Tag: Uttarakhand

  • ಮುಸ್ಲಿಮರ ಬಹುಪತ್ನಿತ್ವ ಕಂಡು ಬೇರೆಯವರಿಗೆ ಹೊಟ್ಟೆಕಿಚ್ಚು: ಜಾವೇದ್‌ ಅಖ್ತರ್‌

    ಮುಸ್ಲಿಮರ ಬಹುಪತ್ನಿತ್ವ ಕಂಡು ಬೇರೆಯವರಿಗೆ ಹೊಟ್ಟೆಕಿಚ್ಚು: ಜಾವೇದ್‌ ಅಖ್ತರ್‌

    – ಹಿಂದೂಗಳು ಅನಧಿಕೃತವಾಗಿ ಇಬ್ಬರು ಪತ್ನಿಯರನ್ನ ಹೊಂದಿರ್ತಾರೆ ಎಂದ ಚಿತ್ರ ಸಾಹಿತಿ

    ನವದೆಹಲಿ: ಉತ್ತರಾಖಂಡ ರಾಜ್ಯದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೆ (Uniform Civil Code Bil) ಬೆಂಬಲ ವ್ಯಕ್ತಪಡಿಸಿರುವ ಖ್ಯಾತ ಚಿತ್ರ ಸಾಹಿತಿ ಜಾವೇದ್‌ ಅಖ್ತರ್‌ (Javed Akhtar), ಇದೇ ವೇಳೆ ಮುಸ್ಲಿಮರ ಬಹುಪತ್ನಿತ್ವ ನೋಡಿ ಬೇರೆಯವರಿಗೆ ಹೊಟ್ಟೆಕಿಚ್ಚು ಎಂದು ಹಾಸ್ಯ ಮಾಡಿದ್ದಾರೆ.

    ಹಿಂದೂಗಳು (Hindu) ಅನಧಿಕೃತವಾಗಿ ಇಬ್ಬರು ಪತ್ನಿಯರನ್ನು ಹೊಂದಿರುತ್ತಾರೆ. ಮಾಹಿತಿ ಪ್ರಕಾರ ಇಂತಹವರ ಸಂಖ್ಯೆ ಹೆಚ್ಚಾಗಿಯೇ ಇದೆ. ಹೀಗಾಗಿ ಸಂಹಿತೆಯಲ್ಲಿ ಮುಸ್ಲಿಮರಿಗೆ ಮಾತ್ರ ಬಹುಪತ್ನಿತ್ವ ನಿಷೇಧ ಮಾಡುವುದು ಸರಿಯಲ್ಲ. ನಾನು ಸಮಾನ ಹಕ್ಕು ಮತ್ತು ಕಾನೂನಿನ (Law) ಪರವಾಗಿದ್ದೇನೆ. ನನ್ನ ಮಗ ಮತ್ತು ಮಗಳಿಗೂ ಆಸ್ತಿಯಲ್ಲಿ ಸಮಪಾಲು ನೀಡಿದ್ದೇನೆ. ಹಾಗೆಯೇ ಇದು ಎಲ್ಲರಿಗೂ ಅನ್ವಯವಾಗುವಂತೆ ಇರಬೇಕು. ಮುಸ್ಲಿಮರನ್ನು ಟೀಕಿಸುವುದಕ್ಕೆ ಮಾತ್ರವೇ ಜಾರಿಗೆ ತಂದಂತೆ ಆಗಬಾರದು ಎಂದು ಮನವಿ ಮಾಡಿದ್ದಾರೆ.

    ಕೆಲ ದಿನಗಳ ಹಿಂದೆಯಷ್ಟೇ ಉತ್ತರಾಖಂಡ ಸರ್ಕಾರ (Uttarakhand Government) ಏಕರೂಪ ನಾಗರಿಕ ಸಂಹಿತೆಯನ್ನು ಘೋಷಣೆ ಮಾಡಿತು. ಇದನ್ನೂ ಓದಿ: ಏಕರೂಪ ನಾಗರಿಕ ಸಂಹಿತೆ; 1835-2024ರ ವರೆಗೆ ಒಂದು ನೋಟ..

    ಏಕರೂಪ ನಾಗರಿಕ ಸಂಹಿತೆ:
    ರಾಜ್ಯದ ಮುಸ್ಲಿಮರು ಸೇರಿದಂತೆ ಎಲ್ಲಾ ಧರ್ಮದವರು 2ನೇ ವಿವಾಹವಾಗುವುದು ಅಪರಾಧ. ಒಬ್ಬ ವ್ಯಕ್ತಿಗೆ ಒಂದು ಮದುವೆಗೆ ಮಾತ್ರ ಕಾನೂನಿನ ಮಾನ್ಯತೆ ಇರಲಿದೆ. ಹಾಲಿ ಷರಿಯಾ ಕಾನೂನಿನಡಿ ಮುಸ್ಲಿಮರು ಕಾನೂನು ಬದ್ಧವಾಗಿಯೇ 3 ವಿವಾಹವಾಗುವ ಅವಕಾಶವಿದೆ. ವಿವಾಹ, ವಿಚ್ಛೇದನ, ಆಸ್ತಿ, ಉತ್ತರದಾಯಿತ್ವ ಎಲ್ಲಾ ವಿಚಾರದಲ್ಲಿ ಎಲ್ಲಾ ಧರ್ಮದ ಜನರಿಗೆ ಒಂದೇ ನಿಯಮ ಅನ್ವಯವಾಗುತ್ತದೆ. ಇದನ್ನೂ ಓದಿ: UCC ಬಿಲ್‌ ಪಾಸ್‌ – ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸಿದ ದೇಶದ ಮೊದಲ ರಾಜ್ಯ ಉತ್ತರಾಖಂಡ

    ಲಿವ್ ಇನ್ ಸಂಬಂಧಕ್ಕೆ ನೋಂದಣಿ ಕಡ್ಡಾಯ ಮಾಡಲಾಗಿದೆ. ನೋಂದಣಿ 1 ತಿಂಗಳು ತಡವಾದರೆ 3 ತಿಂಗಳು ಜೈಲು, 25 ಸಾವಿರ ರೂ. ದಂಡ ವಿಧಿಸಲಾಗುತ್ತದೆ. ನೋಂದಣಿ ಸಂಶಯಾಸ್ಪದವಾಗಿದ್ದರೆ ತನಿಖೆ ನಡೆಸಲಾಗುತ್ತದೆ. ಲಿವ್ ಇನ್ ಸಂಬಂಧದಿಂದ ಜನಿಸಿದ ಮಕ್ಕಳಿಗೆ ಕಾನೂನು ಮಾನ್ಯತೆ ಸೇರಿದಂತೆ ಆಸ್ತಿಯಲ್ಲೂ ಸಮಪಾಲು ಸಿಗಲಿದೆ. ಲಿವ್ ಇನ್ ಸಂಗಾತಿ ತೊರೆದಲ್ಲಿ ಜೀವನಾಂಶ ಪಡೆಯಬಹುದು. ಸಂಬಂಧ ಮುಂದುವರಿಸಲು ಇಷ್ಟವಿಲ್ಲದ ಜೋಡಿ, ದಾಖಲೆಗಳನ್ನು ಸಲ್ಲಿಸಿ ಲಿಖಿತ ಹೇಳಿಕೆ ನೀಡಿ ಲಿವ್‌ ಇನ್‌ ಸಂಬಂಧ ಕಡಿತಗೊಳಿಸಬಹುದು. ಈ ಮಸೂದೆಯಿಂದ ಬುಡಕಟ್ಟು ಸಮುದಾಯವನ್ನು ಹೊರಗಿಡಲಾಗಿದೆ.

    ಅತ್ಯಾಚಾರ ಅಥವಾ ಅನೈಸರ್ಗಿಕ ಲೈಂಗಿಕ ಕ್ರಿಯೆ ನಡೆಸಿದ ಪತಿಗೆ ವಿಚ್ಛೇದನ ನೀಡುವ ಹಕ್ಕನ್ನು ಮಸೂದೆ ಮಹಿಳೆಯರಿಗೆ ನೀಡುತ್ತದೆ. ಮದುವೆಯಾದ ಒಂದೇ ವರ್ಷದೊಳಗೆ ವಿವಾಹ ವಿಚ್ಛೇದನ ಪಡೆಯುವುದನ್ನು ಅಸಾಧಾರಣ ಸಂದರ್ಭ ಹೊರತುಪಡಿಸಿ ಉಳಿದ ಸನ್ನಿವೇಶಗಳಲ್ಲಿ ನಿರ್ಬಂಧಿಸುವ ಅಂಶವಿದೆ. ಅತ್ಯಾಚಾರ ಪ್ರಕರಣದಲ್ಲಿ ಪತಿ ಪತಿ ಸಿಲುಕಿದರೆ ಆತನಿಂದ ಪತ್ನಿ ವಿಚ್ಛೇದನ ಕೇಳಬಹುದು. ಇದನ್ನೂ ಓದಿ: Shivamogga Lok Sabha 2024: ಬಿಎಸ್‌ವೈ v/s ಬಂಗಾರಪ್ಪ ಫ್ಯಾಮಿಲಿ – ಯಾರಿಗೆ ಮಣೆ ಹಾಕ್ತಾರೆ ಮಲೆನಾಡ ಜನ?

    ವಿವಾಹವಾದ 60 ದಿನದ ಒಳಗಡೆ ನೋಂದಣಿ ಮಾಡಿಸಬೇಕು. 2010ರ ಮಾ.26ರ ನಂತರ ಮದುವೆಯಾದವರು 6 ತಿಂಗಳೊಳಗೆ ನೋಂದಣಿ ಮಾಡಿಸುವುದು ಕಡ್ಡಾಯ. ನಿರ್ಲಕ್ಷಿಸಿದರೆ 20 ಸಾವಿರ ರೂ. ದಂಡ ವಿಧಿಸಲಾಗುತ್ತದೆ. ಆದರೆ ನೋಂದಣಿಯಾಗದ ವಿವಾಹವನ್ನು ಅಸಿಂಧು ಎಂದು ಪರಿಗಣನೆ ಮಾಡುವುದಿಲ್ಲ.

  • ಉತ್ತರಾಖಂಡದ ಏಕರೂಪ ನಾಗರಿಕ ಸಂಹಿತೆ ಮಸೂದೆಗೆ ರಾಷ್ಟ್ರಪತಿ ಅನುಮೋದನೆ

    ಉತ್ತರಾಖಂಡದ ಏಕರೂಪ ನಾಗರಿಕ ಸಂಹಿತೆ ಮಸೂದೆಗೆ ರಾಷ್ಟ್ರಪತಿ ಅನುಮೋದನೆ

    ಡೆಹ್ರಾಡೂನ್: ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಅವರು ಬುಧವಾರ ಉತ್ತರಾಖಂಡದ ಏಕರೂಪ ನಾಗರಿಕ ಸಂಹಿತೆ (UCC) ಮಸೂದೆಗೆ ಅನುಮೋದನೆ ನೀಡಿದ್ದಾರೆ ಎಂದು ರಾಜ್ಯ ಸರ್ಕಾರ ದೃಢಪಡಿಸಿದೆ.

    ರಾಷ್ಟ್ರಪತಿಗಳ ಅನುಮೋದನೆಯೊಂದಿಗೆ ಉತ್ತರಾಖಂಡವು ಯುಸಿಸಿಯನ್ನು ಜಾರಿಗೆ ತಂದ ದೇಶದ ಮೊದಲ ರಾಜ್ಯವಾಗಲು ಸಿದ್ಧವಾಗಿದೆ. ಉತ್ತರಾಖಂಡದ (Uttarakhand) ರಾಜ್ಯಪಾಲ ಗುರ್ಮಿತ್ ಸಿಂಗ್ ಅವರು ಫೆ.29 ರಂದು ರಾಜ್ಯ ಸರ್ಕಾರವು ಕಳುಹಿಸಿದ್ದ ಮಸೂದೆಯನ್ನು ರಾಷ್ಟ್ರಪತಿ ಮುರ್ಮು ಅವರ ಅನುಮೋದನೆಗೆ ಕಳುಹಿಸಿದ್ದರು. ಇದನ್ನೂ ಓದಿ: ಉತ್ತರಾಖಂಡ ವಿಧಾನಸಭೆಯಲ್ಲಿ ಏಕರೂಪದ ನಾಗರಿಕ ಸಂಹಿತೆ ಮಸೂದೆ ಮಂಡನೆ

    ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಸರ್ಕಾರವು ಫೆ.6 ರಂದು ಯುಸಿಸಿ ಮಸೂದೆಯನ್ನು ಮಂಡಿಸಿ, ಅದರ ಮಹತ್ವವನ್ನು ಒತ್ತಿಹೇಳಿತ್ತು. ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ, ವಿಧಾನಸಭೆಯಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಮಸೂದೆಯ ಅಂಗೀಕಾರವು ಉತ್ತರಾಖಂಡದ ಇತಿಹಾಸದಲ್ಲಿ ಐತಿಹಾಸಿಕ ದಿನ ಎಂದು ಬಣ್ಣಿಸಿದ್ದರು.

    ಫೆ.7 ರಂದು ಉತ್ತರಾಖಂಡ ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಮಸೂದೆಯನ್ನು ಬಹುಮತದೊಂದಿಗೆ ಅಂಗೀಕರಿಸಲಾಗಿತ್ತು. ಎಲ್ಲಾ ಸಮುದಾಯಗಳಿಗೆ ಒಂದೇ ರೀತಿಯ ಅಥವಾ ಏಕರೂಪದ ಕಾನೂನುಗಳನ್ನು ಪ್ರಸ್ತಾಪಿಸುವ ಏಕರೂಪ ನಾಗರಿಕ ಸಂಹಿತೆಯನ್ನು ಮುಖ್ಯಮಂತ್ರಿಯವರು ವಿಶೇಷ ಅಧಿವೇಶನದಲ್ಲಿ ಮಂಡಿಸಿದ್ದರು. ಇದನ್ನೂ ಓದಿ: ಏಕರೂಪ ನಾಗರಿಕ ಸಂಹಿತೆ; 1835-2024ರ ವರೆಗೆ ಒಂದು ನೋಟ..

    ಏಕರೂಪ ನಾಗರಿಕ ಸಂಹಿತೆಯು ಭಾರತದಲ್ಲಿ ಎಲ್ಲಾ ನಾಗರಿಕರಿಗೆ ವೈಯಕ್ತಿಕ ವಿಷಯಗಳಿಗೆ ಏಕರೂಪದ ಕಾನೂನು ಅನ್ವಯಿಸುವ ಪ್ರಸ್ತಾಪವಾಗಿದೆ. ಮದುವೆ, ವಿಚ್ಛೇದನ, ಉತ್ತರಾಧಿಕಾರ ಮತ್ತು ಆಸ್ತಿ ಹಕ್ಕುಗಳು ಇದರಲ್ಲಿ ಸೇರಿವೆ. ಯುಸಿಸಿ ಎಲ್ಲಾ ನಾಗರಿಕರಿಗೆ ಅವರ ಧರ್ಮ, ಲಿಂಗ ಅಥವಾ ಲೈಂಗಿಕ ದೃಷ್ಟಿಕೋನವನ್ನು ಲೆಕ್ಕಿಸದೆ ಸಮಾನವಾಗಿ ಅನ್ವಯಿಸುತ್ತದೆ.

  • ಉತ್ತರಾಖಂಡದ ಸುರಂಗದಲ್ಲಿ ಸಿಲುಕಿದವರನ್ನು ರಕ್ಷಿಸಿದ್ದ ರ‍್ಯಾಟ್ ಹೋಲ್ ಮೈನಿಂಗ್ ಹೀರೋ ಮನೆ ನೆಲಸಮಗೊಳಿಸಿದ ಅಧಿಕಾರಿಗಳು

    ಉತ್ತರಾಖಂಡದ ಸುರಂಗದಲ್ಲಿ ಸಿಲುಕಿದವರನ್ನು ರಕ್ಷಿಸಿದ್ದ ರ‍್ಯಾಟ್ ಹೋಲ್ ಮೈನಿಂಗ್ ಹೀರೋ ಮನೆ ನೆಲಸಮಗೊಳಿಸಿದ ಅಧಿಕಾರಿಗಳು

    – ಮಗಳ ಪರೀಕ್ಷೆಗೆ ಹಾಜರಾಗಲಿಲ್ಲ ಎಂದು ಕಣ್ಣೀರಿಟ್ಟ ತಾಯಿ

    ನವದೆಹಲಿ: ಕಳೆದ ವರ್ಷ ಉತ್ತರಾಖಂಡದಲ್ಲಿ (Uttarakhand )‌ ನಿರ್ಮಾಣ ಹಂತದ ಸುರಂಗದಲ್ಲಿ ಸಿಲುಕಿದ್ದ 41 ಕಾರ್ಮಿಕರನ್ನು ರಕ್ಷಿಸುವ ಕಾರ್ಯದಲ್ಲಿ ತೊಡಗಿದ್ದ ರ‍್ಯಾಟ್-ಹೋಲ್ ಗಣಿಗಾರಿಕೆ ತಜ್ಞ ವಕೀಲ್ ಹಸನ್ ಅವರ ಮನೆಯನ್ನು ಅಕ್ರಮ ಎಂದು ಅಧಿಕಾರಿಗಳು ನೆಲಸಮಗೊಳಿಸಿದ್ದಾರೆ. ಇದರಿಂದ ತಮ್ಮ ಮಗಳು ಗುರುವಾರ ಬರೆಯಬೇಕಾಗಿದ್ದ ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗಿಲ್ಲ ಎಂದು ಅವರ ಕುಟುಂಬ ಹೇಳಿಕೊಂಡಿದೆ.

    ಹಸನ್ ಅವರ ಪುತ್ರಿಯ ಪುಸ್ತಕಗಳು ಮತ್ತು ಶಾಲಾ ಸಮವಸ್ತ್ರ ಸೇರಿದಂತೆ ಮನೆಯ ವಸ್ತುಗಳು ಮನೆಯ ಅವಶೇಷಗಳ ಅಡಿ ಸಿಲುಕಿವೆ. ಇದರಿಂದ 10ನೇ ತರಗತಿ ವಿದ್ಯಾರ್ಥಿನಿಯಾದ ಅಲಿಜಾ ವಿಜ್ಞಾನ ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗಲಿಲ್ಲ ಎಂದು ಅವರ ಕುಟುಂಬದ ಸದಸ್ಯರು ಹೇಳಿಕೊಂಡಿದ್ದಾರೆ.

    ಪರೀಕ್ಷೆಯ ದಿನದಂದು ನನ್ನ ಮಗಳು ರಸ್ತೆಯಲ್ಲಿ ನಿಂತಿದ್ದಾಳೆ. ಆಕೆಯ ಪುಸ್ತಕಗಳು, ಶಾಲಾ ಉಡುಗೆ ಎಲ್ಲವೂ ಅವಶೇಷಗಳ ಅಡಿಯಲ್ಲಿ ಎಲ್ಲೋ ಚದುರಿಹೋಗಿವೆ ಎಂದು ಹಸನ್ ಅವರ ಪತ್ನಿ ಸಬಾನಾ ಮಾಧ್ಯಮಗಳ ಮುಂದೆ ದುಃಖವನ್ನು ತೋಡಿಕೊಂಡಿದ್ದಾರೆ.

    ದೆಹಲಿ ಅಭಿವೃದ್ಧಿ ಪ್ರಾಧಿಕಾರ (Delhi Development Authority) ಅಧಿಕಾರಿಗಳು ಮನೆಗೆ ಬಂದಾಗ ನಮ್ಮ ಮಗ ಮತ್ತು ಮಗಳು ಮಾತ್ರ ಮನೆಯಲ್ಲಿ ಇದ್ದರು. ಈ ವೇಳೆ ಬೇರೆ ಯಾರು ಮನೆಯಲ್ಲಿ ಇರಲಿಲ್ಲ. ಬಳಿಕ ಮಾಹಿತಿ ತಿಳಿದು ನಾನು ಮತ್ತು ನನ್ನ ಪತಿ ಇಲ್ಲಿಗೆ ಬಂದು ಅಧಿಕಾರಿಗಳಿಗೆ ಮನವಿ ಮಾಡಿಕೊಂಡೆವು. ಉತ್ತರಾಖಂಡ್‍ನ ಸುರಂಗದಲ್ಲಿ ಸಿಲುಕಿದವರ ರಕ್ಷಣೆಯಲ್ಲಿ ಹಸನ್ ಪಾತ್ರವನ್ನು ತಿಳಿಸಿದೆವು ಆದರೂ ಅಧಿಕಾರಿಗಳು ಮನೆಯನ್ನು ಕೆಡವಿದ್ದಾರೆ ಎಂದು ಸಬಾನಾ ಅವರು ಹೇಳಿಕೊಂಡಿದ್ದಾರೆ.

    ಇನ್ನೂ ಉತ್ತರಕಾಶಿಯ ಸಿಲ್ಕ್ಯಾರಾ ಬರ್ಕೋಟ್ ಸುರಂಗದಲ್ಲಿ ಸಿಲುಕಿರುವ ಕಾರ್ಮಿಕರ ರಕ್ಷಣಾ ಕಾರ್ಯಾಚರಣೆಯಲ್ಲಿ ವಕೀಲ್ ಅವರ ಕೊಡುಗೆಯ ಬಗ್ಗೆ ನಮಗೆ ತಿಳಿದಿರಲಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

    ಪರೀಕ್ಷೆಯಲ್ಲಿ ತಪ್ಪಿಸಿಕೊಂಡ ನಂತರ ಅಲಿಜಾ ತನ್ನ ಶಿಕ್ಷಕರೊಂದಿಗೆ ಮಾತನಾಡಿದ್ದಾಳೆ, ಅವರು ಸಹಾಯ ಮಾಡುವ ಭರವಸೆ ನೀಡಿದ್ದಾರೆ ಎಂದು ಅವರು ತಿಳಿದು ಬಂದಿದೆ.

  • ಉತ್ತರಾಖಂಡ ಅಕ್ರಮ ಮಸೀದಿ ತೆರವು ವೇಳೆ ಹಿಂಸಾಚಾರ – 4 ಸಾವು, 250 ಮಂದಿಗೆ ಗಾಯ

    ಉತ್ತರಾಖಂಡ ಅಕ್ರಮ ಮಸೀದಿ ತೆರವು ವೇಳೆ ಹಿಂಸಾಚಾರ – 4 ಸಾವು, 250 ಮಂದಿಗೆ ಗಾಯ

    ಡೆಹ್ರಾಡೂನ್: ಉತ್ತರಾಖಂಡದ (Uttarakhand) ಹಲ್ದ್ವಾನಿಯಲ್ಲಿ (Haldwani) ಅನಧಿಕೃತ ಮದರಸಾ ಮತ್ತು ಮಸೀದಿಯ ತೆರವು ವಿಚಾರವಾಗಿ ನಡೆಯುತ್ತಿರುವ ಹಿಂಸಾಚಾರದಲ್ಲಿ (Uttarakhand Violence) ನಾಲ್ವರು ಸಾವನ್ನಪ್ಪಿದ್ದು, 250 ಮಂದಿ ಗಾಯಗೊಂಡಿದ್ದಾರೆ.

    ನಗರದಲ್ಲಿ ಕರ್ಫ್ಯೂ ವಿಧಿಸಲಾಗಿದ್ದು, ಗಲಭೆಕೋರರ ವಿರುದ್ಧ ಕಂಡಲ್ಲಿ ಗುಂಡು ಆದೇಶ ಹೊರಡಿಸಲಾಗಿದೆ. ಹಿಂಸಾಚಾರ ವ್ಯಾಪಿಸದಂತೆ ತಡೆಯಲು ಇಂಟರ್ನೆಟ್ ಸೇವೆಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ. ಹಿಂಸಾಚಾರದ ಹಿನ್ನೆಲೆಯಲ್ಲಿ ಶಾಲೆಗಳನ್ನೂ ಮುಚ್ಚಲಾಗಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ಯುಪಿಎ Vs ಎನ್‌ಡಿಎ – ಯಾರ ಅವಧಿಯಲ್ಲಿ ಎಷ್ಟು ಸಾಧನೆ? ಶ್ವೇತ ಪತ್ರದಲ್ಲಿ ಏನಿದೆ? ಇಲ್ಲಿದೆ ಸಂಖ್ಯಾ ಮಾಹಿತಿಗಳು

    ನ್ಯಾಯಾಲಯದ ಆದೇಶದ ನಂತರ ಗುರುವಾರ ಪೊಲೀಸರ ಸಮ್ಮುಖದಲ್ಲಿ ಅಧಿಕಾರಿಗಳ ತಂಡ, ಮದರಸಾ ಮತ್ತು ಮಸೀದಿಯ ಕಟ್ಟಡಗಳನ್ನು ನೆಲಸಮಗೊಳಿಸಲು ಪ್ರಯತ್ನಿಸಿದಾಗ ಹಿಂಸಾಚಾರ ಆರಂಭವಾಯಿತು. ಈ ಕ್ರಮಕ್ಕೆ ಹಲ್ದ್ವಾನಿಯ ವನ್ಭುಲ್ಪುರ ಪ್ರದೇಶದಲ್ಲಿ ಜನಸಮೂಹದಿಂದ ತೀವ್ರ ಪ್ರತಿರೋಧ ವ್ಯಕ್ತವಾಯಿತು.

    ಗಲಭೆಕೋರರು ನಡೆಸಿದ ಕಲ್ಲು ತೂರಾಟದಲ್ಲಿ 50ಕ್ಕೂ ಹೆಚ್ಚು ಪೊಲೀಸರು ಗಾಯಗೊಂಡಿದ್ದು, ಹಲವಾರು ಆಡಳಿತ ಅಧಿಕಾರಿಗಳು, ಪುರಸಭೆಯ ಕಾರ್ಯಕರ್ತರು ಮತ್ತು ಪತ್ರಕರ್ತರು ಗಾಯಗೊಂಡಿದ್ದಾರೆ. ಅಲ್ಲದೇ ಉದ್ರಿಕ್ತರ ಗುಂಪು, ಪೊಲೀಸ್ ಠಾಣೆಯ ಹೊರಗಿನ ವಾಹನಗಳಿಗೆ ಬೆಂಕಿ ಹಚ್ಚಿದ್ದರಿಂದ ಹಿಂಸಾಚಾರ ಉಲ್ಬಣಗೊಂಡಿದ್ದು, ಕಾನೂನು ಸುವ್ಯವಸ್ಥೆ ಮತ್ತಷ್ಟು ಹದಗೆಟ್ಟಿದೆ.

    ಸರ್ಕಾರಿ ಜಾಗದಲ್ಲಿ ಮದರಸಾ ಮತ್ತು ಮಸೀದಿ ನಿರ್ಮಿಸಲಾಗಿದೆ. ಕೋರ್ಟಿನ ಆದೇಶದ ಮೇರೆಗೆ ಕೆಡವಲಾಗಿದೆ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಪ್ರಹ್ಲಾದ್ ಮೀನಾ ತಿಳಿಸಿದ್ದಾರೆ.

    ಹಲ್ದಾನಿಯ ಮಸೀದಿ ಹಾಗೂ ಮದರಸಾ ತೆರವು ನಿಲ್ಲಿಸುವಂತೆ ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ (ಪಿಐಎಲ್) ಮೇಲೆ ಉತ್ತರಾಖಂಡ ಹೈಕೋರ್ಟ್ ಗುರುವಾರ ವಿಚಾರಣೆ ನಡೆಸಿತ್ತು. ಪ್ರಕರಣದ ಮುಂದಿನ ವಿಚಾರಣೆಯನ್ನು ಫೆಬ್ರವರಿ 14 ರಂದು ನಿಗದಿಪಡಿಸಲಾಗಿದೆ. ಇದನ್ನೂ ಓದಿ: ಸೂಲಿಬೆಲೆ ಕಾರ್ಯಕ್ರಮಕ್ಕೆ ಕಾಂಗ್ರೆಸ್‌ ಅಡ್ಡಿ – ವಿರೋಧದ ನಡ್ವೆ ಯಶಸ್ವಿಯಾದ ನಮೋ ಭಾರತ್‌

  • ಮದರಸಾ ಧ್ವಂಸಗೊಳಿಸಿದ್ದಕ್ಕೆ ಪೊಲೀಸರ ಮೇಲೆ ಕಲ್ಲು ತೂರಾಟ – ಕಂಡಲ್ಲಿ ಗುಂಡು ಹಾರಿಸಲು ಆದೇಶ

    ಮದರಸಾ ಧ್ವಂಸಗೊಳಿಸಿದ್ದಕ್ಕೆ ಪೊಲೀಸರ ಮೇಲೆ ಕಲ್ಲು ತೂರಾಟ – ಕಂಡಲ್ಲಿ ಗುಂಡು ಹಾರಿಸಲು ಆದೇಶ

    ಡೆಹ್ರಾಡೂನ್: ಉತ್ತರಾಖಂಡದ (Uttarakhand) ಹಲ್ದ್ವಾನಿಯಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದ್ದ ಮದರಸಾವನ್ನು ಧ್ವಂಸಗೊಳಿಸಿದ (Madrasa Razed) ನಂತರ ಪರಿಸ್ಥಿತಿ ಉದ್ವಿಗ್ನಗೊಂಡಿದೆ. ದುಷ್ಕರ್ಮಿಗಳು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿ, ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ.

    ಪರಿಸ್ಥಿತಿ ಉದ್ವಿಗ್ನಗೊಳ್ಳುತ್ತಿದ್ದಂತೆ ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ (Pushkar Singh Dhami) ಅವರು ಹಲ್ದ್ವಾನಿಯ ಒಂಭುಲ್‌ಪುರದಲ್ಲಿ ಕಂಡಲ್ಲಿ ಗುಂಡು ಹಾರಿಸುವಂತೆ (ಶೂಟ್-ಅಟ್-ಸೈಟ್) ಆದೇಶ ಹೊರಡಿಸಿದ್ದಾರೆ. ಜೊತೆಗೆ ಹಲ್ದ್ವಾನಿಯ ಶಾಲೆಗಳಿಗೆ ಶುಕ್ರವಾರ (ಫೆ.9) ರಜೆ ಘೋಷಿಸಿದ್ದಾರೆ. ಇದನ್ನೂ ಓದಿ: ಯುಪಿಎ 10 ವರ್ಷಗಳಲ್ಲಿ ಆರ್ಥಿಕತೆಯನ್ನು ನಿಷ್ಕ್ರಿಯಗೊಳಿಸಿತ್ತು: ಶ್ವೇತಪತ್ರ ಹೊರಡಿಸಿದ ಮೋದಿ ಸರ್ಕಾರ

    ಬಂಭುಲ್ಪುರ ಧಗ ಧಗ:
    ಹಲ್ದ್ವಾನಿಯ ಮುನ್ಸಿಪಲ್ ಕಾರ್ಪೊರೇಷನ್ ಅಧಿಕಾರಿಗಳು ಗುರುವಾರ (ಫೆ.8) ಬಂಭುಲ್ಪುರ ಪೊಲೀಸ್ ಠಾಣೆ ಬಳಿ ಅಕ್ರಮವಾಗಿ ನಿರ್ಮಿಸಿದ್ದ ಮದರಸಾವನ್ನು ಬುಲ್ಡೋಜರ್‌ನಿಂದ ಧ್ವಂಸಗೊಳಿಸಿದರು. ಇದರಿಂದ ರೊಚ್ಚಿಗೆದ್ದ ಸ್ಥಳೀಯರ ಗುಂಪೊಂದು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿ, ಪೊಲೀಸ್ ವಾಹನಗಳಿಗೆ ಬೆಂಕಿ ಹಚ್ಚಿದೆ. ವಿದ್ಯುತ್ ಟ್ರಾನ್ಸ್ಫಾರ್ಮರ್‌ಗಳಿಗೂ ಬೆಂಕಿ ಹಚ್ಚಿದೆ. ಈ ವೇಳೆ ಹಲವು ಪೊಲೀಸ್ ಅಧಿಕಾರಿಗಳು ಗಾಯಗೊಂಡರು. ಗಲಭೆಕೋರರ ಗುಂಪು ಬಂಭುಲ್‌ಪುರ ಪೊಲೀಸ್ ಠಾಣೆಯನ್ನು ಸುತ್ತುವರಿದಿದ್ದರಿಂದ ಹಲವಾರು ಪತ್ರಕರ್ತರು ಮತ್ತು ಆಡಳಿತ ಅಧಿಕಾರಿಗಳು ಪೊಲೀಸ್ ಠಾಣೆಯೊಳಗೆ ಸಿಲುಕಿದ್ದರು. ಇದರಿಂದಾಗಿ ಗಲಭೆಕೋರರನ್ನು ಹತ್ತಿಕ್ಕಲು ಸರ್ಕಾರ ಕಂಡಲ್ಲಿ ಗುಂಡು ಹಾರಿಸಲು ಆದೇಶ ಹೊರಡಿಸಿದೆ.

    ಸದ್ಯ ಹಲ್ದ್ವಾನಿಗೆ ಹೆಚ್ಚುವರಿ ಭದ್ರತಾ ಪಡೆಗಳನ್ನ ನಿಯೋಜಿಸಲಾಗಿದೆ. ಸಿಎಂ ಪುಷ್ಕರ್ ಸಿಂಗ್ ಧಾಮಿ ಅವರು ಮುಖ್ಯ ಕಾರ್ಯದರ್ಶಿ ಮತ್ತು ಪೊಲೀಸ್ ಮಹಾನಿರ್ದೇಶಕರೊಂದಿಗೆ ಸಭೆ ನಡೆಸಿದ ನಂತರ, ಬಂಭುಲ್‌ಪುರದಲ್ಲಿ ಕರ್ಫ್ಯೂ ವಿಧಿಸಿದ್ದು, ಕಂಡಲ್ಲಿ ಗುಂಡು ಹಾರಿಸುವಂತೆ ಆದೇಶ ಹೊರಡಿಸಿದ್ದಾರೆ. ಇದನ್ನೂ ಓದಿ: ರಾಜ್ಯಮಟ್ಟದ ಜನಸ್ಪಂದನ ಕಾರ್ಯಕ್ರಮ ಯಶಸ್ವಿ; 20 ಸಾವಿರ ಜನ ಭಾಗಿ, 11,000 ಅರ್ಜಿ ಸಲ್ಲಿಕೆ

    ಬಳಿಕ ಪರಿಸ್ಥಿತಿ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ, ಹಲ್ದ್ವಾನಿಯ ಬಂಭುಲ್‌ಪುರ ಪ್ರದೇಶದಲ್ಲಿ, ಅಕ್ರಮವಾಗಿ ಮದರಸಾವನ್ನು ನಿರ್ಮಿಸಲಾಗಿತ್ತು. ನ್ಯಾಯಾಲಯದ ಆದೇಶದ ಮೇರೆಗೆ ಅತಿಕ್ರಮ ಕಟ್ಟಡಗಳ ತೆರವುಗೊಳಿಸುವ ಅಭಿಯಾನಕ್ಕೆ ತೆರಳಿದ್ದ ಅಧಿಕಾರಿಗಳ ತಂಡ ಮದರಸಾವನ್ನು ಧ್ವಂಸಗೊಳಿಸಿದೆ. ಇದರಿಂದ ಕೆಲ ಸಮಾಜ ವಿರೋಧಿಗಳು ಪೊಲೀಸರೊಂದಿಗೆ ಘರ್ಷಣೆಗಿಳಿದಿದ್ದು, ಕಲ್ಲು ತೂರಿದ್ದಾರೆ. ಈ ವೇಳೆ ಕೆಲ ಅಧಿಕಾರಿಗಳು ಗಾಯಗೊಂಡಿದ್ದಾರೆ. ಸದ್ಯ ಹೆಚ್ಚುವರಿ ಕೇಂದ್ರೀಯ ಪಡೆಗಳನ್ನು ಭದ್ರತೆಗೆ ನಿಯೋಜಿಸಲಾಗಿದೆ. ಜನರಲ್ಲಿ ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದೇವೆ. ಕರ್ಫ್ಯೂ ಜಾರಿಯಲ್ಲಿದ್ದು, ಗಲಭೆಕೋರರು ಮತ್ತು ಅತಿಕ್ರಮಣಕಾರರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.

  • UCC ಬಿಲ್‌ ಪಾಸ್‌ – ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸಿದ ದೇಶದ ಮೊದಲ ರಾಜ್ಯ ಉತ್ತರಾಖಂಡ

    UCC ಬಿಲ್‌ ಪಾಸ್‌ – ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸಿದ ದೇಶದ ಮೊದಲ ರಾಜ್ಯ ಉತ್ತರಾಖಂಡ

    – UCC ಮಸೂದೆಯಲ್ಲಿ ಏನಿದೆ?

    ಡೆಹ್ರಾಡೂನ್‌: ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ (Pushkar Singh Dhami) ನೇತೃತ್ವದ ಸರ್ಕಾರವು ಮಂಡಿಸಿದ ಏಕರೂಪ ನಾಗರಿಕ ಸಂಹಿತೆ ಮಸೂದೆಯನ್ನು ಉತ್ತರಾಖಂಡ ವಿಧಾನಸಭೆಯಲ್ಲಿ ಬುಧವಾರ (ಫೆ.7) ಅಂಗೀಕರಿಸಿದೆ. ಈ ಮೂಲಕ ಏಕರೂಪ ನಾಗರಿಕ ಸಂಹಿತೆಯನ್ನು (UCC) ಜಾರಿಗೊಳಿಸಿದ ದೇಶದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

    ಇನ್ನೂ ಬಿಜೆಪಿ ಆಡಳಿತವಿರುವ ರಾಜಸ್ಥಾನ ಸರ್ಕಾರವೂ ಯುಸಿಸಿ ಅನುಷ್ಠಾನಕ್ಕೆ ಸಿದ್ಧತೆ ನಡೆಸಿದೆ. ಮುಂದಿನ ಅಧಿವೇಶನದಲ್ಲೇ ಕಾಯ್ದೆ ಅನುಷ್ಠಾನಗೊಳಿಸುವುದಾಗಿ ಸರ್ಕಾರದ ಮೂಲಗಳು ತಿಳಿಸಿವೆ. ಇದನ್ನೂ ಓದಿ: ರಾಜಕೀಯ ಸ್ವಾರ್ಥಕ್ಕಾಗಿ ದೇಶ ಒಡೆಯುವ ಮಾತು, ರಾಷ್ಟ್ರವೆಂದರೆ ಕೇವಲ ಒಂದು ತುಂಡು ಭೂಮಿ ಅಲ್ಲ: ಡಿಕೆ ಸುರೇಶ್‌ ಹೇಳಿಕೆ ವಿರುದ್ಧ ಮೋದಿ ಕಿಡಿ 

    ಯುಸಿಸಿ ಮಸೂದೆ ವಿಧಾನಸಭೆಯಲ್ಲಿ ಅಂಗೀಕಾರವಾದ ಬೆನ್ನಲ್ಲೇ ಸಿಎಂ ಪುಷ್ಕರ್‌ ಸಿಂಗ್‌ ಧಾಮಿ ಸಂತಸ ವ್ಯಕ್ತಪಡಿಸಿದ್ದಾರೆ. ಇಂದು ಉತ್ತರಾಖಂಡಕ್ಕೆ ಮಹತ್ವದ ದಿನವಾಗಿದೆ. ದೇಶಾದ್ಯಂತ ಜನರು ಬಹಳ ದಿನಗಳಿಂದ ಕಾಯುತ್ತಿದ್ದ ಮಸೂದೆಯನ್ನು ನಾವು ಅಂಗೀಕರಿಸಿದ್ದೇವೆ. ಯುಸಿಸಿ ಅನುಷ್ಠಾನಗೊಳಿಸಿದ ದೇಶದ ಮೊದಲ ರಾಜ್ಯವೂ ಉತ್ತರಾಖಂಡವೇ (Uttarakhand) ಆಗಿದೆ ಎಂದು ಶ್ಲಾಘಿಸಿದ್ದಾರೆ.

    ಮಸೂದೆಯಲ್ಲಿ ಏನಿದೆ?
    ರಾಜ್ಯದ ಮುಸ್ಲಿಮರು (Muslims) ಸೇರಿದಂತೆ ಎಲ್ಲಾ ಧರ್ಮದವರು 2ನೇ ವಿವಾಹವಾಗುವುದು ಅಪರಾಧ. ಒಬ್ಬ ವ್ಯಕ್ತಿಗೆ ಒಂದು ಮದುವೆಗೆ ಮಾತ್ರ ಕಾನೂನಿನ ಮಾನ್ಯತೆ ಇರಲಿದೆ. ಹಾಲಿ ಷರಿಯಾ ಕಾನೂನಿನಡಿ ಮುಸ್ಲಿಮರು ಕಾನೂನು ಬದ್ಧವಾಗಿಯೇ 3 ವಿವಾಹವಾಗುವ ಅವಕಾಶವಿದೆ. ವಿವಾಹ, ವಿಚ್ಛೇದನ, ಆಸ್ತಿ, ಉತ್ತರದಾಯಿತ್ವ ಎಲ್ಲಾ ವಿಚಾರದಲ್ಲಿ ಎಲ್ಲಾ ಧರ್ಮದ ಜನರಿಗೆ ಒಂದೇ ನಿಯಮ ಅನ್ವಯವಾಗುತ್ತದೆ. ಇದನ್ನೂ ಓದಿ: ಕಾಂಗ್ರೆಸ್‌ 40 ಸ್ಥಾನಗಳನ್ನಾದರೂ ಉಳಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ: ಮೋದಿ ವ್ಯಂಗ್ಯ

    ಲಿವ್ ಇನ್ ಸಂಬಂಧಕ್ಕೆ ನೋಂದಣಿ ಕಡ್ಡಾಯ ಮಾಡಲಾಗಿದೆ. ನೋಂದಣಿ 1 ತಿಂಗಳು ತಡವಾದರೆ 3 ತಿಂಗಳು ಜೈಲು, 25 ಸಾವಿರ ರೂ. ದಂಡ ವಿಧಿಸಲಾಗುತ್ತದೆ. ನೋಂದಣಿ ಸಂಶಯಾಸ್ಪದವಾಗಿದ್ದರೆ ತನಿಖೆ ನಡೆಸಲಾಗುತ್ತದೆ. ಲಿವ್ ಇನ್ ಸಂಬಂಧದಿಂದ ಜನಿಸಿದ ಮಕ್ಕಳಿಗೆ ಕಾನೂನು ಮಾನ್ಯತೆ ಸೇರಿದಂತೆ ಆಸ್ತಿಯಲ್ಲೂ ಸಮಪಾಲು ಸಿಗಲಿದೆ. ಲಿವ್ ಇನ್ ಸಂಗಾತಿ ತೊರೆದಲ್ಲಿ ಜೀವನಾಂಶ ಪಡೆಯಬಹುದು. ಸಂಬಂಧ ಮುಂದುವರಿಸಲು ಇಷ್ಟವಿಲ್ಲದ ಜೋಡಿ, ದಾಖಲೆಗಳನ್ನು ಸಲ್ಲಿಸಿ ಲಿಖಿತ ಹೇಳಿಕೆ ನೀಡಿ ಲಿವ್‌ ಇನ್‌ ಸಂಬಂಧ ಕಡಿತಗೊಳಿಸಬಹುದು. ಈ ಮಸೂದೆಯಿಂದ ಬುಡಕಟ್ಟು ಸಮುದಾಯವನ್ನು ಹೊರಗಿಡಲಾಗಿದೆ.

    ಅತ್ಯಾಚಾರ ಅಥವಾ ಅನೈಸರ್ಗಿಕ ಲೈಂಗಿಕ ಕ್ರಿಯೆ ನಡೆಸಿದ ಪತಿಗೆ ವಿಚ್ಛೇದನ ನೀಡುವ ಹಕ್ಕನ್ನು ಮಸೂದೆ ಮಹಿಳೆಯರಿಗೆ ನೀಡುತ್ತದೆ. ಮದುವೆಯಾದ ಒಂದೇ ವರ್ಷದೊಳಗೆ ವಿವಾಹ ವಿಚ್ಛೇದನ ಪಡೆಯುವುದನ್ನು ಅಸಾಧಾರಣ ಸಂದರ್ಭ ಹೊರತುಪಡಿಸಿ ಉಳಿದ ಸನ್ನಿವೇಶಗಳಲ್ಲಿ ನಿರ್ಬಂಧಿಸುವ ಅಂಶವಿದೆ. ಅತ್ಯಾಚಾರ ಪ್ರಕರಣದಲ್ಲಿ ಪತಿ ಪತಿ ಸಿಲುಕಿದರೆ ಆತನಿಂದ ಪತ್ನಿ ವಿಚ್ಛೇದನ ಕೇಳಬಹುದು. ಇದನ್ನೂ ಓದಿ: ಯಾವುದೇ ಧರ್ಮದವರಿಗೂ 2ನೇ ಮದುವೆ ಅವಕಾಶವಿಲ್ಲ, ಲಿವ್ ಇನ್ ಸಂಬಂಧಕ್ಕೆ ನೋಂದಣಿ ಕಡ್ಡಾಯ – UCC ಮಸೂದೆಯಲ್ಲಿ ಏನಿದೆ?

    ವಿವಾಹವಾದ 60 ದಿನದ ಒಳಗಡೆ ನೋಂದಣಿ ಮಾಡಿಸಬೇಕು. 2010ರ ಮಾ.26ರ ನಂತರ ಮದುವೆಯಾದವರು 6 ತಿಂಗಳೊಳಗೆ ನೋಂದಣಿ ಮಾಡಿಸುವುದು ಕಡ್ಡಾಯ. ನಿರ್ಲಕ್ಷಿಸಿದರೆ 20 ಸಾವಿರ ರೂ. ದಂಡ ವಿಧಿಸಲಾಗುತ್ತದೆ. ಆದರೆ ನೋಂದಣಿಯಾಗದ ವಿವಾಹವನ್ನು ಅಸಿಂಧು ಎಂದು ಪರಿಗಣನೆ ಮಾಡುವುದಿಲ್ಲ.

  • ಉತ್ತರಾಖಂಡ ವಿಧಾನಸಭೆಯಲ್ಲಿ ಏಕರೂಪದ ನಾಗರಿಕ ಸಂಹಿತೆ ಮಸೂದೆ ಮಂಡನೆ

    ಉತ್ತರಾಖಂಡ ವಿಧಾನಸಭೆಯಲ್ಲಿ ಏಕರೂಪದ ನಾಗರಿಕ ಸಂಹಿತೆ ಮಸೂದೆ ಮಂಡನೆ

    ಡೆಹ್ರಾಡೂನ್‌: ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದಂತೆ ಉತ್ತರಾಖಂಡ ಸರ್ಕಾರ (Uttarakhand Government) ಏಕರೂಪ ನಾಗರಿಕ ಸಂಹಿತೆ(UCC) ಮಸೂದೆಯನ್ನು ವಿಧಾನಸಭೆಯಲ್ಲಿ ಮಂಡಿಸಿದೆ.

    ಇಂದು ಸಂವಿಧಾನದ ಮೂಲ ಪ್ರತಿಯೊಂದಿಗೆ ವಿಧಾನಸಭೆ ಪ್ರವೇಶಿಸಿದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ (Pushkar Singh Dhami) ಅವರು ಏಕರೂಪ ನಾಗರಿಕ ಸಂಹಿತೆ ಮಸೂದೆಯನ್ನು ಮಂಡಿಸಿದರು. ಮಸೂದೆ ಮಂಡನೆಯ ವೇಳೆ ಬಿಜೆಪಿ ಸದಸ್ಯರು ರಾಮ್‌ ರಾಮ್‌ ಎಂದು ಮೇಜು ಕುಟ್ಟಿ ಸಂತಸ ವ್ಯಕ್ತಪಡಿಸಿದರು.

    ಎಲ್ಲಾ ನಾಗರಿಕರಿಗೆ ಏಕರೂಪದ ಮದುವೆ, ವಿಚ್ಛೇದನ, ಭೂಮಿ, ಆಸ್ತಿ ಮತ್ತು ಉತ್ತರಾಧಿಕಾರ ಕಾನೂನುಗಳನ್ನು ಪ್ರಸ್ತಾಪಿಸುವ ಅಂಶ ಈ ಮಸೂದೆಯಲ್ಲಿದೆ.

    ಏಕರೂಪದ ನಾಗರಿಕ ಸಂಹಿತೆ ರಚನೆ ಸಂಬಂಧ ಸರ್ಕಾರ ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಾಧೀಶ ರಂಜನಾ ಪ್ರಕಾಶ್‌ ನೇತೃತ್ವದ ಸಮಿತಿಯನ್ನು ರಚಿಸಿತ್ತು. ಈ ಸಮಿತಿ 4 ಸಂಪುಟ ಹೊಂದಿರುವ 749 ಪುಟಗಳಿರುವ ವರದಿ ಮತ್ತು ಹಲವು ಶಿಫಾರಸುಗಳನ್ನು ಸರ್ಕಾರಕ್ಕೆ ನೀಡಿತ್ತು. ಇದನ್ನೂ ಓದಿ: ನಾಯಿ ತಿನ್ನದ ಬಿಸ್ಕತ್ತನ್ನು ಕಾರ್ಯಕರ್ತನಿಗೆ ನೀಡಿದ ರಾಹುಲ್ ಗಾಂಧಿ – ವಿಡಿಯೋ ವೈರಲ್

    ಸಮಿತಿ ಆನ್‌ಲೈನ್‌ ಮೂಲಕ 2.33 ಲಕ್ಷ ಪ್ರತಿಕ್ರಿಯೆ ಪಡೆದಿದ್ದರೆ 70ಕ್ಕೂ ಹೆಚ್ಚು ಸಾರ್ವಜನಿಕ ಕಾರ್ಯಕ್ರಮ ಆಯೋಜಿಸಿ ಜನರಿಂದ ಅಭಿಪ್ರಾಯ ಸಂಗ್ರಹಿಸಿತ್ತು.

    ಬಹುಪತ್ನಿತ್ವ ಮತ್ತು ಬಾಲ್ಯವಿವಾಹದ ಮೇಲೆ ಸಂಪೂರ್ಣ ನಿಷೇಧ, ಎಲ್ಲಾ ಧರ್ಮದ ಹೆಣ್ಣು ಮಕ್ಕಳಿಗೆ ಪ್ರಮಾಣೀಕೃತ ಮದುವೆಯ ವಯಸ್ಸು ಮತ್ತು ವಿಚ್ಛೇದನಕ್ಕೆ ಏಕರೂಪದ ಪ್ರಕ್ರಿಯೆ ಸೇರಿದಂತೆ ಹಲವು ಪ್ರಸ್ತಾಪಗಳಿವೆ. ವಿಧಾನಸಭೆಯಲ್ಲಿ ಈ ಮಸೂದೆ ಅಂಗೀಕಾರಗೊಂಡು ರಾಜ್ಯಪಾಲರಿಂದ ಅಂಕಿತ ಬಿದ್ದರೆ ಯುಸಿಸಿಯನ್ನು ಜಾರಿಗೆ ತಂದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಉತ್ತರಾಖಂಡ ಪಾತ್ರವಾಗಲಿದೆ.

    ಗುಜರಾತ್ ಹಾಗೂ ಅಸ್ಸಾಂ ಸೇರಿದಂತೆ ದೇಶದ ಹಲವು ಬಿಜೆಪಿ ಆಡಳಿತದ ರಾಜ್ಯಗಳು ಉತ್ತರಾಖಂಡ ಯುಸಿಸಿಯನ್ನು ಮಾದರಿಯಾಗಿ ಅನುಸರಿಸಲು ಮುಂದಾಗಿವೆ.

  • ಏಕರೂಪ ನಾಗರಿಕ ಸಂಹಿತೆ ವರದಿಗೆ ಉತ್ತರಾಖಂಡ ಸಚಿವ ಸಂಪುಟ ಅನುಮೋದನೆ

    ಏಕರೂಪ ನಾಗರಿಕ ಸಂಹಿತೆ ವರದಿಗೆ ಉತ್ತರಾಖಂಡ ಸಚಿವ ಸಂಪುಟ ಅನುಮೋದನೆ

    ಡೆಹ್ರಾಡೂನ್: ಏಕರೂಪ ನಾಗರಿಕ ಸಂಹಿತೆ (Uniform Civil Code) ವರದಿಗೆ ಉತ್ತರಾಖಂಡ ಸಚಿವ ಸಂಪುಟ ಭಾನುವಾರ ಅನುಮೋದನೆ ನೀಡಿದೆ.

    ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ (Pushkar Singh Dhami) ಅಧ್ಯಕ್ಷತೆಯಲ್ಲಿ ಅವರ ನಿವಾಸದಲ್ಲಿ ನಡೆದ ಸಂಪುಟ ಸಭೆಯಲ್ಲಿ ಯುಸಿಸಿ ವರದಿಗೆ ಅನುಮೋದನೆ ನೀಡಲಾಗಿದೆ. ಇದನ್ನೂ ಓದಿ: ಶ್ರೀಲಂಕಾ ನೌಕಾಪಡೆಯಿಂದ ಮತ್ತೆ 23 ಭಾರತೀಯ ಮೀನುಗಾರರ ಬಂಧನ

    ಏಕರೂಪ ನಾಗರಿಕ ಸಂಹಿತೆಯ ಅಂತಿಮ ಕರಡನ್ನು ಉತ್ತರಾಖಂಡ ಮುಖ್ಯಮಂತ್ರಿ ಅವರಿಗೆ ತಜ್ಞರ ಸಮಿತಿ ಈಚೆಗೆ ಸಲ್ಲಿಸಿತ್ತು.

    ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ರಂಜನಾ ಪ್ರಕಾಶ್‌ ದೇಸಾಯಿ ನೇತೃತ್ವದ ಐವರು ಸದಸ್ಯರ ಸಮಿತಿಯು ಈ ಕರಡನ್ನು ಸಿಎಂಗೆ ಹಸ್ತಾಂತರಿಸಿತ್ತು. ಇದನ್ನೂ ಓದಿ: ತಾಯಿ ತನ್ನ ತಂಗಿಯನ್ನೇ ಹೆಚ್ಚು ಪ್ರೀತಿಸ್ತಾರೆ ಅಂತಾ ಬುರ್ಕಾ ಧರಿಸಿ ಸ್ವಂತ ಮನೆಗೆ ಕನ್ನ ಹಾಕಿದ ಮಗಳು

    2022 ರ ವಿಧಾನಸಭೆ ಚುನಾವಣೆ ವೇಳೆ ರಾಜ್ಯದ ಜನರಿಗೆ ನೀಡಿದ್ದ ಭರವಸೆ ಈಡೇರಿಸುವ ಕಡೆಗೆ ಸರ್ಕಾರ ಮತ್ತೊಂದು ಹೆಜ್ಜೆ ಇಟ್ಟಿದೆ.

  • ಮುಂದಿನ ಅಧಿವೇಶನದಲ್ಲಿ UCC ಮಸೂದೆ ಮಂಡನೆ: ಪುಷ್ಕರ್ ಸಿಂಗ್ ಧಾಮಿ

    ಮುಂದಿನ ಅಧಿವೇಶನದಲ್ಲಿ UCC ಮಸೂದೆ ಮಂಡನೆ: ಪುಷ್ಕರ್ ಸಿಂಗ್ ಧಾಮಿ

    ನವದೆಹಲಿ: ಏಕರೂಪ ನಾಗರಿಕ ಸಂಹಿತೆ (Uniform Civil Code) ಮಸೂದೆಯನ್ನು ಸಿದ್ಧಪಡಿಸಲು ರಚಿಸಲಾದ ಸಮಿತಿಯು ಫೆಬ್ರವರಿ 2 ರಂದು ರಾಜ್ಯ ಸರ್ಕಾರಕ್ಕೆ ತನ್ನ ಕರಡನ್ನು ಸಲ್ಲಿಸಲಿದೆ. ಮುಂಬರುವ ವಿಧಾನಸಭೆ ಅಧಿವೇಶನದಲ್ಲಿ ಯುಸಿಸಿ ಮಸೂದೆಯನ್ನು ಮಂಡಿಸಲಾಗುವುದು ಎಂದು ಉತ್ತರಾಖಂಡದ (Uttarakhand) ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ (Pushkar Singh Dhami ) ಹೇಳಿದ್ದಾರೆ.

    ಈ ಬಗ್ಗೆ ಎಕ್ಸ್ ಮಾಡಿರುವ ಅವರು, ಪ್ರಧಾನಿ ನರೇಂದ್ರ ಮೋದಿ ಅವರ `ಏಕ್ ಭಾರತ್, ಶ್ರೇಷ್ಠ ಭಾರತ್’ ಯೋಜನೆಯ ಭಾಗವಾಗಿ ರಾಜ್ಯದಲ್ಲಿ ಯುಸಿಸಿಯನ್ನು ಜಾರಿಗೆ ತರಲು ನಮ್ಮ ಸರ್ಕಾರ ಯಾವಾಗಲೂ ಬದ್ಧವಾಗಿದೆ ಎಂದು ಪೋಸ್ಟ್‍ನಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಇನ್ನೊಂದೇ ವಾರದಲ್ಲಿ ದೇಶದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ -‌ ಬಿಜೆಪಿ ಸಚಿವರ ಗ್ಯಾರಂಟಿ

    ನ್ಯಾಯಮೂರ್ತಿ ರಂಜನಾ ಪ್ರಕಾಶ್ ದೇಸಾಯಿ ನೇತೃತ್ವದ ಯುಸಿಸಿ ಸಮಿತಿಯ ಅವಧಿಯು ಜನವರಿ 26 ರಂದು ಕೊನೆಗೊಂಡಿದೆ. ಸಮಿತಿಯ ಅವಧಿಯನ್ನು ಈಗಾಗಲೇ ಮೂರು ಬಾರಿ ವಿಸ್ತರಿಸಲಾಗಿದೆ. ಫೆಬ್ರವರಿ 2 ರಂದು ತನ್ನ ಅಂತಿಮ ವರದಿಯನ್ನು ಸರ್ಕಾರಕ್ಕೆ ಹಸ್ತಾಂತರ ಮಾಡಲಿದೆ. ಇದನ್ನೂ ಓದಿ: Gyanvapi Mosque Case: ವಜುಖಾನಾ ಡಿ-ಸೀಲಿಂಗ್‌ಗೆ ಹಿಂದೂ ಪರ ಅರ್ಜಿದಾರರಿಂದ ಸುಪ್ರೀಂಕೋರ್ಟಿಗೆ ಅರ್ಜಿ

  • ಎಲ್ಲರೂ ಆರೋಗ್ಯವಾಗಿದ್ದಾರೆ, ಬೇಗ ಮನೆಗೆ ಕಳಿಸಿಕೊಡ್ತೀವಿ: ಕಾರ್ಮಿಕರ ಬಗ್ಗೆ ವೈದ್ಯರ ಮಾತು

    ಎಲ್ಲರೂ ಆರೋಗ್ಯವಾಗಿದ್ದಾರೆ, ಬೇಗ ಮನೆಗೆ ಕಳಿಸಿಕೊಡ್ತೀವಿ: ಕಾರ್ಮಿಕರ ಬಗ್ಗೆ ವೈದ್ಯರ ಮಾತು

    ಡೆಹ್ರಾಡೂನ್: ಉತ್ತರಾಖಂಡದಲ್ಲಿ (Uttarakhand) ಕುಸಿದ ಸುರಂಗದಿಂದ (Tunnel Collapse) ರಕ್ಷಿಸಲ್ಪಟ್ಟ 41 ಕಾರ್ಮಿಕರ ಆರೋಗ್ಯ ಸ್ಥಿತಿ ಬಗ್ಗೆ ವೈದ್ಯರು ಮಾಹಿತಿ ಹಂಚಿಕೊಂಡಿದ್ದಾರೆ. ಎಲ್ಲರೂ ಆರೋಗ್ಯವಾಗಿದ್ದಾರೆ.. ಬೇಗ ಡಿಸ್ಚಾರ್ಜ್‌ ಮಾಡಿ ಮನೆಗೆ ಕಳುಹಿಸಲಾಗುವುದು ಎಂದು ವೈದ್ಯರು ತಿಳಿಸಿದ್ದಾರೆ.

    ರಕ್ಷಣೆ ಬೆನ್ನಲ್ಲೇ 41 ಕಾರ್ಮಿಕರನ್ನು ರಿಷಿಕೇಶದ ಏಮ್ಸ್‌ನಲ್ಲಿ ಆರೋಗ್ಯ ತಪಾಸಣೆಗೆ ಒಳಪಡಿಸಲಾಗಿದೆ. ಇಂದು ಎಲ್ಲರನ್ನೂ ಮನೆಗೆ ಕಳುಹಿಸುವ ಸಾಧ್ಯತೆ ಇದೆ. ಎಲ್ಲರನ್ನೂ ಪ್ರಾಥಮಿಕ ತಪಾಸಣೆಗೆ ಒಳಪಡಿಸಲಾಗಿದ್ದು, ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಇದನ್ನೂ ಓದಿ: ಸುರಂಗದಿಂದ ಕಾರ್ಮಿಕ ಬಚಾವಾದ್ರೂ ಅಪ್ಪನನ್ನು ಕೊನೇಸಲ ಜೀವಂತವಾಗಿ ನೋಡಲು ಸಿಗಲೇ ಇಲ್ಲ ಅವಕಾಶ

    ಎಲ್ಲ ಕಾರ್ಮಿಕರು ಆರೋಗ್ಯವಾಗಿದ್ದಾರೆ. ಅವರನ್ನು ರೋಗಿಗಳೆಂದು ನಾವು ಕರೆಯುವುದಿಲ್ಲ. ಅವರ ರಕ್ತದೊತ್ತಡ, ಜೀವಾಣುಗಳು, ಆಮ್ಲಜನಕೀಕರಣ ಎಲ್ಲವೂ ನಾರ್ಮಲ್‌ ಇದೆ. ನಾವು ಪ್ರಾಥಮಿಕ ಆರೋಗ್ಯ ತಪಾಸಣೆ ಮಾಡಿದ್ದೇವೆ. ಅದರ ವರದಿ ಶೀಘ್ರವೇ ಬರಲಿದೆ. ಹೃದಯ ಸಂಬಂಧಿ ಸಮಸ್ಯೆ ಏನಾದರೂ ಇದೆಯೇ ಎಂಬುದನ್ನು ತಿಳಿಯಲು ಇಸಿಜಿ ಪರೀಕ್ಷೆ ನಡೆಸಲಾಗುವುದು ಎಂದು ಎಐಐಎಂಎಸ್-ಋಷಿಕೇಶದ ಕಾರ್ಯನಿರ್ವಾಹಕ ನಿರ್ದೇಶಕ ಮತ್ತು ಸಿಇಒ ಪ್ರೊಫೆಸರ್ ಮೀನು ಸಿಂಗ್ ತಿಳಿಸಿದ್ದಾರೆ.

    ಕಾರ್ಮಿಕರಿಗೆ ಯಾವುದೇ ಕಾಯಿಲೆ ಇಲ್ಲ. ಅವರನ್ನು ಮನೆಗೆ ಕಳುಹಿಸುವ ಬಗ್ಗೆ ಇಂದು ನಿರ್ಧಾರ ತೆಗೆದುಕೊಳ್ಳಲಾಗುವುದು ವೈದ್ಯರು ಹೇಳಿದ್ದಾರೆ. ಸುಮಾರು 17 ದಿನಗಳ ರಕ್ಷಣಾ ಕಾರ್ಯಾಚರಣೆಯ ನಂತರ ಮಂಗಳವಾರ 41 ಕಾರ್ಮಿಕರನ್ನು ಸುರಂಗದಿಂದ ರಕ್ಷಿಸಲಾಗಿತ್ತು. ಇದನ್ನೂ ಓದಿ: 41 ಕಾರ್ಮಿಕರ ರಕ್ಷಣೆ ಬೆನ್ನಲ್ಲೇ ಭಾವುಕರಾಗಿದ್ದ ಪ್ರಧಾನಿ ಮೋದಿ

    ಎನ್‌ಡಿಆರ್‌ಎಫ್‌, ಭಾರತೀಯ ಸೇನೆ, ಪೊಲೀಸರು ಮತ್ತು ಹಲವಾರು ಇತರ ಏಜೆನ್ಸಿಗಳು ಉತ್ತರಾಖಂಡ್‌ನ ಕುಸಿದ ಸಿಲ್ಕ್ಯಾರಾ ಸುರಂಗದ ಕೆಳಗೆ ಸಿಲುಕಿದ್ದ ಕಾರ್ಮಿಕರನ್ನು ರಕ್ಷಿಸಿದ್ದರು. ಕಾರ್ಯಾಚರಣೆಯ ಪ್ರಮುಖ ವ್ಯಕ್ತಿ ಸುರಂಗ ತಜ್ಞ ಅರಾಲ್ಡ್ ಡಿಕ್ಸ್ ಅವರು ರಕ್ಷಣಾ ಸಮಯದಲ್ಲಿ ಸರ್ಕಾರ ಮತ್ತು ಏಜೆನ್ಸಿಗಳಿಗೆ ಸಲಹೆ ನೀಡಿದ್ದರು.