ಚಾಮರಾಜನಗರ: ವರುಣಾ (Varuna) ಹಾಗೂ ಚಾಮರಾಜನಗರ (Chamarajanagar) ಎರಡೂ ಕಡೆ ನಾವೇ ಗೆಲ್ಲುತ್ತೇವೆ. ಅವರು ಏನೇ ತಂತ್ರಗಾರಿಕೆ ಮಾಡಿದರೂ ನಾವು ತಕ್ಕ ಉತ್ತರ ಕೊಡುತ್ತೇವೆ ಎಂದು ಚಾಮರಾಜನಗರ ಕಾಂಗ್ರೆಸ್ (Congress) ಅಭ್ಯರ್ಥಿ, ಶಾಸಕ ಪುಟ್ಟರಂಗಶೆಟ್ಟಿ (C.Puttarangashetty) ಹೇಳಿದ್ದಾರೆ.
ನಾಮಪತ್ರ ಸಲ್ಲಿಕೆಗೂ ಮುನ್ನವೇ ಪುಟ್ಟರಂಗಶೆಟ್ಟಿ ಬಿರುಸಿನ ಪ್ರಚಾರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಅಲ್ಲದೇ ಸೋಮಣ್ಣನವರಿಗೆ (V.Somanna) ಬಿಜೆಪಿ (BJP) ಟಿಕೆಟ್ ಘೋಷಣೆಯಾಗುತ್ತಿದ್ದಂತೆ ಕ್ಷೇತ್ರದಲ್ಲಿ ಪುಲ್ ಆ್ಯಕ್ಟಿವ್ ಆಗಿದ್ದಾರೆ. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮದು ಅಭಿವೃದ್ಧಿ, ಸೋಮಣ್ಣನವರದ್ದು ಬರೀ ಮಾತು. ಅವರು ಸುಳ್ಳು ಹೇಳಿಕೊಂಡು ರಾಜಕಾರಣ (Politics) ಮಾಡುತ್ತಾರೆ. ಸೋಮಣ್ಣ ಯಾವ ಅಭಿವೃದ್ಧಿ ಕೆಲಸ ಮಾಡಿದ್ದಾರೆ? ಯಾವ ಮುಖ ಇಟ್ಟುಕೊಂಡು ವೋಟ್ ಕೇಳುತ್ತಾರೆ? ಎಂದು ಟೀಕಿಸಿದರು. ಇದನ್ನೂ ಓದಿ: ಬೆಳಗಾವಿಯಲ್ಲಿ ಮತ್ತೊಂದು ಬಿಜೆಪಿ ವಿಕೆಟ್ ಪತನ
ಚಾಮರಾಜನಗರ ಜಿಲ್ಲೆಯಲ್ಲಿ ಅತಿವೃಷ್ಟಿಯಾಯಿತು. ಉಸ್ತುವಾರಿ ಸಚಿವರಾಗಿ ಎಷ್ಟು ಅನುದಾನ ತಂದಿದ್ದಾರೆ ಎಂದು ಸೋಮಣ್ಣ ಹೇಳಲಿ ಎಂದು ಸವಾಲು ಹಾಕಿದರು. ಅಷ್ಟೇ ಅಲ್ಲದೇ ನಾಲ್ಕನೇ ಬಾರಿಯೂ ನಾನೇ ಆಯ್ಕೆಯಾಗುತ್ತೇನೆ. ಸರ್ಕಾರವೂ ನಮ್ಮದೇ ಬರುತ್ತದೆ. ಅದರಲ್ಲಿ ಎರಡನೇ ಮಾತಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಡಿಕೆಶಿ ಆಥಿತ್ಯ ಸ್ವೀಕರಿಸ್ತೀವಿ, ಮಿಲ್ಟ್ರಿ ಹೋಟೆಲ್ ಊಟಾನೂ ಮಾಡ್ತೀವಿ – ಅಶ್ವಥ್ ನಾರಾಯಣ್
ಚಾಮರಾಜನಗರ: ಬಿಜೆಪಿಯಿಂದ (BJP) ಚಾಮರಾಜನಗರದ (Chamarajanagar) ಟಿಕೆಟ್ ಆಕಾಂಕ್ಷಿಯಾಗಿದ್ದ ನಾಗಶ್ರೀ ಬೆಂಬಲಿಗರು ಹಾಗೂ ಹಿತೈಷಿಗಳು ಗುರುವಾರ ಸಭೆ ನಡೆಸಿದ್ದು, ಸಚಿವ ವಿ. ಸೋಮಣ್ಣಗೆ (V Somanna) ಟೆನ್ಷನ್ ಹೆಚ್ಚಿಸಿದೆ.
ಬಿಜೆಪಿಯಿಂದ ಟಿಕೆಟ್ (BJP Ticket) ಸಿಗಲಿಲ್ಲವೆಂದು ನಾಗಶ್ರೀ ಪ್ರತಾಪ್ (Nagashree Pratap) ಸಭೆಯಲ್ಲೇ ಬಿಕ್ಕಿ ಬಿಕ್ಕಿ ಅತ್ತಿದ್ದು, ಈ ವೇಳೆ ಬೆಂಬಲಿಗರು ಧೈರ್ಯ ತುಂಬಿದ್ದಾರೆ. ಜೊತೆಗೆ ಪಕ್ಷೇತರವಾಗಿ ಸ್ಪರ್ಧಿಸುವಂತೆ ಒತ್ತಾಯಿಸಿದ್ದಾರೆ. ಹಾಲಿ ಸಚಿವ ವಿ.ಸೋಮಣ್ಣಗೆ ʻವರುಣಾ ಕ್ಷೇತ್ರ ಸಾಕು, ಚಾಮರಾಜನಗರಕ್ಕೆ ನಾಗಶ್ರೀ ಬೇಕುʼ ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಚಾಮರಾಜನಗರದಲ್ಲೇ ಸೋಮಣ್ಣ ಕಟ್ಟಿ ಹಾಕಲು ʼಕೈʼ ರಣವ್ಯೂಹ! – ಬಿಜೆಪಿ ಬಂಡಾಯವನ್ನೇ ಬಂಡವಾಳ ಮಾಡಿಕೊಳ್ಳಲು ಪ್ಲಾನ್
ಈ ಬಗ್ಗೆ ಯಾವುದೇ ತೀರ್ಮಾನ ಪ್ರಕಟಿಸದ ನಾಗಶ್ರೀ ಪ್ರತಾಪ್, ಚಾಮರಾಜನಗಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಸೋಮಣ್ಣ ಅವರನ್ನ ಆಯ್ಕೆ ಮಾಡಿರುವುದು ಪಕ್ಷದ ಹೈಕಮಾಂಡ್ ತೀರ್ಮಾನವಾಗಿದೆ. ಹಾಗಾಗಿ ಯಾರನ್ನೂ ದೂಷಿಸುವ ಪ್ರಶ್ನೆಯೇ ಇಲ್ಲ. ಯಾರೂ ಸಹ ದುಡುಕಿ ವ್ಯಕ್ತಿ ವಿರುದ್ಧವಾಗಲಿ, ಪಕ್ಷದ ವಿರುದ್ಧವಾಗಲಿ ಮಾತನಾಡಬೇಡಿ, ಯಾರೊಬ್ಬರು ಭಾವೋದ್ವೇಗಕ್ಕೆ ಒಳಗಾಗಬೇಡಿ. ಮುಂದಿನ ನಿರ್ಧಾರ ಕೈಗೊಳ್ಳಲು ಇನ್ನೆರಡು ದಿನ ಕಾಲಾವಕಾಶ ಕೊಡಿ ಎಂದು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಬಿಜೆಪಿಗೆ ನ್ಯಾಯಾಲಯಗಳಲ್ಲಿ ನಂಬಿಕೆ ಇಲ್ಲ, ಇದು ನಕಲಿ ಎನ್‌ಕೌಂಟರ್ : ಅಖಿಲೇಶ್ ಯಾದವ್
ಚಾಮರಾಜನಗರ: ಎರಡು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿ ಪ್ರತಿಷ್ಠೆ ಪಣಕ್ಕಿಡಲು ಹೊರಟಿರುವ ಮಾಜಿ ಸಚಿವ ವಿ.ಸೋಮಣ್ಣ (V.Somanna) ಅವರನ್ನು ಕಟ್ಟಿ ಹಾಕಲು ಕಾಂಗ್ರೆಸ್ (Congress) ರಣತಂತ್ರ ಹೆಣೆಯುತ್ತಿದೆ. ವರುಣಾದಲ್ಲಿ ಹೆಚ್ಚು ಕೇಂದ್ರೀಕರಿಸದಂತೆ ಚಾಮರಾಜನಗರದಲ್ಲಿ (Chamarajanagara) ಕಟ್ಟಿ ಹಾಕಲು ರಣವ್ಯೂಹ ರಚಿಸಿದೆ.
ಸಿದ್ದರಾಮಯ್ಯ ವಿರುದ್ಧ ಪ್ರಬಲ ಸ್ಪರ್ಧೆ ಒಡ್ಡಲು ಬಿಜೆಪಿ ಸೋಮಣ್ಣಗೆ ಟಿಕೆಟ್ ಕೊಟ್ಟಿದೆ. ಆದರೆ, ವರುಣಾಗೆ ಸೋಮಣ್ಣ ಹೋಗದಂತೆ ಚಾಮರಾಜನಗರದಲ್ಲೇ ಕಟ್ಟಿ ಹಾಕಲು ಕಾಂಗ್ರೆಸ್ ಮುಂದಾಗಿದ್ದು ಇದಕ್ಕೇ ಬಿಜೆಪಿ ಬಂಡಾಯವೇ ಬಂಡವಾಳವಾಗಿದೆ. ಸೋಮಣ್ಣಗೆ ಚಾಮರಾಜನಗರದ ಟಿಕೆಟ್ ಘೋಷಣೆಯಾಗುತ್ತಿದ್ದಂತೆ ಭಿನ್ನಮತ ಸ್ಫೋಟವಾಗಿದೆ. ಟಿಕೆಟ್ ವಂಚಿತ ನಾಗಶ್ರೀ ಪ್ರತಾಪ್ ಅವರ ಬೆಂಬಲಿಗರು ಈಗಾಗಲೇ ಕೆರಳಿ ಕೆಂಡವಾಗಿದ್ದು, ಸಾಲು ಸಾಲು ಸಭೆ ನಡೆಸುತ್ತಿದ್ದಾರೆ. ಮತ್ತೊಂದು ಕಡೆ ಕೆಆರ್‌ಐಡಿಎಲ್ ಅಧ್ಯಕ್ಷ ರುದ್ರೇಶ್ ಬಹಿರಂಗವಾಗಿಯೇ ಸೋಮಣ್ಣ ವಿರುದ್ಧ ಹರಿಹಾಯ್ದಿದ್ದು, ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಇದನ್ನೂ ಓದಿ: ಟಿಕೆಟ್ ಕೊಟ್ಟಿಲ್ಲವೆಂದ್ರೆ ಅವರಿಗೆ ಬೇರೆ ಜವಾಬ್ದಾರಿ ನೀಡಲಿದೆ ಎಂದರ್ಥ: ಅಣ್ಣಾಮಲೈ
ಹೇಳಿ ಕೇಳಿ ಚಾಮರಾಜನಗರ ಹಾಗೂ ವರುಣಾದಲ್ಲಿ ಲಿಂಗಾಯತ ಪ್ರಾಬಲ್ಯ ಇದ್ದು, ಸೋಮಣ್ಣ ಅವರು ಲಿಂಗಾಯತ ನಾಯಕರನ್ನು ತುಳಿಯುತ್ತಿದ್ದಾರೆ. ಯಡಿಯೂರಪ್ಪ ಬಗ್ಗೆ ಇಲ್ಲಸಲ್ಲದ ಮಾತು ಆಡುತ್ತಾರೆ ಎಂಬ ಆರೋಪ ಈಗಾಗಲೇ ಸಮುದಾಯದ ಜನರಲ್ಲಿ ಕಿಚ್ಚು ಹೊತ್ತಿಸಿದೆ. ಇದು ಚುನಾವಣೆ ಹೊತ್ತಲ್ಲಿ ಅಂಡರ್ ಕರೆಂಟಾಗಿ ಕೆಲಸ ಮಾಡಲಿದೆ ಎಂಬುದು ಸೋಮಣ್ಣ ಆದಿಯಾಗಿ ಎಲ್ಲರಿಗೂ ತಿಳಿದಿದ್ದು, ಇದನ್ನು ಶಮನ ಮಾಡುವುದರಲ್ಲೇ ಸೋಮಣ್ಣ ಕಾಲ ಕಳೆಯಬೇಕಾಗುತ್ತದೆ. ವರುಣಾದತ್ತ ಗಮನ ಹರಿಸುವುದು ಅಸಾಧ್ಯವಾಗಲಿದೆ ಎಂಬುದು ಕೈ ಪಡೆ ರಣತಂತ್ರವಾಗಿದೆ.
ವರುಣಾದಲ್ಲಿ ಸೋಮಣ್ಣ ಗಮನ ಕಡಿಮೆಯಾದಷ್ಟು ಕಾಂಗ್ರೆಸ್‌ಗೆ ವರವಾಗಲಿದೆ ಎಂಬ ಒಂದಂಶದ ಮೇಲೆ ಚಾಮರಾಜನಗರದಲ್ಲಿನ ಬಂಡಾಯವನ್ನು ಹಾಗೇ ಉಳಿಸಲು ಕಾಂಗ್ರೆಸ್ ಈಗ ಮುಂದಾಗಿದೆ. ಚಾಮರಾಜನಗರದ ನಾಲ್ಕು ವಿಧಾನಸಭಾ ಕ್ಷೇತ್ರದಲ್ಲೂ ಅಸಮಾಧಾನ ಇದ್ದು, ಇದನ್ನು ಪರಿಹರಿಸುವ ಜವಾಬ್ದಾರಿ ಸೋಮಣ್ಣ ಮೇಲಿದೆ. ಬಂಡಾಯ ಶಮನ ಮಾಡುವುದೋ ಅಥವಾ ವರುಣಾದಲ್ಲಿ ಯುದ್ಧ ಮಾಡುವುದೋ ಎಂಬ ಸಂದಿಗ್ಧತೆಗೆ ಸೋಮಣ್ಣರನ್ನು ದೂಡುವುದೇ ಕಾಂಗ್ರೆಸ್‌ನ ಸದ್ಯದ ರಣನೀತಿಯಾಗಿದೆ. ಇದು ಎಷ್ಟರ ಮಟ್ಟಿಗೆ ವರ್ಕೌಟ್ ಆಗುತ್ತೆ ಅನ್ನೋದನ್ನ ಕಾದುನೋಡಬೇಕಾಗಿದೆ. ಇದನ್ನೂ ಓದಿ: ಚಿಕ್ಕಬಳ್ಳಾಪುರ ಬಿಜೆಪಿ ಅಭ್ಯರ್ಥಿ ಸುಧಾಕರ್ ನಾಮಪತ್ರ ಸಲ್ಲಿಕೆ
ಮೈಸೂರು: ವರುಣಾ (Varuna) ಕ್ಷೇತ್ರಕ್ಕೆ ತಾಲೂಕು ಕೇಂದ್ರವಿಲ್ಲದೆ ಅಲ್ಲಿನ ಜನ ಅಬ್ಬೆಪಾರಿಗಳಾಗಿದ್ದಾರೆ ಎಂದು ಸಂಸದ ಪ್ರತಾಪ್ ಸಿಂಹ (Pratap Simha) ಕಿಡಿಕಾರಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವರುಣಾ ಕ್ಷೇತ್ರದ ಜನರು ತಮ್ಮ ಕೆಲಸ ಮಾಡಿಸಿಕೊಳ್ಳಲು ಯಾವ ಸ್ಥಳಕ್ಕೆ ಹೋಗಬೇಕೆಂಬ ಗೊಂದಲ 15 ವರ್ಷದಿಂದಲೂ ಇದೆ. ಸಿದ್ದರಾಮಯ್ಯನವರ (Siddaramaiah) ಕೈಯಲ್ಲಿ ಒಂದು ತಾಲೂಕು ಕೇಂದ್ರ ಮಾಡಲು ಆಗಲಿಲ್ಲ. ಮುಖ್ಯಮಂತ್ರಿಯಾಗಿಯೂ ಸಿದ್ದರಾಮಯ್ಯನವರು ವರುಣಾ ಅಭಿವೃದ್ಧಿ ಮಾಡಲಿಲ್ಲ. ವರುಣಾ ತಾಲೂಕು ಕೇಂದ್ರವಾಗಬೇಕಿದೆ. ಒಂದೇ ಸರ್ಕಾರಿ ಕಚೇರಿಯಲ್ಲಿ ವರುಣಾ ಜನರ ಕೆಲಸವಾಗಬೇಕು. ಸೋಮಣ್ಣನ (V Somanna) ಗೆಲ್ಲಿಸಿ ವರುಣಾ ಕ್ಷೇತ್ರವನ್ನು ತಾಲೂಕು ಕೇಂದ್ರ ಮಾಡುತ್ತೇವೆ ಎಂದರು.
ಸಿದ್ದರಾಮಯ್ಯ 2018 ಕೊನೆ ಚುನಾವಣೆ ಎಂದು ಹೇಳಿದ್ದರು. ಕೊನೆ ಚುನಾವಣೆಯಲ್ಲೇ ಚಾಮುಂಡೇಶ್ವರಿ ಕ್ಷೇತ್ರದ ಜನ ಅವರನ್ನು ಮುಗಿಸಿದರು. ಈ ಬಾರಿಯೂ ಅದೇ ಪ್ಲೇಟ್ ಅನ್ನು ಸಿದ್ದರಾಮಯ್ಯ ಹಾಕುತ್ತಿದ್ದಾರೆ. ಇಲ್ಲಿಯ ಜನರು ಕೂಡ ಅವರ ರಾಜಕೀಯ ಜೀವನವನ್ನು ಮುಗಿಸುತ್ತಾರೆ ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ:ಕೊಡಗು ವಿಹೆಚ್‍ಪಿ ಅಧ್ಯಕ್ಷನ ಮೇಲೆ ಗುಂಡಿನ ದಾಳಿ
ಚಾಮುಂಡಿ ಆಶೀರ್ವಾದ ಮಾಡುವುದು ಆಕೆಯ ಭಕ್ತರಿಗೆ ಮಾತ್ರ. ಸಿದ್ದರಾಮಯ್ಯ ಪತ್ನಿ, ಚಾಮುಂಡಿ ತಾಯಿ ಭಕ್ತೆ ಇರಬಹುದು. ಆದರೆ ಅವರ ಪತ್ನಿ ಚುನಾವಣೆಗೆ ಸ್ಪರ್ಧಿಸಿಲ್ಲವಲ್ಲ ಎಂದ ಅವರು, ಮೈಸೂರು ಭಾಗಕ್ಕೆ ನಾಯಕತ್ವದ ದೊಡ್ಡ ಕೊರತೆ ಇತ್ತು. ತುರ್ತಾಗಿ ತ್ವರಿತವಾಗಿ ಒಬ್ಬ ನಾಯಕನ ಅವಶ್ಯಕತೆ ಇತ್ತು. ಸೋಮಣ್ಣ ಆ ಕೊರತೆಯನ್ನು ನೀಗಿಸುತ್ತಾರೆ. ಎಲ್ಲರನ್ನೂ ಒಟ್ಟಿಗೆ ಕರೆದುಕೊಂಡು ಸಂಘಟನೆ ಮಾಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ:ಪತ್ರಿಕೋದ್ಯಮ ಓದಿದ ಬರಿಗಾಲ ಸಂತನಿಗೆ ಬಿಜೆಪಿ ಟಿಕೆಟ್
ಮೈಸೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಎಂತಹ ನಾಯಕರಾದರು ಕೂಡ ಇಲ್ಲಿ ನನ್ನಂತೆ ಒಬ್ಬ ಅಭ್ಯರ್ಥಿ ಅಷ್ಟೇ ಎಂದು ಸಚಿವ ವಿ.ಸೋಮಣ್ಣ V.Somanna) ಗುರುವಾರ ಮೈಸೂರಿನಲ್ಲಿ (Mysuru) ಹೇಳಿದ್ದಾರೆ.
ಸುತ್ತೂರು ಮಠಕ್ಕೆ (Suttur Math) ಭೇಟಿ ನೀಡಿ ಶ್ರೀಗಳ ಆಶಿರ್ವಾದ ಪಡೆದು ಸುದ್ದಿಗಾರರೊಂದಿಗೆ ಮಾತನಾಡಿದರು. ನಾನು ಹಾಗೂ ಸಿದ್ದರಾಮಯ್ಯ ಒಂದೇ ಗರಡಿಯಲ್ಲಿ ಪಳಗಿದವರು. ವರುಣಾ ಕ್ಷೇತ್ರದಲ್ಲಿ ಈಗ ನಾನು ನೆಪ ಮಾತ್ರ. ಪಕ್ಷದಲ್ಲಿ ಯಾವ ಮುಖಂಡರು ಚಿಕ್ಕವರಲ್ಲ ಹಾಗೂ ದೊಡ್ಡವರಲ್ಲ. ಇಲ್ಲಿ ಪಕ್ಷ ಹಾಗೂ ಕಾರ್ಯಕರ್ತರು ದೊಡ್ಡವರು ಎಂದಿದ್ದಾರೆ. ಇದನ್ನೂ ಓದಿ: ಸ್ವಾತಂತ್ರ್ಯ ನಂತರ ಯಾದಗಿರಿ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಮಹಿಳೆಗೆ ಟಿಕೆಟ್
ಪ್ರಚಾರಕ್ಕೆ ಯಾರು ಬರುತ್ತಾರೆ, ಯಾರು ಬರುವುದಿಲ್ಲ ಎಂಬ ಚರ್ಚೆ ಅನಗತ್ಯ. ಎಲ್ಲರೂ ಸೇರಿಯೇ ನನ್ನನ್ನು ವರುಣಾ ಕ್ಷೇತ್ರದಲ್ಲಿ ಗೆಲ್ಲಿಸುತ್ತಾರೆ ಎಂದು ಅವರು ಭರವಸೆ ವ್ಯಕ್ತಪಡಿಸಿದ್ದಾರೆ.
ನನಗೆ 75 ವರ್ಷವಾದ ಮೇಲೆ ಬಿಜೆಪಿಯಲ್ಲಿ ಯಾವ ಸ್ಥಾನ ಸಿಗುತ್ತದೆ ಎಂಬುದು ನನಗೆ ಗೊತ್ತು. ನಾನು ಇಲ್ಲಿ ಶಾಶ್ವತ ಅಲ್ಲ. ಹಾಗೆಂದು ಇದು ನನ್ನ ಕೊನೆಯ ಚುನಾವಣೆ ಅಥವಾ ರಾಜಕೀಯ ನಿವೃತ್ತಿ ಅಲ್ಲ. ನಮ್ಮ ಪಕ್ಷದ ನಿಯಮಗಳಂತೆ ನಾನು ಇರುತ್ತೇನೆ. ಪಕ್ಷದೊಳಗೆ ಯಾರಾದರೂ ಇಲ್ಲ ಸಲ್ಲದ್ದನ್ನು ಮಾತಾಡುತ್ತಾರೆ. ಅದನ್ನು ದೊಡ್ಡ ವಿಚಾರವಾಗಿ ಬಿಂಬಿಸುವ ಅಗತ್ಯವಿಲ್ಲ ಎಂದಿದ್ದಾರೆ.
ಗೋವಿಂದರಾಜ ನಗರದ ಟಿಕೆಟ್ ವಿಚಾರ ಸಂಜೆಯೊಳಗೆ ಬಗೆಹರಿಯಲಿದೆ. ನಾಳೆಯಿಂದ ವರುಣಾ ಕ್ಷೇತ್ರದ ಪ್ರಚಾರ ಆರಂಭಿಸುತ್ತೇನೆ. ಕ್ಷೇತ್ರದ ಪ್ರತಿ ಹಳ್ಳಿಯನ್ನು ಸುತ್ತುತ್ತೇನೆ. ಏ.17 ರಂದು ವರುಣಾ (Varuna) ಕ್ಷೇತ್ರದಿಂದ ನಾಮಪತ್ರ ಸಲ್ಲಿಸುತ್ತೇನೆ. ಏ.19 ರಂದು ಚಾಮರಾಜನಗರ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಲಿದ್ದೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ರಾಜಕೀಯಕ್ಕೆ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಗುಡ್ ಬೈ
– ವರುಣಾದಲ್ಲಿ 3ನೇ ಬಾರಿ ಅದೃಷ್ಟ ಪರೀಕ್ಷೆಗೆ ಇಳಿದ ಸಿದ್ದರಾಮಯ್ಯ – ಸೋಮಣ್ಣಗೆ ಒಲಿಯುತ್ತಾ ಗೆಲುವು? – ವರುಣಾ ಕ್ಷೇತ್ರದ ರಾಜಕೀಯ, ಚುನಾವಣೆ, ಜಾತಿ ಲೆಕ್ಕಾಚಾರವೇನು?
ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ (Karnataka Election 2023) ವರುಣಾದಿಂದ ಸ್ಪರ್ಧಿಸುತ್ತಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರಿಗೆ ಠಕ್ಕರ್ ಕೊಡಲು ಬಿಜೆಪಿ ಮುಂದಾಗಿದೆ. ಲಿಂಗಾಯತ ಸಮುದಾಯದವರೇ ಹೆಚ್ಚಿರುವ ವರುಣಾದಿಂದ ಅದೇ ಸಮುದಾಯದ ಹಾಲಿ ಸಚಿವ ವಿ.ಸೋಮಣ್ಣ (V.Somanna) ಅವರ ಹೆಸರನ್ನು ಬಿಜೆಪಿ ಘೋಷಿಸಿದೆ. ಆ ಮೂಲಕ ಈ ಬಾರಿ ಚುನಾವಣೆಯಲ್ಲಿ ಈ ಕ್ಷೇತ್ರ ರಾಜಕೀಯವಾಗಿ ಹೆಚ್ಚು ಗಮನ ಸೆಳೆಯಲಿದೆ.
ವರುಣಾ (Varuna) ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸಾಮರ್ಥ್ಯ ಕುಂದಿಸಲು ಬಿಜೆಪಿ ಯೋಜನೆ ರೂಪಿಸಿತ್ತು. ಲಿಂಗಾಯತರೇ ಹೆಚ್ಚಿರುವ ಈ ಕ್ಷೇತ್ರದಲ್ಲಿ ಆ ಸಮುದಾಯದ ನಾಯಕರನ್ನೇ ಹುರಿಯಾಳಾಗಿಸಿ ಸಿದ್ದುಗೆ ಪ್ರಬಲ ಪೈಪೋಟಿ ನೀಡಲು ಪ್ಲ್ಯಾನ್ ಮಾಡಿತ್ತು. ಸಿದ್ದು ವಿರುದ್ಧ ಯಡಿಯೂರಪ್ಪ ಪುತ್ರ ವಿಜಯೇಂದ್ರನನ್ನು ಕಣ್ಣಕ್ಕಿಳಿಸಲು ಬಿಜೆಪಿ ಹೈಕಮಾಂಡ್ ಗ್ರೀನ್ ಸಿಗ್ನಲ್ ಕೊಟ್ಟಿತ್ತು. ಆದರೆ ಮಗನ ರಾಜಕೀಯ ಭವಿಷ್ಯ ಹಿತದೃಷ್ಟಿಯಿಂದ ವರುಣಾದಿಂದ ವಿಜಯೇಂದ್ರ ಸ್ಪರ್ಧೆಗೆ ಬಿಎಸ್‌ವೈ ವಿರೋಧ ವ್ಯಕ್ತಪಡಿಸಿದ್ದರು. ಈಗ ಸಿದ್ದು ವಿರುದ್ಧ ಸೆಣಸಲು ಸೋಮಣ್ಣ ಹುರಿಯಾಳಾಗಿದ್ದಾರೆ. ಇದನ್ನೂ ಓದಿ: ಚಾಮರಾಜನಗರದಲ್ಲಿ ಸೋಮಣ್ಣ ಕಟ್ಟಿ ಹಾಕಲು ಕಾಂಗ್ರೆಸ್ ಪ್ಲ್ಯಾನ್
ವರುಣಾದಲ್ಲಿ ಸಿದ್ದರಾಮಯ್ಯ ಅವರನ್ನು ಸೋಲಿಸಲು ಜಾತಿ ಲೆಕ್ಕಾಚಾರದಲ್ಲಿ ವಿ.ಸೋಮಣ್ಣ ಅವರನ್ನ ಬಿಜೆಪಿ ಕಣಕ್ಕಿಳಿಸಿದೆ. ಬಿಜೆಪಿ ಪ್ಲ್ಯಾನ್ ಯಶಸ್ವಿಯಾಗುತ್ತಾ? ಸ್ವಕ್ಷೇತ್ರ ಬಿಟ್ಟು ಸೋಮಣ್ಣ ಹೊರಗಿನ ಕ್ಷೇತ್ರದಲ್ಲಿ ಸ್ಪರ್ಧೆಗಿಳಿದಿದ್ದಾರೆ. ವರುಣಾದಲ್ಲಿ ಜಾತಿ ಮೇಲಾಟ ಸೋಮಣ್ಣ ಕೈ ಹಿಡಿಯಬಹುದೇ ಎಂಬ ಪ್ರಶ್ನೆ ಕೂಡ ಉದ್ಭವಿಸಿದೆ.
ಅದೇನೇ ಇರಲಿ, ವರುಣಾ ಕ್ಷೇತ್ರದ ರಾಜಕೀಯ ಇತಿಹಾಸ ಏನು? ಇಲ್ಲಿನ ಚುನಾವಣೆ ಹಾಗೂ ಜಾತಿ ಲೆಕ್ಕಾಚಾರ ಹೇಗಿದೆ? ಈ ಬಾರಿ ಮಾಜಿ ಸಿಎಂ ಸಿದ್ದರಾಮಯ್ಯ ಗೆದ್ದು ತವರು ಕ್ಷೇತ್ರದಲ್ಲಿ ನೆಲ ಭದ್ರಪಡಿಸಿಕೊಳ್ಳುತ್ತಾರಾ ಅಥವಾ ಕರ್ಮ ಭೂಮಿಯಲ್ಲಿ ಅದೃಷ್ಟ ಪರೀಕ್ಷೆಗಿಳಿದಿರುವ ಸೋಮಣ್ಣ ಜಯ ಗಳಿಸುತ್ತಾರಾ ಎಂಬ ಪ್ರಶ್ನೆಗಳು ರಾಜಕೀಯ ವಲಯದಲ್ಲಿ ಗಂಭೀರ ಚರ್ಚೆ ಹುಟ್ಟುಹಾಕಿವೆ.
ವರುಣಾ ಕ್ಷೇತ್ರದ ಇತಿಹಾಸವೇನು?
ರಾಜಕೀಯ ಇತಿಹಾಸವನ್ನು ಗಮನಿಸುವುದಾದರೆ, ವರುಣಾ ಮೊದಲು ಚಾಮುಂಡೇಶ್ವರಿ ಕ್ಷೇತ್ರದ ಭಾಗವೇ ಆಗಿತ್ತು. 2008ರಲ್ಲಿ ಚಾಮುಂಡೇಶ್ವರಿಯಿಂದ ವಿಭಜನೆಯಾಗಿ ವರುಣಾ ಕ್ಷೇತ್ರ ಸೃಷ್ಟಿಯಾಯಿತು. ಆ ಕಾಲಕ್ಕೆ ಚಾಮುಂಡೇಶ್ವರಿಯಲ್ಲಿ ಜನಪ್ರಿಯರಾಗಿದ್ದ ಸಿದ್ದರಾಮಯ್ಯಗೆ ಧರ್ಮ ಸಂಕಟ ಎದುರಾಯಿತು. ಮುಂದೆ ತನ್ನ ರಾಜಕೀಯ ಭವಿಷ್ಯವನ್ನು ಚಾಮುಂಡೇಶ್ವರಿಯಲ್ಲಿ ಕಟ್ಟಿಕೊಳ್ಳುವುದೋ ಅಥವಾ ವರುಣಾದಲ್ಲೋ ಎಂಬ ಇಕ್ಕಟ್ಟಿಗೆ ಸಿಲುಕಿದ್ದ ಸಿದ್ದರಾಮಯ್ಯ ಕೊನೆಗೆ ಆಯ್ದುಕೊಂಡಿದ್ದು ವರುಣಾವನ್ನೇ. ಇದನ್ನೂ ಓದಿ: 2 ಕಡೆ ಟಿಕೆಟ್ ಕೊಡ್ತಾರೆ ಅಂತ ಕನಸಲ್ಲೂ ಅನ್ಕೊಂಡಿರಲಿಲ್ಲ: ಸೋಮಣ್ಣ
ವರುಣಾ 4ನೇ ಚುನಾವಣೆಯಲ್ಲಿ ಯಾರು ಗೆಲ್ತಾರೆ?
ವರುಣಾ ಕ್ಷೇತ್ರ ವಿಭಜನೆಯಾದಾಗಿನಿಂದ ಇಲ್ಲಿಯವರೆಗೆ ಮೂರು ಚುನಾವಣೆ ನಡೆದಿದೆ. 3 ಚುನಾವಣೆಗಳ ಪೈಕಿ ಸಿದ್ದರಾಮಯ್ಯ 2 ಬಾರಿ ಹಾಗೂ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಒಂದು ಬಾರಿ ಗೆಲುವಿನ ನಗೆಬೀರಿದ್ದಾರೆ. 2023ರ ಚುನಾವಣೆಗೆ ಸಿದ್ದರಾಮಯ್ಯ ತಮ್ಮ ಪುತ್ರನ ಬದಲಾಗಿ ಮತ್ತೆ ಕಣಕ್ಕಿಳಿದಿದ್ದಾರೆ.
ವರುಣಾ ಚುನಾವಣಾ ಹಿನ್ನೋಟ
ಕ್ಷೇತ್ರ ಪುನರ್ ವಿಂಗಡಣೆ ಬಳಿಕ ವರುಣಾ ವಿಧಾನಸಭಾ ಕ್ಷೇತ್ರ ರಚನೆಯಾಗಿ 2008ರಲ್ಲಿ ಮೊದಲ ಚುನಾವಣೆ ನಡೆಯಿತು. ಆ ಸಂದರ್ಭದಲ್ಲಿ ಕಾಂಗ್ರೆಸ್‌ನಿಂದ ಸಿದ್ದರಾಮಯ್ಯ ಕಣಕ್ಕಿಳಿದು ಭರ್ಜರಿ ಗೆಲುವು ಸಾಧಿಸಿದ್ದರು. ಬಿಜೆಪಿ ಅಭ್ಯರ್ಥಿಯಾಗಿದ್ದ ಎಲ್.ರೇವಣಸಿದ್ದಯ್ಯ ವಿರುದ್ಧ 18,837 ಮತಗಳ ಅಂತರದಿಂದ ಜಯ ಗಳಿಸಿದ್ದರು.
2013ರ ವಿಧಾನಸಭಾ ಚುನಾವಣೆ ಮತ್ತೆ ಸಿದ್ದರಾಮಯ್ಯ ಅವರೇ ಸ್ಪರ್ಧಿಸುತ್ತಾರೆ. ಆ ವೇಳೆಗೆ ಬಿಜೆಪಿಯೊಂದಿಗಿನ ಭಿನ್ನಮತದಿಂದ ಪಕ್ಷ ತೊರೆದು ಹೊರಬಂದ ಯಡಿಯೂರಪ್ಪ ಕೆಜೆಪಿ ಎಂಬ ಪ್ರತ್ಯೇಕ ಪಕ್ಷ ಕಟ್ಟಿರುತ್ತಾರೆ. ಬಿಎಸ್‌ವೈ ಹೊಸ ಪಕ್ಷದಿಂದ ವರುಣಾದಲ್ಲಿ ಕಾಪು ಸಿದ್ದಲಿಂಗಸ್ವಾಮಿ ಸ್ಪರ್ಧಿಸಿರುತ್ತಾರೆ. ಸಿದ್ದರಾಮಯ್ಯ 19,641 ಮತಗಳ ಅಂತರದಿಂದ ಕಾಪು ಸಿದ್ದಲಿಂಗಸ್ವಾಮಿ ವಿರುದ್ಧ ಭರ್ಜರಿ ಜಯ ಗಳಿಸುತ್ತಾರೆ. ಈ ವಿಜಯದ ಬಳಿಕ ಸಿದ್ದರಾಮಯ್ಯ ರಾಜ್ಯದ ಮುಖ್ಯಮಂತ್ರಿ ಹುದ್ದೆ ಅಲಂಕರಿಸುತ್ತಾರೆ. ಇದನ್ನೂ ಓದಿ: ವರುಣಾದಲ್ಲಿ ಸೋಮಣ್ಣ Vs ಸಿದ್ದರಾಮಯ್ಯ – ಚಾಮರಾಜನಗರದಿಂದಲೂ ಟಿಕೆಟ್
2018ರ ಚುನಾವಣೆಯಲ್ಲಿ ಸಿದ್ದರಾಮಯ್ಯ ವರುಣಾ ಕ್ಷೇತ್ರವನ್ನು ಪುತ್ರ ಯತೀಂದ್ರನಿಗೆ ಬಿಟ್ಟುಕೊಟ್ಟು ಚಾಮುಂಡೇಶ್ವರಿ ಮತ್ತು ಬದಾಮಿಯಿಂದ ಕಣಕ್ಕಿಳಿದಿದ್ದರು. ಈ ಚುನಾವಣೆ ಮೂಲಕವೇ ರಾಜಕೀಯಕ್ಕೆ ಎಂಟ್ರಿಕೊಟ್ಟಿದ್ದ ಯತೀಂದ್ರ ತಂದೆಗಿಂತಲೂ ಹೆಚ್ಚಿನ ಮತಗಳನ್ನು ಪಡೆಯುವ ಮೂಲಕ ವರುಣಾದಲ್ಲಿ ಗಮನ ಸೆಳೆದಿದ್ದರು. ಈ ಚುನಾವಣೆಯಲ್ಲಿ 96,435 ಮತಗಳನ್ನು ಪಡೆದ ಯತೀಂದ್ರ, 58,616 ಮತಗಳ ಅಂತರದಿಂದ ಬಿಜೆಪಿ ಟಿ.ಬಸವರಾಜು ವಿರುದ್ಧ ಜಯಭೇರಿ ಬಾರಿಸಿದ್ದರು.
ಜಾತಿ ಲೆಕ್ಕಾಚಾರ ಏನು?
ವರುಣಾ ಕ್ಷೇತ್ರದಲ್ಲಿ ಜಾತಿವಾರು ಮತದಾರರನ್ನು ನೋಡುವುದಾದರೆ ಇಲ್ಲಿ ಸುಮಾರು 70,000 ಲಿಂಗಾಯತ ಮತದಾರರು ಇದ್ದಾರೆ. ಇವರನ್ನು ಹೊರತುಪಡಿಸಿದರೆ, ಅಂದಾಜು ಕುರುಬರು 35,000, ಪರಿಶಿಷ್ಟ ಜಾತಿಯ 43,000 ಮತದಾರರು, ಪರಿಶಿಷ್ಟ ಪಂಗಡದ 23,000, ಒಕ್ಕಲಿಗರು 12,000 ಹಾಗೂ ಇತರ ಹಿಂದುಳಿದ ವರ್ಗಗಳ ಸಮುದಾಯದವರು 12,000 ಮತದಾರರು ಇದ್ದಾರೆ. ಇದನ್ನೂ ಓದಿ: ಕನಕಪುರದಲ್ಲಿ ಮೋದಿ, ಶಾ ಆಟ ನಡೆಯೋದಿಲ್ಲ: ಡಿಕೆ ಸುರೇಶ್
ಸಿದ್ದು ತವರು ಕ್ಷೇತ್ರ ಉಳಿಸಿಕೊಳ್ತಾರಾ?
ಸಿದ್ದರಾಮಯ್ಯ ರಾಜಕೀಯ ಜೀವನದಲ್ಲಿ 2023ರ ಚುನಾವಣೆ ಮಹತ್ವದ್ದಾಗಿದೆ. ಇದು ನನ್ನ ಕೊನೆಯ ಚುನಾವಣೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಹೀಗಾಗಿ ಪುತ್ರ ಯತೀಂದ್ರ ತಂದೆಗೆ ವರುಣಾ ಕ್ಷೇತ್ರವನ್ನು ತ್ಯಾಗ ಮಾಡಿದ್ದಾರೆ. ಲಿಂಗಾಯತರೇ ಹೆಚ್ಚಿರುವ ಈ ಕ್ಷೇತ್ರದಲ್ಲಿ ಸಿದ್ದು ನೆಲ ಭದ್ರಪಡಿಸಿಕೊಳ್ಳುತ್ತಾರಾ ಎಂಬ ಪ್ರಶ್ನೆ ಮೂಡಿದೆ. ಲಿಂಗಾಯತ ಸಮುದಾಯದ ಸೋಮಣ್ಣ ಹುರಿಯಾಳಾಗಿರುವುದು ಸಿದ್ದು ನಿರಾಯಾಸದ ಗೆಲುವಿಗೆ ತೊಡರುಗಾಲು ಆಗಲಿದೆ ಎಂದು ಹೇಳಲಾಗುತ್ತಿದೆ. ಆದರೆ, ಈವರೆಗೆ ವರುಣಾ ಕ್ಷೇತ್ರದ ಲಿಂಗಾಯತ ಮತದಾರರು ಸಿದ್ದರಾಮಯ್ಯ ಅವರ ಬೆಂಬಲಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನಿಲ್ಲುತ್ತಿದ್ದ ಹಿನ್ನೆಲೆಯಲ್ಲಿ ಅವರ ಗೆಲುವು ಸುಲಭವಾಗುತ್ತಾ ಬಂದಿದೆ. ಈಗ ಇಬ್ಬರ ನಡುವೆ ಪ್ರಬಲ ಪೈಪೋಟಿ ನಡೆಯಲಿದೆ ಎಂಬ ಮಾತು ಒಂದು ಕಡೆಯಾದರೆ, ಲಿಂಗಾಯತ ಸಮುದಾಯ ಬಿಟ್ಟರೆ ವರುಣಾದಲ್ಲಿ ನಂತರದ ಸ್ಥಾನದಲ್ಲಿ ಕುರುಬ ಮತ್ತು ಪರಿಶಿಷ್ಟ ಜಾತಿ ಸಮುದಾಯ ಮತಗಳಿರುವುದರಿಂದ, ಈ ವರ್ಗಗಳ ಮತ ಸಿದ್ದರಾಮಯ್ಯ ಅವರಿಗೆ ಕಟ್ಟಿಟ್ಟ ಬುತ್ತಿ. ಅಲ್ಲದೇ ಹಿಂದುಳಿದ ವರ್ಗಗಳ ಮತದಾರರು ಕೂಡ ಸಿದ್ದು ಪರವಾಗಿದ್ದಾರೆ ಎಂಬುದು ರಾಜಕೀಯ ತಜ್ಞರ ಅಭಿಪ್ರಾಯ. ಇದು ಸಿದ್ದರಾಮಯ್ಯ ಗೆಲುವಿಗೆ ವರದಾನವಾಗಬಹುದು ಎನ್ನುವ ಮಾತು ಕೂಡ ಇದೆ.
ಅದೃಷ್ಟ ಪರೀಕ್ಷೆಯಲ್ಲಿ ಗೆಲ್ತಾರಾ ಸೋಮಣ್ಣ?
ಆರಂಭದಲ್ಲಿ ವರುಣಾದಲ್ಲಿ ಸ್ಪರ್ಧೆಯ ಸುಳಿವು ಸಿಕ್ಕಾಗ ಸೋಮಣ್ಣ ಹಿಂಜರಿದಿದ್ದರು. ಲಿಂಗಾಯತ ಮತಗಳನ್ನಷ್ಟೇ ನಂಬಿಕೊಂಡು ಚುನಾವಣೆಗೆ ಧುಮುಕಿದರೆ ಗೆಲುವು ಕಷ್ಟ ಎಂಬ ಅರಿವು ಕೂಡ ಅವರಿಗಿತ್ತು. ವರುಣಾ ಸ್ಪರ್ಧಿಸಬೇಕಾದರೆ ನನ್ನ ಮೊದಲ ಆದ್ಯತೆ ಗೋವಿಂದರಾಜನಗರ ಅಥವಾ ಚಾಮರಾಜನಗರ. ಇವರೆಡು ಕ್ಷೇತ್ರಗಳ ಪೈಕಿ ಯಾವುದಾದರು ಒಂದು ಕ್ಷೇತ್ರ ಕೊಟ್ಟು ಹೆಚ್ಚುವರಿಯಾಗಿ ವರುಣಾ ಕೊಟ್ಟರೆ ಮಾತ್ರ ಸ್ಪರ್ಧಿಸುತ್ತೇನೆ ಎಂದು ಹೈಕಮಾಂಡ್‌ಗೆ ಸೋಮಣ್ಣ ಸ್ಪಷ್ಟಪಡಿಸಿದ್ದರು. ಈಗ ಚಾಮರಾಜನಗರ ಜೊತೆಗೆ ವರುಣಾ ಕ್ಷೇತ್ರವನ್ನೂ ಪಕ್ಷ ಕೊಟ್ಟಿದೆ. ಇದರೊಂದಿಗೆ ಸೋಮಣ್ಣ ಅವರ ರಿಸ್ಕ್‌ನ್ನ ಹೈಕಮಾಂಡ್ ಕಡಿಮೆ ಮಾಡಿದೆ. ಆದರೆ ಸೋಮಣ್ಣ ಅವರನ್ನು ವರುಣಾ ಮತ್ತು ಚಾಮರಾಜನಗರದಲ್ಲಿ ಸ್ಪರ್ಧಿಸಲು ಅವಕಾಶ ಕೊಟ್ಟ ಹೈಕಮಾಂಡ್ ನಡೆ ಹಲವು ಅನುಮಾನಗಳಿಗೆ ಎಡೆಮಾಡಿದೆ. 70 ವರ್ಷ ದಾಟಿದ ಸೋಮಣ್ಣ ಅವರನ್ನು ಈಶ್ವರಪ್ಪ, ಶೆಟ್ಟರ್ ಮಾದರಿಯಲ್ಲಿ ನಿವೃತ್ತಿಗೊಳಿಸುವ ಎದೆಗಾರಿಕೆಯನ್ನು ತೋರದ ಹೈಕಮಾಂಡ್ ಜಾಣ ನಡೆ ಇಟ್ಟಿದೆ. ಈ ಮೂಲಕ ಪುತ್ರನಿಗೂ ಟಿಕೆಟ್ ಕೇಳುತ್ತಿದ್ದ ಸೋಮಣ್ಣ ಬೇಡಿಕೆಗೆ ಮನ್ನಣೆ ಕೊಡದಿರಲು ವರಿಷ್ಠರು ನಿರ್ಧರಿಸಿದ್ದಾರೆ. ವರುಣಾದಲ್ಲಿ ಸೋತು ಚಾಮರಾಜನಗರದಲ್ಲಿ ಗೆದ್ದರೆ ಸೋಮಣ್ಣ ಸೇಫ್. ಆದರೆ ಎರಡೂ ಕ್ಷೇತ್ರದಲ್ಲಿ ಸೋಮಣ್ಣಗೆ ಹಿನ್ನಡೆಯಾದರೆ ಅವರಿಗೆ ರಾಜಕೀಯವಾಗಿ ಈ ಚುನಾವಣೆ ಮಾರಕವಾಗಿ ಪರಿಣಮಿಸಲಿದೆ. ಈ ಮೂಲಕ 70 ವರ್ಷ ಮೀರಿರುವ ಸೋಮಣ್ಣ ಅವರನ್ನು ರಾಜಕೀಯವಾಗಿ ತೆರೆಗೆ ಸರಿಸುವ ತಂತ್ರಗಾರಿಕೆಯನ್ನು ಹೈಕಮಾಂಡ್ ಮಾಡಿದಂತಾಗಲಿದೆ.
ಬೆಂಗಳೂರು: ಎರಡು ಕಡೆ ಟಿಕೆಟ್ ಕೊಡ್ತಾರೆ ಅಂತಾ ನಾನು ಕನಸು ಮನಸಲ್ಲೂ ಅನ್ಕೊಂಡಿರಲಿಲ್ಲ. ವಿಧಿ ನಿಯಮ, ವರಿಷ್ಠರ ತೀರ್ಮಾನ ಎಂದು ಸಚಿವ ವಿ. ಸೋಮಣ್ಣ (V Somanna) ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೋವಿಂದರಾಜನಗರ ನನ್ನ ಜನ್ಮ ಭೂಮಿ. ವರುಣಾ (Varuna), ಚಾಮರಾಜನಗರ (Chamarajanagar) ನನ್ನ ಕರ್ಮ ಭೂಮಿಯಾಗಿದೆ. ಭಗವಂತನ ಇಚ್ಛೆ ಹೇಗಿದಿಯೊ ನೋಡೋಣ. ನಾಳೆಯಿಂದ ವರುಣಾ, ಚಾಮರಾಜನಗರದಲ್ಲಿ ಪ್ರಚಾರ ಶುರು ಮಾಡುತ್ತೇನೆ ಎಂದು ಹೇಳಿದರು.
ಗುಬ್ಬಿ, ಗೋವಿಂದರಾಜನಗರ ಮಗನಿಗೆ ಕೇಳಿದ್ದೇನೆ. ಈ ಬಗ್ಗೆ ಬಿಜೆಪಿ (BJP) ಹೈಕಮಾಂಡ್ ಜೊತೆಗೂ ಮಾತನಾಡಿದ್ದೇನೆ. ಮಗನಿಗೆ ಟಿಕೆಟ್ ಕೊಡೋದು ಬಿಡೋದು ಹೈಕಮಾಂಡ್‍ಗೆ ಬಿಟ್ಟದ್ದು, ಬೆಂಬಲಿಗರು ಸಂಯಮದಿಂದ ಇರಬೇಕು ಎಂದರು. ಇದನ್ನೂ ಓದಿ:ಟಿಕೆಟ್ ತಪ್ಪಿದ್ದಕ್ಕೆ ಲಕ್ಷ್ಮಣ ಸವದಿ ಕಣ್ಣೀರು
ಗೋವಿಂದರಾಜನಗರ ಕ್ಷೇತ್ರ ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ಸೋಮಣ್ಣನ ಮನೆ ಮುಂದೆ ನೂರಾರು ಕಾರ್ಯಕರ್ತರು ಜಮಾಯಿಸಿದರು. ಸೋಮಣ್ಣ ಮಗ ಡಾ. ಅರುಣ್ ಸೋಮಣ್ಣರಿಗೆ ಗೋವಿಂದರಾಜನಗರದಿಂದಲೇ ಟಿಕೆಟ್ ನೀಡುವಂತೆ ಒತ್ತಾಯ ಮಾಡಿದರು. ಬೇರೆವರಿಗೆ ಟಿಕೆಟ್ ನೀಡಿದ್ರೆ ನಮ್ಮ ಬೆಂಬಲಿಗರಿಗೆ ಕೆಲಸ ಮಾಡಲ್ಲ ಎಂದು ಆಕ್ರೋಶ ಹೊರಹಾಕಿದರು. ಇದನ್ನೂ ಓದಿ: ಬಿಜೆಪಿ ಟಿಕೆಟ್ – ಜಾತಿವಾರು ಲೆಕ್ಕಾಚಾರ ಏನು?
ನವದೆಹಲಿ/ಮೈಸೂರು: ವಸತಿ ಸಚಿವ ವಿ. ಸೋಮಣ್ಣ (V Somanna) ಅವರಿಗೆ ಮೈಸೂರು ಜಿಲ್ಲೆಯ ವರುಣಾ ಹಾಗೂ ಚಾಮರಾಜನಗರ ಜಿಲ್ಲೆ ಎರಡೂ ಕ್ಷೇತ್ರಗಳಿಂದ ಟಿಕೆಟ್ ಘೋಷಣೆ ಮಾಡಲಾಗಿದೆ. ಹಾಗಾಗಿ ವರುಣಾ ಕ್ಷೇತ್ರದಲ್ಲಿ (Varuna Constituency) ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ವಿರುದ್ಧ ವಿ. ಸೋಮಣ್ಣ ಕಣಕ್ಕಿಳಿಯಲಿದ್ದಾರೆ.
ಈ ಬಾರಿ ಸಿದ್ದರಾಮಯ್ಯ ಅವರ ವಿರುದ್ಧ ಪ್ರಬಲ ಪ್ರತಿಸ್ಪರ್ಧಿಯಾಗಿ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ (BS Yediyurappa) ಪುತ್ರ ಬಿ.ವೈ ವಿಜಯೇಂದ್ರ ಅವರನ್ನ ಕಣಕ್ಕಿಳಿಸಲು ಬಿಜೆಪಿ ಹೈಕಮಾಂಡ್ ಪ್ಲಾನ್ ಮಾಡಿತ್ತು. ಆದರೆ, ಬಿ.ಎಸ್ ಯಡಿಯೂರಪ್ಪ ಅವರು ವಿಜಯೇಂದ್ರ (BY Vijayendra)) ವರುಣಾ ಕ್ಷೇತ್ರದಿಂದ ಸ್ಪರ್ಧಿಸುವುದಿಲ್ಲ ಎಂದು ಖಚಿತಪಡಿಸಿದ್ದರು. ನಂತರ ಪ್ರಬಲ ಎದುರಾಳಿಯನ್ನ ಕಣಕ್ಕಿಳಿಸಲು ಪ್ಲಾನ್ ಮಾಡಿದ್ದ ಬಿಜೆಪಿ ಹೈಕಮಾಂಡ್ ವಿ. ಸೋಮಣ್ಣ ಅವರನ್ನ ಆಯ್ಕೆ ಮಾಡಿದೆ.
ವಿ. ಸೋಮಣ್ಣ ಅವರು ಪ್ರಸ್ತುತ ಪ್ರತಿನಿಧಿಸಿರುವ ಗೋವಿಂದರಾಜನಗರ ಕ್ಷೇತ್ರ ಹಾಗೂ ಚಾಮರಾಜನಗರದಿಂದ (Chamarajanagar) ಟಿಕೆಟ್ ಕೇಳಿದ್ದರು. ಆದರೆ ಸೋಮಣ್ಣ ಬಯಸಿದಂತೆ ಚಾಮರಾಜನಗರದಿಂದ ಟಿಕೆಟ್ ನೀಡಿದ್ದು, ಗೋವಿಂದರಾಜನಗರಕ್ಕೆ ಬದಲಾಗಿ ವರುಣಾ ಕ್ಷೇತ್ರದಿಂದ ಟಿಕೆಟ್ ಘೋಷಣೆ ಮಾಡಲಾಗಿದೆ. ಬಿ.ಎಸ್ ಯಡಿಯೂರಪ್ಪ ಅವರ ಪುತ್ರ ಬಿ.ವೈ ವಿಜಯೇಂದ್ರ ಅವರಿಗೆ ಶಿಕಾರಿಪುರದಿಂದಲೇ ಟಿಕೆಟ್ ನೀಡಲಾಗಿದೆ.
ಬೆಂಗಳೂರು: ನಾನು ವರುಣಾ ಕ್ಷೇತ್ರದಿಂದ ಸ್ಪರ್ಧಿಸುವುದಿಲ್ಲ, ಅದು ಮುಗಿದ ಅಧ್ಯಾಯ, ನಾನು ಕೇಳಿರೋದು ಚಾಮರಾಜನಗರ, ಗೋವಿಂದರಾಜನಗರವಾಗಿದೆ ಎಂದು ಸಚಿವ ವಿ. ಸೋಮಣ್ಣ (V Somanna) ತಿಳಿಸಿದರು.
ಪಬ್ಲಿಕ್ ಟಿವಿಗೆ ಮಾತನಾಡಿದ ಅವರು, ಇದರಲ್ಲಿ ಚಾಮರಾಜನಗರ (Chamarajanagar), ಗೋವಿಂದರಾಜನಗರದಲ್ಲಿ (Govindraj Nagar) ಒಂದನ್ನು ಕೊಟ್ಟರೆ ಸ್ಪರ್ಧೆ ಮಾಡುತ್ತೇನೆ. ವರುಣಾದಿಂದ (Varuna) ಸ್ಪರ್ಧೆ ಇಲ್ಲ. ಇದು ಹೈಕಮಾಂಡ್‍ಗೆ ಕೂಡ ಗೊತ್ತಿದೆ. ಹೈಕಮಾಂಡ್ ಏನು ಮಾಡುತ್ತೆ ನೋಡೋಣ ಎಂದು ಹೇಳಿದರು.
ಬೇರೆ ಅವರ ಮಕ್ಕಳಿಗೆ ಟಿಕೆಟ್ ಕೊಟ್ಟರೆ ನನ್ನ ಮಗನಿಗೂ ಟಿಕೆಟ್ ಕೊಡಿ, ಸಾಕಷ್ಟು ನಾಯಕರ ಮಕ್ಕಳು ಟಿಕೆಟ್ ಕೇಳುತ್ತಿದ್ದಾರೆ. ಅದಕ್ಕೆ ನಾನು ಕೇಳಿದ್ದೀನಿ, ಕೇಳೋದ್ರಲ್ಲಿ ಏನು ತಪ್ಪಿಲ್ಲ. ಹೈಕಮಾಂಡ್ ನಾಯಕರ ಭೇಟಿ ಮಾಡಿದ್ದೀನಿ, ಯಾರ‍್ಯಾರಿಗೆ ಮನವರಿಕೆ ಮಾಡಬೇಕೋ ಅವರಿಗೆ ಮನವರಿಕೆ ಆಗಿದೆ. ಹೇಗೆ ಮಾಡ್ತಾರೆ ನೋಡೋಣ. ನನ್ನ ಮಗನಿಗೂ ಕೊಡ್ತಾರಾ ನೋಡ್ತೀನಿ. ಬೇರೆ ಅವರಿಗೆ ಕೊಡೋದ್ರಿಂದ ನಾನು ಗುಬ್ಬಿಗೆ ಟಿಕೆಟ್ ಕೊಡಿ ಅಂತ ಕೇಳಿದ್ದೀನಿ ಎಂದರು. ಇದನ್ನೂ ಓದಿ:ಭಾರತದ ಪ್ರಾದೇಶಿಕ ಸಮಗ್ರತೆಯನ್ನು ಯಾರೂ ಪ್ರಶ್ನಿಸುವಂತಿಲ್ಲ: ಅಮಿತ್ ಶಾ
ಚಾಮರಾಜನಗರ: ನಗರದಲ್ಲಿ ನಡೆಸಲಾದ ಗೋ ಬ್ಯಾಕ್ ಸೋಮಣ್ಣ ಅಭಿಯಾನದ ಹಿಂದೆ ರಾಜಕೀಯ ಪಿತೂರಿ ಇದೆ. ನನ್ನನ್ನು ಸುಳ್ಳುಗಾರ ಎಂದು ಕರೆಯುವುದು ಎಷ್ಟು ಸರಿ? ಬೆಂಗಳೂರಿನಿಂದ ಫ್ಲೆಕ್ಸ್ ಬೋರ್ಡ್ ತಂದು ಹಾಕಿ ತೇಜೋವಧೆ ಮಾಡಿದ್ದು ಎಷ್ಟರ ಮಟ್ಟಿಗೆ ಸರಿ? ಎಂದು ಸಚಿವ ವಿ ಸೋಮಣ್ಣ (V Somanna) ಭಾವುಕರಾಗಿ ಪ್ರಶ್ನಿಸಿದ್ದಾರೆ.
ಮುರಿದ ರಥ ಹಾಗೂ ದೇವಸ್ಥಾನ ಜೀರ್ಣೋದ್ಧಾರ ಮಾಡಿಕೊಡುವುದಾಗಿ ಭರವಸೆ ನೀಡಿದ್ದ ಸೋಮಣ್ಣ ಕೊಟ್ಟ ಮಾತಿಗೆ ತಪ್ಪಿದ್ದಾರೆಂದು ಗೋಬ್ಯಾಕ್ ಸೋಮಣ್ಣ ಅಭಿಯಾನ ಆರಂಭಿಸಿದ್ದ ಚಾಮರಾಜನಗರ (Chamarajanagar) ತಾಲೂಕಿನ ಚನ್ನಪ್ಪನಪುರ ಅಮಚವಾಡಿ ಮತ್ತಿತರ ಗ್ರಾಮಸ್ಥರೊಂದಿಗೆ ಸೋಮಣ್ಣ ಸಭೆ ನಡೆಸಿದರು.
ಈ ಅಭಿಯಾನದ ಹಿಂದೆ ರಾಜಕೀಯ ಪಿತೂರಿ ಇರುವ ಬಗ್ಗೆ ಪರೋಕ್ಷವಾಗಿ ಪ್ರಸ್ತಾಪಿಸಿದ ಸೋಮಣ್ಣ ನಾನೇನು ತಪ್ಪು ಮಾಡಿದ್ದೇನೆ? ನನ್ನನ್ನು ಖಳನಾಯಕನನ್ನಾಗಿ ಮಾಡಿದ್ದೀರಿ. ಯಾರೋ ಸೃಷ್ಟಿ ಮಾಡಿ ಕಳಿಸುತ್ತಾರೆ. ಯಾರದ್ದೋ ಮಾತು ಕೇಳಿ ಕೆಟ್ಟದಾಗಿ ನಡೆದುಕೊಂಡರೆ ಹೇಗೆ? ಇನ್ನೊಬ್ಬರ ಮುಲಾಜಿಗೋಸ್ಕರ, ಇನ್ನೊಬ್ಬರನ್ನು ತೃಪ್ತಿಪಡಿಸಲು ನನ್ನನ್ನು ಕೆಟ್ಟದಾಗಿ ಬಿಂಬಿಸಿ ಹರಾಜು ಹಾಕಿದ್ದೀರಿ ಎಂದು ತೀವ್ರ ಅಸಮಾಧಾನ ಹೊರಹಾಕಿದರು. ಇದನ್ನೂ ಓದಿ: ಮುಸ್ಲಿಮರು 3 ಕಡೆ ಲಾಭ ಪಡೆಯುತ್ತಿದ್ದಾರೆ; ಮೀಸಲಾತಿ ಇವರಪ್ಪನ ಮನೆಯದ್ದಾ – ಯತ್ನಾಳ್ ಪ್ರಶ್ನೆ
ದೇವರ ಹತ್ರ ಪಾಲಿಟಿಕ್ಸ್, ಚಿಲ್ಲರೆ ಕೆಲಸ ಮಾಡಬಾರದು, ಕಳೆದು ಹೋಗ್ತೀರಿ ಎಂದಂತಹ ಅವರು ತಮ್ಮ ರಾಜಕೀಯ ವಿರೋಧಿಗಳಿಗೆ ಎಚ್ಚರಿಕೆ ನೀಡಿದರು. ದೇವಸ್ಥಾನ ಸ್ವಚ್ಛವಾಗಿ ಇಟ್ಟುಕೊಳ್ಳಿ ಎನ್ನುವುದೇ ತಪ್ಪಾ? ತಪ್ಪಾಗಿದ್ದರೆ ಕ್ಷಮಿಸಿ. ನನ್ನ ತೇಜೋವಧೆ ಮಾಡಿದ್ದಕ್ಕೆ ದೇವಸ್ಥಾನ ಹೇಗೆ ಅಭಿವೃದ್ಧಿ ಮಾಡುತ್ತೇನೆ ನೋಡ್ತಾ ಇರಿ. ರಥ ನಿರ್ಮಾಣ ಹಾಗೂ ದೇವಸ್ಥಾನ ಅಭಿವೃದ್ಧಿಗೆ ಕ್ರಮ ವಹಿಸುತ್ತೇನೆ ಎಂದು ಭರವಸೆ ನೀಡಿದರು. ಇದನ್ನೂ ಓದಿ: ಮೈಸೂರಿನ ಸಮಾರಂಭದಲ್ಲಿ ಪಾಲ್ಗೊಳ್ಳಲು ಹೊರಟಾಗ ದೊಡ್ಡಗೌಡ್ರ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದ ಪತ್ನಿ