ಚಾಮರಾಜನಗರ: 2006ರ ಚುನಾವಣೆಯಲ್ಲಿ (2006 Election) ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯಗೋಸ್ಕರ (Siddaramaiah) ಒದೆ ತಿಂದಿದ್ದೇನೆ ಎಂದು ಸಚಿವ ವಿ.ಸೋಮಣ್ಣ (V Somanna) ಹೇಳಿದ್ದಾರೆ.
2006ರ ವಿಧಾನಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯಗೋಸ್ಕರ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಒದೆ ತಿಂದಿದ್ದೇನೆ. ಬರಿಮೈಯಲ್ಲಿ ದೇವಲಾಪುರದಿಂದ ಮೈಸೂರಿಗೆ ಹೋಗಿದ್ದೇನೆ. ಆವತ್ತು ನನ್ನ ಕಾರಿನ ಗ್ಲಾಸ್ ಒಡೆದಿದ್ರು, ಪ್ಯಾಂಟ್ ಹರಿದು ಹಾಕಿದ್ದರು. ಅಂದು ನನ್ನ ಸಮುದಾಯದವರನ್ನೇ ಎದುರು ಹಾಕಿಕೊಂಡು ಅವರಿಗೋಸ್ಕರ ಕೆಲಸ ಮಾಡಿದ್ದೆ. ಇದೆಲ್ಲಾ ಸಿದ್ದರಾಮಯ್ಯ ಸಾಹೇಬರ ತಲೇಲಿ ಇಲ್ಲ ಎಂದು ಕುಟುಕಿದ್ದಾರೆ. ಇದನ್ನೂ ಓದಿ: ಲಿಂಗಾಯತರನ್ನು ಸಿಎಂ ಮಾಡುತ್ತೇವೆ ಎಂದು ಕಾಂಗ್ರೆಸ್ ಘೋಷಣೆ ಮಾಡಲಿ : ಸೋಮಣ್ಣ ಸವಾಲು
ನಾನು ಸಾಹೇಬ್ರೆ ಅಂತೀನಿ ಅವರು ಏಕ ವಚನದಲ್ಲಿ ಮಾತನಾಡ್ತಾರೆ, ಇದೇ ನನಗು ಅವರಿಗು ಇರೋ ವ್ಯತ್ಯಾಸ. ಸಿದ್ದರಾಮಯ್ಯ ಈಗ ವಿರೋಧ ಪಕ್ಷದ ನಾಯಕರೂ ಅಲ್ಲ ನಾನು ಮಂತ್ರಿನೂ ಅಲ್ಲ, ನಾನೂ ಅಭ್ಯರ್ಥಿ, ಅವರೂ ಅಭ್ಯರ್ಥಿ. ನಾನು ಅವರನ್ನು ಮುತ್ಸದ್ದಿ ನಾಯಕ ಎಂದು ಭಾವಿಸಿದ್ದೆ, ಅವರು ಅವನ್ಯಾರು, ಇವನ್ಯಾರು ಅನ್ನೋ ಡೈಲಾಗ್ ಕಡಿಮೆ ಮಾಡಿದ್ರೆ ಒಳ್ಳೇದು. ರಾಜಕೀಯದಲ್ಲಿ ತಾಳ್ಮೆ ಮುಖ್ಯ ಎಂದ ಸೋಮಣ್ಣ, ನಾನು ವರುಣಾದಲ್ಲಿ ಸ್ಪರ್ಧೆ ಮಾಡ್ತಿರೋದು ವಿಧಿ ನಿಯಮ ಎಂದು ಹೇಳಿದ್ದಾರೆ.
ಚಾಮರಾಜನಗರ: ನಾನು ಮುಂದಿನ ಸಿಎಂ ಎಂಬ ಅಭಿಮಾನಿಗಳ ಆಶಯದ ವಿಚಾರವಾಗಿ ನನಗೆ ಖುಷಿಯೂ ಆಗುತ್ತದೆ, ನೋವು ಆಗುತ್ತದೆ ಎಂದು ಸಚಿವ ಸೋಮಣ್ಣ (V.Somanna) ಹೇಳಿದ್ದಾರೆ.
ಚಾಮರಾಜನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದಿನ ಸಿಎಂ ನಾನು ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ಇದನ್ನು ಮತ್ತೆ ಮತ್ತೆ ಹೇಳಿ ನನಗೆ ಶತ್ರುಗಳನ್ನು ಹೆಚ್ಚಿಸಬೇಡಿ. ಮುಂದೆ ಸಿಎಂ ಯಾರಾಗಬೇಕು ಎಂಬುದನ್ನು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ (B.S Yediyurappa) ಮತ್ತು ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಚರ್ಚೆ ಮಾಡುತ್ತಾರೆ ಎಂದಿದ್ದಾರೆ. ಇದನ್ನೂ ಓದಿ: ಮತದಾನ ಬಹಿಷ್ಕಾರದ ಎಚ್ಚರಿಕೆ ಬೆನ್ನಲ್ಲೇ ಗ್ರಾಮಕ್ಕೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿದ ಜಿಲ್ಲಾಡಳಿತ
ವಿಪಕ್ಷ ನಾಯಕರ ಲಿಂಗಾಯತರನ್ನು ಬಿಜೆಪಿ ಕಡೆಗಣಿಸುತ್ತಿದೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಯಲ್ಲಿ (BJP) ವೀರಶೈವ ಲಿಂಗಾಯತರನ್ನು ಮೂಲೆಗುಂಪು ಮಾಡುವ ಸಂದರ್ಭ ಯಾವುದೇ ಕಾರಣಕ್ಕೂ ಬರುವುದಿಲ್ಲ. ವೀರಶೈವ ಲಿಂಗಾಯತರನ್ನು ಮೂಲೆಗುಂಪು ಮಾಡುವುದು ಕಾಂಗ್ರೆಸ್ (Congress) ಮಾತ್ರ ಎಂದು ಅವರು ಆರೋಪಿಸಿದ್ದಾರೆ.
ಮುಂದೆ ವೀರಶೈವ ಲಿಂಗಾಯತ ಸಮುದಾಯಕ್ಕೆ ಸಮಸ್ಯೆಯಾದರೆ ಏನು ಮಾಡಬೇಕೆಂದು ಬುಧವಾರ ಸಮುದಾಯದ ನಾಯಕರು ಸಭೆ ಮಾಡಿದ್ದೇವೆ. ವೀರೇಂದ್ರ ಪಾಟೀಲ್ ಹಾಗೂ ನಿಜಲಿಂಗಪ್ಪ ಅವರ ಕಾಲದಲ್ಲಿ ಏನು ಬೆಳವಣಿಗೆಯಾಗಿದೆ ಎಂಬುದನ್ನು ಚರ್ಚಿಸಿದ್ದೇವೆ. ಕಾಂಗ್ರೆಸ್‍ನವರು ಗಂಟೆಗೊಂದು ದಾಳ ಉರುಳಿಸುತ್ತಾರೆ. ಈ ದಾಳ ಯಾವ ಪರಿಣಾಮವನ್ನೂ ಬೀರುವುದಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಶಾಸಕನ ವಿರುದ್ಧ ತೊಡೆ ತಟ್ಟಿದ್ದ ಇಬ್ಬರು ಪಕ್ಷೇತರ ಅಭ್ಯರ್ಥಿಗಳು ಒಂದೇ ವಾಹನದಲ್ಲಿ ಬಂದು ನಾಮಪತ್ರ ಸಲ್ಲಿಕೆ
ಬೆಂಗಳೂರು: ಕಾಂಗ್ರೆಸ್‍ನಲ್ಲಿ (Congress) ಮೊದಲೇ ಸಿಎಂ ಅಭ್ಯರ್ಥಿಯನ್ನು ಘೋಷಣೆ ಮಾಡುವ ಸಂಸ್ಕೃತಿ ಇಲ್ಲ ಎಂದು ಸಚಿವ ವಿ. ಸೋಮಣ್ಣಗೆ (V Somanna) ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ತಿರುಗೇಟು ನೀಡಿದರು.
ಕಾಂಗ್ರೆಸ್‍ನವರು ಲಿಂಗಾಯತ ಸಿಎಂ ಅಂತ ಘೋಷಣೆ ಮಾಡಲಿ ಎಂಬ ಸಚಿವ ಸೋಮಣ್ಣ ಸವಾಲ್‌ಗೆ ಪ್ರತಿಕ್ರಿಯಿಸಿದ ಅವರು, ಯಾವ ಸೋಮಣ್ಣ? ಸವಾಲ್ ಎಂದರೇನು? ಕಾಂಗ್ರೆಸ್‍ನಲ್ಲಿ ಮೊದಲೇ ಸಿಎಂ ಅಭ್ಯರ್ಥಿಯನ್ನು ಘೋಷಣೆ ಮಾಡುವ ಸಂಸ್ಕೃತಿ ಇಲ್ಲ. ಹೊಸದಾಗಿ ಆಯ್ಕೆ ಆದ ಶಾಸಕರು ಹಾಗೂ ಹೈಕಮಾಂಡ್ ಸಿಎಂ ಬಗ್ಗೆ ತೀರ್ಮಾನ ಮಾಡುತ್ತಾರೆ. ಇದು ಕಾಂಗ್ರೆಸ್‍ನ ಪ್ರಜಾಪ್ರಭುತ್ವ ವ್ಯವಸ್ಥೆಯಾಗಿದೆ ಎಂದು ಹೇಳಿದರು.
ಲಿಂಗಾಯತ ಸಿಎಂ ವಿಚಾರವಾಗಿ ಬಿಜೆಪಿ (BJP) ಲಿಂಗಾಯತ ನಾಯಕರ ಸಭೆಗೆ ಸಂಬಂಧಿಸಿ ಪ್ರತಿಕ್ರಿಯಿಸಿದ ಅವರು, ಅದು ಬಿಜೆಪಿ ಆಂತರಿಕ ವಿಚಾರವಾಗಿದೆ. ಈ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಅವರ ಆಂತರಿಕ ವಿಚಾರದ ಬಗ್ಗೆ ನಾನು ಮಾತನಾಡುವುದಿಲ್ಲ ಎಂದ ಅವರು, ಹೆಚ್. ವಿಶ್ವನಾಥ್ ಪಕ್ಷ ಸೇರ್ಪಡೆ ಆಗಿಲ್ಲ. ಯಾರು ಹೇಳಿದ್ದು ಅವರು ಸೇರ್ಪಡೆ ಆಗಿದ್ದಾರೆ. ಅವರು ಬೆಂಬಲ ಕೊಟ್ಟಿದ್ದಾರೆ ಅಷ್ಟೆ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: 50 ವರ್ಷಗಳಿಂದ ಕಾಂಗ್ರೆಸ್ ಲಿಂಗಾಯತರನ್ನು ಮುಖ್ಯಮಂತ್ರಿ ಮಾಡಿಲ್ಲ: ಬೊಮ್ಮಾಯಿ
ಸೂರತ್ ಕೋರ್ಟ್‍ನಲ್ಲಿ ರಾಹುಲ್ ಗಾಂಧಿ ಅರ್ಜಿ ವಜಾ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಕೆಳಹಂತದ ಕೋರ್ಟ್‍ನಲ್ಲಿ ಆದೇಶ ಆಗಿದೆ. ಹೈಕೋರ್ಟ್‍ಗೆ ಮೇಲ್ಮನವಿ ಸಲ್ಲಿಸಬಹುದು ಎಂದ ಅವರು, ಮುಳಬಾಗಿಲು ಕಾಂಗ್ರೆಸ್ ಅಭ್ಯರ್ಥಿ ಬದಲಾವಣೆ ಬಗ್ಗೆ ಗೊತ್ತಿಲ್ಲ. ಪಕ್ಷದ ಹೈಕಮಾಂಡ್, ಅಧ್ಯಕ್ಷರು ಈ ಬಗ್ಗೆ ನಿರ್ಧಾರ ಮಾಡುತ್ತಾರೆ. ಈ ಬಗ್ಗೆ ನನಗೆ ಗೊತ್ತಿಲ್ಲ ಎಂದು ಹೇಳಿದರು. ಇದನ್ನೂ ಓದಿ:ಲಿಂಗಾಯತರನ್ನು ಸಿಎಂ ಮಾಡುತ್ತೇವೆ ಎಂದು ಕಾಂಗ್ರೆಸ್ ಘೋಷಣೆ ಮಾಡಲಿ : ಸೋಮಣ್ಣ ಸವಾಲು
ಚಾಮರಾಜನಗರ: ಲಿಂಗಾಯತರನ್ನು ಮುಖ್ಯಮಂತ್ರಿ ಮಾಡುತ್ತೇವೆ ಎಂದು ಕಾಂಗ್ರೆಸ್‍ನವರು (Congress) ಘೋಷಣೆ ಮಾಡಲಿ ಎಂದು ಸಚಿವ ವಿ. ಸೋಮಣ್ಣ (V Somanna) ಸವಾಲು ಹಾಕಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಗದೀಶ್ ಶೆಟ್ಟರ್ (Jagadish Shettar), ಸವದಿ ಅಂತೀರಲ್ಲಾ. ಹಾಗಾದ್ರೆ ಶೆಟ್ಟರ್ ಅವರನ್ನು ಮುಖ್ಯಮಂತ್ರಿ ಮಾಡಲಿ ನೋಡೊಣ. ಲಿಂಗಾಯತರು ಸ್ವಾಭಿಮಾನಿಗಳು, ಆದರೆ ದಡ್ಡರಲ್ಲ. ವೋಟ್ ಬ್ಯಾಂಕ್ ಮಾಡಿಕೊಂಡ ವರ್ಗಗಳಿಗೆ 75 ವರ್ಷಗಳಾದ್ರೂ ಏನು ಮಾಡಿಲ್ಲ. ಜನ ಬದಲಾವಣೆ ಬಯಸಿದ್ದಾರೆ. ಲಿಂಗಾಯತರು ಬುದ್ದಿವಂತರು ಮತ್ತು ಪ್ರಜ್ಞಾವಂತರು ಎಂದು ಹೇಳಿದರು.
ಲಿಂಗಾಯತರನ್ನು ಬ್ಲಾಕ್ ಮೇಲ್ ಮಾಡಲು ಹೊರಟ್ರೆ ನಿಮಗೆ ನಿರಾಸೆಯಾಗುತ್ತದೆ. ಯೂಸ್ ಅಂಡ್ ಥ್ರೋ ಮಾಡುವ ತಂತ್ರಗಾರಿಕೆ ಬೇಡ. ವೀರೇಂದ್ರ ಪಾಟೀಲ್ ತೆಗೆದವರು ಯಾರು? ರಾಜಶೇಖರ್ ಮೂರ್ತಿ ಓಡಿಸಿದವರು ಯಾರು? ನಿಜಲಿಂಗಪ್ಪ ಅವರನ್ನು ದೇಶ ಬಿಟ್ಟು ಕಳಿಸಿದವರು ಯಾರು ಎಂದ ಅವರು, ಕಾಂಗ್ರೆಸ್‍ನವರು ಗಂಟೆಗೊಂದು, ಗಳಿಗೆಗೊಂದು ದಾಳ ಉರುಳಿಸುತ್ತಾರೆ. ಈ ದಾಳ ಏನು ನಡೆಯಲ್ಲ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಲಿಂಗಾಯತರು ಸಭೆ ಸೇರಿದ ವಿಚಾರವಾಗಿ ಮಾತನಾಡಿದ ಅವರು, ನಾಳೆ ದಿನ ಲಿಂಗಾಯತ ಸಮುದಾಯಕ್ಕೆ ಹೆಚ್ಚು ಕಮ್ಮಿ ಆದ್ರೆ ಮುಂದೆ ಏನು ಮಾಡಬೇಕೆಂಬ ಬಗ್ಗೆ ಚರ್ಚೆ ಮಾಡಿದ್ದೇವೆ. ವಿರೇಂದ್ರ ಪಾಟೀಲ್, ನಿಜಲಿಂಗಪ್ಪ ಅವರ ಕಾಲದಲ್ಲಿ ಏನು ವ್ಯತ್ಯಾಸ ಆಯ್ತು. ಅದನ್ನೆಲ್ಲ ಚರ್ಚೆ ಮಾಡಿದೆವು. ಮುಂದೆ ಸಿಎಂ ಯಾರಾಗಬೇಕು ಎಂಬುದನ್ನು ಯಡಿಯೂರಪ್ಪ (BS Yediyurappa) ಮತ್ತು ಬೊಮ್ಮಾಯಿ (Basavaraj Bommai) ಚರ್ಚೆ ಮಾಡುತ್ತಾರೆ. ವೀರಶೈವರನ್ನು ಮೂಲೆ ಗುಂಪು ಮಾಡುವ ಸಂದರ್ಭ ಯಾವುದೇ ಕಾರಣಕ್ಕೂ ಬರಲ್ಲ. ವೀರಶೈವರನ್ನು ಮೂಲೆಗುಂಪು ಮಾಡುವುದು ಕಾಂಗ್ರೆಸ್ ಮಾತ್ರ ಎಂದರು.
ಸೋಮಣ್ಣ ಮುಂದಿನ ಸಿಎಂ ವಿಚಾರವಾಗಿ ಮಾತನಾಡಿದ ಅವರು, ನನಗೆ ಖುಷಿನೂ ಆಗುತ್ತೆ. ನೋವು ಆಗುತ್ತೆ. ಈ ರೀತಿ ಹೇಳಿ ನನಗೆ ಶತ್ರುಗಳನ್ನು ಜಾಸ್ತಿ ಮಾಡಬೇಡಿ ಎಂದು ಮನವಿ ಮಾಡಿದ ಅವರು, ಬಿ.ಎಲ್.ಸಂತೋಷ್ ಒಬ್ಬರು 24*7 ಸಕ್ರೀಯ ಕಾರ್ಯಕರ್ತರು. ಅವರಿಗೆ ಯಾವುದೇ ಆಸೆ ಆಕಾಂಕ್ಷೆಗಳಿಲ್ಲ. ಬಿ.ಎಲ್. ಸಂತೋಷ್ ಬಗ್ಗೆ ಮಾತನಾಡಲು ಏನು ಇಲ್ಲ. ಅವರು ಇಡೀ ರಾಷ್ಟ್ರದಲ್ಲಿ ಪಕ್ಷ ಸಂಘಟನೆ ಮಾಡುತ್ತಿದ್ದಾರೆ. ಅವರು ನಮ್ಮ ರಾಜ್ಯದವರು ಎಂದು ಹೆಮ್ಮ ಪಡಬೇಕು ಎಂದು ಹೇಳಿದರು.
ಕಾಂಗ್ರೆಸ್‍ನವರು ಕೇವಲ ತೌಡು ಕುಟ್ಟುವ ಕೆಲಸ ಮಾಡುತ್ತಿದ್ದಾರೆ. ಕಾಂಗ್ರೆಸ್‍ನವರಿಗೆ ಬೇರೆ ಏನು ಹೇಳಲು ಆಗುತ್ತಿಲ್ಲ. ಮೋದಿ, ಅಮಿತ್ ಶಾ, ಸೋಮಣ್ಣ ಮೇಲೆ ಏನು ಹೇಳಕಾಗುತ್ತೆ? ಅದಕ್ಕೆ ಈ ರೀತಿ ಹೇಳುತ್ತಾರೆ. ನೀವೇನೆ ಬಾಯಿ ಬಡಿದುಕೊಂಡ್ರು ಲಿಂಗಾಯತರು ನಂಬುವುದಿಲ್ಲ. ಜಗದೀಶ್ ಶೆಟ್ಟರ್ ನಮಗೆ ಬೇಕಾದವರು. ನೀವು ರಾಜ್ಯಸಭಾ ಸದಸ್ಯರಾಗಿ ಮಂತ್ರಿ ಆಗಿ ಎಂದು ಹೈಕಮಾಂಡ್ ಹೇಳಿತ್ತು. ನಿಮ್ಮ ಮನೆಯವರನ್ನೇ ಅಭ್ಯರ್ಥಿ ಮಾಡಿ ಎಂದು ಹೇಳಿತ್ತು. ಆದ್ರೆ ಅವರು ಕೇಳಲಿಲ್ಲ. ನಿಮ್ಮನ್ನು ಮುಖ್ಯಮಂತ್ರಿ, ಸ್ಪೀಕರ್, ವಿಪಕ್ಷ ನಾಯಕರನ್ನಾಗಿ ಮಾಡಿದ್ದು ಯಾರು? ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ಮಾಡಿದ್ದು ಯಾರು? ಶೆಟ್ಟರ್ ಇಷ್ಟೊಂದು ವೀಕ್ ಮೈಂಡೆಡ್ ಎಂದು ಗೊತ್ತಿರಲಿಲ್ಲ ಎಂದು ಗುಡುಗಿದರು. ಇದನ್ನೂ ಓದಿ: ಅತಿಕ್ ಸಮಾಧಿಗೆ ತ್ರಿವರ್ಣ ಧ್ವಜ ಹಾಕಿದ ಕಾಂಗ್ರೆಸ್ ನಾಯಕ ಅರೆಸ್ಟ್
ಶೆಟ್ಟರ್ ಇನ್ನು 6 ತಿಂಗಳು ಕೂಡ ಕಾಂಗ್ರೆಸ್‍ನಲ್ಲಿ ಇರಲ್ಲ. ಅಲ್ಲಿ ಉಸಿರುಗಟ್ಟಿಸುವ ವಾತಾವರಣ ಇದೆ. ಒಂದೆಡೆ ಸಿದ್ದರಾಮಯ್ಯ, ಒಂದೆಡೆ ಖರ್ಗೆ, ಒಂದೆಡೆ ಡಿಕೆಶಿ ಮತ್ತೊಂದೆಡೆ ಪರಮೇಶ್ವರ್ ಇದ್ದಾರೆ. ಕಾಂಗ್ರೆಸ್ ನವರದು ಬರೀ ಮೊಸಳೆ ಕಣ್ಣೀರು. ಯಾಕೆ ನೀವು ದುಡುಕಿನ ತೀರ್ಮಾನ ತೆಗೆದುಕೊಂಡ್ರಿ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಡಿಕೆಶಿ ಟಿಕೆಟ್ ಮಾರಾಟ ಮಾಡಿದ್ದಾರೆ : ಮೊಯಿದ್ದೀನ್ ಬಾವಾ ಆರೋಪ
ಚಾಮರಾಜನಗರ: ಸಚಿವ ವಿ. ಸೋಮಣ್ಣ (V Somanna) ವರುಣಾ ಬಳಿಕ ಬುಧವಾರ ಚಾಮರಾಜನಗರದಲ್ಲಿ (Chamarajanagar Constituency) ತಮ್ಮ ಉಮೇದುವಾರಿಕೆ ಸಲ್ಲಿಸಿದ್ದು, ಆಸ್ತಿ ವಿವರಗಳನ್ನ ಘೋಷಣೆ ಮಾಡಿದ್ದಾರೆ.
ಚರಾಸ್ತಿ ವಿಚಾರ ಗಮನಿಸಿದರೇ ಸೋಮಣ್ಣಗಿಂತ ಪತ್ನಿ ಶೈಲಜಾ ಶ್ರೀಮಂತರಾಗಿದ್ದು ಸೋಮಣ್ಣ (V Somanna) ಬಳಿ ಚರಾಸ್ತಿ 3.61 ಕೋಟಿ ಅಷ್ಟಿದ್ದರೇ, ಪತ್ನಿ ಶೈಲಜಾ 13.01 ಕೋಟಿ ಮೌಲ್ಯದ ಚರಾಸ್ತಿ ಹೊಂದಿದ್ದಾರೆ. ಪತಿಗಿಂತ ಶೈಲಜಾ ಶ್ರೀಮಂತರಾದರೂ ಯಾವುದೇ ವಾಹನ ಹೊಂದಿಲ್ಲ. ಆದರೆ ಸೋಮಣ್ಣ 3 ಕಾರುಗಳ ಮಾಲೀಕರಾಗಿದ್ದಾರೆ. ಇದನ್ನೂ ಓದಿ: ಟಿಕೆಟ್ ಮಾರಿಕೊಂಡ ವೀಡಿಯೋ ಇದ್ರೆ, ತಲೆ ಬೋಳಿಸಿಕೊಂಡು ರಾಜೀನಾಮೆ ನೀಡುತ್ತೇನೆ: ಅಶೋಕ್ ಖೇಣಿ
ಸೋಮಣ್ಣ ಅವರ ಬಳಿ 4.1 ಲಕ್ಷ ರೂ. ನಗದು ಇದ್ದರೇ, ಅವರ ಪತ್ನಿ 9.99 ಲಕ್ಷ ರೂ. ನಗದನ್ನ ಹೊಂದಿದ್ದಾರೆ. ಇನ್ನೂ ಪತಿ- ಪತ್ನಿ ಇಬ್ಬರೂ ಸಾಲ ಹೊಂದಿದ್ದು ಸೋಮಣ್ಣಗೆ 2.9 ಕೋಟಿ ರೂ.ನಷ್ಟು ಸಾಲ ಇದ್ದರೇ ಪತ್ನಿ ಶೈಲಜಾ ಅವರಿಗೆ 4.5 ಕೋಟಿ ರೂ. ಸಾಲ ಇದ್ದು, ಪತ್ನಿ ಶೈಲಜಾ ಅವರ ಬಳಿಯೇ ಸೋಮಣ್ಣ 20 ಲಕ್ಷ ಸಾಲ ಪಡೆದಿದ್ದಾರೆ. ಸೋಮಣ್ಣ ಬಳಿ 10 ಕೋಟಿ ಮೌಲ್ಯದ ಸ್ಥಿರಾಸ್ತಿ ಹೊಂದಿದ್ದರೇ, ಪತ್ನಿ 21 ಕೋಟಿಯಷ್ಟು ಸ್ಥಿರಾಸ್ತಿ ಹೊಂದಿದ್ದಾರೆ. ಇಬ್ಬರದೂ ಸ್ವಯಾರ್ಜಿತ ಆಸ್ತಿಯಾಗಿದ್ದು ಪಿತ್ರಾರ್ಜಿತವಾಗಿ ಯಾವುದೂ ಬಂದಿಲ್ಲ.
ವಾಟಾಳ್ ಕೋಟ್ಯಾಧೀಶ:
ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಸಹ ಮಂಗಳವಾರ ನಾಮಪತ್ರ ಸಲ್ಲಿಸಿದ್ದು 5.3 ಕೋಟಿ ಮೌಲ್ಯದ ಆಸ್ತಿ ಇರುವುದಾಗಿ ಘೋಷಣೆ ಮಾಡಿಕೊಂಡಿದ್ದಾರೆ. ಚಿನ್ನಾಭರಣ ಹಾಗೂ ಸಾಲ ತಮಗಿಲ್ಲ ಎಂದು ವಾಟಾಳ್ ತಿಳಿಸಿದ್ದು 50 ಸಾವಿರ ರೂ. ನಗದು ಇದೆ ಎಂದು ಮಾಹಿತಿ ಕೊಟ್ಟಿದ್ದಾರೆ. ಬಹುತೇಕ ಆಸ್ತಿ ಪತ್ನಿಯಿಂದ ಬಂದದ್ದಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಟಿಕೆಟ್ ಸಿಗದಿದ್ದಕೆ 5 ವರ್ಷಗಳ ಬಳಿಕ ಮತ್ತೆ ಹುದ್ದೆಯನ್ನೇರಿದ ಪೊಲೀಸ್ ಅಧಿಕಾರಿ: ಸಾರ್ವಜನಿಕ ವಲಯದಲ್ಲಿ ಚರ್ಚೆ
ಶಾಸಕ ಎನ್. ಮಹೇಶ್‌ಗೆ ಸ್ಥಿರಾಸ್ತಿಯೇ ಇಲ್ಲ:
ಶಾಸಕ ಎನ್. ಮಹೇಶ್ (N Mahesh) ಅವರು ಕೊಳ್ಳೇಗಾಲದಲ್ಲಿ ನಾಮಪತ್ರ ಸಲ್ಲಿಸಿದ್ದು ಆಸ್ತಿ ವಿವರವನ್ನ ಘೋಷಣೆ ಮಾಡಿಕೊಂಡಿದ್ದು ತಮ್ಮ ಹೆಸರಲ್ಲಿ ಯಾವುದೇ ಸ್ಥಿರಾಸ್ತಿಗಳಿಲ್ಲ ಎಂದು ತಿಳಿಸಿದ್ದಾರೆ. ಚರಾಸ್ತಿಗಳು ಮಾತ್ರ ತಮ್ಮಲ್ಲಿ ಇದ್ದು ಅವುಗಳ ಮೌಲ್ಯ ಒಟ್ಟು 1.83 ಕೋಟಿ ಎಂದು ತಿಳಿಸಿದ್ದಾರೆ. ಇದರಲ್ಲಿ 1 ಕಾರು, 150 ಗ್ರಾಂ ಚಿನ್ನ ಮತ್ತು ಚಿಗುವೆರಾ ಎಂಬವರಿಗೆ 50 ಲಕ್ಷ ರೂ. ಸಾಲ ಕೊಟ್ಟಿರುವುದು ಸೇರಿದೆ.
ಮೈಸೂರು: ವರುಣಾ (Varuna) ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಬಿಜೆಪಿ ಅಭ್ಯರ್ಥಿ ವಿ ಸೋಮಣ್ಣ (V Somanna) ಸಂಸದ ಪ್ರತಾಪ್ ಸಿಂಹ (Pratap Simha) ಅವರೊಂದಿಗೆ ಚುನಾವಣಾ ಪ್ರಚಾರಕ್ಕೆ ತೆರಳಿದ್ದ ವೇಳೆ ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡಿರುವ ಪ್ರಸಂಗ ನಡೆದಿದೆ.
ವರುಣಾದ ಲಲಿತಾದ್ರಿಪುರದಲ್ಲಿ ಸೋಮಣ್ಣ ಹಾಗೂ ಪ್ರತಾಪ್ ಸಿಂಹ ಪ್ರಚಾರಕ್ಕೆ ತೆರಳಿದ್ದ ವೇಳೆ ಗ್ರಾಮಸ್ಥರು ತಾವು ಯಾವ ಅಭಿವೃದ್ಧಿ ಮಾಡಿದ್ದೀರಿ? ಎಂದು ಪ್ರಶ್ನಿಸಿದ್ದಾರೆ. ಗ್ರಾಮಸ್ಥರ ಪ್ರಶ್ನೆಗೆ ಉತ್ತರಿಸಲಾಗದೆ ಸೋಮಣ್ಣ ಹಾಗೂ ಪ್ರತಾಪ್ ಸಿಂಹ ತಬ್ಬಿಬ್ಬಾಗಿದ್ದಾರೆ.
ಸೋಮಣ್ಣ ಮೈಸೂರು (Mysuru) ಜಿಲ್ಲಾ ಉಸ್ತುವಾರಿಯಾಗಿದ್ರಿ. ಆವಾಗ ತಾವು ಏನು ಕೊಡುಗೆ ಕೊಟ್ರಿ? ಈಗ ಮತ ಕೇಳೋಕೆ ಬಂದಿದ್ದೀರಾ? ಎಂದು ಸೋಮಣ್ಣಗೆ ಗ್ರಾಮಸ್ಥರು ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಗ್ರಾಮಸ್ಥರು ತರಾಟೆಗೆ ತೆಗೆದುಕೊಳ್ಳುತ್ತಿದ್ದ ವೇಳೆ ವೀಡಿಯೋ ಮಾಡುತ್ತಿದ್ದ ವ್ಯಕ್ತಿಯ ಕೈಯಿಂದ ನಾಯಕರು ಮೊಬೈಲ್ ಅನ್ನು ಕಿತ್ತುಕೊಳ್ಳಲು ಪ್ರಯತ್ನಿಸಿದ್ದಾರೆ. ಇದನ್ನೂ ಓದಿ: ಸೋಮಣ್ಣನನ್ನು ಬಲವಂತವಾಗಿ ವರುಣಾದಲ್ಲಿ ನಿಲ್ಲಿಸಿದ್ದಾರೆ: ಸಿದ್ದರಾಮಯ್ಯ
ವಿ ಸೋಮಣ್ಣ ಅವರು ವರುಣಾದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ವಿರುದ್ಧ ಕಣಕ್ಕಿಳಿದಿದ್ದಾರೆ. ಸೋಮಣ್ಣ ಪ್ರಚಾರಕ್ಕೆ ತೆರಳಿದ್ದ ವೇಳೆ ಮತದಾರರು ತರಾಟೆಗೆ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ: ಸಿದ್ದು ಕುಟುಂಬದ ಮೂರನೇ ತಲೆಮಾರು ರಾಜಕೀಯ ಫೀಲ್ಡ್‌ಗೆ ಎಂಟ್ರಿ
ಮೈಸೂರು: ನನ್ನ ಬಗ್ಗೆ ವರುಣಾ (Varuna) ಜನರಿಗೆ ಅಪಾರವಾದ ಪ್ರೀತಿಯಿದೆ. ನನ್ನ ಮತ್ತು ವರುಣಾ ಸಂಬಂಧವನ್ನು ಕಿತ್ತುಹಾಕಲು ಯಾರಿಂದಲೂ ಸಾಧ್ಯವಿಲ್ಲ. ಯಾರೇ ಬರಲಿ, ಯಾರೇ ಅಭ್ಯರ್ಥಿಗಳನ್ನು ಬದಲಾಯಿಸಲಿ ಏನೇ ಆದರೂ ನನ್ನ ಗೆಲುವು ನಿಶ್ಚಿತ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ.
ಮೈಸೂರಿನಲ್ಲಿ (Mysuru) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಅಭ್ಯರ್ಥಿಯಾದ ಸೋಮಣ್ಣನಿಗೂ (V.Somanna) ವರುಣಾ ಕ್ಷೇತ್ರಕ್ಕೂ ಸಂಬಂಧವಿಲ್ಲ. ಬಿಜೆಪಿಯವರು ಅವರನ್ನು ಬಲವಂತವಾಗಿ ಈ ಕ್ಷೇತ್ರದಲ್ಲಿ ನಿಲ್ಲಿಸಿದ್ದಾರೆ. ಅವನು ನಮ್ಮ ಜಿಲ್ಲೆಯವನೂ ಅಲ್ಲ. ಅವನು ರಾಮನಗರ (Ramanagara) ಜಿಲ್ಲೆಯವನಾಗಿದ್ದು, ಬೆಂಗಳೂರಿನಲ್ಲಿ (Bengaluru) ರಾಜಕಾರಣ ಮಾಡಿದ್ದಾನೆ. ವರುಣಾ ಕ್ಷೇತ್ರಕ್ಕೆ ಒಬ್ಬ ದುಡ್ಡಿರುವ ಅಭ್ಯರ್ಥಿಯನ್ನು ನಿಲ್ಲಿಸಬೇಕು ಎನ್ನುವ ಸಲುವಾಗಿ ಸೋಮಣ್ಣನನ್ನು ಇಲ್ಲಿ ನಿಲ್ಲಿಸಿದ್ದಾರೆ ಎಂದು ಟೀಕೆ ಮಾಡಿದರು. ಇದನ್ನೂ ಓದಿ: ಅಮವಾಸ್ಯೆ ದಿನದಂದು ಸತೀಶ್ ಜಾರಕಿಹೊಳಿ ನಾಮಪತ್ರ ಸಲ್ಲಿಕೆ
ವರುಣಾವನ್ನು ತಾಲೂಕು ಕೇಂದ್ರವನ್ನಾಗಿ ಮಾಡುತ್ತೇವೆ ಎಂಬ ಸಿಎಂ ಭರವಸೆಯ ವಿಚಾರವಾಗಿ ಮಾತನಾಡಿದ ಅವರು, ಬಿಜೆಪಿ ಸರ್ಕಾರದ 4 ವರ್ಷಗಳ ಆಡಳಿತದಲ್ಲಿ ಯಾಕೆ ಮಾಡಲಿಲ್ಲ? ವರುಣಾ ತಾಲೂಕು ಕೇಂದ್ರ ಎಂಬುದು ಗೊತ್ತಾಗಲಿಲ್ಲ ಎಂದರೆ ಅವರು ರಾಜೀನಾಮೆ ನೀಡಲಿ. ರಾಜ್ಯ ಗೊತ್ತಿಲ್ಲ ಎಂದಮೇಲೆ ಮುಖ್ಯಮಂತ್ರಿ ಯಾಕಾಗಿದ್ದಾರೆ? ಮೊದಲು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡಲಿ. ಈಗ ಚುನಾವಣೆ ಬಂದಮೇಲೆ ಗೊತ್ತಾಗಿದೆ ಎಂದರೆ ಅದು ಎಂತಹಾ ಮರೆವಿರಬಹುದು ಎಂದು ಲೇವಡಿ ಮಾಡಿದರು. ಇದನ್ನೂ ಓದಿ: ಕಾಂಗ್ರೆಸ್‌ಗೆ ಬಿಗ್ ಶಾಕ್ – ವಿನಯ್ ಕುಲಕರ್ಣಿ ಧಾರವಾಡ ಪ್ರವೇಶಿಸುವಂತಿಲ್ಲ
ಬಿಜೆಪಿ (BJP) ಸರ್ಕಾರ ಅಧಿಕಾರಕ್ಕೆ ಬಂದ ಮೊದಲ ಕ್ಯಾಬಿನೆಟ್‌ನಲ್ಲಿಯೇ ವರುಣಾ ಕ್ಷೇತ್ರವನ್ನು ತಾಲೂಕನ್ನಾಗಿ ಮಾಡುತ್ತೇವೆ ಎಂಬ ಸಿಎಂ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನೂರಕ್ಕೆ ಇನ್ನೂರು ಪರ್ಸೆಂಟ್ ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ. ಅವರಿಗೆ ಕೇವಲ 60 ಸೀಟ್ ಒಳಗಡೆ ಅಷ್ಟೇ ಬರುವುದು. ಈ ನಾಲ್ಕು ವರ್ಷದಲ್ಲಿ ಮೈಸೂರಿಗೆ ಹಾಗೂ ವರುಣಾ ಕೇತ್ರಕ್ಕೆ ಏನು ಮಾಡಿದ್ದಾರೆ ಇವರು? ಇದೇ ಸೋಮಣ್ಣ ಉಸ್ತುವಾರಿ ಸಚಿವನಾಗಿದ್ದಾಗ ವರುಣಾ ಕೇತ್ರದ ಜನರಿಗೆ ಒಂದು ಮನೆ ಕೊಟ್ಟಿದ್ದಾನಾ? ಸೂರಿಲ್ಲದವರಿಗೆ ಸೂರು ನೀಡಿದ್ದಾನಾ? ಮನೆ ಕೇಳಲು ಹೋದವರಿಗೆ ಕಪಾಳಕ್ಕೆ ಹೊಡೆದಿದ್ದಾರೆ ಎಂದು ಜನಗಳೇ ಹೇಳುತ್ತಿದ್ದಾರೆ. ಈಗ ಚುನಾವಣೆ ಸಮಯದಲ್ಲಿ ಬಂದು ಅದು ಮಾಡುತ್ತೇವೆ ಇದು ಮಾಡುತ್ತೇವೆ ಎಂದರೆ ಇಲ್ಲಿಯವರೆಗೆ ಅಭಿವೃದ್ಧಿ ಕೆಲಸ ಮಾಡಿದವರು ಯಾರು ಎಂದು ಪ್ರಶ್ನೆಗಳ ಸುರಿಮಳೆಗೈದರು. ಇದನ್ನೂ ಓದಿ: ಅಣ್ಣಾಮಲೈ ವಿರುದ್ಧವೂ ಕಿಡಿಕಾರಿದ ಜಗದೀಶ್ ಶೆಟ್ಟರ್
ಬೊಮ್ಮಾಯಿ (Basavaraj Bommai) ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ನಂಬರ್ ಒನ್ ಸುಳ್ಳುಗಾರ. ರಾಮದಾಸ್ ಅವರಿಗೆ ಟಿಕೆಟ್ ಕೊಡಲಿಲ್ಲ. ಜಗದೀಶ್ ಶೆಟ್ಟರ್ (Jagadish Shettar) ಅವರಿಗೂ ಟಿಕೆಟ್ ದಕ್ಕಲಿಲ್ಲ. ಈಶ್ವರಪ್ಪನವರಿಗೆ ಸರಿಯಾದ ಪಾಠ ಕಲಿಸಿದ್ದಾರೆ. ಅವರಿಗೆ ಬಾಯಿ ಸರಿ ಇರಲಿಲ್ಲ. ಲಕ್ಷ್ಮಣ ಸವದಿ (Laxman Savadi) ಕೂಡಾ ಹಿರಿಯ ನಾಯಕರು. ಅವರಿಗೂ ಯಾಕೆ ಟಿಕೆಟ್ ತಪ್ಪಿಸಿದರು? ಬಿಜೆಪಿ ಈಗ ಬಿಎಲ್ ಸಂತೋಷ್ (B.L.Santhosh) ಎಂಬ ವ್ಯಕ್ತಿಯ ಕಪಿಮುಷ್ಠಿಯಲ್ಲಿದೆ. ಬಿಜೆಪಿಯ ಈ ಎಲ್ಲಾ ಬೆಳವಣಿಗೆಗಳಿಗೆ ಸಂತೋಷ್ ಕಾರಣ. ಸೋಮಣ್ಣನವರನ್ನು ಹರಕೆ ಕುರಿ ಮಾಡಲು ಇಲ್ಲಿ ನಿಲ್ಲಿಸಿದ್ದಾರೆ ಎಂದು ಹರಿಹಾಯ್ದರು. ಇದನ್ನೂ ಓದಿ: ‘ಟಿಕೆಟ್ ಕೈತಪ್ಪಲು ಸಂತೋಷ್ ಕಾರಣ’ – ಶೆಟ್ಟರ್ ಆರೋಪಕ್ಕೆ ನಾವ್ ತಲೆಕೆಡಿಸಿಕೊಳ್ಳಲ್ಲ: ಬೊಮ್ಮಾಯಿ
ನಮ್ಮ ಪಕ್ಷಕ್ಕೆ ನಮ್ಮ ಸಿದ್ಧಾಂತವನ್ನು ಒಪ್ಪಿಕೊಂಡು ಯಾರೇ ಬಂದರು ಕೂಡಾ ಸೇರಿಸಿಕೊಳ್ಳುತ್ತೇವೆ. ಇವತ್ತು ನಮ್ಮ ಕಾರ್ಯಕರ್ತರನ್ನು ಭೇಟಿ ಮಾಡಿ ನಾಳೆ ನಾಮಪತ್ರವನ್ನು (Nomination Papers) ಸಲ್ಲಿಸುತ್ತೇನೆ ಎಂದು ಸ್ಪಷ್ಟನೆ ನೀಡಿದರು. ಇದನ್ನೂ ಓದಿ: ಶೆಟ್ಟರ್ ನಮ್ಮ ಸಿದ್ಧಾಂತ ಒಪ್ಪಿಕೊಳ್ಳುತ್ತಾರೆ: ಪರಮೇಶ್ವರ್
ಮೈಸೂರು: ವರುಣಾದಲ್ಲಿ (Varuna) 15 ವರ್ಷಗಳ ಅಪ್ಪ ಮಗನ ದರ್ಬಾರ್‌ಗೆ ಅಂತ್ಯ ಕಾಲ ಬಂದಿದೆ. ಬಿಜೆಪಿ (BJP) ಅಭ್ಯರ್ಥಿ ಸೋಮಣ್ಣನವರಿಗೆ (V.Somanna) ಒಳ್ಳೆಯ ಅಭಿಪ್ರಾಯವಿದೆ. ಹಳೆ ಮೈಸೂರು ಭಾಗದಲ್ಲಿ 8ರಿಂದ 10 ಸ್ಥಾನ ಬಿಜೆಪಿಗೆ ಬರುತ್ತದೆ ಎಂದು ಸಂಸದ ಪ್ರತಾಪ್ ಸಿಂಹ (Prathap Simha) ವಿಶ್ವಾಸ ವ್ಯಕ್ತಪಡಿಸಿದರು.
ಮೈಸೂರಿನಲ್ಲಿ (Mysuru) ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಧಿಕಾರಕ್ಕೆ ಬರಲು ದೇಶದ್ರೋಹಿಗಳ ಜೊತೆ ಕಾಂಗ್ರೆಸ್ ಕೈಜೋಡಿಸುತ್ತಿದೆ. ಪಿಎಫ್‌ಐ (PFI), ಕೆಎಫ್‌ಡಿ (KFD) ಹಾಗೂ ಎಸ್‌ಡಿಪಿಐ (SDPI) ಸಂಘಟನೆಯ ಕಾರ್ಯಕರ್ತರು ಸಿದ್ದರಾಮಯ್ಯನವರಿಗೆ ದತ್ತು ಮಕ್ಕಳಿದ್ದಂತೆ. ಪಿಎಫ್‌ಐ ಮತ್ತು ಕೆಎಫ್‌ಡಿಯನ್ನು ಕೇಂದ್ರ ಸರ್ಕಾರ ಬ್ಯಾನ್ ಮಾಡಿದೆ. ಸಿದ್ದರಾಮಯ್ಯ (Siddaramaiah) ಮತ್ತು ಡಿಕೆ ಶಿವಕುಮಾರ್ (D.K.Shivakumar) ಅವರು ಕರ್ನಾಟಕದಲ್ಲಿ ತಾಲಿಬಾನ್ (Taliban) ಸರ್ಕಾರ ತರಲು ಹೊರಟಿದ್ದಾರೆ. ಸಮಾಜಘಾತುಕ ಸಂಘಟನೆಯ ಬೆಂಬಲದೊಂದಿಗೆ ಕಾಂಗ್ರೆಸ್ (Congress) ಅಧಿಕಾರಕ್ಕೆ ಬರಲು ಯತ್ನಿಸುತ್ತಿದೆ ಎಂದರು. ಇದನ್ನೂ ಓದಿ: ಇತ್ತೀಚಿನ ರಾಜಕೀಯ ಬೆಳವಣಿಗೆ ನೋಡಿ ಬೇಸರವಾಗಿದೆ: ರಾಜಕೀಯ ನಿವೃತ್ತಿ ಘೋಷಿಸಿದ ವಿ.ಆರ್ ಸುದರ್ಶನ್
ಎಸ್‌ಡಿಪಿಐನವರು ಕಾಂಗ್ರೆಸ್‌ಗೆ ಬೆಂಬಲ ಕೊಡಬೇಕು ಎಂದು ಜಿ.ಪರಮೇಶ್ವರ್ (G.Parameshwar) ಕರೆ ಕೊಟ್ಟಿದ್ದಾರೆ. ಪಿಎಫ್‌ಐ ಮತ್ತು ಕೆಎಫ್‌ಡಿ ಸಂಘಟನೆಗಳು ಎಸ್‌ಡಿಪಿಐನ ಮಾತೃ ಸಂಸ್ಥೆಗಳು. ಅಧಿಕಾರಕ್ಕೆ ಬರುವ ಸಲುವಾಗಿ ನಿಷೇಧಿತ ಸಂಘಟನೆಯ ಬೆಂಬಲ ಕೇಳುತ್ತಿದ್ದೀರಾ? ಕರ್ನಾಟಕವನ್ನು ಗೂಂಡಾ ರಾಜ್ಯವನ್ನಾಗಿ ಮಾಡಲು ಹೊರಟಿದ್ದೀರಾ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪಗೆ ಜಾಮೀನು
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಾಜಕೀಯ ಹತ್ಯೆಗಳು ಹೆಚ್ಚಾಗುತ್ತವೆ. ಸಿದ್ದರಾಮಯ್ಯನವರ ಸಾಕು ಮಕ್ಕಳಿಂದ ರಾಜ್ಯದಲ್ಲಿ ಸಾಲು ಸಾಲು ಹತ್ಯೆ ನಡೆದಿವೆ. ಕರ್ನಾಟಕವನ್ನು ಇನ್ನೊಂದು ಕೇರಳವನ್ನಾಗಿ (Kerala) ಮಾಡಲು ಹೊರಟ್ಟಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬರಲು ಏನು ಬೇಕಾದರು ಮಾಡುತ್ತದೆ. ನಾಳೆ ರಾಜ್ಯ ಎಸ್‌ಡಿಪಿಐ ಕೈಗೆ ಹೋದರೂ ಪರವಾಗಿಲ್ಲ ನಾವು ಅಧಿಕಾರಕ್ಕೆ ಬರಬೇಕು ಎನ್ನುವುದು ಕಾಂಗ್ರೆಸ್ ಮನಸ್ಥಿತಿ ಎಂದು ಹರಿಹಾಯ್ದರು. ಇದನ್ನೂ ಓದಿ: ಶೆಟ್ಟರ್‌ಗೆ ಟಿಕೆಟ್ ತಪ್ಪಲು ನಾನೇ ಕಾರಣ ಅನ್ನೋದು ಸುಳ್ಳು: ಬೊಮ್ಮಾಯಿ
ಬೆಳಗಾವಿ: ಸೋಮಣ್ಣ (V.Somanna) ಹೊರಗಿನವನು. ಆತನಿಗೆ ವರುಣಾ (Varuna) ಕ್ಷೇತ್ರದಲ್ಲಿ ಒಂದು ಮತವೂ ಬೀಳುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಟಾಂಗ್ ಕೊಟ್ಟರು.
ಬೆಳಗಾವಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಹಿರಿಯ ನಾಯಕರನ್ನು ಹೈಕಮಾಂಡ್ ಸರಿಯಾಗಿ ನಡೆಸಿಕೊಂಡಿಲ್ಲ. ಈಶ್ವರಪ್ಪ ಪಕ್ಷದ ಸಿದ್ಧಾಂತ ಎನ್ನುತ್ತಿದ್ದರು. ಈಗ ಎಲ್ಲಿ ಹೋದ್ರು? ಜಗದೀಶ್ ಶೆಟ್ಟರ್ ನನ್ನ ಜೊತೆಗೆ ಮಾತನಾಡಿಲ್ಲ. ಬರೋದಾದರೆ ಸ್ವಾಗತ ಮಾಡುತ್ತೇನೆ. ನಾನು ನಿನ್ನೆಯಿಂದ ಬೆಳಗಾವಿಯಲ್ಲೇ ಇದ್ದೇನೆ ಎಂದು ಹೇಳಿದರು. ಇದನ್ನೂ ಓದಿ: ಕನ್ನಡವೇ ಮೊದಲು, ರೈತ ಚೈತನ್ಯ – ಜೆಡಿಎಸ್‌ನಿಂದ ಭರವಸೆ ಪತ್ರ ಬಿಡುಗಡೆ
ಲಕ್ಷ್ಮಣ ಸವದಿ ಕುರಿತು ಮಾತನಾಡಿ, ಕಾಂಗ್ರೆಸ್‌ಗೆ ಸವದಿ ಆಗಮನದಿಂದ ಪಕ್ಷಕ್ಕೆ ಲಾಭ ಆಗಲಿದೆ. ಅವರು ಕೇಳಿದ ಕಡೆಯಲ್ಲಿ ಪ್ರಚಾರಕ್ಕೆ ಜವಾಬ್ದಾರಿ ಕೊಡ್ತೀವಿ ಎಂದು ತಿಳಿಸಿದರು.
ಶಾಸಕ ಅನಿಲ ಬೆನಕೆ ಕಾಂಗ್ರೆಸ್ ಸೇರ್ಪಡೆ ಬಗ್ಗೆ ಪ್ರತಿಕ್ರಿಯಿಸಿ, ಅದರ ಬಗ್ಗೆ ನನಗೆ ಮಾಹಿತಿಯಿಲ್ಲ. ನನಗೆ ಗೊತ್ತಿಲ್ಲದೇ ನಾನು ಹೇಗೆ ಉತ್ತರ ಕೊಡಲಿ ಎಂದರು. ಇದನ್ನೂ ಓದಿ: ಪ್ರಧಾನಿ ಮೋದಿಗೆ ಪತ್ರ ಬರೆದ ಮಾಜಿ ಪಿಎಂ ದೇವೇಗೌಡ
ಕಾಂಗ್ರೆಸ್ ಎರಡನೇ ಪಟ್ಟಿ ಬಿಡುಗಡೆಯಾದಾಗ ಕೆಲವರು ಬಂಡಾಯ ಎದ್ದಿರುವುದು ನಿಜ. ಅವರನ್ನೆಲ್ಲ ಶಮನ ಮಾಡುವ ಕೆಲಸ ನಡೆದಿದೆ. ಗೋಕಾಕ ಕ್ಷೇತ್ರದಲ್ಲಿ ಅಶೋಕ ಪೂಜಾರಿ ಅವರನ್ನ ಕರೆಸಿ ಮಾತನಾಡಲಾಗಿದೆ. ಗೋಕಾಕ್‌ನಲ್ಲಿ ಎಲ್ಲವೂ ಸರಿ ಹೋಗಲಿದೆ ಎಂದು ತಿಳಿಸಿದರು. ಜಗದೀಶ್ ಶೆಟ್ಟರ್ ಕಾಂಗ್ರೆಸ್ ಸೇರ್ಪಡೆ ಆಗುತ್ತಾರೆ ಎಂಬ ವಿಚಾರ ನನಗೆ ಗೊತ್ತಿಲ್ಲ ಎಂದು ಸ್ಪಷ್ಟಪಡಿಸಿದರು.
– ನಿನ್ನ ನಂಬಿ ಬಂದಿದ್ದೇನೆ.. ದಯಮಾಡಿ ಕೈಬಿಡಬೇಡ: ಕಾಪುಗೆ ಸೋಮಣ್ಣ ಮನವಿ
ಮೈಸೂರು: ವರುಣಾ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ವಿರುದ್ಧ ಸ್ಪರ್ಧೆಗೆ ಸಜ್ಜಾಗಿರುವ ವಿ.ಸೋಮಣ್ಣ (Somanna) ಅಭಿಮಾನಿಗಳು ಅದ್ಧೂರಿ ಸ್ವಾಗತ ಕೋರಿದ್ದಾರೆ. “ಮುಂದಿನ ಮುಖ್ಯಮಂತ್ರಿ ಸೋಮಣ್ಣ” ಎಂದು ಅಭಿಮಾನಿಗಳು ಘೋಷಣೆ ಕೂಗಿದ್ದಾರೆ.
ವರುಣಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ವಿರುದ್ಧ ಸ್ಪರ್ಧಿಸಿ ಗೆಲುವು ಸಾಧಿಸಿ ಬರುವಂತೆ ಬಿಜೆಪಿ ಹೈಕಮಾಂಡ್ ಸೂಚಿಸಿದ ಬೆನ್ನಲ್ಲೇ ಸಚಿವ ವಿ.ಸೋಮಣ್ಣ ಅವರು ಕ್ಷೇತ್ರದಲ್ಲಿ ಪ್ರಚಾರಕ್ಕೆ ಮುಂದಾಗಿದ್ದಾರೆ. ಪ್ರಚಾರಕ್ಕೂ ಮುನ್ನ ಬಿ.ಎಸ್.ಯಡಿಯೂರಪ್ಪ (Yediyurappa) ಆಪ್ತ ಕಾಪು ಸಿದ್ದಲಿಂಗಸ್ವಾಮಿ (Kapu Siddalingaswamy) ಅವರ ನಿವಾಸಕ್ಕೆ ಭೇಟಿ ನೀಡಿದ್ದರು. ಈ ವೇಳೆ “ಮುಂದಿನ ಮುಖ್ಯಮಂತ್ರಿ ಸೋಮಣ್ಣ” ಎಂದು ಅಭಿಮಾನಿಗಳು ಘೋಷಣೆ ಕೂಗಿದರು. ಇದನ್ನೂ ಓದಿ: ಎಂಪಿ ಕುಮಾರಸ್ವಾಮಿ ಶಾಸಕ ಸ್ಥಾನಕ್ಕೆ ರಾಜೀನಾಮೆ
ಕಾಪು ಮನೆಗೆ ಭೇಟಿ ನೀಡಿ ಅರ್ಧ ಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿದ್ದಾರೆ. “ನಿನ್ನ ನಂಬಿದ್ದೇನೆ, ದಯಮಾಡಿ ಕೈಬಿಡಬೇಡ” ಎಂದು ಕಾಪು ಸಿದ್ದಲಿಂಗಸ್ವಾಮಿಗೆ ಕೈ ಮುಗಿದು ಸೋಮಣ್ಣ ಮನವಿ ಮಾಡಿದರು. ಸೋಮಣ್ಣ ಅವರಿಗೆ ಒಳೇಟಿನ ಭಯ ಕಾಡುತ್ತಿದೆ ಎನ್ನಲಾಗುತ್ತಿದೆ.
ಕಾಪು ಸಿದ್ಧಲಿಂಗಸ್ವಾಮಿ ಯಡಿಯೂರಪ್ಪರ ಆಪ್ತ. ವರುಣಾ ಕ್ಷೇತ್ರಕ್ಕೆ ಕಾಪು ಸಿದ್ಧಲಿಂಗಸ್ವಾಮಿ ಕೂಡ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಸಿದ್ದರಾಮಯ್ಯ ಅವರನ್ನು ಕಟ್ಟಿಹಾಕಲು ವರುಣಾ ಕ್ಷೇತ್ರದಲ್ಲಿ ಸೋಮಣ್ಣ ಅವರಿಗೆ ಟಿಕೆಟ್ ಕೊಡಲಾಗಿದೆ. ಇದನ್ನೂ ಓದಿ: ಸಮಾಜದ ಮುಖಂಡರ ಕಡೆಗಣನೆ – ರಾಷ್ಟ್ರೀಯ ಪಕ್ಷಗಳ ವಿರುದ್ಧ ಭೋವಿ ಶ್ರೀ ಕಿಡಿ