Tag: V.Somanna

  • ಯಾರೋ ಮಾಟ ಮಾಡಿಸಿದ್ರೇನೋ, ನಾನೇ ಹೋಗಿ ನಾಲ್ಕೂವರೆ ಅಡಿ ಗುಂಡಿಗೆ ಬಿದ್ದೆ: ಸೋಮಣ್ಣ ಬೇಸರ

    ಯಾರೋ ಮಾಟ ಮಾಡಿಸಿದ್ರೇನೋ, ನಾನೇ ಹೋಗಿ ನಾಲ್ಕೂವರೆ ಅಡಿ ಗುಂಡಿಗೆ ಬಿದ್ದೆ: ಸೋಮಣ್ಣ ಬೇಸರ

    – ಜನವರಿ 9ಕ್ಕೆ ದೆಹಲಿಯಲ್ಲಿ ವರಿಷ್ಠರನ್ನ ಭೇಟಿ ಮಾಡ್ತೇನೆ
    – ನನಗೆ ಆದ ಅನ್ಯಾಯ ಬೇರೆ ಯಾರಿಗೂ ಆಗಬಾರದು
    – ಅನ್ಯಾಯ ಸರಿಪಡಿಸುವಂತೆ ಹೈಕಮಾಂಡ್‌ಗೆ ಕೇಳ್ತೀನಿ ಎಂದ ಸೋಮಣ್ಣ

    ಬೆಂಗಳೂರು: ಯಾರೋ ನನಗೆ ಮಾಟ ಮಾಡಿಸಿದ್ರೇನೋ, ನಾನೇ ಹೋಗಿ ನಾಲ್ಕೂವರೆ ಅಡಿ ಗುಂಡಿಗೆ ಬಿದ್ದೆ. ನನಗೆ ಆದ ಅನ್ಯಾಯ ಯಾರಿಗೂ ಆಗಬಾರದು ಎಂದು ಬಿಜೆಪಿ ಮಾಜಿ ಸಚಿವ ವಿ.ಸೋಮಣ್ಣ (V Somanna) ಸ್ವಪಕ್ಷೀಯರ ವಿರುದ್ಧ ಮತ್ತೆ ಬೇಸರ ಹೊರಹಾಕಿದ್ದಾರೆ.

    ಬೆಂಗಳೂರಿನಲ್ಲಿಂದು (Bengaluru) ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನನಗೆ ಅನ್ಯಾಯ ಆಗಿದೆ, ನಾನೇ ಹೋಗಿ ನಾಲ್ಕೂವರೆ ಅಡಿ ಗುಂಡಿಗೆ ಬಿದ್ದೆ. ಗೋವಿಂದರಾಜನಗರ ಕ್ಷೇತ್ರ ಬಿಡಬಾರದಿತ್ತು. ಆಗ ಯಾರಾದ್ರು ನನಗೆ ಮಾಟ ಮಂತ್ರ ಮಾಡಿಸಿದ್ದರೇನೋ, ಕ್ಷೇತ್ರ ಬಿಟ್ಟೆ. ನನಗೆ ಆದ ಅನ್ಯಾಯ ಯಾರಿಗೂ ಆಗಬಾರದು. ಜನವರಿ 9ಕ್ಕೆ ದೆಹಲಿಯಲ್ಲಿ (New Delhi) ವರಿಷ್ಠರ ಭೇಟಿ ಆಗುತ್ತೇನೆ, ನನಗೆ ಆದ ಅನ್ಯಾಯವನ್ನ ವರಿಷ್ಠರ ಬಳಿ ಹೇಳುತ್ತೇನೆ. ನರೇಂದ್ರ ಮೋದಿ (Narendra Modi) ಮತ್ತೊಮ್ಮೆ ಪ್ರಧಾನಿ ಆಗಬೇಕು ಎಂದು ಹೇಳಿದ್ದಾರೆ.

    ನನಗೆ ನೇರವಾಗಿ ತೊಂದರೆ ಆಗಿದೆ. ಯಾರು ಕಾರಣವೋ ಅವರನ್ನ ಕೂರಿಸಿ ಮಾತುಕತೆ ನಡೆಸಲಿ. ಇದನ್ನ ಸರಿಪಡಿಸಿ ಎಂದು ಹೈಕಮಾಂಡ್ ನಾಯಕರ ಬಳಿ ಕೇಳಿದ್ದೇನೆ. ಯಾರಿಂದ ತೊಂದರೆ ಆಗಿದೆಯೋ ಅವರನ್ನ ಕರೆಸಿ ಸೂಚನೆ ಕೊಡಿಸಬೇಕು. ಬಹುಶಃ ಜನವರಿ 10ರ ಒಳಗೆ ಎಲ್ಲವೂ ಬಗೆಹರಿಯಲಿದೆ ಎಂಬ ವಿಶ್ವಾಸ ಇದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಫ್ರೀ ಬಸ್‌ ಹತ್ತಿ 33 ಗಂಟೆ ಸುತ್ತಾಟ – ಹಿಡಿದು ಪೋಷಕರಿಗೊಪ್ಪಿಸಿದ ಪೊಲೀಸರು!

    ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ವಿಚಾರಕ್ಕೆ ಪ್ರತಿಕ್ರಿಯಿಸಿದ ವಿ.ಸೋಮಣ್ಣ, ರಾಷ್ಟ್ರೀಯ ವರಿಷ್ಠರ ಮಾತಿಗೆ ಬದ್ಧನಿದ್ದೇನೆ. ಒಟ್ಟಿನಲ್ಲಿ ನಮ್ಮ ಮೇಲೆ ಗದಾಪ್ರಹಾರ ಆಗದಂತೆ ಎಲ್ಲರಿಗೂ ಕಟ್ಟುನಿಟ್ಟಿನ ಸೂಚನೆ ಆಗಬೇಕು ಎಂದು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಬೆಳಗ್ಗೆ ಹೆರಿಗೆಯಾಗಿದ್ದ ಬಾಣಂತಿ ರಾತ್ರಿ ಹೊಟ್ಟೆನೋವಿನಿಂದ ನರಳಿ ಸಾವು; ವೈದ್ಯರ ನಿರ್ಲಕ್ಷ್ಯ ಆರೋಪ

    500 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ರಾಮಮಂದಿರ ಯೋಜನೆ ಸಾಕಾರವಾಗಿದೆ. ಈಗಷ್ಟೇ ಅಯೋಧ್ಯೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟಿಸಿದ್ದಾರೆ. ರಾಮಜನ್ಮಭೂಮಿ ಅನ್ನೋದು ಕೇವಲ ಹೇಳುವಂತದ್ದಲ್ಲ, ಮೋದಿ ಬರ್ತಾರೆ, ರಾಮಮಂದಿರ ಮಾಡ್ತಾರೆ ಅಂತಾ ಯಾರೂ ಅಂದುಕೊಂಡಿರಲಿಲ್ಲ. ಇದರಿಂದ ಭಾರತಕ್ಕೆ ಭವಿಷ್ಯ ಇದೆ. ರಾಮಮಂದಿರ ವಿರೋಧಿಸಿ ಅರ್ಜಿ ಕೊಟ್ಟವರೇ ಇವತ್ತು ರಾಮಮಂದಿರ ಉದ್ಘಾಟನೆಗೆ ಬರ್ತಿದ್ದಾರೆ ಎಂದು ಪರೋಕ್ಷವಾಗಿ ಕಾಂಗ್ರೆಸ್‌ಗೆ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಪತ್ನಿ ಮಾಡ್ರನ್‌ ಡ್ರೆಸ್‌ ಧರಿಸುತ್ತಿದ್ದಕ್ಕೆ ಕೆಂಡವಾದ ಪತಿ – ಕತ್ತು ಕೊಯ್ದು ಬರ್ಬರವಾಗಿ ಹತ್ಯೆ

  • ವಿಜಯೇಂದ್ರರನ್ನು ಸೋಲಿಸಲು ಸ್ವಪಕ್ಷದವರೇ ಷಡ್ಯಂತ್ರ ಮಾಡಿದ್ರು: ರೇಣುಕಾಚಾರ್ಯ

    ವಿಜಯೇಂದ್ರರನ್ನು ಸೋಲಿಸಲು ಸ್ವಪಕ್ಷದವರೇ ಷಡ್ಯಂತ್ರ ಮಾಡಿದ್ರು: ರೇಣುಕಾಚಾರ್ಯ

    ತುಮಕೂರು: ಶಿಕಾರಿಪುರ ಕ್ಷೇತ್ರದಲ್ಲಿ ಬಿವೈ ವಿಜಯೇಂದ್ರರನ್ನು (BY Vijayendra) ಸೋಲಿಸಲು ಸ್ವಪಕ್ಷದವರೇ ಷಡ್ಯಂತ್ರ ನಡೆಸಿದರು. ಆದರೆ ಶಿಕಾರಿಪುರದ (Shikaripura) ಜನರು ಆಶೀರ್ವಾದ ಮಾಡಿ ವಿಜಯೇಂದ್ರರನ್ನು ಗೆಲ್ಲಿಸಿದ್ದಾರೆ ಎಂದು ಮಾಜಿ ಸಚಿವ ರೇಣುಕಾಚಾರ್ಯ (MP Renukacharya) ಹೊಸ ಬಾಂಬ್ ಸಿಡಿಸಿದ್ದಾರೆ.

    ತುಮಕೂರಿನಲ್ಲಿ (Tumakuru) ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವಿ ಸೋಮಣ್ಣರ (V Somanna) ಸೋಲಿಗೆ ಹಾಗೂ ಪಕ್ಷದ ಸೋಲಿಗೆ ಯಡಿಯೂರಪ್ಪ ಆಗಲಿ ಅಥವಾ ವಿಜಯೇಂದ್ರ ಆಗಲಿ ಕಾರಣರಲ್ಲ. ಯಡಿಯೂರಪ್ಪರನ್ನು ಕೆಳಗಿಳಿಸಿದ್ದು ಕಾರಣ. ಯತ್ನಾಳರ ಆರೋಪಗಳು ಸತ್ಯಕ್ಕೆ ದೂರವಾದದ್ದು ಎಂದು ಖಂಡಿಸಿದರು. ಇದನ್ನೂ ಓದಿ: ಲೋಕಸಭೆಯಲ್ಲಿ ಸ್ಮೋಕ್ ಬಾಂಬ್- ಸಂಸತ್ತಿನ ಹೊರಗಡೆ ಪ್ರತಿಭಟಿಸುತ್ತಿದ್ದ ಇಬ್ಬರ ಬಂಧನ

    ಸೋಮಣ್ಣರ ಸೋಲಿಗೆ ಯಾರೂ ಪ್ರಯತ್ನ ಪಟ್ಟಿಲ್ಲ. ಬದಲಾಗಿ ವಿಜಯೇಂದ್ರ ದೊಡ್ಡ ನಾಯಕನಾಗಿ ಬೆಳೆಯುತ್ತಾರೆ ಎಂದು ಅವರನ್ನು ಸೋಲಿಸಲು ಸ್ವಪಕ್ಷದವರೇ ಪ್ರಯತ್ನಪಟ್ಟಿದ್ದರು. ಮುಂದಿನ ದಿನದಲ್ಲಿ ಅವರ ಹೆಸರನ್ನು ಬಹಿರಂಗಪಡಿಸುತ್ತೇನೆ. ಗೋವಿಂದರಾಜ ನಗರದಲ್ಲಿ ಫಲಿತಾಂಶ ತದ್ವಿರುದ್ಧ ಆಗುತ್ತದೆ ಎಂದು ವಿ ಸೋಮಣ್ಣರಿಗೆ ಮೊದಲೇ ಗೊತ್ತಿತ್ತು. ಹಾಗಾಗಿ ಸಿಎಂ ಆಗುವ ಹಗಲುಕನಸು ಕಂಡು ಮೈಸೂರಿಗೆ ಶಿಫ್ಟ್ ಆದರು ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಸರ್ಕಾರಿ ಜಮೀನು ರಕ್ಷಣೆಗೆ ಬೀಟ್ ಆ್ಯಪ್ ವ್ಯವಸ್ಥೆ ಜಾರಿ: ಕೃಷ್ಣಭೈರೇಗೌಡ

  • ಯತ್ನಾಳ್ ಒಬ್ಬರು ಸುಸಂಸ್ಕೃತ ರಾಜಕಾರಣಿ: ವಿ ಸೋಮಣ್ಣ

    ಯತ್ನಾಳ್ ಒಬ್ಬರು ಸುಸಂಸ್ಕೃತ ರಾಜಕಾರಣಿ: ವಿ ಸೋಮಣ್ಣ

    ತುಮಕೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪರ (B S Yediyurappa) ವಿರುದ್ಧ ವಾಗ್ದಾಳಿ ನಡೆಸಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪರ ಮಾಜಿ ಸಚಿವ ವಿ.ಸೋಮಣ್ಣ (V Somanna) ಬ್ಯಾಟ್ ಬೀಸಿದ್ದಾರೆ.

    ತುಮಕೂರಿನಲ್ಲಿ ಮಾತನಾಡಿದ ಅವರು, ಯತ್ನಾಳ್ ಒಬ್ಬರು ಸುಸಂಸ್ಕೃತ ರಾಜಕಾರಣಿ, ನನ್ನ ನೋವು ನನಗೆ ಗೊತ್ತು, ಅವರ ನೋವು ಅವರಿಗೆ ಗೊತ್ತು ಹಾಗಾಗಿ ಅವರು ಮಾತನಾಡಿರಬಹುದು ಎಂದು ಪ್ರತಿಕ್ರಿಯಿಸಿದ್ದಾರೆ.

    ಯಡಿಯೂರಪ್ಪ ಹಿರಿಯ ನಾಯಕರಾಗಿದ್ದು, ಅವರಿಗೆ ಯತ್ನಾಳ್ (Basangouda Patil Yatnal) ಹೀಗೆ ಹೇಳಬಹುದೇ ಎಂಬ ಪ್ರಶ್ನೆಗೆ ಉತ್ತರಿಸಿದ ಸೋಮಣ್ಣ, ಹಿರಿತನ ಅನ್ನೋದು ನಡತೆಯಲ್ಲಿ ಇರಬೇಕು. ನಾನು 40 ವರ್ಷ ರಾಜಕಾರಣ ಮಾಡಿದರೂ ಯಾರೂ ಬೊಟ್ಟು ಮಾಡಿ ತೋರಿಸುವ ಹಾಗೆ ಮಾಡಿಕೊಂಡಿಲ್ಲ ಎಂದು ಪರೋಕ್ಷವಾಗಿ ಯಡಿಯೂರಪ್ಪನವರಿಗೆ ಕಟುಕಿದ್ದಾರೆ.

    ಇದೇ ವೇಳೆ ದೆಹಲಿಯಿಂದ ನನಗೆ ಕರೆ ಬಂದಿದ್ದು, ಎರಡು ಮೂರು ದಿನದಲ್ಲಿ ದೆಹಲಿಗೆ ಹೋಗುತ್ತೇನೆ. ನಮ್ಮ ನೋವು ಹೇಳಿಬರುತ್ತೇನೆ ಎಂದು ಸೋಮಣ್ಣ ಹೇಳಿದ್ದಾರೆ. ಇದನ್ನೂ ಓದಿ: ಶಾಸಕರ ಆದಾಯ ಕೋಟಿ ಕೋಟಿ ಹೆಚ್ಚಾದ್ರೂ ಕನಕಪುರ ಅಭಿವೃದ್ಧಿಯಾಗಿಲ್ಲ: ಪರೋಕ್ಷವಾಗಿ ಡಿಕೆಶಿ ತಿವಿದ ಯತ್ನಾಳ್‌

  • ನಾನು ಮಾಡಿದ ತೀರ್ಮಾನ ನನ್ನ ಮುಖದ ಮೇಲೆ ನಾನೇ ಉಗುಳಿಕೊಂಡಂತಾಗಿದೆ: ಸೋಮಣ್ಣ

    ನಾನು ಮಾಡಿದ ತೀರ್ಮಾನ ನನ್ನ ಮುಖದ ಮೇಲೆ ನಾನೇ ಉಗುಳಿಕೊಂಡಂತಾಗಿದೆ: ಸೋಮಣ್ಣ

    ತುಮಕೂರು: ಕೆಲ ಸಂದರ್ಭದಲ್ಲಿ ನನ್ನ ದುರಹಂಕಾರದಿಂದ ನನಗೆ ತೊಂದರೆ ಆಗಿದೆ. ಕೆಲ ವೇಳೆ ನಾನು ಮಾಡಿದ ತೀರ್ಮಾನ ನನಗೆ ತೊಂದರೆ ಕೊಟ್ಟಿದೆ. ನಾನು ಮಾಡಿದ ತೀರ್ಮಾನ ನನ್ನ ಮುಖದ ಮೇಲೆ ನಾನೇ ಉಗುಳಿಕೊಂಡಂತೆ ಆಗಿದೆ. ಅದನ್ನು ಒರೆಸಿಕೊಂಡು ಏನು ಮಾಡಬೇಕೋ ಅದನ್ನು ಮಾಡುತ್ತೇನೆ ಎಂದು ಮಾಜಿ ಸಚಿವ ವಿ ಸೋಮಣ್ಣ (V Somanna) ಹೇಳಿಕೆ ನೀಡಿದ್ದಾರೆ.

    ಗುರುಭವನ ಲೋಕಾರ್ಪಣೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನನ್ನ ನಡವಳಿಕೆ ಬೇರೆಯವರಿಗೆ ಹೋಲಿಸಬೇಡಿ. ನಾನು ಒಂದಕ್ಕೆ ಅಂಟಿಕೊಂಡವನಲ್ಲ. ನನ್ನ ಅರ್ಹತೆ ಪಕ್ಷ ಗುರುತಿಸಿದ್ಯೋ ಇಲ್ಲವೋ ಎನ್ನುವುದನ್ನು ಈಗ ಮಾತನಾಡಲ್ಲ. ಆದರೆ ಒಂದಂತು ಸತ್ಯ. ಅರ್ಹತೆಗೆ ಈ ರೀತಿಯ ಮಾನದಂಡ ಆಗಬಾರದು. ಅರ್ಹತೆ ಅವಕಾಶ ವಂಚಿತ ಆಗಬಾರದು ಎಂದರು. ಇದನ್ನೂ ಓದಿ: ಕಲಾಪಕ್ಕೆ ಬಾರದ ಸಚಿವ ಜಮೀರ್ – ಪರಿಷತ್‌ನಲ್ಲಿ ಗದ್ದಲ

    ಅರ್ಹತೆ ಯಾರ ಮನೆಯ ಸ್ವತ್ತಲ್ಲ. ಅರ್ಹತೆ ಇಲ್ಲದವರು ಹೇಗೆ ಬೇಕಾದರೂ ನಡೆದುಕೊಳ್ಳಬಾರದು ಎಂಬುದನ್ನು ಅವರು ಕೂಡಾ ಯೋಚನೆ ಮಾಡಬೇಕು. ಹೈಕಮಾಂಡ್‌ನವರು ಇದನ್ನು ಸರಿಪಡಿಸುವ ಚಿಂತನೆ ಮಾಡುತ್ತಾರೋ ಏನೋ ಗೊತ್ತಿಲ್ಲ. ನಾನು ತೆರೆದ ಪುಸ್ತಕ, ಓಡಿ ಹೋಗುವವನಲ್ಲ. ಅನಾವಶ್ಯಕವಾಗಿ ನನ್ನನ್ನು ಸಣ್ಣಪುಟ್ಟವರ ಜೊತೆ ಹೋಲಿಕೆ ಮಾಡಬೇಡಿ ಎಂದು ಹೇಳಿದರು. ಇದನ್ನೂ ಓದಿ: ನನಗಾದ ನೋವು ಹೇಳಿದ್ದೇನೆ, RSS ಬಗ್ಗೆ ಗೌರವವಿದೆ: ಗೂಳಿಹಟ್ಟಿ ಶೇಖರ್ ಸ್ಪಷ್ಟನೆ

    ಪರಮೇಶ್ವರ್ (G Parameshwar) ಅವರು ನಾನು ಚೆನ್ನಾಗಿರಲಿ ಎಂದು ಅಭಯ ಕೊಟ್ಟಿದ್ದಾರೆ. ಅದು ಅವರ ದೊಡ್ಡತನ. ನೀವು ಯಾಕೆ ಅದನ್ನು ನೆಗೆಟಿವ್ ಆಗಿ ಯೋಚನೆ ಮಾಡುತ್ತೀರಿ? ನನ್ನ ಅವರ ಪ್ರೀತಿ ವಿಶ್ವಾಸಕ್ಕೆ ಅವರು ಹಾಗೆ ಹೇಳಿದ್ದಾರೆ ಎಂದರು. ಇದನ್ನೂ ಓದಿ: ರೈತರಿಗೆ ಮಧ್ಯಂತರ ಬರ ಪರಿಹಾರವಾಗಿ 2,000 ರೂ. ಪರಿಹಾರ ನೀಡಲಾಗಿದೆ: ಕೃಷ್ಣಭೈರೇಗೌಡ

  • ತುಮಕೂರಲ್ಲಿಂದು ವಿ. ಸೋಮಣ್ಣ ಶಕ್ತಿಪ್ರದರ್ಶನ- ಕಾಂಗ್ರೆಸ್ ಸೇರುತ್ತಾರಾ ಮಾಜಿ ಸಚಿವ?

    ತುಮಕೂರಲ್ಲಿಂದು ವಿ. ಸೋಮಣ್ಣ ಶಕ್ತಿಪ್ರದರ್ಶನ- ಕಾಂಗ್ರೆಸ್ ಸೇರುತ್ತಾರಾ ಮಾಜಿ ಸಚಿವ?

    ತುಮಕೂರು: ಸಿದ್ದಗಂಗಾ ಮಠದಲ್ಲಿ ವಿ.ಸೋಮಣ್ಣ ಪ್ರತಿಷ್ಠಾನದಿಂದ ನಿರ್ಮಾಣಗೊಂಡ ಗುರುಭವನ ಇಂದು ಲೋಕಾರ್ಪಣೆಗೊಳ್ಳಲಿದೆ. ಈಗಾಗಲೇ ರಾಜ್ಯ ಬಿಜೆಪಿ ನಾಯಕತ್ವದ ವಿರುದ್ಧ ತೊಡೆತಟ್ಟಿರುವ ವಿ.ಸೋಮಣ್ಣ ಈ ಕಾರ್ಯಕ್ರಮದ ಮೂಲಕ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರಾ ಎಂಬ ಕುತೂಹಲ ಹುಟ್ಟಿದೆ. ಗೃಹ ಸಚಿವ ಜಿ.ಪರಮೇಶ್ವರ್, ಕೆ.ಎನ್. ರಾಜಣ್ಣ ಉಪಸ್ಥಿತರಿರುವ ಈ ವೇದಿಕೆಯಲ್ಲಿ ಸೋಮಣ್ಣ ಕಾಂಗ್ರೆಸ್ ಸೇರುವ ಇಂಗಿತ ವ್ಯಕ್ತಪಡಿಸುತ್ತಾರಾ ಎಂಬ ಗುಸುಗುಸು ಚರ್ಚೆ ಶುರುವಾಗಿದೆ.

    ಸಿದ್ದಗಂಗಾ ಮಠದಲ್ಲಿ (Siddaganga Mutt) ಯತಿವರ್ಯರ ವಾಸ್ತವ್ಯ ಹಾಗೂ ಪೂಜಾ ಕೈಂಕರ್ಯಕ್ಕೆ ಅನುಕೂಲ ಆಗುವ ಉದ್ದೇಶದಿಂದ ವಿ.ಸೋಮಣ್ಣ ಪ್ರತಿಷ್ಠಾನದಿಂದ ಗುರುಭವನ ನಿರ್ಮಾಣಗೊಂಡಿದೆ. ಇಂದು ಬೆಳಗ್ಗೆ ಗುರುಭವನ ಲೋಕಾರ್ಪಣೆಯಾಗಲಿದೆ. ಈ ನೆಪದಲ್ಲಿ ವಿ.ಸೋಮಣ್ಣ (V Somanna) ಬಿಜೆಪಿ ನಾಯಕರಿಗೆ ಟಕ್ಕರ್ ಕೊಡಲು ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ.

    ಈಗಾಗಲೇ ರಾಜ್ಯ ಬಿಜೆಪಿ (BJP) ನಾಯಕತ್ವದ ವಿರುದ್ಧ ತೊಡೆ ತಟ್ಟಿರುವ ವಿ.ಸೋಮಣ್ಣ ಕಾಂಗ್ರೆಸ್ ನಾಯಕರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿ ಕೈ ಪಕ್ಷದ ಸಖ್ಯ ಬೆಳೆಸಲು ಮುಂದಾದ್ರಾ ಎಂಬ ಪ್ರಶ್ನೆ ಎದ್ದಿದೆ. ಇದು ಖಾಸಗಿ ಕಾರ್ಯಕ್ರಮ ಆದರೂ ಹಠಕ್ಕೆ ಬಿದ್ದ ಸೋಮಣ್ಣ ಅವರು ಜಿ.ಪರಮೇಶ್ವರ್ (G Parameshwar), ಕೆ.ಎನ್. ರಾಜಣ್ಣರನ್ನು (KN Rajanna) ಆಹ್ವಾನಿಸಿದ್ದಾರೆ. ಅಧಿವೇಶನ ಇದ್ದರೂ ಈ ಸಚಿವದ್ವಯರು ಈ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿರುವುದು ಕುತೂಹಲ ಹುಟ್ಟಿಸಿದೆ. ಇದನ್ನೂ ಓದಿ: ಹೆಬ್ಬಾಳ್ಕರ್ ಜೊತೆಗಿನ ಹಣಕಾಸು ವಿಚಾರ ಬಹಿರಂಗಗೊಳಿಸ್ತಾರಾ ರಮೇಶ್ ಜಾರಕಿಹೊಳಿ?

    ಕಳೆದ ಬಾರಿ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ್ದ ವಿ.ಸೋಮಣ್ಣ ಅವರು ಶ್ರೀಗಳ ಎದುರಲ್ಲಿ ಬಿಜೆಪಿ ವಿರುದ್ಧ ಅಸಮಾಧಾನ ಹೊರಹಾಕಿದ್ದರು. ಅಲ್ಲದೇ ವಿ.ಸೋಮಣ್ಣ ಕಾಂಗ್ರೆಸ್ (Congress) ಸೇರುತ್ತಾರೆ ಎಂಬ ಪಿಸುಮಾತು ರಾಜಕೀಯ ಪಡಸಾಲೆಯಲ್ಲಿ ಕೇಳಿಬಂದಿತ್ತು. ಅದಕ್ಕೆ ಪುಷ್ಠಿ ನೀಡುವಂತೆ ಕಾರ್ಯಕ್ರಮದ ನೆಪದಲ್ಲಿ ಕಾಂಗ್ರೆಸ್ ನಾಯಕರ ಜೊತೆ ವೇದಿಕೆ ಹಂಚಿಕೊಂಡು ಪಕ್ಷ ಸೇರುವ ನಿರ್ಧಾರ ಸೂಚ್ಯವಾಗಿ ಪ್ರಕಟಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಆದರೆ ಇದನ್ನು ಸೋಮಣ್ಣ ಪುತ್ರ ಅರುಣ್ ತಳ್ಳಿ ಹಾಕಿದ್ದಾರೆ.

    ಸಿದ್ದಗಂಗಾ ಮಠ ಮಾಜಿ ಸಿಎಂ ಯಡಿಯೂರಪ್ಪರ ಒಂದು ರೀತಿಯ ರಾಜಕೀಯ ಶಕ್ತಿ ಕೇಂದ್ರ. ಬಿಎಸ್‍ವೈ ಕುಟುಂಬದ ವಿರುದ್ದ ಅಸಮಾಧಾನಗೊಂಡಿರುವ ವಿ.ಸೋಮಣ್ಣ ಇದೇ ಮಠದಿಂದ ತಮ್ಮ ಪಾಂಚಜನ್ಯ ಮೊಳಗಿಸಲು ಮುಂದಡಿ ಇಟ್ಟಂತಿದೆ.

  • ಕಾಂಗ್ರೆಸ್‍ಗೆ ಸೋಮಣ್ಣ ಎಂಟ್ರಿ ವದಂತಿ- ಎಚ್ಚರಿಕೆ ಕೊಟ್ಟ ಅಪ್ಪ, ಮಗ

    ಕಾಂಗ್ರೆಸ್‍ಗೆ ಸೋಮಣ್ಣ ಎಂಟ್ರಿ ವದಂತಿ- ಎಚ್ಚರಿಕೆ ಕೊಟ್ಟ ಅಪ್ಪ, ಮಗ

    ಬೆಂಗಳೂರು: ವಿ. ಸೋಮಣ್ಣ (V Somanna) ಅವರು ಕಾಂಗ್ರೆಸ್ ಎಂಟ್ರಿ ವದಂತಿ ಬೆನ್ನಲ್ಲೇ ಕಾಂಗ್ರೆಸ್‍ನಲ್ಲಿ ಚಟುವಟಿಕೆಗಳು ಗರಿಗೆದರಿವೆ.

    ಕಾಂಗ್ರೆಸ್ ನಾಯಕರಿಗೆ ಶಾಸಕರಾದ ಕೃಷ್ಣಪ್ಪ (Krishnappa) ಹಾಗೂ ಪ್ರಿಯಕೃಷ್ಣ (Priya Krishna) ಸಂದೇಶ ರವಾನೆ ಮಾಡಿದ್ದಾರೆ. ಬರುವುದಕ್ಕೆ ನಮ್ಮ ಸಮ್ಮತಿ ಇಲ್ಲ, ಬಂದರೆ ವಿರೋಧವೂ ಇಲ್ಲಾ. ಪಕ್ಷಕ್ಕೆ ಬರುವುದಾದರೆ ವಿಜಯನಗರಕ್ಕೂ, ಗೋವಿಂದರಾಜ ನಗರಕ್ಕೂ ಸೋಮಣ್ಣಗೂ ಕಾಂಗ್ರೆಸ್‍ನಲ್ಲಿ (Congress) ಸಂಬಂಧ ಇರಬಾರದು. ಇದನ್ನು ಮೀರಿದರೆ ನಮ್ಮ ನಿರ್ಧಾರ ಬೇರೆ ಇರುತ್ತದೆ ಎಂದು ಅಪ್ಪ-ಮಗ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

    ಸೋಮಣ್ಣ ಕಾಂಗ್ರೆಸ್ ಎಂಟ್ರಿ ವದಂತಿ ಬೆನ್ನಲ್ಲೆ ಕಾಂಗ್ರೆಸ್‍ನಲ್ಲಿ ಅಸಮಧಾನವೂ ವ್ಯಕ್ತವಾಗಿದೆ ಎನ್ನಲಾಗಿದೆ. ಸೋಮಣ್ಣ ಬರುವುದಕ್ಕೆ ನಮ್ಮ ಸಮ್ಮತಿ ಇಲ್ಲ. ಒಂದು ವೇಳೆ ಅವರು ಬಂದರೆ ವಿರೋಧವೂ ಇಲ್ಲ ಎಂದು ಹೇಳಿಕೆ ನಿಡಿವ ಮೂಲಕ ಕೈ ನಾಯಕರನ್ನೇ ಇಕ್ಕಟ್ಟಿಗೆ ಸಿಲುಕಿಸಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಬೆಂಗಳೂರು ಕಂಬಳದಲ್ಲಿ ಜೈ ತುಳುನಾಡು ಪುತ್ತೂರು ಬೊಟ್ಯಾಡಿ ಕಿಶೋರ್ ಭಂಡಾರಿ ಕೋಣಗಳು ಜಯ

    ನಮ್ಮ ಕ್ಷೇತ್ರಕ್ಕೂ ಅವರಿಗೂ ಯಾವುದೇ ಸಂಬಂಧ ಇರಬಾರದು. ಇದನ್ನ ಮೀರಿದ್ರೆ ನಮ್ಮ ನಿರ್ಧಾರ ಬೇರೆಯೇ ಇರುತ್ತದೆ ಎಂದು ಎಚ್ಚರಿಸಿದ್ದಾರೆ. ಒಟ್ಟಾರೆ ಸೋಮಣ್ಣ ಎಪಿಸೋಡ್ ರಾಜ್ಯ ಕಾಂಗ್ರೆಸ್‍ನಲ್ಲಿ ಹೊಸ ವಿವಾದವೊಂದನ್ನ ಹುಟ್ಟು ಹಾಕುವ ಎಲ್ಲಾ ಲಕ್ಷಣಗಳು ಕಾಣತೊಡಗಿವೆ.

  • ಸಿದ್ದಗಂಗಾ ಶ್ರೀಗಳ ಮುಂದೆ ಚುನಾವಣಾ ಸೋಲಿನ ನೋವು ತೋಡಿಕೊಂಡ ವಿ.ಸೋಮಣ್ಣ

    ಸಿದ್ದಗಂಗಾ ಶ್ರೀಗಳ ಮುಂದೆ ಚುನಾವಣಾ ಸೋಲಿನ ನೋವು ತೋಡಿಕೊಂಡ ವಿ.ಸೋಮಣ್ಣ

    ತುಮಕೂರು: ವಿಧಾನಸಭಾ ಚುನಾವಣೆಯಲ್ಲಿ ಸೋಲಿನ ಹತಾಶೆ, ಬಿಜೆಪಿ ರಾಜ್ಯಾಧ್ಯಕ್ಷ ಕೈತಪ್ಪಿದ್ದಕ್ಕೆ ಅಸಮಾಧಾನಗೊಂಡಿರುವ ಮಾಜಿ ಸಚಿವ ವಿ.ಸೋಮಣ್ಣ ಇಂದು (ಶನಿವಾರ) ಸಿದ್ದಗಂಗಾ ಮಠಕ್ಕೆ (Siddaganga Matt) ತೆರಳಿ ಶ್ರೀಗಳನ್ನು ಭೇಟಿಯಾದರು. ಶ್ರೀಗಳ ಮುಂದೆ ಸೋಮಣ್ಣ (V.Somanna) ಚುನಾವಣಾ ಸೋಲಿನ ನೋವು ತೋಡಿಕೊಂಡರು.

    ಶ್ರೀ ಶಿವಕುಮಾರ ಶ್ರೀಗಳ ಗದ್ದಿಗೆಗೆ ಸೋಮಣ್ಣ ಭೇಟಿ ನೀಡಿ, ಗದ್ದಿಗೆಗೆ ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ಸೋಮಣ್ಣ ಅವರಿಗೆ ಪತ್ನಿ ಶೈಲಜಾ, ತುಮಕೂರು ನಗರ ಶಾಸಕ ಜಿ.ಬಿ.ಜ್ಯೋತಿ ಗಣೇಶ್, ಬಿಜೆಪಿ ಜಿಲ್ಲಾಧ್ಯಕ್ಷ ರವಿಶಂಕರ್ ಹೆಬ್ಬಾಕ ಸೇರಿದಂತೆ ಹಲವು ನಾಯಕರು ಸಾಥ್ ನೀಡಿದರು. ಇದನ್ನೂ ಓದಿ: ಬೆಂಗಳೂರಿಗೆ ಮೋದಿ ಆಗಮನ

    ಬಳಿಕ ಸಿದ್ದಗಂಗಾ ಶ್ರೀಗಳನ್ನು ಭೇಟಿಯಾದ ವಿ.ಸೋಮಣ್ಣ, ಶ್ರೀಗಳ ಮುಂದೆ ವಿಧಾನಸಭಾ ಚುನಾವಣೆಯ ಸೋಲಿನ ನೋವು ತೋಡಿಕೊಂಡರು. ಸ್ಥಳೀಯ ಮುಖಂಡರೊಬ್ಬರು ಗೋವಿಂದರಾಜು ಕ್ಷೇತ್ರ ಬಿಟ್ಟು ಹೋಗಬಾರದಿತ್ತು ಎಂದು ಮಾತು ಆರಂಭಿಸಿದಾಗ ಶ್ರೀಗಳ ಎದುರು ಅಳಲು ತೋಡಿಕೊಂಡರು. ಹೌದು, ನಾನು ಮಾಡಿದ ಮಹಾ ಅಪರಾಧ ಅದು. ಅಮಿತ್ ಶಾ ಅವರು ಬಂದು ಎರಡೂವರೆ ಗಂಟೆ ಮನೆಯಲ್ಲಿ ಕುತ್ಕೊಂಡ್ ಬಿಟ್ರು. ಅವರೇ ನಿಂತುಕೊ ಅಂದ್ಮೇಲೆ ನಾನು ಏನ್ ಮಾಡಬೇಕು. ಏನ್ ಮಾಡಲಿ ಹೇಳಿ ಸ್ವಾಮೀಜಿ. ಆಗ ನಾನು ಇಲ್ಲಾ ಅಂತಾ ಹೇಳಿದೆ. ಪಿಎಂ ಮೋದಿ ದೆಹಲಿಗೆ ಕರೆಸಿದ್ರು. ನಾಲ್ಕು ದಿನ ಅಲ್ಲೇ ಇಟ್ಕೊಂಡ್ರು. ನೀನು ನಿಂತುಕೊ ಅಂತಾ ಹೇಳಿದಾಗ ಏನ್ ಮಾಡಬೇಕು ಎಂದು ಹತಾಷೆ ನುಡಿಗಳನ್ನಾಡಿದರು.

    ಮಠಕ್ಕೆ ಭೇಟಿ ಕುರಿತು ಮಾತನಾಡಿದ ಸೋಮಣ್ಣ, ನಾನು ಮಠದ ಭಕ್ತ. 44 ದಶಕಗಳ ಸಂಬAಧ ನನ್ನದು. ಡಿಸೆಂಬರ್ 6 ರಂದು ಗುರುಭವನ ಲೋಕಾರ್ಪಣೆ ಮಾಡುತ್ತೇವೆ. ಗುರುಭವನ ನಿರ್ಮಾಣ ಮಾಡುವ ಪುಣ್ಯ ಸಿಕ್ಕಿದೆ. 6 ರಂದು ನಡೆಯುವ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಈ ಭಾಗದ ಜನಪ್ರತಿನಿಧಿಗಳನ್ನು ಆಹ್ವಾನಿಸಿದ್ದೇನೆ. ಇಬ್ಬರು ಸಚಿವರು ಇರುತ್ತಾರೆ. ರಾಜಣ್ಣ, ಪರಮೇಶ್ವರ್ ಇರುತ್ತಾರೆ. ಅದಕ್ಕೆ ರಾಜಕೀಯ ಮಾಡೋವಷ್ಟು ಕೀಳುಮಟ್ಟ ನಾನು ಮಾಡಲ್ಲ. ಈ ಕಾರ್ಯಕ್ರಮಕ್ಕೆ ರಾಜಕೀಯ ಲೇಪನ ಬೇಡ ಎಂದು ತಿಳಿಸಿದರು. ಇದನ್ನೂ ಓದಿ: Kambala: ಇಂದಿನಿಂದ 2 ದಿನ ಬೆಂಗ್ಳೂರಿನಲ್ಲಿ ಕಂಬಳದ ರಂಗು – ಸಾರ್ವಜನಿಕರಿಗೆ ಪ್ರವೇಶ ಉಚಿತ

    ನಾನು ಡಿ.6 ನೇ ತಾರೀಖಿನ ನಂತರ 7, 8, 9, 10 ರೊಳಗೆ ದೆಹಲಿಗೆ ಹೋಗಿ ನಮ್ಮ ಭಾವನೆ ವ್ಯಕ್ತಪಡಿಸುತ್ತೇವೆ. ಯತ್ನಾಳ್, ಅರವಿಂದ ಬೆಲ್ಲದ್, ರಮೇಶ್ ಜಾರಕಿಹೊಳಿ ಸೇರಿ ಹೈಕಮಾಂಡ್‌ಗೆ ನಮ್ಮ ನೋವು ಹೇಳುತ್ತೇವೆ. ನಾವು ಹಿರಿಯರು, ನಮ್ಮದೇ ಅನುಭವ, ಸೇವೆ ಇದೆ, ಆಲೋಚನೆ ಇದೆ. ಮಗು ಅತ್ತರೆ ಮಾತ್ರ ತಾಯಿ ಹಾಲು ಕೊಡೋದು. ಹಾಗಾಗಿ ನಮ್ಮ ನೋವನ್ನು ಹೈಕಮಾಂಡ್‌ಗೆ ಹೇಳುತ್ತೇವೆ ಎಂದು ಪರೋಕ್ಷವಾಗಿ ವಿಜಯೇಂದ್ರಗೆ ರಾಜ್ಯಾಧ್ಯಕ್ಷ ಪಟ್ಟ ಕಟ್ಟಿರೋದಕ್ಕೆ ಅಸಮಾಧಾನ ಹೊರಹಾಕಿದರು.

  • ಹೈಕಮಾಂಡ್ ಡಿ.6ರವರೆಗೂ ಮಾತನಾಡದಂತೆ ಸೂಚಿಸಿದೆ: ಸೋಮಣ್ಣ

    ಹೈಕಮಾಂಡ್ ಡಿ.6ರವರೆಗೂ ಮಾತನಾಡದಂತೆ ಸೂಚಿಸಿದೆ: ಸೋಮಣ್ಣ

    ಚಾಮರಾಜನಗರ: ಹೈಕಮಾಂಡ್ ಡಿ.6 ತನಕ ಏನು ಮಾತನಾಡಬೇಡ ಎಂದು ಹೇಳಿದೆ. ಅಲ್ಲಿಯವರೆಗೂ ಕೂಡ ಕಾದು ನೋಡುತ್ತೇನೆ ಎಂದು ಮಾಜಿ ಸಚಿವ ವಿ.ಸೋಮಣ್ಣ (V.Somanna) ಹೇಳಿದ್ದಾರೆ.

    ಚಾಮರಾಜನಗರದಲ್ಲಿ (Chamarajanagar) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ಸೇರ್ಪಡೆ ವದಂತಿ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಕಾಂಗ್ರೆಸ್‍ಗೆ ಹೋಗುವ ವಿಚಾರ ನನ್ನ ತಲೆಯಲ್ಲಿ ಇಲ್ಲ. ನನ್ನ ಕೋಳಿಯಿಂದಲೇ ಬೆಳಕಾಗೋದು ಅಂತ ಕೆಲವರು ಎಂದುಕೊಂಡಿದ್ದಾರೆ. ಅದೆಲ್ಲ ನಡಿಯಲ್ಲ, ಮುದುಕಿ ಯಾರು? ಕೋಳಿ ಯಾರು? ಅನ್ನೋದನ್ನ ನೀವೇ ತೀರ್ಮಾನಿಸಿ ಎಂದಿದ್ದಾರೆ. ಇದನ್ನೂ ಓದಿ: ಡಿಕೆಶಿ ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಪ್ರಕರಣ- CBIಗೆ ವಹಿಸಿದ್ದ ಕೇಸ್ ಹಿಂಪಡೆಯಲು ಸಂಪುಟ ಸಮ್ಮತಿ

    ಇನ್ನೂ 64 ವಿದ್ಯೆಯಲ್ಲಿ 62 ವಿದ್ಯೆ ಗೊತ್ತು ಎಂಬ ಮದುವೆ ವಿಚಾರದ ಕಥೆ ಹೇಳಿ, ಪರೋಕ್ಷವಾಗಿ ವಿಜಯೇಂದ್ರ (B.Y Vijayendra) ಅವರಿಗೆ ಟಾಂಗ್ ಕೊಟ್ಟಿದ್ದಾರೆ. 64 ವಿದ್ಯೆಯಲ್ಲಿ 62 ವಿದ್ಯೆಯಷ್ಟೆ ಅವರಿಗೆ ಗೊತ್ತಿದೆ. ಅವರಿಗೆ ಸ್ವಂತ ಬುದ್ದಿ ಇಲ್ಲ. ಬೇರೆ ಯಾರು ಹೇಳೋದನ್ನು ಕೇಳಲ್ಲ ಎಂದು ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೇ ರೆಬೆಲ್ ನಾಯಕರಾದ ಬೆಲ್ಲದ್, ಲಿಂಬಾವಳಿ, ಯತ್ನಾಳ್ ಹೇಳಿಕೆಗಳನ್ನು ಸಮರ್ಥಿಸಿಕೊಂಡರು. ಇವತ್ತಿನ ಪರಿಸ್ಥಿತಿ ಸೋಮನಹಳ್ಳಿ ಮುದುಕಿ ಕಥೆಯಾಗಿದೆ. ಅದನ್ನು ಡಿ.6 ತನಕ ಹೇಗೆ ಬಗೆ ಹರಿಸುತ್ತಾರೆ ಕಾದು ನೋಡೋಣವೆಂದು ಹೇಳಿದ್ದಾರೆ.

    ನನ್ನ ಜೀವನದಲ್ಲಿ ಯಾರನ್ನೂ ಭೇಟಿ ಮಾಡುವ ಪರಿಸ್ಥಿತಿ ನನಗೆ ಬಂದಿಲ್ಲ. ನಾನು ಇನ್ನೊಬ್ಬರ ಬಳಿ ಹೋಗಿ ಹಲ್ಲು ಕಿಸಿದು, ನನ್ನನ್ನು ಪಾರ್ಟಿಗೆ ಸೇರಿಸಿಕೊಳ್ಳಿ ಎಂದು ಹೇಳುವುದಿಲ್ಲ. ನನಗೆ ಆ ಗತಿ ಬಂದಿಲ್ಲ. ನಾನು ಬೆಳೆದಿರುವುದು ಜೆ.ಎಚ್.ಪಟೇಲ್, ದೇವೇಗೌಡ, ರಾಮಕೃಷ್ಣ ಹೆಗಡೆಯವರ ಗರಡಿಯಲ್ಲಿ. ನಾನು ಸ್ವಾಭಿಮಾನ, ಸಂಸ್ಕಾರ ಇಟ್ಟುಕೊಂಡು ಬದುಕುತ್ತಿದ್ದೇನೆ ಎಂದಿದ್ದಾರೆ.

    ಸಚಿವ ರಾಜಣ್ಣ ಅವರಿಗೆ ಕರೆ ಮಾಡಿದ ವಿಚಾರವಾಗಿ, ಸಿದ್ದಗಂಗಾ ಮಠದ ಕಾರ್ಯಕ್ರಮಕ್ಕೆ ಆಹ್ವಾನ ನೀಡಲು ಕರೆ ಮಾಡಿದ್ದೆ. ನಾನೇನು ಶಕ್ತಿ ಪ್ರದರ್ಶನಕ್ಕೆ ಮಠವನ್ನು ಬಳಸಿಕೊಳ್ಳುವುದಿಲ್ಲ. ಅಷ್ಟೊಂದು ಕಿರಾತಕ ನಾನಲ್ಲ. ನಮ್ಮ ಕುಟುಂಬದಿಂದ ಗುರು ಭವನ ಕಟ್ಟಿದ್ದೇವೆ. ಆ ಕಾರ್ಯಕ್ರಮಕ್ಕೆ ಎಲ್ಲಾ ಪಕ್ಷದವರು ಬರುತ್ತಾರೆ. ಅದೇ ರೀತಿ ಆ ಜಿಲ್ಲೆಯ ಇಬ್ಬರು ಸಚಿವರನ್ನು ಆಹ್ವಾನ ಮಾಡಿದ್ದೇನೆ ಎಂದಿದ್ದಾರೆ.

    ನಾನು ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆ ಕೇಳಿದ್ದೆ. ಆ ವಿಚಾರ ಏನಾಗಿದೆ ಎಂದು ಡಿ.6 ರಂದು ಹೇಳುತ್ತೇನೆ. ಯಡಿಯೂರಪ್ಪ ಅವರು ಸಂಪರ್ಕ ಮಾಡಿದ್ದರಾ? ಎಂಬ ಪತ್ರ ಕರ್ತರ ಪ್ರಶ್ನೆಗೆ, ಯಡಿಯೂರಪ್ಪನೂ ಇಲ್ಲ, ತಿಮ್ಮಪ್ಪ, ಯಾವ ಬೊಮ್ಮಪ್ಪ, ನನಗೆ ಯಾರೂ ಕರೆ ಮಾಡಿಲ್ಲ. ನಾನು ಯಾರನ್ನೂ ಸಂಪರ್ಕ ಮಾಡುವ ಪರಿಸ್ಥಿತಿಯಲ್ಲಿಯೂ ಇಲ್ಲ. ಲೋಕಸಭೆ ಸ್ಪರ್ಧೆ ಕುರಿತು ನಾನು ಕಂಟೆಂಡರೂ ಅಲ್ಲ, ಕಾಂಪಿಟೇಟರೂ ಅಲ್ಲ. ಯಾರನ್ನೂ ಕೂಡ ನನ್ನ ಜೊತೆ ಹೋಲಿಕೆ ಮಾಡಬೇಡಿ. ನೀವು ನೋಡಿದ್ದೀರಾ ಏನೇನು ಹಲ್ಕಾ ಕೆಲ್ಸ ಆಯ್ತು ಎಂದು ನಿಮಗೆ ಗೊತ್ತಿದೆ. ನನಗೆ ನನ್ನದೇ ಆದ ದುಡಿಮೆ ಇದೆ. ಶ್ರಮ ಇದೆ. ಸೋಮಣ್ಣ ನಿಂತ ನೀರಲ್ಲ, ಹರಿಯುವ ನೀರು. ನನ್ನ ಅಂತರಾಳದ ನೋವನ್ನು ವರಿಷ್ಠರಿಗೆ ತಿಳಿಸಿದ್ದೇನೆ. ಎಲ್ಲೆಲ್ಲಿ ತಪ್ಪಾಗಿದೆ ಎನ್ನುವ ಮಾಹಿತಿಯನ್ನು ವರಿಷ್ಠರಿಗೆ ತಿಳಿಸಿದ್ದೇನೆ. ಡಿ.6 ರಂದು ಎಲ್ಲವನ್ನೂ ಕೂಡ ವಿವರಿಸುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ಭಾರತ ವಿಶ್ವಕಪ್ ಸೋಲಲು ಇಂದಿರಾ ಗಾಂಧಿ ಕಾರಣವೆಂದ ಅಸ್ಸಾಂ ಸಿಎಂ!

  • ರಾಜಕಾರಣ ಯಾವ್ದೇ ಮನೆತನಕ್ಕೆ ಸಿಮೀತವಲ್ಲ – ವಿಜಯೇಂದ್ರ ಆಯ್ಕೆಗೆ ಸೋಮಣ್ಣ ಅಸಮಾಧಾನ

    ರಾಜಕಾರಣ ಯಾವ್ದೇ ಮನೆತನಕ್ಕೆ ಸಿಮೀತವಲ್ಲ – ವಿಜಯೇಂದ್ರ ಆಯ್ಕೆಗೆ ಸೋಮಣ್ಣ ಅಸಮಾಧಾನ

    – ಡಿ.6ರ ಬಳಿಕ ನನ್ನ ಮನಸ್ಸಿನ ಭಾವನೆ ಹೇಳುತ್ತೇನೆಂದ ಬಿಜೆಪಿ ನಾಯಕ

    ಮೈಸೂರು: ಹೈಕಮಾಂಡ್ ಸೂಚನೆಯನ್ನ ತಲೆ ಮೇಲೆ ಹೊತ್ತು ದುಡಿಮೆ ಮಾಡಿದ ಮೇಲೆ ಯಾವ ರೀತಿ ನನಗೆ ಹೊಡೆತ ಆಯ್ತು ಅನ್ನೋದನ್ನ ಡಿಸೆಂಬರ್ 6ರ ನಂತರ ಹೇಳ್ತೀನಿ. ಬಿಡಿಬಿಡಿಯಾಗಿ ವಿವರಿಸ್ತೀನಿ ಎಂದು ಮಾಜಿ ಸಚಿವ ವಿ.ಸೋಮಣ್ಣ (V Somanna) ಹೇಳಿದ್ದಾರೆ.

    ಮೈಸೂರಿನಲ್ಲಿಂದು (Mysuru) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ (BY Vijayendra) ಆಯ್ಕೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಶಿಕ್ಷಕನಿಂದ ಬ್ರಾಹ್ಮಣ ವಿದ್ಯಾರ್ಥಿನಿಗೆ ಮೊಟ್ಟೆ ತಿನ್ನಲು ‌ಒತ್ತಾಯ – ಪೋಷಕರಿಂದ ಆರೋಪ, ಕ್ರಮಕ್ಕೆ ಆಗ್ರಹ

    ನಮ್ಮ ಪಕ್ಷದಲ್ಲಿ ಒಂದು ರೀತಿ ಸೋಮನಹಳ್ಳಿ ಮುದುಕಿ ಕಥೆ ಆಗಿದೆ. ಡಿಸೆಂಬರ್ 6ನೇ ತಾರೀಖಿನ ನಂತರ ನನ್ನ ಮನಸ್ಸಿನ ಭಾವನೆಯನ್ನ ಹೇಳುತ್ತೇನೆ, ಬಿಡಿಬಿಡಿಯಾಗಿ ವಿವರಿಸ್ತೀನಿ. ರಾಜಕಾರಣ ದೊಂಬರಾಟ ಅಲ್ಲ. ರಾಜಕಾರಣ ಯಾವುದೇ ಮನೆತನಕ್ಕೆ ಸಿಮೀತವಲ್ಲ. ರಾಜಕಾರಣ ನಾಟಕ ಕಂಪನಿಯೂ ಅಲ್ಲ. ಒಳ ಒಪ್ಪಂದಕ್ಕೆ ಸಿಮೀತವೂ ಅಲ್ಲ ಎಂದು ಬೇಸರ ಹೊರಹಾಕಿದ್ದಾರೆ.

    ಇದೇ ವೇಳೆ ಯಡಿಯೂರಪ್ಪ (BS Yediyurappa) ತಮ್ಮನ್ನು ಸಂಪರ್ಕಿಸಿದ್ದಾರಾ ಎಂಬ ಪ್ರಶ್ನೆಗೆ ಸೋಮಣ್ಣ, ನನ್ನನ್ನು ಯಾರೂ ಸಂಪರ್ಕಿಸಿಲ್ಲ. ನಾನು ಯಾರನ್ನೂ ಸಂಪರ್ಕಿಸಿಲ್ಲ. ಆ ತರಹ ಯಾವ ಪ್ರಯತ್ನವೂ ನಡೆದಿಲ್ಲ ಎಂದು ವಿವರಿಸಿದ್ದಾರೆ. ಇದನ್ನೂ ಓದಿ: 60ಕ್ಕೂ ಹೆಚ್ಚುಬಾರಿ ಯುವಕನ ಕತ್ತು ಕೊಯ್ದು ಕೊಲೆ; ಹೆಣದ ಮೇಲೆ ಕುಣಿದು ವಿಕೃತಿ – 16ರ ಹುಡುಗ ಅರೆಸ್ಟ್‌

    ಅಂತರ ಕಾಯ್ದುಕೊಂಡ ನಾಯಕರು: ಮಾಜಿ ಸಚಿವ ವಿ.ಸೋಮಣ್ಣ ಅವರಿಂದ ಮೈಸೂರು ಬಿಜೆಪಿ ನಾಯಕರು ಅಂತರ ಕಾಯ್ದುಕೊಂಡರು. ಬಿಜೆಪಿಯ ಓರ್ವ ಶಾಸಕ, ಓರ್ವ ಸಂಸದ ಹಾಗೂ ಮಾಜಿ ಶಾಸಕರು ಸೇರಿದಂತೆ ಅನೇಕ ಮುಖಂಡರು ಸೋಮಣ್ಣ ಭೇಟಿಗೆ ಹಿಂದೇಟು ಹಾಕಿದರು. ಸೋಮಣ್ಣ ಕಟ್ಟಾ ಬೆಂಬಲಿಗರು ಬಿಟ್ಟರೆ ಉಳಿದ ಯಾರೂ ಅವರ ಭೇಟಿಗೆ ಮುಂದಾಗಲಿಲ್ಲ. ತಮ್ಮ ಆಪ್ತರೊಂದಿಗೆ ಉಪಾಹಾರ ಸೇವಿಸಿ, ಖಾಸಗಿ ಹೋಟೆಲ್‌ನಲ್ಲಿ ಗೌಪ್ಯ ಮಾತುಕತೆ ನಡೆಸಿದ್ದಾರೆ. ಇದನ್ನೂ ಓದಿ: ನೂಪುರ್ ಶರ್ಮಾ ಬೆಂಬಲಿಸಿದ್ದ ಗೀರ್ಟ್ ವೈಲ್ಡರ್ಸ್‌ಗೆ ಚುನಾವಣೆಯಲ್ಲಿ ಗೆಲುವು – ನೆದರ್ಲೆಂಡ್ಸ್ ಪ್ರಧಾನಿಯಾಗಲು ಸಜ್ಜು

  • ವಿಜಯೇಂದ್ರಗೆ ಪಕ್ಷದ ಸಾರಥ್ಯ – ಹುದ್ದೆ ಮೇಲೆ ಕಣ್ಣಿಟ್ಟಿದ್ದ ಸೋಮಣ್ಣ ಮೌನ

    ವಿಜಯೇಂದ್ರಗೆ ಪಕ್ಷದ ಸಾರಥ್ಯ – ಹುದ್ದೆ ಮೇಲೆ ಕಣ್ಣಿಟ್ಟಿದ್ದ ಸೋಮಣ್ಣ ಮೌನ

    ಬೆಂಗಳೂರು: ಬಿ.ವೈ.ವಿಜಯೇಂದ್ರಗೆ (Vijayendra) ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟ ಸಿಕ್ಕಿದ್ದು ಆಕಾಂಕ್ಷಿಗಳಲ್ಲಿ ಅಸಮಾಧಾನ ಕಟ್ಟೆ ಒಡೆಯುವಂತೆ ಮಾಡಿದೆ. ಪಕ್ಷದ ಹಿರಿಯರು, ಅನುಭವಿಗಳೂ ಆದ ನಮಗೇ ಪಕ್ಷದ ಸಾರಥ್ಯ ಸಿಗುತ್ತದೆ ಎಂದುಕೊಂಡಿದ್ದವರು ಈಗ ಬೇಸರಗೊಂಡಿದ್ದಾರೆ. ಈ ಸಂಬಂಧ ಯಾವುದೇ ಪ್ರತಿಕ್ರಿಯೆ ನೀಡದೇ ಮೌನ ವಹಿಸಿದ್ದಾರೆ.

    ವಿಜಯೇಂದ್ರಗೆ ಪಕ್ಷದ ಸಾರಥ್ಯ ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಲು ರಾಜ್ಯಾಧ್ಯಕ್ಷ ಹುದ್ದೆ ಮೇಲೆ ಕಣ್ಣಿಟ್ಟಿದ್ದ ಸೋಮಣ್ಣ (Somanna) ನಿರಾಕರಿಸಿದ್ದು, ಮೌನವಾಗಿದ್ದರು. ವಿಜಯೇಂದ್ರ ಅಧ್ಯಕ್ಷ ಪಟ್ಟ ವಿಚಾರವನ್ನು ಸೋಮಣ್ಣ ಒಪ್ಪಿಕೊಳ್ಳುತ್ತಾರಾ ಅಥವಾ ಇಲ್ಲವಾ ಎಂಬುದು ಪ್ರಶ್ನೆಯಾಗಿದ್ದು, ಅವರ ನಡೆ ಕುತೂಹಲ ಮೂಡಿಸಿದೆ. ಇದನ್ನೂ ಓದಿ: ಬೂತ್ ಗೆದ್ದರೆ, ದೇಶ ಗೆಲ್ತೇವೆ: ಬಿವೈ ವಿಜಯೇಂದ್ರ

    ವಿಜಯೇಂದ್ರ ಆಯ್ಕೆ ಕುರಿತು ಮಾಧ್ಯಮದವರು ಕೇಳಿದಾಗ ಸೋಮಣ್ಣ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು. ನಾನೇ ಸುದ್ದಿಗೋಷ್ಠಿ ಮಾಡ್ತೀನಿ ಎಂದಷ್ಟೇ ಹೇಳಿದವರು, ಮುಂದೆ ಒಂದು ಮಾತು ಕೂಡ ಆಡದೇ ಕಾರು ಹತ್ತಿ ಹೊರಟು ಹೋದರು.

    ಈ ಹಿಂದೆಯೇ ಹೈಕಮಾಂಡ್ ಬಳಿ ಬಾಯಿ ಬಿಟ್ಟು ರಾಜ್ಯಾಧ್ಯಕ್ಷ ಸ್ಥಾನ ಕೊಡುವಂತೆ ಸೋಮಣ್ಣ ಕೇಳಿದ್ದರು. ತಮಗೆ ಸಾಮರ್ಥ್ಯ ಇದೆ. ನಿಮ್ಮ ಮಾತು ಕೇಳಿ ಎರಡು ಕಡೆ ಸ್ಪರ್ಧಿಸಿ ಸೋತೆ. ನಿಮ್ಮಿಂದಲೇ ನನ್ನ ರಾಜಕೀಯ ಬದುಕು ಅತಂತ್ರವಾಯ್ತು ಅಂತ ಸೂಕ್ಷ್ಮವಾಗಿ ವರಿಷ್ಠರಿಗೆ ತಿಳಿಸಿದ್ದರು. ಇದನ್ನೂ ಓದಿ: ಈಗ ನಾನೊಬ್ಬ ಸಾಮಾನ್ಯ ಕಾರ್ಯಕರ್ತ: ಅಸಮಾಧಾನ ಹೊರಹಾಕಿದ ಸಿಟಿ ರವಿ

    ಆದರೂ ತಮ್ಮನ್ನು ವರಿಷ್ಠರು ಪರಿಗಣಿಸದ ಹಿನ್ನೆಲೆಯಲ್ಲಿ ಸೋಮಣ್ಣ ತೀವ್ರ ಬೇಸರಗೊಂಡಿದ್ದಾರೆ. ಈಗ ಮುಂದೇನು ಮಾಡಬೇಕೆಂದು ಗಂಭೀರ ಆಲೋಚನೆಯಲ್ಲಿ ಇದ್ದಾರೆ. ಸೋಮಣ್ಣರಿಗೆ ಕಾಂಗ್ರೆಸ್‌ನಿಂದಲೂ ಆಹ್ವಾನ ಇದೆ ಎನ್ನಲಾಗಿದೆ. ಆದರೆ ಇದುವರೆಗೆ ಯಾವುದೇ ನಿರ್ಧಾರ ಮಾಡಿಲ್ಲ. ಇನ್ಮುಂದೆ ಸೋಮಣ್ಣ ನಿರ್ಣಯ ಬಗ್ಗೆ ಕುತೂಹಲ ಸೃಷ್ಟಿಯಾಗಿದೆ. ತಮಗೆ ಭಾರೀ ಅಪಮಾನ ಆಗಿದೆ ಎಂಬ ಭಾವನೆಯಲ್ಲಿ ಸೋಮಣ್ಣ ಇದ್ದಾರೆ ಎನ್ನಲಾಗಿದೆ.