Tag: Uttra Pradesh

  • ತಾಯಿ ಮದ್ವೆಗೆ ಕರೆದುಕೊಂಡು ಹೋಗದ್ದಕ್ಕೆ ನೇಣಿಗೆ ಶರಣಾದ 8ರ ಬಾಲಕಿ

    ತಾಯಿ ಮದ್ವೆಗೆ ಕರೆದುಕೊಂಡು ಹೋಗದ್ದಕ್ಕೆ ನೇಣಿಗೆ ಶರಣಾದ 8ರ ಬಾಲಕಿ

    ಲಕ್ನೋ: ಅಮ್ಮ ಮದುವೆಗೆ ನನ್ನನ್ನು ಬಿಟ್ಟು ಹೋದಳು ಎಂದು ಕೋಪಗೊಂಡ 8 ವರ್ಷದ ಬಾಲಕಿಯೊಬ್ಬಳು ಫ್ಯಾನ್‍ಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಮುಜಾಫರ್ ನಗರದಲ್ಲಿ ನಡೆದಿದೆ.

    ಸಂಬಂಧಿಯೊಬ್ಬರ ಮದುವೆಗೆಂದು ತಾಯಿ ಹೊರಟಿದ್ದಳು. ಆಗ ತನ್ನ ಎಂಟು ವರ್ಷದ ಮಗಳನ್ನು ಮನೆಯಲ್ಲೇ ಬಿಟ್ಟು ಆಕೆಯ ತಮ್ಮನನ್ನು ಕರೆದುಕೊಂಡು ಹೋಗಿದ್ದಾಳೆ. ಬಾಲಕಿ ತಾನು ಬರುವುದಾಗಿ ವಿಪರೀತ ಹಠ ಮಾಡಿದ್ದರೂ ತಾಯಿ ಈಕೆಯನ್ನು ಮನೆಯಲ್ಲಿಯೇ ಬಿಟ್ಟು ಮದುವೆಗೆ ಹೋಗಿದ್ದಾಳೆ.

    ಮದುವೆ ಮುಗಿಸಿದ ಬಾಲಕಿಯ ತಾಯಿ ಮನೆಗೆ ಬಂದು ಮನೆಯ ಬಾಗಿಲನ್ನು ತಟ್ಟಿದ್ದಾಳೆ. ಆದರೆ ಬಾಲಕಿ ಬಾಗಿಲನ್ನು ತೆರೆದಿಲ್ಲ. ಅನುಮಾನದಿಂದ ಬಾಲಕಿ ತಾಯಿ ನೆರೆಹೊರೆಯವರನ್ನು ಕರೆದು ಬಾಗಿಲು ತೆರೆಯುವಂತೆ ಕೇಳಿಕೊಂಡಿದ್ದಾಳೆ. ಬಾಗಿಲನ್ನು ಒಡೆದು ನೋಡಿದ್ದಾಗ ಮಗಳು ಶವವಾಗಿ ನೇಣಿನ ಕುಣಿಕೆಯಲ್ಲಿ ನೇತಾಡುತ್ತಿರುವ ದೃಶ್ಯ ತಾಯಿಯ ಕಣ್ಣಿಗೆ ಕಂಡಿದೆ.

    ಅಮ್ಮ ಮದುವೆಗೆ ನನ್ನ ಬಿಟ್ಟು ತಮ್ಮನ್ನನ್ನು ಕರೆದುಕೊಂಡು ಹೋಗಿದ್ದಾಳೆ. ನನ್ನನ್ನು ಕರೆದು ಕೊಂಡು ಹೋಗಲಿಲ್ಲ ಎಂದು ಕೋಪಗೊಂಡು ಬಾಲಕಿ ಫ್ಯಾನ್‍ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದು ಶಂಕಿಸಲಾಗಿದೆ.

    ಘಟನಾ ಸ್ಥಳಕ್ಕೆ ಹೋಗುವ ಮೊದಲೇ ಬಾಲಕಿಯ ಅಂತ್ಯ ಸಂಸ್ಕಾರವನ್ನು ಮಾಡಿ ಮುಗಿಸಲಾಗಿತ್ತು ಎಂದು ಸ್ಟೇಷನ್ ಹೌಸ್ ಆಫೀಸರ್ (ಎಸ್‍ಎಚ್‍ಒ) ಧಮೇರ್ಂದ್ರ ಸಿಂಗ್ ತಿಳಿಸಿದ್ದಾರೆ.

  • ಮೆಗಾ ರೋಡ್‍ಶೋ ಬಳಿಕ ಮೋದಿಯಿಂದ ಗಂಗಾರತಿ

    ಮೆಗಾ ರೋಡ್‍ಶೋ ಬಳಿಕ ಮೋದಿಯಿಂದ ಗಂಗಾರತಿ

    ವಾರಣಾಸಿ: ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಸಂಜೆ ವಾರಣಾಸಿಯಲ್ಲಿ ಮೆಗಾ ರೋಡ್ ಶೋ ನಡೆಸಿದ ಬಳಿಕ ರಾತ್ರಿ 8 ಗಂಟೆಯ ವೇಳೆಗೆ ಕಾಶಿಯ ದಶಾಶ್ವಮೇಧ ಘಾಟ್‍ನಲ್ಲಿ ಗಂಗಾರತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಈ ವೇಳೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಉಪಸ್ಥಿತರಿದ್ದರು.

    ಬನಾರಸ್ ಹಿಂದೂ ವಿವಿಗೆ ತೆರಳಿ ಪಂಡಿತ್ ಮದನ್ ಮೋಹನ್ ಮಾಳವೀಯ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ಕಾಶಿಯ ಬೀದಿಗಳಲ್ಲಿ ಕೇಸರಿ ಕಹಳೆಯೊಂದಿಗೆ ಮೋದಿ 6 ಕಿ.ಮೀ ಮಹಾ ರೋಡ್ ಶೋ ನಡೆಸಿ ಗಂಗೆಯ ತಟಕ್ಕೆ ಆಗಮಿಸಿದರು.

    ರೋಡ್ ಶೋ ವೇಳೆ ಲಂಕಾ ಘಾಟ್, ಅಸ್ಸಿ ಘಾಟ್, ಸೋನಾರ್‍ಪುರ, ಮದನಪುರ್ ಮಾರ್ಗವಾಗಿ ಸಾಗಿದ ಮೆರವಣಿಗೆಯ ರಸ್ತೆಯ ಇಕ್ಕೆಲ್ಲಗಳಲ್ಲೂ ಪುಷ್ಪವೃಷ್ಟಿ ಆಯಿತು. ಕಣ್ಣು ಹಾಯಿಸಿದ ದೂರವೂ ಜಮಾಯಿಸಿ ತಮ್ಮ ಪ್ರೀತಿ, ಅಭಿಮಾನವನ್ನು ಲಕ್ಷಾಂತರ ಅಭಿಮಾನಿಗಳು ತೋರಿಸಿದರು. ಎಲ್ಲ ಕಡೆ “ಹರ್ ಹರ್ ಮೋದಿ, ಘರ್ ಘರ್ ಮೋದಿ” ಜೈಕಾರ ಕೇಳಿಸುತಿತ್ತು.

    ಗಂಗಾರತಿ ವಿಶೇಷತೆ ಏನು?
    ಭೂಲೋಕದಲ್ಲಿ ಎಲ್ಲಿ ನೆಲೆಸಲು ಬಯಸ್ತೀಯಾ ಎಂದು ಶಿವ ಕೇಳಿದಾಗ, ಪವಿತ್ರ ಪರಿಶುದ್ಧ ಪಾವನೆ ಗಂಗೆಯ ತಟವಾದ ವಾರಾಣಸಿಯನ್ನು ಪಾರ್ವತಿ ಆಯ್ಕೆ ಮಾಡಿಕೊಂಡು ಎಂದು ಪುರಾಣ ಹೇಳುತ್ತದೆ.

    ಮೂರು ಜನ್ಮಗಳ ಪಾಪ ಕಳೆದುಕೊಳ್ಳಲು ಗಂಗಾರತಿ ಪೂಜೆ ಮಾಡಲಾಗುತ್ತದೆ. ಪಂಚಭೂತಗಳ ಸಂಕೇತವಾಗಿ ಈ ಆರತಿ ನಡೆಯುತ್ತದೆ. ಒಂದು ಕಡೆ 5 ಅರ್ಚಕರು, ಇನ್ನೊಂದು ಕಡೆ 7 ಅರ್ಚಕರು ಆರತಿ ಮಾಡುತ್ತಾರೆ. ಸಪ್ತ ಋಷಿಗಳು ಗಂಗಾರತಿ ಮಾಡಿದ್ದರು ಎನ್ನುವುದರ ಪ್ರತೀಕವಾಗಿ 7 ಆರತಿ ಮಾಡಲಾಗುತ್ತದೆ. ಸಾವಿರಾರು ವರ್ಷಗಳಿಂದ ವಂಶಪಾರಂಪರ್ಯವಾಗಿ ನಡೆದುಕೊಂಡು ಬಂದ ಪದ್ಧತಿ ಇದಾಗಿದೆ.

    ಗುರುವಾರ ರಾತ್ರಿ ವಾರಣಾಸಿಯಲ್ಲಿ ವಾಸ್ತವ್ಯ ಹೂಡಲಿರುವ ಪ್ರಧಾನಿ ಮೋದಿ ಶುಕ್ರವಾರ ಬೆಳಗ್ಗೆ ನಾಮಪತ್ರ ಪತ್ರ ಸಲ್ಲಿಸಲ್ಲಿದ್ದಾರೆ. ಬೆಳಗ್ಗೆ 9.30ಕ್ಕೆ ಬೂತ್ ಮಟ್ಟದ ಕಾರ್ಯಕರ್ತರ ಉದ್ದೇಶಿಸಿ ಭಾಷಣ ಮಾಡಿದ ಬಳಿಕ ಬೆಳಗ್ಗೆ 11.30 ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. ನಾಮಪತ್ರ ಸಲ್ಲಿಕೆಯ ವೇಳೆ ನಿತಿಶ್ ಕುಮಾರ್, ಉದ್ಧವ್ ಠಾಕ್ರೆ, ಅಣ್ಣಾಡಿಎಂಕೆಯ ನಾಯಕರು ಸೇರಿದಂತೆ ಎನ್‍ಡಿಎ ಮಿತ್ರಪಕ್ಷಗಳ ಮುಖಂಡರು ಸಾಥ್ ನೀಡಲಿದ್ದಾರೆ.

  • ನಿಮ್ಮ ಸಂಪುಟದ ಮುಸ್ಲಿಂ ಸಚಿವರ ಹೆಸರನ್ನೂ ಬದಲಾಯಿಸ್ತಿರಾ: ಯೋಗಿ ಆದಿತ್ಯನಾಥ್ ಗೆ ಸಚಿವರಿಂದಲೇ ಪ್ರಶ್ನೆ

    ನಿಮ್ಮ ಸಂಪುಟದ ಮುಸ್ಲಿಂ ಸಚಿವರ ಹೆಸರನ್ನೂ ಬದಲಾಯಿಸ್ತಿರಾ: ಯೋಗಿ ಆದಿತ್ಯನಾಥ್ ಗೆ ಸಚಿವರಿಂದಲೇ ಪ್ರಶ್ನೆ

    ನವದೆಹಲಿ: ದೇಶದ ಪ್ರಮುಖ ನಗರಗಳ ಹೆಸರನ್ನು ಬದಲಾಯಿಸಲು ಬಿಜೆಪಿಯವರು ಮುಂದಾಗುತ್ತಿದ್ದಾರೆ. ಈ ಕುರಿತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮೈತ್ರಿ ಪಕ್ಷದ ಸಚಿವ ಓಂ ಪ್ರಕಾಶ್ ರಾಜ್‍ಭಾರ್ ಕಿಡಿಕಾರಿದ್ದಾರೆ.

    ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಮೊಘಲರು ಅನೇಕ ಪಟ್ಟಣಗಳ ಹೆಸರನ್ನು ಬದಲಾಯಸಿದ್ದಾರೆ ಎನ್ನುವುದು ಬಿಜೆಪಿಯವರ ವಾದವಾಗಿದೆ. ಈಗ ಅವುಗಳಿಗೆ ಪೂರ್ವದ ಹೆಸರನ್ನು ಇಡುತ್ತಿದ್ದೇವೆ ಎನ್ನುತ್ತಿದ್ದಾರೆ. ಹಾಗಾದರೆ ಅವರು ರಾಷ್ಟ್ರೀಯ ಬಿಜೆಪಿ ವಕ್ತಾರ ಶಾನವಾಜ್ ಹುಸೇನ್, ಕೇಂದ್ರ ಸಚಿವ ಮುಕ್ತರ್ ಅಬ್ಬಾಸ್ ನಕ್ವಿ, ಉತ್ತರ ಪ್ರದೇಶದ ಸಚಿವ ಮೋಸಿನ್ ರಾಜ್ ಅವರ ಹೆಸರನ್ನು ಬದಲಾಯಿಸುತ್ತಾರಾ ಎಂದು ಪ್ರಶ್ನಿಸಿ ಕಿಡಿಕಾರಿದ್ದಾರೆ.

    ಹಿಂದುಳಿದ ಹಾಗೂ ತುಳಿತಕ್ಕೆ ಒಳಗಾದ ಜನರಿಂದ ಮತ ಗಿಟ್ಟಿಸಿಕೊಳ್ಳಲು ಹೀಗೆ ಮಾಡಲಾಗುತ್ತಿದೆ. ಮುಸ್ಲಿಂ ರಾಜ ಮನೆತನಗಳು ಕೊಡುಗೆ ನೀಡಿದಷ್ಟು ಉಳಿದವರು ನೀಡಿಲ್ಲ. ನಾವು ಓಡಾಡುವ ಜಿ.ಟಿ.ರಸ್ತೆ, ಕೆಂಪುಕೋಟೆ, ತಾಜ್ ಮಹಲ್ ನಿರ್ಮಿಸಿದ್ದು ಯಾರು ಎಂದು ಪ್ರಶ್ನಿಸಿ ಕುಟುಕಿದ್ದಾರೆ.

    ಅಲಹಾಬಾದ್ ಅನ್ನು ಪ್ರಯಾಗರಾಜ್ ಎಂದು, ಫೈಜಿಯಾಬಾದ್ ಅನ್ನು ಶ್ರೀ ಅಯ್ಯೋಧ್ಯ ಅಂತಾ ಹೆಸರು ಬದಲಾಯಿಸಲಾಗುತ್ತಿದೆ. ಇದೇ ರೀತಿ, ಅಹಮದಾಬಾದ್, ಔರಂಗಾಬಾದ್, ಹೈದರಾಬಾದ್ ಮತ್ತು ಆಗ್ರಾ ನಗರಗಳ ಹೆಸರು ಬದಲಾಯಿಸಲು ಬೇಡಿಕೆಗಳು ಕೇಳಿಬಂದಿದ್ದು, ಇದಕ್ಕೆ ಬಿಜೆಪಿ ನಾಯಕರು ಸಾಥ್ ನೀಡುತ್ತಿದ್ದಾರೆ ಎಂದು ಗುಡುಗಿದರು.

    ಆಗ್ರಾ ನಗರವನ್ನು ಅಗ್ರವನ ಅಂತಾ ಮರು ನಾಮಕರಣ ಮಾಡಬೇಕು ಎಂದು ಬಿಜೆಪಿ ಶಾಸಕ ಜಗನ್ ಪ್ರಸಾದ್ ಗರ್ಗ್ ಯೋಗಿ ಆದಿತ್ಯನಾಥ್ ಅವರಿಗೆ ಪತ್ರ ಬರೆದಿದ್ದಾರೆ. ಅಗ್ರವನ ಮಹಾಭಾರತದ ಹೆಸರು. ಅದನ್ನು ಮೊಗಲ್ ಅರಸ ಅಕ್ಬರ್ ಬಲಾಯಿಸಿ ಆಗ್ರಾ ಎಂದು ಕರೆಯುವಂತೆ ಸೂಚಿಸಿದ. ಹೀಗಾಗಿ ಆಗ್ರಾ ನಗರಕ್ಕೆ ಮೂಲ ಹೆಸರನ್ನು ಇಡಬೇಕು ಅಂತಾ ಪತ್ರದಲ್ಲಿ ಜಗನ್ ಪ್ರಸಾದ್ ಗರ್ಗ್ ತಿಳಿಸಿದ್ದಾರೆ ಎಂದು ಸಚಿವರು ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews