Tag: V.Somanna

  • ಮಲೆಮಹದೇಶ್ವರ ಜಾತ್ರಾಮಹೋತ್ಸವ – ಪೂರ್ವಸಿದ್ಧತೆಗಳ ಕುರಿತಂತೆ ಸಭೆ ನಡೆಸಿದ ಸೋಮಣ್ಣ

    ಮಲೆಮಹದೇಶ್ವರ ಜಾತ್ರಾಮಹೋತ್ಸವ – ಪೂರ್ವಸಿದ್ಧತೆಗಳ ಕುರಿತಂತೆ ಸಭೆ ನಡೆಸಿದ ಸೋಮಣ್ಣ

    ಬೆಂಗಳೂರು: ವಸತಿ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅಧ್ಯಕ್ಷತೆಯಲ್ಲಿ ವಿಧಾನಸೌಧದಲ್ಲಿ ‘ಶ್ರೀ ಮಲೆ ಮಹದೇಶ್ವರಸ್ವಾಮಿ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರದ’ ವತಿಯಿಂದ 2022ನೇ ಸಾಲಿನಲ್ಲಿ ಜರುಗುವ ಮಹಾ ಶಿವರಾತ್ರಿ ಮತ್ತು ಯುಗಾದಿ ಜಾತ್ರಾ ಕಾರ್ಯಕ್ರಮಗಳ ಪೂರ್ವಸಿದ್ಧತೆಗಳ ಕುರಿತು ಮುಜರಾಯಿ ಸಚಿವರು, ಜಿಲ್ಲೆಯ ಶಾಸಕರು ಹಾಗೂ ಸಂಬಂಧಪಟ್ಟ ಇಲಾಖೆಯ ಮುಖ್ಯಸ್ಥರ ಉಪಸ್ಥಿತಿಯಲ್ಲಿ ಸಭೆ ನಡೆಯಿತು.

    ಮೊದಲಿಗೆ ಜಾತ್ರೆಯ ಕಾರ್ಯಕ್ರಮಗಳ ಪ್ರಯುಕ್ತ ಕೈಗೊಂಡಿರುವ ಮತ್ತು ಕೈಗೊಳ್ಳಲಿರುವ ಕ್ರಮಗಳ ಕುರಿತು ‘ಶ್ರೀ ಮಲೆ ಮಹದೇಶ್ವರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ಸಭೆಗೆ ಮಾಹಿತಿಯನ್ನು ನೀಡಿದರು. ಇದನ್ನೂ ಓದಿ: ತಾಕತ್ತಿದ್ದರೆ ನನ್ನನ್ನು ತುಂಡು, ತುಂಡು ಮಾಡಲಿ ನೋಡೋಣ: ಆಂದೋಲಾ ಶ್ರೀ ಕಿಡಿ

    ಈ ಕುರಿತು ಸೋಮಣ್ಣ ಅವರು ಮಾತನಾಡಿದ್ದು, ಶಿವರಾತ್ರಿ ಸಂದರ್ಭದಲ್ಲಿ ಪ್ರತಿನಿತ್ಯ ಲಕ್ಷಾಂತರ ಭಕ್ತರು ಸ್ವಾಮಿಯ ದರ್ಶನಕ್ಕೆ ಬರುತ್ತಾರೆ. ದರ್ಶನಕ್ಕೆ ಆಗಮಿಸುವ ಭಕ್ತರಿಗೆ ಯಾವುದೇ ಅಡೆತಡೆ ಮಾಡಬೇಡಿ. ಅತಿಯಾದ ಪ್ರಚಾರ ನೀಡುವ ಅವಶ್ಯಕತೆ ಇಲ್ಲ. ಕೋವಿಡ್ ನಿಯಮಗಳನ್ನು ಅಳವಡಿಸಿಕೊಂಡು ಕಾರ್ಯಕ್ರಮಗಳನ್ನು ರೂಪಿಸಿ ಯಶಸ್ವಿಗೊಳಿಸಲು ಸೂಚಿಸಿದರು.

    ನೀರಾವರಿ ಯೋಜನೆಗಳ ಕುರಿತಂತೆ ಪ್ರಸ್ತಾಪಿಸಿದ ಅವರು, ಗುಂಡಾಲ್ ಏತ ನೀರಾವರಿ ಯೋಜನೆ ಮತ್ತು ರಾಮನಗುಡ್ಡ ಹಾಗೂ ಹಬ್ಬ-ಹುಣಸೆ ಕೆರೆಗಳಿಗೆ ನೀರು ಹರಿಸುವ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸುವಂತೆ ತಿಳಿಸಿದರು.

    ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಮುಖ ರಸ್ತೆಗಳ ದುರಸ್ತಿ ಕುರಿತು ಮಾತನಾಡಿದ ಅವರು, ಸತ್ತೇಗಾಲ-ಕೊಳ್ಳೆಗಾಲ-ಯಳಂದೂರು-ಸಂತೆಮರಹಳ್ಳಿ-ಚಾಮರಾಜನಗರ ಮತ್ತು ಕೊಳ್ಳೇಗಾಲ-ಮಧುವನಹಳ್ಳಿ-ಹನೂರು-ಶ್ರೀ ಮಲೆಮಹದೇಶ್ವರ ಬೆಟ್ಟ ಮಾರ್ಗದ ರಸ್ತೆಗಳಲ್ಲಿರುವ ಗುಂಡಿಗಳು ಮತ್ತು ಅಪೂರ್ಣವಾಗಿರುವ ಕಾಮಗಾರಿಗಳಿಂದ ಸಾವ9ಜನಿಕರ ಸಂಚಾರಕ್ಕೆ ತುಂಬಾ ಅಡಚಣೆಯಾಗುತ್ತಿದೆ. ವಿಳಂಬವಿಲ್ಲದಂತೆ ಕೂಡಲೇ ಕಾರ್ಯಪ್ರವೃತ್ತರಾಗಿ ಬೆಟ್ಟದ ಶಿವರಾತ್ರಿ ಜಾತ್ರಾ ಕಾರ್ಯಕ್ರಮಗಳ ಪ್ರಾರಂಭಕ್ಕೂ ಮುನ್ನ ಪೂರ್ಣಗೊಳಿಸಲು ತಿಳಿಸಿದರು. ಇದನ್ನೂ ಓದಿ: ಸ್ಥಳೀಯರಿಗೆ ಖಾಸಗಿ ವಲಯದಲ್ಲಿ ಶೇ.75ರಷ್ಟು ಉದ್ಯೋಗವಕಾಶ – ಸುಪ್ರೀಂನಲ್ಲಿ ಹರ್ಯಾಣಕ್ಕೆ ಜಯ

    ಸಭೆಯಲ್ಲಿ ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ, ಶಾಸಕರುಗಳಾದ ನರೇಂದ್ರ, ಎನ್.ಮಹೇಶ್, ಪುಟ್ಟರಂಗ ಶೆಟ್ಟಿ, ನಿರಂಜನ್ ಕುಮಾರ್, ಪರಿಷತ್ ಸದಸ್ಯರಾದ ಸಿ.ಎನ್.ಮಂಜೇಗೌಡ, ತಿಮ್ಮಯ್ಯ, ಕಾವೇರಿ ನೀರಾವರಿ ನಿಗಮದ ಮುಖ್ಯ ಇಂಜನಿಯರ್ ಶಂಕರೇಗೌಡ ಚಾಮರಾಜನಗರ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಹಾಗೂ ಮತ್ತಿತರ ಸಂಬಂಧಿತ ಅಧಿಕಾರಿಗಳು ಉಪಸ್ಥಿತರಿದ್ದರು.

  • ಸುಡುಗಾಡು ಸಿದ್ದ ಮಾಡಿದ್ದನ್ನು ನಾವು ಸರಿ ಮಾಡಿದ್ದೇವೆ: ಸೋಮಣ್ಣ

    ಸುಡುಗಾಡು ಸಿದ್ದ ಮಾಡಿದ್ದನ್ನು ನಾವು ಸರಿ ಮಾಡಿದ್ದೇವೆ: ಸೋಮಣ್ಣ

    ಮೈಸೂರು: ಸುಡುಗಾಡು ಸಿದ್ದ ಮಾಡಿದ್ದನ್ನು ನಾವು ಸರಿ ಮಾಡಿದ್ದೇವೆ ಎಂದು ವಸತಿ ಸಚಿವ ವಿ. ಸೋಮಣ್ಣ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯನವರ ಕಾಲದಲ್ಲಿ ಬರೀ ಘೋಷಣೆ ಆಗಿತ್ತು. ಆದರೆ ನಾವು ಮನೆ ಕಟ್ಟಿಕೊಡುತ್ತಿದ್ದೇವೆ. ಇದು ನಿರಂತರ ಪ್ರಕ್ರಿಯೆಯಾಗಿದೆ. ರಾಜಕಾರಣಕ್ಕಾಗಿ ನನ್ನ ಮೇಲೆ ಆರೋಪ ಮಾಡಬೇಡಿ ಎಂದು ಬಿಜೆಪಿ ಸರ್ಕಾರ ಒಂದೂ ಮನೆ ನೀಡಿಲ್ಲ ಎಂಬ ಸಿದ್ದರಾಮಯ್ಯ ಆರೋಪ ವಿಚಾರಕ್ಕೆ ಟಾಂಗ್ ನೀಡಿದರು.

    siddaramaiah

    ನಾವು ಕೊಟ್ಟಿದ್ದು, ನೀವು ಕೊಟ್ಟಿದ್ದು ಅನ್ನುವುದಲ್ಲ. ಜನರಿಗೆ ಮನೆ ಸಿಗಬೇಕು. ಸಿದ್ದರಾಮಯ್ಯ ಸಹ ಮನೆಯಿಂದ ತಂದು ಕೊಟ್ಟಿಲ್ಲ. ನಾನು ಸಹ ಮನೆಯಿಂದ ತಂದು ಕೊಡಲ್ಲ. ಇನ್ನು ಮುಂದೆಯಾದರೂ ಸೋಮಣ್ಣನನ್ನು ಟಾರ್ಗೆಟ್ ಮಾಡಿವುದನ್ನು ಬಿಡಿ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಹಿಜಬ್ ವಿವಾದ ಕಂಡ ರಾಜ್ಯಗಳು – ಅಲ್ಲಿನ ಹೈಕೋರ್ಟ್‌ಗಳ ತೀರ್ಪುಗಳೇನು? ಇಲ್ಲಿದೆ ಮಾಹಿತಿ

    ಹಿಜಾಬ್ ಕೇಸರಿ ಪ್ರಕರಣ ವಿವಾದಕ್ಕೆ ಸಂಬಂಧಿಸಿ ಸಂಘಟನೆಗಳಿಗೆ ಖಡಕ್ ಎಚ್ಚರಿಕೆ ನೀಡಿದರು. ಯಾರು ಯಾರು ಏನ್ ಮಾಡುತ್ತಿದ್ದಾರೆ ಎನ್ನುವುದನ್ನು ಸರ್ಕಾರ ಗಂಭೀರವಾಗಿ ಗಮನಿಸುತ್ತಿದೆ. ಇಲ್ಲಿ ಯಾರು ದೊಡ್ಡವರಲ್ಲ, ಎಲ್ಲರಿಗಿಂತ ದೊಡ್ಡದು ದೇಶವಾಗಿದೆ. ಸಮಾಜದ ಸ್ವಾಸ್ಥ್ಯ ಹಾಳು ಮಾಡುವಂತಹ ಸಂಘಟನೆಗಳನ್ನು ಬಗ್ಗು ಬಡಿಯುವ ಕೆಲಸವನ್ನು ಸರ್ಕಾರ ಮಾಡಲಿದೆ ಎಂದು ತಿಳಿಸಿದರು.

    ಘಜಿನಿ ಮಹಮ್ಮದ್ 17 ಬಾರಿ ದಂಡೆತ್ತಿ ಬಂದ. ಅನೇಕ ರಾಜರು ದಾಳಿ ಮಾಡಿದರು. ಆದರೂ ಭಾರತ ಭಾರತವಾಗಿಯೇ ಇದೆ. ಮಕ್ಕಳ ಭವಿಷ್ಯದ ಜೊತೆ ಚೆಲ್ಲಾಟವಾಡದಿರಿ ಎಂದು ಮನವಿ ಮಾಡಿದರು. ಇದನ್ನೂ ಓದಿ: ಆಕಾಶದಲ್ಲಿ ಹಾರಾಡಿತು ಪೈಲಟ್ ರಹಿತ ಹೆಲಿಕಾಪ್ಟರ್

  • ಹೊಗೇನಕಲ್‌ನ ಒಂದಿಂಚು ಜಾಗವನ್ನು ಬೇರೆಯವರಿಗೆ ಬಿಟ್ಟುಕೊಡಲ್ಲ: ಸೋಮಣ್ಣ

    ಹೊಗೇನಕಲ್‌ನ ಒಂದಿಂಚು ಜಾಗವನ್ನು ಬೇರೆಯವರಿಗೆ ಬಿಟ್ಟುಕೊಡಲ್ಲ: ಸೋಮಣ್ಣ

    ಚಾಮರಾಜನಗರ: ಹೊಗೇನಕಲ್‌ನಲ್ಲಿ ಒಂದಿಂಚು ಜಾಗವನ್ನು ಬೇರೆಯವರಿಗೆ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ ಎಂದು ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಹೇಳಿದರು.

    ಹೊಗೇನಕಲ್‌ನಲ್ಲಿ 400 ಎಕರೆ ವಿಸ್ತೀರ್ಣದ ನಡುಗುಡ್ಡೆಯನ್ನು ತಮಿಳುನಾಡು ಸರ್ಕಾರ ಅತಿಕ್ರಮಿಸಿಕೊಂಡಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಮ್ಮ ರಾಜ್ಯದ ಸಣ್ಣ ಹಕ್ಕನ್ನು ಸಹ ಬೇರೆಯವರಿಗೆ ಬಿಟ್ಟು ಕೊಡಲ್ಲ, ನಮ್ಮ ಹಕ್ಕನ್ನು ನಾವು ಕಾಯ್ದುಕೊಳ್ಳುತ್ತೇವೆ. ನಮಗೆ ಆ ಶಕ್ತಿಯಿದೆ ಎಂದರು.

    Somanna

    ಜಂಟಿ ಸರ್ವೆ ಪುನಾರಾಂಭಿಸಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ. ಯಾವ್ಯಾವ ಕಾಲಕ್ಕೇ ಏನಾಗಬೇಕೋ ಆ ರೀತಿಯೇ ಆಗುತ್ತದೆ. ಕರ್ನಾಟಕದ ಒಂದು ಇಂಚು ಜಾಗವನ್ನು ಬೇರೆಯವರಿಗೆ ಬಿಟ್ಟುಕೊಡಲ್ಲ. ನಮ್ಮ ನೆಲದಲ್ಲಿ ಇನ್ನೊಬ್ಬರು ಬಂದು ಸೇರಿಕೊಳ್ಳಲು ಅವಕಾಶ ಕೊಡಲ್ಲ ಎಂದು ಭರವಸೆ ನೀಡಿದರು. ಇದನ್ನೂ ಓದಿ: ನನ್ನ ವಿಜಯನಗರದ ಜನ ದುಃಖದಲ್ಲಿದ್ದಾರೆ: ಆನಂದ್ ಸಿಂಗ್

    ತಮಿಳುನಾಡು ಕೈಗೊಂಡಿರುವ ಹೊಗೇನಕಲ್ ಎರಡನೇ ಹಂತದ ಕುಡಿಯುವ ನೀರಿನ ಯೋಜನೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಾವು ಕುಡಿದ ಮೇಲೆ ತಮಿಳುನಾಡಿನವರು ನೀರು ಕುಡಿಯುತ್ತಾರೆ ವಿನಾಃ ಅವರು ಕುಡಿದ ನೀರನ್ನು ನಾವು ಕುಡಿಯೋದಿಲ್ಲ, ಅವರ ಹಕ್ಕನ್ನು ಕಾಯ್ದುಕೊಳ್ಳೋದು ಅವರ ಕರ್ತವ್ಯ. ನಮ್ಮ ಹಕ್ಕನ್ನು ಕಾಯ್ದುಕೊಳ್ಳೋದು ನಮ್ಮ ಕರ್ತವ್ಯವಾಗಿದ್ದು, ನಮ್ಮ ಜನರಿಗೆ ಅನ್ಯಾಯ ಮಾಡಿಕೊಂಡು ಅವರಿಗೆ ನೀರು ಕೊಡಲು ಸಾಧ್ಯವಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ನಮಗೆ ಗೌರವ ಕೊಟ್ಟಿದ್ದಕ್ಕೆ ಜಾರಕಿಹೊಳಿಗೆ ಅಭಿನಂದನೆ: ಎಚ್‍ಡಿಕೆ

  • ಡಿಕೆಶಿ ಜೊತೆ ಊಟ, ತಿಂಡಿಗೆ ಹೋಗೋದು ತಪ್ಪಾ: ಸೋಮಣ್ಣ ಪ್ರಶ್ನೆ

    ಡಿಕೆಶಿ ಜೊತೆ ಊಟ, ತಿಂಡಿಗೆ ಹೋಗೋದು ತಪ್ಪಾ: ಸೋಮಣ್ಣ ಪ್ರಶ್ನೆ

    ಚಾಮರಾಜನಗರ: ಡಿ.ಕೆ.ಶಿವಕುಮಾರ್ ಅವರೊಂದಿಗೆ ಊಟ, ತಿಂಡಿಗೆ ಹೋಗುವುದು ತಪ್ಪಾ? ಡಿಕೆಶಿ ಜೊತೆ ಯಾರೂ ಹೋಗುವ ಹಾಗೇ ಇಲ್ವಾ? ಎಂದು ಸಚಿವ ವಿ.ಸೋಮಣ್ಣ ಪ್ರಶ್ನಿಸಿದ್ದಾರೆ.

    ಬಿಜೆಪಿ ಶಾಸಕರು ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ ಚರ್ಚೆ ಮಾಡುತ್ತಿದ್ದಾರೆ ಎಂಬ ವದಂತಿ ಬಗ್ಗೆ ಚಾಮರಾಜನಗರದಲ್ಲಿ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅದೆಲ್ಲಾ ಮೈನರ್ ವಿಚಾರ ಬಿಟ್ಟುಬಿಡಿ. ಚುನಾವಣೆಗೆ ಇನ್ನೂ 15-16 ತಿಂಗಳು ಇದೆ. ಈ ಅವಧಿಯಲ್ಲಿ ನಾವೇನು ಮಾಡಬೇಕು, ಜಿಲ್ಲೆಯ ಅಭಿವೃದ್ಧಿಗೆ ಸಿಎಂ ಹತ್ತಿರ ಏನು ಒತ್ತಡ ತರಬೇಕು. ಈ ಬಗ್ಗೆ ನನಗೆ ಸಲಹೆ ಕೊಡಿ ಮನವಿ ಮಾಡಿದರು. ಇದನ್ನೂ ಓದಿ: ಬಂಡೀಪುರದಲ್ಲಿ ಹುಲಿ ಗಣತಿ ಆರಂಭ: ಲೆಕ್ಕ ಹೇಗೆ ಹಾಕುತ್ತಾರೆ? ಇಲ್ಲಿದೆ ಪೂರ್ಣ ಮಾಹಿತಿ

    ರಾಜಕೀಯ ಬೆಳವಣಿಗೆ ಬಗ್ಗೆ ಬೆಂಗಳೂರಿನವರು ಏನು ಮಾಡಿಕೊಳ್ಳುತ್ತಾರೆ. ಬೆಂಗಳೂರು ಕಾಸ್ಮೋ ಪಾಲಿಟಿನ್ ಸಿಟಿ. ಯಾರೂ ಎಲ್ಲಿಗೆ ಹೋಗುತ್ತಾರೆ. ಎಲ್ಲಿಗೆ ಬರುತ್ತಾರೆ ಎಂದು ಕಂಡು ಹಿಡಿಯುವುದಕ್ಕೆ ಆಗುವುದಿಲ್ಲ. ಯಾವುದೋ ರೆಸಾರ್ಟ್ ಡಿಕೆಶಿಗೆ ಮಾತ್ರ ಇರುತ್ತಾ? ಜೆಡಿಎಸ್, ಬಿಜೆಪಿಗೆ ಮಾತ್ರ ಇರುತ್ತಾ? ಅದು ಎಲ್ಲರಿಗೂ ರೆಸಾರ್ಟ್. ಅದು ಇರುವುದು ಕೆಲವರು ಆರಾಮವಾಗಿ ಇರುವುದಕ್ಕೆ ನಮ್ಮಂತಹವರು ಇರುವುದು ಬೀದಿ ಸುತ್ತುವುದಕ್ಕೆ ಎಂದು ಹೇಳಿದರು.

    ಬಿಜೆಪಿಯ ಕೆಲ ಶಾಸಕರು, ಸಚಿವರು ಕಾಂಗ್ರೆಸ್‍ಗೆ ಹೋಗುತ್ತಾರೆ ಎಂಬ ಬಸವನಗೌಡ ಪಾಟೀಲ್ ಯತ್ನಾಳ್ ಹೇಳಿಕೆಗೆ, ಯತ್ನಾಳ್ ಅವರು ಗೌಡ್ರು. ವಿಜಯಪುರದ ನಾಯಕರು ಅವರು ಏನು ಹೇಳಿದ್ದಾರೆಂದು ಖಂಡಿತವಾಗಿ ನನಗೆ ಗೊತ್ತಿಲ್ಲ. ನಾನು ಅವರು ಒಂದು ಸಾವಿರ ಕಿಲೋಮೀಟರ್ ದೂರದಲ್ಲಿದ್ದೇವೆ. ಅವರ ಜೊತೆ ಮಾತನಾಡಲು ಫೋನ್ ಮಾಡಿದ್ದೆ. ಆದರೆ ಅವರು ನನ್ನ ಸ್ವೀಕರಿಸಲಿಲ್ಲ ಎಂದರು.  ಇದನ್ನೂ ಓದಿ: ಆಹಾರ ಅರಸಿ ನಾಡಿಗೆ ಬಂದ ಆನೆ ವಿದ್ಯುತ್ ಶಾಕಿಗೆ ಬಲಿ

  • ಬಿಜೆಪಿಯಲ್ಲಿ ಉಸ್ತುವಾರಿ ಸಚಿವರ ಕಿತ್ತಾಟ – ಮಾಧುಸ್ವಾಮಿ, ಸೋಮಣ್ಣ, ಎಂಟಿಬಿಗೆ ಅಸಮಾಧಾನ

    ಬಿಜೆಪಿಯಲ್ಲಿ ಉಸ್ತುವಾರಿ ಸಚಿವರ ಕಿತ್ತಾಟ – ಮಾಧುಸ್ವಾಮಿ, ಸೋಮಣ್ಣ, ಎಂಟಿಬಿಗೆ ಅಸಮಾಧಾನ

    ಬೆಂಗಳೂರು: ಬಿಜೆಪಿ ಸರ್ಕಾರ ಜಿಲ್ಲಾ ಉಸ್ತುವಾರಿ ಸಚಿವರ ನೇಮಕ ಮಾಡಿದ ಬೆನ್ನಲ್ಲೇ ಕೆಲ ಸಚಿವರು ಅಸಮಾಧಾನ ಹೊರಹಾಕಿದ್ದಾರೆ. ಪ್ರಮುಖವಾಗಿ ಸಚಿವರಾದ ಎಂಟಿಬಿ ನಾಗರಾಜ್, ವಿ.ಸೋಮಣ್ಣ, ಮಾಧುಸ್ವಾಮಿ ಸೇರಿದಂತೆ ಕೆಲ ಸಚಿವರು ಕ್ಯಾತೆ ತೆಗೆದಿದ್ದಾರೆ.

    ಚಿಕ್ಕಬಳ್ಳಾಪುರ ಉಸ್ತುವಾರಿಗೆ ಸಚಿವರಾಗಿರುವ ಎಂಟಿಬಿ ನಾಗರಾಜ್ ನನಗೆ ಬೆಂಗಳೂರು ಗ್ರಾಮಾಂತರದ ಉಸ್ತುವಾರಿ ಬೇಕೆಂದು ಪಟ್ಟು ಹಿಡಿದಿದ್ದಾರೆ. ಅಲ್ಲದೆ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿ ಮಾತುಕತೆ ಕೂಡ ನಡೆಸಿದ್ದಾರೆ. ಇನ್ನೊಂದೆಡೆ ಜಿಲ್ಲೆಯ ಪೂರ್ವಾಪರ ಗೊತ್ತಿಲ್ಲದೆ ಜವಾಬ್ದಾರಿ ನಿರ್ವಹಿಸಲು ಇಷ್ಟ ಇಲ್ಲ. ಸಿಎಂ ನನ್ನ ಜೊತೆ ಮಾತಾಡಿಯೇ ನಿರ್ಧಾರ ತೆಗೆದುಕೊಂಡಿದ್ದಾರೆ. ಉಸ್ತುವಾರಿ ಕೈತಪ್ಪಿದ್ದಕ್ಕೆ ಯಾವುದೇ ರಾಜಕೀಯ ಇಲ್ಲ. ಏನೂ ಗೊತ್ತಿಲ್ಲದ ಜಿಲ್ಲೆಗೆ ಹೋಗಿ ಏನು ಪ್ರಯೋಜನ..? ಹೀಗಾಗಿ ಬೇರೆ ಜಿಲ್ಲೆಗೆ ಹೋಗಲು ನಿರಾಕರಿಸಿದ್ದೇನೆ. ತುಮಕೂರು ಉಸ್ತುವಾರಿ ಕೊಟ್ಟಿದ್ರೆ ಒಳ್ಳೇ ಕೆಲಸ ಮಾಡಬಹುದಿತ್ತು ಎಂದು ಸಚಿವ ಮಾಧುಸ್ವಾಮಿ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ಬೆಂಗಳೂರು ನಗರಕ್ಕೆ ಸಿಎಂ ಸೇರಿ ಜಿಲ್ಲಾ ಉಸ್ತುವಾರಿ ಸಚಿವರ ಪಟ್ಟಿ ಪ್ರಕಟ – ಯಾರಿಗೆ ಯಾವ ಜಿಲ್ಲೆ?

    ಉಸ್ತುವಾರಿ ಹಂಚಿಕೆ ವಿಚಾರವಾಗಿ ಸಚಿವ ಸೋಮಣ್ಣ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ನಾನೂ ಬೆಂಗಳೂರು ಉಸ್ತುವಾರಿ ಕೇಳಿದ್ದೆ ಅದು ಯಾರಿಗೂ ಕೊಟ್ಟಿಲ್ಲ. ಆದರೆ ಬೇರೆ ಯಾರಿಗೂ ಕೊಟ್ಟಿಲ್ಲ ಅಂದ್ರೆ ಅದು ಸಿಎಂ ಬಳಿ ಇರೋದೇ ಸೂಕ್ತ. ವರಿಷ್ಠರ ಸೂಚನೆ ಮೇರೆಗೆ ಸಿಎಂ ಈ ನಿರ್ಧಾರ ಮಾಡಿದ್ದಾರೆ. ಬೇರೆ ಬೇರೆ ರಾಜ್ಯಗಳಲ್ಲಿ ಈ ರೀತಿಯ ಪ್ರಯೋಗ ಮಾಡಲಾಗಿದೆ. ಅದರಂತೆ ನಮ್ಮಲ್ಲೂ ಮಾಡಿದ್ದಾರೆ. ಈ ನಿರ್ಧಾರವನ್ನು ನಾನು ಸ್ವಾಗತಿಸುತ್ತೇನೆ. ವರಿಷ್ಠರು, ಹೈಕಮಾಂಡ್ ತೀರ್ಮಾನ ಮಾಡಿ ಹಂಚಿಕೆ ಮಾಡಿದ್ದಾರೆ. ಯಾವ ಲೆಕ್ಕಾಚಾರದಲ್ಲಿ ಬೇರೆ ಬೇರೆ ಜಿಲ್ಲೆ ಹಂಚಿಕೆ ಮಾಡಲಾಗಿದೆ ಗೊತ್ತಿಲ್ಲ ಆದರೆ ತವರು ಜಿಲ್ಲೆ ಸಿಕ್ಕಿಲ್ಲ ಅಂದಮೇಲೆ ಬೆಂಗಳೂರು ನಗರ ಉಸ್ತುವಾರಿ ಸಿಎಂ ಬಳಿ ಇರೋದೇ ಸೂಕ್ತ ಎಂದು ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಸೋಮಣ್ಣ ಮಾತನಾಡಿದ್ದಾರೆ. ಇದನ್ನೂ ಓದಿ: ವರಿಷ್ಠರ ಸೂಚನೆ ಮೇರೆಗೆ ಜಿಲ್ಲಾ ಉಸ್ತುವಾರಿ ಹಂಚಿಕೆ: ಸೋಮಣ್ಣ

  • ವರಿಷ್ಠರ ಸೂಚನೆ ಮೇರೆಗೆ ಜಿಲ್ಲಾ ಉಸ್ತುವಾರಿ ಹಂಚಿಕೆ: ಸೋಮಣ್ಣ

    ವರಿಷ್ಠರ ಸೂಚನೆ ಮೇರೆಗೆ ಜಿಲ್ಲಾ ಉಸ್ತುವಾರಿ ಹಂಚಿಕೆ: ಸೋಮಣ್ಣ

    ಬೆಂಗಳೂರು: ವರಿಷ್ಠರ ಸೂಚನೆ ಮೇರೆಗೆ ಜಿಲ್ಲಾ ಉಸ್ತುವಾರಿ ಹಂಚಿಕೆಯ ನಿರ್ಧಾರ ಮಾಡಲಾಗಿದೆ. ಈ ರೀತಿಯ ಪ್ರಯೋಗಗಳು ಬೇರೆ ಬೇರೆ ಜಿಲ್ಲೆಯಲ್ಲೂ ನಡೆಯುತ್ತಿದೆ ಎಂದು ವಸತಿ ಸಚಿವ ವಿ.ಸೋಮಣ್ಣ ತಿಳಿಸಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಬೇರೆ ಬೇರೆ ಜಿಲ್ಲೆಯಲ್ಲಿ ಈ ರೀತಿಯ ಪ್ರಯೋಗಗಳನ್ನು ಮಾಡಿದ್ದಾರೆ. ಅದರಂತೆ ನಮ್ಮಲ್ಲೂ ಮಾಡಿದ್ದಾರೆ. ಈ ನಿರ್ಧಾರವನ್ನು ನಾನು ಸ್ವಾಗತಿಸುತ್ತೇನೆ ಎಂದು ಹೇಳಿದರು. ಇದನ್ನೂ ಓದಿ: ಪಂಜಾಬ್‍ನಲ್ಲಿ ಕಾಳಿ ವಿಗ್ರಹ ವಿರೂಪಗೊಳಿಸಲು ಯತ್ನ

    Somanna

    ನಾನೂ ಬೆಂಗಳೂರು ಉಸ್ತುವಾರಿ ಕೇಳಿದ್ದೆ. ಆದರೆ ಅದನ್ನು ಬೇರೆ ಯಾರಿಗೂ ಕೊಟ್ಟಿಲ್ಲ. ಬೆಂಗಳೂರು ಉಸ್ತುವಾರಿಯನ್ನು ಮುಖ್ಯಮಂತ್ರಿ ಬೊಮ್ಮಾಯಿ ಅವರೇ ಇಟ್ಟುಕೊಂಡಿದ್ದಾರೆ. ಅವರ ಬಳಿ ಇರುವುದೇ ಸೂಕ್ತ ಎಂದ ಅವರು, ವರಿಷ್ಠರು ಹಾಗೂ ಹೈಕಮಾಂಡ್ ತೀರ್ಮಾನ ಮಾಡಿ ಉಸ್ತುವಾರಿ ಖಾತೆಯನ್ನು ಹಂಚಿಕೆ ಮಾಡಿದ್ದಾರೆ. ಯಾವ ಲೆಕ್ಕಾಚಾರದಲ್ಲಿ ಬೇರೆ ಬೇರೆ ಜಿಲ್ಲೆ ಹಂಚಿಕೆ ಮಾಡಲಾಗಿದೆ ಗೊತ್ತಿಲ್ಲ. ಆದರೆ ತವರು ಜಿಲ್ಲೆ ಸಿಕ್ಕಿಲ್ಲ ಅಂದ ಮೇಲೆ ಬೆಂಗಳೂರು ನಗರ ಉಸ್ತುವಾರಿ ಸಿಎಂ ಬಳಿ ಇರುವುದೇ ಸೂಕ್ತ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಇದನ್ನೂ ಓದಿ: 2-3 ವಾರಗಳಲ್ಲಿ 3ನೇ ಅಲೆ ಕಡಿಮೆಯಾಗುತ್ತೆ: ಸುಧಾಕರ್

  • ದೇಶದ ಏಕತೆಗಾಗಿ ಶ್ರಮಿಸಿದ ಸುಭಾಷ್ ಚಂದ್ರ ಬೋಸ್: ವಿ.ಸೋಮಣ್ಣ

    ದೇಶದ ಏಕತೆಗಾಗಿ ಶ್ರಮಿಸಿದ ಸುಭಾಷ್ ಚಂದ್ರ ಬೋಸ್: ವಿ.ಸೋಮಣ್ಣ

    ಬೆಂಗಳೂರು: ನೇತಾಜಿ ಸುಭಾಷ್‌ ಚಂದ್ರ ಬೋಸ್ ಅಪ್ರತಿಮ ದೇಶಭಕ್ತ. ಅವರು ರಾಷ್ಟ್ರದ ಉದ್ದಗಲಕ್ಕೂ ಸಂಚರಿಸಿ ಭಾರತೀಯರ ಏಕತೆ ಮತ್ತು ಸಮಗ್ರತೆಗಾಗಿ ಶ್ರಮಿಸಿದ್ದಾರೆ ಎಂದು ಸಚಿವ ವಿ.ಸೋಮಣ್ಣ ಹೇಳಿದರು.

    ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನೇತಾಜಿ ಸುಭಾಷ್ ಚಂದ್ರ ಬೋಸ್ ಉದ್ಯಾನವನದಲ್ಲಿ ವಿ.ಸೋಮಣ್ಣ ಪ್ರತಿಷ್ಠಾನದ ವತಿಯಿಂದ ನಡೆದ ಸುಭಾಷ್ ಚಂದ್ರ ಬೋಸ್ ಅವರ ಜಯಂತ್ಯೋತ್ಸವ ಹಾಗೂ ಪರಾಕ್ರಮ ದಿನಾಚರಣೆಯಲ್ಲಿ ಮಾತನಾಡಿದ ಅವರು, ದೇಶಕ್ಕಾಗಿ ಪ್ರಾಣದ ಹಂಗು ತೊರೆದು ಶ್ರಮಿಸಿದ ನೇತಾಜಿ ಅವರ ಜೀವನದ ಆದರ್ಶಗಳನ್ನು ಮುಂದಿನ ಪೀಳಿಗೆಗೆ ತಿಳಿಸುವ ಕೆಲಸ ಆಗಬೇಕಿದೆ. ಭಾರತವನ್ನು ಬ್ರಿಟಿಷ್ ಮುಕ್ತನ್ನಾಗಿಸಿ ಸ್ವಾತಂತ್ರ‍್ಯ ದೊರಕಿಸಿಕೊಡುವಲ್ಲಿ ತಮ್ಮದೇ ಆದ ಉಪಾಯಗಳನ್ನು ಹೂಡಿ ಯಶಸ್ವಿಯಾಗಿದ್ದರು. ಇದರ ಪರಿಣಾಮವಾಗಿ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಿಗೆ ಮೊದಲ ಬಾರಿಗೆ ಸ್ವಾತಂತ್ರ್ಯ ದೊರಕಿಸಿಕೊಟ್ಟು ಅಲ್ಲಿ ತಿರಂಗಾ ಹಾರಿಸುವಲ್ಲಿ ಅವರು ಯಶಸ್ವಿಯಾಗಿದ್ದರು ಎಂದು ತಿಳಿಸಿದರು.

    ನೇತಾಜಿ ಅವರ ಸಂದೇಶಗಳು ಇಂದಿಗೂ ಅನುಕರಣೀಯ. ರಾಷ್ಟ್ರಕ್ಕೆ ಅವರು ನೀಡಿದ ಕೊಡುಗೆಗಳನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯ. ಇಂಥ ಅನೇಕರ ತ್ಯಾಗ ಮತ್ತು ಬಲಿದಾನದಿಂದ ನಾವೆಲ್ಲ ಇಂದು ಸ್ವಾತಂತ್ರ್ಯವನ್ನು ಅನುಭವಿಸುತ್ತಿದ್ದೇವೆ. ಇಡೀ ರಾಷ್ಟ್ರವು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 125ನೇ ಜನ್ಮದಿನವನ್ನು ಆಚರಿಸುತ್ತಿರುವ ಸಮಯದಲ್ಲಿ, ಗ್ರಾನೈಟ್‌ನಿಂದ ಮಾಡಿದ ಅವರ ಭವ್ಯವಾದ ಪ್ರತಿಮೆಯನ್ನು ಇಂಡಿಯಾ ಗೇಟ್‌ನಲ್ಲಿ ಸ್ಥಾಪಿಸಲಾಗುವುದು ಎಂದು ನಮ್ಮೆಲ್ಲರ ನೆಚ್ಚಿನ ಪ್ರಧಾನಿ ಘೋಷಿಸಿದ್ದಾರೆ. ಅಪ್ರತಿಮ ನಾಯಕರೊಬ್ಬರ ಪುತ್ಥಳಿ ನಿರ್ಮಿಸುವುದರ ಬಗ್ಗೆ ಹೇಳಿದ ಅವರಿಗೆ ಭಾರತ ಋಣಿಯಾಗಿದೆ. ನೇತಾಜಿ ಅವರ ಸ್ಮರಣೆಯಲ್ಲಿ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ನೇತಾಜಿ ಅವರ ಹೆಸರಿನ ಉದ್ಯಾನವನ ನಿರ್ಮಿಸಿ ಅವರ ಪುತ್ಥಳಿ ಸ್ಥಾಪಿಸುವ ಮೂಲಕ ಅಪ್ರತಿಮ ವೀರನಿಗೆ ಋಣಿಯಾಗಿದ್ದೇವೆ. ಇನ್ನು ಮುಂದಿನ ನೇತಾಜಿ ಜಯಂತ್ಯೋತ್ಸವದ ವೇಳೆಗೆ ಅವರ ನುಡಿಗಳ- ಸಾಧನೆಗಳ ಬಗ್ಗೆ ಪುಸ್ತಕ ಹೊರತಂದು ಲಕ್ಷಕ್ಕೂ ಅಧಿಕ ಜನತೆಗೆ ಉಚಿತವಾಗಿ ಹಂಚುವ ಕಾರ್ಯ ನಡೆಯಲಿದೆ ಎಂದು ಹೇಳಿದರು.

    ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಸಿ.ಸೋಮಶೇಖರ್ ಮಾತನಾಡಿ, ನೇತಾಜಿ ಅವರ ಮೇಲೆ ಬಹುಮುಖ್ಯವಾಗಿ ಪ್ರಭಾವ ಬೀರಿದವರು ಸ್ವಾಮಿ ವಿವೇಕಾನಂದರು. ಮಹಾತ್ಮ ಗಾಂಧಿ ಅವರಿಗೆ ನೇತಾಜಿ ಅವರ ಅಪ್ರತಿಮ ಶಕ್ತಿಯ ಬಗ್ಗೆ ಅದಮ್ಯ ನಂಬಿಕೆಯಿತ್ತು. ಆದರೆ ಗಾಂಧಿಯವರದ್ದು ಶಾಂತಿಪಥ, ನೇತಾಜಿಯವರದ್ದು ಕ್ರಾಂತಿಪಥ. ಸ್ವಾತಂತ್ರ್ಯ ಗಳಿಸಲು ರಕ್ತವನ್ನು ಬೇಕಿದ್ದರೂ ಕೊಡುತ್ತೇನೆ. ಸ್ವಾತಂತ್ರ‍್ಯ ಪುಕ್ಕಟೆಯಾಗಿ ದೊರಕುವುದಲ್ಲ ಎಂದು ಹೇಳುವುದರ ಮೂಲಕ ದೇಶದ ಜನತೆಯನ್ನು ನೇತಾಜಿ ಬಡಿದೆಬ್ಬಿಸಿದ್ದರು ಎಂದು ನೆನಪಿಸಿಕೊಂಡರು. ಇದನ್ನೂ ಓದಿ: ನೇತಾಜಿ ಜನ್ಮ ದಿನವನ್ನು ರಾಷ್ಟ್ರೀಯ ರಜಾದಿನವಾಗಿ ಘೋಷಿಸಿ: ಮಮತಾ ಬ್ಯಾನರ್ಜಿ

    ಕಾರ್ಯಕ್ರಮದಲ್ಲಿ ನೇತಾಜಿ ಪುತ್ಥಳಿಗೆ ಪುಷ್ಪನಮನ ಸಲ್ಲಿಸಿ, ನಿವೃತ್ತ ಸೈನಿಕರಾದ ಧನಂಜಯ್ ಮತ್ತು ಕೃಷ್ಣಗೌಡರವರಿಗೆ ಸನ್ಮಾನಿಸಲಾಯಿತು. ಕರ್ನಾಟಕ ಗಡಿ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಸಿ.ಸೋಮಶೇಖರ್, ವಿ.ಸೋಮಣ್ಣ ಪ್ರತಿಷ್ಠಾನದ ಕೋಶಾಧ್ಯಕ್ಷ ಡಾ.ನವೀನ್ ಸೋಮಣ್ಣ, ಮಂಡಲ ಬಿ.ಜೆ.ಪಿ.ಅಧ್ಯಕ್ಷ ವಿಶ್ವನಾಥಗೌಡರು, ಹಿರಿಯ ರಾಜಕೀಯ ಮುಖಂಡರು, ಕನ್ನಡ ಪರ ಹೋರಾಟಗಾರ ಪಾಲನೇತ್ರ, ನಿಕಟಪೂರ್ವ ಬಿಬಿಎಂಪಿ ಸದಸ್ಯ ಶಿಲ್ಪ ಶ್ರೀಧರ್, ಶ್ರೀಧರ್, ಯುವಮೋರ್ಚಾ ಕಾರ್ಯಕರ್ತರು ಉಪಸ್ಥಿತರಿದ್ದರು. ಇದನ್ನೂ ಓದಿ: ಸುಭಾಷ್ ಚಂದ್ರ ಬೋಸ್ ದೇಶಕ್ಕೆ ನೀಡಿದ ಕೊಡುಗೆ ಅಪಾರ: ಪ್ರಧಾನಿ ಮೋದಿ

  • ನಿಗದಿತ ಸಮಯದಲ್ಲಿ ಕಾಮಗಾರಿ ಪೂರ್ಣಗೊಳಿಸದಿದ್ರೆ ದಂಡ: ವಿ.ಸೋಮಣ್ಣ ಎಚ್ಚರಿಕೆ

    ನಿಗದಿತ ಸಮಯದಲ್ಲಿ ಕಾಮಗಾರಿ ಪೂರ್ಣಗೊಳಿಸದಿದ್ರೆ ದಂಡ: ವಿ.ಸೋಮಣ್ಣ ಎಚ್ಚರಿಕೆ

    ಬೆಂಗಳೂರು: ಅಧಿಕಾರಿಗಳು, ಗುತ್ತಿಗೆದಾರರು ನಿಗದಿತ ಸಮಯದಲ್ಲಿ ಕಾಮಗಾರಿಗಳನ್ನು ಪೂರ್ಣಗೊಳಿಸದಿದ್ದರೆ ದಂಡ ವಿಧಿಸಲಾಗುವುದು ಎಂದು ವಸತಿ ಸಚಿವ ವಿ.ಸೋಮಣ್ಣ ಎಚ್ಚರಿಕೆ ನೀಡಿದರು.

    ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಡಾ. ರಾಜ್ ಕುಮಾರ್ ವಾರ್ಡ್, ದಾಸರಹಳ್ಳಿ ಮತ್ತು ಹೌಸಿಂಗ್ ಬೋರ್ಡ್‍ನಲ್ಲಿ ವಿವಿಧ ಕಾಮಗಾರಿಗಳ ಪರಿಶೀಲನೆ ಮತ್ತು ಮಾಗಡಿ ರೋಡ್ ಟೋಲ್ ಗೇಟ್‍ನಿಂದ ಸುಮನಹಳ್ಳಿ ಜಂಕ್ಷನ್ ವರಗೆ ಹೈಟೆಕ್ ಮಾದರಿ ರಸ್ತೆ ನಿರ್ಮಾಣ ಕಾಮಗಾರಿ ಗುದ್ದಲಿಪೂಜೆ ನೆರವೇರಿಸಿದರು.

    ನಂತರ ಮಾತನಾಡಿದ ಅವರು, ನಮ್ಮ ಮೇಲೆ ನಂಬಿಕೆ ಇಟ್ಟು ಜನ ಮತ ನೀಡಿರುತ್ತಾರೆ. ಅವರ ನಂಬಿಕೆ, ವಿಶ್ವಾಸಕ್ಕೆ ನ್ಯಾಯ ಒದಗಿಸುವ ಕೆಲಸ ಮಾಡುತ್ತಿದ್ದೇನೆ. ಅವರು ಕಟ್ಟಿರುವ ತೆರಿಗೆ ಹಣ ಸಮರ್ಪಕವಾಗಿ ಉಪಯೋಗಿಸಿ ಮೂಲ ಸೌಕರ್ಯಗಳಾದ ರಸ್ತೆ, ಆರೋಗ್ಯ, ನೀರು, ಬೀದಿದೀಪಗಳ ನಿರ್ಮಾಣ ಮಾಡುತ್ತೇವೆ. ಈಗಾಗಲೇ ಮಾಗಡಿ ರೋಡ್‍ನ ಟೋಲ್ ಗೇಟ್‍ನಿಂದ ಸುಮ್ಮನಹಳ್ಳಿ ಜಂಕ್ಷನ್‍ವರಗೆ (ಚರ್ಚ್ ಸ್ಟ್ರೀಟ್) ಮಾದರಿ ಹೈಟೆಕ್ ರಸ್ತೆ ನಿರ್ಮಾಣಕ್ಕೆ ಭೂಮಿಪೂಜೆ ಮಾಡಲಾಗಿದೆ ಎಂದರು.  ಇದನ್ನೂ ಓದಿ: ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡ ರತನ್ ಟಾಟಾ

    ದಾಸರಹಳ್ಳಿಯಲ್ಲಿ 200 ಹಾಸಿಗೆಯ ಸಾಮರ್ಥ್ಯವುಳ್ಳ ಉಚಿತ ಚಿಕಿತ್ಸೆ ನೀಡುವ ಆಸ್ಪತ್ರೆಯನ್ನು ಮುಂದಿನ ತಿಂಗಳು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಲೋಕಾರ್ಪಣೆ ಮಾಡಲಿದ್ದಾರೆ. ಇನ್ನು ಮೂರು ತಿಂಗಳ ಅವಧಿಯಲ್ಲಿ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಕೈಗೊಂಡ ವಿವಿಧ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುವುದು ಎಂದರು. ಇದನ್ನೂ ಓದಿ: 4 ಬಾರಿ ಕೋವಿಡ್‌ ಲಸಿಕೆ ಪಡೆದಿದ್ದ ಮಹಿಳೆಗೆ ಕೊರೊನಾ ಪಾಸಿಟಿವ್‌

    ಗೋವಿಂದರಾಜನಗರ ಮಂಡಲ ಬಿಜೆಪಿ ಅಧ್ಯಕ್ಷರಾದ ವಿಶ್ವನಾಥಗೌಡ, ಮಾಜಿ ಮಹಾನಗರ ಪಾಲಿಕೆ ಸದಸ್ಯರಾದ ಕೆ.ಉಮೇಶ್ ಶೆಟ್ಟಿ, ರೂಪಲಿಂಗೇಶ್ವರ್, ಜಯರತ್ನ, ಮತ್ತು ಬಿಜೆಪಿ ಮುಖಂಡರಾದ ಹೆಚ್.ರಮೇಶ್, ಡೊಡ್ಡವೀರಯ್ಯ, ಶ್ರೀಧರ್ ಮತ್ತು ವಿಶೇಷ ಆಯುಕ್ತರಾದ ದೀಪಕ್, ಮುಖ್ಯ ಅಭಿಯಂತರಾದ ಪ್ರಹ್ಲಾದ್ ಪಾಲ್ಗೊಂಡಿದ್ದರು.

  • ಬೊಮ್ಮಾಯಿ ನಾಯಕತ್ವದಲ್ಲೇ 2023ರ ಚುನಾವಣೆ: ವಿ.ಸೋಮಣ್ಣ

    ಬೊಮ್ಮಾಯಿ ನಾಯಕತ್ವದಲ್ಲೇ 2023ರ ಚುನಾವಣೆ: ವಿ.ಸೋಮಣ್ಣ

    ಬೆಳಗಾವಿ: 2023 ರ ಚುನಾವಣೆ ಬೊಮ್ಮಾಯಿ ನಾಯಕತ್ವದಲ್ಲೇ ನಡೆಯುತ್ತದೆ. ಸರ್ಕಾರ ತೆಗೆಯಬೇಕೆಂಬ ಹುಚ್ಚರಿದ್ದಾರೆ. ಆದರೆ ಈ ಬಗ್ಗೆ ಕ್ರಮವಹಿಸಲಾಗುತ್ತದೆ ಎಂದು ಹೇಳುವ ಮೂಲಕ ನಾಯಕತ್ವ ಬದಲಾವಣೆ ಕನಸುಕಾಣುತ್ತಿದ್ದ ನಾಯಕರಿಗೆ ವಸತಿ ಸಚಿವ ವಿ. ಸೋಮಣ್ಣ ತಿರುಗೇಟು ನೀಡಿದ್ದಾರೆ.

    ಬೆಳಗಾವಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಂಪುಟ ಪುನರ್ ರಚನೆ ಎಲ್ಲವೂ ಸಿಎಂ ಪರಮಾಧಿಕಾರ. 2023 ರ ಚುನಾವಣೆ ಬೊಮ್ಮಾಯಿ ನಾಯಕತ್ವದಲ್ಲಿ ನಡೆಯುತ್ತದೆ. ಗೊಂದಲ ಇದ್ದರೆ ಅದು ಮಾಧ್ಯಮದಲ್ಲಿ, ನಮ್ಮಲ್ಲಿ ಅಲ್ಲ. ನಮ್ಮ ಪಕ್ಷ ಅದಕ್ಕೆ ಮನ್ನಣೆ ಕೊಡಲ್ಲ. ತಿರುಕನ ಕನಸು ಕಾಣುವ ಜನರಿದ್ದಾರೆ. ಬಸವರಾಜ್ ಬೊಮ್ಮಾಯಿ 4 ತಿಂಗಳಲ್ಲಿ ಒಳ್ಳೆಯ ಕೆಲಸ ಮಾಡಿದ್ದಾರೆ. ಸರ್ಕಾರ ತೆಗೆಯಬೇಕೆಂಬ ಹುಚ್ಚರಿದ್ದಾರೆ. ಅಂಥವರ ವಿರುದ್ಧ ಪಕ್ಷ ಕ್ರಮವಹಿಸುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಇನ್ಮುಂದೆ 21 ವಯಸ್ಸಿನವರೂ ʻಎಣ್ಣೆʼ ಹೊಡಿಯಬಹುದು – ಹರಿಯಾಣ

    ಇದೇ ವೇಳೆ ಮತಾಂತರ ನಿಷೇಧ ಮಸೂದೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಪರಿಸ್ಥಿತಿ ಏನು ಎನ್ನುವುದಕ್ಕಿಂತ ಏನಿದೆ ಎನ್ನುವ ಬಗ್ಗೆ ಯೋಚಿಸಬೇಕು. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಸಚಿವ ಸಂಪುಟದಲ್ಲಿ ಮತಾಂತರ ಮಸೂದೆ ಜಾರಿಗೆ ತರಲು ಅನುಮತಿ ನೀಡಿದ್ದಾರೆ. ನಾವು ಕೆಲವೊಂದು ಮಾರ್ಪಾಡು ಮಾಡಿದ್ದೇವೆ ಅಷ್ಟೇ. ಇಂತಹ ಅವ್ಯವಸ್ಥೆಗಳು ಸರಿಯಾಗಬೇಕು ಎಂದು ಈ ಕಾಯ್ದೆಯಲ್ಲಿ ತರಲಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಗೋಣಿಚೀಲದಲ್ಲಿ ನವಜಾತ ಶಿಶುವಿನ ಶವ ಪತ್ತೆ – ತಾಯಿ, ಪ್ರಿಯಕರನ ಬಂಧನ

    ಕಾನೂನು ಸಚಿವ ಮಾಧುಸ್ವಾಮಿ ಈ ಬಗ್ಗೆ ಈಗಾಗಲೇ ಮಾಹಿತಿ ನೀಡಿದ್ದಾರೆ. ನಮಗೆ ಎಲ್ಲಕ್ಕಿಂತ ದೊಡ್ಡದು ರಾಜ್ಯ. ರಾಜ್ಯಕ್ಕಿಂತ ದೊಡ್ಡದು ದೇಶ. ದೇಶಕ್ಕಿಂತ ದೊಡ್ಡದು ಸಮಾಜ. ಸಮಾಜದಲ್ಲಿ ಮತಾಂತರ ಕಾಯ್ದೆ ತಂದಿರುವುದು ಒಳ್ಳೆಯದಕ್ಕಾಗಿ. ಅವರು ತಂದಿರುವುದನ್ನು ನಾವು ಒಪ್ಪಿಕೊಂಡಿದ್ದೇವೆ. ನೀವು ಮಾಡಿರುವುದು ಸಮಂಜಸವಾಗಿದೆ. ಚರ್ಚೆ ಇಲ್ಲದೆ ಕಾಯ್ದೆ ಒಪ್ಪಿಕೊಂಡರೆ ಸ್ವಲ್ಪ ಬೆಲೆ ಇರುತ್ತದೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

  • ಕೋವಿಡ್‍ಗೆ ಬಲಿಯಾದ ಕುಟುಂಬಗಳಿಗೆ ಆತ್ಮಸ್ಥೈರ್ಯ ತುಂಬೋಣ: ವಿ.ಸೋಮಣ್ಣ

    ಕೋವಿಡ್‍ಗೆ ಬಲಿಯಾದ ಕುಟುಂಬಗಳಿಗೆ ಆತ್ಮಸ್ಥೈರ್ಯ ತುಂಬೋಣ: ವಿ.ಸೋಮಣ್ಣ

    ಬೆಂಗಳೂರು: ಕೋವಿಡ್‍ನಿಂದ ಆದ ಆಘಾತ ಹಾಗೂ ನೋವಿನಿಂದ ನಾವಿನ್ನೂ ಹೊರಬರಲು ಸಾಧ್ಯವಾಗುತ್ತಿಲ್ಲ. ಕೋವಿಡ್ ಸಾಂಕ್ರಾಮಿಕದಿಂದ ಮೃತರಾದವರ ಕುಟುಂಬಸ್ಥರಿಗೆ ಧೈರ್ಯ ತುಂಬುವ ಮಹತ್ತರ ಜವಾಬ್ದಾರಿ ನಮ್ಮ ಮೇಲಿದೆ. ಈ ನಿಟ್ಟಿನಲ್ಲಿ ಗೋವಿಂದರಾಜನಗರ ಕ್ಷೇತ್ರದ ವ್ಯಾಪ್ತಿಯಲ್ಲಿ ಕೋವಿಡ್ ನಿಂದ ಮೃತರಾದ ಕುಟುಂಬಗಳಿಗೆ ಇಂದು ಪರಿಹಾರ ಚೆಕ್ ಗಳನ್ನು ಹಾಗೂ ಮಂಜೂರಾತಿ ಪತ್ರಗಳನ್ನು ವಿತರಿಸಲಾಗುತ್ತಿದೆ ಎಂದು ವಸತಿ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವರು ಹಾಗೂ ಗೋವಿಂದರಾಜನಗರ ಶಾಸಕರಾದ ವಿ.ಸೋಮಣ್ಣ ಹೇಳಿದರು.

    ನಗರಭಾವಿಯ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ರಂಗಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮನೆಯ ಸದಸ್ಯರನ್ನು ಕಳೆದುಕೊಂಡ ಕುಟುಂಬದವರು ಸಾಕಷ್ಟು ನೋವಿನಲ್ಲಿ ಇದ್ದಾರೆ. ಇಂಥಹ ಕುಟುಂಬಗಳಿಗೆ ಆತ್ಮಸ್ಥೈರ್ಯ ತುಂಬುವುದು ಮತ್ತು ಪರಿಹಾರ ನೀಡುವುದು ನಮ್ಮ ಕರ್ತವ್ಯ. ಆದರೆ ಸದಸ್ಯರನ್ನು ಕಳೆದುಕೊಂಡವರು ಈ ನೋವನ್ನು ಮರೆಯಲು ಸಾಧ್ಯವಿಲ್ಲ ಎಂದು ಸಚಿವರು ಭಾವುಕರಾದರು.

    ಕಳೆದ ವಾರ ಕ್ಷೇತ್ರದ ಮುನ್ನೂರಕ್ಕೂ ಅಧಿಕ ಕುಟುಂಬಗಳಿಗೆ ಪರಿಹಾರ ಚೆಕ್ ಗಳನ್ನು ವಿತರಿಸಲಾಗಿದೆ. ದರಮುಂದುವರೆದ ಭಾಗವಾಗಿ ಇಂದು ನೂರಕ್ಕೂ ಅಧಿಕ ಕುಟುಂಬಗಳಿಗೆ ಪರಿಹಾರ ಚೆಕ್ ವಿತರಿಸುವ ಮೂಲಕ ಅವರಿಗೆ ಸ್ಥೈರ್ಯ ತುಂಬಲಾಗುತ್ತಿದೆ ಎಂದು ಹೇಳಿದರು. ಇದನ್ನೂ ಓದಿ:  ಸರ್ಕಾರಿ ಶಾಲೆಯಲ್ಲಿ ಮೊಟ್ಟೆ ನೀಡುತ್ತಿರುವುದರಿಂದ ಮಗನ ಟಿಸಿ ಪಡೆದ ತಂದೆ

    ಎಪಿಎಲ್ ಕಾರ್ಡ್ ಹೊಂದಿರುವವರಿಗೆ 50 ಸಾವಿರ ರೂ. ಹಾಗೂ ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ 1 ಲಕ್ಷ ರೂ.ಗಳ ಪರಿಹಾರ ಚೆಕ್, ಹಾಗೂ 50 ಸಾವಿರ ರೂ.ಗಳನ್ನು ನೇರವಾಗಿ ಬ್ಯಾಂಕ್ ಖಾತೆಗಳಿಗೆ ಗಳನ್ನು ವರ್ಗಾಯಿಸಲಾಗುತ್ತದೆ. ಕೋವಿಡ್ ಸಂಕಷ್ಟದ ಕಾಲದಲ್ಲಿ ವಿಶ್ವಕ್ಕೆ ಮಾದರಿಯಾಗಿ ನಿಂತವರು ಪ್ರಧಾನಿ ಮೋದಿ. ಅವರ ನಾಯಕತ್ವದಲ್ಲಿ ಕ್ಲಿಷ್ಟಕರ ಪರಿಸ್ಥಿತಿಯನ್ನು ನಾವೆಲ್ಲ ನಿಭಾಯಿಸಿದ್ದೇವೆ. ಕೋವಿಡ್ ಮೂರನೆಯ ಅಲೆಯ ಹಿನ್ನೆಲೆಯಲ್ಲಿ ನಾವೆಲ್ಲರೂ ಎಚ್ಚರಿಕೆಯಿಂದಿರೋಣ ಎಂದರು.

    ಕ್ಷೇತ್ರದ ಜನರ ಆರೋಗ್ಯ ಸುರಕ್ಷತೆಯ ದೃಷ್ಟಿಯಿಂದ ಸಂಗೊಳ್ಳಿ ರಾಯಣ್ಣ ಡಯಾಲಿಸಿಸ್ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸೇರಿದಂತೆ ಅನೇಕ ಆಸ್ಪತ್ರೆಗಳ ನಿರ್ಮಾಣ ಕಾರ್ಯವಾಗಿದೆ. ನಾಯಂಡಹಳ್ಳಿಯಲ್ಲಿ ನಿರ್ಮಾಣವಾಗುತ್ತಿರುವ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಇನ್ನೇನು ಕೆಲವೇ ದಿನಗಳಲ್ಲಿ ಲೋಕಾರ್ಪಣೆಯಾಗಲಿದೆ. ಹೀಗಾಗಿ ಯಾವುದಕ್ಕೂ ಭಯಪಡದೇ ಕೋವಿಡ್ ಮುಂಜಾಗ್ರತಾ ಕ್ರಮಗಳನ್ನು ಪಾಲಿಸೋಣ. ಅಲ್ಲದೇ ಕಡ್ಡಾಯವಾಗಿ ಕೋವಿಡ್ ಲಸಿಕೆ ಪಡೆಯಿರಿ ಎಂದು ತಿಳಿಸಿದರು.

    ಕಾರ್ಯಕ್ರಮದಲ್ಲಿ ಬಿಬಿಎಂಪಿ ಮಾಜಿ ಸದಸ್ಯರಾದ ಮೋಹನ್ ಕುಮಾರ್, ಶ್ರೀಧರ್, ದಾಸೇಗೌಡ, ಬಿಜೆಪಿ ಯುವ ಮುಖಂಡರಾದ ಡಾ.ಅರುಣ್ ಸೋಮಣ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.