಗಳು ನ್ಯಾಯಾಲಯದ ಮುಂದೆ ಬಾಕಿ ಉಳಿದಿವೆ ಮತ್ತು ಪ್ರಸ್ತುತ ರೀತಿಯ ಅರ್ಜಿಗಳು ನ್ಯಾಯಾಲಯದ ಸಮಯವನ್ನು ಹೇಗೆ ವ್ಯರ್ಥಗೊಳಿಸುತ್ತವೆ ಎಂಬುದನ್ನು ನ್ಯಾಯಾಲಯವು ಯೋಚಿಸಿದೆ. ಈ ಹಿನ್ನಲೆಯಲ್ಲಿ ಈ ಅರ್ಜಿ ಭಾರೀ ವೆಚ್ಚದೊಂದಿಗೆ ವಜಾಗೊಳಿಸಲು ಅರ್ಹವಾಗಿದೆ ಎಂದ ನ್ಯಾಯಮೂರ್ತಿಗಳು ಒಂದು ಲಕ್ಷ ದಂಡ ವಿಧಿಸಿದರು.

    ದಂಡದ ಹಣವನ್ನು ಆರು ವಾರಗಳಲ್ಲಿ ಕೇರಳ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಪಾವತಿಸಬೇಕು ಎಂದು ಸೂಚಿಸಿತು. ಒಂದು ಲಕ್ಷ ದಂಡ ಅಧಿಕವಾಗಿದೆ ಎಂದು ಗೊತ್ತು. ಆದರೆ ಅನಗತ್ಯ ಅರ್ಜಿಗಳನ್ನು ತಡೆಯಲು ಈ ರೀತಿಯ ಕ್ರಮ ಅಗತ್ಯ ಎಂದು ನ್ಯಾಯಮೂರ್ತಿಗಳು ಕೊನೆಯಲ್ಲಿ ತಿಳಿಸಿದರು. ಇದನ್ನೂ ಓದಿ: ಅಕ್ರಮವಾಗಿ ಪ್ರಯಾಣಿಕರನ್ನು ಸಾಗಿಸ್ತಿದ್ದ ಹಡಗು ಮುಳುಗಡೆ- ಹಲವರು ನಾಪತ್ತೆ

    ಹಣ ಪಾವತಿಸಿ ಖಾಸಗಿ ಆಸ್ಪತ್ರೆಗಳಲ್ಲಿ ವ್ಯಾಕ್ಸಿನ್ ಪಡೆದರೂ ಪ್ರಮಾಣ ಪತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾವಚಿತ್ರ ಅಳವಡಿಸಿಲಾಗಿದ್ದು, ಇದನ್ನು ತೆಗೆದುಹಾಕುವಂತೆ ಸಾಮಾಜಿಕ ಕಾರ್ಯಕರ್ತ ಪೀಟರ್ ಮೈಲಿಪರಂಪಿಲ್ ಮನವಿ ಮಾಡಿದ್ದರು.

     

  • ಮದ್ಯ ಖರೀದಿಗೆ ವ್ಯಾಕ್ಸಿನ್ ಕಡ್ಡಾಯ – ಹೊಸ ರೂಲ್ಸ್‌ಗೆ ಗುಂಡೈಕ್ಳು ಗಢ ಗಢ

    ಮದ್ಯ ಖರೀದಿಗೆ ವ್ಯಾಕ್ಸಿನ್ ಕಡ್ಡಾಯ – ಹೊಸ ರೂಲ್ಸ್‌ಗೆ ಗುಂಡೈಕ್ಳು ಗಢ ಗಢ

    ಚೆನ್ನೈ: ಕೋವಿಡ್-19 ಲಸಿಕೆಯನ್ನು ಉತ್ತೇಜಿಸುವ ಉದ್ದೇಶದಿಂದ, ಸರ್ಕಾರಿ ಸ್ವಾಮ್ಯದ ಟಿಎಎಸ್‍ಎಂಸಿ ಮಳಿಗೆಗಳಿಂದ ಮದ್ಯ ಖರೀದಿಸುವವರು ಎರಡೂ ಡೋಸ್ ಲಸಿಕೆಯನ್ನು ಕಡ್ಡಾಯವಾಗಿ ಪಡೆದಿರಬೇಕೆಂದು ತಮಿಳುನಾಡಿನ ನೀಲಗಿರಿ ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ.

    alcohol

    ತಮಿಳುನಾಡಿನಲ್ಲಿ ಇಂತಹ ನಿಯಮವನ್ನು ಜಾರಿಗೊಳಿಸಿದ ಮೊದಲ ಜಿಲ್ಲೆ ನೀಲಗಿರಿಯಾಗಿದ್ದು, ಇಲ್ಲಿನ ಟಿಎಎಸ್‍ಎಂಸಿ ಮಳಿಗೆಗಳಿಂದ ಮದ್ಯ ಖರೀದಿಸುವವರು ಲಸಿಕೆ ಪಡೆದ ಪ್ರಮಾಣ ಪತ್ರ ಮತ್ತು ಆಧಾರ್ ಕಾರ್ಡ್‍ನನ್ನು ಸಲ್ಲಿಸಬೇಕಾಗುತ್ತದೆ. ಇದನ್ನೂ ಓದಿ:ಪಬ್ಲಿಕ್ ಟಿವಿ ಇಂಪಾಕ್ಟ್ – ರಸ್ತೆ ಗುಂಡಿಗಳನ್ನು ಮುಚ್ಚಲು ಟಾಸ್ಕ್ ಪೋರ್ಸ್ ರಚಿಸಿದ ಬಿಬಿಎಂಪಿ

    ಕೆಲವು ಮಂದಿ ಮದ್ಯಸೇವನೆ ಮಾಡದೇ ತಮಗೆ ಇರಲು ಆಗುವುದಿಲ್ಲ ಎಂದು ತಿಳಿಸಿದ್ದರು. ಹೀಗಾಗಿ ಮದ್ಯ ಖರೀದಿಸುವವರು ವ್ಯಾಕ್ಸಿನ್ ಪಡೆದ ಪ್ರಮಾಣ ಪತ್ರವನ್ನು ತೋರಿಸಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿ ದಿವ್ಯಾ ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಸುಮಾರು ಶೇ 97ರಷ್ಟು ಜನರು ವ್ಯಾಕ್ಸಿನ್ ಮೊದಲ ಡೋಸ್ ಸ್ವೀಕರಿಸಿದ್ದು, ಇದೀಗ ಎರಡನೇ ಡೋಸ್ ಲಸಿಕೆಯನ್ನು ನೀಡಲಾಗುತ್ತಿದೆ. ಇದನ್ನೂ ಓದಿ:ಹತ್ತಾರು ಎಕರೆ, ಮಾವಿನ ತೋಪು, ನಿರ್ಜನ ಪ್ರದೇಶ – ನೂರಾರು ಜನ… ಕೋಟಿ ಕೋಟಿ ವ್ಯವಹಾರ!

  • ವ್ಯಾಕ್ಸಿನ್ ಸರ್ಟಿಫಿಕೇಟ್ ಮೇಲೆ ಮಮತಾ ಬ್ಯಾನರ್ಜಿ ಫೋಟೋ – ಕೆಂಡಾಮಂಡಲವಾದ ಬಿಜೆಪಿ

    ವ್ಯಾಕ್ಸಿನ್ ಸರ್ಟಿಫಿಕೇಟ್ ಮೇಲೆ ಮಮತಾ ಬ್ಯಾನರ್ಜಿ ಫೋಟೋ – ಕೆಂಡಾಮಂಡಲವಾದ ಬಿಜೆಪಿ

    ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ರಾಜ್ಯ ಸರ್ಕಾರದಿಂದ ನೀಡುವ ಉಚಿತ ಕೊರೊನಾ ಲಸಿಕೆಯ ಸರ್ಟಿಫಿಕೇಟ್ ಮೇಲೆ ಸಿಎಂ ಮಮತಾ ಬ್ಯಾನರ್ಜಿ ಫೋಟೋ ಮುದ್ರಣಗೊಳ್ಳಲಿದೆ. ಟಿಎಂಸಿ ಸರ್ಕಾರದ ನಿರ್ಧಾರವನ್ನ ಬಿಜೆಪಿ ಕಟುವಾಗಿ ಟೀಕಿಸಿದೆ.

    ಕೊರೊನಾ ಲಸಿಕೆಯ ಮೂರನೇ ಹಂತದಲ್ಲಿ 18-44 ವರ್ಷದೊಳಗಿನ ಜನತೆ ಬಂಗಾಳ ಸರ್ಕಾರ ಉಚಿತವಾಗಿ ಲಸಿಕೆ ನೀಡುತ್ತಿದೆ. ಈ ಲಸಿಕಾರಣದ ಪ್ರಮಾಣಪತ್ರದಲ್ಲಿ ಮಮತಾ ಬ್ಯಾನರ್ಜಿ ಅವರ ಫೋಟೋ ಹಾಕಲು ಸರ್ಕಾರ ತೀರ್ಮಾನಿಸಿದೆ. ಈ ಮೊದಲು ಮೊದಲ ಮತ್ತು ಎರಡನೇ ಹಂತದಲ್ಲಿ ಲಸಿಕೆ ನೀಡಿದಾಗ ಜನರಿಗೆ ನೀಡಿದ ಸರ್ಟಿಫಿಕೇಟ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಫೋಟೋ ಮುದ್ರಿಸಲಾಗಿದೆ.

    ವಿಧಾನಸಭಾ ಚುನಾವಣೆಯಲ್ಲಿ ಪ್ರಧಾನಿಗಳ ಫೋಟೋ ಇರೋದನ್ನ ಟಿಎಂಸಿ ಖಂಡಿಸಿತ್ತು. ಇದಕ್ಕೆ ಸಂಬಂಧಿಸಿದಂತೆ ಚುನಾವಣಾ ಆಯೋಗಕ್ಕೂ ದೂರು ಸಲ್ಲಿಸಿತ್ತು. ಸರ್ಟಿಫಿಕೇಟ್ ನಲ್ಲಿ ಮೋದಿ ಅವರ ಫೋಟೋ ಹಾಕಿದ್ದು, ಚುನಾವಣೆ ನೀತಿ ಸಂಹಿತಿಯ ಉಲ್ಲಂಘನೆ ಎಂದು ಟಿಎಂಸಿ ಆರೋಪಿಸಿತ್ತು. ಇದನ್ನೂ ಓದಿ: ಮುಖ್ಯ ಕಾರ್ಯದರ್ಶಿಗಾಗಿ ದೀದಿ V/s ಮೋದಿ – ಮತ್ತೆ ಕೇಂದ್ರದ ವಿರುದ್ಧ ಸಿಡಿದ ಮಮತಾ ಬ್ಯಾನರ್ಜಿ

    ಕೊರೊನಾ ವ್ಯಾಕ್ಸಿನ್ ಎಲ್ಲರಿಗೂ ಉಚಿತವಾಗಿ ಸಿಗುವಂತಾಗಬೇಕು. ಕೊರೊನಾ ಲಸಿಕೆಯ ಪ್ರಮಾಣಪತ್ರದಲ್ಲಿ ಪಿಎಂ ಮೋದಿ ಫೋಟೋ ಹಾಕಿದ್ದನ್ನು ಟೀಕಿಸಿದ್ದರು. ಆದ್ರೆ ಇದೀಗ ಮಮತಾ ಬ್ಯಾನರ್ಜಿ ಅವರ ಈ ನಡೆಯನ್ನು ಟಿಎಂಸಿ ನಾಯಕರು ಸಮರ್ಥಿಸಿಕೊಂಡಿದ್ದಾರೆ. ಬಿಜೆಪಿಯವರೇ ಇದನ್ನ ಮೊದಲು ಆರಂಭಿಸಿದ್ದು, ಅವರನ್ನ ನಾವು ಫಾಲೋ ಮಾಡಿದ್ದೇವೆ. ಬಿಜೆಪಿ ಫೋಟೋ ಹಾಕದಿದ್ರೆ ನಾವು ಹಾಕಲ್ಲ ಎಂದು ಟಿಎಂಸಿಯ ಸೌಗತ್ ರಾಯ್ ಹೇಳುತ್ತಾರೆ. ಇದನ್ನೂ ಓದಿ: ಮುಂದುವರಿದ ಸಂಘರ್ಷ – ಸಿಎಂ ಮಮತಾ ಬ್ಯಾನರ್ಜಿ 9 ಪ್ರಶ್ನೆಗಳಿಗೆ ಕೇಂದ್ರದ ಉತ್ತರ

    ಕೆಂಡಾಮಂಡಲವಾದ ಬಿಜೆಪಿ: ಟಿಎಂಸಿ ಪ್ರಧಾನಿಗಳನ್ನ ಗೌರವಿಸುತ್ತಿಲ್ಲ. ಬದಲಾಗಿ ತನ್ನದೇ ಒಂದು ಪ್ರತ್ಯೇಕ ದೇಶ ಎಂಬಂತೆ ವರ್ತಿಸುತ್ತಿದೆ. ಪಶ್ಚಿಮ ಬಂಗಾಳ ಭಾರತದಲ್ಲಿ ಒಂದು ರಾಜ್ಯ ಅನ್ನೋದನ್ನ ಒಪ್ಪಿಕೊಳ್ಳಲು ಸಿದ್ಧರಿಲ್ಲ ಎಂದು ಬಿಜೆಪಿಯ ಹಿರಿಯ ನಾಯಕ ಸಮಿಕ್ ಭಟ್ಟಾಚಾರ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಮುಂದೊಂದಿನ ಭಾರತಕ್ಕೂ ಮೋದಿ ಹೆಸರಿಡಬಹುದು: ಮಮತಾ ಬ್ಯಾನರ್ಜಿ