Tag: V.Somanna

  • ಕೋವಿಡ್‍ನಿಂದ ಮೃತಪಟ್ಟ ಕುಟುಂಬಗಳಿಗೆ ಆಸರೆ ನೀಡುವುದು ನಮ್ಮ ಕರ್ತವ್ಯ : ವಿ.ಸೋಮಣ್ಣ

    ಕೋವಿಡ್‍ನಿಂದ ಮೃತಪಟ್ಟ ಕುಟುಂಬಗಳಿಗೆ ಆಸರೆ ನೀಡುವುದು ನಮ್ಮ ಕರ್ತವ್ಯ : ವಿ.ಸೋಮಣ್ಣ

    ಬೆಂಗಳೂರು: ಕೋವಿಡ್‍ನಿಂದ ಮೃತಪಟ್ಟ ಕುಟುಂಬಗಳಿಗೆ ಆಸರೆ ನೀಡುವುದು ನಮ್ಮ ಕರ್ತವ್ಯ. ನಿಮ್ಮ ಜೊತೆಯಲ್ಲಿ ನಾವಿದ್ದೇವೆ ಎಂದು ವಸತಿ ಹಾಗೂ ಮೂಲ ಸೌಲಭ್ಯ ಅಭಿವೃದ್ಧಿ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.

    ಮಾರುತಿ ಮಂದಿರ ವಾರ್ಡ್ ಸಂಗೊಳ್ಳಿ ರಾಯಣ್ಣ ಉದ್ಯಾನವನ ಆವರಣದಲ್ಲಿ ಕೋವಿಡ್‍ನಿಂದ ಮೃತಪಟ್ಟ ಕುಟುಂಬಗಳಿಗೆ ಪರಿಹಾರ ಧನ ಚಕ್ಕು ಮತ್ತು ಮಂಜೂರಾತಿ ಆದೇಶ ಪತ್ರವನ್ನು ವಿ.ಸೋಮಣ್ಣ ಅವರ ನೇತೃತ್ವದಲ್ಲಿ ಯುವ ನಾಯಕರಾದ ಅರುಣ್ ಸೋಮಣ್ಣ ಅವರು ವಿತರಿಸಿದರು. ಇದನ್ನೂ ಓದಿ: ಮತದಾನ ಮಾಡಿದ ಸದಸ್ಯರಿಂದ ಮತ ಪತ್ರ ಬಹಿರಂಗ- ಚುನಾವಣಾಧಿಕಾರಿಗೆ ದೂರು

    ಇದೇ ವೇಳೆ ಭಾರತೀಯ ಸೇನಾ ಮುಖ್ಯಸ್ಥರಾದ ಬಿಪಿನ್ ರಾವತ್ ಮತ್ತು ದುರಂತದಲ್ಲಿ ಮಡಿದ ಎಲ್ಲರಿಗೂ ಶ್ರದ್ದಾಂಜಲಿ ಸಲ್ಲಿಸಿ 2 ನಿಮಿಷ ಮೌನಚರಣೆ ಮಾಡಿ ನಂತರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿ ಚಿಂತನೆ ಮತ್ತು ರಾಜ್ಯ ಸರ್ಕಾರದ ದಿಟ್ಟ ನಿಲುವು ಕ್ರಮಗಳಿಂದ ಕೊರೊನಾ ಸಾಂಕ್ರಮಿಕ ರೋಗ ಹತೋಟಿಯಲ್ಲಿದೆ. ಕೊರೊನಾ ಸಾಂಕ್ರಮಿಕ ರೋಗದ ಭಯ ಮತ್ತು ಅಂಜಿಕೆಪಟ್ಟು ಸಾಕಷ್ಟು ಜನರು ಮೃತಪಟ್ಟರು. ಲಕ್ಷಾಂತರ ಕುಟುಂಬಗಳು ಆರ್ಥಿಕವಾಗಿ ಸಂಕಷ್ಟಕ್ಕೆ ಒಳಗಾದರು. ನೋವಿನಲ್ಲಿ ಕಣ್ಣಿರಿನಲ್ಲಿ ಜೀವನ ಸಾಗಿಸುವ ಕುಟುಂಬಕ್ಕೆ ಆಸರೆಯಾಗಬೇಕು ಮತ್ತು ನಿಮ್ಮ ಕುಟುಂಬದ ಜೊತೆಯಲ್ಲಿ ನಾವಿದ್ದು, ಸಹಾಯ ಮಾಡುತ್ತೇವೆ ಎಂದು ಹೇಳಿದರು.

    modi

    ಬಿಪಿಎಲ್ ಕಾರ್ಡ್‍ದಾರರ ಕುಟುಂಬಕ್ಕೆ 1.50ಲಕ್ಷ ರೂ. ಚಕ್ಕು ಮತ್ತು ಎಪಿಎಲ್ ಕುಟುಂಬದವರಿಗೆ 50 ಸಾವಿರ ರೂ. ಮಂಜೂರಾತಿ ಆದೇಶ ಪತ್ರ ವಿತರಿಸಲಾಗಿದೆ. ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ 65 ಹಾಸಿಗೆ ಸಾಮ್ಯರ್ಥವುಳ್ಳ ಐಸಿಯು ಆಸ್ಪತ್ರೆ ನಿರ್ಮಿಸಲಾಗಿದೆ ಮತ್ತು ಕಿಡ್ನಿ ಸಂಬಂದಿಸಿದ ರೋಗಿಗಳಿಗೆ ಸಂಗೊಳ್ಳಿ ರಾಯಣ್ಣ ಡಯಾಲಿಸಿಸ್ ಆಸ್ಪತ್ರೆಯನ್ನು ನಿರ್ಮಿಸಲಾಗಿದೆ ಎಂದರು. ಇದನ್ನೂ ಓದಿ: ಓಮಿಕ್ರಾನ್ ಭೀತಿ: ಮುಂಬೈನಲ್ಲಿ 144 ಸೆಕ್ಷನ್ ಜಾರಿ- ರ‍್ಯಾಲಿ, ಮೆರವಣಿಗೆಗೆ ನಿಷೇಧ

    ಕೊರೋನ ಎರಡನೇಯ ಲಾಕ್ ಡೌನ್ ಸಂದರ್ಭದಲ್ಲಿ ಬಡವರು ಹಸಿವಿನಿಂದ ಬಳಲಬಾರದು ಎಂದು 70 ಸಾವಿರ ಕುಟುಂಬಗಳಿಗೆ ದಿನಸಿ ಕಿಟ್ ಮತ್ತು ಸೋಂಕಿತರ ಮನೆಗಳಿಗೆ ಉಚಿತವಾಗಿ ಔಷಧಿ ವಿತರಿಸಲಾಯಿತು. ಕೋವಿಡ್-19ನಿಂದ ಮೃತಪಟ್ಟ ತಂದೆ, ತಾಯಿ ಇಲ್ಲದಿರುವ ಮಕ್ಕಳ ಪಾಲನೆ ಮತ್ತು ಶಿಕ್ಷಣಕ್ಕೆ ಸಹಾಯ ಮಾಡುವುದಾಗಿ ತಿಳಿಸಿದರು.

    ಕೋವಿಡ್ ಪರಿಹಾರ ಧನ ವಿತರಣಾ ಕಾರ್ಯಕ್ರಮದಲ್ಲಿ ಸಂಬಂದಿಕರು, ಸ್ನೇಹಿತರು, ಕ್ಷೇತ್ರದ ಹಲವಾರು ಜನರು ಕೋವಿಡ್ ಸೋಂಕಿನಿಂದ ಮೃತಪಟ್ಟಿರುವುದನ್ನು ನೆನದು ವಸತಿ ಕಣ್ಣಿರು ಹಾಕಿದರು. ಇದನ್ನೂ ಓದಿ: ಅರಿಶಿನ ಶಾಸ್ತ್ರ ಸಂಭ್ರಮದ ಫೋಟೋ ಹಂಚಿಕೊಂಡ ಕತ್ರಿನಾ ಕೈಫ್

    ಕಾರ್ಯಕ್ರಮದಲ್ಲಿ ಗೋವಿಂದರಾಜನಗರ ಮಂಡಲ ಬಿಜೆಪಿ ಅಧ್ಯಕ್ಷರಾದ ವಿಶ್ವನಾಥಗೌಡ, ಮಾಜಿ ಮಹಾನಗರ ಪಾಲಿಕೆ ಸದಸ್ಯರಾದ ಕೆ.ಉಮೇಶ್ ಶೆಟ್ಟಿ, ವಾಗೀಶ್ ರಾಮಪ್ಪ, ದಾಸೇಗೌಡ, ಜಯರತ್ನ, ರೂಪ ಲಿಂಗೇಶ್ವರ್ ಮತ್ತು ಸ್ಲಂ ಬೋರ್ಡ್ ನಿರ್ದೇಶಕರಾದ ಕ್ರಾಂತಿರಾಜು ಪಾಲ್ಗೊಂಡಿದ್ದರು.

  • ಚಾಮರಾಜನಗರ ಜಿಲ್ಲಾ ಉಸ್ತುವಾರಿ ಕೊಟ್ರೆ ಮಾಡೋಣ: ವಿ ಸೋಮಣ್ಣ

    ಚಾಮರಾಜನಗರ ಜಿಲ್ಲಾ ಉಸ್ತುವಾರಿ ಕೊಟ್ರೆ ಮಾಡೋಣ: ವಿ ಸೋಮಣ್ಣ

    ಚಾಮರಾಜನಗರ: ಚಾಮರಾಜನಗರ ಜಿಲ್ಲಾ ಉಸ್ತುವಾರಿ ಕೊಟ್ಟರೆ ಮಾಡೋಣ ಎಂದು ವಸತಿ ಸಚಿವ ವಿ. ಸೋಮಣ್ಣ ಹೇಳಿದ್ದಾರೆ.

    ಚಾಮರಾಜನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸರ್ಕಾರ ನಿಂತ ನೀರಲ್ಲ, ಹರಿಯುವ ನೀರು ಎಲ್ಲ ಮೂಲೆಗೂ ತಲುಪಬೇಕಾಗುತ್ತದೆ ಎಂದು ಮಾರ್ಮಿಕವಾಗಿ ನುಡಿದರು. ಬೆಂಗಳೂರು ಉಸ್ತುವಾರಿಗೆ ಅಶೋಕ್ ಹಾಗೂ ಸೋಮಣ್ಣ ನಡುವೆ ಫೈಟ್ ನಡೆದಿರುವಾಗಲೇ ಸೋಮಣ್ಣ ಅವರ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ. ಇದನ್ನೂ ಓದಿ: ತಾಲಿಬಾನ್ ಭಾರತದತ್ತ ಬಂದರೆ ಏರ್ ಸ್ಟ್ರೈಕ್: ಯೋಗಿ ಆದಿತ್ಯನಾಥ್

    ನಾನು ಸೀನಿಯರ್ ಇದ್ದೇನೆ ಆರೇಳು ಬಾರಿ ಶಾಸಕನಾಗಿದ್ದೇನೆ, ಮಂತ್ರಿಯಾಗಿದ್ದೇನೆ, ಆರೇಳು ಸಿಎಂಗಳ ಜೊತೆ ಕೆಲಸ ಮಾಡಿದ್ದೇನೆ, ಯಾರನ್ನು ಹೋಗಿ ಕೇಳುವುದಿಲ್ಲ, ಮನವಿ ಮಾಡುವುದಿಲ್ಲ ಮುಖ್ಯ ಮಂತ್ರಿಗಳು ಚಾಮರಾಜನಗರ ಜವಾಬ್ದಾರಿ ಕೊಟ್ಟರೆ ಮಾಡೋಣ ವಿವಾದ ಮಾಡಿಕೊಳ್ಳಲು ಇಷ್ಟವಿಲ್ಲ ಎಂದಿದ್ದಾರೆ.

    basavaraj bommai

    ಚಾಮರಾಜನಗರ ಹಾಗೂ ಯಾದಗಿರಿ ಜಿಲ್ಲೆಗಳಿಗೆ ಅರ್ಹ ವಸತಿ ರಹಿತ ಫಲಾನುಭವಿಗಳಿಗೆ ವಸತಿ ಸೌಲಭ್ಯ ಕಲ್ಪಿಸಲು ಕ್ರಮವಹಿಸಲಾಗಿದ್ದು, 3 ತಿಂಗಳ ಒಳಗೆ ಫಲಾನುಭವಿಗಳ ಖಾತೆಗೆ ಹಣ ಜಮೆ ಮಾಡಲು ತೀರ್ಮಾನಿಸಲಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕೋಟೆನಾಡಲ್ಲಿ ಅಸ್ಪೃಶ್ಯತೆ, ಕೋಮುವಾದ ವಿರೋಧಿಸಿ 101 ಜನ ಬೌದ್ಧ ಧರ್ಮಕ್ಕೆ ಮತಾಂತರ

    ಇದೇ ವೇಳೆ ಉಪ ಚುನಾವಣೆ ನಡೆದಿರುವ ಸಿಂದಗಿ, ಹಾನಗಲ್ ಎರಡೂ ಕ್ಷೇತ್ರಗಳಲ್ಲಿ ಅತ್ಯಧಿಕ ಬಹುಮತಗಳಿಂದ ಬಿಜೆಪಿ ಗೆಲುವು ಸಾಧಿಸುತ್ತದೆ. ಸಿಂದಗಿಯಲ್ಲಿ ನಾನು, ಕಾರಜೋಳ, ಸಿಸಿ ಪಾಟೀಲ್ ಲಕ್ಷ್ಮಣ ಸವದಿ, ಶಶಿಕಲಾ ಜೊಲ್ಲೆ ಎಲ್ಲರು ಸೇರಿ ವ್ಯವಸ್ಥಿತವಾಗಿ ಕೆಲಸ ಮಾಡಿದ್ದೇವೆ, ಪ್ರಧಾನಿ ಮೋದಿ ಅವರ ಜನಪರ ಕಾರ್ಯಕ್ರಮಗಳು, ರಾಜ್ಯ ಸರ್ಕಾರದ ಉತ್ತಮ ಕೆಲಸ, ಕೋವಿಡ್ ನಿರ್ವಹಣೆ ಹೀಗೆ ಎಲ್ಲವನ್ನು ಜನರು ಸೂಕ್ಷ್ಮವಾಗಿ ಗಮನಿಸಿದ್ದಾರೆ. ಎರಡೂ ಕ್ಷೇತ್ರಗಳಲ್ಲಿ ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಬಿಜೆಪಿ ಜಯಗಳಿಸಲಿದೆ ಎಂದು ನುಡಿದಿದ್ದಾರೆ.

  • ಬೆಂಗಳೂರು ಉಸ್ತುವಾರಿಗಾಗಿ ಸೋಮಣ್ಣ-ಅಶೋಕ್ ಮಧ್ಯೆ ಕೋಲ್ಡ್ ವಾರ್ – ಸಿಎಂಗೆ ಸಂಕಟ

    ಬೆಂಗಳೂರು ಉಸ್ತುವಾರಿಗಾಗಿ ಸೋಮಣ್ಣ-ಅಶೋಕ್ ಮಧ್ಯೆ ಕೋಲ್ಡ್ ವಾರ್ – ಸಿಎಂಗೆ ಸಂಕಟ

    ಬೆಂಗಳೂರು: ಶೀಘ್ರದಲ್ಲಿಯೇ ಅಧಿಕೃತವಾಗಿ ಜಿಲ್ಲಾ ಉಸ್ತುವಾರಿಗಳ ಹಂಚಿಕೆಗೆ ಪ್ಲಾನ್ ಮಾಡಿದ್ದ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಹೊಸ ಸಂಕಷ್ಟ ಎದುರಾಗಿದೆ. ಬೆಂಗಳೂರು ನಗರದ ಜಿಲ್ಲಾ ಉಸ್ತುವಾರಿ ಆಗಲು ಸಚಿವ ವಿ. ಸೋಮಣ್ಣ ಹಾಗೂ ಆರ್. ಅಶೋಕ್ ಮಧ್ಯೆ ಪೈಪೋಟಿ ಏರ್ಪಟ್ಟಿದೆ.

    ಆರ್. ಅಶೋಕ್‍ಗೆ ಜಿಲ್ಲಾ ಉಸ್ತುವಾರಿ ಆಗುವ ಅವಕಾಶ ತಪ್ಪಿಸಲು ಹಲವಾರು ತಂತ್ರಗಳು ನಡೆಯುತ್ತಿದ್ದು, ಸೋಮಣ್ಣಗೆ ಕೆಲ ಬಿಜೆಪಿ ಶಾಸಕರಿಂದಲೇ ಬೆಂಬಲ ದೊರೆಯುತ್ತಿದೆ. ಅಶೋಕ್ ಅವರಿಗೆ ಶತಾಯಗತಾಯ ಬೆಂಗಳೂರು ಉಸ್ತುವಾರಿಯನ್ನು ಕೈ ತಪ್ಪಿಸಬೇಕೆಂದು ವಿರೋಧಿ ಬಣಗಳು ಒಂದಾಗಿದ್ದು, ವಿ. ಸೋಮಣ್ಣ ಪರವಾಗಿ ಬ್ಯಾಟ್ ಬೀಸಿದ್ದಾರೆ. ಇದರಿಂದಾಗಿ ಸರ್ಕಾರದಲ್ಲಿ ಆಂತರಿಕ ಕಚ್ಚಾಟ ಭುಗಿಲೆದಿದ್ದೆ. ಸದ್ಯ ಅಶೋಕ್ ಅವರು ಒಬ್ಬಂಟಿಯಾಗಿ ಹೋರಾಡುತ್ತಿದ್ದಾರೆ. ಇದನ್ನೂ ಓದಿ: ನಾನು ಎಲ್ಲರಿಗಿಂತ ಸೀನಿಯರ್, ಅರ್ಧ ಬೆಂಗಳೂರು ಉಸ್ತುವಾರಿ ಕೊಡಲಿ: ಸೋಮಣ್ಣ

    ಹೀಗಾಗಿ ಇಬ್ಬರ ನಡುವೆ ಇರುವ ಮನಸ್ತಾಪವನ್ನು ಬಗೆಹರಿಸಲು ಬಸವರಾಜ್ ಬೊಮ್ಮಾಯಿಯವರು ಇಂದು ಚರ್ಚೆ ನಡೆಸಲಿದ್ದು, ಬೆಂಗಳೂರು ಅಷ್ಟೇ ಅಲ್ಲದೇ ಉಳಿದ ಜಿಲ್ಲೆಗಳಲ್ಲಿ ಇಂಥ ಸಂಘರ್ಷ ಆಗದಂತೆ ಗಮನ ವಹಿಸುತ್ತಿದ್ದಾರೆ. ಒಟ್ಟಾರೆ ಇವರಿಬ್ಬರ ಸಂಧಾನ ಮಾಡಿಸುವಲ್ಲಿ ಸಕ್ಸಸ್ ಆಗ್ತಾರಾ ಸಿಎಂ? ಬೆಂಗಳೂರು ಉಸ್ತುವಾರಿ ಯಾರಾಗ್ತಾರೆ? ಈ ಎಲ್ಲ ಗೊಂದಲಗಳು ಬಗೆಹರಿಯುತ್ತಾ ಅಥವಾ ಮತ್ತಷ್ಟು ಜಟಿಲ ಆಗುತ್ತಾ? ಎಂಬುವುದಕ್ಕೆ ಕಾದು ನೋಡಬೇಕಾಗಿದೆ. ಇದನ್ನೂ ಓದಿ: ಬೆಂಗಳೂರು ಉಸ್ತುವಾರಿ: ಸಿಎಂ ನಿರ್ಧಾರಕ್ಕೆ ಬದ್ಧ ಎಂದ ಸಚಿವ ಅಶೋಕ್

  • ಆಪ್ತರ ಮೇಲೆ ಐಟಿ ದಾಳಿ ಮಾಡಿದ್ರೆ ಬಿಎಸ್‍ವೈಗೆ ಏನು ಸಂಬಂಧ: ಸೋಮಣ್ಣ

    ಆಪ್ತರ ಮೇಲೆ ಐಟಿ ದಾಳಿ ಮಾಡಿದ್ರೆ ಬಿಎಸ್‍ವೈಗೆ ಏನು ಸಂಬಂಧ: ಸೋಮಣ್ಣ

    ವಿಜಯಪುರ: ಆಪ್ತರ ಮನೆ ಮೇಲೆ ಐಟಿ ದಾಳಿ ನಡೆದರೆ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ಏನು ಸಂಬಂಧ ಎಂದು ವಸತಿ ಸಚಿವ ವಿ. ಸೋಮಣ್ಣ ಐಟಿ ರೇಡ್ ಸಮರ್ಥಿಸಿಕೊಂಡಿದ್ದಾರೆ.

    ವಿಜಯಪುರ ಜಿಲ್ಲೆಯ ಆಲಮೇಲನಲ್ಲಿ ಮಾತನಾಡಿದ ಅವರು, ಐಟಿ ಅಧಿಕಾರಿಗಳು ತಮ್ಮ ಕೆಲಸವನ್ನು ಮಾಡಿದ್ದಾರೆ. ಮಾಜಿ ಸಿಎಂ ಬಿಎಸ್‍ವೈ ಅವರಿಗೆ ಇದು ಸಂಬಂಧವಿಲ್ಲ. ಆಪ್ತರ ಮೇಲೆ ಐಟಿ ದಾಳಿ ಮಾಡಿದ್ರೇ ಬಿಎಸ್‍ವೈಗೆ ಏನು ಸಂಬಂಧ. ನನ್ನ ಆಪ್ತ ಮಾಡಿದ್ದರೆ ನನಗೇನು ಸಂಬಂಧ ಇರುತ್ತದೆ ಎಂದು ಪ್ರಶ್ನೆ ಮಾಡಿದ್ದಾರೆ. ಯಾರದೋ ಮನೆಯಲ್ಲಿ ಏನೋ ಆದ್ರೇ ಬಿಎಸ್‍ವೈ ಅವರಿಗೇನು? ಐಟಿ ರೇಡ್ ಬಗ್ಗೆ ನನಗೆ ಹೆಚ್ಚಿನ ಮಾಹಿತಿ ಇಲ್ಲ ನಾನು ಬೆಂಗಳೂರಿಗೆ ಹೋದ ಬಳಿಕ ಈ ಕುರಿತು ಮಾಹಿತಿ ತಿಳಿದುಕೊಳ್ಳುತ್ತೇನೆ ಎಂದರು. ಇದನ್ನೂ ಓದಿ: ಎರಡು ರಾಜ್ಯದ ಗುತ್ತಿಗೆದಾರರ ಮಧ್ಯೆ ಗಲಾಟೆ – ಬಿಎಸ್‌ವೈ ಪಿಎ ಮೇಲೆ ಐಟಿ ದಾಳಿ

    ಯಡಿಯೂರಪ್ಪ ನಮ್ಮ ಪಕ್ಷದ ಪಕ್ಷಾತೀತ ನಾಯಕರು. ಕೆಲವು ನಿರ್ಧಾರವನ್ನು ಪಕ್ಷ ನಿರ್ಧಾರ ಮಾಡುತ್ತದೆ. ಆ ಪ್ರಕ್ರಿಯೆಗಳು ಅದರ ಪಾಡಿಗೆ ಆಗುತ್ತದೆ ಎಂದರು. ಎಚ್‍ಡಿ ಕುಮಾರಸ್ವಾಮಿ ಆರ್‌ಎಸ್‌ಎಸ್‌ ವಿರುದ್ಧ ಆರೋಪ ಮಾಡುತ್ತಿರುವುದರ ಬಗ್ಗೆ ಮಾತನಾಡಿ, ಚುನಾವಣೆ ಗಿಮಿಕ್‍ಗಾಗಿ ಎಚ್‍ಡಿಕೆ ಆರ್‌ಎಸ್‌ಎಸ್‌ ಕುರಿತು ಹೇಳಿಕೆ ನೀಡುತ್ತಿದ್ದಾರೆ. ಇತ್ತೀಚೆಗೆ ಮಾಜಿ ಸಿಎಂ ಎಚ್‍ಡಿಕೆ ಪುಸ್ತಕ ಓದುತ್ತಿದ್ದಾರೆ. ಪುಸ್ತಕ ಓದುವ ಮೂಲಕ ವಿವಿಧ ರೀತಿಯಲ್ಲಿ ಹೇಳಿಕೆ ನೀಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ: ವಿಜಯೇಂದ್ರ ಮಾಡಿದ ಭ್ರಷ್ಟಾಚಾರಕ್ಕೆ ಈ ದಾಳಿ ಸಾಕ್ಷಿ: ಎಚ್. ವಿಶ್ವನಾಥ್

  • ಪ್ರಧಾನಮಂತ್ರಿಗಳ ಅವಾಸ್ ಯೋಜನೆ, ಸೂರು ಕಲ್ಪಿಸುವಲ್ಲಿ ಬೆಂಗಳೂರು ಮೊದಲು: ಸೋಮಣ್ಣ

    ಪ್ರಧಾನಮಂತ್ರಿಗಳ ಅವಾಸ್ ಯೋಜನೆ, ಸೂರು ಕಲ್ಪಿಸುವಲ್ಲಿ ಬೆಂಗಳೂರು ಮೊದಲು: ಸೋಮಣ್ಣ

    ಬೆಂಗಳೂರು: ಪ್ರಧಾನಮಂತ್ರಿಗಳ ಅವಾಸ್ ಯೋಜನೆಯಡಿ ಎಲ್ಲರಿಗೂ ಸೂರು ಕಲ್ಪಿಸುವಲ್ಲಿ ಬೆಂಗಳೂರು ನಗರ ಜಿಲ್ಲೆ ಮೊದಲು ಸ್ಥಾನದಲ್ಲಿದೆ ಎಂದು ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವರು ಹಾಗೂ ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ವಿ.ಸೋಮಣ್ಣ ಹೇಳಿದರು.

    ಕರ್ನಾಟಕ ಗೃಹ ಮಂಡಳಿಯಿಂದ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲ್ಲೂಕಿನ ಚಂದಪುರದ ಸೂರ್ಯನಗರದಲ್ಲಿ 1ನೇ ಹಂತದ ನೂತನವಾಗಿ ನಿರ್ಮಿಸಿಲಾಗಿರುವ ಸೂರ್ಯ ಎಲಿಗೆನ್ಸ್ ಬಹುಮಹಡಿ ವಸತಿ ಸಮುಚ್ಚಯವನ್ನು ಲೋಕಾರ್ಪಣೆ ಮಾಡಿದರು. ಹತ್ತು ಫಲಾನುಭವಿಗಳಿಗೆ ಹಕ್ಕು ಪತ್ರವನ್ನು ಸಹ ವಿತರಿಸಿದರು.

    ನಂತರ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಪ್ರತಿಯೊಬ್ಬರಿಗೂ ಸ್ವಂತ ಮನೆ ಹೊಂದಬೇಕು ಎನ್ನುವ ಮಹದಾಸೆಗೆ ಸೂರ್ಯನಗರ ಯೋಜನೆಯನ್ನು ಜಾರಿಗೊಳಿಸಲಾಗಿದ್ದು, ಈಗಾಗಲೇ ಫ್ಲ್ಯಾಟ್‍ಗಳ ಹಂಚಿಕೆಗೆ ಅರ್ಜಿ ಕರೆಯಲಾಗಿದೆ. ಶೀಘ್ರವೇ ಮನೆಗಳ ಹಂಚಿಕೆಯಾಗಲಿದ್ದು, ಉತ್ತಮ ಗುಣಮಟ್ಟದ ಫ್ಲಾಟ್ ನಿರ್ಮಾಣದ ಸಂಕಲ್ಪಕ್ಕೆ ಮಂಡಳಿ ಬದ್ಧವಾಗಿದೆ ಎಂದರು. ಇದನ್ನೂ ಓದಿ: ಸುರೇಶ್ ಅಂಗಡಿ ಇಲ್ಲೇ ಚಿಕಿತ್ಸೆ ಪಡೆದಿದ್ದರೆ ಉಳಿಯುತಿದ್ದರೆನೋ? – ಶೆಟ್ಟರ್

    ಮಧ್ಯಮ ಮತ್ತು ಕೆಳಮಧ್ಯಮ ವರ್ಗದ ಲಕ್ಷಾಂತರ ಮಂದಿ ಸ್ವಂತ ಸೂರು ಇಲ್ಲದೆ ನಿವೇಶನ ಹೊಂದುವ ಬಯಕೆಯನ್ನು ಹೊಂದಿರುತ್ತಾರೆ. ಎಲ್ಲರ ಆಶೋತ್ತರಗಳನ್ನು ಈಡೇರಿಸಲು ವಸತಿ ಇಲಾಖೆಯ ಏಷ್ಯಾದ ಅತಿದೊಡ್ಡ ಯೋಜನೆಯನ್ನು ಕೈಗೆತ್ತಿಕೊಂಡಿದೆ. ಬೆಂಗಳೂರಿನ ಚಂದಾಪುರದಲ್ಲಿ 6 ಎಕರೆ 14 ಗುಂಟೆ ವ್ಯಾಪ್ತಿಯಲ್ಲಿ 77.14 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಸೂರ್ಯನಗರ ಹಲವು ವಿಶೇಷತೆಗಳನ್ನು ಹೊಂದಿದ್ದು ಉತ್ತಮ ಗುಣಮಟ್ಟದ ರಸ್ತೆ ಸೌಲಭ್ಯ, ಒಳಾಂಗಣ ಕ್ರೀಡಾಂಗಣ ಮತ್ತು ಉದ್ಯಾನವನ ನಿರ್ಮಿಸಲಾಗಿದೆ. ಒಳಚರಂಡಿ ಹಾಗೂ ಕಾವೇರಿ ನೀರು ಸರಬರಾಜು, ಮಳೆ ನೀರು ಕೊಯ್ಲು ವ್ಯವಸ್ಥೆಯನ್ನು ಮಾಡಲಾಗಿದೆ. ಈ ಸಮುಚ್ಚಯದಲ್ಲಿ 2 ಮತ್ತು 3 ಬಿ.ಎಚ್.ಕೆ ಸೇರಿ ಒಟ್ಟು 384 ಪ್ಲ್ಯಾಟ್ ಲಭ್ಯವಿವೆ ಎಂದು ಹೇಳಿದರು.

    ಮುಂದಿನ ದಿನಗಳಲ್ಲಿ ಈ ಭಾಗಕ್ಕೆ ಕಾವೇರಿ ಕುಡಿಯುವ ನೀರಿಗಾಗಿ ಮೂರನೇ ಹಂತದಿಂದ 5ಎಮ್ ಎಲ್‍ಡಿಯನ್ನು ಒದಗಿಸುವ ಯೋಜನೆ ಸರ್ಕಾರದ ಮುಂದಿದೆ. ಅಂದಾಜು 25 ಎಕರೆ ಜಮೀನನ್ನು ಗುರುತಿಸಿ ಅಂತರಾಷ್ಟ್ರೀಯ ಮಟ್ಟದ ಕ್ರೀಡಾಂಗಣ ನಿರ್ಮಾಣ ಮಾಡಲು ಮುಖ್ಯ ಮಂತ್ರಿಗಳೊಂದಿಗೆ ಸಮಾಲೋಚಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಸೋಮಣ್ಣ ಹೇಳಿದರು. ಇದನ್ನೂ ಓದಿ: ಹಿಂದೂತ್ವ, ಅಭಿವೃದ್ಧಿ ಎರಡು ಅಜೆಂಡಾ ಇಟ್ಟುಕೊಂಡು ಕೆಲಸ ಮಾಡಿ: ಅಭಯ್ ಪಾಟೀಲ್

    ಈ ಸಂದರ್ಭದಲ್ಲಿ ಸಂಸದರಾದ ಡಿ.ಕೆ.ಸುರೇಶ್ ಅವರು ಮಾತನಾಡಿ, ಸ್ಥಳೀಯ ನಿವಾಸಿಗಳಿಗೆ ಸಮುಚ್ಚಯ ಖರೀದಿಯಲ್ಲಿ ಮೀಸಲಾತಿ ಹಾಗೂ ವಿನಾಯಿತಿ ನೀಡಬೇಕು ಎಂದು ಒತ್ತಾಯಿಸಿದರು.

    ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆನೇಕಲ್ ವಿಧಾನ ಸಭಾ ಕ್ಷೇತ್ರದ ಶಾಸಕ ಬಿ. ಶಿವಣ್ಣ ವಹಿಸಿದರು. ಕಾರ್ಯಕ್ರಮದಲ್ಲಿ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ, ವಿಧಾನ ಪರಿಷತ್ ಶಾಸಕರಾದ ಪುಟ್ಟಣ್ಣ, ಹಾಗೂ ಅ ದೇವೇಗೌಡ ಆನೇಕಲ್ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಜಯಣ್ಣ, ವಸತಿ ಇಲಾಖೆ ಕಾರ್ಯದರ್ಶಿ ಮನೋಜ್ ಕುಮಾರ ಮೀನಾ, ಕರ್ನಾಟಕ ಗೃಹ ಮಂಡಳಿ ಆಯುಕ್ತರಾದ ಡಿ.ಎಸ್ ರಮೇಶ್, ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ.ಮಂಜುನಾಥ್ ಸೇರಿದಂತೆ ಸ್ಥಳೀಯ ಗ್ರಾಮ ಪಂಚಾಯತಿ ಅಧ್ಯಕ್ಷರುಗಳು, ಅಧಿಕಾರಿಗಳು ಉಪಸ್ಥಿತರಿದ್ದರು.

  • ಪತ್ರಿಕಾ ವಿತರಕರಿಗೆ ಸಾಮಾಜಿಕ ಭದ್ರತೆ: ಅಶ್ವಥ್ ನಾರಾಯಣ ಭರವಸೆ

    ಪತ್ರಿಕಾ ವಿತರಕರಿಗೆ ಸಾಮಾಜಿಕ ಭದ್ರತೆ: ಅಶ್ವಥ್ ನಾರಾಯಣ ಭರವಸೆ

    ಬೆಂಗಳೂರು: ಬಹಳ ರಿಸ್ಕ್ ತೆಗೆದುಕೊಂಡು ಮನೆ ಮನೆಗೂ ಬೆಳಗ್ಗೆಯೇ ಪತ್ರಿಕೆ ಮುಟ್ಟಿಸುವ ಪತ್ರಿಕಾ ವಿತರಕರಿಗೆ ಸಾಮಾಜಿಕ ಭದ್ರತೆ ಬಹಳ ಮುಖ್ಯ. ಈ ನಿಟ್ಟಿನಲ್ಲಿ ಸರ್ಕಾರ ಕ್ರಮ ವಹಿಸುತ್ತದೆ ಎಂದು ಉನ್ನತ ಶಿಕ್ಷಣ, ಐಟಿ-ಬಿಟಿ, ವಿಜ್ಞಾನ-ತಂತ್ರಜ್ಞಾನ ಹಾಗೂ ಕೌಶಲ್ಯಾಭಿವೃದ್ಧಿ ಖಾತೆ ಸಚಿವ ಡಾ.ಸಿ.ಎನ್.ಅಶ್ವಥ್ ನಾರಾಯಣ ಹೇಳಿದರು.

    ಬೆಂಗಳೂರಿನಲ್ಲಿ ಶನಿವಾರ ಪತ್ರಿಕಾ ವಿತರಕರ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಸಚಿವರು, ಮಳೆ ಇರಲಿ, ಚಳಿ ಇರಲಿ ಅಥವಾ ಯಾವುದೇ ತುರ್ತು ಸಂದರ್ಭವೂ ಇರಲಿ. ಬೆಳಗ್ಗೆ ನಾವು ನಿದ್ದೆಯಿಂದ ಏಳುವುದಕ್ಕೆ ಮುನ್ನವೇ ಪತ್ರಿಕೆ ನಮ್ಮ ಮನೆಯ ಅಂಗಳದಲ್ಲಿರುತ್ತದೆ. ಇದಕ್ಕೆ ಕಾರಣರಾದವರನ್ನು ಅಲಕ್ಷ್ಯ ಮಾಡುವಂತಿಲ್ಲ ಎಂದರು. ಇದನ್ನೂ ಓದಿ: ರಾಜ್ಯದಲ್ಲಿ ಇನ್ನೆರಡು ದಿನ ಮಳೆ- ಹವಾಮಾನ ಇಲಾಖೆ ಮುನ್ಸೂಚನೆ

    ಕೋವಿಡ್ ಸಮಯದಲ್ಲಿಯೂ ನಮ್ಮ ಮನೆಗೆ ಪತ್ರಿಕೆ ಬರುವುದು ನಿಲ್ಲಲಿಲ್ಲ. ತಮ್ಮ ಜೀವವನ್ನೂ ಲೆಕ್ಕಿಸದೇ ಮನೆಮನೆಗೂ ಪತ್ರಿಕೆ ಮುಟ್ಟಿಸಿದ್ದು ವಿತರಕರ ವೃತ್ತಿ ಬದ್ಧತೆಗೆ ಸಾಕ್ಷಿಯಾಗಿದೆ ಎಂದು ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು. ಇದನ್ನೂ ಓದಿ: ಕೊಚ್ಚೆ ನೀರೇ ಕುಡಿದಿದ್ದೇನೆ – ಹೆಚ್‍ಡಿಕೆಗೆ ಜೆಡಿಎಸ್ ಶಾಸಕ ಟಾಂಗ್

    ಸಾಮಾಜಿಕವಾಗಿ ವೃತ್ತಿ ತಾರತಮ್ಯ ಇರಬಾರದು. ಮನೆ ಮನೆಗೂ ಪತ್ರಿಕೆ ತಲುಪಿಸುವ ಪತ್ರಿಕಾ ವಿತರಕರನ್ನು ನಾವು ಮುಖ್ಯವಾಹಿನಿಯಲ್ಲಿ ಎಲ್ಲ ವೃತ್ತಿಪರರಿಗೂ ಸಿಗುವಂಥ ಸೌಲಭ್ಯಗಳು ಸಿಗಬೇಕು. ಸರ್ಕಾರದಿಂದ ಸಿಗಬಹುದಾದ ಎಲ್ಲ ಅನುಕೂಲಗಳನ್ನು ಮಾಡಿಕೊಡಲಾಗುವುದು. ಪ್ರತಿದಿನ ಬೆಳಗ್ಗೆ ಸೂರ್ಯೋದಯಕ್ಕೆ ಮುನ್ನವೇ ನಮಗೆ ಪತ್ರಿಕೆ ತಲುಪಿಸುವ ವಿತರಕರು, ಬಹುಬೇಗ ನಿದ್ದೆಯಿಂದ ಎದ್ದು, ನಿಷ್ಠೆಯಿಂದ ಕೆಲಸ ಮಾಡುತ್ತಾರೆ. ಅವರಿಗೆ ರಜೆ ಎಂಬುದೇ ಅಪರೂಪ. ಇವರ ಕಷ್ಟಕ್ಕೆ ನಾವು ಮಿಡಿಯಬೇಕು ಎಂದು ಸಚಿವರು ನುಡಿದರು.

    ಅಸಂಘಟಿತ ವಲಯಕ್ಕೆ ಪತ್ರಿಕಾ ವಿತರಕರು:
    ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್ ಮಾತನಾಡಿ, ವಿತರಕರನ್ನು ಕಾರ್ಮಿಕ ಇಲಾಖೆ ವ್ಯಾಪ್ತಿಗೆ ತಂದು ಅವರನ್ನು ಅಸಂಘಟಿತ ವಲಯಕ್ಕೆ ಸೇರ್ಪಡೆ ಮಾಡುವುದಾಗಿ ಭರವಸೆ ನೀಡಿದರು. ವಸತಿ ಸಚಿವ ವಿ.ಸೋಮಣ್ಣ ಮಾತನಾಡಿ, ಪತ್ರಿಕಾ ವಿತರಕರ ಪರವಾಗಿ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ತಿಳಿಸಿದರು.

  • ರಾಯಚೂರಿನ ಪ್ರವಾಹ ಪೀಡಿತ ಪ್ರದೇಶಗಳಿಗೆ ಸಚಿವ ವಿ.ಸೋಮಣ್ಣ ಭೇಟಿ

    ರಾಯಚೂರಿನ ಪ್ರವಾಹ ಪೀಡಿತ ಪ್ರದೇಶಗಳಿಗೆ ಸಚಿವ ವಿ.ಸೋಮಣ್ಣ ಭೇಟಿ

    ರಾಯಚೂರು: ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಕೃಷ್ಣಾ ನದಿ ಪ್ರವಾಹ ಪೀಡಿತ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

    ಮಳೆಯನ್ನೂ ಲೆಕ್ಕಿಸದೇ ನೆರೆ ಪೀಡಿತ ಗ್ರಾಮಗಳಿಗೆ ತೆರಳಿ ಗ್ರಾಮಸ್ಥರೊಂದಿಗೆ ಸಮಾಲೋಚನೆ ನಡೆಸಿದರು. ಕಳೆದ ಬಾರಿ ಪ್ರವಾಹ ಪೀಡಿತ ಪ್ರದೇಶಗಳ ಭೇಟಿ ರದ್ದುಗೊಳಿಸಿ ತುರ್ತು ಕಾರ್ಯ ನಿಮಿತ್ತ ಬೆಂಗಳೂರಿಗೆ ತೆರಳಿದ್ದರು. ಹೀಗಾಗಿ ಮಳೆ ನಡುವೆಯೂ ಗ್ರಾಮಗಳಿಗೆ ಭೇಟಿ ನೀಡಿದರು.

    ರಾಯಚೂರು ತಾಲೂಕಿನ ಅರಶಿಣಗಿ, ಗುರ್ಜಾಪುರ ಗ್ರಾಮದಲ್ಲಿ ಜನರ ಕಷ್ಟಗಳನ್ನ ಆಲಿಸಿದರು. ಸಂತ್ರಸ್ತರ ಅಸಮಧಾನ, ಆತಂಕಗಳಿಗೆ ಸ್ಪಂದಿಸಿ ಧೈರ್ಯ ತುಂಬಿದರು. ಒಂದೇ ಬಾರಿಗೆ ಎಲ್ಲಾ ಸಮಸ್ಯೆಗಳನ್ನ ಬಗೆಹರಿಸಲು ಸಾಧ್ಯವಿಲ್ಲ ಹಂತಹಂತವಾಗಿ ಪರಿಹಾರ ಕಾರ್ಯಗಳನ್ನ ಕೈಗೆತ್ತಿಕೊಳ್ಳುವುದಾಗಿ ಹೇಳಿದರು. ಪ್ರವಾಹ ಪೀಡಿತ ಗ್ರಾಮಗಳ ಸ್ಥಳಾಂತರ ಹಾಗೂ ವಸತಿ ಸಮಸ್ಯೆ ಬಗೆಹರಿಸಲು ಅಧಿಕಾರಿಗಳ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ಹೇಳಿದರು. ಇದನ್ನೂ ಓದಿ: ಇಂದು 1,431 ಜನಕ್ಕೆ ಕೊರೊನಾ ಸೋಂಕು – ರಾಜ್ಯದಲ್ಲಿ 22,497 ಸಕ್ರಿಯ ಪ್ರಕರಣ

    ಬಳಿಕ ದೇವಸುಗೂರು ಶ್ರೀಸುಗೂರೇಶ್ವರ ದೇವಾಲಯಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ಸಚಿವ ಸೋಮಣ್ಣಗೆ ರಾಯಚೂರು ನಗರ ಶಾಸಕ ಡಾ.ಶಿವರಾಜ್ ಪಾಟೀಲ್, ಗ್ರಾಮಾಂತರ ಶಾಸಕರ ಬಸನಗೌಡ ದದ್ದಲ ಸಾಥ್ ನೀಡಿದರು. ಇದನ್ನೂ ಓದಿ: ಸಿರಾಜ್ ವಿಕೆಟ್ ಪಡೆದ ಬಳಿಕ ವಿಶೇಷ ಸಂಭ್ರಮಾಚರಣೆಯ ಕಹಾನಿ ರಿವೀಲ್

  • ಪ್ರೀತಂಗೌಡ ಬೆಳೆಯಬೇಕಾದ ಹುಡುಗ: ವಿ. ಸೋಮಣ್ಣ

    ಪ್ರೀತಂಗೌಡ ಬೆಳೆಯಬೇಕಾದ ಹುಡುಗ: ವಿ. ಸೋಮಣ್ಣ

    ಮಂಡ್ಯ: ಶಾಸಕ ಪ್ರೀತಂಗೌಡ ಇನ್ನೂ ಹುಡುಗ. ಹಾಸನ ಜಿಲ್ಲೆಯಲ್ಲಿ ಇನ್ನೂ ಬೆಳೆಯಬೇಕಾದವನು. ಹೀಗಾಗಿ ಅವನು ಇತಿಮಿತಿಯಲ್ಲಿ ಇರಬೇಕು ಎಂದು ಸಚಿವ ವಿ.ಸೋಮಣ್ಣ ಚಾಟಿ ಬೀಸಿದ್ದಾರೆ.

    ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇವೇಗೌಡರ ಕುಟುಂಬಕ್ಕೆ 50 ವರ್ಷದ ರಾಜಕೀಯ ಇತಿಹಾಸವಿದೆ. ನಾನು ಸಚಿವ ಆಗಿದ್ದಾಗ ಪ್ರೀತಂಗೌಡ ಇನ್ನೂ ಹುಟ್ಟಿಯೇ ಇರಲಿಲ್ಲ. ದೇವೇಗೌಡರ ಮನೆಗೆ ಹೋಗುವುದರಲ್ಲಿ ಏನು ತಪ್ಪಿದೆ. ದೇವೇಗೌಡರು ರಾಷ್ಟದ ಪ್ರಧಾನಿಗಳಾಗಿದ್ದಂತವರು, ನಾನು ಕೂಡ ಅವರ ಮನೆಗೆ ಹೋಗಿದ್ದೇನೆ. ಪ್ರೀತಂಗೌಡ ಇನ್ನೂ ಬೆಳೆಯಬೇಕಾದ ಹುಡುಗ, ಸುಮ್ಮನೆ ಹಾಗೆಲ್ಲಾ ಮಾತನಾಡುವುದು ಸರಿ ಅಲ್ಲ ಎಂದು ಟಾಂಗ್ ಕೊಟ್ಟರು.

    ಇದೇ ವೇಳೆ ಸಚಿವರ ಖಾತೆ ಅಸಮಾಧಾನ ವಿಚಾರದ ಕುರಿತು ಮಾತನಾಡಿದ ಅವರು, ಈ ವಿಚಾರದಲ್ಲಿ ಯಾರಿಗೂ ಅಸಮಾಧಾನ ಇಲ್ಲ. ಬಸವರಾಜ್ ಬೊಮ್ಮಯಿ ಅವರು ಬುದ್ಧಿವಂತರಿದ್ದಾರೆ. ರಾಜ್ಯ ಬಿಜೆಪಿ ಸರ್ಕಾರ ಒಳ್ಳೆಯ ಕೆಲಸ ಮಾಡ್ತಾ ಇದೆ. ಆಗಸ್ಟ್ 15 ರಂದು ಬೊಮ್ಮಯಿ, ಯಾರೂ ಯೋಚನೆ ಮಾಡದ ರೀತಿಯಲ್ಲಿ ಜನಪರ ಕಾರ್ಯಕ್ರಮಗಳನ್ನು ಘೋಷಣೆ ಮಾಡುತ್ತಾರೆ. 15 ರಿಂದ 20 ದಿವಸದಲ್ಲಿ ಸರ್ಕಾರ ಟೇಕಫ್ ಆಗಿದೆ ಎಂದ ಭಾವನೆ ಜನರಿಗೆ ಬರುತ್ತದೆ ಎಂದರು. ಇದನ್ನೂ ಓದಿ: ಅಡ್ಜೆಸ್ಟ್‌ಮೆಂಟ್ ರಾಜಕಾರಣ ಮಾಡೋದು ಬೇಡ: ಶಾಸಕ ಪ್ರೀತಂ ಗೌಡ

  • ಜಿಲ್ಲಾ ಪ್ರವಾಸ ರದ್ದು – ಪ್ರವಾಹ ಪೀಡಿತ ಸ್ಥಳಗಳನ್ನ ಪರಿಶೀಲಿಸದೇ ಬೆಂಗಳೂರಿಗೆ ಮರಳಿದ ವಿ.ಸೋಮಣ್ಣ

    ಜಿಲ್ಲಾ ಪ್ರವಾಸ ರದ್ದು – ಪ್ರವಾಹ ಪೀಡಿತ ಸ್ಥಳಗಳನ್ನ ಪರಿಶೀಲಿಸದೇ ಬೆಂಗಳೂರಿಗೆ ಮರಳಿದ ವಿ.ಸೋಮಣ್ಣ

    – ಖಾತೆ ಅಸಮಧಾನ ಸಿಎಂ ನಿಭಾಯಿಸ್ತಾರೆ

    ರಾಯಚೂರು: ಜಿಲ್ಲೆಯಲ್ಲಿ ಪ್ರವಾಹ ಪೀಡಿತ ಸ್ಥಳಗಳನ್ನ ಪರಿಶೀಲಿಸದೆ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ತುರ್ತು ಕರೆ ಹಿನ್ನೆಲೆ ಬೆಂಗಳೂರಿಗೆ ಮರಳಿದ್ದಾರೆ. ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ಮೇಲೆ ವಿ.ಸೋಮಣ್ಣ ಜಿಲ್ಲೆಯಲ್ಲಿ ಮೂರು ದಿನಗಳ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದರು, ಆದ್ರೆ ಈಗ ಕಾರ್ಯಕ್ರಮಗಳನ್ನ ಅಧಿಕಾರಿಗಳ ಸಭೆಗೆ ಸೀಮಿತಗೊಳಿಸಿ ಉಳಿದ ಪ್ರವಾಸ ಮೊಟುಕುಗೊಳಿಸಿ ಬೆಂಗಳೂರಿಗೆ ತೆರಳಿದ್ದಾರೆ.

    ಪ್ರವಾಹ ಪೀಡಿತ ಗ್ರಾಮಗಳು ಹಾಗೂ ಕೋವಿಡ್ ಮುನ್ನೆಚ್ಚರಿಕೆ ಹಿನ್ನೆಲೆ ಆಸ್ಪತ್ರೆಗಳ ಭೇಟಿ ರದ್ದಾಗಿದೆ. ತುರ್ತು ಕೆಲಸ ನಿಮಿತ್ತ ಬೆಂಗಳೂರಿಗೆ ಹೋಗುತ್ತಿದು ಆಗಸ್ಟ್ 15 ರಿಂದ ಮೂರ್ನಾಲ್ಕು ದಿನ ರಾಯಚೂರಿನಲ್ಲೆ ಇರುವುದಾಗಿ ಸಚಿವ ಸೋಮಣ್ಣ ಹೇಳಿದ್ದಾರೆ.

    ಇನ್ನು ನೂತನ ಮಂತ್ರಿಗಳ ಖಾತೆ ಅಸಮಧಾನ ವಿಚಾರವಾಗಿ ಮಾತನಾಡಿದ ಸೊಮಣ್ಣ, ಮುಖ್ಯಮಂತ್ರಿಗಳು ಸಮರ್ಥರು, ಬುದ್ದಿವಂತರು ಇದ್ದಾರೆ. ಖಾತೆ ವಿಚಾರದಲ್ಲಿ ಅಸಮಧಾನಗೊಂಡಿರುವವರ ಜೊತೆ ಅವರು ಚರ್ಚೆ ಮಾಡುತ್ತಾರೆ. ಮುಖ್ಯಮಂತ್ರಿಗಳಿಗೆ ಅವರದೇ ಆದ ಅನುಭವ ಇದೆ. ನಮ್ಮ ಅವಶ್ಯಕತೆಯಿದ್ದರೆ ನಾವು ಕೈ ಜೋಡಿಸುತ್ತೇವೆ ಎಂದರು. ನನಗೆ ನನ್ನ ಖಾತೆ ಬಗ್ಗೆ ತೃಪ್ತಿ ಇದೆ ಇಲ್ಲಾ ಅನ್ನೋದಕ್ಕಿಂತ ಹೆಚ್ಚಾಗಿ ನಾನು ನನ್ನದೇ ಸ್ಟೈಲಲ್ಲಿ ಕೆಲಸ ಮಾಡುತ್ತೇನೆ. ಸೋಮಣ್ಣ ನಿಂತ ನೀರಲ್ಲ ಹರಿಯುವ ನೀರು, ನನಗೆ ಬೇರೆ ಯಾವ ಆಸೆ ಇಲ್ಲ ಅಂತ ಹೇಳಿದರು.

    ಗ್ರಾಮ ಪಂಚಾಯ್ತಿಗಳಿಗೆ ಕಸ ನಿರ್ವಹಣೆಯ ವಾಹನಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾಹಿತಿ ಇಲ್ಲದೆ, ಅಧಿಕಾರಿಗಳು ಬಂದಿದ್ದರಿಂದ ಸಚಿವ ಸೋಮಣ್ಣ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಇದುವರೆಗೂ ಮಂಜೂರು ಮಾಡಿದ ವಾಹನಗಳ ಸಂಖ್ಯೆ ಹಾಗೂ ತಗುಲಿದ ವೆಚ್ಚದ ಬಗ್ಗೆಯೂ ಮಾಹಿತಿ ಇಲ್ಲದೇ ಅಧಿಕಾರಿಗಳು ಬಂದಿದ್ದರು. ಹೀಗಾದರೆ ನನ್ನದೇ ಸ್ಟೈಲ್ ನಲ್ಲಿ ಮಾತನಾಡಬೇಕಾಗುತ್ತದೆ ಹುಷಾರ್ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಧರ್ಮ ಒಡೆದು, ಸುಳ್ಳು ಹೇಳಿ ಅಧಿಕಾರಕ್ಕೆ ಬಂದಿದ್ದೀರಾ, ಮುಂದೆಯೂ ಅದೇ ಮಾಡಬೇಡಿ: ಶೃಂಗೇರಿ ಶಾಸಕ ರಾಜೇಗೌಡ

    ಸೋಮಣ್ಣನವರು ಕ್ಲಾಸ್ ತೆಗೆದುಕೊಳ್ಳುತ್ತಿದ್ದಂತೆ ಅಧಿಕಾರಿಗಳು ತಬ್ಬಿಬ್ಬಾದರು. ಕಾರ್ಯಕ್ರಮದಲ್ಲಿ 35 ವಾಹನಗಳನ್ನು ಲೋಕಾರ್ಪಣೆ ಮಾಡಲಾಯಿತು. ಇಷ್ಟು ದೊಡ್ಡ ಕಾರ್ಯಕ್ರಮಕ್ಕೆ ಬರುವಾಗ ಕನಿಷ್ಠ ಮಾಹಿತಿ ಇಲ್ಲದೆ, ಬರುವುದು ನಿಮ್ಮ ಆಡಳಿತದ ರೀತಿ ತೋರಿಸುತ್ತದೆ. ಜಿಲ್ಲೆಯಲ್ಲಿ ಮೊದಲು ಆಡಳಿತ ವ್ಯವಸ್ಥೆ ಸರಿಮಾಡಬೇಕಿದೆ ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಮುಂದೊಂದು ದಿನ ನರೇಂದ್ರ ಮೋದಿ ಸ್ಟೇಡಿಯಂಗೆ ಅಮಿತಾ ಶಾ ಪುತ್ರನ ಹೆಸರಿಡಬಹುದು: ಟಿಎಂಸಿ ಸಂಸದ

  • ಮಂತ್ರಾಲಯದಲ್ಲಿ ರಾಯರ ದರ್ಶನ ಪಡೆದ ವಸತಿ ಸಚಿವ ವಿ.ಸೋಮಣ್ಣ

    ಮಂತ್ರಾಲಯದಲ್ಲಿ ರಾಯರ ದರ್ಶನ ಪಡೆದ ವಸತಿ ಸಚಿವ ವಿ.ಸೋಮಣ್ಣ

    ರಾಯಚೂರು: ನೂತನ ಸಚಿವರಾದ ಬಳಿಕ ರಾಯಚೂರು ಜಿಲ್ಲಾ ಉಸ್ತುವಾರಿ ಹಾಗೂ ವಸತಿ ಸಚಿವ ವಿ.ಸೋಮಣ್ಣ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠಕ್ಕೆ ಭೇಟಿ ನೀಡಿ ರಾಯರ ದರ್ಶನ ಪಡೆದಿದ್ದಾರೆ.

    ರಾಯಚೂರು ಜಿಲ್ಲಾ ಪ್ರವಾಸದಲ್ಲಿರುವ ಸಚಿವ ಸೋಮಣ್ಣ ನಿಗದಿತ ಪ್ರವಾಸ ಯೋಜನೆಯಂತೆ ಮಂತ್ರಾಲಯಕ್ಕೆ ಭೇಟಿ ನೀಡಿ ರಾಯರ ವೃಂದಾವನ ದರ್ಶನ ಪಡೆದಿದ್ದಾರೆ. ನೂತನ ಸಚಿವರಾದ ಹಿನ್ನೆಲೆ ಮಂತ್ರಾಲಯಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದ್ದಾರೆ.

    ಪ್ರವಾಹ ಪರಸ್ಥಿತಿ ಹಾಗೂ ಕೋವಿಡ್ ಮೂರನೇ ಅಲೆ ಮುನ್ನೆಚ್ಚರಿಕೆಗಳ ಕುರಿತು ಇಂದು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ ಸೋಮಣ್ಣ ನಾಳೆ ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲಿದ್ದಾರೆ. ಪರಿಹಾರ ಕ್ರಮಗಳ ಪರಿಶೀಲನೆ ನಡೆಸಲಿದ್ದಾರೆ. ಮಧ್ಯಾಹ್ನ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ.