Tag: Uttarakhand

  • ಸುರಂಗದಲ್ಲಿ ಸಿಲುಕಿದ ಕಾರ್ಮಿಕರ ರಕ್ಷಣೆಗೆ ಮಾಸ್ಟರ್‌ ಪ್ಲ್ಯಾನ್‌ – ಏನಿದು ರ‍್ಯಾಟ್‌ಹೋಲ್‌ ಮೈನಿಂಗ್‌?

    ಸುರಂಗದಲ್ಲಿ ಸಿಲುಕಿದ ಕಾರ್ಮಿಕರ ರಕ್ಷಣೆಗೆ ಮಾಸ್ಟರ್‌ ಪ್ಲ್ಯಾನ್‌ – ಏನಿದು ರ‍್ಯಾಟ್‌ಹೋಲ್‌ ಮೈನಿಂಗ್‌?

    ಡೆಹ್ರಾಡೂನ್‌: ಉತ್ತರಾಖಂಡದ ಉತ್ತರಕಾಶಿ ಸುರಂಗದಲ್ಲಿ ಸಿಲುಕಿದ 41 ಕಾರ್ಮಿಕರ (Uttarakhand Tunnel Collapse) ರಕ್ಷಣಾ ಕಾರ್ಯ ಭರದಿಂದ ಸಾಗಿದೆ. ಯಂತ್ರಗಳನ್ನು ಬಳಸದೇ ಮ್ಯಾನುವಲ್‌ ಡ್ರಿಲ್ಲಿಂಗ್‌ ಮೂಲಕವೇ ರಕ್ಷಣಾ ಕಾರ್ಯಾಚರಣೆಗೆ ತಯಾರಿ ನಡೆದಿದೆ.

    ಹೌದು. ಡ್ರಿಲ್ಲಿಂಗ್‌ ಯಂತ್ರಗಳ ಸಮಸ್ಯೆಯಿಂದಾಗಿ ಯಂತ್ರಗಳನ್ನು ಬಳಸದೆಯೇ ಮ್ಯಾನುವಲ್‌ (Manual Drilling) ಡ್ರಿಲ್ಲಿಂಗ್‌ ಕೈಗೊಳ್ಳಲಾಗುತ್ತಿದೆ. ಅದರಲ್ಲೂ, ರ‍್ಯಾಟ್‌ ಹೋಲ್‌ ಮೈನಿಂಗ್‌ (Rat Hole Mining) ಮೂಲಕ 41 ಜನರನ್ನು ರಕ್ಷಿಸಲು ಮಾಸ್ಟರ್‌ ಪ್ಲ್ಯಾನ್‌ ರೂಪಿಸಲಾಗಿದೆ. ಈಗಾಗಲೇ ಸುಮಾರು 12 ತಜ್ಞರ ತಂಡವು ರ‍್ಯಾಟ್‌ ಹೋಲ್‌ ಮೈನಿಂಗ್‌ ಡ್ರಿಲ್ಲಿಂಗ್‌ ಆರಂಭಿಸಿದೆ. ಇದನ್ನೂ ಓದಿ: ಗೃಹಲಕ್ಷ್ಮಿ ಯೋಜನೆ; ಪ್ರತಿ ತಿಂಗಳು 2,000 ರೂ. ಹಣ ಮೊದಲು ಚಾಮುಂಡೇಶ್ವರಿಗೆ ಅರ್ಪಣೆ

    ಏನಿದು ರ‍್ಯಾಟ್‌ ಹೋಲ್‌ ಮೈನಿಂಗ್‌?
    ಚಿಕ್ಕದಾದ ರಂಧ್ರಗಳನ್ನ ಕೊರೆದು ಮನುಷ್ಯರು ಸುಲಭವಾಗಿ ಆ ರಂಧ್ರದಿಂದ ಮೂಲಕ ಹೊರಬರುವಂತೆ ಮಾಡುವುದು. ಉತ್ತರಕಾಶಿ ಸುರಂಗದಲ್ಲಿ ಯಂತ್ರಗಳಿಂದಲೂ ಕೊರೆಯಲು ಸಾಧ್ಯವಾಗದ ಕಾರಣ ಈ ಪ್ಲ್ಯಾನ್‌ ರೂಪಿಸಲಾಗಿದೆ. ಲಂಬವಾಗಿ 86 ಮೀಟರ್‌ ಕೊರೆಯುವ ಸವಾಲಿದ್ದು, ಈಗಾಗಲೇ 36 ಮೀಟರ್‌ ಕೊರೆಯಲಾಗಿದೆ. ಈಗ ಅಡ್ಡಲಾಗಿ ರ‍್ಯಾಟ್‌ ಹೋಲ್‌ ಮೈನಿಂಗ್‌ ತಂತ್ರದ ಮೂಲಕ ಕೊರೆಯುವ ಕೆಲಸ ಆರಂಭಿಸಲಾಗಿದೆ. ಈ ಪ್ಲ್ಯಾನ್‌ ಯಶಸ್ವಿಯಾದರೂ ಕಾರ್ಮಿಕರ ರಕ್ಷಣೆಗೆ ಇನ್ನೂ 3 ದಿನ ಬೇಕಾಗುತ್ತದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: 1 ವರ್ಷದ ಬಳಿಕ ರೇಣುಕಾಚಾರ್ಯ ಅಣ್ಣನ ಮಗ ಸಾವು ಪ್ರಕರಣ ಮುಕ್ತಾಯ; ಅಪಘಾತದಿಂದಲೇ ಸಾವು ಎಂದು ವರದಿ

    ಉತ್ತರಕಾಶಿ ಜಿಲ್ಲೆಯ ಸಿಲ್‌ಕ್ಯಾರ ಹಾಗೂ ದಂಡಲ್‌ಗಾಂವ್‌ಗೆ ಸಂಪರ್ಕ ಕಲ್ಪಿಸಲು ಚಾರ್‌ ಧಾಮ್‌ ರಸ್ತೆ ಯೋಜನೆ ಅಡಿಯಲ್ಲಿ ಸುರಂಗ ಮಾರ್ಗ ನಿರ್ಮಿಸಲಾಗುತ್ತಿದೆ. 4.5 ಕಿಲೋ ಮೀಟರ್‌ ದೂರದ ಸುರಂಗ ನಿರ್ಮಾಣದ ವೇಳೆ ಸುಮಾರು 150 ಮೀಟರ್‌ ಉದ್ದದ ಸುರಂಗ ಕುಸಿದಿತ್ತು. ನವೆಂಬರ್‌ 12ರಂದು ಜಾವ 4 ಗಂಟೆ ಸುಮಾರಿಗೆ ಸುರಂಗ ಕುಸಿದಿದ್ದು, ಕೂಡಲೇ ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಗಿತ್ತು. ಇಷ್ಟಾದರೂ ಕ್ಷಿಪ್ರವಾಗಿ ಕಾರ್ಮಿಕರನ್ನು ರಕ್ಷಣೆ ಮಾಡಲು ಆಗಿರಲಿಲ್ಲ. ಇದನ್ನೂ ಓದಿ: ಬೆಂಗ್ಳೂರಲ್ಲಿ ಹಸುಗೂಸುಗಳ ಮಾರಾಟ ದಂಧೆ – ಬೃಹತ್ ಜಾಲ ಭೇದಿಸಿದ ಸಿಸಿಬಿ, 8 ಮಂದಿ ಅರೆಸ್ಟ್ 

  • ಅಮೆರಿಕ ಮಷಿನ್ ಕೈಕೊಟ್ಟ ನಂತರ 41 ಕಾರ್ಮಿಕರ ರಕ್ಷಣೆಗೆ ಧಾವಿಸಿದ ವಾಯುಸೇನೆ

    ಅಮೆರಿಕ ಮಷಿನ್ ಕೈಕೊಟ್ಟ ನಂತರ 41 ಕಾರ್ಮಿಕರ ರಕ್ಷಣೆಗೆ ಧಾವಿಸಿದ ವಾಯುಸೇನೆ

    ಡೆಹ್ರಾಡೂನ್: ಕಳೆದ 15 ದಿನಗಳಿಂದ ಉತ್ತರಕಾಶಿಯ (Uttarkashi) ನಿರ್ಮಾಣ ಹಂತದಲ್ಲಿರುವ ಸಿಲ್ಕ್ಯಾರಾ ಸುರಂಗದಲ್ಲಿ (Silkyara Tunnel) ಸಿಲುಕಿರುವ 41 ಕಾರ್ಮಿಕರ ರಕ್ಷಣೆಗೆ ಭಾರತೀಯ ಸೇನೆ ಕೈ ಜೋಡಿಸಿದೆ. ವಾಯುಪಡೆ (Indian Air Force) ಡಿಆರ್‌ಡಿಒ ಉಪಕರಣಗಳನ್ನು ತೆಗೆದುಕೊಂಡು ಘಟನಾ ಸ್ಥಳಕ್ಕೆ ತೆರಳಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಆಗರ್ ಯಂತ್ರದ ಬ್ಲೇಡ್‍ಗಳು ಅವಶೇಷಗಳ ಅಡಿ ಸಿಲುಕಿದ ಬಳಿಕ, ಸಿಕ್ಕಿಬಿದ್ದ 41 ಕಾರ್ಮಿಕರ ರಕ್ಷಣೆಗೆ ಕೊನೆಯ ಮಾರ್ಗವಾಗಿ ಕೈಯಿಂದ ಕೊರೆಯಲು ತಯಾರಿ ನಡೆಸಲಾಗಿದೆ. ಮಾನವ ಸಂಪನ್ಮೂಲ ಬಳಸಿ ಸುರಂಗದ 10-15 ಮೀಟರ್‍ಗಳನ್ನು ಕೊರೆಯಲು ಸುಮಾರು 18 ಗಂಟೆಗಳ ಕಾಲ ತೆಗೆದುಕೊಳ್ಳಲಿದೆ. ಇದಕ್ಕಾಗಿ ಭಾರತೀಯ ಸೇನೆ, ಕೇಂದ್ರ ಮತ್ತು ರಾಜ್ಯದ ಏಜೆನ್ಸಿಗಳು ಸೇರಿಕೊಂಡಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಮುಂಬೈ ಭಯೋತ್ಪಾದಕ ದಾಳಿಗೆ 15 ವರ್ಷ – ನೆನೆಪಿದೆಯಾ ಆ ಕರಾಳ ದಿನಗಳು..?

    ಅವಶೇಷಗಳ ಅಡಿ ಸಿಲುಕಿರುವ ಆಗರ್ ಯಂತ್ರದ ಭಾಗಗಳನ್ನು ಕತ್ತರಿಸಿ ತೆಗೆಯಲು ಭಾನುವಾರ ಹೈದರಾಬಾದ್‍ನಿಂದ ಪ್ಲಾಸ್ಮಾ ಕಟ್ಟರ್ ತರಿಸಿ ಯತ್ನಿಸಲಾಗಿದೆ. ಅಲ್ಲದೇ ಯಂತ್ರದ ಮೂಲಕ ಕಾರ್ಯಾಚರಣೆ ಮಾಡುವುದನ್ನು ನಿಲ್ಲಿಸಿ, ಕಾರ್ಮಿಕರನ್ನು ಕರತರಲು ಪೈಪ್‍ನ್ನು ಕೈಯ್ಯಾರೆ ತಳ್ಳಲಾಗುತ್ತಿದೆ. ಇದರೊಂದಿಗೆ ಲಂಬವಾಗಿ ಕೊರೆಯಲು ಒಂದು ಯಂತ್ರ ಬಳಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಅವಶೇಷಗಳ ಅಡಿ ಸಿಲುಕಿರುವ ಕಾರ್ಮಿಕರಿಗೆ ಪೈಪ್‍ಗಳ ಮೂಲಕ ಆಹಾರ, ಔಷಧ ಹಾಗೂ ನೀರನ್ನು ಸರಬರಾಜು ಮಾಡಲಾಗುತ್ತಿದ್ದು, ಅವರು ಸುರಕ್ಷಿತವಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ನ.12 ರಂದು ಉತ್ತರಕಾಶಿಯಲ್ಲಿ ಬೆ.5 ಗಂಟೆ ಸುಮಾರಿಗೆ ನಿರ್ಮಾಣ ಹಂತದಲ್ಲಿರುವ ಸಿಲ್ಕ್ಯಾರಾ-ಬರ್ಕೋಟ್ ಸುರಂಗದ ಒಂದು ಭಾಗವು ಕುಸಿದಿತ್ತು. ಇದರಿಂದಾಗಿ ಕೆಲಸ ಮಾಡುತ್ತಿದ್ದ 41 ಕಾರ್ಮಿಕರು ಅವಶೇಷಗಳೊಳಗೆ ಸಿಲುಕಿಕೊಂಡಿದ್ದಾರೆ. ಸಿಲುಕಿದವರ ರಕ್ಷಣೆಗೆ ಕಳೆದ 15 ದಿನಗಳಿಂದ ಅಧಿಕಾರಿಗಳು ಶ್ರಮಿಸುತ್ತಿದ್ದಾರೆ. ಇದನ್ನೂ ಓದಿ: 41 ಕಾರ್ಮಿಕರ ರಕ್ಷಣಾ ಕಾರ್ಯಾಚರಣೆ ಮತ್ತೆ ಸ್ಥಗಿತ

  • 41 ಕಾರ್ಮಿಕರ ರಕ್ಷಣಾ ಕಾರ್ಯಾಚರಣೆ ಮತ್ತೆ ಸ್ಥಗಿತ

    41 ಕಾರ್ಮಿಕರ ರಕ್ಷಣಾ ಕಾರ್ಯಾಚರಣೆ ಮತ್ತೆ ಸ್ಥಗಿತ

    ಡೆಹ್ರಾಡೂನ್: ಉತ್ತರಕಾಶಿಯ (Uttarkashi) ಸಿಲ್ಕ್ಯಾನ್‌ ಸುರಂಗದಲ್ಲಿ ಸಿಲುಕಿರುವ 41 ಕಾರ್ಮಿಕರ ರಕ್ಷಣೆ ಕಾರ್ಯಾಚರಣೆಗೆ ಒಂದಿಲ್ಲೊಂದು ಅಡಚಣೆ ಎದುರಾಗುತ್ತಿದ್ದು, ರಕ್ಷಣೆ ವಿಳಂಬವಾಗುತ್ತಿದೆ. ಕಾರ್ಮಿಕರನ್ನು ತಲುಪಲು ಕೆಲವೇ ಮೀಟರ್ ಬಾಕಿ ಇದೆ. ಇದರ ನಡುವೆ ಮತ್ತೆ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ.

    ಸುರಂಗದಲ್ಲಿ (Tunnel Collapse) ಸಿಲುಕಿರುವ ಕಾರ್ಮಿಕರನ್ನು ತಲುಪುವ ಮೊದಲು ಕೇವಲ 10-12 ಮೀಟರ್ ಕೊರೆಯುವಿಕೆ ಉಳಿದಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಮುಂದಿನ ಐದು ಮೀಟರ್‌ಗಳಲ್ಲಿ ಯಾವುದೇ ಗಮನಾರ್ಹ ಲೋಹದ ಅಡೆತಡೆಗಳನ್ನು ರಾಡಾರ್ ಪತ್ತೆ ಮಾಡಿಲ್ಲ ಎಂದು ದೃಢಪಡಿಸಿದ್ದಾರೆ. ಇದನ್ನೂ ಓದಿ: ಸುರಂಗದಲ್ಲಿ ಸಿಲುಕಿರೋ 41 ಕಾರ್ಮಿಕರ ರಕ್ಷಣಾ ಕಾರ್ಯಾಚರಣೆ ವಿಳಂಬ

    ಕುಸಿದ ಸುರಂಗದ ಅಡಿಯಲ್ಲಿ ಸಿಲುಕಿರುವ ಕಾರ್ಮಿಕರನ್ನು ತಲುಪಲು ಸುರಂಗದ ಮೇಲ್ಭಾಗದ ಮೂಲಕ ಕೊರೆಯಲು ಮತ್ತೊಂದು ಡ್ರಿಲ್ಲಿಂಗ್ ಯಂತ್ರವನ್ನು ಸ್ಥಳಕ್ಕೆ ತರಲಾಗಿದೆ. ಕೊರೆಯುವ ಯಂತ್ರವು ಮುಂದಕ್ಕೆ ಸಾಗುತ್ತಿದ್ದಂತೆ, ಉಕ್ಕಿನ ಪೈಪ್‌ನ ಆರು-ಮೀಟರ್ ವಿಭಾಗಗಳನ್ನು ಒಟ್ಟಿಗೆ ಬೆಸುಗೆ ಹಾಕಲಾಗುತ್ತದೆ. ಅದನ್ನು ಕಿರಿದಾದ ಸುರಂಗ ಮಾರ್ಗಕ್ಕೆ ತಳ್ಳಲಾಗುತ್ತದೆ. ಉಕ್ಕಿನ ಗಾಳಿಕೊಡೆಯು ಸ್ಥಳದಲ್ಲಿ ಒಮ್ಮೆ, ರಕ್ಷಕರು ಹೊಸದಾಗಿ ರಚಿಸಲಾದ ಸುರಂಗದ ಮೂಲಕ ಕಾರ್ಮಿಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲು ಗಾಲಿ ಸ್ಟ್ರೆಚರ್‌ಗಳನ್ನು ಬಳಸುತ್ತಾರೆ.

    ಕಾರ್ಯಾಚರಣೆಯನ್ನು ನಿಲ್ಲಿಸುವ ಮೊದಲು ಸುಮಾರು 60 ಮೀಟರ್‌ಗಳಷ್ಟು ಉದ್ದವಿರುವ ಸುರಂಗದ ಕುಸಿದ ಭಾಗದಲ್ಲಿ 800 ಮಿಲಿಮೀಟರ್ ಅಗಲದ ಉಕ್ಕಿನ ಪೈಪ್‌ನ 46.8 ಮೀಟರ್‌ಗಳನ್ನು ಕೊರೆದ ಮಾರ್ಗದಲ್ಲಿ ಸೇರಿಸಲಾಗಿದೆ. ಇದನ್ನೂ ಓದಿ: 2 ತಿಂಗಳ ಬಳಿಕ 24 ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದ ಹಮಾಸ್

    “ಗ್ರೀನ್ ಕಾರಿಡಾರ್” ಮೂಲಕ ಸುರಕ್ಷಿತ ಪೊಲೀಸ್ ಬೆಂಗಾವಲಿನಲ್ಲಿ ರಕ್ಷಿಸಲಾದ ಕಾರ್ಮಿಕರನ್ನು ವೈದ್ಯಕೀಯ ಕೇಂದ್ರಗಳಿಗೆ ತ್ವರಿತವಾಗಿ ಸಾಗಿಸಲು ವ್ಯವಸ್ಥೆ ಮಾಡಲಾಗಿದೆ ಎಂದು ಗರ್ವಾಲ್ ರೇಂಜ್ ಇನ್ಸ್‌ಪೆಕ್ಟರ್ ಜನರಲ್ ಕೆಎಸ್ ನಾಗ್ನ್ಯಾಲ್ ತಿಳಿಸಿದ್ದಾರೆ.

  • ಸುರಂಗದಲ್ಲಿ ಸಿಲುಕಿರುವ 41 ಕಾರ್ಮಿಕರನ್ನು ಹೇಗೆ ಕರೆತರುತ್ತಾರೆ ಗೊತ್ತಾ? – ಪ್ರಾತ್ಯಕ್ಷಿಕೆ ವಿಡಿಯೋ ನೋಡಿ..

    ಸುರಂಗದಲ್ಲಿ ಸಿಲುಕಿರುವ 41 ಕಾರ್ಮಿಕರನ್ನು ಹೇಗೆ ಕರೆತರುತ್ತಾರೆ ಗೊತ್ತಾ? – ಪ್ರಾತ್ಯಕ್ಷಿಕೆ ವಿಡಿಯೋ ನೋಡಿ..

    ಡೆಹ್ರಾಡೂನ್: ಉತ್ತರಕಾಶಿಯ (Uttarkashi) ಸಿಲ್ಕ್ಯಾರಾ ಸುರಂಗದಲ್ಲಿ (Tunnel Collapse) ಕಳೆದ 13 ದಿನಗಳಿಂದ ಸಿಲುಕಿರುವ 41 ಕಾರ್ಮಿಕರನ್ನು ಹೇಗೆ ಸುರಕ್ಷಿತವಾಗಿ ಹೊರಕರೆತರಲಾಗುವುದು ಎಂಬುದನ್ನು ಪ್ರಾತ್ಯಕ್ಷಿಕೆ ಮೂಲಕ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ತೋರಿಸಿದೆ. ಅದರ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.

    ಕಾರ್ಮಿಕರನ್ನು ಸುರಕ್ಷಿತವಾಗಿ ಹೊರತರುವುದಕ್ಕೆ ಮಾರ್ಗ ಸಿದ್ಧಪಡಿಸಲು ಅವಶೇಷಗಳ ಮೂಲಕ ಪೈಪ್‌ಲೈನ್‌ ಹಾಕಲಾಗಿದೆ. ಅದರ ಮೂಲಕ ಗಾಲಿ ಸ್ಟ್ರೆಚರ್‌ಗಳಲ್ಲಿ (wheeled stretchers) ಒಬ್ಬೊಬ್ಬರಾಗಿ ಕಾರ್ಮಿಕರನ್ನು ಹೊರಕ್ಕೆ ಕರೆತರಲಾಗುವುದು ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF) ಸಿಬ್ಬಂದಿ ತಿಳಿಸಿದ್ದಾರೆ. ಇದನ್ನೂ ಓದಿ: ತಾಂತ್ರಿಕ ಅಡಚಣೆ – ಉತ್ತರಕಾಶಿ ಸುರಂಗದಲ್ಲಿ ಸಿಲುಕಿದವರ ರಕ್ಷಣೆ ವಿಳಂಬ

    ಕಾರ್ಮಿಕರನ್ನು ಸುರಕ್ಷಿತವಾಗಿ ಹೇಗೆ ಕರೆತರಲಾಗುತ್ತದೆ ಎಂಬುದನ್ನು ಪ್ರಾತ್ಯಕ್ಷಿಕೆ ಮಾಡಿರುವ ವಿಡಿಯೋವನ್ನು ಹಂಚಿಕೊಂಡಿದೆ. ಅವಶೇಷಗಳ ಮೂಲಕ ಹಾಕಿರುವುದು ವೆಲ್ಡಿಂಗ್‌ ಮಾಡಿರುವ ಪೈಪ್‌ಲೈನ್‌. ಎನ್‌ಡಿಆರ್‌ಎಫ್ ಸಿಬ್ಬಂದಿ, ಗಾಲಿ ಸ್ಟ್ರೆಚರ್ ಅನ್ನು ಹಗ್ಗದಿಂದ ಎಳೆಯುವಾಗ ಕಾರ್ಮಿಕರ ಕೈಕಾಲುಗಳಿಗೆ ವೆಲ್ಡಿಂಗ್‌ ಭಾಗದ ಪೈಪ್‌ಲೈನ್‌ ತಾಗಿ ಗಾಯಗಳಾಗದಂತೆ ನೋಡಿಕೊಳ್ಳಲು, ಅವರು ಸ್ಟ್ರೆಚರ್‌ನಲ್ಲಿ ಮಲಗುವಂತೆ ಮಾಡಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಉತ್ತರಾಖಂಡದ ಸಿಲ್ಕ್ಯಾರಾ ಸುರಂಗದಲ್ಲಿ ಸಿಲುಕಿರುವ 41 ಕಾರ್ಮಿಕರ ರಕ್ಷಣಾ ಕಾರ್ಯಾಚರಣೆಯು ಈಗ ಅಂತಿಮ ಹಂತ ತಲುಪಿದೆ. ಸದ್ಯ ಎಲ್ಲಾ ಕಾರ್ಮಿಕರು ಸುರಕ್ಷಿತವಾಗಿದ್ದು, ಉಕ್ಕಿನ ಪೈಪ್‌ಗಳ ಮೂಲಕ ಆಹಾರ ಮತ್ತು ನೀರನ್ನು ಸರಬರಾಜು ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಸುರಂಗದಲ್ಲಿ ಸಿಲುಕಿದವರ ಹೊರತರಲು ಕ್ಷಣಗಣನೆ – ಆರೈಕೆಗೆ ಆಸ್ಪತ್ರೆ ರೆಡಿ

    ನಿರ್ಮಾಣ ಹಂತದಲ್ಲಿರುವ ಸುರಂಗವು ಮಹತ್ವಾಕಾಂಕ್ಷೆಯ ಚಾರ್ ಧಾಮ್ ಯೋಜನೆಯ ಭಾಗವಾಗಿದೆ. ಇದು ಹಿಂದೂ ಯಾತ್ರಾ ಸ್ಥಳಗಳಾದ ಬದರಿನಾಥ್, ಕೇದಾರನಾಥ, ಗಂಗೋತ್ರಿ ಮತ್ತು ಯಮುನೋತ್ರಿಗಳಿಗೆ ಸಂಪರ್ಕವನ್ನು ಹೆಚ್ಚಿಸಲು ರಾಷ್ಟ್ರೀಯ ಮೂಲಸೌಕರ್ಯ ಉಪಕ್ರಮವಾಗಿದೆ.

  • ತಾಂತ್ರಿಕ ಅಡಚಣೆ – ಉತ್ತರಕಾಶಿ ಸುರಂಗದಲ್ಲಿ ಸಿಲುಕಿದವರ ರಕ್ಷಣೆ ವಿಳಂಬ

    ತಾಂತ್ರಿಕ ಅಡಚಣೆ – ಉತ್ತರಕಾಶಿ ಸುರಂಗದಲ್ಲಿ ಸಿಲುಕಿದವರ ರಕ್ಷಣೆ ವಿಳಂಬ

    ಡೆಹ್ರಾಡೂನ್: ಉತ್ತರಾಖಂಡದ (Uttarakhand) ಉತ್ತರಕಾಶಿಯಲ್ಲಿ (Uttarkashi) ಸುರಂಗದಲ್ಲಿ (Tunnel) ಸಿಲುಕಿರುವ 41 ಕಾರ್ಮಿಕರನ್ನು ರಕ್ಷಿಸುವ ಕಾರ್ಯಾಚರಣೆ (Rescue operation) ಇಂದಿಗೆ (ಶುಕ್ರವಾರ) 13ನೇ ದಿನಕ್ಕೆ ಕಾಲಿಟ್ಟಿದೆ. ಕಳೆದ ತಡರಾತ್ರಿ ತಾಂತ್ರಿಕ ಅಡಚಣೆಯಿಂದಾಗಿ ಕಾರ್ಮಿಕರನ್ನು ರಕ್ಷಿಸುವ ಕಾರ್ಯ ವಿಳಂಬವಾಗಿದೆ.

    ಸಿಲ್ಕ್ಯಾರಾ ಸುರಂಗದ ಕಡೆಯಿಂದ ಅಮೆರಿಕನ್ ಆಗುರ್ ಯಂತ್ರವನ್ನು ಬಳಸಿ ಕೊರೆಯುವ ಕೆಲಸ ನಡೆಯುತ್ತಿತ್ತು. ರಕ್ಷಣಾ ತಂಡ ಇಲ್ಲಿಯವರೆಗೆ ಸುಮಾರು 46.8 ಮೀ. ವರೆಗೆ ಕೊರೆದಿದ್ದಾರೆ. ಆದರೆ ಗುರುವಾರ ತಡರಾತ್ರಿ ಮತ್ತೊಂದು ತಾಂತ್ರಿಕ ಅಡಚಣೆ ಉಂಟಾಗಿರುವುದರಿಂದ ರಕ್ಷಣಾ ಕಾರ್ಯಾಚರಣೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

    ಕೊರೆಯುವ ಯಂತ್ರವನ್ನು ದುರಸ್ತಿಗೊಳಿಸಲು ಕೆಲವು ಗಂಟೆ ತೆಗೆದುಕೊಳ್ಳುತ್ತದೆ. ಬೇರೆ ಯಾವುದೇ ಸಮಸ್ಯೆ ಉಂಟಾಗದಿದ್ದರೆ ಶುಕ್ರವಾರ ಬೆಳಗ್ಗೆ 9 ಗಂಟೆಗೆ ರಕ್ಷಣಾ ಕಾರ್ಯಾಚರಣೆ ಪುನರಾರಂಭವಾಗಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಇನ್ಮುಂದೆ ನಮ್ಮ ಮೆಟ್ರೋದಲ್ಲಿ ಶೂಟಿಂಗ್‌ಗೆ ಅವಕಾಶ

    13 ದಿನಗಳಿಂದ ಸುರಂಗದೊಳಗೆ ಸಿಲುಕಿ ಪರದಾಡುತ್ತಿರುವ 41 ಕಾರ್ಮಿಕರನ್ನು ಇಂದು ಹೊರತರುವ ನಿರೀಕ್ಷೆಯಿದೆ. ಅಂಬುಲೆನ್ಸ್‌ಗಳು, ವೈದ್ಯರ ತಂಡ ಅಗತ್ಯವಿರುವ ಎಲ್ಲಾ ವೈದ್ಯಕೀಯ ಉಪಕರಣಗಳೊಂದಿಗೆ ಸ್ಥಳದಲ್ಲಿ ಹಾಜರಿದ್ದಾರೆ. ಕಾರ್ಮಿಕರಿಗೆ ನೀರು, ಆಹಾರ ವಿತರಿಸಲು ಪೈಪ್ ಅನ್ನು ಅಳವಡಿಸಲಾಗಿದೆ. ಇದನ್ನೂ ಓದಿ: ಅಮೆರಿಕದಲ್ಲಿ ಭಾರತದ ವಿದ್ಯಾರ್ಥಿಗೆ ಗುಂಡಿಕ್ಕಿ ಹತ್ಯೆ

  • ಸುರಂಗದಲ್ಲಿ ಸಿಲುಕಿದವರ ಹೊರತರಲು ಕ್ಷಣಗಣನೆ – ಆರೈಕೆಗೆ ಆಸ್ಪತ್ರೆ ರೆಡಿ

    ಸುರಂಗದಲ್ಲಿ ಸಿಲುಕಿದವರ ಹೊರತರಲು ಕ್ಷಣಗಣನೆ – ಆರೈಕೆಗೆ ಆಸ್ಪತ್ರೆ ರೆಡಿ

    ಡೆಹ್ರಾಡೂನ್: ಉತ್ತರಖಂಡದ (Uttarakhand) ಉತ್ತರಕಾಶಿಯ (Uttarkashi) ಸಿಲ್ಕ್ಯಾರಾ ಸುರಂಗದಲ್ಲಿ (Tunnel) ಸಿಲುಕಿರುವವರ ರಕ್ಷಣಾ ಕಾರ್ಯಾಚರಣೆ ಸತತ 11ನೇ ದಿನವು ಮುಂದುವರಿದಿದೆ. ಸಿಲುಕಿರುವ ಕಾರ್ಮಿಕರನ್ನು ಹೊರಗೆ ಕರೆತಂದ ತಕ್ಷಣ ಚಿಕಿತ್ಸೆ ನೀಡಲು ಚಿನ್ಯಾಲಿಸೌರ್‌ನ ಸಮುದಾಯ ಆರೋಗ್ಯ ಕೇಂದ್ರದಲ್ಲಿ 41 ಹಾಸಿಗೆಗಳ ಆಸ್ಪತ್ರೆಯನ್ನು ಸಿದ್ಧಪಡಿಸಲಾಗಿದೆ.

    ಸುರಂಗದಲ್ಲಿ ರಕ್ಷಣಾ ಕಾರ್ಯಾಚರಣೆ ವೇಗವನ್ನು ಪಡೆದುಕೊಂಡಿದೆ. ಅಮೆರಿಕದ ಆಗರ್ ಯಂತ್ರವು ಕುಸಿತಗೊಂಡ ಸುರಂಗದ ಅವಶೇಷಗಳ ಒಳಗೆ 45 ಮೀಟರ್‌ಗಳಷ್ಟು ದೂರ ಕ್ರಮಿಸಿದೆ. ಸಿಲುಕಿರುವ ಕಾರ್ಮಿಕರನ್ನು ತಲುಪಲು 6 ಮೀಟರ್ ಉದ್ದದ 800 ಎಂಎಂ ವ್ಯಾಸದ ಎರಡು ಉಕ್ಕಿನ ಪೈಪ್‍ಗಳನ್ನು ಹಾಕಲು ಸುಮಾರು 12 ಮೀಟರ್‌ಗಳಷ್ಟು ಅಗೆಯಬೇಕಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಕರ್ನಾಟಕಕ್ಕೆ ಬರಲ್ವಾ ಟೆಸ್ಲಾ ಉತ್ಪಾದನಾ ಘಟಕ..?

    ಸಿಲುಕಿರುವವರು ಅದೃಷ್ಟವಶಾತ್ ಜೀವಂತವಾಗಿದ್ದಾರೆ. ಅವರಿಗೆ ಸೂಕ್ತ ಆಹಾರ ಒದಗಿಸಲಾಗಿದೆ. ರಕ್ಷಣೆಯ ಬಳಿಕ ಅವರ ಆರೈಕೆಗಾಗಿ 15 ವೈದ್ಯರ ತಂಡವನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ತಕ್ಷಣದ ವೈದ್ಯಕೀಯ ಆರೈಕೆಗಾಗಿ ಎಂಟು ಹಾಸಿಗೆಗಳನ್ನು ಒಳಗೊಂಡಿರುವ ತಾತ್ಕಾಲಿಕ ಆಸ್ಪತ್ರೆಯನ್ನು ಸಹ ಸ್ಥಳದಲ್ಲಿ ಸ್ಥಾಪಿಸಲಾಗಿದೆ. ಹಲವಾರು ಅಂಬುಲೆನ್ಸ್‌ಗಳು ಮತ್ತು ಹೆಲಿಕಾಪ್ಟರ್‌ನ್ನು ಸ್ಥಳದಲ್ಲಿ ಇರಿಸಲಾಗಿದೆ. ಅಲ್ಲದೇ ಜಿಲ್ಲೆಯ ಎಲ್ಲಾ ಆಸ್ಪತ್ರೆಗಳು ಹಾಗೂ ಏಮ್ಸ್, ಋಷಿಕೇಶದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.

    ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ರಕ್ಷಣಾ ಕಾರ್ಯಾಚರಣೆಯ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಹಮಾಸ್-ಇಸ್ರೇಲ್ ನಡುವೆ ಕದನ ವಿರಾಮ ಒಪ್ಪಂದ

  • ಅಮ್ಮ ನನ್ನ ಬಗ್ಗೆ ಚಿಂತಿಸಬೇಡ, ಸಮಯಕ್ಕೆ ಸರಿಯಾಗಿ ಊಟ ಮಾಡಿ – ಸುರಂಗದಲ್ಲಿ ಸಿಲುಕಿದ ಕಾರ್ಮಿಕನ ಭಾವುಕ ಸಂದೇಶ

    ಅಮ್ಮ ನನ್ನ ಬಗ್ಗೆ ಚಿಂತಿಸಬೇಡ, ಸಮಯಕ್ಕೆ ಸರಿಯಾಗಿ ಊಟ ಮಾಡಿ – ಸುರಂಗದಲ್ಲಿ ಸಿಲುಕಿದ ಕಾರ್ಮಿಕನ ಭಾವುಕ ಸಂದೇಶ

    ಡೆಹ್ರಾಡೂನ್‌: ʻʻಅಮ್ಮ ನನ್ನ ಬಗ್ಗೆ ಚಿಂತಿಸಬೇಡ, ನಾನು ಚೆನ್ನಾಗಿದ್ದೇನೆ, ದಯವಿಟ್ಟು ನೀವು ಮತ್ತು ಅಪ್ಪ, ಸಮಯಕ್ಕೆ ಸರಿಯಾಗಿ ಊಟ ಮಾಡಿ, ನಿಮ್ಮ ಆರೋಗ್ಯವನ್ನು ಚೆನ್ನಾಗಿ ನೋಡಿಕೊಳ್ಳಿ…ʼʼ ಕಳೆದ 10 ದಿನಗಳಿಂದ ಉತ್ತರಾಖಂಡದ (Uttarakhand) ಉತ್ತರಕಾಶಿಯಲ್ಲಿ ಸುರಂಗದೊಳಗೆ ಸಿಲುಕಿರುವ ಕಾರ್ಮಿಕರೊಬ್ಬರು (Labor) ತಮ್ಮ ತಾಯಿಗೆ ತಲುಪಿಸಿದ ಭಾವುಕ ಸಂದೇಶ ಇದಾಗಿತ್ತು.

    ಸಿಲ್ಕಿಯಾರ ಸುರಂಗದೊಳಗೆ (Silkyara Tunnel) ಸಿಲುಕಿರುವ 41 ಕಾರ್ಮಿಕರಿಗೆ ಕಳೆದ 10 ದಿನಗಳಿಂದ 6 ಇಂಚಿನ ಪೈಪ್ ಮೂಲಕ ನೀರು, ಆಹಾರ ಕಳುಹಿಸಲಾಗುತ್ತಿದೆ. ಇದೀಗ ಕಾರ್ಮಿಕರು ಸುರಕ್ಷಿತರಾಗಿದ್ದಾರೆಯೇ ಎಂಬುದನ್ನು ತಿಳಿದುಕೊಳ್ಳಲು ಇದೇ ಪೈಪ್ ಮೂಲಕ ಎಂಡೋಸ್ಕೋಪಿ ಕ್ಯಾಮೆರಾವನ್ನ ಸುರಂಗದೊಳಗೆ ಕಳುಸಿದ್ದು, ಕಾರ್ಮಿಕರ ದೃಶ್ಯಗಳನ್ನ ಸೆರೆಹಿಡಿಯಲಾಗಿದೆ. ಸ್ವಲ್ಪ ಸಮಯದ ನಂತ್ರ ಕಾರ್ಮಿಕರೊಂದಿಗೆ ಸಂವಹನ ನಡೆಸಲಾಗಿದ್ದು, ಇದರಿಂದ ಕಾರ್ಮಿಕರ ರಕ್ಷಣೆಗೆ ಬಹುತೇಕ ಪರಿಹಾರ ಸಿಕ್ಕಂತಾಗಿದೆ. ಇದನ್ನೂ ಓದಿ: ಭಾರತೀಯರ ಹತ್ಯೆಗೆ ಈ ಸಂಘಟನೆಯೇ ಹೊಣೆ: ಲಷ್ಕರ್‌-ಎ-ತೊಯ್ಬಾ ಬ್ಯಾನ್‌ ಮಾಡಿದ ಇಸ್ರೇಲ್‌

    ರಕ್ಷಣಾ ತಂಡದ ಅಧಿಕಾರಿಗಳು ಸುರಂಗದಲ್ಲಿ ಸಿಲುಕಿಕೊಂಡವರೊಂದಿಗೆ ಸಂವಹನ ನಡೆಸುವ ಕಾರ್ಯವನ್ನು ಯಶಸ್ವಿಯಾಗಿ ಮಾಡಿದ್ದಾರೆ. ಈ ವೇಳೆ ಸುರಂಗದಲ್ಲಿ ಸಿಲುಕಿದ ಕಾರ್ಮಿಕರಲ್ಲಿ ಒಬ್ಬರಾದ ಜೈದೇವ್‌, ಮೇಲ್ವಿಚಾರಕರೊಂದಿಗೆ ಮಾತನಾಡುತ್ತಾ ತನ್ನ ಹೇಳಿಕೆಯನ್ನ ರೆಕಾರ್ಡ್‌ ಮಾಡುವಂತೆ ಕೇಳಿಕೊಂಡಿದ್ದಾರೆ. ಬಳಿಕ ಹೇಳಿಕೆಯನ್ನು ತನ್ನ ತಾಯಿಗೆ ತಲುಪಿಸುವಂತೆ ಕೋರಿಕೊಂಡಿದ್ದಾರೆ. ಮೇಲ್ವಿಚಾರಕರು ಕಾರ್ಮಿಕನ ಹೇಳಿಕೆ ರೆಕಾರ್ಡ್‌ ಮಾಡುತ್ತಿದ್ದಂತೆ, ಅಮ್ಮ ನನ್ನ ಬಗ್ಗೆ ಚಿಂತಿಸಬೇಡ, ನಾನು ಚೆನ್ನಾಗಿದ್ದೇನೆ, ದಯವಿಟ್ಟು ನೀವು ಮತ್ತು ಅಪ್ಪ ಸಮಯಕ್ಕೆ ಸರಿಯಾಗಿ ಊಟ ಮಾಡಿ ಆರೋಗ್ಯ ನೋಡಿಕೊಳ್ಳಿ ಎಂದು ಭಾವುಕ ನುಡಿಗಳನ್ನಾಡಿದ್ದಾರೆ. ಬಳಿಕ ಮೇಲ್ವಿಚಾರಕರು ಚಿಂತಿಸಬೇಡಿ ಶೀಘ್ರದಲ್ಲೇ ಸ್ಥಳಾಂತರಿಸುವುದಾಗಿ ಅಭಯ ನೀಡಿದ್ದಾರೆ.

    ಕಾರ್ಮಿಕರ ಸುರಕ್ಷತೆಗೆ ಹವನ ಯಾಗ: ಸುರಂಗದಲ್ಲಿ ಸಿಲುಕಿರುವ 41 ಕಾರ್ಮಿಕರ ಸುರಕ್ಷತೆಗಾಗಿ ಜಮ್ಮು ಮತ್ತು ಕಾಶ್ಮೀರ ವಿಭಾಗದ ಬಜರಂಗದಳ ಹವನ ಯಾಗ ನಡೆಸಿ ಪ್ರಾರ್ಥಿಸಿದೆ. ಇದನ್ನೂ ಓದಿ: ಹಸು ಸಗಣಿ ಕೆಜಿಗೆ 2 ರೂ., ರಾಜ್ಯದ ಪ್ರತಿ ಮಗುವಿಗೂ ಇಂಗ್ಲಿಷ್‌ ಶಿಕ್ಷಣ – ರಾಜಸ್ಥಾನಕ್ಕೆ ಕಾಂಗ್ರೆಸ್‌ ಗ್ಯಾರಂಟಿ

    ಸದ್ಯ ರಕ್ಷಣಾ ಅಧಿಕಾರಿಗಳು ವಾಕಿ ಟಾಕೀಸ್ ಮೂಲಕ ಕೆಲ ಕಾರ್ಮಿಕರೊಂದಿಗೆ ಮಾತನಾಡಿದ್ದಾರೆ. ಸೆರೆಹಿಡಿಯಲಾದ ವೀಡಿಯೋದಲ್ಲಿ ರಕ್ಷಣಾ ಅಧಿಕಾರಿಗಳು ಕಾರ್ಮಿಕರಿಗೆ ಕ್ಯಾಮೆರಾ ಮುಂದೆ ಬರುವಂತೆ ಕೇಳಿರುವುದು ಕಂಡುಬಂದಿದೆ. ಕಾರ್ಮಿಕರಿಗೆ ಮೊಬೈಲ್, ಚಾರ್ಜರ್‌ಗಳನ್ನು ಪೈಪ್ ಮೂಲಕ ಕಳುಹಿಸಲಾಗುವುದು ಎಂದು ರಕ್ಷಣಾ ಕಾರ್ಯಾಚರಣೆ ಉಸ್ತುವಾರಿ ಕರ್ನಲ್ ದೀಪಕ್ ಪಾಟೀಲ್ ಹೇಳಿದ್ದಾರೆ.

    ಕಾರ್ಮಿಕರು ಸುರಂಗದೊಳಗೆ ಸಿಲುಕಿದಾಗಿನಿಂದ ಅವರಿಗೆ ಸೇವಿಸಲು ಪೈಪ್ ಮೂಲಕ ಒಣ ಹಣ್ಣುಗಳನ್ನು ಮಾತ್ರವೇ ಕಳುಹಿಸಲಾಗಿತ್ತು. ಕಳೆದ ರಾತ್ರಿ ಗಾಜಿನ ಬಾಟಲಿಗಳಲ್ಲಿ ಕಿಚಡಿಯನ್ನು ತುಂಬಿ ಕಳುಹಿಸಲಾಗಿದೆ. ಈ ಮೂಲಕ 10 ದಿನಗಳ ಬಳಿಕ ಕಾರ್ಮಿಕರಿಗೆ ಬಿಸಿ ಊಟ ದೊರಕಿದಂತಾಗಿದೆ. ಇದನ್ನೂ ಓದಿ: ಸುರಂಗದೊಳಗೆ ಸಿಲುಕಿ 10 ದಿನ – ಪೈಪ್ ಮೂಲಕ ಕ್ಯಾಮೆರಾ ಕಳುಹಿಸಿ ಕಾರ್ಮಿಕರ ಮೊದಲ ವೀಡಿಯೋ ಸೆರೆ

  • ಸುರಂಗದೊಳಗೆ ಸಿಲುಕಿ 10 ದಿನ – ಪೈಪ್ ಮೂಲಕ ಕ್ಯಾಮೆರಾ ಕಳುಹಿಸಿ ಕಾರ್ಮಿಕರ ಮೊದಲ ವೀಡಿಯೋ ಸೆರೆ

    ಸುರಂಗದೊಳಗೆ ಸಿಲುಕಿ 10 ದಿನ – ಪೈಪ್ ಮೂಲಕ ಕ್ಯಾಮೆರಾ ಕಳುಹಿಸಿ ಕಾರ್ಮಿಕರ ಮೊದಲ ವೀಡಿಯೋ ಸೆರೆ

    ಡೆಹ್ರಾಡೂನ್: ಕಳೆದ 10 ದಿನಗಳಿಂದ ಉತ್ತರಾಖಂಡದ (Uttarakhand) ಉತ್ತರಕಾಶಿಯಲ್ಲಿ (Uttarkashi) ಸುರಂಗದೊಳಗೆ (Tunnel) ಸಿಲುಕಿರುವ ಕಾರ್ಮಿಕರ ಮೊದಲ ವೀಡಿಯೋವನ್ನು (Video) ರಕ್ಷಣಾ ಅಧಿಕಾರಿಗಳು ಸೆರೆಹಿಡಿದಿದ್ದಾರೆ.

    ಸುರಂಗದೊಳಗೆ ಸಿಲುಕಿರುವ 41 ಕಾರ್ಮಿಕರಿಗೆ ಕಳೆದ 10 ದಿನಗಳಿಂದ 6 ಇಂಚಿನ ಪೈಪ್ ಮೂಲಕ ನೀರು, ಆಹಾರವನ್ನು ಕಳುಹಿಸಲಾಗುತ್ತಿದೆ. ಇದೀಗ ಕಾರ್ಮಿಕರು ಸುರಕ್ಷಿತರಾಗಿದ್ದಾರೆಯೇ ಎಂಬುದನ್ನು ತಿಳಿದುಕೊಳ್ಳಲು ಇದೇ ಪೈಪ್ ಮೂಲಕ ಎಂಡೋಸ್ಕೋಪಿ ಕ್ಯಾಮೆರಾವನ್ನು ಸುರಂಗದೊಳಗೆ ಕಳುಸಿದ್ದು, ಕಾರ್ಮಿಕರ ದೃಶ್ಯಗಳನ್ನು ಸೆರೆಹಿಡಿಯಲಾಗಿದೆ.

    ರಕ್ಷಣಾ ಅಧಿಕಾರಿಗಳು ವಾಕಿ ಟಾಕೀಸ್ ಮೂಲಕ ಕೆಲ ಕಾರ್ಮಿಕರೊಂದಿಗೆ ಮಾತನಾಡಿದ್ದಾರೆ. ಸೆರೆಹಿಡಿಯಲಾದ ವೀಡಿಯೋದಲ್ಲಿ ರಕ್ಷಣಾ ಅಧಿಕಾರಿಗಳು ಕಾರ್ಮಿಕರಿಗೆ ಕ್ಯಾಮೆರಾ ಮುಂದೆ ಬರುವಂತೆ ಕೇಳಿರುವುದು ಕಂಡುಬಂದಿದೆ. ಕಾರ್ಮಿಕರಿಗೆ ಮೊಬೈಲ್, ಚಾರ್ಜರ್‌ಗಳನ್ನು ಪೈಪ್ ಮೂಲಕ ಕಳುಹಿಸಲಾಗುವುದು ಎಂದು ರಕ್ಷಣಾ ಕಾರ್ಯಾಚರಣೆ ಉಸ್ತುವಾರಿ ಕರ್ನಲ್ ದೀಪಕ್ ಪಾಟೀಲ್ ಹೇಳಿದ್ದಾರೆ.

    ಕಾರ್ಮಿಕರು ಸುರಂಗದೊಳಗೆ ಸಿಲುಕಿದಾಗಿನಿಂದ ಅವರಿಗೆ ಸೇವಿಸಲು ಪೈಪ್ ಮೂಲಕ ಒಣ ಹಣ್ಣುಗಳನ್ನು ಮಾತ್ರವೇ ಕಳುಹಿಸಲಾಗಿತ್ತು. ಕಳೆದ ರಾತ್ರಿ ಗಾಜಿನ ಬಾಟಲಿಗಳಲ್ಲಿ ಕಿಚಡಿಯನ್ನು ತುಂಬಿ ಕಳುಹಿಸಲಾಗಿದೆ. ಈ ಮೂಲಕ 10 ದಿನಗಳ ಬಳಿಕ ಕಾರ್ಮಿಕರಿಗೆ ಬಿಸಿ ಊಟ ದೊರಕಿದಂತಾಗಿದೆ.

    ಕಳೆದ ಭಾನುವಾರ ಸುರಂಗದ ಒಂದು ಭಾಗ ಕುಸಿದ ಕಾರಣ ಅಂದಿನಿಂದ ಸುರಂಗದೊಳಗೆ 41 ಕಾರ್ಮಿಕರು ಸಿಲುಕಿಕೊಂಡಿದ್ದಾರೆ. ಸದ್ಯ ಎಲ್ಲಾ ಕಾರ್ಮಿಕರು ಸುರಕ್ಷಿತವಾಗಿದ್ದಾರೆ ಮತ್ತು ಅವರನ್ನು ಸುರಕ್ಷಿತವಾಗಿ ಹೊರತರಲು ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಇದನ್ನೂ ಓದಿ: ವಿದ್ಯುತ್ ಕೊರತೆ ಮಧ್ಯೆ ಕಲ್ಲಿದ್ದಲು ಕಳ್ಳಾಟ – ಕಳ್ಳರ ಪಾಲಾಗುತ್ತಿದೆ ಟನ್‌ಗಟ್ಟಲೇ ಕಲ್ಲಿದ್ದಲು

    ನಿರ್ಮಾಣ ಹಂತದಲ್ಲಿರುವ ಈ ಸುರಂಗ ಚಾರ್ ಧಾಮ್ ಯೋಜನೆಯ ಭಾಗವಾಗಿದೆ. ಇದು ಹಿಂದೂ ಯಾತ್ರಾ ಸ್ಥಳಗಳಾದ ಬದರಿನಾಥ್, ಕೇದಾರನಾಥ, ಗಂಗೋತ್ರಿ ಮತ್ತು ಯಮುನೋತ್ರಿಗಳಿಗೆ ಸಂಪರ್ಕವನ್ನು ಕಲ್ಪಿಸುವ ಯೋಜನೆಯಾಗಿದೆ. ಇದನ್ನೂ ಓದಿ: ಸತ್ತೇ ಹೋಗಿದ್ದೇನೆ ಎಂದು ಬಿಂಬಿಸಿ ತಲೆಮರೆಸಿಕೊಂಡಿದ್ದ ರೌಡಿ ಬಂಧನ

  • ಸುರಂಗ ಕಾಮಗಾರಿ ವೇಳೆ ಭೂಕುಸಿತ – ಕಾರ್ಮಿಕರ ರಕ್ಷಣೆಗೆ ಇನ್ನೂ ನಾಲ್ಕೈದು ದಿನ ಬೇಕು

    ಸುರಂಗ ಕಾಮಗಾರಿ ವೇಳೆ ಭೂಕುಸಿತ – ಕಾರ್ಮಿಕರ ರಕ್ಷಣೆಗೆ ಇನ್ನೂ ನಾಲ್ಕೈದು ದಿನ ಬೇಕು

    ನವದೆಹಲಿ: ಉತ್ತರಖಂಡದಲ್ಲಿ (Uttarakhand) ನಿರ್ಮಾಣ ಹಂತದ ಸುರಂಗ (Tunnel) ಕುಸಿತದಿಂದ ಕಳೆದ ಏಳು ದಿನಗಳಿಂದ ಸಿಲುಕಿರುವ 41 ಕಾರ್ಮಿಕರನ್ನು ರಕ್ಷಿಸಲು ನಾಲ್ಕೈದು ದಿನಗಳಾಗಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ರಕ್ಷಣಾ ತಂಡಗಳು ನಿರಂತರ ಕಾರ್ಯಾಚರಣೆ ನಡೆಸುತ್ತಿದೆ. ಇದರ ನಡುವೆ ದೀರ್ಘಾವಧಿಯಿಂದ ಸಿಲುಕಿರುವ ಕಾರ್ಮಿಕರ ಆರೋಗ್ಯ ಮತ್ತು ಯೋಗಕ್ಷೇಮದ ಬಗ್ಗೆ ಕ್ರಮ ಕೈಗೊಳ್ಳಲಾಗಿದೆ. ವಿಟಮಿನ್ ಮಾತ್ರೆಗಳು, ಖಿನ್ನತೆ ನಿವಾರಕ ಔಷಧಗಳು ಹಾಗೂ ಡ್ರೈ ಫ್ರೂಟ್‍ನ್ನು ಪೈಪ್‍ಗಳ ಮೂಲಕ ಸರಬರಾಜು ಮಾಡಲಾಗಿದೆ. ಇದನ್ನೂ ಓದಿ: ಕಾಮಗಾರಿ ವೇಳೆ ಭೂಕುಸಿತ- ಸುರಂಗದಡಿ ಸಿಲುಕಿದ 36 ಕಾರ್ಮಿಕರು

    ಅದೃಷ್ಟವಶಾತ್ ಸುರಂಗದ ಒಳಗೆ ವಿದ್ಯುತ್ ಆನ್ ಇದ್ದು, ಬೆಳಕಿದೆ. ಅಲ್ಲದೇ ಕುಡಿಯಲು ನೀರಿನ ವ್ಯವಸ್ಥೆ ಇದೆ. ಇಂದಿನಿಂದ ಬೆಟ್ಟದ ತುದಿಯಿಂದ ಲಂಬವಾಗಿ ರಂದ್ರ ಕೊರೆಯಲಾಗುತ್ತಿದೆ. ಇದಕ್ಕಾಗಿ ಮಧ್ಯಪ್ರದೇಶದ ಇಂದೋರ್‍ನಿಂದ ಹೆಚ್ಚಿನ ಕಾರ್ಯಕ್ಷಮತೆಯ ಡ್ರಿಲ್ಲಿಂಗ್ ಯಂತ್ರವನ್ನು ತರಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಪ್ರಧಾನ ಮಂತ್ರಿ ಕಚೇರಿಯ (ಪಿಎಂಒ) ಅಧಿಕಾರಿಗಳ ತಂಡ ಮತ್ತು ತಜ್ಞರ ತಂಡ ಸ್ಥಳದಲ್ಲಿ ಬೀಡು ಬಿಟ್ಟಿದ್ದಾರೆ. ಸಿಲುಕಿರುವ ಕಾರ್ಮಿಕರನ್ನು ಸಾಧ್ಯವಾದಷ್ಟು ಬೇಗ ತಲುಪಲು ಪ್ರಯತ್ನಿಸಲಾಗುತ್ತಿದೆ ಎಂದು ಪ್ರಧಾನಿಯ ಮಾಜಿ ಸಲಹೆಗಾರ ಭಾಸ್ಕರ್ ಖುಲ್ಬೆ ತಿಳಿಸಿದ್ದಾರೆ.

    ಕೇಂದ್ರ ಸಚಿವ ನಿತಿನ್ ಗಡ್ಕರಿ (Nitin Gadkari) ಸ್ಥಳಕ್ಕೆ ಭೇಟಿ ನೀಡಿ, ಅವಶೇಷಗಳ ಅಡಿ ಸಿಲುಕಿರುವ ಕಾರ್ಮಿಕರನ್ನು ಜೀವಂತವಾಗಿ ರಕ್ಷಿಸುವುದು ನಮ್ಮ ಗುರಿಯಾಗಿದೆ ಎಂದಿದ್ದಾರೆ.

    ಬ್ರಹ್ಮಖಾಲ್-ಯಮುನೋತ್ರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಿಲ್ಕ್ಯಾರಾದಿಂದ ದಾಂಡಲ್‍ಗಾಂವ್‍ಗೆ ಸಂಪರ್ಕಿಸುವ ಸುರಂಗದಲ್ಲಿ ಪ್ರಸ್ತುತ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಸುರಂಗದಲ್ಲಿ ಸಿಲುಕಿದ್ದವರನ್ನು ಸುರಕ್ಷಿತವಾಗಿ ರಕ್ಷಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಫೈನಲ್‌ ಪಂದ್ಯದ ವೇಳೆ ಮೈದಾನಕ್ಕೆ ನುಗ್ಗಿದ ಪ್ಯಾಲೆಸ್ತೀನ್‌ ಬೆಂಬಲಿಗ ಅರೆಸ್ಟ್‌

  • ಅತ್ತ ಭಾರತ-ನ್ಯೂಜಿಲೆಂಡ್ ಹೈವೋಲ್ಟೇಜ್‌‌ ಸೆಮಿಫೈನಲ್‌.. ಇತ್ತ ಪೂರ್ವಜರ ಮನೆಯಲ್ಲಿ ಪತ್ನಿ ಜೊತೆ ಧೋನಿ

    ಅತ್ತ ಭಾರತ-ನ್ಯೂಜಿಲೆಂಡ್ ಹೈವೋಲ್ಟೇಜ್‌‌ ಸೆಮಿಫೈನಲ್‌.. ಇತ್ತ ಪೂರ್ವಜರ ಮನೆಯಲ್ಲಿ ಪತ್ನಿ ಜೊತೆ ಧೋನಿ

    ನವದೆಹಲಿ: ಮುಂಬೈ ವಾಂಖೆಡೆ ಕ್ರೀಡಾಂಗಣದಲ್ಲಿ ನಿನ್ನೆ ನಡೆದ ಭಾರತ-ನ್ಯೂಜಿಲೆಂಡ್‌ ಹೈವೋಲ್ಟೇಜ್‌ ಸೆಮಿಫೈನಲ್‌ ಪಂದ್ಯ ವೀಕ್ಷಣೆಗೆ ಮಾಜಿ ಕ್ಯಾಪ್ಟನ್‌ ಧೋನಿ (M.S.Dhoni) ಬರುತ್ತಾರೆಂದು ಅಭಿಮಾನಿಗಳು ಊಹಿಸಿದ್ದರು. ಆದರೆ ಮಾಹಿ ಅನುಪಸ್ಥಿತಿ ಅಭಿಮಾನಿಗಳ ಊಹೆಯನ್ನು ಸುಳ್ಳಾಗಿಸಿದೆ. ಇತ್ತ ಹೈವೋಲ್ಟೇಜ್‌ ಪಂದ್ಯ ನಡೆಯುತ್ತಿದ್ದರೆ, ಅತ್ತ ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್‌ ಪತ್ನಿಯೊಂದಿಗೆ ತಮ್ಮ ಪೂರ್ವಜರ ಮನೆಯಲ್ಲಿ ಸಮಯ ಕಳೆದಿದ್ದಾರೆ.

    ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಪ್ರಪಂಚದಾದ್ಯಂತ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಬುಧವಾರ, ಭಾರತವು ನ್ಯೂಜಿಲೆಂಡ್ ವಿರುದ್ಧದ ವಿಶ್ವಕಪ್ ಸೆಮಿಫೈನಲ್ ಪಂದ್ಯ ಆಡಿದ್ದ ವೇಳೆ, ಅನೇಕ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಎಂ.ಎಸ್‌.ಧೋನಿಯನ್ನು ನೋಡುವ ಉತ್ಸುಕದಲ್ಲಿದ್ದರು. ಆದರೆ, ನೆಚ್ಚಿನ ಪ್ರೀತಿಯ ಕೂಲ್‌ ಕ್ಯಾಪ್ಟನ್‌ ಎಂದೇ ಖ್ಯಾತಿ ಗಳಿಸಿದ್ದ ಧೋನಿ ತನ್ನ ಪತ್ನಿಯೊಂದಿಗೆ ಉತ್ತರಾಖಂಡದ ತನ್ನ ಪೂರ್ವಜರ ಹಳ್ಳಿಗೆ ಹೋಗಿದ್ದರು. ಇದನ್ನೂ ಓದಿ: ಇನ್ಮುಂದೆ ನಿಮ್ಮ ಅದ್ಭುತ ಪ್ರತಿಭೆ ಪ್ರದರ್ಶಿಸಬಹುದು – ಬಾಬರ್‌ ಆಜಂ ಹೊಗಳಿದ ಬೆಂಗ್ಳೂರು ಮೂಲದ ರಚಿನ್‌

    ಧೋನಿ ಪತ್ನಿ ಸಾಕ್ಷಿ ಸಿಂಗ್ ಅವರು, ಉತ್ತರಾಖಂಡದ ಅಲ್ಮೋರಾ ಜಿಲ್ಲೆಯಲ್ಲಿರುವ ಸುಂದರವಾದ ಲ್ವಾಲಿ ಗ್ರಾಮದಲ್ಲಿ ಇಬ್ಬರೂ ಪೋಸ್ ನೀಡುತ್ತಿರುವ ಚಿತ್ರವನ್ನು ಹಂಚಿಕೊಂಡಿದ್ದಾರೆ. ”ಧೋನಿ ಅವರೊಂದಿಗೆ ಈವೆಂಟ್‌ಫುಲ್‌ ಡೇ! ಇಲ್ಲಿ ಅನೇಕರಿದ್ದಾರೆ ನನ್ನನ್ನು ನಂಬಿರಿ” ಎಂದು ಅವರು ಪೋಸ್ಟ್‌ಗೆ ಶೀರ್ಷಿಕೆ ನೀಡಿದ್ದಾರೆ. ಮೊದಲ ಚಿತ್ರದಲ್ಲಿ, ದಂಪತಿ ಲ್ವಾಲಿಯಲ್ಲಿ ವರ್ಣರಂಜಿತ ಮನೆಯ ಹೊಸ್ತಿಲಲ್ಲಿ ಕುಳಿತಿದ್ದಾರೆ. ಸಾಕ್ಷಿ ಅವರು ಮನೆಯನ್ನು ತೋರಿಸುವ ವೀಡಿಯೋವನ್ನು ಸಹ ಹಂಚಿಕೊಂಡಿದ್ದಾರೆ.

    ನವೆಂಬರ್ 15 ರಂದು ಇನ್‌ಸ್ಟಾಗ್ರಾಮ್‌ನಲ್ಲಿ ಸಾಕ್ಷಿಯವರು ಈ ಪೋಸ್ಟ್‌ ಹಾಕಿದ್ದಾರೆ. ಪೋಸ್ಟ್‌ಗೆ 11 ಲಕ್ಷಕ್ಕೂ ಹೆಚ್ಚು ಲೈಕ್ಸ್ ಮತ್ತು ಸಾವಿರಾರು ಕಾಮೆಂಟ್‌ಗಳು ಬಂದಿವೆ. ಪೋಸ್ಟ್‌ ಹಾಕಿ ಧೋನಿಯನ್ನು ತೋರಿಸಿದ್ದಕ್ಕೆ ಅಭಿಮಾನಿಗಳು ಖುಷಿ ವ್ಯಕ್ತಪಡಿಸಿದ್ದಾರೆ. ಚಿತ್ರವನ್ನು ಹಂಚಿಕೊಂಡಿದ್ದಕ್ಕಾಗಿ ಧೋನಿ ಪತ್ನಿ ಸಾಕ್ಷಿಗೆ ಅನೇಕ ಅಭಿಮಾನಿಗಳು ಧನ್ಯವಾದ ತಿಳಿಸಿದ್ದಾರೆ. ಉತ್ತರಾಖಂಡದ ಜನತೆಗೆ ಧೋನಿ ದಂಪತಿಗೆ ಸ್ವಾಗತ ಕೋರಿದ್ದಾರೆ. ಇದನ್ನೂ ಓದಿ: ಭಾರತ ಕ್ರಿಕೆಟ್ ತಂಡ ಫೈನಲ್ ಗೆದ್ದರೆ ಬೆತ್ತಲಾಗುವೆ ಎಂದ ನಟಿ ರೇಖಾ

     

    View this post on Instagram

     

    A post shared by Sakshi Singh (@sakshisingh_r)

    ಫ್ಯಾನ್‌ ಒಬ್ಬರು, ”ಧನ್ಯವಾದಗಳು ಸಾಕ್ಷಿ. ಧೋನಿ ಅವರು ತಮಗೆ ಸಂಬಂಧಿಸಿದ ಯಾವುದೇ ಪೋಸ್ಟ್ ಮಾಡುವುದನ್ನು ನಿಲ್ಲಿಸಿದ್ದಾರೆ. ಆದರೆ ನೀವು ಅವರನ್ನು ಮತ್ತೆ ನೋಡುವಂತೆ ಮಾಡುತ್ತಿದ್ದೀರಿ” ಎಂದು ಪ್ರತಿಕ್ರಿಯಿಸಿದ್ದಾರೆ. “ಉತ್ತರಾಖಂಡಕ್ಕೆ ನಿಮಗೆ ಸ್ವಾಗತ” ಅಂತ ಮತ್ತೊಬ್ಬರು ಪೋಸ್ಟ್‌ ಹಾಕಿದ್ದಾರೆ.

    ಸೋಷಿಯಲ್‌ ಮೀಡಿಯಾದಲ್ಲಿ ಈಚೆಗೆ ಟ್ರೆಂಡಿಂಗ್‌ ಆಗಿರುವ, ”ಸೋ ಬ್ಯೂಟಿಫುಲ್‌ ಸೋ ಎಲಿಗ್ಯಾಂಟ್‌ ಜಸ್ಟ್‌ ಲುಕಿಂಗ್‌ ಲೈಕ್‌ ಎ ವಾವ್ಹ್‌..” ಎಂದು ಒಬ್ಬರು ಕಾಮೆಂಟ್‌ ಮಾಡಿದ್ದಾರೆ. ”ಇಂದು ನೀಲಿ ಬಣ್ಣದಲ್ಲಿ ಮಾಹಿ ಕಾಣೆಯಾಗಿದ್ದಾರೆ” ಭಾರತೀಯ ಖ್ಯಾತ ಆಟಗಾರನನ್ನು ಮಿಸ್‌ ಮಾಡಿಕೊಂಡಿದ್ದೇವೆ ಎಂಬಂತೆ ಇನ್ನೊಬ್ಬರು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ರಾತ್ರಿ ನಾನು ಭಾರತ – ನ್ಯೂಜಿಲೆಂಡ್‌ ಸೆಮಿಫೈನಲ್‌ ವೀಕ್ಷಿಸಿದ್ದೆ: ಮೈಕ್ರೋಸಾಫ್ಟ್‌ ಸಿಇಒ ಸತ್ಯ ನಾದೆಲ್ಲಾ

    ಎಂ.ಎಸ್‌.ಧೋನಿ ಅವರು ಆಗಸ್ಟ್ 2020 ರಲ್ಲಿ ಎಲ್ಲಾ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದರು. ಅತ್ಯಂತ ಪ್ರೀತಿಯ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ 16 ವರ್ಷಗಳ ಕಾಲ ಸುಪ್ರಸಿದ್ಧ ವೃತ್ತಿಜೀವನ ನಡೆಸಿದ್ದರು. ತಮ್ಮ ವೃತ್ತಿ ಬದುಕಿನಲ್ಲಿ ಅವರು ಭಾರತೀಯ ಕ್ರಿಕೆಟ್ ತಂಡವನ್ನು ಹಲವಾರು ಸಾಂಪ್ರದಾಯಿಕ ಗೆಲುವುಗಳೊಂದಿಗೆ ಮುನ್ನಡೆಸಿದ್ದರು.