Tag: V Kohli

  • ಫಿಫ್ಟಿ ಬಳಿಕ ಕೊಹ್ಲಿ ಸ್ಟ್ರೈಕ್‌ರೇಟ್‌ ಹೆಚ್ಚಾಗ್ಬೇಕಿತ್ತು – ಮ್ಯಾಕ್ಸಿ ತರ ಆದ್ರೆ ಏನ್‌ ಮಾಡೋಕಾಗುತ್ತೆ: ಸೆಹ್ವಾಗ್‌

    ಫಿಫ್ಟಿ ಬಳಿಕ ಕೊಹ್ಲಿ ಸ್ಟ್ರೈಕ್‌ರೇಟ್‌ ಹೆಚ್ಚಾಗ್ಬೇಕಿತ್ತು – ಮ್ಯಾಕ್ಸಿ ತರ ಆದ್ರೆ ಏನ್‌ ಮಾಡೋಕಾಗುತ್ತೆ: ಸೆಹ್ವಾಗ್‌

    – ಒಬ್ಬರಾದ್ರೂ ವಿಕೆಟ್‌ ತೆಗೆಯೋರಿಲ್ಲ – ಆರ್‌ಸಿಬಿ ಹೇಗೆ ತಾನೆ ಗೆಲ್ಲುತ್ತೆ? – ಇರ್ಫಾನ್‌ ಪಠಾಣ್‌ ಗರಂ

    ಜೈಪುರ: ರಾಜಸ್ಥಾನ್‌ ರಾಯಲ್ಸ್‌ ವಿರುದ್ಧ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RR vs RCB) ತಂಡದ ಸೋಲು ಕ್ರಿಕೆಟ್‌ ಲೋಕದಲ್ಲಿ ಭಾರೀ ಸದ್ದು ಮಾಡುತ್ತಿದೆ. ತಂಡದಲ್ಲಿ ನಿಧಾನಗತಿಯ ಬ್ಯಾಟಿಂಗ್‌ ನಡೆಸಿದ ವಿರಾಟ್‌ ಕೊಹ್ಲಿ (Virat Kohli), ಪ್ರಮುಖ ವಿಕೆಟ್‌ ಕೀಳುವಲ್ಲಿ ವಿಫಲರಾದ ಬೌಲರ್‌ಗಳು ಹಾಗೂ ಕೈಗೊಟ್ಟ ಗ್ಲೆನ್‌ ಮಾಕ್ಸ್‌ವೆಲ್‌ ವಿರುದ್ಧ ಹಿರಿಯ ಕ್ರಿಕೆಟಿಗರು ಹರಿಹಾಯ್ದಿದ್ದಾರೆ.

    ಆರ್‌ಸಿಬಿ ಸೋಲಿನ ಕುರಿತು ಮಾತನಾಡಿರುವ ಮಾಜಿ ಕ್ರಿಕೆಟಿಗ ವಿರಾಟ್‌ ಕೊಹ್ಲಿ, ಮೊದಲು ಬ್ಯಾಟಿಂಗ್‌ ಮಾಡಿದ ಆರ್‌ಸಿಬಿ ಇನ್ನೂ 20 ರನ್‌ ಹೆಚ್ಚುವರಿ ಗಳಿಸಬೇಕಿತ್ತು. ವಿರಾಟ್‌ ಕೊಹ್ಲಿ ಇನ್ನಿಂಗ್ಸ್‌ ಚೆನ್ನಾಗಿತ್ತು. ಆದ್ರೆ ಅವರೊಂದಿಗೆ ಸಾಥ್‌ ನೀಡಬೇಕಿದ್ದ ಮ್ಯಾಕ್ಸ್‌ವೆಲ್‌, ಕ್ಯಾಮರೂನ್‌ ಗ್ರೀನ್‌ ಸರಿಯಾಗಿ ಬ್ಯಾಟಿಂಗ್‌ ಮಾಡಲಿಲ್ಲ. ಮಹಿಪಾಲ್‌ ಲೊಮ್ರೋರ್‌ ಸಹ ತಂಡದಲ್ಲಿ ಇಲ್ಲದೇ ಇದ್ದದ್ದು ದೊಡ್ಡ ನಷ್ಟವಾಯಿತು. ವಿರಾಟ್‌ ಕೊಹ್ಲಿ 39 ಬಾಲ್‌ಗೆ 50 ರನ್‌ ಗಳಿಸಿದಾಗ, ಅವರ ಸ್ಟ್ರೈಕ್‌ ರೇಟ್‌ 200ರ ಗಡಿ ದಾಟಬೇಕಿತ್ತು. ಆದ್ರೆ ಇತರ ಬ್ಯಾಟರ್‌ಗಳು ಸಾಥ್‌ ನೀಡದ ಪರಿಣಾಮ ಸಂಪೂರ್ಣ ಒತ್ತಡ ಕೊಹ್ಲಿ ಮೇಲೆ ಇತ್ತು ಎಂದು ಹೇಳಿದ್ದಾರೆ.

    ಕೊಹ್ಲಿ ಒಳ್ಳೆ ಫಾರ್ಮ್‌ನಲ್ಲಿದ್ದಾರೆ, ಕೊನೇವರೆಗೂ ಕ್ರೀಸ್‌ನಲ್ಲಿ ಉಳಿಯೋದು ಅವರ ಪಾತ್ರ. ಆದ್ರೆ ಅಷ್ಟೊಂದು ಹಣಕ್ಕೆ ಆಯ್ಕೆಯಾದ ಇತರ ಬ್ಯಾಟರ್‌ಗಳು ತಮ್ಮ ಸಾಮರ್ಥ್ಯವನ್ನು ಸಾಬೀತು ಮಾಡಬೇಕು. ಮ್ಯಾಕ್ಸ್‌ವೆಲ್‌ (Glenn maxwell) ತರ ಆದ್ರೆ ಯಾರು ಏನ್‌ ಮಾಡೋದಕ್ಕೆ ಆಗುತ್ತೆ ಎಂದು ಬೇಸರ ಹೊರಹಾಕಿದ್ದಾರೆ. ಇದನ್ನೂ ಓದಿ: ಬಟ್ಲರ್‌ ಬೊಂಬಾಟ್‌ ಶತಕ – ರಾಜಸ್ಥಾನ್‌ಗೆ 6 ವಿಕೆಟ್‌ಗಳ ಜಯ; ಆರ್‌ಸಿಬಿಗೆ ಹೀನಾಯ ಸೋಲು!

    ಆರ್‌ಸಿಬಿ ವಿರುದ್ಧ ಪಠಾಣ್‌ ಗರಂ:
    ಇಬ್ಬರು ಬ್ಯಾಟರ್‌ಗಳು (ಸಂಜು ಸ್ಯಾಮ್ಸನ್‌, ಜೋಸ್‌ ಬಟ್ಲರ್‌) 170+ ಸ್ಟ್ರೈಕ್ ರೇಟ್‌ನೊಂದಿಗೆ ಆಡುತ್ತಿದ್ದಾರೆ. ಇನ್ನೊಂದು ತುದಿಯಲ್ಲಿ ಒಬ್ಬನೇ ಒಬ್ಬ ವಿಕೆಟ್ ಪಡೆಯುವ ಬೌಲರ್‌ ಇಲ್ಲ. ಆರ್‌ಸಿಬಿ ಬೌಲರ್‌ಗಳ ಮೊರೆ ಹೋಗಲಿಲ್ಲ. ಹೀಗಿರುವಾಗ ನೀವು ಹೇಗೆ ಗೆಲ್ಲುತ್ತೀರಿ? ಎಂದು ತಿವಿದಿದ್ದಾರೆ. ಇದನ್ನೂ ಓದಿ: ಟಿ20 ವಿಶ್ವಕಪ್‌ಗೆ ಭರ್ಜರಿ ತಯಾರಿ – ಪಾಕಿಸ್ತಾನ ತಂಡಕ್ಕೆ ಸೇನೆಯಿಂದ ತರಬೇತಿ!

    ಮಹಿಪಾಲ್‌ ಲೋಮ್ರೋರ್‌ ದೇಶೀಯ ಕ್ರಿಕೆಟ್‌ನಲ್ಲಿ ಈ ಪಿಚ್‌ನಲ್ಲಿ ಆಡುತ್ತಾರೆ. ಆರ್‌ಸಿಬಿ ತಂಡದಲ್ಲಿ ತಮ್ಮ ಫಾರ್ಮ್‌ ಸಾಬೀತು ಮಾಡಿದ್ದಾರೆ. ಆದ್ರೆ ಅವರು ಪ್ಲೇಯಿಂಗ್‌-11 ಭಾಗವಾಗಿರಲಿಲ್ಲ. ಆದ್ದರಿಂದ ಫ್ರಾಂಚೈಸಿಯಲ್ಲಿ ಭಾರತೀಯ ಕೋಚ್‌ಗಳು ಇದ್ದರೆ, ಇಂತಹ ಮೂಲಭೂತ ತಪ್ಪುಗಳು ಆಗುವುದಿಲ್ಲ ಎಂದು ಹೇಳಿದ್ದಾರೆ. ಇದೇ ವೇಳೆ ಜೋಸ್‌ ಬಟ್ಲರ್‌ ಅವರ ಶತಕವನ್ನು ಹಾಡಿ ಹೊಗಳಿದ್ದಾರೆ. ಇದನ್ನೂ ಓದಿ: ಶ್ರೀಕೃಷ್ಣನ ಮೇಲಿನ ನಂಬಿಕೆಯಿಂದ ಮಾಂಸಾಹಾರ ತ್ಯಜಿಸಿದ್ರಾ ವೇಗಿ? – ಮಯಾಂಕ್‌ ತಾಯಿ ಹೇಳಿದ್ದೇನು?

    ಶನಿವಾರ ಸವಾಯ್‌ ಮಾನ್ಸಿಂಗ್‌ ಕ್ರೀಡಾಂಗಣದಲ್ಲಿ ರಾಜಸ್ಥಾನ್‌ ರಾಯಲ್ಸ್‌ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ 10 ಓವರ್‌ಗಳಲ್ಲಿ 183 ರನ್‌ ಗಳಿಸಿತ್ತು. ರಾಜಸ್ಥಾನ್‌ ರಾಯಲ್ಸ್‌ 19.1 ಓವರ್‌ಗಳಲ್ಲೇ 189 ರನ್‌ ಗಳಿಸಿ ಗೆಲುವು ಸಾಧಿಸಿತ್ತು. ಹೌದು. ಆರ್‌ಸಿಬಿ ಪರ ಏಕಾಂಗಿ ಹೋರಾಟ ನಡೆಸಿದ್ದ ವಿರಾಟ್ ಕೊಹ್ಲಿ 67 ಎಸೆತಗಳಲ್ಲಿ ಶತಕ ಸಿಡಿಸಿದರೆ, ಒಟ್ಟಾರೆ 72 ಎಸೆತಗಳಿಂದ 12 ಬೌಂಡರಿ ಹಾಗೂ 4 ಸಿಕ್ಸರ್ ನೆರವಿನಿಂದ ಅಜೇಯ 113 ರನ್ ದಾಖಲಿಸಿದರು.

    ಐಪಿಎಲ್‌ನಲ್ಲಿ ನಿಧಾನಗತಿಯ ಶತಕ ಸಿಡಿಸಿದ ಪ್ಲೇಯರ್ಸ್‌:
    * ವಿರಾಟ್ ಕೊಹ್ಲಿ: 67 ಎಸೆತಗಳು Vs ರಾಜಸ್ಥಾನ್ ರಾಯಲ್ಸ್, 2024
    * ಮನೀಶ್ ಪಾಂಡೆ: 67 ಎಸೆತಗಳು Vs ಡೆಕ್ಕನ್ ಚಾರ್ಜರ್ಸ್, 2009
    * ಸಚಿನ್ ತೆಂಡೂಲ್ಕರ್: 66 ಎಸೆತಗಳು Vs ವಿರುದ್ಧ ಕೊಚ್ಚಿ ಟಸ್ಕರ್ಸ್ ಕೇರಳ, 2011
    * ಡೇವಿಡ್ ವಾರ್ನರ್: 66 ಎಸೆತಗಳು Vs ಕೆಕೆಆರ್‌, 2010
    * ಜೋಸ್ ಬಟ್ಲರ್: 66 ಎಸೆತಗಳು Vs ಮುಂಬೈ ಇಂಡಿಯನ್ಸ್‌, 2022
    * ಕೆವಿನ್ ಪೀಟರ್ಸನ್: 64 ಎಸೆತಗಳು Vs ಡೆಕ್ಕನ್ ಚಾರ್ಜರ್ಸ್, 2012

  • ಐಪಿಎಲ್‌ ಇತಿಹಾಸದಲ್ಲೇ ನಿಧಾನಗತಿ ಶತಕ – ಆರ್‌ಸಿಬಿಗೆ ಕೊಹ್ಲಿನೇ ವಿಲನ್‌ ಆದ್ರಾ?

    ಐಪಿಎಲ್‌ ಇತಿಹಾಸದಲ್ಲೇ ನಿಧಾನಗತಿ ಶತಕ – ಆರ್‌ಸಿಬಿಗೆ ಕೊಹ್ಲಿನೇ ವಿಲನ್‌ ಆದ್ರಾ?

    ಜೈಪುರ: 2024ರ ಐಪಿಎಲ್ ಟೂರ್ನಿಯ ರಾಜಸ್ಥಾನ್ ರಾಯಲ್ಸ್ (Rajasthan Royals) ವಿರುದ್ಧದ ಪಂದ್ಯದಲ್ಲಿ ರಾಯಲ್‌ ಚಾಜೆಂಜರ್ಸ್‌ ಬೆಂಗಳೂರು ತಂಡದ ಸ್ಟಾರ್‌ ಬ್ಯಾಟರ್‌ ವಿರಾಟ್‌ ಕೊಹ್ಲಿ (Virat Kohli) ಅವರು ದಾಖಲೆಯ 8ನೇ ಶತಕ ಸಿಡಿಸಿದರು. ಅಲ್ಲದೇ ಐಪಿಎಲ್‌ನಲ್ಲಿ 7,500 ರನ್‌ ಪೂರೈಸಿದ ಮೊದಲ ಆಟಗಾರ ಮೈಲುಗಲ್ಲನ್ನೂ ಸ್ಥಾಪಿಸಿದರು. ಆದ್ರೆ ಈಗ ಆರ್‌ಸಿಬಿ ತಂಡದ ಸೋಲಿಗೆ ಕೊಹ್ಲಿ ಅವರನ್ನು ಹೊಣೆ ಮಾಡಲಾಗಿದೆ.

    ಶನಿವಾರ ಸವಾಯ್‌ ಮಾನ್ಸಿಂಗ್‌ ಕ್ರೀಂಡಾಗಣದಲ್ಲಿ ನಡೆದ ಪಂದ್ಯದಲ್ಲಿ ವಿರಾಟ್‌ ಕೊಹ್ಲಿ ಅವರು ಗಳಿಸಿದ ನಿಧಾನಗತಿಯ ಶತಕವೇ ಆರ್‌ಸಿಬಿ (RCB) ತಂಡದ ಸೋಲಿಗೆ ಕಾರಣ ಎಂದು ನೆಟ್ಟಿಗರು ದೂಷಿಸಿದ್ದಾರೆ.

    ಹೌದು. ಆರ್‌ಸಿಬಿ ಪರ ಅಂತಿಮ ಎಸೆತದವರೆಗೂ ಏಕಾಂಗಿ ಹೋರಾಟ ನಡೆಸಿದ್ದ ವಿರಾಟ್ ಕೊಹ್ಲಿ 67 ಎಸೆತಗಳಲ್ಲಿ ಶತಕ ಸಿಡಿಸಿದರೆ, ಒಟ್ಟಾರೆ 72 ಎಸೆತಗಳಿಂದ 12 ಬೌಂಡರಿ ಹಾಗೂ 4 ಸಿಕ್ಸರ್ ನೆರವಿನಿಂದ ಅಜೇಯ 113 ರನ್ ದಾಖಲಿಸಿದರು. ಆದ್ರೆ ಕೊಹ್ಲಿ ಅವರ ಈ ಶತಕವು ಐಪಿಎಲ್ ಇತಿಹಾಸದಲ್ಲೇ ಅತ್ಯಂತ ನಿಧಾನಗತಿಯ ಶತಕವಾಗಿತ್ತು. ಅಲ್ಲದೇ 20 ಓವರ್‌ಗಳ ಇನ್ನಿಂಗ್ಸ್‌ನಲ್ಲಿ ಬರೋಬ್ಬರಿ 12 ಓವರ್‌ಗಳನ್ನು ಒಬ್ಬರೇ ಎದುರಿಸಿದರು. ಹಿಂದಿನ ಕೆಕೆಆರ್‌ ವಿರುದ್ಧ ನಡೆದ ಪಂದ್ಯದಲ್ಲೂ ಕೊಹ್ಲಿ 59 ಎಸೆತಗಳನ್ನ ಎದುರಿಸಿ ಕೇವಲ 83 ರನ್‌ (4 ಬೌಂಡರಿ, 4 ಸಿಕ್ಸರ್‌) ಕಲೆಹಾಕಿದ್ದರು. ಕೊಹ್ಲಿ ಅವರ ನಿಧಾನಗತಿಯ ಬ್ಯಾಟಿಂಗ್‌ನಿಂದಲೇ ತಂಡ ಸೋಲಿಗೆ ತುತ್ತಾಯಿತು ಎಂದು ನೆಟ್ಟಿಗರು ಅಸಮಾಧಾನ ಹೊರಹಾಕಿದ್ದಾರೆ.

    ಆರ್‌ಸಿಬಿ ಮೊದಲ ವಿಕೆಟ್‌ಗೆ 14 ಓವರ್‌ಗಳಲ್ಲಿ 125 ರನ್‌ ಗಳಿಸಿತ್ತು. ದಿನೇಶ್‌ ಕಾರ್ತಿಕ್‌, ಮಹಿಪಾಲ್‌ ಲೊಮ್ರೋರ್‌, ಅನೂಜ್‌ ರಾವತ್‌ ನಂತಹ ಸ್ಪೋಟಕ ಆಟಗಾರರ ವಿಕೆಟ್‌ಗಳಿದ್ದವು. ಆದ್ರೆ ಕ್ರೀಸ್‌ ಬಿಟ್ಟುಕೊಡದ ಕೊಹ್ಲಿ ನಿಧಾನಗತಿಯ ಬ್ಯಾಟಿಂಗ್‌ ಅನ್ನೇ ಮುಂದುವರಿಸಿದರು. ಇದು ತಂಡದ ಬೃಹತ್‌ ಮೊತ್ತದ ಮೇಲೆ ಭಾರೀ ಪರಿಣಾಮ ಬೀರಿತು. ಇದರಿಂದಾಗಿ ಕೊಹ್ಲಿ ಅವರ ನಿಧಾನಗತಿಯ ಬ್ಯಾಟಿಂಗ್‌ ಸೋಲಿಗೆ ಕಾರಣ ಎಂದು ನೆಟ್ಟಿಗರು ದೂಷಿಸಿದ್ದಾರೆ. ಆದ್ರೆ ನಾಯಕ ಡುಪ್ಲೆಸಿಸ್‌ ಹೊರತುಪಡಿಸಿ ಉಳಿದ ಅಗ್ರ ಕ್ರಮಾಂಕದ ಬ್ಯಾಟರ್‌ಗಳು ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ. ಕೊಹ್ಲಿ ಅವರೇ ಏಕಾಂಗಿ ಹೋರಾಟ ನಡೆಸಿದ್ದಾರೆ ಎಂದು ಕೊಹ್ಲಿಯನ್ನ ಕೆಲವರು ಬೆಂಬಲಿಸಿದ್ದಾರೆ.

    ಐಪಿಎಲ್‌ನಲ್ಲಿ ನಿಧಾನಗತಿಯ ಶತಕ ಸಿಡಿಸಿದ ಪ್ಲೇಯರ್ಸ್‌:
    * ವಿರಾಟ್ ಕೊಹ್ಲಿ: 67 ಎಸೆತಗಳು Vs ರಾಜಸ್ಥಾನ್ ರಾಯಲ್ಸ್, 2024
    * ಮನೀಶ್ ಪಾಂಡೆ: 67 ಎಸೆತಗಳು Vs ಡೆಕ್ಕನ್ ಚಾರ್ಜರ್ಸ್, 2009
    * ಸಚಿನ್ ತೆಂಡೂಲ್ಕರ್: 66 ಎಸೆತಗಳು Vs ವಿರುದ್ಧ ಕೊಚ್ಚಿ ಟಸ್ಕರ್ಸ್ ಕೇರಳ, 2011
    * ಡೇವಿಡ್ ವಾರ್ನರ್: 66 ಎಸೆತಗಳು Vs ಕೆಕೆಆರ್‌, 2010
    * ಜೋಸ್ ಬಟ್ಲರ್: 66 ಎಸೆತಗಳು Vs ಮುಂಬೈ ಇಂಡಿಯನ್ಸ್‌, 2022
    * ಕೆವಿನ್ ಪೀಟರ್ಸನ್: 64 ಎಸೆತಗಳು Vs ಡೆಕ್ಕನ್ ಚಾರ್ಜರ್ಸ್, 2012

    ಐಪಿಎಲ್‌ನಲ್ಲಿ ಹೆಚ್ಚು ಶತಕ ಸಿಡಿಸಿದ ಟಾಪ್‌-5 ಪ್ಲೇಯರ್ಸ್‌
    * ವಿರಾಟ್‌ ಕೊಹ್ಲಿ – 8
    * ಕ್ರಿಸ್‌ ಗೇಲ್‌ – 6
    * ಜೋಸ್‌ ಬಟ್ಲರ್‌ – 6
    * ಕೆ.ಎಲ್‌ ರಾಹುಲ್‌ – 4
    * ಶೇನ್‌ ವಾಟ್ಸನ್‌ – 4

  • 17ನೇ ಆವೃತ್ತಿ ಐಪಿಎಲ್‌ನ ಚೊಚ್ಚಲ ಶತಕ – ರನ್‌ ಮಿಷಿನ್‌ ಕೊಹ್ಲಿಯ ಹೊಸ ಮೈಲುಗಲ್ಲು!

    17ನೇ ಆವೃತ್ತಿ ಐಪಿಎಲ್‌ನ ಚೊಚ್ಚಲ ಶತಕ – ರನ್‌ ಮಿಷಿನ್‌ ಕೊಹ್ಲಿಯ ಹೊಸ ಮೈಲುಗಲ್ಲು!

    ಜೈಪುರ: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಸ್ಟಾರ್‌ ಬ್ಯಾಟರ್‌ ವಿರಾಟ್‌ ಕೊಹ್ಲಿ (Virat Kohli) ಅಮೋಘ ಶತಕ ಸಿಡಿಸುವ ಮೂಲಕ ಐಪಿಎಲ್‌ನಲ್ಲಿ (IPL 2024) ಮತ್ತೊಂದು ಮೈಲುಗಲ್ಲು ಸಾಧಿಸಿದ್ದಾರೆ.

    ಇಲ್ಲಿನ ಸವಾಯಿ ಮಾನ್ಸಿಂಗ್ ಸ್ಟೇಡಿಯಂನಲ್ಲಿ ರಾಜಸ್ಥಾನ್‌ ರಾಯಲ್ಸ್‌ (Rajasthan Royals) ವಿರುದ್ಧ ನಡೆದ ಪಂದ್ಯದಲ್ಲಿ ಕೊಹ್ಲಿ, ಐಪಿಎಲ್‌ನಲ್ಲಿ ತಮ್ಮ 8ನೇ ಶತಕ ಸಿಡಿಸಿದ್ದಾರೆ. ಅಲ್ಲದೇ 17ನೇ ಆವೃತ್ತಿಯಲ್ಲಿ ದಾಖಲಾದ ಚೊಚ್ಚಲ ಶತಕವೂ ಇದಾಗಿದೆ. ಪ್ರಸ್ತುತ ಟೂರ್ನಿಯ ಆರೆಂಜ್‌ ಕ್ಯಾಪ್‌ ರೇಸ್‌ನಲ್ಲಿ ಮೊದಲ ಸ್ಥಾನದಲ್ಲಿರುವ ಕೊಹ್ಲಿ, ಐಪಿಎಲ್‌ನಲ್ಲಿ ಒಟ್ಟು 7579 ರನ್‌ ಪೂರೈಸಿದ್ದಾರೆ. ಈ ಮೂಲಕ ಇಡೀ ಐಪಿಎಲ್‌ ಆವೃತ್ತಿಯಲ್ಲೇ ಅತಿಹೆಚ್ಚು ರನ್‌ ಸಿಡಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

    ಆರೆಂಜೆ ಕ್ಯಾಪ್‌ ರೇಸ್‌ನಲ್ಲಿರುವ ಟಾಪ್‌-5 ಆಟಗಾರರು:
    * ವಿರಾಟ್‌ ಕೊಹ್ಲಿ – 316 ರನ್‌ – 5 ಪಂದ್ಯ
    * ರಿಯಾನ್‌ ಪರಾಗ್‌ – 181 ರನ್‌ – 4 ಪಂದ್ಯ
    * ಹೆನ್ರಿಕ್‌ ಕ್ಲಾಸೆನ್‌ – 177 ರನ್‌ – 4 ಪಂದ್ಯ
    * ಶುಭಮನ್‌ ಗಿಲ್‌ – 164 ರನ್‌ – 4 ಪಂದ್ಯ
    * ಅಭಿಷೇಕ್‌ ಶರ್ಮಾ – 161 ರನ್‌ – 4 ಪಂದ್ಯ

    ಐಪಿಎಲ್‌ನಲ್ಲಿ ಹೆಚ್ಚು ಶತಕ ಸಿಡಿಸಿದ ಟಾಪ್‌-5 ಪ್ಲೇಯರ್ಸ್‌
    * ವಿರಾಟ್‌ ಕೊಹ್ಲಿ – 8
    * ಕ್ರಿಸ್‌ ಗೇಲ್‌ – 6
    * ಜೋಸ್‌ ಬಟ್ಲರ್‌ – 5
    * ಕೆ.ಎಲ್‌ ರಾಹುಲ್‌ – 4
    * ಶೇನ್‌ ವಾಟ್ಸನ್‌ – 4

    ಐಪಿಎಲ್‌ನ ಟಾಪ್‌-5 ಸ್ಕೋರರ್‌
    * ವಿರಾಟ್‌ ಕೊಹ್ಲಿ – 7,579 ರನ್‌
    * ಶಿಖರ್‌ ಧವನ್‌ – 6,755 ರನ್‌
    * ಡೇವಿಡ್‌ ವಾರ್ನರ್‌ – 6,545 ರನ್‌
    * ರೋಹಿತ್‌ ಶರ್ಮಾ – 6,280 ರನ್‌
    * ಸುರೇಶ್‌ ರೈನಾ – 5,528 ರನ್‌