Tag: V.S.Ugrappa

  • ಬಳ್ಳಾರಿಯಲ್ಲಿ ನರಕಚತುರ್ದಶಿಯ ಅರ್ಥಪೂರ್ಣ ಆಚರಣೆ: ಸಿದ್ದರಾಮಯ್ಯ

    ಬಳ್ಳಾರಿಯಲ್ಲಿ ನರಕಚತುರ್ದಶಿಯ ಅರ್ಥಪೂರ್ಣ ಆಚರಣೆ: ಸಿದ್ದರಾಮಯ್ಯ

    ಬೆಂಗಳೂರು: ಬಳ್ಳಾರಿ ಉಪಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್.ಉಗ್ರಪ್ಪ ಭಾರೀ ಅಂತರದಲ್ಲಿ ಜಯ ಸಾಧಿಸಿದ್ದಾರೆ. ಉಪಚುನಾವಣೆಯಲ್ಲಿ ಉಗ್ರಪ್ಪ ಜಯ ಸಾಧಿಸಿದ ಹಿನ್ನೆಲೆ ಮಾಜಿ ಸಿಎಂ ಸಿದ್ದರಾಮಯ್ಯ ಬಳ್ಳಾರಿಯಲ್ಲಿ ನರಕಚತುರ್ದಶಿಯ ಅರ್ಥಪೂರ್ಣ ಆಚರಣೆ ಎಂದು ಟ್ವೀಟ್ ಮಾಡಿದ್ದಾರೆ.

    ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ಟ್ವಿಟ್ಟರಿನಲ್ಲಿ, “ಬಳ್ಳಾರಿಯಲ್ಲಿ ನರಕಚತುರ್ದಶಿಯ ಅರ್ಥಪೂರ್ಣ ಆಚರಣೆ. ಕತ್ತಲೆಯಿಂದ ಬೆಳಕಿನ ಕಡೆಗೆ ಜನಪಯಣ. ನಾಡಬಾಂಧವರಿಗೆ ದೀಪಾವಳಿಯ ಶುಭಾಶಯಗಳು” ಎಂದು ಟ್ವೀಟ್ ಮಾಡಿ ಗೆಲುವನ್ನು ಸಂಭ್ರಮಿಸಿದ್ದಾರೆ.

    ಇತ್ತ ಉಪಚುನಾವಣೆಯಲ್ಲಿ ಗೆದ್ದ ಆನಂದ ನ್ಯಾಮಗೌಡ ಅವರನ್ನು ಸಿದ್ದರಾಮಯ್ಯ ಟ್ವಿಟ್ಟರಿನಲ್ಲಿ ಶುಭಾಶಯ ತಿಳಿಸಿದ್ದಾರೆ. ಸಿದ್ದರಾಮಯ್ಯ ತಮ್ಮ ಟ್ವಿಟ್ಟರಿನಲ್ಲಿ, “ಜಮಖಂಡಿ ವಿಧಾನಸಭಾ ಉಪಚುನಾವಣೆಯಲ್ಲಿ ಜಯಗಳಿಸಿರುವ ಆನಂದ ನ್ಯಾಮಗೌಡ ಅವರಿಗೆ ಅಭಿನಂದನೆಗಳು. ಪಕ್ಷದ ಜಯಕ್ಕಾಗಿ ಶ್ರಮಿಸಿದ ನಾಯಕರು ಹಾಗೂ ಕಾರ್ಯಕರ್ತರಿಗೆ ಧನ್ಯವಾದಗಳು. ನಮ್ಮ ಅಭ್ಯರ್ಥಿಯನ್ನು ಆಶೀರ್ವದಿಸಿದ ಕ್ಷೇತ್ರದ ಮತದಾರರಿಗೆ ಕೃತಜ್ಞತೆಗಳು” ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

    ಸಿದ್ದರಾಮಯ್ಯ ತಮ್ಮ ಮತ್ತೊಂದು ಟ್ವೀಟ್‍ನಲ್ಲಿ ಬಳ್ಳಾರಿ ಜನತೆಗೆ ಧನ್ಯವಾದ ತಿಳಿಸಿದ್ದಾರೆ. ಬಳ್ಳಾರಿಯ ಜನತಾ ಜನಾರ್ದನರಿಗೆ ಧನ್ಯವಾದಗಳು. ಜನಾರ್ದನ ರೆಡ್ಡಿಯವರ ಅಮಾನವೀಯ ನಡೆ-ನುಡಿಗೆ ಬಳ್ಳಾರಿ ಜನರೇ ಶಾಪ ನೀಡಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನ್ಯಾಯ ಕೇಳಲು ಬಂದಿದ್ದ ಮಹಿಳೆಗೆ ಭ್ರಷ್ಟಾಚಾರದಿಂದ ವ್ಯವಸ್ಥೆ ಬೆತ್ತಲೆಯಾಗಿದೆ ನನ್ನಿಂದ ಆಗಲ್ಲ ಅಂದಿದ್ರು ಉಗ್ರಪ್ಪ!

    ನ್ಯಾಯ ಕೇಳಲು ಬಂದಿದ್ದ ಮಹಿಳೆಗೆ ಭ್ರಷ್ಟಾಚಾರದಿಂದ ವ್ಯವಸ್ಥೆ ಬೆತ್ತಲೆಯಾಗಿದೆ ನನ್ನಿಂದ ಆಗಲ್ಲ ಅಂದಿದ್ರು ಉಗ್ರಪ್ಪ!

    ಬಳ್ಳಾರಿ: ರಾಜ್ಯದ 5 ಕ್ಷೇತ್ರಗಳಲ್ಲಿ ಉಪಚುನಾವಣೆ ಪ್ರಚಾರ ಜೋರಾಗಿ ಸಾಗುತ್ತಿದೆ. ಈ ಬೆನ್ನಲ್ಲೇ ಬಳ್ಳಾರಿ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಶಿವಮೊಗ್ಗ ಮೂಲದ ಮಹಿಳೆಯೊಬ್ಬರು ಗಂಭೀರ ಆರೋಪ ಮಾಡಿದ್ದು, ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಜೊತೆಗೆ ಬಿಜೆಪಿಯವರಿಗೆ ಮಹಿಳೆಯ ಆರೋಪ ಹೊಸ ಅಸ್ತ್ರವಾಗಿ ಪರಿಣಮಿಸಲಿದೆ.

    ಮಹಿಳೆಯೊಬ್ಬರು ಇಂದು ಸುದ್ದಿಗೋಷ್ಠಿ ಮೂಲಕ ಬಳ್ಳಾರಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಅಭ್ಯರ್ಥಿ ವಿ.ಎಸ್.ಉಗ್ರಪ್ಪ ಅವರ ಮೇಲೆ ಗಂಭೀರ ಆರೋಪ ಮಾಡಿದ್ದಾರೆ. ನನ್ನ ಮಗಳಿಗೆ ಆಗಿರುವ ಅನ್ಯಾಯದ ವಿರುದ್ಧ ಹೋರಾಡುವಾಗ, ನಮ್ಮ ವ್ಯವಸ್ಥೆ ಭ್ರಷ್ಟಾಚಾರದಿಂದ ಬೆತ್ತಲೆಯಾಗಿದೆ. ನೀವು ರಾಜಿ ಮಾಡಿಕೊಳ್ಳಿ ಎಂದು ಉಗ್ರಪ್ಪ ಅಂದು ಸಲಹೆ ನೀಡಿದ್ದರು ಎಂದು ಮಹಿಳೆ ದೂರಿದ್ದಾರೆ.

    ಏನಿದು ಪ್ರಕರಣ?:
    ನನ್ನ ಮಗಳ ಮೇಲೆ ಚಿಕ್ಕಪ್ಪನೇ ಲೈಂಗಿಕ ದೌರ್ಜನ್ಯ ನಡೆಸಿದ್ದ. ಆತನನ್ನು ಪೋಕ್ಸೋ ಕಾಯ್ದೆ ಅಡಿ ಪೊಲೀಸರು ಬಂಧಿಸಿದ್ದರು. ಆರೋಪಿ ಜೈಲಿನಿಂದ ಹೊರ ಬರಲು 9 ಬಾರಿ ಜಾಮೀನಿಗೆ ಬೇಡಿಕೆ ಇಟ್ಟಿದ್ದ. ಆದರೂ ಆತನಿಗೆ ಜಾಮೀನು ಸಿಕ್ಕಿರಲಿಲ್ಲ. ಪ್ರಕರಣದ ವಿಚಾರವಾಗಿ ನಾನು ಮಹಿಳಾ ಮತ್ತು ಮಕ್ಕಳ ದೌರ್ಜನ್ಯ ತಡೆ ಸಮಿತಿ ಅಧ್ಯಕ್ಷರಾಗಿರುವ ವಿ.ಎಸ್.ಉಗ್ರಪ್ಪ ಅವರನ್ನು 2016ರಲ್ಲಿ ಭೇಟಿ ಮಾಡಿದ್ದೆ. ಮೊದಲಿಗೆ ನನಗೆ ಸಹಾಯ ಮಾಡಿದರು. ಆದರೆ ನಂತರದಲ್ಲಿ ಸರಿಯಾದ ಮಾರ್ಗದರ್ಶನ ನೀಡಲೇ ಇಲ್ಲ ಎಂದು ಮಹಿಳೆ ಆರೋಪಿಸಿದರು.

    ನಂತರದ ದಿನಗಳಲ್ಲಿ ಏಕಾಂಗಿ ಹೋರಾಟ ನಡೆಸಿದ್ದೆ. ಒಂದು ದಿನ ಉಗ್ರಪ್ಪ ಅವರು ಬೆಳವಂಗಲ ಬಳಿ ಕರೆದುಕೊಂಡು ಹೋಗಿದ್ದರು. ಆಗ ಕೇಸ್ ವಾಪಸ್ ತೆಗೆದುಕೊಳ್ಳಿ ಅಂತ ಉಗ್ರಪ್ಪ ಬೇಡಿಕೆ ಇಟ್ಟರು. ಅಷ್ಟೇ ಅಲ್ಲದೆ ಹೈಕಮಾಂಡ್‍ನಿಂದ ಒತ್ತಡವಿದೆ. ನೀವು ಪ್ರಕರಣವನ್ನು ಹಿಂದಕ್ಕೆ ಪಡೆಯಲೇ ಬೇಕು. ನಮ್ಮ ವ್ಯವಸ್ಥೆ ಭ್ರಷ್ಟಾಚಾರದಿಂದ ಬೆತ್ತಲೆಯಾಗಿದೆ. ಈ ಪ್ರಕರಣದಲ್ಲಿ ಸಹಾಯ ಮಾಡಲು ಸಾಧ್ಯವಿಲ್ಲ. ನಾನು ಪೋಸ್ಟ್ ಮ್ಯಾನ್ ಅಷ್ಟೇ. ನಿಮ್ಮ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಕೇಸ್ ವಾಪಸ್ ತೆಗೆದುಕೊಳ್ಳಿ ಎಂದು ಉಗ್ರಪ್ಪ ತಿಳಿಸಿದ್ದರು ಅಂತ ಮಹಿಳೆ ದೂರಿದರು.

    ನ್ಯಾಯಕ್ಕಾಗಿ ಕಳೆದ ಒಂದೂವರೆ ವರ್ಷದಿಂದ ನಾನು ಹೋರಾಟ ಮಾಡುತ್ತಿರುವೆ. ಈಗ ಮಾಧ್ಯಮಗಳ ಮುಂದೆ ನಿಂತಿರುವೆ. ನನಗೆ ನ್ಯಾಯ ಬೇಕು. ಒಂದು ಪುಟ್ಟ ಮಗುವಿಗೆ ನ್ಯಾಯ ಕೊಡಿಸಲು ಸಾಧ್ಯವಾಗದ ಉಗ್ರಪ್ಪನವರು ಹೇಡಿಯಂತೆ ನಡೆದುಕೊಂಡಿದ್ದಾರೆ. ಇಂತವರನ್ನ ಬಳ್ಳಾರಿಯಲ್ಲಿ ಚುನಾವಣೆಗೆ ನಿಲ್ಲಿಸಿದ್ದಾರೆ. ಬಳ್ಳಾರಿ ಮತದಾರರು ಇಂಥ ನಾಯಕರನ್ನು ಆಯ್ಕೆ ಮಾಡಿ ಕಳಿಸಬೇಕಾ ಅಂತ ಯೋಚನೆ ಮಾಡಲಿ ಎಂದು ಕಿಡಿಕಾರಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕಾಂಗ್ರೆಸ್ ಸೋಲಿಗೆ ಕೈ ನಾಯಕರೇ ಕಾರಣ- ಅನಿಲ್ ಲಾಡ್

    ಕಾಂಗ್ರೆಸ್ ಸೋಲಿಗೆ ಕೈ ನಾಯಕರೇ ಕಾರಣ- ಅನಿಲ್ ಲಾಡ್

    – ಸಿದ್ದರಾಮಯ್ಯ ವಿರಾಟ್ ಕೊಹ್ಲಿ ಇದ್ದಂಗೆ: ಉಗ್ರಪ್ಪ

    ಬಳ್ಳಾರಿ: ಕಾಂಗ್ರೆಸ್ ಭದ್ರಕೋಟೆ ಬಳ್ಳಾರಿ ಕ್ಷೇತ್ರದಲ್ಲಿ ಉಪಚುನಾವಣೆ ಭಾರೀ ರಂಗೇರುತ್ತಿದ್ದು, ಮಾಜಿ ಶಾಸಕ ಅನಿಲ್ ಲಾಡ್ ಸ್ವಪಕ್ಷೀಯರ ವಿರುದ್ಧವೇ ವಾಗ್ದಾಳಿ ನಡೆಸಿದ್ದಾರೆ. ನಾನು ಸೋತಿರಬಹುದು, ನನ್ನ ಸೋಲಿಗೆ ಬೇರೆ ಯಾರು ಕಾರಣರಲ್ಲ ಸ್ವ ಪಕ್ಷದವರೇ ಕಾರಣ ಎಂದು ಅನಿಲ್ ಲಾಡ್ ಆರೋಪಿಸಿದ್ದಾರೆ.

    ಸಂಡೂರಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವ ಬೃಹತ್ ಸಮಾವೇಶ ಮಾತನಾಡಿದ ಅವರು, ಕರುಣಾಕರ ರೆಡ್ಡಿ ಹಾಗೂ ಶಾಸಕ ಶ್ರೀರಾಮುಲು ಅವರು ಬಳ್ಳಾರಿಯ ಪ್ರದೇಶವನ್ನು ಕಬಳಿಸಿದ್ದಾರೆ. ಕೊನೆಗೆ ಇಬ್ಬರೂ ಪರಸ್ಪರ ದೂರು ದಾಖಲಿಸಿ, ಅರೆಸ್ಟ್ ವಾರೆಂಟ್ ಕೊಟ್ಟುಕೊಂಡಿದ್ದಾರೆ ಎಂದು ಹೇಳಿದರು.

    ನಮ್ಮ ಕುಟುಂಬ ಸುಮಾರು 50 ವರ್ಷದಿಂದ ಮೈನಿಂಗ್ ಮಾಡಿಕೊಂಡು ಬಂದಿದೆ. ರೆಡ್ಡಿ ಹಾಗೂ ಶ್ರೀರಾಮುಲು ಅವರಿಗೆ ಮೈನಿಂಗ್ ಮಾಡುವುದನ್ನು ಹೇಳಿದ್ದೇ ನಾನು. ಒಂದು ವೇಳೆ ನಾನಿಲ್ಲದಿದ್ದರೆ ಓಬಳಾಪುರಂ ಸೇರಿದಂತೆ ಯಾವುದೇ ಮೈನಿಂಗ್ ಪ್ರದೇಶ ಇರುತ್ತಿರಲಿಲ್ಲ. ಜನಾರ್ದನ ರೆಡ್ಡಿ ಬಂದರೆ ಏನಾಗುತ್ತದೆ? ಭೂಕಂಪ ಆಗುತ್ತದಾ ಎಂದು ಪ್ರಶ್ನಿಸಿ ವ್ಯಂಗ್ಯವಾಡಿದರು.

    ಜನಾರ್ದನ ರೆಡ್ಡಿ ಬಂದರೆ ಯಾವುದೇ ಪರಿಣಾಮ ಬೀರಲ್ಲ. ಅವರು ಮನೆ ಮಾಡಿಕೊಂಡು ಇದ್ದ ಕ್ಷೇತ್ರಕ್ಕೆ ಹೋಗಿ ಪ್ರಚಾರ ಮಾಡಿ ಬಂದಿರುವೆ. ಅವರು ನನ್ನ ಏನು ಪ್ರಾಣ ತೆಗೆದರಾ? ಇಲ್ಲಾ ತಾನೇ, ಯಾರು ಬಂದರು ಏನು ಆಗಲ್ಲ ಎಂದು ಲೇವಡಿ ಮಾಡಿದರು.

    ವಿರಾಟ್ ಕೊಹ್ಲಿಯಂತೆ ಸಿದ್ದರಾಮಯ್ಯ ಒಳ್ಳೆ ಬ್ಯಾಟ್ಸ್‍ಮನ್. ಅವರು ಚೆನ್ನಾಗಿ ಬ್ಯಾಟ್ ಮಾಡುತ್ತಾರೆ ಎಂದು ಬಳ್ಳಾರಿ ಉಪಚುನಾವಣೆ ಅಭ್ಯರ್ಥಿ ವಿ.ಎಸ್.ಉಗ್ರಪ್ಪ ಮಾಜಿ ಸಿಎಂ ಅವರನ್ನು ಹೊಗಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ವಾಮಮಾರ್ಗದಿಂದ ಬಿಜೆಪಿ ಜಯಗಳಿಸಿದೆ: ವಿ.ಎಸ್.ಉಗ್ರಪ್ಪ

    ವಾಮಮಾರ್ಗದಿಂದ ಬಿಜೆಪಿ ಜಯಗಳಿಸಿದೆ: ವಿ.ಎಸ್.ಉಗ್ರಪ್ಪ

    ಶಿವಮೊಗ್ಗ: ಉತ್ತರಪ್ರದೇಶ ಹಾಗೂ ಉತ್ತರಾಖಂಡದಲ್ಲಿ ಅಧಿಕಾರ ದುರ್ಬಳಕೆ ಮಾಡಿಕೊಂಡು ವಾಮಮಾರ್ಗದಿಂದ ಬಿಜೆಪಿ ಜಯಗಳಿಸಿದೆ ಎಂದು ಶಾಸಕ, ಕಾಂಗ್ರೆಸ್ ಮುಖಂಡ ವಿ.ಎಸ್.ಉಗ್ರಪ್ಪ ಹೇಳಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ನೋಟ್ ನಿಷೇಧಗೊಳಿಸಿ ಬೇರೆ ಪಕ್ಷಗಳಿಗೆ ಸಂಪನ್ಮೂಲ ಸಿಗದಂತೆ ಮಾಡಿದ್ದಾರೆ. ಅಧಿಕಾರ ದುರ್ಬಳಕೆ ಕೊಂಡು ಮೇಲುಗೈ ಸಾಧಿಸಿದ್ದಾರೆ ಎಂದು ಉಗ್ರಪ್ಪ ದೂರಿದರು.

    ಶಿವಮೊಗ್ಗ ದಲ್ಲಿ ಬಿಜೆಪಿ ವಿಜಯೋತ್ಸವ

    ಮೋದಿ ಅವರ ಕಾಂಗ್ರೆಸ್ ಮುಕ್ತ ಭಾರತ ಮಾಡುತ್ತೇವೆ ಎಂಬ ಹೇಳಿಕೆಗೆ ಜನತೆ ಇಂದು ತಕ್ಕ ಉತ್ತರ ನೀಡಿದ್ದಾರೆ. ಪಂಜಾಬ್ ನಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿದಿದೆ. ಗೋವಾದಲ್ಲಿ ಅತೀ ಹೆಚ್ಚು ಸ್ಥಾನಗಳಿಸಿದೆ ಎಂದರು. ಲೋಕಸಭಾ ಚುನಾವಣಾ ವೇಳೆ ನೀಡಿದ್ದ ಯಾವುದೇ ಭರವಸೆ ಈಡೇರಿಸಿಲ್ಲ. ಮೂರು ವರ್ಷ ಅವಧಿಯಲ್ಲಿ ಬಡವನ ಖಾತೆಗೆ ಮೂರು ಪೈಸೆಯನ್ನೂ ಹಾಕಿಲ್ಲ. ದೇಶದಲ್ಲಿ ಸಾಮರಸ್ಯ ಕಾಪಾಡುವಲ್ಲಿ ವಿಫಲವಾಗಿದ್ದಾರೆ. ಈಗ ತಾತ್ಕಾಲಿಕವಾಗಿ ಗೆಲುವು ಗಳಿಸಿದ್ದಾರೆ ಎಂದು ವಿಶ್ಲೇಷಣೆ ಮಾಡಿದರು.

    ಮುಂದಿನ ಲೋಕಸಭಾ ಚುನಾವಣೆಯಲ್ಲಿ ಜನತೆ ಮೋದಿ ಮುಕ್ತ ಭಾರತ ನಿರ್ಮಾಣ ಮಾಡಲಿದ್ದಾರೆ. ಕೊನೆ ಕ್ಷಣದಲ್ಲಿ ಸೆಕ್ಯೂಲರ್ ಫೋರ್ಸ್ ಗಳು ಒಂದಾಗುವಲ್ಲಿ ಆದ ಗೊಂದಲವೂ ಬಿಜೆಪಿ ಗೆಲವಿಗೆ ಕಾರಣ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಸೆಕ್ಯೂಲರ್ ಫೋರ್ಸ್ ಗಳ ಒಂದಾಗಲಿವೆ. ಇದರ ನೇತೃತ್ವವನ್ನು ಕಾಂಗ್ರೆಸ್ ವಹಿಸಲಿದೆ ಎಂದರು.