ಡೆಹ್ರಾಡೂನ್: ಸುರಂಗ (Tunnel) ನಿರ್ಮಾಣ ಕಾರ್ಯದ ವೇಳೆ ಭೂಕುಸಿತ ಉಂಟಾಗಿ 36 ಕಾರ್ಮಿಕರು ಸಿಲುಕಿರುವ ಘಟನೆ ಉತ್ತರಾಖಂಡದ (Uttarakhand) ಉತ್ತರಕಾಶಿಯಲ್ಲಿ (Uttarkashi) ನಡೆದಿದೆ.
ರಾಷ್ಟ್ರೀಯ ಹಾಗೂ ರಾಜ್ಯ ವಿಪತ್ತು ನಿರ್ವಹಣಾ ತಂಡಗಳು ಮತ್ತು ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದು, ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ. ಮಣ್ಣಿನಡಿಗೆ ಸಿಲುಕಿರುವರ ರಕ್ಷಣೆಗಾಗಿ ಡ್ರಿಲ್ಲಿಂಗ್ ಯಂತ್ರಗಳನ್ನು ಬಳಸಿ ಆಮ್ಲಜನಕ ಪೈಪ್‍ಗಳನ್ನು ಒಳಗೆ ಕಳುಹಿಸಲಾಗಿದೆ. ಕಾರ್ಯಾಚರಣೆ ಇನ್ನೂ 2-3 ದಿನಗಳ ಕಾಲ ಮುಂದುವರಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಮಾಜಿ ಶಾಸಕನ ಕಿಸೆಯಿಂದ ಹಣ ಎಗರಿಸಲು ಮುಂದಾದವನಿಗೆ ಧರ್ಮದೇಟು
ಬ್ರಹ್ಮಖಾಲ್-ಯಮುನೋತ್ರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಿಲ್ಕ್ಯಾರಾದಿಂದ ದಾಂಡಲ್‍ಗಾಂವ್‍ಗೆ ಸಂಪರ್ಕಿಸುವ ಸುರಂಗದಲ್ಲಿ ಪ್ರಸ್ತುತ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಸುರಂಗದಲ್ಲಿ ಸಿಲುಕಿದ್ದವರನ್ನು ಸುರಕ್ಷಿತವಾಗಿ ರಕ್ಷಿಸಲು ಪ್ರಯತ್ನಿಸಲಾಗುತ್ತಿದೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿರುವ ಬಗ್ಗೆ ವರದಿಯಾಗಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸಿಲುಕಿರುವ ಕಾರ್ಮಿಕರೊಂದಿಗೆ ಸಂಪರ್ಕಿಸಲು ಪ್ರಯತ್ನಿಸಲಾಗುತ್ತಿದೆ. ಎಲ್ಲಾ ಕಾರ್ಮಿಕರು ಸುರಕ್ಷಿತವಾಗಿದ್ದಾರೆ ಎಂಬ ಮಾಹಿತಿ ಇದೆ. ಅವರನ್ನು ಸುರಕ್ಷಿತವಾಗಿ ಹೊರಗೆ ತರಲು ಪ್ರಯತ್ನ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಯುವಕ ಎಂದು ರಾಜ್ಯಾಧ್ಯಕ್ಷ ಸ್ಥಾನಕ್ಕೆ ನನ್ನ ಆಯ್ಕೆ: ವಿಜಯೇಂದ್ರ
ನವದೆಹಲಿ: ಲೋಕಸಭೆ ಚುನಾವಣೆ (Lok Sabha Elections) ಸನಿಹವಾಗುತ್ತಿರುವ ಹೊತ್ತಲ್ಲೇ ಏಕರೂಪ ನಾಗರಿಕ ಸಂಹಿತೆ (Uniform Civil Code) ಜಾರಿ ಚರ್ಚೆ ಮತ್ತೆ ಮುನ್ನಲೆಗೆ ಬಂದಿದೆ. ದೇಶದ್ಯಾಂತ ಹೊಸ ಕಾನೂನು ಜಾರಿ ಮಾಡುವ ಭರವಸೆ ನೀಡಿದ್ದ ಬಿಜೆಪಿ (BJP) ಉತ್ತರಾಖಂಡದಲ್ಲಿ (Uttarakhand) ಮೊದಲು ಕಾನೂನು ಜಾರಿ ಮಾಡಲು ಚಿಂತಿಸಿದೆ.
ನಿವೃತ್ತ ನ್ಯಾ. ರಂಜನಾ ದೇಸಾಯಿ ನೇತೃತ್ವದಲ್ಲಿ ರಚಿಸಲಾದ ಸಮಿತಿಯು ಮುಂದಿನ ಎರಡು ದಿನಗಳಲ್ಲಿ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರಿಗೆ ನಾಗರಿಕ ಸಂಹಿತೆ ಜಾರಿಗೆ ಸಂಬಂಧಿಸಿದಂತೆ ವರದಿಯನ್ನು ಸಲ್ಲಿಸಲಿದ್ದು, ದೀಪಾವಳಿ ಬಳಿಕ ನಡೆಯಲಿರುವ ವಿಶೇಷ ಅಧಿವೇಶನದಲ್ಲಿ ಈ ಸಂಬಂಧ ಮಸೂದೆ ಮಂಡಿಸಿ, ಕಾನೂನು ಮಾಡಲು ಅಲ್ಲಿಯ ಸರ್ಕಾರ ಸಿದ್ಧತೆ ಮಾಡಿಕೊಂಡಿದೆ. ಇದನ್ನೂ ಓದಿ: ಅತ್ತೆಗೆ 4 ಸಾವಿರ, ಸೊಸೆಗೆ ಎರಡೂವರೆ ಸಾವಿರ- 6 ಗ್ಯಾರಂಟಿ ಘೋಷಿಸಿದ ತೆಲಂಗಾಣ ಕಾಂಗ್ರೆಸ್
ಈ ವರ್ಷದ ಜೂನ್‌ನಲ್ಲಿ ಏಕರೂಪ ನಾಗರಿಕ ಸಂಹಿತೆಯ ಕರಡು ಸಮಿತಿಯ ಸದಸ್ಯರಾದ ಸುಪ್ರೀಂ ಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ರಂಜನಾ ಪ್ರಕಾಶ್ ದೇಸಾಯಿ ಅವರು ಉತ್ತರಾಖಂಡಕ್ಕೆ ಏಕರೂಪ ನಾಗರಿಕ ಸಂಹಿತೆಯ ಕರಡು ರಚನೆ ಪೂರ್ಣಗೊಂಡಿದ್ದು, ಶೀಘ್ರದಲ್ಲೇ ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಹೇಳಿದ್ದರು. ಬಹುತೇಕ ಮುಂದಿನ ವಾರ ಹೊಸ ಕಾನೂನು ಜಾರಿಯಾಗಬಹುದು ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ಕೂಡಿ ಬಾಳುವ ಸಂಸ್ಕೃತಿ ನಮಗೆ ಬಂದಿದ್ದೇ ಹಿಂದೂ ಧರ್ಮದಿಂದ: ಜಾವೇದ್ ಅಖ್ತರ್
ಉತ್ತರಾಖಂಡ ಬಳಿಕ ಗುಜರಾತ್‌ನಲ್ಲೂ 2024ರ ಲೋಕಸಭಾ ಚುನಾವಣೆಯ ಮುನ್ನ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೆ ತರಬಹುದು ಎಂದು ಮೂಲಗಳು ತಿಳಿಸಿವೆ. ಈ ಮೂಲಕ ಗುಜರಾತ್ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೆ ತಂದ ಎರಡನೇ ರಾಜ್ಯವಾಗಲಿದೆ. ರಾಷ್ಟ್ರಮಟ್ಟದಲ್ಲಿ ಕಾನೂನು ಜಾರಿಗೆ ವಿರೋಧ ವ್ಯಕ್ತವಾಗುವ ಹಿನ್ನೆಲೆ ಹಂತ ಹಂತವಾಗಿ ಬಿಜೆಪಿ ಆಡಳಿತ ರಾಜ್ಯಗಳಲ್ಲಿ ಕಾನೂನು ಜಾರಿಗೆ ಪ್ಲ್ಯಾನ್ ಮಾಡಿದೆ. ಇದನ್ನೂ ಓದಿ: ನಮ್ಮ ಪಕ್ಷದೊಳಗೆ ರಾಮ, ಹಿಂದೂಗಳನ್ನು ದ್ವೇಷಿಸುವ ನಾಯಕರಿದ್ದಾರೆ: ಕಾಂಗ್ರೆಸ್ ನಾಯಕ ಆಚಾರ್ಯ ಪ್ರಮೋದ್ ಕೃಷ್ಣಂ
– ಪರಸ್ಪರ ಸಹೋದರತ್ವ ಮತ್ತು ಪ್ರೀತಿ ತುಂಬುವ ಕಾರ್ಯಕ್ರಮ: ರಾಜ್ಯಪಾಲರು
ಬೆಂಗಳೂರು: ಇಲ್ಲಿನ ರಾಜಭವನದಲ್ಲಿಂದು ಉತ್ತರಾಖಂಡ ಸಂಸ್ಥಾಪನಾ ದಿನಾಚರಣೆಯನ್ನು (Uttarakhand Diwas) ಆಚರಿಸಲಾಯಿತು. ಉತ್ತರಾಖಂಡ ರಾಜ್ಯದ ಕಲೆ, ಸಂಸ್ಕೃತಿ (Uttarakhand Culture) ಮತ್ತು ಸಂಪ್ರದಾಯಗಳನ್ನ ಪ್ರದರ್ಶಿಸುವ ವರ್ಣರಂಜಿತ ಮತ್ತು ಆಕರ್ಷಕ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಲಾಯಿತು.
ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ (Thawar Chand Gehlot) ಅವರು, ಉತ್ತರಾಖಂಡ (Uttarakhand) ರಾಜ್ಯವು ಐತಿಹಾಸಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ಮತ್ತು ಕಲಾ ಸಾಹಿತ್ಯ, ಸಮನ್ವಯ ಮತ್ತು ಸಾಮರಸ್ಯಕ್ಕೆ ಹೆಸರುವಾಸಿಯಾಗಿದೆ. ಈ ರಾಜ್ಯವು ತನ್ನ ನೈಸರ್ಗಿಕ ಸೌಂದರ್ಯ, ದೇವಾಲಯಗಳು ಮತ್ತು ಸಾಂಸ್ಕೃತಿಕ ಮತ್ತು ಐತಿಹಾಸಿಕ ಪರಂಪರೆಗೆ ಹೆಸರುವಾಸಿಯಾಗಿದೆ. ಉತ್ತರಾಖಂಡವು ತನ್ನ ಭೌಗೋಳಿಕ ಸ್ಥಳ, ಹವಾಮಾನ, ನೈಸರ್ಗಿಕ ದೃಶ್ಯಾವಳಿ ಮತ್ತು ಸಂಪನ್ಮೂಲಗಳ ಸಮೃದ್ಧಿಯಿಂದಾಗಿ ದೇಶದಲ್ಲಿ ಪ್ರಮುಖ ಸ್ಥಾನ ಹೊಂದಿದೆ. ತೀರ್ಥಯಾತ್ರೆ ಮತ್ತು ಪ್ರವಾಸೋದ್ಯಮದ (Tourism) ದೃಷ್ಟಿಯಿಂದ ಉತ್ತರಾಖಂಡ ರಾಜ್ಯವು ವಿಶೇಷ ಪ್ರಾಮುಖ್ಯತೆ ಹೊಂದಿದೆ ಎಂದು ಹೇಳಿದರು.
ಬದರಿನಾಥ, ಕೇದಾರನಾಥ, ಯಮುನೋತ್ರಿ ಮತ್ತು ಗಂಗೋತ್ರಿ ಯಾತ್ರಾ ಮಾರ್ಗಗಳಲ್ಲಿ ಅನೇಕ ಪ್ರೇಕ್ಷಣೀಯ ಸ್ಥಳಗಳಿವೆ. ವಿಷ್ಣುಪ್ರಯಾಗ, ನಂದಪ್ರಯಾಗ, ಕರ್ಣಪ್ರಯಾಗ, ರುದ್ರಪ್ರಯಾಗ ಮತ್ತು ದೇವಪ್ರಯಾಗ, ಪಂಚಪ್ರಯಾಗ ಎಂಬ ಹೆಸರಿನ ಪ್ರಸಿದ್ಧ 5 ಪವಿತ್ರ ಸಂಗಮ ಸ್ಥಳಗಳು ಇಲ್ಲಿವೆ. ಇವುಗಳ ಹೊರತಾಗಿ, ಹೇಮಕುಂಡ್ ಸಾಹಿಬ್ ಸಿಖ್ಖರಿಗೆ ಒಂದು ತೀರ್ಥಯಾತ್ರಾ ಸ್ಥಳವಾಗಿ ವಿಶೇಷವಾಗಿ ಮುಖ್ಯವಾಗಿದೆ. ಇಲ್ಲಿನ ಧರ್ಮ ಮತ್ತು ಸಂಸ್ಕೃತಿಯಲ್ಲಿ ಸಮನ್ವಯ ಮತ್ತು ಸಾಮರಸ್ಯದ ದೃಷ್ಟಿ ಗೋಚರಿಸುತ್ತದೆ. ಹರಿದ್ವಾರದಲ್ಲಿ ಪ್ರತಿ 12 ವರ್ಷಗಳಿಗೊಮ್ಮೆ ಕುಂಭಮೇಳ ಆಯೋಜಿಸಲಾಗುತ್ತದೆ. ಇದರಲ್ಲಿ ಭಾರತ ಮತ್ತು ವಿದೇಶಗಳಿಂದ ಕೋಟಿಗಟ್ಟಲೆ ಭಕ್ತರು ಭಾಗವಹಿಸುತ್ತಾರೆ ಎಂದು ಮಾಹಿತಿ ನೀಡಿದರು.
ರಾಜ್ಯವು ಜಲವಿದ್ಯುತ್ ಉತ್ಪಾದನೆಗೆ ಸಂಪೂರ್ಣ ಸಾಮರ್ಥ್ಯ ಹೊಂದಿದೆ. ಯಮುನಾ, ಭಾಗೀರಥಿ, ಅಲಕನಂದಾ, ಮಂದಾಕಿನಿ, ಸರಯು, ಗೌರಿ, ಕೋಸಿ ಮತ್ತು ಕಾಳಿ ನದಿಗಳಲ್ಲಿ ಅನೇಕ ಜಲವಿದ್ಯುತ್ ಸ್ಥಾವರಗಳನ್ನು ಸ್ಥಾಪಿಸಲಾಗಿದ್ದು, ಇವುಗಳಿಂದ ವಿದ್ಯುತ್ ಉತ್ಪಾದಿಸಲಾಗುತ್ತಿದೆ. ರಾಜ್ಯವು ಅಪರೂಪದ ಜೀವವೈವಿಧ್ಯದಿಂದ ಸಮೃದ್ಧವಾಗಿದೆ, 175 ಅಪರೂಪದ ಸುಗಂಧ ಮತ್ತು ಔಷಧೀಯ ಸಸ್ಯಗಳು ರಾಜ್ಯದಲ್ಲಿ ಕಂಡುಬರುತ್ತವೆ ಎಂದು ಹೇಳಿದರು.
ರಾಜ್ಯದಲ್ಲಿ ಪ್ರವಾಸೋದ್ಯಮ ಕ್ಷೇತ್ರವನ್ನು ಉತ್ತೇಜಿಸುವ ಜೊತೆಗೆ ಈ ಪ್ರದೇಶದ ಶ್ರೀಮಂತ ಸಾಂಸ್ಕೃತಿಕ ಸಂಪ್ರದಾಯದ ಬಗ್ಗೆ ಜನರಿಗೆ ಅರಿವು ಮೂಡಿಸುವ ಉದ್ದೇಶದಿಂದ ಉತ್ತರಾಖಂಡದ ಸಂಸ್ಥಾಪನಾ ದಿನವನ್ನು ಈ ದಿನ ದೇಶದ ಎಲ್ಲಾ ರಾಜಭವನಗಳಲ್ಲಿ ಆಯೋಜಿಸಲಾಗಿದೆ. ಇಂತಹ ಕಾರ್ಯಕ್ರಮಗಳು ಪರಸ್ಪರ ಸಹೋದರತ್ವ ಮತ್ತು ಪ್ರೀತಿಯನ್ನು ಹೆಚ್ಚಿಸುತ್ತವೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕಮಲ್ ಪಂಥ್ ಪೊಲೀಸ್ ಮಹಾನಿರ್ದೇಶಕರು, ನೇಮಕಾತಿ, ಪೊಲೀಸ್ ಮಹಾನಿರ್ದೇಶಕರು ಮತ್ತು ಮಹಾನಿರ್ದೇಶಕರು, ಅಗ್ನಿಶಾಮಕ ಮತ್ತು ತುರ್ತು ಸೇವೆಗಳು, ಉತ್ತರಾಖಂಡ ರಾಜ್ಯದ ಪ್ರತಿನಿಧಿಯಾದ ಹೇಮಚಂದ್ರ ಜೋಶಿ, ಮುಂತಾದ ಗಣ್ಯರು ಉಪಸ್ಥಿತರಿದ್ದರು.
ಡೆಹ್ರಾಡೂನ್: ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ ಹರೀಶ್ ರಾವತ್ (Harish Rawath) ಇದ್ದ ಕಾರು ಅಪಘಾತಕ್ಕೀಡಾದ ಘಟನೆ ನಡೆದಿದೆ.
ರಾವತ್ ಅವರು ಹಲದ್‍ವಾನಿಯಿಂದ ಕಾಶಿಪುರದಲ್ಲಿರುವ ಉದ್ಧಮ್ ಸಿಂಗ್ ನಗರಕ್ಕೆ ತೆರಳುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಗೆ ಡಿಕ್ಕಿಯಾಗಿದೆ. ಘಟನೆಯಿಂದ ಯಾವುದೇ ಅಪಾಯವಾಗಿಲ್ಲ ಎನ್ನಲಾಗಿದೆ.
ಈ ಸಂಬಂಧ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ರಾವತ್, ಘಟನೆಯಲ್ಲಿ ಭಾರೀ ಅಪಾಯದಿಂದ ಪಾರಾಗಿದ್ದೇನೆ. ಅಪಘಾತದಿಂದ ಸ್ವಲ್ಪ ವಿಚಲಿತನಾದೆ. ಹೀಗಾಗಿ ಅವಘಡ ನಡೆದ ಕೂಡಲೇ ವೈದ್ಯರಿಂದ ಪರೀಕ್ಷಿಸಲ್ಪಟ್ಟಿದೇನೆ ಎಂದರು. ಇದನ್ನೂ ಓದಿ: ಅಕ್ರಮ ಮದರಸಾಗಳಿಗೆ ದಿನಕ್ಕೆ 10 ಸಾವಿರ ದಂಡ: ಯೋಗಿ ಸರ್ಕಾರದಿಂದ ನೋಟಿಸ್
ಪರೀಕ್ಷೆಯ ಬಳಿಕ, ಯಾವುದೇ ತೊಂದರೆ ಇಲ್ಲ ಎಂದು ಹೇಳಿ ವೈದ್ಯರು ಡಿಸ್ಚಾರ್ಜ್ ಮಾಡಿದ್ದಾರೆ. ಕೆಲವು ಸ್ನೇಹಿತರು ಘಟನೆಯ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. ಇದು ಕೆಲವರಲ್ಲಿ ಕಳವಳವನ್ನು ಉಂಟುಮಾಡಬಹುದು. ಆತಂಕ ಪಡುವಂಥದ್ದೇನೂ ಇಲ್ಲ. ನಾನು ಮತ್ತು ನನ್ನ ಸಹೋದ್ಯೋಗಿಗಳೂ ಚೆನ್ನಾಗಿದ್ದೇವೆ ಎಂದು ಮಾಹಿತಿ ನೀಡಿದರು.
ವರದಿಗಳ ಪ್ರಕಾರ, ಅಪಘಾತದಿಂದಾಗಿ ರಾವತ್ ಎದೆಗೆ ಗಾಯಗಳಾಗಿವೆ. ಅಲ್ಲದೆ ರಾವತ್ ಜೊತೆ ಪ್ರಯಾಣಿಸುತ್ತಿದ್ದ ಅವರ ಪರ್ಸನಲ್ ಭದ್ರತಾ ಅಧಿಕಾರಿ ಮತ್ತು ಇತರ ಸಹಚರರಿಗೂ ಗಾಯಗಳಾಗಿವೆ ಎನ್ನಲಾಗಿತ್ತು.
ಡೆಹ್ರಾಡೂನ್: ಹರಿಯಾಣದಿಂದ (Haryana) ಬರುತ್ತಿದ್ದ ಬಸ್ (Bus) ನೈನಿತಾಲ್ (Nainital) ಜಿಲ್ಲೆಯಲ್ಲಿ ಕಂದಕಕ್ಕೆ ಉರುಳಿದ ಪರಿಣಾಮ ಐವರು ಮಹಿಳೆಯರು, ಒಬ್ಬ ಪುರುಷ ಮತ್ತು ಒಂದು ಮಗು ಸೇರಿದಂತೆ ಒಟ್ಟು 7 ಮಂದಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಇದುವರೆಗೆ 26 ಜನರನ್ನು ರಕ್ಷಿಸಲಾಗಿದ್ದು, ಹೆಚ್ಚಿನ ಕಾರ್ಯಾಚರಣೆ ನಡೆಯುತ್ತಿದೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಪಡೆ (SDRF) ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಮೃತದೇಹಗಳನ್ನು ಸಿವಿಲ್ ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ಇದನ್ನೂ ಓದಿ: ಡ್ಯಾನ್ಸ್ ವಿಚಾರಕ್ಕೆ ಗಲಾಟೆ- ಓರ್ವ ಸಾವು, ಮೃತನ ತಾಯಿಗೂ ಚಾಕು ಇರಿತ
ಅಧಿಕಾರಿಗಳ ಪ್ರಕಾರ, ನೈನಿತಾಲ್‌ನ ವಿಪತ್ತು ನಿಯಂತ್ರಣಾ ಕೊಠಡಿ ಭಾನುವಾರ 30 ರಿಂದ 33 ಜನರನ್ನು ಹೊತ್ತೊಯ್ಯುತ್ತಿದ್ದ ಬಸ್ಸೊಂದು ಕಾಲಾಧುಂಗಿ ರಸ್ತೆಯ ನಲ್ನಿಯಲ್ಲಿ ಕಂದಕಕ್ಕೆ ಉರುಳಿದೆ ಎಂದು ಎಸ್‌ಡಿಆರ್‌ಎಫ್‌ಗೆ ಮಾಹಿತಿ ನೀಡಿದೆ. ಈ ಮಾಹಿತಿಯ ಮೇರೆಗೆ ಕಮಾಂಡೆಂಟ್ ಎಸ್‌ಡಿಆರ್‌ಎಫ್ ಮಣಿಕಾಂತ್ ಮಿಶ್ರಾ ಅವರ ಸೂಚನೆಯಂತೆ ಪೋಸ್ಟ್ ರುದ್ರಪುರ, ನೈನಿತಾಲ್ ಮತ್ತು ಖೈರ್ನಾದಿಂದ ಎಸ್‌ಡಿಆರ್‌ಎಫ್ ರಕ್ಷಣಾ ತಂಡಗಳು ರಕ್ಷಣೆಗಾಗಿ ಸ್ಥಳಕ್ಕೆ ತೆರಳಿದೆ. ಇದನ್ನೂ ಓದಿ: ನನ್ನನ್ನು ಸಾಯಿಸ್ಬೇಡಿ- ಬೇಡಿಕೊಂಡ್ರೂ ಬಿಡದೆ ಯುವತಿ ಅಪಹರಿಸಿದ ಹಮಾಸ್ ಉಗ್ರರು
ಬಸ್ ನಿಯಂತ್ರಣ ತಪ್ಪಿ ಸುಮಾರು 200 ಮೀಟರ್ ಆಳದ ಕಂದಕಕ್ಕೆ ಉರುಳಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಎಸ್‌ಡಿಆರ್‌ಎಫ್ ರಕ್ಷಣಾ ತಂಡವು ಸ್ಥಳಕ್ಕೆ ಆಗಮಿಸಿ ಎನ್‌ಡಿಆರ್‌ಎಫ್, ಸ್ಥಳೀಯ ಪೊಲೀಸರು ಮತ್ತು ಇತರ ರಕ್ಷಣಾ ಘಟಕಗಳೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಿ ಬಸ್ಸಿನಲ್ಲಿದ್ದ 26 ಮಂದಿ ಗಾಯಾಳುಗಳನ್ನು ರಕ್ಷಿಸಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಇದನ್ನೂ ಓದಿ: ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಶರಣಾದ ಅಪ್ರಾಪ್ತ ಸಹೋದರಿಯರು
ಡೆಹ್ರಾಡೂನ್: ಉತ್ತರಪ್ರದೇಶ (Uttar Pradesh) ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಅವರು ಮೂರು ದಿನಗಳ ಕಾಲ ಉತ್ತರಾಖಂಡ (Uttarakhand) ಪ್ರವಾಸ ಕೈಗೊಂಡಿದ್ದು, ಕೊನೆಯ ದಿನವಾದ ಭಾನುವಾರದಂದು ಕೇದಾರನಾಥ ದೇವಾಲಯಕ್ಕೆ (Kedarnath Temple) ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.
ಈ ವೇಳೆ ನೆರೆದಿದ್ದ ಜನರು ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದರು ಮತ್ತು ಮುಖ್ಯಮಂತ್ರಿಗಳಿಗೆ ಶುಭಾಶಯ ಕೋರಿದರು. ಬದರಿ ಕೇದಾರ ದೇವಸ್ಥಾನ ಸಮಿತಿ ಅಧ್ಯಕ್ಷ ಅಜಯ್ ಅಜಯೇಂದ್ರ ಹಾಗೂ ಇತರ ಗಣ್ಯರು ಕೇದಾರನಾಥ ಹೆಲಿಪ್ಯಾಡ್‌ಗೆ ಆಗಮಿಸಿ ಪುಷ್ಪಗುಚ್ಛ ನೀಡಿ ಯೋಗಿ ಆದಿತ್ಯನಾಥ್ ಅವರನ್ನು ಬರಮಾಡಿಕೊಂಡರು. ಇದನ್ನೂ ಓದಿ: ನನ್ನನ್ನು ಸಾಯಿಸ್ಬೇಡಿ- ಬೇಡಿಕೊಂಡ್ರೂ ಬಿಡದೆ ಯುವತಿ ಅಪಹರಿಸಿದ ಹಮಾಸ್ ಉಗ್ರರು
ಅರ್ಚಕ ಸಮುದಾಯದವರು ಯೋಗಿ ಆದಿತ್ಯನಾಥ್ ಅವರನ್ನು ಸಾಂಪ್ರದಾಯಿಕ ಮಂತ್ರ ಪಠಣದೊಂದಿಗೆ ಅಭಿನಂದಿಸಿದರು. ಕೇದಾರನಾಥ ದೇಗುಲಕ್ಕೆ ಭೇಟಿ ನೀಡಿದ ಯೋಗಿ ಆದಿತ್ಯನಾಥ್ ದೇಶ ಮತ್ತು ರಾಜ್ಯದ ಜನತೆಯ ಒಳಿತಿಗಾಗಿ ಪ್ರಾರ್ಥಿಸಿದರು. ಇದನ್ನೂ ಓದಿ: ಪ್ರತಿನಿತ್ಯ ನೂರು ಸೈಬರ್ ದಾಳಿಗಳ ವಿರುದ್ಧ ಇಸ್ರೋ ಹೋರಾಟ: ಎಸ್.ಸೋಮನಾಥ್
ಡೆಹ್ರಾಡೂನ್: ಪಶ್ಚಿಮ ಬಂಗಾಳದ (West Bengal) ಸಿಲಿಗುರಿಯ ಡ್ಯಾನ್ಸ್ ಬಾರ್‌ನಲ್ಲಿ ನೇಪಾಳಿ ಮಹಿಳೆ ಹತ್ಯೆ ಪ್ರಕರಣದಲ್ಲಿ ಸೇನೆಯ ಲೆಫ್ಟಿನೆಂಟ್ ಕರ್ನಲ್‌ನನ್ನು ಬಂಧಿಸಲಾಗಿದೆ ಎಂದು ಡೆಹ್ರಾಡೂನ್ ಪೊಲೀಸರು ತಿಳಿಸಿದ್ದಾರೆ.
ಕ್ಲೆಮೆಂಟ್ ಟೌನ್ ಕಂಟೋನ್ಮೆಂಟ್ ಪ್ರದೇಶದಲ್ಲಿ ನಿಯೋಜನೆಗೊಂಡಿದ್ದ ಸೇನಾಧಿಕಾರಿ ರಾಮೇಂದು ಉಪಾಧ್ಯಾಯ ವಿವಾಹಿತ. ಆದರೂ 30 ವಯಸ್ಸಿನ ಅವಿವಾಹಿತ ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದ. ತನ್ನನ್ನು ಮದುವೆಯಾಗುವಂತೆ ಒತ್ತಾಯಿಸಿದ್ದರಿಂದ ಆಕೆಯನ್ನು ಯೋಧ ಕೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಪಂಡಿತ್ವಾರಿ ಪ್ರೇಮ್ ನಗರದಲ್ಲಿರುವ ಮನೆಯಿಂದ ಯೋಧನನ್ನು ಬಂಧಿಸಲಾಗಿದೆ.
ಹತ್ಯೆಯಾದ ಶ್ರೇಯಾ ಶರ್ಮಾ, ಹಿಂದೆ ಸಿಲಿಗುರಿಯ ಡ್ಯಾನ್ಸ್ ಬಾರ್‌ನಲ್ಲಿ ಆರೋಪಿಯನ್ನು ಭೇಟಿಯಾಗಿದ್ದರು. ನಂತರ ಅವರ ಸಂಬಂಧ ಮೂರು ವರ್ಷಗಳ ಕಾಲ ಮುಂದುವರಿಯಿತು. ಸೇನಾಧಿಕಾರಿ ಡೆಹ್ರಾಡೂನ್‌ಗೆ ವರ್ಗಾವಣೆಯಾದಾಗ, ತನ್ನೊಂದಿಗೆ ಶ್ರೇಯಾಳನ್ನು ಕರೆತಂದಿದ್ದ. ಅಲ್ಲಿ ಆಕೆಗೆ ಬಾಡಿಗೆಗೆ ಫ್ಲಾಟ್ ತೆಗೆದುಕೊಟ್ಟಿದ್ದ ಎನ್ನುವ ವಿಚಾರ ತನಿಖೆ ವೇಳೆ ತಿಳಿದು ಬಂದಿದೆ. ಇದನ್ನೂ ಓದಿ: ಹೊಸ ಸಂಸತ್ ಭವನದಲ್ಲಿ ಸಿಬ್ಬಂದಿಗೆ ನೂತನ ಡ್ರೆಸ್ ಕೋಡ್
ಉಪಾಧ್ಯಾಯ ಶನಿವಾರ ರಾತ್ರಿ ರಾಜ್‌ಪುರ ರಸ್ತೆಯ ಕ್ಲಬ್‌ನಲ್ಲಿ ಮಹಿಳೆಯೊಂದಿಗೆ ಮದ್ಯ ಸೇವಿಸಿದ್ದ. ಆಕೆಯನ್ನು ಲಾಂಗ್ ಡ್ರೈವ್‌ಗೆ ಕರೆದೊಯ್ದಿದ್ದ. ನಗರದ ಹೊರವಲಯದಲ್ಲಿರುವ ನಿರ್ಜನ ಪ್ರದೇಶವಾದ ಥಾನೋ ರಸ್ತೆ ತಲುಪಿದ ಬಳಿಕ ರಾತ್ರಿ 1:30 ರ ಸುಮಾರಿಗೆ ಕಾರು ನಿಲ್ಲಿಸಿ ಆಕೆಯ ತಲೆಗೆ ಸುತ್ತಿಗೆಯಿಂದ ಹೊಡೆದು ಸಾಯಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಶ್ರೇಯಾಳನ್ನು ಕೊಂದ ನಂತರ ಉಪಾಧ್ಯಾಯ ಆಕೆಯ ಶವವನ್ನು ರಸ್ತೆಬದಿಯಲ್ಲಿ ಎಸೆದು ಪರಾರಿಯಾಗಿದ್ದ.
ನಿನ್ನೆ ಮಧ್ಯರಾತ್ರಿಯಿಂದಲೇ ಡಾಲಿ ಧನಂಜಯ್ (Dolly Dhananjay) ಹುಟ್ಟು ಹಬ್ಬವನ್ನು (Birthday) ಅಭಿಮಾನಿಗಳ ಸಡರಗದಿಂದ ಆಚರಿಸುತ್ತಿದ್ದಾರೆ. ಬೆಂಗಳೂರಿನ ನಂದಿ ಲಿಂಕ್ಸ್ ಗ್ರೌಂಡ್ ನಲ್ಲಿ ಆಯೋಜನೆ ಮಾಡಿರುವ ಡಾಲಿ ಉತ್ಸವದಲ್ಲಿ ಅಭಿಮಾನಿಗಳ (Fans) ಸಮ್ಮುಖದಲ್ಲಿ ಧನಂಜಯ್ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ.
ಈ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಧನಂಜಯ್, ‘ನಾನು ಹುಟ್ಟು ಹಬ್ಬ ಸೆಲೆಬ್ರೇಶನ್ ಮಾಡ್ಕೊಂಡು ತುಂಬಾ ದಿನ ಆಗಿತ್ತು. ಕಾರಣಾಂತರಗಳಿಂದ 3-4 ವರ್ಷಗಳಿಂದ ಮಾಡಿರಲಿಲ್ಲ. ಈ ವರ್ಷ ಅಭಿಮಾನಿಗಳ ಜೊತೆ ಆಚರಣೆ ಮಾಡಿದ್ದು ತುಂಬಾ ಖುಷಿಯಾಗಿದೆ. ಉತ್ತರಕಾಂಡ (Uttarakhand) ಸಿನಿಮಾದ ಗಬ್ರು ಸತ್ಯ, ಅಣ್ಣಾ ಫ್ರಮ್ ಮೆಕ್ಸಿಕೋ 2 ಪ್ರಾಜೆಕ್ಟ್ ಅನೌನ್ಸ್ ಮಾಡಿದ್ದೀವಿ’ ಎಂದರು. ಇದನ್ನೂ ಓದಿ:ತಂದೆ ಸ್ಥಾನವನ್ನೂ ತುಂಬಿ ಮಗಳಿಗೆ ಹೆಸರಿಟ್ಟ ನಟಿ ದಿವ್ಯಾ ಶ್ರೀಧರ್
ಮುಂದುವರೆದು ಮಾತನಾಡಿದ ಡಾಲಿ, ‘ನಾನು ಬರಬೇಕಾದರೆ ತುಂಬಾ ಜನ ವಿಶ್ ಮಾಡಿದ್ರು. ಜನರು ಕೂಡ ನೀನು ಚೆನ್ನಾಗಿ ಬೆಳೀಬೇಕು ಅಂತ ಹಾರೈಸ್ತಿದಾರೆ. ಅದಕ್ಕಿಂತ ದೊಡ್ಡ ಸಂಪಾದನೆ ಯಾವುದು ಇಲ್ಲ. ಅದನ್ನ ಕಾಪಾಡಿಕೊಳ್ಳೋಕೆ ಕೆಲಸ ಮಾಡ್ತೀನಿ. ಜನರ ಪ್ರೀತಿಗೆ ನಾನ್ಯಾವತ್ತೂ ಬೆಲೆ ಕಟ್ಟೋದಕ್ಕೆ ಆಗಲ್ಲ. ಅಣ್ಣಾ ಫ್ರಮ್ ಮೆಕ್ಸಿಕೋ ಸಿನಿಮಾ ಬಹಳ ಡಿಫರೆಂಟ್ ಆಗಿದೆ. ಅಭಿಮಾನಿಗಳಿಗೆ ಇಷ್ಟವಾಗುವಂತಹ ಪಾತ್ರವನ್ನ ಕೊಡ್ತಾ ಇದೀನಿ. ಅಭಿಮಾನಿಗಳಿಗೆ ಪಾತ್ರಗಳಿಂದ ಒಂದಿಷ್ಟು ವಿಷಯಗಳನ್ನ ಹೇಳ್ತಾ ಇದೀನಿ’ ಎನ್ನುತ್ತಾರೆ.
ಡಾಲಿ ಹುಟ್ಟುಹಬ್ಬದ ದಿನ ಚಂದ್ರಯಾನ ಲ್ಯಾಂಡ್ ಆಗ್ತಾ ಇರೋದು ತುಂಬಾ ಖುಷಿ ತಂದಿದೆ ಎನ್ನುವುದು ಅವರ ಮಾತು. ನಿನ್ನೆಯಷ್ಟೇ ರಿಲೀಸ್ ಆಗಿರುವ ಉತ್ತರ ಕಾಂಡ ಸಿನಿಮಾದ ಟೀಸರ್ ಕೂಡ ಸಖತ್ ಇಂಟ್ರಸ್ಟಿಂಗ್ ಆಗಿದೆ. ಅಭಿಮಾನಿಗಳು ಗಬ್ರು ಸತ್ಯನ ಡೈಲಾಗ್ ಅನ್ನು ಎಂಜಾಯ್ ಮಾಡುತ್ತಿದ್ದಾರೆ.
ಡೆಹ್ರಾಡೂನ್: ಬಸ್ (Bus) ಕಮರಿಗೆ ಉರುಳಿದ ಪರಿಣಾಮ 7 ಮಂದಿ ಸಾವಿಗೀಡಾಗಿ, 27 ಜನ ಗಾಯಗೊಂಡ ಘಟನೆ ಉತ್ತರಾಖಂಡದ (Uttarakhand) ಉತ್ತರಕಾಶಿಯಲ್ಲಿ ನಡೆದಿದೆ.
ಬಸ್ ಗುಜರಾತ್‍ನಿಂದ (Gujarat) ಯಾತ್ರಾರ್ಥಿಗಳನ್ನು ಹೊತ್ತು ಗಂಗೋತ್ರಿಯಿಂದ ವಾಪಾಸ್ ಆಗುತ್ತಿತ್ತು. ಈ ವೇಳೆ ದುರಂತ ಸಂಭವಿಸಿದೆ. ಪರಿಣಾಮ ಸ್ಥಳದಲ್ಲೇ 7 ಮಂದಿ ಸಾವಿಗೀಡಾಗಿದ್ದಾರೆ. ಬಸ್‍ನಲ್ಲಿ 35 ಪ್ರಯಾಣಿಕರಿದ್ದರು ಎಂದು ತಿಳಿದು ಬಂದಿದೆ. ಇದನ್ನೂ ಓದಿ: ತುಂಬಿ ಹರಿಯುತ್ತಿರುವ ಡ್ಯಾಂನಲ್ಲಿ ಸಿಲುಕಿದ 10 ಮಂದಿ – ರಕ್ಷಣೆಗೆ ಹರಸಾಹಸ
ಈ ಬಗ್ಗೆ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿಯವರು ಪ್ರತಿಕ್ರಿಯಿಸಿದ್ದು, ರಕ್ಷಣಾ ಕಾರ್ಯಕ್ಕೆ ಸೂಚಿಸಿದ್ದಾರೆ. ಅಲ್ಲದೇ ಅಪಘಾತದಲ್ಲಿ ಗಾಯಗೊಂಡವರಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಅಧಿಕಾರಿಗಳಿಗೆ ತಿಳಿಸಿದ್ದಾರೆ.
ರಾಜ್ಯ ವಿಪತ್ತು ನಿರ್ವಹಣಾ ಪಡೆ (SDRF) ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF) ಮತ್ತು ವೈದ್ಯಕೀಯ ತಂಡಗಳನ್ನು ಸ್ಥಳಕ್ಕೆ ಕಳುಹಿಸಲಾಗಿದೆ. ಅಗತ್ಯ ಸಂದರ್ಭದಲ್ಲಿ ನೆರವು ನೀಡಲು ಡೆಹ್ರಾಡೂನ್‍ನಲ್ಲಿ ಹೆಲಿಕಾಪ್ಟರ್ ನಿಯೋಜಿಸಲಾಗಿದೆ. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನವದೆಹಲಿ: ಹಿಮಾಚಲ ಪ್ರದೇಶ (Himachal Pradesh) ಮತ್ತು ಉತ್ತರಾಖಂಡದಲ್ಲಿ (Uttarakhand) ನಿರಂತರ ಮಳೆ (Rain) ಮತ್ತು ಭೂಕುಸಿತದಿಂದ (Landslide) ಸಾವನ್ನಪ್ಪಿದವರ ಸಂಖ್ಯೆ 81ಕ್ಕೆ ಏರಿದೆ. ಗಾಯಾಳುಗಳನ್ನು ರಕ್ಷಿಸಲು ಮತ್ತು ಭೂ ಕುಸಿತ ಮತ್ತು ಮನೆ ಕುಸಿತದ ಅವಶೇಷಗಳಿಂದ ದೇಹಗಳನ್ನು ಹೊರತೆಗೆಯುವ ಕಾರ್ಯಾಚರಣೆ ಮುಂದುವರಿದಿದೆ. ಈ ದುರಂತದ ನಡುವೆಯೇ ಮುಂದಿನ ದಿನಗಳಲ್ಲಿ ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಹಿಮಾಚಲ ಪ್ರದೇಶದಲ್ಲಿ ಮೃತರ ಸಂಖ್ಯೆ 71ಕ್ಕೆ ಏರಿಕೆಯಾಗಿದೆ. ಬಹುತೇಕ ಮೃತದೇಹಗಳು ಪತ್ತೆಯಾಗಿವೆ. ಕಳೆದ 3 ದಿನಗಳಲ್ಲಿ ಕನಿಷ್ಠ 71 ಜನರು ಸಾವನ್ನಪ್ಪಿದ್ದು, 13 ಮಂದಿ ನಾಪತ್ತೆಯಾಗಿದ್ದಾರೆ. ಭಾನುವಾರ ರಾತ್ರಿಯಿಂದ ಒಟ್ಟು 57 ಶವಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಓಂಕಾರ್ ಚಂದ್ ಶರ್ಮಾ ತಿಳಿಸಿದ್ದಾರೆ.
ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರದ ಮಾಹಿತಿ ಪ್ರಕಾರ, ಜೂನ್ 24 ಮುಂಗಾರು ಪ್ರಾರಂಭವಾದಾಗಿನಿಂದ ರಾಜ್ಯದಲ್ಲಿ ಒಟ್ಟು 214 ಜನರು ಮಳೆ ಸಂಬಂಧಿತ ಘಟನೆಗಳಲ್ಲಿ ಸಾವನ್ನಪ್ಪಿದ್ದಾರೆ. ಮತ್ತು 38 ಜನರು ನಾಪತ್ತೆಯಾಗಿದ್ದಾರೆ. ಸಮ್ಮರ್ ಹಿಲ್ ಮತ್ತು ಕೃಷ್ಣ ನಗರ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿವೆ. ಸಮ್ಮರ್ ಹಿಲ್ ಸೈಟ್‌ನಿಂದ ಮೃತದೇಹವನ್ನು ವಶಪಡಿಸಿಕೊಳ್ಳಲಾಗುತ್ತಿದೆ ಎಂದು ಶಿಮ್ಲಾ ಡೆಪ್ಯುಟಿ ಕಮಿಷನರ್ ಆದಿತ್ಯ ನೇಗಿ ತಿಳಿಸಿದ್ದಾರೆ.
ಕಳೆದ 24 ಗಂಟೆಗಳಲ್ಲಿ ಕಾಂಗ್ರಾ ಜಿಲ್ಲೆಯ ಇಂದೋರಾ ಮತ್ತು ಫತೇಪುರ್ ಉಪವಿಭಾಗಗಳ ಪ್ರವಾಹ ಪೀಡಿತ ಪ್ರದೇಶಗಳಿಂದ 1,731 ಜನರನ್ನು ರಕ್ಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ನಿಪುನ್ ಜಿಂದಾಲ್ ಬುಧವಾರ ತಿಳಿಸಿದ್ದಾರೆ. ವಾಯುಪಡೆಯ ಹೆಲಿಕಾಪ್ಟರ್‌ಗಳು, ಸೇನಾ ಸಿಬ್ಬಂದಿ ಮತ್ತು ಎನ್‌ಡಿಆರ್‌ಎಫ್ ನೆರವಿನೊಂದಿಗೆ ಪ್ರವಾಹ ಪೀಡಿತ ಪ್ರದೇಶಗಳಿಂದ ಜನರನ್ನು ಸ್ಥಳಾಂತರಿಸುವ ಕಾರ್ಯಾಚರಣೆ ನಡೆಯುತ್ತಿದೆ ಎಂದು ಜಿಂದಾಲ್ ಹೇಳಿದರು. ಇದನ್ನೂ ಓದಿ: ಮಣಿಪುರ ಹಿಂಸಾಚಾರ ತನಿಖೆಗೆ 53 ಸಿಬಿಐ ಅಧಿಕಾರಿಗಳ ನಿಯೋಜನೆ
ಹಿಮಾಚಲ ಪ್ರದೇಶವು ಈ ವರ್ಷ 54 ದಿನಗಳ ಮಾನ್ಸೂನ್‌ನಲ್ಲಿ ಈಗಾಗಲೇ 742 ಮಿಮೀ ಮಳೆಯನ್ನು ದಾಖಲಿಸಿದೆ. ಜೂನ್ 1 ರಿಂದ ಸೆಪ್ಟೆಂಬರ್ 30ರ ನಡುವೆ ಸರಾಸರಿ 730 ಮಿಮೀ ಮಳೆ ದಾಖಲಾಗಿದೆ. ಈ ಜುಲೈನಲ್ಲಿ ರಾಜ್ಯದಲ್ಲಿ ದಾಖಲಾಗಿರುವ ಮಳೆಯು ಕಳೆದ 50 ವರ್ಷಗಳಲ್ಲಿ ತಿಂಗಳ ಎಲ್ಲಾ ದಾಖಲೆಗಳನ್ನು ಮುರಿದಿದೆ ಎಂದು ಶಿಮ್ಲಾ ಹವಾಮಾನ ಕೇಂದ್ರದ ನಿರ್ದೇಶಕ ಸುರೀಂದರ್ ಪಾಲ್ ತಿಳಿಸಿದ್ದಾರೆ.
ಉತ್ತರಾಖಂಡದಲ್ಲಿ ಸಾವಿನ ಸಂಖ್ಯೆ 10ಕ್ಕೆ ಏರಿಕೆ:
ಭೂಕುಸಿತ ಸಂಭವಿಸಿದ ಉತ್ತರಾಖಂಡದ ಲಕ್ಷ್ಮಣ್ ಜುಲಾದಲ್ಲಿನ ರೆಸಾರ್ಟ್ನಲ್ಲಿ ದಂಪತಿ ಮತ್ತು ಅವರ ಮಗ ಸೇರಿದಂತೆ 4 ಶವಗಳನ್ನು ಅವಶೇಷಗಳಿಂದ ವಶಪಡಿಸಿಕೊಳ್ಳಲಾಗಿದೆ. 2 ಮೃತದೇಹಗಳನ್ನು ಮಂಗಳವಾರ ತಡರಾತ್ರಿ ಮತ್ತು ಇನ್ನೆರಡು ಮೃತದೇಹಗಳನ್ನು ಬುಧವಾರ ಹೊರ ತೆಗೆಯಲಾಗಿದೆ. ಈ 4 ಮೃತದೇಹಗಳು ಪತ್ತೆಯಾಗುವ ಮೂಲಕ ಉತ್ತರಾಖಂಡದಲ್ಲಿ ಮಳೆ ಸಂಬಂಧಿತ ಘಟನೆಗಳಲ್ಲಿ ಸಾವನ್ನಪ್ಪಿದವರ ಸಂಖ್ಯೆ 10ಕ್ಕೆ ಏರಿದೆ.
ಅಮ್ಸೌರ್‌ನಲ್ಲಿ ಭೂಕುಸಿತದ ಅವಶೇಷಗಳಿಂದ ಪೌರಿ-ಕೋಟ್‌ದ್ವಾರ-ದುಗಡ್ಡಾ ರಾಷ್ಟ್ರೀಯ ಹೆದ್ದಾರಿಯನ್ನು ನಿರ್ಬಂಧಿಸುವುದರೊಂದಿಗೆ ಸಂಚಾರ ಅಸ್ತವ್ಯಸ್ತಗೊಂಡಿತು. ರಿಷಿಕೇಶ-ಬದ್ರಿನಾಥ್ ರಾಷ್ಟ್ರೀಯ ಹೆದ್ದಾರಿಯ ಒಂದು ಭಾಗವು ಪಿಪಾಲ್ಕೋಟಿ ಭರೆನ್ಪಾನಿ ಬಳಿ ಕೊಚ್ಚಿಹೋಗಿದೆ ಎಂದು ರಾಜ್ಯದ ವಿಪತ್ತು ನಿಯಂತ್ರಣ ಕೊಠಡಿ ತಿಳಿಸಿದೆ. ಇದನ್ನೂ ಓದಿ: ಕರುನಾಡ ಮಂದಿಗೆ ಮತ್ತೊಂದು ಶಾಕ್- ಬೇಳೆ, ತರಕಾರಿ ಬಳಿಕ ಅಕ್ಕಿ ಬೆಲೆಯೂ ದುಬಾರಿ
ಪಂಜಾಬ್‌ನಲ್ಲಿ ಪ್ರವಾಹ ಪರಿಸ್ಥಿತಿ:
ಪಾಂಗ್ ಮತ್ತು ಭಾಕ್ರಾ ಅಣೆಕಟ್ಟುಗಳಿಂದ ಹೆಚ್ಚುವರಿ ನೀರನ್ನು ಬಿಡುಗಡೆ ಮಾಡಿದ ಬಳಿಕ ಹೋಶಿಯಾರ್‌ಪುರ, ಗುರುದಾಸ್‌ಪುರ ಮತ್ತು ರೂಪನಗರ ಜಿಲ್ಲೆಗಳ ಹಲವು ಪ್ರದೇಶಗಳು ಮುಳುಗಡೆಯಾಗಿದ್ದು, ಪಂಜಾಬ್‌ನಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ.
ರಾಜ್ಯ ಸರ್ಕಾರವು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಮತ್ತು ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿವೆ ಎಂದು ಮುಖ್ಯಮಂತ್ರಿ ಭಗವಂತ್ ಮಾನ್ ಹೇಳಿದ್ದಾರೆ. ಭಾಕ್ರಾ ಮತ್ತು ಪಾಂಗ್ ಅಣೆಕಟ್ಟುಗಳಲ್ಲಿ ನೀರಿನ ಮಟ್ಟ ಕ್ರಮವಾಗಿ 1,677 ಅಡಿ ಮತ್ತು 1,398 ಅಡಿಗಳಲ್ಲಿದೆ ಎಂದು ತಿಳಿಸಿದರು.