Tag: V. Krishnamurthy

  • ಹಿಂಡಲಗಾ ಜೈಲಿನ ಅತಿ ಭದ್ರತಾ ವಿಭಾಗಕ್ಕೆ ಪ್ರದೂಷ್ ಶಿಫ್ಟ್: ವಿ.ಕೃಷ್ಣಮೂರ್ತಿ

    ಹಿಂಡಲಗಾ ಜೈಲಿನ ಅತಿ ಭದ್ರತಾ ವಿಭಾಗಕ್ಕೆ ಪ್ರದೂಷ್ ಶಿಫ್ಟ್: ವಿ.ಕೃಷ್ಣಮೂರ್ತಿ

    ಬೆಳಗಾವಿ: ಜೈಲಿನ ಎಲ್ಲಾ ಪ್ರಕಿಯೆ ಮುಗಿಯುತ್ತಿದ್ದಂತೆ ರೇಣುಕಾಸ್ವಾಮಿ ಕೊಲೆ (Renukaswamy Murder Case) ಆರೋಪಿ ಪ್ರದೂಷ್‌ನನ್ನು ಹಿಂಡಲಗಾ ಜೈಲಿನ (Hindalaga Jail) ಅತಿ ಭದ್ರತಾ ವಿಭಾಗದಲ್ಲಿ (High Security Department) (ಅಂಧೇರಿ ಸೆಲ್) ಇಡಲಾಗುವುದು ಮತ್ತು ಏಳು ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗುವುದು ಎಂದು ಹಿಂಡಲಗಾ ಜೈಲಿನ ಸಹಾಯಕ ಅಧೀಕ್ಷಕ ವಿ.ಕೃಷ್ಣಮೂರ್ತಿ (V. Krishnamurthy) ತಿಳಿಸಿದ್ದಾರೆ.

    ಪರಪ್ಪನ ಅಗ್ರಹಾರದಲ್ಲಿ (Parappana Agrahara) ರಾಜಾತಿಥ್ಯದ ಫೋಟೋ ವೈರಲ್ ಆದ ಬಳಿಕ ನಟ ದರ್ಶನ್ ಗ್ಯಾಂಗ್‌ನ (Actor Darshan Gang) 12 ಆರೋಪಿಗಳನ್ನು ದಿಕ್ಕಾಪಾಲು ಮಾಡಿದ್ದಾರೆ. ಆರೋಪಿಗಳ ಪೈಕಿ ಪ್ರದೂಷ್‌ನನ್ನು ಬೆಳಗಾವಿಯ (Belagavi) ಹಿಂಡಲಗಾ ಜೈಲಿಗೆ ವರ್ಗಾವಣೆ ಮಾಡಲಾಗಿದೆ. ವರ್ಗಾವಣೆ ಮಾಡಿದ ನಂತರ ಜೈಲಿನ ಭದ್ರತೆಗೆ ಸಂಬಂಧಿಸಿದಂತೆ ಮಾಹಿತಿ ನೀಡಿದ್ದಾರೆ.ಇದನ್ನೂ ಓದಿ: ಅವ್ನೇನ್ ದೊಡ್ಡ ರೋಲ್ ಮಾಡೆಲ್ಲಾ? – ದರ್ಶನ್ ಬಗ್ಗೆ ಕೇಳಿದ್ದಕ್ಕೆ ಕೆ.ಎನ್ ರಾಜಣ್ಣ ಗರಂ

    ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜೈಲಿನಲ್ಲಿ ಸಿಸಿಟಿವಿ ಅಳವಡಿಸುವ ಕಾರ್ಯ ನಡೆಯುತ್ತಿದೆ. ಮಳೆಯಿಂದಾಗಿ ಕೆಲಸದಲ್ಲಿ ವ್ಯತ್ಯಯ ಉಂಟಾಗಿದೆ. ಹೆಚಿನ ಭದ್ರತೆಗಾಗಿ ಕ್ರಮ ವಹಿಸುತ್ತೇವೆ ಎಂದರು.

    ಹಿರಿಯ ಅಧಿಕಾರಿಗಳ ಮಾರ್ಗದರ್ಶನದಂತೆ ಭದ್ರತಾ ಕಾರ್ಯ ನಡೆಯುತ್ತಿದೆ. ಪ್ರದೂಷ್ ಭದ್ರತೆಗೆ ಸಹಾಯಕ ಜೈಲರ್ ಹಾಗೂ ಏಳು ಜನ ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ. ಜೈಲಿನಲ್ಲಿ 2G ಜಾಮರ್ ಇದ್ದು, 5U ಜಾಮರ್ ಅಳಡಿಸಲು ಸಿದ್ಧತೆ ನಡೆಸಲಾಗಿದೆ. ಟೆಂಡರ್ ಪಡೆದವರಿಗೆ ಬೇಗ ಮುಗಿಸಿಕೊಡುವಂತೆ ಆಗ್ರಹಿಸಿದ್ದೇವೆ ಎಂದು ತಿಳಿಸಿದರು.ಇದನ್ನೂ ಓದಿ: ರಾಜ ಎಲ್ಲಿದ್ದರೂ ರಾಜನೇ ಅಂತ ಘೋಷಣೆ- ದರ್ಶನ್‌ ನೋಡಲು ಮುಗಿಬಿದ್ದ ಫ್ಯಾನ್ಸ್‌

    ಜೈಲಿನಲ್ಲಿ ಊಟ, ಬಿಡಿ, ಸಿಗರೆಟ್ ಎಲ್ಲಾ ವಸ್ತುಗಳಿಗೆ ನಿಷೇಧ ಹೇರಲಾಗಿದೆ. ನಮ್ಮ ಸಿಬ್ಬಂದಿಗಳನ್ನು ತಪಾಸಣೆಗೆ ಒಳಪಡಿಸಲಾಗಿದೆ. ಯಾರೇ ಬಂದರೂ ಭದ್ರತಾ ದೃಷ್ಟಿಯಿಂದ ಅಂಧೇರಿ ಸೆಲ್‌ನಲ್ಲಿ ಇಡುತ್ತೇವೆ. ನಿಯಮಗಳ ಪ್ರಕಾರ ಸಂಬAಧಿಗಳು ಬಂದರೆ ಮಾತ್ರ ಅವಕಾಶ ಕೊಡಲಾಗುವುದು ಎಂದು ತಿಳಿಸಿದ್ದಾರೆ.

  • ಭಾರತೀಯ ಉಕ್ಕು ಪ್ರಾಧಿಕಾರದ ಮಾಜಿ ಅಧ್ಯಕ್ಷ ವಿ. ಕೃಷ್ಣಮೂರ್ತಿ ವಿಧಿವಶ

    ಭಾರತೀಯ ಉಕ್ಕು ಪ್ರಾಧಿಕಾರದ ಮಾಜಿ ಅಧ್ಯಕ್ಷ ವಿ. ಕೃಷ್ಣಮೂರ್ತಿ ವಿಧಿವಶ

    ಚೆನ್ನೈ: ಭಾರತೀಯ ಉಕ್ಕು ಪ್ರಾಧಿಕಾರ(SAIL)ದ ಮಾಜಿ ಅಧ್ಯಕ್ಷ ಹಾಗೂ ಮಾರುತಿ ಉದ್ಯೋಗ್ ಲಿಮಿಟೆಡ್(ಮಾರುತಿ ಸುಜುಕಿ) ಮಾಜಿ ಅಧ್ಯಕ್ಷರಾದ ವಿ. ಕೃಷ್ಣಮೂರ್ತಿ(97) ಅವರು ನಿಧನರಗಿದ್ದಾರೆ.

    ಚೆನ್ನೈನಲ್ಲಿರುವ ನಿವಾಸದಲ್ಲಿ ಕೃಷ್ಣಮೂರ್ತಿ ಅವರು ಭಾನುವಾರ ನಿಧನರಾಗಿದ್ದು, ಸೋಮವಾರ ಅವರ ಅಂತಿಮ ಸಂಸ್ಕಾರವನ್ನು ನೆರವೇರಲಿದೆ ಬಗ್ಗೆ ಮಾಜಿ ಸಹೋದ್ಯೋಗಿಯೊಬ್ಬರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಸೀರೆ, ಚಪ್ಪಲಿ ಹರಾಜು?

    ವಿ.ಕೃಷ್ಣಮೂರ್ತಿ ಅವರು 1985 ರಿಂದ 1990 ರವರೆಗೆ ಎಸ್‌ಎಐಎಲ್‌ನ ಅಧ್ಯಕ್ಷರಾಗಿದ್ದರು. 2022ರ ಜೂನ್ 26 ರಂದು ಡಾ. ವೆಂಕಟರಮಣ ಕೃಷ್ಣಮೂರ್ತಿ ಪದ್ಮವಿಭೂಷಣ ಪ್ರಶಸ್ತಿ ಲಭಿಸಿತ್ತು. ವಿ.ಕೃಷ್ಣಮೂರ್ತಿ ಅವರು 1985 ರಿಂದ 1990 ರವರೆಗೆ SAILನ ಅಧ್ಯಕ್ಷರಾಗಿದ್ದರು. ಜೊತೆಗೆ ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ (BHEL), ಮಾರುತಿ ಉದ್ಯೋಗ್ ಮತ್ತು ಜಿಎಐಎಲ್‌ನ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.  ಇದನ್ನೂ ಓದಿ: ಪ್ರೇಯಸಿ ದೂರಾಗಿದ್ದಕ್ಕೆ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಬಂದು ಪ್ರಾಣ ಬಿಟ್ಟ!

    ಕೃಷ್ಣಮೂರ್ತಿ ಅವರು ಓರ್ವ ಅತ್ಯುತ್ತಮ ನಾಯಕರಾಗಿದ್ದು, ಅವರ ನೇತೃತ್ವದಲ್ಲಿ ಇಡೀ ಮಾರುತಿ ಉದ್ಯೋಗ್ ಯೋಜನೆಯನ್ನು ಕಾರ್ಯಗತಗೊಳಿಸಲಾಯಿತು. ಅಲ್ಲದೇ ಭಾರತದಲ್ಲಿ ಸಂಪೂರ್ಣ ಹೊಸ ಜಪಾನೀಸ್ ಕೆಲಸದ ಸಂಸ್ಕೃತಿಯನ್ನು ಪರಿಚಯಿಸಲಾಯಿತು ಎಂದು ಮಾರುತಿ ಸುಜುಕಿ ಇಂಡಿಯಾದ ಅಧ್ಯಕ್ಷ ಆರ್‌ಸಿ ಭಾರ್ಗವ್ ಕೃಷ್ಣಮೂರ್ತಿ ಅವರನ್ನು ಹಾಡಿ ಹೊಗಳಿದ್ದಾರೆ.

    Live Tv