Tag: Uttarakhand Tunnel Collapse

  • ಎಲ್ಲರೂ ಆರೋಗ್ಯವಾಗಿದ್ದಾರೆ, ಬೇಗ ಮನೆಗೆ ಕಳಿಸಿಕೊಡ್ತೀವಿ: ಕಾರ್ಮಿಕರ ಬಗ್ಗೆ ವೈದ್ಯರ ಮಾತು

    ಎಲ್ಲರೂ ಆರೋಗ್ಯವಾಗಿದ್ದಾರೆ, ಬೇಗ ಮನೆಗೆ ಕಳಿಸಿಕೊಡ್ತೀವಿ: ಕಾರ್ಮಿಕರ ಬಗ್ಗೆ ವೈದ್ಯರ ಮಾತು

    ಡೆಹ್ರಾಡೂನ್: ಉತ್ತರಾಖಂಡದಲ್ಲಿ (Uttarakhand) ಕುಸಿದ ಸುರಂಗದಿಂದ (Tunnel Collapse) ರಕ್ಷಿಸಲ್ಪಟ್ಟ 41 ಕಾರ್ಮಿಕರ ಆರೋಗ್ಯ ಸ್ಥಿತಿ ಬಗ್ಗೆ ವೈದ್ಯರು ಮಾಹಿತಿ ಹಂಚಿಕೊಂಡಿದ್ದಾರೆ. ಎಲ್ಲರೂ ಆರೋಗ್ಯವಾಗಿದ್ದಾರೆ.. ಬೇಗ ಡಿಸ್ಚಾರ್ಜ್‌ ಮಾಡಿ ಮನೆಗೆ ಕಳುಹಿಸಲಾಗುವುದು ಎಂದು ವೈದ್ಯರು ತಿಳಿಸಿದ್ದಾರೆ.

    ರಕ್ಷಣೆ ಬೆನ್ನಲ್ಲೇ 41 ಕಾರ್ಮಿಕರನ್ನು ರಿಷಿಕೇಶದ ಏಮ್ಸ್‌ನಲ್ಲಿ ಆರೋಗ್ಯ ತಪಾಸಣೆಗೆ ಒಳಪಡಿಸಲಾಗಿದೆ. ಇಂದು ಎಲ್ಲರನ್ನೂ ಮನೆಗೆ ಕಳುಹಿಸುವ ಸಾಧ್ಯತೆ ಇದೆ. ಎಲ್ಲರನ್ನೂ ಪ್ರಾಥಮಿಕ ತಪಾಸಣೆಗೆ ಒಳಪಡಿಸಲಾಗಿದ್ದು, ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಇದನ್ನೂ ಓದಿ: ಸುರಂಗದಿಂದ ಕಾರ್ಮಿಕ ಬಚಾವಾದ್ರೂ ಅಪ್ಪನನ್ನು ಕೊನೇಸಲ ಜೀವಂತವಾಗಿ ನೋಡಲು ಸಿಗಲೇ ಇಲ್ಲ ಅವಕಾಶ

    ಎಲ್ಲ ಕಾರ್ಮಿಕರು ಆರೋಗ್ಯವಾಗಿದ್ದಾರೆ. ಅವರನ್ನು ರೋಗಿಗಳೆಂದು ನಾವು ಕರೆಯುವುದಿಲ್ಲ. ಅವರ ರಕ್ತದೊತ್ತಡ, ಜೀವಾಣುಗಳು, ಆಮ್ಲಜನಕೀಕರಣ ಎಲ್ಲವೂ ನಾರ್ಮಲ್‌ ಇದೆ. ನಾವು ಪ್ರಾಥಮಿಕ ಆರೋಗ್ಯ ತಪಾಸಣೆ ಮಾಡಿದ್ದೇವೆ. ಅದರ ವರದಿ ಶೀಘ್ರವೇ ಬರಲಿದೆ. ಹೃದಯ ಸಂಬಂಧಿ ಸಮಸ್ಯೆ ಏನಾದರೂ ಇದೆಯೇ ಎಂಬುದನ್ನು ತಿಳಿಯಲು ಇಸಿಜಿ ಪರೀಕ್ಷೆ ನಡೆಸಲಾಗುವುದು ಎಂದು ಎಐಐಎಂಎಸ್-ಋಷಿಕೇಶದ ಕಾರ್ಯನಿರ್ವಾಹಕ ನಿರ್ದೇಶಕ ಮತ್ತು ಸಿಇಒ ಪ್ರೊಫೆಸರ್ ಮೀನು ಸಿಂಗ್ ತಿಳಿಸಿದ್ದಾರೆ.

    ಕಾರ್ಮಿಕರಿಗೆ ಯಾವುದೇ ಕಾಯಿಲೆ ಇಲ್ಲ. ಅವರನ್ನು ಮನೆಗೆ ಕಳುಹಿಸುವ ಬಗ್ಗೆ ಇಂದು ನಿರ್ಧಾರ ತೆಗೆದುಕೊಳ್ಳಲಾಗುವುದು ವೈದ್ಯರು ಹೇಳಿದ್ದಾರೆ. ಸುಮಾರು 17 ದಿನಗಳ ರಕ್ಷಣಾ ಕಾರ್ಯಾಚರಣೆಯ ನಂತರ ಮಂಗಳವಾರ 41 ಕಾರ್ಮಿಕರನ್ನು ಸುರಂಗದಿಂದ ರಕ್ಷಿಸಲಾಗಿತ್ತು. ಇದನ್ನೂ ಓದಿ: 41 ಕಾರ್ಮಿಕರ ರಕ್ಷಣೆ ಬೆನ್ನಲ್ಲೇ ಭಾವುಕರಾಗಿದ್ದ ಪ್ರಧಾನಿ ಮೋದಿ

    ಎನ್‌ಡಿಆರ್‌ಎಫ್‌, ಭಾರತೀಯ ಸೇನೆ, ಪೊಲೀಸರು ಮತ್ತು ಹಲವಾರು ಇತರ ಏಜೆನ್ಸಿಗಳು ಉತ್ತರಾಖಂಡ್‌ನ ಕುಸಿದ ಸಿಲ್ಕ್ಯಾರಾ ಸುರಂಗದ ಕೆಳಗೆ ಸಿಲುಕಿದ್ದ ಕಾರ್ಮಿಕರನ್ನು ರಕ್ಷಿಸಿದ್ದರು. ಕಾರ್ಯಾಚರಣೆಯ ಪ್ರಮುಖ ವ್ಯಕ್ತಿ ಸುರಂಗ ತಜ್ಞ ಅರಾಲ್ಡ್ ಡಿಕ್ಸ್ ಅವರು ರಕ್ಷಣಾ ಸಮಯದಲ್ಲಿ ಸರ್ಕಾರ ಮತ್ತು ಏಜೆನ್ಸಿಗಳಿಗೆ ಸಲಹೆ ನೀಡಿದ್ದರು.

  • ಸುರಂಗದಲ್ಲಿ ಸಿಲುಕಿದ ಕಾರ್ಮಿಕರ ರಕ್ಷಣೆಗೆ ಮಾಸ್ಟರ್‌ ಪ್ಲ್ಯಾನ್‌ – ಏನಿದು ರ‍್ಯಾಟ್‌ಹೋಲ್‌ ಮೈನಿಂಗ್‌?

    ಸುರಂಗದಲ್ಲಿ ಸಿಲುಕಿದ ಕಾರ್ಮಿಕರ ರಕ್ಷಣೆಗೆ ಮಾಸ್ಟರ್‌ ಪ್ಲ್ಯಾನ್‌ – ಏನಿದು ರ‍್ಯಾಟ್‌ಹೋಲ್‌ ಮೈನಿಂಗ್‌?

    ಡೆಹ್ರಾಡೂನ್‌: ಉತ್ತರಾಖಂಡದ ಉತ್ತರಕಾಶಿ ಸುರಂಗದಲ್ಲಿ ಸಿಲುಕಿದ 41 ಕಾರ್ಮಿಕರ (Uttarakhand Tunnel Collapse) ರಕ್ಷಣಾ ಕಾರ್ಯ ಭರದಿಂದ ಸಾಗಿದೆ. ಯಂತ್ರಗಳನ್ನು ಬಳಸದೇ ಮ್ಯಾನುವಲ್‌ ಡ್ರಿಲ್ಲಿಂಗ್‌ ಮೂಲಕವೇ ರಕ್ಷಣಾ ಕಾರ್ಯಾಚರಣೆಗೆ ತಯಾರಿ ನಡೆದಿದೆ.

    ಹೌದು. ಡ್ರಿಲ್ಲಿಂಗ್‌ ಯಂತ್ರಗಳ ಸಮಸ್ಯೆಯಿಂದಾಗಿ ಯಂತ್ರಗಳನ್ನು ಬಳಸದೆಯೇ ಮ್ಯಾನುವಲ್‌ (Manual Drilling) ಡ್ರಿಲ್ಲಿಂಗ್‌ ಕೈಗೊಳ್ಳಲಾಗುತ್ತಿದೆ. ಅದರಲ್ಲೂ, ರ‍್ಯಾಟ್‌ ಹೋಲ್‌ ಮೈನಿಂಗ್‌ (Rat Hole Mining) ಮೂಲಕ 41 ಜನರನ್ನು ರಕ್ಷಿಸಲು ಮಾಸ್ಟರ್‌ ಪ್ಲ್ಯಾನ್‌ ರೂಪಿಸಲಾಗಿದೆ. ಈಗಾಗಲೇ ಸುಮಾರು 12 ತಜ್ಞರ ತಂಡವು ರ‍್ಯಾಟ್‌ ಹೋಲ್‌ ಮೈನಿಂಗ್‌ ಡ್ರಿಲ್ಲಿಂಗ್‌ ಆರಂಭಿಸಿದೆ. ಇದನ್ನೂ ಓದಿ: ಗೃಹಲಕ್ಷ್ಮಿ ಯೋಜನೆ; ಪ್ರತಿ ತಿಂಗಳು 2,000 ರೂ. ಹಣ ಮೊದಲು ಚಾಮುಂಡೇಶ್ವರಿಗೆ ಅರ್ಪಣೆ

    ಏನಿದು ರ‍್ಯಾಟ್‌ ಹೋಲ್‌ ಮೈನಿಂಗ್‌?
    ಚಿಕ್ಕದಾದ ರಂಧ್ರಗಳನ್ನ ಕೊರೆದು ಮನುಷ್ಯರು ಸುಲಭವಾಗಿ ಆ ರಂಧ್ರದಿಂದ ಮೂಲಕ ಹೊರಬರುವಂತೆ ಮಾಡುವುದು. ಉತ್ತರಕಾಶಿ ಸುರಂಗದಲ್ಲಿ ಯಂತ್ರಗಳಿಂದಲೂ ಕೊರೆಯಲು ಸಾಧ್ಯವಾಗದ ಕಾರಣ ಈ ಪ್ಲ್ಯಾನ್‌ ರೂಪಿಸಲಾಗಿದೆ. ಲಂಬವಾಗಿ 86 ಮೀಟರ್‌ ಕೊರೆಯುವ ಸವಾಲಿದ್ದು, ಈಗಾಗಲೇ 36 ಮೀಟರ್‌ ಕೊರೆಯಲಾಗಿದೆ. ಈಗ ಅಡ್ಡಲಾಗಿ ರ‍್ಯಾಟ್‌ ಹೋಲ್‌ ಮೈನಿಂಗ್‌ ತಂತ್ರದ ಮೂಲಕ ಕೊರೆಯುವ ಕೆಲಸ ಆರಂಭಿಸಲಾಗಿದೆ. ಈ ಪ್ಲ್ಯಾನ್‌ ಯಶಸ್ವಿಯಾದರೂ ಕಾರ್ಮಿಕರ ರಕ್ಷಣೆಗೆ ಇನ್ನೂ 3 ದಿನ ಬೇಕಾಗುತ್ತದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: 1 ವರ್ಷದ ಬಳಿಕ ರೇಣುಕಾಚಾರ್ಯ ಅಣ್ಣನ ಮಗ ಸಾವು ಪ್ರಕರಣ ಮುಕ್ತಾಯ; ಅಪಘಾತದಿಂದಲೇ ಸಾವು ಎಂದು ವರದಿ

    ಉತ್ತರಕಾಶಿ ಜಿಲ್ಲೆಯ ಸಿಲ್‌ಕ್ಯಾರ ಹಾಗೂ ದಂಡಲ್‌ಗಾಂವ್‌ಗೆ ಸಂಪರ್ಕ ಕಲ್ಪಿಸಲು ಚಾರ್‌ ಧಾಮ್‌ ರಸ್ತೆ ಯೋಜನೆ ಅಡಿಯಲ್ಲಿ ಸುರಂಗ ಮಾರ್ಗ ನಿರ್ಮಿಸಲಾಗುತ್ತಿದೆ. 4.5 ಕಿಲೋ ಮೀಟರ್‌ ದೂರದ ಸುರಂಗ ನಿರ್ಮಾಣದ ವೇಳೆ ಸುಮಾರು 150 ಮೀಟರ್‌ ಉದ್ದದ ಸುರಂಗ ಕುಸಿದಿತ್ತು. ನವೆಂಬರ್‌ 12ರಂದು ಜಾವ 4 ಗಂಟೆ ಸುಮಾರಿಗೆ ಸುರಂಗ ಕುಸಿದಿದ್ದು, ಕೂಡಲೇ ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಗಿತ್ತು. ಇಷ್ಟಾದರೂ ಕ್ಷಿಪ್ರವಾಗಿ ಕಾರ್ಮಿಕರನ್ನು ರಕ್ಷಣೆ ಮಾಡಲು ಆಗಿರಲಿಲ್ಲ. ಇದನ್ನೂ ಓದಿ: ಬೆಂಗ್ಳೂರಲ್ಲಿ ಹಸುಗೂಸುಗಳ ಮಾರಾಟ ದಂಧೆ – ಬೃಹತ್ ಜಾಲ ಭೇದಿಸಿದ ಸಿಸಿಬಿ, 8 ಮಂದಿ ಅರೆಸ್ಟ್