Tag: uttarakannada

  • ಉ.ಕನ್ನಡದಲ್ಲಿ ಡ್ಯಾಂ ಸಮೀಪದ ರಸ್ತೆ ಬಿರುಕು- ದಾಂಡೇಲಿ ಪಟ್ಟಣ ಜಲಾವೃತ, ಸಂಚಾರ ಬಂದ್

    ಉ.ಕನ್ನಡದಲ್ಲಿ ಡ್ಯಾಂ ಸಮೀಪದ ರಸ್ತೆ ಬಿರುಕು- ದಾಂಡೇಲಿ ಪಟ್ಟಣ ಜಲಾವೃತ, ಸಂಚಾರ ಬಂದ್

    – ಚಿಕ್ಕಮಗ್ಳೂರಲ್ಲಿ ತಗ್ಗಿದ ಮಳೆಯ ಆರ್ಭಟ
    – ಬೆಳಗಾವಿ, ಯಾದಗಿರಿಯಲ್ಲಿ ಪ್ರವಾಹ ಭೀತಿ

    ಕಾರವಾರ/ಬೆಳಗಾವಿ/ಯಾದಗಿರಿ: ಒಂದು ತಿಂಗಳ ಮೊದಲು ಬಂದು ಹೋದ ಮಳೆ ಸೃಷ್ಟಿಸಿದ ಅವಾಂತರ ಒಂದೆರಡಲ್ಲ. ಅಂದು ಸುರಿದ ಮಳೆಯಿಂದಾನೇ ಜನ ಚೇತರಿಸಿಕೊಂಡಿಲ್ಲ. ಅದಾಗಲೇ ಈಗ ಮತ್ತೊಮ್ಮೆ ವರುಣ ಅಬ್ಬರಿಸುತ್ತಿದ್ದು, ಉತ್ತರ ಕರ್ನಾಟಕದಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ.

    ಮುಂಬೈ ಕರ್ನಾಟಕದ ಬಹುತೇಕ ಜಿಲ್ಲೆಗಳು ಮತ್ತೆ ಪ್ರವಾಹಕ್ಕೆ ತುತ್ತಾಗುತ್ತಿವೆ. ಕರಾವಳಿ, ಕೊಡಗು, ಮಲೆನಾಡಿನಲ್ಲಿ ವರುಣ ಬಿಡುವೇ ಕೊಟ್ಟಿಲ್ಲ. ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಸೂಪಾ ಡ್ಯಾಂನಿಂದ ನೀರು ಬಿಡಲಾಗಿದೆ. ಇದರಿಂದ ಜಲಾಶಯದ ಕೆಳಭಾಗದಲ್ಲಿರುವ ರಸ್ತೆಯಲ್ಲಿ ಬಿರುಕು ಮೂಡಿದ್ದು ಆತಂಕ ಮೂಡಿಸಿದೆ. ಜೊತೆಗೆ ಕಾರವಾರ-ದಾಂಡೇಲಿ ರಸ್ತೆಯ ಸೇತುವೆ ಸಂಪೂರ್ಣ ಮುಳುಗಿ ಹೋಗಿದ್ದು ಪ್ರವಾಹದ ಭೀತಿ ಎದುರಾಗಿದೆ.

    ಕಳೆದೆರಡು ದಿನದಿಂದ ಕರಾವಳಿಯಲ್ಲಿ ಭಾರೀ ಮಳೆ ಆಗುತ್ತಿದ್ದು ದಾಂಡೇಲಿ ನಗರ ಭಾಗದಲ್ಲಿ ಕಾಳಿ ನದಿ ತುಂಬಿ ಹರಿಯುತ್ತಿದೆ. ಇದರಿಂದ ಕಾಳಿ ನದಿ ಸೇತುವೆ ಸಂಪೂರ್ಣ ಜಲಾವೃತವಾಗಿದ್ದು ಕಾರವಾರ-ದಾಂಡೇಲಿ ರಸ್ತೆ ಸಂಚಾರ ಸಂಪೂರ್ಣ ಬಂದ್ ಆಗಿದೆ. ನೇತ್ರಾಣಿ ದ್ವೀಪ ಸಮೀಪದ ಅರಬ್ಬಿ ಸಮುದ್ರದಲ್ಲಿ ಮಂಗಳೂರು ಮೂಲದ ಬೋಟ್ ಮುಳುಗಡೆ ಆಗಿದೆ. ಬೋಟ್‍ನಲ್ಲಿ 7ರಿಂದ 8 ಮೀನುಗಾರರು ಇದ್ದ ಶಂಕೆ ವ್ಯಕ್ತಪಡಿಸಲಾಗಿದೆ.

    ಇತ್ತ ಕುಂದಾನಗರಿ ಬೆಳಗಾವಿ ಈಗ ಪ್ರವಾಹ ನಗರಿ ಆಗಿದೆ. 2ನೇ ಬಾರಿಗೆ ನೆರೆ ಎದುರಿಸುತ್ತಿರುವ ಬೆಳಗಾವಿಯಲ್ಲಿ ಹರಿಯುವ ಏಳು ನದಿಗಳು ಸದ್ಯ ಅಪಾಯದ ಮಟ್ಟ ಮೀರಿದೆ. ಬೆಳಗಾವಿಯ ಗೋಕಾಕ್, ರಾಮದುರ್ಗ, ಮೂಡಲಗಿಯಲ್ಲಿ ಪ್ರವಾಹದ ಸ್ಥಿತಿ ನಿರ್ಮಾಣವಾಗಿದೆ. ಮಹಾರಾಷ್ಟ್ರದಿಂದ ಹೆಚ್ಚುವರಿಯಾಗಿ ಎರಡು ಲಕ್ಷ ಕ್ಯೂಸೆಕ್ ಹಾಗೂ ಹಿಡಕಲ್ ಜಲಾಶಯದಿಂದ 25 ಸಾವಿರ ಕ್ಯೂಸೆಕ್ ನೀರನ್ನ ಘಟಪ್ರಭಾ ನದಿಗೆ ಬಿಡಲಾಗುತ್ತಿದೆ.

    ಇದರಿಂದ ಗೋಕಾಕ್ ಫಾಲ್ಸ್ ಮೈದುಂಬಿ ಹರಿಯುತ್ತಿದ್ದು ನೋಡುಗರನ್ನ ತನ್ನತ್ತ ಸೆಳೆಯುತ್ತಿದೆ. ಈ ನಡುವೆ, ಖಾನಾಪುರ ತಾಲೂಕಿನಾದ್ಯಂತ ಭಾರೀ ಮಳೆಯಾಗುತ್ತಿದೆ. ಇದರಿಂದ ಗೋಡೆ ಕುಸಿದು ವಯೋವೃದ್ಧೆ ಗಂಭೀರ ಗಾಯಗೊಂಡಿದ್ದಾರೆ. ಬಡಸ್ ಗ್ರಾಮದ 84 ವರ್ಷದ ವಯೋವೃದ್ಧೆ ರುದ್ರವ್ವಾ ಗಿಡಬಸನವರ(84) ಗಂಭೀರ ಗಾಯಗೊಂಡಿದ್ದು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಸವದತ್ತಿ ತಾಲೂಕಿನಲ್ಲಿರುವ ನವಿಲುತೀರ್ಥ ಜಲಾಶಯದಿಂದ 21 ಸಾವಿರ ಕ್ಯೂಸೆಕ್ ನೀರು ಬಿಟ್ಟಿದ್ದರಿಂದ ರಾಮದುರ್ಗ ತಾಲೂಕಿನಲ್ಲಿ ಪ್ರವಾಹದ ಭೀತಿ ಎದುರಾಗಿದೆ. ಈಗ ಬಿಟ್ಟಿರುವ ನೀರಿನಿಂದಾಗಿ ರಾಮದುರ್ಗ ತಾಲೂಕಿನ ಹಿರೇಹಂಪಿಹೊಳಿ, ಚಿಕ್ಕ ಹಂಪಿಹೊಳಿ, ಅವರಾದಿ, ಸುನ್ನಾಳ, ಸುರೇಬಾನ್ ಸೇರಿದಂತೆ ತಾಲೂಕಿನ ಹತ್ತಕ್ಕೂ ಅಧಿಕ ಗ್ರಾಮಗಳು ಜಲಾವೃತಗೊಂಡಿದೆ.

    ಯಾದಗಿರಿ ಬಸವಸಾಗರ ಜಲಾಶಯದ ಹೊರಹರಿವು ಗಂಟೆಯಿಂದ ಗಂಟೆಗೆ ಹೆಚ್ಚಾಗುತ್ತಿದೆ. ಬಸವಸಾಗರ ಜಲಾಶಯದಿಂದ ಬರೊಬ್ಬರಿ 2.51 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. 30 ಗೆಟ್ ಗಳ ಪೈಕಿ 20 ಗೆಟ್ ಓಪನ್ ಮಾಡಿ ನೀರು ಹೊರಬಿಡಲಾಗುತ್ತಿದೆ. ಇಂದು 3 ಲಕ್ಷ ಕ್ಯೂಸೆಕ್ ನೀರು ಬಿಡುವ ಸಾಧ್ಯತೆಯಿದೆ. ಗ್ರಾಮಗಳಿಗೆ ಮುಳುಗಡೆ ಭೀತಿ ಎದುರಾಗಿದೆ. ಜನ ಆತಂಕದಲ್ಲಿ ದಿನ ಕಳೆಯುತ್ತಿದ್ದಾರೆ.

  • ಮೀನುಗಾರಿಕೆಗೆ ತೆರಳಿದ್ದ ಇಬ್ಬರು ಮೀನುಗಾರರ ಸಾವು

    ಮೀನುಗಾರಿಕೆಗೆ ತೆರಳಿದ್ದ ಇಬ್ಬರು ಮೀನುಗಾರರ ಸಾವು

    ಕಾರವಾರ: ನದಿಯಲ್ಲಿ ಮೀನುಗಾರಿಕೆಗೆ ತೆರಳಿದ್ದ ಇಬ್ಬರು ಮೀನುಗಾರರು ಮೃತಪಟ್ಟಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಇಡಗುಂಜಿಯಲ್ಲಿ ನಡೆದಿದೆ.

    ಪರಮೇಶ್ವರ ಲಕ್ಷ್ಮಣ ಅಂಬಿಗ (42) ಹಾಗೂ ಗಣಪತಿ ತಿಮ್ಮ ಅಂಬಿಗ (25) ಮೃತ ದುರ್ದೈವಿಗಳು. ಇಬ್ಬರೂ ಮೀನುಗಾರರ ಗುರುವಾರ ಇಡಗುಂಜಿ ಸಮೀಪದ ಶರಾವತಿ ನದಿಯಲ್ಲಿ ಮೀನುಗಾರಿಕೆಗೆ ತೆರಳಿದ್ದರು. ಆದರೆ ತಡರಾತ್ರಿಯಾದರೂ ಮನೆಗೆ ಬಂದಿರಲಿಲ್ಲ. ಇದರಿಂದ ಅನುಮಾನಗೊಂಡ ಕುಟುಂಬಸ್ಥರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದರು.

    ಇಂದು ಮುಂಜಾನೆ ಪೊಲೀಸರು ನದಿಯಲ್ಲಿ ಸ್ಥಳದಲ್ಲಿ ಶೋಧ ಕಾರ್ಯ ನಡೆಸಿದ್ದರು. ಈ ವೇಳೆ ಇಬ್ಬರ ಮೃತದೇಹಗಳು ಪತ್ತೆಯಾಗಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಘಟನೆ ಸಂಬಂಧ ಮಂಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಏನು ನಿಮ್ಮ ಶಾಸಕರೇನಾದ್ರು ಸತ್ತೋದ್ರ- ಕೇಂದ್ರ ಸಚಿವ ಹೆಗಡೆ

    ಏನು ನಿಮ್ಮ ಶಾಸಕರೇನಾದ್ರು ಸತ್ತೋದ್ರ- ಕೇಂದ್ರ ಸಚಿವ ಹೆಗಡೆ

    ಉತ್ತರಕನ್ನಡ: ಶಿರಸಿ ತಾಲೂಕಿನ ಬನವಾಸಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತ ಕುಮಾರ್ ಹೆಗಡೆ ಸ್ಥಳೀಯ ಶಾಸಕರ ವಿರುದ್ಧ ಹರಿಹಾಯ್ದಿದ್ದಾರೆ.

    ಇಂದು ಅರಣ್ಯ ಇಲಾಖೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಅನಂಕ ಕುಮಾರ ಹೆಗಡೆ ಪಾಲ್ಗೊಂಡಿದ್ದರು. ಈ ವೇಳೆ ಗ್ರಾಮದ ಮಹಿಳೆಯೊಬ್ಬರು ಹಲವು ವರ್ಷಗಳಿಂದ ಬನವಾಸಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವೈದ್ಯರಿಲ್ಲ, ವೈದ್ಯರನ್ನು ನೇಮಕ ಮಾಡಿಕೊಡಿ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

    ಮಹಿಳೆಗೆ ಉತ್ತರಿಸುತ್ತಾ ನಿಮ್ಮ ಶಾಸಕರೇನಾದ್ರೂ ಸತ್ತು ಹೋದ್ರ? ಎಂದು ಪ್ರಶ್ನಿಸಿ, ಸ್ಥಳೀಯ ಕಾಂಗ್ರೆಸ್ ಶಾಸಕ ಶಿವರಾಮ ಹೆಬ್ಬಾರ್ ಮೇಲಿನ ಕೋಪವನ್ನು ಕಾರ್ಯಕ್ರಮದಲ್ಲೇ ಹೊರಹಾಕಿದ್ದಾರೆ. ಅಲ್ಲದೇ ಇದು ನನ್ನ ವ್ಯಾಪ್ತಿಗೆ ಬರುವುದಿಲ್ಲ. ಇದು ರಾಜ್ಯ ಸರ್ಕಾರಕ್ಕೆ ಬರುತ್ತದೆ ಎಂದು ತಿಳಿಸಿ ಕದಂಬ ಗಿಡ ನೆಟ್ಟು ಕಾರ್ಯಕ್ರಮದಿಂದ ತೆರಳಿದ್ದಾರೆ.

  • ಆಹ್ವಾನಪತ್ರಿಕೆಯಲ್ಲಿ ಹೆಸರು ಹಾಕ್ಸೋದು ಪ್ರೋಟೋಕಾಲ್, ಬರೋದು ಬಿಡೋದು ಸಚಿವರಿಗೆ ಬಿಟ್ಟಿದ್ದು- ಸಿಎಂ

    ಆಹ್ವಾನಪತ್ರಿಕೆಯಲ್ಲಿ ಹೆಸರು ಹಾಕ್ಸೋದು ಪ್ರೋಟೋಕಾಲ್, ಬರೋದು ಬಿಡೋದು ಸಚಿವರಿಗೆ ಬಿಟ್ಟಿದ್ದು- ಸಿಎಂ

    ಬೆಂಗಳೂರು: ಟಿಪ್ಪು ಜಯಂತಿ ಆಮಂತ್ರಣದಲ್ಲಿ ಹೆಸರು ಹಾಕದಂತೆ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಮನವಿ ಮಾಡಿರೋ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಟಾಂಗ್ ನೀಡಿದ್ದಾರೆ.

    ಟಿಪ್ಪು ಜಯಂತಿ ರಾಜ್ಯ ಸರ್ಕಾರದ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಶಿಷ್ಟಚಾರದಂತೆ ಹೆಸರು ಮುದ್ರಣ ಮಾಡಿದ್ದು, ಆಹ್ವಾನ ನೀಡುತ್ತೇವೆ. ಸಮಾರಂಭಕ್ಕೆ ಬರೋದು ಬಿಡೋದು ಅವರಿಗೆ ಬಿಟ್ಟ ವಿಚಾರ ಅಂತ ಸಿದ್ದರಾಮಯ್ಯ ಹೇಳಿದ್ದಾರೆ.

    ಟಿಪ್ಪು ಜಯಂತಿಯ ಆಮಂತ್ರಣ ಪತ್ರಿಕೆಯಲ್ಲಿ ನನ್ನ ಹೆಸರು ನಮೂದಿಸಬೇಡಿ ಎಂದು ಕೇಂದ್ರ ಕೌಶಲ್ಯಾಭಿವೃದ್ಧಿ ಖಾತೆ ಸಚಿವ ಅನಂತ್ ಕುಮಾರ್ ಹೆಗಡೆ ಅವರು ಕರ್ನಾಟಕ ಸರ್ಕಾರದ ಶಿಷ್ಟಾಚಾರ ವಿಭಾಗದ ಮುಖ್ಯ ಕಾರ್ಯದರ್ಶಿ ಹಾಗೂ ಉತ್ತರ ಕನ್ನಡ ಜಿಲ್ಲಾಧಿಕಾರಿ ಎಸ್.ಎಸ್ ನಕುಲ್ ಅವರಿಗೆ ತನ್ನ ಆಪ್ತ ಸಹಾಯಕ ರಮೇಶ್ ಮೂಲಕ ಪತ್ರ ಕಳುಹಿಸಿದ್ದರು.

    ಇದೇ ತಿಂಗಳ 14ರಂದು ಈ ಪತ್ರ ಕಳುಹಿಸಲಾಗಿದ್ದು ನವೆಂಬರ್ 10ರಂದು ಟಿಪ್ಪು ಜಯಂತಿಯನ್ನು ಆಚರಿಸಲಾಗುತ್ತಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಹಾಗೂ ರಾಜ್ಯದ ಯಾವುದೇ ಕಾರ್ಯಕ್ರಮದಲ್ಲಾಗಲೀ ಹಾಗೂ ಆಹ್ವಾನ ಪತ್ರಿಕೆಯಲ್ಲಿ ತಮ್ಮ ಹೆಸರನ್ನು ಹಾಕದಂತೆ ಪತ್ರ ಬರೆದಿದ್ದರು. ಟಿಪ್ಪು ಜಯಂತಿಗೆ ಹಿಂದಿನಿಂದಲೂ ವಿರೋಧ ವ್ಯಕ್ತಪಡಿಸುತ್ತಿದ್ದ ಅನಂತ್ ಕುಮಾರ್ ಹೆಗಡೆ, `ಟಿಪ್ಪು ಜಯಂತಿ ಕಾರ್ಯಕ್ರಮದಲ್ಲಿ ನಾನು ಭಾಗವಹಿಸುವುದಿಲ್ಲ. ಈ ಕಾರಣದಿಂದಾಗಿ ನನ್ನ ಹೆಸರನ್ನು ಆಮಂತ್ರಣ ಪತ್ರಿಕೆಯಲ್ಲಿ ಹಾಕಬೇಡಿ’ ಎಂದು ಆಪ್ತಕಾರ್ಯದರ್ಶಿ ಮೂಲಕ ಕಳುಹಿಸಿರುವ ಪತ್ರದಲ್ಲಿ ತಿಳಿಸಿದ್ದರು.

    ಕಳೆದ ಬಾರಿಯೂ ಟಿಪ್ಪು ಜಯಂತಿ ಆಹ್ವಾನ ಪತ್ರಿಕೆಯಲ್ಲಿ ತನ್ನ ಹೆಸರನ್ನು ಹಾಕದಂತೆ ಪತ್ರ ಬರೆದಿದ್ದಲ್ಲದೇ ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾಡಳಿತ ಆಯೋಜಿಸಿದ್ದ ಟಿಪ್ಪು ಜಯಂತಿಯಲ್ಲಿ ಕೂಡ ಭಾಗಿಯಾಗದೇ ಟಿಪ್ಪು ಜಯಂತಿಗೆ ಸಂಸದ ಅನಂತ ಕುಮಾರ್ ಹೆಗಡೆ ವಿರೋಧ ವ್ಯಕ್ತಪಡಿಸಿದ್ದರು.

  • ಹಣ್ಣಿನ ಅಂಗಡಿಗೆ ಆಕಸ್ಮಿಕ ಬೆಂಕಿ- 2 ಲಕ್ಷಕ್ಕೂ ಹೆಚ್ಚು ನಷ್ಟ

    ಹಣ್ಣಿನ ಅಂಗಡಿಗೆ ಆಕಸ್ಮಿಕ ಬೆಂಕಿ- 2 ಲಕ್ಷಕ್ಕೂ ಹೆಚ್ಚು ನಷ್ಟ

    ಕಾರವಾರ: ಹಣ್ಣಿನ ಅಂಗಡಿಗೆ ಆಕಸ್ಮಿಕ ಬೆಂಕಿ ತಗುಲಿ 2 ಲಕ್ಷಕ್ಕೂ ಹೆಚ್ಚು ಹಾನಿಯಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಗರದ ಶಿವಾಜಿ ವೃತ್ತದ ಬಳಿ ನೆಡೆದಿದೆ.

    ಗುರುವಾರ ತಡರಾತ್ರಿ ಬೆಂಕಿ ಕಾಣಿಸಿಕೊಂಡಿದ್ದು ಬೆಂಕಿಗಯ ಕೆನ್ನಾಲಿಗೆಗೆ ಅಂಗಡಿ ಯಲ್ಲಿ ಸಂಗ್ರಹಿಸಿಟ್ಟಿದ್ದ ಹಣ್ಣುಗಳು ಹಾಗೂ ಪೀಠೋಪಕರಣಗಳು ಬೆಂಕಿಗಾಹುತಿಯಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದಾರೆ.

    ಅಶೋಕ ಜಾಧವ್ ಎಂಬವರಿಗೆ ಸೇರಿದ ಕಟ್ಟಡ ಇದಾಗಿದ್ದು, ಅಬ್ದುಲ್ ಜಬ್ಬಾರ್ ಎನ್ನುವವರು ಈ ಕಟ್ಟಡದಲ್ಲಿ ಹಣ್ಣಿನ ಅಂಗಡಿ ನಡೆಸುತ್ತಿದ್ದರು. ವಿದ್ಯುತ್ ಶಾರ್ಟ್ ಸರ್ಕಿಟ್ ನಿಂದ ಈ ಘಟನೆ ಸಂಭವಿಸಿರಬಹುದೆಂದು ಶಂಕಿಸಲಾಗಿದೆ.

    ಈ ಸಂಬಂಧ ಶಿರಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಮೊಟ್ಟೆ ಎಂದು ತಿಳಿದು ಪೈಪನ್ನೇ ನುಂಗಿದ ನಾಗರಹಾವು!

    ಮೊಟ್ಟೆ ಎಂದು ತಿಳಿದು ಪೈಪನ್ನೇ ನುಂಗಿದ ನಾಗರಹಾವು!

    ಕಾರವಾರ: ನಾಗರಹಾವು ಕೋಳಿ, ಕುರಿ, ನಾಯಿ ನುಂಗುವುದನ್ನು ಕೇಳಿರುತ್ತೀರಿ ಅಥವಾ ನೋಡಿರುತ್ತೀರಿ. ಆದರೆ ಇಲ್ಲಿ ನಾಗರಹಾವೊಂದು ಮೊಟ್ಟೆ ಎಂದು ತಪ್ಪಾಗಿ ತಿಳಿದು ಪೈಪನ್ನ ನುಂಗಿದ ವಿಚಿತ್ರ ಘಟನೆ ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆದಿದೆ.

    ಹೊಟ್ಟೆ ಹಸಿವು ತಾಳಲಾರದೆ ಬೇಟೆ ಅರಸಿ ಬಂದ ಹಾವೊಂದು ಶಿರಸಿಯ ಚಿಪ್ಪಗಿ ಗ್ರಾಮದ ಅಬ್ದುಲ್ ಎಂಬುವವರ ಮನೆಗೆ ಬಂದಿದೆ. ಕೋಳಿ ಗೂಡಿಗೆ ನುಗ್ಗಿದ ಹಾವು, ಮೊಟ್ಟೆ ಎಂದುಕೊಂಡು ಪಕ್ಕದಲ್ಲೇ ಇದ್ದ ಎರಡೂವರೆ ಅಡಿ ಉದ್ದದ ಪೈಪನ್ನು ನುಂಗಿದೆ.

    ಬಳಿಕ ತುಂಬಾ ಸಮಯ ಒದ್ದಾಡಿದ ಹಾವನ್ನು ಉರಗ ತಜ್ಞ ಪ್ರಶಾಂತ್ ಹುಲೇಕಲ್ ಸ್ಥಳಕ್ಕೆ ಬಂದು ರಕ್ಷಿಸಿದ್ದಾರೆ.

    https://www.youtube.com/watch?v=23e5Ur5e-qs&feature=youtu.be