ನವದೆಹಲಿ: ಪಂಚ ರಾಜ್ಯಗಳಾದ ಉತ್ತರ ಪ್ರದೇಶ, ಪಂಜಾಬ್, ಉತ್ತರಾಖಂಡ್, ಗೋವಾ, ಮಣಿಪುರ ವಿಧಾನಸಭಾ ಚುನಾವಣೆಯ ಮತ ಎಣಿಕೆ ನಡೆಯುತ್ತಿದೆ. ಐದೂ ರಾಜ್ಯಗಳಲ್ಲಿ ಹಲವರು ಪ್ರಮುಖರು ಮುನ್ನಡೆ ಹಾಗೂ ಕೆಲವರು ಹಿನ್ನಡೆ ಅನುಭವಿಸಿದ್ದಾರೆ.
ಸಾರ್ವತ್ರಿಕ ಚುನಾವಣೆಯ ಭವಿಷ್ಯದ ಮುನ್ನುಡಿ ಎಂದೇ ಬಿಂಬಿತವಾಗಿರುವ ಉತ್ತರ ಪ್ರದೇಶದಲ್ಲಿ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದೆ. ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಗೋರಖ್‌ಪುರ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದು, 5 ಸಾವಿರ ಮತಗಳ ಮುನ್ನಡೆ ಕಾಯ್ದುಕೊಂಡಿದ್ದಾರೆ. ಬಿಜೆಪಿಗೆ ಪ್ರಬಲ ಪ್ರತಿಸ್ಪರ್ಧಿಯಾಗಿರುವ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಕೂಡ ಮುನ್ನಡೆ ಕಾಯ್ದುಕೊಂಡಿದ್ದಾರೆ.
ಗೋವಾದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಹಾವು-ಏಣಿಯ ಆಟದಂತೆ ಪೈಪೋಟಿ ಮುಂದುವರಿದಿದೆ. ಗೋವಾ ಹಾಲಿ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು 436 ಮತಗಳ ಹಿನ್ನಡೆ ಅನುಭವಿಸಿದ್ದಾರೆ. ಇಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮುನ್ನಡೆ ಸಾಧಿಸಿದ್ದಾರೆ.
ಪಂಜಾಬ್‌ನಲ್ಲಿ ಆಂತರಿಕ ಕಲಹದಿಂದಾಗಿ ಕಾಂಗ್ರೆಸ್ ತೊರೆದಿದ್ದ ಕ್ಯಾಪ್ಟನ್ ಅಮರೀಂದರ್ ಸಿಂಗ್ 1,000 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ. ಕ್ಯಾಪ್ಟನ್ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಅಧಿಕಾರಕ್ಕೇರಿದ ದಲಿತ ನಾಯಕ ಚರಣ್‌ಜಿತ್ ಸಿಂಗ್ ಚನ್ನಿ ಅವರು ಸ್ಪರ್ಧಿಸಿರುವ ಎರಡೂ ಕ್ಷೇತ್ರಗಳಲ್ಲಿ ಹಿನ್ನಡೆ ಅನುಭವಿಸಿದ್ದಾರೆ. ಅಮೃತಸರ ಪೂರ್ವದಲ್ಲಿ ನವಜೋತ್ ಸಿಂಗ್ ಸಿಧು ಹಿನ್ನಡೆ ಅನುಭವಿಸಿದ್ದಾರೆ. ಪ್ರಕಾಶ್ ಸಿಂಗ್ ಬಾದಲ್ ಅವರು ಸಹ ಹಿನ್ನಡೆಯಲ್ಲಿದ್ದಾರೆ.
ಇನ್ನು ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಮುನ್ನಡೆ ಕಾಯ್ದುಕೊಂಡಿದ್ದಾರೆ.
ಚಂಡೀಗಢ: ಪಂಜಾಬ್‍ನಲ್ಲಿ ಆಮ್ ಆದ್ಮಿ (Aam Aadmi) ಪಕ್ಷ ಅಧಿಕಾರಕ್ಕೆ ಏರಲಿದೆ, ಕಾಂಗ್ರೆಸ್ (Congress) ಧೂಳೀಪಟವಾಗಲಿದೆ ಎಂದು ಎಲ್ಲಾ ಎಕ್ಸಿಟ್ ಪೋಲ್ (Exit Poll) ಗಳು ಹೇಳಿವೆ. ಆದರೆ ಕಾಂಗ್ರೆಸ್ ವಿಶ್ವಾಸ ಕಳೆದುಕೊಂಡಂತೆ ಕಾಣುತ್ತಿಲ್ಲ. 2017ರಲ್ಲಿಯೂ ಬಹುತೇಕ ಚುನಾವಣೋತ್ತರ ಸಮೀಕ್ಷೆಗಳು ಹೇಳಿದ್ದು ಕೂಡ ಎಎಪಿ (AAP) ಬರುತ್ತೆ ಎಂದು. ಆದರೆ ಗೆದ್ದಿದ್ದು ಮಾತ್ರ ಕಾಂಗ್ರೆಸ್ ಆಗಿತ್ತು. ಹೀಗಾಗಿ ಈ ಬಾರಿಯೂ ಅದೇ ಮ್ಯಾಜಿಕ್ ನಿರೀಕ್ಷೆಯಲ್ಲಿ ಕಾಂಗ್ರೆಸ್ ಇದೆ.
Exit Poll- ಪಂಜಾಬ್‍ನಲ್ಲಿ ಆಪ್ ಸರ್ಕಾರ
ಪೋಲ್ ಆಫ್ ದಿ ಪೋಲ್ಸ್ ಪ್ರಕಾರ ಆಪ್‍ಗೆ ಸ್ಪಷ್ಟ ಬಹುಮತ ಬರುತ್ತದೆ. ಸರ್ವೇ ಪ್ರಕಾರ ಆಪ್- 68, ಕಾಂಗ್ರೆಸ್ 28 ಸ್ಥಾನ ಸಿಗಲಿದ್ದು, ಅಕಾಲಿದಳ 19, ಬಿಜೆಪಿ (BJP)ಗೆ 4 ಸ್ಥಾನ ಸಾಧ್ಯತೆ ಇದೆ. ಕಾಂಗ್ರೆಸ್ ಒಳಜಗಳದಿಂದ ಅಧಿಕಾರ ನಷ್ಟವಾಗಬಹುದು. ಇಲ್ಲಿ ಬಿಜೆಪಿಗೆ ಕ್ಯಾಪ್ಟನ್ ಮೈತ್ರಿ ವರ್ಕೌಟ್ ಆಗಿಲ್ಲ. ಅತಂತ್ರವಾದಲ್ಲಿ ಅಕಾಲಿಗಳ ಜೊತೆ ಆಪ್ ಮೈತ್ರಿ ಸಾಧ್ಯತೆ ಇದೆ. ಇದನ್ನೂ ಓದಿ: ಗುರುವಾರ ಪಂಚರಾಜ್ಯ ಚುನಾವಣಾ ಫಲಿತಾಂಶ- ಯುಪಿಯಲ್ಲಿ ಯಾರಿಗೆ ಒಲಿಯುತ್ತೆ ಅದೃಷ್ಟ..?
ಒಟ್ಟು ಸ್ಥಾನಗಳು 117, ಬಹುಮತಕ್ಕೆ 59 ಇಂಡಿಯಾ ಟುಡೇ:
ಆಪ್ 76-90, ಕಾಂಗ್ರೆಸ್ 19-31, ಅಕಾಲಿ ದಳ 7-11, ಬಿಜೆಪಿ + 1-4, ಇತರರು 01
ಟೈಮ್ಸ್ ನೌ:
ಆಪ್ 70, ಕಾಂಗ್ರೆಸ್ 22, ಅಕಾಲಿ ದಳ 19, ಬಿಜೆಪಿ 05, ಇತರರು 0-1
ಟುಡೇಸ್ ಚಾಣಕ್ಯ
ಆಪ್ 100, ಕಾಂಗ್ರೆಸ್ 10, ಅಕಾಲಿ ದಳ 06, ಬಿಜೆಪಿ 01, ಇತರರು 00
ಜನ ಕೀ ಬಾತ್
ಆಪ್ 72, ಕಾಂಗ್ರೆಸ್ 24, ಅಕಾಲಿ ದಳ 15, ಬಿಜೆಪಿ + 05, ಇತರರು 01
2017ರ ಫಲಿತಾಂಶ:
ಕಾಂಗ್ರೆಸ್ 77, ಆಪ್ 20, ಎಸ್‍ಎಡಿ+ ಬಿಜೆಪಿ 18, ಇತರರು 02
ಉತ್ತರಾಖಂಡ್ ಮತ್ತು ಮಣಿಪುರದ ಕತೆ ಏನು ಎಂಬುದನ್ನು ಸಂಕ್ಷಿಪ್ತವಾಗಿ ನೋಡೋದಾದ್ರೆ
Exit Poll- ಬಿಜೆಪಿಗೆ ‘ಮಣಿ'(60)… ಅತಂತ್ರ ‘ಖಂಡ`!(70)
ಪೋಲ್ ಆಫ್ ದಿ ಪೋಲ್ಸ್ ಪ್ರಕಾರ ಮಣಿಪುರದಲ್ಲಿ ಬಿಜೆಪಿ ಅಧಿಕಾರಕ್ಕೇರುವ ಸಾಧ್ಯತೆ ಇದೆ. ಬಿಜೆಪಿ- 30, ಕಾಂಗ್ರೆಸ್- 13, ಇತರರಿಗೆ 17 ಸ್ಥಾನಗಳು ಬರಬಹುದು. ಅತಂತ್ರವಾದಲ್ಲಿ ಪ್ರಾದೇಶಿಕ ಪಕ್ಷಗಳ ಜೊತೆ ಬಿಜೆಪಿ ಮೈತ್ರಿ ಮಾಡಿಕೊಳ್ಳುವ ಸಂಭವವೂ ಇದೆ.
ಒಟ್ಟು ಸ್ಥಾನಗಳು 70, ಬಹುಮತಕ್ಕೆ 36 ಇಂಡಿಯಾ ಟುಡೇ
ಬಿಜೆಪಿ + 41, ಕಾಂಗ್ರೆಸ್ 25, ಆಪ್ 0, ಬಿಎಸ್‌ಪಿ 3, ಇತರರು 4
ರಿಪಬ್ಲಿಕ್
ಬಿಜೆಪಿ+ 35-39, ಕಾಂಗ್ರೆಸ್ 28-24, ಆಪ್ 0-3, ಬಿಎಸ್‌ಪಿ 0, ಇತರರು 0
ಟೈಮ್ಸ್ ನೌ
ಬಿಜೆಪಿ+ 37, ಕಾಂಗ್ರೆಸ್ 31, ಆಪ್ 01, ಬಿಎಸ್‌ಪಿ, ಇತರರು 0
ಟುಡೇಸ್ ಚಾಣಕ್ಯ
ಬಿಜೆಪಿ 43, ಕಾಂಗ್ರೆಸ್ 24, ಇತರರು 3
ಜನ ಕೀ ಬಾತ್
ಬಿಜೆಪಿ 32 -41, ಕಾಂಗ್ರೆಸ್ 27-35, ಆಪ್ 0-1, ಇತರರು 0
ಒಟ್ಟು ಸ್ಥಾನ 70 ಬಹುಮತಕ್ಕೆ 36
2017ರ ಫಲಿತಾಂಶ ಬಿಜೆಪಿ 57, ಕಾಂಗ್ರೆಸ್ 11, ಇತರರು 2
ಪೋಲ್ ಆಫ್ ದಿ ಪೋಲ್ಸ್ ಪ್ರಕಾರ ಉತ್ತರಾಖಂಡ (Uttarakhand) ಅತಂತ್ರವಾಗಲಿದೆ. ಸರ್ವೇ ಪ್ರಕಾರ ಬಿಜೆಪಿ 35, ಕಾಂಗ್ರೆಸ್ 32, ಎಎಪಿ 1, ಇತರೆ 2 ಸ್ಥಾನಗಳು ಬರಲಿದೆ. ಸಮೀಕ್ಷೆ ನಿಜವಾದ್ರೆ ಎರಡೂ ಪಕ್ಷಗಳಿಗೂ ಸರ್ಕಾರ ರಚನೆ ಸಮಾನ ಅವಕಾಶ ಇರಲಿದೆ. ಇಲ್ಲಿಯೂ ಕುದುರೆ ವ್ಯಾಪಾರ ಸಾಧ್ಯತೆ, ಕಾಂಗ್ರೆಸ್-ಬಿಜೆಪಿ ರಣತಂತ್ರ ಹೂಡುವ ಸಾಧ್ಯತೆಗಳಿವೆ.
ಒಟ್ಟು ಸ್ಥಾನಗಳು 60, ಬಹುಮತಕ್ಕೆ 31 ಇಂಡಿಯಾ ಟುಡೇ
ಬಿಜೆಪಿ 33-43, ಕಾಂಗ್ರೆಸ್ 4-8, ಎನ್‌ಪಿಎಫ್ 0, ಎನ್‌ಪಿಪಿ 4-8, ಇತರರು 6-15
ರಿಪಬ್ಲಿಕ್
ಬಿಜೆಪಿ 27-31, ಕಾಂಗ್ರೆಸ್ 11-17, ಎನ್‌ಪಿಎಫ್ 6-10, ಎನ್‌ಪಿಪಿ 2-6, ಇತರರು 3-7
ಟೈಮ್ಸ್ ನೌ
ಬಿಜೆಪಿ 32-38, ಕಾಂಗ್ರೆಸ್ 12-17, ಎನ್‌ಪಿಎಫ್ 3-5, ಎನ್‌ಪಿಪಿ 2-5, ಇತರರು 0
ಜನಕೀ ಬಾತ್
ಬಿಜೆಪಿ 23-28, ಕಾಂಗ್ರೆಸ್ 14-10, ಎನ್‌ಪಿಎಫ್ 8-5, ಎನ್‌ಪಿಪಿ 7-8, ಇತರರು 0
ನವದೆಹಲಿ: ಪಂಚರಾಜ್ಯಗಳ ಚುನಾವಣೆ ಮುಕ್ತಾಯಗೊಂಡಿದ್ದು ಉತ್ತರ ಪ್ರದೇಶದಲ್ಲಿ ಬಿಜೆಪಿ ಎರಡನೇ ಬಾರಿ ಅಧಿಕಾರಕ್ಕೆ ಏರಲಿದೆ ಎಂದು ಎಲ್ಲ ಸಮೀಕ್ಷೆಗಳು ಭವಿಷ್ಯ ನುಡಿದಿವೆ. ಈ ಭವಿಷ್ಯ ಮಾ.10 ರಂದು ನಿಜವಾದರೆ ಉತ್ತರ ಪ್ರದೇಶದಲ್ಲಿ ಎರಡನೇ ಬಾರಿ ಅಧಿಕಾರಕ್ಕೆ ಏರುವ ಮೂಲಕ ಬಿಜೆಪಿ ದಾಖಲೆ ಸೃಷ್ಟಿಸಲಿದೆ.
ಪಂಜಾಬ್‌ನಲ್ಲಿ ಆಪ್ ಭರ್ಜರಿ ಜಯಗಳಿಸಲಿದೆ ಎಂದು ಸಮೀಕ್ಷೆಗಳು ಹೇಳಿವೆ. ಈ ಮೂಲಕ ದೆಹಲಿ ಬಿಟ್ಟು ಮತ್ತೊಂದು ರಾಜ್ಯವನ್ನು ಆಪ್ ಹಿಡಿದಂತಾಗಿದೆ. ಗೋವಾ, ಉತ್ತರಾಖಂಡ್, ಮಣಿಪುರದಲ್ಲಿ ಬಿಜೆಪಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದರೂ ಅತಂತ್ರ ಸ್ಥಿತಿ ನಿರ್ಮಾಣವಾಗುವ ಸಾಧ್ಯತೆಯಿದೆ ಎಂದು ಸಮೀಕ್ಷೆಗಳು ಭವಿಷ್ಯ ನುಡಿದಿವೆ.
ಉತ್ತರ ಪ್ರದೇಶ:
ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಅದರಲ್ಲೂ ಉತ್ತರ ಪ್ರದೇಶದ ಎಲೆಕ್ಷನ್ ರಿಸಲ್ಟ್, ಮುಂದಿನ ಸಾರ್ವತ್ರಿಕ ಚುನಾವಣೆ, ರಾಷ್ಟ್ರಪತಿ ಚುನಾವಣೆಯ ಮೇಲೆ ಪರಿಣಾಮ ಬೀರಲಿದೆ. ಹೀಗಾಗಿಯೇ ಈ ಮತ ಸಮರವನ್ನು ಪ್ರಮುಖ ಪಕ್ಷಗಳು ಪ್ರತಿಷ್ಠೆಯಾಗಿ ಪರಿಣಮಿಸಿದ್ದವು. ತೀವ್ರ ಕುತೂಹಲ ಕೆರಳಿಸಿದ್ದ ಉತ್ತರ ಪ್ರದೇಶದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಬಹುತೇಕ ಸಮೀಕ್ಷೆಗಳು ಹೇಳ್ತಿವೆ. ಆದರೆ ಸಮಾಜವಾದಿ ಪಕ್ಷದ ತೀವ್ರ ಪೈಪೋಟಿ ಕಾರಣ ಸರಳ ಬಹುಮತಕ್ಕಿಂತ ಸ್ವಲ್ಪ ಹೆಚ್ಚು ಸ್ಥಾನಗಳನ್ನು ಬಿಜೆಪಿ ಗಳಿಸಬಹುದು ಎಂಬ ಲೆಕ್ಕಾಚಾರವನ್ನು ಮುಂದಿಟ್ಟಿವೆ. ಪ್ರಿಯಾಂಕಾ ಗಾಂಧಿ ಪ್ರಚಾರ ಕಾಂಗ್ರೆಸ್ಗೆ ಫಲಕೊಟ್ಟಿಲ್ಲ. ಬಿಎಸ್ಪಿಯ ಮಾಯಾವತಿ ಮ್ಯಾಜಿಕ್ ಮಾಡಿಲ್ಲ ಎಂದು ಸಮೀಕ್ಷೆಗಳು ತಿಳಿಸಿವೆ. ಇದನ್ನೂ ಓದಿ: ಸಮೀಕ್ಷೆ ಬಗ್ಗೆ ತಲೆ ಕೆಡಿಸಿಕೊಳ್ಳಲ್ಲ, 300ಕ್ಕಿಂತ ಹೆಚ್ಚು ಸೀಟು ಗೆಲ್ಲುವ ವಿಶ್ವಾಸವಿದೆ: ಅಖಿಲೇಶ್ ಯಾದವ್
ಪಂಜಾಬ್:
ತೀವ್ರ ಕುತೂಹಲ ಕೆರಳಿಸಿದ್ದ ಮತ್ತೊಂದು ರಾಜ್ಯ ಅಂದ್ರೆ ಪಂಜಾಬ್. ಇಲ್ಲಿ ನಾಯಕತ್ವದ ಕಿತ್ತಾಟದ ಪರಿಣಾಮ ಕಾಂಗ್ರೆಸ್ ಅಧಿಕಾರ ಕಳೆದುಕೊಳ್ಳಲಿದೆ. ದೆಹಲಿ ಬಳಿಕ ಪಂಜಾಬ್ನಲ್ಲಿ ಎಎಪಿ ಅಧಿಕಾರ ಹಿಡಿಯಲಿದೆ. ಎಲ್ಲಾ ಎಕ್ಸಿಟ್ ಪೊಲ್‍ಗಳು ಎಎಪಿಗೆ ಗದ್ದುಗೆ ಏರಲಿವೆ ಎಂದಿದೆ. ಶಿರೋಮಣಿ ಅಕಾಲಿ ದಳ ಸ್ವಲ್ಪಮಟ್ಟಿಗೆ ಮಾತ್ರ ಪ್ರಭಾವ ಬೀರಿದೆ. ಕ್ಯಾಪ್ಟನ್ ಅಮರಿಂದರ್ ಸಿಂಗ್ ಜೊತೆ ಸೇರಿದ್ದಕ್ಕೂ ಬಿಜೆಪಿಗೆ ಇಲ್ಲಿ ಪ್ರಯೋಜನವಾಗಿಲ್ಲ ಎಂದು ಚುನಾವಣೋತ್ತರ ಸಮೀಕ್ಷೆಗಳು ತಿಳಿಸಿವೆ.
ಒಟ್ಟು ಸ್ಥಾನಗಳು 117, ಬಹುಮತಕ್ಕೆ 59 ಇಂಡಿಯಾ ಟುಡೇ:
ಆಪ್ 76-90, ಕಾಂಗ್ರೆಸ್ 19-31, ಅಕಾಲಿ ದಳ 7-11, ಬಿಜೆಪಿ + 1-4, ಇತರರು 01
ಟೈಮ್ಸ್ ನೌ:
ಆಪ್ 70, ಕಾಂಗ್ರೆಸ್ 22, ಅಕಾಲಿ ದಳ 19, ಬಿಜೆಪಿ 05, ಇತರರು 0-1
ಟುಡೇಸ್ ಚಾಣಕ್ಯ
ಆಪ್ 100, ಕಾಂಗ್ರೆಸ್ 10, ಅಕಾಲಿ ದಳ 06, ಬಿಜೆಪಿ 01, ಇತರರು 00
ಜನ ಕೀ ಬಾತ್
ಆಪ್ 72, ಕಾಂಗ್ರೆಸ್ 24, ಅಕಾಲಿ ದಳ 15, ಬಿಜೆಪಿ + 05, ಇತರರು 01
2017ರ ಫಲಿತಾಂಶ:
ಕಾಂಗ್ರೆಸ್ 77, ಆಪ್ 20, ಎಸ್‍ಎಡಿ+ ಬಿಜೆಪಿ 18, ಇತರರು 02
ಗೋವಾ:
ಹಾರುವ ಶಾಸಕರು ಖ್ಯಾತಿಯ ಗೋವಾದಲ್ಲಿ ಈ ಬಾರಿ ಯಾವುದೇ ಪಕ್ಷಕ್ಕೂ ಬಹುಮತ ಸಿಗುವುದು ಅನುಮಾನ ಎಂದು ಚುನಾವಣೋತ್ತರ ಸಮೀಕ್ಷೆಗಳು ತಿಳಿಸಿವೆ. ಕಳೆದ ಬಾರಿ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ, ಅಧಿಕಾರಕ್ಕೇರುವಲ್ಲಿ ವಿಫಲವಾಗಿದ್ದ ಕಾಂಗ್ರೆಸ್ ಪಕ್ಷದಲ್ಲಿ, ಈ ಚುನಾವಣೆ ಬರುವ ಹೊತ್ತಿಗೆ ಕೇವಲ ಒಬ್ಬ ಶಾಸಕ ಉಳಿದುಕೊಂಡಿದ್ದರು.
ಸ್ಥಳೀಯ ನಾಯಕರು ಇಲ್ಲದೇ ಹೋದ್ರೂ, ಈ ಬಾರಿಯೂ ಕಾಂಗ್ರೆಸ್ ಹೆಚ್ಚು ಸ್ಥಾನ ಗಿಟ್ಟಿಸಲಿದೆ.. ಕಾಂಗ್ರೆಸ್ ಸರಿಸಮನಾಗಿ ಬಿಜೆಪಿ ಫೈಟ್ ಕೊಟ್ಟಿದೆ. ಇಲ್ಲಿ ಯಾವುದೇ ಪಕ್ಷ ಗೆದ್ರೂ ಮೂರ್ನಾಲ್ಕು ಸೀಟುಗಳ ಅಂತರ ಅಷ್ಟೇ ಇರಲಿದೆ.. ಎಎಪಿ-ಟಿಎಂಸಿ ಪಕ್ಷಗಳು ಖಾತೆ ತೆರೆಯಲಿವೆ ಎಂಬ ಲೆಕ್ಕಗಳು ಈ ಎಕ್ಸಿಟ್ ಪೋಲ್‍ನಲ್ಲಿ ಸಿಕ್ಕಿವೆ. ಇದನ್ನೂ ಓದಿ: ಗೋವಾದಲ್ಲಿ ಮತ್ತೆ ಬಿಜೆಪಿ ಗೆಲ್ಲಲಿದೆ: ಪ್ರಮೋದ್ ಸಾವಂತ್
ಒಟ್ಟು ಸ್ಥಾನಗಳು 40, ಬಹುಮತಕ್ಕೆ 21 ಇಂಡಿಯಾ ಟುಡೇ
ಬಿಜೆಪಿ 14-18, ಕಾಂಗ್ರೆಸ್+ 15-20, ಆಪ್ – 0, ಟಿಎಂಸಿ 2-5, ಇತರರು 0-4
ಜನ್ ಕೀ ಬಾತ್
ಬಿಜೆಪಿ 14-19, ಕಾಂಗ್ರೆಸ್+ 13-19, ಆಪ್ 2-1, ಟಿಎಂಸಿ 5-2 ಇತರರು 1-3
2017 ಫಲಿತಾಂಶ
ಕಾಂಗ್ರೆಸ್ 17, ಬಿಜೆಪಿ 13, ಆಪ್ 0, ಇತರರು 10
ಉತ್ತರಾಖಂಡ
ದೇವಭೂಮಿ ಖ್ಯಾತಿಯ ಉತ್ತರಾಖಂಡದಲ್ಲಿ ಅತಂತ್ರ ವಿಧಾನಸಭೆ ಸೃಷ್ಟಿಯಾಗುವ ಸಾಧ್ಯತೆಯಿದೆ. ಬಿಜೆಪಿ ಕಾಂಗ್ರೆಸ್ ಮಧ್ಯೆ ನೇರ ಸ್ಪರ್ಧೆಯಿದೆ.
ಒಟ್ಟು ಸ್ಥಾನಗಳು 70, ಬಹುಮತಕ್ಕೆ 36 ಇಂಡಿಯಾ ಟುಡೇ
ಬಿಜೆಪಿ + 41, ಕಾಂಗ್ರೆಸ್ 25, ಆಪ್ 0, ಬಿಎಸ್‌ಪಿ 3, ಇತರರು 4
ರಿಪಬ್ಲಿಕ್
ಬಿಜೆಪಿ+ 35-39, ಕಾಂಗ್ರೆಸ್ 28-24, ಆಪ್ 0-3, ಬಿಎಸ್‌ಪಿ 0, ಇತರರು 0
ಟೈಮ್ಸ್ ನೌ
ಬಿಜೆಪಿ+ 37, ಕಾಂಗ್ರೆಸ್ 31, ಆಪ್ 01, ಬಿಎಸ್‌ಪಿ, ಇತರರು 0
ಟುಡೇಸ್ ಚಾಣಕ್ಯ
ಬಿಜೆಪಿ 43, ಕಾಂಗ್ರೆಸ್ 24, ಇತರರು 3
ಜನ ಕೀ ಬಾತ್
ಬಿಜೆಪಿ 32 -41, ಕಾಂಗ್ರೆಸ್ 27-35, ಆಪ್ 0-1, ಇತರರು 0
ಒಟ್ಟು ಸ್ಥಾನ 70 ಬಹುಮತಕ್ಕೆ 36
2017ರ ಫಲಿತಾಂಶ ಬಿಜೆಪಿ 57, ಕಾಂಗ್ರೆಸ್ 11, ಇತರರು 2
ಮಣಿಪುರ
ಈಶಾನ್ಯ ರಾಜ್ಯವಾದ ಮಣಿಪುರದಲ್ಲಿ ಬಿಜೆಪಿಗೆ ಅತಿ ಹೆಚ್ಚು ಸ್ಥಾನ ಸಿಗಲಿದೆ ಎಂದು ಸಮೀಕ್ಷೆಗಳು ಭವಿಷ್ಯ ನುಡಿದಿವೆ. ಕೆಲ ಸಮೀಕ್ಷೆಗಳು ಅತಂತ್ರ ವಿಧಾನಸಭೆ ನಿರ್ಮಾಣವಾಗಬಹುದು ಎಂದು ಭವಿಷ್ಯ ನುಡಿದಿವೆ
ಒಟ್ಟು ಸ್ಥಾನಗಳು 60, ಬಹುಮತಕ್ಕೆ 31 ಇಂಡಿಯಾ ಟುಡೇ
ಬಿಜೆಪಿ 33-43, ಕಾಂಗ್ರೆಸ್ 4-8, ಎನ್‌ಪಿಎಫ್ 0, ಎನ್‌ಪಿಪಿ 4-8, ಇತರರು 6-15
ರಿಪಬ್ಲಿಕ್
ಬಿಜೆಪಿ 27-31, ಕಾಂಗ್ರೆಸ್ 11-17, ಎನ್‌ಪಿಎಫ್ 6-10, ಎನ್‌ಪಿಪಿ 2-6, ಇತರರು 3-7
ಟೈಮ್ಸ್ ನೌ
ಬಿಜೆಪಿ 32-38, ಕಾಂಗ್ರೆಸ್ 12-17, ಎನ್‌ಪಿಎಫ್ 3-5, ಎನ್‌ಪಿಪಿ 2-5, ಇತರರು 0
ಜನಕೀ ಬಾತ್
ಬಿಜೆಪಿ 23-28, ಕಾಂಗ್ರೆಸ್ 14-10, ಎನ್‌ಪಿಎಫ್ 8-5, ಎನ್‌ಪಿಪಿ 7-8, ಇತರರು 0
ನವದೆಹಲಿ: ಪಂಚರಾಜ್ಯಗಳಾದ ಉತ್ತರ ಪ್ರದೇಶ, ಪಂಜಾಬ್, ಉತ್ತರಾಖಂಡ, ಗೋವಾ ಮತ್ತು ಮಣಿಪುರ ವಿಧಾನಸಭಾ ಚುನಾವಣೆ ಮುಗಿದಿದೆ. ಇದೇ ವೇಳೆ ಚುನಾವಣೋತ್ತರ ಸಮೀಕ್ಷೆಗಳು ಕೂಡ ಪ್ರಕಟಗೊಂಡಿವೆ. ಚುನಾವಣೆಗೆ ಸಂಬಂಧಿಸಿದಂತೆ ಟುಡೇಸ್ ಚಾಣಕ್ಯ (Today’s Chanakya) ಸಮೀಕ್ಷೆ ಫಲಿತಾಂಶ ಹೀಗಿದೆ.
ಉತ್ತರ ಪ್ರದೇಶ: ಟುಡೇಸ್ ಚಾಣಕ್ಯ ಸಮೀಕ್ಷೆಯಲ್ಲಿ ಬಿಜೆಪಿ 294 ± 19, ಎಸ್ಪಿ 105 ± 19, ಬಿಎಸ್‌ಪಿ 2 ± 2, ಕಾಂಗ್ರೆಸ್ 1 ± 1, ಇತರೆ 1 ± 1 ಸ್ಥಾನ ಗಳಿಸಬಹುದು ಎಂದು ತಿಳಿಸಿದೆ.
ಪಂಜಾಬ್: ರಾಜ್ಯದಲ್ಲಿ ಎಎಪಿ 100 ± 11, ಕಾಂಗ್ರೆಸ್ 10 ± 7, ಎಸ್‌ಎಡಿ 6 ± 5, ಬಿಜೆಪಿ 1 ± 1, ಇತರೆ 0 + 1 ಸ್ಥಾನಗಳಿಸಬಹುದು ಎಂದು ಸಮೀಕ್ಷೆ ಹೇಳಿದೆ.
ಉತ್ತರಾಖಂಡ: ಇಲ್ಲಿ ಬಿಜೆಪಿ 43 ± 7, ಕಾಂಗ್ರೆಸ್ 24 ± 7, ಇತರೆ 3 ± 3 ಸ್ಥಾನ ಪಡೆಯಬಹುದು ಎಂದು ಸಮೀಕ್ಷೆ ವಿವರಿಸಿದೆ.
ನವದೆಹಲಿ: ಪಂಚರಾಜ್ಯಗಳಾದ ಉತ್ತರ ಪ್ರದೇಶ, ಉತ್ತರಾಖಂಡ, ಪಂಜಾಬ್, ಗೋವಾ, ಮಣಿಪುರ ವಿಧಾನಸಭಾ ಚುನಾವಣೆಯ ಮತದಾನ ಮುಕ್ತಾಯವಾಗಿದೆ. ಐದು ರಾಜ್ಯಗಳಲ್ಲಿ ಯಾವ ಯಾವ ಪಕ್ಷಗಳಿಗೆ ಎಷ್ಟು ಸ್ಥಾನ ಸಿಗಬಹುದು, ಯಾರು ಅಧಿಕಾರಕ್ಕೆ ಬರಬಹುದೆಂಬ ಕುತೂಹಲ ಮನೆ ಮಾಡಿದೆ. ಸುದ್ದಿ ಸಂಸ್ಥೆಗಳು, ಏಜೆನ್ಸಿಗಳ ಚುನಾವಣೋತ್ತರ ಸಮೀಕ್ಷೆ ಪ್ರಕಟವಾಗಿದ್ದು, ವಿವರ ಹೀಗಿದೆ.
ಉತ್ತರ ಪ್ರದೇಶದ ಚುನಾವಣಾ ಫಲಿತಾಂಶವು ಮುಂದಿನ ಸಾರ್ವತ್ರಿಕ ಚುನಾವಣೆ, ರಾಷ್ಟ್ರಪತಿ ಚುನಾವಣೆಯ ಮೇಲೆ ಪರಿಣಾಮ ಬೀರಲಿದೆ. ಹೀಗಾಗಿಯೇ ಈ ಮತ ಸಮರವನ್ನು ಪ್ರಮುಖ ಪಕ್ಷಗಳು ಪ್ರತಿಷ್ಠೆಯಾಗಿ ಪರಿಣಮಿಸಿದ್ದವು. ತೀವ್ರ ಕುತೂಹಲ ಕೆರಳಿಸಿದ್ದ ಉತ್ತರ ಪ್ರದೇಶದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಬಹುತೇಕ ಸಮೀಕ್ಷೆಗಳು ಹೇಳುತ್ತಿವೆ. ಆದರೆ ಸಮಾಜವಾದಿ ಪಕ್ಷದ ತೀವ್ರ ಪೈಪೋಟಿ ಕಾರಣ ಸರಳ ಬಹುಮತಕ್ಕಿಂತ ಸ್ವಲ್ಪ ಹೆಚ್ಚು ಸ್ಥಾನಗಳನ್ನು ಬಿಜೆಪಿ ಗಳಿಸಬಹುದು ಎಂಬ ಲೆಕ್ಕಾಚಾರವನ್ನು ಮುಂದಿಟ್ಟಿವೆ. ಪ್ರಿಯಾಂಕಾ ಗಾಂಧಿ ಪ್ರಚಾರ ಕಾಂಗ್ರೆಸ್ಗೆ ಫಲಕೊಟ್ಟಿಲ್ಲ. ಬಿಎಸ್ಪಿಯ ಮಾಯಾವತಿ ಮ್ಯಾಜಿಕ್ ಮಾಡಿಲ್ಲ ಎಂದು ಸಮೀಕ್ಷೆಗಳು ತಿಳಿಸಿವೆ. ಇದನ್ನೂ ಓದಿ: ಚುನಾವಣೋತ್ತರ ಸಮೀಕ್ಷೆ- ಉತ್ತರ ಪ್ರದೇಶದಲ್ಲಿ ಬಿಜೆಪಿ ಮೇಲುಗೈ
ತೀವ್ರ ಕುತೂಹಲ ಕೆರಳಿಸಿದ್ದ ಮತ್ತೊಂದು ರಾಜ್ಯವೆಂದರೆ ಪಂಜಾಬ್. ಇಲ್ಲಿ ನಾಯಕತ್ವದ ಕಿತ್ತಾಟದ ಪರಿಣಾಮ ಕಾಂಗ್ರೆಸ್ ಅಧಿಕಾರ ಕಳೆದುಕೊಳ್ಳಲಿದೆ. ದೆಹಲಿ ಬಳಿಕ ಪಂಜಾಬ್ನಲ್ಲಿ ಎಎಪಿ ಅಧಿಕಾರ ಹಿಡಿಯಲಿದೆ. ಚುನಾವಣೋತ್ತರ ಸಮೀಕ್ಷೆಗಳಲ್ಲಿ ಎಎಪಿಗೆ ಗದ್ದುಗೆ ಏರಲಿದೆ ಎಂದಿದೆ. ಶಿರೋಮಣಿ ಅಕಾಲಿ ದಳ ಸ್ವಲ್ಪಮಟ್ಟಿಗೆ ಮಾತ್ರ ಪ್ರಭಾವ ಬೀರಿದೆ. ಕ್ಯಾಪ್ಟನ್ ಅಮರಿಂದರ್ ಸಿಂಗ್ ಜೊತೆ ಸೇರಿದ್ದು ಬಿಜೆಪಿಗೆ ಪ್ರಯೋಜನವಾಗಿಲ್ಲ ಎಂದು ಚುನಾವಣೋತ್ತರ ಸಮೀಕ್ಷೆಗಳು ತಿಳಿಸಿವೆ. ಈ ಚುನಾವಣೆ ಮೇಲೆ ಕೃಷಿ ಕಾಯ್ದೆಗಳ ವಿರುದ್ಧ ನಡೆದಿದ್ದ ರೈತ ಹೋರಾಟ ತೀವ್ರ ಸ್ವರೂಪದಲ್ಲಿ ಪ್ರಭಾವ ಬೀರಿದೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ರಾಜ್ಯಸಭಾ 13 ಸ್ಥಾನಗಳಿಗೆ ಮಾರ್ಚ್ 31ರಂದು ಚುನಾವಣೆ
ಪಂಜಾಬ್ (117) ಆಕ್ಸಿಸ್ ಮೈ ಇಂಡಿಯಾ
ಕಾಂಗ್ರೆಸ್-19-31
ಎಎಪಿ-76-90
ಎಸ್‌ಎಡಿ-7-11
ಬಿಜೆಪಿ-00
ಇತರೆ-00-02
ಹಾರುವ ಶಾಸಕರು ಖ್ಯಾತಿಯ ಗೋವಾದಲ್ಲಿ ಈ ಬಾರಿ ಯಾವುದೇ ಪಕ್ಷಕ್ಕೂ ಬಹುಮತ ಸಿಗುವುದು ಅನುಮಾನ ಎಂದು ಚುನಾವಣೋತ್ತರ ಸಮೀಕ್ಷೆಗಳು ತಿಳಿಸಿವೆ. ಕಳೆದ ಬಾರಿ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ, ಅಧಿಕಾರಕ್ಕೇರುವಲ್ಲಿ ವಿಫಲವಾಗಿದ್ದ ಕಾಂಗ್ರೆಸ್ ಪಕ್ಷದಲ್ಲಿ, ಈ ಚುನಾವಣೆ ಬರುವ ಹೊತ್ತಿಗೆ ಕೇವಲ ಒಬ್ಬ ಶಾಸಕ ಉಳಿದುಕೊಂಡಿದ್ದರು. ನಾಯಕರು ಇಲ್ಲದೇ ಇದ್ದರೂ ಈ ಬಾರಿಯೂ ಕಾಂಗ್ರೆಸ್ ಹೆಚ್ಚು ಸ್ಥಾನ ಗಿಟ್ಟಿಸಲಿದೆ. ಕಾಂಗ್ರೆಸ್ ಸರಿಸಮನಾಗಿ ಬಿಜೆಪಿ ಫೈಟ್ ಕೊಟ್ಟಿದೆ. ಇಲ್ಲಿ ಯಾವುದೇ ಪಕ್ಷ ಗೆದ್ದರೂ ಮೂರ್ನಾಲ್ಕು ಸೀಟುಗಳ ಅಂತರ ಅಷ್ಟೇ ಇರಲಿದೆ. ಎಎಪಿ-ಟಿಎಂಸಿ ಪಕ್ಷಗಳು ಖಾತೆ ತೆರೆಯಲಿವೆ ಎಂಬ ಲೆಕ್ಕಗಳು ಸಮೀಕ್ಷೆಯಲ್ಲಿ ಸಿಕ್ಕಿವೆ.
ದೇವಭೂಮಿ ಖ್ಯಾತಿಯ ಉತ್ತರಾಖಂಡದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೇರುತ್ತಾ..? ಕಾಂಗ್ರೆಸ್ ಬರುತ್ತಾ..? ಮಣಿಪುರದಲ್ಲಿ ಏನಾಗಬಹುದು ಫಲಿತಾಂಶ ಎಂಬ ಬಗ್ಗೆ ಚುನಾವಣೋತ್ತರ ಸಮೀಕ್ಷೆಗಳು ಏನು ಹೇಳಿವೆ ಎಂಬುದನ್ನು ನೋಡೋಣ. ಇದನ್ನೂ ಓದಿ: ಜನೌಷಧಿ ಕೇಂದ್ರದಿಂದ ಮಧ್ಯಮ ವರ್ಗ, ಬಡವರಿಗೆ ಲಾಭ: ಮೋದಿ
ಡೆಹ್ರಾಡೂನ್: ಉತ್ತರಾಖಂಡದಲ್ಲಿ ವ್ಯಕ್ತಿಯೊಬ್ಬರು ಅಂಚೆ ಮತ ಪತ್ರಗಳನ್ನು ತಿದ್ದುತ್ತಿರುವ ವೀಡಿಯೋವನ್ನು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹರೀಶ್ ರಾವತ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಇದೀಗ ವೀಡಿಯೋ ವೈರಲ್ ಆಗುತ್ತಿದೆ.
ಟ್ವೀಟ್‍ನಲ್ಲಿ ಏನಿದೆ?: ಎಲ್ಲರ ಮಾಹಿತಿಗಾಗಿ ಈ ವೀಡಿಯೋವನ್ನು ಹಂಚಿಕೊಳ್ಳುತ್ತಿದ್ದೇನೆ. ಸೇನಾ ಕೇಂದ್ರದಲ್ಲಿ ಒಬ್ಬ ವ್ಯಕ್ತಿ ಹೇಗೆ ಹಲವಾರು ಮತಪತ್ರಗಳಿಗೆ ಟಿಕ್ ಹಾಗೂ ಸಹಿ ಹಾಕುತ್ತಿದ್ದಾನೆ ಎನ್ನುವುದರ ಕುರಿತು ಈ ವೀಡಿಯೋದಲ್ಲಿ ಮಾಹಿತಿಯಿದೆ. ಚುನಾವಣಾ ಆಯೋಗ ಇದನ್ನು ಗಮನಿಸುತ್ತಿದೆಯಾ ಎಂದು ಪ್ರಶ್ನಿಸಿದ್ದಾರೆ.
एक छोटा #वीडियो सबकी जानकारी के लिए वायरल कर रहा हूंँ, इसमें एक #आर्मी के सेंटर में किस प्रकार से एक ही व्यक्ति सारे #वोटों को टिक कर रहा है और यहां तक कि सभी लोगों के हस्ताक्षर भी वही कर रहा है, उसका एक नमूना देखिए, क्या इलेक्शन कमिशन इसका संज्ञान लेना चाहेगा?@UttarakhandCEOpic.twitter.com/yAd4UVPpLh
ಈ ಬಗ್ಗೆ ರಾವತ್ ಅವರ ವಕ್ತಾರ ಸುರೇಂದ್ರ ಕುಮಾರ್ ಮಾತನಾಡಿ, ಈ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡಿಲ್ಲ. ಆದರೆ ಅವರೇ ಸ್ವಯಂಪ್ರೇರಿತವಾಗಿ ದೂರು ದಾಖಲಿಸಬಹುದು. ಈ ವೀಡಿಯೋ ಉತ್ತರಾಖಂಡದಿಂದಲೇ ಬಂದಿದೆ ಎಂದ ಅವರು, ಈ ವೀಡಿಯೋದ ಮೂಲವನ್ನು ಬಹಿರಂಗ ಪಡಿಸಲು ನಿರಾಕರಿಸಿದರು.
ಈ ವೀಡಿಯೋಕ್ಕೆ ಉತ್ತರಾಖಂಡ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಪ್ರೀತಮ್ ಸಿಂಗ್ ಪ್ರತಿಕ್ರಿಯಿಸಿದ್ದು, ಈ ವೀಡಿಯೋ ಪ್ರಜಾಪ್ರಭುತ್ವವನ್ನು ಅಪಹಾಸ್ಯ ಮಾಡುತ್ತಿದೆ. ಚುನಾವಣಾ ಆಯೋಗವು ಇದನ್ನು ಗಂಭೀರವಾಗಿ ಪರಿಗಣಿಸಿ, ತಪ್ಪಿತಸ್ಥರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ:ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಗೆಲುವು ಸಾಧಿಸಿದ ತೃತೀಯಲಿಂಗಿ
ಡೆಹ್ರಾಡೂನ್: ಮದುವೆ ಮುಗಿಸಿಕೊಂಡು ವಾಪಸ್ ಬರುತ್ತಿದ್ದ ವಾಹನ ಕಂದಕಕ್ಕೆ ಬಿದ್ದು 14 ಮಂದಿ ದಾರುಣ ಸಾವಿಗೀಡಾಗಿರುವ ಘಟನೆ ಉತ್ತರಾಖಂಡದಲ್ಲಿ ನಡೆದಿದೆ.
ಇಂದು ಮುಂಜಾನೆ ಅಪಘಾತ ಸಂಭವಿಸಿದೆ. ಜನರು ಪ್ರಯಾಣಿಸುತ್ತಿದ್ದ ವಾಹನವು ಸುಖಿಧಾಂಗ್ ರೀತಾ ಸಾಹಿಬ್ ರಸ್ತೆಯ ಬಳಿಯ ಕಂದಕ್ಕೆ ಬಿದ್ದಿದೆ ಎಂದು ಕುಮಾನ್ ಡೆಪ್ಯುಟಿ ಇನ್ಸ್‌ಪೆಕ್ಟರ್ ಜನರಲ್ ಆಫ್ ಪೊಲೀಸ್ (ಡಿಐಜಿ) ನೀಲೇಶ್ ಆನಂದ್ ಭರ್ನೆ ಅವರು ತಿಳಿಸಿದ್ದಾರೆ. ಇದನ್ನೂ ಓದಿ: ಐದು ರಾಜ್ಯಗಳಲ್ಲಿ ಬಿಜೆಪಿಗೆ ಬಹುಮತ ಸಿಗುವುದಿಲ್ಲ: ಪೃಥ್ವಿರಾಜ್ ಚವಾಣ್
ಜನರು ಮದುವೆ ಸಮಾರಂಭ ಮುಗಿಸಿಕೊಂಡು ವಾಪಸ್ಸಾಗುತ್ತಿದ್ದರು. ಈ ವೇಳೆ ವಾಹನ ಕಂದಕಕ್ಕೆ ಬಿದ್ದಿದೆ. ಪರಿಣಾಮವಾಗಿ ವಾಹನದಲ್ಲಿದ್ದವರ ಪೈಕಿ 11 ಮಂದಿ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಗಂಭೀರ ಗಾಯಗಳಾದವರನ್ನು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆಸ್ಪತ್ರೆಯಲ್ಲಿ ಮತ್ತೆ ಮೂವರು ಮೃತಪಟ್ಟಿದ್ದಾರೆ.
Uttarakhand | 14 people died after the vehicle they were travelling fell into a gorge near Sukhidhang Reetha Sahib road. The accident occurred early morning today when they were returning from a wedding ceremony: Kumaon DIG Nilesh Anand Bharne pic.twitter.com/aGidTX7AGX
ಡೆಹ್ರಾಡೂನ್: ನನ್ನ ಮಗನಿಗೆ ಕಾಂಗ್ರೆಸ್ ಟಿಕೆಟ್ ನೀಡಿದ್ದರೆ ಗೆಲ್ಲುತ್ತಿದ್ದ ಎಂದು ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ ಹರೀಶ್ ರಾವತ್ ಹೇಳಿದ್ದಾರೆ.
ನಾನು ಲಾಲ್ ಕುವಾನ್‍ನಿಂದ ಗೆಲ್ಲುತ್ತೇನೆ. ನನ್ನ ಮಗಳೂ ಹರಿದ್ವಾರದಿಂದ ಗೆಲ್ಲುತ್ತಾಳೆ. ನನ್ನ ಮಗನಿಗೆ ಪಕ್ಷ ಟಿಕೆಟ್ ನೀಡಿದ್ದರೆ ಆ ಸ್ಥಾನ ಕಾಂಗ್ರೆಸ್ ಪಾಲಾಗುತ್ತಿತ್ತು. ಆದರೆ ನನ್ನ ಮಗನಿಗೆ ಟಿಕೆಟ್ ನೀಡಿಲ್ಲ ಎಂದು ರಾವತ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ತಾಜ್ ಮಹಲ್‌ನಲ್ಲಿ ಹನುಮಾನ್ ಚಾಲೀಸಾ – ಪ್ರತಿಭಟನಕಾರರನ್ನು ತಡೆದ ಪೊಲೀಸರು
ನನ್ನ ಗೆಲುವಿನ ಅಂತರದ ಬಗ್ಗೆ ಹೇಳಲಾರೆ. ಜನರು ನನ್ನನ್ನು ಒಪ್ಪಿಕೊಂಡಿದ್ದಾರೆ ಮತ್ತು ನಾನು ಲಾಲ್ ಕುವಾನ್ ಕ್ಷೇತ್ರದಲ್ಲಿ ಗೆಲ್ಲುತ್ತೇನೆ ಎಂದು ಭಾವಿಸುತ್ತೇನೆ. ಲಾಲ್ ಕುವಾನ್‍ನ ಬಿಜೆಪಿ ಅಭ್ಯರ್ಥಿ ಮೋಹನ್ ಸಿಂಗ್ ಬಿಶ್ತ್ ಅವರಿಗೆ ನನ್ನ ಶುಭಾಶಯಗಳು. ಅವರು ನನಗೆ ಕಠಿಣ ಸ್ಪರ್ಧೆ ನೀಡಲಿದ್ದಾರೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ 48 ಸ್ಥಾನಗಳನ್ನು ಪಡೆಯುವ ಮೂಲಕ ಚುನಾವಣೆಯಲ್ಲಿ ಗೆಲ್ಲುತ್ತದೆ ಎಂದು ನಾನು ಸ್ಪಷ್ಟವಾಗಿ ಹೇಳುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಸುಮಾರು ಆರು ವಿಧಾನಸಭಾ ಸ್ಥಾನಗಳಲ್ಲಿ ಉತ್ತಮ ಹೋರಾಟವಿದೆ. ಚುನಾವಣೆಯಲ್ಲಿ ಪಕ್ಷವು 20 ಕ್ಕಿಂತ ಕಡಿಮೆ ಸ್ಥಾನಗಳನ್ನು ಪಡೆಯಲಿರುವುದರಿಂದ ಬಿಜೆಪಿಯ ಗೌರವವನ್ನು ಉಳಿಸಿದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರನ್ನು ನಾನು ಅಭಿನಂದಿಸುತ್ತೇನೆ. ಈ ಬಾರಿ ಜನರ ನಿರ್ಧಾರವು ಅವರ ವಿರುದ್ಧವಾಗಿದೆ ಎಂದು ಸಹ ನಾನು ಅವರಿಗೆ ಹೇಳಲು ಬಯಸುತ್ತೇನೆ. ಆದರೆ ಅವರು ಚಿಂತಿಸುವ ಅಗತ್ಯವಿಲ್ಲ. ಏಕೆಂದರೆ ಅವರ ಹಿರಿಯ ಸಹೋದರ ಹರೀಶ್ ರಾವತ್ ಅವರ ಆಶಯಗಳು ಅವರೊಂದಿಗಿವೆ ಎಂದಿದ್ದಾರೆ. ಇದನ್ನೂ ಓದಿ: ಹಿಜಬ್-ಕೇಸರಿ ವಿವಾದ – ಉಡುಪಿ, ಶಿವಮೊಗ್ಗದ ಕೆಲ ಕಾಲೇಜ್‍ಗಳಿಗೆ ರಜೆ ಘೋಷಣೆ
ಈ ಬಾರಿ ಪಕ್ಷ ಅಧಿಕಾರಕ್ಕೆ ಬಂದರೆ ಮುಖ್ಯಮಂತ್ರಿ ಸ್ಥಾನದ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ನಿರ್ಧಾರವನ್ನು ನಾಯಕರು ಒಪ್ಪಿಕೊಳ್ಳುತ್ತಾರೆ. ಉತ್ತರಾಖಂಡಕ್ಕೆ ಸಂಬಂಧಿಸಿದಂತೆ ಪಕ್ಷದ ಹೈಕಮಾಂಡ್ ಏನೇ ನಿರ್ಧಾರ ಕೈಗೊಂಡರೂ ಅದನ್ನು ಒಪ್ಪಿಕೊಳ್ಳುತ್ತೇವೆ. ಉತ್ತರಾಖಂಡದಲ್ಲಿ ಕಾಂಗ್ರೆಸ್ ಗೆದ್ದರೆ ಆ ಗೆಲುವಿನ ಶ್ರೇಯ ರಾಹುಲ್ ಗಾಂಧಿಗೆ ಸಲ್ಲುತ್ತದೆ ಎಂದು ಹೇಳಿದ್ದಾರೆ.
ನವದೆಹಲಿ: ಉತ್ತರಾಖಂಡ, ಗೋವಾ ಮತ್ತು ಉತ್ತರ ಪ್ರದೇಶದ ಕೆಲವು ಭಾಗಗಳಲ್ಲಿ ಇಂದಿನಿಂದ ಮತದಾನ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿ ದಾಖಲೆ ಮಟ್ಟದಲ್ಲಿ ಮತದಾನ ಮಾಡಿ ಪ್ರಜಾಪ್ರಭುತ್ವದ ಹಬ್ಬವನ್ನು ಬಲಪಡಿಸುವಂತೆ ತಿಳಿಸಿದರು.
ಟ್ವೀಟ್‍ನಲ್ಲಿ ಏನಿದೆ?: ಉತ್ತರಾಖಂಡ, ಗೋವಾ ಮತ್ತು ಉತ್ತರ ಪ್ರದೇಶದ ಕೆಲವು ಭಾಗಗಳಲ್ಲಿ ಮತದಾನ ನಡೆಯಲಿದೆ. ಇಂದು ಮತ ಚಲಾಯಿಸಲು ಅರ್ಹರಾಗಿರುವ ಎಲ್ಲರೂ ದಾಖಲೆ ಮಟ್ಟದಲ್ಲಿ ಮತದಾನ ಮಾಡಿ. ಪ್ರಜಾಪ್ರಭುತ್ವದ ಹಬ್ಬವನ್ನು ಬಲಪಡಿಸುವಂತೆ ಎಂದು ಟ್ವೀಟ್‍ನಲ್ಲಿ ಕರೆ ನೀಡಿದರು.
Polling will be held across Uttarakhand, Goa and in parts of Uttar Pradesh. I call upon all those whose are eligible to vote today to do so in record numbers and strengthen the festival of democracy.
ಉತ್ತರ ಪ್ರದೇಶದಲ್ಲಿ 403 ವಿಧಾನಸಭಾ ಕ್ಷೇತ್ರಗಳಿಗೆ ಏಳು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಇಂದು ಎರಡನೇ ಹಂತದ ಮತದಾನ ಆರಂಭವಾಗಿದೆ. ಮೊದಲ ಹಂತ ಫೆ.10ರಂದು ನಡೆದಿತ್ತು. ಗೋವಾ ಮತ್ತು ಉತ್ತರಾಖಂಡದಲ್ಲಿ ಕ್ರಮವಾಗಿ 40 ಮತ್ತು 70 ವಿಧಾನಸಭಾ ಸ್ಥಾನಗಳಿಗೆ ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ. ಇದನ್ನೂ ಓದಿ:ನಾನು ಹೃದಯದಿಂದ ಮುಸ್ಲಿಂ ಮಗಳು, ಹಿಜಬ್‍ನಿಂದಲ್ಲ: ಕಾಶ್ಮೀರ ಟಾಪರ್
ಡೆಹ್ರಾಡೂನ್: ನಾನು ಉತ್ತರಾಖಂಡದ ಕಾವಲುಗಾರ. ಉತ್ತರಾಖಂಡಕ್ಕಾಗಿ ಅಗತ್ಯ ಬಿದ್ದರೆ ಬೊಗಳುತ್ತೇನೆ ಇಲ್ಲಾ ಕಚ್ಚುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಹರೀಶ್ ರಾವತ್ ಗೃಹಸಚಿವ ಅಮಿತ್ ಶಾಗೆ ತಿರುಗೇಟು ನೀಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮ ಪ್ರತಿಸ್ಪರ್ಧಿಯನ್ನು ತೆಗಳುವುದು ಬಿಜೆಪಿಯ ಸಂಸ್ಕೃತಿಯಾಗಿದೆ. ಅದಕ್ಕೆ ಧನ್ಯವಾದ ತಿಳುಸುತ್ತೇನೆ ಎಂದ ಅವರು, ಅಮಿತ್ ಶಾ ನಾಯಿ ಎಂಬ ಪದವನ್ನು ಬಳಸಿಲ್ಲ. ಆದರೆ ರಾಜಕೀಯ ಎದುರಾಳಿಗಳನ್ನು ನಾಯಿ ಎಂದು ಪರಿಗಣಿಸಿದರೆ ಅದು ಅವರ ತಿಳುವಳಿಕೆಗೆ ಬಿಟ್ಟಿದ್ದು ಎಂದರು.
ನಮ್ಮ ಧರ್ಮದಲ್ಲಿ ನಾಯಿಯನ್ನು ಕಾವಲುಗಾರರೆಂದು ಪರಿಗಣಿಸುತ್ತೇವೆ. ಅವರು ದೇವರ ಕಾವಲುಗಾರ ಹಾಗೂ ನಾಯಿ ಮನೆಗಳನ್ನು ಕಾಯುತ್ತವೆ. ಈ ಹಿನ್ನೆಲೆಯಲ್ಲಿ ನಾನು ಉತ್ತರಾಖಂಡದ ಕಾವಲುಗಾರ. ನಾನು ಉತ್ತರಾಖಂಡಕ್ಕಾಗಿ ಬೊಗಳುತ್ತೇನೆ. ಕಚ್ಚುವ ಅವಶ್ಯಕತೆ ಬಂದರೆ ನಾನು ಕಚ್ಚುತ್ತೇನೆ ಎಂದು ತಿರುಗೇಟು ನೀಡಿದರು. ಇದನ್ನೂ ಓದಿ:ನಾನು ಹೃದಯದಿಂದ ಮುಸ್ಲಿಂ ಮಗಳು, ಹಿಜಬ್‍ನಿಂದಲ್ಲ: ಕಾಶ್ಮೀರ ಟಾಪರ್
ಹರೀಶ್ ರಾವತ್ ಅವರನ್ನು ನಾಯಕನನ್ನಾಗಿ ಮಾಡಬೇಕೋ ಬೇಡವೋ, ಅವರಿಗೆ ಟಿಕೆಟ್ ನೀಡಬೇಕೋ ಅಥವಾ ಬೇಡವಾ, ಜೊತೆಗೆ ಪಕ್ಷದಲ್ಲಿ ಸ್ಥಾನ ನೀಡಬೇಕೋ, ಬೇಡವೋ ಎಂಬುದನ್ನು ಕಾಂಗ್ರೆಸ್ ನಿರ್ಧರಿಸುವುದಿಲ್ಲ ಎಂದು ಅಮಿತ್ ಶಾ ಟೀಕಿಸಿದ್ದರು.
ಹಿಜಾಬ್ ವಿವಾದದ ಕುರಿತು ಪ್ರತಿಕ್ರಿಯಿಸದ ಹರೀಶ್ ರಾವತ್ ಅವರು, ಹಿಜಾಬ್, ಖಿಜಾಬ್, ತೇಜಾಬ್ ವಿಷಯಗಳ ವಿವಾದಕ್ಕೆ ಬಿಜೆಪಿ ಸ್ವಾಗತಿಸುತ್ತದೆ. ಉತ್ತರಾಖಂಡದ ಜನರು ಅವುಗಳ ಬಗ್ಗೆ ಕಾಳಜಿ ವಹಿಸುವುದಿಲ್ಲ. ಇದು ಬಿಜೆಪಿಯ ಕೆಟ್ಟ ಯೋಚನೆಯಾಗಿದೆ ಎಂದು ಕಿಡಿಕಾರಿದರು. ಇದನ್ನೂ ಓದಿ:ಇಂದಿನಿಂದ ಹೈಸ್ಕೂಲ್ ಆರಂಭ – ಸಮವಸ್ತ್ರದಲ್ಲೇ ಬರಬೇಕು, ಪೊಲೀಸರ ನಿಗಾ