Tag: V Nagendra Prasad

  • ‘ಯುಗಾದಿ’ಗಾಗಿ ಹೊಸ ಹಾಡು ಬರೆದ ನಾಗೇಂದ್ರ ಪ್ರಸಾದ್

    ‘ಯುಗಾದಿ’ಗಾಗಿ ಹೊಸ ಹಾಡು ಬರೆದ ನಾಗೇಂದ್ರ ಪ್ರಸಾದ್

    ಹಿರಿಯಸಾಹಿತಿ, ನಿರ್ದೇಶಕ ವಿ. ನಾಗೇಂದ್ರಪ್ರಸಾದ್ (V. Nagendra Prasad) ಒಬ್ಬ ಪರಿಸರ ಪ್ರೇಮಿಯಾಗಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ಚಿತ್ರ  ‘ಕೃಷ್ಣಾವತಾರ’ (Krishnavatara). ಸಿರಿ ವೈ.ಎಸ್.ಆರ್.  ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ಈ ಚಿತ್ರದಲ್ಲಿ ಯುಗಾದಿ ಹಬ್ಬಕ್ಕಾಗಿ ವಿಶೇಷ ಹಾಡೊಂದನ್ನು ನಾಗೇಂದ್ರ ಪ್ರಸಾದ್ ಬರೆದಿದ್ದಾರೆ.

    ‘ಯಗಗಳ ಆದಿ ಯುಗಾದಿ’ ಎಂಬ ಯುಗಾದಿ (Ugadi) ಮಹತ್ವ ಸಾರುವ ಸಾಹಿತ್ಯ ಒಳಗೊಂಡ ಈ ಲಿರಿಕಲ್ ವಿಡಿಯೋ ಹಾಡನ್ನು (Song)  ಮೈಸೂರು ಮಹಾರಾಜರಾದ ಯದುವೀರ್ ಒಡೆಯರ್ ಅವರು ಬಿಡುಗಡೆ ಮಾಡಿದರು. ಮುಂದಿನ ದಿನಗಳಲ್ಲಿ ಇದು ಯುಗಾದಿ ಹಬ್ಬದ ಖಾಯಂ ಹಾಡಾಗುವಂಥ ಎಲ್ಲಾ ಲಕ್ಷಣಗಳು ಈಗಾಗಲೇ ಗೋಚರಿಸಿವೆ. ಅಷ್ಟೊಂದು ಪರಿಣಾಮಕಾರಿಯಾದ ಸಾಹಿತ್ಯ, ರಾಗಸಂಯೋಜನೆ ಈ ಹಾಡಿನಲ್ಲಿದೆ.

    ಮಾಯಾಬಜಾರ್ ಫಿಲಂಸ್ ಬ್ಯಾನರ್ ಅಡಿ ಗುರುಪ್ರಸಾದ್ ಕೆ. ಅವರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಶುಭ ರಕ್ಷಾ, ತ್ರಿವೇಣಿ ರಾಜ್ ಚಿತ್ರದ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ವಿಶ್ವನಾಥ್, ಮಾನಸಿ ಸುಧೀರ್, ರಘು ರಾಮನಕೊಪ್ಪ, ಪ್ರಕಾಶ್ ತುಮ್ಮಿನಾಡ್ ಹಾಗೂ  ಇತರರು  ಉಳಿದ ತಾರಾಗಣದಲ್ಲಿದ್ದಾರೆ.

     

    ಇನ್ನು ಈ ಚಿತ್ರಕ್ಕೆ ರಾಜ ಶಿವಶಂಕರ್ ಅವರು ಕ್ಯಾಮೆರಾ ವರ್ಕ್ ಮಾಡಿದ್ದು, ಎಬಿಎಂ ಸಂಗೀತ ಸಂಯೋಜನೆ ಮಾಡಿದ್ದಾರೆ.

  • ‘ದೇವರ ಹೆಸರಿನಲ್ಲಿ ಪ್ರಮಾಣ ಮಾಡುತ್ತೇನೆ’ ಚಿತ್ರದ ಪೋಸ್ಟರ್ ರಿಲೀಸ್:  ವಿ.ನಾಗೇಂದ್ರ ಪ್ರಸಾದ್ ಸಾಥ್

    ‘ದೇವರ ಹೆಸರಿನಲ್ಲಿ ಪ್ರಮಾಣ ಮಾಡುತ್ತೇನೆ’ ಚಿತ್ರದ ಪೋಸ್ಟರ್ ರಿಲೀಸ್: ವಿ.ನಾಗೇಂದ್ರ ಪ್ರಸಾದ್ ಸಾಥ್

    ನ್ನಡ ಚಿತ್ರರಂಗದಲ್ಲೀಗ ಹೊಸಬರ ಆಗಮನದಿಂದ ಹೊಸತನವೆದ್ದಿದೆ. ಅದರ ಮುಂದುವರೆದ ಭಾಗವಾಗಿ ರೂಪಗೊಂಡಿರುವ ಸಿನಿಮಾ ‘ದೇವರ ಹೆಸರಿನಲ್ಲಿ ಪ್ರಮಾಣ ಮಾಡುತ್ತೇನೆ’ (Devara Hesarinalli Pramana Maduttene). ಒಂದಷ್ಟು ಕಿರುಚಿತ್ರಗಳನ್ನು ನಿರ್ದೇಶಿಸಿರುವ, ಸೆಕೆಂಡ್ ಹಾಫ್ ಹಾಗೂ ಗಾಂಧಿ ಮತ್ತು ನೋಟು ಸಿನಿಮಾದ ಬರಹಗಾರರಾಗಿ ಹಾಗೂ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಮಾಡಿರುವ ಅನುಭವವಿರುವ ಗುರುಪ್ರಸಾದ್ ಚಂದ್ರಶೇಖರ್ (Guruprasad Chandrasekhar) ‘ದೇವರ ಹೆಸರಿನಲ್ಲಿ ಪ್ರಮಾಣ ಮಾಡುತ್ತೇನೆ’ ಚಿತ್ರದ ಮೂಲಕ ಡೈರೆಕ್ಟರ್ ಕ್ಯಾಪ್ ತೊಟ್ಟು ನಿರ್ದೇಶನಕ್ಕಿಳಿದಿದ್ದಾರೆ. ಈ ಚಿತ್ರದ ಹೊಸ ಪೋಸ್ಟರ್ ವರಮಹಾಲಕ್ಷ್ಮೀ ಹಬ್ಬಕ್ಕೆ ಅನಾವರಣಗೊಂಡಿದೆ.

    ಸೋಷಿಯೋ ಪೊಲಿಟಿಕಲ್ ಲಿಗ್ವಿಸ್ಟಿಕ್ ಡ್ರಾಮಾ ಕಥಾಹಂದರ ಹೊಂದಿರುವ ‘ದೇವರ ಹೆಸರಿನಲ್ಲಿ ಪ್ರಮಾಣ ಮಾಡುತ್ತೇನೆ’ ಸಿನಿಮಾ ಶೂಟಿಂಗ್ ಹಂತದಲ್ಲಿದ್ದು, ಕವಿರತ್ನ ವಿ.ನಾಗೇಂದ್ರ ಪ್ರಸಾದ್ (V. Nagendra Prasad), ಬಾಲ ರಾಜವಾಡಿ, ವೈಜನಾಥ್ ಬಿರಾದಾರ್, ಅಶ್ವಿತಾ ಹೆಗ್ಡೆ, ಡಿಂಪನ ಜೀವನ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಭಾಷೆ ವಿಚಾರದ ಸುತ್ತ ಸಾಗುವ ಈ ಚಿತ್ರಕ್ಕೆ ಬಿ.ಶಿವಶಂಕರ್, ದತ್ತಾತ್ರೇಯ ವಿ ಜಮಾದಾರ್ ಬಂಡವಾಳ ಹೂಡಿದ್ದಾರೆ.

     

    ಶಿವಶಂಕರ್ ನೂರಬಂಡ ಛಾಯಾಗ್ರಹಣ, ಚರಣ್ ಅರ್ಜುನ್ ಸಂಗೀತ, ಡಾ.ವಿ. ನಾಗೇಂದ್ರ ಪ್ರಸಾದ್ ಸಾಹಿತ್ಯ, ಮಧು ತುಂಬಕೆರೆ ಸಂಕಲನ ಚಿತ್ರಕ್ಕಿದೆ. ದೇವರ ಹೆಸರಿನಲ್ಲಿ ಪ್ರಮಾಣ ಮಾಡುತ್ತೇನೆ ಸಿನಿಮಾ ಕನ್ನಡದ ಜೊತೆಗೆ ತೆಲುಗು ಭಾಷೆಯಲ್ಲಿಯೂ ತಯಾರಾಗುತ್ತಿದೆ. ಕನ್ನಡ ಹಾಗೂ ತೆಲುಗು ಭಾಷೆಯಲ್ಲಿಯೂ ಹೊಸ ಪೋಸ್ಟರ್ ಹಬ್ಬದ ವಿಶೇಷವಾಗಿ ರಿಲೀಸ್ ಆಗಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • Weekend With Ramesh ಸಾಧಕರ ಕುರ್ಚಿಯಲ್ಲಿ ಗೀತ ಸಾಹಿತಿ ವಿ.ನಾಗೇಂದ್ರ ಪ್ರಸಾದ್

    Weekend With Ramesh ಸಾಧಕರ ಕುರ್ಚಿಯಲ್ಲಿ ಗೀತ ಸಾಹಿತಿ ವಿ.ನಾಗೇಂದ್ರ ಪ್ರಸಾದ್

    ಕಿರುತೆರೆಯ ಜನಪ್ರಿಯ ವೀಕೆಂಡ್ ವಿತ್ ರಮೇಶ್ (Weekend With Ramesh) ಕಾರ್ಯಕ್ರಮದಲ್ಲಿ ಹಲವು ಸಾಧಕರು ಭಾಗಿಯಾಗಿ ತಮ್ಮ ಜೀವನದ ಕಥೆಯನ್ನ ಬಿಚ್ಚಿಟ್ಟಿದ್ದಾರೆ. ರಮ್ಯಾ, ಡಾಲಿ, ಪ್ರೇಮ್, ಮಂಡ್ಯ ರಮೇಶ್ ಸೇರಿದಂತೆ ಹಲವು ಸ್ಟಾರ್ಸ್ ಸಾಧಕರ ಕುರ್ಚಿಯನ್ನ ಅಲಂಕರಿಸಿದ್ದಾರೆ. ಇದೀಗ ಸ್ಯಾಂಡಲ್‌ವುಡ್‌ನ (Sandalwood) ಗೀತ ಸಾಹಿತಿ ವಿ.ನಾಗೇಂದ್ರ ಪ್ರಸಾದ್ ಈ ವಾರದ ಅತಿಥಿಯಾಗಿ ಭಾಗಿಯಾಗಿದ್ದಾರೆ.

    ಮಂಡ್ಯ ಜಿಲ್ಲೆಯವರಾದ ನಾಗೇಂದ್ರ ಪ್ರಸಾದ್ ಚಿತ್ರರಂಗಕ್ಕೆ ಬಂದು ಎರಡು ದಶಕಗಳಾಗಿವೆ. 2000ರಲ್ಲಿ ಮೊದಲ ಬಾರಿಗೆ ಸಿನಿಮಾ ಒಂದಕ್ಕೆ ಗೀತ ರಚನೆ ಮಾಡಿದ್ದರು. ಆ ನಂತರ ಸಾಲು ಸಾಲು ಕನ್ನಡದ ಅನೇಕ ಹಿಟ್-ಸೂಪರ್ ಸಿನಿಮಾಗಳಿಗೆ ಸೂಪರ್-ಡೂಪರ್ ಹಿಟ್ ಹಾಡುಗಳನ್ನು ನೀಡಿದ್ದಾರೆ. ಸದ್ಯ ಕಾರ್ಯಕ್ರಮ ಪ್ರೋಮೋ ಕೂಡ ರಿವೀಲ್ ಆಗಿದೆ.‌ ಇದನ್ನೂ ಓದಿ:ಲವ್ ಮಿ OR ಹೇಟ್ ಮಿ ಅಂತಿದ್ದಾರೆ ಬಿಗ್‌ ಬಾಸ್‌ ರೂಪೇಶ್ ಶೆಟ್ಟಿ

    ನಾನು ಯಾವ ಉದ್ಯೋಗ ಬಯಸಿದ್ದೆನೋ ಅದೇ ಉದ್ಯೋಗ ನನಗೆ ಸಿಕ್ಕಿದ್ದೆ ನನ್ನ ಗೆಲುವು ಎಂದಿದ್ದಾರೆ. ವಿ.ನಾಗೇಂದ್ರ ಪ್ರಸಾದ್ ಅವರ ಎಪಿಸೋಡ್‌ಗೆ ಸಂಗೀತ ನಿರ್ದೇಶಕ ಹರಿಕೃಷ್ಣ ಸೇರಿದಂತೆ ಇನ್ನು ಹಲವು ಮಂದಿ ಆಗಮಿಸಿದ್ದಾರೆ. ಎಪಿಸೋಡ್‌ನಲ್ಲಿ ವಿ.ನಾಗೇಂದ್ರ ಪ್ರಸಾದ್ ರಚಿಸಿರುವ ಹಲವು ಹಾಡುಗಳನ್ನು ಹಾಡಲಾಗಿದೆ ಮಾತ್ರವಲ್ಲ ಸಾಧಕರ ಕುರ್ಚಿ ಮೇಲೆ ಕುಳಿತು ನಾಗೇಂದ್ರ ಪ್ರಸಾದ್ ಅವರು ಈ ಕಾರ್ಯಕ್ರಮದ ಕುರಿತಾಗಿ ಹಾಡೊಂದನ್ನು ಕಟ್ಟಿ ಅಲ್ಲಿಯೇ ಗಾಯಕರ ಕೈಯಲ್ಲಿ ಹಾಡಿಸಿದ್ದಾರೆ.

    ನಾಗೇಂದ್ರ ಪ್ರಸಾದ್ ಎಪಿಸೋಡ್‌ನಲ್ಲಿ ಕನ್ನಡದ ಅತ್ಯುತ್ತಮ ಸಂಗೀತಗಾರ, ಗೀತ ಸಾಹಿತಿ ಹಂಸಲೇಖ ಕರೆ ಮಾಡಿದ್ದು, ನಾನು ಕುಳಿತುಕೊಳ್ಳಬೇಕಾದ ಸ್ಥಾನದಲ್ಲಿ ನಾಗೇಂದ್ರ ಪ್ರಸಾದ್ ಕುಳಿತುಕೊಳ್ಳಬೇಕು ಎಂಬುದೇ ನನ್ನ ಹಾರೈಕೆ ಎಂದಿದ್ದಾರೆ. ಗುರುಗಳ ಈ ಮಾತು ನಾಗೇಂದ್ರ ಪ್ರಸಾದ್ ಅವರನ್ನು ಭಾವುಕಗೊಳಿಸಿದೆ. ಅಂದಹಾಗೆ, ವೀಕೆಂಡ್‌ ವಿತ್‌ ರಮೇಶ್‌ ಕಾರ್ಯಕ್ರಮ ವಿ.ನಾಗೇಂದ್ರ ಪ್ರಸಾದ್‌ ಎಪಿಸೋಡ್‌ (ಮೇ.20) ಶನಿವಾರ ರಾತ್ರಿ 9ಕ್ಕೆ ಪ್ರಸಾರವಾಗಲಿದೆ.

  • ಚಂದನ್ ಶೆಟ್ಟಿ ಕಂಠಸಿರಿಯಲ್ಲಿ ‘ರೌಡಿ ಬೇಬಿ’ ಹಾಡು

    ಚಂದನ್ ಶೆಟ್ಟಿ ಕಂಠಸಿರಿಯಲ್ಲಿ ‘ರೌಡಿ ಬೇಬಿ’ ಹಾಡು

    ಸುಮುಖ ಎಂಟರ್ ಟೈನರ್ಸ್ ಹಾಗೂ ವಾರ್ ಫುಟ್ ಸ್ಟುಡಿಯೋಸ್ ಲಾಂಛನದಲ್ಲಿ ಎಸ್.ಎಸ್. ರವಿಗೌಡ ಹಾಗೂ ಶ್ಯಾಮಲಾ ರೆಡ್ಡಿ ಅವರು ನಿರ್ಮಿಸುತ್ತಿರುವ ‘ರೌಡಿ ಬೇಬಿ` ಚಿತ್ರಕ್ಕಾಗಿ ಡಾ. ವಿ.ನಾಗೇಂದ್ರ ಪ್ರಸಾದ್ ಅವರು ಬರೆದಿರುವ ‘ಸಾಗು ಮುಂದೆ ಸಾಗು ಈ ಭೂಮಿ ದೊಡ್ಡದು’ ಹಾಡನ್ನು ಖ್ಯಾತ ಗಾಯಕ ಚಂದನ್ ಶೆಟ್ಟಿ ಹಾಡಿದ್ದಾರೆ. ಅರ್ಮಾನ್ ಸಂಗೀತ ನೀಡಿದ್ದಾರೆ.

    ರೆಡ್ಡಿ ಕೃಷ್ಣ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಮಂಗಳೂರು, ಕೇರಳ, ಬೆಂಗಳೂರು ಮುಂತಾದ ಕಡೆ ಮೂವತ್ತು ದಿನಗಳ ಚಿತ್ರೀಕರಣ ನಡೆದಿದೆ. ಈ ಹಿಂದೆ ‘ಪ್ರಯಾಣಿಕರ ಗಮನಕ್ಕೆ’ ಚಿತ್ರದಲ್ಲಿ ಸಹಾಯಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದ ರೆಡ್ಡಿ ಕೃಷ್ಣ ಅವರು ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದಾರೆ.

    ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ಡಾ. ವಿ.ನಾಗೇಂದ್ರ ಪ್ರಸಾದ್, ಸಿಂಪಲ್ ಸುನಿ, ಚೇತನ್ ಕುಮಾರ್ ಕಿನಾಲ್ ರಾಜ್ ಬರೆದಿದ್ದಾರೆ. ಸಾಮ್ರಾಟ್ ಛಾಯಾಗ್ರಹಣ, ಪ್ರಮೋದ್ ಸೋಮರಾಜ್ ಸಂಕಲನ ಹಾಗೂ ಮುರಳಿ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ಎರಡು ಸಾಹಸ ಸನ್ನಿವೇಶಗಳಿದ್ದು, ಚಂದ್ರು ಸಾಹಸ ನಿರ್ದೇಶನ ಮಾಡಿದ್ದಾರೆ. ಚೇತನ್ ಕುಮಾರ್ ಸಂಭಾಷಣೆ ಬರೆದಿದ್ದಾರೆ.

    ನಿರ್ಮಾಪಕ ರವಿಗೌಡ ಅವರು ಈ ಚಿತ್ರದ ನಾಯಕರಾಗಿ ನಟಿಸಿದ್ದು, ಹೀರಕೌರ್, ದಿವ್ಯರಾವ್, ಅರುಣ ಬಾಲರಾಜ್, ಅಮಿತ್, ಕೆಂಪೇಗೌಡ, ಶ್ರೀನಾಥ್ ವಸಿಷ್ಠ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

  • ಟಕ್ಕರ್ ಆಡಿಯೋ ಬಿಡುಗಡೆ ಮಾಡಿದ ದರ್ಶನ್

    ಟಕ್ಕರ್ ಆಡಿಯೋ ಬಿಡುಗಡೆ ಮಾಡಿದ ದರ್ಶನ್

    ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಕುಟುಂಬದ ಹುಡುಗ ಮನೋಜ್ ಕುಮಾರ್ ನಾಯಕನಾಗಿ ನಟಿಸಿರುವ ಟಕ್ಕರ್ ಚಿತ್ರದ ಟೀಸರ್ ಹಾಗೂ ಆಡಿಯೋ ಬಿಡುಗಡೆ ಸಮಾರಂಭ ಚಲನಚಿತ್ರ ಕಲಾವಿದರ ಸಂಘದ ಆವರಣದಲ್ಲಿ ನೆರವೇರಿತು.

    ನಟ ದರ್ಶನ್ ಮುಖ್ಯ ಅತಿಥಿಯಾಗಿ ಆಗಮಿಸಿ ಟ್ರೇಲರ್ ಹಾಗೂ ಹಾಡುಗಳನ್ನು ಬಿಡುಗಡೆಗೊಳಿಸಿ ಮಾತನಾಡುತ್ತಾ, ಮನೋಜ್ ಬೇರೆ ಯಾರೂ ಅಲ್ಲ. ನನ್ನ ಅಕ್ಕನ ಮಗ. ನಮ್ಮ ದೊಡ್ಡಪ್ಪನ ಮೊಮ್ಮಗ. ನನ್ನ ಜೊತೆ ಅಂಬರೀಶ ಹಾಗೂ ಚಕ್ರವರ್ತಿ ಚಿತ್ರಗಳಲ್ಲಿ ಆ್ಯಕ್ಟ್ ಮಾಡಿದ್ದಾನೆ. ಸಿನಿಮಾರಂಗದಲ್ಲಿ ಸಾಕಷ್ಟು ಕಷ್ಟ ಪಟ್ಟಿದ್ದಾನೆ. ಈ ಸಿನಿಮಾದಲ್ಲಿ ಒಳ್ಳೇ ಕಂಟೆಂಟ್ ಇದೆ. ಟೀಸರ್‍ನಲ್ಲಿ ಎಲ್ಲರ ಶ್ರಮ ಎದ್ದು ಕಾಣುತ್ತಿದೆ. ಈ ಚಿತ್ರದ ನಿರ್ಮಾಪಕರಾದ ನಾಗೇಶ್ ಅವರು ಸಾಕಷ್ಟು ಸಿನಿಮಾಗಳ ಬಗ್ಗೆ ಅಪಾರವಾದ ಪ್ರೀತಿ ಹೊಂದಿದ್ದಾರೆ. ಕೊರಿಯೋಗ್ರಾಫರ್ ಮೋಹನ್ ಕಸದಲ್ಲೂ ರಸ ತೆಗೆಯೋ ವ್ಯಕ್ತಿ. ಮಲೇಶಿಯಾದಲ್ಲಿ ಶೂಟ್ ಮಾಡಿರುವ ಡ್ಯೂಯೆಟ್ ಸಾಂಗನ್ನು ಬರೀ ಎರಡು ದಿನಗಳಲ್ಲಿ ಎಷ್ಟು ಅದ್ಭುತವಾಗಿ ಮಾಡಿಕೊಟ್ಟಿದ್ದಾನೆ. ಮನೋಜ್ ಕೂಡಾ ಸ್ಕ್ರೀನ್ ಮೇಲೆ ತುಂಬಾ ಚೆನ್ನಾಗಿ ಕಾಣುತ್ತಿದ್ದಾನೆ” ಎಂದರು.

    ಕೆ.ಎನ್.ನಾಗೇಶ್ ಕೋಗಿಲು ಅವರ ನಿರ್ಮಾಣದ ಈ ಚಿತ್ರಕ್ಕೆ ವಿ.ರಘುಶಾಸ್ತ್ರಿ ಆಕ್ಷನ್ ಕಟ್ ಹೇಳಿದ್ದಾರೆ. ಮನೋಜ್‍ಗೆ ನಾಯಕಿಯಾಗಿ ಪುಟ್ಟಗೌರಿ ಮದುವೆ ಖ್ಯಾತಿಯ ರಂಜನಿ ರಾಘವನ್ ಕಾಣಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ನಿರ್ದೇಶಕ ರಘುಶಾಸ್ತ್ರಿ ಮಾತನಾಡಿ, ‘ರನ್ ಆಂಟನಿ’ ನಂತರ ನಾನು ರೆಡಿ ಮಾಡಿಕೊಂಡಿದ್ದ ಕಥೆಯಿದು. ಚಿತ್ರಕ್ಕೆ 65 ದಿನಗಳ ಕಾಲ ಮೈಸೂರು, ಬೆಂಗಳೂರು ಮತ್ತು ಮಲೇಶಿಯಾದಲ್ಲಿ ಮೂರು ಷೆಡ್ಯೂಲ್‍ನಲ್ಲಿ ಚಿತ್ರೀಕರಿಸಿದ್ದೇವೆ. ನಮ್ಮ ಮನೆಯ ಹೆಣ್ಣುಮಕ್ಕಳು ನಮ್ಮ ಮನೆಯಲ್ಲೇ ಸೇಫ್ ಆಗಿಲ್ಲ ಎನ್ನುವುದೇ ಈ ಸಿನಿಮಾದ ಕಾನ್ಸೆಪ್ಟ್. ಸೈಬರ್ ಕ್ರೈಂ ಹಿನ್ನೆಲೆಯಲ್ಲಿ ನಡೆಯುವ ಕಥೆ ಚಿತ್ರದಲ್ಲಿದೆ. ಚಿತ್ರದಲ್ಲಿ ಕದ್ರಿ ಮಣಿಕಾಂತ್ ಅವರು ಚಿತ್ರಕ್ಕೆ ಪಕ್ಕಾ ಮಾಸ್ ಮತ್ತು ಮೆಲೋಡಿ ಟ್ಯೂನ್ ಕೊಟ್ಟಿದ್ದಾರೆ. ವಿಲನ್ ಆಗಿ ಭಜರಂಗಿ ಖ್ಯಾತಿಯ ಸೌರವ್ ಲೋಕಿ ಕಾಣಿಸಿಕೊಂಡಿದ್ದಾರೆ. 30 ನಿಮಿಷಗಳ ಗ್ರಾಫಿಕ್ಸ್ ಕೂಡ ಇದರಲ್ಲಿದೆ. ಟಕ್ಕರ್ ಎಂದರೆ ಪಾಸಿಟಿವ್ ಹಾಗೂ ನೆಗಟಿವ್ ಎರಡೂ ಅರ್ಥವಿದ್ದು ಒಳ್ಳೆಯದು ಮತ್ತು ಕೆಟ್ಟದ್ದರ ನಡುವಿನ ಸಂಘರ್ಷಣೆ ಈ ಚಿತ್ರದಲ್ಲಿದೆ. ಲವ್ ಸ್ಟೋರಿ ಜೊತೆಗೆ ಆಕ್ಷನ್ ಪ್ಯಾಕ್ ಇರುವ ಚಿತ್ರ ಎಂದರು.

    ನಿರ್ಮಾಪಕ ನಾಗೇಶ್ ಕೋಗಿಲು ಮಾತನಾಡಿ, ಹುಲಿರಾಯ ನಂತರ ನಮ್ಮ ಬ್ಯಾನರ್‍ನ ಎರಡನೇ ಚಿತ್ರ. ಸೋಷಿಯಲ್ ಮೀಡಿಯಾಗಳಿಂದಾಗುವ ಅವಘಡಗಳ ಬಗ್ಗೆ ಚಿತ್ರದಲ್ಲಿ ಹೇಳಿದ್ದೇವೆ. ಚಿತ್ರದಲ್ಲಿ ಮೂರು ಹಾಡುಗಳಿದ್ದು, ವಿ. ನಾಗೇಂದ್ರ ಪ್ರಸಾದ್ ಹಾಗೂ ರಘುಶಾಸ್ತ್ರಿ ಸಾಹಿತ್ಯ ಬರೆದಿದ್ದಾರೆ ಎಂದು ಹೇಳಿದರು.

    ನಾಯಕ ಮನೋಜ್‍ಕುಮಾರ್ ಮಾತನಾಡಿ, ಇದೊಂದು ನಾರ್ಮಲ್ ಕಥೆ. ಸೈಬರ್ ಕ್ರೈಮ್ ವಿಷಯ ಇಟ್ಟುಕೊಂಡು ನಿರ್ದೇಶಕರು ಕಥೆ ಮಾಡಿದ್ದಾರೆ. ಕಮರ್ಷಿಯಲ್ ಆಗಿ ಚಿತ್ರವನ್ನು ಹೇಳಬೇಕೆಂದು ಐದು ಫೈಟ್ಸ್ ಇಟ್ಟಿದ್ದೇವೆ. ಈ ಚಿತ್ರಕ್ಕೆ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಬೆನ್ನೆಲುಬಾಗಿ ನಿಂತಿದ್ದಾರೆ. ಪ್ರತೀ ಹಂತದಲ್ಲೂ ದರ್ಶನ್ ಮತ್ತು ದಿನಕರ್ ಅವರು ನೀಡುತ್ತಾ ಬಂದಿರುವ ಮಾರ್ಗದರ್ಶನಕ್ಕೆ ಟಕ್ಕರ್ ತಂಡ ಅಭಾರಿಯಾಗಿದೆ ಎಂದರು.

    ನಾಯಕಿ ರಂಜನಿ ರಾಘವನ್ ಮಾತನಾಡಿ ಇದು ನನ್ನ ಎರಡನೇ ಚಿತ್ರ, ಎಂಬಿಬಿಎಸ್ ಓದುತ್ತಿರುವ ಮೆಡಿಕಲ್ ಸ್ಟೂಡೆಂಟ್ ಆಗಿ ನಾನು ಕಾಣಿಸಿಕೊಂಡಿದ್ದೇನೆ. ಒಳ್ಳೆಯ ತಂಡದ ಜೊತೆ ಕೆಲಸ ಮಾಡಿದ ಖುಷಿ ಇದೆ ಎಂದರು. ಸಂಗೀತ ನಿರ್ದೇಶಕ ಮಣಿಕಾಂತ್ ಕದ್ರಿ ಮಾತನಾಡಿ ನಾನು ಕಮರ್ಷಿಯಲ್ ಸಿನಿಮಾ ಮಾಡಬೇಕೆಂದು ಕಾಯುತ್ತಿದ್ದಾಗ ರಘು ಈ ಸಿನಿಮಾ ಮ್ಯೂಸಿಕ್ ಮಾಡಲು ಕರೆದರು. ರಘು ಜೊತೆ ಇದು ಎರಡನೇ ಸಿನಿಮಾ. ಹೀರೋ ಇಂಟ್ರಡಕ್ಷನ್ ಸಾಂಗನ್ನು ಶಶಾಂಕ್ ಶೇಷಗಿರಿ ಅದ್ಭುತವಾಗಿ ಹಾಡಿದ್ದಾರೆ. ಡ್ಯುಯೆಟ್ ಹಾಡನ್ನು ವಿಜಯಪ್ರಕಾಶ್ ಮತ್ತು ಅನುರಾಧ ಭಟ್ ಹಾಗೂ ಮೋಟಿವೇಷನಲ್ ಸಾಂಗನ್ನು ಸಂಜಿತ್ ಹೆಗ್ಡೆ ಹಾಡಿದ್ದಾರೆ ಎಂದು ಹೇಳಿಕೊಂಡರು.

    ಖಳನಾಯಕ ಭಜರಂಗಿ ಲೋಕಿ, ಸಾಹಿತಿ ವಿ.ನಾಗೇಂದ್ರ ಪ್ರಸಾದ್, ಛಾಯಾಗ್ರಾಹಕ ವಿಲಿಯಮ್ ಡೇವಿಡ್ ಅಶ್ವಥ್ ಗುರೂಜಿ, ಕೆಪಿ.ನಾಗರಾಜ್, ಅರವಿಂದ್ ಕೌಶಿಕ್, ಗಾಯಕ ಶಶಾಂಕ್ ಶೇಷಗಿರಿ ಹಾಗೂ ಇತರ ಗಣ್ಯರು ಸಮಾರಂಭದಲ್ಲಿ ಹಾಜರಿದ್ದರು.

  • ಯೋಧ ಶಿವ: ಉಗ್ರರ ವಿರುದ್ಧ ಕುದಿಯುವಂತೆ ಮಾಡುತ್ತೆ ಕವಿರತ್ನರ ಹಾಡು!

    ಯೋಧ ಶಿವ: ಉಗ್ರರ ವಿರುದ್ಧ ಕುದಿಯುವಂತೆ ಮಾಡುತ್ತೆ ಕವಿರತ್ನರ ಹಾಡು!

    ಬೆಂಗಳೂರು: ಕವಿರತ್ನ ಡಾ. ವಿ.ನಾಗೇಂದ್ರ ಪ್ರಸಾದ್ ಯೋಧರ ಬಗೆಗೊಂದು ಹಾಡು ಬರೆಯುತ್ತಿದ್ದಾರೆಂಬ ಬಗ್ಗೆ ಈ ಹಿಂದೆಯೇ ಸುದ್ದಿಯಾಗಿತ್ತು. ಇದೀಗ ಎಲ್ಲರೊಳಗೂ ಆಕ್ರೋಶದ ಕಿಚ್ಚು ಹಚ್ಚುವ, ಉಗ್ರರ ವಿರುದ್ಧ ಕೆಚ್ಚೆದೆಯಿಂದ ಹೋರಾಡೋ ಯೋಧರಿಗೆ ಮತ್ತಷ್ಟು ಛಲ ತುಂಬುವಂಥಾ ಯೋಧ ಶಿವ ಶೀರ್ಷಿಕೆಯ ಹಾಡು ಮ್ಯೂಸಿಕ್ ಬಜಾರ್ ಯೂಟ್ಯೂಬ್ ಚಾನೆಲ್ ಮೂಲಕ ಹೊರ ಬಂದಿದೆ.

    ಉಗ್ರರನ್ನು ಗರ್ಭದಲ್ಲೆ ಮಟ್ಟ ಹಾಕಬೇಕು, ಉಗ್ರನನ್ನ ಫ್ರೆಂಡು ಅಂದ್ರೆ ಮಟ್ಟ ಹಾಕಬೇಕು. ಎಂಬಂಥಾ ಈ ನೆಲದ ಜನಸಾಮಾನ್ಯರ ಧ್ವನಿ ಹೊಂದಿರೋ ಈ ಹಾಡೀಗ ಬಿಡುಗಡೆಯಾಗಿದೆ. ಇದು ಅನಾವರಗೊಂಡು ಅರೆಕ್ಷಣದಲ್ಲಿಯೇ ಎಲ್ಲರ ಮೆಚ್ಚುಗೆ ಗಳಿಸಿಕೊಂಡು ಹೆಚ್ಚು ಹೆಚ್ಚು ಜನರನ್ನು ತಲುಪಿಕೊಳ್ಳುತ್ತಿದೆ.

    ಈ ಹಾಡನ್ನು ಮಹಾಶಿವರಾತ್ರಿಯ ಶುಭಾಶಯ ಹೇಳುತ್ತಲೇ ಕವಿರತ್ನ ವಿ ನಾಗೇಂದ್ರ ಪ್ರಸಾದ್ ಅವರು ಅನಾವರಣಗೊಳಿಸಿದ್ದಾರೆ. ಈ ಹಾಡಿನಲ್ಲಿ ಉಗ್ರರ ವಿರುದ್ಧ ಶಿವತಾಂಡವವಾಡುವಂತೆ ಯೋಧರನ್ನೂ ಕೂಡಾ ಉತ್ತೇಜಿಸುವಂಥಾ ಸಾಲುಗಳನ್ನೂ ಕೂಡಾ ನಾಗೇಂದ್ರ ಪ್ರಸಾದ್ ಅವರು ಪರಿಣಾಮಕಾರಿಯಾಗಿಯೇ ಬರೆದಿದ್ದಾರೆ.

    ಯಾರು ಯಾವುದೇ ಕ್ಷೇತ್ರದಲ್ಲಿದ್ದರೂ ಕೂಡಾ ದೇಶ, ಭಾಷೆ, ಸಮಸ್ಯೆಗಳೆಂಬ ವಿಚಾರ ಬಂದಾಗೆಲ್ಲ ಪ್ರತಿಯೊಬ್ಬರಿಗೂ ಜವಾಬ್ದಾರಿಗಳಿರುತ್ತವೆ. ಅದಕ್ಕೆ ತಕ್ಕುದಾಗಿ ನಾಗೇಂದ್ರ ಪ್ರಸಾದ್ ಅವರು ತಮ್ಮ ಶಕ್ತಿಯಂತಿರೋ ಹಾಡಿನ ಮೂಲಕವೇ ದೇಶಭಕ್ತಿಯ ಕೆಚ್ಚು ಎಲ್ಲರೆದೆಯಲ್ಲಿಯೂ ಮಿರುಗುವಂತೆ ಮಾಡಿದ್ದಾರೆ. ಅವರೇ ಈ ಹಾಡಿಗೆ ಸಮ್ಮೋಹಕವಾದ ಸಂಗೀತ ಸಂಯೋಜನೆಯನ್ನೂ ಮಾಡಿದ್ದಾರೆ. ಸಚಿನ್ ಮತ್ತು ವಿನಯ್ ಈ ಹಾಡಿಗೆ ನರನಾಡಿಗಳಲ್ಲಿಯೂ ದೇಶಭಕ್ತಿಯ ಶಕ್ತಿ ಸಂಚಾರವಾಗುವಂಥಾ ಆ ವೇಗದೊಂದಿಗೆ ಧ್ವನಿಯಾಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮೀಟೂ ದುರುಪಯೋಗ ಮಾಡಿಕೊಂಡವರಲ್ಲಿ ಸಂಜನಾ ಮೊಟ್ಟ ಮೊದಲಿಗರು: ವಿ. ನಾಗೇಂದ್ರ ಪ್ರಸಾದ್

    ಮೀಟೂ ದುರುಪಯೋಗ ಮಾಡಿಕೊಂಡವರಲ್ಲಿ ಸಂಜನಾ ಮೊಟ್ಟ ಮೊದಲಿಗರು: ವಿ. ನಾಗೇಂದ್ರ ಪ್ರಸಾದ್

    ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ಸಂಜನಾ ತಮ್ಮ ಮೊದಲ ಚಿತ್ರದ ಶೂಟಿಂಗ್ ವೇಳೆ ತಮ್ಮ ಮೇಲೆ ಉಂಟಾದ ಲೈಂಗಿಕ ದೌರ್ಜನ್ಯದ ಬಗ್ಗೆ ಮಾತನಾಡಿದ್ದರು. ಈ ಆರೋಪದ ಬಗ್ಗೆ ನಿರ್ದೇಶಕ ವಿ. ನಾಗೇಂದ್ರ ಪ್ರಸಾದ್ ಅವರು ಸುದ್ದಿಗೋಷ್ಠಿ ನಡೆಸಿ ಮೀಟೂ ದುರುಪಯೋಗ ಮಾಡಿಕೊಂಡವರಲ್ಲಿ ಸಂಜನಾ ಮೊಟ್ಟ ಮೊದಲಿಗರು ಎಂದು ಹೇಳಿ ಕಿಡಿಕಾರಿದ್ದಾರೆ.

    ಮೀಟೂ ಅಭಿಯಾನದ ಮೂಲಕ ಹೊರಬರುತ್ತಿರುವವರ ನಾಯಕಿಯರ ಬಾಯಿಯನ್ನು ಕೆಲವು ಸಂಘ ಬಾಯಿ ಮುಚ್ಚಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಇದರಲ್ಲಿ ನಿರ್ದೇಶಕರ ಸಂಘವನ್ನು ಕೂಡ ಉಲ್ಲೇಖ ಮಾಡಲಾಗುತ್ತಿದೆ. ಆದರೆ ನಿರ್ದೇಶಕರ ಸಂಘ ಮೀಟೂ ಅಭಿಯಾನವನ್ನು ಸ್ವಾಗತಿಸುತ್ತದೆ. ಶೋಷಣೆಗೆ ಒಳಗಾಗಿರುವ ಮಹಿಳೆಯ ಧ್ವನಿಯನ್ನು ಅಡಗಿಸಲು ನಾವು ಪ್ರಯತ್ನಿಸುತ್ತಿಲ್ಲ ಎಂದು ಅವರು ಹೇಳಿದರು.

    ಯಾವುದೇ ನಿರ್ದೇಶಕನಿಗೆ ಸಮಸ್ಯೆಯಾದರೆ ಅವರು ನಿರ್ದೇಶಕರ ಸಂಘಕ್ಕೆ ಬಂದು ದೂರು ನೀಡುತ್ತಾರೆ. ಮೀಟೂ ಅಭಿಯಾನ ಮಾಧ್ಯಮಗಳ ಮೂಲಕ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಹೇಳುವುದರ ಮೂಲಕ ನಿಮ್ಮ ಸಮಸ್ಯೆಗೆ ಬಗೆಹರಿಯುವುದಿಲ್ಲ. ಆಯಾ ಸಂಘಗಳಿಗೆ ಹೋಗಿ ನಿಮಗೆ ಆದ ಲೈಂಗಿಕ ಕಿರುಕುಳದ ಬಗ್ಗೆ ದೂರು ನೀಡಿ ಅದು ನಿಮಗೆ ಆಗದಿದ್ದರೆ ಕಾನೂನಿನ ಮೊರೆ ಹೋಗಿ. ಆದರೆ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಹೇಳುವುದು ಸರಿಯಲ್ಲ ಎಂದು ನಿರ್ದೇಶಕ ವಿ. ನಾಗೇಂದ್ರ ಪ್ರಸಾದ್ ಹೇಳಿದರು.

    ಮೀಟೂ ಅಭಿಯಾನವನ್ನು ದುರುಪಯೋಗ ಮಾಡುವವರಲ್ಲಿ ಮೊಟ್ಟ ಮೊದಲಿಗರು ನಟಿ ಸಂಜನಾ. ಏಕೆಂದರೆ ಅವರು ಮಾಧ್ಯಮಗಳನ್ನು ಕರೆದು ಪತ್ರಿಕಾಗೋಷ್ಠಿ ಕರೆದು 12 ವರ್ಷಗಳ ಹಿಂದೆ ಅವರಿಗೆ ಗುರುತು ನೀಡಿದ ನಿರ್ದೇಶಕರ ಬಗ್ಗೆ ಸಾಕಷ್ಟು ಮಾತನಾಡಿದ್ದಾರೆ. ಸಂಜನಾ ಮಾತನಾಡಿದ್ದು ತಪ್ಪು ಎಂದು ನಾವು ಹೇಳುತ್ತಿಲ್ಲ. ಆದರೆ ಸಂಜನಾ ನಿರ್ದೇಶಕರ ಮೇಲೆ ಮಾಡಿದ ಆರೋಪಗಳಲ್ಲಿ ಸಾಕಷ್ಟು ಸುಳ್ಳು ಹೇಳಿದ್ದಾರೆ. ಆ ಸುಳ್ಳು ಏನು ಎಂಬುದು ನಾನು ಹೇಳುತ್ತೇನೆ ಎಂದರು.

    ಸಂಜನಾ ಅವರ ವಿಷಯಕ್ಕೂ ಹಾಗೂ ಈ ಪತ್ರಿಕಾಗೋಷ್ಠಿಗೂ ಯಾವುದೇ ಸಂಬಂಧವಿಲ್ಲ. ಸಂಜನಾ ಅವರಿಗೆ ಯಾವುದೇ ಲೈಂಗಿಕ ಕಿರುಕುಳ ನೀಡಿಲ್ಲ. ಇದು ಸಿನಿಮಾ ನಿರ್ದೇಶಕನ ಹಾಗೂ ಕಲಾವಿದನ ನಡುವಿನ ಆರೋಪ. ಒಬ್ಬ ನಿರ್ದೇಶಕ ತನ್ನ ಸಿನಿಮಾ ಚೆನ್ನಾಗಿ ಬರಬೇಕು ಎಂದು ತುಂಬಾ ಶ್ರಮಪಡುತ್ತಾರೆ. ನಿರ್ದೇಶಕರು ಈ ರೀತಿ ಶ್ರಮ ಪಡುವಾಗ ಕಲಾವಿದರಿಗೆ ಹಾಗೂ ತಂತ್ರಜ್ಞನರಿಗೆ ಕಷ್ಟವಾಗುವುದು ಸಹಜ. ಈ ರೀತಿ ಕಷ್ಟಪಟ್ಟಿದ್ದ ಮೇಲೆ ಸಿನಿಮಾ ಯಶಸ್ವಿಯಾದಾಗ ಅಲ್ಲಿ ನಿಜವಾದ ತೃಪ್ತಿ ಸಿಗುತ್ತದೆ. ಆ ಸಿನಿಮಾ ಬಿಡುಗಡೆಯಾದಾಗ ಆ ಚಿತ್ರತಂಡ ಯಶಸ್ಸಿನ ರುಚಿ ಉಂಡಿದೆ. ಅಂದು ಯಶಸ್ಸು ರುಚಿಸಿದ ತಟ್ಟೆಯಲ್ಲಿ ಈಗ ಉಗಳಬಾರದು ಎಂಬುದನ್ನು ಹೇಳುವುದಕ್ಕೆ ಈ ಪತ್ರಿಕಾಗೋಷ್ಠಿ ನಡೆಸಿದ್ದೇವೆ ಎಂದು ನಾಗೇಂದ್ರ ಪ್ರಸಾದ್ ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಯಾರೇ ಎಷ್ಟೇ ಹತ್ರ ಇದ್ದರೂ, ತಮ್ಮ ಮೊಬೈಲ್ ಮುಟ್ಟೋಕೆ ಬಿಡೋದಿಲ್ಲ- ಅಂತರಂಗದ ಕಥೆ ಹೇಳಲು ಬರ್ತಿದೆ ‘ಗೂಗಲ್’ ಸರ್ಚ್

    ಯಾರೇ ಎಷ್ಟೇ ಹತ್ರ ಇದ್ದರೂ, ತಮ್ಮ ಮೊಬೈಲ್ ಮುಟ್ಟೋಕೆ ಬಿಡೋದಿಲ್ಲ- ಅಂತರಂಗದ ಕಥೆ ಹೇಳಲು ಬರ್ತಿದೆ ‘ಗೂಗಲ್’ ಸರ್ಚ್

    ಬೆಂಗಳೂರು: ಗೀತ ಸಾಹಿತಿ, ಕವಿ ವಿ.ನಾಗೇಂದ್ರ ಪ್ರಸಾದ್ ನಿರ್ದೇಶಿಸಿರುವ ‘ಗೂಗಲ್-ಈ ಭೂಮಿ ಬಣ್ಣದ ಬುಗುರಿ’ ಸಿನಿಮಾ ಫೆಬ್ರವರಿ 16ರಂದು ತೆರೆಕಾಣಲಿದೆ. ಫೆಬ್ರವರಿ 3ರಂದು ಗೂಗಲ್ ಚಿತ್ರದ ಟ್ರೇಲರ್ ಬಿಡುಗಡೆ ಆಗಿದ್ದು, ಚಂದನವನದಲ್ಲಿ ಭರವಸೆಯನ್ನು ಮೂಡಿಸಿದೆ.

    2.27 ನಿಮಿಷದ ಗೂಗಲ್ ಟ್ರೇಲರ್ ಹಲವು ವಿಷಯಗಳನ್ನು ನೋಡುಗರಿಗೆ ವಿಭಿನ್ನವಾಗಿ ನೀಡಲಿದೆ. ಚಿತ್ರದ ಟ್ರೇಲರ್‍ನಲ್ಲಿ ವಿ.ನಾಗೇಂದ್ರ ಪ್ರಸಾದ್ ಸಿನಿಮಾದ ಹೈಲೈಟ್ಸ್ ಹೇಳಿದ್ದಾರೆ. ಯಾರ ಹತ್ತಿರವೂ ಹೇಳಿಕೊಳ್ಳಕ್ಕಾಗದ ವಿಷಯವನ್ನು ಸ್ನೇಹಿತರ ಬಳಿ ಹೇಳಿ ಕೊಳ್ಳಬಹುದು. ಐ ಲವ್ ಯು ಅಂತಾ ಹೇಳೋಕೆ ಒಂದು ಕ್ಷಣ ಸಾಕು ಆದ್ರೆ ಅದನ್ನು ಪ್ರೂವ್ ಮಾಡಲು ಇಡೀ ಜೀವನವೇ ಬೇಕು. ಗಂಡನಿಗೆ ಮನೆಯೇ ಪ್ರಪಂಚ, ಹೆಂಡತಿಗೆ ಪತಿಯೇ ಪ್ರಪಂಚ, ನಮ್ಮಿಬ್ಬರಿಗೆ ಮಕ್ಕಳೇ ಪ್ರಪಂಚ. ಯಾರೇ ಎಷ್ಟೇ ಹತ್ರ ಇದ್ದರೂ, ತಮ್ಮ ಮೊಬೈಲ್ ಮುಟ್ಟೋಕೆ ಬಿಡೋದಿಲ್ಲ. ಆದ್ರೆ ಅಂತರಂಗದ ಕಥೆ ಹೇಳಲು ಬರ್ತಿದೆ ‘ಗೂಗಲ್’ ಸರ್ಚ್ ಎಂಬ ಹಿನ್ನೆಲೆ ಧ್ವನಿಯಲ್ಲಿ ಟ್ರೇಲರ್ ಮೂಡಿ ಬಂದಿದೆ.

    2001ರಲ್ಲಿ ನಡೆದ ಸತ್ಯ ಘಟನೆ ಆಧಾರಿತ ಸಿನಿಮಾ ಎಂದು ವಿ.ನಾಗೇಂದ್ರ ಪ್ರಸಾದ್ ಟ್ರೇಲರ್ ಅರಂಭದಲ್ಲಿಯೇ ಹೇಳಿಕೊಂಡಿದ್ದಾರೆ. ಚಿತ್ರದಲ್ಲಿನ ಹೆಚ್ಚಿನ ಹೊಸ ಕಲಾವಿದರು ನಟಿಸಿದ್ದಾರೆ. ನಾಯಕ ನಟನಾಗಿ ನಾಗೇಂದ್ರ ಪ್ರಸಾದ್ ನಟಿಸಿದ್ರೆ, ನಾಯಕಿಯಾಗಿ ಮೊಗ್ಗಿನ ಮನಸ್ಸಿನ ಹುಡುಗಿ ಶುಭಾ ಪೂಂಜಾ ಬಣ್ಣ ಹಚ್ಚಿದ್ದಾರೆ.

    ಈ ಹಿಂದೆಯೇ ಈ ಚಿತ್ರದ ಫೋಟೋವೊಂದು ಸಖತ್ ವೈರಲ್ ಆಗಿತ್ತು. ನಾಗೇಂದ್ರ ಪ್ರಸಾದ್ ಹಾಗೂ ಶುಭಪೂಂಜಾ ಹಾರ ಬದಲಾಯಿಸಿಕೊಳ್ಳುವ ಫೋಟೋ ಸುದ್ದಿ ಆಗಿತ್ತು. ಇವರಿಬ್ಬರು ಮದುವೆಯೇ ಆಗಿದ್ದಾರೆ ಎಂಬಂತೆ ಸುದ್ದಿಗಳು ಹರಿದಾಡಿದ್ದವು. ಕಡೆಗೆ ನಾಗೇಂದ್ರ ಪ್ರಸಾದ್ ಅವರೇ ಸ್ವತಃ ವಿವರಣೆ ನೀಡಬೇಕಾಯಿತು. ಚಿತ್ರೀಕರಣ ಸಮಯದಲ್ಲಿ ಯಾರೋ ಕಿಡಿಗೇಡಿಗಳು ಮದುವೆ ಸೀನ್ ಫೋಟೋ ತೆಗೆದು ಈ ರೀತಿ ಮಾಡಿದ್ದಾರೆಂದು ಸ್ಪಷ್ಟೀಕರಣ ನೀಡಿದ್ದರು.

    ನಾಗೇಂದ್ರ ಪ್ರಸಾದ್ ‘ಉತ್ಸವ ಮೂವೀಸ್’ ಎಂಬ ಬ್ಯಾನರ್ ಹುಟ್ಟು ಹಾಕಿ, ‘ಗೂಗಲ್’ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಕಥೆ, ಚಿತ್ರಕಥೆ, ಸಾಹಿತ್ಯ, ನಿರ್ದೇಶನ, ಸಂಭಾಷಣೆ ಮತ್ತು ಸಂಗೀತ ಎಲ್ಲವನ್ನು ವಿ.ನಾಗೇಂದ್ರ ಪ್ರಸಾದ್ ನಿರ್ವಹಿಸಿದ್ದಾರೆ.