Tag: Uttarakhand

  • ಹೆಣ್ಣುಮಕ್ಕಳು ಮೈ ಕಾಣುವಂತೆ ಬಟ್ಟೆ ಹಾಕ್ಕೊಂಡು ಬಂದ್ರೆ ಈ ದೇವಾಲಯಗಳಿಗೆ ನೋ ಎಂಟ್ರಿ

    ಹೆಣ್ಣುಮಕ್ಕಳು ಮೈ ಕಾಣುವಂತೆ ಬಟ್ಟೆ ಹಾಕ್ಕೊಂಡು ಬಂದ್ರೆ ಈ ದೇವಾಲಯಗಳಿಗೆ ನೋ ಎಂಟ್ರಿ

    – ದೇಹದ 80% ಭಾಗ ಮುಚ್ಚಿಕೊಂಡು ಭಾರತೀಯ ನಾರಿಯಂತೆ ಬನ್ನಿ ಅಂತ ಸೂಚನೆ

    ಡೆಹ್ರಾಡೂನ್: ಉತ್ತರಾಖಂಡದ (Uttarakhand) ಪ್ರಮುಖ ಮೂರು ದೇವಾಲಯಗಳ ಪ್ರವೇಶಕ್ಕೆ ಮಹಿಳೆಯರು ಮತ್ತು ಹುಡುಗಿಯರಿಗೆ ವಸ್ತ್ರ ಸಂಹಿತೆಯನ್ನು (Dress Code) ಕಡ್ಡಾಯಗೊಳಿಸಲಾಗಿದೆ. ಮೈ ಕಾಣುವಂತೆ ಬಟ್ಟೆ ಹಾಕ್ಕೊಂಡು ಬಂದರೆ ದೇವಾಲಯಗಳಿಗೆ (Temples) ಪ್ರವೇಶ ನೀಡಲ್ಲ ಎಂದು ಸೂಚನೆ ನೀಡಲಾಗಿದೆ.

    ಉತ್ತರಾಖಂಡದ ಮಹಾನಿರ್ವಾಣಿ ಅಖಾರದ ಅಧೀನದಲ್ಲಿ ಬರುವ ದೇವಾಲಯಗಳಲ್ಲಿ ಈ ವಸ್ತ್ರ ಸಂಹಿತೆ ಕಡ್ಡಾಯ ಎನ್ನಲಾಗಿದೆ. ಮಹಾನಿರ್ವಾಣಿ ಅಖಾರದ ಕಾರ್ಯದರ್ಶಿ ಮತ್ತು ಅಖಿಲ ಭಾರತೀಯ ಅಖಾರ ಪರಿಷತ್ತಿನ ಅಧ್ಯಕ್ಷ ಶ್ರೀಮಹಾಂತ್ ರವೀಂದ್ರ ಪುರಿ ಅವರು, “ಮಹಿಳೆಯರು ಮತ್ತು ಹುಡುಗಿಯರು ತುಂಡುಡುಗೆ ಧರಿಸಿ ದೇವಾಲಯಗಳಿಗೆ ಪ್ರವೇಶಿಸುವಂತಿಲ್ಲ” ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕ್ರಿಕೆಟ್ ಬಾಲ್ ಮುಟ್ಟಿದ್ದಕ್ಕೆ ದಲಿತ ವ್ಯಕ್ತಿಯ ಹೆಬ್ಬೆರಳನ್ನೇ ಕತ್ತರಿಸಿದ ದುರುಳರು

    ಹರಿದ್ವಾರದ ಕಂಖಾಲ್‌ನಲ್ಲಿರುವ ದಕ್ಷ ಪ್ರಜಾಪತಿ ದೇವಾಲಯ, ಪೌರಿ ಜಿಲ್ಲೆಯ ನೀಲಕಂಠ ಮಹಾದೇವ ದೇವಾಲಯ ಮತ್ತು ಡೆಹ್ರಾಡೂನ್‌ನ ತಪಕೇಶ್ವರ ಮಹಾದೇವ ದೇವಾಲಯಗಳಲ್ಲಿ ಈ ನಿಯಮ ಜಾರಿಗೊಳಿಸಲಾಗಿದೆ. ದೇವಾಲಯವು ಆತ್ಮಾವಲೋಕನಕ್ಕೆ ಸ್ಥಳವಾಗಿದೆಯೇ ಹೊರತು ಮನರಂಜನೆಗಾಗಿ ಅಲ್ಲ. ಹೀಗಾಗಿ ದೇವಾಲಯಕ್ಕೆ ಭೇಟಿ ನೀಡುವ ಭಕ್ತರಲ್ಲಿ ನಿಯಮ ಪಾಲಿಸುವಂತೆ ಮನವಿ ಮಾಡಲಾಗಿದೆ ಎಂದು ರವೀಂದ್ರ ಅವರು ಹೇಳಿದ್ದಾರೆ.

    ಮಹಿಳೆಯರು ಮತ್ತು ಹುಡುಗಿಯರು ದೇವಾಲಯದ ಪೂಜೆಗೆ ಆಗಮಿಸುವುದಿದ್ದರೆ, ಭಾರತೀಯ ಸಂಪ್ರದಾಯದ ಪ್ರಕಾರ ಬಟ್ಟೆಗಳನ್ನು ಧರಿಸಬೇಕು. ಆಗ ಮಾತ್ರ ಅವರಿಗೆ ದೇವಾಲಯಕ್ಕೆ ಪ್ರವೇಶ ಸಿಗುತ್ತದೆ. ದೇಹದ 80% ನಷ್ಟು ಭಾಗವನ್ನು ಮುಚ್ಚಿಕೊಂಡು ಬಂದರೆ ದೇವಾಲಯಗಳಿಗೆ ಬರಬಹುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಚಾಕ್ಲೇಟ್, ಆಟಿಕೆ ಬೇಕೆಂದು ಹಠ ಹಿಡಿದ ಮಗಳನ್ನು ಕಲ್ಲು ಎತ್ತಿ ಹಾಕಿ ಕೊಂದೇ ಬಿಟ್ಟ ಪಾಪಿ ತಂದೆ

    ದಕ್ಷಿಣ ಭಾರತ ಮತ್ತು ಮಹಾರಾಷ್ಟ್ರದ ದೇವಾಲಯಗಳಲ್ಲಿ ಈ ವ್ಯವಸ್ಥೆ ಈಗಾಗಲೇ ಜಾರಿಯಲ್ಲಿದೆ. ಈಗ ಇಲ್ಲಿಯೂ ಈ ವ್ಯವಸ್ಥೆ ಜಾರಿಯಾಗುತ್ತಿದ್ದು, ದೇವಸ್ಥಾನಕ್ಕೆ ಬರುವ ಭಕ್ತರಿಗೆ ಯಾವುದೇ ಅಹಿತಕರ ಪರಿಸ್ಥಿತಿ ಎದುರಾಗಬಾರದು ಎಂದು ಅವರು ಹೇಳಿದ್ದಾರೆ.

  • ಉತ್ತರಾಖಂಡದಲ್ಲಿ ಭೂಕುಸಿತ – ಸಂಕಷ್ಟಕ್ಕೆ ಸಿಲುಕಿದ 300 ಮಂದಿ ಪ್ರಯಾಣಿಕರು

    ಉತ್ತರಾಖಂಡದಲ್ಲಿ ಭೂಕುಸಿತ – ಸಂಕಷ್ಟಕ್ಕೆ ಸಿಲುಕಿದ 300 ಮಂದಿ ಪ್ರಯಾಣಿಕರು

    ಡೆಹ್ರಾಡೂನ್: ಉತ್ತರಾಖಂಡದ (Uttarakhand) ಪಿಥೋರಗಢದಲ್ಲಿ (Pithoragarh) ಭೂಕುಸಿತ (Landslide) ಉಂಟಾದ ಪರಿಣಾಮ ರಸ್ತೆ ಕೊಚ್ಚಿಹೋಗಿದ್ದು, 300 ಮಂದಿ ಪ್ರಯಾಣಿಕರು ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದಾರೆ.

    ಲಖನ್‌ಪುರ (Lakhanpur) ಬಳಿಯ ಧಾರ್ಚುಲದಿಂದ 45 ಕಿಮೀ ಎತ್ತರದ ಲಿಪುಲೇಖ್ – ತವಾಘಾಟ್ ರಸ್ತೆಗೆ ಬೆಟ್ಟ ಕುಸಿದು ಬಿದ್ದಿದ್ದು, 100 ಮೀಟರ್ ರಸ್ತೆ ಕೊಚ್ಚಿ ಹೋಗಿದೆ. ಭೂಕುಸಿತದ ಪರಿಣಾಮ ಧಾರ್ಚುಲ ಮತ್ತು ಗುಂಜಿಯಲ್ಲಿ ಪ್ರಯಾಣಿಕರು ಪರದಾಡುವಂತಾಗಿದೆ. ಇದನ್ನೂ ಓದಿ: ಅಪ್ರಾಪ್ತೆಯನ್ನು ವಿವಾಹವಾಗಿ ಗರ್ಭಿಣಿ ಮಾಡಿದ 17ರ ಹುಡುಗ ಅರೆಸ್ಟ್

    ಪಿಥೋರಗಢದ ಹೊರವಲಯದಲ್ಲಿ, ಧಾರ್ಚುಲಾ ಮೇಲೆ 45 ಕಿ.ಮೀ ದೂರದಲ್ಲಿರುವ ಲಿಪುಲೇಖ್-ತವಾಘಾಟ್ ಮೋಟಾರು ರಸ್ತೆ, ಲಖನ್‌ಪುರ ಬಳಿ ಭೂಕುಸಿತದಿಂದಾಗಿ 100 ಮೀಟರ್ ರಸ್ತೆ ಕೊಚ್ಚಿಹೋಗಿದೆ. ಇದರಿಂದಾಗಿ ಸುಮಾರು 300 ಜನ ಪ್ರಯಾಣಿಕರು ಧಾರ್ಚುಲಾ ಮತ್ತು ಗುಂಜಿಯಲ್ಲಿ ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದಾರೆ. ಅಲ್ಲದೇ ಇನ್ನೆರಡು ದಿನಗಳಲ್ಲಿ ರಸ್ತೆ ಸಂಚಾರ ಮತ್ತೆ ಪ್ರಾರಂಭವಾಗುವ ಸಾಧ್ಯತೆಯಿದೆ ಎಂದು ವರದಿಗಳು ಹೇಳಿವೆ. ಇದನ್ನೂ ಓದಿ: ಕರ್ನಾಟಕ ಸೇರಿದಂತೆ 3 ರಾಜ್ಯಗಳ 25 ಕಡೆ ಎನ್‌ಐ ದಾಳಿ – 17.50 ಲಕ್ಷ ಜಪ್ತಿ

    ರಾಜ್ಯದ ಅಲ್ಮೋರಾ, ಬಾಗೇಶ್ವರ್, ಚಮೋಲಿ, ಚಂಪಾವತ್, ಡೆಹ್ರಾಡೂನ್, ಗರ್ವಾಲ್, ಹರ್ದ್ವಾರ್, ನೈನಿತಾಲ್, ಪಿಥೋರಗಢ, ರುದ್ರಪ್ರಯಾಗ, ತೆಹ್ರಿ ಗರ್ವಾಲ್, ಉಧಮ್ ಸಿಂಗ್ ನಗರ ಮತ್ತು ಉತ್ತರಕಾಶಿ ಜಿಲ್ಲೆಗಳಲ್ಲಿ ಧೂಳಿನ ಬಿರುಗಾಳಿ ಮತ್ತು ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಇದನ್ನೂ ಓದಿ: India GDP – ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿ ಹೊರಹೊಮ್ಮಿದ ಭಾರತ

    ಈ ಕುರಿತು ಪೊಲೀಸರು ಕೂಡಾ ಸೂಚನೆ ನೀಡಿದ್ದು, ಯಾತ್ರಾರ್ಥಿಗಳು ಸುರಕ್ಷಿತ ಸ್ಥಳಗಳಲ್ಲಿ ಉಳಿಯಿರಿ. ಅನಗತ್ಯವಾಗಿ ಎಲ್ಲಿಯೂ ಸಂಚರಿಸದೇ ತಮ್ಮ ವಾಹನಗಳನ್ನು ಸುರಕ್ಷಿತ ಜಾಗದಲ್ಲಿ ನಿಲ್ಲಿಸಿ. ಹವಾಮಾನ ಸರಿಯಿದ್ದಾಗ ಮಾತ್ರ ಸಂಚರಿಸಿ ಎಂದು ಎಚ್ಚರಿಕೆ ನೀಡಿದ್ದಾರೆ. ಯಮುನೋತ್ರಿ ಮತ್ತು ಗಂಗೋತ್ರಿ ಧಾಮ ಯಾತ್ರೆಗೆ ಬರುವ ಎಲ್ಲಾ ಭಕ್ತರು ಹವಾಮಾನ ಮುನ್ಸೂಚನೆಯನ್ನು ತಿಳಿದ ನಂತರ ಪ್ರಯಾಣಿಸಿ. ಅಲ್ಲದೇ ತಮ್ಮೊಂದಿಗೆ ಛತ್ರಿ ಮತ್ತು ಬೆಚ್ಚಗಿನ ಬಟ್ಟೆಗಳನ್ನು ಇಟ್ಟುಕೊಳ್ಳಿ ಎಂದು ಯಾತ್ರಾರ್ಥಿಗಳಲ್ಲಿ ಮನವಿ ಮಾಡಲಾಗಿದೆ. ಇದನ್ನೂ ಓದಿ: ಜ್ಞಾನವಾಪಿ ಕೇಸ್‌ – ಮುಸ್ಲಿಂ ಸಮಿತಿ ಸಲ್ಲಿಸಿದ್ದ ಅರ್ಜಿ ವಜಾ, ಐವರು ಹಿಂದೂ ಮಹಿಳೆಯರಿಗೆ ಗೆಲುವು

  • ಕುಡಿದ ಮತ್ತಿನಲ್ಲಿ ಗೂಳಿ ಸವಾರಿ ಮಾಡಿದ ಯುವಕ

    ಕುಡಿದ ಮತ್ತಿನಲ್ಲಿ ಗೂಳಿ ಸವಾರಿ ಮಾಡಿದ ಯುವಕ

    ಡೆಹ್ರಾಡೋನ್: ಕುಡಕನೊಬ್ಬ ಬೀದಿಯಲ್ಲಿ ಗೂಳಿಯ (Bull) ಮೇಲೆ ಸವಾರಿ ಮಾಡಿದ ಘಟನೆ ಉತ್ತರಾಖಂಡದ (Uttarakhand) ರಿಷಿಕೇಶದ (Rishikesh) ತಪೋವನ ಪ್ರದೇಶದಲ್ಲಿ ನಡೆದಿದೆ.

    ಕುಡಿದ ಮತ್ತಿನಲ್ಲಿದ್ದ ಯುವಕ (Drunk Man) ವೈರಲ್ ವೀಡಿಯೋವನ್ನು ಮಾಡಲು ಈ ರೀತಿ ಮಾಡಿದ್ದ. ಯುವಕನು ಗೂಳಿಯ ಮೇಲೆ ಕುಳಿತು ರಸ್ತೆಯಲ್ಲಿ ಸವಾರಿ ಮಾಡುತ್ತಿದ್ದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಉತ್ತರಾಖಂಡದ ಪೊಲೀಸರು ತನಿಖೆ ನಡೆಸಿದ್ದಾರೆ.

    ಈ ವೇಳೆ ಯುವಕನನ್ನು ಉತ್ತರಾಖಂಡದ ರಿಷಿಕೇಶದ ತಪೋವನ ಪ್ರದೇಶದ ನಿವಾಸಿ ಎಂದು ಗುರುತಿಸಲಾಗಿದೆ. ಅಷ್ಟೇ ಅಲ್ಲದೇ ಆತನ ವಿರುದ್ಧ ಮಧ್ಯರಾತ್ರಿಯ ಸಮಯದಲ್ಲಿ ಅಶಾಂತಿಯನ್ನು ಸೃಷ್ಟಿಸಿರುವುದು ಹಾಗೂ ಪ್ರಾಣಿಗಳನ್ನು ಅನುಚಿತವಾಗಿ ನಡೆಸಿಕೊಂಡಿರುವ ಬಗ್ಗೆ ಪ್ರಕರಣ ದಾಖಲಿಸಿದ್ದಾರೆ. ಘಟನೆಗೆ ಸಂಬಂಧಿಸಿ ಆತನನ್ನು ವಿಚಾರಣೆಗೆ ಒಳಪಡಿಸಿ ಭವಿಷ್ಯದಲ್ಲಿ ಪ್ರಾಣಿಗಳೊಂದಿಗೆ ಇಂತಹ ಸಾಹಸಗಳನ್ನು ಮಾಡದಂತೆ ಎಚ್ಚರಿಕೆ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಘಟನೆಯ ಕುರಿತು ಉತ್ತರಾಖಂಡ ಪೊಲೀಸರು ಟ್ವೀಟ್ ಮಾಡಿದ್ದಾರೆ. ಟ್ವೀಟ್‍ನಲ್ಲಿ ಋಷಿಕೇಶದ ತಪೋವನದಲ್ಲಿ ಕುಡುಕನೊಬ್ಬ ಗೂಳಿಯ ಮೇಲೆ ಸವಾರಿ ಮಾಡಿದ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು. ಈ ಹಿನ್ನೆಲೆಯಲ್ಲಿ ವೀಡಿಯೋಕ್ಕೆ ಸಂಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದೇವೆ. ಯುವಕನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದ್ದು, ಭವಿಷ್ಯದಲ್ಲಿ ಈ ರೀತಿ ಪ್ರಾಣಿಗಳೊಂದಿಗೆ ಅನುಚಿತವಾಗಿ ವರ್ತಿಸದಂತೆ ಯುವಕನಿಗೆ ಎಚ್ಚರಿಸಲಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಉಗ್ರರ ಜೊತೆ ಸ್ಥಳೀಯರ ಶಾಮೀಲು – ಜಮ್ಮು ಕಾಶ್ಮೀರದಲ್ಲಿ 15 ಕಡೆ ಎನ್‍ಐಎ ಶೋಧ

    ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಅನೇಕರು ಈ ವೀಡಿಯೋ ಕುರಿತು ಕಿಡಿಕಾರಿದ್ದಾರೆ. ಅಷ್ಟೇ ಅಲ್ಲದೇ ಈ ರೀತಿ ಮಾಡುವುದು ಸೂಕ್ತವಲ್ಲ ಎಂದು ತಿಳಿಸಿದರೇ, ಇನ್ನೂ ಕೆಲವರು ಈ ವೀಡಿಯೋವನ್ನು ಜೆಲ್ಲಿಕಟ್ಟಿಗೆ ಹೋಲಿಸಿದ್ದಾರೆ. ಇದನ್ನೂ ಓದಿ: ಮತಗಟ್ಟೆ ತರಬೇತಿಯಲ್ಲಿ ಉದ್ಧಟತನ – ಮಹಿಳಾ ಇನ್‌ಸ್ಪೆಕ್ಟರ್‌ ಅಮಾನತು

  • ಮಳೆ, ಹಿಮಪಾತ – ತಂಗಿರುವ ಸ್ಥಳದಲ್ಲಿಯೇ ಇರಿ: ಕೇದಾರನಾಥ ಯಾತ್ರಾರ್ಥಿಗಳಿಗೆ ಎಚ್ಚರಿಕೆ

    ಮಳೆ, ಹಿಮಪಾತ – ತಂಗಿರುವ ಸ್ಥಳದಲ್ಲಿಯೇ ಇರಿ: ಕೇದಾರನಾಥ ಯಾತ್ರಾರ್ಥಿಗಳಿಗೆ ಎಚ್ಚರಿಕೆ

    ಡೆಹ್ರಾಡೂನ್: ಹಿಮಾಲಯದ ಎತ್ತರದ ಪ್ರದೇಶಗಳಲ್ಲಿ ಭಾರೀ ಮಳೆ (Rain) ಮತ್ತು ಹಿಮಪಾತವಾಗುವ (Snowfall) ಸಾಧ್ಯತೆಯ ಹಿನ್ನೆಲೆಯಲ್ಲಿ, ಹವಾಮಾನ ಇಲಾಖೆಯು ಮುಂದಿನ 2-3 ದಿನಗಳವರೆಗೆ ಎಚ್ಚರಿಕೆಯನ್ನು ನೀಡಿದೆ. ಹವಾಮಾನ ಉತ್ತಮವಾಗುವವರೆಗೆ ತಂಗಿರುವ ಸ್ಥಳದಲ್ಲಿಯೇ ಇರುವಂತೆ ಕೇದಾರನಾಥ (Kedarnath) ಯಾತ್ರಾರ್ಥಿಗಳಿಗೆ (Pilgrims) ತಿಳಿಸಲಾಗಿದೆ.

    ಕೇದಾರನಾಥಕ್ಕೆ ಭೇಟಿ ನಿಡಲು ಬರುವ ಯಾತ್ರಾರ್ಥಿಗಳ ಸುರಕ್ಷತೆಗಾಗಿ ಮನವಿ ಮಾಡಲಾಗುತ್ತಿದೆ. ಹವಾಮಾನ ಉತ್ತಮವಾಗುವವರೆಗೆ ಪ್ರಯಾಣಿಕರು ಅದೇ ಸ್ಥಳದಲ್ಲಿ ಇರಿ. ಮುಂಜಾಗೃತ ಕ್ರಮಗಳನ್ನು ಅನುಸರಿಸಿಯೇ ಯಾತ್ರೆಯನ್ನು ಮುಂದುವರಿಸಿ ಎಂದು ರುದ್ರಪ್ರಯಾಗದ ಜಿಲ್ಲಾಧಿಕಾರಿ ಮಯೂರ್ ದೀಕ್ಷಿತ್ ಹೇಳಿದರು.

    ಕೇದಾರನಾಥ ಧಾಮದಲ್ಲಿ ನಿರಂತರವಾಗಿ ಹಿಮಪಾತವಾಗುತ್ತಿದ್ದು, ಯಾತ್ರೆಯನ್ನು ನಿಯಂತ್ರಿಸಲಾಗುತ್ತಿದೆ. ಸೋನ್‌ಪ್ರಯಾಗದಿಂದ ಬೆಳಗ್ಗೆ 10:30ರ ಬಳಿಕ ಕೇದಾರನಾಥಕ್ಕೆ ಹೋಗಲು ಅನುಮತಿ ನೀಡಲಾಗುತ್ತಿಲ್ಲ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಕೇರಳದಲ್ಲಿ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲಿನ ಮೇಲೆ ಕಲ್ಲು ತೂರಾಟ

    ಎಲ್ಲ ಪ್ರಯಾಣಿಕರು ತಮ್ಮ ಸುರಕ್ಷತೆಯ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತ ಹೊರಡಿಸಿರುವ ಮಾರ್ಗಸೂಚಿಗಳನ್ನು ಅನುಸರಿಸಿ ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕು. ಹವಾಮಾನ ಉತ್ತಮವಾದ ಬಳಿಕ ಮಾತ್ರ ಎಲ್ಲಾ ಯಾತ್ರಾರ್ಥಿಗಳು ಕೇದಾರನಾಥಕ್ಕೆ ತಮ್ಮ ಪ್ರಯಾಣವನ್ನು ಬೆಳೆಸಬಹುದು ಎಂದು ದೀಕ್ಷಿತ್ ಹೇಳಿದ್ದಾರೆ.

    ಏಪ್ರಿಲ್ 25 ರಂದು ಯಾತ್ರಾರ್ಥಿಗಳಿಗೆ ಕೇದಾರನಾಥದ ಬಾಗಿಲನ್ನು ತೆರೆಯಲಾಯಿತು. ಆದರೆ ಯಾತ್ರೆಯ ಮಾರ್ಗದಲ್ಲಿ ಹಿಮಪಾತ ಹಾಗೂ ಹವಾಮಾನ ಪ್ರತಿಕೂಲತೆಯ ಹಿನ್ನೆಲೆ ಉತ್ತರಾಖಂಡ (Uttarakhand) ಸರ್ಕಾರ ಕೇದಾರನಾಥ ಯಾತ್ರೆಗೆ ಯಾತ್ರಿಕರಿಂದ ನೋಂದಣಿ ಅರ್ಜಿಗಳನ್ನು ಸ್ವೀಕರಿಸುವುದನ್ನು ನಿಲ್ಲಿಸಿತು. ಇದನ್ನೂ ಓದಿ: ಬೊಂಬಾಟ್‌ ಬೌಲಿಂಗ್‌, ಮ್ಯಾಜಿಕ್‌ ಫೀಲ್ಡಿಂಗ್‌ – RCBಗೆ 18 ರನ್‌ಗಳ ಭರ್ಜರಿ ಜಯ

  • ಕೇದಾರನಾಥ ಯಾತ್ರೆ ಇಂದಿನಿಂದ ಆರಂಭ – ಯಾತ್ರಾರ್ಥಿಗಳಿಗೆ ಬಾಗಿಲು ತೆರೆದ ದೇವಾಲಯ

    ಕೇದಾರನಾಥ ಯಾತ್ರೆ ಇಂದಿನಿಂದ ಆರಂಭ – ಯಾತ್ರಾರ್ಥಿಗಳಿಗೆ ಬಾಗಿಲು ತೆರೆದ ದೇವಾಲಯ

    ಡೆಹ್ರಾಡೂನ್: ಕೇದಾರನಾಥ (Kedarnath Dham) ಯಾತ್ರೆ ಇಂದಿನಿಂದ (ಮಂಗಳವಾರ) ಆರಂಭವಾಗಿದ್ದು, ಕೇದಾರನಾಥ ಧಾಮದ ಬಾಗಿಲು ಯಾತ್ರಾರ್ಥಿಗಳಿಗೆ ತೆರೆದಿದೆ.

    ಶ್ಲೋಕಗಳ ಪಠ, ವಾದ್ಯಗಳ ಗಾಯನದೊಂದಿಗೆ ಇಂದು ಕೇದಾರನಾಥ ಧಾಮದ ಬಾಗಿಲು ತೆರೆಯಿತು. ಯಾತ್ರಾರ್ಥಿಗಳು ಸಂಭ್ರಮದಿಂದ ದೇವಾಲಯ ಪ್ರವೇಶಿಸುತ್ತಿದ್ದಾರೆ. ದಿನವೊಂದಕ್ಕೆ 13 ಸಾವಿರ ಯಾತ್ರಾರ್ಥಿಗಳಿಗೆ ದೇವಾಲಯ ಪ್ರವೇಶಕ್ಕೆ ಅನುಮತಿ ನೀಡಲಾಗುವುದು. ಇದನ್ನೂ ಓದಿ: ಹೃದಯ-ಶ್ವಾಸಕೋಶ ವೈಫಲ್ಯವೇ ಚೀತಾ ಸಾವಿಗೆ ಕಾರಣ: ವೈದ್ಯರ ಸ್ಪಷ್ಟನೆ

    ಆದಾಗ್ಯೂ, ಯಾತ್ರಾ ಮಾರ್ಗದಲ್ಲಿ ಭಾರೀ ಹಿಮಪಾತ ಮತ್ತು ಹವಾಮಾನ ಇಲಾಖೆಯಿಂದ ಬಂದಿರುವ ಪ್ರತಿಕೂಲ ಹವಾಮಾನದ ಎಚ್ಚರಿಕೆಯನ್ನು ಗಮನದಲ್ಲಿಟ್ಟುಕೊಂಡು ಉತ್ತರಾಖಂಡ ಸರ್ಕಾರ ಕೇದಾರನಾಥ ಧಾಮ ಯಾತ್ರೆಗೆ ಯಾತ್ರಿಕರಿಂದ ನೋಂದಣಿ ಅರ್ಜಿಗಳನ್ನು ಸ್ವೀಕರಿಸುವುದನ್ನು ನಿಲ್ಲಿಸಿದೆ. ಭಾರತೀಯ ಹವಾಮಾನ ಇಲಾಖೆ (IMD) ಕೇದಾರನಾಥ ಧಾಮ್ ಮಾರ್ಗದಲ್ಲಿ ಭಾರೀ ಹಿಮಪಾತದ ಬಗ್ಗೆ ಎಚ್ಚರಿಕೆ ನೀಡಿದೆ.

    ಅಕ್ಷಯ ತೃತೀಯದ ಶುಭ ಸಂದರ್ಭದಲ್ಲಿ ಯಮುನೋತ್ರಿ ಧಾಮದಿಂದ ಯಾತ್ರೆ ಆರಂಭವಾಯಿತು. ಈ ಬಾರಿ ಯಾತ್ರಾರ್ಥಿಗಳಿಗೆ ಸರ್ಕಾರ ಟೋಕನ್‌ ವ್ಯವಸ್ಥೆಯನ್ನು ಕಲ್ಪಿಸಿದೆ. ಸುಗಮ ಯಾತ್ರೆಗಾಗಿ ಈ ನಿರ್ಧಾರ ಕೈಗೊಂಡಿದೆ. ಯಾತ್ರಾ ಸ್ಥಳದಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್‌ ಕಲ್ಪಿಸಲಾಗಿದೆ. ಇದನ್ನೂ ಓದಿ: ಕೊಚ್ಚಿಯಲ್ಲಿ ಭಾರತದ ಮೊದಲ ವಾಟರ್ ಮೆಟ್ರೋ ಸೇವೆ – ಇಂದು ಪ್ರಧಾನಿ ಮೋದಿ ಚಾಲನೆ

    ಯಾತ್ರಾರ್ಥಿಗಳ ಆರೋಗ್ಯದ ದೃಷ್ಟಿಯಿಂದ ಜಿಲ್ಲಾಡಳಿತ ಹಲವು ಕ್ರಮಕೈಗೊಂಡಿದೆ. 12 ವೈದ್ಯಕೀಯ ಶಿಬಿರಗಳನ್ನು ತೆರೆದಿದ್ದು, ವೈದ್ಯರು ಹಾಗೂ ಅರೆವೈದ್ಯಕೀಯ ಸಿಬ್ಬಂದಿ ನಿಯೋಜಿಸಿದೆ. ಅಂಬುಲೆನ್ಸ್‌ ಸೇವೆ ಕೂಡ ಕಲ್ಪಿಸಲಾಗಿದೆ. ತುರ್ತು ಸೇವೆಗಾಗಿ ಏರ್‌ ಅಂಬುಲೆನ್ಸ್‌ ಸೇವೆಗೆ ಉತ್ತರಾಖಂಡ (Uttarakhand) ಸರ್ಕಾರ ಅನುಮತಿ ನೀಡಿದೆ.

  • ಉತ್ತರಾಖಂಡದಲ್ಲಿ ಹೆಲಿಕಾಪ್ಟರ್‌ನ ರೆಕ್ಕೆ ಬಡಿದು ಅಧಿಕಾರಿ ಸಾವು

    ಉತ್ತರಾಖಂಡದಲ್ಲಿ ಹೆಲಿಕಾಪ್ಟರ್‌ನ ರೆಕ್ಕೆ ಬಡಿದು ಅಧಿಕಾರಿ ಸಾವು

    ಡೆಹ್ರಾಡೂನ್: ಉತ್ತರಾಖಂಡದ (Uttarakhand) ಕೇದಾರನಾಥ ದೇವಾಲಯವನ್ನು (Kedarnath Temple) ಯಾತ್ರಾರ್ಥಿಗಳಿಗೆ ತೆರೆಯಲು ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಆದರೆ ಯಾತ್ರೆ ಆರಂಭವಾಗುವುದಕ್ಕೂ ಮುನ್ನವೇ ಅವಘಡವೊಂದು ಸಂಭವಿಸಿದೆ. ದೇವಾಲಯದ ಸಿದ್ಧತೆ ಪರಿಶೀಲನೆಗೆ ತೆರಳಿದ್ದ ಉತ್ತರಾಖಂಡದ ಸರ್ಕಾರಿ ಅಧಿಕಾರಿಯೊಬ್ಬರಿಗೆ ಹೆಲಿಕಾಪ್ಟರ್‌ನ (Helicopter) ರೆಕ್ಕೆ ಬಡಿದು ಭಾನುವಾರ ಮೃತಪಟ್ಟಿದ್ದಾರೆ.

    ಗಡ್ವಾಲ್ ಮಂಡಲ್ ವಿಕಾಸ್ ನಿಗಮ್ ಲಿಮಿಟೆಡ್ (JMVN) ಹೆಲಿಪ್ಯಾನ್‌ನಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ಮೃತ ಅಧಿಕಾರಿಯನ್ನು ಉತ್ತರಾಖಂಡದ ನಗರಿಕ ವಿಮಾನಯಾನ ಅಭಿವೃದ್ಧಿ ಪ್ರಾಧಿಕಾರದ (UCADA) ಹಣಕಾಸು ನಿಯಂತ್ರಕ ಅಮಿತ್ ಸೈನಿ ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ಪಕ್ಷಿ ಬಡಿದು ಎಂಜಿನ್‌ಗೆ ಬೆಂಕಿ – ತುರ್ತು ಭೂಸ್ಪರ್ಶ ಮಾಡಿದ ವಿಮಾನ

    ಮೂಲಗಳ ಪ್ರಕಾರ ಹೆಲಿಕಾಪ್ಟರ್‌ನ ಹಿಂದಿನ ಭಾಗದ ರೆಕ್ಕೆ ಅಮಿತ್ ಸೈನಿ ಅವರ ಕತ್ತನ್ನು ಸೀಳಿದೆ. ಇದರಿಂದ ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.

    ಆದರೆ ಘಟನೆಯ ಹಿಂದಿನ ಕಾರಣ ಇನ್ನೂ ದೃಢಪಟ್ಟಿಲ್ಲ. ಸೇನಿ ಅವರು ಹೆಲಿಕಾಪ್ಟರ್‌ನ ಹಿಂಬದಿಯ ರೆಕ್ಕೆಯ ಬಳಿಗೆ ಏಕೆ ಹೋದರು ಎಂಬುದು ತಿಳಿದುಬಂದಿಲ್ಲ. ಅವರು ಸೆಲ್ಫಿ ತೆಗೆಯಲು ಮುಂದಾಗಿದ್ದಾಗ ದುರ್ಘಟನೆ ನಡೆದಿದೆ ಎಂಬುದು ವದಂತಿಯಾಗಿದೆ ಎಂದು ಎಸ್‌ಪಿ ವಿಶಾಖ್ ಅಶೋಕ್ ಭದನೆ ತಿಳಿಸಿದ್ದಾರೆ. ಇದನ್ನೂ ಓದಿ: ಕರ್ನಾಟಕ ಚುನಾವಣೆ – ಏ.26 ಕ್ಕೆ ರಾಜ್ಯಕ್ಕೆ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಎಂಟ್ರಿ

  • ನಕಲಿ ಔಷಧಗಳ ಹಾವಳಿ- 18 ಫಾರ್ಮಾ ಕಂಪನಿಗಳ ಪರವಾನಗಿ ರದ್ದು

    ನಕಲಿ ಔಷಧಗಳ ಹಾವಳಿ- 18 ಫಾರ್ಮಾ ಕಂಪನಿಗಳ ಪರವಾನಗಿ ರದ್ದು

    ನವದೆಹಲಿ: ನಕಲಿ ಔಷಧಗಳನ್ನು (Spurious medicines) ತಯಾರಿಸುತ್ತಿದ್ದ ಆರೋಪದ ಮೇಲೆ 18 ಫಾರ್ಮಾ ಕಂಪನಿಗಳ (Pharma Companies) ಪರವಾನಗಿಯನ್ನು ಔಷಧ ನಿಯಂತ್ರಣ ಇಲಾಖೆ (DCGI) ರದ್ದುಗೊಳಿಸಿದೆ.

    20 ರಾಜ್ಯಗಳ 76 ಕಂಪನಿಗಳ ಮೇಲೆ ತಪಾಸಣೆ ನಡೆಸಿದ ನಂತರ ಇಲಾಖೆ ಈ ಕ್ರಮವನ್ನು ಕೈಗೊಂಡಿದೆ. ಅಲ್ಲದೆ ಹಿಮಾಚಲ ಪ್ರದೇಶದ (Himachal Pradesh) 70, ಉತ್ತರಾಖಂಡ್‍ನ (Uttarakhand) 45 ಮತ್ತು ಮಧ್ಯಪ್ರದೇಶದ 23 ಕಂಪನಿಗಳ ಮೇಲೆ ಸರ್ಕಾರ ಕ್ರಮ ಕೈಗೊಂಡಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಇದನ್ನೂ ಓದಿ: ನಾನೇನಾದ್ರೂ ರೇಪ್ ಮಾಡಿದ್ನಾ: ಏನ್ ತಪ್ಪು ಮಾಡಿದ್ದೆ? – ಟಿಕೆಟ್ ಕೈತಪ್ಪಿದ್ದಕ್ಕೆ ಸವದಿ ಬೇಸರ

    ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶದಲ್ಲಿ ಕ್ರಮ ಕೈಗೊಳ್ಳಲಾಗಿರುವ ಹೆಚ್ಚಿನ ಕಂಪನಿಗಳು ನೋಂದಣಿಯಾಗಿವೆ. ಡೆಹ್ರಾಡೂನ್‍ನಲ್ಲಿ ನೋಂದಾಯಿಸಲಾದ ಹಿಮಾಲಯ ಮೆಡಿಟೆಕ್ ಪ್ರೈವೇಟ್ ಲಿಮಿಟೆಡ್‍ನ ಪರವಾನಗಿಯನ್ನು 2022ರ ಡಿ.30 ರಂದು ಅಮಾನತುಗೊಳಿಸಲಾಗಿತ್ತು. 12 ಉತ್ಪನ್ನಗಳನ್ನು ತಯಾರಿಸಲು ನೀಡಿದ್ದ ಅನುಮತಿಯನ್ನು 2023ರ ಫೆ.7 ರಂದು ರದ್ದುಗೊಳಿಸಲಾಗಿತ್ತು.

    ಈ ಹಿಂದೆ ಹಿಮಾಚಲ ಪ್ರದೇಶದ ಶ್ರೀ ಸಾಯಿ ಬಾಲಾಜಿ ಕಂಪನಿಗೆ ಶೋಕಾಸ್ ನೋಟಿಸ್ ನೀಡಿ, ಔಷಧಗಳ ತಯಾರಿಕೆ ನಿಲ್ಲಿಸುವಂತೆ ಸೂಚಿಸಲಾಗಿತ್ತು. ಪರಿಶೀಲನೆಯ ನಂತರ ಹಿಂದಿನ ಆದೇಶವನ್ನು ರದ್ದುಗೊಳಿಸಲಾಗಿತ್ತು.

    ಅಲ್ಲದೆ ಇಜಿ ಫಾರ್ಮಾಸ್ಯುಟಿಕಲ್ಸ್, ವಿಲ್ ಮಂಡಲ, ತೆಹ್ ಕಸೌಲಿ, ಡಿಸ್ಟ್ ಸೋಲನ್ ಸಂಸ್ಥೆಗಳಿಗೂ ನೋಟಿಸ್ ನೀಡಲಾಗಿತ್ತು. ಪರಿಶೀಲನೆಯ ನಂತರ ಉತ್ಪಾದನೆ ನಿಷೇಧಿಸಿದ್ದ ಆದೇಶವನ್ನು ಹಿಂಪಡೆಯಲಾಗಿದೆ. ಅಥೆನ್ಸ್ ಲೈಫ್ ಸೈನ್ಸಸ್ ಕಂಪನಿಗೂ ಸಹ ಎಚ್ಚರಿಕೆಯನ್ನು ನೀಡಲಾಗಿತ್ತು.

    ಹಿಮಾಚಲದ ಸೋಲನ್‍ನ ಜಿಎನ್‍ಬಿ ಮೆಡಿಕಾ ಲ್ಯಾಬ್‍ಗೆ ಮಾತ್ರೆಗಳು, ಕ್ಯಾಪ್ಸುಲ್‍ಗಳು, ಕೆಮ್ಮಿನ ಔಷಧಿಗಳು, ಚುಚ್ಚುಮದ್ದು ಮತ್ತು ಪ್ರೋಟಿನ್ ಪೌಡರ್ ಉತ್ಪಾದನೆಯನ್ನು ನಿಲ್ಲಿಸುವಂತೆ ಆದೇಶಿಸಲಾಗಿದೆ. ಕಂಪನಿಯ ಔಷಧಗಳನ್ನು ಪರಿಶೀಲನೆಗಾಗಿ ಕಳುಹಿಸಲಾಗಿದೆ.

    ಫರಿದಾಬಾದ್‍ನಲ್ಲಿ ನೋಂದಾಯಿಸಲಾದ ನೆಸ್ಟರ್ ಕಂಪನಿಗೆ ಜ.30 ರಂದು ಶೋಕಾಸ್ ನೋಟಿಸ್ ನೀಡಲಾಗಿತ್ತು. ಪರಿಶೀಲನೆ ನಡೆಸಿದ ನಂತರ ಡ್ರಗ್ಸ್ ಮತ್ತು ಕಾಸ್ಮೆಟಿಕ್ಸ್ ಕಾಯಿದೆಯ ಅಡಿಯಲ್ಲಿ ರೂಪಿಸಲಾದ ನಿಯಮಗಳನ್ನು ಅನುಸರಿಸಲು ಎಚ್ಚರಿಕೆ ನೀಡಲಾಗಿತ್ತು.

    ನಕಲಿ ಔಷಧಗಳ ತಯಾರಿಕೆಗೆ ಸಂಬಂಧಿಸಿದಂತೆ ದೇಶಾದ್ಯಂತ ಫಾರ್ಮಾ ಕಂಪನಿಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಚುನಾವಣೆ ವೇಳೆ ಶಾಂತಿ ಕದಡಲು ವಿಎಚ್‍ಪಿ ಅಧ್ಯಕ್ಷನ ಮೇಲೆ ಫೈರಿಂಗ್: ಬೋಪಯ್ಯ

  • ಭಾರತೀಯ ಯುವತಿಯೊಂದಿಗೆ ಸಪ್ತಪದಿ ತುಳಿದ ಕೆನಡಾ ಯುವಕ

    ಭಾರತೀಯ ಯುವತಿಯೊಂದಿಗೆ ಸಪ್ತಪದಿ ತುಳಿದ ಕೆನಡಾ ಯುವಕ

    ಡೆಹ್ರಾಡೂನ್:‌ ಪ್ರೀತಿಗೆ ಯಾವುದೇ ಗಡಿಯಿಲ್ಲ. ಪರಸ್ಪರರು ಪ್ರೀತಿಸಿದರೆ ದೇಶ, ಭಾಷೆ, ಗಡಿ ಎಲ್ಲವನ್ನೂ ಮೀರಿ ಒಂದಾಗಲು ಪ್ರಯತ್ನಿಸುತ್ತಾರೆ. ಅಂತೆಯೇ ಭಾರತೀಯ ಯುವತಿಯನ್ನು ಕೆನಡಾದ ಯುವಕ ಮದುವೆಯಾಗಿದ್ದಾನೆ. ಭಾರತೀಯ ಸಂಪ್ರದಾಯದಂತೆ ಯುವತಿಯ ಕೈ ಹಿಡಿದಿದ್ದಾನೆ.

    ಕೆನಡಾದ ಶಾನ್ ತಾಯಿ ಕರೋಲ್ ಹ್ಯೂಸ್ ಅವರು ಕೆನಡಾದ ಹೌಸ್ ಆಫ್ ಕಾಮನ್ಸ್ ಸದಸ್ಯರಾಗಿದ್ದಾರೆ. ಫೆಡರಲ್ ಚುನಾವಣೆಗಳಲ್ಲಿ ನಾಲ್ಕು ಬಾರಿ ಆಯ್ಕೆಯಾಗಿದ್ದಾರೆ. ಭಾರತದ ಶೀತಲ್ ಅವರ ಮಾವ ಕೀತ್ ಹ್ಯೂಸ್ ಕೆನಡಾದ ನಿಕಲ್ ಮೈನಿಂಗ್‌ನಲ್ಲಿ ಅಧಿಕಾರಿಯಾಗಿದ್ದಾರೆ.‌ ದೇಶ, ಸಂಪ್ರದಾಯದಲ್ಲಿ ಭಿನ್ನತೆ ಇದ್ದರೂ ಒಬ್ಬರನ್ನೊಬ್ಬರು ಪ್ರೀತಿಸಿದ್ದರು. ಇದನ್ನೂ ಓದಿ: ಹೀಗೊಂದು ಪ್ರೇಮ ಕಥೆ? – ಅವಳ ಗಂಡನನ್ನು ಇವಳು, ಇವಳ ಪತಿಯನ್ನು ಅವಳು ಮದುವೆಯಾದ್ರು!

    ಆಧ್ಯಾತ್ಮಿಕ ಮಹತ್ವಕ್ಕೆ ಹೆಸರುವಾಸಿಯಾದ ರಿಷಿಕೇಶದಲ್ಲಿ ವಿವಾಹ ಸಮಾರಂಭವನ್ನು ಆಯೋಜಿಸಲಾಗಿತ್ತು. ಶಾನ್ ಭಾರತೀಯ ಸಂಪ್ರದಾಯದಂತೆ ಶೀತಲ್ ಅವರೊಂದಿಗೆ ಸಪ್ತಪದಿ ತುಳಿದರು.

    ಶೀತಲ್ ಅವರ ತಂದೆ ಹಲವು ವರ್ಷಗಳ ಹಿಂದೆ ನಿಧನರಾಗಿದ್ದರು. ಆಕೆಯ ಚಿಕ್ಕಪ್ಪ ನಟವರ್ ಶ್ಯಾಮ್ ಮತ್ತು ಅವರ ಕುಟುಂಬವನ್ನು ನೋಡಿಕೊಂಡರು. ಶೀತಲ್ ಅವರು ರಿಷಿಕೇಶದ ಓಂಕಾರಾನಂದ ಶಾಲೆಯಲ್ಲಿ ಅಧ್ಯಯನ ಮಾಡಿದ್ದರು. ಕೆನಡಾದಲ್ಲಿ ಪಿಹೆಚ್‌ಡಿ ಮಾಡಿದ್ದರು. ಪ್ರಸ್ತುತ ಕೆನಡಾದಲ್ಲಿ ನೇತ್ರಶಾಸ್ತ್ರಜ್ಞರಾಗಿ ಕೆಲಸ ಮಾಡುತ್ತಿದ್ದಾರೆ. ಇದನ್ನೂ ಓದಿ: ಅದಾನಿ ಸಮೂಹ ಕಂಪನಿಗಳಲ್ಲಿ 15,446 ಕೋಟಿ ಹೂಡಿಕೆ – ಅದಾನಿ ಕೈ ಹಿಡಿದ ರಾಜೀವ್‌ ಜೈನ್‌ ಯಾರು?

    ಮದುವೆಯ ನಂತರ ಶಾನ್ ಭಾರತೀಯ ವೈದಿಕ ಸಂಪ್ರದಾಯ ಮತ್ತು ಅವಿಭಕ್ತ ಕುಟುಂಬ ವ್ಯವಸ್ಥೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಪದ್ಧತಿಗಳಿಂದ ಪ್ರತಿಯೊಬ್ಬರೂ ತಮ್ಮ ದಾಂಪತ್ಯ ಜೀವನದಲ್ಲಿ ಅವಿಸ್ಮರಣೀಯವಾಗಿ ಉಳಿಯುತ್ತಾರೆ ಎಂದು ಹೇಳಿದರು.

  • ರಾಪರ್ ಆಗಲು ಕದ್ದ- ತನಿಖೆ ವೇಳೆ ರಾಪ್ ಸಾಂಗ್ ಹಾಡಿದ!

    ರಾಪರ್ ಆಗಲು ಕದ್ದ- ತನಿಖೆ ವೇಳೆ ರಾಪ್ ಸಾಂಗ್ ಹಾಡಿದ!

    ಡೆಹ್ರಾಡೂನ್: ಪೊಲೀಸರು ತನಿಖೆ ನಡೆಸುವಾಗ ಕಳ್ಳನೊಬ್ಬ ತನ್ನ ತಪ್ಪನ್ನು ರಾಪ್ ಸಾಂಗ್ ಮೂಲಕ ವಿಶಿಷ್ಟ ರೀತಿಯಲ್ಲಿ ಒಪ್ಪಿಕೊಂಡಿರುವ ಘಟನೆ ಉತ್ತರಾಖಂಡದಲ್ಲಿ (Uttarakhand) ನಡೆದಿದೆ.

    ಚಮೋಲಿಯ (Chamoli) ಅಂಗಡಿಯೊಂದರಲ್ಲಿ ಮೊಬೈಲ್ (mobile) ಹಾಗೂ ಕ್ಯಾಮೆರಾ (Camera) ಕಳವು ಮಾಡಿದ ಆರೋಪದ ಮೇರೆಗೆ ಸುಮಿತ್ ಖತ್ರಿ (19) ಎಂಬಾತನನ್ನು ಪೊಲೀಸರು ಬಂಧಿಸಿದ್ದರು. ತನಿಖೆ ನಡೆಸುವ ವೇಳೆ ಈ ಪ್ರಸಂಗ ನಡೆದಿದೆ. ಎಂದು ಪೊಲೀಸರು ಹೇಳಿದ್ದಾರೆ. ಇದನ್ನೂ ಓದಿ: ಧರ್ಮೇಂದ್ರ, ಅಮಿತಾಭ್, ಅಂಬಾನಿ ಮನೆಯಲ್ಲಿ ಬಾಂಬ್: ಪೊಲೀಸರಿಂದ ಶೋಧ

    KILLING CRIME

    ರಾಪರ್ ಆಗುವ ಆಸೆಯಿಂದ ಹಣವಿಲ್ಲದೆ ಖತ್ರಿ ಕಳ್ಳತನವೆಸಗಿದ್ದಾನೆ. ತನಿಖೆ ಸಂದರ್ಭದಲ್ಲಿ ತನ್ನ ತಪ್ಪಿಗೆ ಮರುಕಪಟ್ಟಿದ್ದಾನೆ.

    ಫೆ. 19 ರಂದು ಮಂದಿರ ಮಾರ್ಗದ (Mandir Marg) ಸಂಜಯ್ ಸಿಂಗ್ ಎಂಬವರಿಗೆ ಸೇರಿದ್ದ ಅಂಗಡಿಯ ಬೀಗ ಒಡೆದು 3.5 ಲಕ್ಷ ರೂ ಮೌಲ್ಯದ ಐದು ಮೊಬೈಲ್‍ಗಳನ್ನು ಹಾಗೂ ಒಂದು ಕ್ಯಾಮೆರಾವನ್ನು ಕಳ್ಳತನ ಮಾಡಲಾಗಿತ್ತು. ಈ ಕುರಿತು ಅಂಗಡಿಯ ಮಾಲೀಕ ಗೋಪೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದ. ಆರೋಪಿಯಂದ ಕದ್ದ ವಸ್ತುಗಳನ್ನು ವಶಪಡಿಸಿಕೊಂಡು ಸಂಜಯ್ ಸಿಂಗ್‍ಗೆ ಮರಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಅನುಷ್ಕಾಳೇ ನನ್ನ ಸ್ಫೂರ್ತಿ ಎಂದು ಪತ್ನಿಯನ್ನು ಹಾಡಿ ಹೊಗಳಿದ ವಿರಾಟ್ ಕೊಹ್ಲಿ

  • ಉತ್ತರಾಖಂಡ್‌ನಲ್ಲಿ `ಬಿಗ್ ಬಾಸ್’ ಖ್ಯಾತಿಯ ದೀಪಿಕಾ ದಾಸ್

    ಉತ್ತರಾಖಂಡ್‌ನಲ್ಲಿ `ಬಿಗ್ ಬಾಸ್’ ಖ್ಯಾತಿಯ ದೀಪಿಕಾ ದಾಸ್

    ಸ್ಯಾಂಡಲ್‌ವುಡ್ (Sandalwood) ನಟಿ ದೀಪಿಕಾ ದಾಸ್ (Deepika Das) ಅವರು ಉತ್ತರಾಖಂಡ್‌ಗೆ ಹಾರಿದ್ದಾರೆ. ಬಿಗ್ ಬಾಸ್ (Bigg Boss) ಸ್ಪರ್ಧಿ ದೀಪಿಕಾ ಅವರು ತಮ್ಮ ದುಬೈ ಟ್ರಿಪ್ ಬಳಿಕ ಉತ್ತರಾಖಂಡ್‌ಗೆ (Uttarakhand) ಶೂಟಿಂಗ್‌ಗಾಗಿ ತೆರಳಿದ್ದಾರೆ. ಈ ಕುರಿತ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ನಟಿ ಹಂಚಿಕೊಂಡಿದ್ದಾರೆ.

    `ನಾಗಿಣಿ’ (Nagini) ಸೀರಿಯಲ್ ಮತ್ತು ಬಿಗ್ ಬಾಸ್ (Bigg Boss Kannada) ರಿಯಾಲಿಟಿ ಶೋ ಮೂಲಕ ಗುರುತಿಸಿಕೊಂಡಿದ್ದ ನಟಿ ದೀಪಿಕಾ ದಾಸ್‌ಗೆ ಟ್ರಾವೆಲಿಂಗ್ ಎಂದರೆ ತುಂಬಾ ಇಷ್ಟ. ಆಗಾಗ ಹೊಸ ಹೊಸ ಜಾಗಗಳಿಗೆ ಭೇಟಿ ಕೊಡುವ ಮೂಲಕ ಟ್ರಿಪ್ ಏಂಜಾಯ್ ಮಾಡ್ತಿರುತ್ತಾರೆ. ಇತ್ತೀಚಿಗೆ ನಟಿ ದುಬೈಗೆ ಹೋಗಿದ್ದರು. ಕ್ರಿಕೆಟಿಗ ಕ್ರಿಸ್ ಗೇಲ್ ಅವರನ್ನ ನಟಿ ದೀಪಿಕಾ ದಾಸ್ ಭೇಟಿಯಾಗಿದ್ದರು. ಈ ಕುರಿತ ಫೋಟೋಗಳು ಸದ್ದು ಮಾಡಿತ್ತು.

    ಈಗ ದುಬೈಗೆ ಬೈ ಹೇಳಿದ ಬೆನ್ನಲ್ಲೇ ಉತ್ತರಾಖಂಡ್‌ಗೆ ದೀಪಿಕಾ ದಾಸ್ ತೆರಳಿದ್ದಾರೆ. ಉತ್ತರಾಖಂಡ್‌ನ ಸುಂದರ ಸ್ಥಳಗಳಿಗೆ ಭೇಟಿ ನೀಡಿರುವ ಫೋಟೋವನ್ನ ನಟಿ ಸೋಷಿಯಲ್‌ಗ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

     

    View this post on Instagram

     

    A post shared by Deepika Das (@deepika__das)

    ಬಿಗ್ ಬಾಸ್ ಶೋ ನಂತರ ಸಿನಿಮಾಗಳಲ್ಲಿ ದೀಪಿಕಾ ದಾಸ್ ನಟಿಸುತ್ತಿದ್ದಾರೆ. ಹೊಸ ಬಗೆಯ ಕಥೆ ಮತ್ತು ಪಾತ್ರಗಳನ್ನ ಮಾಡುತ್ತ ನಟಿ ಉತ್ಸುಕರಾಗಿದ್ದಾರೆ.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k