Tag: Vaccination Certificate

  • ವ್ಯಾಕ್ಸಿನೇಷನ್ ಪ್ರಮಾಣ ಪತ್ರದಲ್ಲಿ ಎಡವಟ್ಟು – ಕಿಡಿಗೇಡಿಗಳ ಕೃತ್ಯವೆಂದ ಅಧಿಕಾರಿಗಳು

    ವ್ಯಾಕ್ಸಿನೇಷನ್ ಪ್ರಮಾಣ ಪತ್ರದಲ್ಲಿ ಎಡವಟ್ಟು – ಕಿಡಿಗೇಡಿಗಳ ಕೃತ್ಯವೆಂದ ಅಧಿಕಾರಿಗಳು

    ಲಕ್ನೋ: ಬಿಜೆಪಿ ಸ್ಥಳೀಯ ನಾಯಕರೊಬ್ಬರಿಗೆ 5 ಡೋಸ್ ಕೊರೊನಾ ವ್ಯಾಕ್ಸಿನ್ ನೀಡಲಾಗಿದೆ ಮತ್ತು ಆರನೇ ಡೋಸ್ ವ್ಯಾಕ್ಸಿನ್ ನೀಡಲು ದಿನಾಂಕವನ್ನು ನಿಗದಿ ಪಡಿಸಲಾಗಿದೆ ಎಂದು ವ್ಯಾಕ್ಸಿನೇಷನ್ ಪ್ರಮಾಣ ಪತ್ರದಲ್ಲಿ ತಪ್ಪಾಗಿ ಪ್ರಕಟಿಸಲಾಗಿದ್ದು, ಇದೊಂದು ಕಿಡಿಗೇಡಿತನ ಕೃತ್ಯ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ರಾಮ್‍ಪಾಲ್ ಸಿಂಗ್(73) ಬೂತ್ ನಂ79ರ ಬಿಜೆಪಿ ಅಧ್ಯಕ್ಷ ಮತ್ತು ಹಿಂದೂ ಯುವ ವಾಹಿನಿಯ ಸದಸ್ಯರಾಗಿದ್ದಾರೆ. ಈ ಘಟನೆ ಉತ್ತರ ಪ್ರದೇಶದ ಮೀರತ್ ಜಿಲ್ಲೆಯ ಸರ್ಧನ ಪ್ರದೇಶದಲ್ಲಿ ವರದಿಯಾಗಿದ್ದು, ತಮ್ಮ ವ್ಯಾಕ್ಸಿನೇಷನ್ ಪ್ರಮಾಣ ಪತ್ರದಲ್ಲಿ ಐದು ಡೋಸ್ ಕೊರೊನಾ ಲಸಿಕೆ ನೀಡಲಾಗಿದೆ ಮತ್ತು ಆರನೇಯ ಡೋಸ್ ನೀಡಲು ದಿನಾಂಕ ನಿಗದಿ ಪಡಿಸಲಾಗಿದೆ ಎಂದು ನೀಡಲಾಗಿದೆ. ಇದು ಆರೋಗ್ಯ ಇಲಾಖೆಯ ನಿರ್ಲಕ್ಷ್ಯ ಎಂದು ಆರೋಪಿಸಿ ದೂರು ದಾಖಲಿಸಿದ್ದಾರೆ. ಇದನ್ನೂ ಓದಿ: ಬಾಲಕಿ ಮೇಲೆ ಲೈಂಗಿಕ ಕಿರುಕುಳ ಪ್ರಕರಣ – ಠಾಣೆ ಬಳಿ ಓಡೋಡಿ ಬಂದಿದ್ದ ಶಾಸಕ ಬೈರತಿ ಸುರೇಶ್

    ರಾಮ್‍ಪಾಲ್ ಸಿಂಗ್‍ರವರು ತಮ್ಮ ಮೊದಲ ಲಸಿಕೆಯನ್ನು ಮಾರ್ಚ್ 16ರಂದು ಮತ್ತು ಎರಡನೇ ಲಸಿಕೆಯನ್ನು ಮೇ 8ರಂದು ಪಡೆದಿರುವುದಾಗಿ ತಿಳಿಸಿದ್ದಾರೆ. ಆದರೆ ಅಧಿಕೃತ ಪೋರ್ಟಲ್‍ನ ವ್ಯಾಕ್ಸಿನೇಷನ್ ಪ್ರಮಾಣ ಪತ್ರವನ್ನು ಡೌನ್ ಲೋಡ್ ಮಾಡಿದಾಗ, ಈಗಾಗಲೇ ಐದು ಡೋಸ್‍ಗಳನ್ನು ಸ್ವೀಕರಿಸಲಾಗಿದೆ ಮತ್ತು ಆರನೇಯ ಡೋಸ್ 2021 ಮತ್ತು ಜನವರಿ 2022ರ ನಡುವೆ ನೀಡಲಾಗುತ್ತದೆ ಎಂದು ಸೂಚಿಸಲಾಗಿದೆ. ಪ್ರಮಾಣ ಪತ್ರದಲ್ಲಿ ನನ್ನ ಮೊದಲ ಡೋಸ್‍ನನ್ನು ಮಾರ್ಚ್ 16ರಂದು, ಎರಡನೇಯ ಡೋಸ್‍ನ್ನು ಮೇ8 ರಂದು, ಮೂರನೇಯ ಡೋಸ್‍ನ್ನು ಮೇ 15ರಂದು ಮತ್ತು ನಾಲ್ಕನೇ, ಐದನೇ ಡೋಸ್‍ನ್ನು ಸೆಪ್ಟೆಂಬರ್ 15ರಂದು ಸ್ವೀಕರಿಸಿರುವುದಾಗಿ ತೋರಿಸಲಾಗಿದೆ ಎಂದು ಹೇಳಿದ್ದಾರೆ.

    ಈ ಬಗ್ಗೆ ಮುಖ್ಯ ವೈದ್ಯಕೀಯ ಅಧಿಕಾರಿ ಅಖಿಲೇಶ್ ಮೋಹನ್‍ರವರು, ಲಸಿಕೆಗಾಗಿ ಯಾರಾದರೂ ಎರಡು ಅಥವಾ ಅದಕ್ಕಿಂತ ಹೆಚ್ಚು ಬಾರಿ ನೋಂದಣಿಯಾಗಿರುವ ಮೊದಲ ಪ್ರಕರಣ ಇದಾಗಿದ್ದು, ಕೆಲವು ಕಿಡಿಗೇಡಿಗಳು ಚೇಷ್ಟೆ ಮಾಡಲು ಪೋರ್ಟಲ್‍ಗಳನ್ನು ಹ್ಯಾಕ್ ಮಾಡಿ ಈ ರೀತಿಯ ಕೃತ್ಯವೆಸಗಿದ್ದಾರೆ. ಈ ಬಗ್ಗೆ ತನಿಖೆ ನಡೆಸಲು ಜಿಲ್ಲಾ ಲಸಿಕೆ ಅಧಿಕಾರಿ ಪ್ರವೀಣ್ ಗೌತಮ್‍ಗೆ ಸೂಚಿಸಲಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ಮತ್ತೆ ಆಪರೇಷನ್ ಪಾಲಿಟಿಕ್ಸ್ ಶುರು – ಬಿಜೆಪಿ, ಜೆಡಿಎಸ್ ಶಾಸಕರಿಗೆ ಡಿಕೆಶಿ ಗಾಳ..?

  • ವಾಟ್ಸಪ್‍ನಲ್ಲೇ ಕೊರೊನಾ ಲಸಿಕೆಯ ಪ್ರಮಾಣಪತ್ರ ಪಡೆಯಿರಿ

    ವಾಟ್ಸಪ್‍ನಲ್ಲೇ ಕೊರೊನಾ ಲಸಿಕೆಯ ಪ್ರಮಾಣಪತ್ರ ಪಡೆಯಿರಿ

    ನವದೆಹಲಿ: ಇನ್ನು ಮುಂದೆ ಕೊರೊನಾ ಲಸಿಕೆಯ ಪ್ರಮಾಣಪತ್ರವನ್ನು ಸುಲಭವಾಗಿ ನಿಮ್ಮ ಮೊಬೈಲಿನಲ್ಲೇ ಪಡೆಯಬಹುದು.

    ಹೌದು. ಇಲ್ಲಿಯವರೆಗೆ ಕೋವಿನ್ ಪೋರ್ಟಲ್ ಗೆ ಹೋಗಿ ಮೊಬೈಲ್ ನಂಬರ್, ಒಟಿಪಿ ಹಾಕಿ ಪ್ರಮಾಣಪತ್ರವನ್ನು ಡೌನ್‍ಲೋಡ್ ಮಾಡಬೇಕಿತ್ತು. ಆದರೆ ಈಗ ವಾಟ್ಸಪ್‍ನಲ್ಲೇ ಪ್ರಮಾಣಪತ್ರವನ್ನು ಪಡೆಯಬಹುದು.

    ಏನು ಮಾಡಬೇಕು?
    +91 90131 51515 ನಂಬರ್ ಅನ್ನು ಮೊದಲು ಸೇವ್ ಮಾಡಿ. ಬಳಿಕ ‘covid certificate” ಎಂದು ಈ ನಂಬರಿಗೆ ವಾಟ್ಸಪ್ ಮಾಡಿ. ಇದಾದ ಬಳಿಕ ನಿಮ್ಮ ಮೊಬೈಲಿಗೆ ಒಂದು ಒಟಿಪಿ ಬರುತ್ತದೆ. ಈ ಒಟಿಪಿಯನ್ನು ನಮೂದಿಸಿದರೆ ಪ್ರಮಾಣಪತ್ರ ಕೂಡಲೇ ವಾಟ್ಸಪ್‍ಗೆ ಬಂದಿರುತ್ತದೆ. ಇದನ್ನೂ ಓದಿ : ಮಂಜು ಬಗ್ಗೆ ಹೇಳುತ್ತಾ ಭಾವುಕರಾದ ಚಕ್ರವರ್ತಿ ಚಂದ್ರಚೂಡ್

    ಕೇಂದ್ರ ಸರ್ಕಾರ ಕೊರೊನಾ ಸಂಬಂಧ ಮೈಗವರ್ನ್‍ಮೆಂಟ್ ಕೊರೊನಾ ಹೆಲ್ಪ್ ಡೆಸ್ಕ್ ತೆರೆದಿದೆ. ಇದರ ಮೂಲಕ ಲಸಿಕೆಯ ಪ್ರಮಾಣಪತ್ರ ವಾಟ್ಸಪ್‍ಗೆ ಬರುತ್ತದೆ.

    ಲಸಿಕೆ ನೀಡುವ ಸಮಯದಲ್ಲಿ ಯಾವ ನಂಬರ್ ನೀಡಿದ್ದಿರೋ ಆ ನಂಬರಿನ ವಾಟ್ಸಪ್ ಸಂಖ್ಯೆಗೆ ಮಾತ್ರ ಪ್ರಮಾಣಪತ್ರ ಬರುತ್ತದೆ. ಸೇವೆ ಆರಂಭಗೊಂಡ ಹಿನ್ನೆಲೆಯಲ್ಲಿ ತಡವಾಗಿ ಪ್ರಮಾಣಪತ್ರ ಬರುತ್ತಿದೆ ಎಂದು ಜನ ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.