Tag: V.Somanna

  • ದಸರಾ ಕ್ರೀಡಾಪಟುಗಳ ನಗದು ಬಹುಮಾನ ವಿಳಂಬ- ಒಂದೇ ದಿನದಲ್ಲಿ ಸಚಿವ ಸೋಮಣ್ಣ ಇತ್ಯರ್ಥ

    ದಸರಾ ಕ್ರೀಡಾಪಟುಗಳ ನಗದು ಬಹುಮಾನ ವಿಳಂಬ- ಒಂದೇ ದಿನದಲ್ಲಿ ಸಚಿವ ಸೋಮಣ್ಣ ಇತ್ಯರ್ಥ

    ಮೈಸೂರು: ದಸರಾ ಮುಗಿದು ಮೂರು ತಿಂಗಳು ಕಳೆಯುತ್ತಾ ಬಂದಿದೆ. ಆದರೂ ದಸರಾ ಕ್ರೀಡಾಕೂಟದಲ್ಲಿ ಗೆದ್ದ ಕ್ರೀಡಾಪಟುಗಳಿಗೆ ನಗದು ಬಹುಮಾನ ನೀಡಲು ವಿಳಂಬ ಮಾಡಿದ್ದ ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಬೆವರಳಿಸಿದ ಕೆಲವೇ ಗಂಟೆಗಳಲ್ಲಿ ಪ್ರಶಸ್ತಿಯ ನಗದು ಹಣ ಬಿಡುಗಡೆಯಾಗಿದೆ.

    ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸಿ ವಿಜೇತರಾಗಿದ್ದ ಕ್ರೀಡಾಪಟುಗಳಿಗೆ ಬಹುಮಾನದ ಹಣವನ್ನು ಈವರೆಗೆ ಬಿಡುಗಡೆ ಮಾಡಿರಲಿಲ್ಲ. ಶುಕ್ರವಾರ ಬೆಳಗ್ಗೆ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಸರ್ಕಾರಿ ನೌಕರರ ಕ್ರೀಡಾಕೂಟ ಉದ್ಘಾಟನೆಗೆ ಆಗಮಿಸಿದ್ದ ಸಚಿವರ ಗಮನಕ್ಕೆ ಈ ವಿಷಯ ಬಂತು. ಬಹುಮಾನ ಹಣ ಪಾವತಿಸಲು ವಿಳಂಬ ಮಾಡಿದ್ದ ಅಧಿಕಾರಿಗಳಿಗೆ ಸ್ಥಳದಲ್ಲೇ ತರಾಟೆ ತೆಗೆದುಕೊಂಡಿದ್ದು, ಸಚಿವರು ತಕ್ಷಣ ಸಮಸ್ಯೆ ಇತ್ಯರ್ಥ ಆಗಬೇಕು ಎಂದು ತಾಕೀತು ಮಾಡಿದರು.

    ಅಷ್ಟೇ ಅಲ್ಲದೇ ಈ ಸಮಸ್ಯೆ ಇತ್ಯರ್ಥಕ್ಕೆ ಬೇಕಾದ 54 ಲಕ್ಷ ರೂ. ಅನುದಾನವನ್ನು ಸಚಿವರು ಸಂಜೆಯೊಳಗೆ ಬಿಡುಗಡೆ ಮಾಡಿಸಿದ್ದಾರೆ. ದಸರಾ ಕ್ರೀಡಾಕೂಟದ 1,451 ವಿಜೇತರಿಗೆ ಬಹುಮಾನ ಹಣವನ್ನು ನೀಡಬೇಕಾಗಿತ್ತು. ಈ ಪೈಕಿ 726 ವೈಯಕ್ತಿಕ ಬಹುಮಾನಗಳು ಹಾಗೂ 725 ಗುಂಪು ಸ್ಪರ್ಧೆ ಬಹುಮಾನಗಳು ಸೇರಿವೆ. ಈ ಎಲ್ಲರ ಬ್ಯಾಂಕ್ ಖಾತೆಗೆ ಈಗ ಹಣ ವರ್ಗಾವಣೆ ಆಗುತ್ತಿದೆ.

    ಎಲ್ಲಾ ಬಹುಮಾನದ ಹಣವನ್ನು ಆರ್.ಟಿ.ಜಿ.ಎಸ್. ಮೂಲಕ ಫಲಾನುಭವಿಗಳ ಖಾತೆಗೆ ಕೂಡಲೇ ವರ್ಗಾಯಿಸಲಾಗುವುದು. ಕ್ರೀಡಾಪಟುಗಳು ಆತಂಕಪಡಬೇಕಿಲ್ಲ ಎಂದು ಸಚಿವರು ಭರವಸೆ ನೀಡಿದ್ದಾರೆ. ಕ್ರೀಡಾಕೂಟಕ್ಕೆ ಊಟೋಪಚಾರ ಸರಬರಾಜು ಮಾಡಿದವರಿಗೂ ಬಿಲ್ ಬಾಕಿ ಇದ್ದು, ಅದನ್ನೂ ಕೂಡ ಕೂಡಲೇ ಪಾವತಿಸಲಾಗುತ್ತದೆ ಎಂದು ಸಚಿವರು ತಿಳಿಸಿದ್ದಾರೆ.

  • ಎಲ್ಲಾ ಪಕ್ಷದ ರಾಜಕಾರಣಿಗಳಿಗೆ ಸಹಕರಿಸುವ ಅಧಿಕಾರಿಗಳ ಬ್ಲಾಕ್ ಲಿಸ್ಟ್‌ಗೆ  ಸೇರಿಸಿ: ಪ್ರತಾಪ್ ಸಿಂಹ

    ಎಲ್ಲಾ ಪಕ್ಷದ ರಾಜಕಾರಣಿಗಳಿಗೆ ಸಹಕರಿಸುವ ಅಧಿಕಾರಿಗಳ ಬ್ಲಾಕ್ ಲಿಸ್ಟ್‌ಗೆ  ಸೇರಿಸಿ: ಪ್ರತಾಪ್ ಸಿಂಹ

    ಮೈಸೂರು: ಕೆಲ ಅಧಿಕಾರಿಗಳು ಎಲ್ಲಾ ಪಕ್ಷದ ರಾಜಕಾರಣಿಗಳಿಗೆ ಸಹಕರಿಸುತ್ತಿದ್ದಾರೆ. ಇಂತಹ ಅಧಿಕಾರಿಗಳನ್ನು ಪಟ್ಟಿಮಾಡಿ ಬ್ಲಾಕ್ ಲಿಸ್ಟ್ ಗೆ ಸೇರಿಸಿ ಎಂದು ಮೈಸೂರು ಸಂಸದ ಪ್ರತಾಪ್ ಸಿಂಹ ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಹೇಳಿದ್ದಾರೆ.

    ಮೈಸೂರಿನ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಇವತ್ತು ನಡೆದ ಕೆ.ಡಿ.ಪಿ ಸಭೆಯಲ್ಲಿ ಸಚಿವ ಸೋಮಣ್ಣರಿಗೆ ಸಂಸದ ಪ್ರತಾಪ್ ಸಿಂಹ ಈ ಮನವಿ ಮಾಡಿದರು. ಆರೇಳು ವರ್ಷದಿಂದ ಅಧಿಕಾರಿಗಳು ಇಲ್ಲೆ ಬೇರು ಬಿಟ್ಟಿದ್ದಾರೆ. ಇದರಿಂದ ಸರ್ಕಾರಿ ಕೆಲಸಗಳು ಸರಿಯಾಗಿ ಜಾರಿ ಆಗುತ್ತಿಲ್ಲ. ಈ ಜಿಲ್ಲೆಯವರೆ ಸಿಎಂ ಆಗಿದ್ದರು ಎಸ್‍ಎಸ್‍ಎಲ್‍ಸಿ ಯಲ್ಲಿ ಜಿಲ್ಲೆ ಪ್ರಥಮ ಸ್ಥಾನ ಗಳಿಸಲು ಸಾಧ್ಯವಾಗಿಲ್ಲ. ಜಿಲ್ಲೆಗೆ ದಕ್ಷ ಅಧಿಕಾರಿಗಳು ನೇಮಿಸಿ ಎಂದರು.

    ಇದೇ ವೇಳೆ ಪ್ರತಾಪ್ ಸಿಂಹ ಜಿಪಂ ಅನುದಾನವನ್ನು ಹೆಚ್ಚು ಮಾಡಿ ಎಂದು ಸಚಿವರಲ್ಲಿ ಮನವಿ ಮಾಡಿದರು. ಒಂದು ವರ್ಷದಲ್ಲಿ ಜಿಲ್ಲಾ ಪಂಚಾಯತ್ ಚುನಾವಣೆ ಬರುತ್ತಿದೆ. ಕೆಲಸ ಮಾಡದೆ ಜಿ.ಪಂ ಚುನಾವಣೆಗೆ ಜನರ ಮುಂದೆ ಹೇಗೆ ಹೋಗೋಕೆ ಆಗುತ್ತದೆ? ಹಿಂದೆ ಪ್ರತಿ ಸದಸ್ಯರಿಗೆ 60 ಲಕ್ಷ ಅನುದಾನ ಸಿಕ್ತಿತ್ತು. ಆದರೆ ಈಗ ಅನುದಾನ ಕಡಿತವಾಗಿದೆ. ಸಿಎಂಗೆ ಈ ವಿಚಾರದ ಬಗ್ಗೆ ಗಮನಕ್ಕೆ ತನ್ನಿ ಎಂದು ಮನವಿ ಮಾಡಿದರು.

  • ಸೋತ ಹಳ್ಳಿಹಕ್ಕಿಗೆ ಸೋಮಣ್ಣ-ಪ್ರತಾಪ್ ಸಿಂಹ ಸಾಂತ್ವನ

    ಸೋತ ಹಳ್ಳಿಹಕ್ಕಿಗೆ ಸೋಮಣ್ಣ-ಪ್ರತಾಪ್ ಸಿಂಹ ಸಾಂತ್ವನ

    ಮೈಸೂರು: ಹುಣಸೂರು ಉಪ ಚುನಾವಣೆಯಲ್ಲಿ ಸೋತ ಬಿಜೆಪಿ ಅಭ್ಯರ್ಥಿ ಎಚ್.ವಿಶ್ವನಾಥ್ ಅವರನ್ನು ಇಂದು ಮೈಸೂರಿನ ಮನೆಯಲ್ಲಿ ಸಚಿವ ವಿ.ಸೋಮಣ್ಣ ಮತ್ತು ಸಂಸದ ಪ್ರತಾಪ್ ಸಿಂಹ ಭೇಟಿ ಮಾಡಿ ಅವರಿಗೆ ಧೈರ್ಯ ತುಂಬಿದ್ದಾರೆ.

    ಅರ್ಧ ಗಂಟೆಗೂ ಹೆಚ್ಚು ಕಾಲ ಈ ಮಾತುಕತೆ ನಡೆಯಿತು. ನಂತರ ಮಾಧ್ಯಮದವರ ಜೊತೆ ಮಾತನಾಡಿದ ಸೋಮಣ್ಣ, ವಿಶ್ವನಾಥ್ ಅವರು ಸೋತಿದ್ದು ನೋವಿನ ಸಂಗತಿ. ನಮಗೆ ಬಹಳ ಬೇಜಾರಾದ ಸಂದರ್ಭದಲ್ಲಿ ಅವರನ್ನು ಹುಡುಕಿಕೊಂಡು ಹೋಗಿ ಭೇಟಿ ಮಾಡುತ್ತಿದ್ದೆ. ಈಗಲೂ ಅದೇ ರೀತಿ ಭೇಟಿ ಮಾಡಿದ್ದೇನೆ. ಸೋಲು-ಗೆಲುವು ಒಂದೇ ನಾಣ್ಯದ ಎರಡು ಮುಖ ಇದ್ದಂತೆ. ವಿಶ್ವನಾಥ್ ಅವರ ಆರೋಗ್ಯ ಮತ್ತಷ್ಟು ಸುಧಾರಣೆ ಆಗಲಿ ಎಂದರು.

    ವಿಶ್ವನಾಥ್ ಅವರಿಗೆ ಸಚಿವ ಸ್ಥಾನಮಾನ ನೀಡುವ ವಿಚಾರದ ಪ್ರಶ್ನೆಗೆ ಉತ್ತರಿಸಿ, ನಮ್ಮ ಪಕ್ಷದ ಹಿರಿಯರು, ಯಡಿಯೂರಪ್ಪ ಇದ್ದಾರೆ. ಹೈಕಮಾಂಡ್ ಸಹ ಈ ಬಗ್ಗೆ ನಿರ್ಧಾರ ಮಾಡುತ್ತಾರೆ. ಸದ್ಯ ಯಾವ ನಿರ್ಧಾರ ಮಾಡಿದ್ದಾರೆ ಅನ್ನೋದು ನನಗೆ ಗೊತ್ತಿಲ್ಲ. ಒಟ್ಟಿನಲ್ಲಿ ನಂಬಿದವರನ್ನು ಯಡಿಯೂರಪ್ಪ ಅವರು ಕೈಬಿಡಲ್ಲ ಎಂದರು.

     

  • ಚಾಮುಂಡಿ ತಾಯಿಗೆ ಬರುತ್ತಾ ಚಿನ್ನದ ರಥ ? ಬೆಟ್ಟಕ್ಕೆ ಬರುತ್ತಾ ರೋಪ್ ವೇ?

    ಚಾಮುಂಡಿ ತಾಯಿಗೆ ಬರುತ್ತಾ ಚಿನ್ನದ ರಥ ? ಬೆಟ್ಟಕ್ಕೆ ಬರುತ್ತಾ ರೋಪ್ ವೇ?

    ಮೈಸೂರು: ಚಾಮುಂಡಿ ಬೆಟ್ಟದಲ್ಲಿ ಚಾಮುಂಡಿ ದೇವಿಗೆ ಚಿನ್ನದ ರಥ ಮಾಡಿಸುವುದು ಮತ್ತು ಬೆಟ್ಟಕ್ಕೆ ರೋಪ್ ವೇ  ನಿರ್ಮಾಣದ ವಿಚಾರದಲ್ಲಿ ರಾಜ್ಯ ಸರ್ಕಾರ ಮಾತುಕತೆ ಆರಂಭಿಸಿದೆ.

    ಸುಮಾರು 7 ಕೋಟಿ ವೆಚ್ಚದಲ್ಲಿ ಚಿನ್ನದ ರಥ ಮಾಡಿಸುವ ಪ್ರಸ್ತಾಪ ಸರ್ಕಾರದ ಮುಂದಿದೆ. ಈಗಾಗಲೇ ಈ ವಿಚಾರದಲ್ಲಿ ಅಧಿಕಾರಿಗಳ ಸಭೆಯೂ ನಡೆದಿದೆ. ಆದರೆ, ಈ ಪ್ರಸ್ತಾಪಕ್ಕೆ ಇನ್ನೂ ಸಿಎಂ ಒಪ್ಪಿಗೆ ಸಿಕ್ಕಿಲ್ಲ. ಮುಂದಿನ ಕ್ಯಾಬಿನೆಟ್ ಸಭೆ ವೇಳೆ ಈ ವಿಚಾರವನ್ನು ಸಿಎಂ ಮುಂದೆ ಪ್ರಸ್ತಾಪಿಸಿ ಈ ಬಗ್ಗೆ ಸ್ಪಷ್ಪ ನಿರ್ಧಾರ ತಿಳಿಸಲಾಗುವುದು ಎಂದು ಉಸ್ತುವಾರಿ ಸಚಿವ ವಿ. ಸೋಮಣ್ಣ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ತಿಳಿಸಿದರು.

    ಚಾಮುಂಡಿ ಬೆಟ್ಟಕ್ಕೆ ರೋಪ್ ವೇ ಅಳವಡಿಸುವ ವಿಚಾರದಲ್ಲೂ ಚರ್ಚೆ ಸಾಗಿವೆ. ಈ ಬಗ್ಗೆಯೂ ಸಚಿವ ಸೋಮಣ್ಣ ಮಾಹಿತಿ ನೀಡಿ, ರೋಪ್ ವೇಯನ್ನು ಕೆಲವೆಡೆ ನೋಡಿದ್ದೇವೆ. ರೋಪ್ ವೇ ಮಾಡುವ ವಿಚಾರವಾಗಿ ಸಾಕಷ್ಟು ಚರ್ಚೆ ಆಗುತ್ತಿದೆ. ಅದರ ಸಾಧಕ ಬಾಧಕ ತಿಳಿಯಲು ಬಿಟ್ಟಿದ್ದೇವೆ. ಇದು ಅದು ಸರಿಯೇ? ಇಲ್ಲವೇ ಎಂಬುದು ಚರ್ಚೆಯಾಗಬೇಕು. ಅದಕ್ಕಾಗಿ ಚರ್ಚೆಯಾಗಲಿ ನಂತರ ಆ ಬಗ್ಗೆ ನೋಡೋಣ ಎಂದು ಹೇಳಿದರು.

    ಕಾಮಗಾರಿ ವೀಕ್ಷಣೆ: ಚಾಮುಂಡಿಬೆಟ್ಟದ ನಂದಿ ಪ್ರತಿಮೆಗೆ ಸಾಗುವ ರಸ್ತೆ ಮಧ್ಯೆ ಉಂಟಾಗಿದ್ದ ರಸ್ತೆ ಕುಸಿತದ ದುರಸ್ಥಿ ಕಾಮಗಾರಿ ಪ್ರಗತಿಯನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ವಿ.ಸೋಮಣ್ಣ ವೀಕ್ಷಿಸಿದರು.ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕು. ತ್ವರಿತವಾಗಿ ಕೆಲಸ ಮುಗಿಸಿ ಸಾರ್ವಜನಿಕರ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಸಚಿವರು ತಿಳಿಸಿದರು.

    ಕಾಮಗಾರಿ 49 ಲಕ್ಷ ರೂ‌ಗಳ ಅಂದಾಜು ವೆಚ್ಚದಲ್ಲಿ ನಡೆಯುತ್ತಿದ್ದು, ಪ್ರಗತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.  ಸಂಸದರಾದ ಪ್ರತಾಪ್ ಸಿಂಹ, ಶಾಸಕರಾದ ಜಿ‌.ಟಿ‌.ದೇವೇಗೌಡ, ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, ಲೋಕೋಪಯೋಗಿ ಕಾರ್ಯಪಾಲಕ ಇಂಜಿನಿಯರ್ ವಿನಯ್ ಕುಮಾರ್ ಮತ್ತಿತರರು ಇದ್ದರು.

  • ಬೀದರ್ ನಲ್ಲಿ ಚನ್ನಬಸವ ಪಟ್ಟದೇವರ ಜಯಂತಿ ಆಚರಣೆ

    ಬೀದರ್ ನಲ್ಲಿ ಚನ್ನಬಸವ ಪಟ್ಟದೇವರ ಜಯಂತಿ ಆಚರಣೆ

    ಬೀದರ್: ಶರಣ ಸಂಸ್ಕೃತಿ ಮತ್ತು ಕನ್ನಡ ನಾಡು ನುಡಿಯನ್ನು ರಕ್ಷಿಸಿದ ಚನ್ನಬಸವ ಪಟ್ಟದೇವರ ಜಯಂತಿಯನ್ನು ಇಂದು ಆಚರಿಸಲಾಯ್ತು.

    ಜಿಲ್ಲೆಯ ಭಾಲ್ಕಿ ಪಟ್ಟಣದ ಹಿರೇಮಠದಲ್ಲಿ 130ನೇ ಜಯಂತೋತ್ಸವ ಕಾರ್ಯಕ್ರಮವನ್ನು ಶಿವಮೊಗ್ಗದ ಬೆಕ್ಕಿನ ಕಲ್ಮಠ ಶ್ರೀಗಳಾದ ಜಗತ್ ಗುರು ಡಾ.ಮಲ್ಲಿಕಾರ್ಜುನ ಮಹಾಸ್ವಾಮಿಗಳ ದಿವ್ಯ ಸಾನಿದ್ಯದಲ್ಲಿ ವಸತಿ ಸಚಿವರಾದ ವಿ.ಸೋಮಣ್ಣ ಉದ್ಘಾಟಿಸಿದರು.

    ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಚಿವರು ಹನ್ನೇರಡನೇ ಶತಮಾನದಲ್ಲಿ ಬಸವಣ್ಣನವರು ಪುರೋಹಿತ ಶಾಹಿಗಳ ಕಪಿಮುಷ್ಟಿಯಿಂದ ಶರಣ ಸಂಸ್ಕೃತಿಯನ್ನು ರಕ್ಷಣೆ ಮಾಡಿದ್ದರು. ಇಪ್ಪತ್ತನೆಯ ಶತಮಾನದಲ್ಲಿ ನಿಜಾಮರ ದಬ್ಬಾಳಿಕೆಗೆ ಸಿಲುಕಿದ್ದ ಶರಣ ಸಂಸ್ಕೃತಿ ಮತ್ತು ಕನ್ನಡ ನಾಡು ನುಡಿಯನ್ನು ಚನ್ನಬಸವ ಪಟ್ಟದೇವರು ರಕ್ಷಿಸಿದರು ಎಂದು ಹೇಳಿದರು. ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಭು ಚವ್ಹಾಣ್, ಸಂಸದರಾದ ಭಗವಂತ ಖೂಬಾ, ಭಾರತಿ ಜನತಾ ಪಕ್ಷದ ಮುಖಂಡರಾದ ಆ.ಏ ಸಿದ್ರಾಮ, ಬಾಬುವಾಲಿ ಮಠದ ಶ್ರೀಗಳು ಉಪಸ್ಥಿತರಿದ್ದರು.

  • ಪೌರತ್ವ ವಿರೋಧಿ ಹೋರಾಟ ಇಂದಲ್ಲ ನಾಳೆ ಕಾಂಗ್ರೆಸ್‍ಗೆ ಬಗನಿ ಗೂಟವಾಗುತ್ತೆ: ವಿ.ಸೋಮಣ್ಣ

    ಪೌರತ್ವ ವಿರೋಧಿ ಹೋರಾಟ ಇಂದಲ್ಲ ನಾಳೆ ಕಾಂಗ್ರೆಸ್‍ಗೆ ಬಗನಿ ಗೂಟವಾಗುತ್ತೆ: ವಿ.ಸೋಮಣ್ಣ

    ರಾಮನಗರ: ಪೌರತ್ವ ತಿದ್ದುಪಡಿ ಕಾಯ್ದೆ ವಿಚಾರವಾಗಿ ಪ್ರತಿಭಟನೆ ನಡೆಸಿ, ಸಮಾಜದಲ್ಲಿ ಆತಂತಕದ ವಾತಾವರಣ ಸೃಷ್ಟಿಸುವುದು ಸರಿಯಲ್ಲ. ಇಂದಲ್ಲ ನಾಳೆ ಕಾಂಗ್ರೆಸ್‍ನವರಿಗೆ ಪೌರತ್ವ ವಿರೋಧಿ ಹೋರಾಟವೇ ಬಗನಿ ಗೂಟವಾಗುತ್ತೆ ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.

    ಕನಕಪುರ ತಾಲೂಕಿನ ತಮ್ಮ ಹುಟ್ಟೂರು ಯಲವನಾಥ ಗ್ರಾಮದಲ್ಲಿ ಸಚಿವರು ತಂದೆ-ತಾಯಿ ಪುಣ್ಯಾರಾಧನೆ ಕಾರ್ಯಕ್ರಮದಲ್ಲಿ ಕುಟುಂಬದ ಜೊತೆ ಭಾಗಿಯಾಗಿ ಪೂರ್ವಿಕರಿಗೆ ಪೂಜೆ ಸಲ್ಲಿಸಿದರು. ಬಳಿಕ ಮಾತನಾಡಿದ ಅವರು, 1993ರಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ರವರೇ ಪೌರತ್ವ ಕಾಯ್ದೆ ತಿದ್ದುಪಡಿಯ ಬಗ್ಗೆ ಮಸೂದೆ ತರಲು ಮುಂದಾಗಿದ್ದರು. ಮಸೂದೆ ಬಗ್ಗೆ ಅವತ್ತೆ ಅವರು ಯೋಚನೆ ಮಾಡಿದ್ದರು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪೌರತ್ವ ತಿದ್ದುಪಡೆ ಮಸೂದೆಯನ್ನು ಸಂಸತ್‍ನಲ್ಲಿ ಮಂಡಿಸಿ, ಕಾಯ್ದೆಯನ್ನು ಜಾರಿಗೆ ತಂದಿದೆ. ಈ ವಿಚಾರದಲ್ಲಿ ಕಾಂಗ್ರೆಸ್ ಜನರನ್ನು ಹುರಿದುಂಬಿಸಿ ತಪ್ಪು ದಾರಿಗೆ ಎಳೆದು ಪ್ರಜಾಪ್ರಭುತ್ವಕ್ಕೆ ಮಾರಕವಾಗುತ್ತಿದೆ. ಹೀಗಾಗಿ ಕಾಂಗ್ರೆಸ್ಸಿಗರು ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು ಎಂದು ತಿಳಿಸಿದರು.

    ಪೌರತ್ವ ತಿದ್ದುಪಡೆ ಕಾಯ್ದೆಯಲ್ಲಿ ಯಾರನ್ನಾದರೂ ದೇಶ ಬಿಟ್ಟು ಹೋಗಿ ಎಂದು ಹೇಳಿದ್ದಾರಾ? ಅಲ್ಪಸಂಖ್ಯಾತರಿಗೆ ಹೊರ ದೇಶದಲ್ಲಿ ಇರಲು ಅವಕಾಶ ಕೊಡುತ್ತಿಲ್ಲ. ಅವರನ್ನ ಅಲ್ಲಿಂದ ಓಡಿಸುತ್ತಿದ್ದಾರೆ. ಅವರು ಎಲ್ಲಿರಬೇಕು? ಅವರ ದೇಶ ಯಾವುದು? ಹೀಗೆ ವಾಪಸ್ ಬರುವವರಿಗೆ ಹಕ್ಕು ಕೊಡುತ್ತೇವೆ ಅಂದ್ರೆ ನಿಮಗೇನು ಅನಾನುಕೂಲವಾಗಿದೆ. ಕಾನೂನನ್ನು ಅರ್ಥೈಸಿಕೊಳ್ಳದೇ ದೇಶದ ಇತಿಹಾಸವನ್ನು ತಿರುಚುವುದು ಸಮಂಜಸವಲ್ಲ ಎಂದು ಹೇಳಿದರು.

    ನಾವು ಭಾರತೀಯ ಮುಸ್ಲಿಮರಿಗೆ ಬೇರೆ ಕಡೆಗೆ ಕಳಿಸುತ್ತೇವೆ ಅಂತ ಹೇಳಿಲ್ಲ. ಅವರಿಗೆ ಸಣ್ಣ ಅಪಚಾರವಾಗದಂತೆ ನೋಡಿಕೊಂಡಿದ್ದೇವೆ. ಆದರೆ ಕೆಲವರು ಬೀದಿಗಿಳಿದು ರಾಷ್ಟ್ರದ ಸಂಪತ್ತನ್ನು ಹಾಳು ಮಾಡುತ್ತಿದ್ದಾರೆ. ಯಾವ ಪುರುಷಾರ್ಥಕ್ಕೆ ಈ ರೀತಿ ಮಾಡುತ್ತಿದ್ದಾರೆ. ಪೊಲೀಸ್ ಠಾಣೆಗೆ ನುಗ್ಗಿ ಪ್ರತಿಭಟನಾಕಾರರು ಏನೆಲ್ಲ ಮಾಡಿದ್ದಾರೆ. ಯಾರ ಮೇಲೆ, ಯಾವುದಕ್ಕಾಗಿ ಈ ದೌರ್ಜನ್ಯ ಎಂದು ಪ್ರಶ್ನಿಸಿದರು.

  • ಭರ್ಜರಿ ಗೆಲುವಿನ ಖುಷಿಯಲ್ಲಿ ನೂತನ ಶಾಸಕರಿಂದ ರೌಂಡ್ಸ್

    ಭರ್ಜರಿ ಗೆಲುವಿನ ಖುಷಿಯಲ್ಲಿ ನೂತನ ಶಾಸಕರಿಂದ ರೌಂಡ್ಸ್

    ಬೆಂಗಳೂರು: ಉಪಚುನಾವಣೆ ಫಲಿತಾಂಶ ಹೊರಬಿದ್ದ ಬೆನ್ನಲ್ಲೇ ಜಯಭೇರಿ ಭಾರಿಸಿದ ನೂತನ ಶಾಸಕರಾದ ಎಸ್.ಟಿ ಸೋಮಶೇಖರ್ ಹಾಗೂ ಭೈರತಿ ಬಸವರಾಜ್ ವಿಜಯನಗರದ ಆದಿಚುಂಚನಗಿರಿ ಶಾಖಾ ಮಠಕ್ಕೆ ಭೇಟಿ ನೀಡಿದ್ದಾರೆ.

    ಕೇವಲ ನೂತನ ಶಾಸಕರು ಮಾತ್ರವಲ್ಲ ಅವರೊಂದಿಗೆ ಕೆಲ ಬಿಜೆಪಿ ನಾಯಕರು ಕೂಡ ಮಠಕ್ಕೆ ಭೇಟಿಕೊಟ್ಟಿದ್ದಾರೆ. ಆದಿಚುಂಚನಗಿರಿ ಶಾಖಾ ಮಠಕ್ಕೆ ಭೇಟಿ ನೀಡಿದ ವೇಳೆ ನಿರ್ಮಲಾನಂದ ಸ್ವಾಮೀಜಿಗಳು ಇಬ್ಬರು ಶಾಸಕರು ಬೆಂಗಳೂರು ಅಭಿವೃದ್ಧಿಗೆ ಶ್ರಮಿಸಿ ಎಂದು ಆಶೀರ್ವದಿಸಿದರು. ಇದೇ ವೇಳೆ ಮಾಧ್ಯಮಗಳ ಕೊತೆ ಮಾತನಾಡಿ, ಬಿಜೆಪಿ ನೀಡಿರುವ ಮಾತಿನಂತೆ ಗೆದ್ದ ಶಾಸಕರಿಗೆ ಮಂತ್ರಿ ಮಾಡಲಿದೆ ಎಂಬ ವಿಶ್ವಾಸ ಇದೆ ಎಂದು ಸೋಮಶೇಖರ್ ಹಾಗೂ ಭೈರತಿ ಬಸವರಾಜ್ ತಿಳಿಸಿದರು.

    ಮಠದಿಂದ ಹೊರಟ ನಂತರ ಸಚಿವ ಸೋಮಣ್ಣ ಅವರನ್ನು ಕಚೇರಿಯಲ್ಲಿ ಭೇಟಿ ಮಾಡಿ ಶಾಸಕರು ಪರಸ್ಪರ ಮಾತುಕತೆ ನಡೆಸಿದರು. ಈ ವೇಳೆ ಸೋಮಣ್ಣ ಅವರು ಮಾಧ್ಯಮಗಳ ಜೊತೆ ಮಾತನಾಡಿ, ನಮ್ಮ ಸರ್ಕಾರ ಕೊಟ್ಟ ಮಾತು ಉಳಿಸಿಕೊಳ್ಳಲಿದೆ. ಸೋತವರನ್ನ ಕೈ ಬಿಡದೆ ಸೂಕ್ತ ಸ್ಥಾನ ನೀಡಲಾಗುತ್ತದೆ ಎಂದು ಭರವಸೆ ನೀಡಿದರು.

    ಎಸ್.ಟಿ ಸೋಮಶೇಖರ್ ಅವರು 27,686 ಮತಗಳ ಅಂತರದಿಂದ ಗೆಲ್ಲುವ ಮೂಲಕ ಯಶವಂತಪುರದಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ. ಬಿಜೆಪಿ ಪರವಾಗಿ 1,44,676 ಮತಗಳು ಬಿದ್ದರೆ, ಜೆಡಿಎಸ್‍ನಿಂದ ಸ್ಪರ್ಧಿಸಿದ್ದ ಜವರಾಯಿಗೌಡ 1,16,990 ಮತಗಳನ್ನು ಪಡೆದಿದ್ದಾರೆ. ಕಾಂಗ್ರೆಸ್ ಕೇವಲ 15,707 ಮತಗಳನ್ನು ಪಡೆದಿದೆ. ಕಳೆದ ಚುನಾವಣೆಯಲ್ಲಿ ಸೋಮಶೇಖರ್ 10,711 ಮತಗಳಿಂದ ಗೆದ್ದಿದ್ದರು.

    ಬೆಂಗಳೂರಿನ ಕೆ.ಆರ್ ಪುರಂನಲ್ಲಿ ಭೈರತಿ ಬಸವರಾಜ್ 63,405 ಮತಗಳ ಅಂತರದಿಂದ ಜಯಗಳಿಸಿದ್ದಾರೆ. ಬಿಜೆಪಿ ಪರವಾಗಿ 1,39,833, ಕಾಂಗ್ರೆಸ್ ಪರವಾಗಿ 76,428 ಮತಗಳು ಚಲಾವಣೆಯಾದರೆ ಜೆಡಿಎಸ್‍ಗೆ 2,048 ಮತಗಳು ಬಿದ್ದಿದೆ. 2018ರ ಚುನಾವಣೆಯಲ್ಲಿ 32,729 ಮತಗಳಿಂದ ಭೈರತಿ ಬಸವರಾಜ್ ಜಯಗಳಿಸಿದ್ದರೆ ಬಿಜೆಪಿಯಿಂದ ಸ್ಪರ್ಧಿಸಿದ್ದ ನಂದೀಶ್ ರೆಡ್ಡಿ ಅವರಿಗೆ 1,02,675 ಮತಗಳು ಬಿದ್ದಿತ್ತು.

  • ಬಟ್ಟೆ ಕಳ್ಳತನ ಮಾಡಿದ್ದನ್ನ ದೃಢಪಡಿಸಿದ್ರೆ ನೇಣು ಹಾಕಿಕೊಳ್ಳುತ್ತೇನೆ: ಎಚ್‍ಡಿಕೆಗೆ ಸೋಮಣ್ಣ ಸವಾಲು

    ಬಟ್ಟೆ ಕಳ್ಳತನ ಮಾಡಿದ್ದನ್ನ ದೃಢಪಡಿಸಿದ್ರೆ ನೇಣು ಹಾಕಿಕೊಳ್ಳುತ್ತೇನೆ: ಎಚ್‍ಡಿಕೆಗೆ ಸೋಮಣ್ಣ ಸವಾಲು

    – ಕೀಳುಮಟ್ಟದ ರಾಜಕಾರಣನೇ ನಿಮಗೆ ಕಂಟಕ
    – ಎಚ್‍ಡಿಕೆ ವಿರುದ್ಧ ಗುಡುಗಿದ ವಸತಿ ಸಚಿವರು
    – ನಾನು ಎಚ್‍ಡಿಡಿ ಕಾಲಿಗೆ ಬಿದ್ದಿದ್ದು ನಿಜ

    ಚಿಕ್ಕಬಳ್ಳಾಪುರ: ನಾನು ಬಟ್ಟೆ ಕಳ್ಳತನ ಮಾಡಿದ್ದನ್ನ ದೃಢಪಡಿಸಿದರೆ ನೇಣು ಹಾಕಿಕೊಳ್ಳುತ್ತೇನೆ ಎಂದು ವಸತಿ ಸಚಿವ ವಿ.ಸೋಮಣ್ಣ, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಸವಾಲು ಹಾಕಿದ್ದಾರೆ.

    ಸೋಮಣ್ಣ ಜನತಾ ಬಜಾರ್‌ನಲ್ಲಿ ಬಟ್ಟೆ ಕಳ್ಳತನ ಮಾಡಿದ್ದವನು ಎಂಬ ಎಚ್.ಡಿ.ಕುಮಾರಸ್ವಾಮಿ ಅವರ ಆರೋಪಕ್ಕೆ ಸಚಿವರು ಚಿಕ್ಕಬಳ್ಳಾಪುರ ತಾಲೂಕಿನ ಗಿಡ್ನಹಳ್ಳಿ ಗ್ರಾಮದಲ್ಲಿ ಕಿಡಿಕಾರಿದರು. ಎಚ್.ಡಿ.ಕುಮಾರಸ್ವಾಮಿ ಅವರಿಗೆ ಸಂಸ್ಕಾರ ಇಲ್ಲ, ನಾಲಿಗೆಗೆ ಹಿಡಿತ ಇಲ್ಲ. ನಾನು ಜನತಾ ಬಜಾರ್‌ನಲ್ಲಿ ಬಟ್ಟೆ ಕಳ್ಳತನ ಮಾಡಿದ್ದನ್ನು ಅವರು ದೃಢಪಡಿಸಿದರೆ ನೇಣು ಹಾಕಿಕೊಳ್ಳುತ್ತೇನೆ. ಅಂತಹ ಯಾವುದೇ ಘಟನೆಗಳು ನನ್ನ ಜೀವನದಲ್ಲಿ ನಡೆದಿಲ್ಲ. ನನ್ನ ಜೀವನ ತೆರೆದ ಪುಸ್ತಕ. ಒಂದು ವೇಳೆ ನಾನು ಬಜಾರ್ ನಲ್ಲಿ ಬಟ್ಟೆ ಕದ್ದಿದ್ದೇನೆ ಎನ್ನುವುದನ್ನು ದೃಢಪಡಿಸದಿದ್ದರೆ ಕುಮಾರಸ್ವಾಮಿ ಅವರನ್ನು ಏನು ಮಾಡಬೇಕು ಎಂದು ಪ್ರಶ್ನಿಸಿದರು.

    ಇಂತಹ ಪಾಪದ ಮಾತುಗಳನ್ನ ಆಡುವುದರಿಂದ ಎಚ್.ಡಿ.ಕುಮಾರಸ್ವಾಮಿ ಅವರನ್ನು ಹಿಟ್ ಅಂಡ್ ರನ್ ಅಂತ ಕರೆಯುತ್ತಾರೆ. ಮಾಜಿ ಸಿಎಂ ಆದವರು ಸಂಸ್ಕಾರ ಇಲ್ಲದೆ ಮಾತನಾಡುವುದು ಎಷ್ಟು ಸರಿ ಅಂತ ಅರ್ಥ ಮಾಡಿಕೊಳ್ಳಬೇಕು. ದಿಕ್ಕು ದಿಸೆಯಿಲ್ಲದೆ ಏನೋ ಒಂದು ಹೇಳುವುದು ಎಚ್.ಡಿ.ಕುಮಾರಸ್ವಾಮಿ ಅವರ ಜಾಯಮಾನ. ಆ ತರಹದ್ದು ಏನಾದ್ರೂ ಇದ್ದರೆ, ಧೃಡಪಡಿಸಿದರೆ ಒಂದು ಸೆಕೆಂಡ್ ಕೂಡ ನಾನು ಜೀವಂತವಾಗಿ ಇರುವುದಿಲ್ಲ ಎಂದು ಹೇಳಿದರು.

    ಎಚ್‍ಡಿಡಿ ರಾಷ್ಟ್ರದ ಸಂಪತ್ತು:
    ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ರಾಷ್ಟ್ರದ ದೊಡ್ಡ ನಾಯಕರು, ರಾಷ್ಟ್ರದ ಸಂಪತ್ತು. ಅವರು ರಾಜ್ಯ ಹಾಗೂ ನಮ್ಮಂತಹ ನಾಯಕರಿಗೆ ಮಾರ್ಗದರ್ಶನ ಮಾಡಲಿ. ಯಾವುದೇ ಪಕ್ಷಕ್ಕೆ ಅವರು ಸೀಮಿತವಾಗುವುದು ಬೇಡ. ಎಚ್.ಡಿ.ದೇವೇಗೌಡರ ಆಶೀರ್ವಾದ ಎಲ್ಲಿರಿಗೂ ಬೇಕು ಎಂದು ಹೊಗಳಿದರು.

    ಎಚ್.ಡಿ.ದೇವೇಗೌಡ ಅವರನ್ನ ಮುಖ್ಯಮಂತ್ರಿ ಮಾಡಿದಾಗ ಎಚ್.ಡಿಕುಮಾರಸ್ವಾಮಿ ಎಲ್ಲಿದ್ದರು. ಕಾರ್ಪೊರೇಷನ್‍ನಲ್ಲಿ ಗುತ್ತಿಗೆದಾರರಾಗಿದ್ದರು. ದೇವೇಗೌಡರು ಸಿಎಂ ಆಗಬೇಕಾದರೆ ನನ್ನ ಶ್ರಮ ಎಷ್ಟಿತ್ತು. ದಿವಂಗತ ಬಾಲಗಂಗಾಧರನಾಥ ಸ್ವಾಮೀಜಿಗಳ ಸಂದೇಶ ಏನಿತ್ತು. ಅದು ನನಗೆ ಗೊತ್ತು. ಈ ಕುಮಾರಸ್ವಾಮಿ ಅವರಿಗೆ ಏನು ಗೊತ್ತು ಎಂದು ಗುಡುಗಿದರು.

    ಎಚ್‍ಡಿಡಿ ಕಾಲಿಗೆ ಬಿದ್ದಿದ್ದು ನಿಜ:
    ನಾನು ನಮ್ಮ ಅಮ್ಮ-ಅಪ್ಪ, ಗುರುಗಳು ಹಾಗೂ ದೇವೇಗೌಡರ ಕಾಲಿಗೆ ಬಿದ್ದಿದ್ದೇನೆ. ದಸರಾ ಮುಗಿದ ಮೇಲೆ ದೇವೇಗೌಡರು ಸಿಕ್ಕಿದ್ದರು. ಎಂತಹ ಒಳ್ಳೆಯ ಕೆಲಸ ಮಾಡಿದೆ ಅಂತ ಅಭಿನಂದಿಸಿದ್ದರು. ಅವರ ಮಗ ಎನ್ನುವ ಅರ್ಹತೆ ಬಿಟ್ಟರೆ ನಿಮಗೆ ಬೇರೇನು ಅರ್ಹತೆ ಇಲ್ಲ. ಆದರೆ ಬೇರೆ ಯಾರೂ ದೇವೇಗೌಡರ ಹೆಸರು ಹೇಳುವಂತಿಲ್ಲ ಎನ್ನುವ ಅಧಿಕಾರ ನಿಮಗಿಲ್ಲ ಎಂದು ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಗುಡುಗಿದರು.

    ಮಾಜಿ ಸಿಎಂ ಕುಮಾರಸ್ವಾಮಿ ಅವರು ದೇವೇಗೌಡ ಅವರನ್ನು ಎಷ್ಟರ ಮಟ್ಟಿಗೆ ನಡೆಸಿಕೊಂಡರು ಎನ್ನುವುದು ನನಗೆ ಗೊತ್ತು. ನಮ್ಮ ಕಣ್ಣು ಮುಂದೆಯೇ ನೂರಾರು ನಿದರ್ಶನಗಳಿವೆ. ನಾನು ಅದನ್ನ ಹೇಳುವುಕ್ಕೆ ಹೋಗುವುದಿಲ್ಲ. ನಾನು ಬೆಂಗಳೂರಿಗೆ ಬಂದು 54 ವರ್ಷ, ರಾಜಕೀಯಕ್ಕೆ ಪ್ರವೇಶಿಸಿ 40 ವರ್ಷ ಆಯಿತು. ನಿಮ್ಮಂತ ಲಜ್ಜೆಗೆಟ್ಟ ಕೆಲಸಗಳನ್ನು ಮಾಡಿಲ್ಲ ಎಂದು ಕುಮಾರಸ್ವಾಮಿ ಅವರ ವಿರುದ್ಧ ಕಿಡಿಕಾರಿದರು.

    ಎಚ್.ಡಿ.ದೇವೇಗೌಡ ಅವರನ್ನ ನನ್ನ ತಂದೆ ಹಾಗೂ ಹಿರಿಯರಾಗಿಯೂ ನೋಡಿದ್ದೇನೆ. ನನ್ನ ಅವರ ಬಾಂಧವ್ಯ ಚೆನ್ನಾಗಿದೆ. ನೀವು ಅವರ ಮಗ ಆಗದಿದ್ರೇ ಏನಾಗಬಿಡ್ತಿದ್ರೀ? ಅರ್ಥ ಮಾಡಿಕೊಳ್ಳಿ. ನಮಗೆ ನಮ್ಮ ತಂದೆ ತಾಯಿ ಸಂಸ್ಕಾರ ಕಲಿಸಿದ್ದಾರೆ ಎಂದು ಎಚ್‍ಡಿಕೆ ವಿರುದ್ಧ ವಾಗ್ದಾಳಿ ನಡೆಸಿದರು.

    ಇಲ್ಲಸಲ್ಲದ ಕ್ಷುಲ್ಲಕ ಆರೋಪ ಮಾಡಿ ಇನ್ನೊಬ್ಬರ ಮನಸ್ಸು ನೋಯಿಸುವ ಕೀಳುಮಟ್ಟದ ರಾಜಕಾರಣನೇ ನಿಮಗೆ ಕಂಟಕ. ಅದಕ್ಕೆ ಯಾರೂ ನಿಮ್ಮನ್ನ ನಂಬ್ತಾ ಇಲ್ಲ. ಇಂತಹ ದುರಂಹಕಾರದ ಅವಹೇಳನಕಾರಿಯಾಗಿ ಕೆಟ್ಟಮಟ್ಟದ ರೀತಿಯಲ್ಲಿ ಮಾತನಾಡುವುದು ನಿಲ್ಲಿಸಿ. ನಿಮ್ಮದು ಒಂದಲ್ಲ ನೂರಾರು ಇವೆ. ನಾವೇನಾದರೂ ಹೇಳಿದರೆ ನಿಮ್ಮ ಗೌರವ ಏನಾಗುತ್ತೆ ತಿಳಿದುಕೊಳ್ಳಿ. ಕುಮಾರಸ್ವಾಮಿಯವರೇ ಹಳೆಯದನ್ನೆಲ್ಲಾ ನೆನಪಿಸಿಕೊಳ್ಳಿ. ನಾನು ನಿಮಗೆ ಎಷ್ಟು ಸಹಾಯ ಮಾಡಿದ್ದೇನೆ ಎನ್ನುವುದನ್ನು ಅರಿತುಕೊಳ್ಳಿ. ಇಂತಹ ಇಲ್ಲದ ಹೇಳಿಕೆಗಳನ್ನ ಕೊಡಬೇಡಿ. ತಪ್ಪು ಮಾಡಿದ್ದರೆ ಹೇಳಿ. ನನ್ನ ದೇಹತ್ಯಾಗಕ್ಕೂ ನಾನು ಸಿದ್ಧನಿದ್ದೇನೆ ಎಂದು ಹೇಳಿದರು.

  • ಸಿದ್ದರಾಮಯ್ಯ ಮಾತು ಕೇಳಿದ್ರೆ ಮನೆಗೆ ಕಳಿಸ್ಬೇಕಾಗುತ್ತೆ – ಅಧಿಕಾರಿಗಳಿಗೆ ಸೋಮಣ್ಣ ಸೂಚನೆ

    ಸಿದ್ದರಾಮಯ್ಯ ಮಾತು ಕೇಳಿದ್ರೆ ಮನೆಗೆ ಕಳಿಸ್ಬೇಕಾಗುತ್ತೆ – ಅಧಿಕಾರಿಗಳಿಗೆ ಸೋಮಣ್ಣ ಸೂಚನೆ

    ಬಾಗಲಕೋಟೆ: ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅಧಿಕಾರಿಗಳ ವಿರುದ್ಧ ಕೆಂಡಾಮಂಡಲರಾಗಿದ್ದು ಟಿಪ್ಪು ಜಯಂತಿ ಆಚರಣೆ ವಿಚಾರದಲ್ಲಿ ಸರ್ಕಾರದ ಆದೇಶದಂತೆ ಕಾರ್ಯನಿರ್ವಹಿಸಿ ಎಂದು ಸೂಚಿಸಿದ್ದಾರೆ.

    ಬಾಗಲಕೋಟೆ ಪ್ರವಾಸದಲ್ಲಿ ಸಂದರ್ಭದಲ್ಲಿ ತೋಟಗಾರಿಕೆ ವಿವಿಯಲ್ಲಿ ಸಭೆಯಲ್ಲಿದ್ದಾಗ ಸಚಿವರಿಗೆ ಮೈಸೂರಿನಿಂದ ಅಧಿಕಾರಿಗಳ ಕರೆ ಬಂದಿದೆ. ಈ ವೇಳೆ ಫೋನಿನಲ್ಲೇ ಅಧಿಕಾರಿಗಳನ್ನು ಸಚಿವ ವಿ ಸೋಮಣ್ಣ ಗದರಿದ್ದಾರೆ.

    ಸರ್ಕಾರದ ಆದೇಶ ಹೇಗಿದೆಯೋ ಹಾಗೆ ಮಾಡಿ. ಮತ್ತೆ ನೀವು ಹಳೆ ಆದೇಶ ಎಂದು ಸಿದ್ದರಾಮಯ್ಯ ಮಾತು ಕೇಳಿದರೆ ಮನೆಗೆ ಹೋಗ್ತಾಯಿರಿ ರಜೆಹಾಕಿ ಹೋಗಿ ಎಂದು ತರಾಟೆ ತೆಗೆದುಕೊಂಡಿದ್ದಾರೆ.

    ಸರ್ಕಾರದ ಆದೇಶ ಏನಿದೆಯೋ ಅದನ್ನು ಗಂಭೀರವಾಗಿ ಪಾಲನೆ ಮಾಡಿ. ನಾನು ಪೊಲೀಸರಿಗೆ ಈ ಬಗ್ಗೆ ಈಗಾಗಲೇ ಹೇಳಿದ್ದೇನೆ. ಇಬ್ಬರೂ ಸೇರಿ ಚರ್ಚೆ ಮಾಡಿ ನಿರ್ಧಾರ ಮಾಡಿ ಎಂದು ಫೋನಿನಲ್ಲಿ ಅಧಿಕಾರಿಗಳಿಗೆ ಸೋಮಣ್ಣ ಸೂಚಿಸಿದ್ದಾರೆ.

    ಇದೇ ವೇಳೆ ನೆರೆ ಪರಿಹಾರದ ಹಣವನ್ನು ದುರುಪಯೋಗ ಪಡಿಸಿಕೊಂಡ ಅಧಿಕಾರಿ ವಿರುದ್ಧ ಸಹ ಸಚಿವರು ಕೆಂಡಾಮಂಡಲರಾಗಿದ್ದಾರೆ. ಕೊಡಗು ಲೋಕೋಪಯೋಗಿ ಎಕ್ಸಿಕ್ಯುಟಿವ್ ಎಂಜಿನಿಯರ್‌ರಿಂದ ಸರ್ಕಾರಿ ಹಣ ದುರುಪಯೋಗ ವಿಚಾರಕ್ಕೆ ಶ್ರೀಕಂಠಯ್ಯ ಅನ್ನೋನು ಯಾವ ವಿಭಾಗದಲ್ಲಿದ್ದಾನೆ? ತಕ್ಷಣವೇ ಅವನಿಗೆ ಶೋಕಾಸ್ ನೋಟೀಸ್ ನೀಡಿ ಎಂದು ಆದೇಶಿಸಿದ್ದಾರೆ.

    ತಕ್ಷಣದಿಂದಲೇ ಆತನನ್ನು ರೀಲೀವ್ ಮಾಡಿ. ಅವನ ಮೇಲೆ ಕ್ರಮ ಕೈಗೊಳ್ಳಿ, ರಿಲೀವ್ ಮಾಡಿ ನನಗೆ ತಕ್ಷಣ ಅದರ ಪ್ರತಿ ಕಳುಹಿಸಿ ಎಂದು ಕೊಡಗು ಜಿಲ್ಲಾಧಿಕಾರಿಗೆ ಫೋನ್ ಮೂಲಕ ಸೂಚನೆ ನೀಡಿದ್ದಾರೆ.

    ಪ್ರಕೃತಿ ವಿಕೋಪದಡಿ ಸರ್ಕಾರದಿಂದ ನೀಡಿದ್ದ 21 ಕೋಟಿ ರೂ. ಹಣವನ್ನು ಅಧಿಕಾರಿ ಶ್ರೀಕಂಠಯ್ಯ ಖಾಸಗಿ ಬ್ಯಾಂಕ್ ಖಾತೆಗೆ ಜಮಾ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಖಾಸಗಿ ಬ್ಯಾಂಕ್ ನಲ್ಲಿ ದುಡ್ಡು ಜಮೆ ಮಾಡಿದ್ದು ತಪ್ಪು, ನಿಯಮಗಳನ್ನು ಮೀರಿದ್ದಾನೆ. ಹೀಗಾಗಿ ಅವನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಿ. ನಾನು ಬರುವುದಕ್ಕಿಂತ ಮೊದಲು ಆಗಿರುವ ಪ್ರಕರಣ ಇದು. ನಾನು ಬಂದು ಒಂದೂವರೆ ತಿಂಗಳಾಗಿದೆ. ಹಾಗಾಗಿ ಇದನ್ನು ತೀಕ್ಷ್ಣವಾಗಿ ತೆಗೆದುಕೊಳ್ಳುತ್ತೇವೆ. ಎಷ್ಟೇ ದೊಡ್ಡವರಾಗಲಿ, ಎಲ್ಲೂ ಈ ರೀತಿ ಆಗಬಾರದು. ಇಂತಹ ಪಾಪಿಗಳು ಇರುವುದರಿಂದಲೇ, ಪ್ರಕೃತಿ ತಾಯಿ ತೊಂದರೆ ಕೊಡುತ್ತಿದ್ದಾಳೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

  • ಕಳ್ಳಾಟ ಆಡಿದ್ರೆ ಬಂಧೀಖಾನೆ ನೋಡೋಕೆ ಕಳಿಸ್ತೀನಿ- ಅಧಿಕಾರಿಗೆ ಸೋಮಣ್ಣ ಕ್ಲಾಸ್

    ಕಳ್ಳಾಟ ಆಡಿದ್ರೆ ಬಂಧೀಖಾನೆ ನೋಡೋಕೆ ಕಳಿಸ್ತೀನಿ- ಅಧಿಕಾರಿಗೆ ಸೋಮಣ್ಣ ಕ್ಲಾಸ್

    ಮೈಸೂರು: ಸರಿಯಾಗಿ ಕೆಲಸ ಮಾಡದಿದ್ದರೆ ಬಂಧೀಖಾನೆ ಹೇಗಿದೆ ಅಂತ ನೋಡೋಕೆ ಕಳುಹಿಸುತ್ತೇನೆ ಎಂದು ರೇಷ್ಮೆ ಸಚಿವ ವಿ. ಸೋಮಣ್ಣ ಅವರು ಕೆಎಸ್‌ಐಸಿ ಜನರಲ್ ಮ್ಯಾನೇಜರ್‌ಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.

    ಮೈಸೂರಿನ ಕರ್ನಾಟಕ ಸಿಲ್ಕ್ ಇಂಡಸ್ಟ್ರೀಸ್ ಕಾರ್ಪೊರೇಷನ್ ಲಿಮಿಟೆಡ್‌ಗೆ(ಕೆಎಸ್‌ಐಸಿ) ಸಚಿವ ಸೋಮಣ್ಣ, ಸಂಸದ ಪ್ರತಾಪ್ ಸಿಂಹ ಅವರು ಭೇಟಿ ಕೊಟ್ಟಿದ್ದರು. ಈ ವೇಳೆ ಅಲ್ಲಿನ ಅವ್ಯವಸ್ಥೆ, ನೌಕಕರರ ಸಮಸ್ಯೆ ಕೇಳಿ ಸೋಮಣ್ಣ ಅವರು ಸಿಟ್ಟಾದರು. ನೌಕರರ ಮುಂದೆಯೇ ಜನರಲ್ ಮ್ಯಾನೇಜರ್ ಕೃಷ್ಣ ಅವರನ್ನು ತರಾಟೆಗೆ ತೆಗೆದುಕೊಂಡರು.

    ‘ನೀ ಬಾರೀ ಕಿಲಾಡಿ ಇದ್ದೀಯಾ. ಒಂದು ಹೇಳ್ತೀನಿ ಕೇಳು, ನಾನು ಏನ್ಮಾಡೋಕೂ ತಯಾರಿದ್ದೇನೆ. ನಿನ್ನಾಟ ನನ್ನ ಹತ್ತಿರ ನಡೆಯಲ್ಲ. ಕೇಳಿಲ್ಲಿ, ನಾನು ಫಸ್ಟ್ 1994-95 ಬಂಧೀಖಾನೆ ಮಂತ್ರಿಯಾಗಿದ್ದೆ. ಸರಿಯಾಗಿ ಕೆಲಸ ಮಾಡದೇ ಇದ್ದರೆ ಬಂಧೀಖಾನೆ ಹೇಗಿದೆ ಅಂತ ನೋಡಿಕೊಂಡು ಬರೋಕೆ ಕಳುಹಿಸುತ್ತೇನೆ’ ಎಂದು ಜನರಲ್ ಮ್ಯಾನೇಜರ್‌ಗೆ ಎಚ್ಚರಿಕೆ ಕೊಟ್ಟರು.

    ಇಲ್ಲಿನ ನೌಕರರ ಸಮಸ್ಯೆ ಬಗೆಹರಿಯಬೇಕು, ಉತ್ಪಾದನೆ ಜಾಸ್ತಿ ಆಗಬೇಕು ಅಷ್ಟೆ. ಯಾವ ಕಳ್ಳಾಟ ನಡೆಯೋಕೆ ಬಿಡಲ್ಲ ಎಂದು ಖಡಕ್ ಆಗಿ ಸಚಿವರು ಎಚ್ಚರಿಸಿದರು. ಬಳಿಕ ನೌಕರರ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು.