Tag: Vaani Kapoor

  • ಪಾಕ್ ನಟನ ‘ಅಬೀರ್ ಗುಲಾಲ್’ ಚಿತ್ರದ ಸಾಂಗ್ಸ್ ಯೂಟ್ಯೂಬ್‌ನಿಂದ ಡಿಲೀಟ್

    ಪಾಕ್ ನಟನ ‘ಅಬೀರ್ ಗುಲಾಲ್’ ಚಿತ್ರದ ಸಾಂಗ್ಸ್ ಯೂಟ್ಯೂಬ್‌ನಿಂದ ಡಿಲೀಟ್

    ಹಲ್ಗಾಮ್‌ನಲ್ಲಿ ಉಗ್ರರ ದಾಳಿ (Pahalgam Terror Attack) ಹಿನ್ನೆಲೆ ಪಾಕಿಸ್ತಾನಿ ನಟ ಫವಾದ್ ಖಾನ್ ನಟನೆಯ ‘ಅಬೀರ್ ಗುಲಾಲ್’ ಚಿತ್ರ (Abir Gulal) ಬಿಡುಗಡೆಗೆ ಅನುಮತಿ ನೀಡಬಾರದು ಎಂದು ತೀವ್ರ ವಿರೋಧ ವ್ಯಕ್ತವಾಗಿರುವ ಬೆನ್ನಲ್ಲೇ ಈ ಚಿತ್ರದ ಹಾಡುಗಳನ್ನು ಯೂಟ್ಯೂಬ್‌ನಿಂದ ಡಿಲೀಟ್ ಮಾಡಲಾಗಿದೆ. ಇದನ್ನೂ ಓದಿ:ಪಾಕ್ ನಟನ ಬಾಲಿವುಡ್ ಸಿನಿಮಾ ರಿಲೀಸ್‌ಗೆ ಬಹಿಷ್ಕಾರ

    ಪಾಕ್ ನಟ ಫವಾದ್ (Fawad Khan) ನಟನೆಯ ‘ಅಬೀರ್ ಗುಲಾಲ್’ ಚಿತ್ರದ 2 ಹಾಡುಗಳು ‘ಸರಿಗಮ’ ಯೂಟ್ಯೂಬ್ ಚಾನೆಲ್‌ನಲ್ಲಿ ರಿಲೀಸ್ ಮಾಡಲಾಗಿತ್ತು. ಒಂದು ರೊಮ್ಯಾಂಟಿಕ್ ಸಾಂಗ್ ಮತ್ತೊಂದು ಪಾರ್ಟಿ ಸಾಂಗ್ ಆಗಿತ್ತು. ಈಗ ಈ ಎರಡು ಹಾಡನ್ನು ‘ಸರಿಗಮ’ ಯೂಟ್ಯೂಬ್ ಚಾನೆಲ್‌ನಿಂದ ತೆಗೆದು ಹಾಕಲಾಗಿದೆ. ಇದನ್ನೂ ಓದಿ:‘ರಾಮಾಯಣ’ ಚಿತ್ರ ಕೈಬಿಟ್ಟಿದ್ಯಾಕೆ ಶ್ರೀನಿಧಿ ಶೆಟ್ಟಿ?- ಇಂಟ್ರೆಸ್ಟಿಂಗ್ ವಿಚಾರ ಬಿಚ್ಚಿಟ್ಟ ‘ಕೆಜಿಎಫ್ 2’ ನಟಿ

    ಜಮ್ಮು ಮತ್ತು ಕಾಶ್ಮೀರ ಪಹಲ್ಗಾಮ್‌ನಲ್ಲಿ ನಡೆದ ದಾಳಿ ಹಿನ್ನೆಲೆ ಪಾಕಿಸ್ತಾನಿ ನಟ ಫವಾದ್ ಖಾನ್ ನಟನೆಯ ‘ಅಬೀರ್ ಗುಲಾಲ್’ ಸಿನಿಮಾ ಭಾರತದಲ್ಲಿ ರಿಲೀಸ್ ಮಾಡಲು ಅನುಮತಿ ನೀಡಲಾಗುವುದಿಲ್ಲ ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ.

    ಫವಾದ್ ಖಾನ್ ಮತ್ತು ವಾಣಿ ಕಪೂರ್ ನಟಿಸಿರುವ ‘ಅಬೀರ್ ಗುಲಾಲ್’ ಮೇ 9ರಂದು ರಿಲೀಸ್ ಆಗಬೇಕಿತ್ತು. ಈ ಸಿನಿಮಾವನ್ನು ಬಿಡುಗಡೆಗೆ ಅನುಮತಿ ನೀಡದಿರಲು ಸರ್ಕಾರ ನಿರ್ಧರಿಸಿದೆ. ಜೊತೆಗೆ ಪಾಕ್ ಕಲಾವಿದರು, ಗಾಯಕರು ತಂತ್ರಜ್ಞರು ಭಾರತದ ಸಿನಿಮಾದಲ್ಲಿ ಕೆಲಸ ಮಾಡಲು ನಿಷೇಧಿಸಲಾಗಿದೆ. ಫಹಾದ್ ಹೊರತಾಗಿ ಸಿನಿಮಾದಲ್ಲಿ ಕೆಲಸ ಮಾಡಿರುವ ಬಹುತೇಕ ಎಲ್ಲರೂ ಭಾರತೀಯರೇ ಆಗಿದ್ದಾರೆ. ಸಿನಿಮಾದ ನಾಯಕಿ ವಾಣಿ ಕಪೂರ್ ಅವರು ಬಾಲಿವುಡ್‌ನ ‘ಬೇಫಿಕ್ರೆ’, ‘ವಾರ್’, ತಮಿಳಿನ `ಆಹಾ ಕಲ್ಯಾಣಂ’ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಈಗ ವಿವಾದಕ್ಕೆ ಸಿಲುಕಿರುವ ‘ಅಬೀರ್ ಗುಲಾಲ್’ ಸಿನಿಮಾವನ್ನು ಆರತಿ ಎಸ್ ಬಾಗ್ಡಿ ನಿರ್ದೇಶನ ಮಾಡಿದ್ದಾರೆ.

     

    View this post on Instagram

     

    A post shared by Vaani Kapoor (@vaanikapoor)

    ‘ಉರಿ’ ದಾಳಿ ಬಳಿ ಪಾಕ್ ಕಲಾವಿದರನ್ನು ಭಾರತದ ಸಿನಿಮಾದಲ್ಲಿ ನಟಿಸಲು ನಿಷೇಧ ಹೇರಲಾಗಿತ್ತು. ವರ್ಷಗಳ ಬಳಿಕ ಪರಿಸ್ಥಿತಿ ತಿಳಿಯಾದಂತೆ ಮತ್ತೆ ಪಾಕ್ ಕಲಾವಿದರು ಬಾಲಿವುಡ್‌ನಲ್ಲಿ ನಟಿಸಲು ಶುರು ಮಾಡಿದರು.

  • ಹಾಟ್‌ ಅವತಾರದಲ್ಲಿ ಕಾಣಿಸಿಕೊಂಡು ಪಡ್ಡೆಹುಡುಗರ ನಿದ್ದೆಗೆಡಿಸಿದ ವಾಣಿ ಕಪೂರ್

    ಹಾಟ್‌ ಅವತಾರದಲ್ಲಿ ಕಾಣಿಸಿಕೊಂಡು ಪಡ್ಡೆಹುಡುಗರ ನಿದ್ದೆಗೆಡಿಸಿದ ವಾಣಿ ಕಪೂರ್

    ಬಾಲಿವುಡ್ (Bollywood) ನಟಿ ವಾಣಿ ಕಪೂರ್ (Vaani Kapoor) ಅವರು ಸಿನಿಮಾಗಿಂತ ಆಗಾಗ ಫೋಟೋಶೂಟ್ ಮೂಲಕ ಹೆಚ್ಚುಚ್ಚು ಸುದ್ದಿಯಾಗುತ್ತಲೇ ಇರುತ್ತಾರೆ. ಇದೀಗ ಬ್ಯಾಕ್‌ಲೆಸ್ ಪೋಸ್ ಕೊಟ್ಟು, ವಾಣಿ ಕಪೂರ್ ಸಖತ್ ಹಾಟ್ ಹಾಟ್ ಆಗಿ ಫೋಟೋಶೂಟ್ ಮಾಡಿಸಿ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದಾರೆ.

    ವಾಣಿ ಕಪೂರ್ ಬೋಲ್ಡ್ ಆಗಿ ಫೋಟೋಶೂಟ್ ಮಾಡಿಸುವ ಮೂಲಕ ಪಡ್ಡೆಹುಡುಗರ ಗಮನ ಸೆಳೆದಿದ್ದಾರೆ. ಬ್ಯಾಕ್‌ಲೆಸ್ ಆಗಿ ಪೋಸ್ ಕೊಟ್ಟು ಮಾದಕ ನೋಟದಲ್ಲಿ ಕ್ಯಾಮೆರಾ ಕಣ್ಣಿಗೆ ವಿವಿಧ ಭಂಗಿಯಲ್ಲಿ ಪೋಸ್ ನೀಡಿದ್ದಾರೆ. ಬಿಳಿ ಬಣ್ಣದ ಧಿರಿಸಿನಲ್ಲಿ ಅಪ್ಸರೆಯಂತೆ ನಟಿ ಮಿಂಚಿದ್ದಾರೆ. ಇದನ್ನೂ ಓದಿ:ರಶ್ಮಿಕಾ ಮಂದಣ್ಣನಿಗೆ ಸರ್ಪ್ರೈಸ್ ಕೊಟ್ಟ ‘ಪುಷ್ಪ 2’ ಟೀಮ್

    ಹಿಂದಿ ಚಿತ್ರರಂಗದ ಹಾಟ್ ವಾಣಿ ಕಪೂರ್ ಅವರು ತಮ್ಮ ನಟನೆಯ ಸಾಕಷ್ಟು ಸಿನಿಮಾಗಳಲ್ಲಿ ಹಸಿಬಿಸಿ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ನಟನೆಯ ಜೊತೆಗೆ ಹಾಟ್ ಸೀನ್‌ನಲ್ಲಿ ನಟಿಸಿರೋದಕ್ಕೂ ಸುದ್ದಿಯಾಗಿದ್ದು ಇದೆ. ಬಾಲಿವುಡ್‌ನಲ್ಲಿ ಇದೆಲ್ಲಾ ಕಾಮನ್. ಅದರಂತೆ ಈಗ ಹೊಸ ಫೋಟೋಶೂಟ್ ಮೂಲಕ ನಟಿ ಸಂಚಲನ ಮೂಡಿಸಿದ್ದಾರೆ.

    ಶಮ್‌ಶೇರಾ, ವಾರ್, ಶುದ್ಧ ದೇಸಿ ರೊಮ್ಯಾನ್ಸ್, ಬೆಲ್ ಬಾಟಮಂ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಾಯಕಿಯಾಗಿ ಅಭಿಮಾನಿಗಳ ಮನಗೆದ್ದಿದ್ದಾರೆ.

  • ‘ಹರೇ ರಾಮ ಹರೇ ಕೃಷ್ಣ’ ಹೆಸರಿನ ಬಿಕಿನಿ ತೊಟ್ಟ ವಾಣಿ ಕಪೂರ್

    ‘ಹರೇ ರಾಮ ಹರೇ ಕೃಷ್ಣ’ ಹೆಸರಿನ ಬಿಕಿನಿ ತೊಟ್ಟ ವಾಣಿ ಕಪೂರ್

    -ನೆಟ್ಟಿಗರಿಂದ ಕ್ಲಾಸ್

    ಮುಂಬೈ: ಬಾಲಿವುಡ್ ಬೇಫಿಕ್ರೆ ಬೆಡಗಿ ವಾಣಿ ಕಪೂರ್ ಧರಿಸಿರುವ ಮೇಲುಡುಗೆ ವಿವಾದಕ್ಕೆ ಕಾರಣವಾಗಿದೆ. ವಾಣಿ ತೊಟ್ಟಿರುವ ಟಾಪ್ ಮೇಲೆ ‘ಹರೇ ರಾಮ ಹರೇ ಕೃಷ್ಣ’ ಎಂಬ ಪದಗಳಿವೆ. ಈ ರೀತಿಯ ಡ್ರೆಸ್ ತೊಡುವುದು ಎಷ್ಟು ಸರಿ ಎಂದು ಜನರು ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಈ ರೀತಿ ಬಟ್ಟೆಗಳ ಮೇಲೆ ‘ಹರೇ ರಾಮ ಹರೇ ಕೃಷ್ಣ’ ಮುದ್ರಿಸಿರೋದು ತಪ್ಪು. ಇದರಿಂದ ಜನರ ಧಾರ್ಮಿಕ ನಂಬಿಕೆ ಮತ್ತು ಭಾವನೆಗಳಿಗೆ ನೋವು ಆಗಲಿದೆ. ಹಾಗಾಗಿ ಚಿತ್ರರಂಗದಿಂದ ವಾಣಿ ಕಪೂರ ಅವರನ್ನು ಬಹಿಷ್ಕರಿಸಬೇಕು. ಇಲ್ಲವೇ ನಟಿಯ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕೆಂದು ಜನರು ಒತ್ತಾಯಿಸಿದ್ದಾರೆ.

    https://twitter.com/govindhindu56/status/1194317120382746625

    ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಎಚ್ಚೆತ್ತ ವಾಣಿ ಕಪೂರ ಇನ್‍ಸ್ಟಾಗ್ರಾಂನಿಂದ ಫೋಟೋ ಡಿಲಿಟ್ ಮಾಡಿಕೊಂಡಿದ್ದಾರೆ. ಫೋಟೋ ತೆಗೆದ ಬಳಿಕ ವಾಣಿ ಇದುವರೆಗೂ ಪ್ರತಿಕ್ರಿಯೆ ನೀಡಿಲ್ಲ.

    https://twitter.com/HarshaliAkiyama/status/1194281351882539008

    2013ರಲ್ಲಿ ತೆರೆಕಂಡ ಶುದ್ಧ ದೇಸಿ ರೊಮ್ಯಾನ್ಸ್ ಚಿತ್ರದ ಮೂಲಕ ವಾಣಿ ಕಪೂರ್ ಬಾಲಿವುಡ್ ಪಾದಾರ್ಪಣೆ ಮಾಡಿದರು. ರಣ್‍ವೀರ್ ಸಿಂಗ್ ಜೊತೆಗೆ ನಟಿಸಿದ್ದ ಬೇಫಿಕ್ರೆ ಚಿತ್ರದಲ್ಲಿ ವಾಣಿ ಕಪೂರ್ ತಮ್ಮ ಚುಂಬನದ ದೃಶ್ಯಗಳಿಂದಲೇ ಸುದ್ದಿಯಾಗಿದ್ದರು. ಇತ್ತೀಚೆಗೆ ತೆರೆಕಂಡು ಗಲ್ಲಾಪೆಟ್ಟಿಗೆ ದೋಚಿರುವ ‘ವಾರ್’ನಲ್ಲಿಯೂ ವಾಣಿ ಕಪೂರ್ ನಟಿಸಿದ್ದರು.

  • ಹುಚ್ಚು ಅಭಿಮಾನಿಯ ಹುಚ್ಚಾಟ – ಅಭಿಮಾನಿ ವಿರುದ್ಧ ನಟಿ ವಾಣಿ ಕಪೂರ್ ದೂರು

    ಹುಚ್ಚು ಅಭಿಮಾನಿಯ ಹುಚ್ಚಾಟ – ಅಭಿಮಾನಿ ವಿರುದ್ಧ ನಟಿ ವಾಣಿ ಕಪೂರ್ ದೂರು

    ಮುಂಬೈ: ಬಾಲಿವುಡ್ ನಟಿ ವಾಣಿ ಕಪೂರ್ ತನ್ನ ಅಭಿಮಾನಿಯ ಕಿರುಕುಳಕ್ಕೆ ಬೇಸತ್ತು ಆತನ ವಿರುದ್ಧ ದೂರು ದಾಖಲಿಸಿದ್ದಾರೆ.

    ಕೆಲವು ದಿನಗಳಿಂದ ಅಭಿಮಾನಿಯೊಬ್ಬ ನಟಿ ವಾಣಿ ಕಪೂರ್ ಅವರನ್ನು ಹಿಂಬಾಲಿಸುತ್ತಿದ್ದನು. ವಾಣಿ ಕಪೂರ್ ಕಾರಿನಲ್ಲಿ ಹೋಗುತ್ತಿದ್ದರೆ, ಅಭಿಮಾನಿ ಬೈಕಿನಲ್ಲಿ ಅವರನ್ನು ಫಾಲೋ ಮಾಡುತ್ತಿದ್ದನು. ಮೊದಲು ವಾಣಿ ಆ ಅಭಿಮಾನಿ ಕಡೆ ಗಮನ ಕೊಡದೇ ತನ್ನ ಕಾರಿನ ಸ್ಪೀಡ್ ಹೆಚ್ಚಿಸಿ ಮುಂದೆ ಹೋಗುತ್ತಿದ್ದರು.

    ಅಭಿಮಾನಿ ಸುಮಾರು ದಿನಗಳಿಂದ ವಾಣಿ ಅವರನ್ನು ಹಿಂಬಾಲಿಸುತ್ತಿದ್ದನು. ಆದರೆ ಒಂದು ದಿನ ವಾಣಿ ಅವರು ಕಾರಿನಲ್ಲಿ ವರ್ಸಾವಾಗೆ ತೆರಳುತ್ತಿದ್ದಾಗ ಅಭಿಮಾನಿ ಅವರ ಸನಿಹಕ್ಕೆ ಬಂದಿದ್ದಾನೆ. ಇದರಿಂದ ವಾಣಿ ಕಪೂರ್ ಸಾಕಷ್ಟು ಹೆದರಿಕೊಂಡಿದ್ದಾರೆ.

    ಆತ ಪದೇ ಪದೇ ಹಿಂಬಾಲಿಸುತ್ತಿರುವುದನ್ನು ನೋಡಿ ಕೊನೆಗೆ ವಾಣಿ ಕಪೂರ್ ವರ್ಸಾವಾ ಠಾಣೆಯಲ್ಲಿ ಅಭಿಮಾನಿ ವಿರುದ್ಧ ದೂರು ದಾಖಲಿಸಿದ್ದಾರೆ.

    ದೂರಿನ ಆಧಾರದಲ್ಲಿ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ತನಿಖೆ ವೇಳೆ ಅಭಿಮಾನಿ ಹೆಸರು ಸಮೀರ್ ಖಾನ್ ಎಂದು ತಿಳಿದು ಬಂದಿದೆ. ಸದ್ಯ ಪೊಲೀಸರು ಅಭಿಮಾನಿ ವಿರುದ್ಧ ಯಾವ ಕ್ರಮ ಕೈಗೊಂಡಿದ್ದಾರೆ ಎಂಬುದು ತಿಳಿದು ಬಂದಿಲ್ಲ.

  • ಸನ್ನಿಗೆ ವಾಣಿ ಕಪೂರ್ ಸೆಡ್ಡು!

    ಸನ್ನಿಗೆ ವಾಣಿ ಕಪೂರ್ ಸೆಡ್ಡು!

    ಮುಂಬೈ: ಬಾಲಿವುಡ್ ನಲ್ಲಿ ತನ್ನ ಮಾದಕ ಮೈ ಮಾಟದಿಂದ ಎಲ್ಲರನ್ನು ಸೆಳೆಯುತ್ತಿರುವ ಹಾಟ್ ಆ್ಯಂಡ್ ಸೆಕ್ಸಿ ಬೆಡಗಿ ಸನ್ನಿ ಲಿಯೋನ್. ಆದರೆ ಈಗ ಸನ್ನಿಗೆ ಸೆಡ್ಡು ಹೊಡೆಯಲು ಬೇಫಿಕ್ರೆ ಬೆಡಗಿ ವಾಣಿ ಕಪೂರ್ ರೆಡಿಯಾಗಿದ್ದಾರೆ.

    ಸದ್ಯ ವಾಣಿ ಕಪೂರ್ `ಯಶ್ ರಾಜ್ ಫಿಲ್ಮಂ` ಬ್ಯಾನರ್ ನಲ್ಲಿ ತಯಾರುಗುತ್ತಿರುವ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಯಶ್ ರಾಜ್ ಫಿಲ್ಮ್ಸ್ ಸೋಮವಾರ ಯೂಟ್ಯೂಬ್ ನಲ್ಲಿ `ಮೈ ಯಾರ್ ಮನಾನಾ ನಿ’ ಹಾಡಿನ ವಿಡಿಯೋವನ್ನು ಅಪ್ಲೋಡ್ ಮಾಡಿಕೊಂಡಿದೆ. ವಿಡಿಯೋದಲ್ಲಿ ವಾಣಿ ಕಪೂರ್ ತಮ್ಮ ಹಾಟ್ ಡ್ಯಾನ್ಸ್ ಮೂವ್ ಗಳಿಂದ ಪಡ್ಡೆ ಹುಡಗರು ನಿದ್ದೆ ಕೆಡುವಂತೆ ಮಾಡಿದ್ದಾರೆ. ‘ಮೈ ಯಾರ್ ಮನಾನಾ ನಿ’ ಹಾಡು ಗಾಯಕಿ ಯಶಿತಾ ಶರ್ಮಾ ಅವರ ಕಂಠಸಿರಿಯಲ್ಲಿ ಮೂಡಿ ಬಂದಿದೆ.

    ವಿಡಿಯೋದಲ್ಲಿ ವಾಣಿಯ ಡ್ಯಾನ್ಸ್ ನೋಡಿದಾಗ ಧೂಮ್-3 ಸಿನಿಮಾದಲ್ಲಿಯ ಕತ್ರಿನಾ ಕೈಫ್ ಹೆಜ್ಜೆ ಹಾಕಿದ್ದ `ಕಮಲಿ ಕಮಲಿ’ ಸಾಂಗ್ ನೆನಪಾಗುತ್ತದೆ. ಕಮಲಿಯಾಗಿ ಕಾಣಿಸಿಕೊಂಡಿದ್ದ ಕತ್ರಿನಾ ಸಹ ಅಷ್ಟೇ ಗ್ರೇಸ್ ಫುಲ್ ಆಗಿ ತಮ್ಮ ಮಾದಕತೆಯ ಡ್ಯಾನ್ಸ್ ನಿಂದ ಅಭಿಮಾನಿಗಳನ್ನು ರಂಜಿಸಿದ್ದರು. ಈಗ ಅದೇ ಹಾದಿಯಲ್ಲಿ ವಾಣಿ ಕಪೂರ್ ಡ್ಯಾನ್ಸ್ ಮಾಡುವ ಮೂಲಕ ತಾವು ನಟಿ ಹಾಗು ಒಳ್ಳೆಯ ಡ್ಯಾನ್ಸರ್ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.

    ಸನ್ನಿ ವರ್ಸ್‍ಸ್ ವಾಣಿ: ಜಿಸ್ಮ್-2 ಸಿನಿಮಾದ ಮೂಲಕ ಬಾಲಿವುಡ್ ಗೆ ಎಂಟ್ರಿ ನೀಡಿದಾಗಿನಿಂದಲೂ ಸನ್ನಿ ಐಟಂ ಹಾಡುಗಳಿಗಾಗಿ ಅತಿ ಹೆಚ್ಚು ಬೇಡಿಕೆಯನ್ನು ಹೊಂದಿದ್ದಾರೆ. ಬೇಬಿ ಡೋಲ್, ಪಿಂಕ್ ಲಿಪ್ಸ್, ಲೈಲಾ, ಟ್ರಿಪ್ಪಿ ಟ್ರಪ್ಪಿ ಮುಂತಾದ ಹಾಡುಗಳಿಂದ ಸನ್ನಿ ಲಿಯೋನ್ ತಮ್ಮದೇ ಅಭಿಮಾನಿಗಳನ್ನು ಹೊಂದಿದ್ದಾರೆ. ಇತ್ತ `ಶುದ್ಧ ದೇಸಿ ರೋಮ್ಯಾನ್ಸ್` ಚಿತ್ರದ ಮೂಲಕ ತಮ್ಮ ಸಿನಿ ಜರ್ನಿ ಆರಂಭಿಸಿದ ವಾಣಿ ಸಹ ತಮ್ಮ ನಟನೆ ಮತ್ತು ಡ್ಯಾನ್ಸ್ ಮೂಲಕ ಗುರುತಿಸಿಕೊಂಡಿದ್ದಾರೆ. ಬೇಫಿಕ್ರೆ ಸಿನಿಮಾದಲ್ಲಿ ಸಿಕ್ಕಾಪಟ್ಟೆ ಬೋಲ್ಡ್ ಆಗಿ ಕಾಣಿಸಿದ್ದ ವಾಣಿ ಈಗ ಮತ್ತೊಮ್ಮೆ ಹಾಟ್ ಆಗಿ ಮಿಂಚುತ್ತಿದ್ದಾರೆ.

     

    ಯಶ್ ರಾಜ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಸಿನಿಮಾದಲ್ಲಿ ಹೃತಿಕ್ ರೋಶನ್ ಮತ್ತು ಟೈಗರ್ ಶ್ರಾಫ್ ರೊಂದಿಗೆ ವಾಣಿ ಬಣ್ಣ ಹಚ್ಚಲಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಸನ್ನಿ ಲಿಯೋನ್ ಬಾಲಿವುಡ್ ನ ಹಾಟ್ ಬೆಡಗಿ ಎಂದು ಕರೆಸಿಕೊಳ್ಳುತ್ತಿದ್ದಾರೆ. ಆದರೆ ಈ ಪಟ್ಟವನ್ನು ವಾಣಿ ಕಪೂರ್ ಕದಿಯಲಿದ್ದಾರೆ ಎಂದು ಬಾಲಿವುಡ್ ಅಂಗಳದಲ್ಲಿ ಸುದ್ದಿಯೊಂದು ಹರಿದಾಡುತ್ತಿದೆ.

  • ಹೃತಿಕ್ ಜೊತೆ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ ‘ಬೇಫಿಕ್ರೆ’ ನಟಿ!

    ಹೃತಿಕ್ ಜೊತೆ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ ‘ಬೇಫಿಕ್ರೆ’ ನಟಿ!

    ಮುಂಬೈ: ಹೃತಿಕ್ ರೋಶನ್ ಹಾಗೂ ಟೈಗರ್ ಶ್ರಾಫ್ ಜೊತೆಯಲ್ಲಿ ನಟಿಸುತ್ತಿದ್ದಾರೆ. ಆದರೆ ಈ ಚಿತ್ರಕ್ಕೆ ಹೃತಿಕ್ ಗೆ ನಾಯಕಿಯಾಗಿ ಬೇಫಿಕ್ರೆ ನಟಿ ವಾಣಿ ಕಪೂರ್ ಕಾಣಿಸಿಕೊಳ್ಳಲಿದ್ದಾರೆ.

    ಈ ಚಿತ್ರದಲ್ಲಿ ಹೃತಿಕ್ ಹಾಗೂ ಟೈಗರ್ ಜೊತೆಯಾಗಿ ನಟಿಸಲಿದ್ದು, ಆದರೆ ಈ ಚಿತ್ರದಲ್ಲಿ ಒಬ್ಬರೆ ನಾಯಕಿ ಕಾಣಿಸಿಕೊಳ್ಳಲಿದ್ದಾರೆ. ಹೃತಿಕ್ ಗೆ ಜೋಡಿಯಾಗಿ ವಾಣಿ ಕಪೂರ್ ಜೊತೆಯಾಗಲಿದ್ದಾರೆ. ಈ ಚಿತ್ರಕ್ಕಾಗಿ ಹೊಸ ಹಾಗೂ ಯುವ ನಟಿಯರನ್ನು ಹುಡುಕುತ್ತಿದ್ದೆ. ಆಗ ನೆನಪಾಗಿದ್ದು ವಾಣಿ ಕಪೂರ್ ಎಂದು ಚಿತ್ರದ ನಿರ್ದೇಶಕ ಸಿದ್ಧಾರ್ಥ್ ಆನಂದ್ ತಿಳಿಸಿದ್ದಾರೆ.

    ವಾಣಿ ನಟಿಸಿದ ಎರಡೂ ಸಿನಿಮಾಗಳನ್ನು ನಾನು ಇಷ್ಟಪಟ್ಟಿದ್ದೇನೆ. ಅವರು ನಟನೆ ಜೊತೆ ಅತ್ಯುತ್ತಮ ಡ್ಯಾನ್ಸರ್ ಸಹ ಆಗಿದ್ದಾರೆ. ಅವರನ್ನು ಭೇಟಿ ಮಾಡಿ ಅವರ ಜೊತೆ ಮಾತನಾಡಿದ ನಂತರ ಅವರೇ ಈ ಸಿನಿಮಾಗೆ ಉತ್ತಮ ನಾಯಕಿಯೆಂದು ನಿರ್ಧರಿಸಿದೆ ಎಂದು ಸಿದ್ಧಾರ್ಥ್ ತಿಳಿಸಿದ್ದಾರೆ.

    ಇದನ್ನೂ ಓದಿ: 30 ಕೋಟಿಗೂ ಅಧಿಕ ಬಾರಿ ವೀಕ್ಷಣೆಗೊಳಗಾದ ಮೊದಲ ಬಾಲಿವುಡ್ ಹಾಡು

    ಈ ಚಿತ್ರಕ್ಕೆ ಇನ್ನೂ ಯಾವುದೇ ಹೆಸರನ್ನು ಚಿತ್ರತಂಡ ಸೂಚಿಸಿಲ್ಲ. 2019ರ ಜನವರಿ 25 ರಂದು ಈ ಚಿತ್ರವನ್ನು ಬಿಡುಗಡೆ ಮಾಡಲು ಚಿತ್ರತಂಡ ಮುಂದಾಗಿದೆ. ವಾಣಿ ಕಪೂರ್ ಈ ಹಿಂದೆ ಶುದ್ಧ ದೇಸಿ ರೋಮ್ಯಾನ್ಸ್ ಮತ್ತು ಬೇಫಿಕ್ರೆ ಸಿನಿಮಾಗಳಲ್ಲಿ ನಟಿಸಿದ್ದರು.