Tag: Uttarakhand

  • ಉತ್ತರಾಖಂಡದಲ್ಲಿ ಹಿಮಪಾತ – 20 ಮಂದಿ ನಾಪತ್ತೆ

    ಉತ್ತರಾಖಂಡದಲ್ಲಿ ಹಿಮಪಾತ – 20 ಮಂದಿ ನಾಪತ್ತೆ

    ಡೆಹ್ರಾಡೂನ್: ಉತ್ತರಾಖಂಡದ (Uttarakhand) ದ್ರೌಪದಿ ಕಾ ದಂಡಾ-2 (Draupadi ka Danda) ಶಿಖರದಲ್ಲಿ ಇಂದು ಭಾರೀ ಹಿಮಪಾತ (Avalanche) ಸಂಭವಿಸಿದ್ದು, 20ಕ್ಕೂ ಹೆಚ್ಚು ಪರ್ವತಾರೋಹಿಗಳು (Mountaineers) ಹಿಮದಲ್ಲಿ ಸಿಲುಕಿರುವುದಾಗಿ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ (Pushkar Singh Dhami) ತಿಳಿಸಿದ್ದಾರೆ.

    ವರದಿಗಳ ಪ್ರಕಾರ ನಾಪತ್ತೆಯಾದವರು ಉತ್ತರ ಕಾಶಿಯ ನೆಹರೂ ಇನ್‌ಸ್ಟಿಟ್ಯೂಟ್ ಆಫ್ ಮೌಂಟೇನಿಯರಿಂಗ್‌ನವರಾಗಿದ್ದಾರೆ. ಟ್ರೆಕ್ಕಿಂಗ್ ತೆರಳಿದ್ದ 40 ಜನರ ಗುಂಪಿನಲ್ಲಿ 22 ವಿದ್ಯಾರ್ಥಿಗಳು ಹಾಗೂ 7 ಮಂದಿ ಬೋಧಕರಿದ್ದರು.

    ಹಿಮಪಾತ ಸಂಭವಿಸಿದಾಗ 29 ಮಂದಿ ಸಿಲುಕಿಕೊಂಡಿದ್ದರು. ಅವರಲ್ಲಿ 8 ಮಂದಿಯನ್ನು ರಕ್ಷಿಸಲಾಗಿದ್ದು, ಉಳಿದವರ ಪತ್ತೆಗೆ ರಕ್ಷಣಾ ತಂಡಗಳು ಕಾರ್ಯಾಚರಣೆ ನಡೆಸುತ್ತಿವೆ. ಜಿಲ್ಲಾಡಳಿತ, ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್, ಸೇನೆ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ. ಇದನ್ನೂ ಓದಿ: ದಸರಾ ಹಬ್ಬಕ್ಕೆ ಬೋನಸ್ ಕೊಡಲಿಲ್ಲವೆಂದು ಗ್ರಾಮ ಪಂಚಾಯತ್ ಕಚೇರಿಗೆ ಚಪ್ಪಲಿ ಹಾರ ಹಾಕಿದ ನೌಕರ

    ಸೇನೆಯ ಸಹಾಯದಿಂದ ರಕ್ಷಣಾ ಕಾರ್ಯಾಚರಣೆಯನ್ನು ತ್ವರಿತಗೊಳಿಸುವಂತೆ ರಕ್ಷಣಾ ಮಂತ್ರಿ ರಾಜನಾಥ್ ಸಿಂಗ್ ಅವರಿಗೆ ಮನವಿ ಮಾಡಿದ್ದೇನೆ. ಕೇಂದ್ರ ಸರ್ಕಾರದಿಂದ ಸಾಧ್ಯವಿರುವ ಎಲ್ಲಾ ನೆರವು ನೀಡುವುದಾಗಿ ಅವರು ಭರವಸೆ ನೀಡಿದ್ದಾರೆ. ಎಲ್ಲರನ್ನೂ ಸುರಕ್ಷಿತವಾಗಿ ಕರೆತರಲು ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಧಾಮಿ ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಅಮೆರಿಕದಲ್ಲಿ ಭಾರತ ಮೂಲದ 8 ತಿಂಗಳ ಮಗು ಸೇರಿ ನಾಲ್ವರು ಕಿಡ್ನ್ಯಾಪ್‌

    Live Tv
    [brid partner=56869869 player=32851 video=960834 autoplay=true]

  • 500 ರೂ. ಕೊಟ್ರೆ ಒಂದು ರಾತ್ರಿ ಜೈಲಲ್ಲಿ ಇರಲು ಅವಕಾಶ

    500 ರೂ. ಕೊಟ್ರೆ ಒಂದು ರಾತ್ರಿ ಜೈಲಲ್ಲಿ ಇರಲು ಅವಕಾಶ

    ಡೆಹ್ರಾಡೂನ್: ಕೇವಲ 500 ರೂ.ಗಳನ್ನು ನೀಡಿದರೆ ಒಂದು ರಾತ್ರಿ ಜೈಲಿನಲ್ಲಿ (Jail) ಕೈದಿಗಳಂತೆ ಇರಲು ಉತ್ತರಾಖಂಡದ (Uttarakhand) ಜೈಲು ಆಡಳಿತವು ವಿಶಿಷ್ಟ ರೀತಿಯ ಆಫರ್ ನೀಡಿದೆ.

    ಕೆಲವರಿಗೆ ಜ್ಯೋತಿಷ್ಯ ಕೇಳುವ ರೂಢಿ ಇರುತ್ತೆ. ಕೆಲವೊಮ್ಮೆ ಜ್ಯೋತಿಷಿಗಳು ಬಂಧನದ ಭೀತಿ ಇದೆ ಎಂದು ಹೇಳುತ್ತಾರೆ. ಇದರಿಂದಾಗಿ ಪರಿಹಾರಕ್ಕಾಗಿ ಅನೇಕ ರೀತಿಯ ಖರ್ಚನ್ನು ಮಾಡುತ್ತಾರೆ. ಹೋಮ, ಹವನವನ್ನು ಮಾಡುತ್ತಾರೆ. ಆದರೆ ಉತ್ತರ ಖಂಡದ ಹಲ್ದ್ವಾನಿ ಆಡಳಿತವು ಈ ರೀತಿ ತೊಂದರೆ ಅನುಭವಿಸುವವರಿಗೆಂದೇ ಅಥವಾ ವಿಚಿತ್ರ ಆಸೆ ಹೊಂದಿದವರಿಗೆ ಅದನ್ನು ತೀರಿಸಲು ಅನುವು ಮಾಡಿಕೊಟ್ಟಿದೆ.

    ಹಲ್ದ್ವಾನಿ ಜೈಲನ್ನು 1903ರಲ್ಲಿ ನಿರ್ಮಿಸಲಾಗಿದೆ. ಹಿರಿಯ ಅಧಿಕಾರಿಗಳ ಶಿಫಾರಸ್ಸಿನ ಮೇರೆಗೆ ಜೈಲಿನಲ್ಲಿ ಉಳಿದುಕೊಳ್ಳಬಹುದು. ಕೈದಿಗಳು ಧರಿಸುವಂತಹ ಬಟ್ಟೆ ಹಾಗೂ ಕಾರಾಗೃಹದಲ್ಲಿ ನೀಡುವ ಊಟವನ್ನು ನೀಡಲಾಗುತ್ತದೆ. ಇದನ್ನೂ ಓದಿ: RSS ಭಯೋತ್ಪಾದಕ ಚಟುವಟಿಕೆ ಮಾಡಿದ್ದರೆ ಸರ್ಕಾರ ಕ್ರಮ ಕೈಗೊಳ್ಳಲಿದೆ: ಎಂಟಿಬಿ ನಾಗರಾಜ್‌

    ಪ್ರಸ್ತುತವಾಗಿ ಈ ಜೈಲಿನಲ್ಲಿ ಇದೀಗ ಕೈದಿಗಳಿಲ್ಲ. ಬದಲಿಗೆ ಅತಿಥಿಗಳು (Tourist) ತಂಗಲು ಬೇಕಾದ ಎಲ್ಲಾ ರೀತಿಯ ವ್ಯವಸ್ಥೆಯನ್ನು ಮಾಡಲಾಗಿದೆ. ಇಲ್ಲಿ ಉಳಿದುಕೊಳ್ಳಲು ಬರುವವರಿಗೆ ಕಾರಾಗೃಹದ ಅನುಭವ ಆಗುವ ವ್ಯವಸ್ಥೆಯನ್ನು ಮಾಡಲಾಗಿದೆ. ಇದನ್ನೂ ಓದಿ: ರೆಸ್ಟೋರೆಂಟ್‍ನಲ್ಲಿ ಬೆಂಕಿ – 17 ಮಂದಿ ಸಜೀವ ದಹನ

    Live Tv
    [brid partner=56869869 player=32851 video=960834 autoplay=true]

  • ನನ್ನ ಮಗಳನ್ನು ಕೊಂದವರನ್ನು ಜೀವಂತವಾಗಿ ಸುಡಿ – ಅಂಕಿತಾ ಭಂಡಾರಿ ತಾಯಿ ಆಕ್ರೋಶ

    ನನ್ನ ಮಗಳನ್ನು ಕೊಂದವರನ್ನು ಜೀವಂತವಾಗಿ ಸುಡಿ – ಅಂಕಿತಾ ಭಂಡಾರಿ ತಾಯಿ ಆಕ್ರೋಶ

    ಡೆಹ್ರಾಡೂನ್: ನನ್ನ ಮಗಳನ್ನು ಕೊಂದವರನ್ನು ಜೀವಂತವಾಗು ಸುಟ್ಟು ಹಾಕಿ ಎಂದು ಅಂಕಿತಾ ಭಂಡಾರಿ (Ankita Bhandari) ತಾಯಿ (Mother) ಆಕ್ರೋಶ ಹೊರಹಾಕಿದ್ದಾರೆ.

    ಉತ್ತರಖಂಡದ (Uttarakhand) ರೆಸಾರ್ಟ್‍ವೊಂದರಲ್ಲಿ (Resort) ರಿಸೆಪ್ಷನ್ ಲಿಸ್ಟ್ (Receptionist) ಆಗಿ ಕೆಲಸ ಮಾಡುತ್ತಿದ್ದ ಅಂಕಿತಾ ಭಂಡಾರಿ ಹತ್ಯೆ ಕುರಿತಂತೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರ ತಾಯಿ, ತಮ್ಮ ಮಗಳನ್ನು ಹತ್ಯೆಗೈದ ಆರೋಪಿಗಳನ್ನು ಗಲ್ಲಿಗೇರಿಸುವಂತೆ ಒತ್ತಾಯಿಸಿದ್ದಾರೆ. ಒಂದು ವೇಳೆ ಕಾನೂನಿನ ಪ್ರಕಾರ ಆರೋಪಿಗಳನ್ನು ಗಲ್ಲಿಗೇರಿಸಲು ಸಾಧ್ಯವಾಗಲಿಲ್ಲ ಎಂದರೆ ಅವರನ್ನು ಅವರ ಮನೆಗಳ ಮುಂದೆಯೇ ಜೀವಂತವಾಗಿ ಸುಟ್ಟುಹಾಕಬೇಕು ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ರಿಸೆಪ್ಷನಿಸ್ಟ್‌ ಆಗಿ ಕೆಲಸ ಮಾಡ್ತಿದ್ದ ಯುವತಿ ಹತ್ಯೆ – ಬಿಜೆಪಿ ಮಾಜಿ ಸಚಿವನ ಪುತ್ರ ಅರೆಸ್ಟ್‌

    ನನ್ನ ಮಗಳ ಅಂತಿಮ ಸಂಸ್ಕಾರವನ್ನು ನನಗೆ ತಿಳಿಸದೇ ನಡೆಸಲಾಗದೆ. ಆಕೆಯ ಅಂತ್ಯಕ್ರಿಯೆ ಮಾಡುತ್ತಿರುವ ಬಗ್ಗೆ ನನಗೆ ಹೇಳೇ ಇಲ್ಲ. ಸರ್ಕಾರವೇ ಅವಳ ಅಂತಿಮ ವಿಧಿವಿಧಾನವನ್ನು ಮಾಡಿ ಮುಗಿಸಿದೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ನನ್ನನ್ನು ವೇಶ್ಯಾವಾಟಿಕೆಗೆ ಒತ್ತಾಯಿಸ್ತಿದ್ರು- ಅಂಕಿತಾ ಭಂಡಾರಿ ವಾಟ್ಸಾಪ್ ಸಂದೇಶ ವೈರಲ್

    ಉತ್ತರಖಂಡದ ಕಾಲುವೆಯೊಂದರಲ್ಲಿ (Canal) ಅಂಕಿತಾ ಭಂಡಾರಿ ಮೃತದೇಹ ಪತ್ತೆಯಾಗಿದ್ದು, ಇದಾದ ಒಂದು ದಿನಗಳ ನಂತರ ಭಾನುವಾರ ಅಂಕಿತಾ ಭಂಡಾರಿ ಅಂತಿಮ ವಿಧಿವಿಧಾನವನ್ನು ನೆರವೇರಿಸಲಾಗಿತ್ತು. ಉತ್ತರಾಖಂಡದ ರಿಷಿಕೇಶದಲ್ಲಿರುವ (Rishikesh) ಬಿಜೆಪಿ ಮುಖಂಡನ ಮಗಪುಲ್ಕಿತ್ ಆರ್ಯ ಮಾಲೀಕತ್ವದ ರೆಸಾರ್ಟ್‍ನಲ್ಲಿ ರಿಸೆಪ್ಷನ್ ಆಗಿ ಅಂಕಿತಾ ಭಂಡಾರಿ ಕೆಲಸ ಮಾಡುತ್ತಿದ್ದಳು. ಆದರೆ ಬಲವಂತವಾಗಿ ವೇಶ್ಯಾವಾಟಿಕೆಗೆ ನೂಕಲು ಪ್ರಯತ್ನಿಸಿದಾಗ ಅದನ್ನು ನಿರಾಕರಿಸಿದ್ದಕ್ಕೆ ಅಂಕಿತಾ ಭಂಡಾರಿಯನ್ನು ಕೊಲೆ ಮಾಡಲಾಗಿದೆ ಎನ್ನಲಾಗಿದ್ದು, ಈ ಸಂಬಂಧ ಉಚ್ಚಾಟಿತ ಬಿಜೆಪಿ ನಾಯಕನ ಮಗ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ನನ್ನನ್ನು ವೇಶ್ಯಾವಾಟಿಕೆಗೆ ಒತ್ತಾಯಿಸ್ತಿದ್ರು- ಅಂಕಿತಾ ಭಂಡಾರಿ ವಾಟ್ಸಾಪ್ ಸಂದೇಶ ವೈರಲ್

    ನನ್ನನ್ನು ವೇಶ್ಯಾವಾಟಿಕೆಗೆ ಒತ್ತಾಯಿಸ್ತಿದ್ರು- ಅಂಕಿತಾ ಭಂಡಾರಿ ವಾಟ್ಸಾಪ್ ಸಂದೇಶ ವೈರಲ್

    ಡೆಹ್ರಾಡೂನ್: ಇತ್ತೀಚೆಗಷ್ಟೇ ನಾಪತ್ತೆಯಾಗಿ ತಾನು ಕೆಲಸ ಮಾಡುತ್ತಿದ್ದ ರೆಸಾರ್ಟ್‌ನಲ್ಲಿಯೇ (Resort) ಶವವಾಗಿ ಪತ್ತೆಯಾಗಿದ್ದ ಉತ್ತರಾಖಂಡದ (Uttarakhand) ಯುವತಿ (Young Women) ಅಂಕಿತಾ ಭಂಡಾರಿ ಸಾವಿಗೂ ಮುನ್ನ ತನ್ನ ಸ್ನೇಹಿತರಿಗೆ ಕಳುಹಿಸಿದ್ದ ವಾಟ್ಸಾಪ್ ಸಂದೇಶಗಳು (WhatsApp Message) ಬಹಿರಂಗಗೊಂಡಿವೆ.

    ಹೌದು.. ಹತ್ಯೆಗೀಡಾದ ಉತ್ತರಾಖಂಡದ (Uttarakhand Murder) ಯುವತಿ `ನನ್ನನ್ನು ವೇಶ್ಯಾವಾಟಿಕೆ (Prostitute) ಮಾಡುವಂತೆ ಒತ್ತಾಯಿಸುತ್ತಿದ್ದಾರೆ, ಎಲ್ಲರೂ ನನ್ನನ್ನು ವೇಶ್ಯೆಯಾಗಿ ಮಾಡಲು ಪ್ರಯತ್ನಿಸುತ್ತಿದ್ದಾರೆ’ ಎಂದು ಸಾಯುವ ಮುನ್ನ ಸ್ನೇಹಿತರಿಗೆ ಕಳುಹಿಸಿದ್ದ ಸಂದೇಶಗಳು ಬೆಳಕಿಗೆ ಬಂದಿವೆ. ಈ ಸಂದೇಶಗಳು ಆರೋಪವನ್ನು ಬಲವಾಗಿ ದೃಢಪಡಿಸುವಂತೆ ಸೂಚಿಸುತ್ತಿವೆ.

    ಯುವತಿ ಸಂದೇಶ ಏನಿತ್ತು?
    ಸಾಯವ ಮುನ್ನ ಯುವತಿ `10 ಸಾವಿರ ಹಣ ನೀಡಿ ನನ್ನನ್ನು ವೇಶ್ಯಾವಾಟಿಕೆ ಮಾಡುವಂತೆ ಒತ್ತಾಯಿಸುತ್ತಿದ್ದಾರೆ, ವ್ಯಕ್ತಿಯೊಬ್ಬ ಅನುಚಿತವಾಗಿ ಸ್ಪರ್ಶಿಸುತ್ತಿದ್ದಾನೆ ಎಂಬುದಾಗಿ ವಾಟ್ಸಾಪ್ (WhatsApp Message) ಮಾಡಿದ್ದಾಳೆ. ಸಂತ್ರಸ್ತೆಯ ವಾಟ್ಸಾಪ್‌ ಸಂದೇಶದ ಸ್ಕ್ರೀನ್‌ಶಾಟ್‌ಗಳು ಜಾಲತಾಣದಲ್ಲಿ ಹರಿದಾಡುತ್ತಿವೆ. ಈ ಸಂದೇಶಗಳು ಸಾಯುವ ಮುನ್ನ ಮೃತ ಯುವತಿಯಿಂದಲೇ ಬಂದಿವೆ ಎಂಬುದನ್ನು ಪ್ರಾಥಮಿಕ ತನಿಖೆ ದೃಢಪಡಿಸಿದೆ. ಅದರ ಹೊರತಾಗಿಯೂ ವಿಧಿ ವಿಜ್ಞಾನ (Forensic Investigation) ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು (Police) ತಿಳಿಸಿದ್ದಾರೆ.

    ಸಂತ್ರಸ್ತ ಮಹಿಳೆಯಿಂದ ರೆಸಾರ್ಟ್ ಉದ್ಯೋಗಿಯೊಬ್ಬರಿಗೆ ಕರೆ ಮಾಡಿದ ಕಾಲ್ ರೆಕಾರ್ಡ್ ಕ್ಲಿಪ್ ಸಹ ಪೊಲೀಸರಿಗೆ ಲಭ್ಯವಾಗಿದೆ. ರೆಸಾರ್ಟ್ ಅತಿಥಿಗಳಿಗೆ ವಿಶೇಷ ಲೈಂಗಿಕ ಸೇವೆ ಒದಗಿಸುವಂತೆ ರೆಸಾರ್ಟ್ ಮಾಲೀಕ ಒತ್ತಡ ಹೇರುತ್ತಿದ್ದರು ಎಂಬ ಸ್ಫೋಟಕ ಸತ್ಯ ಆಡಿಯೋನಲ್ಲಿ ಕೇಳಿಬಂದಿದೆ ಎಂದು ಉತ್ತರಾಖಂಡದ ಉನ್ನತ ಪೊಲೀಸ್ ಅಶೋಕ್ ಕುಮಾರ್ ಹೇಳಿದ್ದಾರೆ.

    ಏನಿದು ಪ್ರಕರಣ?
    ಇತ್ತೀಚೆಗೆ ಉತ್ತರಾಖಂಡದ ಬಿಜೆಪಿ ಮುಖಂಡನ ಮಾಲೀಕತ್ವದಲ್ಲಿದ್ದ ರೆಸಾರ್ಟ್‌ನಲ್ಲಿ ಅಂಕಿತಾ ಭಂಡಾರಿ (19) ಯುವತಿ ಶವವಾಗಿ ಪತ್ತೆಯಾಗಿದ್ದಳು. ಈ ಕುರಿತು ತನಿಖೆ ಕೈಗೊಂಡಿರುವ ಪೊಲೀಸರು ಬಿಜೆಪಿ ಮುಖಂಡ ಸೇರಿದಂತೆ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಹೆಚ್ಚಿನ ತನಿಖೆ ನಡೆಯುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಯುವತಿ ಕೊಲೆ ಪ್ರಕರಣ- ಬಿಜೆಪಿ ನಾಯಕ ಪುತ್ರನ ರೆಸಾರ್ಟ್ ನೆಲಸಮ

    ಯುವತಿ ಕೊಲೆ ಪ್ರಕರಣ- ಬಿಜೆಪಿ ನಾಯಕ ಪುತ್ರನ ರೆಸಾರ್ಟ್ ನೆಲಸಮ

    ಡೆಹ್ರಾಡೂನ್: ರಿಸೆಪ್ಷನಿಸ್ಟ್ ಕೊಲೆ ಪ್ರಕರಣದ ಆರೋಪಿ ಆಗಿರುವ ಉತ್ತರಾಖಂಡದ ಋಷಿಕೇಶದಲ್ಲಿರವ ಬಿಜೆಪಿ (BJP) ನಾಯಕನ ಪುತ್ರ ಪುಲ್ಕಿತ್ ಆರ್ಯ ಒಡೆತನದ ವನತಾರಾ ರೆಸಾರ್ಟ್‌ನ್ನು (Resort) ಧ್ವಂಸಗೊಳಿಸಲಾಗಿದೆ.

    ಉತ್ತರಾಖಂಡದ (Uttarakhand) ಮುಖ್ಯಮಂತ್ರಿ ಪುಷ್ಕರ್ ಧಾಮಿ ರೆಸಾರ್ಟ್ ಧ್ವಂಸಕ್ಕೆ (Demolish) ಆದೇಶಿಸಿದರು. ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ನೀಡಿದ್ದ ಆದೇಶದ ಮೇರೆಗೆ ರೆಸಾರ್ಟ್ ಕೆಡವುವ ಕಾರ್ಯ ನಡೆಯುತ್ತಿದೆ ಎಂದು ಮುಖ್ಯಮಂತ್ರಿಗಳ ವಿಶೇಷ ಪ್ರಧಾನ ಕಾರ್ಯದರ್ಶಿ ಅಭಿನವ್ ಕುಮಾರ್ ತಿಳಿಸಿದ್ದಾರೆ.

    ಉತ್ತರಾಖಂಡದ ಪೌರಿ ಜಿಲ್ಲೆಯ ಋಷಿಕೇಶ ಬಳಿಯ ರೆಸಾರ್ಟ್‌ನಲ್ಲಿ ರಿಸೆಪ್ಷನಿಸ್ಟ್ ಆಗಿ ಕೆಲಸ ಮಾಡುತ್ತಿದ್ದ 19 ವರ್ಷದ ಯುವತಿಯನ್ನು ಹತ್ಯೆಗೈದ ಪ್ರಕರಣದಲ್ಲಿ ಬಿಜೆಪಿಯ ಹಿರಿಯ ನಾಯಕ ಹಾಗೂ ಮಾಜಿ ಸಚಿವ ವಿನೋದ್ ಆರ್ಯ ಅವರ ಪುತ್ರ ಪುಲ್ಕಿತ್ ಆರ್ಯನನ್ನು ಬಂಧಿಸಲಾಗಿದೆ. ಆಕೆಯ ಹತ್ಯೆಗೆ ವಿರೋಧಿಸಿ ಪ್ರತಿಭಟನೆಗಳು ನಡೆದಿದ್ದವು.

    ಯುವತಿ ಕಾಣೆಯಾಗಿದ್ದಾಳೆ ಎಂದು ಆಕೆ ಕುಟುಂಬದವರಂತೆ ಪೊಲೀಸ್‌ ಠಾಣೆಯಲ್ಲಿ ಪುಲ್ಕಿತ್‌ ಆರ್ಯ ದೂರು ದಾಖಲಿಸಿದ್ದರು. ಮೃತದೇಹವು ರೆಸಾರ್ಟ್‌ನ ನೀರಿನ ಕೊಳದಲ್ಲಿ ಪತ್ತೆಯಾಗಿದೆ. ರೆಸಾರ್ಟ್ ಬಳಿಯ ನೀರಿನ ಚಾನಲ್‌ನಲ್ಲಿ ಹುಡುಕಾಟ ನಡೆಯುತ್ತಿದೆ. ಆರೋಪಿಯ ತಂದೆ ಆಡಳಿತಾರೂಢ ಬಿಜೆಪಿ ಹಾಗೂ ಆರ್‌ಎಸ್‌ಎಸ್‌ಗೆ ಸೇರಿದವರಾಗಿದ್ದು, ಪ್ರಕರಣದಲ್ಲಿ ಪ್ರಭಾವ ಬೀರುವ ಸಾಧ್ಯತೆ ಇದೆ ಎಂದು ಆರೋಪಿಸಲಾಗಿದೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಇದನ್ನೂ ಓದಿ: ರಿಸೆಪ್ಷನಿಸ್ಟ್‌ ಆಗಿ ಕೆಲಸ ಮಾಡ್ತಿದ್ದ ಯುವತಿ ಹತ್ಯೆ – ಬಿಜೆಪಿ ಮಾಜಿ ಸಚಿವನ ಪುತ್ರ ಅರೆಸ್ಟ್‌

    ನಿನ್ನೆ ಜಿಲ್ಲಾ ಮ್ಯಾಜಿಸ್ಟ್ರೇಟ್ ಪ್ರಕರಣವನ್ನು ನಮಗೆ ವರ್ಗಾಯಿಸಿದೆ. ನಾವು ಅದನ್ನು 24 ಗಂಟೆಗಳಲ್ಲಿ ಪರಿಹರಿಸಿದ್ದೇವೆ. ರೆಸಾರ್ಟ್ ಮಾಲೀಕ ಮತ್ತು ಇತರ ಇಬ್ಬರು ಆರೋಪಿಗಳು ಎಂದು ತಿಳಿದುಬಂದಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಆರೋಪಿಗಳನ್ನು ಬಂಧಿಸಿದಾಗ ಪ್ರತಿಭಟನಾನಿರತ ಸ್ಥಳೀಯರು ಪೊಲೀಸರ ವಾಹನವನ್ನು ಸುತ್ತುವರಿದರು. ಅಲ್ಲದೇ ಪೊಲೀಸರ ಮೇಲೆ ಹಲ್ಲೆ ನಡೆಸಲು ಕೂಡ ಮುಂದಾದರು. ಇದನ್ನೂ ಓದಿ: 5 ದಿನ ನಾಪತ್ತೆಯಾಗಿದ್ದ ಯುವತಿ ರೆಸಾರ್ಟ್‌ನಲ್ಲಿ ಶವವಾಗಿ ಪತ್ತೆ- ಕಾಂಗ್ರೆಸ್ ಆರೋಪವೇನು?

    ಕೃತ್ಯದಲ್ಲಿ ಯಾರೇ ಭಾಗಿಯಾಗಿದ್ದರೂ ಕಠಿಣ ಕ್ರಮ ಕೈಗೊಳ್ಳಲಾಗುವುದು. ಇದು ಅತ್ಯಂತ ದುಃಖಕರ ಘಟನೆ, ಘೋರ ಅಪರಾಧ. ಪೊಲೀಸರು ಬಂಧನಕ್ಕೆ ಸಂಬಂಧಿಸಿದಂತೆ ಎಲ್ಲಾ ಕೆಲಸಗಳನ್ನು ಮಾಡಿದ್ದಾರೆ. ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು. ಅಪರಾಧಿ ಯಾರೇ ಆಗಿದ್ದರೂ ಬಿಡುವುದಿಲ್ಲ ಎಂದು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಭರವಸೆ ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ರಿಸೆಪ್ಷನಿಸ್ಟ್‌ ಆಗಿ ಕೆಲಸ ಮಾಡ್ತಿದ್ದ ಯುವತಿ ಹತ್ಯೆ – ಬಿಜೆಪಿ ಮಾಜಿ ಸಚಿವನ ಪುತ್ರ ಅರೆಸ್ಟ್‌

    ರಿಸೆಪ್ಷನಿಸ್ಟ್‌ ಆಗಿ ಕೆಲಸ ಮಾಡ್ತಿದ್ದ ಯುವತಿ ಹತ್ಯೆ – ಬಿಜೆಪಿ ಮಾಜಿ ಸಚಿವನ ಪುತ್ರ ಅರೆಸ್ಟ್‌

    ಡೆಹ್ರಾಡೂನ್:‌ ಉತ್ತರಾಖಂಡದ (Uttarakhand) ಪೌರಿ ಜಿಲ್ಲೆಯ ಋಷಿಕೇಶ ಬಳಿಯ ರೆಸಾರ್ಟ್‌ನಲ್ಲಿ ರಿಸೆಪ್ಷನಿಸ್ಟ್ ಆಗಿ ಕೆಲಸ ಮಾಡುತ್ತಿದ್ದ 19 ವರ್ಷದ ಯುವತಿಯನ್ನು ಹತ್ಯೆಗೈದ ಪ್ರಕರಣದಲ್ಲಿ ಬಿಜೆಪಿಯ ಹಿರಿಯ ನಾಯಕ ಹಾಗೂ ಮಾಜಿ ಸಚಿವ ವಿನೋದ್ ಆರ್ಯ (Vinod Arya) ಅವರ ಪುತ್ರ ಪುಲ್ಕಿತ್ ಆರ್ಯನನ್ನು (Pulkit arya) ಬಂಧಿಸಲಾಗಿದೆ.

    ಯುವತಿ ಕಾಣೆಯಾಗಿದ್ದಾಳೆ ಎಂದು ಆಕೆ ಕುಟುಂಬದವರಂತೆ ಪೊಲೀಸ್‌ ಠಾಣೆಯಲ್ಲಿ ಪುಲ್ಕಿತ್‌ ಆರ್ಯ ದೂರು ದಾಖಲಿಸಿದ್ದರು. ಆದರೆ ಇಬ್ಬರು ಸಿಬ್ಬಂದಿಯೊಂದಿಗೆ ಸೇರಿಕೊಂಡು ಕೊಲೆ ಮಾಡಿದ್ದಾರೆಂದು ಪೊಲೀಸ್‌ ತನಿಖೆ ವೇಳೆ ಗೊತ್ತಾಗಿದೆ. ಕೃತ್ಯದಲ್ಲಿ ಭಾಗಿಯಾಗಿದ್ದ ಇಬ್ಬರು ಸಿಬ್ಬಂದಿಯನ್ನೂ ಬಂಧಿಸಲಾಗಿದೆ. ಯುವತಿ ಕುಟುಂಬದವರು ಪುಲ್ಕಿತ್‌ ಆರ್ಯನ ಬಗ್ಗೆ ಶಂಕೆಯನ್ನು ವ್ಯಕ್ತಪಡಿಸಿತ್ತು. ಇದನ್ನೂ ಓದಿ: 5 ದಿನ ನಾಪತ್ತೆಯಾಗಿದ್ದ ಯುವತಿ ರೆಸಾರ್ಟ್‌ನಲ್ಲಿ ಶವವಾಗಿ ಪತ್ತೆ- ಕಾಂಗ್ರೆಸ್ ಆರೋಪವೇನು?

    ಮೃತದೇಹವು ರೆಸಾರ್ಟ್‌ನ ನೀರಿನ ಕೊಳದಲ್ಲಿ ಪತ್ತೆಯಾಗಿದೆ. ರೆಸಾರ್ಟ್ ಬಳಿಯ ನೀರಿನ ಚಾನಲ್‌ನಲ್ಲಿ ಹುಡುಕಾಟ ನಡೆಯುತ್ತಿದೆ. ಆರೋಪಿಯ ತಂದೆ ಆಡಳಿತಾರೂಢ ಬಿಜೆಪಿ ಹಾಗೂ ಆರ್‌ಎಸ್‌ಎಸ್‌ಗೆ ಸೇರಿದವರಾಗಿದ್ದು, ಪ್ರಕರಣದಲ್ಲಿ ಪ್ರಭಾವ ಬೀರುವ ಸಾಧ್ಯತೆ ಇದೆ ಎಂದು ಆರೋಪಿಸಲಾಗಿದೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

    ನಿನ್ನೆ ಜಿಲ್ಲಾ ಮ್ಯಾಜಿಸ್ಟ್ರೇಟ್ ಪ್ರಕರಣವನ್ನು ನಮಗೆ ವರ್ಗಾಯಿಸಿದೆ. ನಾವು ಅದನ್ನು 24 ಗಂಟೆಗಳಲ್ಲಿ ಪರಿಹರಿಸಿದ್ದೇವೆ. ರೆಸಾರ್ಟ್ ಮಾಲೀಕ ಮತ್ತು ಇತರ ಇಬ್ಬರು ಆರೋಪಿಗಳು ಎಂದು ತಿಳಿದುಬಂದಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಆರೋಪಿಗಳನ್ನು ಬಂಧಿಸಿದಾಗ ಪ್ರತಿಭಟನಾನಿರತ ಸ್ಥಳೀಯರು ಪೊಲೀಸರ ವಾಹನವನ್ನು ಸುತ್ತುವರಿದರು. ಅಲ್ಲದೇ ಪೊಲೀಸರ ಮೇಲೆ ಹಲ್ಲೆ ನಡೆಸಲು ಕೂಡ ಮುಂದಾದರು.

    ಆರೋಪಿಗಳು ಆರ್‌ಎಸ್‌ಎಸ್‌, ಬಿಜೆಪಿ ಜೊತೆಗಿನ ಸಂಬಂಧದಿಂದಾಗಿ ಪೊಲೀಸರು ಪ್ರಕರಣದಲ್ಲಿ ನಿರ್ಲಕ್ಷ್ಯ ವಹಿಸಿದ್ದಾರೆ. ಇದು ಭಯಾನಕ ಕೃತ್ಯವಾಗಿದೆ. ಸೆಪ್ಟೆಂಬರ್ 18 ರಂದು ಹುಡುಗಿ ಕಾಣೆಯಾದರೆ, ಸೆಪ್ಟೆಂಬರ್ 21 ರಂದು ಪೊಲೀಸರು ಎಫ್ಐಆರ್ ಅನ್ನು ಏಕೆ ದಾಖಲಿಸಿದರು? ಬಿಜೆಪಿ ಮತ್ತು ಆರ್‌ಎಸ್‌ಎಸ್ ನಾಯಕರ ಈ ನಿರ್ಲಜ್ಜ ಅಧಿಕಾರ ದುರುಪಯೋಗ ಎಲ್ಲಿಯವರೆಗೆ ಮುಂದುವರಿಯುತ್ತದೆ ಎಂದು ರಾಜ್ಯ ಕಾಂಗ್ರೆಸ್ ವಕ್ತಾರ ಗರಿಮಾ ಮೆಹ್ರಾ ದಸೌನಿ ಕಿಡಿಕಾರಿದ್ದಾರೆ. ಇದನ್ನೂ ಓದಿ: ಕೋಲಾರದಲ್ಲಿ ನಕಲಿ ಡಾಕ್ಟರ್ ಹಾವಳಿ- 10ನೇ ತರಗತಿ ಫೇಲ್ ಆದವ್ರು ಇಲ್ಲಿ ವೈದ್ಯರು

    ಕೃತ್ಯದಲ್ಲಿ ಯಾರೇ ಭಾಗಿಯಾಗಿದ್ದರೂ ಕಠಿಣ ಕ್ರಮ ಕೈಗೊಳ್ಳಲಾಗುವುದು. ಇದು ಅತ್ಯಂತ ದುಃಖಕರ ಘಟನೆ, ಘೋರ ಅಪರಾಧ. ಪೊಲೀಸರು ಬಂಧನಕ್ಕೆ ಸಂಬಂಧಿಸಿದಂತೆ ಎಲ್ಲಾ ಕೆಲಸಗಳನ್ನು ಮಾಡಿದ್ದಾರೆ. ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು. ಅಪರಾಧಿ ಯಾರೇ ಆಗಿದ್ದರೂ ಬಿಡುವುದಿಲ್ಲ ಎಂದು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಭರವಸೆ ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • 5 ದಿನ ನಾಪತ್ತೆಯಾಗಿದ್ದ ಯುವತಿ ರೆಸಾರ್ಟ್‌ನಲ್ಲಿ ಶವವಾಗಿ ಪತ್ತೆ- ಕಾಂಗ್ರೆಸ್ ಆರೋಪವೇನು?

    5 ದಿನ ನಾಪತ್ತೆಯಾಗಿದ್ದ ಯುವತಿ ರೆಸಾರ್ಟ್‌ನಲ್ಲಿ ಶವವಾಗಿ ಪತ್ತೆ- ಕಾಂಗ್ರೆಸ್ ಆರೋಪವೇನು?

    ಡೆಹ್ರಾಡೂನ್: ಕಳೆದ 5 ದಿನಗಳಿಂದ ನಾಪತ್ತೆಯಾಗಿದ್ದ ಯುವತಿ (Woman) ತಾನು ಕೆಲಸ ಮಾಡುತ್ತಿದ್ದ ರೆಸಾರ್ಟ್‌ನಲ್ಲಿಯೇ(Resort) ಶವವಾಗಿ ಪತ್ತೆಯಾಗಿದ್ದು, ಘಟನೆಗೆ ಸಂಬಂಧಿಸಿದಂತೆ ರೆಸಾರ್ಟ್ ಮಾಲೀಕ, ಮ್ಯಾನೇಜರ್ ಸೇರಿದಂತೆ ಮೂವರನ್ನು ಬಂಧಿಸಲಾಗಿದೆ. ಆದರೆ ಆರೋಪಿಗಳಲ್ಲೊಬ್ಬ ಬಿಜೆಪಿಯೊಂದಿಗೆ (BJP) ಸಂಪರ್ಕ ಹೊಂದಿರುವುದಾಗಿ ಕಾಂಗ್ರೆಸ್ (Congress) ಆರೋಪಿಸಿದ್ದು, ಇದೀಗ ಘಟನೆ ರಾಜಕೀಯ ತಿರುವು ಪಡೆದುಕೊಂಡಿದೆ.

    ಪೌರಿ ಗರ್ವಾಲ್ ನಿವಾಸಿ ಅಂಕಿತಾ ಭಂಡಾರಿ ಎಂದು ಗುರುತಿಸಲಾದ ಯುವತಿ ಲಕ್ಷ್ಮಣ್ ಜುಲಾ ಪ್ರದೇಶದ ಖಾಸಗಿ ರೆಸಾರ್ಟ್‌ನಲ್ಲಿ ಸ್ವಾಗತಕಾರಿಣಿಯಾಗಿ(Receptionist) ಕೆಲಸ ಮಾಡುತ್ತಿದ್ದಳು. ಸೆಪ್ಟೆಂಬರ್ 18 ರಂದು ಆಕೆ ನಾಪತ್ತೆಯಾಗಿದ್ದ ಹಿನ್ನೆಲೆಯಲ್ಲಿ ಆಕೆಯ ಕುಟುಂಬದವರು ಪೊಲೀಸರಿಗೆ ದೂರು ನೀಡಿದ್ದರು. ಇದನ್ನೂ ಓದಿ: ಬಂಧಿತ ಶಂಕಿತ ಉಗ್ರ ಮಾಝ್ ತಂದೆ ನಿಧನ

    ಯುವತಿಯ ಕುಟುಂಬದ ದೂರಿನ ಆಧಾರದ ಮೇಲೆ, 3 ದಿನಗಳ ಬಳಿಕ ಸೆಪ್ಟೆಂಬರ್ 21 ರಂದು ಎಫ್‌ಐಆರ್ ದಾಖಲಿಸಲಾಗಿದೆ. ಯುವತಿ ನಾಪತ್ತೆಯಾದ ದಿನದಿಂದ ರೆಸಾರ್ಟ್ ಮಾಲೀಕ ಮತ್ತು ಇತರ ಇಬ್ಬರು ಆರೋಪಿಗಳು ತಲೆಮರೆಸಿಕೊಂಡಿರುವುದಾಗಿ ಪೊಲೀಸರು ಬಳಿಕ ತಿಳಿಸಿದ್ದಾರೆ.

    ಇಂದು ಪೊಲೀಸರು ರೆಸಾರ್ಟ್ ಮಾಲೀಕ ವಿನೋದ್ ಆರ್ಯ, ಸಹಾಯಕ ವ್ಯವಸ್ಥಾಪಕ ಅಂಕಿತ್ ಗುಪ್ತಾ ಮತ್ತು ವ್ಯವಸ್ಥಾಪಕ ಸೌರಭ್ ಭಾಸ್ಕರ್‌ನನ್ನು ಬಂಧಿಸಿದ್ದಾರೆ. ಇದಾದ ಬಳಿಕ ಉತ್ತರಾಖಂಡ ಕಾಂಗ್ರೆಸ್‌ನ ವಕ್ತಾರ ಗರಿಮಾ ಧಸೋನಿ, ಪ್ರಕರಣದ ಆರೋಪಿಗಳಲ್ಲಿ ಒಬ್ಬನಾದ ವಿನೋದ್ ಆರ್ಯ ಬಿಜೆಪಿಯೊಂದಿಗೆ ಸಂಪರ್ಕ ಹೊಂದಿರುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಅಂಗಾಂಗ ದಾನ ಮಾಡಿ 9 ಜೀವಗಳಿಗೆ ಬೆಳಕಾದ ರಕ್ಷಿತಾ ಕುಟುಂಬಕ್ಕೆ ಸರ್ಕಾರದಿಂದ 8 ಲಕ್ಷ ರೂ. ಪರಿಹಾರ

    Live Tv
    [brid partner=56869869 player=32851 video=960834 autoplay=true]

  • ಅಗ್ನಿವೀರ್ ಪರೀಕ್ಷೆಯಲ್ಲಿ ಫೇಲ್‌- ಸೇನಾ ಆಕಾಂಕ್ಷಿ ಆತ್ಮಹತ್ಯೆ

    ಅಗ್ನಿವೀರ್ ಪರೀಕ್ಷೆಯಲ್ಲಿ ಫೇಲ್‌- ಸೇನಾ ಆಕಾಂಕ್ಷಿ ಆತ್ಮಹತ್ಯೆ

    ಡೆಹ್ರಾಡೂನ್: ಅಗ್ನಿವೀರ್ ನೇಮಕಾತಿ ಪರೀಕ್ಷೆಯಲ್ಲಿ ಆಯ್ಕೆಯಾಗದ ಹಿನ್ನೆಲೆಯಲ್ಲಿ ಸೇನಾ ಆಕಾಂಕ್ಷಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಉತ್ತರಾಖಂಡದಲ್ಲಿ ನಡೆದಿದೆ.

    ಮೃತರನ್ನು ಪೌರಿ ಗರ್ವಾಲ್ ಜಿಲ್ಲೆಯ ನೌಗಾಂವ್ ಕಮಂದ ಗ್ರಾಮದ ನಿವಾಸಿ ಸುಮಿತ್ ಕುಮಾರ್(23) ಎಂದು ಗುರುತಿಸಲಾಗಿದೆ. ಅಗ್ನಿವೀರ್ ನೇಮಕಾತಿ ಆಯ್ಕೆಯಲ್ಲಿ ಪಾಲ್ಗೊಳ್ಳಲು ಕೋಟ್‍ದ್ವಾರಕ್ಕೆ ತೆರಳಿದ್ದರು. ಆದರೆ ಅಲ್ಲಿ ವಿಫಲರಾದರು. ಮುಂದಿನ ಬಾರಿ ವಯಸ್ಸಿನ ಕಾರಣದಿಂದ ಮತ್ತೆ ಅವಕಾಶವನ್ನು ಪಡೆಯಲು ಸಾಧ್ಯವಿಲ್ಲ ಎಂದು ಸುಮಿತ್ ಮನನೊಂದಿದ್ದಾರೆ.

    ಈ ಹಿನ್ನೆಲೆಯಲ್ಲಿ ಮನೆಗೆ ಬಂದ ಸುಮಿತ್ ಯಾರೊಂದಿಗೂ ಮಾತನಾಡದೇ ತನ್ನ ಕೋಣೆಗೆ ಹೋಗಿ ಬಾಗಿಲನ್ನು ಹಾಕಿಕೊಂಡಿದ್ದರು. ಮನೆಯ ಸದಸ್ಯರು ಆಯ್ಕೆ ಆಗದಿದ್ದಕ್ಕೆ ಬೇಸರ ಮಾಡಿಕೊಂಡಿರಬೇಕು. ಸ್ವಲ್ಪ ಸಮಯದ ನಂತರ ಸರಿ ಹೋಗುತ್ತಾನೆ ಎಂದುಕೊಂಡಿದ್ದಾರೆ. ಇದನ್ನೂ ಓದಿ: ಮಕ್ಕಳ ಬುದ್ಧಿ ಕೆಡಿಸಿ ದೂರು: ಮುರುಘಾ ಮಠದ ವಕೀಲ ವಿಶ್ವನಾಥಯ್ಯ

    ಆದರೆ ಮಾರನೇ ದಿನವಾದರೂ ಬಾಗಿಲು ತೆಗೆಯದಿದ್ದನ್ನು ಗಮನಿಸಿದ ಕುಟುಂಬಸ್ಥರು ಸುಮಿತ್ ರೂಮ್‍ನ ಬಾಗಿಲನ್ನು ಒಡೆದಿದ್ದಾರೆ. ಆಗ ಸುಮಿತ್‍ನ ಮೃತದೇಹ ಸೀಲಿಂಗ್ ಫ್ಯಾನ್‍ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಸಂಬಂಧ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ.

    ಅಗ್ನಿಪಥ್ ಯೋಜನೆಯಡಿ ಗರ್ವಾಲ್ ರೈಫಲ್ಸ್ ಅಗ್ನಿವೀರ್ ಆರ್ಮಿ ನೇಮಕಾತಿ ಪ್ರಕ್ರಿಯೆ ಆ. 19 ರಿಂದ ಆ. 31 ರವರೆಗೆ ಕೋಟ್‍ದ್ವಾರದಲ್ಲಿ ನಡೆಯುತ್ತಿದೆ. ಗರ್ವಾಲ್ ವಿಭಾಗದ ಏಳು ಜಿಲ್ಲೆಗಳಿಂದ 63,000ಕ್ಕೂ ಹೆಚ್ಚು ಸೇನಾ ಆಕಾಂಕ್ಷಿಗಳು ನೋಂದಾಯಿಸಿಕೊಂಡಿದ್ದಾರೆ. ಇದನ್ನೂ ಓದಿ: 54 ವರ್ಷ, ಮಾಡಿರೋದು 164 + ಕಳ್ಳತನ – ಭೂಪನಿಗಿದ್ದಾರೆ ಮೂವರು ಹೆಂಡ್ತಿರು, 7 ಮಕ್ಳು

    Live Tv
    [brid partner=56869869 player=32851 video=960834 autoplay=true]

  • ನಾಲ್ಕು ರಾಜ್ಯಗಳಲ್ಲಿ ರಣ ಮಳೆ – 31 ಮಂದಿ ದಾರುಣ ಸಾವು

    ನಾಲ್ಕು ರಾಜ್ಯಗಳಲ್ಲಿ ರಣ ಮಳೆ – 31 ಮಂದಿ ದಾರುಣ ಸಾವು

    ಶಿಮ್ಲಾ: ಹಿಮಾಚಲ ಪ್ರದೇಶ, ಉತ್ತರಾಖಂಡ, ಓಡಿಶಾ ಹಾಗೂ ಜಾರ್ಖಂಡ್ ರಾಜ್ಯಗಳಲ್ಲಿ ರಣ ಮಳೆಯಿಂದಾಗಿ ಪ್ರವಾಹ ಉಂಟಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಹಲವೆಡೆ ಭೂಕುಸಿತದಿಂದ 31 ಮಂದಿ ದುರ್ಮರಣಕ್ಕೀಡಾಗಿದ್ದಾರೆ.

    ಹಿಮಾಚಲ ಪ್ರದೇಶ ಒಂದರಲ್ಲೇ 22 ಮಂದಿ ಮೃತಪಟ್ಟಿದ್ದು, ಉತ್ತರಾಖಂಡ, ಒಡಿಶಾ ಜಿಲ್ಲೆಗಳಲ್ಲಿ ತಲಾ 4 ಹಾಗೂ ಜಾರ್ಖಂಡ್‌ನಲ್ಲಿ ಒಬ್ಬರು ಮೃತಪಟ್ಟಿದ್ದಾರೆ. ಮಳೆಯಿಂದಾಗಿ ಹಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದ್ದು, ವಾಹನದಟ್ಟಣೆ ಹೆಚ್ಚಾಗಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: 100 ಲೋನ್ ಆ್ಯಪ್‍ಗಳಿಂದ 500 ಕೋಟಿ ರೂ. ವ್ಯವಹಾರ – ಗ್ರಾಹಕರ ಮಾಹಿತಿ ಚೀನಾಗೆ ರವಾನಿಸಿದ ಗ್ಯಾಂಗ್ ಅರೆಸ್ಟ್

    ಸದ್ಯ ಮಳೆಯ ಆರ್ಭಟ ಮುಂದುವರಿದಿದ್ದು, ನಾಲ್ಕು ರಾಜ್ಯಗಳಲ್ಲಿ ಸುಮಾರು 20ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ. ಮೃತದೇಹಗಳನ್ನು ಈವರೆಗೂ ಹೊರಗೆ ತೆಗೆಯಲು ಆಗಿಲ್ಲ. ಪ್ರವಾಹ ಮತ್ತು ಭೂಕುಸಿತದ ನಂತರ ಮಂಡಿ ಜಿಲ್ಲೆಯ ಹಲವು ರಸ್ತೆಗಳ ಸಂಪರ್ಕ ಕಡಿತಗೊಂಡಿದೆ. ಅನೇಕ ವಾಹನಗಳು ಹಾನಿಯಾಗಿವೆ ಎಂದು ಅವರು ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಉತ್ತರಾಖಂಡದಲ್ಲಿ ಮೇಘಸ್ಫೋಟ – ರಕ್ಷಣೆಗೆ ಧಾವಿಸಿದ ವಿಪತ್ತು ನಿರ್ವಹಣಾ ತಂಡ

    ಉತ್ತರಾಖಂಡದಲ್ಲಿ ಮೇಘಸ್ಫೋಟ – ರಕ್ಷಣೆಗೆ ಧಾವಿಸಿದ ವಿಪತ್ತು ನಿರ್ವಹಣಾ ತಂಡ

    ಡೆಹ್ರಾಡೂನ್: ಉತ್ತರಾಖಂಡದ ಡೆಹ್ರಾಡೂನ್ ಜಿಲ್ಲೆಯ ರಾಯ್‌ಪುರ ಬ್ಲಾಕ್‌ನಲ್ಲಿ ಶನಿವಾರ ನಸುಕಿನ ವೇಳೆ ಮೇಘಸ್ಫೋಟ ಸಂಭವಿಸಿದೆ. ರಕ್ಷಣಾ ಕಾರ್ಯಕ್ಕೆ ರಾಜ್ಯ ವಿಪತ್ತು ನಿರ್ವಹಣಾ ತಂಡ(ಎನ್‌ಡಿಆರ್‌ಎಫ್) ಸ್ಥಳಕ್ಕೆ ಧಾವಿಸಿದೆ.

    ಜಿಲ್ಲೆಯ ಸರ್ಖೇತ್ ಗ್ರಾಮದಲ್ಲಿ ಇಂದು ಮುಂಜಾನೆ 2:45 ಕ್ಕೆ ಮೇಘಸ್ಫೋಟವಾಗಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ. ಗ್ರಾಮದಲ್ಲಿ ಸಿಲುಕಿಕೊಂಡಿದ್ದ ಎಲ್ಲಾ ಜನರನ್ನು ರಕ್ಷಿಸಲಾಗುತ್ತಿದ್ದು, ಕೆಲವರನ್ನು ಹತ್ತಿರದ ರೆಸಾರ್ಟ್‌ಗೆ ಆಶ್ರಯಕ್ಕೆ ಕರೆದುಕೊಂಡು ಹೋಗಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ನಿನ್ನೆಯಿಂದ ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಡೆಹ್ರಾಡೂನ್‌ನ ಪ್ರಸಿದ್ಧ ತಪಕೇಶ್ವರ ಮಹಾದೇವ ದೇವಸ್ಥಾನದ ಬಳಿ ಹರಿಯುವ ತಾಮಸಾ ನದಿ ಭೀಕರ ಸ್ವರೂಪ ಪಡೆದುಕೊಂಡಿದೆ. ಇದರಿಂದಾಗಿ ವೈಷ್ಣೋದೇವಿ ಗುಹೆ ಯೋಗ ದೇವಾಲಯ ಮತ್ತು ತಪಕೇಶ್ವರ ಮಹಾದೇವ ದೇವಾಲಯದ ಸಂಪರ್ಕ ಕಡಿತಗೊಂಡಿದೆ. ಸದ್ಯ ಯಾವುದೇ ಪ್ರಾಣ ಅಥವಾ ಆಸ್ತಿ-ಪಾಸ್ತಿಗೆ ಹಾನಿಯಾಗಿಲ್ಲ ಎಂದು ದೇವಸ್ಥಾನದ ಸಂಸ್ಥಾಪಕ ಆಚಾರ್ಯ ಬಿಪಿನ್ ಜೋಶಿ ತಿಳಿಸಿದ್ದಾರೆ. ಇದನ್ನೂ ಓದಿ: ಮಥುರಾ ದೇವಾಲಯದಲ್ಲಿ ಜನದಟ್ಟಣೆ – ಉಸಿರುಗಟ್ಟಿ ಇಬ್ಬರ ಸಾವು

    ಈ ನಡುವೆ ಭಾರೀ ಮಳೆಯಿಂದಾಗಿ ಇಂದು ಬೆಳಗ್ಗೆ ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯ ಕತ್ರಾ ಪಟ್ಟಣದ ಮಾತಾ ವೈಷ್ಣೋದೇವಿ ದೇಗುಲದ ಬಳಿ ಹಠಾತ್ ಪ್ರವಾಹ ಉಂಟಾಗಿದೆ. ಪ್ರವಾಹದ ಹಿನ್ನೆಲೆಯಲ್ಲಿ ಮಾತಾ ವೈಷ್ಣೋದೇವಿ ದೇವಸ್ಥಾನದಲ್ಲಿ ಭಕ್ತಾದಿಗಳ ಸಂಚಾರವನ್ನು ಸ್ವಲ್ಪ ಕಾಲ ಸ್ಥಗಿತಗೊಳಿಸಲಾಯಿತು. ಇದನ್ನೂ ಓದಿ: ಭಾರತ ನನ್ನ ಕುಟುಂಬದಂತೆ: ಓದಿನ ನೆರವಿಗಾಗಿ ಅಫ್ಘನ್ ಯುವತಿಯಿಂದ ಮೋದಿಗೆ ಮನವಿ

    Live Tv
    [brid partner=56869869 player=32851 video=960834 autoplay=true]