ಚಾಮರಾಜನಗರ: ಬಿಜೆಪಿ (BJP) ಪಕ್ಷದಿಂದ ನಟ ಸುದೀಪ್ (Sudeep) ಸಚಿವ ವಿ.ಸೋಮಣ್ಣ (V Somanna) ಪರವಾಗಿ ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ. ಶುಕ್ರವಾರ ಚಾಮರಾಜನಗರದಲ್ಲಿ (Chamarajanagar) ನಾಯಕರು ರೋಡ್ ಶೋ (Road Show) ನಡೆಸುತ್ತಿದ್ದ ವೇಳೆ ಸುದೀಪ್ ಹತ್ತಿರ ಹೋಗಲು ಧಾವಿಸಿದ ಅಭಿಮಾನಿ (Fan) ಸೋಮಣ್ಣ ಅವರನ್ನು ಬಿಳಿಸಿರುವ ಪ್ರಸಂಗ ನಡೆದಿದೆ.
ಸಚಿವ ಸೋಮಣ್ಣ, ಕೊಳ್ಳೇಗಾಲ ಎನ್ ಮಹೇಶ್, ಗುಂಡ್ಲುಪೇಟೆ ನಿರಂಜನ್ ಕುಮಾರ್, ಹನೂರು ಪ್ರೀತನ್ ನಾಗಪ್ಪ ಪರ ಸುದೀಪ್ ಚಾಮರಾಜನಗರಲ್ಲಿ ರೋಡ್ ಶೋ ನಡೆಸಿದ್ದಾರೆ. ಗುಂಡ್ಲುಪೇಟೆ ಮೂಲಕ ರೋಡ್ ಶೋ ಆರಂಭ ಮಾಡಲಾಗಿದ್ದು, ಚಾಮರಾಜನಗರ, ಕೊಳ್ಳೇಗಾಲ, ಹನೂರು ಕ್ಷೇತ್ರದಲ್ಲಿ ರೋಡ್ ಶೋ ನಡೆದಿದೆ.
ರೋಡ್ ಶೋ ವೇಳೆ ಸಚಿವ ಸೋಮಣ್ಣ ಹಾಗೂ ಸುದೀಪ್ ಕಾರಿನ ಮೇಲೆ ನಿಂತು ಜನರತ್ತ ಕೈ ಬೀಸುತ್ತಿದ್ದರು. ಆಗ ಸುದೀಪ್ ಬಳಿ ತೆರಳಲು ಅಭಿಮಾನಿಯೊಬ್ಬ ಕಾರಿನ ಮೇಲೆ ಹತ್ತಿದ್ದಾನೆ. ಬಳಿಕ ಆತ ಆಯತಪ್ಪಿದ್ದು, ಸಚಿವ ಸೋಮಣ್ಣ ಅವರನ್ನು ಹಿಡಿದುಕೊಂಡು ಕೆಳಕ್ಕೆ ಬಿದ್ದಿದ್ದಾನೆ. ಈ ವೇಳೆ ಸೋಮಣ್ಣ ಕೂಡಾ ಬಿದ್ದಿದ್ದು, ಅವರನ್ನು ಸುದೀಪ್ ಕಾರಿನ ಟಾಪ್‌ನಿಂದ ಕೆಳಕ್ಕೆ ಬೀಳದಂತೆ ಹಿಡಿದಿದ್ದರು. ಇದನ್ನೂ ಓದಿ: ತಂದೆಗೆ ಬಿಜೆಪಿ ಟಿಕೆಟ್ ಸಿಕ್ಕ ಖುಷಿಗೆ ಗಾಳಿಯಲ್ಲಿ ಗುಂಡು ಪ್ರಕರಣ – ಅಭ್ಯರ್ಥಿ ಪುತ್ರನ ವಿರುದ್ಧ ಎಫ್‍ಐಆರ್
ಮೈಸೂರು: ಸಿದ್ದರಾಮಯ್ಯ ಹತಾಶರಾಗಿ ಸ್ಟಾರ್‌ಗಳನ್ನು ಕರೆಸಿಕೊಂಡು ಪ್ರಚಾರಕ್ಕೆ ಇಳಿದಿದ್ದಾರೆ ಎಂದು ಸಚಿವ ವಿ. ಸೋಮಣ್ಣ (V Somanna) ವ್ಯಂಗ್ಯವಾಡಿದರು.
ಸಿದ್ದರಾಮಯ್ಯ ಪರ ಸ್ಟಾರ್‌ಗಳ ಪ್ರಚಾರ ವಿಚಾರವಾಗಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಒಂದೇ ದಿನ ಪ್ರಚಾರಕ್ಕೆ ಬರುತ್ತೇನೆ ಎಂದಿದ್ದ ಸಿದ್ದರಾಮಯ್ಯ ಈಗ ಮತ್ತೆ ಮತ್ತೆ ಬರ್ತಿದ್ದಾರೆ. ಅಷ್ಟೇ ಅಲ್ಲದೇ ಸಿದ್ದರಾಮಯ್ಯ ಹತಾಶರಾಗಿ ಸ್ಟಾರ್‌ಗಳನ್ನು ಕರೆಸಿಕೊಂಡು ಪ್ರಚಾರ ಮಾಡುತ್ತಿದ್ದಾರೆ. ರಾಜಕುಮಾರ್ ಕುಟುಂಬಕ್ಕೂ ನನಗೂ 40 ವರ್ಷದ ಅವಿನಾಭಾವ ಸಂಬಂಧವಿದೆ. ಪುನೀತ್ ರಾಜಕುಮಾರ್ ಹೆಸರಿನಲ್ಲಿ ನಮ್ಮ ಕ್ಷೇತ್ರದಲ್ಲಿ ಬೃಹತ್ ಆಸ್ಪತ್ರೆ ಕಟ್ಟಿಸಿದ್ದೇನೆ ಎಂದರು.
ಶಿವರಾಜ್ ಯಾಕೆ ಹೀಂಗೆ ಮಾಡಿದರು ನನಗೆ ಗೊತ್ತಿಲ್ಲ. ನನಗೆ ವಿಜಿ, ರಮ್ಯಾ (Ramya) ಬಗ್ಗೆ ಗೊತ್ತಿಲ್ಲ. ಸಿದ್ದರಾಮಯ್ಯ ಅವರು ಸ್ಟಾರ್ ಪ್ರಚಾರಕ್ಕೆ ಜೊತೆ ಬಂದು ಸೋಮಣ್ಣ ವಿರುದ್ಧ ಪ್ರಚಾರ ಮಾಡ್ತಿದ್ದಾರಲ್ಲ ನನಗೆ ಅದೇ ಖುಷಿ. ಜನ ಸೇರಿಸಲು ಸಿದ್ದರಾಮಯ್ಯ ಸ್ಟಾರ್‌ಗಳ ಜೊತೆ ಬರುತ್ತಿದ್ದಾರೆ ಅಷ್ಟೇ ಎಂದು ವ್ಯಂಗ್ಯವಾಡಿದರು.
ತಮ್ಮಿಂದ ಮಾತ್ರ ವರುಣಾ (Varuna) ಕ್ಷೇತ್ರದ ಅಭಿವೃದ್ಧಿ ಎಂಬ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ ಅವರು, ತಮ್ಮ ಮನೆಯ ಕೋಳಿ ಕೂಗಿದರೆ ಮಾತ್ರ ಬೆಳಕು ಹರಿಯುತ್ತದೆ ಎಂಬ ರೀತಿ ಸಿದ್ದರಾಮಯ್ಯ ಮಾತಾಡ್ತಿದ್ದಾರೆ. ಸಿದ್ದರಾಮಯ್ಯ ಅವರು ಮನಸ್ಸು ಮಾಡಿದ್ದರೆ ಐದು ವರ್ಷದಲ್ಲಿ ವರುಣ ಕ್ಷೇತ್ರಕ್ಕೆ ಚಿನ್ನದ ತಗಡನ್ನೆ ಹೊಡೆಸಬಹುದಿತ್ತು. ವರುಣದಲ್ಲಿ ಒಂದು ಕಾಲೇಜ್ ಇಲ್ಲ, ಆಸ್ಪತ್ರೆ ಇಲ್ಲ, ರಸ್ತೆಗಳು ಸರಿ ಇಲ್ಲ. ಇದು ವರುಣ ಸ್ಥಿತಿಯಿದೆ ಎಂದು ಕಿಡಿಕಾರಿದರು. ಇದನ್ನೂ ಓದಿ:ಬಜರಂಗದಳ ನಿಷೇಧಿಸಲು ನಿಮ್ಮ ಬಳಿ ಧೈರ್ಯ, ತಾಕತ್ ಇಲ್ಲ: ಕಾಂಗ್ರೆಸ್ ವಿರುದ್ಧ ಫಡ್ನವೀಸ್ ವಾಗ್ದಾಳಿ
ಬದಾಮಿಯಲ್ಲೂ ಸಿದ್ದರಾಮಯ್ಯ ಯಾವ ಅಭಿವೃದ್ಧಿ ಕಾರ್ಯ ಮಾಡಲಿಲ್ಲ. ಜನರ ಋಣ ತೀರಿಸುವುದಕ್ಕೂ ಬದ್ಧತೆ ಬೇಕು. ನಾನು ಆ ಕೆಲಸವನ್ನು ಮಾಡಿದ್ದೇನೆ. ನಾನು ನಾನು ಎಂಬುದನ್ನು ಸಿದ್ದರಾಮಯ್ಯ ಅವರು ಮೊದಲು ಬಿಡಲಿ. ವರುಣಾ ಜನ ನನ್ನ ಗೆಲ್ಲಿಸಿದರೆ ನಾನು ವರುಣಾದಲ್ಲೇ ಇರುತ್ತೇನೆ. ವರುಣದಲ್ಲೇ ಮನೆನೂ ಮಾಡುತ್ತೇನೆ. ಶಾಶ್ವತವಾಗಿ ಇರುತ್ತೇನೆ ಎಂದು ಹೇಳಿದರು. ಇದನ್ನೂ ಓದಿ:ಯುದ್ಧದ ನಡುವೆಯೂ ತೆರೆಯುತ್ತಿದ್ದ ಉಕ್ರೇನ್ ಹೈಪರ್‌ಮಾರ್ಕೆಟ್ ರಷ್ಯಾ ಕ್ಷಿಪಣಿ ದಾಳಿಗೆ ಉಡೀಸ್!
ಚಾಮರಾಜನಗರ: ಈ ಬಾರಿಯ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಚಾಮರಾಜನಗರ (Chamarajanagara) ಹೈವೋಲ್ಟೇಜ್ ಕ್ಷೇತ್ರವಾಗಿ ಕಾಣಿಸಿಕೊಂಡಿದೆ. ಬಿಜೆಪಿ (BJP) ಅಭ್ಯರ್ಥಿ ವಿ.ಸೋಮಣ್ಣ (Somanna) ವರುಣಾ, ಚಾಮರಾಜನಗರ ಎರಡು ಕಡೆಯೂ ಸ್ಪರ್ಧೆ ಮಾಡಿರುವುದರಿಂದ ರಣಕಣವಾಗಿ ಚಾಮರಾಜನಗರ ಕ್ಷೇತ್ರ ಬದಲಾಗಿದೆ. ಮತ್ತೊಂದೆಡೆ ಕಾಂಗ್ರೆಸ್‌ನಿಂದ (Congress) ಮಾಜಿ ಸಿಎಂ ಸಿದ್ದರಾಮಯ್ಯ ಶಿಷ್ಯ ಪುಟ್ಟರಂಗಶೆಟ್ಟಿ (Puttarangashetty) ಅಖಾಡದಲ್ಲಿದ್ದು, ಸತತ ನಾಲ್ಕನೇ ಬಾರಿಯೂ ಗೆಲುವಿನ ಪತಾಕೆ ಹಾರಿಸಲು ಕೆಲಸ ಮಾಡುತ್ತಿದ್ದಾರೆ.
ಕಳೆದ ಚುನಾವಣೆಯಲ್ಲಿ ಯಾರಿಗೆ ಎಷ್ಟು ಮತ?
ಕಾಂಗ್ರೆಸ್ ಸಿ.ಪುಟ್ಟರಂಗಶೆಟ್ಟಿ: ಪಡೆದ ಮತ 75,963
ಬಿಜೆಪಿ ಮಲ್ಲಿಕಾರ್ಜುನಪ್ಪ: ಪಡೆದ ಮತ 71,050
ಜಾತಿ ಲೆಕ್ಕಾಚಾರ ಏನು?
ಕ್ಷೇತ್ರದಲ್ಲಿ ಒಟ್ಟು 2,09,494 ಜನಸಂಖ್ಯೆ ಇದೆ. ಅವರ ಪೈಕಿ 1,02,588 ಪುರುಷರು ಹಾಗೂ 1,06,891 ಮಹಿಳೆಯರಿದ್ದಾರೆ.
ವೀರಶೈವ- 49,000
ದಲಿತ- 40,500
ನಾಯಕ- 24,250
ಉಪ್ಪಾರ- 28,350
ಕುರುಬ- 18,000
ಮುಸ್ಲಿಂ- 15,000
ಕ್ರಿಶ್ಚಿಯನ್- 6,000
ಇತರೆ- 25,000
ಅಭ್ಯರ್ಥಿಗಳ ಪ್ಲಸ್, ಮೈನಸ್ ಏನು? ಪುಟ್ಟರಂಗಶೆಟ್ಟಿ: ಚುನಾವಣೆಯಲ್ಲಿ ಬಿಜೆಪಿ ಕೊಡುವ ಒಳೇಟಿನಿಂದಾಗಿ ಕಾಂಗ್ರೆಸ್‌ಗೆ ಹೆಚ್ಚು ವರವಾಗುತ್ತಿದೆ. ಈಗಾಗಲೇ ಹ್ಯಾಟ್ರಿಕ್ ಜಯಭೇರಿ ಗಳಿಸಿರುವ ಕಾಂಗ್ರೆಸ್ ಶಾಸಕ ಪುಟ್ಟರಂಗಶೆಟ್ಟಿ, ಕ್ಷೇತ್ರದಲ್ಲಿನ ಮತ ಬ್ಯಾಂಕ್ ಮೇಲೆ ಹಿಡಿತ ಹೊಂದಿದ್ದಾರೆ. ಉಪ್ಪಾರ ಸಮುದಾಯ, ದಲಿತ, ಅಲ್ಪಸಂಖ್ಯಾತ, ಮುಸ್ಲಿಂ, ಹಿಂದುಳಿದ ಮತ ಕಾಂಗ್ರೆಸ್ ಕೈ ಹಿಡಿದಿದ್ದು, ಈ ಬಾರಿಯೂ ಮತ ಸಿಗುವ ಭರವಸೆ ಇದೆ. ಮೈನಸ್ ಅಂಶ ಹೇಳುವುದಾದರೆ, ಮೂರು ಬಾರಿ ಆಯ್ಕೆಯಾದರೂ ಮೂಲ ಸೌಕರ್ಯ ಕೊರತೆ. ಅಭಿವೃದ್ಧಿ ದೃಷ್ಟಿಕೋನ ಇಲ್ಲದಿರುವ ಶಾಸಕ ಎಂಬ ಮೂದಲಿಕೆ. ಸಾವಿರಾರು ಕೋಟಿ ಅನುದಾನ ತಂದು ಕ್ಷೇತ್ರ ಅಭಿವೃದ್ಧಿ ಮಾಡಿಲ್ಲ ಎಂಬ ಅರೋಪವಿದೆ.
ವಿ.ಸೋಮಣ್ಣ: ಬಿಜೆಪಿಯ ಲಿಂಗಾಯತ ಪ್ರಬಲ ನಾಯಕ ಸ್ಪರ್ಧೆ ಮಾಡಿರುವುದು. ಲಿಂಗಾಯತ ಸಮುದಾಯದ ಹಿರಿಯ ಮುಖಂಡ. ದೂರದೃಷ್ಟಿ ಇಟ್ಟುಕೊಂಡು ಅಭಿವೃದ್ಧಿ ಮಾಡುವ ಭರವಸೆ. ಸಾವಿರಾರು ಕೋಟಿ ಅನುದಾನ ತರುವ ಚಾಕಚಕ್ಯತೆ. ಕ್ಷೇತ್ರದ ಎಲ್ಲಾ ಸಮುದಾಯದ ಮುಖಂಡರ ಜೊತೆ ನಿಕಟ ಸಂಪರ್ಕ ಹೊಂದಿದ್ದಾರೆ ಎನ್ನಲಾಗಿದೆ. ಮೈನಸ್ ಪಾಯಿಂಟ್, ಹೊರಗಿನ ಅಭ್ಯರ್ಥಿ ಅರ್ಥಾತ್ ದೂರದ ಬೆಂಗಳೂರಿನಿಂದ ಬಂದಿದ್ದು, ಕೈಗೆ ಸಿಗಲಾರರು ಎಂಬ ಆರೋಪ. ಪಕ್ಷದ ಒಳಗಿನ ಗುದ್ದಾಟ, ಇಷ್ಟು ಚುನಾವಣೆಯಲ್ಲೂ ಒಳೇಟು ಕೊಡುತ್ತಿರುವುದು ಈ ಬಾರಿಯೂ ಮುಂದುವರೆಯುವ ಸಾಧ್ಯತೆ. ಬಿಎಸ್‌ವೈ ವಿರೋಧಿ ಬಣದಲ್ಲಿ ಗುರುತಿಸಿಕೊಂಡಿದ್ದಾರೆ. ವರುಣದಲ್ಲಿ ಹೆಚ್ಚು ಗಮನ ಕೊಟ್ಟು ಚಾಮರಾಜನಗರದತ್ತ ಕಡಿಮೆ ಸಮಯ ಕೊಟ್ಟಿದ್ದಾರೆ. ಇದನ್ನೂ ಓದಿ: ಯತ್ನಾಳ್, ಪ್ರಿಯಾಂಕ್ ಖರ್ಗೆಗೆ ಶೋಕಾಸ್ ನೋಟಿಸ್ ಜಾರಿ
ಇಲ್ಲಿಯವರೆಗೂ ಕೂಡ ಕ್ಷೇತ್ರ ಕಾಂಗ್ರೆಸ್ ಭದ್ರಕೋಟೆಯಾಗಿದೆ. 9 ಬಾರಿ ಕಾಂಗ್ರೆಸ್ ಅಭ್ಯರ್ಥಿಗಳೇ ಜಯಗಳಿಸಿದ್ದಾರೆ. ಅಲ್ಲದೇ ಒಂದು ಬಾರಿಯಷ್ಟೇ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ಆದರೆ ಕಳೆದ ಮೂರು ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ದೊಡ್ಡ ಅಂತರದ ಗೆಲುವು ಸಿಕ್ಕಿಲ್ಲ. ಇದನ್ನೇ ಸ್ಟ್ರಾಟಜಿ ಮಾಡಿಕೊಂಡಿರುವ ಬಿಜೆಪಿ ಈ ಬಾರಿ ಮಾಜಿ ಸಿಎಂ ಸಿದ್ದರಾಮಯ್ಯ ಶಿಷ್ಯ ಪುಟ್ಟರಂಗಶೆಟ್ಟಿ ವಿರುದ್ಧ ಲಿಂಗಾಯತ ಸಮುದಾಯದ ಪ್ರಬಲ ನಾಯಕನನ್ನು ಅಖಾಡಕ್ಕಿಳಿಸಿದ್ದು, ಯಾರೂ ವಿಜಯಭೇರಿ ಬಾರಿಸುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.
ಚಾಮರಾಜನಗರ: ಎರಡು ಕಡೆಯಲ್ಲೂ ಸತತ ಪ್ರಚಾರ ಮಾಡುತ್ತಿರುವ ಬೆನ್ನಲ್ಲೇ ಸಚಿವ ವಿ. ಸೋಮಣ್ಣಗೆ ಲೋ ಬಿಪಿ ಆಗಿ ತಲೆ ಸುತ್ತು ಬಂದ ಪ್ರಸಂಗ ಇಂದು ನಡೆಯಿತು.
ರಾಜ್ಯ ವಿಧಾನಸಭಾ ಚುನಾವಣೆಗೆ (Election) ಇನ್ನೇನೂ ಕೆಲವೇ ದಿನಗಳು ಬಾಕಿಯಿದೆ. ಈ ಹಿನ್ನೆಲೆಯಲ್ಲಿ ಬಿಸಿಲಿನಲ್ಲೂ ವರುಣಾ (Varuna), ಚಾಮರಾಜನಗರ (Chamarajanagara) ಎರಡು ಕ್ಷೇತ್ರದಲ್ಲೂ ವಿ. ಸೋಮಣ್ಣ (V Somanna) ಅವರು ಬೀರುಸಿನ ನಡೆಸುತ್ತಿದ್ದಾರೆ. ಸತತವಾಗಿ ಪ್ರಚಾರ ನಡೆಸುತ್ತಿರುವ ಹಿನ್ನೆಲೆಯಲ್ಲಿ ಸೊಮಣ್ಣಗೆ ಲೋ ಬಿಪಿಯಿಂದಾಗಿ ತಲೆ ಸುತ್ತು ಬಂದಿದೆ. ಕೂಡಲೇ ಅಲ್ಲಿದ್ದ ಕಾರ್ಯಕರ್ತರು ಸೋಮಣ್ಣ ಅವರನ್ನು ಚಾಮರಾಜನಗರ ಕೋಡಿಮೊಳೆ ಗ್ರಾಮದಲ್ಲಿ ಚಿಕಿತ್ಸೆ ನೀಡಿದ್ದಾರೆ. ಚಿಕಿತ್ಸೆ ನಂತರ ಸೋಮಣ್ಣ ಮತ್ತೆ ಪ್ರಚಾರ ಆರಂಭಿಸಿದರು. ಇದನ್ನೂ ಓದಿ: ಮದುವೆ ಮನೆಯಲ್ಲಿ ಸಾವಿನ ಸೂತಕ – ಕುದಿಯುವ ರಸಂ ಪಾತ್ರೆಗೆ ಬಿದ್ದು ಯುವಕ ಸಾವು
ಘಟನೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ಆರಾಮಾಗಿದ್ದೇನೆ, ಸ್ವಲ್ಪ ಲೋ ಬಿಪಿ. ನಂಗೆ ತಲೆ ಸುತ್ತು ಬಂತು. ಹಾಗೇ ಕಾರಿನಲ್ಲಿ ಕುಳಿತೆ. 20 ನಿಮಿಷ ರೆಸ್ಟ್ ಮಾಡಿದೆ. ವೈದ್ಯರು ಬಂದು ಚೆಕ್ ಮಾಡಿದರು. ರಕ್ತದೊತ್ತಡ 70ಕ್ಕೆ ಇಳಿದಿತ್ತು. ನಾನು ಸುಮ್ನೆ ಕುಳಿತುಕೊಳ್ಳುವವನು ಅಲ್ಲ. ಸಭೆ ಮುಗಿಸಿ ಮಲಗಿದಾಗ 4 ಗಂಟೆ ಆಗಿತ್ತು. ದೈಹಿಕವಾಗಿ ಬಳಲಿದ್ದೇನೆ ಅಷ್ಟೇ ಎಂದು ತಿಳಿಸಿದರು. ಇದನ್ನೂ ಓದಿ:ಹ್ಯಾಟ್ರಿಕ್ ಗೆಲುವಿನ ಬಳಿಕ ಮತ್ತೆ ಗೆಲ್ತಾರಾ ಹೆಚ್.ಕೆ ಕುಮಾರಸ್ವಾಮಿ? – ಸಕಲೇಶಪುರ ಮೀಸಲು ಕ್ಷೇತ್ರ ಯಾರಿಗೆ ಒಲಿಯುತ್ತೆ
ಚಾಮರಾಜನಗರ: ಒಂದು ಕೊಡ್ರಯ್ಯ ಅಂದ್ರೆ ಎರಡು ಕೊಟ್ಟವ್ರೆ, ಚಾಮರಾಜನಗರ (Chamarajanagar) ವೋಲ್ಟೇಜ್ ಆದ್ರೆ, ವರುಣಾ (Varuna) ಹೈ ವೋಲ್ಟೇಜ್ ಎಂದು ಸಚಿವ ವಿ.ಸೋಮಣ್ಣ (V Somanna) ಎರಡು ಕಡೆ ಸ್ಪರ್ಧಿಸಿರುವ ಬಗ್ಗೆ ಮಾರ್ಮಿಕವಾಗಿ ನುಡಿದರು.
ಚಾಮರಾಜನಗರ ತಾಲೂಕು ಕೊತ್ತಲವಾಡಿಯಲ್ಲಿ ರೋಡ್ ಶೋ (Road Show) ವೇಳೆ ಮಾತನಾಡಿದ ಅವರು, ಎರಡು ಕಡೆ ಓಡಾಡುವುದು ಸುಲಭದ ಕೆಲಸ ಅಲ್ಲ, ವರುಣಾ ಹೈವೋಲ್ಟೇಜ್ ಅಂತ ಅವ್ರು ಹೇಳ್ತಿದ್ರು, ಆದ್ರೆ ಎಂಟೇ ದಿನಕ್ಕೆ ಹೈಯು ಇಲ್ಲ ಪೈಯು ಇಲ್ಲ ಆಗಿದೆ. ಇನ್ನೊಂದು ಮೂರು, ನಾಲ್ಕು ದಿನ ಹೋದ್ರೆ ಎಲ್ಲಾ ವೋಲ್ಟೇಜ್ ಹೋಗಿ ಅವರು ಏನಾಗುತ್ತಾರೆ ಅಂತ ನೀವೇ ನೋಡಿ ಎಂದು ವ್ಯಂಗ್ಯವಾಡಿದರು.
ಗೋವಿಂದರಾಜನಗರ ತಬ್ಬಲಿ ಆಗಿದೆ, ನೂರಾರು ಜನ ಕಾರ್ಯಕರ್ತರು ಇಲ್ಲಿ ಬಂದು ಓಡಾಡುತ್ತಿದ್ದಾರೆ. ವರುಣಾದಲ್ಲಿ ಸಾವಿರಾರು ಜನರು ಬಂದು ಕೆಲಸ ಮಾಡುತ್ತಿದ್ದಾರೆ ಎಂದ ಅವರು, ಸಿದ್ದರಾಮಯ್ಯ ಅವರು ನಾನು ನಾಮಪತ್ರ ಹಾಕಿದ್ರೆ ಮತ್ತೆ ವೋಟ್ ಹಾಕುವುದಕ್ಕೆ ಮಾತ್ರ ಬರುತ್ತೇನೆ ಎಂದು ಹೇಳಿದ್ದರು. ಆದರೆ ಅವರು ಸೋಮವಾರದಿಂದ ವರುಣಾದಲ್ಲೇ ಇರುತ್ತಾರಂತೆ. ಮುಂದಿನ ಸೋಮವಾರದಿಂದ ವರುಣಾದಲ್ಲೇರುತ್ತೇನೆ, ನನ್ನ ಕೈಲಿ ಆಗುವುದಿಲ್ಲ ಎಂದು ಹೇಳುತ್ತಿದ್ದಾರೆ ಎಂದು ಟೀಕಿಸಿದರು.
ಸಿದ್ದರಾಮಯ್ಯ (Siddaramaiah) ಅವರ ಕುಟುಂಬ ಯಾವತ್ತೂ ರೋಡ್‌ಗೆ ಹೋಗಿ ಒಂದು ವೋಟ್ ಕೇಳಿರಲಿಲ್ಲ. ಈಗ ಎಲ್ಲಾ ಕಡೆ ಕೇಳ್ತಿದ್ದಾರೆ. ಎಲ್ಲಾ ಹೈ ವೋಲ್ಟೇಜ್ ಪ್ರಭಾವ ಎಂದ ಅವರು, ವರುಣಾದಲ್ಲಿ ಒಂದು ದಿನ ಅಲ್ಲ, ದಿನವೂ ನಮ್ಮ ಪ್ರಚಾರಕ್ಕೆ ಅಡ್ಡಿಪಡಿಸುತ್ತಿದ್ದಾರೆ. ಸಿದ್ದರಾಮಯ್ಯ ಅವರು ಹತಾಶರಾಗಿದ್ದಾರೆ. ಈ ರಾಜ್ಯದ ಮಾಜಿ ಸಿಎಂಗೆ ಮುಜುಗರವಾಗಬಾರದೆಂದು ಸಹಿಸಿಕೊಂಡಿದ್ದೇನೆ. ಅರ್ಥ ಮಾಡಿಕೊಂಡಿಲ್ಲ ಅಂದ್ರೆ ಹೇಗೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಹೂವಿನಲ್ಲಿ ಕಲ್ಲು ಬಂದಿಲ್ಲ, ಯಾರೋ ದುಷ್ಕರ್ಮಿಗಳು ಎಸೆದಿದ್ದಾರೆ : ಪರಮೇಶ್ವರ್
ಪ್ರತಾಪ್ ಸಿಂಹರಿಂದಲೇ ಗಲಾಟೆಯಾಗ್ತಿದೆ ಎಂಬ ಕಾಂಗ್ರೆಸ್ ಆರೋಪಕ್ಕೆ ಉತ್ತರಿಸಿದ ಅವರು, ಪ್ರತಾಪ್ ಸಿಂಹ ಜವಾಬ್ದಾರಿಯುತ ಲೋಕಸಭಾ ಸದಸ್ಯ. ಆತ ನನಗೆ ಸಹೋದರ ಸಮಾನ, ಪಕ್ಷದ ಭವಿಷ್ಯದ ನಾಯಕ, ವಾಸ್ತವಾಂಶ ಇರೋದನ್ನು ಮಾತಾಡ್ತಾರೆ ಎಂದರು. ಇದನ್ನೂ ಓದಿ: ಮೋದಿ ರೋಡ್ ಶೋ- ಮದುಮಗ ಆಯ್ತು, ಈಗ ಮದುವೆಗೆ ಹೋಗಲು ಕಷ್ಟಪಟ್ಟ ವಧು
ಮೈಸೂರು: ಸಿದ್ದರಾಮನಹುಂಡಿ (Siddaramana Hundi) ಏನು ಸಿದ್ದರಾಮಯ್ಯನ (Siddaramaiah) ಸಂಸ್ಥಾನನಾ ಎಂದು ಸಂಸದ ಪ್ರತಾಪ್ ಸಿಂಹ (Pratap Simha) ಕಿಡಿಕಾರಿದ್ದಾರೆ.
ಶುಕ್ರವಾರ ಮೈಸೂರಿನಲ್ಲಿ (Mysuru) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮನಹುಂಡಿಯಲ್ಲಿ ಬಿಜೆಪಿ (BJP) ಕಾರ್ಯಕರ್ತರ ಮೇಲೆ ಕಾಂಗ್ರೆಸ್ ಕಾರ್ಯಕರ್ತರಿಂದ ನಡೆದ ಹಲ್ಲೆ ವಿಚಾರಕ್ಕೆ ಪ್ರತಿಕ್ರಿಯಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ರೀತಿ ಸಣ್ಣತನ ಯಾಕೆ ಮಾಡುತ್ತಿದ್ದಾರೆ ಗೊತ್ತಾಗುತ್ತಿಲ್ಲ. ಗುರುವಾರ ಬಿಜೆಪಿ ಪ್ರಚಾರ ಮೆರವಣಿಗೆ ಮೇಲೆ ಕಾಂಗ್ರೆಸ್ (Congress) ಕಾರ್ಯಕರ್ತರು ಕಲ್ಲು ತೂರಾಟ ನಡೆಸಿದ್ದಾರೆ. ಸಿದ್ದರಾಮಯ್ಯ ಪಾಳಯದಲ್ಲಿ ಹತಾಶೆ ಮತ್ತು ಸೋಲಿನ ಭಯ ಶುರುವಾಗಿದೆ. ಇದರಿಂದ ಬಿಜೆಪಿ ಕಾರ್ಯಕರ್ತರು ಪ್ರಚಾರಕ್ಕೆ ಹೋದ ಕಡೆ ಕೆಲವರು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾರೆ. ಅಲ್ಲದೆ ಹಲ್ಲೆಗೆ ಮುಂದಾಗುತ್ತಾರೆ ಎಂದು ಕುಟುಕಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯರ ಅಣ್ಣನ ಮನೆ ಮುಂದೆಯೇ ಗಲಾಟೆ ನಡೆದಿದೆ – ವಿ.ಸೋಮಣ್ಣ ಕಿಡಿ
ಮೊದಲೇ ಬಕೆಟ್‍ಗಳಲ್ಲಿ ಕಲ್ಲುಗಳನ್ನು ಇಟ್ಟುಕೊಂಡು ಗಲಾಟೆ ಮಾಡಲು ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದರು. ಅಲ್ಲೇನೂ ಸಿದ್ದರಾಮಯ್ಯ ಪಾಳೇಗಾರಿಕೆ ಮಾಡುತ್ತಿದ್ದಾರಾ? ಸೋಮಣ್ಣ (V.Somanna) ಒಂದು ಕರೆ ಕೊಟ್ಟರೆ ನಿಮಗೂ ಎಲ್ಲಾ ಊರುಗಳಲ್ಲಿ ಇದೇ ರೀತಿಯ ಘಟನೆ ಎದುರಾಗಬಹುದು. ಇದನ್ನು ನೀವು ಮುಂದುವರಿಸಿದರೆ ನಮಗೂ ಶಕ್ತಿ ಇದೆ. ಅದನ್ನು ನಾವು ಸಾಬೀತು ಮಾಡಬೇಕಾಗುತ್ತದೆ. ಆಗ ವರುಣದ ಶಾಂತಿ ಕೆಡುತ್ತದೆ ಎಂದು ಗುಡುಗಿದ್ದಾರೆ.
ಸಿದ್ದರಾಮಯ್ಯ ಅವರು ಸ್ವಜಾತಿಗೆ ಮನ್ನಣೆ ಕೊಟ್ಟು ಈ ರೀತಿ ತೊಂದರೆ ಕೊಡಿಸುತ್ತಿದ್ದಾರೆ. ಅವರೊಬ್ಬ ಜಾತಿವಾದಿ, ವರುಣ ಜನರಿಗೆ ಇದು ಗೊತ್ತಾಗಿದೆ. ಇದೇ ಕಾರಣಕ್ಕೆ ಎಲ್ಲಾ ವರ್ಗದ ಜನ ಸೋಮಣ್ಣರ ಪರವಾಗಿ ನಿಂತಿದ್ದಾರೆ ಎಂದಿದ್ದಾರೆ.
ಕಾಪು ಸಿದ್ದಲಿಂಗಸ್ವಾಮಿ ಮಾತನಾಡಿ, ನಾನು ಎಂದಿಗೂ ಬಿಜೆಪಿ ತೊರೆಯುವುದಿಲ್ಲ. ಕತ್ತು ಸೀಳಿದರೂ ಪಕ್ಷಕ್ಕೆ ದ್ರೋಹ ಮಾಡುವ ಕೆಲಸ ಮಾಡುವುದಿಲ್ಲ. ಸಾಯುವವರೆಗೂ ಪಕ್ಷಕ್ಕಾಗಿ ದುಡಿಯುತ್ತೇನೆ. ಕಾಂಗ್ರೆಸ್‍ನವರು ಸೋಲಿನ ಹತಾಶೆಯಿಂದ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಎಂದಿದ್ದಾರೆ. ಇದನ್ನೂ ಓದಿ: ಗೀತಾ ಶಿವರಾಜ್ ಕುಮಾರ್ ಕಾಂಗ್ರೆಸ್ ಸೇರ್ಪಡೆ: ಸಹೋದರಿ ನಿವಾಸಕ್ಕೆ ಮಧು ಬಂಗಾರಪ್ಪ
ಮೈಸೂರು: ಕರ್ನಾಟಕ ವಿಧಾನಸಭಾ ಚುನಾವಣೆ (Karnataka Election 2023) ಹೊತ್ತಿನಲ್ಲಿ ವರುಣಾ (Varuna) ಕ್ಷೇತ್ರ ಪ್ರಬಲ ನಾಯಕರ ಪೈಪೋಟಿಯಿಂದ ಒಂದಲ್ಲ ಒಂದು ವಿಚಾರವಾಗಿ ಸುದ್ದಿಯಲ್ಲಿದೆ. ಸಿದ್ದರಾಮಯ್ಯನಹುಂಡಿಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ ನಡುವೆ ಮಾರಾಮಾರಿ ನಡೆದಿದೆ.
ಘಟನೆಗೆ ಕಾರಣ ತಿಳಿದುಬಂದಿಲ್ಲ. ಗಲಾಟೆ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತ ನಾಗೇಶ್ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜೆಎಸ್ಎಸ್ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರಿದಿದೆ. ಗಲಾಟೆಯಲ್ಲಿ ನಾಗೇಶ್ ಭುಜ ಮತ್ತು ಕಾಲುಗಳಿಗೆ ಗಾಯವಾಗಿತ್ತು. ಸದ್ಯ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಇದನ್ನೂ ಓದಿ: ಮೀನು ಮುಟ್ಟಿದ್ದೇನೆ ದೇಗುಲದ ಒಳಗೆ ಬರಬಹುದೇ?: ಹೊಸ್ತಿಲ ಹೊರಗೆ ನಿಂತು ರಾಹುಲ್ ಪ್ರಶ್ನೆ
ಪಕ್ಷದ ಅಭ್ಯರ್ಥಿ ಆಸ್ಪತ್ರೆಗೆ ದಾಖಲಾಗಿರುವ ಬಗ್ಗೆ ವರುಣಾ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಅವರಿಗೆ ತಿಳಿಸಲಾಗಿದೆ. ಗಾಯಾಳು ನೋಡಲು ಜೆಎಸ್‌ಎಸ್ ಆಸ್ಪತ್ರೆಗೆ ಸೋಮಣ್ಣ ಆಗಮಿಸಲಿದ್ದಾರೆ ಎನ್ನಲಾಗಿದೆ.
ಸದ್ಯ ಸಿದ್ದರಾಮಯ್ಯನಹುಂಡಿಯಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ಘಟನೆ ಸಂಬಂಧ ಮೂವರ ವಿರುದ್ಧ ಹಲ್ಲೆ ಆರೋಪ ಮಾಡಲಾಗಿದೆ. ಎನ್‌ಸಿಆರ್ ಮಾಡಿ ಪೊಲೀಸರು ಆರೋಪಿಗಳನ್ನು ಬಿಟ್ಟು ಕಳುಹಿಸಿದ್ದಾರೆ. ಇದನ್ನೂ ಓದಿ: ಏ.30ಕ್ಕೆ ಚನ್ನಪಟ್ಟಣಕ್ಕೆ ಮೋದಿ – ದಶಪಥ ಹೆದ್ದಾರಿ ಮಾರ್ಗ ಬದಲಾವಣೆ
ಮೈಸೂರು: ಸಿದ್ದರಾಮನಹುಂಡಿಯಲ್ಲಿ ಸೋಮಣ್ಣ ಪ್ರಚಾರದ ನಡೆಸುತ್ತಿದ್ದ ಸಂದರ್ಭದಲ್ಲಿ ಬಿಜೆಪಿ (BJP) ಪ್ರಚಾರ ರಥದ ಮೇಲೆ ಕಾಂಗ್ರೆಸ್ (Congress) ಕಾರ್ಯಕರ್ತರಿಂದ ಕಲ್ಲು ತೂರಾಟ ನಡೆಸಿರುವ ಆರೋಪ ಕೇಳಿ ಬಂದಿದೆ.
ಸಿದ್ದರಾಮಯ್ಯ (Siddaramaiah) ಅವರ ಅಣ್ಣನ ಮನೆ ಮುಂದೆ ಪ್ರಚಾರ ಮಾಡುವಾಗ ಈ ಘಟನೆ ನಡೆದಿದೆ. ಘಟನೆ ವೇಳೆ ಬಿಜೆಪಿ ಕಾರ್ಯಕರ್ತ ನಾಗೇಶ್ ಮೇಲೆ ಹಲ್ಲೆ ನಡೆದಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾನೆ.
ಘಟನೆಯೇನು?: ಪ್ರಚಾರಕ್ಕಾಗಿ ಬಿಜೆಪಿ ನಾಯಕರು ಸಿದ್ದರಾಮಯ್ಯನಹುಂಡಿಗೆ ಎಂಟ್ರಿ ಆಗುತ್ತಿದ್ದಂತೆ ಸ್ಥಳೀಯರಿಂದ ಕಿರಿಕ್ ನಡೆದಿರುವ ಆರೋಪ ಕೇಳಿ ಬಂದಿದೆ. ಗ್ರಾಮಕ್ಕೆ ಬಿಜೆಪಿ ನಾಯಕರು ಎಂಟ್ರಿ ಆಗುತ್ತಿದ್ದ ಕಾರುಗಳನ್ನು ತಡೆದು ಗಲಾಟೆ ನಡೆಸಿದ್ದಾರೆ. ಈ ವೇಳೆ ಕಾರಿನಿಂದ ಇಳಿದು ಯುವಕ ನಾಗೇಶ್ ಪ್ರಶ್ನೆ ಮಾಡಿದ್ದಾನೆ. ನಾಗೇಶ್ ಪ್ರಶ್ನೆ ಮಾಡುತ್ತಿದ್ದಂತೆ 30ಕ್ಕೂ ಹೆಚ್ಚು ಜನರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಇದನ್ನೂ ಓದಿ: ಪ್ರವೀಣ್ ನೆಟ್ಟಾರು ಕನಸು ನನಸು – ನೂತನ ಮನೆಯ ಗೃಹ ಪ್ರವೇಶ, ಸ್ಮಾರಕ ಲೋಕಾರ್ಪಣೆ
ಚಾಮರಾಜನಗರ: ಸಚಿವ ಸೋಮಣ್ಣ ಎರಡು ಕ್ಷೇತ್ರದಲ್ಲಿ ಸ್ಪರ್ಧಿಸಿರುವುದರಿಂದ ಚಾಮರಾಜನಗರ ಕೂಡ ಹೈವೋಲ್ಟೇಜ್ ಕ್ಷೇತ್ರವಾಗಿ ಮಾರ್ಪಟ್ಟಿದೆ. ನಾಮಪತ್ರ ವಾಪಾಸ್ ಪಡೆಯುವಂತೆ ಜೆಡಿಎಸ್ ಅಭ್ಯರ್ಥಿಗೆ ಆಮಿಷವೊಡ್ಡಲಾಗಿದೆ ಎನ್ನುವ ಆಡಿಯೋ ವೈರಲ್ ಆಗಿದೆ. ಅಲ್ಲದೇ ರಾಜ್ಯದಲ್ಲಿ ಚರ್ಚೆಗೂ ಕೂಡ ನಾಂದಿಯಾಡಿದೆ.
ಹೌದು, ಚಾಮರಾಜನಗರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಮಲ್ಲಿಕಾರ್ಜುನಸ್ವಾಮಿ ಅವರಿಗೆ ಬಿಜೆಪಿ ಅಭ್ಯರ್ಥಿ, ಸಚಿವ ವಿ.ಸೋಮಣ್ಣ ಕರೆ ಮಾಡಿ ನಾಮಪತ್ರ ವಾಪಸ್ ಪಡೆಯುವಂತೆ ಹೇಳುವ ಆಡಿಯೋ ತುಣುಕು ವಾಟ್ಸಪ್‌ನಲ್ಲಿ ಹರಿದಾಡುತ್ತಿದೆ. ಆಲೂರು ಮಲ್ಲು ಚಾಮರಾಜನಗರ ಕ್ಷೇತ್ರದಿಂದ ಜೆಡಿಎಸ್ ಟಿಕೆಟ್ ನೀಡಿದ್ದು, ನಾಮಪತ್ರ ಸಲ್ಲಿಸಿದ್ದರು. ಲಿಂಗಾಯತ ಸಮುದಾಯಕ್ಕೆ ಸೇರಿದ್ದಾರೆ. ಉಮೇದುವಾರಿಕೆ ವಾಪಸ್ ಪಡೆಯಲು ಅವಕಾಶ ನೀಡಲಾಗಿತ್ತು. ಸೋಮಣ್ಣ ಅವರು ವರುಣಾ ಕ್ಷೇತ್ರದಲ್ಲಿ ಪ್ರಚಾರದಲ್ಲಿ ನಿರತರಾಗಿದ್ದರು. ಸೋಮವಾರ ಬೆಂಬಲಿಗರೊಬ್ಬರು ಆಲೂರು ಮಲ್ಲು ಅವರಿಗೆ ಕರೆ ಮಾಡಿ, ಸೋಮಣ್ಣ ಬಳಿ ಮಾತನಾಡಿಸಿದ್ದಾರೆ. ಅದರಲ್ಲಿ ಈ ವಿಚಾರ ಪ್ರಸ್ತಾಪವಾಗಿದೆ.
ಆಡಿಯೋದಲ್ಲಿ ಏನಿದೆ?
ಸೋಮಣ್ಣ: ‘ಏಯ್ ಮೊದ್ಲು ತಗೊಳಯ್ಯ, ಆಮೇಲೆ ಏನ್ ಬೇಕೋ ಮಾಡ್ತೀನಿ. ಏನಯ್ಯಾ ನೀನು, ಯಾವನದೋ ಮಾತು ಕೇಳ್ಕೊಂಡು… ಮಲ್ಲು ನೀನು ನನಗೆ ಹಳೆಯ ಸ್ನೇಹಿತ. ಅವನ್ಯಾವನೋ ತೊಟ್ಟಿ ನನ್ ಮಗನ ಮಾತು ಕೇಳಕ್ಕೆ ಹೋಗಬೇಡ. ನಿನಗೆ ಬದುಕೋದಕ್ಕೆ ಏನು ಬೇಕೋ ಎಲ್ಲವೂ ಮಾಡ್ತೀನಿ. ಅಣ್ಣ ಇದ್ದಾರೆ. ಮೊದ್ಲು ವಾಪಸ್ ತಗೋ. ಆಮೇಲೆ ಬಾಕಿದ್ ಮಾತಾಡ್ತೀನಿ. ನನ್ನ ಮಾತು ಕೇಳು. ನಿನ್ನ ಹಿತ ಕಾಪಾಡೋದು ನನ್ನ ಜವಾಬ್ದಾರಿ, ಸುದೀಪಣ್ಣನ ಜವಾಬ್ದಾರಿ. ಮಲ್ಲು, ಮರಮ್‌ಕಲ್, ನಾನು, ಸುದೀಪಣ್ಣ ಮೂರು ಜನ ಇರ್ತೀವಿ. ಉಪ್ಪಾರರ ದೇವಸ್ಥಾನದಲ್ಲಿ ಇದ್ದೇನೆ. ಮೊದಲು ಆ ಕೆಲಸ ಮಾಡು. ನಿನಗೆ ಕೈ ಮುಗಿತೀನಿ ಎಂದು ಸೋಮಣ್ಣ ಹೇಳುತ್ತಿದ್ದಾರೆ ಎನ್ನಲಾದ ಆಡಿಯೋ ತುಣುಕಿನಲ್ಲಿದೆ.
ಜೆಡಿಎಸ್ ಅಭ್ಯರ್ಥಿ: ಇಲ್ಲ, ನಾನು ಯಾರ ಮಾತು ಕೇಳ್ಕೊಂಡು ನಿಂತಿಲ್ಲ. ವಾಪಸ್ ತಗೆಯೋದಕ್ಕೆ ಆಗಲ್ಲಣ್ಣ. ನಿಮ್ಮ ಜೊತೆಗೇ ಇರ್ತೀನಿ. ನೀವು ಹೇಳಿದಂಗೆ ಇರ್ತೀನಿ ಬಿಡಣ್ಣ, ಮುಂದೆ ನೀವೇ ಮುಖ್ಯಮಂತ್ರಿ ಆಗಬೇಕು ಎಂದು ನಾನೂ ಬಯಸ್ತೀನಿ.
ಸೋಮಣ್ಣ: ಯಾವನೋ ಪೋಲಿ ನನ್ ಮಗನ ಮಾತು ಕೋಳ್ಕೊಂಡು… ಮೊದಲು ವಾಪಸ್ ತಗೋ, ಮಲ್ಲು… ಸರ್ಕಾರ ಬರ್ತದೆ. ಗೂಟದ ಕಾರು ಮಾಡಿ ಕೊಡ್ತೀವಿ. ಮೊದ್ಲು ತಗೊ, ದೇವರ ಮುಂದೆ ನಿಂತಿದ್ದೀವಿ. ಯಾರನ್ನೂ ಕೇಳೊಕ್ಕೆ ಹೋಗ್ಬೇಡ. ನಾವೆಲ್ಲ ಮಾತಾಡುತ್ತೀವಿ. ಮೊದ್ಲು ವಾಪಸ್ ತಗೊ. ಈಗ ಟೈಮಿಲ್ಲ. ಹೀಗೆ ಸಂಭಾಷಣೆ ನಡೆದಿದೆ.
ಒಟ್ನಲ್ಲಿ ಲಿಂಗಾಯತ ವೋಟ್‌ಬ್ಯಾಂಕ್ ತಪ್ಪೋ ಆತಂಕದಲ್ಲಿ ಜೆಡಿಎಸ್ ಅಭ್ಯರ್ಥಿಗೆ ಆಮಿಷವೊಡ್ಡಿದ್ದಾರೆಂಬ ಚರ್ಚೆ ನಡೆದಿದೆ. ಗೂಟದ ಕಾರಿನ ಆಮಿಷದ ಜೊತೆಗೆ ಹಣಕಾಸು ವಿಚಾರ ಚರ್ಚೆಗೆ ಬಂದಿದೆ. ಮುಂದೆ ಈ ಆಡಿಯೋ ವಿಚಾರ ಯಾವ ತಿರುವು ಪಡೆದುಕೊಳ್ಳುತ್ತೆ ಎಂಬುದು ಕುತೂಹಲ ಮೂಡಿಸಿದೆ.
ಮೈಸೂರು: ವರುಣಾ (Varuna) ಕ್ಷೇತ್ರದಲ್ಲಿ ನನಗೆ 100 ಪಟ್ಟು ಗೆಲ್ಲುವ ವಿಶ್ವಾಸ ಹೆಚ್ಚಾಗಿದೆ. ಜನರ ಪ್ರೀತಿ, ವಿಶ್ವಾಸ, ಮಮಕಾರ ನನ್ನ ಮೇಲಿದೆ. ಚಾಮುಂಡೇಶ್ವರಿಯ ಆಶೀರ್ವಾದ ಹಾಗೂ ಮಹದೇಶ್ವರರ ಸಂದೇಶವಿದೆ ಎಂದು ವರುಣಾ ಕ್ಷೇತ್ರದ ಬಿಜೆಪಿ (BJP) ಅಭ್ಯರ್ಥಿ ವಿ.ಸೋಮಣ್ಣ (V.Somanna) ಹೇಳಿದ್ದಾರೆ.
ಸೋಮಣ್ಣ ಹೊರಗಿನವರು ಎಂಬ ಸಿದ್ದರಾಮಯ್ಯ (Siddaramaiah) ಹೇಳಿಕೆ ವಿಚಾರವಾಗಿ ಮೈಸೂರಿನಲ್ಲಿ (Mysuru) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನರು ಈ ಬಾರಿ ಆಶೀರ್ವಾದ ಮಾಡುವ ನಂಬಿಕೆ ಜಾಸ್ತಿಯಿದೆ. ಯಾರು ಹೊರಗಿನವರು, ಒಳಗಿನವರು ಎನ್ನುವುದಕ್ಕಿಂತ ಹೆಚ್ಚಾಗಿ ನಮ್ಮ ಕಾಲದಲ್ಲಿ ಏನು ಮಾಡಿದ್ದಾರೆ ಎಂಬುದು ಮುಖ್ಯವಾಗುತ್ತದೆ. ಸಿದ್ದರಾಮಯ್ಯ ಕೊಪ್ಪಳ (Koppal) ಹಾಗೂ ಬಾದಾಮಿಯಲ್ಲಿ (Badami) ಸ್ಪರ್ಧೆ ಮಾಡಲಿಲ್ವಾ? ಇದರ ಬಗ್ಗೆ ಅವರು ಮಾತನಾಡುವುದಿಲ್ಲ. ಸಿದ್ದರಾಮಯ್ಯ ವಾಸ್ತವಾಂಶ ಮಾತನಾಡಿದರೆ ಒಳ್ಳೆಯದು ಎಂದು ತಿರುಗೇಟು ನೀಡಿದರು. ಇದನ್ನೂ ಓದಿ: ಜೆಡಿಎಸ್ ಭದ್ರಕೋಟೆಯಲ್ಲಿ ಈ ಬಾರಿ ತ್ರಿಕೋನ ಸ್ಪರ್ಧೆ – ಯಾರ ಕೈ ಸೇರುತ್ತೆ ‘ಗುಬ್ಬಿ’
ಲಿಂಗಾಯತ ಸಿಎಂಗಳು ಭ್ರಷ್ಟ ಸಿಎಂಗಳು ಎಂಬ ಸಿದ್ದರಾಮಯ್ಯ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಲಿಂಗಾಯತ ಸಿಎಂ ವಿಚಾರ ನಾನು ಚರ್ಚೆ ಮಾಡಲ್ಲ. ಅದರ ಬಗ್ಗೆ ಪಕ್ಷದ ವರಿಷ್ಠರು ಮಾತನಾಡುತ್ತಾರೆ. ಒಂದು ಧರ್ಮವನ್ನು ಮತ್ತೊಂದು ಧರ್ಮಕ್ಕೆ ಹೋಲಿಕೆ ಮಾಡುವುದು ನಮ್ಮ ಕರ್ತವ್ಯ ಅಲ್ಲ. ರಾಜಕಾರಣಿಗಳು ತಮ್ಮ ಇತಿಮಿತಿಯಲ್ಲಿ ಮಾತನಾಡಬೇಕು. ನಿಜಲಿಂಗಪ್ಪನವರು, ವೀರೇಂದ್ರ ಪಾಟೀಲ್, ಜೆ.ಎಚ್.ಪಟೇಲ್, ಎಸ್.ಆರ್ ಬೊಮ್ಮಾಯಿ, ಯಡಿಯೂರಪ್ಪನವರು ತಮ್ಮದೇ ಆದ ಕೊಡುಗೆಯನ್ನು ಕೊಟ್ಟಿದ್ದಾರೆ ಎಂದು ದೇಶಕ್ಕೆ ಗೊತ್ತಿದೆ ಎಂದು ಹೇಳಿದರು. ಇದನ್ನೂ ಓದಿ: ನಾಗಪುರದಿಂದ ಯಾರೇ ಬಂದರೂ ಚುನಾವಣೆ ಮಾಡಲು ಆಗಲ್ಲ: ಬಿಜೆಪಿ ನಾಯಕರಿಗೆ ಶೆಟ್ಟರ್ ತಿರುಗೇಟು
ಒಂದು ಬಾರಿ ಭಾವುಕರಾಗಿ ಮಾತನಾಡಿ ಎರಡೇ ನಿಮಿಷಕ್ಕೆ ಉಲ್ಟಾ ಹೊಡೆಯುವ ವ್ಯವಸ್ಥೆಯನ್ನು ನಾನು ನೋಡಿದ್ದೇನೆ. ಅದರ ಬಗ್ಗೆ ಹೆಚ್ಚು ಚರ್ಚೆ ಮಾಡಲ್ಲ. ಇದನ್ನು ಸಿದ್ದರಾಮಯ್ಯ ಮನವರಿಕೆ ಮಾಡಿಕೊಂಡು ರಾಜ್ಯದ ಎಲ್ಲಾ ವರ್ಗದ ಜನರ ಜೊತೆ ಒಡನಾಟ ಇಟ್ಟುಕೊಂಡು ಕೆಲಸ ಮಾಡಬೇಕಿದೆ. ಜಾತಿ ನಿಮಿತ್ತ ಮಾತ್ರ ಇದನ್ನು ವೈಭವೀಕರಿಸಬಾರದು ಎಂದು ತಿಳಿಸಿದರು. ಇದನ್ನೂ ಓದಿ: ಯುವಕನಿಗೆ ಕಪಾಳ ಮೋಕ್ಷ ಮಾಡಿದ ಎಂ.ಬಿ.ಪಾಟೀಲ್
ಎಲ್ಲಾ ವರ್ಗದ ಜನರು ಸೋಮಣ್ಣನಂತಹ ಕೆಲಸಗಾರರು ಬೇಕು ಎಂದು ಕೇಳುತ್ತಿದ್ದಾರೆ. ಮತದಾರರು ಹತ್ತಾರು ಭಾರಿ ಯೋಚನೆ ಮಾಡಿ ನಿರ್ಧಾರ ಮಾಡುತ್ತಾರೆ. ವಸತಿ ಸಚಿವರಾಗಿ ಸೋಮಣ್ಣ ಏನು ಕೆಲಸ ಮಾಡಿದ್ದಾರೆ ಎಂಬುದು ಸಿದ್ದರಾಮಯ್ಯಗೆ ಗೊತ್ತಿದೆ. ನನ್ನ ಬಗ್ಗೆ ಸಿದ್ದರಾಮಯ್ಯನವರೇ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ಬೆಂಗ್ಳೂರಿನಲ್ಲಿ ಸಿದ್ದರಾಮಯ್ಯ 8 ಸಾವಿರ ಕೋಟಿ ರೂ. ಅಕ್ರಮ ಮಾಡಿದ್ದಾರೆ: ಬೊಮ್ಮಾಯಿ ಆರೋಪ