Tag: Uttarakhand

  • ತಾಯಿಗೆ ಸರ್ಪ್ರೈಸ್‌ ಕೊಡಲು ತೆರಳ್ತಿದ್ದಾಗಲೇ ದುರಂತ – ಪಂತ್ ಅಭಿಮಾನಿಗಳ ಆಕ್ರಂದನ

    ತಾಯಿಗೆ ಸರ್ಪ್ರೈಸ್‌ ಕೊಡಲು ತೆರಳ್ತಿದ್ದಾಗಲೇ ದುರಂತ – ಪಂತ್ ಅಭಿಮಾನಿಗಳ ಆಕ್ರಂದನ

    ಡೆಹ್ರಾಡೂನ್: ಟೀಂ ಇಂಡಿಯಾ (Team India) ಸ್ಟಾರ್ ಆಟಗಾರ ರಿಷಭ್ ಪಂತ್ (Rishabh Pant) ಪ್ರಯಾಣಿಸುತ್ತಿದ್ದ ಕಾರು ಭೀಕರ ಅಪಘಾತಕ್ಕೀಡಾಗಿದ್ದು, ಪಂತ್ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ತನ್ನ ತಾಯಿಯೊಂದಿಗೆ ಹೊಸವರ್ಷ ಆಚರಿಸಲು ತೆರಳುತ್ತಿದ್ದ ವೇಳೆಯೇ ದುರಂತ ಸಂಭವಿಸಿದೆ.

    ಅತೀ ವೇಗವೇ ಅಪಘಾತಕ್ಕೆ ಕಾರಣ: ಉತ್ತರಾಖಂಡದಿಂದ (Uttarakhand) ದೆಹಲಿಗೆ ಹಿಂದಿರುಗುತ್ತಿದ್ದ ವೇಳೆ ಹಮ್ಮದ್‌ಪುರ ಝಾಲ್ ಬಳಿ ರೂರ್ಕಿಯ ನರ್ಸನ್ ಗಡಿಯಲ್ಲಿ ಕಾರು ಡಿವೈಡರ್‌ಗೆ ಡಿಕ್ಕಿ (Car Accident) ಹೊಡೆದು, ಪಂತ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಆದ್ರೆ ರಾಕೆಟ್ ವೇಗದಲ್ಲಿ ಕಾರು ಚಲಿಸುತ್ತಿದ್ದದ್ದೇ ರಿಷಭ್ ಪಂತ್‌ಗೆ ಮುಳುವಾಯ್ತು ಎಂದು ಹೇಳಲಾಗ್ತಿದೆ. ಅಪಘಾತದ ಸಂದರ್ಭದಲ್ಲಿ ರಿಷಭ್ ಚಲಿಸುತ್ತಿದ್ದ `ಮರ್ಸಿಡೀಸ್ ಎಎಂಜಿ ಜಿಎಲ್‌ಇ-43 ಕೂಪೆ’ (Mercedes-AMG GLE43 Coupe) ಕಾರು ರಾಕೆಟ್ ವೇಗದಲ್ಲಿತ್ತು ಎನ್ನಲಾಗಿದೆ. ಅಪಘಾತದ ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದೀಗ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    ರಿಷಭ್ ಪಂತ್ ತನ್ನ ತಾಯಿಗೆ ಸರ್ಪ್ರೈಸ್‌ ಕೊಡಬೇಕು, ತಾಯಿಯೊಂದಿಗೆ ಹೊಸ ವರ್ಷದ ಸಂಭ್ರಮ ಕಳೆಯಬೇಕು ಎಂದು ಮರ್ಸಿಡೀಸ್ ಎಎಂಜಿ ಜಿಎಲ್‌ಇ-43 ಕೂಪೆ (Mercedes-AMG GLE43 Coupe) ಕಾರಿನಲ್ಲಿ ತೆರಳುತ್ತಿದ್ದರು. ಈ ವೇಳೆ ನಿದ್ರೆ ಮಾಡುವಂತಾಗಿದೆ. ಇದರಿಂದ ನಿಯಂತ್ರಣ ಕಳೆದುಕೊಂಡ ಕಾರು ಅಪಘಾತಕ್ಕಿಡಾಗಿದೆ. ಬಳಿಕ ಕಾರಿನ ಕಿಟಕಿ ಗಾಜನ್ನು ಒಡೆದು ಪಂತ್ ಹೊರಗೆ ಬಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಸದ್ಯ ಅವರನ್ನು ಡೆಹ್ರಾಡೂನ್ ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ತಲೆ, ಬೆನ್ನು ಹಾಗೂ ಕಾಲಿನ ಭಾಗಕ್ಕೆ ಗಾಯಗಳಾಗಿದ್ದು, ಪ್ರಜ್ಞೆ ಕಳೆದುಕೊಂಡಿದ್ದಾರೆ. ಗಂಭೀರ ಸ್ಥಿತಿ ಎದುರಾಗಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಇದನ್ನೂ ಓದಿ: ಭೀಕರ ಕಾರು ಅಪಘಾತ- ಟೀಂ ಇಂಡಿಯಾ ಆಟಗಾರ ರಿಷಭ್ ಪಂತ್ ಸ್ಥಿತಿ ಗಂಭೀರ

    ಅಭಿಮಾನಿಗಳ ಆಕ್ರಂದನ: ಕಾರು ಅಪಘಾತಕ್ಕೀಡಾಗಿರುವ ರಿಷಭ್ ಪಂತ್ ಶೀಘ್ರವೇ ಗುಣಮುಖರಾಗುವಂತೆ ಅಭಿಮಾನಿಗಳು ಅಲವತ್ತುಕೊಂಡಿದ್ದಾರೆ. ಜಾಲತಾಣದಲ್ಲಿ ಪಂತ್ ಅವರ ಭಾವಚಿತ್ರವನ್ನು ಹಂಚಿಕೊಂಡಿದ್ದು, ಕಣ್ಣೀರಿಟ್ಟಿದ್ದಾರೆ. ಇದನ್ನೂ ಓದಿ: ಫುಟ್ಬಾಲ್ ಲೆಜೆಂಡ್ ಪೀಲೆ ಇನ್ನಿಲ್ಲ

    Live Tv
    [brid partner=56869869 player=32851 video=960834 autoplay=true]

  • ಭೀಕರ ಕಾರು ಅಪಘಾತ- ಟೀಂ ಇಂಡಿಯಾ ಆಟಗಾರ ರಿಷಭ್ ಪಂತ್ ಸ್ಥಿತಿ ಗಂಭೀರ

    ಭೀಕರ ಕಾರು ಅಪಘಾತ- ಟೀಂ ಇಂಡಿಯಾ ಆಟಗಾರ ರಿಷಭ್ ಪಂತ್ ಸ್ಥಿತಿ ಗಂಭೀರ

    ಡೆಹ್ರಾಡೂನ್: ಟೀಂ ಇಂಡಿಯಾ (Team India) ಆಟಗಾರ ರಿಷಭ್ ಪಂತ್ (Rishabh Pant) ಅವರು ಪ್ರಯಾಣಿಸುತ್ತಿದ್ದ ಕಾರು ಭೀಕರ ಅಪಘಾತಕ್ಕೀಡಾಗಿದ್ದು (Car Accident) ಪಂತ್ ಸ್ಥಿತಿ ಗಂಭೀರವಾಗಿದೆ.

    ದೆಹಲಿಯಿಂದ ಉತ್ತರಾಖಂಡದಲ್ಲಿರುವ (Uttarakhand) ತಮ್ಮ ನಿವಾಸಕ್ಕೆ ಹಿಂದಿರುಗುತ್ತಿದ್ದ ವೇಳೆ ಹಮ್ಮದ್‌ಪುರ ಝಾಲ್ ಬಳಿ ರೂರ್ಕಿಯ ನರ್ಸನ್ ಗಡಿಯಲ್ಲಿ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದು, ಪಂತ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಸದ್ಯ ಅವರನ್ನು ದೆಹಲಿಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ಲಾಸ್ಟಿಕ್ ಸರ್ಜರಿಯ (Plastic Surgery) ಅವಶ್ಯಕತೆ ಇರುವುದಾಗಿ ವರದಿಯಾಗಿದೆ.

    ರಿಷಭ್ ಪಂತ್ ಅವರ ತಲೆ (ಹಣೆಯ ಭಾಗ), ಬೆನ್ನು, ಕಾಲಿಗೆ ಗಂಭೀರ ಪೆಟ್ಟಾಗಿದ್ದು, ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಸಕ್ಷಮ್ ಆಸ್ಪತ್ರೆಯ ಅಧ್ಯಕ್ಷ ಡಾ. ಸುಶೀಲ್ ನಗರ್ ತಿಳಿಸಿದ್ದಾರೆ. ಇದನ್ನೂ ಓದಿ: ಟಿ20ಗೆ ಪಾಂಡ್ಯ ನಾಯಕ, ಸೂರ್ಯ ಉಪನಾಯಕ – ಟೀಂ ಇಂಡಿಯಾದಲ್ಲಿ ಪಂತ್‍ಗಿಲ್ಲ ಸ್ಥಾನ

    ಪ್ರತ್ಯಕ್ಷದರ್ಶಿಗಳ ಪ್ರಕಾರ, ರಿಷಭ್ ಪ್ರಯಾಣಿಸುತ್ತಿದ್ದ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದ ನಂತರ ಬೆಂಕಿ ಹೊತ್ತಿಕೊಂಡಿದೆ. ನಂತರ ಹರಸಾಹಸ ಪಟ್ಟು ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಯಿತು. ಇದನ್ನೂ ಓದಿ: ಆರ್‌ಎಸ್‍ಎಸ್ ಭಾರತೀಯ ಸಂಸ್ಕೃತಿ, ಮೌಲ್ಯಗಳನ್ನು ಶ್ರೀಮಂತಗೊಳಿಸುತ್ತಿದೆ: ರವೀಂದ್ರ ಜಡೇಜಾ

    ಸತತ ಬ್ಯಾಟಿಂಗ್ ವೈಫಲ್ಯ ಕಂಡಿದ್ದ ರಿಷಭ್ ಬಾಂಗ್ಲಾದೇಶದ (Bangladesh) ಟೆಸ್ಟ್ ಸರಣಿಯಲ್ಲಿ ಸಮಾಧಾನಕರ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು.

    Live Tv
    [brid partner=56869869 player=32851 video=960834 autoplay=true]

  • ನೆರೆಯ ನೇಪಾಳದಲ್ಲಿ 5.3 ತೀವ್ರತೆಯ ಭೂಕಂಪ – ಉತ್ತರಾಖಂಡದಲ್ಲೂ ಕಂಪಿಸಿದ ಅನುಭವ

    ನೆರೆಯ ನೇಪಾಳದಲ್ಲಿ 5.3 ತೀವ್ರತೆಯ ಭೂಕಂಪ – ಉತ್ತರಾಖಂಡದಲ್ಲೂ ಕಂಪಿಸಿದ ಅನುಭವ

    ಕಠ್ಮಂಡು: ನೆರೆಯ ದೇಶ ನೇಪಾಳದಲ್ಲಿ (Nepal) ಬುಧವಾರ ಮುಂಜಾನೆ 4.7 ಹಾಗೂ 5.3 ತೀವ್ರತೆಯ 2 ಬಾರಿ ಭೂಕಂಪನ (Earthquake) ಸಂಭವಿಸಿದೆ ಎಂದು ನೇಪಾಳದ ಭೂಕಂಪ ಮಾನಿಟರಿಂಗ್ ಹಾಗೂ ಸಂಶೋಧನಾ ಕೇಂದ್ರ (NEMRC) ತಿಳಿಸಿದೆ.

    ನೇಪಾಳದ ಬಾಗ್ಲುಂಗ್ ಜಿಲ್ಲೆಯಲ್ಲಿ ಸ್ಥಳೀಯ ಕಾಲಮಾನ 01:23 ಹಾಗೂ 02:07 ರ ವೇಳೆಗೆ ಭೂಕಂಪ ಸಂಭವಿಸಿದೆ. ಇದೇ ವೇಳೆ ಉತ್ತರಾಖಂಡದ (Uttarakhand) ಉತ್ತರಕಾಶಿಯಲ್ಲೂ ಕಂಪನದ ಅನುಭವವಾಗಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ಚಾರ್ಮಾಡಿ ಘಾಟ್‌ನಲ್ಲಿ ಕಾಡ್ಗಿಚ್ಚು- ನೂರಾರು ಎಕರೆ ಅರಣ್ಯ ಬೆಂಕಿಗಾಹುತಿ

    ಈ ಬಗ್ಗೆ ಟ್ವೀಟ್ ಮಾಡಿರುವ ಎನ್‌ಇಎಂಆರ್‌ಸಿ, 01:23ಕ್ಕೆ ಬಾಗ್ಲುಂಗ್ ಜಿಲ್ಲೆಯ ಅಧಿಕಾರಿ ಚೌರ್ ಬಳಿ 4.7 ತೀವ್ರತೆಯ ಭೂಕಂಪ ಸಂಭವಿಸಿದೆ. 02:07 ವೇಳೆಗೆ ಬಾಂಗ್ಲುಂಗ್ ಜಿಲ್ಲೆಯ ಖುಂಗಾ ಬಳಿ 5.3 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ತಿಳಿಸಿದೆ.

    ಭೂಕಂಪದಿಂದಾಗಿ ಸದ್ಯ ಎಲ್ಲೂ ಸಾವು-ನೋವುಗಳು ಹಾಗೂ ಆಸ್ತಿ-ಪಾಸ್ತಿ ನಷ್ಟವಾಗಿರುವ ವರದಿಯಾಗಿಲ್ಲ. ಈ ಭೂಕಂಪಗಳಿಂದಾಗಿ ಉತ್ತರಾಖಂಡದ ಚಮೋಲಿ ಜಿಲ್ಲೆಯ ಜೋಶಿಮಠದಲ್ಲಿ ಜನರು ಮೊದಲಿಗಿಂತಲೂ ಹೆಚ್ಚು ಭಯಭೀತರಾಗಿದ್ದಾರೆ. ಏಕೆಂದರೆ ಡಿಸೆಂಬರ್ 24 ರಂದು ಇಲ್ಲಿ ನಡೆದ ಭೂಕಂಪದಿಂದಾಗಿ ನಗರದ ಅನೇಕ ಮನೆಗಳು ಬಿರುಕು ಬಿಟ್ಟು ಧರೆಗುರುಳಿದ್ದವು. ಜನರು ಘಟನೆಯಿಂದಾಗಿ ಬೀದಿಗಿಳಿದಿದ್ದರು. ಇದನ್ನೂ ಓದಿ: ಆರ್ಥಿಕ ಸಮಸ್ಯೆ ಇದ್ದು, ಇನ್ಮುಂದೆ ಮಕ್ಕಳು ಮಾಡಲ್ಲ ಎಂದ 12 ಪತ್ನಿ, 102 ಮಕ್ಕಳನ್ನು ಹೊಂದಿದ ವ್ಯಕ್ತಿ!

    Live Tv
    [brid partner=56869869 player=32851 video=960834 autoplay=true]

  • ಬಲವಂತದ ಮತಾಂತರ ಆರೋಪ – ಕ್ರಿಸ್ಮಸ್ ಆಚರಣೆ ವೇಳೆ ಗುಂಪು ದಾಳಿ

    ಬಲವಂತದ ಮತಾಂತರ ಆರೋಪ – ಕ್ರಿಸ್ಮಸ್ ಆಚರಣೆ ವೇಳೆ ಗುಂಪು ದಾಳಿ

    ಡೆಹ್ರಾಡೂನ್: ಬಲವಂತದ ಮತಾಂತರ (Conversion) ಮಾಡಲಾಗುತ್ತಿದೆ ಎಂದು ಆರೋಪಿಸಿ ಸುಮಾರು 30 ಯುವಕರ ಗುಂಪೊಂದು ಕ್ರಿಸ್ಮಸ್ ಆಚರಣೆ (Christmas Celebrations) ಮಾಡುತ್ತಿದ್ದವರ ಮೇಲೆ ದಾಳಿ ನಡೆಸಿರುವ ಘಟನೆ ಉತ್ತರಾಖಂಡದ (Uttarakhand0 ಉತ್ತರಕಾಶಿ (Uttarkashi) ಜಿಲ್ಲೆ ಪುರೊಲಾ ಗ್ರಾಮದಲ್ಲಿ ನಡೆದಿದೆ.

    ಕ್ರಿಸ್ಮಸ್ ಆಚರಣೆ ಮಾಡುತ್ತಿದ್ದವರ ಮೇಲೆ ಯುವಕರ ಗುಂಪು ದೊಣ್ಣೆ ಹಿಡಿದು ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ಅವರು ಹಿಂದೂ ಸಂಘಟನೆಯವರು ಎಂದು ಹೇಳಿಕೊಂಡಿದ್ದು, ಹಲ್ಲೆಗೊಳಗಾದ ಪಾಸ್ಟರ್ ಲಾಜರಸ್ ಕಾರ್ನೆಲಿಯಸ್ ಹಾಗೂ ಅವರ ಪತ್ನಿ ಸುಷ್ಮಾ ಕಾರ್ನೇಲಿಯಸ್ ಸೇರಿದಂತೆ 6 ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಬಳಿಕ ವಿಷಯವನ್ನು ಸೌಹಾರ್ದಯುತವಾಗಿ ಪರಿಹರಿಸಲಾಗಿದ್ದು, ಬಿಡುಗಡೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಜಲೀಲ್ ಯಾವುದೇ ಗಲಾಟೆಗೆ ಹೋಗದ ಬಡಪಾಯಿ : ಸಹೋದರ ಮಹಮ್ಮದ್

     

    ರಾಜ್ಯ ರಾಜಧಾನಿ ಡೆಹ್ರಾಡೂನ್‌ನಿಂದ ಸುಮಾರು 150 ಕಿ.ಮೀ ದೂರದಲ್ಲಿರುವ ಗ್ರಾಮದ ಹೋಪ್ ಮತ್ತು ಲೈಫ್ ಸೆಂಟರ್‌ನಲ್ಲಿ ಶುಕ್ರವಾರ ಮಧ್ಯಾಹ್ನದ ವೇಳೆ ದಾಳಿ ನಡೆದಿದೆ. ಮನ್ಸೂರಿಯ ಯೂನಿಯನ್ ಚರ್ಚ್‌ಗೆ ಸೇರಿದ ಧರ್ಮಗುರುಗಳ ನೇತೃತ್ವದಲ್ಲಿ ಪ್ರಾರ್ಥನೆ ನಡೆಯುತ್ತಿದ್ದಾಗ ದಾಳಿ ನಡೆಸಲಾಗಿದೆ. ಇದನ್ನೂ ಓದಿ: ಸುರತ್ಕಲ್ ಬಳಿ ಚಾಕು ಇರಿದು ವ್ಯಕ್ತಿ ಕೊಲೆ – 4 ಠಾಣಾ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ

    ರಾಜ್ಯದ ಬಿಜೆಪಿ ಸರ್ಕಾರ ಇತ್ತೀಚೆಗೆ ವಿಧಾನಸಭೆಯಲ್ಲಿ ಮತಾಂತರ ವಿರೋಧಿ ಮಸೂದೆಯನ್ನು ಮಂಡಿಸಿದೆ. ಶನಿವಾರ ರಾಜ್ಯಪಾಲರ ಒಪ್ಪಿಗೆಯನ್ನು ಪಡೆದುಕೊಂಡಿದೆ.

    Live Tv
    [brid partner=56869869 player=32851 video=960834 autoplay=true]

  • ಮಗಳ ಮದುವೆಯೆಂದು ಖುಷಿಯಿಂದ ಡ್ಯಾನ್ಸ್ ಮಾಡುತ್ತಿದ್ದ ತಂದೆ ಕುಸಿದುಬಿದ್ದು ಸಾವು

    ಮಗಳ ಮದುವೆಯೆಂದು ಖುಷಿಯಿಂದ ಡ್ಯಾನ್ಸ್ ಮಾಡುತ್ತಿದ್ದ ತಂದೆ ಕುಸಿದುಬಿದ್ದು ಸಾವು

    ಡೆಹ್ರಾಡೂನ್: ಮೆಹಂದಿ ಸಮಾರಂಭದಲ್ಲಿ ವಧುವಿನ (Bride) ತಂದೆ (Father) ಡ್ಯಾನ್ಸ್ (Dance) ಮಾಡುತ್ತಿದ್ದಾಗ ಹೃದಯಾಘಾತವಾಗಿ ಸಾವನ್ನಪ್ಪಿದ ಘಟನೆ ಉತ್ತರಾಖಂಡದಲ್ಲಿ ನಡೆದಿದೆ.

    ಉತ್ತರಾಖಂಡದ (Uttarakhand) ಅಲ್ಮೋರಾದಲ್ಲಿರುವ ವಧುವಿನ ಮನೆಯಲ್ಲಿ ಈ ಘಟನೆ ನಡೆದಿದೆ. ವಧುವಿನ ತಂದೆ ಮೆಹೆಂದಿ ಸಮಾರಂಭದಲ್ಲಿ ಡ್ಯಾನ್ಸ್ ಮಾಡುತ್ತಿದ್ದಾಗ ಏಕಾಏಕಿ ಡ್ಯಾನ್ಸ್ ಫ್ಲೋರ್‌ ಮೇಲೆ ಬಿದ್ದಿದ್ದಾರೆ. ಅರಿಶಿಣ ಶಾಸ್ತ್ರದ ಬಳಿಕ ಕೆಲವು ಕುಟುಂಬಸ್ಥರು ಮನೆಗೆ ತೆರಳಿದ ಬಳಿಕ ಈ ಘಟನೆ ನಡೆದಿದೆ.  ಇದನ್ನೂ ಓದಿ: BMTC ಬಸ್ ಟಯರ್ ಅಡಿಗೆ ಬಿದ್ದು ಬೈಕ್ ಸವಾರ ಸಾವು

    ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಅವರು ಮಾರ್ಗಮಧ್ಯೆಯೇ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಘೋಷಿಸಿದರು. ಪೊಲೀಸರು ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಘಟನೆ ಮರುದಿನ ಸರಳವಾಗಿ ವಧು ವಿವಾಹವಾದರು (Wedding). ವಧುವಿನ ಕನ್ಯಾದಾನವನ್ನು ಆಕೆಯ ತಾಯಿಯ ಚಿಕ್ಕಪ್ಪ ಮಾಡಿದರು. ಇದನ್ನೂ ಓದಿ: ತಂದೆಯನ್ನ ಕೊಂದು 20 ತುಂಡು ಮಾಡಿ ಕೊಳವೆ ಬಾವಿಗೆ ಬಿಸಾಡಿದ ಪಾಪಿ ಮಗ

    Live Tv
    [brid partner=56869869 player=32851 video=960834 autoplay=true]

  • ಮದರಸಾಗಳಲ್ಲೂ ಡ್ರೆಸ್ ಕೋಡ್ ಜಾರಿ

    ಮದರಸಾಗಳಲ್ಲೂ ಡ್ರೆಸ್ ಕೋಡ್ ಜಾರಿ

    ಡೆಹ್ರಾಡೂನ್: ಉತ್ತರಾಖಂಡದ ಎಲ್ಲಾ ಮದರಸಾಗಳಲ್ಲಿ (Madrassas) ಇನ್ಮುಂದೆ ಡ್ರೆಸ್ ಕೋಡ್‌ಗಳು (Dress code) ಜಾರಿಗೆ ಬರಲಿದೆ ಎಂದು ಉತ್ತರಾಖಂಡ (Uttarakhand) ವಕ್ಫ್ ಬೋರ್ಡ್ (Waqf Board) ತಿಳಿಸಿದೆ.

    ಈ ಬಗ್ಗೆ ವಕ್ಫ್ ಬೋರ್ಡ್ ಅಧ್ಯಕ್ಷ ಶಾದಾಬ್ ಶಾಮ್ಸ್ ಮಾತನಾಡಿ, ಉತ್ತರಾಖಂಡ ವಕ್ಫ್ ಬೋರ್ಡ್‌ನಲ್ಲಿ ನೋಂದಣಿಯಾಗಿರುವ 103 ಮದರಸಾಗಳಲ್ಲಿ ಸಮವಸ್ತ್ರ ಕಡ್ಡಾಯ ಎಂಬ ನಿಯಮವನ್ನು ಜಾರಿಗೆ ತರಲಾಗುತ್ತದೆ. ಅಷ್ಟೇ ಅಲ್ಲದೇ ಮದರಸಾವು ಬೆಳಗ್ಗೆ 8 ರಿಂದ ಮಧ್ಯಾಹ್ನ 2ರವರೆಗೆ ತರಗತಿಗಳು ನಡೆಯಲಿದ್ದು, ಅಲ್ಲಿಯೂ ಎನ್‌ಸಿಇಆರ್‌ಟಿ ಪುಸ್ತಕಗಳನ್ನು ಸಹ ಪರಿಚಯಿಸಲಾಗುವುದು ಎಂದು ಹೇಳಿದರು.

    ರಾಜ್ಯದ ಎಲ್ಲಾ ಮದರಸಾಗಳನ್ನು ಸಮೀಕ್ಷೆ ಮಾಡಲು ರಾಜ್ಯ ಸರ್ಕಾರವು ಶೀಘ್ರದಲ್ಲೇ ಸಮಿತಿಯನ್ನು ರಚಿಸುವ ನಿರೀಕ್ಷೆಯಿದೆ. ಆಧುನಿಕ ಶಾಲೆಗಳ ಮಾದರಿಯಲ್ಲಿ ಮದರಸಾಗಳನ್ನು ನಡೆಸಲು ಸಹ ಸಿದ್ಧತೆ ನಡೆದಿದ್ದು, ಮೊದಲ ಹಂತದಲ್ಲಿ 7 ಮದರಸಾಗಳನ್ನು ಆಧುನಿಕರಣಗೊಳಿಸಲಾಗುವುದು. ಈ ಹಿನ್ನೆಲೆಯಲ್ಲಿ ಡೆಹ್ರಾಡೂನ್‌ನಲ್ಲಿ ಎರಡು, ಉಧಮ್ ಸಿಂಗ್ ನಗರದಲ್ಲಿ ಎರಡು, ಹರಿದ್ವಾರದಲ್ಲಿ ಎರಡು ಮತ್ತು ನೈನಿತಾಲ್‌ನಲ್ಲಿ ಒಂದು ಮದರಸಾವನ್ನು ಆಯ್ಕೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

    ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಇತ್ತೀಚೆಗೆ ಮದರಸಾಗಳಿಗೆ ನೀಡಿದ ಅನುದಾನವನ್ನು ಸಮರ್ಪಕವಾಗಿ ಬಳಸುತ್ತಿಲ್ಲ ಎಂಬ ಆರೋಪದ ನಡುವೆ ಮದರಸಾಗಳ ಸಮೀಕ್ಷೆ ನಡೆಸುವ ಅಗತ್ಯವನ್ನು ಒತ್ತಿ ಹೇಳಿದ್ದರು.

    Live Tv
    [brid partner=56869869 player=32851 video=960834 autoplay=true]

  • ಪತ್ರದ ಮೂಲಕ ಹೆಂಡತಿಗೆ ತ್ರಿವಳಿ ತಲಾಖ್‌

    ಪತ್ರದ ಮೂಲಕ ಹೆಂಡತಿಗೆ ತ್ರಿವಳಿ ತಲಾಖ್‌

    ಡೆಹ್ರಾಡೂನ್:‌ ವ್ಯಕ್ತಿಯೊಬ್ಬ ತನ್ನ ಪತ್ನಿಗೆ ಪತ್ರದ ಮೂಲಕ ತ್ರಿವಳಿ ತಲಾಖ್‌ (Triple Talaq) ನೀಡಿರುವ ಘಟನೆ ಉತ್ತರಾಖಂಡದಲ್ಲಿ (Uttarakhand) ನಡೆದಿದೆ. ಈ ಸಂಬಂಧ ಆರೋಪಿ ವಿರುದ್ಧ ಮಹಿಳೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾಳೆ.

    ಕಿರುಕುಳ, ಹಲ್ಲೆ ಮತ್ತು ಬಲವಂತದ ಗರ್ಭಪಾತದ ಗಂಭೀರ ಆರೋಪ ಮಾಡಿ ಮಹಿಳೆ ದೂರು ದಾಖಲಿಸಿದ್ದಾರೆ. ಹಿಮಾಚಲ ಪ್ರದೇಶದ ಸಿರ್ಮೋರ್ ಜಿಲ್ಲೆಯ ಪೌಂಟಾ ಸಾಹಿಬ್‌ನ ನಿವಾಸಿಯಾಗಿರುವ ಆರೋಪಿ ಮೆಹಬೂಬ್ ಅಲಿ ತನ್ನನ್ನು ಮನೆಯಿಂದ ಹೊರಹಾಕಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ. ಇದನ್ನೂ ಓದಿ: ಪೆಟ್ರೋಲ್ ಜೊತೆಗೆ ನೀರು ಬೆರಕೆ – ಪಂಪ್ ವಿರುದ್ಧ ವ್ಯಕ್ತಿಯಿಂದ ದೂರು

    2017ರಲ್ಲಿ ನನ್ನ ವಿವಾಹವಾಯಿತು. ಕಡಿಮೆ ವರದಕ್ಷಿಣೆ ತಂದಿದ್ದಕ್ಕಾಗಿ ಅತ್ತೆ ನನ್ನನ್ನು ನಿಂದಿಸುತ್ತಿದ್ದರು. ಮದುವೆಯ ನಂತರ ಪತಿ ನನಗೆ ಥಳಿಸುತ್ತಿದ್ದ. ತಾನು ಮೊದಲ ಬಾರಿಗೆ ಗರ್ಭಿಣಿಯಾದ ನಂತರ, ಪತಿ ನನ್ನ ಮೇಲೆ ಗಂಭೀರ ಹಲ್ಲೆ ನಡೆಸಿದ್ದರಿಂದ ಗರ್ಭಪಾತವಾಯಿತು ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.

    ನನ್ನನ್ನು ಮನೆಯಿಂದ ಆಚೆ ಹಾಕುವ ಮೊದಲು ಹಲವು ದಿನಗಳ ಕಾಲ ಆಹಾರ ಮತ್ತು ನೀರು ನೀಡದೇ ಕೋಣೆಯಲ್ಲಿ ಕೂಡಿ ಹಾಕಿದ್ದರು. ನಿರಂತರ ಕಿರುಕುಳದಿಂದ ನಾನು ಖಿನ್ನತೆಗೆ ಒಳಗಾಗಿದ್ದೇನೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: ಅಫ್ತಾಬ್‌ಗೆ ಮಂಪರು ಪರೀಕ್ಷೆ – ಪೊಲೀಸರಿಗೆ ಕೋರ್ಟ್‌ ಅನುಮತಿ

    ಸಂತ್ರಸ್ತೆಯ ದೂರಿನ ಆಧಾರದ ಮೇಲೆ ಮೆಹಬೂಬ್ ಅಲಿ, ಶಂಶೇರ್ ಅಲಿ, ಗುಲ್ಷೇರ್ ಅಲಿ, ಮೊಹ್ಸಿನಾ ಮತ್ತು ಪರ್ವೀನ್ ವಿರುದ್ಧ ಸೂಕ್ತ ಕಾನೂನು ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಮುಂದಿನ ತನಿಖೆ ನಡೆಸಲಾಗುತ್ತಿದೆ ಎಂದು ಕ್ಲೆಮೆಂಟೌನ್ ಪೊಲೀಸ್ ಠಾಣೆ ಪ್ರಭಾರಿ ಕುಲವಂತ್ ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಉತ್ತರಾಖಂಡದಲ್ಲಿ 4.5 ತೀವ್ರತೆಯ ಭೂಕಂಪ – ದೆಹಲಿ-ಎನ್‌ಸಿಆರ್‌ನಲ್ಲಿ ಲಘು ಕಂಪನದ ಅನುಭವ

    ಉತ್ತರಾಖಂಡದಲ್ಲಿ 4.5 ತೀವ್ರತೆಯ ಭೂಕಂಪ – ದೆಹಲಿ-ಎನ್‌ಸಿಆರ್‌ನಲ್ಲಿ ಲಘು ಕಂಪನದ ಅನುಭವ

    ನವದೆಹಲಿ: ಉತ್ತರಾಖಂಡದ (Uttarakhand) ತೆಹ್ರಿಯಲ್ಲಿ ಭಾನುವಾರ ಬೆಳಗ್ಗೆ 8:33 ರ ಸುಮಾರಿಗೆ 4.5 ತೀವ್ರತೆಯ ಭೂಕಂಪ (Earthquake) ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (NCS) ತಿಳಿಸಿದೆ.

    ಉತ್ತರಾಖಂಡದಲ್ಲಿ ಉಂಟಾಗಿರುವ ಭೂಕಂಪದ ಬೆನ್ನಲ್ಲೇ ದೆಹಲಿ-ಎನ್‌ಸಿಆರ್‌ನಲ್ಲೂ (Delhi-NCR) ಲಘು ಭೂಕಂಪದ ಅನುಭವವಾಗಿರುವುದಾಗಿ ವರದಿಯಾಗಿದೆ. ಸದ್ಯ ಎಲ್ಲಿಯೂ ಪ್ರಾಣಹಾನಿಯಾಗಿರುವ ಬಗ್ಗೆ ವರದಿಯಾಗಿಲ್ಲ. ಇದನ್ನೂ ಓದಿ: ಅಕ್ರಮ ಮೀನುಗಾರಿಕೆ – 15 ಭಾರತೀಯ ಮೀನುಗಾರರ ಬಂಧಿಸಿದ ಶ್ರೀಲಂಕಾ ನೌಕಾಪಡೆ

    ಎನ್‌ಸಿಎಸ್ ಪ್ರಕಾರ, ಭೂಕಂಪದ ಕೇಂದ್ರ ಬಿಂದುವನ್ನು ಉತ್ತರಕಾಶಿಯ ಪೂರ್ವ-ಆಗ್ನೇಯಕ್ಕೆ 17 ಕಿ.ಮೀ. ದೂರದಲ್ಲಿ 5 ಕಿ.ಮೀ. ಆಳದಲ್ಲಿ ಗುರುತಿಸಲಾಗಿದೆ. ಈ ಬಗ್ಗೆ ಎನ್‌ಸಿಎಸ್ ಟ್ವೀಟ್ ಮಾಡಿದೆ. ಇದನ್ನೂ ಓದಿ: ನನ್ನನ್ನು ದೀದಿ ಮಾ ಅಂತ ಕರೆಯಿರಿ – ಕುಟುಂಬ ತ್ಯಜಿಸಿದ ಬಿಜೆಪಿ ನಾಯಕಿ ಉಮಾ ಭಾರತಿ

    ಈ ವರ್ಷ ಆಗಸ್ಟ್, ಮೇ ಮತ್ತು ಫೆಬ್ರವರಿಯಲ್ಲಿ ಉತ್ತರಾಖಂಡದಲ್ಲಿ ಭೂಕಂಪಗಳು ವರದಿಯಾಗಿವೆ. ಉತ್ತರಕಾಶಿ, ಚಮೋಲಿ, ರುದ್ರಪ್ರಯಾಗ ಮತ್ತು ಉತ್ತರಾಖಂಡದ ಹಲವಾರು ಪ್ರದೇಶಗಳಲ್ಲಿ ಕಳೆದ 6 ವರ್ಷಗಳಿಂದ 4 ರಿಂದ 5.1 ರವರೆಗಿನ ತೀವ್ರತೆಯ ಭೂಕಂಪಗಳು ಪದೇ ಪದೇ ನಡೆಯುತ್ತಿವೆ. ಫೆಬ್ರವರಿ 6 ರಂದು ಸಂಭವಿಸಿದ ಭೂಕಂಪ 5.8 ತೀವ್ರತೆಯನ್ನು ಹೊಂದಿತ್ತು.

    Live Tv
    [brid partner=56869869 player=32851 video=960834 autoplay=true]

  • ಉತ್ತರಾಖಂಡದಲ್ಲಿ ಹಿಮಪಾತ – ಬೆಂಗಳೂರಿನ ಇಬ್ಬರು ಸೇರಿದಂತೆ 29 ಮಂದಿ ಸಾವು

    ಉತ್ತರಾಖಂಡದಲ್ಲಿ ಹಿಮಪಾತ – ಬೆಂಗಳೂರಿನ ಇಬ್ಬರು ಸೇರಿದಂತೆ 29 ಮಂದಿ ಸಾವು

    ಬೆಂಗಳೂರು: ಉತ್ತರಾಖಂಡದ ದ್ರೌಪದಿ ದಂಡ-2 ಶಿಖರದಲ್ಲಿ ಸಂಭವಿಸಿದ ಹಿಮಪಾತದಲ್ಲಿ(Uttarakhand Avalanche ) ಇಬ್ಬರು ಕನ್ನಡಿಗರು ಸೇರಿದಂತೆ ಈವರೆಗೂ 29 ಮಂದಿ ಮೃತಪಟ್ಟಿದ್ದಾರೆ.

    ಬೆಂಗಳೂರು ಮೂಲದ ವಿಕ್ರಮ್ ಮತ್ತು ರಕ್ಷಿತ್ ಮೃತದೇಹಗಳು ಪತ್ತೆಯಾಗಿದ್ದು, ಡೆಹ್ರಾಡೂನ್‍ನಲ್ಲಿ ಪೋಸ್ಟ್ ಮಾರ್ಟಂ ಮಾಡಲಾಗಿದೆ. ಇಬ್ಬರು ಕನ್ನಡಿಗರ ಮೃತದೇಹ ತರುವ ವಿಚಾರದಲ್ಲಿ ರಾಜ್ಯ ಸರ್ಕಾರ ನಿರ್ಲಕ್ಷ್ಯ ವಹಿಸಿದೆ. ಇದನ್ನೂ ಓದಿ: ಶೇ.10ಕ್ಕೆ ಮೀಸಲಾತಿ ಹೆಚ್ಚಳಕ್ಕೆ ಒಕ್ಕಲಿಗರ ಸಂಘ ಒತ್ತಾಯ

    ಮೃತದೇಹಗಳನ್ನ ಶಿಫ್ಟ್ ಮಾಡಲು ಒಂದೇ ಒಂದು ಅಂಬುಲೆನ್ಸ್‌ ವ್ಯವಸ್ಥೆಯನ್ನು ಮಾಡಿಲ್ಲ. ಬೆಂಗಳೂರು ಜಿಲ್ಲಾಡಳಿತದ ವತಿಯಿಂದ ಮೃತದೇಹ ತರಲಾಗ್ತಿದೆ. ಮೃತದೇಹ ಗುರುತಿಸಲು ತೆರಳಿದ್ದ ಕುಟುಂಬಸ್ಥರು ಹಾಗೂ ಸ್ನೇಹಿತರಿಗೆ ವಿಮಾನ ವ್ಯವಸ್ಥೆಯನ್ನೂ ಮಾಡಿಲ್ಲ ಎಂದು ಸರ್ಕಾರದ ವಿರುದ್ಧ ಮೃತರ ಕುಟುಂಬಸ್ಥರು ಅಸಮಾಧಾನ ಹೊರಹಾಕಿದ್ದಾರೆ.

    ಮಂಗಳವಾರ ಸಂಜೆ 4 ಗಂಟೆ ವೇಳೆಗೆ ಮೃತದೇಹ ಬೆಂಗಳೂರು ತಲುಪುವ ಸಾಧ್ಯತೆಗಳಿವೆ.

    Live Tv
    [brid partner=56869869 player=32851 video=960834 autoplay=true]

  • ಮದುವೆ ಮುಗಿಸಿ ವಾಪಸ್ಸಾಗುತ್ತಿದ್ದ ಬಸ್ ಅಪಘಾತ – 25 ಮಂದಿ ದುರ್ಮರಣ

    ಮದುವೆ ಮುಗಿಸಿ ವಾಪಸ್ಸಾಗುತ್ತಿದ್ದ ಬಸ್ ಅಪಘಾತ – 25 ಮಂದಿ ದುರ್ಮರಣ

    ಡೆಹ್ರಾಡೊನ್: ಮದುವೆ (Wedding) ಮುಗಿಸಿ ವಾಪಸ್ಸಾಗುತ್ತಿದ್ದ ಬಸ್‍ (Bus) ಅಪಘಾತಗೊಂಡು 25 ಮಂದಿ ಸಾವನ್ನಪ್ಪಿ, 21ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಉತ್ತರಾಖಂಡದ (Uttarakhand) ಪೌರಿ ಗರ್ವಾಲ್‍ನಲ್ಲಿ (Pauri Garhwal)  ನಡೆದಿದೆ.

    ಮಂಗಳವಾರ ತಡರಾತ್ರಿ ಪೌರಿ ಗರ್ವಾಲ್‍ನಲ್ಲಿ ಕಂದಕಕ್ಕೆ ಉರುಳಿ ಬಸ್‌ ಅಪಘಾತಗೊಂಡಿದೆ. ಅಪಘಾತದಲ್ಲಿ 25 ಮಂದಿ ಮೃತಪಟ್ಟಿದ್ದು, ಈಗಾಗಲೇ 21 ಮಂದಿಯನ್ನು ರಾಜ್ಯ ವಿಪತ್ತು ನಿರ್ವಹಣಾ ತಂಡ (SDRF) ರಕ್ಷಣೆ ಮಾಡಿದೆ ಎಂದು ಪೊಲೀಸ್ (Police) ನಿರ್ದೇಶಕರಾದ ಅಶೋಕ್ ಕುಮಾರ್ ತಿಳಿಸಿದ್ದಾರೆ. ಇದನ್ನೂ ಓದಿ: ಉತ್ತರಾಖಂಡದಲ್ಲಿ ಹಿಮಪಾತ – 20 ಮಂದಿ ನಾಪತ್ತೆ

    ಈ ಬಗ್ಗೆ ರಾಜ್ಯ ಪೊಲೀಸ್ ತಂಡ ರಕ್ಷಣಾ ಕಾರ್ಯಚರಣೆಯ ವೀಡಿಯೋ ಬಿಡುಗಡೆ ಮಾಡಿದೆ. ಅಪಘಾತದಿಂದ ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ದುರಂತದಲ್ಲಿ ಸಾವಿಗೀಡಾದವರಿಗೆ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ  (Pushkar Singh Dhami) ಸಂತಾಪ ವ್ಯಕ್ತಪಡಿಸಿದ್ದು, ರಾಜ್ಯ ಸರ್ಕಾರ ಅವರ ಕುಟುಂಬಗಳೊಂದಿಗಿದೆ ಎಂದು ಧೈರ್ಯ ತುಂಬಿದ್ದಾರೆ. ಇದನ್ನೂ ಓದಿ: ಜಂಬೂ ಸವಾರಿ ಭದ್ರತೆಗೆ ವಿಶೇಷ ಆದ್ಯತೆ- 5000 ಪೊಲೀಸರ ನಿಯೋಜನೆ

    ಇನ್ನೊಂದೆಡೆ ಮಂಗಳವಾರ ಉತ್ತರಾಖಂಡದ (Uttarakhand) ದ್ರೌಪದಿ ಕಾ ದಂಡಾ-2 (Draupadi ka Danda) ಶಿಖರದಲ್ಲಿ ಇಂದು ಭಾರೀ ಹಿಮಪಾತ (Avalanche) ಸಂಭವಿಸಿದ್ದು, 20ಕ್ಕೂ ಹೆಚ್ಚು ಪರ್ವತಾರೋಹಿರು (Mountaineers) ಹಿಮದಲ್ಲಿ ಸಿಲುಕಿದ್ದರು. ವರದಿಗಳ ಪ್ರಕಾರ ನಾಪತ್ತೆಯಾದವರು ಉತ್ತರ ಕಾಶಿಯ ನೆಹರೂ ಇನ್‌ಸ್ಟಿಟ್ಯೂಟ್ ಆಫ್ ಮೌಂಟೇನಿಯರಿಂಗ್‌ನವರಾಗಿದ್ದಾರೆ. ಟ್ರಕ್ಕಿಂಗ್ ತೆರಳಿದ್ದ 40 ಜನರ ಗುಂಪಿನಲ್ಲಿ 22 ವಿದ್ಯಾರ್ಥಿಗಳು ಹಾಗೂ 7 ಮಂದಿ ಬೋಧಕರಿದ್ದರು ಎಂದು ವರದಿಯಾಗಿದೆ.

    Live Tv
    [brid partner=56869869 player=32851 video=960834 autoplay=true]