Tag: Uttarakkanna

  • ರಿವರ್ ರ‍್ಯಾಫ್ಟಿಂಗ್ ವೇಳೆ ನದಿಗೆ ಸಿಲುಕಿದ ಬೋಟ್: ಕೂದಲೆಳೆ ಅಂತರದಲ್ಲಿ 12 ಜೀವಗಳು ಪಾರು

    ರಿವರ್ ರ‍್ಯಾಫ್ಟಿಂಗ್ ವೇಳೆ ನದಿಗೆ ಸಿಲುಕಿದ ಬೋಟ್: ಕೂದಲೆಳೆ ಅಂತರದಲ್ಲಿ 12 ಜೀವಗಳು ಪಾರು

    ಕಾರವಾರ: ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಜನರನ್ನು ಕೂರಿಸಿ ರಿವರ್ ರ‍್ಯಾಫ್ಟಿಂಗ್ ಮಾಡುತ್ತಿದ್ದ ಬೋಟ್ ಇದ್ದಕ್ಕಿದ್ದಂತೆ ನದಿಗೆ ಸಿಲುಕಿ, ಮುಳುಗುವ ಹಂತ ತಲುಪಿದೆ. ಅದೃಷ್ಟವಶಾತ್ ಕೂದಲೆಳೆ ಅಂತರದಲ್ಲಿ 12 ಜನರ ಜೀವ ಉಳಿದಿದೆ.

    ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲ್ಲೂಕಿನ ಗಣೇಶಗುಡಿಯ ಕಾಳಿ ನದಿಯಲ್ಲಿ ಘಟನೆ ಸಂಭವಿಸಿದ್ದು, ಕೊಂಚದಲ್ಲೇ 12 ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸಮೀಪದಲ್ಲೇ ಇದ್ದ ಪ್ರವಾಸಿಗರ ಸಮಯಪ್ರಜ್ಞೆ ಹಾಗೂ ರಕ್ಷಣಾ ಕಾರ್ಯದಿಂದ 12 ಮಂದಿ ಬದುಕುಳಿಯುವಂತಾಗಿದೆ. ಇದನ್ನೂ ಓದಿ: ಅಮರನಾಥ ಯಾತ್ರೆ – ಕೇಂದ್ರ ಗೃಹ ಇಲಾಖೆಯಿಂದ ಭದ್ರತಾ ಪರಿಶೀಲನೆ

    RIVER RESCUE

    ಹೌದು… ರಬ್ಬರ್ ಬೋಟ್‌ನಲ್ಲಿ 6 ಕ್ಕಿಂತ ಹೆಚ್ಚು ಮಂದಿ ರಿವರ್ ರ‍್ಯಾಫ್ಟಿಂಗ್‌ ಮಾಡುವಂತಿಲ್ಲ. ಆದರೆ, ಖಾಸಗಿ ಆಯೋಜಕರು ಅನುಮತಿಯಿಲ್ಲದೇ 12 ಜನ ಪ್ರವಾಸಿಗರನ್ನು ರಿವರ್ ರ‍್ಯಾಫ್ಟಿಂಗ್ ಬೋಟ್ ನಲ್ಲಿ ಕೂರಿಸಿ ಕರೆದೊಯ್ದಿದ್ದಾರೆ. ಈ ವೇಳೆ ಬೋಟ್ ಮೇಲಿನ ಭಾರ ಹೆಚ್ಚಾಗಿ ಮುಳುಗುವ ಹಂತ ತಲುಪಿದೆ. ಕೆಲ ಮಕ್ಕಳೂ ನೀರಿಗೆ ಬಿದ್ದಿದ್ದಾರೆ. ಸಮೀಪದಲ್ಲೇ ಇದ್ದ ಪ್ರವಾಸಿಗರು ರಕ್ಷಣೆಗೆ ಬರಲಾಗಿ 12 ಮಂದಿ ಜೀವ ಉಳಿದಿದೆ. ಇದನ್ನೂ ಓದಿ: ತಪ್ಪು ಮಾಡಿದ್ದರೆ ಶಿಕ್ಷಿಸು, ಇಲ್ಲವೇ ರಕ್ಷಿಸು – ಮನೆದೇವರ ಮೊರೆಹೋದ ಈಶ್ವರಪ್ಪ

    ಘಟನೆ ಸಂಬಂಧ ಜೋಯಿಡಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

  • ಮನೆಗೆ ನುಗ್ಗಿ ಚಿರತೆ ಕಿತಾಪತಿ – ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ

    ಮನೆಗೆ ನುಗ್ಗಿ ಚಿರತೆ ಕಿತಾಪತಿ – ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ

    – ಚಿರತೆ ನೋಡಿ ಭಯ ಬಿದ್ದ ಹಳ್ಳಿಗರು

    ಕಾರವಾರ: ಮನೆಯೊಂದಕ್ಕೆ ಚಿರತೆ ನುಗ್ಗಿ ಕಿತಾಪತಿ ಮಾಡಿ ಹೋಗಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಅಂಕೋಲಾದಲ್ಲಿ ನಡೆದಿದೆ.

    ಉತ್ತರ ಕನ್ನಡ ಜಿಲ್ಲೆಯಲ್ಲಿ ಚಿರತೆಗಳಿಗೇನೂ ಕಮ್ಮಿ ಇಲ್ಲ. ಆಹಾರದ ಕೊರತೆಯಿಂದ ಚಿರತೆಗಳು ನಾಡಿಗೆ ನುಗ್ಗುವುದು ಸಾಮಾನ್ಯವಾಗಿದೆ. ಹೀಗಾಗಿ ರಾತ್ರಿ ವೇಳೆ ಚಿರತೆಗಳು ಊರಿನತ್ತ ಮುಖ ಮಾಡುತ್ತಿವೆ. ಆಹಾರ ಅರಸಿ ಕಾಡಿನಿಂದ ಅಂಕೋಲ ತಾಲೂಕಿನ ಕೊಂಡಳ್ಳಿ ಗ್ರಾಮದ ರಮಾನಂದ ಎಂಬವರ ಮನೆಗೆ ಇಂದು ಬೆಳಗಿನ ಜಾವ ನುಗ್ಗಿದ್ದ ಚಿರಿತೆ ಮನೆಯ ಬಳಿ ಇದ್ದ ನಾಯಿ ಹಿಡಿಯುವ ಪ್ರಯತ್ನ ಮಾಡಿದೆ.

    ಆದರೆ ನಾಯಿ ಚಿರತೆ ಬಾಯಿಯಿಂದ ತಪ್ಪಿಸಿಕೊಂಡು ಓಡಿಹೋಗಿದೆ. ಇನ್ನೇನು ಆಹಾರ ಮಿಸ್ ಆಯ್ತು ಅನ್ನುವಷ್ಟರಲ್ಲಿ, ಮನೆಯಲ್ಲಿ ಕೋಳಿಗಳಿದ್ದ ಗೂಡು ಕಾಣಿಸಿದ್ದು ಗೂಡಿನ ಒಳಕ್ಕೆ ಬಾಯಿ ಹಾಕಿ ಕೋಳಿ ಹಿಡಿದು ಚಿರತೆ ಕಾಡಿಗೆ ಮರಳಿದೆ.

    ಇತ್ತ ಮನೆಯವರು ಬೆಳಗ್ಗೆ ಗೂಡಿನಲ್ಲಿ ಕೋಳಿ ಇಲ್ಲದ್ದನ್ನು ಗಮನಿಸಿ ಯಾರೋ ಕಳ್ಳರು ಕದ್ದು ಹೋಗಿರಬೇಕು ಎಂದು ಮನೆಯಲ್ಲಿ ಅಳವಡಿಸಿದ್ದ ಸಿಸಿ ಟಿವಿ ಗಮನಿಸಿದ್ದಾರೆ. ಆಗ ಕೋಳಿ ಕಳ್ಳತನ ಮಾಡಿದ್ದು ಯಾರು ಎಂದು ನೋಡಿ ಹೌಹಾರಿದ್ದಾರೆ. ಸಿ.ಸಿ ಟಿವಿಯಲ್ಲಿ ಸೆರೆಯಾದ ಈ ವೀಡಿಯೋ ಊರಿನ ಜನರಲ್ಲಿ ಭಯ ಮೂಡಿಸಿದ್ದು ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದೆ. ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.