Tag: V.Somanna

  • ಸುದ್ದಿಗೋಷ್ಠಿಯಲ್ಲಿ ಸೋಮಣ್ಣ ಕಣ್ಣೀರು – ಬಿಜೆಪಿ ಬಿಡಲ್ಲ ಎಂದು ಸ್ಪಷ್ಟನೆ

    ಸುದ್ದಿಗೋಷ್ಠಿಯಲ್ಲಿ ಸೋಮಣ್ಣ ಕಣ್ಣೀರು – ಬಿಜೆಪಿ ಬಿಡಲ್ಲ ಎಂದು ಸ್ಪಷ್ಟನೆ

    ಬೆಂಗಳೂರು: ನನ್ನಿಂದ ಪಕ್ಷಕ್ಕೆ ತೊಂದರೆ ಆಗಬಾರದು, ಆದರೆ ಬಿಜೆಪಿ ಬಿಡುವುದಿಲ್ಲ. ಬಿಜೆಪಿಯಲ್ಲೇ ಇರುತ್ತೇನೆ ಎಂದು ವಿ. ಸೋಮಣ್ಣ ಘೋಷಿಸಿದರು.

    ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನಗೆ ಏನಾದರೂ ಸಮಸ್ಯೆ ಆಗಿದ್ದರೇ ರಾಜೀನಾಮೆ ಕೊಡುತ್ತಿದ್ದೆ. ಆದರೆ ಆ ರೀತಿಯ ಸಮಸ್ಯೆ ನನಗೆ ಏನೂ ಆಗಿಲ್ಲ. ಮುಂದಿನ ಚುನಾವಣೆಯಲ್ಲಿ ಟಿಕೆಟ್ ಕೊಟ್ಟರೇ ಸ್ಪರ್ಧಿಸುತ್ತೇನೆ. ಇಲ್ಲದಿದ್ದರೇ ಪಕ್ಷದ ಕೆಲಸ ಮಾಡಿಕೊಂಡು ಹೋಗುತ್ತೇನೆ. ಜೊತೆಗೆ ನಾನು ಬಿಜೆಪಿ ಬಿಡ್ತೀನಿ ಅಂತ ಹೇಳಿಲ್ಲ. ಆದರೆ ಸ್ವಾಭಿಮಾನ ಮಾರಿ ಜೀವನ ಮಾಡಲ್ಲ. ಮತ್ತೆ ಬೇಕಾದ್ರೆ ಪಿಗ್ಮಿ ಕಲೆಕ್ಟ್ ಮಾಡುವುದಕ್ಕೂ ಸಿದ್ಧ ಎಂದು ಹೇಳಿದರು.

    ಕಾಂಗ್ರೆಸ್‍ಗೆ ಹೋಗುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನಾನು ಹೊಟ್ಟೆಪಾಡಿಗಾಗಿ ಬೆಂಗಳೂರಿಗೆ ಬಂದಿದ್ದೇನೆ. ನನ್ನ ಜೀವನ ನಾನೇ ರೂಪಿಸಿಕೊಂಡಿದ್ದೇನೆ. 56 ವರ್ಷದಿಂದ ಇಲ್ಲೇ ಇದ್ದೇನೆ. ಸಂಜೆ ಕಾಲೇಜಿನಲ್ಲಿ ಓದಿದ್ದೇನೆ. ಕರ್ತವ್ಯವೇ ದೇವರು. ಸ್ವಾಭಿಮಾನಕ್ಕೆ ಧಕ್ಕೆ ಬಂದರೆ ನಾನು ಸುಮ್ಮನಿರಲ್ಲ. ಸುಳ್ಳು ಹೇಳಿ ನಾನು ಜೀವನ ಮಾಡಿಲ್ಲ. ಶಿವಕುಮಾರ ಸ್ವಾಮೀಜಿ, ಬಾಲಗಂಗಾಧರನಾಥ ಸ್ವಾಮೀಜಿ ನನಗೆ ಪ್ರೇರಣೆ. ಯಾರ ಮುಲಾಜಿನಲ್ಲೂ ಬದುಕಿಲ್ಲ. ಹಿಂದಿರುಗಿ ನೋಡಿದವನಲ್ಲ ಎಂದು ಕಣ್ಣೀರು ಹಾಕಿದರು.

    ನಾನು ಪಕ್ಷಕ್ಕೆ ನಿಷ್ಠನಾಗಿದ್ದೇನೆ. ಯಾವ ಪಕ್ಷದಲ್ಲಿದ್ದರೂ ಆ ಪಕ್ಷವೇ ನನಗೆ ತಾಯಿ. ನನಗೆ ಡಬಲ್ ಸ್ಟಾಂಡರ್ಡ್ ಇಲ್ಲ. ಅಲ್ಲೊಂದು ಇಲ್ಲೊಂದು ಮಾತಾಡುವ ಬುದ್ಧಿ ಇಲ್ಲ ಎಂದ ಅವರು, ಮಠಮಾನ್ಯಗಳಿಗೆ ಒಬ್ಬನೇ ಸೋಮಣ್ಣ ಕೊಂಡಿಯಾಗಿದ್ದವನು. ಕಳೆದ ಕೆಲ ದಿನಗಳ ಬೆಳವಣಿಗೆ ನೋವು ತಂದಿದೆ. ಎಂದಾದರೂ ಬಿಜೆಪಿ ಬಿಡ್ತೀನಿ ಅಂತ ಮಾತಾಡಿಲ್ಲ ಎಂದು ಸ್ಪಷ್ಟಪಡಿಸಿದರು.

    ಡಿಕೆಶಿ ಜತೆ ಫೋಟೋ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಡಿಕೆಶಿ ಜತೆ ಫೋಟೋ ಹಳೇದು. ಡಿಕೆಶಿ ನಮ್ಮ ಊರಿನವರು. ಮಾಧ್ಯಮಗಳು ನನ್ನ ಬಗ್ಗೆ ಸುದ್ದಿ ಹಾಕಿ ಮಜಾ ತೆಗೆದುಕೊಳ್ಳುತ್ತಾರೆ ಎಂದು ಕಿಡಿಕಾರಿದ ಅವರು, ಯಾರು ಕರೀತಾರೆ ನನಗೆ ಕಾಂಗ್ರೆಸ್‍ನಲ್ಲಿ? ಡಿಕೆಶಿ ಜತೆ ಫ್ಲೈಟ್‍ನಲ್ಲಿ ಬಂದರೆ ಆಹ್ವಾನ ಕೊಟ್ಟರು ಅಂತ ಅರ್ಥನಾ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಕಾಂಗ್ರೆಸ್‍ನಲ್ಲಿ ಟಿಕೆಟ್ ಫೈಟ್- ದೆಹಲಿಯಲ್ಲಿ ದಲಿತ ಎಡ ನಾಯಕರ ಠಿಕಾಣಿ

    ಅರುಣ್ ಸೋಮಣ್ಣ ವೈರಲ್ ವೀಡಿಯೋಗೆ ಸ್ಪಷ್ಟನೆ ನೀಡಿದ ಅವರು, ಆ ವೀಡಿಯೋ ಬಗ್ಗೆ ನನಗೆ ಗೊತ್ತಿಲ್ಲ. ಅರುಣ್ ಸೋಮಣ್ಣ ಪಕ್ಷದ ವಿರುದ್ಧ ನಡೆದುಕೊಂಡ್ರೆ ಪಕ್ಷದಿಂದ ಶಿಸ್ತು ಕ್ರಮ ಕೈಗೊಳ್ಳಲಿ. ನನ್ನ ಮಗ ಡಾಕ್ಟರ್. ಆತ ಎಳೆ ಮಗ ಅಲ್ಲ. ಆತ ಮಾತಾಡಿರುವುದಕ್ಕೂ ನನಗೂ ಸಂಬಂಧ ಇಲ್ಲ. ರಾಜಕೀಯದಲ್ಲಿ ಯಾರು ಯಾರೂ ಶತ್ರುಗಳಲ್ಲ. ಬಿಜೆಪಿಯಲ್ಲಿ ನನಗೆ ಯಾವುದೇ ಗೊಂದಲ ಇಲ್ಲ. ಒಟ್ಟಾಗಿ ಹೋಗ್ತೀವಿ, ಕೆಲಸ ಮಾಡ್ತೀವಿ. ಬಿಜೆಪಿಯಲ್ಲಿ ಯಾವುದೇ ನಾಯಕ ನನ್ನ ಬಗ್ಗೆ ಅಪಪ್ರಚಾರದ ಮಾತಾಡಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಮಂಡ್ಯ ಜನರ ಎದುರು ಮತ್ತೆ ಸಿಎಂ ಆಗುವ ಮಹಾದಾಸೆ ವ್ಯಕ್ತಪಡಿಸಿದ ಡಿಕೆಶಿ

  • ಬಿಜೆಪಿಯಲ್ಲಿ ಟಿಕೆಟ್ ಕೊಟ್ಟರೆ ನಿಂತ್ಕೊತೀನಿ, ಇಲ್ಲ ಅಂದ್ರೆ ಇಲ್ಲ: ಸೋಮಣ್ಣ

    ಬಿಜೆಪಿಯಲ್ಲಿ ಟಿಕೆಟ್ ಕೊಟ್ಟರೆ ನಿಂತ್ಕೊತೀನಿ, ಇಲ್ಲ ಅಂದ್ರೆ ಇಲ್ಲ: ಸೋಮಣ್ಣ

    – ಡಿಕೆಶಿ, ಸಿದ್ದರಾಮಯ್ಯ ನಾವೆಲ್ಲ ಸ್ನೇಹಿತರು

    ಬೆಂಗಳೂರು: ಬಿಜೆಪಿ(BJP) ಯಲ್ಲಿ ಟಿಕೆಟ್ ಕೊಟ್ಟರೆ ನಿಂತ್ಕೊತೀನಿ, ಇಲ್ಲ ಅಂದ್ರೆ ಇಲ್ಲ. ನಾನು ಯಾವತ್ತಾದ್ರೂ ನನ್ನ ಮಗನಿಗೆ ಟಿಕೆಟ್ ಕೇಳಿದ್ದೀನಾ ಎಂದು ಸಚಿವ ವಿ. ಸೋಮಣ್ಣ (V Somanna) ಪ್ರಶ್ನಿಸಿದರು.

    ವಿಧಾನಸೌಧ (Vidhanasoudha) ದಲ್ಲಿ ಮಾತನಾಡಿದ ಅವರು, ರಾಜಕಾರಣದಲ್ಲಿ ಇವೆಲ್ಲ ಇರುತ್ತೆ. ಏನು ಹೇಳಬೇಕು, ಎಲ್ಲಿ ಹೇಳಬೇಕೋ ಹೇಳಿದ್ದೀನಿ. ಕವಲುದಾರಿಗಳು ಇರುತ್ತವೆ. ನಾನೇನು ಸನ್ಯಾಸಿ ಅಲ್ಲ. ಡಿಕೆಶಿ (DK Shivakumar), ಸಿದ್ದರಾಮಯ್ಯ (Siddaramaiah) ನಾವೆಲ್ಲ ಸ್ನೇಹಿತರು. ನಾವು ಒಟ್ಟಿಗೆ ಕೆಲಸ ಮಾಡಿದ್ದೀವಿ. ಅವರ ಕೆಲಸ ಅವರು ಮಾಡ್ತಾರೆ, ನನ್ನ ಕೆಲಸ ನಾನು ಮಾಡ್ತೀನಿ. ನನಗೆ ಅಸಮಾಧಾನ ಇದೆ ಅಂತಾ ನಾನು ಹೇಳಿಲ್ಲ ಎಂದರು.

    ನನ್ನ ಬೆಂಗಳೂರಿಗೆ ಮಾತ್ರ ಏಕೆ ಸೀಮಿತ ಮಾಡ್ತೀರಾ ಎಂದು ಇದೇ ವೇಳೆ ಪ್ರಶ್ನಿಸಿದ ಸೋಮಣ್ಣ, ನನಗೆ ಕೊಟ್ಟ ಜವಾಬ್ದಾರಿಗಳೆಲ್ಲವನ್ನೂ ನಿರ್ವಹಿಸಿದ್ದೇನೆ. ಉಪಚುನಾವಣೆಗಳ ಜವಾಬ್ದಾರಿ, ತುಮಕೂರು ಲೋಕಸಭೆಯಲ್ಲಿ ಗೆಲ್ಲಿಸಿಕೊಂಡು ಬಂದಿದ್ದೇನೆ. ನಾನು ಮೊದಲು ಕಾಂಗ್ರೆಸ್‍ನಲ್ಲೇ ಇದ್ದೆ, ಜನತಾಪಾರ್ಟಿ, ಜನತಾದಳದಲ್ಲೂ ಕೆಲಸ ಮಾಡಿದ್ದೇನೆ. ರಾಜಕಾರಣದಲ್ಲಿ ಹೀಗೆಲ್ಲ ಆಗ್ತಿರುತ್ತವೆ. ನನ್ನ ಮಗನಿಗೆ ಟಿಕೆಟ್ ಕೇಳಿದ್ದೀನಾ..!? ನಾಲ್ಕು ಗೋಡೆ ಮಧ್ಯೆ ಯಾರಿಗೆ ಏನ್ ಹೇಳಬೇಕು ಹೇಳಿದ್ದೀನಿ ಎಂದು ಗರಂ ಆದರು. ಇದನ್ನೂ ಓದಿ: ಜೆಡಿಎಸ್ ಬಗ್ಗೆ ಮಾತನಾಡಲು ಮೋದಿಯವರಿಗೆ ಸಬ್ಜೆಕ್ಟ್ ಇಲ್ಲ: ಹೆಚ್‍ಡಿಕೆ

    ಅಭಿಮಾನಿಗಳು ಸಭೆ ಮಾಡಿದ್ರೆ ನಾನು ಮಾಡಬೇಡಿ ಅಂತ ಹೇಳೋಕೆ ಆಗುತ್ತಾ..? ರಾಜಕಾರಣ ಅಂದ್ರೆ ಬೆಂಗಳೂರಿಗೆ ಅಷ್ಟೆ ಸೀಮಿತ ಆಗಬೇಕಾ..? ಚುನಾವಣೆ ಬಂದಾಗ ನನ್ನ ಇಡೀ ರಾಜ್ಯಕ್ಕೆ ಕರೆಸ್ತಾರೆ. ಎಲ್ಲಾ ಕ್ಷೇತ್ರ ಗೆಲ್ಲಿಸಿಕೊಂಡೇ ಬಂದಿದ್ದೀನಿ. ಪಕ್ಷ ಏನು ಹೇಳುತ್ತೋ ನಾನು ಅದನ್ನು ಮಾಡ್ತೀನಿ. ರಾಜಕಾರಣ ಇದು ಖುಷಿ ಇದ್ಯೋ ಇಲ್ವೋ ಗೊತ್ತಿಲ್ಲ. ಅರ್ಹತೆ ಇರುವವರಿಗೆ ಕೆಲವು ಸಲ ಕವಲು ದಾರಿ ಆಗ್ತಾವೆ. 56 ವರ್ಷ ನಾನು ಬೆಂಗಳೂರಿಗೆ ಬಂದು. ಅನೇಕ ತೊಡಕುಗಳನ್ನೂ ನೋಡಿದ್ದೇವೆ. ಕೆಲಸ ಮಾಡೋವ್ರನ್ನ ಜನ ಗೌರವಿಸ್ತಾರೆ ಅಂದರೆ ಅದಕ್ಕೆ ಉದಾಹರಣೆ ಅಂದರೆ ಸೋಮಣ್ಣ ಎಂದರು.

    ಬೇರೆ ರಾಜಕಾರಣಿ ಮಕ್ಕಳು ರಾಜಕಾರಣದಲ್ಲಿ ಇರಬಹುದು. ಎಲ್ಲರಿಗೂ ಮಕ್ಕಳು, ಪ್ರೀತಿ ಅನ್ನೋದು ಇರುತ್ತೆ. ನನಗೆ ಇರುವ ನಿಯಮ ಎಲ್ಲರಿಗೂ ಅನ್ವಯಿಸಬೇಕಲ್ವ. ನಾನು ಯಾವತ್ತೂ ಮಕ್ಕಳನ್ನು ರಾಜಕಾರಣಕ್ಕೆ ತಂದವನಲ್ಲ. ಬೇರೆ ರಾಜಕಾರಣಿ ಮಕ್ಕಳಿಗೆ ಟಿಕೆಟ್ ಇಲ್ಲ ಅನ್ನೋದಾದ್ರೆ ನಮಗೂ ಬೇಡ. ಅವಕಾಶ, ಹಣೆಬರಹ ಇದ್ದರೆ ಮಗನಿಗೆ ಟಿಕೆಟ್ ಸಿಗುತ್ತದೆ, ನಾನು ಯಾರನ್ನ ಕೇಳಿಲ್ಲ. ನನಗೆ ಅಸಮಾಧಾನ ಇದೆ ಅಂತ ಎಲ್ಲಾದ್ರೂ ಹೇಳಿದ್ದೀನಾ..?. ರಾಜಕಾರಣಿಗಳಿಗೆ ಬದ್ಧತೆ ಇರಬೇಕು. ಕಾಂಗ್ರೆಸ್ ಗೆ ಬರ್ತಾರೆ ಅಂತ ಅವರ ಭಾವನೆಗಳಿವೆ. ಅದಕ್ಕೆ ನಾನು ಬೇಡ ಅನ್ನಲಾ..?. ಅವರಿಗೆಲ್ಲಾ ಒಳ್ಳೆಯದಾಗಲಿ ಎಂದು ಹೇಳಿದರು.

  • ಬಿಎಸ್‍ವೈ ಹೇಳಿಕೆ ಬೆನ್ನಲ್ಲೇ ಆ್ಯಕ್ಟೀವ್ ಆದ ವಿ.ಸೋಮಣ್ಣ ಬೆಂಬಲಿಗರು

    ಬಿಎಸ್‍ವೈ ಹೇಳಿಕೆ ಬೆನ್ನಲ್ಲೇ ಆ್ಯಕ್ಟೀವ್ ಆದ ವಿ.ಸೋಮಣ್ಣ ಬೆಂಬಲಿಗರು

    ಮೈಸೂರು: ಸಚಿವ ವಿ.ಸೋಮಣ್ಣ (V. Somanna) ಉಳಿಸಿಕೊಳ್ಳುವ ಕಾರ್ಯತಂತ್ರ ಬಿಜೆಪಿಯಲ್ಲಿ ಇದೀಗ ಶುರುವಾಗಿದೆ. ನಿಮ್ಮೊಂದಿಗೆ ನಾವೆಲ್ಲರೂ ಇದ್ದೇವೆ ಎಂದು ಬೆಂಬಲಿಗರು ಅಭಿಯಾನ ಶುರು ಮಾಡಿದ್ದಾರೆ.

    ಬಿಎಸ್‍ವೈ (B.S Yediyurappa) ಹೇಳಿಕೆ ಬೆನ್ನಲ್ಲೇ ಆ್ಯಕ್ಟೀವ್ ಆದ ಸೋಮಣ್ಣ ಸಂಗಡಿಗರು, ಬಿಜೆಪಿಯಲ್ಲಿ ಸೂಕ್ತ ಸ್ಥಾನಮಾನ ಕೊಡಬೇಕು ಎಂದು ಆಗ್ರಹಿಸಿದ್ದಾರೆ. ಅಲ್ಲದೆ ಹೈಕಮಾಂಡ್ ಗೆ ಒತ್ತಡ ಹಾಕಲು ಮೈಸೂರಿನ ನಿತ್ಯಾನಂದ ಕಲ್ಯಾಣ ಮಂಟಪದಲ್ಲಿ ಸಭೆ ನಡೆಸಲಿದ್ದಾರೆ.

    ಸೋಮಣ್ಣ ಕಾಂಗ್ರೆಸ್ (Congress) ಸೇರುತ್ತಾರೆ ಎನ್ನುವ ಮಾತು ಬಂದ ಬೆನ್ನಲ್ಲೇ ಈ ಬೆಳವಣಿಗೆಗಳು ನಡೆಯುತ್ತವೆ. ಮೈಸೂರು ಭಾಗದ ಪ್ರಮುಖ ಮುಖಂಡರನ್ನ ಒಳಗೊಂಡ ಸಭೆಯಲ್ಲಿ ಹೈಕಮಾಂಡ್ ಮೇಲೆ ಒತ್ತಡ ಏರಲು ಚಿಂತನೆ ನಡೆಸಲಾಗುತ್ತಿದೆ.

    ಸೋಮಣ್ಣ ಸಂಘಟನಾ ಚತುರ. ಹಳೆ ಮೈಸೂರು ಭಾಗಕ್ಕೆ ಮಹಾಶಕ್ತಿ. ಅವರ ಹಿರಿತನದ ಲಾಭ ಬಿಜೆಪಿಗೆ ಸಿಗಬೇಕು. ಪಕ್ಷಕ್ಕೆ ಅವರು ಕೊಟ್ಟ ಕೊಡುಗೆ ವ್ಯರ್ಥವಾಗದಿರಲಿ ಎಂದು ಕೂಗು ಎದ್ದಿದೆ. ಇದನ್ನೂ ಓದಿ: ಬಿಜೆಪಿಯ ನಾಲ್ಕೈದು ಶಾಸಕರಿಗೆ ಟಿಕೆಟ್ ಇಲ್ಲ- ಆಕಾಂಕ್ಷಿಗಳಿಗೆ ಬಿಎಸ್‍ವೈ ಶಾಕ್

    ಬಿಎಸ್‍ವೈ ಹೇಳಿದ್ದೇನು..?: ಇತ್ತೀಚೆಗೆ ಕಲಬುರಗಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದ ಮಾಜಿ ಸಿಎಂ, ಬಿಜೆಪಿ ಪಕ್ಷಕ್ಕೆ ಯಾರು ಬರುತ್ತಾರೆ ಅವರಿಗೆ ಸ್ವಾಗತ. ಯಾರು ಪಕ್ಷ ಬಿಟ್ಟು ಹೋಗ್ತಾರೆ ಅವರು ಬಿಟ್ಟು ಹೋಗಬಹುದು. ನಾಲ್ಕೈದು ಹಾಲಿ ಶಾಸಕರನ್ನು ಬಿಟ್ಟು ಉಳಿದ ಎಲ್ಲಾ ಬಿಜೆಪಿ (BJP) ಶಾಸಕರಿಗೆ ಟಿಕೆಟ್ ಕೊಡಲಾಗುವುದು. ಆದಷ್ಟು ಬೇಗ ಬಿಜೆಪಿ ಹುರಿಯಾಳುಗಳ ಪಟ್ಟಿ ಬಿಡುಗಡೆ ಮಾಡುತ್ತೇವೆ ಎಂದು ಹೇಳಿದ್ದಾರೆ.

  • ಬಿಜೆಪಿಯಿಂದ ಹೋಗುವವರನ್ನು ಗೌರವಯುತವಾಗಿ ಕಳುಹಿಸಿಕೊಡುತ್ತೇವೆ: ಬಿಎಸ್‌ವೈ

    ಬಿಜೆಪಿಯಿಂದ ಹೋಗುವವರನ್ನು ಗೌರವಯುತವಾಗಿ ಕಳುಹಿಸಿಕೊಡುತ್ತೇವೆ: ಬಿಎಸ್‌ವೈ

    ಚಿಕ್ಕೋಡಿ: ಬಿಜೆಪಿ (BJP) ಪಕ್ಷದಿಂದ ಕಾಂಗ್ರೆಸ್‌ಗೆ (Congress) ಸಚಿವರು, ಶಾಸಕರು ಸೇರುವ ಪ್ರಯತ್ನ ಯಾರೂ ಮಾಡುತ್ತಿಲ್ಲ. ಕಾಂಗ್ರೆಸ್‌ನಿಂದ ಬರುವವರಿಗೆ ಸ್ವಾಗತ, ಹೋಗುವವರನ್ನು ಗೌರವಯುತವಾಗಿ ಕಳುಹಿಸಿಕೊಡುತ್ತೇವೆ ಎಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ (BS Yediyurappa) ಹೇಳಿದರು.

    ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸೋಮಣ್ಣನವರು ಪಕ್ಷ ಬಿಡುತ್ತಾರೆ ಎನ್ನುವುದರಲ್ಲಿ ಸತ್ಯಾಂಶ ಇಲ್ಲ. ಇಲ್ಲಿಂದ ಹೋದ ಮೇಲೆ ಸೋಮಣ್ಣ ಅವರನ್ನು ಕರೆದು ಮಾತಾಡುತ್ತೇನೆ. ಆ ರೀತಿಯ ಯಾವ ಭಿನ್ನಾಭಿಪ್ರಾಯವೂ ಇಲ್ಲ. ಎಲ್ಲರೂ ಒಟ್ಟಾಗಿದ್ದೇವೆ ಎಂದರು.

    ವಿ ಸೋಮಣ್ಣ, ಡಿಕೆ ಶಿವಕುಮಾರ್ ಭೇಟಿಯಾಗಿದ್ದಾರೆ ಎಂಬ ವಿಚಾರಕ್ಕೆ ಉತ್ತರಿಸಿದ ಅವರು, ಡಿಕೆ ಶಿವಕುಮಾರ್ ಅವರು ಎಲ್ಲರನ್ನೂ ಕರೆದು ಮಾತನಾಡುವುದು ನಿರಂತರವಾಗಿ ಮಾಡುತ್ತಿದ್ದಾರೆ. ಆ ರೀತಿ ಯಾವುದಕ್ಕೂ ನಮ್ಮ ಮುಖಂಡರು ಬೆಲೆ ಕೊಡುತ್ತಿಲ್ಲ. ಯಾರೂ ಸಹ ಅವರ ಮಾತಿಗೆ ಬಲಿಯಾಗುವುದಿಲ್ಲ. ಕಾಂಗ್ರೆಸ್‌ನವರಿಗೆ ಸೋಲಿನ ಭೀತಿ ಕಾಡುತ್ತಿದೆ. ಕಾಂಗ್ರೆಸ್‌ನಿಂದ ಬರುವವರಿಗೆ ಸ್ವಾಗತ, ಹೋಗುವವರನ್ನು ಗೌರವಯುತವಾಗಿ ಕಳುಹಿಸಿಕೊಡುತ್ತೇವೆ. 17 ಜನರಲ್ಲೂ ಯಾರೊಬ್ಬರೂ ಪಕ್ಷ ಬಿಟ್ಟು ಹೋಗುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಕಾಂಗ್ರೆಸ್‌, ಜೆಡಿಎಸ್ ತೊರೆದು ಕೆಲವು ನಾಯಕರು ಬಿಜೆಪಿಗೆ ಬರಲಿದ್ದಾರೆ: ರವಿಕುಮಾರ್

    ಅಧಿಕಾರಕ್ಕೆ ಬರುವವರು ಪಕ್ಷ ಬಿಟ್ಟು ಯಾಕೆ ಹೋಗುತ್ತಾರೆ? ಅವತ್ತಿನಿಂದ ಇವತ್ತಿನವರೆಗೂ ಪಕ್ಷ ಕಟ್ಟಲು ಬೆನ್ನೆಲುಬಾಗಿ ಸಹಕಾರ ನೀಡಿದ್ದಾರೆ. ಆ ತರ ಯಾರೊಬ್ಬರೂ ಸಹ ಪಕ್ಷ ಬಿಟ್ಟು ಹೋಗಲ್ಲ ಎಂದರು.

    ಸೋಲಿನ ಭೀತಿಯಿಂದ ರಾಜ್ಯಕ್ಕೆ ಪದೇ ಪದೇ ಮೋದಿ, ಅಮಿತ್ ಶಾ ಬರುತ್ತಿದ್ದಾರೆ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಪ್ರಯಿಕ್ರಿಯಿಸಿದ ಅವರು, ಸಿದ್ದರಾಮಯ್ಯನವರು ಹಾಗೆ ಹೇಳಿರುವುದರಿಂದ ನಮಗೆ ತೊಂದರೆ ಇಲ್ಲ. ಅವರು ಬರ್ತಾಯಿರುವುದರಿಂದ ಕಾಂಗ್ರೆಸ್‌ಗೆ ಸೋಲಿನ ಭೀತಿ ಜಾಸ್ತಿ ಆಗಿದೆ ಎನ್ನುವುದು ನಿಜ. ಅದನ್ನು ಅವರೇ ಒಪ್ಪಿಕೊಂಡಿದ್ದಾರೆ. ಅದಕ್ಕೆ ಸಂತೋಷ ಪಡುತ್ತೇನೆ. ಕರ್ನಾಟಕಕ್ಕೆ ನಿರಂತರವಾಗಿ ಅವರು ಹೆಚ್ಚು ಒತ್ತು ಕೊಡುತ್ತಿದ್ದಾರೆ. ಅದಕ್ಕೆ ಅವರು ಬರುತ್ತಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ಅಂಬೇಡ್ಕರ್ ಮರಣಹೊಂದಿದಾಗಲೂ ಕಾಂಗ್ರೆಸ್ 6*3 ಅಡಿ ಜಾಗ ಕೊಟ್ಟಿರಲಿಲ್ಲ – ಸಿ.ಟಿ ರವಿ ಕಿಡಿ

  • ಸೋಮಣ್ಣ ಸೇರಿ ಯಾರೊಬ್ಬರೂ ಬಿಜೆಪಿ ಬಿಡುವುದಿಲ್ಲ: ಬಿ.ಎಸ್. ಯಡಿಯೂರಪ್ಪ

    ಸೋಮಣ್ಣ ಸೇರಿ ಯಾರೊಬ್ಬರೂ ಬಿಜೆಪಿ ಬಿಡುವುದಿಲ್ಲ: ಬಿ.ಎಸ್. ಯಡಿಯೂರಪ್ಪ

    ಯಾದಗಿರಿ: ಸೋಮಣ್ಣ ಕಾಂಗ್ರೆಸ್ (Congress) ಪಕ್ಷಕ್ಕೆ ಸೇರ್ಪಡೆಯಾಗುತ್ತಾರೆ ಎನ್ನುವುದರಲ್ಲಿ ಯಾವುದೇ ಸತ್ಯಾಂಶವಿಲ್ಲ. ಎಲ್ಲರೂ ನಮ್ಮ ಜೊತೆಯಲ್ಲಿಯೇ ಇದ್ದಾರೆ, ಇರುತ್ತಾರೆ ಕೂಡಾ. ಬೆಂಗಳೂರಿಗೆ (Bengaluru) ಹೋದ ಮೇಲೆ ಎಲ್ಲರನ್ನೂ ಭೇಟಿ ಮಾಡಿ ಮಾತನಾಡುತ್ತೇನೆ. ಸೋಮಣ್ಣ ಸೇರಿ ಯಾರೊಬ್ಬರೂ ಬಿಜೆಪಿ (BJP) ಬಿಡುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ (B.S.Yediyurappa) ಸ್ಪಷ್ಟನೆ ನೀಡಿದರು.

    ಯಾದಗಿರಿಯಲ್ಲಿ (Yadagiri) ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸೋಮಣ್ಣ (V.Somanna) ಕಾಂಗ್ರೆಸ್ ಪಕ್ಷಕ್ಕೆ ಸೇರುತ್ತಾರೆ ಎಂಬ ಊಹಾಪೋಹಾಗಳಿಗೆ ತೆರೆ ಎಳೆದರು. ಮಾಡಾಳ್ ವಿರೂಪಾಕ್ಷ (Madal Virupakshappa) ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡುವ ಬಗ್ಗೆ ನನಗೆ ಮಾಹಿತಿ ಇಲ್ಲ. ಇದರಲ್ಲಿ ಯಾವುದೇ ಸತ್ಯಾಂಶ ಇಲ್ಲ. ವಾಸ್ತವಿಕ ಸ್ಥಿತಿ ಏನು ಎನ್ನುವುದು ನಿಮಗೇ ಗೊತ್ತಿದೆ. ಅದ್ದೂರಿ ಮೆರವಣಿಗೆ ಬಗ್ಗೆ ನಾನು ಯಾವುದೇ ಕಮೆಂಟ್ ಮಾಡುವುದಿಲ್ಲ. ಒಟ್ಟಿನಲ್ಲಿ ಅವರಿಗೆ ಕೋರ್ಟಿನಿಂದ (Court) ರಿಲೀಫ್ ಸಿಕ್ಕಿದೆ. ಮಾಡಾಳ್ ಅವರ ಮೇಲೆ ಪಕ್ಷದಿಂದ ಕ್ರಮ ಕೈಗೊಳ್ಳುವ ಬಗ್ಗೆ ನನಗೇನೂ ಗೊತ್ತಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಆಪ್ ನಾಯಕರ ಬಂಧನ – ಹೋಳಿ ತೊರೆದು ಧ್ಯಾನ ಆರಂಭಿಸಿದ ಕೇಜ್ರಿವಾಲ್

    ಮೋದಿ, ಅಮಿತ್ ಶಾ ಎಷ್ಟೇ ಬಾರಿ ರಾಜ್ಯಕ್ಕೆ ಬಂದರೂ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಎಂಬ ಸಿದ್ದರಾಮಯ್ಯನವರ (Siddaramaiah) ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯನವರ ಹೇಳಿಕೆಗಳಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ. ಸಿದ್ದರಾಮಯ್ಯನವರು ವಿರೋಧ ಪಕ್ಷದ ನಾಯಕರಾಗಿ, ಈ ರೀತಿ ಮಾತನಾಡುವುದು ಅವರ ಸ್ವಭಾವ. ಸಿದ್ದರಾಮಯ್ಯನವರ ಹೇಳಿಕೆಗೆ ನಾನು ಟೀಕೆ ಮಾಡಲು ಇಷ್ಟಪಡುವುದಿಲ್ಲ ಎಂದರು. ಇದನ್ನೂ ಓದಿ: ದೆಹಲಿ ಮದ್ಯನೀತಿ ಹಗರಣ – KCR ಪುತ್ರಿ ಕವಿತಾಗೆ ED ಸಮನ್ಸ್

    ನಾವು ಹೋದ ಕಡೆಯಲ್ಲೆಲ್ಲಾ ಜನ ಬೆಂಬಲ ನೀಡುತ್ತಿದ್ದಾರೆ. ಕಾಂಗ್ರೆಸ್ ಪ್ರಜಾಧ್ವನಿ (Prajadhwani) ಯಾತ್ರೆಗೆ ಸೇರುವ ಜನ ಹಾಗೂ ಬಿಜೆಪಿ ವಿಜಯಸಂಕಲ್ಪ ಯಾತ್ರೆಗೆ (Vijaya Sankalpa Yatra) ಸೇರುವ ಜನರನ್ನು ನೀವೇ ಹೋಲಿಕೆ ಮಾಡಿ. ಕಾಂಗ್ರೆಸ್ ಪಕ್ಷದವರು ಅಧಿಕಾರಕ್ಕೆ ಬರಲು ಏನೋನೋ ಭರವಸೆ ನೀಡುತ್ತಾರೆ. ಅವರ ಭರವಸೆಗಳಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ. ಕಾಂಗ್ರೆಸ್‌ನವರು 200 ಯೂನಿಟ್‌ವರೆಗೆ ವಿನಾಯಿತಿ ಕೊಡುತ್ತೇವೆ ಎಂದು ಹೇಳಿದ್ದಾರೆ. ಬೊಮ್ಮಾಯಿಯವರು (Basavaraja Bommai) ಒಳ್ಳೆಯ ಕಾರ್ಯಕ್ರಮ ಹಾಗೂ ಯೋಜನೆಗಳನ್ನು ಘೋಷಣೆ ಮಾಡಿದ್ದಾರೆ. ಇದು ನಮ್ಮ ಪಕ್ಷದ ಬಲವರ್ಧನೆಗೆ ಪೂರಕವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಇದನ್ನೂ ಓದಿ: ಮಾ.9ರ ಕರ್ನಾಟಕ ಬಂದ್‌ ವಾಪಸ್ ಪಡೆದ ಕಾಂಗ್ರೆಸ್

  • ಕುತೂಹಲ ಕೆರಳಿಸಿದ ಸುರೇಶ್- ವಿ.ಸೋಮಣ್ಣ ಗುಪ್ತ ಮಾತುಕತೆ

    ಕುತೂಹಲ ಕೆರಳಿಸಿದ ಸುರೇಶ್- ವಿ.ಸೋಮಣ್ಣ ಗುಪ್ತ ಮಾತುಕತೆ

    ರಾಮನಗರ: ಸಂಸದ ಡಿ.ಕೆ.ಸುರೇಶ್ (D. K. Suresh) ಹಾಗೂ ಸಚಿವ ಸೋಮಣ್ಣನವರು (V.Somanna) ಗುಪ್ತ ಮಾತುಕತೆ ನಡೆಸಿದ್ದು ಕುತೂಹಲ ಮೂಡಿಸಿದ್ದಾರೆ.

    ಕನಕಪುರ (Kanakapura) ತಾಲೂಕಿನ ರಾಯಸಂದ್ರದಲ್ಲಿ ಕುವೆಂಪು ಸಂಯುಕ್ತ ವಸತಿ ಬಡಾವಣೆಯ ಮುಖ್ಯದ್ವಾರ ಉದ್ಘಾಟನೆಗೆಂದು ವಿ.ಸೋಮಣ್ಣ ಹಾಗೂ ಡಿ.ಕೆ.ಸುರೇಶ್ ಆಗಮಿಸಿದ್ದರು. ಈ ವೇಳೆ ಮಾಧ್ಯಮ ಹಾಗೂ ಆಪ್ತರನ್ನು ದೂರವಿಟ್ಟು ಯಾವುದೋ ಪತ್ರವನ್ನು ಕೈಯಲ್ಲಿ ಹಿಡಿದುಕೊಂಡು ಡಿ.ಕೆ.ಸುರೇಶ್ ಅವರು ಸಚಿವ ಸೋಮಣ್ಣನವರೊಂದಿಗೆ ಮಾತುಕತೆಯನ್ನು ನಡೆಸಿದ್ದಾರೆ. ಇದನ್ನೂ ಓದಿ: ನಾನು ಸರಳ, ಸಜ್ಜನ ರಾಜಕಾರಣಿ, ಹಣ ವಾಪಸ್ ಪಡೆದೇ ಪಡೀತಿನಿ – ಮಾಡಾಳ್

    ಮಾಧ್ಯಮ ಹಾಗೂ ಆಪ್ತರಿಂದ ದೂರ ನಿಂತು ಈ ಇಬ್ಬರು ನಾಯಕರು ಆಪ್ತ ಮಾತುಕತೆ ನಡೆಸಿದ್ದು ವಿಶೇಷವಾಗಿತ್ತು. ಸೋಮಣ್ಣ ಮತ್ತು ಬಿಜೆಪಿ ನಾಯಕರ ಮಧ್ಯೆ ಸಂಬಂಧ ಹಳಸಿದ್ದು ಅವರು ಪಕ್ಷ ತೊರೆಯಲಿದ್ದಾರೆ ಎಂಬ ಸುದ್ದಿ ಬರುತ್ತಿದೆ. ಈ ಮಧ್ಯೆ ಸುರೇಶ್ ಅವರನ್ನು ಭೇಟಿ ಮಾಡಿ ಕುತೂಹಲ ಮೂಡಿಸಿದ್ದಾರೆ. ಇದನ್ನೂ ಓದಿ: ಹಿಟ್ಲರ್ ಪಕ್ಷ ಎಂದು ಕರೆಸಿಕೊಳ್ಳಲು ನಮಗೆ ಹೆಮ್ಮೆಯಿದೆ- ಕಾಂಗ್ರೆಸ್‌ಗೆ ವಿಜಯೇಂದ್ರ ಟಾಂಗ್

  • ಅಶೋಕ್ ಜೊತೆ ಮುನಿಸು – ಅರ್ಧದಲ್ಲೇ ಇಳಿದ ಸೋಮಣ್ಣ

    ಅಶೋಕ್ ಜೊತೆ ಮುನಿಸು – ಅರ್ಧದಲ್ಲೇ ಇಳಿದ ಸೋಮಣ್ಣ

    ಬೆಂಗಳೂರು: ಸಚಿವ ಆರ್. ಅಶೋಕ್ (R.Ashoka) ಮತ್ತು ಸಚಿವ ವಿ. ಸೋಮಣ್ಣ (V.Somanna) ನಡುವಿನ ಗೊಂದಲದಿಂದ ಇಂದು ಆಯೋಜಿಸಿದ್ದ ಬಿಜೆಪಿ (BJP) ವಿಜಯಸಂಕಲ್ಪ ರಥಯಾತ್ರೆ ಮೊಟಕುಗೊಂಡ ಪ್ರಸಂಗ ನಾಗರಭಾವಿಯಲ್ಲಿ ನಡೆದಿದೆ.

    ಬೆಳಗ್ಗೆ ಗೋವಿಂದರಾಜನಗರದ ಟೋಲ್‍ಗೇಟ್ ನಿಂದ ನಾಯಂಡನಹಳ್ಳಿವರೆಗೂ (Nayandanahalli) ವಿಜಯ ಸಂಕಲ್ಪ ರಥಯಾತ್ರೆ ನಿಗದಿಯಾಗಿತ್ತು. ಯಾತ್ರೆಯಲ್ಲಿ ಭಾಗವಹಿಸಿದ್ದ ಕೇಂದ್ರ ಸಚಿವ ಭೂಪೇಂದ್ರ ಯಾದವ್ (Bhupender Yadav), ನಾಗರಭಾವಿ (Nagarabhavi) ವೃತ್ತದವರೆಗೂ ಇದ್ದು ಬಳಿಕ ಹೊರಟರು. ಇವರ ಹಿಂದೆಯೇ ಅಶೋಕ್ ಸಹ ಇಳಿದು ನಡೆದಿದ್ದಾರೆ. ನಾಯಂಡಹಳ್ಳಿವರೆಗೂ ರಥಯಾತ್ರೆಯಲ್ಲಿರುವಂತೆ ಸೋಮಣ್ಣ ಕೇಳಿಕೊಂಡ್ರೂ ಅಶೋಕ್ ಒಪ್ಪದೇ ಹೊರ ಹೋಗಿದ್ದಾರೆ. ಇದನ್ನೂ ಓದಿ: ಮೈಸೂರು-ಬೆಂಗಳೂರು ದಶಪಥ ಹೆದ್ದಾರಿ ಕ್ರೆಡಿಟ್ ನಮ್ಮ ಸರ್ಕಾರಕ್ಕೇ ಸಲ್ಲಬೇಕು: ಪ್ರತಾಪ್ ಸಿಂಹಗೆ ಸಿದ್ದು ಟಾಂಗ್


    ಇದರಿಂದ ಕೋಪಗೊಂಡ ಸೋಮಣ್ಣ ನಾಗರಭಾವಿಯಲ್ಲೇ ರಥಯಾತ್ರೆ ಮೊಟಕುಗೊಳಿಸಿದ್ದಾರೆ. ತಮ್ಮ ಕ್ಷೇತ್ರದಲ್ಲೇ ರಥಯಾತ್ರೆ ನಡೆಯುತ್ತಿದ್ದರೂ ಸೋಮಣ್ಣ ಯಾತ್ರೆ ಬಗ್ಗೆ ಚಿಂತಿಸದೆ ಹೊರಟಿದ್ದಾರೆ. ಬೆಳಗ್ಗೆ ತಾನೇ ಸೋಮಣ್ಣರನ್ನು ಹೊಗಳಿದ್ದ ಅಶೋಕ್, ಸೋಮಣ್ಣ ಕ್ಷೇತ್ರದಲ್ಲಿ ನಡೆದ ರಥಯಾತ್ರೆಯ ಬಗ್ಗೆ ನಿರಾಸಕ್ತಿ ತೋರಿದ್ದಾರೆ. ಇದನ್ನೂ ಓದಿ: ಮಂಡ್ಯ ‘ಕೈ’ ಜಿಲ್ಲಾಧ್ಯಕ್ಷ ಸಿ.ಡಿ ಗಂಗಾಧರ್ ಕಾರಿಗೆ ಮೊಟ್ಟೆ ಎಸೆದ ಕಾರ್ಯಕರ್ತರು

  • ಇನ್ಮುಂದೆ ಬಿಜೆಪಿಗೆ ವೋಟ್ ಹಾಕ್ತಾ ಇರಿ, ಪ್ರತಿ ವರ್ಷ ಸೈಟ್ ಕೊಡ್ತೀವಿ – ವಿ.ಸೋಮಣ್ಣ

    ಇನ್ಮುಂದೆ ಬಿಜೆಪಿಗೆ ವೋಟ್ ಹಾಕ್ತಾ ಇರಿ, ಪ್ರತಿ ವರ್ಷ ಸೈಟ್ ಕೊಡ್ತೀವಿ – ವಿ.ಸೋಮಣ್ಣ

    ಚಾಮರಾಜನಗರ: ಇನ್ಮುಂದೆ ಬಿಜೆಪಿಗೆ (BJP) ವೋಟ್ ಹಾಕ್ತಾ ಇರಿ, ವರ್ಷಾವರ್ಷ ಸೈಟ್ ಕೊಡ್ತೀವಿ ಎಂದು ಸಚಿವ ವಿ.ಸೋಮಣ್ಣ (V Somanna) ಭರವಸೆ ನೀಡಿದ್ದಾರೆ.

    ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಮುಖ್ಯಮಂತ್ರಿ ನಗರ ನಿವೇಶನ ಯೋಜನೆಯಡಿ ಫಲಾನುಭವಿಗಳಿಗೆ ನಿವೇಶನ ಹಂಚಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗುಂಡ್ಲುಪೇಟೆಯಲ್ಲಿ ಕಳೆದ 30 ವರ್ಷಗಳಿಂದ ಯಾರಿಗೂ ನಿವೇಶನ ಹಂಚಿಕೆ ಮಾಡಿಲ್ಲ. ಇನ್ಮುಂದೆ ಬಿಜೆಪಿಗೆ ವೋಟ್ (Vote) ಹಾಕ್ತಾ ಇರಿ, ವರ್ಷಾವರ್ಷ ಸೈಟ್ ಹಂಚಿಕೆ ಮಾಡ್ತೀವಿ ಎಂದು ಆಶ್ವಾಸನೆ ನೀಡಿದ್ದಾರೆ. ಇದನ್ನೂ ಓದಿ: WPL 2023: `ಕಮಲ’ ಮುಂಬೈ ಇಂಡಿಯನ್ಸ್ ಜೆರ್ಸಿ ಅನಾವರಣ 

    ಈ ಹಿಂದೆ ಬೆಂಗಳೂರಿನಲ್ಲಿ (Bengaluru) 1 ಲಕ್ಷ ಮನೆ ನಿರ್ಮಿಸಲು ಪ್ರಧಾನಿ ಮೋದಿ (Narendra Modi) 600 ಕೋಟಿ ಕೊಟ್ಟಿದ್ದರು. ಆದರೆ ಅಂದಿನ ಸರ್ಕಾರ ಅದಕ್ಕೆ ಬೇಕಾದ ಜಾಗವನ್ನು ಹುಡುಕಲೇ ಇಲ್ಲ. ನಾನು ಸಚಿವನಾದ ಮೇಲೆ ಜಾಗ ಹುಡುಕಿ ಬೆಂಗಳೂರಿನಲ್ಲಿ 52 ಸಾವಿರ ಮನೆಗಳನ್ನ ನಿರ್ಮಾಣ ಮಾಡಲಾಗಿದೆ. ಈ ಪೈಕಿ ಈಗಾಗಲೇ 5 ಸಾವಿರ ಫಲಾನುಭವಿಗಳಿಗೆ ಮನೆ ಹಂಚಿಕೆ ಮಾಡಿದ್ದೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕುಮಾರಣ್ಣನ ಸರ್ಕಾರ ಹೋದ್ಮೇಲೆ ಜೆಡಿಎಸ್ ಕಾರ್ಯಕರ್ತರಿಗೆ ಕಿರುಕುಳ – ಹೆಚ್.ಡಿ.ರೇವಣ್ಣ ಬೇಸರ

    ಇದೇ ವೇಳೆ ಯಡಿಯೂರಪ್ಪ (BS Yediyurappa) ವಿಧಾನಸಭೆಗೆ ವಿದಾಯ ಹೇಳಿದ ವಿಚಾರಕ್ಕೆ ಪ್ರತಿಕ್ರಿಯಿಸಿ, ಎಲ್ಲರೂ ಒಂದು ದಿನ ವಿದಾಯ ಹೇಳಲೇಬೇಕಲ್ವಾ? ಒಂದು ಏಜ್ ಆದ ಮೇಲೆ ಹೋಗಲೇಬೇಕಲ್ವಾ? ದೇಶದಲ್ಲಿ ಬಹುತೇಕ ಮಂದಿ ಈ ರೀತಿ ಬಂದು ಹೋಗಿದ್ದಾರೆ. ನಾವೂ ಮುಂದೊಂದು ದಿನ ವಿದಾಯ ಹೇಳಲೇಬೇಕು. ಯಡಿಯೂರಪ್ಪ ತಮ್ಮ ವಯಸ್ಸಿನ ಇತಿಮಿತಿ ಅರ್ಥಮಾಡಿಕೊಂಡು ತೀರ್ಮಾನ ಮಾಡಿದ್ದಾರೆ. ಚುನಾವಣಾ ರಾಜಕೀಯದಿಂದ ನಿವೃತ್ತಿ ಹೊಂದುವುದು ಒಳ್ಳೆಯದು ಅನಿಸಿರಬೇಕು. ಹಾಗಾಗಿ ವಿದಾಯ ಹೇಳಿದ್ದಾರೆ ಎಂದು ಸೋಮಣ್ಣ ತಿಳಿಸಿದ್ದಾರೆ.