Tag: V.Somanna

  • ಕನ್ನಡದಲ್ಲಿಯೇ ಪ್ರಮಾಣ ವಚನ ಸ್ವೀಕರಿಸಿದ ಹೆಚ್‍ಡಿಕೆ, ಜೋಶಿ, ಸೋಮಣ್ಣ, ಶೋಭಾ

    ಕನ್ನಡದಲ್ಲಿಯೇ ಪ್ರಮಾಣ ವಚನ ಸ್ವೀಕರಿಸಿದ ಹೆಚ್‍ಡಿಕೆ, ಜೋಶಿ, ಸೋಮಣ್ಣ, ಶೋಭಾ

    ನವದೆಹಲಿ: ಕೇಂದ್ರ ಸಚಿವರಾಗಿ ನೇಮಕಗೊಂಡಿರುವ ರಾಜ್ಯದ ಸಂಸದರಾದ ಹೆಚ್.ಡಿ ಕುಮಾರಸ್ವಾಮಿ, ಪ್ರಹ್ಲಾದ್ ಜೋಶಿ (Pralhad Joshi), ವಿ.ಸೋಮಣ್ಣ (V Somanna) ಹಾಗೂ ಶೋಭಾ ಕರಂದ್ಲಾಜೆಯವರು (Shobha Karandlaje) ಕನ್ನಡದಲ್ಲಿಯೇ ಪ್ರಮಾಣವಚನ ಸ್ವೀಕರಿಸಿದ್ದಾರೆ.

    ಸಂಸತ್‌ ಭವನದಲ್ಲಿ ನಡೆಯುತ್ತಿರುವ 18ನೇ ಲೋಕಸಭೆಯ ಮೊದಲ ಅಧಿವೇಶನದ ಆರಂಭದಲ್ಲಿ ರಾಜ್ಯದ ವಿವಿಧ ಕ್ಷೇತ್ರಗಳಿಂದ ಆಯ್ಕೆಯಾದ ನೂತನ ಸಂಸದರಿಗೆ ಹಂಗಾಮಿ ಸ್ಪೀಕರ್ ಭತೃಹರಿ ಮಹತಾಬ್ ಅವರು ಪ್ರತಿಜ್ಞಾವಿಧಿ ಬೋಧಿಸಿದರು. ಈ ವೇಳೆ ಮೂವರು ನೂತನ ಸಂಸದರು ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಮೊದಲ ಬಾರಿಗೆ ಸಂಸತ್ ಪ್ರವೇಶಿಸುತ್ತಿರುವ ಸೋಮಣ್ಣ ಅವರು, ಪ್ರಮಾಣವಚನ ಸ್ವೀಕಾರಕ್ಕೂ ಮುನ್ನ ಮೆಟ್ಟಿಲುಗಳಿಗೆ ನಮಸ್ಕರಿಸಿ ಸಂಸತ್ ಪ್ರವೇಶಿಸಿದರು. ಇದನ್ನೂ ಓದಿ: ಸಂಸತ್ ಅಧಿವೇಶನಕ್ಕೂ ಮುನ್ನ ವಯನಾಡ್ ಜನತೆಗೆ ರಾಗಾ ಭಾವನಾತ್ಮಕ ಪತ್ರ

    ಹೆಚ್.ಡಿ ಕುಮಾರಸ್ವಾಮಿಯವರಿಗೆ (ಮಂಡ್ಯ) ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕೆ, ಪ್ರಹ್ಲಾದ್ ಜೋಶಿಯವರಿಗೆ (ಧಾರವಾಡ) ಕಲ್ಲಿದ್ದಲು ಮತ್ತು ಗಣಿ ಹಾಗೂ ರೈಲ್ವೇ ಇಲಾಖೆಯನ್ನು ವಿ.ಸೋಮಣ್ಣ (ತುಮಕೂರು) ಅವರಿಗೆ ನೀಡಲಾಗಿದೆ. ಶೋಭಾ ಕರಂದ್ಲಾಜೆಯವರು (ಬೆಂಗಳೂರು ಉತ್ತರ) ಕಾರ್ಮಿಕ ಮತ್ತು ಉದ್ಯೋಗ ಖಾತೆ ರಾಜ್ಯ ಸಚಿವರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಇದನ್ನೂ ಓದಿ: ಪರಿಷತ್ ನೂತನ ಸದಸ್ಯರಾಗಿ 17 ಜನ ಪ್ರಮಾಣ ವಚನ ಸ್ವೀಕಾರ – ಸಿಎಂ ಕಾಲಿಗೆ ನಮಸ್ಕರಿಸಿದ ಸಿ.ಟಿ ರವಿ

  • ಅಧಿಕಾರ ಸ್ವೀಕರಿಸಿದ ರಾಜ್ಯದ ನಾಲ್ವರು ಕೇಂದ್ರ ಸಚಿವರು

    ಅಧಿಕಾರ ಸ್ವೀಕರಿಸಿದ ರಾಜ್ಯದ ನಾಲ್ವರು ಕೇಂದ್ರ ಸಚಿವರು

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಸಂಪುಟದಲ್ಲಿ (Modi Cabinet) ಕೇಂದ್ರ ಮಂತ್ರಿಗಳಾಗಿ ಪ್ರಮಾಣವಚನ ಸ್ವೀಕರಿಸಿದ್ದ ಸಂಪುಟ ದರ್ಜೆ ಸಚಿವರಾದ ಪ್ರಲ್ಹಾದ್ ಜೋಶಿ, ಹೆಚ್.ಡಿ ಕುಮಾರಸ್ವಾಮಿ, ರಾಜ್ಯಖಾತೆ ಸಚಿವರಾದ ಶೋಭಾ ಕರಂದ್ಲಾಜೆ ಮತ್ತು ವಿ.ಸೋಮಣ್ಣ ಖಾತೆ ಹಂಚಿಕೆ ಬಳಿಕ ತಮ್ಮ ಕಚೇರಿಗಳಲ್ಲಿ ಅಧಿಕಾರ ಸ್ವೀಕರಿಸಿದರು.

    ಹೆಚ್.ಡಿ ಕುಮಾರಸ್ವಾಮಿ (HD Kumaraswamy)ಅವರು ಉದ್ಯೋಗ ಭವನದಲ್ಲಿರುವ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವಾಲಯದಲ್ಲಿ ಅಧಿಕಾರ ಸ್ವೀಕರಿಸಿದರು. ಪೂಜೆ ಸಲ್ಲಿಸಿ ಬಳಿಕ ಕಡತಕ್ಕೆ ಸಹಿ ಹಾಕುವ ಮೂಲಕ ಹೆಚ್‌ಡಿಕೆ ಅಧಿಕಾರ ಸ್ವೀಕರಿಸಿದರು. ಆಹಾರ ಮತ್ತು ನಾಗರಿಕ ಸರಬರಾಜು ಖಾತೆ, ನವೀಕರಿಸಬಹುದಾದ ಇಂಧನ ಖಾತೆ ಸಚಿವರಾಗಿ ಕೃಷಿ ಮತ್ತು ಊರ್ಜಾ ಭವನದಲ್ಲಿ ಪ್ರಲ್ಹಾದ್ ಜೋಶಿ (Pralhad Joshi) ಅಧಿಕಾರ ಸ್ವೀಕರಿಸಿದರು. ಇದನ್ನೂ ಓದಿ: ರೇಣುಕಾಸ್ವಾಮಿ ಹತ್ಯೆ ಪ್ರಕರಣ – ನಟ ದರ್ಶನ್ ಸೇರಿ 13 ಆರೋಪಿಗಳು 6 ದಿನ ಪೊಲೀಸ್ ಕಸ್ಟಡಿಗೆ

    ವಿ. ಸೋಮಣ್ಣ (V Somanna) ರೈಲ್ವೆ ಹಾಗೂ ಜಲಶಕ್ತಿ ಭವನದಲ್ಲಿ ಜಲಶಕ್ತಿ ರಾಜ್ಯಖಾತೆಯನ್ನು ವಹಿಸಿಕೊಂಡರು. ಶೋಭಾ ಕರಂದ್ಲಾಜೆ (Shobha Karandlaje) ಅವರು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆ ರಾಜ್ಯಖಾತೆ ಮತ್ತು ಕಾರ್ಮಿಕ ಇಲಾಖೆ ರಾಜ್ಯಖಾತೆ ಸಚಿವರಾಗಿ ಅಧಿಕಾರ ಸ್ವೀಕರಿಸಿದರು. ಇದನ್ನೂ ಓದಿ: ಬಿಜೆಪಿಯ ಮೋಹನ್ ಚರಣ್ ಮಾಝಿ ಒಡಿಶಾದ ನೂತನ ಸಿಎಂ

    ಅಧಿಕಾರ ಸ್ವೀಕಾರ ಬಳಿಕ ಮಾತನಾಡಿದ ಕೇಂದ್ರ ಸಚಿವ ವಿ. ಸೋಮಣ್ಣ, ಹೊಸ ಜವಾಬ್ದಾರಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹಾಗೂ ನನ್ನ ಪಕ್ಷಕ್ಕೆ ಧನ್ಯವಾದಗಳು. ಕಳೆದ ಹತ್ತು ವರ್ಷದಲ್ಲಿ ಮೋದಿ ಅವರ ನಾಯಕತ್ವ, ದೂರದೃಷ್ಟಿ ಚಿಂತನೆ ವಿಶ್ವ ಭಾರತದತ್ತ ನೋಡುವಂತೆ ಮಾಡಿದೆ. ಮೋದಿ ಅವರು ಸತತ ಮೂರನೇ ಬಾರಿಗೆ ಪ್ರಧಾನಿಯಾಗಿದ್ದಾರೆ. ಸರ್ಕಾರದ ಸೌಲಭ್ಯಗಳನ್ನು 140 ಕೋಟಿ ಜನರಿಗೆ ಮುಟ್ಟಿಸಬೇಕು. ಅಶ್ವಿನಿ ವೈಷ್ಣವ್ ಅವರ ನೇತೃತ್ವದಲ್ಲಿ ರೈಲ್ವೆ ಇಲಾಖೆ ಹತ್ತು ವರ್ಷದಲ್ಲಿ ಹಲವು ಕೊಡುಗೆ ನೀಡಿದೆ. ಅಶ್ವಿನಿ ವೈಷ್ಣವ್ ಜೊತೆಗೆ ಕೆಲಸ ಮಾಡಲು ಆನಂದವಾಗುತ್ತದೆ. ವಿಕಸಿತ್ ಭಾರತ್ ಯಶಸ್ಸಿನತ್ತ ಕೊಂಡೊಯ್ಯಲು ಪ್ರಯತ್ನಿಸುತ್ತೇವೆ ಎಂದರು. ಇದನ್ನೂ ಓದಿ: ಮಂಡ್ಯದಲ್ಲಿ ಕೇಂದ್ರ ಸಚಿವ ಹೆಚ್‌ಡಿಕೆ ರಾಜೀನಾಮೆ ನೀಡ್ತಾರೆ, ಚನ್ನಪಟ್ಟಣ ಕ್ಷೇತ್ರ ಉಳಿಸಿಕೊಳ್ತಾರೆ: ಡಿ.ಕೆ‌.ಸುರೇಶ್

    ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮಾತನಾಡಿ, ಮಾನ್ಯ ಪ್ರಧಾನಿಗಳು ನನಗೆ ಈ ಖಾತೆ ನೀಡಿದ್ದಾರೆ. ನನಗೆ ಈ ಜವಾಬ್ದಾರಿ ನೀಡಿದ್ದಕ್ಕಾಗಿ ಮೋದಿ ಅವರಿಗೆ ಧನ್ಯವಾದಗಳು. ನಾನು ನಮ್ಮ ಕ್ಷೇತ್ರ, ರಾಜ್ಯ, ದೇಶದ ಜನತೆಗೆ ಧನ್ಯವಾದ ಹೇಳುತ್ತೇನೆ. ಪ್ರಧಾನಿ, ಮುಂದಿನ 125 ದಿನಗಳ ಕಾರ್ಯ ಹೇಗಿರಬೇಕು ಎಂಬುದಕ್ಕೆ ಮೊದಲೇ ಹೇಳಿದ್ದಾರೆ. ಪೀಯುಶ್ ಗೋಯಲ್ ಕೂಡ ಈ ಇಲಾಖೆಯಲ್ಲಿ ಕೆಲಸ ಮಾಡಿದ್ದಾರೆ. 80 ಕೋಟಿ ಜನರಿಗೆ ದೊಡ್ಡ ಪ್ರಮಾಣದಲ್ಲಿ ಆಹಾರ ಭದ್ರತಾ ಕಾರ್ಯಕ್ರಮ ಮಾಡಿದ್ದಾರೆ. ಇಂತಹ ಸ್ಕೀಮ್ ನಡೆಸುವ ಇಲಾಖೆಯಲ್ಲಿ ಮೋದಿಯವರು ನನಗೆ ಸ್ಥಾನ ನೀಡಿದ್ದಾರೆ. ನಂಬಿಕೆ ಇಟ್ಟು ನನಗೆ ಈ ಖಾತೆ ನೀಡಿದ್ದಕ್ಕೆ ಧನ್ಯವಾದಗಳು. ನಿಜಕ್ಕೂ ಪ್ರಧಾನಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದರು. ಇದನ್ನೂ ಓದಿ: ಭಾರತದಿಂದ ಕಳ್ಳತನವಾಗಿದ್ದ 500 ವರ್ಷಗಳ ಪುರಾತನ ವಿಗ್ರಹ ಮರಳಿಸಲು ಮುಂದಾದ ಆಕ್ಸ್‌ಫರ್ಡ್ ವಿವಿ

  • Modi 3.0 Cabinet: 72 ಸಚಿವರಲ್ಲಿ 61 ಮಂದಿ ಬಿಜೆಪಿಗರು – ಮಿತ್ರಪಕ್ಷಗಳಲ್ಲಿ ಯಾರಿಗೆ ಎಷ್ಟು ಸ್ಥಾನ?

    Modi 3.0 Cabinet: 72 ಸಚಿವರಲ್ಲಿ 61 ಮಂದಿ ಬಿಜೆಪಿಗರು – ಮಿತ್ರಪಕ್ಷಗಳಲ್ಲಿ ಯಾರಿಗೆ ಎಷ್ಟು ಸ್ಥಾನ?

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (PM Modi) ಅವರಿಂದು ಖಾತೆ ಹಂಚಿಕೆ ಮಾಡಿದ ಸಚಿವರ ಪೈಕಿ 72 ಸಚಿವರಲ್ಲಿ 61 ಮಂದಿ ಬಿಜೆಪಿಗರಿಗೆ ಸ್ಥಾನ ಸಿಕ್ಕಿದೆ. ಉಳಿದ 11 ಸ್ಥಾನ ಎನ್‌ಡಿಎ (NDA) ಮಿತ್ರಪಕ್ಷಗಳ ಪಾಲಾಗಿದೆ. ಎನ್‌ಡಿಎ ಸರ್ಕಾರದ ಮೊದಲ ಸಂಪುಟ ಸಭೆಯಲ್ಲಿ (Modi Cabinet Meeting) ಗ್ರಾಮೀಣಾಭಿವೃದ್ಧಿಗೆ ಹೆಚ್ಚು ಒತ್ತು ನೀಡಲಾಗಿದೆ.

    3ನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ನರೇಂದ್ರ ಮೋದಿ ಅವರಿಂದು ತಮ್ಮ ನಿವಾಸದಲ್ಲಿ ಮೊದಲ ಸಂಪುಟ ಸಭೆ ನಡೆಸಿದರು. ಸಭೆಯಲ್ಲಿ ಪಾಲ್ಗೊಂಡಿದ್ದ 30 ಸಂಪುಟ ದರ್ಜೆ ಸಚಿವರು, ಐವರು ಸ್ವತಂತ್ರ ಖಾತೆ ನಿರ್ವಹಣೆ ಹಾಗೂ 36 ರಾಜ್ಯ ಖಾತೆ ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿದೆ.

    ಮೋದಿ ಸಂಪುಟದ ವಿಶೇಷತೆ ಏನು?
    ಪ್ರಧಾನಿ ಮೋದಿ ಸಂಪುಟದಲ್ಲಿ 72 ಸಚಿವರಲ್ಲಿ 61 ಮಂದಿ ಬಿಜೆಪಿಗರು ಸ್ಥಾನ ಪಡೆದುಕೊಂಡಿದ್ದಾರೆ. ಮಿತ್ರಪಕ್ಷಗಳ 11 ಸಂಸದರಿಗೆ ಮಂತ್ರಿಭಾಗ್ಯ ಸಿಕ್ಕಿದೆ. ಇದನ್ನೂ ಓದಿ: Modi Cabinet: ಕೇಂದ್ರ ಸಚಿವರಿಗೆ ಖಾತೆ ಹಂಚಿಕೆ – ಬಲಿಷ್ಠ ಖಾತೆಗಳನ್ನು ತನ್ನಲ್ಲೇ ಉಳಿಸಿಕೊಂಡ ಬಿಜೆಪಿ – ಇಲ್ಲಿದೆ ಲಿಸ್ಟ್

    ಖಾತೆ ಪಡೆದ ಸಚಿವರ ಪೈಕಿ ಉತ್ತರ ಪ್ರದೇಶಕ್ಕೆ ಗರಿಷ್ಠ ಸಚಿವ ಸ್ಥಾನ ಸಿಕ್ಕಂತಾಗಿದೆ ಸಂಪುಟ ದರ್ಜೆಯ 9 ಮಂದಿಗೆ ಮಂತ್ರಿ ಭಾಗ್ಯ ದೊರೆತಿದೆ. ಬಿಹಾರದ 8 ಸಂಸದರು, ಮಹಾರಾಷ್ಟ್ರ, ಮಧ್ಯಪ್ರದೇಶ, ಗುಜರಾತ್, ರಾಜಸ್ಥಾನದ ಐವರು, ಆಂಧ್ರ, ತಮಿಳುನಾಡಿನ ತಲಾ ಮೂವರು (ನಿರ್ಮಲಾ,ಜೈಶಂಕರ್, ಮುರುಗನ್), ಕೇರಳದಲ್ಲಿ ಖಾತೆ ತೆರೆಯಲು ಕಾರಣವಾದ ಸುರೇಶ್‌ ಗೋಪಿ ಅವರಿಗೆ ಮಂತ್ರಿ ಸ್ಥಾನ ನೀಡಲಾಗಿದೆ. ಸಿನಿಮಾ ಕಾರಣಕ್ಕಾಗಿ ಸಚಿವ ಸ್ಥಾನ ತಿರಸ್ಕಾರಕ್ಕೆ ಮುಂದಾಗಿದ್ದ ಸುರೇಶ್‌ ಗೋಪಿ ಅವರು ಕೊನೆಗೆ ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ.

    ಅಲ್ಲದೇ ಹರಿಯಾಣದಲ್ಲಿ ಗೆದ್ದ ಐವರಲ್ಲಿ ಮೂವರಿಗೆ ಮಂತ್ರಿ ಸ್ಥಾನ ನೀಡಲಾಗಿದೆ. ಇನ್ನೂ 9 ಸ್ಥಾನಗಳು ಮೋದಿ ಸಂಪುಟದಲ್ಲಿ ಖಾಲಿಯಿದ್ದು, ಮುಂದೆ ಎನ್‌ಸಿಪಿ, ಜನಸೇನೆ ಇತರೆ ಪಕ್ಷಗಳಿಗೆ ಅವಕಾಶ ನೀಡುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಮೋದಿಗೆ ಬಾಹ್ಯಾಕಾಶ, ಅಮಿತ್‌ ಶಾಗೆ ಗೃಹ ಖಾತೆ – ಜೆ.ಪಿ ನಡ್ಡಾಗೆ ಆರೋಗ್ಯ ಖಾತೆ ಗಿಫ್ಟ್

  • ಮೋದಿಗೆ ಬಾಹ್ಯಾಕಾಶ, ಅಮಿತ್‌ ಶಾಗೆ ಗೃಹ ಖಾತೆ – ಜೆ.ಪಿ ನಡ್ಡಾಗೆ ಆರೋಗ್ಯ ಖಾತೆ ಗಿಫ್ಟ್

    ಮೋದಿಗೆ ಬಾಹ್ಯಾಕಾಶ, ಅಮಿತ್‌ ಶಾಗೆ ಗೃಹ ಖಾತೆ – ಜೆ.ಪಿ ನಡ್ಡಾಗೆ ಆರೋಗ್ಯ ಖಾತೆ ಗಿಫ್ಟ್

    – ರಾಜನಾಥ್ ಸಿಂಗ್‌, ನಿರ್ಮಲಾ, ಜೈಶಂಕರ್‌ಗೆ ಖಾತೆ ಬದಲಿಲ್ಲ!

    ನವದೆಹಲಿ: ನರೇಂದ್ರ ಮೋದಿ (Narendra Modi) ಅವರು ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬೆನ್ನಲ್ಲೇ ನೂತನ ಸಚಿವರಿಗೆ ಖಾತೆ ಹಂಚಿಕೆ (Portfolios) ಮಾಡಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ ಅವರಿಂದು ತಮ್ಮ ನಿವಾಸದಲ್ಲಿ ಎನ್‌ಡಿಎಸ ಸರ್ಕಾರದ ಮೊದಲ ಸಂಪುಟ ಸಭೆ ನಡೆಸಿದರು. ಸಂಪುಟ ಸಭೆಯಲ್ಲಿ ಪಾಲ್ಗೊಂಡಿದ್ದ 30 ಸಂಪುಟ ದರ್ಜೆ ಸಚಿವರು, ಐವರು ಸ್ವತಂತ್ರ ಖಾತೆ ನಿರ್ವಹಣೆ ಹಾಗೂ 36 ರಾಜ್ಯ ಖಾತೆ ಸಚಿವರಿಗೆ ಖಾತೆ ಹಂಚಿಕೆ ಮಾಡಿದರು. ಈ ವೇಳೆ ಪ್ರಬಲ ಖಾತೆಗಳನ್ನು ಬಿಜೆಪಿ ಸಚಿವರಿಗೇ ನೀಡಿದ್ದಾರೆ. ಇದನ್ನೂ ಓದಿ: Modi cabinet: ಕರ್ನಾಟಕದ ನಾಲ್ವರು ಸಚಿವರಿಗೆ ಬಂಪರ್‌ – ಯಾರಿಗೆ ಯಾವ ಖಾತೆ?

    ಪ್ರಮುಖ ಖಾತೆಗಳಾದ ಗೃಹ, ಹಣಕಾಸು, ರಕ್ಷಣಾ, ವಿದೇಶಾಂಗ, ರೈಲ್ವೇ, ರಸ್ತೆ ಸಾರಿಗೆ ಖಾತೆಗಳನ್ನು ಬಿಜೆಪಿ ತಮ್ಮ ಬಳಿಯೇ ಇಟ್ಟುಕೊಂಡಿದೆ. ಕಳೆದ ಸಂಪುಟದಲ್ಲಿ ಈ ಖಾತೆಗಳನ್ನು ಹೊಂದಿದ್ದ ಪ್ರಮುಖರಿಗೆ ಮತ್ತದೇ ಖಾತೆಗಳ ಜವಾಬ್ದಾರಿ ನೀಡಿದೆ.

    ಈ ಬಾರಿಯ ಆಡಳಿತದಲ್ಲಿ ಮೂಲಸೌಕರ್ಯ ವಲಯಕ್ಕೆ ಹೆಚ್ಚು ಪ್ರಾಧಾನ್ಯತೆ ನೀಡಲಾಗುತ್ತದೆ ಎಂದು ಈ ಹಿಂದೆಯೇ ಮೋದಿ ಹೇಳಿದ್ದರು. ಹೀಗಾಗಿ ಪ್ರಬಲ ಖಾತೆಗಳನ್ನು ತಮ್ಮ ಬಳಿಯೇ ಉಳಿಸಿಕೊಂಡಿದೆ. ಸಾರ್ವಜನಿಕ ಕುಂದುಕೊರತೆ, ಪಿಂಚಣಿ, ಅಣುಶಕ್ತಿ, ಬಾಹ್ಯಾಕಾಶ ಇಲಾಖೆ ಖಾತೆಗಳನ್ನು ಪ್ರಧಾನಿ ಮೋದಿ ತಮ್ಮ ಬಳಿಯೇ ಉಳಿಸಿಕೊಂಡಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ಜೆ.ಪಿ ನಡ್ಡಾ ಅವರಿಗೆ ಆರೋಗ್ಯ ಖಾತೆ ನೀಡಲಾಗಿದೆ.

    ಇನ್ನೂ ಕೇಂದ್ರ ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಪ್ರಮುಖ ಪಕ್ಷಗಳಿಗೂ ಮೋದಿ ಸಂಪುಟದಲ್ಲಿ ಪ್ರಮುಖ ಖಾತೆಗಳು ಲಭಿಸಿವೆ. ಕೃಷಿ ಖಾತೆ ನಿರೀಕ್ಷೆಯಲ್ಲಿದ್ದ ಹೆಚ್‌.ಡಿ ಕುಮಾರಸ್ವಾಮಿ ಅವರಿಗೆ ಉಕ್ಕು ಮತ್ತು ಬೃಹತ್‌ ಕೈಗಾರಿಕೆ ಖಾತೆ ನೀಡಲಾಗಿದೆ. ಈ ಹಿಂದೆ ಕೇಂದ್ರ ಸಂಸದೀಯ ಸಚಿವರಾಗಿದ್ದ ಪ್ರಹ್ಲಾದ್‌ ಜೋಶಿ ಅವರಿಗೂ ಖಾತೆ ಬದಲಾವಣೆ ಮಾಡಲಾಗಿದೆ. ಇದನ್ನೂ ಓದಿ: Modi cabinet: ಕರ್ನಾಟಕದ ನಾಲ್ವರು ಸಚಿವರಿಗೆ ಬಂಪರ್‌ – ಯಾರಿಗೆ ಯಾವ ಖಾತೆ?

    ಕರ್ನಾಟಕದ ಯಾರಿಗೆ ಯಾವ ಖಾತೆ?

    • ಹೆಚ್‌.ಡಿ ಕುಮಾರಸ್ವಾಮಿ – ಉಕ್ಕು ಮತ್ತು ಬೃಹತ್‌ ಕೈಗಾರಿಕೆ
    • ಪ್ರಹ್ಲಾದ್‌ ಜೋಶಿ – ಆಹಾರ ಮತ್ತು ನಾಗರೀಕ ಸರಬರಾಜು ಖಾತೆ, ನವೀಕರಿಸಬಹುದಾದ ಇಂಧನ
    • ಶೋಭಾ ಕರಂದ್ಲಾಜೆ – ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆ ರಾಜ್ಯ ಖಾತೆ ಮತ್ತು ಕಾರ್ಮಿಕ ಇಲಾಖೆ ರಾಜ್ಯಖಾತೆ
    • ವಿ. ಸೋಮಣ್ಣ – ಜಲಶಕ್ತಿ ರಾಜ್ಯಖಾತೆ, ರೈಲ್ವೇ ಸಚಿವ ರಾಜ್ಯಖಾತೆ
    • ನಿರ್ಮಲಾ ಸೀತಾರಾಮನ್‌ – ಹಣಕಾಸು, ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ
  • Modi Cabinet: ಕೇಂದ್ರ ಸಚಿವರಿಗೆ ಖಾತೆ ಹಂಚಿಕೆ – ಬಲಿಷ್ಠ ಖಾತೆಗಳನ್ನು ತನ್ನಲ್ಲೇ ಉಳಿಸಿಕೊಂಡ ಬಿಜೆಪಿ – ಇಲ್ಲಿದೆ ಲಿಸ್ಟ್

    Modi Cabinet: ಕೇಂದ್ರ ಸಚಿವರಿಗೆ ಖಾತೆ ಹಂಚಿಕೆ – ಬಲಿಷ್ಠ ಖಾತೆಗಳನ್ನು ತನ್ನಲ್ಲೇ ಉಳಿಸಿಕೊಂಡ ಬಿಜೆಪಿ – ಇಲ್ಲಿದೆ ಲಿಸ್ಟ್

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಸಂಪುಟದ ನೂತನ ಕೇಂದ್ರ ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿದೆ. ಕರ್ನಾಟಕದ ನಾಲ್ವರು ಸೇರಿದಂತೆ ಮೋದಿ ಅವರೊಂದಿಗೆ ಪ್ರಮಾಣ ವಚನ ಸ್ವೀಕಾರ ಮಾಡಿದ ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿದೆ.

    3ನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ನರೇಂದ್ರ ಮೋದಿ ಅವರಿಂದು ತಮ್ಮ ನಿವಾಸದಲ್ಲಿ ಮೊದಲ ಸಂಪುಟ ಸಭೆ ನಡೆಸಿದರು. ಸಂಪುಟ ಸಭೆಯಲ್ಲಿ ಪಾಲ್ಗೊಂಡಿದ್ದ 30 ಸಂಪುಟ ದರ್ಜೆ ಸಚಿವರು, ಐವರು ಸ್ವತಂತ್ರ ಖಾತೆ ನಿರ್ವಹಣೆ ಹಾಗೂ 36 ರಾಜ್ಯ ಖಾತೆ ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿದೆ. ಅದರ ಪಟ್ಟಿ ಈ ಕೆಳಗಿನಂತಿದೆ…

    ಸಂಪುಟ ದರ್ಜೆ ಸಚಿವರ ಪಟ್ಟಿ – ಯಾರಿಗೆ ಯಾವ ಖಾತೆ?

    • ಅಮಿತ್ ಶಾ – ಗೃಹ ಖಾತೆ
    • ರಾಜನಾಥ್ ಸಿಂಗ್ – ರಕ್ಷಣಾ ಖಾತೆ
    • ನಿತಿನ್ ಗಡ್ಕರಿ – ರಾಷ್ಟ್ರೀಯ ಹೆದ್ದಾರಿ ಮತ್ತು ಭೂ ಸಾರಿಗೆ
    • ಜೆ.ಪಿ.ನಡ್ಡಾ – ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ರಸಾಯನಿಕ ಮತ್ತು ರಸಗೊಬ್ಬರ
    • ಶಿವರಾಜ್ ಸಿಂಗ್ ಚೌಹಾಣ್ – ಕೃಷಿ‌, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್
    • ನಿರ್ಮಲಾ ಸೀತಾರಾಮನ್ – ಹಣಕಾಸು, ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ
    • ಎಸ್.ಜೈ ಶಂಕರ್ – ವಿದೇಶಾಂಗ ವ್ಯವಹಾರಗಳ ಖಾತೆ
    • ಮನೋಹರ ಲಾಲ್‌ ಖಟ್ಟರ್‌ – ಇಂಧನ‌ ಮತ್ತು ವಸತಿ
    • ಹೆಚ್‌.ಡಿ.ಕುಮಾರಸ್ವಾಮಿ – ಉಕ್ಕು ಮತ್ತು ಬೃಹತ್‌ ಕೈಗಾರಿಕೆ
    • ಪಿಯೂಷ್‌ ಗೋಯಲ್‌ – ವಾಣಿಜ್ಯ
    • ಧರ್ಮೇಂದ್ರ ಪ್ರಧಾನ್ – ಶಿಕ್ಷಣ‌, ಮಾನವ ಸಂಪನ್ಮೂಲ
    • ಜಿತನ್ ರಾಮ್ ಮಾಂಝಿ – ಸಣ್ಣ ಮತ್ತು ಮಧ್ಯಮ ಕೈಗಾರಿಕೆ
    • ರಾಜೀವ್‌ ರಂಜನ್‌ ಸಿಂಗ್‌ – ಪಂಚಾಯತ್‌ ರಾಜ್‌ ಮತ್ತು ಮೀನುಗಾರಿಕೆ ಇಲಾಖೆ
    • ಸರ್ಬಾನಂದ ಸೋನೊವಾಲ್‌‌ – ಬಂದರು, ಜಲಸಾರಿಗೆ
    • ರಾಮ್‌ ಮೋಹನ್‌ ನಾಯ್ಡು – ನಾಗರಿಕ ವಿಮಾನಯಾನ
    • ಪ್ರಹ್ಲಾದ್‌ ಜೋಶಿ – ಆಹಾರ ಮತ್ತು ನಾಗರಿಕ ಇಲಾಖೆ, ಆಹಾರ ಮತ್ತು ನಾಗರಿಕ ಪೂರೈಕೆ, ನವೀಕರಿಸಬಹುದಾದ ಇಂಧನ,
    • ಡಾ.ವೀರೇಂದ್ರ ಕುಮಾರ್ – ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ
    • ಜುವೆಲ್‌ ಒರಾಮ್‌ – ಬುಡಕಟ್ಟು
    • ಗಿರಿರಾಜ್‌ ಸಿಂಗ್‌ -‌ ಜವಳಿ
    • ಅಶ್ವಿನಿ ವೈಷ್ಣವ್‌ – ರೈಲ್ವೇ, ವಾರ್ತಾ ಮತ್ತು ಮಾಹಿತಿ ಪ್ರಸಾರ, ಐಟಿ
    • ಜ್ಯೋತಿರಾದಿತ್ಯ ಸಿಂಧಿಯಾ – ಟೆಲಿಕಾಮ್
    • ಭೂಪೇಂದ್ರ ಯಾದವ್‌ – ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ
    • ಗಜೇಂದ್ರ ಸಿಂಗ್ ಶೇಖಾವತ್ : ಪ್ರವಾಸೋದ್ಯಮ ಮತ್ತು ಸಂಸ್ಕೃತಿ
    • ಅನ್ನಪೂರ್ಣ ದೇವಿ -ಮಹಿಳಾ ಮತ್ತು ಮಕ್ಕಳ ಕಲ್ಯಾಣ
    • ಕಿರಣ್‌ ರಿಜಿಜು -‌ ಸಂಸದೀಯ ವ್ಯವಹಾರ
    • ಹರ್ದೀಪ್ ಸಿಂಗ್ ಪುರಿ – ಪೆಟ್ರೋಲಿಯಂ, ನೈಸರ್ಗಿಕ ಅನಿಲ
    • ಡಾ.ಮನ್ಸುಖ್‌ ಮಂಡಾವೀಯ – ಕಾರ್ಮಿಕ ಮತ್ತು ಉದ್ಯೋಗ
    • ಜಿ.ಕಿಶನ್‌ ರೆಡ್ಡಿ – ಕಲ್ಲಿದ್ದಿಲು ಮತ್ತು ಗಣಿಗಾರಿಕೆ
    • ಚಿರಾಗ್‌ ಪಾಸ್ವಾನ್‌ -‌ ಆಹಾರ ಸಂಸ್ಕರಣೆ
    • ಸಿ.ಆರ್‌.ಪಾಟೀಲ್‌ -ಜಲಶಕ್ತಿ (ಜಲಸಂಪನ್ಮೂಲ)

    ಸ್ವತಂತ್ರ ಖಾತೆ ನಿರ್ವಹಣೆ

    • ಇಂದ್ರಜೀತ್‌ ಸಿಂಗ್‌ – ಸಾಂಖ್ಯಿಕ, ಯೋಜನೆ ಅನುಷ್ಠಾನ, ಯೋಜನೆ ಮತ್ತು ಸಂಸ್ಕೃತಿ
    • ಡಾ.ಜಿತೇಂದ್ರ ಸಿಂಗ್‌- ವಿಜ್ಞಾನ ಮತ್ತು ತಂತ್ರಜ್ಞಾನ, ಭೂ ವಿಜ್ಞಾನ, ಪಿಎಂಒ, ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಹಾಗೂ ಪಿಂಚಣಿ, ಬಾಹ್ಯಾಕಾಶ, ಪರಮಾಣು
    • ಅರ್ಜುನ್‌ ರಾಮ್‌ ಮೇಘ್ವಾಲ್‌ – ಕಾನೂನು ಮತ್ತು ನ್ಯಾಯ
    • ಪ್ರತಾಪ್‌ ರಾವ್‌ ಗಣಪತ್‌ ರಾವ್‌ ಜಾಧವ್‌ (ಶಿಂಧೆ ಬಣ) – ಆಯುಷ್‌, ಆರೋಗ್ಯ ಮತ್ತು ಕುಟುಂಬ ಕಲ್ಯಾಣ
    • ಜಯಂತ್‌ ಚೌಧರಿ – ಕೌಶಲಾಭಿವೃದ್ಧಿ ಹಾಗೂ ಉದ್ಯಮ, ಶಿಕ್ಷಣ

    ರಾಜ್ಯ ಖಾತೆ ಸಚಿವರು

    • ಜಿತಿನ್‌ ಪ್ರಸಾದ್‌ – ವಾಣಿಜ್ಯ, ಕೈಗಾರಿಕೆ, ವಿದ್ಯುತ್‌ ಮತ್ತು ಮಾಹಿತಿ ತಂತ್ರಜ್ಞಾನ
    • ಶ್ರೀಪಾದ್‌ ನಾಯ್ಕ್ – ವಿದ್ಯುತ್, ಹೊಸ ಮತ್ತು ನವೀಕರಿಸಬಹುದಾದ ಇಂಧನ
    • ಪಂಕಜ್‌ ಚೌಧರಿ -‌ ಹಣಕಾಸು
    • ಕ್ರಿಶನ್‌ ಪಾಲ್‌ – ಸಹಕಾರ
    • ರಾಮ್‌ದಾಸ್‌ ಅಠಾವಳೆ – ಸಾಮಾಜಿಕ ನ್ಯಾಯ
    • ರಾಮನಾಥ್‌ ಠಾಕೂರ್‌ – ಕೃಷಿ ಮತ್ತು ರೈತರ ಕಲ್ಯಾಣ
    • ನಿತ್ಯಾನಂದ್‌ ರಾಯ್‌ – ಗೃಹ
    • ಅನುಪ್ರಿಯಾ ಪಟೇಲ್‌ – ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ರಾಸಾಯನಿಕ ಮತ್ತು ರಸಗೊಬ್ಬರ
    • ವಿ. ಸೋಮಣ್ಣ – ಜಲಶಕ್ತಿ ಹಾಗೂ ರೈಲ್ವೆ
    • ಪೆಮ್ಮಸಾನಿ ಚಂದ್ರಶೇಖರ್‌ – ಗ್ರಾಮೀಣಾಭಿವೃದ್ಧಿ, ಸಂವಹನ
    • ಎಸ್‌ಪಿ ಸಿಂಗ್‌ ಬಘೇಲ್‌ – ಮೀನುಗಾರಿಕೆ, ಪಶು ಸಂಗೋಪನೆ, ಪಂಚಾಯತ್‌ ರಾಜ್
    • ಶೋಭಾ ಕರಂದ್ಲಾಜೆ -‌ ಎಂಎಸ್‌ಎಂಇ, ಕಾರ್ಮಿಕ ಮತ್ತು ಉದ್ಯೋಗ
    • ಕೀರ್ತಿ ವರ್ಧನ್‌ ಸಿಂಗ್‌ – ಪರಿಸರ, ಅರಣ್ಯ ಹಾಗೂ ಹವಾಮಾನ ಬದಲಾವಣೆ, ವಿದೇಶಾಂಗ ಇಲಾಖೆ
    • ಬಿ.ಎಲ್‌.ವರ್ಮಾ – ಗ್ರಾಹಕ ರಕ್ಷಣೆ, ಆಹಾರ, ನಾಗರಿಕ ಪೂರೈಕೆ, ಸಾಮಾಜಿಕ ನ್ಯಾಯ
    • ಶಂತನು ಠಾಕೂರ್‌ – ಬಂದರು, ಜಲಸಾರಿಗೆ ಮತ್ತು ಜಲಮಾರ್ಗ
    • ಸುರೇಶ್‌ ಗೋಪಿ – ಪೆಟ್ರೋಲಿಯಂ, ನೈಸರ್ಗಿಕ ಅನಿಲ, ಪ್ರವಾಸೋದ್ಯಮ
    • ಡಾ.ಎಲ್‌.ಮುರುಗನ್‌ – ಮಾಹಿತಿ ಮತ್ತು ಪ್ರಸಾರ ಹಾಗೂ ಸಂಸದೀಯ ವ್ಯವಹಾರಗಳ ಖಾತೆ
    • ಅಜಯ್‌ ತಮ್ಟಾ – ರಸ್ತೆ ಸಾರಿಗೆ ಮತ್ತು ಹೆದ್ದಾರಿ
    • ಬಂಡಿ ಸಂಜಯ್‌ ಕುಮಾರ್‌ – ಗೃಹ
    • ಕಮಲೇಶ್‌ ಪಾಸ್ವಾನ್‌ – ಗ್ರಾಮೀಣಾಭಿವೃದ್ಧಿ
    • ಭಾಗೀರಥ್‌ ಚೌಧರಿ – ಕೃಷಿ ಮತ್ತು ರೈತರ ಕಲ್ಯಾಣ
    • ಸತೀಶ್‌ ಚಂದ್ರ ದುಬೆ – ಕಲ್ಲಿದ್ದಿಲು ಮತ್ತು ಗಣಿಗಾರಿಕೆ
    • ಸಂಜಯ್‌ ಸೇಠ್‌ – ರಕ್ಷಣಾ ಖಾತೆ
    • ರವನೀತ್‌ ಸಿಂಗ್‌ ಬಿಟ್ಟು – ಆಹಾರ ಸಂಸ್ಕರಣೆಗಳ ಉದ್ಯಮ ಮತ್ತು ರೈಲ್ವೆ
    • ದುರ್ಗಾದಾಸ್‌ ಉಯಿಕೆ – ಬುಡಕಟ್ಟು ವ್ಯವಹಾರಗಳ ಇಲಾಖೆ
    • ರಕ್ಷಾ ನಿಖಿಲ್‌ ಖಡ್ಸೆ – ಯುವಜನ ಮತ್ತು ಕ್ರೀಡೆ
    • ಸುಕಾಂತ ಮಜುಂದಾರ್‌ – ಶಿಕ್ಷಣ ಮತ್ತು ಈಶಾನ್ಯ ಪ್ರದೇಶಗಳ ಅಭಿವೃದ್ಧಿ
    • ಸಾವಿತ್ರಿ ಠಾಕೂರ್‌ – ಮಹಿಳಾ ಮತ್ತು ಮಕ್ಕಳ ಕಲ್ಯಾಣ
    • ತೋಖನ್‌ ಸಾಹು – ವಸತಿ ಮತ್ತು ನಗರಾಭಿವೃದ್ಧಿ
    • ಡಾ.ರಾಜ್‌ಭೂಷಣ್‌ ಚೌಧರಿ – ಜಲಶಕ್ತಿ
    • ಭೂಪತಿ ರಾಜು ಶ್ರೀನಿವಾಸ್‌ ವರ್ಮಾ – ಬೃಹತ್‌ ಕೈಗಾರಿಕೆ ಮತ್ತು ಉಕ್ಕು
    • ಹರ್ಷ ಮಲ್ಹೋತ್ರಾ – ರಸ್ತೆ ಸಾರಿಗೆ ಮತ್ತು ಹೆದ್ದಾರಿ ಹಾಗೂ ಕಾರ್ಪೊರೇಟ್‌ ವ್ಯವಹಾರಗಳ ಖಾತೆ
    • ನಿಮುಬೆನ್‌ ಬಾಂಭಣಿಯಾ – ಗ್ರಾಹಕ ರಕ್ಷಣೆ, ಆಹಾರ ಮತ್ತು ನಾಗರಿಕ ಪೂರೈಕೆ
    • ಮುರಳೀಧರ್‌ ಮೊಹೊಲ್‌ – ಸಹಕಾರ ಮತ್ತು ನಾಗರಿಕ ವಿಮಾನಯಾನ
    • ಜಾರ್ಜ್‌ ಕುರಿಯನ್‌ – ಅಲ್ಪಸಂಖ್ಯಾತ ವ್ಯವಹಾರಗಳು, ಮೀನುಗಾರಿಕೆ, ಪಶುಸಂಗೋಪನೆ, ಹೈನುಗಾರಿಕೆ
    • ಪವಿತ್ರ ಮಾರ್ಗರಿಟಾ – ವಿದೇಶಾಂಗ ವ್ಯವಹಾರಗಳು ಮತ್ತು ಜವಳಿ

  • Modi cabinet: ಕರ್ನಾಟಕದ ನಾಲ್ವರು ಸಚಿವರಿಗೆ ಬಂಪರ್‌ – ಯಾರಿಗೆ ಯಾವ ಖಾತೆ?

    Modi cabinet: ಕರ್ನಾಟಕದ ನಾಲ್ವರು ಸಚಿವರಿಗೆ ಬಂಪರ್‌ – ಯಾರಿಗೆ ಯಾವ ಖಾತೆ?

    – ಎನ್‌ಡಿಎ ಸರ್ಕಾರದ ಮೊದಲ ಕ್ಯಾಬಿನೆಟ್‌ ಸಭೆ

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸಂಪುಟಕ್ಕೆ ಆಯ್ಕೆಯಾಗಿರುವ ಕರ್ನಾಟಕದ ನಾಲ್ವರು ಕೇಂದ್ರ ಸಚಿವರಿಗೆ ಖಾತೆ ಹಂಚಿಕೆಯಾಗಿದೆ.

    3ನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ನರೇಂದ್ರ ಮೋದಿ ಅವರಿಂದು ತಮ್ಮ ನಿವಾಸದಲ್ಲಿ ಮೊದಲ ಸಂಪುಟ ಸಭೆ ನಡೆಸಿದರು. 30 ಸಂಪುಟ ದರ್ಜೆ ಸಚಿವರು, ಐವರು ಸ್ವತಂತ್ರ ಖಾತೆ ನಿರ್ವಹಣೆ ಹಾಗೂ 31 ರಾಜ್ಯ ಖಾತೆ ಸಚಿವರು ಪಾಲ್ಗೊಂಡಿದ್ದರು. ಸಂಪುಟ ಸಭೆಯ ಬಳಿಕ ಖಾತೆ ಹಂಚಿಕೆ ಮಾಡಲಾಗಿದ್ದು, ಪ್ರಮುಖ ಖಾತೆಗಳನ್ನು ಬಿಜೆಪಿ ತನ್ನಲ್ಲೇ ಉಳಿಸಿಕೊಂಡಿದೆ. ಯಾರಿಗೆ ಯಾವ ಖಾತೆ ಹಂಚಿಕೆಯಾಗಿದೆ ಎಂಬುದನ್ನಿಲ್ಲಿ ನೋಡೋಣ…

    • ಹೆಚ್‌.ಡಿ ಕುಮಾರಸ್ವಾಮಿ – ಉಕ್ಕು ಮತ್ತು ಬೃಹತ್‌ ಕೈಗಾರಿಕೆ
    • ಪ್ರಹ್ಲಾದ್‌ ಜೋಶಿ – ಆಹಾರ ಮತ್ತು ನಾಗರೀಕ ಸರಬರಾಜು ಖಾತೆ, ನವೀಕರಿಸಬಹುದಾದ ಇಂಧನ
    • ಶೋಭಾ ಕರಂದ್ಲಾಜೆ – ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆ ರಾಜ್ಯ ಖಾತೆ ಮತ್ತು ಕಾರ್ಮಿಕ ಇಲಾಖೆ ರಾಜ್ಯಖಾತೆ
    • ವಿ. ಸೋಮಣ್ಣ – ಜಲಶಕ್ತಿ ರಾಜ್ಯಖಾತೆ, ರೈಲ್ವೇ ಸಚಿವ ರಾಜ್ಯಖಾತೆ

    ಜೂನ್‌ 9ರಂದು ನರೇಂದ್ರ ಮೋದಿ ಸಂಪುಟದ ನೂತನ ಸಚಿವರಾಗಿ ಹೆಚ್‌.ಡಿ ಕುಮಾರಸ್ವಾಮಿ, ಪ್ರಹ್ಲಾದ್ ಜೋಶಿ, ವಿ.ಸೋಮಣ್ಣ ಹಾಗೂ ಶೋಭಾ ಕರಂದ್ಲಾಜೆ ಪ್ರಮಾಣವಚನ ಸ್ವೀಕರಿಸಿದ್ದರು. ಜೋಶಿ ಹಾಗೂ ಶೋಭಾ ಕರಂದ್ಲಾಜೆ ಅವರು 2ನೇ ಬಾರಿಗೆ ಮೋದಿ ಸಂಪುಟ ಸಚಿವರಾಗಿದ್ದಾರೆ. ಜೊತೆಗೆ ಮೊದಲಬಾರಿಗೆ ಸಂಸದರಾಗಿ ಆಯ್ಕೆಯಾದ ವಿ.ಸೋಮಣ್ಣ ಅವರು ಕೂಡ ಕೇಂದ್ರ ಸಚಿವರಾಗಿದ್ದಾರೆ.

    ಇದರೊಂದಿಗೆ ಮೊದಲ ಸಂಪುಟ ಸಭೆಯಲ್ಲಿಯೇ ಬಡವರಿಗೆ ಅನುಕೂಲವಾಗುವ ದಿಸೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಇದಕ್ಕೆ ಎಲ್ಲ ಸಚಿವರು ಸಹಮತ ಸೂಚಿಸಿದರು. ದೇಶದ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಬಡವರಿಗೆ 3 ಕೋಟಿ ಮನೆಗಳನ್ನು ನಿರ್ಮಿಸಿಕೊಡುವ ಮಹತ್ವದ ತೀರ್ಮಾನವನ್ನು ಮೊದಲ ಸಂಪುಟ ಸಭೆಯಲ್ಲಿ ಕೈಗೊಳ್ಳಲಾಗಿದೆ. ಪ್ರಧಾನಮಂತ್ರಿ ಆವಾಸ್‌ ಯೋಜನೆ ಅಡಿಯಲ್ಲಿ 3 ಕೋಟಿ ಮನೆಗಳ ನಿರ್ಮಾಣಕ್ಕೆ ತೀರ್ಮಾನಿಸಲಾಯಿತು.

  • ಕೇಂದ್ರ ಸಚಿವರಾಗಿ ಕರ್ನಾಟಕದ ನಾಲ್ವರು ಪ್ರಮಾಣವಚನ ಸ್ವೀಕಾರ

    ಕೇಂದ್ರ ಸಚಿವರಾಗಿ ಕರ್ನಾಟಕದ ನಾಲ್ವರು ಪ್ರಮಾಣವಚನ ಸ್ವೀಕಾರ

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಸಂಪುಟದ ಸಚಿವರಾಗಿ (Cabinet Ministers) ಕರ್ನಾಟಕದ (Karnataka)  ನಾಲ್ವರು ಸದಸ್ಯರು ಪ್ರಮಾಣವಚನ ಸ್ವೀಕರಿಸಿದರು.

    ಕೇಂದ್ರ ಸಚಿವರಾಗಿ ಹೆಚ್‌ಡಿ ಕುಮಾರಸ್ವಾಮಿ, ಪ್ರಹ್ಲಾದ್ ಜೋಶಿ, ವಿ ಸೋಮಣ್ಣ ಹಾಗೂ ಶೋಭಾ ಕರಂದ್ಲಾಜೆ ಪ್ರಮಾಣವಚನ ಸ್ವೀಕರಿಸಿದ್ದಾರೆ. ಮೊದಲಿಗೆ ದೇವರ ಹೆಸರಲ್ಲಿ ಹೆಚ್‌ಡಿಕೆ ಕೇಂದ್ರ ಸಂಪುಟ ದರ್ಜೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು. ಇದನ್ನೂ ಓದಿ: ದೇವರ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಪ್ರಲ್ಹಾದ್ ಜೋಶಿ

    ಪ್ರಹ್ಲಾದ್ ಜೋಶಿ ಹಾಗೂ ಶೋಭಾ ಕರಂದ್ಲಾಜೆ ಅವರು ಎರಡನೇ ಬಾರಿಗೆ ಮೋದಿ ಸಂಪುಟ ಸಚಿವರಾಗಿದ್ದಾರೆ. ಜೊತೆಗೆ ವಿ ಸೋಮಣ್ಣ ಅವರು ಕೂಡ ಕೇಂದ್ರ ಸಚಿವರಾಗಿ ಪ್ರಮಾಣವಚನ ಸ್ವೀಕಾರ ಮಾಡಿದರು. ಇದನ್ನೂ ಓದಿ: 4 ಬಾರಿ ಸಿಎಂ, 6 ಬಾರಿ ಸಂಸದ – ಮಧ್ಯಪ್ರದೇಶದ ಮಾಮಾ ಈಗ ಕೇಂದ್ರ ಸಚಿವ

  • ವಿಧಾನಸಭೆಯಲ್ಲಿ ಸೋತು ಕಣ್ಣೀರಿಟ್ಟಿದ್ದ ಸೋಮಣ್ಣಗೆ ರಾಷ್ಟ್ರ ರಾಜಕಾರಣಕ್ಕೆ ಆಶೀರ್ವದಿಸಿದ ಮತದಾರ

    ವಿಧಾನಸಭೆಯಲ್ಲಿ ಸೋತು ಕಣ್ಣೀರಿಟ್ಟಿದ್ದ ಸೋಮಣ್ಣಗೆ ರಾಷ್ಟ್ರ ರಾಜಕಾರಣಕ್ಕೆ ಆಶೀರ್ವದಿಸಿದ ಮತದಾರ

    ತುಮಕೂರು: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋತು ಕಣ್ಣೀರಿಟ್ಟಿದ್ದ ಮಾಜಿ ಸಚಿವ ವಿ.ಸೋಮಣ್ಣಗೆ (V.Somanna) ಲೋಕಸಭಾ ಚುನಾವಣೆಯಲ್ಲಿ ಜನ ಆಶೀರ್ವಾದ ಮಾಡಿದ್ದಾರೆ. ತುಮಕೂರು (Tumkur) ಲೋಕಸಭಾ ಕ್ಷೇತ್ರದಿಂದ ಸೋಮಣ್ಣ ಅವರು 1,75,594 ಮತಗಳ ಅಂತರದಲ್ಲಿ ಗೆದ್ದಿದ್ದು, ಈ ಮೂಲಕ ರಾಷ್ಟ್ರ ರಾಜಕಾರಣಕ್ಕೆ ಕಾಲಿಟ್ಟಿದ್ದಾರೆ.

    ಸೋಮಣ್ಣ 7,20,946 ಮತಗಳಿಸಿದ್ದು, ಕಾಂಗ್ರೆಸ್ (Congress) ಅಭ್ಯರ್ಥಿ ಮುದ್ದುಹನುಮೇಗೌಡ ಅವರು 5,45,352 ಮತಗಳಿಸಿದ್ದರು. ಈ ಮೂಲಕ ಭಾರೀ ಅಂತರದ ಮೂಲಕ ಅವರು ಕೈ ಅಭ್ಯರ್ಥಿ ವಿರುದ್ಧ ಗೆದ್ದು ಬೀಗಿದ್ದಾರೆ.

    ಈ ಬಗ್ಗೆ ಪ್ರತಿಕ್ರಿಯಿಸಿರುವ ಸೋಮಣ್ಣ ತುಮಕೂರಿನ ಲೋಕಸಭಾ ಕ್ಷೇತ್ರದ ಜನತೆಗೆ ಧನ್ಯವಾದ ಸಲ್ಲಿಸಿದ್ದಾರೆ. ಈ ಗೆಲುವನ್ನು ಮಾಜಿ ಪ್ರಧಾನಿ ದೇವೇಗೌಡರು ಹಾಗೂ ಪ್ರಧಾನಿ ಮೋದಿಗೆ ಸಲ್ಲಿಸಲ್ಲಿಸುತ್ತೇನೆ. ಎರಡು ಬಾರಿ ಸೋತ ನನಗೆ ಅಮಿತ್ ಶಾ ಅವಕಾಶ ಕೊಟ್ಟರು ಅವರಿಗೆ ಹಾಗೂ ಯಡಿಯೂರಪ್ಪಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದಿದ್ದಾರೆ.

    ನನ್ನ ಆರಾಧ್ಯ ದೈವ ಶಿವಕುಮಾರ ಶ್ರೀಗಳು ಹಾಗೂ ಆದಿಚುಂಚನಗಿರಿ ಶ್ರೀಗಳ ಆಶೀರ್ವಾದದಿಂದ ಮತ್ತೆ ಜನ ಸೇವೆ ಮಾಡಲು ಅವಕಾಶ ಸಿಕ್ಕಿದೆ. ದೇಶದ ವ್ಯವಸ್ಥೆಯಲ್ಲಿ ಜನಪರ ಕಾರ್ಯಕ್ರಮದಿಂದ ನಾವೆಲ್ಲ ಗೆದ್ದಿದ್ದೇವೆ. ಹೊರಗಿನ ಅಭ್ಯರ್ಥಿ ಎಂದು ಪದೇ ಪದೇ ಎಚ್ಚರಿಕೆ ಕೊಡುತ್ತಿದ್ದರು. ಅದನ್ನು ಎಚ್ಚರಿಕೆ ಗಂಟೆ ಎಂದು ಭಾವಿಸಿ ಹೆಚ್ಚಿಗೆ ದುಡಿದ ಪರಿಣಾಮ ಗೆಲುವು ಸಾಧಿಸಿದ್ದೇನೆ. ದೇಶದಲ್ಲಿ ಸ್ವಲ್ಪ ಹಿನ್ನಡೆ ಆಗಿದೆ. ಇದಕ್ಕೆ ಇಂಡಿಯಾ ಒಕ್ಕೂಟದ ಅಪಪ್ರಚಾರ ಕಾರಣ ಎಂದು ಅವರು ದೂರಿದ್ದಾರೆ.

  • ತುಮಕೂರು ಕ್ಷೇತ್ರ ಗೆಲ್ಲಲು ಬಿಜೆಪಿ ಪ್ಲ್ಯಾನ್‌; ಮಾಧುಸ್ವಾಮಿ ಮುನಿಸು ಶಮನಕ್ಕೆ ಆಫರ್ – ಸೋಮಣ್ಣ ಪರ ಪ್ರಚಾರಕ್ಕಿಳಿತಾರಾ?

    ತುಮಕೂರು ಕ್ಷೇತ್ರ ಗೆಲ್ಲಲು ಬಿಜೆಪಿ ಪ್ಲ್ಯಾನ್‌; ಮಾಧುಸ್ವಾಮಿ ಮುನಿಸು ಶಮನಕ್ಕೆ ಆಫರ್ – ಸೋಮಣ್ಣ ಪರ ಪ್ರಚಾರಕ್ಕಿಳಿತಾರಾ?

    ತುಮಕೂರು: ಮಾಧುಸ್ವಾಮಿ ಬಂಡಾಯದ ಮೂಲಕ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದ್ದ ತುಮಕೂರಿನಲ್ಲಿ ಇದೀಗ ಎಲ್ಲಾ ವೈಷಮ್ಯಗಳು ತೆರೆಮರೆಗೆ ಸೇರಿದಂತೆ ಕಾಣುತ್ತಿದೆ. ವಿ.ಸೋಮಣ್ಣ ಮೇಲಿನ ಮಾಧುಸ್ವಾಮಿ (J.C.Madhuswamy) ಮುನಿಸು ತಣ್ಣಗಾಗಿದೆ. ಇತ್ತ ವಿ.ಸೋಮಣ್ಣರ ಪರ ಮಾಧುಸ್ವಾಮಿ ಪ್ರಚಾರ ಮಾಡುವ ಮೂಲಕ ಎಲ್ಲಾ ಅನುಮಾನಗಳಿಗೂ ತೆರೆ ಎಳೆಯಲಾಗಿದೆ.

    ತುಮಕೂರು (Tumakuru) ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ (V.Somanna) ವಿರುದ್ಧ ಮುನಿಸಿಕೊಂಡಿದ್ದ ಮಾಜಿ ಸಚಿವ ಮಾಧುಸ್ವಾಮಿಯ ಕೋಪ ಕಡಿಮೆಯಾದಂತೆ ಕಾಣುತ್ತಿದೆ. ಸೋಮಣ್ಣರ ಪರ ಬಹಿರಂಗ ಪ್ರಚಾರ ಮಾಡದೇ ಇದ್ದರೂ ಅಂಡರ್ ಗ್ರೌಂಡ್ ವರ್ಕ್ ಮಾಡುತ್ತಿದ್ದಾರೆ. ಮಾಧುಸ್ವಾಮಿಯ ಕೋಪ ತಣಿಯಲು ರಾಜ್ಯ ಬಿಜೆಪಿ ವರಿಷ್ಠರು ಹೊಸದೊಂದು ಮದ್ದು ಅರೆದಂತೆ ಕಾಣುತ್ತಿದೆ. ಇದನ್ನೂ ಓದಿ: ತುಮಕೂರು ರಾಜಕೀಯದಲ್ಲಿ ದಿನಕ್ಕೊಂದು ಟ್ವಿಸ್ಟ್- ಮಾಧುಸ್ವಾಮಿ ಭೇಟಿಯಾದ ಮುದ್ದಹನುಮೇಗೌಡ!

    ವಿ.ಸೋಮಣ್ಣರ ಪರ ಕೆಲಸ ಮಾಡುವ ಜೊತೆಗೆ ಮಾಧುಸ್ವಾಮಿಗೆ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಹೊಣೆಗಾರಿಕೆಯನ್ನೂ ನೀಡಲಾಗಿದೆ. ಉಡುಪಿ-ಚಿಕ್ಕಮಗಳೂರಿನಿಂದ ಶ್ರೀನಿವಾಸ್ ಪೂಜಾರಿ ಗೆಲ್ಲಿಸಿಕೊಂಡು ಬಂದರೆ ಮಾಧುಸ್ವಾಮಿ ಲಕ್ ಬದಲಾಗಬಹುದು ಎನ್ನಲಾಗಿದೆ. ಕಾರಣ, ಶ್ರೀನಿವಾಸ್ ಪೂಜಾರಿಯಿಂದ ತೆರವಾದ ಪರಿಷತ್ ವಿಪಕ್ಷ ನಾಯಕ ಸ್ಥಾನಕ್ಕೆ ಮಾಧುಸ್ವಾಮಿ ಕೂರಿಸುವ ನಿರ್ಧಾರ ಮಾಡಲಾಗಿದೆ ಎಂಬ ಮಾತು ಕೇಳಿಬಂದಿದೆ. ಪರಿಷತ್ ವಿಪಕ್ಷ ನಾಯಕ ಪಟ್ಟ ಕಟ್ಟುವ ಭರವಸೆ ಬಳಿಕವೇ ಮಾಧುಸ್ವಾಮಿ ಸೋಮಣ್ಣರನ್ನು ಬೆಂಬಲಿಸಲು ಮುಂದಾಗಿದ್ದಾರೆ ಎನ್ನಲಾಗಿದೆ.

    ಭರವಸೆ ಬಳಿಕವೇ ಮಾಧುಸ್ವಾಮಿ ಇನ್ನಷ್ಟು ಆಕ್ಟಿವ್ ಆಗಿ ಚಿಕ್ಕನಾಯಕನಹಳ್ಳಿ ಕ್ಷೇತ್ರದಲ್ಲಿ ಓಡಾಡುತ್ತಿದ್ದಾರೆ. ಸೋಮಣ್ಣ ಪರ ಕೆಲಸ ಮಾಡುವಂತೆ ತಮ್ಮ ಆಪ್ತರಿಗೆ ತಿಳಿಸಿದ್ದಾರೆ ಎನ್ನಲಾಗಿದೆ. ಅಲ್ಲದೇ ಅತೃಪ್ತಗೊಂಡ ಜೆಡಿಎಸ್ ಮುಖಂಡರನ್ನೂ ಭೇಟಿಯಾಗಿ ಅಸಮಾಧಾನ ತಣಿಸುವ ಕೆಲಸ ಮಾಡುತ್ತಿದ್ದಾರೆ. ಅಲ್ಲದೆ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲೂ ಬಿರುಸಿನ ಪ್ರಚಾರದಲ್ಲಿದ್ದಾರೆ. ರಾಜ್ಯ ಬಿಜೆಪಿ ವರಿಷ್ಠರು ಕೊಟ್ಟ ಟಾಸ್ಕ್ ಯಶಸ್ವಿಗೊಳಿಸಿ, ಪರಿಷತ್ ವಿಪಕ್ಷ ನಾಯಕನ ಪಟ್ಟಕ್ಕೇರುವ ಪ್ರಯತ್ನದಲ್ಲಿ ಇದ್ದಾರೆ ಎಂಬ ಚರ್ಚೆ ಶುರುವಾಗಿದೆ. ಇದನ್ನೂ ಓದಿ: ರಾಜಸ್ಥಾನದಲ್ಲಿ ಕಾಂಗ್ರೆಸ್‌ ತೊರೆದ 400 ಕಾರ್ಯಕರ್ತರು

  • ನಾನು ಮೋದಿ ಮುಖ ನೋಡಿ ಕೆಲಸ ಮಾಡಲ್ಲ: ಮಾಧುಸ್ವಾಮಿ

    ನಾನು ಮೋದಿ ಮುಖ ನೋಡಿ ಕೆಲಸ ಮಾಡಲ್ಲ: ಮಾಧುಸ್ವಾಮಿ

    – ಸೋಮಣ್ಣ ಗೆಲ್ಲೋದು ನನಗೆ ಇಷ್ಟವಿಲ್ಲ

    ತುಮಕೂರು: ಪ್ರತಾಪ್ ಸಿಂಹ, ಸಿ.ಟಿ.ರವಿ ಮೋದಿ (Narendra Modi) ಮುಖ ನೋಡಿ ಕೆಲಸ ಮಾಡಬಹುದು. ಆದರೆ ನಾನು ಮೋದಿ ಮುಖ ನೋಡಿ ಕೆಲಸ ಮಾಡಲ್ಲ ಎಂದು ಬಿಜೆಪಿ (BJP) ಟಿಕೆಟ್ ವಂಚಿತ ಮಾಜಿ ಸಚಿವ ಮಾಧುಸ್ವಾಮಿ (Madhuswamy) ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಈ ಕುರಿತು ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಅವರು, ಸೋಮಣ್ಣ (V Somanna) ಗೆಲ್ಲೋದು ಸಂಸದ ಬಸವರಾಜು ಸೇರಿ ನನಗೂ ಇಷ್ಟವಿಲ್ಲ. ಸೋಮಣ್ಣ ಪರ ನಾನು ಕೆಲಸ ಮಾಡಲ್ಲ. ಯಡಿಯೂರಪ್ಪನವರೇ (BS Yediyurappa) ಟಿಕೆಟ್ ಕೊಡೋದಾಗಿ ನನಗೆ ಆಸೆ ಹುಟ್ಟಿಸಿದ್ದರು. ಈಗ ಟಿಕೆಟ್ ಕೊಡಿಸುವಲ್ಲಿ ಅವರು ವಿಫಲರಾಗಿದ್ದಾರೆ. ನನಗೆ ಯಡಿಯೂರಪ್ಪ ಅವರ ಮೇಲೆ ಬೇಸರ ಇದೆ. ಅಪ್ಪ-ಮಕ್ಕಳ ಅಸ್ಥಿತ್ವಕ್ಕಾಗಿ ಏನೇನೋ ಮಾಡಬಾರದು ಎಂದು ಕಿಡಿಕಾರಿದರು. ಇದನ್ನೂ ಓದಿ: ನನಗೆ ಟಿಕೆಟ್ ಕೊಡಿಸಿದ್ದು ಪತ್ನಿ ಕುಟುಂಬ ಅಲ್ಲ: ಯದುವೀರ್ ಸ್ಪಷ್ಟನೆ

    ವಿ.ಸೋಮಣ್ಣ ಹೊರಗಿನಿಂದ ಬಂದವರು. ಅವರು ಗೆಲ್ಲೋದು ಇಲ್ಲಿಯ ಮತದಾರರಿಗೆ ಬೇಡ. ಹಾಗಂತ ನಾನು ಕಾಂಗ್ರೆಸ್‌ಗೆ (Congress) ಹೋಗುತ್ತೇನೆ ಎಂದು ತಪ್ಪು ತಿಳಿಯಬೇಡಿ. ಸೋಮಣ್ಣ ಬಿಟ್ಟು ಬೇರೆಯವರಿಗೆ ಟಿಕೆಟ್ ಕೊಟ್ಟರೆ ನಾನು ಕೆಲಸ ಮಾಡುತ್ತಿದ್ದೆ. ಸೋಮಣ್ಣರನ್ನು ಬಲಿ ಕೊಡಲು ಸಂಸದ ಬಸವರಾಜು ಕರೆದುಕೊಂಡು ಬಂದಿದ್ದಾರೆ. ಕಾಂಗ್ರೆಸ್ ಜೊತೆ ಬಸವರಾಜು ಸಂಬಂಧ ಚೆನ್ನಾಗಿದೆ. ಕೆ.ಎನ್ ರಾಜಣ್ಣ ತಮಗೆ ಎರಡೂ ಪಕ್ಷದಲ್ಲಿ ಸ್ನೇಹಿತರಿದ್ದಾರೆ, ನಾವು ಗೆಲ್ಲುತ್ತೇವೆ ಎಂದಿದ್ದರು. ಜಿಎಸ್ ಬಸವರಾಜು ರಾಜಣ್ಣರ ಋಣ ತೀರಿಸಬೇಕಾಗಿದೆ. ಹಾಗಾಗಿ ಇವರೆಲ್ಲರೂ ಸೇರಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರಲಿದ್ದಾರೆ ಎಂದರು. ಇದನ್ನೂ ಓದಿ: ನಾಳೆ ಲೋಕಸಭಾ ಚುನಾವಣೆ ದಿನಾಂಕ ಘೋಷಣೆ