Tag: Uttarakhand

  • ಸ್ಕೂಲ್ ಫೀಸ್ ಕಟ್ಟೋಕೆ ಹಣ ದರೋಡೆ ಮಾಡಿ ಸಿಕ್ಕಿಬಿದ್ದ ವಿದ್ಯಾರ್ಥಿ

    ಸ್ಕೂಲ್ ಫೀಸ್ ಕಟ್ಟೋಕೆ ಹಣ ದರೋಡೆ ಮಾಡಿ ಸಿಕ್ಕಿಬಿದ್ದ ವಿದ್ಯಾರ್ಥಿ

    – ಪೊಲೀಸರ ಮುಂದೆ ಹೇಳಿದ್ದೇನು..?

    ಡೆಹ್ರಾಡೂನ್: ಕೊರೊನಾ ನಂತ್ರ ಅಪ್ಪನ ಸ್ಯಾಲರಿ ಕಡಿತವಾಗಿದ್ದರಿಂದ ಅವರಿಗೆ ಶಾಲೆ ಶುಲ್ಕ ಕಟ್ಟೋಕೆ ಸಾಧ್ಯವಿಲ್ಲ ಎಂದು ಮಗ ದರೋಡೆ ಮಾಡಿರುವ ಘಟನೆ ಉತ್ತರಾಖಂಡದ ರುದ್ರಪುರದಲ್ಲಿ ನಡೆದಿದೆ.

    ತನ್ನ ತಂದೆಗೆ ಶಾಲೆಯ ಶುಲ್ಕ ಕಟ್ಟೋಕೆ ಸಾಧ್ಯವಿಲ್ಲ ಎನ್ನುವುದನ್ನು ಅರಿತುಕೊಂಡಿರುವ ಮಗ, ದರೋಡೆ ಮಾಡಲು ಮುಂದಾಗಿದ್ದಾನೆ. ಬಲ್ವಂತ್ ಎನ್‍ಕ್ಲೇವ್ ಕಾಲೋನಿಯ ಕಂಪನಿ ಉದ್ಯೋಗಿ ಸಚಿನ್ ಶರ್ಮಾ ಅವರಿಗೆ ಗನ್ ತೋರಿಸಿ 5.35 ಲಕ್ಷ ಹಣವನ್ನು ದೋಚಿದ್ದರು. ಇದೀಗ ಪೊಲೀಸರ ಬಲೆಗೆ ಆರೋಪಿಗಳು ಸಿಕ್ಕಿ ಬಿದ್ದಿದ್ದಾರೆ. 5.35 ಲಕ್ಷ ರೂಪಾಯಿ ಹಣ ಲೂಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ವಿದ್ಯಾರ್ಥಿಗಳು ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದೆ.

    ಆರೋಪಿಗಳ ವಿಚಾರಣೆ ವೇಳೆ ವಿದ್ಯಾರ್ಥಿಯೊಬ್ಬ ತನ್ನ ಶಾಲೆ ಶುಲ್ಕವನ್ನು ಕಟ್ಟಲು ಕಳ್ಳತನ ಮಾಡಿದ್ದೇನೆ ಎಂದು ಹೇಳಿದ್ದಾನೆ. ಈತನ ತಂದೆ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಾರೆ. ಕಾರ್ಖಾನೆಯಲ್ಲಿ ಆಗಿರುವ ನಷ್ಟದಿಂದ ಅವರ ಸಂಬಳ ಕಡಿಮೆ ಮಾಡಲಾಗಿತ್ತು. ತಂದೆಯಿಂದ ಶಾಲೆ ಶುಲ್ಕ ಕಟ್ಟಲು ಸಾಧ್ಯವಿಲ್ಲ. ತಂದೆಗೆ ಕಷ್ಟ ನೀಡುವುದು ಬೇಡವೆಂದು ಈ ಕೆಲಸ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

  • ರಸ್ತೆ ರಿಪೇರಿ ಮಾಡಿಸಿದ ಬಾಲಕಿಯ ‘ಖಡಕ್ ಗ್ರೌಂಡ್ ರಿಪೋರ್ಟ್’

    ರಸ್ತೆ ರಿಪೇರಿ ಮಾಡಿಸಿದ ಬಾಲಕಿಯ ‘ಖಡಕ್ ಗ್ರೌಂಡ್ ರಿಪೋರ್ಟ್’

    – ವೀಡಿಯೋ ಮಾಡಿ ಹರಿಬಿಟ್ಟಿದ್ದ ತಂದೆ-ಮಗಳು
    – ಗ್ರಾಮಸ್ಥರಿಂದ ಬಾಲಕಿಯ ಕಾರ್ಯಕ್ಕೆ ಮೆಚ್ಚುಗೆ

    ಡೆಹ್ರಾಡೂನ್: ದೇಶದಲ್ಲಿ ಹೊಂಡ ಗುಂಡಿಗಳಿಂದ ರಸ್ತೆಗಳು ಕಂಡು ಬರುವುದು ಸಾಮಾನ್ಯ. ಕಳಪೆ ಗುಣಮಟ್ಟದ ವಸ್ತುಗಳನ್ನು ಬಳಸುವುದರಿಂದ ನಿರ್ಮಾಣವಾದ ಕೆಲವೇ ಗಂಟೆಗಳಲ್ಲಿ ರಸ್ತೆಯಲ್ಲಿ ಡಾಂಬರ್ ಎದ್ದು ಬರುವುದು ಅಪರೂಪವೇನಲ್ಲ. ಆದರೆ ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ಬಾಲಕಿಯೊಬ್ಬಳ ಖಡಕ್ ಗ್ರೌಂಡ್ ರಿಪೋರ್ಟ್ ನಿಂದಾಗಿ ಎಚ್ಚೆತ್ತು ಕೂಡಲೇ ರಸ್ತೆ ರಿಪೇರಿ ಮಾಡಿಸಿದ ಘಟನೆ ನಡೆದಿದೆ.

    ಚಾಮೋಲಿ ಜಿಲ್ಲೆಯ ದೇವರ್ಖಡೋರ ಗ್ರಾಮದ 15 ವರ್ಷದ ಸುಹಾನಿ ಬಿಸ್ತ್ ವರದಿ ಮಾಡಿರುವ ಬಾಲಕಿ. ಈಕೆ ಹೊಂಡ- ಗುಂಡಿಗಳಿಂದ ಕೂಡಿದ್ದ ರಸ್ತೆಯಿಂದ ಬೇಸತ್ತು ಖುದ್ದು ತಾನೇ ವರದಿ ಮಾಡಿ ಅಧಿಕಾರಿಯ ಚಳಿ ಬಿಡಿಸಿದ್ದಾಳೆ. ಅಲ್ಲದೆ ಈ ಮೂಲಕ ರಸ್ತೆ ರಿಪೇರಿ ಮಾಡಿಸಿ ಮಾದರಿಯಾಗಿದ್ದಾಳೆ.

    ಗ್ರಾಮದಲ್ಲಿ 10 ಕಿ.ಮೀ ಉದ್ದದ ರಸ್ತೆ ನಿರ್ಮಾಣ ಮಾಡಲಾಗಿತ್ತು. ಆದರೆ ಈ ರಸ್ತೆ ನಿರ್ಮಾಣಕ್ಕೆ ಕಳಪೆ ಗುಣಮಟ್ಟದ ವಸ್ತುಗಳನ್ನು ಬಳಸಿದ್ದರಿಂದ ಕೆಲವೇ ದಿನಗಳಲ್ಲಿ ರಸ್ತೆ ತುಂಬಾ ಹೊಂಡ-ಗುಂಡಿಗಳು ಬಿದ್ದಿದ್ದವು. ಇದರಿಂದ ಬೇಸತ್ತ ಬಾಲಕಿ ತಾನೇ ವೀಡಿಯೋ ಮಾಡಿ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದಾಳೆ. ಭ್ರಷ್ಟಾಚಾರವನ್ನು ಬಹಿರಂಗಪಡಿಸುವ ಬಾಲಕಿಯ ಗ್ರೌಂಡ್ ರಿಪೋರ್ಟ್ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆಯೇ ಜಿಲ್ಲಾಡಳಿತ ಎಚ್ಚೆತ್ತುಕೊಂಡಿದೆ. ಅಲ್ಲದೆ ಜಿಲ್ಲಾಡಳಿತದ ಗಮನಕ್ಕೆ ಬಂದ 24 ಗಂಟೆಯೊಳಗೆ ರಸ್ತೆ ರಿಪೇರಿ ಮಾಡಲು ಮುಂದಾಗಿದೆ.

    ಗೋಪೇಶ್ವರದಿಂದ ಘಿಗ್ರಾನ್ ಗ್ರಾಮಕ್ಕೆ ತೆರಳುವ ರಸ್ತೆಗಳು ಕೆಟ್ಟುಹೋಗಿದ್ದು, ವಾಹನಸವಾರರು ಪರದಾಡುತ್ತಿದ್ದರು. ಇದರಿಂದ ಕಂಗಾಲಾಗಿದ್ದ ಸ್ಥಳೀಯರು ಸಂಬಂಧಪಟ್ಟ ಅಧಿಕಾರಿಗಳಿಗೆ ಸಾಕಷ್ಟು ಬಾರಿ ದೂರು ನೀಡಿದ್ದರು. ಆದರೆ ಯಾವುದೇ ಪ್ರಯೋಜನ ಆಗಿರಲಿಲ್ಲ. ಸಾಕಷ್ಟು ಪ್ರತಿಭಟನೆಗಳು ನಡೆದ ಬಳಿಕ ರಸ್ತೆ ರಿಪೇರಿ ಮಾಡಲಾಯಿತಾದರೂ ಅದು ಕೆಲವೇ ಗಂಟೆಗಳಲ್ಲಿ ಮತ್ತೆ ಕೆಟ್ಟು ಹೋಗಿತ್ತು.

    ನಮ್ಮ ದೂರುಗಳಿಗೆ ಯಾವುದೇ ರೀತಿಯ ಸ್ಪಂದನೆ ಸಿಗದಿದ್ದರಿಂದ ಬೇಸತ್ತು ನಾನು ಹಾಗೂ ನನ್ನ ತಂದೆ ಈ ರೀತಿ ವೀಡಿಯೋ ಮಾಡಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಲು ನಿರ್ಧರಿಸಿದೆವು. ನಾವು ಇಲ್ಲಿ ತೆರಿಗೆ ಪಾವತಿಸುತ್ತೇವೆ. ಆದರೆ ಸಾರ್ವಜನಿಕ ಸೌಕರ್ಯಗಳು ಮಾತ್ರ ಸರಿಯಾಗಿ ಸಿಗುತ್ತಿಲ್ಲ. ಇದರಿಂದ ನೊಂದು ಈ ಕೆಲಸ ಮಾಡಿರುವುದಾಗಿ ಸುಹಾನಿ ತಿಳಿಸಿದ್ದಾಳೆ.

    11ನೇ ತರಗತಿಯ ವಿದ್ಯಾರ್ಥಿನಿ ಮಾಡಿದ ಈ ವೀಡಿಯೋದಲ್ಲಿ, ರಸ್ತೆ ಕೆಟ್ಟು ಹೋದ ಸಂಬಂದ ಗ್ರಾಂಸ್ಥರು ಪ್ರತಿಭಟನೆ ನಡೆಸಿದಾಗ ಅವರಿಗೆ ಬೇದರಿಕೆ ಹಾಕಲಾಗಿತ್ತು ಎಂಬ ಆರೋಪ ಕೂಡ ಮಾಡಿದ್ದಾಳೆ. ಒಟ್ಟಿನಲ್ಲಿ ತಂದೆ ಮತ್ತು ಮಗಳ ಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಸರ್ಕಾರಿ ಅಧಿಕಾರಿಗಳ ಭ್ರಷ್ಟಾಚಾರದ ವಿರುದ್ಧ ಕಿಡಿಕಾರಿದ್ದಾರೆ.

  • 11ರ ಬಾಲಕಿಯನ್ನು ಕ್ವಾರ್ಟರ್ಸ್ ಶೌಚಾಲಯದಲ್ಲೇ ಅತ್ಯಾಚಾರಗೈದ ಪೊಲೀಸ್

    11ರ ಬಾಲಕಿಯನ್ನು ಕ್ವಾರ್ಟರ್ಸ್ ಶೌಚಾಲಯದಲ್ಲೇ ಅತ್ಯಾಚಾರಗೈದ ಪೊಲೀಸ್

    – ಬಾಲಕಿಯ ತಂದೆ ಅಂಧ, ತಾಯಿ ಸಹ ಅಂಗವಿಕಲೆ
    – ಬಾಲಕಿಯ ಅಸಹಾಯಕತೆಯನ್ನೇ ಬಳಸಿ ಅತ್ಯಾಚಾರಗೈದ

    ಡೆಹ್ರಾಡೂನ್: ಸರ್ಕಾರಿ ಕ್ವಾರ್ಟರ್ಸ್ ನ ಬಾತ್‍ರೂಂನಲ್ಲಿಯೇ 11 ವರ್ಷದ ಬಾಲಕಿಯ ಮೇಲೆ ಅಸಿಸ್ಟೆಂಟ್ ಸಬ್ ಇನ್ಸ್‍ಪೆಕ್ಟರ್ ಅತ್ಯಾಚಾರ ನಡೆಸಿರುವ ಘಟನೆ ನಡೆದಿದೆ.

    ಉತ್ತರಾಖಂಡ್‍ನ ಡೆಹ್ರಾಡೂನ್‍ನ ಸರ್ಕಾರಿ ಕ್ವಾರ್ಟರ್ಸ್ ನಲ್ಲಿ ಘಟನೆ ನಡೆದಿದ್ದು, ಆರೋಪಿಯನ್ನು ಸಂಜೀವ್ ಜುಗಾಡಿ ಎಂದು ಗುರುತಿಸಲಾಗಿದೆ. ಈತ ಉತ್ತರಾಖಂಡ್ ಪೊಲೀಸ್‍ನ 112 ತುರ್ತು ಸಹಾಯವಾಣಿ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಾನೆ. 11 ವರ್ಷದ ಬಾಲಕಿಯ ತಂದೆ ಅಂಧರಾಗಿದ್ದು, ಅವರ ತಾಯಿ ಸಹ ದಿವ್ಯಾಂಗರಾಗಿದ್ದಾರೆ. ಇದನ್ನೇ ಬಂಡವಾಳವನ್ನಾಗಿಸಿಕೊಂಡ ಪೊಲೀಸ್ ಶೌಚಾಲಯದಲ್ಲಿ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದಾನೆ.

    ಮಗಳ ಸ್ಥಿತಿ ಕುರಿತು ಅರಿತ ತಾಯಿ, ತಕ್ಷಣವೇ ಪೊಲೀಸರಿಗೆ ದೂರು ನೀಡಿದ್ದಾರೆ. ಘಟನೆ ಕುರಿತು ಸರ್ಕಲ್ ಇನ್ಸ್‍ಪೆಕ್ಟರ್ ಶೇಖರ್ ಚಂದ್ ಸುಯಾಲ್ ಮಾಹಿತಿ ನೀಡಿ, 11 ವರ್ಷದ ಬಾಲಕಿಯ ಕುಟುಂಬ ಹಾಗೂ ಆರೋಪಿ ಒಂದೇ ಕಾಂಪ್ಲೆಕ್ಸ್‍ನಲ್ಲಿ ವಾಸಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.

    ಶೌಚಾಲಯದಲ್ಲೇ ಬಾಲಕಿಯನ್ನು ಲಾಕ್ ಮಾಡಿದ
    ಮಧ್ಯಾಹ್ನ ಬಾಲಕಿ ಶೌಚಾಲಯಕ್ಕೆ ತೆರಳಿದ್ದು, ತುಂಬಾ ಸಮಯವಾದರೂ ಹೊರಗೆ ಬಂದಿಲ್ಲ. ಆಗ ಬಾಲಕಿಯ ತಾಯಿ ಮಗಳನ್ನು ನೋಡಲು ಶೌಚಾಲಯದ ಬಳಿ ಬಂದಿದ್ದಾರೆ. ಈ ವೇಳೆ ತಾಯಿ ಹಲವು ಬಾರಿ ಮಗಳನ್ನು ಕರೆದಿದ್ದಾರೆ, ಆದರೆ ಬಾಲಕಿ ಯಾವುದೇ ರೀತಿಯ ಪ್ರತಿಕ್ರಿಯೆಯನ್ನು ನೀಡಿಲ್ಲ. ಶೌಚಾಲಯದ ಬಾಗಿಲು ಒಳಗಿನಿಂದ ಲಾಕ್ ಆಗಿರುವುದನ್ನು ತಾಯಿ ನೋಡಿದ್ದಾರೆ.

    ಇದನ್ನರಿತ ಆರೋಪಿ ಪೊಲೀಸ್ ಜುಗಾಡಿ ಇದ್ದಕ್ಕಿದ್ದಂತೆ ಶೌಚಾಲಯದ ಬಾಗಿಲು ತೆರೆದು ಪರಾರಿಯಾಗಿದ್ದಾನೆ. ನಂತರ ಬಾಲಕಿ ತಾಯಿ ಶೌಚಾಲಯದ ಬಾಗಿಲು ತೆರೆದು ಒಳಗೆ ಹೋಗಿದ್ದು, ಬಾಲಕಿ ಪ್ರಜ್ಞಾಹೀನಳಾಗಿ ಮಲಗಿರುವುದನ್ನು ಗಮನಿಸಿದ್ದಾರೆ. ತಾಯಿ ಮಗಳನ್ನು ಮನೆಗೆ ಕರೆತಂದಿದ್ದು, ಈ ಕುರಿತು ನೆರೆಹೊರೆಯವರಿಗೆ ವಿಷಯ ತಿಳಿಸಿದ್ದಾರೆ.

    ತಕ್ಷಣವೇ ಪಕ್ಕದ ಮನೆಯವರು ಘಟನೆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಸಂತ್ರಸ್ತೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸ್ ಅಧಿಕಾರಿ ಜುಗಾಡಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಬಂಧಿಸಲು ತಂಡವನ್ನು ರಚಿಸಿದ್ದರು. ನಂತರ ಆರೋಪಿಯನ್ನು ಪತ್ತೆಹಚ್ಚಿ ಬಂಧಿಸಲಾಗಿದ್ದು, ಕೋರ್ಟ್ ಗೆ ಹಾಜರುಪಡಿಸಲಾಗಿದೆ. ಪೊಲೀಸ್ ಅಧಿಕಾರಿಯನ್ನು ಇದೀಗ ಜೈಲಿಗಟ್ಟಲಾಗಿದೆ.

    ಪೊಲೀಸ್ ಅಧಿಕಾರಿ ಸುಯಾಲ್ ಅವರು ಈ ಕುರಿತು ಮಾಹಿತಿ ನೀಡಿ, ಇಲಾಖೆ ಸಹ ಆರೋಪಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಿದೆ. ಬಾಲಕಿಯ ಆರೋಗ್ಯ ಸ್ಥಿರವಾಗಿದ್ದು, ಚಿಕಿತ್ಸೆ ಬಳಿಕ ಮನೆಗೆ ಕರೆತರಲಾಗಿದೆ ಎಂದು ತಿಳಿಸಿದ್ದಾರೆ.

  • ತೀರಾ ಅಪರೂಪದ ಕೆಂಪು ಹವಳದ ಹಾವು ಪತ್ತೆ

    ತೀರಾ ಅಪರೂಪದ ಕೆಂಪು ಹವಳದ ಹಾವು ಪತ್ತೆ

    ಡೆಹ್ರಾಡೂನ್: ತೀರಾ ಅಪರೂಪದ ಕೆಂಪು ಹವಳದ ಕುಕ್ರಿ ಹಾವು ಉತ್ತರಾಖಂಡದ ನೈನಿತಾಲ್ ಜಿಲ್ಲೆಯ ಮನೆಯೊಂದರಲ್ಲಿ ಪತ್ತೆಯಾಗಿದೆ.

    ನೈನಿತಾಲ್‍ನ ಬಿಂದುಖಟ್ಟಾ ಪ್ರದೇಶದ ಬಳಿ ಈ ಅಪರೂಪದ ಹಾವು ಪತ್ತೆಯಾಗಿದ್ದು, ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ರಕ್ಷಣೆ ಮಾಡಿದ್ದಾರೆ. ಅರಣ್ಯ ಅಧಿಕಾರಿಗಳು ಬರುವ ಮುನ್ನ ಗ್ರಾಮಸ್ಥರು ಹಾವನ್ನು ಹಿಡಿದು ಪ್ಲಾಸ್ಟಿಕ್ ಚೀಲದೊಳಗೆ ರಕ್ಷಿಸಿದ್ದರು ಎಂದು ತಿಳಿದು ಬಂದಿದೆ.

    ಬಿಂದುಖಟ್ಟಾ ಪ್ರದೇಶದ ಕುರಿಯಾ ಖಟ್ಟಾ ಗ್ರಾಮದ ನಿವಾಸಿ ಕವೀಂದ್ರ ಕೊರಂಗಾ ಅವರಿಂದ ಗೌಲಾ ಅರಣ್ಯ ವಲಯಕ್ಕೆ ದೂರವಾಣಿ ಮೂಲಕ ಕರೆ ಬಂದಿತ್ತು. ಅವರು ಮನೆಯೊಳಗೆ ಹಾವು ಬಂದಿದ್ದು, ರಕ್ಷಣೆ ಮಾಡುವಂತೆ ಮನವಿ ಮಾಡಿದ್ದರು. ನಾವು ಹೋಗುವಷ್ಟರಲ್ಲಿ ಗ್ರಾಮಸ್ಥರು ಹಿಡಿದು ಪ್ಲಾಸ್ಟಿಕ್ ಚೀಲದಲ್ಲಿ ರಕ್ಷಿಸಿದ್ದರು ಎಂದು ಅರಣ್ಯ ಅಧಿಕಾರಿ ನಿತೀಶ್ ಮಣಿ ತ್ರಿಪಾಠಿ ತಿಳಿಸಿದ್ದಾರೆ.

    ನಾವು ಅದನ್ನು ನೋಡಿದ ತಕ್ಷಣ ನಮಗೆ ಆಶ್ಚರ್ಯವಾಯಿತು. ಇದನ್ನು ಕೆಂಪು ಹವಳದ ಕುಕ್ರಿ ಹಾವು ಎಂದು ಕರೆಯಲಾಗುತ್ತದೆ. ಇದು ತೀರ ಅಪರೂಪದ ಹಾವಾಗಿದೆ. ನಂತರ ನಾವು ಅದನ್ನು ರಕ್ಷಿಸಿ ಅರಣ್ಯಕ್ಕೆ ಬಿಟ್ಟಿದ್ದೇವೆ ಎಂದರು.

    ಈ ಹಿಂದೆ ಅಂದರೆ 1936 ರಲ್ಲಿ ಉತ್ತರ ಪ್ರದೇಶದ ಲಖಿಂಪುರ ಪ್ರದೇಶದಲ್ಲಿ ಮೊದಲ ಬಾರಿಗೆ ಕೆಂಪು ಹವಳದ ಕುಕ್ರಿ ಹಾವು ಪತ್ತೆಯಾಗಿತ್ತು. ಆಗ ಈ ಹಾವಿಗೆ ವೈಜ್ಞಾನಿಕ ಹೆಸರು ‘ಒಲಿಗೊಡಾನ್ ಖೇರಿಯೆನ್ಸಿಸ್’ ಎಂದು ತಜ್ಞರು ಹೇಳಿದ್ದರು. ನಂತರ 2015ರಲ್ಲಿ ಉತ್ತರಾಖಂಡದ ಸುರೈ ಅರಣ್ಯ ವಲಯದಲ್ಲಿ ಇದೇ ರೀತಿ ಹಾವು ಪತ್ತೆಯಾಗಿತ್ತು.

    ಈ ಹಾವಿನ ಬಣ್ಣ ಕೆಂಪು ಮತ್ತು ಕಿತ್ತಳೆ ಬಣ್ಣಗಳಿಂದ ಕೂಡಿದೆ. ಕೆಲವು ವಾರಗಳ ಹಿಂದೆ ಉತ್ತರ ಪ್ರದೇಶದ ದುಧ್ವಾ ರಾಷ್ಟ್ರೀಯ ಉದ್ಯಾನದಲ್ಲಿ ಕೆಂಪು ಹವಳದ ಕುಕ್ರಿ ಹಾವು ಪತ್ತೆಯಾಗಿತ್ತು. ಇದೀಗ ನೈನಿತಾಲ್ ಜಿಲ್ಲೆಯಲ್ಲಿ ಮತ್ತೆ ಈ ಹಾವು ಪತ್ತೆಯಾಗಿದೆ.

  • ಕಾಲು ಜಾರಿ ತೊರೆಯೊಳಗೆ ಬಿದ್ದ ಕೈ ಶಾಸಕ – ಬೆಂಬಲಿಗರಿಂದ ರಕ್ಷಣೆ

    ಕಾಲು ಜಾರಿ ತೊರೆಯೊಳಗೆ ಬಿದ್ದ ಕೈ ಶಾಸಕ – ಬೆಂಬಲಿಗರಿಂದ ರಕ್ಷಣೆ

    ಡೆಹರಡೂನ್: ಪ್ರವಾಹ ವೀಕ್ಷಣೆಗೆ ತೆರಳಿದ ಕಾಂಗ್ರೆಸ್ ಶಾಸಕರೊಬ್ಬರು ಕಾಲು ಜಾರಿ ತೊರೆಯೊಳಗೆ ಬಿದ್ದಿರುವ ಘಟನೆ ನೇಪಾಳ ಗಡಿ ಸಮೀಪದ ಪಿತ್ತೋರ್ಗಢದ ಧಾರ್ಚಾಲ್ ಪ್ರದೇಶದಲ್ಲಿ ನಡೆದಿದೆ.

    ಉತ್ತರಖಂಡದ ಕಾಂಗ್ರೆಸ್ ಶಾಸಕ ಹರೀಶ್ ಧಾಮಿ ಅವರು, ಮಳೆಯಿಂದ ಹಾನಿಗೆ ಒಳಗಾಗಿರುವ ಪ್ರದೇಶಗಳಿಗೆ ಭೇಟಿ ನೀಡಿ ವಾಪಸ್ ಬರುತ್ತಿರುವಾಗ ಈ ಘಟನೆ ನಡೆದಿದೆ. ಕಾಲು ಜಾರಿ ತೊರೆಯೊಳಗೆ ಬಿದ್ದಿದ್ದಾರೆ. ನಂತರ ಸ್ವಲ್ಪ ದೂರ ನೀರಿನಲ್ಲಿ ತೇಲಿಕೊಂಡು ಹೋಗಿದ್ದಾರೆ. ಆದರೆ ತಕ್ಷಣ ಜೊತೆಗಿದ್ದ ಬೆಂಬಲಿಗರು ಅವರನ್ನು ನೀರಿನಿಂದ ಮೇಲೆ ಎತ್ತಿ ರಕ್ಷಿಸಿದ್ದಾರೆ.

    ಧಾಮಿಯವರು ಹೋಗಿದ್ದ ಪಿತ್ತೋರ್ಗಢದ ಧಾರ್ಚಾಲ್ ಪ್ರದೇಶ ಭಾರೀ ಮಳೆಗೆ ತುತ್ತಾಗಿ ಜಲಾವೃತವಾಗಿತ್ತು. ಇದನ್ನು ಪರಿಶೀಲನೆ ಮಾಡಲು ಹರೀಶ್ ಧಾಮಿ ಹೋಗಿದ್ದಾರೆ. ಪ್ರವಾಹ ಸ್ಥಳ ವೀಕ್ಷಿಸಿ ಅಲ್ಲಿನ ಜನರಿಗೆ ಧೈರ್ಯ ಹೇಳಿ ವಾಪಸ್ ಬರುತ್ತಿದ್ದರು. ಜೊತೆಗೆ ಮಳೆ ಬಂದು ಅವರು ಬರುವ ದಾರಿ ಕೆಸರು ತುಂಬಿಕೊಂಡಿತ್ತು. ಈ ದಾರಿಯಲ್ಲಿ ಬರುವಾಗ ಹರೀಶ್ ಅವರ ಆಯತಪ್ಪಿ ನೀರಿನೊಳಗೆ ಬಿದ್ದಿದ್ದಾರೆ. ಈ ವೇಳೆ ಅವರು ನೀರಿನಲ್ಲಿ ತೇಲಿಕೊಂಡು ಹೋಗಿದ್ದಾರೆ.

    ಈ ವಿಚಾರವಾಗಿ ಮಾತನಾಡಿರುವ ಶಾಸಕ ಹರೀಶ್ ಧಾಮಿಯವರು, ರಸ್ತೆ ತುಂಬಾ ಕೆಸರಿನಿಂದ ಕೂಡಿತ್ತು. ಜೊತೆಗೆ ನೀರು ಕೂಡ ಹೆಚ್ಚಾಗಿತ್ತು. ಇದರಿಂದ ನಾನು ಸ್ವಲ್ಪ ಆಯತಪ್ಪಿ ಬಿದ್ದೆ. ನೀರು ರಭಸವಾಗಿ ಹರಿಯುತ್ತಿದ್ದ ಕಾರಣ ಸ್ವಲ್ಪ ದೂರು ನೀರಿನಲ್ಲಿ ಕೊಚ್ಚಿಕೊಂಡು ಹೋದೆ. ಆದರೆ ಅಷ್ಟರಲ್ಲಿ ನನ್ನ ಜೊತೆಯಲ್ಲಿದ್ದ ಬೆಂಬಲಿಗರು ಸಹಾಯಕ್ಕೆ ಬಂದರು. ಅವರು ಬಂದು ನನ್ನ ದಡಕ್ಕೆ ಕರೆ ತಂದರು. ಈ ವೇಳೆ ನನಗೆ ಸಣ್ಣ-ಪುಟ್ಟ ಗಾಯಗಳಾಗಿವೆ ಎಂದು ಹೇಳಿದ್ದಾರೆ.

  • ಹೆಲ್ಮೆಟ್ ಹಾಕಿಲ್ಲವೆಂದು ಸವಾರನ ಹಣೆಗೆ ಕೀಯಿಂದ ಇರಿದೇ ಬಿಟ್ಟ ಪೊಲೀಸ್!

    ಹೆಲ್ಮೆಟ್ ಹಾಕಿಲ್ಲವೆಂದು ಸವಾರನ ಹಣೆಗೆ ಕೀಯಿಂದ ಇರಿದೇ ಬಿಟ್ಟ ಪೊಲೀಸ್!

    ಡೆಹ್ರಾಡೂನ್: ಬೈಕ್ ಸವಾರರಿಗೆ ಹೆಲ್ಮೆಟ್ ಕಡ್ಡಾಯ ಮಾಡಲಾಗಿದ್ದು, ಹಾಕದವರಿಗೆ ದಂಡ ವಿಧಿಸುವುದನ್ನು ಕೇಳಿದ್ದೇವೆ, ನೋಡಿದ್ದೇವೆ ಹಾಗೆ ದಂಡ ಕಟ್ಟಿಯೂ ಇದ್ದೇವೆ. ಆದರೆ ಉತ್ತರಾಖಂಡ್ ನಲ್ಲಿ ಹೆಲ್ಮೆಟ್ ಹಾಕದ ಯುವಕನೊಬ್ಬನಿಗೆ ವಿಚಿತ್ರ ಶಿಕ್ಷೆ ನೀಡಿರುವ ಘಟನೆಯೊಂದು ಬೆಳಕಿಗೆ ಬಂದಿದೆ.

    ಹೌದು. ಉತ್ತರಾಖಂಡ್‍ನ ಉಧಮ್ ಸಿಂಗ್ ಜಿಲ್ಲೆಯ ರುದ್ರಾಪುರದಲ್ಲಿ ಪೊಲೀಸರು ಯುವಕನ ಹಣೆಗೆ ಕೀಯಿಂದ ತಿವಿದಿದ್ದಾರೆ. ಪರಿಣಾಮ ಯುವಕನ ಹಣೆಗೆ ಗಂಭೀರ ಗಾಯಗಳಾಗಿದ್ದು, ಘಟನೆ ಸಂಬಂಧ ಮೂವರು ಪೊಲೀಸರನ್ನು ಅಮಾನತು ಮಾಡಲಾಗಿದೆ.

    ರುದ್ರಾಪುರ ಪ್ರದೇಶದಲ್ಲಿ ಸೋಮವಾರ ರಾತ್ರಿ 8 ಗಂಟೆ ಸುಮಾರಿಗೆ ಟ್ರಾಫಿಕ್ ನಿಯಮ ಪಾಲಿಸದ ಯುವಕನನ್ನು ಪೊಲೀಸರು ತಡೆದಿದ್ದಾರೆ. ಈ ವೇಳೆ ಪೊಲೀಸ್ ಹಾಗೂ ಯುವಕನ ಮಧ್ಯೆ ಮಾತಿನ ಚಕಮಕಿ ನಡೆದಿದೆ. ವಾಗ್ವಾದ ತಾರಕ್ಕೇರುತ್ತಿದ್ದಂತೆಯೇ ಮತ್ತೊಬ್ಬ ಪೊಲೀಸ್ ಯುವಕನ ಕೈಯಿಂದ ಬೈಕ್ ಕೀ ಎಳೆದುಕೊಂಡು ಆತನ ಹಣೆಗೆ ಜೋರಾಗಿ ತಿವಿದಿದ್ದಾನೆ.

    ಘಟನೆಯಿಂದ ಗಂಭೀರವಾಗಿ ಗಾಯಗೊಂಡ ಯುವಕನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಯುವಕನಿಗೆ ತಿವಿದ ಪರಿಣಾಮ ಹಣೆಯಿಂದ ರಕ್ತ ಸುರಿಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಘಟನೆಯಿಂದ ಸ್ಥಳೀಯರು ಆಕ್ರೋಶಗೊಂಡು ರುದ್ರಾಪುರ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದ್ದಾರೆ. ಅಲ್ಲದೆ ಕಲ್ಲುತೂರಾಟ ಕೂಡ ನಡೆಸಿದ್ದಾರೆ.

    ಪರಿಸ್ಥಿತಿ ಬಿಗಾಡಾಯಿಸುತ್ತಿದ್ದಂತೆಯೇ ರುದ್ರಾಪುರ ಕ್ಷೇತ್ರದ ಶಾಸಕ ರಾಜ್‍ಕುಮಾರ್ ಸ್ಥಳಕ್ಕೆ ದೌಡಾಯಿಸಿದ್ದಾರೆ. ಅಲ್ಲದೆ ಪ್ರಕರಣಕ್ಕೆ ಸಂಬಂಧಪಟ್ಟವರನ್ನು ಕೆಲಸದಿಂದ ವಜಾ ಮಾಡುವಂತೆ ಸೂಚಿಸಿದ್ದು, ಸದ್ಯ ಮೂವರನ್ನು ಅಮಾನತು ಮಾಡಲಾಗಿದೆ. ಈ ಸಂಬಂಧ ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

  • ನೇಪಾಳ ರೇಡಿಯೋದಲ್ಲಿ ಭಾರತ ವಿರೋಧಿ ಹಾಡು!

    ನೇಪಾಳ ರೇಡಿಯೋದಲ್ಲಿ ಭಾರತ ವಿರೋಧಿ ಹಾಡು!

    ನವದೆಹಲಿ: ಹೊಸ ಭೂಪಟದ ಸಂಬಂಧ ನೆರೆರಾಷ್ಟ್ರ ನೇಪಾಳದೊಂದಿಗೆ ವಿವಾದ ಹೆಚ್ಚಾಗುತ್ತಿರುವ ಬೆನ್ನಲ್ಲೇ ಅಲ್ಲಿನ ಸರ್ಕಾರ ಜನರಲ್ಲಿ ಭಾರತದ ವಿರುದ್ಧ ದ್ವೇಷವನ್ನು ಹೆಚ್ಚಿಸಲು ರೇಡಿಯೋಗಳಲ್ಲಿ ಭಾರತ ವಿರೋಧಿ ಹಾಡುಗಳನ್ನು ಪ್ರಸಾರ ಮಾಡುತ್ತಿದೆ ಎಂದು ವರದಿಯಾಗಿದೆ.

    ಗಡಿ ಪ್ರದೇಶದಲ್ಲಿರುವ ಭಾರತದ ಉತ್ತರಾಖಂಡ ರಾಜ್ಯದ ಹಳ್ಳಿಗಳಲ್ಲಿ ನೇಪಾಳ ರೇಡಿಯೋ ಸಿಗ್ನಲ್ ಲಭ್ಯವಾಗುತ್ತವೆ. ಈ ವೇಳೆ ಭಾರತ ವಿರೋಧಿ ಹಾಡುಗಳು ಪ್ರಸಾರವಾಗುತ್ತಿರುವುದು ಖಚಿತವಾಗಿದೆ ಎಂಬ ಮಾಹಿತಿ ಲಭಿಸಿದೆ. ಆ ಮೂಲಕ ಭಾರತ ವಿರುದ್ಧ ವ್ಯವಸ್ಥಿತವಾಗಿ ಜನರಿಗೆ ಅಪಪ್ರಚಾರ ನಡೆಸುವತ್ತ ನೇಪಾಳ ಸರ್ಕಾರ ಮುಂದಾಗಿದೆ. ಇದನ್ನು ಓದಿ: ಚೀನಾ ವೈರಸ್‍ಗಿಂತಲೂ ಭಾರತದ ವೈರಸ್ ಮಾರಕ – ನೇಪಾಳ ಪ್ರಧಾನಿಯಿಂದ ವಿವಾದಾತ್ಮಕ ಮಾತು

    ಕೆಲವು ನೇಪಾಳಿ ರೇಡಿಯೋಗಳು ನೇಪಾಳಿ ಹಾಡುಗಳೊಂದಿಗೆ ಭಾರತದ ವಿರೋಧಿ ಭಾಷಣಗಳನ್ನು ಪ್ರಸಾರ ಮಾಡಲು ಪ್ರಾರಂಭಿಸಿದೆ ಎಂದು ಧಾರ್ಚುಲಾ ಉಪಭಾಗದ ದಂಟು ಗ್ರಾಮದ ನಿವಾಸಿ ಶಾಲು ದತಾಲ್ ಅವರು ಮಾಹಿತಿ ನೀಡಿದ್ದಾರೆ. ಗಡಿಯ ಎರಡೂ ಬದಿಗಳಲ್ಲಿರುವ ಜನರು ನೇಪಾಳಿ ಹಾಡುಗಳನ್ನ ಕೇಳುತ್ತಾರೆ. ಈ ವೇಳೆ ನೇಪಾಳಿ ರಾಜಕೀಯ ನಾಯಕರ ಭಾರತ ವಿರೋಧಿ ಭಾಷಣಗಳು ಸಹ ಪ್ರಸಾರ ಮಾಡಲಾಗುತ್ತಿದೆ ಎಂದು ಪಿಟಿಐ ವರದಿ ಮಾಡಿದೆ. ಇದನ್ನು ಓದಿ: ನೇಪಾಳ ಆಯ್ತು, ಈಗ ಢಾಕಾದತ್ತ ಕೈಚಾಚಿದ ಬೀಜಿಂಗ್‌

    ಸ್ಥಳೀಯ ನಿವಾಸಿ ನೀಡಿರುವ ಮಾಹಿತಿ ಅನ್ವಯ, ನಯಾ ನೇಪಾಳ ಮತ್ತು ಕಲಾಪಾಣಿ ರೇಡಿಯೋ ಸೇರಿದಂತೆ ಕೆಲ ಹಳೆ ವಾಹಿನಿಗಳು ಕೂಡ ಇಂತಹ ಹಾಡು, ಭಾಷಣಗಳಲ್ಲಿ ಕಲಾಪಾನಿ ಪ್ರದೇಶ ನೇಪಾಳದೆಂದು ಬಿಂಬಿಸುತ್ತಿರುವ ವರದಿಗಳನ್ನು ಪ್ರಸಾರ ಮಾಡುತ್ತಿವೆ ಎಂದು ತಿಳಿಸಿದ್ದಾರೆ. ಈ ವಾಹಿನಿಗಳು ನೇಪಾಳದ ಧಾರ್ಚುಲಾದ ಜಿಲ್ಲಾ ಕೇಂದ್ರದ ಸಮೀಪದ ಚಬ್ರಿಗರ್ ಎಂಬ ಪ್ರದೇಶದಿಂದ ಕಾರ್ಯನಿರ್ವಹಿಸುತ್ತಿದೆ ಎಂಬ ಮಾಹಿತಿ ಲಭಿಸಿದೆ. ಕೇವಲ ಮೂರು ವ್ಯಾಪಿಯ ದೂರದಲ್ಲಿ ಇರುವುದರಿಂದ ರೇಡಿಯೋ ತರಂಗಗಳು ಗಡಿ ಪ್ರದೇಶದ ಹಳ್ಳಿಗಳಲ್ಲಿ ಸುಲಭವಾಗಿ ಕೇಳಬಹುದಾಗಿದೆ.

    ‘ಕಾಲಾಪಾನಿ, ಲಿಪುಲೇಕ್, ಲಿಂಪಿಯಾಮುದ್ರ ಪ್ರದೇಶಗಳು ನಮ್ಮದು. ಜನರೇ ಎಚ್ಚೆತ್ತುಕೊಳ್ಳಿ’ ಎಂಬ ಸರಾಂಶವಿರುವ ಹಾಡು, ಭಾಷಣಗಳು ಪ್ರಸಾರವಾಗುತ್ತಿದೆ ಎಂದು ಸ್ಥಳೀಯ ಶಿಕ್ಷಕರೊಬ್ಬರು ಮಾಹಿತಿ ನೀಡಿದ್ದಾರೆ. ಇದನ್ನು ಓದಿ: ಭಾರತದಿಂದ ನನ್ನ ಎಳೆದೊಯ್ದು ಸುಳ್ಳು ಹೇಳಲು ಒತ್ತಾಯಿಸಿದ್ರು: ನೇಪಾಳದ ವಶದಲ್ಲಿದ್ದ ವ್ಯಕ್ತಿ

    ಇಂತಹ ವರದಿಗಳು ಪ್ರಸಾರವಾಗುತ್ತಿರುವ ಬಗ್ಗೆ ಸ್ಥಳೀಯ ಆಡಳಿತ ಹಾಗೂ ಪೊಲೀಸರಿಗೆ ಮಾಹಿತಿ ಲಭಿಸಿಲ್ಲ ಎನ್ನಲಾಗಿದೆ. ಇಂತಹ ವಿಚಾರಗಳ ಬಗ್ಗೆ ನಮ್ಮ ಗುಪ್ತಚರದಿಂದ ಯಾವುದೇ ಮಾಹಿತಿ ಲಭಿಸಿಲ್ಲ ಎಂದು ಪಿಥೋರಗರ್ ಪೊಲೀಸ್ ವರಿಷ್ಠಾಧಿಕಾರಿ ಪ್ರೀತಿ ಪ್ರದರ್ಶಿನಿ ಪ್ರತಿಕ್ರಿಯೆ ನೀಡಿದ್ದಾರೆ.

    ಭಾರತದ ಭೂ ಭಾಗ ಕಾಲಾಪಾನಿ, ಲಿಂಪಿಯಾಧುರಾ, ಲಿಪುಲೇಖ್ ಪ್ರದೇಶಗಳನ್ನು ತನ್ನ ಪ್ರದೇಶ ಎಂದು ನೇಪಾಳ ಹೊಸ ರಾಜಕೀಯ ನಕ್ಷೆ ಬಿಡುಗಡೆ ಮಾಡಿ ಸಂಸತ್‍ನಲ್ಲಿ ಅಂಗೀಕರಿಸಿತ್ತು. ಈ ಕುರಿತು ಇತ್ತೀಚೆಗೆ ಪ್ರತಿಕ್ರಿಯೆ ನೀಡಿದ್ದ ಭಾರತ, ನೇಪಾಳದ ಹೊಸ ನಕ್ಷೆ ರಾಜಕೀಯ ಲಾಭಕ್ಕಾಗಿ ಬಿಡುಗಡೆ ಮಾಡಲಾಗಿದೆ ಎಂದಿತ್ತು.

  • ಉತ್ತರಾಖಂಡ ತೀರ್ಥ ಯಾತ್ರೆ – ದೇವರ ಪ್ರಸಾದ ತಿಂದವರು ಈಗ ಕ್ವಾರಂಟೈನ್‍!

    ಉತ್ತರಾಖಂಡ ತೀರ್ಥ ಯಾತ್ರೆ – ದೇವರ ಪ್ರಸಾದ ತಿಂದವರು ಈಗ ಕ್ವಾರಂಟೈನ್‍!

    ಬಳ್ಳಾರಿ: ಜಿಲ್ಲೆಯ ಉತ್ತರಾಖಂಡ ತೀರ್ಥ ಯಾತ್ರೆಗೆ ತೆರಳಿದ್ದ 18 ಮಂದಿ ಪೈಕಿ ಒಬ್ಬರಿಗೆ ಮಾತ್ರ ಕೊರೊನಾ ಪಾಸಿಟಿವ್ ಕೇಸ್ ಪತ್ತೆಯಾಗಿದ್ದು, ಆ ಒಂದು ಪಾಸಿಟಿವ್ ಪ್ರಕರಣವು ಈಗ ಹೊಸದೊಂದು ತಿರುವು ಪಡೆದುಕೊಂಡಿದೆ.

    ಕೊರೊನಾ ಪಾಸಿಟಿವ್ ಕೇಸ್ ಪತ್ತೆಯಾಗಿದ್ದ ವ್ಯಕ್ತಿಯ ಪತ್ನಿ ತೀರ್ಥಯಾತ್ರೆಯಿಂದ ತಂದಂತಹ ದೇವರ ಪ್ರಸಾದವನ್ನ ಹಂಚಿದ್ದಾರೆ. ಆಕೆ ಸುಮಾರು 91 ಮಂದಿಗೆ ಪ್ರಸಾದ ಹಂಚಿದ್ದಾರೆ. ಹೀಗಾಗಿ ಪ್ರೈಮರಿ ಕಾಂಟ್ಯಾಕ್ಟ್ ಹೊಂದಿದ್ದ 57 ಮಂದಿ ಹಾಗೂ ಸೆಕೆಂಡರಿ ಕಾಂಟ್ಯಾಕ್ಟ್ ಹೊಂದಿದ್ದ 34 ಮಂದಿಯನ್ನ ಜಿಲ್ಲಾಡಳಿತ ಪತ್ತೆಹಚ್ಚಿ ಕ್ವಾರಂಟೈನ್‍ನಲ್ಲಿಡಲಾಗಿದೆ.

    ಕಳೆದ ಎರಡು ದಿನಗಳ ಹಿಂದೆ ಬಳ್ಳಾರಿ ಜಾಗೃತಿ ನಗರದಲ್ಲಿ ಓರ್ವನಿಗೆ ಕೊರೊನಾ ಸೋಂಕು ದೃಢಪಟ್ಟಿತ್ತು. ತೀರ್ಥಯಾತ್ರೆ ಪ್ರಸಾದ ತಿಂದವರೆಲ್ಲರೂ ಕೂಡ ಕ್ವಾರಂಟೈನ್‍ನಲ್ಲಿದ್ದಾರೆ. ಉತ್ತರಾಖಂಡ ರಾಜ್ಯದ ಪ್ರವಾಸಕ್ಕೆ ಹೋಗಿದ್ದ 18 ಮಂದಿಯ ಪೈಕಿ 14 ಮಂದಿ ಬಳ್ಳಾರಿ ನಗರದ ನಿವಾಸಿಗಳಾಗಿದ್ದರು. 4 ಮಂದಿ ನೆರೆಯ ಆಂಧ್ರ ಪ್ರದೇಶದ ಕಣೇಕಲ್ ಮೂಲದವರಾಗಿದ್ದರು. ಕಳೆದ ನಾಲ್ಕು ದಿನಗಳ ಹಿಂದೆ ಬಳ್ಳಾರಿಗೆ ಆಗಮಿಸಿದ್ದ ಈ ಪ್ರವಾಸಿಗರು ಸೋಂಕಿತರ ಸಂಪರ್ಕದಲ್ಲಿದ್ದ ಮಹಿಳೆಯಿಂದ ಪ್ರಸಾದ ಸ್ವೀಕರಿಸಿದ್ದರು.

    ಬಳ್ಳಾರಿ 14 ಮಂದಿ ಉತ್ತರಾಖಂಡ ಚಾರ್ ಧಾಮ್ ಪ್ರವಾಸ ಮಾಡಿದ್ದರು. ಪ್ರವಾಸ ಮುಗಿಸಿ ವಾಪಸ್ ಬರುವ ವೇಳೆ ಲಾಕ್‍ಡೌನ್ ಆಗಿತ್ತು. ಹೀಗಾಗಿ ಲಾಕ್‍ಡೌನ್ ಹಿನ್ನೆಲೆಯಲ್ಲಿ ಉತ್ತರಾಖಂಡನ ಲುಡುಕಿ ಎಂಬಲ್ಲಿ ಹೋಟೆಲ್‍ವೊಂದರಲ್ಲಿ ಆಶ್ರಯ ಪಡೆದಿದ್ದರು. ಚಾರ್ ಧಾಮ್ ಪ್ರವಾಸ ಮುಗಿಸಿ ಬಂದ ಹಿನ್ನೆಲೆಯಲ್ಲಿ ಮಹಿಳೆ ಅಕ್ಕ ಪಕ್ಕದ ಮನೆಯವರಿಗೆ ಪ್ರಸಾದ ಹಂಚಿದ್ದರು. ಇದೀಗ ಸೋಂಕಿತನ ಪತ್ನಿ ಹಂಚಿದ್ದ ಪ್ರಸಾದ ತಿಂದ ಒಟ್ಟು 34 ಮಂದಿ ಕ್ವಾರೆಂಟೈನ್‍ನಲ್ಲಿದ್ದಾರೆ.

    ಮುಂಜಾಗ್ರತಾ ಕ್ರಮವಾಗಿ ಸೆಕೆಂಡರಿ ಕಾಂಟ್ಯಾಕ್ಟ್ ಎಂದು ಪರಿಗಣಿಸಿ 34 ಮಂದಿಯನ್ನು ಕ್ವಾರೆಂಟೈನ್ ಮಾಡಲಾಗಿದೆ. ಪ್ರೈಮರಿ ಕಾಂಟ್ಯಾಕ್ಟ್ ಹೊಂದಿದ್ದ 57 ಮಂದಿ ಕೂಡ ಕ್ವಾರೆಂಟೈನ್‍ನಲ್ಲಿದ್ದಾರೆ. ಅದೃಷ್ಟವಶಾತ್ ಪ್ರಸಾದ ಹಂಚಿದ್ದ ಸೋಂಕಿತನ ಪತ್ನಿಗೆ ಕೊರೊನಾ ನೆಗೆಟಿವ್ ಬಂದಿದೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.

  • ಕೊರೊನಾ ಶಂಕಿತರಿರುವ ಪ್ರದೇಶದಲ್ಲೇ ಅದ್ದೂರಿ ಮದ್ವೆ- ವರ ಸೇರಿ 8 ಜನ ಅರೆಸ್ಟ್

    ಕೊರೊನಾ ಶಂಕಿತರಿರುವ ಪ್ರದೇಶದಲ್ಲೇ ಅದ್ದೂರಿ ಮದ್ವೆ- ವರ ಸೇರಿ 8 ಜನ ಅರೆಸ್ಟ್

    ಡೆಹ್ರಾಡೂನ್: ಲಾಕ್‍ಡೌನ್ ಸಂದರ್ಭದಲ್ಲಿ ಅನುಮತಿಯಿಲ್ಲದೆ ಮದುವೆ ನಡೆಸುತ್ತಿದ್ದ ಖಾಜಿ ಮತ್ತು ವರ ಸೇರಿದಂತೆ 8 ಜನರನ್ನು ಉತ್ತರಾಖಂಡ ಪೊಲೀಸರು ಬಂಧಿಸಿದ್ದಾರೆ.

    ಉತ್ತರಾಖಂಡದಲ್ಲಿ ಎಂಟು ಜನ ಹೋಮ್ ಕ್ವಾರೆಂಟೈನ್‍ಗಳಿರುವ ಪ್ರದೇಶದಲ್ಲಿ ಅದ್ದೂರಿಯಾಗಿ ಮದುವೆ ನಡೆತಿತ್ತು. ಈ ಸಂಬಂಧ ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು 8 ಜನರನ್ನು ಪೊಲೀಸರು ಅರೆಸ್ಟ್ ಮಾಡಿ, ವಿಚಾರಣೆಗೆ ಒಳಪಡಿಸಿದ್ದಾರೆ.

    ಕೊರೊನಾ ವೈರಸ್ ಹಿನ್ನೆಲೆಯಲ್ಲಿ ದೇಶಾದ್ಯಂತ ಏಪ್ರಿಲ್ 14ರವರೆಗೆ ಲಾಕ್‍ಡೌನ್ ಘೋಷಿಸಲಾಗಿದೆ. ದೇಶದಲ್ಲಿ ಕೊರೊನಾ ವೈರಸ್ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿದ್ದು, ಸೋಂಕಿತರ ಸಂಖ್ಯೆ 724ಕ್ಕೆ ಏರಿದೆ. ಇಂದು 30 ಹೊಸ ಪ್ರಕರಣಗಳು ವರದಿಯಾಗಿವೆ.

    ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನರನ್ನು ಉದ್ದೇಶಿಸಿ ಮಾತನಾಡಿ ಮನೆಯಲ್ಲಿಯೇ ಇರಲು ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಕೇಳಿಕೊಂಡಿದ್ದಾರೆ. ಕೊರೊನಾ ವೈರಸ್ ಕಾರಣದಿಂದಾಗಿ ಅನೇಕ ಜನರು ತಮ್ಮ ಮದುವೆಯನ್ನು ಮುಂದೂಡಿದ್ದಾರೆ. ಆದರೆ ಕೆಲವರು ಲಾಕ್‍ಡೌನ್ ಅನ್ನು ಉಲ್ಲಂಘಿಸುತ್ತಿದ್ದಾರೆ.

    ಲಾಕ್‍ಡೌನ್ ಸಾಮಾನ್ಯ ಜನರ ಜೀವನ ಹಾಗೂ ಆರ್ಥಿಕತೆಯ ಮೇಲೆ ಪರಿಣಾಮ ಬೀರಿದೆ. ಹೀಗಾಗಿ ಕೇಂದ್ರ ಸರ್ಕಾರವು 1.70 ಲಕ್ಷ ಕೋಟಿ ರೂ. ಮೌಲ್ಯದ ಪಿಎಂ ಗರಿಬ್ ಕಲ್ಯಾಣ್ ಯೋಜನೆ ಪ್ಯಾಕೇಜ್ ಘೋಷಣೆ ಮಾಡಿದೆ. ಇದರಲ್ಲಿ ಬಡವರು, ನಿರ್ಗತಿಕರು, ಮಹಿಳೆಯರು ಮತ್ತು ಅಂಗವಿಕಲರು ಸೇರಿದಂತೆ ಬಹುತೇಕ ಎಲ್ಲ ವಿಭಾಗಗಳಿಗೆ ಪರಿಹಾರ ನೀಡುವ ಪ್ರಯತ್ನ ಮಾಡಲಾಗಿದೆ. ಸರ್ಕಾರ ಎಲ್ಲ ರೀತಿಯ ಪ್ರಯತ್ನ ಮಾಡುತ್ತಿದ್ದರೂ ಕೆಲವರು ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ ಎಂಬ ದೂರು ಕೇಳಿ ಬಂದಿವೆ.

  • ಉತ್ತರಾಖಂಡ್ ಅರಣ್ಯದಲ್ಲಿ ಸಾರಥಿ ಸವಾರಿ

    ಉತ್ತರಾಖಂಡ್ ಅರಣ್ಯದಲ್ಲಿ ಸಾರಥಿ ಸವಾರಿ

    ಡೆಹ್ರಾಡೂನ್: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಮತ್ತೆ ಕಾಡಿನತ್ತ ಮುಖಮಾಡಿದ್ದಾರೆ. ಕಳೆದೆರಡು ತಿಂಗಳ ಹಿಂದಷ್ಟೇ ಕೀನ್ಯಾ ಕಾಡಿನಲ್ಲಿ ದಚ್ಚು ಆಂಡ್ ಟೀಂ ಸಫಾರಿ ಮಾಡಿದ್ದರು. ಅಲ್ಲಿನ ಮಕ್ಕಳೊಂದಿಗೆ ಕುಣಿದು ಖುಷಿಪಟ್ಟು, ಏರ್ ಬಲೂನ್‍ನಲ್ಲಿ ಆಗಸದಲ್ಲಿ ಹಾರಾಡುತ್ತಾ ಪ್ರಾಣಿಗಳ ಫೋಟೋವನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದರು. ಈಗ ಡಿ ಬಾಸ್ ಉತ್ತರಾಖಂಡ್‍ನತ್ತ ಸಾಗಿದ್ದಾರೆ.

    ಹೌದು, ವನ್ಯಜೀವಿ ಮತ್ತು ಪ್ರಾಣಿಪಕ್ಷಿಗಳನ್ನು ಅತಿಯಾಗಿ ಪ್ರೀತಿಸುವ ದರ್ಶನ್ ಇತ್ತೀಚೆಗೆ ಉತ್ತರಾಖಂಡ್ ಅರಣ್ಯ ಪ್ರದೇಶದಲ್ಲಿ ವನ್ಯಜೀವಿ ಛಾಯಾಗ್ರಹಣ ಮಾಡಿದ್ದಾರೆ. ದೊಡ್ಡ ಕ್ಯಾಮೆರಾ ಹೆಗಲಿಗೆ ಹಾಕೊಂಡು ವೈಲ್ಡ್‌ಲೈಫ್‌ ಫೋಟೋಗ್ರಾಫರ್ ಟೀಂ ಜೊತೆ ಕಲ್ಲು, ಬಂಡೆಯ ನಡುವೆ ಸಾಗಿ ಕಾಡು ಸುತ್ತಿದ್ದಾರೆ. ಆ ದಟ್ಟಕಾಡಿನಲ್ಲಿ ದಾಸ ಮಾಡಿರುವ ಸಾಹಸಮಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಲಾಗಿದೆ. ಇದನ್ನೂ ಓದಿ: ಪುತ್ರನಿಗೆ ಕುದುರೆ ಸವಾರಿ ಹೇಳಿಕೊಟ್ಟ ದರ್ಶನ್- ವಿಡಿಯೋ ನೋಡಿ

    ಕರ್ನಾಟಕ ಅರಣ್ಯ ಇಲಾಖೆಯ ರಾಯಭಾರಿಯಾಗಿರುವ ದರ್ಶನ್ ಸಿನಿಮಾ ಕೆಲಸದ ಜೊತೆಗೆ ವೈಲ್ಡ್‌ಲೈಫ್‌ ಫೋಟೋಗ್ರಾಫಿಯನ್ನು ಇಷ್ಟಪಡುತ್ತಾರೆ. ಹೀಗಾಗಿ ಬಿಡುವು ಸಿಕ್ಕಾಗಲೆಲ್ಲಾ ಹೆಗಲಿಗೆ ಕ್ಯಾಮರಾ ಏರಿಸಿಕೊಂಡು ಬಂಡಿಪುರದ ಕಾಡಿನ ಕಡೆಗೆ ಸಾರಥಿ ಹೋಗುತ್ತಾರೆ. ಇದನ್ನೂ ಓದಿ: ಕೀನ್ಯಾದಿಂದ ಹಿಂತಿರುಗಿದ ದರ್ಶನ್‍ ನೋಡಲು ಮುಗಿಬಿದ್ದ ಅಭಿಮಾನಿಗಳು

    ಅಷ್ಟೇ ಅಲ್ಲದೆ ಈ ಬಾರಿ ಕೂಡ ದರ್ಶನ್ ತೆಗೆದ ಫೋಟೋಗಳು ಪ್ರದರ್ಶನಗೊಳ್ಳಲಿದೆ. ಚಾಲೆಂಜಿಂಗ್ ಸ್ಟಾರ್ ನ ಕೈಚಳಕದಲ್ಲಿ ಮೂಡಿ ಬಂದ ಫೋಟೋ ಖರೀದಿಸಲು ಕಲಾವಿದರು ಸೇರಿದಂತೆ ಡಿ ಬಾಸ್ ಫ್ಯಾನ್ಸ್ ಕಾದು ಕುಳಿತಿದ್ದಾರೆ.