Tag: V.Somanna

  • ಸಿದ್ದಗಂಗೆ, ಆದಿ ಚುಂಚನಗಿರಿ ಗುರುಗಳ ಪರಮ ಶಿಷ್ಯ, ಅಭಿವೃದ್ಧಿ ಜಪ ಮಾಡೋನು: ಸೋಮಣ್ಣ

    ಸಿದ್ದಗಂಗೆ, ಆದಿ ಚುಂಚನಗಿರಿ ಗುರುಗಳ ಪರಮ ಶಿಷ್ಯ, ಅಭಿವೃದ್ಧಿ ಜಪ ಮಾಡೋನು: ಸೋಮಣ್ಣ

    ಚಾಮರಾಜನಗರ: ನನಗೆ ಸಿ.ಡಿ-ಪಾಡಿ ಯಾವುದೂ ಗೊತ್ತಿಲ್ಲ. ನಾನು ಸಿದ್ದಗಂಗೆ, ಆದಿ ಚುಂಚನಗಿರಿ ಗುರುಗಳ ಪರಮ ಶಿಷ್ಯ, ಈ ಬಗ್ಗೆ ನಂಗೆ ಏನೂ ಗೊತ್ತಿಲ್ಲ. ಇದರಲ್ಲಿ ನಾನು ಎಲ್ ಬೋರ್ಡ್ ಎಂದು ಸಚಿವ ವಿ. ಸೋಮಣ್ಣ (V Somanna) ಹೇಳಿದ್ದಾರೆ.

    ಸಿಡಿ ರಾಜಕಾರಣ (CD Politics) ದ ಬಗ್ಗೆ ಚಾಮರಾಜನಗರದಲ್ಲಿ ಪ್ರತಿಕ್ರಿಯಿಸಿದ ಅವರು, ನೀವು ಯಾವ ಪ್ರಶ್ನೆ ಯಾರಿಗೆ ಕೇಳಬೇಕು ಅಂತಾ ಕೇಳ್ದೆ ನನ್ನನ್ನು ಕೇಳಿದ್ರೆ ಹೇಗೆ? ರಾಂಗ್ ಡೈರಕ್ಷನ್‍ನಲ್ಲಿ ಕೇಳಿದ್ರೆ ನಾನೇನು ಹೇಳಲಿ? ನಾನು ಅಭಿವೃದ್ಧಿ ಜಪ ಮಾಡೋನು, ನನ್ನ ಕೇಳಿದ್ರೆ ಸುಖವಿಲ್ಲ, ದಯಮಾಡಿ ಯಾರ್ಯಾರೂ ಸಂಬಂಧಪಟ್ಟೋರು ಇದ್ದಾರೋ ಅವರನ್ನು ಕೇಳಿ ಮಾಹಿತಿ ತಗೊಳ್ಳಿ ಎಂದರು.

    ತಮ್ಮ ರಕ್ತದ ಕಣಕಣದಲ್ಲೂ ಕಾಂಗ್ರೆಸ್ ಇದೆಯೆಂಬ ಎಚ್.ವಿಶ್ವನಾಥ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ವಿಶ್ವನಾಥ್ (H Vishwanath) ಬುದ್ದಿಜೀವಿ, ಹಳ್ಳಿ ಹಕ್ಕಿ, ಅವರಿಗೆ ಒಳ್ಳೆಯದಾಗಲಿ ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ: ಸಿದ್ದರಾಮಯ್ಯ ಈ ಬಾರಿಯೂ ಗೆಲ್ಲಲಿ ಅಂತ ಆಶಿಸುವೆ: ಸುಧಾಕರ್

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಸಿದ್ದರಾಮಯ್ಯ ಹೃದಯದಿಂದ ಮಾತನಾಡ್ತಿಲ್ಲ, ಗಂಟಲಿನಿಂದ ಮಾತನಾಡ್ತಿದ್ದಾರೆ: ಸೋಮಣ್ಣ

    ಸಿದ್ದರಾಮಯ್ಯ ಹೃದಯದಿಂದ ಮಾತನಾಡ್ತಿಲ್ಲ, ಗಂಟಲಿನಿಂದ ಮಾತನಾಡ್ತಿದ್ದಾರೆ: ಸೋಮಣ್ಣ

    ಚಾಮರಾಜನಗರ: ಸಿದ್ದರಾಮಯ್ಯ (Siddaramaiah) ಹೃದಯದಿಂದ ಮಾತನಾಡುತ್ತಿಲ್ಲ, ಗಂಟಲಿನಿಂದ ಇತ್ತೀಚೆಗೆ ಮಾತನಾಡುತ್ತಿದ್ದಾರೆ ಎಂದು ಸಚಿವ ವಿ ಸೋಮಣ್ಣ (V Somanna) ಕಿಡಿಕಾರಿದರು.

    ಅಲಿಬಾಬಾ ಮತ್ತು ನಲವತ್ತು ಮಂದಿ ಕಳ್ಳರು ಎಂಬ ಸಿದ್ದರಾಮಯ್ಯ ಟೀಕೆ ವಿಚಾರವಾಗಿ ಚಾಮರಾಜನಗರದಲ್ಲಿ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಅವರ ಭಾಷೆ ಅವರ ವ್ಯಕ್ತಿತ್ವ ತೋರಿಸುತ್ತದೆ. ಪದೇ ಪದೇ ಅವರ ಬಗ್ಗೆ ಮಾತನಾಡುವುದಕ್ಕೆ ಹೋಗಲ್ಲ. ಅವರ ಬಗ್ಗೆ ಮಾತಾಡಿದರೆ ಎಲ್ಲೆಲ್ಲಿಗೋ ಹೋಗಿಬಿಡುತ್ತದೆ. ಅವರ ಬಗ್ಗೆ ನನಗೆ ಇನ್ನೂ ಗೌರವವಿದೆ. ಅವರು ಹೃದಯದಿಂದ ಮಾತಾಡುತ್ತಿಲ್ಲ, ಗಂಟಲಿನಿಂದ ಇತ್ತೀಚೆಗೆ ಮಾತಾಡುತ್ತಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ತಾಲಿಬಾನ್‌ನ್ನು 21ನೇ ಶತಮಾನಕ್ಕೆ ತರಲು ಸಹಾಯ ಮಾಡಿ – ಮುಸ್ಲಿಂ ಮಹಿಳೆ ಸಲಹೆ

    ಕಾಂಗ್ರೆಸ್‌ನ ಭರವಸೆಗಳು ಭರವಸೆಗಳಾಗಿಯೇ ಉಳಿಯುತ್ತವೆ. ಕಾಂಗ್ರೆಸ್ (Congress) ಪ್ರಜಾಧ್ವನಿ ಯಾತ್ರೆ ಹಾಗೂ ಭರವಸೆಗಳ ಬಗ್ಗೆ ವ್ಯಂಗ್ಯವಾಡಿದರು. ಅವರದ್ದೇ ಸರ್ಕಾರಗಳಿರುವ ರಾಜ್ಯಗಳಲ್ಲೇಕೆ ಜಾರಿಗೊಳಿಸಿಲ್ಲ. ಎಸ್ಕಾಂ ನೌಕರರಿಗೆ ನೀಡುತ್ತಿದ್ದ ಉಚಿತ ವಿದ್ಯುತ್ ಹಿಂತೆಗೆದುಕೊಂಡಿದ್ದು ಯಾರು?. 70 ವರ್ಷ ಆಳ್ವಿಕೆ ಮಾಡಿದವರಿಗೆ 5-10 ವರ್ಷ ತಡೆದುಕೊಳ್ಳಲು ಆಗುತ್ತಿಲ್ಲ. ಅವರು ಸರಿಯಾಗಿ ಆಡಳಿತ ಮಾಡಿದ್ದರೇ ದೇಶದ ಸ್ಥಿತಿ ಯಾಕೆ ಹೀಗಿರುತ್ತಿತ್ತು?. ಭರವಸೆಗಳ ಈಡೇರಿಕೆಗೆ ನಮ್ಮ ಆದಾಯ ಏನು ಸಂಪನ್ಮೂಲ ಏನು?. ಎಲ್ಲವನ್ನೂ ಚಿಂತನೆ ಮಾಡಬೇಕಲ್ವೆ? ಎಂದು ತಿಳಿಸಿದರು. ಇದನ್ನೂ ಓದಿ: ಯಡಿಯೂರಪ್ಪ ಬಗ್ಗೆ ನನ್ನನ್ನು ಇನ್ಮೇಲೆ ಏನು ಕೇಳಬೇಡಿ: ಯತ್ನಾಳ್‌

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ವಂದೇ ಭಾರತ್, ಶತಾಬ್ದಿ ಸೂಪರ್‌ಫಾಸ್ಟ್ ರೈಲುಗಳ ವೇಳಾಪಟ್ಟಿ ಬದಲಾವಣೆಗೆ ಪರಿಶೀಲಿಸಿ ಕ್ರಮ- ಸೋಮಣ್ಣ

    ವಂದೇ ಭಾರತ್, ಶತಾಬ್ದಿ ಸೂಪರ್‌ಫಾಸ್ಟ್ ರೈಲುಗಳ ವೇಳಾಪಟ್ಟಿ ಬದಲಾವಣೆಗೆ ಪರಿಶೀಲಿಸಿ ಕ್ರಮ- ಸೋಮಣ್ಣ

    ಬೆಳಗಾವಿ: ವಂದೇ ಭಾರತ್ ಎಕ್ಸ್‌ಪ್ರೆಸ್‌ (Vande Bharat Express) ಹಾಗೂ ಶತಾಬ್ದಿ ಸೂಪರ್ ಫಾಸ್ಟ್ ರೈಲುಗಳ (Shatabdi Express) ವೇಳಾಪಟ್ಟಿ ಬದಲಾವಣೆಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ವಿ.ಸೋಮಣ್ಣ (V Somanna) ತಿಳಿಸಿದರು.

    ರೈಲುಗಳ ವೇಳಾಪಟ್ಟಿಯ (Train Schedules) ಬಗ್ಗೆ ಪರಿಶೀಲಿಸಿ ಕ್ರಮ ವಹಿಸುವಂತೆ ರೈಲ್ವೆ ಮಂತ್ರಾಲಯವನ್ನು ಪತ್ರ ಮುಖೇನ ಕೋರಲಾಗಿದೆ. ರೈಲ್ವೆ ಅಧಿಕಾರಿಗಳು ಇದು ಕಷ್ಟ ಅನ್ನುತ್ತಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿಗಳು ಹಾಗೂ ರೈಲ್ವೆ ಸಚಿವರೊಂದಿಗೆ ಚರ್ಚಿಸಿ ಜನತೆಗೆ ಅನುಕೂಲ ಕಲ್ಪಿಸಿಕೊಡಲಾಗುವುದು ಎಂದು ಸಚಿವರು ತಿಳಿಸಿದರು. ಇದನ್ನೂ ಓದಿ: ಮದ್ಯಕ್ಕೆ ದಾಸರಾದ ದಂಪತಿ – ಮಗು ಸಾಕಲಾಗದೇ ಬಾಲಮಂದಿರದಲ್ಲಿ ಬಿಟ್ಟುಹೋದ್ರು

    ವಿಧಾನ ಪರಿಷತ್ತಿನಲ್ಲಿ (Legislative Council) ಸದಸ್ಯ ಮರಿತಿಬ್ಬೇಗೌಡ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಸಚಿವರು, ಮಂಡ್ಯದಲ್ಲಿ ಈ ಎರಡೂ ರೈಲುಗಳಿಗೂ ಸಹ ನಿಲುಗಡೆ ಒದಗಿಸಬೇಕೆಂಬ ಸದಸ್ಯರ ಕೋರಿಕೆಯ ಬಗ್ಗೆಯೂ ಅಗತ್ಯ ಕ್ರಮಕೈಗೊಳ್ಳುವಂತೆ ಮಂತ್ರಾಲಯಕ್ಕೆ ಪತ್ರದ ಮುಖೇನ ತಿಳಿಸಲಾಗಿದೆ ಎಂದು ವಿವರಿಸಿದರು. ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿ ನನಗೆ, ನೇಹಾಗೆ ಕಾಂಪಿಟೇಶನ್ ಇತ್ತು: ಅನುಪಮಾ

    ವಂದೇ ಭಾರತ್  ಎಕ್ಸ್‌ಪ್ರೆಸ್‌ ರೈಲು ಸೇವೆಯು ಆರಂಭವಾದ ನಂತರ ಶತಾಬ್ದಿ ಹಾಗೂ ವಂದೇ ಭಾರತ್ ಎರಡು ರೈಲುಗಳಲ್ಲೂ ಬಹುತೇಕ ಪೂರ್ಣ ಪ್ರಮಾಣದಲ್ಲಿ ಪಯಾಣಿಕರು ಪ್ರಯಾಣಿಸುತ್ತಿದ್ದಾರೆ. ಆದ್ದರಿಂದ ಯಾವುದೇ ಆರ್ಥಿಕ ನಷ್ಟ ಉಂಟಾಗಿಲ್ಲ ಎಂದು ನೈರುತ್ಯ ರೈಲ್ವೆ ತಿಳಿಸಿರುವುದಾಗಿ ಸಚಿವರು ಸ್ಪಷ್ಟಪಡಿಸಿದರು.

    Live Tv
    [brid partner=56869869 player=32851 video=960834 autoplay=true]

  • ನಾಗ ಯಾರು, ತಿಮ್ಮ ಯಾರು, ಬೊಮ್ಮಾ ಯಾರು ನನಗೆ ಗೊತ್ತಿಲ್ಲ: ಸೋಮಣ್ಣ ಸ್ಪಷ್ಟನೆ

    ನಾಗ ಯಾರು, ತಿಮ್ಮ ಯಾರು, ಬೊಮ್ಮಾ ಯಾರು ನನಗೆ ಗೊತ್ತಿಲ್ಲ: ಸೋಮಣ್ಣ ಸ್ಪಷ್ಟನೆ

    ಬೆಂಗಳೂರು: ವಿಲ್ಸನ್ ಗಾರ್ಡನ್ ನಾಗ (Wilson Garden Naga) ಯಾರು ಅಂತಾನೇ ನಮಗೆ ಗೊತ್ತಿಲ್ಲ. ನಾನು ಅವನನ್ನು ಭೇಟಿ ಆಗಿಲ್ಲ ಅಂತ ವಸತಿ ಸಚಿವ ಸೋಮಣ್ಣ (V.Somanna) ಸ್ಪಷ್ಟಪಡಿಸಿದ್ದಾರೆ.

    ನಿನ್ನೆ ರಾತ್ರಿ ಸಚಿವ ಸೋಮಣ್ಣರನ್ನು ನಟೋರಿಯಸ್ ರೌಡಿ ವಿಲ್ಸನ್ ಗಾರ್ಡನ್ ನಾಗ ಭೇಟಿ ಮಾಡಿದ್ದ ಎಂಬ ಪ್ರಕರಣಕ್ಕೆ ಪ್ರತಿಕ್ರಿಯೆ ನೀಡಿದ ಸೋಮಣ್ಣ, ನನಗೆ ವಿಲ್ಸನ್ ಗಾರ್ಡನ್ ನಾಗ ಯಾರು ಅಂತ ಗೊತ್ತೇ ಇಲ್ಲ. ನಾನು ನಾಗನನ್ನು ಭೇಟಿಯಾಗಿಲ್ಲ. ಒಂದೇ ಒಂದೂ ನಿಮಿಷವೂ ನಾನು ಅವನನ್ನು ನೋಡಿಲ್ಲ. ನಿತ್ಯ ಸಾವಿರಾರು ಜನರು ನನ್ನ ಭೇಟಿಗೆ ಬರುತ್ತಾರೆ. ನಾಗ ಯಾರು, ತಿಮ್ಮ ಯಾರು ಬೊಮ್ಮಾ ಯಾರು ನನಗೆ ಗೊತ್ತಿಲ್ಲ ಎಂದರು. ಇದನ್ನೂ ಓದಿ: ನಾವು ಯಾವುದೇ ರೌಡಿಗಳನ್ನು ಸೇರಿಸಿಕೊಂಡಿಲ್ಲ, ಪ್ರೋತ್ಸಾಹ ನೀಡಿಲ್ಲ: ಬೊಮ್ಮಾಯಿ

    ನನ್ನ ಜೀವನ ತೆರದ ಪುಸ್ತಕ. ನಾನು ಯಾವತ್ತು ಬೇರೆ ಕೆಲಸಗಳನ್ನು ಮಾಡಿಲ್ಲ. 55 ವರ್ಷಗಳಿಂದ ನಾನು ರಾಜಕೀಯ ಮಾಡ್ತಿದ್ದೇನೆ. 11 ಚುನಾವಣೆ ಎದುರಿಸಿದ್ದೇನೆ. ಯಾರು ಬರುತ್ತಾರೆ ಯಾರು ಹೋಗುತ್ತಾರೆ ನನಗೆ ಗೊತ್ತಿರಲ್ಲ. ಉತ್ತಮವಾಗಿ ಜೀವನ ಮಾಡಿಕೊಂಡು ಬಂದಿದ್ದೇನೆ. ನನ್ನ ವಯಸ್ಸಿಗೆ ಬೆಲೆ ಕೊಡಬೇಕು. ಹೀಗೆಲ್ಲ ಮಾಡಿದ್ರೆ ಮಾನಸಿಕವಾಗಿ ನನಗೆ ನೋವಾಗುತ್ತೆ. ಯಾವುದೇ ವ್ಯವಹಾರ ನನಗೆ ವಿಲ್ಸನ್ ಗಾರ್ಡನ್ ನಾಗನ ಜೊತೆ ಇಲ್ಲ. ನಾನು ಅವರನ್ನು ನೋಡಿಯೂ ಇಲ್ಲ. ಮಾತು ಆಡಿಸಿಲ್ಲ. ವಿಲ್ಸನ್ ಗಾರ್ಡನ್ ನಾಗ ಯಾರು ಅಂತಾನೂ ನನಗೆ ಗೊತ್ತಿಲ್ಲ ಅಂತ ಸ್ಪಷ್ಟಪಡಿಸಿದರು. ಇದನ್ನೂ ಓದಿ: ಬೆಂಗ್ಳೂರಿನ ಇತಿಹಾಸದಲ್ಲೇ ಫಸ್ಟ್ ಟೈಮ್ ಎಸ್‍ಪಿ ರೋಡ್ ಬಂದ್ – ಡಿ.13ಕ್ಕೆ ವಿಧಾನಸೌಧಕ್ಕೆ ವರ್ತಕರ ಮೆರವಣಿಗೆ

    Live Tv
    [brid partner=56869869 player=32851 video=960834 autoplay=true]

  • ದೇವೇಗೌಡರು ಸುಳ್ಳುಹೇಳ್ತಾರೆ ಅಂದ್ರೆ ನಾನು ಸುಳ್ಳು ಹೇಳ್ತಿನಿ ಅಂತ ಅರ್ಥ: ವಿ.ಸೋಮಣ್ಣ ತಿರುಗೇಟು

    ದೇವೇಗೌಡರು ಸುಳ್ಳುಹೇಳ್ತಾರೆ ಅಂದ್ರೆ ನಾನು ಸುಳ್ಳು ಹೇಳ್ತಿನಿ ಅಂತ ಅರ್ಥ: ವಿ.ಸೋಮಣ್ಣ ತಿರುಗೇಟು

    ರಾಮನಗರ: ನಾನು ಹೆಚ್.ಡಿ.ದೇವೇಗೌಡರ (H.D Devegowda) ಗರಡಿಯಲ್ಲಿ ಬೆಳೆದವನು. ದೇವೇಗೌಡರು ಸುಳ್ಳುಹೇಳ್ತಾರೆ ಅಂದ್ರೆ ನಾನು ಸುಳ್ಳು ಹೇಳ್ತಿನಿ ಅಂತ ಅರ್ಥ ಎಂದು ಸಚಿವ ವಿ.ಸೋಮಣ್ಣ (V.Somanna) ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ (H.D Kumaraswamy) ಆರೋಪಕ್ಕೆ ತಿರುಗೇಟು ನೀಡಿದ್ದಾರೆ.

    ಚನ್ನಪಟ್ಟಣ ತಾಲೂಕಿಗೆ 3 ಸಾವಿರ ಮನೆ ಮಂಜೂರು ಮಾಡಿದ ವಿಚಾರ ಸಂಬಂಧ ವಸತಿ ಸಚಿವ ಸುಳ್ಳು ಸೋಮಣ್ಣ ಎಂಬ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ಕನಕಪುರದ ಬಿಳಿದಾಳೆ ಗ್ರಾಮದಲ್ಲಿ ವಿ.ಸೋಮಣ್ಣ ತಿರುಗೇಟು ನೀಡಿದ್ದಾರೆ. ಚನ್ನಪಟ್ಟಣದಲ್ಲಿ ಪ್ರವಾಹದಿಂದಾಗಿ ಸಾಕಷ್ಟು ಮನೆ ಹಾನಿಯಾಗಿದೆ. ಈ ಕುರಿತು ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಪತ್ರ ಬರೆದಿದ್ದರು. ಹಾಗಾಗಿ ವಸತಿ ಇಲಾಖೆ ಮನೆ ಮಂಜೂರು ಮಾಡಿದೆ. ನಾನು ಈಗಾಗಲೇ ಚನ್ನಪಟ್ಟಣಕ್ಕೆ ಸಾಕಷ್ಟು ಮನೆಗಳನ್ನು ಕೊಟ್ಟಿದ್ದೇನೆ. ಇನ್ನೂ ಕೊಡ್ತೇನೆ. ಆದರೆ ಕುಮಾರಸ್ವಾಮಿ ಎರಡು ಬಾರಿ ಸಿಎಂ ಆಗಿದ್ದವರು, ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಬಂಜಾರ ಸಮುದಾಯದ ಜನರನ್ನು ಮತಾಂತರ ಮಾಡಲಾಗುತ್ತಿದೆ: ಪಿ. ರಾಜೀವ್

    ನಾನು ಕುಮಾರಸ್ವಾಮಿ ಮುಖ ನೋಡಿ ಮಾತನಾಡಲ್ಲ. ನಮ್ಮನ್ನು ಬೆಳೆಸಿದವರು ದೇವೇಗೌಡರು. ನಾನು ಸಂಸ್ಕಾರದಿಂದ ಬಂದಿದ್ದೇನೆ. ಸಂಸ್ಕಾರದಿಂದ ಇದ್ದೇನೆ. ಕುಮಾರಸ್ವಾಮಿ ನಾಲಿಗೆ ಬಿಗಿಹಿಡಿದು ಮಾತನಾಡಲಿ. ಇನ್ನೊಬ್ಬರ ಬಗ್ಗೆ ಮಾತನಾಡುವಾಗ ಸ್ವಲ್ಪ ಗಾಂಭೀರ್ಯದಿಂದ ನಡೆದುಕೊಳ್ಳಲಿ. ಮಾಜಿ ಸಿಎಂ ಅಗಿದ್ದ ಕುಮಾರಸ್ವಾಮಿ ತಮ್ಮ ಪೂರ್ವಾಗ್ರಹ ನೋಡಿಕೊಳ್ಳಲಿ. ನಾನು ದೇವೇಗೌಡರು, ಚೆನ್ನಮ್ಮರನ್ನು ನೋಡಿ ಬೆಳೆದವನು. ದೇವೇಗೌಡರ ಮಗನಾಗಿ ಯಾವ ರೀತಿ ಮಾತನಾಡಬೇಕು ಎಂದು ಅರಿತು ಮಾತನಾಡಿದರೆ, ಅವರಿಗೆ ಒಳ್ಳೆಯದು ಎಂದು ಹೆಚ್‍ಡಿಕೆ ವಿರುದ್ಧ ಕಿಡಿ ಕಾರಿದ್ದಾರೆ. ಇದನ್ನೂ ಓದಿ: ಬಾಪುರನ್ನು ಕೊಲ್ಲಲು ಗೋಡ್ಸೆಗೆ ಬಂದೂಕು ಹುಡುಕಲು ಸಾವರ್ಕರ್ ಸಹಾಯ: ಗಾಂಧಿ ಮರಿ ಮೊಮ್ಮಗನ ಸ್ಫೋಟಕ ಹೇಳಿಕೆ

    Live Tv
    [brid partner=56869869 player=32851 video=960834 autoplay=true]

  • ಸೃಜನ್ ಲೋಕೇಶ್ ಮತ್ತು ಸಚಿವ ಸೋಮಣ್ಣ ಪುತ್ರನ ಗಲಾಟೆಗೆ ರಾಜಕೀಯ ಬಣ್ಣ : ಅರುಣ್ ಸೋಮಣ್ಣ ಪ್ರತಿಕ್ರಿಯೆ

    ಸೃಜನ್ ಲೋಕೇಶ್ ಮತ್ತು ಸಚಿವ ಸೋಮಣ್ಣ ಪುತ್ರನ ಗಲಾಟೆಗೆ ರಾಜಕೀಯ ಬಣ್ಣ : ಅರುಣ್ ಸೋಮಣ್ಣ ಪ್ರತಿಕ್ರಿಯೆ

    ಟ ಸೃಜನ್ ಲೋಕೇಶ್ (Srujan Lokesh) ಮತ್ತು ಸಚಿವ ಸೋಮಣ್ಣ (V. Somanna) ಪುತ್ರ ಅರುಣ್ ಸೋಮಣ್ಣ ಮಧ್ಯೆ ಗಲಾಟೆ ನಡೆದಿದೆ ಎನ್ನಲಾದ ಸುದ್ದಿಗೆ ಸ್ವತಃ ಅರುಣ್ ಸೋಮಣ್ಣ ಪ್ರತಿಕ್ರಿಯೆ ನೀಡಿದ್ದು, ಇದೊಂದು ಚುನಾವಣೆಯ ಹುನ್ನಾರ ಎಂದು ಸ್ಪಷ್ಟನೆ ನೀಡಿದ್ದಾರೆ. ಸೃಜನ್ ಮತ್ತು ತಮ್ಮ ನಡುವೆ ಯಾವುದೇ ಗಲಾಟೆ ಆಗಿಲ್ಲ. ಅಂದು ಆ ಸ್ಥಳದಲ್ಲಿ ನಾನು ಇರಲೇ ಇಲ್ಲ. ನಮ್ಮ ವಿರೋಧಗಳು ಈ ರೀತಿ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಎಂದು ಅವರು ಹೇಳಿಕೆ ಕೊಟ್ಟಿದ್ದಾರೆ.

    ಬ್ಯಾಡ್ಮಿಂಟನ್ (Badminton) ಟೂರ್ನಮೆಂಟ್ ಗಾಗಿ ಸೃಜನ್ ಲೋಕೇಶ್ ಟೀಮ್ ಪ್ರಾಕ್ಟಿಸ್ ಮಾಡುತ್ತಿದೆ. ಪ್ರಾಕ್ಟಿಸ್ ಮುಗಿಸಿಕೊಂಡು ರಾತ್ರಿ ಕಿಂಗ್ಸ್ ಕ್ಲಬ್ ನಲ್ಲಿ ಪಾರ್ಟಿಗಾಗಿ ಜಮಾವಣೆಗೊಂಡಿದೆ. ಈ ಟೀಮ್ ಏರು ಧ್ವನಿಯಲ್ಲಿ ಕಿರುಚಾಡುತ್ತಿದ್ದರಂತೆ. ಇದೇ ವೇಳೆಯೇ ಅದೇ ಕ್ಲಬ್ ನಲ್ಲಿದ್ದ ಅರುಣ್ ಸೋಮಣ್ಣ ಕಿರುಚಾಡುತ್ತಿದ್ದವರನ್ನು ಪ್ರಶ್ನೆ ಮಾಡಿದೆ. ಮಾತಿಗೆ ಮಾತು ಬೆಳೆದು ಹೊಡೆದಾಟ ಮಾಡುವ ಮಟ್ಟಕ್ಕೆ ಬಂದಿದೆ ಎಂದು ಹೇಳಲಾಗಿತ್ತು. ಇದನ್ನೂ ಓದಿ:ದೂದ್ ಪೇಡ ದಿಗಂತ್ ಗೆ ಜೊತೆಯಾದ ರಂಗಿತರಂಗ ಬೆಡಗಿ ರಾಧಿಕಾ ನಾರಾಯಣ್

    ಈ ಕುರಿತು ಟೂರ್ನಮೆಂಟ್ ಆಟಗಾರ ಮತ್ತು ಅಂದು ಪಾರ್ಟಿಯಲ್ಲಿ ಪಾಲ್ಗೊಂಡಿದ್ದ ವಿಕಾಸ್ ಅನ್ನುವವರು ಪಬ್ಲಿಕ್ ಟಿವಿ ಜೊತೆ ಮಾತನಾಡಿ, ‘ರಾತ್ರಿ ಪ್ರಾಕ್ಟಿಸ್ ಮತ್ತು ಮೀಟಿಂಗ್ ಇತ್ತು. ಆದರೆ, ಗಲಾಟೆ ಆಗುವಂಥದ್ದು ಏನೂ ಆಗಿಲ್ಲ. ಅವತ್ತು ಅರುಣ್ ಸೋಮಣ್ಣ (Arun Somanna) ಅವರು ಅಲ್ಲಿ ಇರಲೇ ಇಲ್ಲ. ಸೃಜನ್ ಲೋಕೇಶ್ ಅವರು ಬೇಗನೆ ಹೊರಟರು. ನಾವೂ ನಂತರ ಹೊರಟೆವು. ಗಲಾಟೆ ಆಗಿದೆ ಎಂದು ಯಾರೋ ಸುಳ್ಳು ಸುದ್ದಿ ಹಬ್ಬಿಸಿದ್ದಾರೆ’ ಎಂದಿದ್ದರು.

    ಈ ಕುರಿತು ಎರಡು ದಿನಗಳ ಹಿಂದೆಯಷ್ಟೇ ಸಚಿವ ಸೋಮಣ್ಣ ಕೂಡ ಪ್ರತಿಕ್ರಿಯೆ ನೀಡಿದ್ದು, ‘ಸುಮ್ನೆ ಏನೇನೋ ಹೇಳೋಕ್ ಹೋಗ್ಬೇಡಿ, ಬಿಟ್ಬಿಡಿ. ಗೊತ್ತಿಲ್ಲದೆ ಇರೋದಕ್ಕೆಲ್ಲ ಹಿಟ್ ಅಂಡ್ ರನ್ ಕೆಲಸ ಬೇಡ. ನಾನು ಒಬ್ಬ ರಾಜಕಾರಣಿ, ಯಾರಾದರೂ ತಪ್ಪು ಮಾಡಿದ್ರೆ ತಪ್ಪೆ.ಆ ತರಹ ನನಗೆ ಏನೂ ಮಾಹಿತಿ ಇಲ್ಲ. ನನ್ನ ಮಗ ನನ್ನ ಜೊತೆ ಇಲ್ಲ. ಸುಮಾರು ಹತ್ತು ಹನ್ನೆರಡು ವರ್ಷದಿಂದ ಅವರು ಬೇರೆ ಮನೆಯಲ್ಲಿ ಇದ್ದಾರೆ. ಸುಮ್ನೆ ಏನೇನೋ ಮಾತಾಡೋದ್ರಲ್ಲಿ ಅರ್ಥ ಇಲ್ಲ. ಸತ್ಯಾಸತ್ಯತೆ ಪರಾಮರ್ಶೆ ಮಾಡೋದು ಒಳ್ಳೆದು ಇದರ ಬಗ್ಗೆ ನನಗೆ ಕಿಂಚಿತ್ತು ಮಾಹಿತಿ ಇಲ್ಲ’ ಎಂದಿದ್ದರು. ಇದೀಗ ಅವರ ಪುತ್ರ ಕೂಡ ಈ ಘಟನೆಯನ್ನು ತಳ್ಳಿಹಾಕಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಸಚಿವ ವಿ.ಸೋಮಣ್ಣ ಪುತ್ರ ಮತ್ತು ನಟ ಸೃಜನ್ ಲೋಕೇಶ್ ಮಧ್ಯ ಡಿಶುಂ ಡಿಶುಂ?

    ಸಚಿವ ವಿ.ಸೋಮಣ್ಣ ಪುತ್ರ ಮತ್ತು ನಟ ಸೃಜನ್ ಲೋಕೇಶ್ ಮಧ್ಯ ಡಿಶುಂ ಡಿಶುಂ?

    ಜಾ ಟಾಕೀಸ್ ಮೂಲಕ ಮನೆಮಾತಾಗಿರುವ ಸೃಜನ್ ಲೋಕೇಶ್ ಮತ್ತು ಸಚಿವ ವಿ.ಸೋಮಣ್ಣ (V. Somanna) ಪುತ್ರ ಅರುಣ್ ಸೋಮಣ್ಣ ನಡುವೆ ಬೆಂಗಳೂರಿನ ಮುದ್ದಿನ ಪಾಳ್ಯದ ಕಿಂಗ್ಸ್ ಕ್ಲಬ್ ನಲ್ಲಿ ಗಲಾಟೆ ನಡೆದಿದೆ ಎಂದು ಹೇಳಲಾಗುತ್ತಿದೆ. ಸೋಮವಾರ ತಡ ರಾತ್ರಿ ಈ ಘಟನೆ ನಡೆದಿದ್ದು, ಪಾರ್ಟಿ ಮಾಡುವಾಗ ಜೋರಾಗಿ ಗಲಾಟೆ ಮಾಡಿದರು ಎನ್ನುವ ಕಾರಣಕ್ಕಾಗಿ  ಹೊಡೆದಾಟವಾಗಿದೆಯಂತೆ.

    ಬ್ಯಾಡ್ಮಿಂಟನ್ (Badminton) ಟೂರ್ನಮೆಂಟ್ ಗಾಗಿ ಸೃಜನ್ ಲೋಕೇಶ್ (Srujan Lokesh) ಟೀಮ್ ಪ್ರಾಕ್ಟಿಸ್ ಮಾಡುತ್ತಿದೆ. ಪ್ರಾಕ್ಟಿಸ್ ಮುಗಿಸಿಕೊಂಡು ರಾತ್ರಿ ಕಿಂಗ್ಸ್ ಕ್ಲಬ್ ನಲ್ಲಿ ಪಾರ್ಟಿಗಾಗಿ ಜಮಾವಣೆಗೊಂಡಿದೆ. ಈ ಟೀಮ್ ಏರು ಧ್ವನಿಯಲ್ಲಿ ಕಿರುಚಾಡುತ್ತಿದ್ದರಂತೆ. ಇದೇ ವೇಳೆಯೇ ಅದೇ ಕ್ಲಬ್ ನಲ್ಲಿದ್ದ ಅರುಣ್ ಸೋಮಣ್ಣ (Arunna Somanna)  ಕಿರುಚಾಡುತ್ತಿದ್ದವರನ್ನು ಪ್ರಶ್ನೆ ಮಾಡಿದೆ. ಮಾತಿಗೆ ಮಾತು ಬೆಳೆದು ಹೊಡೆದಾಟ ಮಾಡುವ ಮಟ್ಟಕ್ಕೆ ಬಂದಿದೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ:ಮಲಯಾಳಂಗೆ ಹಾರಿದ ರಾಜ್ ಬಿ. ಶೆಟ್ಟಿ : ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ನಾಯಕಿ

    ಈ ಕುರಿತು ಟೂರ್ನಮೆಂಟ್ ಆಟಗಾರ ಮತ್ತು ಅಂದು ಪಾರ್ಟಿಯಲ್ಲಿ ಪಾಲ್ಗೊಂಡಿದ್ದ ವಿಕಾಸ್ ಅನ್ನುವವರು ಪಬ್ಲಿಕ್ ಟಿವಿ ಜೊತೆ ಮಾತನಾಡಿ, ‘ರಾತ್ರಿ ಪ್ರಾಕ್ಟಿಸ್ ಮತ್ತು ಮೀಟಿಂಗ್ ಇತ್ತು. ಆದರೆ, ಗಲಾಟೆ ಆಗುವಂಥದ್ದು ಏನೂ ಆಗಿಲ್ಲ. ಅವತ್ತು ಅರುಣ್ ಸೋಮಣ್ಣ ಅವರು ಅಲ್ಲಿ ಇರಲೇ ಇಲ್ಲ. ಸೃಜನ್ ಲೋಕೇಶ್ ಅವರು ಬೇಗನೆ ಹೊರಟರು. ನಾವೂ ನಂತರ ಹೊರಟೆವು. ಗಲಾಟೆ ಆಗಿದೆ ಎಂದು ಯಾರೋ ಸುಳ್ಳು ಸುದ್ದಿ ಹಬ್ಬಿಸಿದ್ದಾರೆ’ ಎನ್ನುತ್ತಾರೆ.

    ಈ ಕುರಿತು ಸಚಿವ ಸೋಮಣ್ಣ ಕೂಡ ಪ್ರತಿಕ್ರಿಯೆ ನೀಡಿದ್ದು, ‘ಸುಮ್ನೆ ಏನೇನೋ ಹೇಳೋಕ್ ಹೋಗ್ಬೇಡಿ, ಬಿಟ್ಬಿಡಿ. ಗೊತ್ತಿಲ್ಲದೆ ಇರೋದಕ್ಕೆಲ್ಲ ಹಿಟ್ ಅಂಡ್ ರನ್ ಕೆಲಸ ಬೇಡ. ನಾನು ಒಬ್ಬ ರಾಜಕಾರಣಿ, ಯಾರಾದರೂ ತಪ್ಪು ಮಾಡಿದ್ರೆ ತಪ್ಪೆ.ಆ ತರಹ ನನಗೆ ಏನೂ ಮಾಹಿತಿ ಇಲ್ಲ. ನನ್ನ ಮಗ ನನ್ನ ಜೊತೆ ಇಲ್ಲ. ಸುಮಾರು ಹತ್ತು ಹನ್ನೆರಡು ವರ್ಷದಿಂದ ಅವರು ಬೇರೆ ಮನೆಯಲ್ಲಿ ಇದ್ದಾರೆ. ಸುಮ್ನೆ ಏನೇನೋ ಮಾತಾಡೋದ್ರಲ್ಲಿ ಅರ್ಥ ಇಲ್ಲ. ಸತ್ಯಾಸತ್ಯತೆ ಪರಾಮರ್ಶೆ ಮಾಡೋದು ಒಳ್ಳೆದು ಇದರ ಬಗ್ಗೆ ನನಗೆ ಕಿಂಚಿತ್ತು ಮಾಹಿತಿ ಇಲ್ಲ’ ಎಂದಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಗೋವಿಂದರಾಜನಗರದಲ್ಲಿ ಪುನೀತ್ ಹೆಸ್ರಲ್ಲಿ 205 ಬೆಡ್ ಸಾಮರ್ಥ್ಯದ ಆಸ್ಪತ್ರೆ: ಸೋಮಣ್ಣ

    ಗೋವಿಂದರಾಜನಗರದಲ್ಲಿ ಪುನೀತ್ ಹೆಸ್ರಲ್ಲಿ 205 ಬೆಡ್ ಸಾಮರ್ಥ್ಯದ ಆಸ್ಪತ್ರೆ: ಸೋಮಣ್ಣ

    ಚಾಮರಾಜನಗರ: ಬೆಂಗಳೂರಿನ (Bengaluru) ಗೋವಿಂದರಾಜನಗರ (Govindarajanagara) ಕ್ಷೇತ್ರದಲ್ಲಿ 205 ಬೆಡ್ ಸಾಮರ್ಥ್ಯ ಆಸ್ಪತ್ರೆ ನಿರ್ಮಾಣವಾಗುತ್ತಿದ್ದು ಡಾ.ಪುನೀತ್‍ರಾಜ್‍ಕುಮಾರ್ (Puneeth Rajkumar) ಹೆಸರು ನಾಮಕರಣ ಮಾಡಲಾಗುವುದು ಎಂದು ವಸತಿ ಸಚಿವ ವಿ.ಸೋಮಣ್ಣ (V. Somanna ತಿಳಿಸಿದ್ದಾರೆ.

    ಚಾಮರಾಜನಗರದಲ್ಲಿ (Chamarajanagara) ಮಾತನಾಡಿದ ಅವರು, ಜನವರಿ 5 ಅಥವಾ 6 ರಂದು ಈ ಆಸ್ಪತ್ರೆಯನ್ನು ಲೋಕಾರ್ಪಣೆ ಮಾಡಲಾಗುವುದು. ಚಲುವ ಚಾಮರಾಜನಗರದ ರಾಯಾಭಾರಿಯಾಗಿದ್ದ ಡಾ. ಪುನೀತ್ ರಾಜಕುಮಾರ್ ಅವರನ್ನು ಜಿಲ್ಲಾಡಳಿತ ಕಡೆಗಣಿಸಿದೆ ಎಂಬ ಆರೋಪ ನಿರಾಧಾರ. ಇಡೀ ರಾಜ್ಯವೇ ಕಾರ್ಯಕ್ರಮ ಮಾಡುವಾಗ ಜಿಲ್ಲಾಡಳಿತವೂ ಅದರ ಅಂಗವಾಗಿದೆ ಎಂದು ಹೇಳಿದ್ದಾರೆ.  ಇದನ್ನೂ ಓದಿ: ಮೋರ್ಬಿ ತೂಗು ಸೇತುವೆ ದುರಂತಕ್ಕೆ 135 ಬಲಿ – ಸಂತ್ರಸ್ತರಿಗೆ ಪ್ರಧಾನಿ ಮೋದಿ ಸಾಂತ್ವನ

    ಈಗಾಗಲೇ ರಂಗಮಂದಿರಕ್ಕೆ ವರನಟ ಡಾ. ರಾಜಕುಮಾರ್ ಹೆಸರನ್ನು ನಾಮಕರಣ ಮಾಡಿದ್ದೇವೆ. ರಾಜ್‍ಕುಮಾರ್ ಹಾಗೂ ಪುನೀತ್ ರಾಜ್‍ಕುಮಾರ್ ಅವರು ಈ ರಾಜ್ಯದ ಸಂಪತ್ತು, ಅಪ್ಪು ಅವರನ್ನು ಇಷ್ಟು ಸಣ್ಣ ವಯಸ್ಸಿಗೆ ಕಳೆದುಕೊಳ್ಳುತ್ತೇವೆ ಅಂತ ಯಾರೂ ನಿರೀಕ್ಷೆ ಮಾಡಿರಲಿಲ್ಲ. ಇಂತಹ ಒಬ್ಬ ಪುಣ್ಯಾತ್ಮ ನಮ್ಮ ಕರ್ನಾಟಕದಲ್ಲಿ ಜನಿಸಿದ್ದು ನಮ್ಮ ಪುಣ್ಯ ಎಂದಿದ್ದಾರೆ. ಇದನ್ನೂ ಓದಿ: 2ನೇ ಬಾರಿಗೆ ದಾಖಲೆ GST ಸಂಗ್ರಹ – 1.52 ಲಕ್ಷ ಕೋಟಿಯಲ್ಲಿ ಯಾವ ರಾಜ್ಯದ ಪಾಲು ಎಷ್ಟು?

    Live Tv
    [brid partner=56869869 player=32851 video=960834 autoplay=true]

  • ಚಂದಮಾಮ ಪುಸ್ತಕದಲ್ಲಿ ‘ದಿನಕ್ಕೊಂದು ಕತೆ’ ಎಂದು ಬರ್ತಿತ್ತು – ಬಿಜೆಪಿ ಸರ್ಕಾರದಿಂದ ‘ದಿನಕ್ಕೊಂದು ಹಗರಣ’ ಬರುತ್ತಿದೆ: ಕಾಂಗ್ರೆಸ್

    ಚಂದಮಾಮ ಪುಸ್ತಕದಲ್ಲಿ ‘ದಿನಕ್ಕೊಂದು ಕತೆ’ ಎಂದು ಬರ್ತಿತ್ತು – ಬಿಜೆಪಿ ಸರ್ಕಾರದಿಂದ ‘ದಿನಕ್ಕೊಂದು ಹಗರಣ’ ಬರುತ್ತಿದೆ: ಕಾಂಗ್ರೆಸ್

    ಬೆಂಗಳೂರು: ಹಿಂದೆ ಚಂದಮಾಮ ಪುಸ್ತಕದಲ್ಲಿ ‘ದಿನಕ್ಕೊಂದು ಕತೆ’ ಎಂದು ಬರ್ತಿತ್ತು. ಈಗ ಬಿಜೆಪಿ (BJP) ಸರ್ಕಾರದಲ್ಲಿ ‘ದಿನಕ್ಕೊಂದು ಹಗರಣ’ ಹೊರಬರುತ್ತಿವೆ. ನಿಗಮಗಳಲ್ಲಿ ಭ್ರಷ್ಟಾಚಾರ ಸುಗಮ’ ಎಂಬಂತಾಗಿದೆ ಎಂದು ಬಿಜೆಪಿ ಸರ್ಕಾರವನ್ನು ಟೀಕಿಸಿ ಕಾಂಗ್ರೆಸ್ (Congress) ಸರಣಿ ಟ್ವೀಟ್ ಮಾಡಿದೆ.

    ಟ್ವೀಟ್‍ನಲ್ಲಿ ಏನಿದೆ?
    ದಲಿತರ ಸ್ವಾವಲಂಬನೆಗೆ ನಾವು ಜಾರಿಗೊಳಿಸಿದ್ದ ಐರಾವತ, ಸಮೃದ್ಧಿ ಯೋಜನೆಗಳಲ್ಲಿ ಅಕ್ರಮ ನಡೆದರೂ ಸರ್ಕಾರ ಕೈಕಟ್ಟಿ ಕುಳಿತಿದ್ದೇಕೆ ಬೊಮ್ಮಾಯಿ (Basavaraj Bommai) ಅವರೇ? ಮಹಿಳೆಯರ ಮೇಲೆ ಬಿಜೆಪಿಗರ ದರ್ಪ, ದೌರ್ಜನ್ಯ ಮಿತಿ ಮೀರುತ್ತಿದೆ. ಶಾಸಕ ಅರವಿಂದ್ ಬೆಲ್ಲದ್ (Arvind Bellad) ಸಮಸ್ಯೆ ಹೇಳಿಕೊಳ್ಳಲು ಹೋದ ಮಹಿಳೆಯನ್ನು ಅವಮಾನಿಸಿದ ಕಾರಣ ಮಹಿಳೆ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇದನ್ನೂ ಓದಿ: ಗುಜರಾತ್‍ನಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ, ಹಳೆಯ ಪಿಂಚಣಿ ಯೋಜನೆ ಜಾರಿಗೆ: ರಾಹುಲ್ ಗಾಂಧಿ

    ಸ್ತ್ರೀ ಪೀಡಕರ ಸಾಮ್ರಾಜ್ಯವಾಗಿರುವ ಬಿಜೆಪಿ ಆಡಳಿತದಲ್ಲಿ ಮಹಿಳೆಯರಿಗೆ ಗೌರವವಿಲ್ಲವೇಕೆ ಬೊಮ್ಮಾಯಿ ಅವರೇ? ಇದರ ವಿರುದ್ಧ ನಿಮ್ಮ ಕ್ರಮವೇನು? ಶಾಸಕ ಅರವಿಂದ್ ಬೆಲ್ಲದ್ ಮಾಡಿದ ಅವಮಾನದಿಂದಾಗಿ ದಲಿತ ಮಹಿಳೆ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಶಾಸಕರ ದುರ್ವರ್ತನೆಯೇ ಆತ್ಮಹತ್ಯೆ ಯತ್ನಕ್ಕೆ ಕಾರಣ ಎಂಬುದು ಮಹಿಳೆ ಬರೆದ ಡೆತ್‍ನೋಟ್‍ನಲ್ಲಿ ಸ್ಪಷ್ಟವಾಗಿದೆ, ಬೊಮ್ಮಾಯಿ ಅವರೇ, ಶಾಸಕರ ವಿರುದ್ಧ ಕ್ರಮ ಕೈಗೊಳ್ಳುವಿರಾ ಅಥವಾ ಸಿದ್ದು ಸವದಿ ಪ್ರಕರಣದಂತೆ ಮುಚ್ಚಿ ಹಾಕುವಿರಾ? ಶಾಸಕ ಅರವಿಂದ್ ಲಿಂಬಾವಳಿಯಿಂದ ಮಹಿಳೆಗೆ ನಿಂದನೆ. ಸಚಿವ ವಿ.ಸೋಮಣ್ಣರಿಂದ (V.Somanna) ಮಹಿಳೆಯ ಮೇಲೆ ಹಲ್ಲೆ. ಶಾಸಕ ಅರವಿಂದ್ ಬೆಲ್ಲದ್‍ರಿಂದ ಮಹಿಳೆಗೆ ನಿಂದನೆ. ಇತ್ತೀಚಿನ ಕೆಲವೇ ದಿನಗಳಲ್ಲಿ ನಡೆದ ಈ ಮೂರು ಘಟನೆಗಳು ಬಿಜೆಪಿಯ ಮಹಿಳಾ ವಿರೋಧಿ ಧೋರಣೆಯನ್ನು ಬೆತ್ತಲಾಗಿಸಿವೆ. ಬೊಮ್ಮಾಯಿ ಅವರೇ, ಮಹಿಳೆಯರ ಘನತೆ ನಿಮ್ಮ ಅದ್ಯತೆಯಲ್ಲವೇ ಎಂದು ಕಾಂಗ್ರೆಸ್ ಪ್ರಶ್ನಿಸಿದೆ. ಇದನ್ನೂ ಓದಿ: ಬಿಜೆಪಿ ಆಡಳಿತದಲ್ಲಿ ಮಹಿಳೆಯರಿಗೇಕಿಲ್ಲ ಗೌರವ – ಸಿಎಂ ಬೊಮ್ಮಾಯಿಗೆ ಕಾಂಗ್ರೆಸ್ ಪ್ರಶ್ನೆ

    Live Tv
    [brid partner=56869869 player=32851 video=960834 autoplay=true]

  • ಸಚಿವ ಸೋಮಣ್ಣ ಕಪಾಳಮೋಕ್ಷ ಕೇಸ್ – ಸಂಘಟನೆಗಳು ಕಿರುಕುಳ ನೀಡ್ತಿವೆ ಎಂದು ಪೊಲೀಸರಿಗೆ ಮಹಿಳೆ ದೂರು

    ಸಚಿವ ಸೋಮಣ್ಣ ಕಪಾಳಮೋಕ್ಷ ಕೇಸ್ – ಸಂಘಟನೆಗಳು ಕಿರುಕುಳ ನೀಡ್ತಿವೆ ಎಂದು ಪೊಲೀಸರಿಗೆ ಮಹಿಳೆ ದೂರು

    ಚಾಮರಾಜನಗರ: ಸಚಿವ ವಿ.ಸೋಮಣ್ಣ (V.Somanna) ನನ್ನ ಕೆನ್ನೆಗೆ ಹೊಡೆದಿದ್ದಾರೆ ಎಂದು ಹೇಳಿಕೆ ನೀಡುವಂತೆ ಕೆಲವು ಸಂಘಟನೆಗಳು ನನಗೆ ಕಿರುಕುಳ ನೀಡುತ್ತಿವೆ ಎಂದು ಪೊಲೀಸರಿಗೆ ಮಹಿಳೆ ದೂರು ನೀಡಿದ್ದಾಳೆ.

    ಸಚಿವ ಸೋಮಣ್ಣ ನನ್ನ ಕೆನ್ನೆಗೆ ಹೊಡೆದಿದ್ದಾರೆ ಎಂದು ಹೇಳಿ ಹಲವು ಸಂಘಟನೆಗಳು ನನಗೆ ಕಿರುಕುಳ ನೀಡುತ್ತಿವೆ. ಇಂಥ ಸಂಘಟನೆಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೆಂಪಮ್ಮ ಗುಂಡ್ಲುಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಇದನ್ನೂ ಓದಿ: ನಂಗೆ ಎರಡು ಮುಖವಿಲ್ಲ, ಇರೋದು ಒಂದೇ ಮುಖ: ಹೆಚ್‍ಡಿಕೆಗೆ ಸೋಮಣ್ಣ ಟಾಂಗ್

    ಸಚಿವರ ವಿರುದ್ಧ ಪೊಲೀಸ್ ಠಾಣೆಗೆ ದೂರು ಕೊಡುವಂತೆ ವಿವಿಧ ಸಂಘಟನೆಗಳಿಂದ ಬೆದರಿಕೆ ಬರುತ್ತಿದೆ ಅಂತಾ ಆರೋಪ ಮಾಡಿದ್ದಾರೆ. ವಿವಿಧ ಸಂಘಟನೆಗಳ ವಿರುದ್ಧ ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಮಹಿಳೆ ಕೆಂಪಮ್ಮ ದೂರು ದಾಖಲಿಸಿದ್ದಾರೆ.

    ಸೋಮಣ್ಣ ಹೊಡೆದಿದ್ದಾರೆಂದು ಹೇಳಿಕೆ ನೀಡು, ಪೊಲೀಸರಿಗೆ ದೂರು ಕೊಡು. ಇಲ್ಲದಿದ್ದರೆ ವಾಸ ಮಾಡಲು ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆ. ವಿವಿಧ ಸಂಘಟನೆಗಳಿಂದ ಪ್ರಾಣ ಬೆದರಿಕೆ ಇದೆ. ನನಗೆ ರಕ್ಷಣೆ ನೀಡಿ ಎಂದು ಗುಂಡ್ಲುಪೇಟೆ ತಾಲೂಕಿನ ರೈತ ಸಂಘ, ತಾಲೂಕು ನಾಯಕರ ಹಿತರಕ್ಷಣಾ ಸಮಿತಿ, ತಾಲೂಕು ದಸಂಸ, ತಾಲೂಕು ಕೆಆರ್‌ಎಸ್ ಪಾರ್ಟಿ ವಿರುದ್ಧ ಮಹಿಳೆ ದೂರು ನೀಡಿದ್ದಾರೆ. ಇದನ್ನೂ ಓದಿ: ಮಹಿಳೆಗೆ ಕಪಾಳಮೋಕ್ಷ ಪ್ರಕರಣ- ಸೋಮಣ್ಣ ಕ್ಷಮೆಯಾಚನೆ

    Live Tv
    [brid partner=56869869 player=32851 video=960834 autoplay=true]