ಡೆಹ್ರಾಡೂನ್: ಉತ್ತರಕಾಶಿಯಿಂದ (Uttarkashi) ಗಂಗ್ನಾನಿಗೆ (Gangnani) ತೆರಳುವ ಮಾರ್ಗದಲ್ಲಿ ಭಾರಿ ಭೂಕುಸಿತ (Landslide) ಸಂಭವಿಸಿದ ಪರಿಣಾಮ ನೆತಾಲ ಬಳಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿದೆ.
ಸೋಮವಾರ ಬೆಳಗ್ಗೆ ಭೂಕುಸಿತ ಸಂಭವಿಸಿದ ಪರಿಣಾಮ ಮಣ್ಣು ರಸ್ತೆಗೆ ಬಿದ್ದು, ರಸ್ತೆ ಸಂಪೂರ್ಣ ದುಸ್ತರಗೊಂಡಿದೆ. ಈ ಹಿನ್ನೆಲೆ ಗಂಗ್ನಾನಿ ಪ್ರವೇಶ ಕಡಿತಗೊಂಡಿದೆ. ರಸ್ತೆಗೆ ಬಿದ್ದಿರುವ ಭಾರೀ ಪ್ರಮಾಣದ ಮಣ್ಣು ಹಾಗೂ ಅವಶೇಷಗಳನ್ನು ತೆಗೆದು ಸಂಚಾರವನ್ನು ಪುನಃಸ್ಥಾಪಿಸಲು ಜೆಸಿಬಿಗಳನ್ನು ನಿಯೋಜಿಸಲಾಗಿದೆ. ಆದಷ್ಟು ಬೇಗ ರಸ್ತೆಯನ್ನು ತೆರವುಗೊಳಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ರಾಹುಲ್, ಪ್ರಿಯಾಂಕಾ ಗಾಂಧಿ ಸೇರಿ 30 ಸಂಸದರು ಪೊಲೀಸರ ವಶಕ್ಕೆ
ಉತ್ತರಕಾಶಿ ಜಿಲ್ಲೆಯಾದ್ಯಂತ ಹಗುರದಿಂದ ಸಾಧಾರಣ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ಸಂಜೆ ಮತ್ತು ರಾತ್ರಿಯ ವೇಳೆಗೆ ಸಾಧಾರಣದಿಂದ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಮುಂದಿನ ಆರು ಗಂಟೆಗಳ ಒಳಗೆ ಮೋಡ ಕವಿದ ವಾತಾವರಣದೊಂದಿಗೆ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇದನ್ನೂ ಓದಿ: ಸೇನೆ ಸೇರಲು ಸ್ವದೇಶಿ ನಿರ್ಮಿತ ಉದಯಗಿರಿ, ಹಿಮಗಿರಿ ಯುದ್ಧ ನೌಕೆಗಳು ಸಿದ್ಧ; ನೌಕಾಪಡೆಗೆ ಇನ್ನಷ್ಟು ಬಲ
ಡೆಹ್ರಾಡೂನ್: ಉತ್ತರಾಖಂಡದ ( Uttarakhand) ಉತ್ತರಕಾಶಿಯಲ್ಲಿ (Uttarkashi) ಸಂಭವಿಸಿದ ಭೀಕರ ಮೇಘಸ್ಫೋಟದಲ್ಲಿ ಕೇರಳ (Kerala) ಮೂಲದ 28 ಪ್ರವಾಸಿಗರು (Tourists) ನಾಪತ್ತೆಯಾಗಿದ್ದಾರೆ ಎಂದು ನಾಪತ್ತೆಯಾದವರ ಕುಟುಂಬಸ್ಥರು ತಿಳಿಸಿದ್ದಾರೆ.
ಭೀಕರ ಪ್ರವಾಹದಲ್ಲಿ ನಾಪತ್ತೆಯಾದ 28 ಜನರ ಪೈಕಿ 20 ಮಂದಿ ಕೇರಳ ಮೂಲದವರಾಗಿದ್ದು, ಮಹಾರಾಷ್ಟ್ರದಲ್ಲಿ ನೆಲೆಸಿದ್ದರು. ಇನ್ನುಳಿದ 8 ಮಂದಿ ಕೇರಳದ ವಿವಿಧ ಜಿಲ್ಲೆಗಳ ನಿವಾಸಿಯಾಗಿದ್ದರು. ನಾಪತ್ತೆಯಾದವರಲ್ಲಿ ದಂಪತಿ ಕೂಡ ಇದ್ದರು. ಮೇಘಸ್ಫೋಟ ಸಂಭವಿಸುವ ಒಂದು ದಿನದ ಹಿಂದೆ ಅವರ ಮಗ ನಮಗೆ ಕೊನೆಯದಾಗಿ ಫೋನ್ ಮಾಡಿದ್ದರು. ಮರುದಿನ ಬೆಳಗ್ಗೆ 8:30ರ ಸುಮಾರಿಗೆ ಅವರು ಉತ್ತರಕಾಶಿಯಿಂದ ಗಂಗೋತ್ರಿಗೆ ಹೋಗುತ್ತಿದ್ದೇವೆ ಎಂದು ಹೇಳಿದ್ದರು. ಆ ಮಾರ್ಗದಲ್ಲಿ ಭೂಕುಸಿತ ಸಂಭವಿಸಿದೆ. ಬಳಿಕ ನಮಗೆ ಅವರನ್ನು ಸಂಪರ್ಕಿಸಲು ಸಾಧ್ಯವಾಗಿಲ್ಲ ಎಂದು ದಂಪತಿಯ ಸಂಬಂಧಿಯೊಬ್ಬರು ಹೇಳಿದ್ದಾರೆ. ಇದನ್ನೂ ಓದಿ: ಗುರುವಾರದಿಂದ ಲಾಲ್‌ಬಾಗ್‌ನಲ್ಲಿ 218ನೇ ಫಲಪುಷ್ಪ ಪ್ರದರ್ಶನ – ಹೂವಲ್ಲೇ ಕಿತ್ತೂರಿನ ಕೋಟೆ ಸೃಷ್ಟಿ
ಉತ್ತರಕಾಶಿಯ ಧರಾಲೀಯಲ್ಲಿ ಸಂಭವಿಸಿದ ಮೇಘಸ್ಫೋಟದಿಂದ ಪ್ರವಾಹದಲ್ಲಿ ಸಿಲುಕಿಕೊಂಡವರ ರಕ್ಷಣಾ ಕಾರ್ಯವನ್ನ ಭಾರತೀಯ ಸೇನೆ, ಐಟಿಬಿಪಿ ಹಾಗೂ ಎನ್‌ಡಿಆರ್‌ಎಫ್ ತಂಡಗಳು ಆರಂಭಿಸಿವೆ. ಭಾರೀ ಮಳೆಯ ನಡುವೆಯೂ 150 ಮಂದಿಯನ್ನ ರಕ್ಷಿಸಲಾಗಿದೆ. ಇನ್ನೂ 150ಕ್ಕೂ ಹೆಚ್ಚುಮಂದಿಯನ್ನು ಪ್ರವಾಹಪೀಡಿತ ಸ್ಥಳದಿಂದ ರಕ್ಷಿಸಲಾಗಿದೆ. ಅಲ್ಲದೇ ಪ್ರವಾಹದಿಂದಾಗಿ ಈವರೆಗೆ ಐವರು ಸಾವನ್ನಪ್ಪಿರುವುದು ದೃಢವಾಗಿದೆ. ಐವರ ಮೃಹದೇಹಗಳನ್ನೂ ಹೊರತೆಗೆಯಲಾಗಿದೆ. ಇದನ್ನೂ ಓದಿ: ಕಾಂಗ್ರೆಸ್ ಸಂಸದೆ ಸರ ಕಳವು ಪ್ರಕರಣ – ಆರೋಪಿಯನ್ನು ಬಂಧಿಸಿದ ದೆಹಲಿ ಪೊಲೀಸ್
ಕಲಬುರಗಿ: ಉತ್ತರಾಖಂಡದಲ್ಲಿ (Uttarakhand) ಉಂಟಾದ ಪ್ರವಾಹದಿಂದ ಇದೀಗ ಅಲ್ಲಿಗೆ ತೆರಳಿದ ಕನ್ನಡಿಗರು ಸಹ ಸಂಕಷ್ಟಕ್ಕೆ ಸಿಲುಕಿರುವ ಸಾಧ್ಯತೆ ಹಿನ್ನೆಲೆ ಅವರ ಸಹಾಯಕ್ಕಾಗಿ ಕಲಬುರಗಿ (Kalaburagi) ಜಿಲ್ಲಾಡಳಿತ ಸಹಾಯವಾಣಿ ಕೇಂದ್ರ (Helpline) ಆರಂಭಿಸಿದೆ.
ಕಲಬುರಗಿ ಜಿಲ್ಲೆಯಿಂದ ಉತ್ತರಾಖಂಡದ ಉತ್ತರಕಾಶಿಗೆ (Uttarkashi) ಪ್ರವಾಸಕ್ಕೆ ತೆರಳಿ ಮೇಲ್ಕಂಡ ಘಟನೆಯಲ್ಲಿ ಸಿಲುಕಿಕೊಂಡಿದಲ್ಲಿ, ಅಂಥವರ ಮಾಹಿತಿಯನ್ನು ಸಂಬಂಧಿಸಿದವರು ಜಿಲ್ಲಾ ವಿಪತ್ತು ನಿಯಂತ್ರಣ ಕೊಠಡಿ ದೂರವಾಣಿ ಸಂಖ್ಯೆ 08472-278677 ಹಾಗೂ ಪೊಲೀಸ್ ಕಂಟ್ರೋಲ್ ಸಂಖ್ಯೆ 9480805500, 9480803500, 08472-263604, 228112ಗೆ ಕರೆ ಮಾಡಿ ಮಾಹಿತಿ ನೀಡಲು ಕೋರಿದೆ. ಇದನ್ನೂ ಓದಿ: ಉತ್ತರಕಾಶಿಯಲ್ಲಿ ಮೇಘಸ್ಫೋಟ – ಆರ್ಮಿ ಕ್ಯಾಂಪ್‌ನಲ್ಲಿದ್ದ 10ಕ್ಕೂ ಅಧಿಕ ಸೈನಿಕರು ನಾಪತ್ತೆ
ಬೆಂಗಳೂರು: ಉತ್ತರಾಖಂಡದ (Uttarakhand) ಸಹಸ್ರತಾಲ್‌ಗೆ ಚಾರಣಕ್ಕೆ ಹೋಗಿದ್ದಾಗ ಹವಾಮಾನ ವೈಪರೀತ್ಯದಿಂದಾಗಿ ಕರ್ನಾಟಕದ 9 ಚಾರಣಿಗರು (Bengaluru Trekkers) ಸಾವಿಗೀಡಾಗಿದ್ದಾರೆ. ಇನ್ನುಳಿದ 13 ಮಂದಿಯನ್ನು ರಕ್ಷಿಸಲಾಗಿದೆ. ಎಲ್ಲರೂ ಸುರಕ್ಷಿತವಾಗಿ ಬೆಂಗಳೂರಿಗೆ ವಾಪಸ್ ಆಗಿದ್ದಾರೆ.
ರಕ್ಷಿಸಲ್ಪಟ್ಟ ಚಾರಣಿಗರು ಬೆಂಗಳೂರು ವಿಮಾನ ನಿಲ್ದಾಣದ (Bengaluru Airport) ಟರ್ಮಿನಲ್ 1ಗೆ ಬಂದಿಳಿದಿದ್ದಾರೆ. ಚಾರಣಿಗರು ಇಂಡಿಗೋ ಏರ್‌ಲೈನ್ಸ್ ವಿಮಾನದಲ್ಲಿ ಸಚಿವ ಕೃಷ್ಣಬೈರೇಗೌಡ ಜೊತೆಗೆ ಬೆಂಗಳೂರಿಗೆ ಬಂದಿಳಿದಿದ್ದಾರೆ. ಇದನ್ನೂ ಓದಿ: ಹಿಮಗಾಳಿ ಬಳಿಕ ಎಲ್ಲೆಡೆ ಕಗ್ಗತ್ತಲು, ತಿಂದಿದ್ದು ಡ್ರೈಪ್ರೂಟ್ಸ್ ಮಾತ್ರ!
ಸಾವಿನ ಕೂಪದಂತಿದ್ದ ಸಹಸ್ರತಾಲ್‌ನ ಹಿಮದ ಹೊದಿಕೆಯಿಂದ ಬಚಾವಾಗಿ ಸಿಲಿಕಾನ್ ಸಿಟಿಗೆ ಬಂದಿಳಿದ ಚಾರಣಿಗರು ನಿಟ್ಟುಸಿರು ಬಿಟ್ಟಿದ್ದಾರೆ.
ಏನಾಗಿತ್ತು?
ರಾಜ್ಯದ 21 ಚಾರಣಿಗರು ಹಾಗೂ ಓರ್ವ ಗೈಡರ್ ಒಳಗೊಂಡ ತಂಡವು ಮೇ 28 ರಂದು ಟ್ರೆಕ್ಕಿಂಗ್‌ಗೆ ಉತ್ತಾರಖಂಡಕ್ಕೆ ಹೋಗಿತ್ತು. ಉತ್ತರಾಕಾಶಿಯಿಂದ 35 ಕಿಮೀ ದೂರದ ಅತ್ಯಂತ ಕಠಿಣ ಹಾದಿಯ ಸಹಸ್ರತಾಲ್ ಮಯಳಿ ಎಂಬ ಎತ್ತರದ ಪ್ರದೇಶದಲ್ಲಿ ಜೂ.4 ರಂದು ಬೆಳಗ್ಗೆ ಚಾರಣ ಆರಂಭಿಸಿದ್ದರು. ಚಾರಣದ ಗಮ್ಯಸ್ಥಾನ ತಲುಪಿ ನಂತರ ಶಿಬಿರಕ್ಕೆ ವಾಪಸ್ ಆಗುತ್ತಿದ್ದಾಗ ಮಧ್ಯಾಹ್ನದ ಹೊತ್ತಿಗೆ ಹಿಮಗಾಳಿಯಿಂದಾಗಿ ಚಾರಣಿಗರು ಅಪಾಯಕ್ಕೆ ಸಿಲುಕಿದರು. ಇದನ್ನೂ ಓದಿ: ಉತ್ತರಾಖಂಡ ದುರಂತ- ಬದುಕುಳಿದ ಚಾರಣಿಗರು ಇಂದು ರಾತ್ರಿ ಬೆಂಗ್ಳೂರಿಗೆ ವಾಪಸ್
ಭೀಕರ ಹಿಮಗಾಳಿಯಿಂದಾಗಿ ಕರ್ನಾಟಕದ 9 ಚಾರಣಿಗರು ದಾರುಣ ಸಾವನ್ನಪ್ಪಿದ್ದಾರೆ. ಉಳಿದ ಚಾರಣಿಗರನ್ನು ಕಾರ್ಯಾಚರಣೆ ನಡೆಸಿ ರಕ್ಷಿಸಲಾಗಿದೆ. ರಕ್ಷಣಾ ಕಾರ್ಯಕ್ಕೆ ನೆರವಾಗಲು ಕರ್ನಾಟಕದ ಸಚಿವ ಕೃಷ್ಣಬೈರೇಗೌಡ ಅವರು ಕೂಡ ಉತ್ತರಾಖಂಡಕ್ಕೆ ತೆರಳಿದ್ದರು. ಅಪಾಯದಿಂದ ಬದುಕುಳಿದ ಚಾರಣಿಗರನ್ನು ಸುರಕ್ಷಿತವಾಗಿ ರಾಜ್ಯಕ್ಕೆ ವಾಪಸ್ ಕರೆತರಲಾಗಿದೆ.
ಬೆಂಗಳೂರು: ಹಿಮಪಾತದಿಂದ ಉತ್ತರಾಖಂಡದ (Uttarakhand) ಉತ್ತರಕಾಶಿ (Uttarkashi) ಜಿಲ್ಲೆಯ ಸಹಸ್ತ್ರತಾಲ್ ಚಾರಣಕ್ಕೆ (Trekking) ತೆರಳಿದ್ದ 20 ಜನರ ಪೈಕಿ 9 ಮಂದಿ ಸಾವನ್ನಪ್ಪಿದ್ದು, ಮೃತ ಚಾರಣಿಗರ ಮೃತದೇಹವನ್ನು ಚಾರ್ಟರ್ ಫ್ಲೈಟ್ (Charter Flight) ಮೂಲಕ ಬೆಂಗಳೂರಿಗೆ ರವಾನಿಸುವ ಸಲುವಾಗಿ ಉತ್ತರಾಖಂಡ ಮುಖ್ಯಕಾರ್ಯದರ್ಶಿ ರಾಧಾ ರಾತುರಿ ಅವರ ಜೊತೆ ಕೃಷ್ಣಬೈರೇಗೌಡ (Krishna Byre Gowda) ಮಾತುಕತೆ ನಡೆಸಿದ್ದಾರೆ. ಮಾತುಕತೆ ಬಳಿಕ ಉತ್ತರಾಖಂಡ ಮುಖ್ಯಕಾರ್ಯದರ್ಶಿ ಚಾರ್ಟರ್ ಫ್ಲೈಟ್ ಮೂಲಕ ಮೃತದೇಹವನ್ನು ಸಾಗಿಸಲು ಒಪ್ಪಿಕೊಂಡಿದ್ದಾರೆ ಎಂದು ಕೃಷ್ಣಬೈರೇಗೌಡ ತಿಳಿಸಿದ್ದಾರೆ.
ಉತ್ತರಕಾಶಿಯಲ್ಲಿ ಮರಣೋತ್ತರ ಪರೀಕ್ಷೆ ನಡೆಯುತ್ತಿದೆ. ಬೆಳಗ್ಗೆ 11 ಗಂಟೆಗೆ ಎಲ್ಲಾ 9 ಮೃತದೇಹಗಳನ್ನು ವಿಮಾನದಲ್ಲಿ ಡೆಹ್ರಾಡೂನ್‌ಗೆ ತರಲಾಗುವುದು. ಡೆಹ್ರಾಡೂನ್‌ನಲ್ಲಿ ಎಂಬಾಮಿಂಗ್ ಮಾಡಲಾಗುವುದು. ಎಲ್ಲಾ 9 ಶವಗಳನ್ನು ಬೆಂಗಳೂರಿಗೆ ಸಾಗಿಸಲು ನಾವು ಚಾರ್ಟರ್ ಫ್ಲೈಟ್ ಅನ್ನು ಗುರುತಿಸುತ್ತಿದ್ದೇವೆ. ನಾನೀಗ ಉತ್ತರಾಖಂಡದ ಮುಖ್ಯ ಕಾರ್ಯದರ್ಶಿಯನ್ನು ಭೇಟಿ ಮಾಡಲು ಹೊರಟಿದ್ದೇನೆ. ಮುಖ್ಯ ಕಾರ್ಯದರ್ಶಿಯವರೊಂದಿಗಿನ ನನ್ನ ಸಭೆಯ ನಂತರ ಮೃತದೇಹಗಳ ರವಾನೆಯ ಬಗ್ಗೆ ಸ್ಪಷ್ಟತೆ ನೀಡಬಹುದು ಎಂದು ನಾನು ಭಾವಿಸುತ್ತೇನೆ ಎಂದು ಕೃಷ್ಣಬೈರೇಗೌಡ ಎಕ್ಸ್‌ನಲ್ಲಿ ಟ್ವೀಟ್ ಮಾಡಿ ತಿಳಿಸಿದ್ದರು.
ಉತ್ತರಾಖಂಡದಲ್ಲಿ ಹವಾಮಾನ ವೈಪರೀತ್ಯದಿಂದ ಸಾವನ್ನಪ್ಪಿದ ನಾಲ್ವರ ಮೃತದೇಹಗಳು ಪತ್ತೆಯಾಗಿದ್ದು, ಮೃತರನ್ನು ಪದ್ಮನಾಭ ಕೆ.ಪಿ, ವೆಂಕಟೇಶ್ ಪ್ರಸಾದ್ ಕೆ, ಅನಿತಾ ರಂಗಪ್ಪ, ಪದ್ಮಿನಿ ಹೆಗಡೆ ಎಂದು ಗುರುತಿಸಲಾಗಿದೆ. ಇನ್ನು ಬುಧವಾರ 8 ಜನ ಚಾರಣಿಗರನ್ನು ರಕ್ಷಿಸಿದ್ದು, ಸುರಕ್ಷಿತವಾಗಿ ಡೆಹ್ರಾಡೂನ್‌ಗೆ ಸ್ಥಳಾಂತರಿಸಲಾಗಿದೆ.
Following trekkers were rescued yesterday and shifted to Dehradun.
1. Soumya Canale
2. Smruthi Dolas
3. Sheena Lakshmi
4. S Shiva Jyoti
5. Anil Jamtige Arunachal Bhatt
6. Bharat Bommana Gouder
7. Madhu…
— Krishna Byre Gowda (@krishnabgowda) June 6, 2024
ಎಸ್‌ಡಿಆರ್‌ಎಫ್‌ನಿಂದ ಸುರಕ್ಷಿತವಾಗಿ ರಕ್ಷಿಸಲ್ಪಟ್ಟ 11 ಚಾರಣಿಗರ ವಿವರ:
ಜೈ ಪ್ರಕಾಶ್ ವಿ.ಎಸ್ (61), ಗಿರಿನಗರ ಬೆಂಗಳೂರು ನಿವಾಸಿ
ಭರತ್ ವಿ (53), ಹಂಪಿನಗರ, ಬೆಂಗಳೂರು ನಿವಾಸಿ
ಅನೀಲ್ ಭಟ್ (52), ನಿವಾಸಿ ಜೋಪ್ ನಗರ ಬೆಂಗಳೂರು
ಮಧುಕಿರಣ್ ರೆಡ್ಡಿ (52), ಬೆಂಗಳೂರು ನಿವಾಸಿ
ಶೀನ ಲಕ್ಷ್ಮಿ (48), ಕೆ.ಆರ್.ಪುರಂ ಬೆಂಗಳೂರು ನಿವಾಸಿ
ಶೌಮ್ಯಾ ಕೆ (31), ಬೆಂಗಳೂರು ನಿವಾಸಿ
ಶಿವ ಜ್ಯೋತಿ (45), ಹೆಚ್‌ಎಸ್‌ಆರ್ ಬೆಂಗಳೂರು ನಿವಾಸಿ
ಸ್ಮೂರ್ತಿ ಪ್ರಕಾಶ್ ಡೋಲಾಸ್ (45), ಮಹಾರಾಷ್ಟ್ರದ ಪುಣೆ ನಿವಾಸಿ
ವಿನಾಯಕ್ ಎಂ.ಕೆ (47), ರೆಸಿಡೆಂಟ್ ಪ್ರೆಸ್ಟೀಜ್ ಸಿಟಿ, ಬೆಂಗಳೂರು
ಶ್ರೀರಾಮಲ್ಲು ಸುಧಾಕರ್ (64), ಬೆಂಗಳೂರು ಎಸ್‌ಆರ್‌ಕೆ ನಗರ ನಿವಾಸಿ
ವಿವೇಕ್ ಶ್ರೀಧರ್ (37), ಬೆಂಗಳೂರು,
ಸೌಮ್ಯಾ ಕೆನಾಲೆ, ಸ್ಮೃತಿ ಡೋಲಾಸ್, ಶೀನಾ ಲಕ್ಷ್ಮಿ, ಎಸ್ ಶಿವಜ್ಯೋತಿ, ಅನಿಲ್ ಜಮತಿಗೆ ಅರುಣಾಚಲ ಭಟ್, ಭರತ್ ಬೊಮ್ಮನ ಗೌಡರ್, ಮಧು ಕಿರಣ್ ರೆಡ್ಡಿ, ಜೈಪ್ರಕಾಶ್ ಬಿಎಸ್ ಎಂಬವರನ್ನು ಸುರಕ್ಷಿತವಾಗಿ ಡೆಹ್ರಾಡೂನ್‌ಗೆ ಸ್ಥಳಾಂತರಿಸಲಾಗಿದೆ. ಎಸ್ ಸುಧಾಕರ್, ವಿನಯ್ ಎಂಕೆ, ವಿವೇಕ್ ಶ್ರೀಧರ್, ನವೀನ್ ಎ, ರಿತಿಕಾ ಜಿಂದಾಲ್ ಎಂಬ 5 ಚಾರಣಿಗರನ್ನು ಕೂಡ ರಕ್ಷಿಸಿದ್ದು, ಇಂದು ಬೆಳಗ್ಗೆ 11 ಗಂಟೆಗೆ ಉತ್ತರಕಾಶಿಯಿಂದ ಡೆಹ್ರಾಡೂನ್‌ಗೆ ವಿಮಾನದಲ್ಲಿ ಕಳುಹಿಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.
I met with Chief Secretary of #Uttarakhand Smt Radha Raturi and Secretary of Disaster Management Sri Ranjit Sinha to thank them for their swift response during this calamity.
I requested for their help to arrange an aircraft to transport the bodies to Bengaluru. They have agreed… pic.twitter.com/xB5S0FHCOR
— Krishna Byre Gowda (@krishnabgowda) June 6, 2024
ಬುಧವಾರ ಉತ್ತರಕಾಶಿಗೆ ರವಾನಿಸಿದ ಮೃತದೇಹಗಳು:
ಬುಧವಾರ ನಡೆಸಿದ ಕಾರ್ಯಾಚರಣೆಯಲ್ಲಿ ಐವರು ಚಾರಣಿಗರ ಮೃತದೇಹಗಳನ್ನು ವಿಮಾನದ ಮೂಲಕ ಉತ್ತರಕಾಶಿಗೆ ರವಾನಿಸಲಾಗಿದೆ. ಮೃತರನ್ನು ಸಿಂಧು ವಕೆಲಂ, ಆಶಾ ಸುಧಾಕರ್, ಸುಜಾತಾ ಮುಂಗುರವಾಡಿ, ವಿನಾಯಕ ಮುಂಗುರವಾಡಿ ಹಾಗೂ ಚಿತ್ರಾ ಪ್ರಣೀತ್ ಎಂದು ಗುರುತಿಸಲಾಗಿದೆ.
ಜೂನ್ 3 ರಂದು ಇಬ್ಬರು ಚಾರಣಿಗರು ಮುಖ್ಯ ತಂಡದಿಂದ ಬೇರ್ಪಟ್ಟು ಚಾರಣದಿಂದ ಹಿಂದೆ ಸರಿದಿದ್ದಾರೆ. ಹೀಗಾಗಿ ಅವರು ಅಪಾಯದಿಂದ ಪಾರಾಗಿದ್ದಾರೆ. ಆದರೆ, ಅದೇ ದಿನ ಬೆಳಗ್ಗೆ 20 ಚಾರಣಿಗರು ಮತ್ತು ಆ ತಂಡದ ಮಾರ್ಗದರ್ಶಿಯನ್ನೊಳಗೊಂಡ ತಂಡ ಲ್ಯಾಂಬ್ಟಾಲ್ ಕ್ಯಾಂಪ್ ಸೈಟ್‌ನಿಂದ ಸಹಸ್ರತಾಲ್‌ಗೆ ತೆರಳಿದೆ. ಚಾರಣದ ಗಮ್ಯ ತಲುಪಿ ವಾಪಸ್ ಶಿಬಿರಕ್ಕೆ ಹಿಂತಿರುಗುತ್ತಿದ್ದ ಸಂದರ್ಭದಲ್ಲಿ, ಶಿಬಿರದಿಂದ ಸುಮಾರು ಒಂದೂವರೆ ಅಥವಾ ಎರಡು ಗಂಟೆಗಳ ದೂರದಲ್ಲಿದ್ದಾಗ, ಮಂಗಳವಾರ ಮಧ್ಯಾಹ್ನ 2 ಗಂಟೆಗೆ ಹಿಮಪಾತ ಪ್ರಾರಂಭವಾಗಿದೆ.
ಬರೋಬ್ಬರಿ 400ಕ್ಕೂ ಹೆಚ್ಚು ಗಂಟೆಗಳ ಆಪರೇಷನ್ ನಂತರ ಟನೆಲ್ ನಲ್ಲಿ ಸಿಲುಕಿಕೊಂಡಿದ್ದ 41 ಕಾರ್ಮಿಕರ ರಕ್ಷಣೆ ಕುರಿತು ರೋಚಕ ಘಟನೆಯನ್ನು ಸಿನಿಮಾ ಮಾಡಲು ಬಾಲಿವುಡ್ ನಿರ್ಮಾಪಕರು ಮುಂದಾಗಿದ್ದಾರೆ. ಆಗಲೇ 14ಕ್ಕೂ ಹೆಚ್ಚು ನಿರ್ಮಾಪಕರು ಸಿನಿಮಾದ (Cinema) ಟೈಟಲ್ ಅನ್ನು ನೋಂದಾಯಿಸಿದ್ದಾರೆ ಎನ್ನುವ ಮಾಹಿತಿ ಸಿಕ್ಕಿದೆ. ದೇಶ ಹಲವು ಭಾಷೆಗಳಲ್ಲಿ ಈ ಕುರಿತು ಸಿನಿಮಾ ಬರಲಿದೆ.
ಏನಿದು ಘಟನೆ ?
ಮೊನ್ನೆಯಷ್ಟೇ ಸುರಂಗದ ಒಳಗಡೆ ಇದ್ದ ಕಾರ್ಮಿಕರು ಸುರಕ್ಷಿತವಾಗಿ ಹೊರಬರಲಿ ಎಂಬ ದೇಶದ ಜನರ ಪ್ರಾರ್ಥನೆ ಫಲ ನೀಡಿತ್ತು. ಉತ್ತರಾಖಂಡದ ಉತ್ತರಕಾಶಿ ಸುರಂಗದಲ್ಲಿ (Uttarakhand’s Silkyari Tunnel) 17 ದಿನಗಳಿಂದ ಸಿಲುಕಿದ್ದ ಕಾರ್ಮಿಕರನ್ನು (Workers) ರಕ್ಷಣೆ ಮಾಡಲಾಗಿತ್ತು. 17 ದಿನ 400 ಗಂಟೆಗಳ ಆಪರೇಷನ್ ಯಶಸ್ವಿಯಾದ ನಂತರ ರಾತ್ರಿ ಒಬ್ಬೊಬ್ಬರಾಗಿ ಸುರಂಗದಿಂದ ಕಾರ್ಮಿಕರು ಹೊರ ಬಂದಿದ್ದರು.
ನೆಲದಿಂದ ಸಮಾನಾಂತರವಾಗಿ ಮೊದಲು ಕೈಗೊಂಡಿದ್ದ ಕೊರೆವ ಕೆಲಸವನ್ನು, ಅದು ನಿಂತಿದ್ದ ಸ್ಥಳದಿಂದಲೇ ನಿಷೇಧಿತ ಇಲಿ ಬಿಲ ಗಣಿಗಾರಿಕೆಯ ತಂತ್ರಜ್ಞಾನ ಬಳಸಿ ಡ್ರಿಲ್ಲಿಂಗ್ ಮಾಡಲಾಗಿತ್ತು. ಕೊರೆವ ಕಾರ್ಯ ಪೂರ್ಣಗೊಂಡ ಬಳಿಕ ಎನ್‌ಡಿಆರ್‌ಎಫ್ ಸಿಬ್ಬಂದಿ ಸುರಂಗದೊಳಗೆ ಹೋಗಿ, ಕಾರ್ಮಿಕರನ್ನು ಒಬ್ಬೊಬ್ಬರನ್ನಾಗಿ ಹೊರಗೆ ಕರೆತಂದಿದ್ದರು.
ನಂತರ ಕಾರ್ಮಿಕರನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲು 41 ಅಂಬುಲೆನ್ಸ್, ಸ್ಟ್ರೆಚ್ಚರ್, ಮೆಡಿಕಲ್ ಎಮೆರ್ಜೆನ್ಸಿ, ಹೆಲಿಕಾಪ್ಟರ್.. ಹೀಗೆ ಎಲ್ಲವನ್ನು ಸಜ್ಜಾಗಿ ಇರಿಸಲಾಗಿತ್ತು. ಸ್ಥಳದಲ್ಲೇ ಸಿಎಂ ಪುಷ್ಕರ್ ಸಿಂಗ್ ಧಾಮಿ, ಕೇಂದ್ರ ಸಚಿವ ವಿಕೆ ಸಿಂಗ್, ಕಾರ್ಮಿಕರು ಬಂಧುಗಳು ಸ್ಥಳದಲ್ಲೇ ಬೀಡುಬಿಟ್ಟಿದ್ದರು. ಅದೊಂದು ರೋಚಕ ಆಪರೇಷನ್ ಆಗಿತ್ತು.
ಉತ್ತರಕಾಶಿ ಜಿಲ್ಲೆಯ ಸಿಲ್‌ಕ್ಯಾರ ಹಾಗೂ ದಂಡಲ್‌ಗಾಂವ್‌ಗೆ ಸಂಪರ್ಕ ಕಲ್ಪಿಸಲು ಚಾರ್ ಧಾಮ್ ರಸ್ತೆ ಯೋಜನೆ ಅಡಿಯಲ್ಲಿ ಸುರಂಗ ಮಾರ್ಗ ನಿರ್ಮಿಸಲಾಗುತ್ತಿದೆ. 4.5 ಕಿಲೋ ಮೀಟರ್ ದೂರದ ಸುರಂಗ ನಿರ್ಮಾಣದ ವೇಳೆ ಸುಮಾರು 150 ಮೀಟರ್ ಉದ್ದದ ಸುರಂಗ ಕುಸಿದಿತ್ತು. ನವೆಂಬರ್ 12ರಂದು ಜಾವ 4 ಗಂಟೆ ಸುಮಾರಿಗೆ ಸುರಂಗ ಕುಸಿದಿದ್ದು, ಕೂಡಲೇ ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಗಿತ್ತು.
ಕೋಲಾರ: ಉತ್ತರಕಾಶಿಯ (Uttarkashi) ಸಿಲ್ಕ್ಯಾರ್ ಸುರಂಗದಲ್ಲಿ ಸಿಲುಕಿದ್ದ 41 ಕಾರ್ಮಿಕರನ್ನು ಹೊರತೆಗೆಯಲು (Rescue Operation) ರಾಜ್ಯದ (Karnataka) 9 ಜನರ ಗಣಿಗಾರಿಕೆಯ ಎಂಜಿನಿಯರ್ ತಂಡ ಶ್ರಮಿಸಿದೆ. ಈ ತಂಡದಲ್ಲಿ ಬಂಗಾರಪೇಟೆಯ ಹೆಚ್.ಎಸ್ ವೆಂಕಟೇಶ್ ಪ್ರಸಾದ್ ಅವರು ಸಹ ಶ್ರಮಿಸಿದ್ದಾರೆ. ರಾಜ್ಯದಿಂದ ತೆರಳಿದ್ದ ತಂಡಕ್ಕೆ ಉತ್ತರಖಂಡದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ, ಕೇಂದ್ರ ಭೂ ಸಾರಿಗೆ ಮತ್ತು ರಾಷ್ಟ್ರೀಯ ಹೆದ್ದಾರಿ ಸಚಿವ ವಿ.ಕೆ ಸಿಂಗ್ ಅವರು ವೆಂಕಟೇಶ್ ಪ್ರಸಾದ್ ಸೇರಿದಂತೆ ರಾಜ್ಯದ ಎಂಜಿನಿಯರ್‌ಗಳ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.
ಕೇಂದ್ರದ ರಕ್ಷಣಾ ಇಲಾಖೆ ಹಾಗೂ ಭಾರತೀಯ ಸೇನಾ ಪಡೆಯ ಅಧಿಕಾರಿಗಳ ಸೂಚನೆ ಮೇರೆಗೆ ಖಾಸಗಿ ಮೈನಿಂಗ್ ಕಂಪನಿಯೊಂದರ ಸಿಇಒ ಸೈರಿಕ್ ಜೋಸೆಫ್ ನೇತೃತ್ವದಲ್ಲಿ ಹೆಚ್.ಎಸ್ ವೆಂಕಟೇಶ್ ಪ್ರಸಾದ್, ಶ್ರೀಕಾಂತ್, ಅಮೋಘ್, ಅಸೀಪ್ಮುಲ್ಲಾ, ಏರೋನ್ಯಾಟಿಕ್ ಇಂಜಿನಿಯರ್‍ಗಳಾದ ಗಜಾನ, ಎನ್ವಿಡಿ ಸಾಯಿ, ರೇಗು ಹಾಗೂ ಸತ್ಯ ಎಂಬವರ ತಂಡ ಕಾರ್ಯ ನಿರ್ವಹಿಸಿತ್ತು. ಇವರೆಲ್ಲರ ಶ್ರಮದ ಫಲವಾಗಿ 17 ದಿನಗಳ ಕಾಲ ಸುರಂಗದಲ್ಲಿ ಸಿಲುಕಿದ್ದ 41 ಕಾರ್ಮಿಕರನ್ನು ಸುರಕ್ಷಿತವಾಗಿ ಹೊರತರಲಾಯಿತು. ಇದನ್ನೂ ಓದಿ: COP28 Summit: ದುಬೈ ತೆರಳಿದ ಮೋದಿಗೆ ಅದ್ಧೂರಿ ಸ್ವಾಗತ – ಹಿಂದೂಸ್ತಾನ್ ಹಮಾರ ಎಂದ ಭಾರತೀಯರು
ರಾಜ್ಯದ ಎಂಜಿನಿಯರ್‌ಗಳ ತಂಡ ನ.22 ರಂದು ಬೆಂಗಳೂರಿನಿಂದ ಡೆಹ್ರಾಡೂನ್‍ಗೆ ಹೊರಟು ಉತ್ತರಕಾಶಿ ತಲುಪಿದ್ದರು. ಬಳಿಕ ಸುರಂಗದಲ್ಲಿ ಸಿಲುಕಿಕೊಂಡಿದ್ದ 41 ಕಾರ್ಮಿಕರನ್ನು ಸುರಕ್ಷಿತವಾಗಿ ಹೊರತರಲು ಚಿಂತನೆ ನಡೆಸಿ ಶ್ರಮಿಸಿದ್ದಾರೆ. ಬಳಿಕ ಬೆಟ್ಟದ ಮೇಲಿಂದ ಕಾರ್ಮಿಕರು ಸಿಲುಕಿಕೊಂಡಿರುವ ಸ್ಥಳಕ್ಕೆ ನೇರವಾಗಿ ಸುರಂಗ ಮಾರ್ಗ ಮಾಡಿ ಕಾರ್ಮಿಕರನ್ನು ಹೊರ ತೆಗೆಯಲು ನೆರವಾಗಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ಹೆಚ್.ಎಸ್ ವೆಂಕಟೇಶ್ ಪ್ರಸಾದ್ ಪ್ರತಿಕ್ರಿಯೆ ನೀಡಿ, ಭಾರತೀಯ ಸೇನೆಯ ಕರ್ನಲ್ ದೀಪಕ್ ಪಾಟೀಲ್ ಕರೆ ಮಾಡಿ ನಮ್ಮ ನೆರವು ಕೇಳಿದ್ದರು. ಇದರಿಂದ 9 ಎಂಜಿನಿಯರ್‌ಗಳ ತಂಡ ತಲುಪಿತ್ತು, ಮಾನವೀಯತೆಯ ದೃಷ್ಠಿಯಿಂದ ಇಂತಹ ಕೆಲಸ ಮಾಡಲು ಖುಷಿಯಾಯಿತು. ಈ ಕೆಲಸದ ನಿರ್ವಹಣೆಯಲ್ಲಿ ಮೂಂಚೂಣಿಯಲ್ಲಿ ಇರಬೇಕೆಂದು ದಿನದ 24 ಗಂಟೆಯೂ ಕೆಲಸ ಮಾಡಿದ್ದೆವೆ. ಇಲ್ಲಿ ಕೆಲಸ ಮಾಡಲು ಊಟ ಹಾಗೂ ನಿದ್ರೆ ಬಗ್ಗೆ ಗಮನವಿರಲಿಲ್ಲ. ಮುಖ್ಯವಾಗಿ ಸುರಂಗದಲ್ಲಿ ಸಿಲುಕಿದ್ದವರನ್ನು ಹೊರತೆಗೆಯುವ ಕೆಲಸ ನಮ್ಮಿಂದಲೇ ಆಗಬೇಕೆಂದು ಉತ್ಸಾಹದಿಂದ ಕೆಲಸ ಮಾಡಿದ್ದೇವೆ. ಈ ಕೆಲಸ ಯಶಸ್ವಿಯಾಗಿದ್ದರಿಂದ ಭಾರೀ ಸಂತೋಷವಾಗಿದೆ ಎಂದಿದ್ದಾರೆ.
ವೆಂಕಟೇಶ್ ಪ್ರಸಾದ್ ಅವರು 2015ರಲ್ಲಿ ಮೈನಿಂಗ್ ಎಂಜಿನಿಯರ್ ಆದ ಬಳಿಕ ಗುಜರಾತ್‍ನ ಎರಡು ಮೈನಿಂಗ್ ಕಂಪನಿಗಳಲ್ಲಿ 7 ವರ್ಷಗಳ ಕಾಲ ಕೆಲಸ ನಿರ್ವಹಿಸಿದ್ದರು. ಈಗ ಪ್ರಸ್ತುತ ಬೆಂಗಳೂರಿನ ಖಾಸಗಿ ಮೈನಿಂಗ್ ಕಂಪನಿ ಒಂದರಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದನ್ನೂ ಓದಿ: ಬೆಂಗಳೂರಿನ 15ಕ್ಕೂ ಹೆಚ್ಚು ಶಾಲೆಗಳಿಗೆ ಬಾಂಬ್ ಬೆದರಿಕೆ!
ಡೆಹ್ರಾಡೂನ್: ಉತ್ತರಾಖಂಡದಲ್ಲಿ (Uttarakhand) ಕುಸಿದ ಸುರಂಗದಿಂದ (Tunnel Collapse) ರಕ್ಷಿಸಲ್ಪಟ್ಟ 41 ಕಾರ್ಮಿಕರ ಆರೋಗ್ಯ ಸ್ಥಿತಿ ಬಗ್ಗೆ ವೈದ್ಯರು ಮಾಹಿತಿ ಹಂಚಿಕೊಂಡಿದ್ದಾರೆ. ಎಲ್ಲರೂ ಆರೋಗ್ಯವಾಗಿದ್ದಾರೆ.. ಬೇಗ ಡಿಸ್ಚಾರ್ಜ್ ಮಾಡಿ ಮನೆಗೆ ಕಳುಹಿಸಲಾಗುವುದು ಎಂದು ವೈದ್ಯರು ತಿಳಿಸಿದ್ದಾರೆ.
ಎಲ್ಲ ಕಾರ್ಮಿಕರು ಆರೋಗ್ಯವಾಗಿದ್ದಾರೆ. ಅವರನ್ನು ರೋಗಿಗಳೆಂದು ನಾವು ಕರೆಯುವುದಿಲ್ಲ. ಅವರ ರಕ್ತದೊತ್ತಡ, ಜೀವಾಣುಗಳು, ಆಮ್ಲಜನಕೀಕರಣ ಎಲ್ಲವೂ ನಾರ್ಮಲ್ ಇದೆ. ನಾವು ಪ್ರಾಥಮಿಕ ಆರೋಗ್ಯ ತಪಾಸಣೆ ಮಾಡಿದ್ದೇವೆ. ಅದರ ವರದಿ ಶೀಘ್ರವೇ ಬರಲಿದೆ. ಹೃದಯ ಸಂಬಂಧಿ ಸಮಸ್ಯೆ ಏನಾದರೂ ಇದೆಯೇ ಎಂಬುದನ್ನು ತಿಳಿಯಲು ಇಸಿಜಿ ಪರೀಕ್ಷೆ ನಡೆಸಲಾಗುವುದು ಎಂದು ಎಐಐಎಂಎಸ್-ಋಷಿಕೇಶದ ಕಾರ್ಯನಿರ್ವಾಹಕ ನಿರ್ದೇಶಕ ಮತ್ತು ಸಿಇಒ ಪ್ರೊಫೆಸರ್ ಮೀನು ಸಿಂಗ್ ತಿಳಿಸಿದ್ದಾರೆ.
ಕಾರ್ಮಿಕರಿಗೆ ಯಾವುದೇ ಕಾಯಿಲೆ ಇಲ್ಲ. ಅವರನ್ನು ಮನೆಗೆ ಕಳುಹಿಸುವ ಬಗ್ಗೆ ಇಂದು ನಿರ್ಧಾರ ತೆಗೆದುಕೊಳ್ಳಲಾಗುವುದು ವೈದ್ಯರು ಹೇಳಿದ್ದಾರೆ. ಸುಮಾರು 17 ದಿನಗಳ ರಕ್ಷಣಾ ಕಾರ್ಯಾಚರಣೆಯ ನಂತರ ಮಂಗಳವಾರ 41 ಕಾರ್ಮಿಕರನ್ನು ಸುರಂಗದಿಂದ ರಕ್ಷಿಸಲಾಗಿತ್ತು. ಇದನ್ನೂ ಓದಿ: 41 ಕಾರ್ಮಿಕರ ರಕ್ಷಣೆ ಬೆನ್ನಲ್ಲೇ ಭಾವುಕರಾಗಿದ್ದ ಪ್ರಧಾನಿ ಮೋದಿ
ಎನ್‌ಡಿಆರ್‌ಎಫ್, ಭಾರತೀಯ ಸೇನೆ, ಪೊಲೀಸರು ಮತ್ತು ಹಲವಾರು ಇತರ ಏಜೆನ್ಸಿಗಳು ಉತ್ತರಾಖಂಡ್‌ನ ಕುಸಿದ ಸಿಲ್ಕ್ಯಾರಾ ಸುರಂಗದ ಕೆಳಗೆ ಸಿಲುಕಿದ್ದ ಕಾರ್ಮಿಕರನ್ನು ರಕ್ಷಿಸಿದ್ದರು. ಕಾರ್ಯಾಚರಣೆಯ ಪ್ರಮುಖ ವ್ಯಕ್ತಿ ಸುರಂಗ ತಜ್ಞ ಅರಾಲ್ಡ್ ಡಿಕ್ಸ್ ಅವರು ರಕ್ಷಣಾ ಸಮಯದಲ್ಲಿ ಸರ್ಕಾರ ಮತ್ತು ಏಜೆನ್ಸಿಗಳಿಗೆ ಸಲಹೆ ನೀಡಿದ್ದರು.
ರಾಂಚಿ: ಉತ್ತರಾಖಂಡದ (Uttarakhand) ಸಿಲ್ಕ್ಯಾರಾ ಸುರಂಗದಲ್ಲಿ (Tunnel) ಸಿಲುಕಿದ್ದ 41 ಕಾರ್ಮಿಕರ (Worker) ರಕ್ಷಣೆಯೇನೋ ಆಗಿದೆ. ಆದರೆ ಈ 41 ಕಾರ್ಮಿಕರನ್ನು ಸುರಂಗದಿಂದ ಸುರಕ್ಷಿತವಾಗಿ ಹೊರತರುವುದಕ್ಕೂ ಕೆಲವೇ ಗಂಟೆಗಳ ಮುನ್ನ ಕಾರ್ಮಿಕನೊಬ್ಬನ ತಂದೆ (Father) ಮೃತಪಟ್ಟ ಘಟನೆ ನಡೆದಿದೆ.
ಉತ್ತರಕಾಶಿ ಸುರಂಗದಿಂದ ರಕ್ಷಣೆಗೊಳಗಾದ ಕಾರ್ಮಿಕ ಭಕ್ತು ಅವರ ತಂದೆ ಜಾರ್ಖಂಡ್ ಮೂಲದ ಬಾಸೆಟ್ ಅಲಿಯಾಸ್ ಬರ್ಸಾ ಮುರ್ಮು (70) ಮಗನ ರಕ್ಷಣೆಗೂ ಕೆಲವೇ ಗಂಟೆಗಳ ಮುನ್ನ ಮೃತಪಟ್ಟಿದ್ದಾರೆ. ಪೂರ್ವ ಸಿಂಗ್‌ಭೂಮ್ ಜಿಲ್ಲೆಯ ಬಹ್ದಾ ಗ್ರಾಮದ ನಿವಾಸಿ ಬರ್ಸಾ ಮುರ್ಮು ಮಂಗಳವಾರ ಬೆಳಗ್ಗೆ 8 ಗಂಟೆಗೆ ತಮ್ಮ ಹಾಸಿಗೆಯ ಮೇಲೆ ಕುಳಿತಿದ್ದಾಗಲೇ ಕುಸಿದು ಸಾವನ್ನಪ್ಪಿದ್ದಾರೆ.
ನವೆಂಬರ್ 12 ರಂದು ತಮ್ಮ ಮಗ ಸುರಂಗದೊಳಗೆ ಸಿಲುಕಿದ್ದಾಗಿನಿಂದಲೂ ಬರ್ಸಾ ಮುರ್ಮು ಆಘಾತಕ್ಕೊಳಗಾಗಿದ್ದರು. ಭಕ್ತು ಸೇರಿದಂತೆ ಒಟ್ಟು 41 ಕಾರ್ಮಿಕರು ಸುರಂಗದಿಂದ ಹೊರಬಂದ ಕೇವಲ 12 ಗಂಟೆ ಮೊದಲು ಬರ್ಸಾ ಮುರ್ಮು ಸಾವನ್ನಪ್ಪಿರುವುದಾಗಿ ಕುಟುಂಬದ ಸದಸ್ಯರು ತಿಳಿಸಿದ್ದಾರೆ. ಇದನ್ನೂ ಓದಿ: ಅಯೋಧ್ಯೆಗೆ ಜೋಧ್‌ಪುರದಿಂದ 600 ಕೆಜಿ ಪರಿಶುದ್ಧ ತುಪ್ಪ ರವಾನೆ
ಬರ್ಸಾ ಮುರ್ಮು ತನ್ನ ಮಗನ ರಕ್ಷಣೆಗೆ ಸಂಬಂಧಿಸಿದ ಮಾಹಿತಿಗಾಗಿ ಕಾತರದಿಂದ ಕಾಯುತ್ತಿದ್ದರು. ಆದರೆ ಅವರು ತಮ್ಮ ಹಾಸಿಗೆ ಮೇಲೆ ಕುಳಿತಿದ್ದಾಗ ಏಕಾಏಕಿ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಮೇಲ್ನೋಟಕ್ಕೆ ಇದು ಹೃದಯಾಘಾತ ಎನ್ನಲಾಗುತ್ತಿದೆಯಾದರೂ ಅವರ ವೈದ್ಯಕೀಯ ವರದಿ ಇನ್ನೂ ಬಂದಿಲ್ಲ ಎಂದು ದುಮಾರಿಯಾ ಪೊಲೀಸ್ ಠಾಣೆಯ ಪ್ರಭಾರಿ ಅಧಿಕಾರಿ ಸಂಜೀವನ್ ಓರಾನ್ ತಿಳಿಸಿದ್ದಾರೆ.
ಜಾರ್ಖಂಡ್‌ನ ಇತರ 14 ಕಾರ್ಮಿಕರೊಂದಿಗೆ ಭಕ್ತು ಸದ್ಯ ಏಮ್ಸ್ ರಿಷಿಕೇಶ್‌ನಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ಆದರೆ 41 ಕಾರ್ಮಿಕರೊಂದಿಗೆ ಭಕ್ತು 17 ದಿನಗಳ ಬಳಿಕ ಸೂರ್ಯನ ಬೆಳಕು ಕಂಡರೂ ತಂದೆಯ ಸಾವಿನ ಸುದ್ದಿಯಿಂದ ಮತ್ತೆ ಕತ್ತಲೆ ಆವರಿಸಿದಂತಾಗಿದೆ. ತಾವು ಮೃತ್ಯುಂಜಯರಾಗಿ ಸುರಂಗದಿಂದ ಹೊರಬಂದರೂ ತಂದೆಯನ್ನು ಕೊನೇ ಬಾರಿ ಜೀವಂತವಾಗಿ ನೋಡಲು ಸಾಧ್ಯವಾಗದೇ ಹೋಗಿರುವುದು ದುರಂತವಾಗಿದೆ. ಇದನ್ನೂ ಓದಿ: ಚೀನಾ ನಿಗೂಢ ವೈರಸ್ ಭೀತಿ – ರಾಜ್ಯದಲ್ಲಿ ನ್ಯೂಮೋನಿಯಾ ನಿಯಂತ್ರಣಕ್ಕೆ ಕ್ರಮ
ನವದೆಹಲಿ: ಮಂಗಳವಾರ ತಡರಾತ್ರಿ ಉತ್ತರಕಾಶಿಯಲ್ಲಿ (Uttarkashi) ನಡೆಯುತ್ತಿದ್ದ ಕಾರ್ಮಿಕರ (Workers) ರಕ್ಷಣಾ ಕಾರ್ಯಚರಣೆ ನೇರ ಪ್ರಸಾರ ವೀಕ್ಷಿಸುತ್ತಿದ್ದ ಪ್ರಧಾನಿ ನರೇಂದ್ರ ಮೋದಿ (Narendra Modi), ಕಾರ್ಯಚರಣೆ ಯಶಸ್ವಿಯಾದ ಬಳಿಕ ಭಾವುಕರಾಗಿದ್ದರು ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ (Anurag Thakur) ಹೇಳಿದ್ದಾರೆ.
ಮಂಗಳವಾರ ರಕ್ಷಣಾ ಕಾರ್ಯಚರಣೆ ನಡೆಯುತ್ತಿದ್ದಾಗ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಕ್ಯಾಬಿನೆಟ್ ಸಭೆ ನಡೆಯುತ್ತಿತ್ತು. ಕ್ಯಾಬಿನೆಟ್ ಸಹದ್ಯೋಗಿಗಳ ಜೊತೆಗೆ ಪ್ರಧಾನಿ ನರೇಂದ್ರ ಮೋದಿ ರಕ್ಷಣಾ ಕಾರ್ಯಚರಣೆ ನೇರ ಪ್ರಸಾರವನ್ನು ಬಹಳ ಸೂಕ್ಷ್ಮವಾಗಿ ಗಮನಿಸುತ್ತಿದ್ದರು. ಸಿಕ್ಕಿಬಿದ್ದ ಕಾರ್ಮಿಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸಿದ ನಂತರ ಪ್ರಧಾನಿ ಭಾವುಕರಾದರು ಎಂದರು. ಇದನ್ನೂ ಓದಿ: ಮಹಿಳಾ ಸ್ವಸಹಾಯ ಗುಂಪುಗಳಿಗೆ ಡ್ರೋನ್ – ಸಂಪುಟ ಸಭೆಯಲ್ಲಿ ಮೋದಿ ಮಹತ್ವದ ನಿರ್ಧಾರ
ಸುರಂಗ ಕುಸಿತದ ಬಳಿಕ ಪ್ರಧಾನಿ ನರೇಂದ್ರ ಮೋದಿ ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ ಜೊತೆಗೆ ನಿರಂತರವಾಗಿ ದೂರವಾಣಿ ಮೂಲಕ ಮಾಹಿತಿ ಪಡೆಯುತ್ತಿದ್ದರು. ಪ್ರಧಾನಿ ಕಾರ್ಯಲಯದಿಂದ ಮೇಲ್ವಿಚಾರಣೆಗೆ ವಿಶೇಷ ತಂಡವನ್ನು ಕಳುಹಿಸಿದ್ದರು. ಕಾರ್ಮಿಕರ ರಕ್ಷಣೆ ಬಳಿಕ ಎಕ್ಸ್‌ನಲ್ಲಿ ಟ್ವೀಟ್ ಮಾಡಿ ಕಾರ್ಯಚರಣೆಯಲ್ಲಿ ಭಾಗಿಯಾದ ಎಲ್ಲರನ್ನು ಶ್ಲಾಘಿಸಿದ್ದರು. ಇದನ್ನೂ ಓದಿ: ಧ್ವನಿವರ್ಧಕಗಳಲ್ಲಿ ಆಜಾನ್ ಕೂಗುವುದು ನಿಷೇಧಿಸಲು ಮನವಿ- ಅರ್ಜಿದಾರರಿಗೆ ಹೈಕೋರ್ಟ್ ತರಾಟೆ