Tag: Uttarakhand

  • ಎಎಪಿಗೆ ಅವಕಾಶ ನೀಡಿ, ನಾವು ಕಲ್ಯಾಣ, ಅಭಿವೃದ್ಧಿ ಕೆಲಸ ಮಾಡುತ್ತೇವೆ: ಅರವಿಂದ್ ಕೇಜ್ರಿವಾಲ್

    ಎಎಪಿಗೆ ಅವಕಾಶ ನೀಡಿ, ನಾವು ಕಲ್ಯಾಣ, ಅಭಿವೃದ್ಧಿ ಕೆಲಸ ಮಾಡುತ್ತೇವೆ: ಅರವಿಂದ್ ಕೇಜ್ರಿವಾಲ್

    ಪಣಜಿ: ಗೋವಾ ಮತ್ತು ಉತ್ತರಾಖಂಡದ ಜನರಿಗೆ ಆಮ್ ಆದ್ಮಿ ಪಕ್ಷಕ್ಕೆ ಮತ ಹಾಕುವಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಮನವಿ ಮಾಡಿದರು. ವಿಧಾನಸಭೆ ಚುನಾವಣೆಗೆ ಒಂದು ದಿನ ಮುಂಚಿತವಾಗಿ ಕಲ್ಯಾಣ ಮತ್ತು ಅಭಿವೃದ್ಧಿ ಸಂಬಂಧಿತ ಕೆಲಸಗಳನ್ನು ಮಾಡುವುದಾಗಿ ಭರವಸೆ ನೀಡಿದ್ದಾರೆ.

    ಉತ್ತರಾಖಂಡದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ತಲಾ 10 ವರ್ಷ ಆಡಳಿತ ನಡೆಸಿವೆ. ಗೋವಾದಲ್ಲಿ ಕಾಂಗ್ರೆಸ್ 27 ವರ್ಷ, ಬಿಜೆಪಿ 15 ವರ್ಷ ಅಧಿಕಾರದಲ್ಲಿತ್ತು. ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಗೋವಾ ಮತ್ತು ಉತ್ತರಾಖಂಡದ ಜನರನ್ನು ಲೂಟಿ ಮಾಡಿದೆ. ನೀವು ಅವರಿಗೆ ಮತ್ತೊಮ್ಮೆ ಮತ ಹಾಕಿದರೆ, ಅವರು ನಿಮ್ಮನ್ನು ಲೂಟಿ ಮಾಡುವುದನ್ನು ಮುಂದುವರಿಸುತ್ತಾರೆ. ಈ ಬಾರಿ ಹೊಸ ಪಕ್ಷ (ಎಎಪಿ) ಇದೆ. ನಾವು ಕಲ್ಯಾಣ, ಅಭಿವೃದ್ಧಿಗೆ ಸಂಬಂಧಿಸಿದ ಕೆಲಸಗಳನ್ನು ನೀಡುತ್ತೇವೆ. ಆಮ್ ಆದ್ಮಿ ಪಕ್ಷಕ್ಕೆ ಅವಕಾಶ ನೀಡಿ ಎಂದಿದ್ದಾರೆ.

    ಶಿಕ್ಷಣ, ಆರೋಗ್ಯ ಮತ್ತು ವಿದ್ಯುತ್ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ದೆಹಲಿಯಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ಉಲ್ಲೇಖಿಸಿ ಮಾತನಾಡಿದ ಕೇಜ್ರಿವಾಲ್ ಅವರು, ಎರಡೂ ರಾಜ್ಯಗಳಲ್ಲಿ ಅಧಿಕಾರಕ್ಕೆ ಬಂದರೆ ತಾವು ಅದೇ ರೀತಿ ಕೆಲಸ ಮಾಡುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಅರವಿಂದ್ ಕೇಜ್ರಿವಾಲ್, ರಾಘವ್ ಚಡ್ಡಾ ಪಂಜಾಬ್ ಲೂಟಿ ಮಾಡಲು ಬಂದಿದ್ದಾರೆ: ಚರಣ್‍ಜಿತ್ ಸಿಂಗ್ ಚನ್ನಿ

    ಗುಡ್ಡಗಾಡು ರಾಜ್ಯದ ಎಲ್ಲಾ ಹಳ್ಳಿಗಳಲ್ಲಿ ಆರೋಗ್ಯ ಸೇವೆಗಳು, ಶಾಲೆಗಳನ್ನು ಸ್ಥಾಪಿಸುವ ಮತ್ತು ಉದ್ಯೋಗ ಹುಡುಕಾಟದಲ್ಲಿರುವ ಯುವಕರು ರಾಜ್ಯದಿಂದ ವಲಸೆ ಹೋಗುವುದನ್ನು ತಡೆಯಲು ಉದ್ಯೋಗಾವಕಾಶಗಳನ್ನು ಹೆಚ್ಚಿಸುವುದಾಗಿ ಭರವಸೆ ನೀಡಿದ್ದಾರೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ 10 ವರ್ಷಗಳ ಕಾಲದಿಂದ ಗಣಿಗಾರಿಕೆ ನಿಂತಿದೆ, ಆದ್ದರಿಂದ ಅವರಿಗೆ ಮತ ಹಾಕುವುದರಲ್ಲಿ ಅರ್ಥವಿಲ್ಲ. ಎಎಪಿಗೆ ಮತ ನೀಡಿ, ನಮಗೆ ಅವಕಾಶ ನೀಡಿ. 6 ತಿಂಗಳಲ್ಲಿ ಗಣಿಗಾರಿಕೆ ಆರಂಭಿಸುತ್ತೇವೆ ಎಂದಿದ್ದಾರೆ.

     

    ಗೋವಾದಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಅಮಿತ್ ಪಾಲೇಕರ್ ಅವರು, “ಪ್ರಾಮಾಣಿಕ” ಮತ್ತು ಭ್ರಷ್ಟಾಚಾರದಲ್ಲಿ ಭಾಗಿಯಾಗಿಲ್ಲ. ಉತ್ತರಾಖಂಡ ಸಿಎಂ ಅಭ್ಯರ್ಥಿ, ಕರ್ನಲ್ (ನಿವೃತ್ತ) ಅಜಯ್ ಕೊಥಿಯಾಲ್ 10,000 ಮಕ್ಕಳಿಗೆ ತರಬೇತಿ ಕೊಡಿಸಿ ಮತ್ತು ಅವರನ್ನು ಸೇನೆಗೆ ಸೇರಿಸಿದ್ದಾರೆ ಎಂದು ಹೊಗಳಿದ್ದಾರೆ. ಫೆಬ್ರವರಿ 14 ರಂದು ಗೋವಾದ 40 ವಿಧಾನಸಭಾ ಕ್ಷೇತ್ರಗಳು ಮತ್ತು ಉತ್ತರಾಖಂಡದ 70 ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದೆ. ಇದನ್ನೂ ಓದಿ: ಬಿಜೆಪಿ ಸುಳ್ಳುಗಾರರ ಪಕ್ಷ: ಅಖಿಲೇಶ್ ಯಾದವ್

  • ರಾಜಕಾರಣಿಯ ಕರ್ತವ್ಯ ಜನ ಸೇವೆ, ಬಿಜೆಪಿಯವರು ತಮ್ಮ ಅಭಿವೃದ್ಧಿಯನ್ನಷ್ಟೇ ನೋಡ್ತಾರೆ: ಪ್ರಿಯಾಂಕಾ ಗಾಂಧಿ

    ರಾಜಕಾರಣಿಯ ಕರ್ತವ್ಯ ಜನ ಸೇವೆ, ಬಿಜೆಪಿಯವರು ತಮ್ಮ ಅಭಿವೃದ್ಧಿಯನ್ನಷ್ಟೇ ನೋಡ್ತಾರೆ: ಪ್ರಿಯಾಂಕಾ ಗಾಂಧಿ

    ಡೆಹ್ರಾಡೂನ್: ರಾಜಕಾರಣಿಯ ಬಹು ದೊಡ್ಡ ಕರ್ತವ್ಯ ಜನ ಸೇವೆಯಾಗಿದೆ. ಆದರೆ ಇವತ್ತು ಸಿಎಂ ನಿಂದ ಪಿಎಂವರೆಗೆ ಬಿಜೆಪಿಯ ಪ್ರತಿಯೊಬ್ಬ ನಾಯಕನೂ ತಮ್ಮ ಅಭಿವೃದ್ಧಿಯನ್ನಷ್ಟೇ ನೋಡುತ್ತಾರೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಬಿಜೆಪಿ ಸರ್ಕಾರ ವಿರುದ್ಧ ವಾಗ್ಧಾಳಿ ಮಾಡಿದ್ದಾರೆ.

    ಖಟೀಮಾದಲ್ಲಿ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿ ಮಾತನಾಡಿ, ಬೆಲೆಯೇರಿಕೆ, ನಿರುದ್ಯೋಗ ಸಮಸ್ಯೆಗಳ ಬಗ್ಗೆ ತಾವೇನು ಮಾಡುತ್ತೇವೆ ಎಂಬುದನ್ನು ಮುಖ್ಯಮಂತ್ರಿಗಳು ಜನರಿಗೆ ತಿಳಿಸಬೇಕು. ಮಹಿಳೆಯರಿಗೆ ಅವರು ಯಾವ ಯೋಜನೆಯನ್ನು ತರಲಿದ್ದಾರೆ ಉದ್ಯೋಗಕ್ಕಾಗಿ ಜನರು ರಾಜ್ಯದಿಂದೇಕೆ ಬೇರೆಡೆಗೆ ವಲಸೆ ಹೋಗುತ್ತಿದ್ದಾರೆ ಏಕೆಂದರೆ ಇಲ್ಲಿ ಉದ್ಯೋಗಗಳ ಸೃಷ್ಟಿಯಾಗುತ್ತಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಹಿಜಬ್ ವಿವಾದ ಕಂಡ ರಾಜ್ಯಗಳು – ಅಲ್ಲಿನ ಹೈಕೋರ್ಟ್‌ಗಳ ತೀರ್ಪುಗಳೇನು? ಇಲ್ಲಿದೆ ಮಾಹಿತಿ

    ಸಮಾಜದ ಪ್ರತಿಯೊಂದು ವರ್ಗವೂ ಕಷ್ಟದಲ್ಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಜನರ ‘ಮನ್ ಕಿ ಬಾತ್’ ಕೇಳಲು ಸಿದ್ಧರಿಲ್ಲ. ಉತ್ತರಾಖಂಡದಲ್ಲಿ ಎಲ್ಲವೂ ಇದೆ. ಹಿಮಾಲಯ ಪರ್ವತಗಳು, ಪ್ರಕೃತಿ, ಪ್ರವಾಸೋದ್ಯಮ ಅವಕಾಶಗಳು ಇವೆ. ಆದರೆ ಉದ್ಯೋಗಗಳಿಲ್ಲ. ಜನರು ಇಲ್ಲಿಂದ ವಲಸೆ ಹೋಗುತ್ತಿದ್ದಾರೆ. ವಲಸೆ ಹೋಗುವವರ ಸಂಖ್ಯೆ ರಾಜ್ಯದಲ್ಲಿ ಅಧಿಕವಾಗಿದೆ ಎಂದು ಪ್ರಿಯಾಂಕಾ ಗಾಂಧಿ ಹೇಳಿದರು. ರಾಜಕಾರಣಿಯ ಬಹು ದೊಡ್ಡ ಕರ್ತವ್ಯ ಜನ ಸೇವೆಯಾಗಿದೆ. ಜನರ ಅಭಿವೃದ್ಧಿಗೆ ಸಹಕರಿಸುವುದಾಗಿದೆ. ಆದರೆ ಇವತ್ತು ಸಿಎಂ ನಿಂದ ಪಿಎಂವರೆಗೆ ಬಿಜೆಪಿಯ ಪ್ರತಿಯೊಬ್ಬ ನಾಯಕನೂ ತಮ್ಮ ಅಭಿವೃದ್ಧಿಯನ್ನಷ್ಟೇ ನೋಡುತ್ತಾರೆ. ಯಾರೂ ಜನರ ಬಗ್ಗೆ ಯೋಚಿಸುವುದಿಲ್ಲ ಎಂದು ಪ್ರಿಯಾಂಕಾ ಗಾಂಧಿ ಆರೋಪಿಸಿದರು. ಇದನ್ನೂ ಓದಿ:  ಉತ್ತರಾಖಂಡದ ಬ್ರಾಂಡ್ ಅಂಬಾಸಿಡರ್ ಆಗಿ ಅಕ್ಷಯ್ ಕುಮಾರ್ ನೇಮಕ

    BJP - CONGRESS

    ಪ್ರಧಾನಿಯ ಇಬ್ಬರು ಸ್ನೇಹಿತರ ಉದ್ಯಮಕ್ಕೆ ಸಹಾಯ ಮಾಡುವ ಯೋಜನೆಗಳನ್ನೇ ರಾಷ್ಟ್ರಾದ್ಯಂತ ಚಾಲ್ತಿಯಲ್ಲಿವೆ. ಬಜೆಟ್ ಬಂದರೆ ರಾಷ್ಟ್ರದ ಬೆನ್ನೆಲುಬಾದ ಬಡವರಿಗೆ, ರೈತರಿಗೆ, ಮಧ್ಯಮ ವರ್ಗದವರಿಗೆ, ಸಣ್ಣ ಮತ್ತು ಮಧ್ಯಮ ಉದ್ಯಮಿಗಳಿಗೆ ಯಾವ ಯೋಜನೆಗಯೂ ಇರುವುದಿಲ್ಲ ಎಂದು ಪ್ರಿಯಾಂಕಾ ಗಾಂಧಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಉತ್ತರಾಖಂಡದ ಜನತೆ ಬಿಜೆಪಿ ಸರ್ಕಾರದಿಂದ ಬೇಸತ್ತಿದ್ದಾರೆ. ಕಾಂಗ್ರೆಸ್ ಖಂಡಿತವಾಗಿ ಅಧಿಕಾರಕ್ಕೆ ಬರುತ್ತದೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ

  • ಭಾರತವನ್ನು ರಾಷ್ಟ್ರವೆಂದು ಪರಿಗಣಿಸಲು ಕಾಂಗ್ರೆಸ್ ಸಿದ್ಧವಿಲ್ಲ: ಮೋದಿ

    ಭಾರತವನ್ನು ರಾಷ್ಟ್ರವೆಂದು ಪರಿಗಣಿಸಲು ಕಾಂಗ್ರೆಸ್ ಸಿದ್ಧವಿಲ್ಲ: ಮೋದಿ

    ಡೆಹ್ರಾಡೂನ್: ಭಾರತವನ್ನು ರಾಷ್ಟ್ರವೆಂದು ಪರಿಗಣಿಸಲು ಕಾಂಗ್ರೆಸ್ ಸಿದ್ಧವಾಗಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.

    ಉತ್ತರಾಖಂಡದಲ್ಲಿನ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕೇಂದ್ರ ಮತ್ತು ರಾಜ್ಯ ಮಟ್ಟದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಕೈಗೊಂಡಿರುವ ವಿವಿಧ ಉಪಕ್ರಮಗಳನ್ನು ಎತ್ತಿ ಹಿಡಿದರು. ಇದನ್ನೂ ಓದಿ: ಆಕಾಶದಲ್ಲಿ ಹಾರಾಡಿತು ಪೈಲಟ್ ರಹಿತ ಹೆಲಿಕಾಪ್ಟರ್

    ಭಾರತವು ಒಂದೇ, ಈ ದೇಶವು ಒಂದೇ. ಇದು ರಾಷ್ಟ್ರವಲ್ಲ ಎಂದು ಕಾಂಗ್ರೆಸ್ ಹೇಳುತ್ತಿದೆ. ಭಾರತವನ್ನು ರಾಷ್ಟ್ರ ಎಂದು ಪರಿಗಣಿಸಲು ಕಾಂಗ್ರೆಸ್ ಸಿದ್ಧವಿಲ್ಲ. ಆದರೆ ದೇವಭೂಮಿ ಉತ್ತರಾಖಂಡದ ‘ದೇವತಾವ’ (ದೈವಿಕತೆ)ಯನ್ನು ಬಿಜೆಪಿ ಭದ್ರಪಡಿಸಲಿದೆ ಎಂದು ಪ್ರತಿಜ್ಞೆ ಮಾಡಿದರು.

    ಉತ್ತರಾಖಂಡ ಸರ್ಕಾರವು ಕೋವಿಡ್-19 ಸಾಂಕ್ರಾಮಿಕ (ಉಚಿತ ಪಡಿತರ ಮತ್ತು ಇತರ ಯೋಜನೆಗಳ ರೂಪದಲ್ಲಿ) ಬಡವರಿಗೆ ಬೆಂಬಲ ನೀಡಿರುವುದನ್ನು ತಿಳಿಸಿದ ಅವರು, ಒಂದು ವೇಳೆ ಕಾಂಗ್ರೆಸ್ ಆಡಳಿತದಲ್ಲಿದ್ದರೆ ಪರಿಸ್ಥಿತಿ ತುಂಬಾ ಭಿನ್ನವಾಗಿರುತ್ತಿತ್ತು. ಕಾಂಗ್ರೆಸ್ ರಾಜ್ಯದಲ್ಲಿ ಆಡಳಿತ ನಡೆಸುತ್ತಿದ್ದರೆ ಭ್ರಷ್ಟಾಚಾರ ನಡೆಯುತ್ತಿತ್ತು ಎಂದು ಆರೋಪಿಸಿದ್ದಾರೆ.

    ಬಿಜೆಪಿ ಸರ್ಕಾರವು ಉತ್ತರಾಖಂಡದ ಅಭಿವೃದ್ಧಿಗೆ ಯಾವುದೇ ಕಲ್ಲನ್ನು ಹಾಕುತ್ತಿಲ್ಲ. ಕೋವಿಡ್-19 ಸಾಂಕ್ರಾಮಿಕ ರೋಗದ ನಡುವೆಯೂ ಹಲವಾರು ಯೋಜನೆಗಳನ್ನು ಕೈಗೊಳ್ಳಲಾಗುತ್ತಿದೆ ಎಂದಿದ್ದಾರೆ. ಇದನ್ನೂ ಓದಿ: ಪಬ್ಲಿಕ್ ಟಿವಿಗೆ ದಶಕದ ಸಂಭ್ರಮ – ಶಾಂತಿಧಾಮಕ್ಕೆ 25 ಲಕ್ಷ ರೂ. ವಿತರಣೆ

    ನಾವು ಇಲ್ಲಿ ಹೆದ್ದಾರಿಗಳು ಮತ್ತು ವಿಮಾನ ನಿಲ್ದಾಣಗಳನ್ನು ನಿರ್ಮಿಸುತ್ತಿದ್ದೇವೆ. ‘ಪರ್ವತ್ ಮಾಲಾ’ ಅಡಿಯಲ್ಲಿ, ರಾಷ್ಟ್ರೀಯ ರೋಪ್‍ವೇ ಅಭಿವೃದ್ಧಿ ಕಾರ್ಯಕ್ರಮದ ಮೂಲಕ ದೂರದ ಪ್ರದೇಶಗಳಲ್ಲಿ ರೋಪ್‍ವೇ ಸಂಪರ್ಕವನ್ನು ಒದಗಿಸಲಾಗುವುದು. ಹೊಸ ವೈದ್ಯಕೀಯ ಕಾಲೇಜುಗಳು ಮತ್ತು ಪದವಿ ಕಾಲೇಜುಗಳನ್ನು ತೆರೆಯಲಾಗುವುದು ಎಂದು ಭರವಸೆ ನೀಡಿದ್ದಾರೆ.


    Narendra Modi, Uttarakhand, Congress

  • ಡಬಲ್ ಇಂಜಿನ್ ಸರ್ಕಾರ ಉಚಿತ ಪಡಿತರ, ಲಸಿಕೆಗಳನ್ನು ಒದಗಿಸಿದೆ: ಪುಷ್ಕರ್ ಸಿಂಗ್ ಧಾಮಿ

    ಡಬಲ್ ಇಂಜಿನ್ ಸರ್ಕಾರ ಉಚಿತ ಪಡಿತರ, ಲಸಿಕೆಗಳನ್ನು ಒದಗಿಸಿದೆ: ಪುಷ್ಕರ್ ಸಿಂಗ್ ಧಾಮಿ

    ಡೆಹ್ರಾಡೂನ್: ಉತ್ತರಾಖಂಡ ವಿಧಾನಸಭೆ ಚುನಾವಣೆಯ ಮುಖ್ಯಸ್ಥ, ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಡಬಲ್ ಇಂಜಿನ್ ಸರ್ಕಾರವು ಜನರಿಗೆ ಉಚಿತ ಪಡಿತರ ಮತ್ತು ಲಸಿಕೆಗಳನ್ನು ಒದಗಿಸಿದೆ ಎಂದಿದ್ದಾರೆ

    ಬಾಜ್‍ಪುರ, ಉಧಮ್‍ಪುರ ಸಿಂಗ್ ನಗರದ ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ಅವರು, ಡಬಲ್ ಇಂಜಿನ್ ಸರ್ಕಾರವು ಜನರಿಗೆ ಉಚಿತ ರೇಷನ್, ಲಸಿಕೆಗಳನ್ನು ಒದಗಿಸಿದೆ. ನಮ್ಮ ಸರ್ಕಾರವು ಜನರಿಗೆ ವಿವಿಧ ವಲಯಗಳಲ್ಲಿ ಅನೇಕ ಯೋಜನೆಗಳನ್ನು ಪ್ರಾರಂಭಿಸಿದೆ ಮತ್ತು ಜನರಿಗೆ ನೇರ ಪ್ರಯೋಜನಗಳನ್ನು ನೀಡಿದೆ ಎಂದು ಹೇಳಿದ್ದಾರೆ.

    ಈಗಾಗಲೇ ಜನ ಬಿಜೆಪಿಯನ್ನು ಪೂರ್ಣ ಬಹುಮತದಿಂದ ಗೆಲ್ಲಿಸಲು ಮನಸ್ಸು ಮಾಡಿದ್ದಾರೆ. ತಮ್ಮ ಪ್ರಣಾಳಿಕೆಯಲ್ಲಿ ಯುವಕರಿಗೆ 50 ಸಾವಿರ ಸರ್ಕಾರಿ ಉದ್ಯೋಗ, ಬಡವರಿಗೆ ಪ್ರತಿ ವರ್ಷ ಮೂರು ಎಲ್‍ಪಿಜಿ ಸಿಲಿಂಡರ್‍ಗಳನ್ನು ನೀಡುವುದಾಗಿ ಭರವಸೆ ನೀಡಿದ್ದಾರೆ. ಜೊತೆಗೆ ಗುಡ್ಡಗಾಡು ಪ್ರದೇಶದಲ್ಲಿ ದುಡಿದು ಜೀವನ ನಡೆಸಲು ಸಾಧ್ಯವಾಗದ ಗರ್ಭಿಣಿಯರಿಗೆ 40 ಸಾವಿರ ಹಾಗೂ ಹಿರಿಯ ನಾಗರಿಕರ ಪಿಂಚಣಿಯನ್ನು 3,600ಕ್ಕೆ ಹೆಚ್ಚಿಸಲಾಗುವುದು ಎಂದಿದ್ದಾರೆ.

    ಕೇಂದ್ರ ಮತ್ತು ರಾಜ್ಯಗಳೆರಡೂ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಗೆ ತಲಾ 6,000 ನೀಡಲು ನಿರ್ಧರಿಸಿದ್ದೇವೆ. ಅದು ಪ್ರತಿಯೊಬ್ಬ ರೈತರ ಬ್ಯಾಂಕ್ ಖಾತೆಗೆ 12,000 ನಿಧಿ ವರ್ಗಾವಣೆಯ ಲಾಭವನ್ನು ವಿಸ್ತರಿಸುತ್ತದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಪಬ್ಲಿಕ್ ಟಿವಿಗೆ ದಶಕದ ಸಂಭ್ರಮ – ಶಾಂತಿಧಾಮಕ್ಕೆ 25 ಲಕ್ಷ ರೂ. ವಿತರಣೆ

    ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪುಷ್ಕರ್ ಸಿಂಗ್ ಧಮಿ ಅವರು ಖತಿಮಾದಿಂದ ಸ್ಪರ್ಧಿಸಲಿದ್ದಾರೆ. ಉತ್ತರಾಖಂಡದ 70 ಸದಸ್ಯ ಬಲದ ವಿಧಾನಸಭೆಗೆ ಫೆಬ್ರವರಿ 14 ರಂದು ಮತದಾನ ನಡೆಯಲಿದ್ದು, ಪ್ರಸ್ತುತ ಬಿಜೆಪಿ 57 ಶಾಸಕರನ್ನು ಹೊಂದಿದೆ. ಇದನ್ನೂ ಓದಿ: ರಾಜಧಾನಿಗೂ ಕಾಲಿಟ್ಟ ಹಿಜಬ್ ವಿವಾದ – ಹಿಜಬ್ ತೆಗೆಯುವಂತೆ ಮಕ್ಕಳಿಗೆ ಶಿಕ್ಷಕರಿಂದ ಒತ್ತಾಯ


    Pushkar Singh Dhami, Double Engine Government, Free Ration, Vaccine, Uttarakhand

  • ನಾನೇಕೆ ಪ್ರಧಾನಿ ಮಾತನ್ನ ಕೇಳಬೇಕು- ಮೋದಿಗೆ ರಾಗಾ ತಿರುಗೇಟು

    ನಾನೇಕೆ ಪ್ರಧಾನಿ ಮಾತನ್ನ ಕೇಳಬೇಕು- ಮೋದಿಗೆ ರಾಗಾ ತಿರುಗೇಟು

    ಲಕ್ನೋ: ನಾನೇಕೆ ಪ್ರಧಾನಿ ನರೇಂದ್ರ ಮೋದಿ ಮಾತನ್ನು ಕೇಳಬೇಕು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕಿಡಿಕಾರಿದರು.

    ಮೋದಿ ಅವರು ಸಂದರ್ಶನವೊಂದರಲ್ಲಿ ಮಾತನಾಡುವಾಗ ‘ರಾಹುಲ್ ಯಾರ ಮಾತನ್ನು ಕೇಳುವುದಿಲ್ಲ’ ಎಂದಿದ್ದರು. ಈ ಹೇಳಿಕೆ ಕುರಿತು ಉತ್ತರಾಖಂಡದ ಮಂಗಳೂರಿನಲ್ಲಿ ಸಾರ್ವಜನಿಕ ರ‍್ಯಾಲಿಯಲ್ಲಿ ಮಾತನಾಡಿದ ಅವರು, ಮೋದಿ ಜೀ ನಾನು ಏನನ್ನು ಕೇಳುವುದಿಲ್ಲ ಎಂದಿದ್ದಾರೆ. ಅವರು ಏಕೆ ಈ ರೀತಿ ಹೇಳಿದ್ದಾರೆ ಎಂಬುದು ನಿಮಗೆ ಅರ್ಥವಾಗಿದೆಯೇ? ಎಂದು ಜನರನ್ನು ಪ್ರಶ್ನಿಸಿದರು. ಇದನ್ನೂ ಓದಿ: ಜನರನ್ನು ತಣ್ಣಗಾಗಿಸುವ ಬದಲು ಉದ್ಯೋಗವಕಾಶ ಹೆಚ್ಚಿಸಿ: ಯೋಗಿ ವಿರುದ್ಧ ಪ್ರಿಯಾಂಕಾ ವಾಗ್ದಾಳಿ

    ನಾವು ಜಾರಿ ನಿರ್ದೇಶನಾಲಯ(ಇಡಿ) ಮತ್ತು ಕೇಂದ್ರೀಯ ತನಿಖಾ ದಳದಂತಹ ಕೇಂದ್ರೀಯ ಸಂಸ್ಥೆಗಳ ಒತ್ತಡಕ್ಕೆ ಮಣಿಯುವುದಿಲ್ಲ. ಅಂದರೆ ಇಡಿ, ಸಿಬಿಐ ಒತ್ತಡವು ನನ್ನ ಮೇಲೆ ಕೆಲಸ ಮಾಡುವುದಿಲ್ಲ. ರಾಹುಲ್ ಎಂದೂ ಹಿಂದೆ ಸರಿಯುವುದಿಲ್ಲ. ನಾನು ಅವರ ಮಾತನ್ನು ಏಕೆ ಕೇಳಬೇಕು? ಎಂದು ವಾಗ್ವಾದ ಮಾಡಿದರು.

    ಈ ಹಿಂದೆ ಸಂದರ್ಶನವೊಂದರಲ್ಲಿ ಪ್ರಧಾನಿ ರಾಹುಲ್ ಅವರನ್ನು ಗುರಿಯಾಗಿಸಿಕೊಂಡು, ಏನನ್ನು ಕೇಳದ ಮತ್ತು ಸದನದಲ್ಲಿ ಕುಳಿತುಕೊಳ್ಳದ ವ್ಯಕ್ತಿ ಎಂದು ಹೇಳಿಕೆಯನ್ನು ಕೊಟ್ಟಿದ್ದರು. ಈ ಹೇಳಿಕೆಗೆ ರಾಹುಲ್ ಅವರು ತಿರುಗೇಟು ಕೊಟ್ಟಿದ್ದಾರೆ.

    ಕೇಂದ್ರ ಸಚಿವ ಅನುರಾಗ್ ಠಾಕೂರ್ ಕೂಡ ಗುರುವಾರ ರಾಹುಲ್ ವಿರುದ್ಧ ವಾಗ್ದಾಳಿ ನಡೆಸಿದ್ದು, ರಾಷ್ಟ್ರಪತಿಗಳ ಭಾಷಣಕ್ಕೆ ಪ್ರಧಾನಿ ಸಂಸತ್ತಿನಲ್ಲಿ ಉತ್ತರ ಕೊಡುತ್ತಿದ್ದಾಗ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಅಲ್ಲಿ ಇರಲಿಲ್ಲ. ಅಷ್ಟೇ ಅಲ್ಲ, ಅವರು ಸಂಸತ್ತಿನಲ್ಲಿ ಅಷ್ಟಾಗಿ ಕಾಣುವುದಿಲ್ಲ. ಅವರು ಏನಾದರೂ ಹೇಳಿ ಸಂಸತ್ತಿನಿಂದ ಕಣ್ಮರೆಯಾಗುತ್ತಾರೆ ಎಂದು ಆರೋಪಿಸಿದ್ದರು. ಇದನ್ನೂ ಓದಿ: ಸಿಎಂ ಯೋಗಿ ವೇಷ ತೊಟ್ಟು ಮತಗಟ್ಟೆಗೆ ಬಂದ ವ್ಯಕ್ತಿ – ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಗಿ ಬಿದ್ದ ಜನ

  • ಉತ್ತರಾಖಂಡದ ಬ್ರಾಂಡ್ ಅಂಬಾಸಿಡರ್ ಆಗಿ ಅಕ್ಷಯ್ ಕುಮಾರ್ ನೇಮಕ

    ಉತ್ತರಾಖಂಡದ ಬ್ರಾಂಡ್ ಅಂಬಾಸಿಡರ್ ಆಗಿ ಅಕ್ಷಯ್ ಕುಮಾರ್ ನೇಮಕ

    ಡೆಹ್ರಾಡೂನ್: ಉತ್ತರಾಖಂಡದ ಬ್ರಾಂಡ್ ಅಂಬಾಸಿಡರ್ ಆಗಿ ಕೆಲಸ ಮಾಡಲು ಬಾಲಿವುಡ್ ಸ್ಟಾರ್ ಅಕ್ಷಯ್ ಕುಮಾರ್ ಅವರನ್ನು ಸಿಎಂ ಪುಷ್ಕರ್ ಸಿಂಗ್ ಧಾಮಿ ನೇಮಿಸಿದ್ದಾರೆ.

    ರಾಜ್ಯದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಮುನ್ನವೇ ಅಕ್ಷಯ್ ಕುಮಾರ್ ಅವರನ್ನು ಉತ್ತರಾಖಂಡದ ಬ್ರಾಂಡ್ ಅಂಬಾಸಿಡರ್ ಆಗಿ ಕಾರ್ಯನಿರ್ವಹಿಸಲು ಸಿಎಂ ನೇಮಕ ಮಾಡಿಕೊಂಡಿದ್ದಾರೆ. ಈ ಹಿಂದೆ ಪುಷ್ಕರ್ ಸಿಂಗ್ ಧಾಮಿ ಅವರು ಅಕ್ಷಯ್ ಕುಮಾರ್ ಅವರನ್ನು ಭೇಟಿ ಮಾಡಿ ತಮ್ಮ ಪ್ರಸ್ತಾವನೆಯನ್ನು ಮಂಡಿಸಿದ್ರು. ಇದಕ್ಕೆ ಅಕ್ಷಯ್ ಕುಮಾರ್ ಸಹ ಒಪ್ಪಿಕೊಂಡಿದ್ದರು. ಇದನ್ನೂ ಓದಿ: ಸುನಿಲ್ ಗ್ರೋವರ್ ಆರೋಗ್ಯ ವಿಚಾರಿಸಲು ತನ್ನ ವೈದ್ಯ ತಂಡಕ್ಕೆ ಸೂಚಿಸಿದ ಸಲ್ಮಾನ್

    ಈ ಪರಿಣಾಮ ಅಕ್ಷಯ್ ಕುಮಾರ್ ಇಂದು ಬೆಳಗ್ಗೆ ಡೆಹ್ರಾಡೂನ್‍ನಲ್ಲಿರುವ ಸಿಎಂ ನಿವಾಸಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ಪುಷ್ಕರ್ ಸಿಂಗ್ ಧಾಮಿ ಅವರು ಉತ್ತರಾಖಂಡದ ಬ್ರಾಂಡ್ ಅಂಬಾಸಿಡರ್ ಅಕ್ಷಯ್ ಕುಮಾರ್ ಎಂದು ಅಧಿಕೃತವಾಗಿ ಫೋಷಿಸಿದ್ದಾರೆ.

    70 ಸ್ಥಾನಗಳ ಉತ್ತರಾಖಂಡ ವಿಧಾನಸಭೆಯಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲು ಹವಣಿಸುತ್ತಿದೆ. ಕೆಲವು ದಿನಗಳ ಹಿಂದೆ, ರಾಜ್ಯದಲ್ಲಿ ಬಿಜೆಪಿ ಸರ್ಕಾರವನ್ನು ಬೆಂಬಲಿಸಲು ಭಾರತದ ಪ್ರತಿಭಾವಂತ ಕ್ರೀಡಾಪಟು, ಯುವ ಐಕಾನ್ ಮತ್ತು ದಂಗಲ್ ಹುಡುಗಿ ಬಬಿತಾ ಫೋಗಟ್ ಬಿಜೆಪಿ ಸರ್ಕಾರವನ್ನು ಪ್ರಶಂಸೆ ಮಾಡಿ ಟ್ವೀಟ್ ಮಾಡಿದ್ದರು.

    ನಡ್ಡಾ ಮನೆ-ಮನೆಗೆ ಭೇಟಿ!
    ನಿನ್ನೆ ಬಿಜೆಪಿ ಮುಖ್ಯಸ್ಥ ಜೆ.ಪಿ.ನಡ್ಡಾ ಅವರು ಚುನಾವಣೆಯಲ್ಲಿ ನಮ್ಮ ಪಕ್ಷಕ್ಕೆ ಮತ ಹಾಕಿ ಎಂದು ಮತದಾರರ ಮನವೊಲಿಸಲು ಮನೆ-ಮನೆಗೆ ಹೋಗಿ ಪ್ರಚಾರದಲ್ಲಿ ಭಾಗವಹಿಸಿದ್ದರು. ಇದನ್ನೂ ಓದಿ: 40 ವರ್ಷಗಳ ಹಿಂದೆ ಅವರನ್ನು ಭೇಟಿಯಾಗಿದ್ದೆ- ಸಿಧು ಜೊತೆಗಿನ ಮೊದಲ ಭೇಟಿ ನೆನೆದ ರಾಗಾ

    ಉತ್ತರಾಖಂಡದ ಗಂಗೋತ್ರಿಯಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಮಾಡಿದ ಕೆಲಸದ ವರದಿ ನಿಮ್ಮ ಮುಂದೆಯೇ ಇದೆ. ನಮ್ಮ ಸರ್ಕಾರ ಬಡವರು, ತುಳಿತಕ್ಕೊಳಗಾದವರು, ಹಿಂದುಳಿದವರು, ದೀನದಲಿತರು ಮತ್ತು ಮಹಿಳೆಯರ ಸಬಲೀಕರಣಕ್ಕಾಗಿ ಕೆಲಸ ಮಾಡಿದೆ. ಬಿಜೆಪಿಗೆ ನಿಮ್ಮ ಸಂಪೂರ್ಣ ಆಶೀರ್ವಾದವನ್ನು ನೀಡಲು ನೀವೆಲ್ಲರೂ ಮನಸ್ಸು ಮಾಡಿದ್ದೀರಿ ಎಂದು ಇಲ್ಲಿನ ಜನರ ಉತ್ಸಾಹ ನೋಡಿ ತಿಳಿಯುತ್ತೆ ಎಂದು ಹೇಳಿದ್ದರು.

  • ಬಿಜೆಪಿ ತನ್ನ ಬೊಕ್ಕಸ ತುಂಬಲು ಬಡವರ ಜೇಬಿಗೆ ಕತ್ತರಿ ಹಾಕ್ತಿದೆ: ಚರಣ್ ಸಿಂಗ್ ಸಪ್ರಾ

    ಬಿಜೆಪಿ ತನ್ನ ಬೊಕ್ಕಸ ತುಂಬಲು ಬಡವರ ಜೇಬಿಗೆ ಕತ್ತರಿ ಹಾಕ್ತಿದೆ: ಚರಣ್ ಸಿಂಗ್ ಸಪ್ರಾ

    ಡೆಹರಾಡೂನ್: ಕೇಂದ್ರ ಮತ್ತು ಉತ್ತರಾಖಂಡದ ಬಿಜೆಪಿ ಸರ್ಕಾರಗಳು ತಮ್ಮ ಬೊಕ್ಕಸವನ್ನು ತುಂಬಿಸಿಕೊಳ್ಳಲು ಬಡವರ ಜೇಬಿಗೆ ಕತ್ತರಿ ಹಾಕುತ್ತಿದೆ ಎಂದು ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ವಕ್ತಾರ ಚರಣ್ ಸಿಂಗ್ ಸಪ್ರಾ ಆರೋಪಿಸಿದ್ದಾರೆ.

    ಪೆಟ್ರೋಲ್, ಡೀಸೆಲ್ ಮತ್ತು ಎಲ್‍ಪಿಜಿ ಸಿಲಿಂಡರ್‌ಗಳ ಜೊತೆಗೆ ಬೇಳೆಕಾಳುಗಳು ಮತ್ತು ಖಾದ್ಯ ತೈಲದಂತಹ ಅಗತ್ಯ ವಸ್ತುಗಳ ಬೆಲೆಗಳು ಹಿಂದೆಂದೂ ಕಾಣದ ರೀತಿಯಲ್ಲಿ ಏರಿಕೆಯಾಗಿದೆ. ಹಣದುಬ್ಬರವನ್ನು ತೊಲಗಿಸಬೇಕಾದರೆ ಬಿಜೆಪಿಯನ್ನು ಅಧಿಕಾರದಿಂದ ಕಿತ್ತೊಗೆಯುವಂತೆ ಜನರಿಗೆ ಕರೆ ನೀಡಿದ್ದಾರೆ. ಇದನ್ನೂ ಓದಿ: Economic Survey 2022: ಹೊಸ ಹಣಕಾಸು ವರ್ಷಕ್ಕೆ ಶೇ.8-8.5 ಬೆಳವಣಿಗೆ ನಿರೀಕ್ಷೆ

    ಮೋದಿ ಸರ್ಕಾರ ಬಡವರನ್ನು ಬಡವರನ್ನಾಗಿಸಿ ಮತ್ತು ಶ್ರೀಮಂತರನ್ನು ಶ್ರೀಮಂತರನ್ನಾಗಿ ಮಾಡುವ ನೀತಿಯನ್ನು ಅನುಸರಿಸುತ್ತಿದೆ. ಎಲ್ಲೆಲ್ಲಿ ಡಬಲ್ ಇಂಜಿನ್ ಸರ್ಕಾರವಿದೆಯೋ ಅಲ್ಲಿ ಅಂಬಾನಿ ಮತ್ತು ಅದಾನಿಗಳು ಮಾತ್ರ ಲಾಭ ಪಡೆಯುತ್ತಿದ್ದಾರೆ. ಬಿಜೆಪಿ ಸರ್ಕಾರಗಳು ತಮ್ಮ ಬೊಕ್ಕಸವನ್ನು ತುಂಬಿಸಿಕೊಳ್ಳಲು ಬಡವರ ಜೇಬಿಗೆ ಕತ್ತರಿ ಹಾಕುತ್ತಿವೆ ಎಂದು ಆರೋಪಿಸಿದ್ದಾರೆ.

    ಉತ್ತರಾಖಂಡದಲ್ಲಿ ಬಿಜೆಪಿಯಿಂದ ಮುಖ್ಯಮಂತ್ರಿಗಳ ಬದಲಾವಣೆಯು ಅವರ ವೈಫಲ್ಯಗಳನ್ನು ಮುಚ್ಚಿಹಾಕಿದೆ. ಬಿಜೆಪಿ ಏನನ್ನೂ ಮಾಡಿಲ್ಲ. ಅದು ಮುಖ್ಯಮಂತ್ರಿಗಳನ್ನು ಅಥವಾ ಸ್ಥಳಗಳ ಹೆಸರನ್ನು ಮಾತ್ರ ಬದಲಾಯಿಸುತ್ತದೆ ಎಂದಿದ್ದಾರೆ. ಅಲ್ಲದೇ ಕೋವಿಡ್ ಪರೀಕ್ಷಾ ಹಗರಣ ನಡೆದ ದೇಶದ ಏಕೈಕ ರಾಜ್ಯ ಉತ್ತರಾಖಂಡವಾಗಿದೆ. ಫೆ.14ರಂದು ರಾಜ್ಯದಲ್ಲಿ ಮತದಾನ ನಡೆದಾಗ ಬಿಜೆಪಿಯ ದುರಹಂಕಾರಕ್ಕೆ ಬ್ರೇಕ್ ಬೀಳಲಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.

    ಇದೇ ವೇಳೆ ಹಲ್ದ್ವಾನಿ ಕ್ಷೇತ್ರದ ಹಾಲಿ ಕಾಂಗ್ರೆಸ್ ಶಾಸಕ ಮತ್ತು ಕಳೆದ ವರ್ಷ ನಿಧನರಾದ ಪಕ್ಷದ ಹಿರಿಯ ನಾಯಕಿ ಇಂದಿರಾ ಹೃದಯೇಶ್ ಅವರ ಪುತ್ರ ಸುಮಿತ್ ಹೃದಯೇಶ್ ಅವರಿಗೆ ಮತ ನೀಡುವಂತೆ ಜನರಿಗೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: ರೈತರು ದೀರ್ಘ ಹೋರಾಟಕ್ಕೆ ಸಿದ್ಧರಾಗಿ: ರಾಕೇಶ್ ಟಿಕಾಯತ್

  • ಉತ್ತರಾಖಂಡ ಚುನಾವಣೆ: ರಾಮನಗರದಿಂದ ಮಾಜಿ ಸಿಎಂ ಹರೀಶ್ ರಾವತ್ ಕಣಕ್ಕೆ

    ಉತ್ತರಾಖಂಡ ಚುನಾವಣೆ: ರಾಮನಗರದಿಂದ ಮಾಜಿ ಸಿಎಂ ಹರೀಶ್ ರಾವತ್ ಕಣಕ್ಕೆ

    ಡೆಹ್ರಾಡೂನ್: ಉತ್ತರಾಖಂಡ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ತನ್ನ 11 ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ರಾಮನಗರ ವಿಧಾನಸಭಾ ಕ್ಷೇತ್ರದಿಂದ ಮಾಜಿ ಮುಖ್ಯಮಂತ್ರಿ ಹರೀಶ್ ರಾವತ್ ಅವರನ್ನು ಕಣಕ್ಕಿಳಿಸಲಿದೆ.

    ರಾಜ್ಯದಲ್ಲಿ ಪಕ್ಷ ಪ್ರಚಾರದ ಮುಖ್ಯಸ್ಥರಾಗಿರುವ ಹರೀಶ್ ರಾವತ್ ಅವರು 2017ರ ವಿಧಾನಸಭಾ ಚುನಾವಣೆಯಲ್ಲಿ ಹರಿದ್ವಾರ-ಗ್ರಾಮೀಣ ಮತ್ತು ಕಿಚ್ಚ ವಿಧಾನಸಭಾ ಸ್ಥಾನಗಳಿಗೆ ಸ್ಪರ್ಧಿಸಿ ವಿಫಲರಾಗಿದ್ದರು.

    ಲಾನ್ಸ್‌ಡೌನ್‌ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅನುಕೃತಿ ಗುಸೇನ್ ರಾವತ್ ಅವರನ್ನು ಕಣಕ್ಕಿಳಿಸಿದ್ದು, ಅನುಕೃತಿ ಅವರು ಬಿಜೆಪಿಯಿಂದ ಕಾಂಗ್ರೆಸ್‍ಗೆ ಮರಳಿದ ಹರಕ್ ಸಿಂಗ್ ರಾವತ್ ಅವರ ಸೊಸೆಯಾಗಿದ್ದಾರೆ.  ಇದನ್ನೂ ಓದಿ: ಎರಡೂ ಡೋಸ್‌ ಲಸಿಕೆ ಪಡೆದ ಪ್ರಯಾಣಿಕರಿಗೆ ಕೋವಿಡ್‌ ಪರೀಕ್ಷೆ ಕಡ್ಡಾಯವಲ್ಲ: ಬ್ರಿಟನ್‌ ಪ್ರಧಾನಿ

     ಶನಿವಾರ ಕಾಂಗ್ರೆಸ್ ತನ್ನ 53 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಎರಡನೇ ಪಟ್ಟಿಯಲ್ಲಿ 64 ಸ್ಥಾನಗಳಿಗೆ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದನ್ನೂ ಓದಿ: ಕಳ್ಳನೆಂದು ಆಟೋ ಚಾಲಕನನ್ನು ಹೊಡೆದು ಕೊಂದ್ರು

    ಉತ್ತರಾಖಂಡದಲ್ಲಿ ಫೆಬ್ರವರಿ 14 ರಂದು ವಿಧಾನಸಭೆ ಚುನಾವಣೆ ಮೊದಲನೇ ಹಂತದಲ್ಲಿ ನಡೆಯಲಿದ್ದು, ಮಾರ್ಚ್ 10 ರಂದು ಫಲಿತಾಂಶ ಹೊರಬೀಳಲಿದೆ.

  • ಬಿಜೆಪಿ ಸೇರಿದ ಉತ್ತರಾಖಂಡದ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸರಿತಾ ಆರ್ಯ

    ಬಿಜೆಪಿ ಸೇರಿದ ಉತ್ತರಾಖಂಡದ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸರಿತಾ ಆರ್ಯ

    ಡೆಹ್ರಾಡೂನ್: ಉತ್ತರಾಖಂಡದಲ್ಲಿ ಮುಂಬರುವ ವಿಧಾನಸಭೆ ಚುನಾವಣೆಗೂ ಮುನ್ನ ರಾಜಕೀಯದಲ್ಲಿ ಭಾರೀ ಬೆಳವಣಿಗೆಗಳು ನಡೆಯುತ್ತಿವೆ. ಒಂದೆಡೆ ಅರಣ್ಯ ಸಚಿವ ಹರಕ್ ಸಿಂಗ್ ರಾವತ್ ಸಂಪುಟದಿಂದ ವಜಾಗೊಳಿಸಿದ್ರೆ, ಇನ್ನೊಂದೆಡೆ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ‘ಕೈ’ ಬಿಟ್ಟು ‘ಕಮಲ’ ಮುಡಿಯಲು ಮುಂದಾಗಿದ್ದಾರೆ.

    ನೈನಿತಾಲ್ ನ ಮಾಜಿ ಶಾಸಕಿ ಸರಿತಾ ಆರ್ಯ ಅವರು ಇಂದು ಬಿಜೆಪಿಗೆ ಸೇರಿದ್ದಾರೆ. ಡೆಹ್ರಾಡೂನ್ ನಲ್ಲಿರುವ ಪಕ್ಷದ ಕಚೇರಿಯಲ್ಲಿ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ನೇತೃತ್ವದಲ್ಲಿ ಸರಿತಾ ಬಿಜೆಪಿ ಸೇರಿದ್ದಾರೆ. ಈ ವೇಳೆ ಪಕ್ಷದ ಅಧ್ಯಕ್ಷ ಮದನ್ ಕೌಶಿಕ್ ಹಾಗೂ ಇತರ ನಾಯಕರು ಉಪಸ್ಥಿತರಿದ್ದರು. ಇದನ್ನೂ ಓದಿ: ಪಂಜಾಬ್ ಚುನಾವಣಾ ದಿನಾಂಕ ಮುಂದೂಡಿಕೆ- ಫೆ.20ರಂದು ಮತದಾನ

    ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಸರಿತಾ ಅವರು ಉತ್ಸುಕರಾಗಿದ್ದರು. ಅಲ್ಲದೆ ನೈನಿತಾಲ್ ಕ್ಷೇತ್ರದಿಂದ ಟಿಕೆಟ್ ಪಡೆಯಬೇಕೆಂಬುದು ಅವರ ಮಹದಾಸೆಯಾಗಿತ್ತು. ಆದರೆ ಕಾಂಗ್ರೆಸ್ ಪಕ್ಷದಿಂದ ಅವರನ್ನು ಕಣಕ್ಕಿಳಿಸುವುದು ಅನುಮಾನವಾಗಿತ್ತು. ಈ ಹಿನ್ನೆಲೆಯಲ್ಲಿ ಸರಿತಾ ಬೇಸರಗೊಂಡಿದ್ದು, ಇದೀಗ ಭಾರತೀಯ ಜನತಾ ಪಕ್ಷದತ್ತ ಮುಖ ಮಾಡಿದ್ದಾರೆ. ಇದನ್ನೂ ಓದಿ: ಜನಸಾಮಾನ್ಯರ ಸಮಸ್ಯೆ ಬಿಜೆಪಿಗೆ ಅರ್ಥವಾಗಲ್ಲ: ಹರಕ್ ಸಿಂಗ್ ರಾವತ್ ಕಣ್ಣೀರು

    2017ರ ವಿಧಾನಸಭಾ ಚುನಾವಣೆಯಲ್ಲಿ ಸಂಜೀವ್ ಆರ್ಯ ಅವರು ಬಿಜೆಪಿ ಟಿಕೆಟ್ ಪಡೆದು ಸ್ಪರ್ಧಿಸಿದ್ದರು. ಆದರೆ ಅವರು ಆ ಸಂದರ್ಭದಲ್ಲಿ ಸೋತಿದ್ದರು. ಸದ್ಯ ಸಂಜೀವ್ ಕಾಂಗ್ರೆಸ್‍ನಲ್ಲಿದ್ದಾರೆ.

  • ಪಕ್ಷದಿಂದ ಸಚಿವನ ಉಚ್ಛಾಟಿಸಿದ ಬಿಜೆಪಿ – ಮತ್ತೆ ‘ಕೈ’ ಹಿಡೀತಾರಾ ಹರಕ್ ಸಿಂಗ್ ರಾವತ್?

    ಪಕ್ಷದಿಂದ ಸಚಿವನ ಉಚ್ಛಾಟಿಸಿದ ಬಿಜೆಪಿ – ಮತ್ತೆ ‘ಕೈ’ ಹಿಡೀತಾರಾ ಹರಕ್ ಸಿಂಗ್ ರಾವತ್?

    ಡೆಹರೂಡಾನ್: ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ದಾಮಿ ಅವರು ರಾಜ್ಯ ಅರಣ್ಯ ಸಚಿವ ಹರಕ್ ಸಿಂಗ್ ರಾವತ್ ಅವರನ್ನು ಸಂಪುಟದಿಂದ ವಜಾಗೊಳಿಸಿದ್ದಾರೆ.

    ಕೋಟ್‍ದ್ವಾರದ ಶಾಸಕ ಹರಕ್ ಸಿಂಗ್ ರಾವತ್ ಅವರು ಆರು ವರ್ಷಗಳ ಕಾಲ ಬಿಜೆಪಿಯಲ್ಲಿ ಕಾರ್ಯನಿರ್ವಹಿಸಿದ್ದು, ಇದೀಗ ಮಾಜಿ ಸಿಎಂ ಹರೀಶ್ ರಾವತ್, ಕಾಂಗ್ರೆಸ್ ಮುಖ್ಯಸ್ಥ ಗಣೇಶ್ ಗೋಡಿಯಾಲ್ ಮತ್ತು ಪಕ್ಷದ ಇತರ ಹಿರಿಯ ನಾಯಕರ ಸಮ್ಮುಖದಲ್ಲಿ ಸೋಮವಾರ ಕಾಂಗ್ರೆಸ್ ಸೇರುವ ಸಾಧ್ಯತೆಯಿದೆ. ಇದನ್ನೂ ಓದಿ: ಅಫ್ಘಾನಿಸ್ತಾನದಲ್ಲಿ ಮಾರ್ಚ್‍ನಿಂದ ಶಾಲೆ, ವಿಶ್ವವಿದ್ಯಾಲಯ ಪುನಾರಂಭ

    ಮುಂಬರುವ ವಿಧಾನಸಭೆ ಚುನಾವಣೆಗೆ ಮುನ್ನವೇ ಕಾಂಗ್ರೆಸ್‍ನ ಕೆಲ ನಾಯಕರನ್ನು ಭೇಟಿ ಮಾಡಿದ ಹಿನ್ನೆಲೆ ಹರಕ್ ಸಿಂಗ್ ರಾವತ್ ಅವರನ್ನು ಸಂಪುಟದಿಂದ ಮತ್ತು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ವಜಾಗೊಳಿಸುವಂತೆ ಶಿಫಾರಸ್ಸು ಮಾಡಿ ಪುಷ್ಕರ್ ಸಿಂಗ್ ದಾಮಿ ಅವರು ರಾಜ್ಯಪಾಲರಿಗೆ ಪತ್ರ ಬರೆದಿದ್ದರು ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ಶಲ್ಯ ಮುಖಕ್ಕೆ ಕಟ್‌ಕೊಂಡಿನ್ರೀ ಮತ್ ಮಾಸ್ಕ್ ಯಾಕ್ ಹಾಕಬೇಕು: ವ್ಯಕ್ತಿಯ ಕಿರಿಕ್

    ಇದೀಗ ಹರಕ್ ಸಿಂಗ್ ರಾವತ್ ಜೊತೆಗೆ ಇನ್ನೂ ಇಬ್ಬರು ಬಿಜೆಪಿ ಶಾಸಕರು ಕೂಡ ಕಾಂಗ್ರೆಸ್ ಸೇರುವ ಸಾಧ್ಯತೆ ಇದೆ. 2016ರಲ್ಲಿ ಕಾಂಗ್ರೆಸ್ ನಾಯಕ ಹರೀಶ್ ರಾವತ್ ವಿರುದ್ಧ ಬಂಡಾಯವೆದ್ದು ಬಿಜೆಪಿಗೆ ಸೇರ್ಪಡೆಯಾದ ಹತ್ತು ಶಾಸಕರಲ್ಲಿ ಹರಕ್ ಸಿಂಗ್ ರಾವತ್ ಕೂಡ ಒಬ್ಬರಾಗಿದ್ದಾರೆ.

    ಉತ್ತರಾಖಂಡ ವಿಧಾನಸಭೆ ಚುನಾವಣೆಯನ್ನು 2022ರ ಫೆಬ್ರವರಿ 14ರಂದು ಮೊದಲನೇ ಹಂತದಲ್ಲಿ ನಡೆಸಲು ನಿರ್ಧರಿಸಲಾಗಿದ್ದು, ಮಾರ್ಚ್ 10ರಂದು ಮತಗಳ ಎಣಿಕೆ ನಡೆಸಲಾಗುತ್ತದೆ.