Tag: V Muraleedharan

  • ಓಮನ್‌ನ ಐತಿಹಾಸಿಕ ಶಿವ ದೇವಾಲಯಕ್ಕೆ ಕೇಂದ್ರ ಸಚಿವ ಮುರಳೀಧರನ್ ಭೇಟಿ

    ಓಮನ್‌ನ ಐತಿಹಾಸಿಕ ಶಿವ ದೇವಾಲಯಕ್ಕೆ ಕೇಂದ್ರ ಸಚಿವ ಮುರಳೀಧರನ್ ಭೇಟಿ

    ಮಸ್ಕತ್: ಕೇಂದ್ರ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ (Union Minister of State for External Affairs) ವಿ ಮುರಳೀಧರನ್ (V Muraleedharan) ಅವರು ಗುರುವಾರ ಮಸ್ಕತ್‌ನಲ್ಲಿರುವ (Muscat) ಐತಿಹಾಸಿಕ ಶಿವ ದೇವಾಲಯಕ್ಕೆ (Shiva Temple) ಭೇಟಿ ನೀಡಿ ಭಾರತ ಮತ್ತು ಓಮನ್ (Oman) ದೇಶಗಳ ನಡುವಿನ ಶಾಶ್ವತ ಸ್ನೇಹಕ್ಕಾಗಿ ಪ್ರಾರ್ಥನೆ ಸಲ್ಲಿಸಿದರು.

    ಈ ಕುರಿತು ಮುರಳೀಧರನ್ ಎಕ್ಸ್‌ನಲ್ಲಿ (X) ಮಾಹಿತಿ ಹಂಚಿಕೊಂಡಿದ್ದಾರೆ. ಮೋತೀಶ್ವರ್ ಮಹಾದೇವ್ ಎಂದು ಕರೆಯಲ್ಪಡುವ ಮಸ್ಕತ್‌ನ ಐತಿಹಾಸಿಕ ಶಿವ ದೇವಾಲಯಕ್ಕೆ ಭೇಟಿ ನೀಡಿದ್ದು, ಈ ದೇವಾಲಯ ಒಂದು ಶತಮಾನಕ್ಕೂ ಹೆಚ್ಚು ಇತಿಹಾಸವನ್ನು ಹೊಂದಿದೆ. ಇದು ಭಾರತ ಮತ್ತು ಒಮನ್ ನಡುವಿನ ನಿರಂತರ ಸಾಂಸ್ಕೃತಿಕ ಸಂಬಂಧಗಳಿಗೆ ಸಾಕ್ಷಿಯಾಗಿದೆ. ಭಾರತ ಮತ್ತು ಒಮನ್ ಜನರ ನಡುವಿನ ಶಾಶ್ವತ ಸ್ನೇಹಕ್ಕಾಗಿ ಪ್ರಾರ್ಥನೆ ಸಲ್ಲಿಸಲಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಬೈಡನ್ ನಿರ್ಗಮನದ ಬಳಿಕ ಹಮಾಸ್ ದಾಳಿ ತೀವ್ರ – ಇಂದು ಇಸ್ರೇಲ್‌ಗೆ ರಿಷಿ ಸುನಾಕ್ ಭೇಟಿ

    ವಿದೇಶಾಂಗ ವ್ಯವಹಾರಗಳು ಮತ್ತು ಸಂಸದೀಯ ವ್ಯವಹಾರಗಳ ರಾಜ್ಯ ಸಚಿವ ವಿ ಮುರಳೀಧರನ್ ಅವರು ಅಕ್ಟೋಬರ್ 18 ಮತ್ತು 19ರಂದು ಒಮನ್ ಸುಲ್ತಾನೇಟ್‌ಗೆ ತಮ್ಮ ಮೂರನೇ ಅಧಿಕೃತ ಭೇಟಿಯನ್ನು ನೀಡಲಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿತ್ತು. ಅವರ ಭೇಟಿಯ ಸಂದರ್ಭದಲ್ಲಿ, ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವರು ಒಮಾನಿ ನಾಯಕರೊಂದಿಗೆ ಸಭೆ ನಡೆಸಲಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ. ಇದನ್ನೂ ಓದಿ: ಗಾಜಾ ಆಸ್ಪತ್ರೆಯ ಮೇಲೆ ಇಸ್ರೇಲ್ ದಾಳಿ ಮಾಡಿಲ್ಲ: ಬೈಡೆನ್

    ಈ ವೇಳೆ ಮುರಳೀಧರನ್ ಅವರು ‘ಮಾಂಡವಿಯಿಂದ ಮಸ್ಕತ್‌ಗೆ: ಭಾರತೀಯ ಸಮುದಾಯ ಮತ್ತು ಭಾರತ ಮತ್ತು ಓಮನ್‌ನ ಹಂಚಿಕೆಯ ಇತಿಹಾಸ’ ಎಂಬ ಉಪನ್ಯಾಸ ಸರಣಿಯನ್ನು ಉದ್ಘಾಟಿಸಲಿದ್ದಾರೆ. ಓಮನ್‌ನಲ್ಲಿರುವ ಭಾರತೀಯ ಸಮುದಾಯದ ಇತಿಹಾಸ ಮತ್ತು ಭಾರತ ಮತ್ತು ಓಮನ್ ನಡುವಿನ ಸಂಬಂಧಗಳಿಗೆ ಅದರ ಕೊಡುಗೆಯ ಮೇಲೆ ಬೆಳಕು ಚೆಲ್ಲುವ ಉಪನ್ಯಾಸ ಸರಣಿಯನ್ನು ಭಾರತೀಯ ರಾಯಭಾರ ಕಚೇರಿ ಆಯೋಜಿಸಿದೆ. ಇದನ್ನೂ ಓದಿ: ದೇಶ ತೊರೆಯಿರಿ – ಅಫ್ಘಾನ್‌ ಪ್ರಜೆಗಳಿಗೆ ಪಾಕ್‌ ದಿಢೀರ್‌ ಎಚ್ಚರಿಕೆ ನೀಡಿದ್ದು ಯಾಕೆ?

    ಭೇಟಿಯ ಸಮಯದಲ್ಲಿ, ಅವರು ಒಮಾನಿ ನಾಯಕತ್ವ ಮತ್ತು ಗಣ್ಯರೊಂದಿಗೆ ಉನ್ನತ ಮಟ್ಟದ ಚರ್ಚೆಗಳನ್ನು ನಡೆಸಲಿದ್ದಾರೆ. ಅಲ್ಲದೇ ಓಮನ್‌ನ ನ್ಯಾಷನಲ್ ಮ್ಯೂಸಿಯಂನಲ್ಲಿ ಪ್ರದರ್ಶಿಸಲಾದ ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್‌ನ ಸಂಗ್ರಹದಿಂದ ವಿಶೇಷವಾಗಿ ಸಂಗ್ರಹಿಸಲಾದ 20 ಕಲಾಕೃತಿಗಳ ಸಂಗ್ರಹವಾಗಿರುವ ‘ಇಂಡಿಯಾ ಆನ್ ಕ್ಯಾನ್ವಾಸ್: ಮಾಸ್ಟರ್‌ಪೀಸ್ ಆಫ್ ಮಾಡರ್ನ್ ಇಂಡಿಯನ್ ಪೇಂಟಿಂಗ್’ ಚಿತ್ರಕಲಾ ಪ್ರದರ್ಶನವನ್ನು ಉದ್ಘಾಟಿಸಲಿದ್ದಾರೆ. ಇದನ್ನೂ ಓದಿ: ಇಂಧನ ಕೊರತೆ – ಪಾಕಿಸ್ತಾನದ 48 ವಿಮಾನಗಳ ಹಾರಾಟ ರದ್ದು

    ಮುರಳೀಧರನ್ ಅವರು ವಿವಿಧ ಭಾರತೀಯ ಸಮುದಾಯ ಸಂಸ್ಥೆಗಳೊಂದಿಗೆ ಮತ್ತು ವೃತ್ತಿಪರರು, ನೀಲಿ ಕಾಲರ್ ಕಾರ್ಯಕರ್ತರು, ಆರೋಗ್ಯ ಕಾರ್ಯಕರ್ತರು, ಸಾಮಾಜಿಕ ಕಾರ್ಯಕರ್ತರು ಮತ್ತು ಶಾಲಾ ವಿದ್ಯಾರ್ಥಿಗಳು ಸೇರಿದಂತೆ ಓಮನ್‌ನಲ್ಲಿ ನೆಲೆಸಿರುವ ಭಾರತೀಯರೊಂದಿಗೆ ಸಂವಾದ ನಡೆಸಲಿದ್ದಾರೆ. ಇದನ್ನೂ ಓದಿ: ಐರನ್ ಡೋಮ್ ಆಯ್ತು ಈಗ ಐರನ್ ಬೀಮ್ – ಏನಿದು ಇಸ್ರೇಲ್ ಪವರ್‌ಫುಲ್ ವೆಪನ್?

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಆಪರೇಷನ್ ಕಾವೇರಿ- 135 ಮಂದಿ ಭಾರತೀಯರಿದ್ದ 3ನೇ ತಂಡ ಸೌದಿಗೆ ರೀಚ್

    ಆಪರೇಷನ್ ಕಾವೇರಿ- 135 ಮಂದಿ ಭಾರತೀಯರಿದ್ದ 3ನೇ ತಂಡ ಸೌದಿಗೆ ರೀಚ್

    ರಿಯಾದ್: ಕಲಹ ಪೀಡಿತ ಸುಡಾನ್‍ನಿಂದ (Sudan) ಹೊರಟಿದ್ದ ಅಪರೇಷನ್ ಕಾವೇರಿಯ ಐಎಎಫ್ ಸಿ-130ಜೆ (IAF C-130J) ವಿಮಾನವು 135 ಭಾರತೀಯರ (Indians) ಮೂರನೇ ಬ್ಯಾಚ್ ಸೌದಿ ಅರೇಬಿಯಾದ (Saudi Arabia) ಜೆಡ್ಡಾವನ್ನು (Jeddah) ಬುಧವಾರ ತಲುಪಿದೆ ಎಂದು ವಿದೇಶಾಂಗ ಖಾತೆಯ ರಾಜ್ಯ ಸಚಿವ ವಿ. ಮುರಳೀಧರನ್ (V Muraleedharan) ಟ್ವೀಟ್‍ನಲ್ಲಿ ತಿಳಿಸಿದ್ದಾರೆ.

    ಸಿ-130ಜೆ ವಿಮಾನದಲ್ಲಿ ಜೆಡ್ಡಾ ವಿಮಾನ ನಿಲ್ದಾಣಕ್ಕೆ ಬಂದಿಳಿದ 148 ಭಾರತೀಯರ ಎರಡನೇ ಬ್ಯಾಚ್‍ನ್ನು ಬುಧವಾರ ಮುಂಜಾನೆ ಅವರು ಬರಮಾಡಿಕೊಂಡಿದ್ದಾರೆ. ಅಲ್ಲದೆ ನೌಕಾಪಡೆಯ ಐಎನ್‍ಎಸ್ ಸುಮೇಧಾ (INS Sumedha) ನೌಕೆಯು 278 ಜನರೊಂದಿಗೆ ಜೆಡ್ಡಾ ಬಂದರನ್ನು ತಲುಪಿದೆ ಎಂದು ಅವರು ಟ್ವೀಟ್‍ನಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಸುಡಾನ್ ಸಂಘರ್ಷ – ಭಾರತೀಯರು ಸೇರಿದಂತೆ 150 ಜನರನ್ನು ಸುರಕ್ಷಿತವಾಗಿ ಕರೆತಂದ ಸೌದಿ ಅರೇಬಿಯಾ

    ಆಪರೇಷನ್ ಕಾವೇರಿ (Operation Kaveri) ಹೆಸರಿನಲ್ಲಿ ನಡೆಸಲಾಗುತ್ತಿರುವ ಕಾರ್ಯಾಚರಣೆಯಲ್ಲಿ, ಸುಡಾನ್‍ನಿಂದ ಸ್ಥಳಾಂತರಿಸಲ್ಪಟ್ಟ ಭಾರತೀಯರನ್ನು ದೇಶಕ್ಕೆ ಕಳಿಸುವ ಮುನ್ನ ಸೌದಿ ಅರೇಬಿಯಾದ ಜೆಡ್ಡಾದಲ್ಲಿ ಸ್ವಲ್ಪ ಸಮಯ ಇರಿಸಲಾಗುತ್ತದೆ. ನಂತರ ಅವರನ್ನು ಭಾರತಕ್ಕೆ ಕಳುಹಿಸಲಾಗುತ್ತದೆ ಎಂದು ಮುರುಳೀಧರನ್ ಟ್ವೀಟ್‍ನಲ್ಲಿ ತಿಳಿಸಿದ್ದಾರೆ.

    ಸುಡಾನ್‍ನಲ್ಲಿ ಸಿಲುಕಿರುವ ಭಾರತೀಯರನ್ನು ಸ್ಥಳಾಂತರಿಸಲು ಭಾರತೀಯ ನೌಕಾಪಡೆಯ ಐಎನ್‍ಎಸ್ ಟೆಗ್ ಮಂಗಳವಾರ ಆಪರೇಷನ್ ಕಾವೇರಿಗೆ ಸೇರಿದೆ. ಸುಡಾನ್‍ನಲ್ಲಿ ಸಿಲುಕಿರುವ ಭಾರತೀಯರ ನೆರವಿಗೆ ಹೆಚ್ಚುವರಿ ಅಧಿಕಾರಿಗಳು, ಅಗತ್ಯ ಪರಿಹಾರ ಸಾಮಗ್ರಿಗಳೊಂದಿಗೆ ನೌಕೆಯಲ್ಲಿ ಪೋರ್ಟ್ ಸುಡಾನ್‍ಗೆ ತಲುಪಿದೆ ಎಂದು ಹಿರಿಯ ಎಂಇಎ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಸುಡಾನ್‍ನ ರಾಜಧಾನಿ ಖಾರ್ತೌಮ್‍ನಲ್ಲಿ ಸುಡಾನ್ ಸೇನೆ ಮತ್ತು ಅರೆಸೇನಾ ಪಡೆಗಳ ನಡುವಿನ ಕಾಳಗ ತೀವ್ರಗೊಂಡಿದೆ. ಕದನ ಪೀಡಿತ ಸುಡಾನ್‍ನಿಂದ ತನ್ನ ನಾಗರಿಕರನ್ನು ಸ್ಥಳಾಂತರಿಸುವ ಪ್ರಯತ್ನ ನಡೆಯುತ್ತಿದೆ. ಸುಮಾರು 500 ಭಾರತೀಯರು ಪೋರ್ಟ್ ಸುಡಾನ್ ತಲುಪಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಸೋಮವಾರ ತಿಳಿಸಿದ್ದರು.

    ಸುಡಾನ್‍ನ ಇತ್ತೀಚಿನ ಬೆಳವಣಿಗೆಯಲ್ಲಿ, ವಿವಿಧ ದೇಶಗಳು ತಮ್ಮ ಪ್ರಜೆಗಳನ್ನು ಸುಡಾನ್‍ನಿಂದ ಸ್ಥಳಾಂತರಿಸುತ್ತಿದ್ದಾರೆ. ಈ ವೇಳೆ ಅನಾಹುತಗಳಾಗದಂತೆ ತಡೆಯಲು ಅಮೆರಿಕ ಮತ್ತು ಸೌದಿ ಅರೇಬಿಯಾ ಮಧ್ಯಸ್ಥಿಕೆಯಲ್ಲಿ ಮನವಿ ಮಾಡಿಕೊಳ್ಳಲಾಗಿದೆ. ಮನವಿಯ ನಂತರ ಹೋರಾಟ ನಡೆಸುತ್ತಿದ್ದ ಎರಡು ಬಣಗಳು ಸೋಮವಾರ 72 ಗಂಟೆಗಳ ಕದನ ವಿರಾಮಕ್ಕೆ ಒಪ್ಪಿಕೊಂಡಿದ್ದವು. ಇದನ್ನೂ ಓದಿ: ಸುಡಾನ್ ಹಿಂಸಾಚಾರ – ವಿಮಾನ ನಿಲ್ದಾಣಗಳ ಸ್ಥಗಿತ; ಪ್ರಜೆಗಳನ್ನು ಕರೆತರಲು ಭೂಮಾರ್ಗ ಹುಡುಕಾಟದಲ್ಲಿ ಭಾರತ