Tag: uttarapradesha

  • ಯುಪಿ ಮೂಲದ ವ್ಯಕ್ತಿ ಸಾವು- ಸ್ವಗ್ರಾಮಕ್ಕೆ ಶವ ರವಾನಿಸಲು 73 ಸಾವಿರ ರೂ. ಸಂಗ್ರಹಿಸಿ ನೆರವು ನೀಡಿದ ದಾವಣಗೆರೆಯ ಮುಸ್ಲಿಮರು

    ಯುಪಿ ಮೂಲದ ವ್ಯಕ್ತಿ ಸಾವು- ಸ್ವಗ್ರಾಮಕ್ಕೆ ಶವ ರವಾನಿಸಲು 73 ಸಾವಿರ ರೂ. ಸಂಗ್ರಹಿಸಿ ನೆರವು ನೀಡಿದ ದಾವಣಗೆರೆಯ ಮುಸ್ಲಿಮರು

    ದಾವಣಗೆರೆ: ಐಸ್ ಕ್ರೀಂ ಮಾಡುತ್ತಾ ದಾವಣಗೆರೆಯಲ್ಲಿ ನೆಲೆಸಿದ್ದ ಉತ್ತರ ಪ್ರದೇಶದ ಮೂಲದ ಶಕ್ತಿ ರಾಮ್ ಎಂಬ ವ್ಯಕ್ತಿ ಮೃತಪಟ್ಟಿದ್ದು, ಮೃತನ ಶವವನ್ನು ಸ್ವಗ್ರಾಮಕ್ಕೆ ರವಾನಿಸಲು ಅವರ ಕುಟುಂಬಕ್ಕೆ ಮಸ್ಲಿಮರು ಸಹಾಯ ಹಸ್ತ ಚಾಚಿ ಮಾನವೀಯತೆ ಮೆರೆದಿದ್ದಾರೆ.

    ಇಲ್ಲಿನ ಬಾಷಾ ನಗರದಲ್ಲಿ ಕಳೆದ ಹಲವು ವರ್ಷಗಳಿಂದ ಐಸ್ ಕ್ರೀಂ ಮಾಡಿಕೊಂಡು ಜೀವನ ನಡೆಸುತ್ತಿದ್ದ ಶಕ್ತಿರಾಮ್ ಸೋಮವಾರ ತಡರಾತ್ರಿ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ. ಆದ್ರೆ ಸ್ವಗ್ರಾಮಕ್ಕೆ ತೆರಳಲು ಹಣವಿಲ್ಲದೆ ಕುಟುಂಬಸ್ಥರು ಪರದಾಡುತ್ತಿದ್ದರು. ಇದನ್ನು ನೋಡಿದ ಅಲ್ಲಿನ ಸ್ಥಳೀಯ ಮುಸ್ಲಿಮರು ಹಣ ಹೊಂದಿಸಿ ಶವವನ್ನು ಉತ್ತರ ಪ್ರದೇಶಕ್ಕೆ ರವಾನಿಸುವುದರ ಮೂಲಕ ಮಾನವೀಯತೆ ಮೆರೆದಿದ್ದಾರೆ.

    ಸ್ಥಳೀಯರು ಶಕ್ತಿರಾಮ್ ಕುಟುಂಬಕ್ಕೆ 73 ಸಾವಿರ ರೂಪಾಯಿ ಸಂಗ್ರಹಿಸಿದ್ದು, ಮೃತನ ಸ್ವಗೃಹ ಉತ್ತರ ಪ್ರದೇಶದ ಹರದೋಯಿ ಜಿಲ್ಲೆ ರಸೂಲ್ ಬ್ರಹ್ಮ ಗ್ರಾಮಕ್ಕೆ ಮೃತ ದೇಹವನ್ನು ಸಾಗಿಸಲು ಆಂಬುಲೆನ್ಸ್ ವೆಚ್ಚ ಹೊಂದಿಸಿ ಸಹಾಯ ಮಾಡಿದ್ದಾರೆ.

  • ಕಲ್ಯಾಣ ಮಂಟಪಕ್ಕೆ ಜೀನ್ಸ್ ಪ್ಯಾಂಟ್ ಹಾಕ್ಕೊಂಡು ಬಂದ ಹುಡ್ಗಿಯನ್ನ ಯಾರಾದ್ರು ಮದ್ವೆ ಆಗ್ತಾರಾ: ಕೇಂದ್ರ ಸಚಿವ

    ಕಲ್ಯಾಣ ಮಂಟಪಕ್ಕೆ ಜೀನ್ಸ್ ಪ್ಯಾಂಟ್ ಹಾಕ್ಕೊಂಡು ಬಂದ ಹುಡ್ಗಿಯನ್ನ ಯಾರಾದ್ರು ಮದ್ವೆ ಆಗ್ತಾರಾ: ಕೇಂದ್ರ ಸಚಿವ

    ಲಕ್ನೋ: ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯದ ಖಾತೆಯ ರಾಜ್ಯ ಸಚಿವ ಸತ್ಯಪಾಲ್ ಸಿಂಗ್ ಅವರು ಹೆಣ್ಣು ಮಕ್ಕಳ ಉಡುಪಿನ ಬಗ್ಗೆ ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದಾರೆ.

    ಮದುವೆ ಮಂಟಪಕ್ಕೆ ಹೆಣ್ಣುಮಕ್ಕಳು ಜೀನ್ಸ್ ಪ್ಯಾಂಟ್ ಹಾಕಿಕೊಂಡು ಬಂದಲ್ಲಿ ಯಾವ ಹುಡುಗನೂ ಆಕೆಯನ್ನು ಮದುವೆಯಾಗಲು ಒಪ್ಪಲ್ಲ ಅಂತ ಹೇಳಿದ್ದಾರೆ.

    ಗೊರಖ್ ಪುರದ ಮಹರಾಣಾ ಪ್ರತಾಪ್ ಶಿಕ್ಷಾ ಪರಿಷದ್ ನಲ್ಲಿ ನಡೆದ ಸ್ಥಾಪನಾ ದಿನಾಚರಣೆಯ ಸಮಾರೋಪ ಸಮಾರಂಭದಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಸಂದರ್ಭದಲ್ಲಿ ಸಚಿವರು ಈ ಹೇಳಿಕೆಯನ್ನು ನೀಡಿದ್ದಾರೆ. ತಮ್ಮ ಭಾಷಣದ ವೇಳೆ ಭಾರತೀಯ ಸಂಸ್ಕೃತಿಗೆ ಹೆಚ್ಚಿನ ಮಹತ್ವ ನೀಡುವ ಭರದಲ್ಲಿ ಈ ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ಮದುವೆ ದಿನ ಲೆಹೆಂಗಾ ಬದಲು ಶಾರ್ಟ್ಸ್ ತೊಟ್ಟ ವಧು- ಫೋಟೋ ವೈರಲ್

    ಯಾರಾದರೂ ದೇವಾಲಯದ ಪೂಜಾರಿಗೆ ಪ್ಯಾಂಟ್ ಧರಿಸಿ ಪೂಜೆ ಮಾಡು ಎಂದರೆ ಜನರು ಆತನನ್ನು ಹೇಗೆ ಪೂಜಾರಿಯಾಗಿ ನೋಡುವುದಿಲ್ಲವೋ ಅದೇ ರೀತಿಯಾಗಿ ಮದುವೆ ಮಂಟಪಕ್ಕೆ ಜೀನ್ಸ್ ಧರಿಸಿ ಹುಡುಗಿ ಬಂದರೆ ಯಾಕೆಯನ್ನು ಮದುವೆಯಾಗಲು ಯಾರಾದರೂ ಮುಂದೆ ಬರುತ್ತಾರಾ ಎಂದು ಪ್ರಶ್ನಿಸಿದ್ದಾರೆ.

    ಸಚಿವರು ಈ ಹೇಳಿಕೆ ನೀಡಿದ ಸಂದರ್ಭದಲ್ಲಿ ವೇದಿಕೆಯಲ್ಲಿ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೂಡ ಇದ್ದರು.