Tag: V.Somanna

  • ಜಾತಿ ಜನಗಣತಿ ವರದಿಯೇ ಸಿದ್ದರಾಮಯ್ಯಗೆ ಮರಣ ಶಾಸನ ಆಗಬಹುದು: ವಿ. ಸೋಮಣ್ಣ

    ಜಾತಿ ಜನಗಣತಿ ವರದಿಯೇ ಸಿದ್ದರಾಮಯ್ಯಗೆ ಮರಣ ಶಾಸನ ಆಗಬಹುದು: ವಿ. ಸೋಮಣ್ಣ

    – ವರದಿ ಜಾರಿಯಾದ್ರೆ ರಾಜ್ಯದಲ್ಲಿ ಕೋಮುದಳ್ಳುರಿಗೆ ಸಿಎಂ ಕಾರಣ ಆಗ್ತಾರೆ ಎಂದ ಸಚಿವ

    ಬೆಂಗಳೂರು: ಪ್ರಸ್ತುತ ಜಾತಿ ಜನಗಣತಿ (Caste Census) ವರದಿಯೇ ಸಿದ್ದರಾಮಯ್ಯಗೆ ಮರಣ ಶಾಸನ ಆಹಬಹುದು. ಏಕೆಂದರೆ ಅವರ ಪಕ್ಷದವರೇ ರಾಜಕೀಯವಾಗಿ ಕಾಲೆಳೆಯಲು ಪಿತೂರಿ ಮಾಡ್ತಿದ್ದಾರೆ ಎಂದು ಕೇಂದ್ರ ಸಚಿವ ವಿ.ಸೋಮಣ್ಣ (V Somanna) ಮಾರ್ಮಿಕವಾಗಿ ನುಡಿದಿದ್ದಾರೆ.

    ಜಾತಿ ಜನಗಣತಿ ವರದಿ ವಿಚಾರಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾತಿ ಜನಗಣತಿ ವರದಿ ಕಾಗಕ್ಕ ಗೂಬಕ್ಕ ಕತೆ ಥರ ಇದೆ. ಈ ವರದಿ ಸಿದ್ದರಾಮಯ್ಯಗೇ (Siddaramaiah) ಮರಣ ಶಾಸನ ಆಗಬಹುದು. ಅವರ ಪಕ್ಷದವರೇ ಅವರನ್ನು ರಾಜಕೀಯವಾಗಿ ಕಾಲೆಳೆಯಲು ಪಿತೂರಿ ಮಾಡ್ತಿದ್ದಾರೆ. ಈ ವರದಿ ಜಾರಿಯಾದರೆ ಸಿದ್ದರಾಮಯ್ಯ ರಾಜ್ಯ ರಾಜಕೀಯ ಇತಿಹಾಸದಲ್ಲಿ ಒಬ್ಬ ಖಳನಾಯಕ ಆಗ್ತಾರೆ ಎಂದು ಲೇವಡಿ ಮಾಡಿದ್ದಾರೆ.

    ಸಿದ್ದರಾಮಯ್ಯ ಅವರಿಗೆ ಪೂರ್ಣ ಸತ್ಯ ಗೊತ್ತಿದೆ. ಆದ್ರೆ ಅವರು ಅವರ ಕುರ್ಚಿ ಉಳಿಸಿಕೊಳ್ಳಲು ವರದಿ ಜಾರಿಗೆ ಮುಂದಾಗಿದ್ದಾರೆ. ಮೊನ್ನೆ ಮೊನ್ನೆ ಅವರ ಹೈಕಮಾಂಡ್ ನಾಯಕರು ಅವರನ್ನು ಕರೆದು ಹೇಳಿದ್ದಾರೆ, ಸಿದ್ದರಾಮಯ್ಯ ಅವರ ಇವತ್ತಿನ ಪರಿಸ್ಥಿತಿ ನೋಡಿದ್ರೆ, ಈ ಮಟ್ಟಕ್ಕೂ ಅವರು ಬಂದಿದ್ದಾರಾ ಅನ್ನೋ ನೋವು ಕಾಡುತ್ತೆ ನನಗೆ ಎಂದು ಹೇಳಿದ್ದಾರೆ.

    ವರದಿಯನ್ನ ಸಿದ್ದರಾಮಯ್ಯ ತಿರಸ್ಕರಿಸಲಿ:
    ಪ್ರಸ್ತುತ ತಂದಿರುವ ಜಾತಿ ಜನಗಣತಿ ವರದಿಯನ್ನು ಸಿದ್ದರಾಮಯ್ಯ ಅವರು ತಿರಸ್ಕರಿಸಬೇಕು. ಮತ್ತೊಂದು ಸಮೀಕ್ಷೆಯನ್ನು ಮಾಡಿ, ಇನ್ನೂ ಮೂರು ವರ್ಷ ಸಮಯ ಇದೆ ಸಿದ್ದರಾಮಯ್ಯಗೆ. ಈ ಸಮೀಕ್ಷೆ ವೈಜ್ಞಾನಿಕವಾಗಿ ಮಾಡಿಲ್ಲ, ವರದಿ ಪಾರದರ್ಶಕ ಆಗಿಲ್ಲ. ಇದೊಂದು ಜೇನುಗೂಡಿಗೆ ಕೈ ಹಾಕಿದಂತೆ, ನಿಮ್ಮ ಪಕ್ಷದವರೇ ಏನೇನೋ ಹಿಡಿದು ತಿವೀತಿದ್ದಾರೆ. ಈ ವರದಿ ಜಾರಿ ಆದ್ರೆ ಸಾಮಾನ್ಯ ಜನರೂ ಸಿದ್ದರಾಮಯ್ಯಗೆ ಶಾಪ ಹಾಕ್ತಾರೆ. ವರದಿ ಜಾರಿಯಾದರೆ ಸಿದ್ದರಾಮಯ್ಯ ಒಂಟಿಯಾಗಿ ಹೋಗ್ತಾರೆ. ಆದ್ದರಿಂದ ಈ ವರದಿ ತಿರಸ್ಕರಿಸುವಂತೆ ವಿ. ಸೋಮಣ್ಣ ಮನವಿ ಮಾಡಿದ್ದಾರೆ.

    ಜಾತಿ ಜನಗಣತಿ ವರದಿ ಸರಿಯಿಲ್ಲ ಅಂತ ಕಾಂಗ್ರೆಸ್‌ನ 50%-60% ನಾಯಕರು ಹೇಳ್ತಿದ್ದಾರೆ. ಹಲವು ಕಡೆ ಸಮೀಕ್ಷೆ ಮಾಡಿಲ್ಲ, ವರದಿಯಲ್ಲಿ ಮಕ್ಕಿ ಕಾ ಮಕ್ಕಿ ಆಗಿದೆ. ಹೊರೆಯಾದರೂ ಪರವಾಗಿಲ್ಲ ಮತ್ತೊಂದು ಸಮಿತಿ ಮಾಡಿ, ಒಂದು ವರ್ಷದಲ್ಲಿ ಹೊಸ ಸಮೀಕ್ಷೆ ಮಾಡಿಸಿ. ಈಗಿನ ವರದಿ ಜಾರಿಯಾದರೆ ರಾಜ್ಯದಲ್ಲಿ ಕೋಮುದಳ್ಳುರಿ ಆಗುತ್ತೆ, ಅದಕ್ಕೆ ಸಿದ್ದರಾಮಯ್ಯ ಅವರೇ ಕಾರಣ ಆಗ್ತಾರೆ. ಹೈಕಮಾಂಡ್ ನವ್ರು ಹೇಳಿದ್ರು ಅಂತ ಈ ವರದಿಯ ಜಾರಿ ಮಾಡಿದ್ರೆ ಅದೇ ಸಿದ್ದರಾಮಯ್ಯಗೆ ಮರಣ ಶಾಸಕ ಆಗುತ್ತೆ ಎಂದು ಎಚ್ಚರಿಕೆ ನೀಡಿದ್ದಾರೆ.

    ಬೆಲೆ ಏರಿಕೆ ದಾಹ ಇಂಗಿಲ್ಲ:
    ಇದೇ ವೇಳೆ ಬೆಲೆ ಏರಿಕೆ ಕುರಿತು ಮಾತನಾಡಿದ ಸಚಿವರು, ರಾಜ್ಯ ಸರ್ಕಾರ ಎಲ್ಲಾ ಪದಾರ್ಥಗಳಿಗೂ ದರ ಏರಿಕೆ ಮಾಡಿದೆ. ಕಾಂಗ್ರೆಸ್‌ನ ದರ ಏರಿಕೆ ದಾಹ ಇನ್ನೂ ಇಂಗಿಲ್ಲ. ಇದಲ್ಲದೇ ಬೆಂಗಳೂರಿನಲ್ಲಿ ಅಡಿಗೆ ನೂರು ರೂಪಾಯಿ ವಸೂಲಿ ಮಾಡ್ತಿದ್ದಾರೆ, ಕಸಕ್ಕೂ ಶುಲ್ಕ ಹಾಕಿದ್ದಾರೆ. ರಾಜ್ಯದ ಬೊಕ್ಕಸ ಖಾಲಿ ಮಾಡಿದ್ರಿ, ಜನರ ಮೇಲೆ ಅನಾವಶ್ಯಕ ಟ್ಯಾಕ್ಸ್ ಹಾಕ್ತಿದ್ದೀರಿ. ಸಿದ್ದರಾಮಯ್ಯ ಏನು ಭರವಸೆ ಕೊಟ್ಟಿದ್ದಾರೋ ಅದರಲ್ಲಿ 1 ಪರ್ಸೆಂಟ್ ಆದ್ರೂ ಈಡೇರಿಸಿ ಎಂದು ತಿವಿದಿದ್ದಾರೆ.

  • ಜಲಜೀವನ್ ಮಿಷನ್‌ಗೆ ರಾಜ್ಯಕ್ಕೆ ಘೋಷಿಸಿದ ಹಣ ಬಿಡುಗಡೆ ಮಾಡದೇ ಕೇಂದ್ರ ದ್ರೋಹ: ಸಿಎಂ

    ಜಲಜೀವನ್ ಮಿಷನ್‌ಗೆ ರಾಜ್ಯಕ್ಕೆ ಘೋಷಿಸಿದ ಹಣ ಬಿಡುಗಡೆ ಮಾಡದೇ ಕೇಂದ್ರ ದ್ರೋಹ: ಸಿಎಂ

    – ಕೇಂದ್ರ ವರ್ಸಸ್ ರಾಜ್ಯ ಸರ್ಕಾರದ ನಡುವೆ ಜಲಜೀವನ್ ಮಿಷನ್ ಫೈಟ್

    ಬೆಂಗಳೂರು: ಪ್ರತಿಷ್ಠಿತ ಜಲಜೀವನ್ ಮಿಷನ್‌ಗೆ (Jal Jeevan Mission) ಸಂಬಧಿಸಿ ರಾಜ್ಯಕ್ಕೆ ಘೋಷಿಸಲಾದ ಹಣವನ್ನು ಬಿಡುಗಡೆ ಮಾಡದೇ ಕೇಂದ್ರ ಸರ್ಕಾರ ದ್ರೋಹ ಮಾಡಿದೆ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಗಂಭೀರ ಆರೋಪ ಮಾಡಿದ್ದಾರೆ.

    ಈ ಕುರಿತು ಎಕ್ಸ್‌ನಲ್ಲಿ ಟ್ವೀಟ್ ಮಾಡಿದ ಅವರು, ಕೇಂದ್ರ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಅದರಲ್ಲೂ ಪ್ರಮುಖವಾಗಿ ಕೇಂದ್ರ ಸಚಿವ ಸೋಮಣ್ಣರನ್ನು ಟಾರ್ಗೆಟ್ ಮಾಡಿ ವಾಗ್ದಾಳಿ ನಡೆಸಿದ್ದಾರೆ. ಜೆಜೆಎಂ ಅಡಿ ಕರ್ನಾಟಕಕ್ಕೆ 28,623 ಕೋಟಿ ರೂ. ರಿಲೀಸ್ ಮಾಡಿದ್ರೂ, ಅವರು ಖರ್ಚು ಮಾಡಿರೋದು ಬರೀ 11, 760 ಕೋಟಿ ರೂ. ಎಂದು ಸೋಮಣ್ಣ ಲೋಕಸಭೆಗೆ ತಿಳಿಸಿದ್ದಾರೆ ಎಂದು ವರದಿಯಾಗಿದೆ. ಆದರೆ ಸೋಮಣ್ಣ ಸುಳ್ಳು ಹೇಳುತ್ತಿದ್ದಾರೆ ಎಂದು ಸಿಎಂ ಆಪಾದಿಸಿದ್ದಾರೆ. ಇದನ್ನೂ ಓದಿ: ಕುಂಭಮೇಳದಿಂದ ಬರುತ್ತಿದ್ದಾಗ ಅಪಘಾತ – ರಾಯಚೂರಿನ ವ್ಯಕ್ತಿ ಸಾವು

    ರಾಜ್ಯದಲ್ಲಿ ಜೆಜೆಎಂಗೆ 49,262 ಕೋಟಿ ರೂ. ನಿಗದಿಯಾಗಿದೆ. ಇದರಲ್ಲಿ ಕೇಂದ್ರದ ಪಾಲು 26,119 ಕೋಟಿ ರೂ., ರಾಜ್ಯದ ಪಾಲು 23,142 ಕೋಟಿ. ಇದರಲ್ಲಿ ಬಿಡುಗಡೆ ಆಗಿರೋದು 32,202 ಕೋಟಿ. ಈ ಪೈಕಿ ಕೇಂದ್ರ ಕೊಟ್ಟಿರೋದು ಬರೀ 11,760 ಕೋಟಿ. ಅಂದರೆ ಬರೀ 45% ಮಾತ್ರ. ರಾಜ್ಯ ಕೊಟ್ಟಿರೋದು 20,442 ಕೋಟಿ. ಅಂದರೆ 88%ರಷ್ಟು ಮೊತ್ತ. ಬಿಡುಗಡೆಯಾದ 33,202 ಕೋಟಿಯಲ್ಲಿ ಸರ್ಕಾರ 29,413 ಕೋಟಿ ಖರ್ಚು ಮಾಡಿದೆ ಎಂದು ಸಿಎಂ ವಿವರ ನೀಡಿದ್ದಾರೆ. ಇದನ್ನೂ ಓದಿ: ಧಾರ್ಮಿಕ ವಿಚಾರದಲ್ಲೂ ರಾಜಕಾರಣ ಮಾಡುವವರು ನಿಜವಾದ ಹಿಂದೂಗಳಲ್ಲ: ಪ್ರಕಾಶ್‌ ರಾಜ್‌

    ನರೇಂದ್ರ ಮೋದಿ ಅವರ ಸರ್ಕಾರ ತನ್ನ ಬಜೆಟ್‌ನಲ್ಲಿ ಅಗತ್ಯ ಪ್ರಮಾಣದ ಅನುದಾನ ನೀಡದೆ ಜಲಜೀವನ್ ಮಿಷನ್ ಯೋಜನೆಯನ್ನು ಕೊಲ್ಲುತ್ತಿದೆ. ರಾಜ್ಯದ ಹಿತವನ್ನು ಗಮನದಲ್ಲಿಟ್ಟುಕೊಂಡು ಈ ಅನ್ಯಾಯವನ್ನು ಪ್ರಶ್ನಿಸಬೇಕಿದ್ದ ಸಚಿವ ಸೋಮಣ್ಣ ಅವರಂತಹ ಬಿಜೆಪಿ ನಾಯಕರು ನಿರ್ಲಜ್ಜರಾಗಿ ತಪ್ಪು ಮಾಹಿತಿಯನ್ನು ಹರಡಿ ಕನ್ನಡಿಗರಿಗೆ ದ್ರೋಹ ಎಸಗುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: Haveri | ಸತ್ತು ಬದುಕಿದ್ದ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೇ ಸಾವು

  • ರಾಜ್ಯಧ್ಯಕ್ಷರ ಬದಲಾವಣೆ ಚರ್ಚೆ – ಅಮಿತ್ ಶಾ ಭೇಟಿಯಾದ ಸೋಮಣ್ಣ

    ರಾಜ್ಯಧ್ಯಕ್ಷರ ಬದಲಾವಣೆ ಚರ್ಚೆ – ಅಮಿತ್ ಶಾ ಭೇಟಿಯಾದ ಸೋಮಣ್ಣ

    ನವದೆಹಲಿ: ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ ವಿಜಯೇಂದ್ರ (BY Vijayendra) ಅವರ ಬದಲಾವಣೆಗೆ ಆಗ್ರಹ ಕೇಳಿ ಬರುತ್ತಿರುವ ಹೊತ್ತಲ್ಲೇ ಕೇಂದ್ರ ಸಚಿವ, ಹಿರಿಯ ನಾಯಕ ವಿ.ಸೋಮಣ್ಣ (V Somanna) ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರನ್ನು ಭೇಟಿಯಾಗಿ ಕುತೂಹಲ ಮೂಡಿಸಿದ್ದಾರೆ.

    ತುಮಕೂರು ಕ್ಷೇತ್ರಕ್ಕೆ ಸಂಬಂಧಿಸಿದ ಯೋಜನೆ ವಿಚಾರದ ನೆಪದಲ್ಲಿ ಸಂಸತ್‌ನಲ್ಲಿರುವ ಅಮಿತ್ ಶಾ ಕಚೇರಿಯಲ್ಲಿ ಭೇಟಿಯಾಗಿರುವ ವಿ.ಸೋಮಣ್ಣ ಸುಮಾರು 20 ನಿಮಿಷಕ್ಕೂ ಅಧಿಕ ಕಾಲ ಚರ್ಚೆ ನಡೆಸಿದ್ದಾರೆ. ಇದನ್ನೂ ಓದಿ: ಸಂಜನಾ ಗಲ್ರಾನಿಗೆ ‘ಡ್ರಗ್ಸ್‌’ ಸಂಕಷ್ಟ – ಸುಪ್ರೀಂಗೆ ಮೇಲ್ಮನವಿಗೆ ಪೊಲೀಸರ ಸಿದ್ಧತೆ

    ಸೋಮವಾರಷ್ಟೇ ರಾಜ್ಯಧ್ಯಕ್ಷ ಬಿ.ವೈ ವಿಜಯೇಂದ್ರ ವಿರುದ್ಧ ಬಂಡಾಯ ಸಾರಿದ್ದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನೇತೃತ್ವದ ಗುಂಪು ಗೃಹಪ್ರವೇಶ ಪೂಜೆ ನೆಪದಲ್ಲಿ ವಿ.ಸೋಮಣ್ಣ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿತ್ತು. ಇದರ ಬೆನ್ನಲ್ಲೇ ಮಾಜಿ ಸಿಎಂ, ಸಂಸದ ಬಸವರಾಜ್ ಬೊಮ್ಮಾಯಿ ನೇತೃತ್ವದಲ್ಲಿ ಲಿಂಗಾಯತ ನಾಯಕರು ವಿ.ಸೋಮಣ್ಣ ನಿವಾಸದಲ್ಲಿ ಸಭೆ ನಡೆಸಿದ್ದರು. ಇದನ್ನೂ ಓದಿ: ಖರ್ಗೆ, ವೇಣುಗೋಪಾಲ್ ಭೇಟಿಯಾದ ಸತೀಶ್ ಜಾರಕಿಹೊಳಿ

    ಈ ಸರಣಿ ಸಭೆಗಳ ಬೆನ್ನಲ್ಲೇ ವಿ.ಸೋಮಣ್ಣ ಅಮಿತ್ ಶಾ ಅವರನ್ನು ಭೇಟಿಯಾಗಿದ್ದಾರೆ. ಭೇಟಿ ವೇಳೆ ರಾಜ್ಯದಲ್ಲಿ ಅಧ್ಯಕ್ಷರ ವಿಚಾರದಲ್ಲಿ ನಡೆಯುತ್ತಿರುವ ಬೆಳವಣಿಗೆ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನಡೆ ಹಾಗೂ ಅವರಿಗೆ ಶೋಕಾಸ್ ನೋಟಿಸ್ ಕೊಟ್ಟಿರುವ ವಿಚಾರ ಹಾಗೂ ಬಿ.ವೈ ವಿಜಯೇಂದ್ರ ವರ್ತನೆಯ ಬಗ್ಗೆ ಹಿರಿಯ ನಾಯಕರಿಗಿರುವ ಅಸಮಧಾನದ ಬಗ್ಗೆ ಮಾಹಿತಿ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ನನ್ನ ಮದುವೆಗೆ ದರ್ಶನ್ ಅವ್ರು ಬಂದ್ರೆ ತುಂಬಾ ಸಂತೋಷ: ಡಾಲಿ ಧನಂಜಯ್

    ಬಿ.ವೈ ವಿಜಯೇಂದ್ರ ವಿರುದ್ಧ ಯತ್ನಾಳ್ ಬಣ ವಿರೋಧ ವ್ಯಕ್ತಪಡಿಸುತ್ತಿರುವ ಹೊತ್ತಲ್ಲಿ ಲಿಂಗಾಯತ ನಾಯಕರ ವಲಯದಲ್ಲಿ ಕಿಡಿ ಹೊತ್ತಿರುವ ಬಗ್ಗೆ ವಿ.ಸೋಮಣ್ಣ ವಿವರಿಸಿದ್ದಾರೆ. ಇದೇ ವೇಳೆ ತಾವು ರಾಜ್ಯಧ್ಯಕ್ಷ ಸ್ಥಾನದ ಆಕಾಂಕ್ಷಿ ಎಂದು ಮನವರಿಕೆ ಮಾಡುವ ಪ್ರಯತ್ನ ಮಾಡಿದ್ದಾರೆ ಎನ್ನಲಾಗಿದೆ. ಸೋಮಣ್ಣ ಮಾತು ಆಲಿಸಿರುವ ಅಮಿತ್ ಶಾ ಸೂಕ್ತ ನಿರ್ಧಾರದ ಭರವಸೆ ನೀಡಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: RSSನ ವ್ಯಕ್ತಿ ಕೃತ್ಯ ಮಾಡಿದ್ದಾನೆ.. ಮುಸ್ಲಿಂ ಏರಿಯಾ ಠಾಣೆಯಲ್ಲಿ ಯಾಕೆ ಇಡಬೇಕಿತ್ತು?: ಪೊಲೀಸರ ನಡೆಗೆ ರಾಜಣ್ಣ ಗರಂ

  • ಸೋಮಣ್ಣ ಗೃಹಪ್ರವೇಶದಲ್ಲಿ ಭಿನ್ನರು – ದೆಹಲಿಯಲ್ಲೇ ಇದ್ರೂ ಅತ್ತ ಸುಳಿಯದ ವಿಜಯೇಂದ್ರ!

    ಸೋಮಣ್ಣ ಗೃಹಪ್ರವೇಶದಲ್ಲಿ ಭಿನ್ನರು – ದೆಹಲಿಯಲ್ಲೇ ಇದ್ರೂ ಅತ್ತ ಸುಳಿಯದ ವಿಜಯೇಂದ್ರ!

    ನವದೆಹಲಿ: ದೆಹಲಿಯಲ್ಲಿ (Delhi) ಕೇಂದ್ರ ಸಚಿವ ಸೋಮಣ್ಣ (V.Somanna) ಮನೆಯ ಗೃಹಪ್ರವೇಶ ಕಾರ್ಯಕ್ರಮದಲ್ಲಿ ರೆಬೆಲ್ ಬಣದ ನಾಯಕರು ಕಾಣಿಸಿಕೊಂಡಿದ್ದಾರೆ. ದೆಹಲಿಯಲ್ಲೇ ಇದ್ದ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ (B.Y Vijayendra) ಮಾತ್ರ ಇತ್ತ ಸುಳಿಯದೇ ಇರುವುದು ಚರ್ಚೆಗೆ ಗ್ರಾಸವಾಗಿದೆ.

    ಈ ಬಗ್ಗೆ ಪ್ರತಿಕ್ರಿಯಿಸಿರುವ ಶಾಸಕ ಬಸನಗೌಡ ಪಾಟೀಲ್ (Basangouda Patil Yatnal) ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು ರಾಜ್ಯಾಧ್ಯಕ್ಷರ ಆಯ್ಕೆ ಮಾಡುವ ಸಂದೇಶವನ್ನು ಸೋಮಣ್ಣ ಮೂಲಕ ಹೈಕಮಾಂಡ್ ನೀಡಿದೆ. ಮುಂದಿನ ದಿನಗಳಲ್ಲಿ ಎಲ್ಲರನ್ನು ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ರಾಜ್ಯಾಧ್ಯಕ್ಷರನ್ನ ಆಯ್ಕೆ ಮಾಡುತ್ತೇವೆ. ಇದಕ್ಕೆ ಹೈಕಮಾಂಡ್ ವೇದಿಕೆ ಸಿದ್ಧ ಮಾಡುವುದಾಗಿ ಹೇಳಿದೆ. ರಾಜ್ಯಾಧ್ಯಕ್ಷ ಚುನಾವಣೆ ಮುಂಚೆಯೇ ನಮ್ಮ ಜೊತೆ ಚರ್ಚೆ ಮಾಡುತ್ತಾರೆ. ದೆಹಲಿಯಲ್ಲಿ ಈ ಬಗ್ಗೆ ಚರ್ಚೆ ನಡೆಯಬಹುದು ಎಂದಿದ್ದಾರೆ.

    ಇನ್ನೂ ಪಕ್ಷದ ಭಿನ್ನಮತದ ಬಗ್ಗೆ ಮಾತಾಡಿರುವ ಶಾಸಕ ಸಿ.ಕೆ ರಾಮಮೂರ್ತಿ, ಪಕ್ಷದಲ್ಲಿ ಜಗಳ ಹೀಗೆ ಮುಂದುವರೆದ್ರೆ ಜನ ಅಟ್ಟಾಡಿಸಿಕೊಂಡು ಹೊಡೆಯೋ ಪರಿಸ್ಥಿತಿ ಬರುತ್ತೆ ಎಂದು ಎಚ್ಚರಿಸಿದ್ದಾರೆ.

  • ಅಂಜನಾದ್ರಿಯಿಂದ ಅಯೋಧ್ಯೆಗೆ ರೈಲು ಬಿಡೋ ಬಗ್ಗೆ ಚಿಂತನೆ – ವಿ.ಸೋಮಣ್ಣ

    ಅಂಜನಾದ್ರಿಯಿಂದ ಅಯೋಧ್ಯೆಗೆ ರೈಲು ಬಿಡೋ ಬಗ್ಗೆ ಚಿಂತನೆ – ವಿ.ಸೋಮಣ್ಣ

    ಕೊಪ್ಪಳ: ಅಂಜನಾದ್ರಿಯಿಂದ (Anjanadri) ಅಯೋಧ್ಯೆಗೆ (Ayodhya) ರೈಲು ಬಿಡುವ ಬಗ್ಗೆ ಚಿಂತನೆ ನಡೆಸುತ್ತೇವೆ, ಪ್ರಸ್ತಾವನೆ ತೆಗೆದುಕೊಂಡಿದ್ದೇನೆ. ಈ ಕುರಿತು ಪರಿಶೀಲನೆ ನಡೆಸುತ್ತೇವೆ ಎಂದು ಕೇಂದ್ರ ರೈಲ್ವೆ ಸಚಿವ ವಿ.ಸೋಮಣ್ಣ (V Somanna) ಹೇಳಿದರು.

    ಕೊಪ್ಪಳ (Koppal) ನಗರದಲ್ಲಿರುವ ಗವಿಸಿದ್ದೇಶ್ವರ ಮಠಕ್ಕೆ ಭೇಟಿ ನೀಡಿ, ಬಳಿಕ ಕುಷ್ಟಗಿ (Kushtagi) ರೈಲ್ವೆ ಮೇಲ್ಸೇತುವೆಯನ್ನು ಉದ್ಘಾಟಿಸಿದರು.ಇದನ್ನೂ ಓದಿ: ತವರು ಸೇರಿದ್ದ ಪತ್ನಿಯನ್ನು ಹಾಡಹಗಲೇ ಅಪಹರಿಸಿದ ಪತಿ!

    ಉದ್ಘಾಟಿಸಿ ಮಾತನಾಡಿದ ಅವರು, ಕೊಪ್ಪಳದಲ್ಲಿ ಹಲವು ಅಭಿವೃದ್ಧಿ ಯೋಜನೆಗಳನ್ನ ಕೈಗೊಳ್ಳಲಾಗಿದೆ. ಕೊಪ್ಪಳ ಗಂಗಾವತಿ ಹಾಗೂ ಮುನಿರಾಬಾದ್ ರೈಲು ನಿಲ್ದಾಣದ ಉನ್ನತೀಕರಣಕ್ಕೆ ಅನುದಾನ ನೀಡಲಾಗಿದೆ. ರಾಜ್ಯ ಸರ್ಕಾರ 13 ಕೋಟಿ ರೂ. ಹಣವನ್ನ ನೀಡಿದೆ. ಅದರ ಹೊರತಾಗಿ ಉಳಿದ ಹಣವನ್ನ ಕೇಂದ್ರ ಸರ್ಕಾರ ನೀಡಿದೆ. ಮೇಲ್ಸೇತುವೆ ನಿರ್ಮಾಣ ಮಾಡಿ ಜನರಿಗೆ ಅನುಕೂಲ ಮಾಡಿ ಕೊಡಲಾಗಿದೆ. ಇನ್ನೂ ಅಂಜನಾದ್ರಿಯಿಂದ ಅಯೋಧ್ಯೆಗೆ ರೈಲು ಯೋಜನೆಗೆ ಪ್ರಸ್ತಾವನೆ ತೆಗೆದುಕೊಂಡಿದ್ದೇನೆ, ರೈಲು ಬಿಡುವ ಬಗ್ಗೆ ಚಿಂತನೆ ನಡೆಸುತ್ತೇವೆ. ಬಳಿಕ ಅದನ್ನ ಪರೀಶಿಲನೆ ಮಾಡುತ್ತೇನೆ ಎಂದು ಹೇಳಿದರು.

    ಅಮೃತ ಯೋಜನೆಯಲ್ಲಿ ರಾಜ್ಯದ 61 ರೈಲ್ವೆ ನಿಲ್ದಾಣಗಳ ಅಭಿವೃದ್ಧಿ ಮಾಡುತ್ತಿದ್ದೇವೆ. ಗದಗ-ವಾಡಿ ಹೊಸ ಲೈನ್ ಕಾಮಗಾರಿ ಆದಷ್ಟು ಬೇಗನೆ ಮುಗಿಸುತ್ತೇವೆ. ಮೇಲ್ಸೇತುವೆಗೆ ವ್ಯಕ್ತಿ ಹೆಸರು ಇಡುವ ನಿಯಮಗಳಿವೆ. ಅವೆಲ್ಲವುಗಳನ್ನು ಪಾಲನೆ ಮಾಡಬೇಕು. ರೈಲ್ವೆಯ ಟಿಕೆಟ್ ದರ ಶೇ.56ರಷ್ಟು ಕಡಿಮೆಯಿದೆ. ಗೂಡ್ಸ್ ರೈಲುಗಳ ಆದಾಯದಿಂದ ಟಿಕೆಟ್ ದರ ಹೊಂದಾಣಿಕೆ ಮಾಡುತ್ತಿದ್ದೇವೆ ಎಂದು ತಿಳಿಸಿದರು.ಇದನ್ನೂ ಓದಿ: ಗಾಳಿಪಟ ಹಾರಿಸಿ ಸಂಕ್ರಾಂತಿ ಆಚರಿಸಿದ ಕೇಂದ್ರ ಸಚಿವ ಅಮಿತ್‌ ಶಾ

     

  • ಕರ್ನಾಟಕಕ್ಕೆ ಮೂರು ರೈಲ್ವೆ ಮೇಲ್ಸೇತುವೆಗಳು ಮಂಜೂರು

    ಕರ್ನಾಟಕಕ್ಕೆ ಮೂರು ರೈಲ್ವೆ ಮೇಲ್ಸೇತುವೆಗಳು ಮಂಜೂರು

    ನವದೆಹಲಿ: ಕರ್ನಾಟಕಕ್ಕೆ ಮೂರು ರೈಲ್ವೆ ಮೇಲ್ಸೇತುವೆಗಳು ಮಂಜೂರಾಗಿವೆ. ರೈಲ್ವೆ ಸಚಿವಾಲಯದಿಂದ ಸೇತುವೆಗಳನ್ನು ಮಂಜೂರು ಮಾಡಲಾಗಿದೆ.

    ಹೊಳೆನರಸೀಪುರದ ಅಕ್ಕಿಹೆಬ್ಬಾಳು–ಮಂಡಗೆರೆ, ಮಂಡಗೆರೆ–ಹೊಳೆನರಸೀಪುರ ಮತ್ತು ಕಡೂರು ಜಂಕ್ಷನ್‌–ಬಿರೂರು ಜಂಕ್ಷನ್‌ ನಡುವೆ ಮೇಲ್ಸೇತುವೆ ನಿರ್ಮಾಣವಾಗಲಿವೆ.

    ಈ ಯೋಜನೆಗಳನ್ನು ವಿಶೇಷ ರೈಲ್ವೆ ಯೋಜನೆಗಳೆಂದು ಪರಿಗಣಿಸಿ ಅಧಿಸೂಚನೆ ಹೊರಡಿಸಲಾಗಿದೆ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರು ಮಾಹಿತಿ ನೀಡಿದ್ದಾರೆ.

  • ಪೆನ್ನಾರ್ ನದಿ ನೀರು ವಿವಾದ, ಭದ್ರಾ ಮೇಲ್ದಂಡೆ ಯೋಜನೆ – ಕೇಂದ್ರ ಸಚಿವ ಸೋಮಣ್ಣ ಜೊತೆ ಡಿಕೆಶಿ ಚರ್ಚೆ

    ಪೆನ್ನಾರ್ ನದಿ ನೀರು ವಿವಾದ, ಭದ್ರಾ ಮೇಲ್ದಂಡೆ ಯೋಜನೆ – ಕೇಂದ್ರ ಸಚಿವ ಸೋಮಣ್ಣ ಜೊತೆ ಡಿಕೆಶಿ ಚರ್ಚೆ

    – ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರದ ಅನುದಾನ ಕಡಿತ ಸಂಭವ

    ನವದೆಹಲಿ: ಭದ್ರಾ ಮೇಲ್ದಂಡೆ ಯೋಜನೆಗೆ (Upper Bhadra Project) ಈ ಹಿಂದೆ ಘೋಷಣೆ ಮಾಡಿದ್ದ 5,300 ಕೋಟಿ ರೂ. ಅನುದಾನ ಬಿಡುಗಡೆ ಸೇರಿದಂತೆ ಕರ್ನಾಟಕದ ನೀರಾವರಿ ಯೋಜನೆಗಳು ಹಾಗೂ ಪೆನ್ನಾರ್ ನದಿಯ ಉಪನದಿ ಮಾರ್ಕಂಡೇಯ ನದಿಗೆ ಅಣೆಕಟ್ಟು ನಿರ್ಮಾಣಕ್ಕೆ ತಮಿಳುನಾಡು ಎತ್ತಿರುವ ತಕರಾರಿನ ಕುರಿತು ಕೇಂದ್ರ ಸಚಿವ ವಿ.ಸೋಮಣ್ಣ ಅವರ ಜತೆ ಚರ್ಚೆ ನಡೆಸಲಾಯಿತು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ (D.K.Shivakumar) ತಿಳಿಸಿದರು.

    ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆಗಳ ರಾಜ್ಯ ಸಚಿವ ವಿ.ಸೋಮಣ್ಣ (V.Somanna) ಅವರ ಭೇಟಿ ಬಳಿಕ ದೆಹಲಿಯಲ್ಲಿ ಸುದ್ದಿಗಾರರ ಪ್ರಶ್ನೆಗೆ ಶಿವಕುಮಾರ್ ಅವರು ಮಂಗಳವಾರ ಉತ್ತರಿಸಿದರು. ಭದ್ರಾ ಮೇಲ್ದಂಡೆ ಯೋಜನೆಗೆ ಘೋಷಣೆ ಮಾಡಿದ್ದ ಹಣವನ್ನು ಕಡಿತಗೊಳಿಸಲಾಗುವುದು ಎನ್ನುವ ಸುದ್ದಿಯಿದೆ. ಇದರ ಬಗ್ಗೆ ಇನ್ನೂ ಸ್ಪಷ್ಟವಾದ ಮಾಹಿತಿಯಿಲ್ಲ. ಅನುದಾನ ಕೊಡುತ್ತೇವೆ ಎಂದು ಹೇಳುತ್ತಿದ್ದಾರೆ. ಯೋಜನೆಯ ವಿವರಗಳನ್ನು ಕಳುಹಿಸಲಾಗಿದ್ದು, ಇದರ ಬಗ್ಗೆ ಹೆಚ್ಚಿನ ಗಮನ ಹರಿಸಲಾಗಿದೆ ಎಂದು ಹೇಳಿದರು. ಇದನ್ನೂ ಓದಿ: ಭಾರತ್‌ಪೋಲ್ ಪೋರ್ಟಲ್ ಲೋಕಾರ್ಪಣೆ ಮಾಡಿದ ಅಮಿತ್ ಶಾ

    ತಮಿಳುನಾಡಿನವರು ಪೆನ್ನಾರ್ ನದಿ ನೀರಿನ ವಿಚಾರವಾಗಿ ಕಳೆದ 2ನೇ ತಾರೀಕಿನಂದು ಅಫಿಡವಿಟ್ ಸಲ್ಲಿಸಿದ್ದಾರೆ. ಮೂರು ವಾರದಲ್ಲಿ ತೀರ್ಮಾನ ಮಾಡಬೇಕಿರುವ ಕಾರಣಕ್ಕೆ ಅಫಿಡವಿಟ್ ಸಲ್ಲಿಕೆ ಮಾಡಲು ತಿಳಿಸಿದ್ದರು. ವಿಧಾನಸಭೆ ಚಳಿಗಾಲದ ಅಧಿವೇಶನವಿದ್ದ ಕಾರಣಕ್ಕೆ ನಮ್ಮಿಂದ ವಿಳಂಬವಾಯಿತು. ನಾವು ದಿನಾಂಕ ವಿಸ್ತರಣೆ ಮಾಡಿ ಎಂದು ಮನವಿ ಮಾಡಿದ್ದೇವೆ ಎಂದರು.

    ಎರಡು ರಾಜ್ಯಗಳ ಪ್ರತಿನಿಧಿಗಳನ್ನು ಸೇರಿಸಿ ಮಾತುಕತೆ ನಡೆಸಬೇಕಿರುವ ಕಾರಣಕ್ಕೆ ಶೀಘ್ರದಲ್ಲೇ ಸಭೆಗೆ ಒಂದು ದಿನಾಂಕವನ್ನು ಅಂತಿಮಗೊಳಿಸುವುದಾಗಿ ಹೇಳಿದ್ದಾರೆ. ಪೆನ್ನಾರ್ ನದಿ ನೀರಿನ ವಿಚಾರವಾಗಿ ನಿಮ್ಮಲ್ಲೇ ಚರ್ಚೆ ನಡೆಸಿ ಬಗೆಹರಿಸಿಕೊಳ್ಳಿ ಎನ್ನುವ ಸುಪ್ರೀಂ ಕೋರ್ಟ್ ನಿರ್ದೇಶನವಿದೆ ಎಂದರು.

    ಈ ನದಿ ನೀರಿನ ವಿಚಾರದಲ್ಲಿ ತಮಿಳುನಾಡಿಗೆ ಯಾವುದೇ ತೊಂದರೆಯಾಗುವುದಿಲ್ಲ. ಅಲ್ಲದೇ ಕೋಲಾರದ ನೀರಿನ ಸಮಸ್ಯೆ ಬಗ್ಗೆ ಎಲ್ಲರಿಗೂ ಅರಿವಿದೆ. ಕೋಲಾರದ ಕೆರೆಗಳಿಗೆ ವೃಷಭಾವತಿ ಸೇರಿದಂತೆ ಕೆ.ಸಿ ವ್ಯಾಲಿ ಯೋಜನೆಯಿಂದ ಬಳಕೆಯಾದ ನೀರನ್ನು ಶುದ್ದೀಕರಿಸಿ ತುಂಬಿಸಲಾಗುತ್ತಿದೆ. ಈ ಯೋಜನೆಯ ಬಗ್ಗೆ ಈ ಹಿಂದೆ ಕೇಂದ್ರ ಸರ್ಕಾರವೂ ಮೆಚ್ಚುಗೆ ವ್ಯಕ್ತಪಡಿಸಿತ್ತು ಎಂದರು.

    ಪೆನ್ನಾರ್ ನದಿ ನೀರಿನ ವಿವಾದ ಕುರಿತು ಟ್ರಿಬ್ಯೂನಲ್ ಮೂಲಕ ಹೋದರೆ ತಡವಾಗುತ್ತದೆ ಹಾಗೂ ಕೋರ್ಟ್ ಮತ್ತು ವಕೀಲರ ವೆಚ್ಚ ದುಬಾರಿಯಾಗುತ್ತದೆ. ಆದ ಕಾರಣಕ್ಕೆ ಸರ್ಕಾರದ ಮಟ್ಟದಲ್ಲೇ ಬಗೆಹರಿಸಿಕೊಳ್ಳಲು ನಾವು ನೋಡುತ್ತಿದ್ದೇವೆ. ಈಗಾಗಲೇ ಅರಣ್ಯ ಇಲಾಖೆಯವರು ಅನುಮತಿ ನೀಡುತ್ತೇವೆ ಎಂದು ಹೇಳಿದ್ದಾರೆ. ಈ ವಿಚಾರವಾಗಿ ಮಾತನಾಡಲು ಪ್ರಹ್ಲಾದ್ ಜೋಶಿ ಅವರನ್ನು ಭೇಟಿಯಾಗಬೇಕಿತ್ತು. ಅವರು ಲಭ್ಯವಿಲ್ಲ. ಇದರ ನಡುವೆ ಇತರೇ ಸಚಿವರನ್ನು ಇನ್ನೊಮ್ಮೆ ಬಂದು ಭೇಟಿಯಾಗುವೆ. ಇಲಾಖೆಯ ಬಜೆಟ್ ಕೆಲಸವಿರುವ ಕಾರಣಕ್ಕೆ ಕೇಂದ್ರ ಜಲಶಕ್ತಿ ಸಚಿವರೂ ಭೇಟಿಗೆ ಸಿಗಲಿಲ್ಲ ಎಂದು ಹೇಳಿದರು.

    ಕರ್ನಾಟಕಕ್ಕೆ ಸಂಬಂಧಿಸಿದ ನೀರಾವರಿ ಕೆಲಸಗಳು ಹಾಗೂ ಕಡತಗಳು ಸಚಿವರಾದ ವಿ.ಸೋಮಣ್ಣ ಅವರ ಗಮನಕ್ಕೆ ತರಬೇಕು ಎನ್ನುವ ನಿರ್ದೇಶನವಿರುವ ಕಾರಣಕ್ಕೆ ಅವರನ್ನು ಭೇಟಿ ಮಾಡಿ ರಾಜ್ಯದ ನೀರಾವರಿ ಕೆಲಸಗಳ ಬಗ್ಗೆ ವಿವರಣೆ ನೀಡಿದೆ ಎಂದು ತಿಳಿಸಿದರು. ಮೇಕೆದಾಟು ವಿಚಾರ ಚರ್ಚೆಯಾಯಿತೆ ಎಂದು ಕೇಳಿದಾಗ, ‘ಅದರ ಬಗ್ಗೆ ಮಾಹಿತಿ ಬಹಿರಂಗಗೊಳಿಸಲು ಆಗುವುದಿಲ್ಲ’ ಎಂದರು.

    ಸುಮಾರು 5-6 ಸಾವಿರ ಉಳಿತಾಯ
    ದೆಹಲಿಯಲ್ಲಿ ಘೋಷಣೆ ಮಾಡಿರುವ ಪ್ಯಾರಿ ದೀದಿ ಯೋಜನೆ ಮೂಲಕ ಮಹಿಳೆಯರಿಗೆ 2,500 ನೀಡಲಾಗುವುದು ಎಂದು ಹೇಳಲಾಗಿದೆ. ಕಾಂಗ್ರೆಸ್ ಅಧಿಕಾರದಲ್ಲಿ ಇರುವ ರಾಜ್ಯದಲ್ಲಿ ಕೇವಲ 2 ಸಾವಿರ ನೀಡಲಾಗುತ್ತಿದೆ ಎನ್ನುವ ಚರ್ಚೆಯ ಬಗ್ಗೆ ಕೇಳಿದಾಗ, 2 ಸಾವಿರ ಎನ್ನವುದು ಕೇವಲವೇ? ದೆಹಲಿ ಹಾಗೂ ಕರ್ನಾಟಕದ ಆರ್ಥಿಕ ಪರಿಸ್ಥಿತಿ ಬೇರೆ, ಬೇರೆಯಿರುತ್ತದೆ. ದೆಹಲಿಯಲ್ಲಿ ಖರ್ಚು ಹೆಚ್ಚು, ಕರ್ನಾಟಕದಲ್ಲಿ ಕಡಿಮೆಯಿದೆ. ಅಲ್ಲದೇ ಕರ್ನಾಟಕದಲ್ಲಿ ಐದು ಗ್ಯಾರಂಟಿಗಳ ಮೂಲಕ ಸುಮಾರು 5-6 ಸಾವಿರ ಉಳಿತಾಯ ಪ್ರತಿ ಕುಟುಂಬಕ್ಕೆ ಆಗುತ್ತಿದೆ ಎಂದರು.

    ಡಿನ್ನರ್ ರಾಜಕೀಯ ಮತ್ತು ಒಬ್ಬೊಬ್ಬರೇ ಸಚಿವರು ಔತಣಕೂಟ ಏರ್ಪಡಿಸುತ್ತಿರುವ ಬಗ್ಗೆ ಹಾಗೂ ಗೃಹಸಚಿವ ಪರಮೇಶ್ವರ್ ಅವರು ಬುಧವಾರ ಸಭೆ ಕರೆದಿರುವ ಬಗ್ಗೆ ಕೇಳಿದಾಗ, ‘ನಾನು ಹೊರದೇಶದಲ್ಲಿದ್ದ ಕಾರಣಕ್ಕೆ ನನಗೆ ಇದರ ಬಗ್ಗೆ ಮಾಹಿತಿಯಿಲ್ಲ. ಬೆಂಗಳೂರಿಗೆ ಹೋದ ನಂತರ ಇದರ ಬಗ್ಗೆ ತಿಳಿದುಕೊಳ್ಳಲು ನಾನು ಪ್ರಯತ್ನಿಸುತ್ತೇನೆ. ಪಕ್ಷದ ಕೆಲಸವಿದ್ದ ಕಾರಣಕ್ಕೆ ಹಾಗೂ ದೆಹಲಿ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಸೋಮವಾರದಂದು ಕರ್ನಾಟಕದ ಗೃಹಲಕ್ಷ್ಮೀ ಯೋಜನೆ ಮಾದರಿಯ ಪ್ಯಾರಿ ದೀದಿ ಯೋಜನೆ ಪ್ರಕಟಣೆಗಾಗಿ ಬಂದಿದ್ದೆ’ ಎಂದು ಹೇಳಿದರು.

    ಕುಮಾರಸ್ವಾಮಿ ಭಂಡಾರದಲ್ಲಿ ಏನೇನಿದೆ?
    60 ಪರ್ಸೆಂಟ್ ಸರ್ಕಾರ ಎನ್ನುವ ಕುಮಾರಸ್ವಾಮಿ ಆರೋಪದ ಬಗ್ಗೆ ಕೇಳಿದಾಗ, ‘ಕುಮಾರಸ್ವಾಮಿ ಅವರ ಭಂಡಾರದಲ್ಲಿ ಏನೇನಿದೆ ಎನ್ನುವ ಬಗ್ಗೆ ಆನಂತರ ಮಾತನಾಡೋಣ. ಈಗ ಚರ್ಚೆ ಮಾಡುವುದು ಬೇಡ’ ಎಂದರು.

    ಐಶ್ವರ್ಯ ಗೌಡ ವಂಚನೆ ಪ್ರಕರಣದಲ್ಲಿ ನನ್ನ ಹೆಸರನ್ನು ತಳುಕು ಹಾಕಿಸಿರುವುದರ ಹಿಂದೆ ಯಾರಿದ್ದಾರೆ ಎನ್ನುವುದು ತಿಳಿದಿದೆ ಎನ್ನುವ ಕುಮಾರಸ್ವಾಮಿ ಅವರ ಹೇಳಿಕೆ ಬಗ್ಗೆ ಕೇಳಿದಾಗ, ನನಗೆ ಯಾವ ಐಶ್ವರ್ಯ ಗೌಡನೂ ಗೊತ್ತಿಲ್ಲ. ನನಗೆ ಸಂಬಂಧವಿಲ್ಲದ್ದು ಹಾಗೂ ಗೊತ್ತಿಲ್ಲದೇ ಇರುವ ಬಗ್ಗೆ ಮಾತನಾಡುವುದಿಲ್ಲ. ನನ್ನ ತಮ್ಮ ಡಿ.ಕೆ.ಸುರೇಶ್ ಅವರನ್ನು ಕೂಡ ಭೇಟಿಯಾಗಿಲ್ಲ. ಇದರ ಬಗ್ಗೆ ಕೇವಲ ಮಾಧ್ಯಮಗಳಲ್ಲಿ ಮಾತ್ರ ನೋಡಿದ್ದೇನೆ. ನನ್ನ ತಮ್ಮ ಇದರ ಬಗ್ಗೆ ನಿರ್ಲಕ್ಷ್ಯವಹಿಸಬೇಕಾಗಿತ್ತು. ಆತ ಕೂಡ ವಿದೇಶಕ್ಕೆ ಹೋಗಿದ್ದ ಕಾರಣಕ್ಕೆ ನಾನು ಮಾತನಾಡಲು ಸಾಧ್ಯವಾಗಿಲ್ಲ ಎಂದರು.

  • ರಾಹುಲ್‌ ಗಾಂಧಿ ಎಳೆ ಮಕ್ಕಳ ರೀತಿ ವರ್ತಿಸುತ್ತಿದ್ದಾರೆ: ಕೇಂದ್ರ ಸಚಿವ ಸೋಮಣ್ಣ ಕಿಡಿ

    ರಾಹುಲ್‌ ಗಾಂಧಿ ಎಳೆ ಮಕ್ಕಳ ರೀತಿ ವರ್ತಿಸುತ್ತಿದ್ದಾರೆ: ಕೇಂದ್ರ ಸಚಿವ ಸೋಮಣ್ಣ ಕಿಡಿ

    ನವದೆಹಲಿ: ರಾಹುಲ್‌ ಗಾಂಧಿ ರಾಷ್ಟ್ರೀಯ ಪಕ್ಷದ ನಾಯಕ. ಆದರೆ, ಎಳೆ ಮಕ್ಕಳ ರೀತಿ ವರ್ತಿಸುತ್ತಿದ್ದಾರೆ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಕಿಡಿಕಾರಿದ್ದಾರೆ.

    ನವದೆಹಲಿಯಲ್ಲಿ ಮಾತನಾಡಿದ ಅವರು, ಇತಿಹಾಸ ಇರುವ ಕುಟುಂಬ ಅಂತಾ ಏನೇನೋ ಮಾಡಲು ಸಾಧ್ಯವಿಲ್ಲ. ಜನರು ಅದನ್ನು ಒಪ್ಪುವುದಿಲ್ಲ. ಸಂವಿಧಾನ ಮುಖ್ಯ ಎನ್ನುವುದಕ್ಕೆ ಎರಡು ದಿನ ಚರ್ಚೆಗೆ ಅವಕಾಶ ಮಾಡಿಕೊಡಲಾಗಿತ್ತು ಎಂದು ಕಾಂಗ್ರೆಸ್‌ ನಡೆಗೆ ಬೇಸರ ವ್ಯಕ್ತಪಡಿಸಿದ್ದಾರೆ.

    ಅಮಿತ್ ಶಾ ಅವರ ಹೇಳಿಕೆಯನ್ನು ತಿರುಚುವ ಕೆಲಸ ಮಾಡಿದೆ. ಅಂಬೇಡ್ಕರ್ ಅವರ ಜೊತೆಗೆ ಕಾಂಗ್ರೆಸ್ ಹೇಗೆ ನಡೆದುಕೊಂಡಿತ್ತು ಎಂದು ಎಲ್ಲರಿಗೂ ಗೊತ್ತಿದೆ. ಅಂಬೇಡ್ಕರ್ ಅವರನ್ನು ಹೀಯಾಳಿಸುವ ಕೆಲಸ ಆಗಿಲ್ಲ. ಬಿಜೆಪಿ ಅಪಾರವಾದ ಗೌರವ ಇಟ್ಟುಕೊಂಡಿದೆ ಎಂದು ಕೇಂದ್ರ ಗೃಹ ಸಚಿವರನ್ನು ಸಮರ್ಥಿಸಿಕೊಂಡಿದ್ದಾರೆ.

    ಸಿದ್ದಗಂಗಾ ಮಠಕ್ಕೆ ವಿದ್ಯುತ್‌ ಬಿಲ್‌ ಕುರಿತು ಮಾತನಾಡಿ, ಮಠದಲ್ಲಿ 14,000 ಮಕ್ಕಳು ಓದುತ್ತಿದ್ದಾರೆ. ಈ ರೀತಿಯ ಘಟನೆ ನಡೆಯಬಾರದು. ನಾನು ಅಲ್ಲೇ ಹೋಗ್ತಿದ್ದೀನಿ, ನೋಡ್ತೀನಿ ಎಂದು ತಿಳಿಸಿದ್ದಾರೆ.

  • 40% ಕಮಿಷನ್‌ ಆರೋಪದಂತೆ ಕೋವಿಡ್‌ನಲ್ಲೂ ಕ್ಲೀನ್ ಚಿಟ್ ಸಿಗಲಿದೆ: ಸೋಮಣ್ಣ ವಿಶ್ವಾಸ

    40% ಕಮಿಷನ್‌ ಆರೋಪದಂತೆ ಕೋವಿಡ್‌ನಲ್ಲೂ ಕ್ಲೀನ್ ಚಿಟ್ ಸಿಗಲಿದೆ: ಸೋಮಣ್ಣ ವಿಶ್ವಾಸ

    ಬೆಂಗಳೂರು: 40% ಕಮಿಷನ್‌ ಆರೋಪದಂತೆಯೇ ಕೋವಿಡ್ ಹಗರಣದ (Covid Scam) ಆರೋಪದಲ್ಲೂ ಬಿಜೆಪಿಗೆ (BJP) ಕ್ಲೀನ್ ಚಿಟ್ ಸಿಗಲಿದೆ ಎಂದು ಕೇಂದ್ರ ರೈಲ್ವೇ ಖಾತೆಯ ರಾಜ್ಯ ಸಚಿವ ವಿ ಸೋಮಣ್ಣ (V Somanna) ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಕೋವಿಡ್ ಹಗರಣದ ತನಿಖೆಗೆ ಎಸ್‌ಐಟಿ ರಚನೆ ವಿಚಾರಕ್ಕೆ ‌ಪ್ರತಿಕ್ರಿಯೆ ನೀಡಿದ ಅವರು, 40% ಕಮಿಷನ್‌ ಆರೋಪ ಏನ್ ಆಯ್ತು ಹೇಳಿ? ಕೋವಿಡ್‌ ಕೂಡಾ ಹಾಗೇ ಆಗುತ್ತದೆ. ಪದೇ ಪದೇ ಇಂತಹ ದ್ವೇಷ ರಾಜಕೀಯ ಮಾಡಬಾರದು. ಸಿದ್ದರಾಮಯ್ಯ (Siddaramaiah) ಅಂತವರ ಕಾಲದಲ್ಲಿ ಹೀಗೆ ಅಲ್ಲ ಆಗಬಾರದು. ತಪ್ಪಾಗಿದ್ರೆ ತಪ್ಪು ಮಾಡಿದವರು ನೀರು ಕುಡಿಯುತ್ತಾರೆ ಎಂದರು.

     

    3 ಕ್ಷೇತ್ರಗಳ ಉಪ ಚುನಾವಣೆ ಫಲಿತಾಂಶದ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಶಿಗ್ಗಾವಿಯಲ್ಲಿ ಬಿಜೆಪಿ ಗೆಲ್ಲಲಿದೆ. ಚನ್ನಪಟ್ಟಣದಲ್ಲಿ ಎನ್‌ಡಿಎ ಅಭ್ಯರ್ಥಿ ಗೆಲ್ಲುತ್ತಾರೆ. ಸಂಡೂರು 50:50 ಇದೆ ಎಂದರು. ಇದನ್ನೂ ಓದಿ: ಏರ್‌ಪೋರ್ಟ್‌ ಮಾದರಿಯಲ್ಲಿ ಮೆಜೆಸ್ಟಿಕ್ ರೈಲ್ವೇ ನಿಲ್ದಾಣ ಅಭಿವೃದ್ಧಿ: ಸೋಮಣ್ಣ

    ರಾಜ್ಯದಲ್ಲಿ ಬಿಪಿಎಲ್‌ ಕಾರ್ಡ್ (BPL Card) ರದ್ದು ಮಾಡುತ್ತಿರುವ ವಿಚಾರಕ್ಕೆ ‌ಪ್ರತಿಕ್ರಿಯೆ ನೀಡಿದ ಅವರು, ನಾನು ಕೂಡಾ ಮಾಧ್ಯಮಗಳಲ್ಲಿ ಈ ವಿಷಯ ನೋಡಿದ್ದೇನೆ. ಅದರೆ ಹೀಗೆ ಆಗಬಾರದು. ಕಾರ್ಡ್ ರದ್ದು ಆಗುತ್ತಿರುವುದು ಸರಿಯಲ್ಲ ಎಂದರು.

    ಆಪರೇಷನ್ ಕಮಲಕ್ಕೆ ಬಿಜೆಪಿಯಿಂದ 100 ಕೋಟಿ ಆಫರ್ ಮಾಡಿದ್ದಾರೆ ಎಂಬ ಕಾಂಗ್ರೆಸ್ ಶಾಸಕ ರವಿ ಗಣಿಗ ಆರೋಪ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಸೋಮಣ್ಣ, ಮೊದಲು ಅವರು ಶಾಸಕರಾಗಿ ಕೆಲಸ ಮಾಡಲಿ. ಇಲ್ಲ ಸಲ್ಲದ ಮಾತುಗಳನ್ನು ಶಾಸಕರು ಆಡುವುದು ಬೇಡ. ಶಾಸಕರಿಗೆ ಇದು ಗೌರವ ತರುವುದಿಲ್ಲ ಎಂದು ಸೋಮಣ್ಣ ಕಿಡಿಕಾರಿದರು.

     

  • ನಮ್ಮಪ್ಪನ ಆಣೆ ಸಿದ್ದರಾಮಯ್ಯ ಡಿಸೆಂಬರ್‌ವರೆಗೆ ಮಾತ್ರ ಸಿಎಂ ಆಗಿರ್ತಾರೆ: ಸೋಮಣ್ಣ ಭವಿಷ್ಯ

    ನಮ್ಮಪ್ಪನ ಆಣೆ ಸಿದ್ದರಾಮಯ್ಯ ಡಿಸೆಂಬರ್‌ವರೆಗೆ ಮಾತ್ರ ಸಿಎಂ ಆಗಿರ್ತಾರೆ: ಸೋಮಣ್ಣ ಭವಿಷ್ಯ

    ರಾಮನಗರ: ನಮ್ಮಪ್ಪನ ಆಣೆ ಡಿಸೆಂಬರ್‌ವರೆಗೆ ಮಾತ್ರ ಸಿದ್ದರಾಮಯ್ಯ (Siddaramaiah) ಸಿಎಂ ಆಗಿರುತ್ತಾರೆ ಎಂದು ಕೇಂದ್ರ ಸಚಿವ ವಿ ಸೋಮಣ್ಣ (V Somanna) ಭವಿಷ್ಯ ನುಡಿದಿದ್ದಾರೆ.

    ಚನ್ನಪಟ್ಟಣದ (Channapatna) ಹೊಟ್ಟಿಗನ ಹೊಸಹಳ್ಳಿ ಗ್ರಾಮದಲ್ಲಿ ಮಾತನಾಡಿದ ಅವರು, ಕೇಂದ್ರದ ಹೈಕಮಾಂಡ್ ಸಿದ್ದರಾಮಯ್ಯ ಅವರಿಗೆ ನೀವೆ ಹೊಣೆ ಅಂತ ಹೇಳಿದ್ದಾರೆ. ರಾಜ್ಯ ಸರ್ಕಾರದ ಭ್ರಷ್ಟಾಚಾರ ಇಡೀ ದೇಶದ ಮೇಲೆ ಪರಿಣಾಮ ಬೀರುತ್ತಿದೆ. ಈ ಕಾರಣಕ್ಕೆ ನಾವು ದೇಶದ ಎಲ್ಲಾ ಚುನಾವಣೆ ಗೆಲ್ಲುತ್ತೇವೆ. ಸಿದ್ದರಾಮಯ್ಯ ಅವರಿಗೆ ಶತ್ರುಗಳು ಅಂತಾ ಇದ್ದರೆ ಅದು ಕಾಂಗ್ರೆಸ್‌ನಲ್ಲೇ ಎಂದು ಕಿಡಿಕಾರಿದರು. ಇದನ್ನೂ ಓದಿ: ನರೇಂದ್ರ ಮೋದಿ ಸುಳ್ಳಿನ ಸರದಾರ – ಮಲ್ಲಿಕಾರ್ಜುನ ಖರ್ಗೆ ತೀವ್ರ ತರಾಟೆ

    ಬಿಎಸ್ ಯಡಿಯೂರಪ್ಪ ಹಾಗೂ ಶ್ರೀರಾಮುಲು ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯನವರೇ ಈ ಪಾಪದ ಕೆಲಸ ಮಾಡಬೇಡಿ. ಕೋವಿಡ್‌ನಲ್ಲಿ ನಾವೆಲ್ಲಾ ಪ್ರಾಣದ ಹಂಗು ತೊರೆದು ಕೆಲಸ ಮಾಡಿದ್ದೇವೆ. ಯಾವ ರೀತಿ ಕೆಲಸ ಮಾಡಿದ್ದೇವೆ ಎಂದು ಜಾರ್ಜ್ ಹಾಗೂ ಬೈರತಿ ಸುರೇಶ್‌ರನ್ನು ಕೇಳಿ. ನೀವು ಸಾವಿರಾರು ಕೋಟಿ ಹಗರಣ ಅಂತಾ ಹೇಳಿದ್ದೀರಿ. ಈಗ 14 ಕೋಟಿ ಅಂತಿದ್ದೀರಾ. ನಿಮ್ಮ 14 ಸೈಟ್ ಬಗ್ಗೆ ನೋಡಿ. ಈ ಬಗ್ಗೆ ನಿರ್ಣಯ ಕೈಗೊಳ್ಳುವಷ್ಟರಲ್ಲಿ ನಿಮ್ಮ ಸಚಿವ ಸಂಪುಟವೇ ಇರುವುದಿಲ್ಲ. ಸಿದ್ದರಾಮಯ್ಯ ತಮ್ಮ ತಪ್ಪು ಮುಚ್ಚಿಕೊಳ್ಳಲು ಡೈವರ್ಟ್ ಮಾಡಲು ಈ ರೀತಿ ಮಾಡುತ್ತಿದ್ದಾರೆ ಎಂದು ಹರಿಹಾಯ್ದರು. ಇದನ್ನೂ ಓದಿ: ಹೈಕೋರ್ಟ್‌ ತೀರ್ಪನ್ನು ಪೊಲಿಟಿಕಲ್‌ ಜಡ್ಜ್‌ಮೆಂಟ್‌ ಎಂದಿದ್ದ ಸಚಿವರಿಗೆ ಸಂಕಷ್ಟ – ಜಮೀರ್‌ ವಿರುದ್ಧ ಕ್ರಮಕ್ಕೆ ರಾಜ್ಯಪಾಲರ ಸೂಚನೆ

    ಚನ್ನಪಟ್ಟಣ ಚುನಾವಣೆ ವಿಚಾರವಾಗಿ ಮಾತನಾಡಿ, ಚನ್ನಪಟ್ಟಣ ಜನ ಕೃತಜ್ಞತೆಗೆ ಮತ್ತೊಂದು ಹೆಸರು. ಭಗೀರಥ ಯಾರು ಅದು ಇದು ಅಂತಾ ನಾನು ಹೇಳಲ್ಲ. ಜನ ದೇವೇಗೌಡರನ್ನು ನೆನಪು ಮಾಡಿಕೊಳ್ಳುತ್ತಾರೆ. ದೇವೇಗೌಡರ ದೂರದೃಷ್ಟಿ ಕಾರಣದಿಂದ ಹದಿನಾಲ್ಕು ಕ್ಷೇತ್ರಗಳನ್ನು ಗೆದ್ದಿದ್ದೇವೆ. ಇನ್ನೆರಡು ದಿನಗಳಲ್ಲಿ ಇಲ್ಲಿ ಚಿತ್ರಣ ಬದಲಾಗಲಿದೆ. ಜೆಡಿಎಸ್ ಭದ್ರಕೋಟೆ ಚನ್ನಪಟ್ಟಣ. ಜನ ಪದೇಪದೇ ಯೋಗೇಶ್ವರ್ ಯಾಮಾರಿಸಲು ಆಗಲ್ಲ. ರಾತ್ರಿ ಕಂಡ ಬಾವಿಗೆ ಹಗಲು ಬಿದ್ದಿದ್ದೀರಾ ಅನ್ನೋ ಸಂದೇಶ ಜನ ನೀಡುತ್ತಾರೆ. ನಾಲ್ಕು ವರ್ಷ ಸುಮ್ಮನೆ ಕೂರುವಂತೆ ಮಾಡುತ್ತಾರೆ. ನಿಖಿಲ್ ಕುಮಾರಸ್ವಾಮಿ ಹೆಚ್ಚು ಮತಗಳಿಂದ ಗೆಲ್ಲುತ್ತಾರೆ. ಈ ಸರ್ಕಾರಕ್ಕೆ ಎಚ್ಚರಿಕೆ ಗಂಟೆ ಕೊಡಬೇಕು ಎಂದು ಜನ ಅರಿತಿದ್ದಾರೆ. ಆ ಕೆಲಸವನ್ನು ಚನ್ನಪಟ್ಟಣದ ಜನ ಮಾಡುತ್ತಾರೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಭಾರತೀಯ ಜನತಾ ಪಾರ್ಟಿ ಅಲ್ಲಾ, ಭಾರತೀಯ ಜೂಟಾ ಪಾರ್ಟಿ: ಸಚಿವ ಖಂಡ್ರೆ