ರಾಂಚಿ: ಉತ್ತರಾಖಂಡದ (Uttarakhand) ಸಿಲ್ಕ್ಯಾರಾ ಸುರಂಗದಲ್ಲಿ (Tunnel) ಸಿಲುಕಿದ್ದ 41 ಕಾರ್ಮಿಕರ (Worker) ರಕ್ಷಣೆಯೇನೋ ಆಗಿದೆ. ಆದರೆ ಈ 41 ಕಾರ್ಮಿಕರನ್ನು ಸುರಂಗದಿಂದ ಸುರಕ್ಷಿತವಾಗಿ ಹೊರತರುವುದಕ್ಕೂ ಕೆಲವೇ ಗಂಟೆಗಳ ಮುನ್ನ ಕಾರ್ಮಿಕನೊಬ್ಬನ ತಂದೆ (Father) ಮೃತಪಟ್ಟ ಘಟನೆ ನಡೆದಿದೆ.
ಉತ್ತರಕಾಶಿ ಸುರಂಗದಿಂದ ರಕ್ಷಣೆಗೊಳಗಾದ ಕಾರ್ಮಿಕ ಭಕ್ತು ಅವರ ತಂದೆ ಜಾರ್ಖಂಡ್ ಮೂಲದ ಬಾಸೆಟ್ ಅಲಿಯಾಸ್ ಬರ್ಸಾ ಮುರ್ಮು (70) ಮಗನ ರಕ್ಷಣೆಗೂ ಕೆಲವೇ ಗಂಟೆಗಳ ಮುನ್ನ ಮೃತಪಟ್ಟಿದ್ದಾರೆ. ಪೂರ್ವ ಸಿಂಗ್‌ಭೂಮ್ ಜಿಲ್ಲೆಯ ಬಹ್ದಾ ಗ್ರಾಮದ ನಿವಾಸಿ ಬರ್ಸಾ ಮುರ್ಮು ಮಂಗಳವಾರ ಬೆಳಗ್ಗೆ 8 ಗಂಟೆಗೆ ತಮ್ಮ ಹಾಸಿಗೆಯ ಮೇಲೆ ಕುಳಿತಿದ್ದಾಗಲೇ ಕುಸಿದು ಸಾವನ್ನಪ್ಪಿದ್ದಾರೆ.
ನವೆಂಬರ್ 12 ರಂದು ತಮ್ಮ ಮಗ ಸುರಂಗದೊಳಗೆ ಸಿಲುಕಿದ್ದಾಗಿನಿಂದಲೂ ಬರ್ಸಾ ಮುರ್ಮು ಆಘಾತಕ್ಕೊಳಗಾಗಿದ್ದರು. ಭಕ್ತು ಸೇರಿದಂತೆ ಒಟ್ಟು 41 ಕಾರ್ಮಿಕರು ಸುರಂಗದಿಂದ ಹೊರಬಂದ ಕೇವಲ 12 ಗಂಟೆ ಮೊದಲು ಬರ್ಸಾ ಮುರ್ಮು ಸಾವನ್ನಪ್ಪಿರುವುದಾಗಿ ಕುಟುಂಬದ ಸದಸ್ಯರು ತಿಳಿಸಿದ್ದಾರೆ. ಇದನ್ನೂ ಓದಿ: ಅಯೋಧ್ಯೆಗೆ ಜೋಧ್‌ಪುರದಿಂದ 600 ಕೆಜಿ ಪರಿಶುದ್ಧ ತುಪ್ಪ ರವಾನೆ
ಬರ್ಸಾ ಮುರ್ಮು ತನ್ನ ಮಗನ ರಕ್ಷಣೆಗೆ ಸಂಬಂಧಿಸಿದ ಮಾಹಿತಿಗಾಗಿ ಕಾತರದಿಂದ ಕಾಯುತ್ತಿದ್ದರು. ಆದರೆ ಅವರು ತಮ್ಮ ಹಾಸಿಗೆ ಮೇಲೆ ಕುಳಿತಿದ್ದಾಗ ಏಕಾಏಕಿ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಮೇಲ್ನೋಟಕ್ಕೆ ಇದು ಹೃದಯಾಘಾತ ಎನ್ನಲಾಗುತ್ತಿದೆಯಾದರೂ ಅವರ ವೈದ್ಯಕೀಯ ವರದಿ ಇನ್ನೂ ಬಂದಿಲ್ಲ ಎಂದು ದುಮಾರಿಯಾ ಪೊಲೀಸ್ ಠಾಣೆಯ ಪ್ರಭಾರಿ ಅಧಿಕಾರಿ ಸಂಜೀವನ್ ಓರಾನ್ ತಿಳಿಸಿದ್ದಾರೆ.
ಜಾರ್ಖಂಡ್‌ನ ಇತರ 14 ಕಾರ್ಮಿಕರೊಂದಿಗೆ ಭಕ್ತು ಸದ್ಯ ಏಮ್ಸ್ ರಿಷಿಕೇಶ್‌ನಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ಆದರೆ 41 ಕಾರ್ಮಿಕರೊಂದಿಗೆ ಭಕ್ತು 17 ದಿನಗಳ ಬಳಿಕ ಸೂರ್ಯನ ಬೆಳಕು ಕಂಡರೂ ತಂದೆಯ ಸಾವಿನ ಸುದ್ದಿಯಿಂದ ಮತ್ತೆ ಕತ್ತಲೆ ಆವರಿಸಿದಂತಾಗಿದೆ. ತಾವು ಮೃತ್ಯುಂಜಯರಾಗಿ ಸುರಂಗದಿಂದ ಹೊರಬಂದರೂ ತಂದೆಯನ್ನು ಕೊನೇ ಬಾರಿ ಜೀವಂತವಾಗಿ ನೋಡಲು ಸಾಧ್ಯವಾಗದೇ ಹೋಗಿರುವುದು ದುರಂತವಾಗಿದೆ. ಇದನ್ನೂ ಓದಿ: ಚೀನಾ ನಿಗೂಢ ವೈರಸ್ ಭೀತಿ – ರಾಜ್ಯದಲ್ಲಿ ನ್ಯೂಮೋನಿಯಾ ನಿಯಂತ್ರಣಕ್ಕೆ ಕ್ರಮ
ನವದೆಹಲಿ: ಮಂಗಳವಾರ ತಡರಾತ್ರಿ ಉತ್ತರಕಾಶಿಯಲ್ಲಿ (Uttarkashi) ನಡೆಯುತ್ತಿದ್ದ ಕಾರ್ಮಿಕರ (Workers) ರಕ್ಷಣಾ ಕಾರ್ಯಚರಣೆ ನೇರ ಪ್ರಸಾರ ವೀಕ್ಷಿಸುತ್ತಿದ್ದ ಪ್ರಧಾನಿ ನರೇಂದ್ರ ಮೋದಿ (Narendra Modi), ಕಾರ್ಯಚರಣೆ ಯಶಸ್ವಿಯಾದ ಬಳಿಕ ಭಾವುಕರಾಗಿದ್ದರು ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ (Anurag Thakur) ಹೇಳಿದ್ದಾರೆ.
ಮಂಗಳವಾರ ರಕ್ಷಣಾ ಕಾರ್ಯಚರಣೆ ನಡೆಯುತ್ತಿದ್ದಾಗ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಕ್ಯಾಬಿನೆಟ್ ಸಭೆ ನಡೆಯುತ್ತಿತ್ತು. ಕ್ಯಾಬಿನೆಟ್ ಸಹದ್ಯೋಗಿಗಳ ಜೊತೆಗೆ ಪ್ರಧಾನಿ ನರೇಂದ್ರ ಮೋದಿ ರಕ್ಷಣಾ ಕಾರ್ಯಚರಣೆ ನೇರ ಪ್ರಸಾರವನ್ನು ಬಹಳ ಸೂಕ್ಷ್ಮವಾಗಿ ಗಮನಿಸುತ್ತಿದ್ದರು. ಸಿಕ್ಕಿಬಿದ್ದ ಕಾರ್ಮಿಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸಿದ ನಂತರ ಪ್ರಧಾನಿ ಭಾವುಕರಾದರು ಎಂದರು. ಇದನ್ನೂ ಓದಿ: ಮಹಿಳಾ ಸ್ವಸಹಾಯ ಗುಂಪುಗಳಿಗೆ ಡ್ರೋನ್ – ಸಂಪುಟ ಸಭೆಯಲ್ಲಿ ಮೋದಿ ಮಹತ್ವದ ನಿರ್ಧಾರ
ಸುರಂಗ ಕುಸಿತದ ಬಳಿಕ ಪ್ರಧಾನಿ ನರೇಂದ್ರ ಮೋದಿ ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ ಜೊತೆಗೆ ನಿರಂತರವಾಗಿ ದೂರವಾಣಿ ಮೂಲಕ ಮಾಹಿತಿ ಪಡೆಯುತ್ತಿದ್ದರು. ಪ್ರಧಾನಿ ಕಾರ್ಯಲಯದಿಂದ ಮೇಲ್ವಿಚಾರಣೆಗೆ ವಿಶೇಷ ತಂಡವನ್ನು ಕಳುಹಿಸಿದ್ದರು. ಕಾರ್ಮಿಕರ ರಕ್ಷಣೆ ಬಳಿಕ ಎಕ್ಸ್‌ನಲ್ಲಿ ಟ್ವೀಟ್ ಮಾಡಿ ಕಾರ್ಯಚರಣೆಯಲ್ಲಿ ಭಾಗಿಯಾದ ಎಲ್ಲರನ್ನು ಶ್ಲಾಘಿಸಿದ್ದರು. ಇದನ್ನೂ ಓದಿ: ಧ್ವನಿವರ್ಧಕಗಳಲ್ಲಿ ಆಜಾನ್ ಕೂಗುವುದು ನಿಷೇಧಿಸಲು ಮನವಿ- ಅರ್ಜಿದಾರರಿಗೆ ಹೈಕೋರ್ಟ್ ತರಾಟೆ
ಡೆಹ್ರಾಡೂನ್: 17 ದಿನಗಳಿಂದ ಉತ್ತರಾಖಂಡದ ಸುರಂಗದಲ್ಲಿ (Uttarakhand Tunnel) ಸಿಲುಕಿದ್ದ 41 ಕಾರ್ಮಿಕರನ್ನು ರಕ್ಷಣಾ ಸಿಬ್ಬಂದಿ ಹೊರಗಡೆ ಕರೆತಂದಾಗ, ಹರ್ಷೋದ್ಗಾರ ಮತ್ತು ಹೂವಿನ ಹಾರಗಳೊಂದಿಗೆ ಸ್ವಾಗತಿಸಲಾಯಿತು. ಕಾರ್ಮಿಕರ ಕುಟುಂಬದ ಸದಸ್ಯರು ಕಣ್ಣಾಲಿಗಳಲ್ಲಿ ನೀರು ತುಂಬಿಕೊಂಡು ಎಲ್ಲರನ್ನೂ ಅಪ್ಪಿಕೊಂಡು ಬರಮಾಡಿಕೊಂಡರು. ಸೋಷಿಯಲ್ ಮೀಡಿಯಾದಲ್ಲಿ ಕಾರ್ಮಿಕರನ್ನು ಹೀರೋಗಳು ಎಂದು ಕೊಂಡಾಡಲಾಯಿತು.
ಎಲ್ಲ ಅಂದುಕೊಂಡಂತೆ ಆಗಿ ಸುರಕ್ಷಿತವಾಗಿ ಕಾರ್ಮಿಕರನ್ನು ರಕ್ಷಿಸಲಾಗಿದೆ. ಸಿಲ್ಕ್ಯಾರಾ ಸುರಂಗ 17 ದಿನಗಳ ನಂತರ ತನ್ನ ಒಡಲಿಂದ ಕಾರ್ಮಿಕರನ್ನು ಕಳುಹಿಸಿಕೊಟ್ಟಿತು. ಈಗ ಮತ್ತೊಂದನ್ನು ಉಳಿಸಿಕೊಂಡು ಸುರಂಗ ಸುದ್ದಿಯಾಗಿದೆ. ಹೌದು, ಕಾರ್ಮಿಕರಿಗಾಗಿ ಹೊರಗಡೆಯಿಂದ ಸುರಂಗದೊಳಕ್ಕೆ ಕಳುಹಿಸಿಕೊಟ್ಟಿದ್ದ ಆಹಾರ ಈಗ ಅಲ್ಲೇ ಉಳಿದಿದೆ. ಸುಮಾರು 25 ದಿನಗಳಿಗೆ ಆಗುವಷ್ಟು ಆಹಾರ ಸುರಂಗದೊಳಗೆ ಸೇರಿಕೊಂಡಿದೆ. ಇದನ್ನೂ ಓದಿ: 41 ಕಾರ್ಮಿಕರ ರಕ್ಷಣೆಯಾಯ್ತು.. ದೇಗುಲಕ್ಕೆ ತೆರಳಿ ದೇವರಿಗೆ ಧನ್ಯವಾದ ಹೇಳ್ತೀನಿ: ಸುರಂಗ ತಜ್ಞ ಅರ್ನಾಲ್ಡ್
ಸುರಂಗದೊಳಗೆ ಸಿಲುಕಿದ್ದ ಕಾರ್ಮಿಕ ಅಖಿಲೇಶ್ ಸಿಂಗ್ ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ನನ್ನ ಮುಂದೆಯೇ ಸುರಂಗ ಕುಸಿದು ಬಿದ್ದಿತು. ನಾವು 18 ಗಂಟೆಗಳ ಕಾಲ ಹೊರಗಿನ ಪ್ರಪಂಚದ ಸಂಪರ್ಕವನ್ನು ಕಳೆದುಕೊಂಡೆವು. ನಮಗಿದ್ದ ತರಬೇತಿಯಂತೆ, ನಾವು ಸಿಕ್ಕಿಬಿದ್ದ ನಂತರ ನೀರಿನ ಪೈಪ್ ಅನ್ನು ತೆರೆದೆವು. ನೀರು ಬೀಳಲು ಪ್ರಾರಂಭಿಸಿದಾಗ, ಜನರು ಸಿಕ್ಕಿಹಾಕಿಕೊಂಡಿದ್ದಾರೆ ಎಂದು ಹೊರಗಿನ ಜನರು ಅರ್ಥಮಾಡಿಕೊಂಡರು. ಆ ಪೈಪ್ ಮೂಲಕ ನಮಗೆ ಆಮ್ಲಜನಕವನ್ನು ಕಳುಹಿಸಲು ಪ್ರಾರಂಭಿಸಿದರು.
ನಮಗೆ ಅಗತ್ಯವಿದ್ದ ನೀರು, ಆಹಾರ, ಆಮ್ಲಜನಕವನ್ನು ಪೂರೈಸಲು ಹೊರಗಿನಿಂದ ರಕ್ಷಕರು ವ್ಯವಸ್ಥೆ ಮಾಡಿದರು. ಅವಶೇಷಗಳ ಮೂಲಕ ಉಕ್ಕಿನ ಪೈಪ್ ಸಂಪರ್ಕ ಕಲ್ಪಿಸಿ, ಅದರ ಮೂಲಕ ನಮಗೆ ಆಹಾರ ಒದಗಿಸಿದರು. ಈಗ ನಾವೆಲ್ಲ ಹೊರಗಡೆ ಸುರಕ್ಷಿತವಾಗಿ ಬಂದಿದ್ದೇವೆ. ಸುರಂಗದಲ್ಲಿ ಇನ್ನೂ 25 ದಿನಗಳ ವರೆಗೆ ಸಾಕಾಗುವಷ್ಟು ಆಹಾರವಿದೆ ಎಂದು ಅಖಿಲೇಶ್ ಸಿಂಗ್ ತಿಳಿಸಿದ್ದಾರೆ. ಇದನ್ನೂ ಓದಿ: ನಾವು ಆರಾಮಾಗಿದ್ದು, ಈಗ ದೀಪಾವಳಿ ಆಚರಿಸುತ್ತೇವೆ: ಸಂತಸ ಹಂಚಿಕೊಂಡ ಕಾರ್ಮಿಕರು
ಇದು ಪರಿಸರ ವಿಪತ್ತು. ಇದಕ್ಕೆ ಯಾರನ್ನೂ ದೂಷಿಸಲು ಆಗುವುದಿಲ್ಲ ಎಂದು ಅಖಿಲೇಶ್ ಹೇಳಿಕೊಂಡಿದ್ದಾರೆ. ಆರೋಗ್ಯ ತಪಾಸಣೆ ಮಾಡಿದ ನಂತರ ನಾನು ಮನೆಗೆ ಹೋಗಲು ಯೋಜಿಸಿದ್ದೇನೆ. ಮುಂದೆ ಏನು ಮಾಡಬೇಕೆಂದು ನಿರ್ಧರಿಸುವ ಮೊದಲು ನಾನು 1-2 ತಿಂಗಳ ಕಾಲ ವಿರಾಮ ತೆಗೆದುಕೊಳ್ಳುತ್ತೇನೆ ಎಂದಿದ್ದಾರೆ.
ಉತ್ತರಕಾಶಿಯಿಂದ ಸುಮಾರು 30 ಕಿಮೀ ದೂರದಲ್ಲಿರುವ ಸಿಲ್ಕ್ಯಾರಾ ಸುರಂಗವು ಕೇಂದ್ರ ಸರ್ಕಾರದ ಚಾರ್ ಧಾಮ್ ಸರ್ವಋತು ರಸ್ತೆ ಯೋಜನೆಯ ಅವಿಭಾಜ್ಯ ಅಂಗವಾಗಿದೆ. ಇದು ದುರ್ಬಲವಾದ ಹಿಮಾಲಯದ ಭೂಪ್ರದೇಶದಲ್ಲಿ ಸುಮಾರು 889 ಕಿಲೋಮೀಟರ್‌ಗಳವರೆಗೆ ವಿಸ್ತರಿಸಿದೆ. ನವೆಂಬರ್ 12 ರಂದು ಸುರಂಗದ ಒಂದು ಭಾಗವು ಪ್ರವೇಶದ್ವಾರದಿಂದ ಸುಮಾರು 200 ಮೀಟರ್‌ಗಳಷ್ಟು ಕುಸಿದು, ಅದರೊಳಗೆ ಕೆಲಸ ಮಾಡುತ್ತಿದ್ದ ಕಾರ್ಮಿಕರು ಸಿಲುಕಿಕೊಂಡಿದ್ದರು. ಘಟನೆಯ ನಂತರ ಸರ್ಕಾರವು ಸುರಂಗದ ಸುರಕ್ಷತಾ ಲೆಕ್ಕಪರಿಶೋಧನೆಯನ್ನು ಪ್ರಾರಂಭಿಸಿದೆ. ಇದನ್ನೂ ಓದಿ: ಧೈರ್ಯ ಮೆಚ್ಚುವಂತದ್ದು: ಸುರಂಗದಿಂದ ರಕ್ಷಿಸಲ್ಪಟ್ಟ ಕಾರ್ಮಿಕರ ಜೊತೆ ಮೋದಿ ಮಾತುಕತೆ
ಡೆಹ್ರಾಡೂನ್: 17 ದಿನಗಳ ಕಾರ್ಯಾಚರಣೆಯ ನಂತರ ಉತ್ತರಾಖಂಡದ ಸಿಲ್ಕ್ಯಾರ್ ಸುರಂಗದೊಳಗೆ (Tunnel Rescue) ಸಿಲುಕಿದ್ದ 41 ಕಾರ್ಮಿಕರನ್ನು ಯಶಸ್ವಿಯಾಗಿ ರಕ್ಷಿಸಿದ ಬೆನ್ನಲ್ಲೇ ಸುರಂಗ ತಜ್ಞ ಆರ್ನಾಲ್ಡ್ ಡಿಕ್ಸ್ (Arnold Dix), ದೇಗುಲಕ್ಕೆ ತೆರಳಿ ದೇವರಿಗೆ ಧನ್ಯವಾದ ಹೇಳುತ್ತೇನೆ ಎಂದಿದ್ದಾರೆ.
41 ಕಾರ್ಮಿಕರನ್ನು ಮಂಗಳವಾರ ಸಂಜೆ ರಕ್ಷಿಸಲಾಯಿತು. ಈ ಯಶಸ್ಸಿನ ಕಾರ್ಯಾಚರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಸುರಂಗ ತಜ್ಞ ಅರ್ನಾಲ್ಡ್ ಡಿಕ್ಸ್ ದೇವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಕಾರ್ಯಾಚರಣೆ ಯಶಸ್ವಿಯಾದ ಮಾರನೇ ದಿನ (ಬುಧವಾರ) ಸುರಂಗದ ಪಕ್ಕದಲ್ಲೇ ತಾತ್ಕಾಲಿಕವಾಗಿ ನಿರ್ಮಿಸಲಾಗಿರುವ ದೇಗುಲಕ್ಕೆ ತೆರಳಿ ಅರ್ನಾಲ್ಡ್ ಪ್ರಾರ್ಥನೆ ಸಲ್ಲಿಸುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ನಾವು ಆರಾಮಾಗಿದ್ದು, ಈಗ ದೀಪಾವಳಿ ಆಚರಿಸುತ್ತೇವೆ: ಸಂತಸ ಹಂಚಿಕೊಂಡ ಕಾರ್ಮಿಕರು
ದೀರ್ಘಾವಧಿಯ ಕಾರ್ಯಾಚರಣೆಯ ಸಂದರ್ಭದಲ್ಲಿ ರಕ್ಷಣಾ ಸ್ಥಳದಲ್ಲಿ ಪಾತ್ರ ವಹಿಸಿದ್ದ ಡಿಕ್ಸ್, ಸಿಕ್ಕಿಬಿದ್ದ ಕಾರ್ಮಿಕರ ಯಶಸ್ವಿ ರಕ್ಷಣೆ ನಿಜಕ್ಕೂ ಪವಾಡ ಎಂದು ಹೇಳಿದ್ದಾರೆ.
ರಕ್ಷಣೆ ಕುರಿತು ಮಾತನಾಡಿ, ನಾನು ಕ್ರಿಸ್‌ಮಸ್ ವೇಳೆಗೆ 41 ಜನರು ಮನೆಯಲ್ಲಿ ಇರುತ್ತಾರೆ. ಯಾರಿಗೂ ಯಾವುದೇ ಸಮಸ್ಯೆಯಾಗುವುದಿಲ್ಲ ಎಂದು ಹೇಳಿದ್ದೆ. ಕ್ರಿಸ್‌ಮಸ್ ಬೇಗನೆ ಬರುತ್ತಿದೆ. ನಾವು ಶಾಂತವಾಗಿದ್ದೇವೆ. ನಾವು ಅದ್ಭುತ ತಂಡವಾಗಿ ಕೆಲಸ ಮಾಡಿದ್ದೇವೆ. ಭಾರತವು ಅತ್ಯುತ್ತಮ ಇಂಜಿನಿಯರ್‌ಗಳನ್ನು ಹೊಂದಿದೆ. ಈ ಯಶಸ್ವಿ ಮಿಷನ್‌ನ ಭಾಗವಾಗಲು ನನಗೆ ಸಂತೋಷವಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಧೈರ್ಯ ಮೆಚ್ಚುವಂತದ್ದು: ಸುರಂಗದಿಂದ ರಕ್ಷಿಸಲ್ಪಟ್ಟ ಕಾರ್ಮಿಕರ ಜೊತೆ ಮೋದಿ ಮಾತುಕತೆ
ಜಿನೀವಾದಲ್ಲಿ ಇಂಟರ್ನ್ಯಾಷನಲ್ ಟನೆಲಿಂಗ್ ಮತ್ತು ಅಂಡರ್‌ಗ್ರೌಂಡ್ ಸ್ಪೇಸ್ ಅಸೋಸಿಯೇಷನ್‌ನ ಅಧ್ಯಕ್ಷರಾದ ಡಿಕ್ಸ್, ರಕ್ಷಣಾ ಕಾರ್ಯಾಚರಣೆ ಪ್ರಾರಂಭವಾದಾಗಿನಿಂದ ಉತ್ತರಕಾಶಿಯಲ್ಲಿ ನೆಲೆಸಿದ್ದಾರೆ. ರಕ್ಷಣಾ ತಂಡಗಳಿಗೆ ಸಹಾಯ ಮಾಡಿದರು. ಈ ಬಿಕ್ಕಟ್ಟಿನ ಮಧ್ಯೆ ಸಹಾಯ ಮಾಡಲು ಧಾವಿಸಿ ಪ್ರಶಂಸೆ ಪಡೆದಿದ್ದಾರೆ.
ಮಂಗಳವಾರ ಕಾರ್ಮಿಕರ ಸುರಕ್ಷತೆಗಾಗಿ ಡಿಕ್ಸ್, ತಾತ್ಕಾಲಿಕ ದೇವಾಲಯದ ಮುಂದೆ ಪ್ರಾರ್ಥಿಸುತ್ತಿರುವ ವಿಡಿಯೋ ಅನೇಕರ ಹೃದಯಗಳನ್ನು ಗೆದ್ದಿದೆ. ನಾನು ದೇವಸ್ಥಾನಕ್ಕೆ ಹೋಗಬೇಕು. ಕಾರ್ಯಾಚರಣೆ ಯಶಸ್ವಿಯಾಗಿದ್ದಕ್ಕೆ ಧನ್ಯವಾದ ಹೇಳುತ್ತೇನೆ ಎಂದು ತಿಳಿಸಿದ್ದಾರೆ.
ಡೆಹ್ರಾಡೂನ್: ನಾವು ಸಂತೋಷವಾಗಿದ್ದು, ಈಗ ದೀಪಾವಳಿಯನ್ನು (Deepavali) ಆಚರಿಸುತ್ತೇವೆ ಎಂದು ಉತ್ತರಕಾಶಿ (Uttarakshi) ಸುರಂಗದಿಂದ (Tunnel) ರಕ್ಷಿಸಲ್ಪಟ್ಟ ಕಾರ್ಮಿಕರು (Workers) ಸಂತಸವನ್ನು ಹಂಚಿಕೊಂಡಿದ್ದಾರೆ.
ಸತತ 17 ದಿನಗಳ ನಿರಂತರ ಕಾರ್ಯಾಚರಣೆಯಿಂದ ಉತ್ತರಕಾಶಿಯ ಸಿಲ್ಕ್ಯಾರ ಸುರಂಗದಲ್ಲಿ (Silkyara Tunnel) ಸಿಲುಕಿಕೊಂಡಿದ್ದ 41 ಕಾರ್ಮಿಕರನ್ನು ಎನ್‌ಡಿಆರ್‌ಎಫ್ (NDRF) ತಂಡ ರಕ್ಷಣೆ ಮಾಡಿದೆ. ಸುರಂಗದಿಂದ ಸುರಕ್ಷಿತವಾಗಿ ಹೊರಬಂದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ವಿಶ್ವಜೀತ್, ಅವಶೇಷಗಳು ಬಿದ್ದಾಗ ನಾವು ಸಿಲುಕಿಕೊಂಡಿದ್ದೇವೆ ಎಂದು ನಮಗೆ ತಿಳಿದಿತ್ತು. ಮೊದಲ 10-15 ಗಂಟೆಗಳ ಕಾಲ ನಾವು ಕಷ್ಟವನ್ನು ಎದುರಿಸಿದೆವು. ಆದರೆ ನಂತರ ಅಕ್ಕಿ, ದಾಲ್ ಮತ್ತು, ಡ್ರೈಫ್ರೂಟ್ಸ್ ಒದಗಿಸಲು ಪೈಪ್ ಹಾಕಲಾಯಿತು. ನಂತರ ಮೈಕ್ ಅನ್ನು ಸ್ಥಾಪಿಸಲಾಯಿತು. ಇದರಿಂದ ನಾನು ನನ್ನ ಕುಟುಂಬದ ಸದಸ್ಯರೊಂದಿಗೆ ಮಾತನಾಡಲು ಸಾಧ್ಯವಾಯಿತು ಎಂದರು. ಇದನ್ನೂ ಓದಿ: ಧೈರ್ಯ ಮೆಚ್ಚುವಂತದ್ದು: ಸುರಂಗದಿಂದ ರಕ್ಷಿಸಲ್ಪಟ್ಟ ಕಾರ್ಮಿಕರ ಜೊತೆ ಮೋದಿ ಮಾತುಕತೆ
ಮತ್ತೊಬ್ಬ ಕಾರ್ಮಿಕ ಸುಬೋಧ್ ಕುಮಾರ್ ಈ ಕುರಿತು ಮಾತನಾಡಿದ್ದು, ಎಲ್ಲಾ 41 ಜರ‍್ನು ಸುರಕ್ಷಿತವಾಗಿ ಹೊರತರುವ ಪ್ರಯತ್ನಕ್ಕಾಗಿ ಕೇಂದ್ರ ಮತ್ತು ರಾಜ್ಯ ಸಕಾರಗಳಿಗೆ ಧನ್ಯವಾದಗಳು. ಮೊದಲ 24 ಗಂಟೆಗಳು ಕಠಿಣವಾಗಿದ್ದವು. ಆದರೆ ನಂತರ ನಮಗೆ ಪೈಪ್ ಮೂಲಕ ಆಹಾರವನ್ನು ಒದಗಿಸಲಾಯಿತು. ನಾನು ಸಂಪೂರ್ಣವಾಗಿ ಉತ್ತಮನಾಗಿದ್ದೇನೆ ಮತ್ತು ಈಗ ಆರೋಗ್ಯವಾಗಿದ್ದೇನೆ ಎಂದು ತಿಳಿಸಿದರು. ಇದನ್ನೂ ಓದಿ: ಮಾನವೀಯತೆ, ಟೀಮ್‌ವರ್ಕ್‌ಗೆ ಅದ್ಭುತ ಉದಾಹರಣೆ – ಕಾರ್ಯಾಚರಣೆಯಲ್ಲಿ ಭಾಗಿಯಾದವರಿಗೆ ನಮಸ್ಕರಿಸುತ್ತೇನೆ: ಮೋದಿ
ಇತ್ತ ರಕ್ಷಣಾ ಕಾರ್ಯಚರಣೆ ಬಳಿಕ ಪ್ರಧಾನಿ ನರೇಂದ್ರ ಮೋದಿ (Narendra Modi) ಕಾರ್ಮಿಕರೊಂದಿಗೆ ಮಾತುಕತೆ ನಡೆಸಿದ್ದಾರೆ. ದೂರವಾಣಿ ಮೂಲಕ ಕಾರ್ಮಿಕರೊಂದಿಗೆ ಮಾತನಾಡಿರುವ ಮೋದಿ, ನೀವು ಸುರಕ್ಷಿತವಾಗಿ ಹೊರಬಂದಿರುವುದು ಖುಷಿಯ ಸಂಗತಿ. ಅದನ್ನು ಶಬ್ದದಲ್ಲಿ ವರ್ಣನೆ ಮಾಡಲು ಸಾಧ್ಯವಿಲ್ಲ. ಕೇದಾರನಾಥ, ಬದರಿನಾಥನ ಆಶೀರ್ವಾದ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಇಷ್ಟು ಮಾತ್ರವಲ್ಲದೇ ಮಂಗಳವಾರ 41 ಕಾರ್ಮಿಕರನ್ನು ಸುರಂಗದಿಂದ ರಕ್ಷಣೆ ಮಾಡುತ್ತಿದ್ದಂತೆಯೇ ಮೋದಿ ಈ ಕುರಿತು ಎಕ್ಸ್ನಲ್ಲಿ ಸಂತಸ ಹಂಚಿಕೊಂಡಿದ್ದು, ನಮ್ಮ ಕಾರ್ಮಿಕ ಬಂಧುಗಳ ರಕ್ಷಣಾ ಕಾರ್ಯಾಚರಣೆಯ ಯಶಸ್ಸು ಎಲ್ಲರನ್ನೂ ಭಾವುಕರನ್ನಾಗಿಸುತ್ತಿದೆ. ನಿಮ್ಮ ಧೈರ್ಯ ಮತ್ತು ತಾಳ್ಮೆ ಎಲ್ಲರಿಗೂ ಸ್ಪೂರ್ತಿದಾಯಕವಾಗಿದೆ ಎಂದು ಹೇಳಿದ್ದರು. ಇದನ್ನೂ ಓದಿ: ಹೆಜ್ಜೆ ಹೆಜ್ಜೆಗೂ ಅಡೆತಡೆ – ಉತ್ತರಕಾಶಿ ಸುರಂಗದಲ್ಲಿ ಸಿಲುಕಿದ್ದ 41 ಕಾರ್ಮಿಕರನ್ನು ರಕ್ಷಿಸಿದ್ದು ಹೇಗೆ? ಇಲ್ಲಿದೆ ಪೂರ್ಣ ವಿವರ
ನವದೆಹಲಿ: ಮಾನವೀಯತೆ, ಟೀಮ್‌ವರ್ಕ್‌ಗೆ ಅದ್ಭುತ ಉದಾಹರಣೆ. ಉತ್ತರಕಾಶಿ ಸುರಂಗ ರಕ್ಷಣಾ ಕಾರ್ಯಾಚರಣೆಯಲ್ಲಿ (Uttarakhand Tunnel Rescue Operation) ಭಾಗಿಯಾಗಿದ್ದ ಎಲ್ಲಾ ಜನರಿಗೆ ನಾನು ನಮಸ್ಕರಿಸುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಹೇಳಿದ್ದಾರೆ.
उत्तरकाशी में हमारे श्रमिक भाइयों के रेस्क्यू ऑपरेशन की सफलता हर किसी को भावुक कर देने वाली है।
टनल में जो साथी फंसे हुए थे, उनसे मैं कहना चाहता हूं कि आपका साहस और धैर्य हर किसी को प्रेरित कर रहा है। मैं आप सभी की कुशलता और उत्तम स्वास्थ्य की कामना करता हूं।
ನಾನು ನಿಮ್ಮೆಲ್ಲರಿಗೂ ಒಳ್ಳೆಯ ಮತ್ತು ಉತ್ತಮ ಆರೋಗ್ಯವನ್ನು ಬಯಸುತ್ತೇನೆ. ದೀರ್ಘಾವಧಿಯ ಕಾಯುವಿಕೆಯ ನಂತರ ನಮ್ಮ ಈ ಸ್ನೇಹಿತರು ಈಗ ತಮ್ಮ ಪ್ರೀತಿಪಾತ್ರರನ್ನು ಭೇಟಿಯಾಗುತ್ತಾರೆ ಎಂಬುದು ತುಂಬಾ ತೃಪ್ತಿಯ ವಿಷಯ,
ಈ ಸವಾಲಿನ ಸಮಯದಲ್ಲಿ ಈ ಎಲ್ಲಾ ಕುಟುಂಬಗಳು ತೋರಿದ ತಾಳ್ಮೆ ಮತ್ತು ಧೈರ್ಯವನ್ನು ಸಾಕಷ್ಟು ಪ್ರಶಂಸಿನೀಯ. ಅವರ ಶೌರ್ಯ ಮತ್ತು ಸ್ಥೈರ್ಯ ನಮ್ಮ ಕಾರ್ಮಿಕ ಬಂಧುಗಳಿಗೆ ಹೊಸ ಬದುಕನ್ನು ನೀಡಿದೆ.
ನವದೆಹಲಿ: ಕಾರ್ಮಿಕರ ರಕ್ಷಣೆಗೆ ದೇಶಾದ್ಯಂತ ಪ್ರಾರ್ಥನೆ, ನಾವು ಸಾವನ್ನು ಮೆಟ್ಟಿ ನಿಲ್ಲುತ್ತೇವೆ ಎಂದು ಛಲ ತೊಟ್ಟ ಕಾರ್ಮಿಕರು, ಕಾರ್ಯಾಚರಣೆ ಮಧ್ಯೆ ಕೈಕೊಟ್ಟ ಯಂತ್ರ…ಹೆಜ್ಜೆ ಹೆಜ್ಜೆಗೂ ಅಡೆತಡೆಅಡ್ಡಿ ಆತಂಕಗಳ ನಡುವೆ ಉತ್ತರಾಖಂಡದ (Uttarakhand) ಸುರಂಗದಲ್ಲಿ (Tunnel) ಕಳೆದ 17 ದಿನಗಳಿಂದ ಸಿಲುಕಿದ್ದ 41 ಕಾರ್ಮಿಕರನ್ನು (Workers) ಯಶಸ್ವಿಯಾಗಿ ರಕ್ಷಿಸಲಾಗಿದೆ.
ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ನಡೆಸಿದ ಸಾಹಸೋಪೇತ ಕಾರ್ಯಾಚರಣೆಯಲ್ಲಿ 400ಕ್ಕೂ ಹೆಚ್ಚು ಗಂಟೆಗಳ ಬಳಿಕ ಎಲ್ಲಾ 41 ಕಾರ್ಮಿಕರನ್ನು ರಕ್ಷಿಸಲಾಗಿದೆ. ಈ ಕಾರ್ಯಾಚರಣೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಸುರಂಗದಿಂದ ಕಾರ್ಮಿಕರು ಹೊರಬರುತ್ತಿದ್ದಂತೆ ಉತ್ತಾರಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಮತ್ತು ಕೇಂದ್ರ ಸಚಿಬ ವಿಕೆ ಸಿಂಗ್ ಹೂವಿನ ಹಾರವನ್ನು ಹಾಕಿ ಬರಮಾಡಿಕೊಂಡರು.
ನೆಲದಿಂದ ಸಮಾನಾಂತರವಾಗಿ ಮೊದಲು ಕೈಗೊಂಡಿದ್ದ ಕೊರೆವ ಕೆಲಸವನ್ನು ಅದು ನಿಂತಿದ್ದ ಸ್ಥಳದಿಂದಲೇ ನಿಷೇಧಿತ ಇಲಿ ಬಿಲ ಗಣಿಗಾರಿಕೆಯ ಪದ್ದತಿ ಬಳಸಿ ಡ್ರಿಲ್ಲಿಂಗ್ ಮಾಡಿದ್ದು ಫಲ ಕೊಟ್ಟಿದೆ. ನಂತರ ಸುರಂಗದ ಒಳಗೆ 3 ಮೀಟರ್‌ನಷ್ಟು ಕೊರೆಯಲಾಯಿತು. ಸಂಜೆ 7:05ಕ್ಕೆ ಸರಿಯಾಗಿ ಕಾರ್ಮಿಕರು ಸಿಲುಕಿದ್ದ ಸ್ಥಳವನ್ನು ಎನ್‌ಡಿಆರ್‌ಎಫ್ ತಲುಪಿತು. ಐವರು ಅಧಿಕಾರಿಗಳ ತಂಡ ಮೊದಲು ಸುರಂಗ ತಲುಪಿ ಕಾರ್ಮಿಕರನ್ನು ಭೇಟಿ ಮಾಡಿದರು. ನಂತರ 4 ಅಡಿಯಷ್ಟು ಅಗಲ ಪೈಪ್‌ನೊಳಗಿನಿಂದ ಸ್ಟ್ರೆಚರ್ ಬಳಸಿ ಹಲವು ಬ್ಯಾಚ್‌ಗಳಲ್ಲಿ ಕಾರ್ಮಿಕರನ್ನು ಎನ್‌ಡಿಆರ್‌ಎಫ್ ಕರೆತಂದಿದೆ.
#WATCH | Uttarkashi (Uttarakhand) tunnel rescue: CM Pushkar Singh Dhami and Union Minister General VK Singh meet the workers who have been rescued from inside the Silkyara tunnel pic.twitter.com/beuPxZYpxe
3-3 ಕಾರ್ಮಿಕರನ್ನು ಬ್ಯಾಚ್‌ಗಳನ್ನಾಗಿ ವಿಂಗಡಿಸಿ ಅವರನ್ನು ಹೊರಗೆ ಕರೆತರಲಾಗಿದೆ. ಒಬ್ಬೊಬ್ಬ ಕಾರ್ಮಿಕ ಬಾಹ್ಯ ಜಗತ್ತನ್ನು ಕಂಡ ಕೂಡಲೇ ಸ್ಥಳದಲ್ಲಿ ಸಂಭ್ರಮ ಮುಗಿಲುಮುಟ್ಟಿದೆ. ಸಾವು ಗೆದ್ದು ಬಂದ ಪ್ರತಿಯೊಬ್ಬ ಕಾರ್ಮಿಕರನ್ನು ಹೂಹಾರದೊಂದಿಗೆ ಸ್ವಾಗತಿಸಲಾಗಿದೆ. ಈ ಎಲ್ಲಾ ಕೆಲಸ ಕೇವಲ ಅರ್ಧ ಗಂಟೆ ಅಂತರದಲ್ಲಿ ನಡೆದಿದೆ.
ಸದ್ಯಕ್ಕೆ ಎಲ್ಲ ಕಾರ್ಮಿಕರೂ ಆರೋಗ್ಯವಾಗಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಎಲ್ಲಾ ಕಾರ್ಮಿಕರನ್ನು ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಒಂದೊಮ್ಮೆ ಯಾರಿಗಾದರೂ ಮೆಡಿಕಲ್ ಎಮೆರ್ಜೆನ್ಸಿ ಇದ್ದರೆ ಆಸ್ಪತ್ರೆಗೆ ಸಾಗಿಸಲು ಚಿನೂಕ್ ಹೆಲಿಕಾಪ್ಟರ್ ಸಜ್ಜಾಗಿ ಇರಿಸಲಾಗಿತ್ತು. ಅದೃಷ್ಟವಶಾತ್ ಅಂತಹ ಸನ್ನಿವೇಶ ಕಂಡುಬಂದಿಲ್ಲ. ಸ್ಥಳದಲ್ಲೇ ಸಿಎಂ ಪುಷ್ಕರ್ ಸಿಂಗ್ ಧಾಮಿ, ಕೇಂದ್ರ ಸಚಿವ ವಿಕೆ ಸಿಂಗ್, ಕಾರ್ಮಿಕರು ಬಂಧುಗಳು ಸ್ಥಳದಲ್ಲೇ ಬೀಡುಬಿಟ್ಟಿದ್ದು, ಸಿಹಿ ಹಂಚಿ ಸಂಭ್ರಮಿಸಿದ್ದಾರೆ.
17 ದಿನಗಳ ರಕ್ಷಣಾ ಕಾರ್ಯಾಚರಣೆಯಲ್ಲಿ ನೂರೆಂಟು ವಿಘ್ನಗಳು ಎದುರಾಗಿದ್ದವು. ವಿದೇಶಿ ತಜ್ಞರನ್ನು ಆಪರೇಷನ್‌ಗೆ ಬಳಸಿಕೊಳ್ಳಲಾಗಿತ್ತು. ಆದರೆ ಕಾರ್ಯಾಚರಣೆ ಯಾವಾಗ ಮುಗಿಯಬಹುದು ಎಂಬ ಬಗ್ಗೆ ಸ್ಪಷ್ಟತೆಯೇ ಇರಲಿಲ್ಲ. ಆದರೆ ರಕ್ಷಣಾ ಪಡೆಗಳ ಅವಿರತ ಪ್ರಯತ್ನ ಇಂದು ಫಲ ಕೊಟ್ಟಿದೆ.
ರಕ್ಷಣಾ ಕಾರ್ಯರಚಣೆ ನಡೆದಿದ್ದು ಹೀಗೆ:
ಅವಶೇಷಗಳ ನಡುವೆ ಮೊದಲು ಡ್ರಿಲ್ಲಿಂಗ್ ನಡೆಸಿ ಕೊನೆ ಭಾಗ ಸುಮಾರು 57 ಮೀಟರ್ ಮಾತ್ರ ಮನುಷ್ಯರಿಂದಲೇ ಕೊರೆಯಲಾಯಿತು. ಸುರಂಗಕ್ಕೆ 90 ಸೆಂಟಿಮೀಟರ್ ಅಗಲದ ಪೈಪ್ ಅಳವಡಿಸಿ, ಅದರ ಮೂಲಕವೇ ಕಾರ್ಮಿಕರನ್ನು ಹೊರಕ್ಕೆ ತರಲಾಗಿದೆ. ಇದನ್ನೂ ಓದಿ: ಉತ್ತರಕಾಶಿ ಸುರಂಗದಲ್ಲಿ ಗ್ರೇಟ್ ಆಪರೇಷನ್ – 17 ದಿನಗಳ ಬಳಿಕ ಸಾವು ಗೆದ್ದ 41 ಕಾರ್ಮಿಕರು
ಕಾರ್ಮಿಕರು 17 ದಿನ ಬದುಕಿದ್ದು ಹೇಗೆ?
ನವೆಂಬರ್ 12 ರಂದು ಸಿಲ್‌ಕ್ಯಾರಾ ಸುರಂಗ ಕುಸಿತವಾಗಿತ್ತು. ಈ ಹಿನ್ನೆಲೆ 41 ಕಾರ್ಮಿಕರು ಅದರೊಳಗೆ ಸಿಲುಕೊಕೊಂಡಿದ್ದರು. ಅದೃಷ್ಟವಶಾತ್ ಕಾರ್ಮಿಕರು ಓಡಾಡುವುದಕ್ಕೆ 2 ಕಿ.ಮೀ ಸ್ಥಳಾವಕಾಶ ಇತ್ತು. ಸುರಂಗ ಕುಸಿದ 2-3 ದಿನಗಳಲ್ಲಿ ಪೈಪ್ ಮೂಲಕ ಆಹಾರ, ನೀರು, ಔಷಧಿ ಪೂರೈಕೆ ಮಾಡಲಾಗುತ್ತಿತ್ತು.
ಕಾರ್ಮಿಕರ ಮನಸ್ಥೈರ್ಯ ಕಡಿಮೆಯಾಗದಿರಲು ಯೋಗ, ಸಂವಹನ ಮಾಡಿಸಲಾಗಿತ್ತು. ಕುಟುಂಬಸ್ಥರೊಡನೆ ಮಾತನಾಡಲು ಕಾರ್ಮಿಕರಿಗೆ ಮೊಬೈಲ್ ಸೌಲಭ್ಯ ನೀಡಲಾಗಿತ್ತು. ಸಿಲುಕೊಕೊಂಡಿದ್ದ ಕಾರ್ಮಿಕರೊಡನೆ ಸಿಎಂ ಪುಷ್ಕರ್ ಸಿಂಗ್ ಧಾಮಿ ಖುದ್ದಾಗಿ ಮಾತನಾಡಿದ್ದರು.
ವರವಾದ ನಿಷೇಧಿತ ರ‍್ಯಾಟ್ ಹೋಲ್ ಟೆಕ್ನಿಕ್:
ಇಲಿ ಬಿಲ ಕೊರೆವ ಮಾದರಿಯ ನೆಲ ಕೊರೆಯುವ ಟೆಕ್ನಿಕ್ 41 ಕಾರ್ಮಿಕರನ್ನು ರಕ್ಷಣೆ ಮಾಡಲು ಕೊನೆಗೆ ಸಹಾಯಕ್ಕೆ ಬಂದಿದೆ. ಇದು ಕಾರ್ಮಿಕರ ಸಣ್ಣ ಗುಂಪುಗಳು ನೆಲ ಅಗೆದು ಕಲ್ಲಿದ್ದಲು ತೆಗೆಯುವ ಪ್ರಕ್ರಿಯೆಗೆ ಹೆಚ್ಚಾಗಿ ಬಳಸಲಾಗುತ್ತದೆ. ಇದು ಸಲಕರಣೆ ಬಳಸಿಕೊಂಡು ಕೈಗಳಿಂದ ನೆಲ ಅಗೆಯುವ ಪ್ರಕ್ರಿಯೆಯಾಗಿದೆ. ಒಬ್ಬರು ಮಾತ್ರ ಒಳಗೆ ತೂರುವಷ್ಟು ಸಣ್ಣ ಕುಣಿ ಅಗೆಯವ ಕ್ರಿಯೆಯಾಗಿದ್ದು, ಇದನ್ನು ಕಲ್ಲಿದ್ದಲು ಗಣಿಗಾರಿಕೆಯಲ್ಲಿ ಹೆಚ್ಚಾಗಿ ಬಳಸುತ್ತಿದ್ದರು.
ಡೆಹ್ರಾಡೂನ್: ಸುರಂಗದ ಒಳಗಡೆ ಇದ್ದ ಕಾರ್ಮಿಕರು ಸುರಕ್ಷಿತವಾಗಿ ಹೊರಬರಲಿ ಎಂಬ ದೇಶದ ಜನರ ಪ್ರಾರ್ಥನೆ ಫಲ ನೀಡಿದೆ. ಉತ್ತರಾಖಂಡದ ಉತ್ತರಕಾಶಿ ಸುರಂಗದಲ್ಲಿ (Uttarakhand’s Silkyari Tunnel) 17 ದಿನಗಳಿಂದ ಸಿಲುಕಿದ್ದ ಕಾರ್ಮಿಕರನ್ನು (Workers) ರಕ್ಷಣೆ ಮಾಡಲಾಗಿದೆ.
17 ದಿನ 400 ಗಂಟೆಗಳ ಆಪರೇಷನ್ ಯಶಸ್ವಿಯಾಗಿದ್ದು ಮಂಗಳವಾರ ರಾತ್ರಿ ಒಬ್ಬೊಬ್ಬರಾಗಿ ಸುರಂಗದಿಂದ ಕಾರ್ಮಿಕರು ಹೊರ ಬರುತ್ತಿದ್ದಾರೆ.
#WATCH | The first worker among the 41 workers trapped inside the Silkyara tunnel in Uttarakhand since November 12, has been successfully rescued. pic.twitter.com/Tbelpwq3Tz
ನೆಲದಿಂದ ಸಮಾನಾಂತರವಾಗಿ ಮೊದಲು ಕೈಗೊಂಡಿದ್ದ ಕೊರೆವ ಕೆಲಸವನ್ನು, ಅದು ನಿಂತಿದ್ದ ಸ್ಥಳದಿಂದಲೇ ನಿಷೇಧಿತ ಇಲಿ ಬಿಲ ಗಣಿಗಾರಿಕೆಯ ತಂತ್ರಜ್ಞಾನ ಬಳಸಿ ಡ್ರಿಲ್ಲಿಂಗ್ ಮಾಡಿದ್ದಾರೆ. ಕೊರೆವ ಕಾರ್ಯ ಪೂರ್ಣಗೊಂಡ ಬಳಿಕ ಎನ್‌ಡಿಆರ್‌ಎಫ್ ಸಿಬ್ಬಂದಿ ಸುರಂಗದೊಳಗೆ ಹೋಗಿ, ಕಾರ್ಮಿಕರನ್ನು ಒಬ್ಬೊಬ್ಬರನ್ನಾಗಿ ಹೊರಗೆ ಕರೆತಂದಿದ್ದಾರೆ.
#WATCH | Uttarkashi (Uttarakhand) tunnel rescue | Micro tunnelling expert Chris Cooper says, "Three workers have come out. All the members of the rescue team are very happy…" pic.twitter.com/MylmYN2q6r
ಕಾರ್ಮಿಕರನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲು 41 ಅಂಬುಲೆನ್ಸ್, ಸ್ಟ್ರೆಚ್ಚರ್, ಮೆಡಿಕಲ್ ಎಮೆರ್ಜೆನ್ಸಿ ಇದ್ರೆ ಚಿನೂಕ್ ಹೆಲಿಕಾಪ್ಟರ್.. ಹೀಗೆ ಎಲ್ಲವನ್ನು ಸಜ್ಜಾಗಿ ಇರಿಸಲಾಗಿದೆ. ಸ್ಥಳದಲ್ಲೇ ಸಿಎಂ ಪುಷ್ಕರ್ ಸಿಂಗ್ ಧಾಮಿ, ಕೇಂದ್ರ ಸಚಿವ ವಿಕೆ ಸಿಂಗ್, ಕಾರ್ಮಿಕರು ಬಂಧುಗಳು ಸ್ಥಳದಲ್ಲೇ ಬೀಡುಬಿಟ್ಟಿದ್ದಾರೆ.
#WATCH | Uttarkashi (Uttarakhand) tunnel rescue: As rescue operation enters final stage, "I'm very very happy", says kin of a worker who is trapped inside Silkyara tunnel pic.twitter.com/vvBA3XHwS5
ರಕ್ಷಣಾ ಕಾರ್ಯದ ವೇಳೆ ಯಂತ್ರಗಳು ಕೈಕೊಟ್ಟಿದ್ದರಿಂದ ಕಾರ್ಯಾಚರಣೆ ವಿಳಂಬವಾಗಿತ್ತು. ಕೊನೆಗೆ ರ‍್ಯಾಟ್ ಹೋಲ್ ಮೈನಿಂಗ್ (Rat Hole Mining) ಮೂಲಕ 41 ಜನರನ್ನು ರಕ್ಷಿಸಲು ಮಾಸ್ಟರ್ ಪ್ಲ್ಯಾನ್ ರೂಪಿಸಲಾಗಿತ್ತು.
ಉತ್ತರಕಾಶಿ ಜಿಲ್ಲೆಯ ಸಿಲ್‌ಕ್ಯಾರ ಹಾಗೂ ದಂಡಲ್‌ಗಾಂವ್‌ಗೆ ಸಂಪರ್ಕ ಕಲ್ಪಿಸಲು ಚಾರ್ ಧಾಮ್ ರಸ್ತೆ ಯೋಜನೆ ಅಡಿಯಲ್ಲಿ ಸುರಂಗ ಮಾರ್ಗ ನಿರ್ಮಿಸಲಾಗುತ್ತಿದೆ. 4.5 ಕಿಲೋ ಮೀಟರ್ ದೂರದ ಸುರಂಗ ನಿರ್ಮಾಣದ ವೇಳೆ ಸುಮಾರು 150 ಮೀಟರ್ ಉದ್ದದ ಸುರಂಗ ಕುಸಿದಿತ್ತು. ನವೆಂಬರ್ 12ರಂದು ಜಾವ 4 ಗಂಟೆ ಸುಮಾರಿಗೆ ಸುರಂಗ ಕುಸಿದಿದ್ದು, ಕೂಡಲೇ ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಗಿತ್ತು.
ನವದೆಹಲಿ: ಕಳೆದ 17 ದಿನಗಳಿಂದ ಉತ್ತರಕಾಶಿ ಸುರಂಗದಲ್ಲಿ (Uttarkashi Tunnel) ಸಿಲುಕಿರುವ 41 ಕಾರ್ಮಿಕರನ್ನು ರಕ್ಷಿಸಲು ನಿರಂತರವಾಗಿ ಪ್ರಯತ್ನಗಳನ್ನು ನಡೆಸಲಾಗಿದೆ. ವಿದೇಶಿ ಯಂತ್ರಗಳನ್ನು ತರಿಸಿಯೂ ಹಲವು ಪ್ರಯತ್ನಗಳನ್ನು ಮಾಡಿ ಅವುಗಳು ಕೈಕೊಟ್ಟ ಬಳಿಕ ಕೊನೆಗೆ ನಿಷೇಧಿತ ರ‍್ಯಾಟ್ ಹೋಲ್ ಮೈನಿಂಗ್ (Rat Hole Mining) ವಿಧಾನವೇ ಕೆಲಸಕ್ಕೆ ಬಂದಿದೆ.
ಹೌದು, ಅಮೆರಿಕದಿಂದ ಆಗರ್ ಯಂತ್ರವನ್ನು ತರಿಸಿ ಕಾರ್ಮಿಕರನ್ನು ಸುರಕ್ಷಿತವಾಗಿ ಹೊರತರಲು ಪ್ರಯತ್ನ ಪಡುತ್ತಿದ್ದ ವೇಳೆ ಯಂತ್ರವೇ ಕೆಟ್ಟುಹೋಗಿತ್ತು. ಇದಾದ ಬಳಿಕ ರಕ್ಷಣಾ ಕಾರ್ಯಾಚರಣೆ ಭಾರೀ ವಿಳಂಬವೂ ಆಯಿತು. ಇದೀಗ ರಕ್ಷಣಾ ಕಾರ್ಯಾಚರಣೆಯ ಕೊನೆಯ ಹಂತವನ್ನು ನಿಷೇಧಿತ ರ‍್ಯಾಟ್ ಹೋಲ್ ಮೈನಿಂಗ್ ವಿಧಾನದ ಮೂಲಕ ಪೂರ್ಣಗೊಳಿಸಲಾಗಿದೆ.
ಏನಿದು ರ‍್ಯಾಟ್ ಹೋಲ್ ಮೈನಿಂಗ್?
ರ‍್ಯಾಟ್ ಹೋಲ್ ಮೈನಿಂಗ್ ಕೈಯಿಂದ ಕೊರೆಯುವ ವಿಧಾನವಾಗಿದೆ. ಇದನ್ನು ನುರಿತ ಕೆಲಸಗಾರರಷ್ಟೇ ಮಾಡುತ್ತಾರೆ. ಮೇಘಾಲಯದಲ್ಲಿ ಹೆಚ್ಚಾಗಿ ಕಾರ್ಮಿಕರು ಈ ರೀತಿ ಕೊರೆಯುತ್ತಾರೆ. ನೆಲದಲ್ಲಿ ಕಿರಿದಾದ ಹೊಂಡಗಳನ್ನು ಅಗೆದು, ಒಬ್ಬ ವ್ಯಕ್ತಿ ತೂರಿಕೊಂಡು ಹೋಗಲು ಸಾಧ್ಯವಾಗುವಷ್ಟೇ ಅಗಲದ ಹೊಂಡಗಳನ್ನು ಕೊರೆಯಲಾಗುತ್ತದೆ. ವ್ಯಕ್ತಿ ಹೊಂಡವನ್ನು ಕೊರೆದಂತೆ ಮುಂದೆ ಮುಂದೆ ಸಾಗುತ್ತಾ ಕಲ್ಲಿದ್ದಲನ್ನು ಸಂಗ್ರಹಿಸುತ್ತಾನೆ.
ರ‍್ಯಾಟ್ ಹೋಲ್ ಎಂದರೆ ಹೆಸರೇ ಹೇಳಿದಂತೆ ಇಲಿಗಳು ಕೊರೆಯುವಂತಹ ಕಿರಿದಾದ ಹೊಂಡಗಳು. ಹೊಂಡಗಳನ್ನು ಅಗೆದ ನಂತರ ಗಣಿಗಾರನು ಹಗ್ಗ ಮತ್ತು ಬಿದಿರಿನ ಏಣಿಗಳನ್ನು ಬಳಸಿ ಹೊಂಡದೊಳಗೆ ಇಳಿಯುತ್ತಾನೆ. ಈ ವಿಧಾನವನ್ನು ಸಾಮಾನ್ಯವಾಗಿ ಕಲ್ಲಿದ್ದಲನ್ನು ಹೊರತೆಗೆಯಲು ಬಳಸಲಾಗುತ್ತದೆ. ಆದರೆ ಇದು ಅತ್ಯಂತ ಅಪಾಯಕಾರಿ ಎಂದು ಪರಿಗಣಿಸಲಾಗುತ್ತದೆ. ಈ ವಿಧಾನವನ್ನು ಬಳಸಿ ಉಸಿರುಗಟ್ಟಿ, ಆಮ್ಲಜನಕದ ಕೊರತೆಯಿಂದ ಹಾಗೂ ಅಲ್ಲೇ ಸಿಲುಕಿ ಹಸಿವಿನಿಂದ ಜನರು ಸಾವನಪ್ಪಿರುವ ಅನೇಕ ಪ್ರಕರಣಗಳು ವರದಿಯಾಗಿವೆ. ಈ ಹಿನ್ನೆಲೆ ಭಾರತ ಸೇರಿದಂತೆ ಅನೇಕ ದೇಶಗಳಲ್ಲಿ ರ‍್ಯಾಟ್ ಹೋಲ್ ಮೈನಿಂಗ್ ಮಾಡುವುದನ್ನು ನಿಷೇಧಿಸಲಾಗಿದೆ.
ರ‍್ಯಾಟ್ ಹೋಲ್ ಮೈನಿಂಗ್‌ನಲ್ಲಿ ಮತ್ತೊಂದು ವಿಧವಿದೆ. ಇದರಲ್ಲಿ 10 ರಿಂದ 100 ಚದರ ಮೀಟರ್ ವರೆಗೆ ಬದಲಾಗುವ ಆಯತಾಕಾರದ ಹೊಂಡಗಳನ್ನು ಮಾಡಲಾಗುತ್ತದೆ. ಅದರ ಮೂಲಕ 100-400 ಅಡಿ ಆಳದ ಲಂಬವಾದ ಹೊಂಡವನ್ನು ಅಗೆಯಲಾಗುತ್ತದೆ. ಅದರಲ್ಲಿ ಕಲ್ಲಿದ್ದಲು ಕಂಡುಬಂದ ನಂತರ ರಂಧ್ರದ ಗಾತ್ರದ ಸುರಂಗಗಳನ್ನು ಅಡ್ಡಲಾಗಿ ಅಗೆಯಲಾಗುತ್ತದೆ. ಅದರ ಮೂಲಕ ಕಾರ್ಮಿಕರು ಕಲ್ಲಿದ್ದಲನ್ನು ಹೊರತೆಗೆಯುತ್ತಾರೆ.
ರ‍್ಯಾಟ್ ಹೋಲ್ ಮೈನಿಂಗ್ ಬ್ಯಾನ್ ಯಾಕೆ?
ರ‍್ಯಾಟ್ ಹೋಲ್ ಮೈನಿಂಗ್ ವಿಧಾನವು ಅದರ ಅಪಾಯಕಾರಿ ಕೆಲಸದ ಪರಿಸ್ಥಿತಿಗಳು, ಪರಿಸರ ಹಾನಿ ಮತ್ತು ಸಾವು ನೋವುಗಳಿಗೆ ಕಾರಣವಾಗುವ ಹಲವು ಅಂಶಗಳಿಂದಾಗಿ ತೀವ್ರ ಟೀಕೆಗಳನ್ನು ಎದುರಿಸಿದೆ. ಗಣಿಗಾರಿಕೆಗಳು ಸಾಮಾನ್ಯವಾಗಿ ಅನಿಯಂತ್ರಿತವಾಗಿದ್ದು, ಕಾರ್ಮಿಕರಿಗೆ ಸರಿಯಾದ ಗಾಳಿ, ರಚನಾತ್ಮಕ ಬೆಂಬಲ ಅಥವಾ ಯಾವುದೇ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳದೇ ನಿರ್ಲಕ್ಷ್ಯವಹಿಸಲಾಗುತ್ತದೆ. ಮಾತ್ರವಲ್ಲದೇ ಈ ಹಳ್ಳದಲ್ಲಿ ಕಾರ್ಮಿಕರು ಇಳಿದ ಸಂದರ್ಭದಲ್ಲಿ ಮಳೆಯಾಗಿ, ಗಣಿಗಾರಿಕೆ ಪ್ರದೇಶದಲ್ಲಿ ನೀರು ನುಗ್ಗಿದ ಪರಿಣಾಮ ಅನೇಕ ಕಾರ್ಮಿಕರು ಅದರೊಳಗೆಯೇ ಪ್ರಾಣಬಿಟ್ಟಿರುವ ಅನೇಕ ನಿದರ್ಶನಗಳಿವೆ.
ಈ ರೀತಿಯ ಗಣಿಗಾರಿಕೆಯಿಂದಾಗಿ ಭೂಮಿಯ ಅವನತಿ, ಅರಣ್ಯನಾಶ ಮತ್ತು ಜಲ ಮಾಲಿನ್ಯಕ್ಕೂ ಕಾರಣವಾಗುತ್ತಿದೆ. ಈ ಎಲ್ಲಾ ಕಾರಣಗಳಿಂದಾಗಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (NGT) 2014 ರಲ್ಲಿ ರ‍್ಯಾಟ್ ಹೋಲ್ ಮೈನಿಂಗ್ ಅಭ್ಯಾಸವನ್ನು ನಿಷೇಧಿಸಿತು.
ರ‍್ಯಾಟ್ ಹೋಲ್ ಮೈನಿಂಗ್ ಅತ್ಯಂತ ಅಪಾಯಕಾರಿಯಾಗಿದ್ದು ಅನೇಕ ದೇಶಗಳಲ್ಲಿ ಇದನ್ನು ನಿಷೇಧಿಸಿದ್ದರೂ ಕೊನೆಗೆ ಅನಿವಾರ್ಯವಾಗಿ ಉತ್ತರಕಾಶಿಯ ಸುರಂಗದೊಳಗೆ ಸಿಲುಕಿರುವ 41 ಕಾರ್ಮಿಕರನ್ನು ರಕ್ಷಿಸಲು ಈ ವಿಧಾನವನ್ನು ಬಳಸಲಾಗಿದೆ. ಅನೇಕ ಜೀವಗಳಿಗೆ ಕುತ್ತಾಗಿದ್ದ ರ‍್ಯಾಟ್ ಹೋಲ್ ಮೈನಿಂಗ್ ವಿಧಾನವನ್ನು ಇದೀಗ ಅನೇಕ ಸುರಕ್ಷತಾ ಕ್ರಮಗಳನ್ನು ಅನುಸರಿಸಿ, 41 ಕಾರ್ಮಿಕರನ್ನು ರಕ್ಷಣೆ ಮಾಡುವ ಮೂಲಕ ವರವಾಗಿ ಬಳಸಿಕೊಳ್ಳಲಾಗಿದೆ.
ಡೆಹ್ರಾಡೂನ್: ಉತ್ತರಾಖಂಡದ ಉತ್ತರಕಾಶಿ ಸುರಂಗದಲ್ಲಿ (Uttarakhand’s Silkyari Tunnel) 17 ದಿನಗಳಿಂದ ಸಿಲುಕಿದ್ದ ಕಾರ್ಮಿಕರ (Workers) ರಕ್ಷಣಾ ಕಾರ್ಯ ಅಂತಿಮ ಘಟ್ಟ ತಲುಪಿದ್ದು ಯಾವುದೇ ಕ್ಷಣದಲ್ಲಿ ಹೊರ ಬರುವ ಸಾಧ್ಯತೆಯಿದೆ.
ಕಾರ್ಮಿಕರು ರಕ್ಷಣೆಗೆ 41 ಅಂಬುಲೆನ್ಸ್‌ಗಳನ್ನು (Ambulance) ಸಿದ್ಧಗೊಳಿಸಲಾಗಿದೆ. ಸುರಂಗದಿಂದ ಹೊರ ಬಂದ ಕಾರ್ಮಿಕರನ್ನು ಅಂಬುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಲಾಗುತ್ತಿದೆ.
#WATCH | Uttarkashi tunnel rescue | Due to the rescue operation, a temporary medical facility has been expanded inside the tunnel. After evacuating the trapped workers, health training will be done at this place. In case of any problem, 8 beds are arranged by the health… pic.twitter.com/ehAXzwd5dV
#WATCH | Uttarkashi tunnel rescue | Union Minister General VK Singh (Retd), former advisor of PMO Bhaskar Khulbe and former Engineer-In-Chief and BRO DG Lieutenant General Harpal Singh (Retd) come out of the Silkyara tunnel.
ಉತ್ತರಕಾಶಿ ಜಿಲ್ಲೆಯ ಸಿಲ್‌ಕ್ಯಾರ ಹಾಗೂ ದಂಡಲ್‌ಗಾಂವ್‌ಗೆ ಸಂಪರ್ಕ ಕಲ್ಪಿಸಲು ಚಾರ್ ಧಾಮ್ ರಸ್ತೆ ಯೋಜನೆ ಅಡಿಯಲ್ಲಿ ಸುರಂಗ ಮಾರ್ಗ ನಿರ್ಮಿಸಲಾಗುತ್ತಿದೆ. 4.5 ಕಿಲೋ ಮೀಟರ್ ದೂರದ ಸುರಂಗ ನಿರ್ಮಾಣದ ವೇಳೆ ಸುಮಾರು 150 ಮೀಟರ್ ಉದ್ದದ ಸುರಂಗ ಕುಸಿದಿತ್ತು. ನವೆಂಬರ್ 12ರಂದು ಜಾವ 4 ಗಂಟೆ ಸುಮಾರಿಗೆ ಸುರಂಗ ಕುಸಿದಿದ್ದು, ಕೂಡಲೇ ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಗಿತ್ತು. ಇದನ್ನೂ ಓದಿ: ಗೋಪೂಜೆ ವೇಳೆ ಬಂಗಾರದ ಸರ ನುಂಗಿದ ಹಸು – ಶಸ್ತ್ರಚಿಕಿತ್ಸೆ ಮಾಡಿ ಹೊರತೆಗೆದ ವೈದ್ಯರು