Tag: uttarakannada

  • ಉತ್ತರಕನ್ನಡ ಜಿಲ್ಲೆಯಲ್ಲಿ ಮಳೆಯ ಅವಾಂತರ – ಕಾಳಜಿ ಕೇಂದ್ರ ತೆರೆದ ಜಿಲ್ಲಾಡಳಿತ

    ಉತ್ತರಕನ್ನಡ ಜಿಲ್ಲೆಯಲ್ಲಿ ಮಳೆಯ ಅವಾಂತರ – ಕಾಳಜಿ ಕೇಂದ್ರ ತೆರೆದ ಜಿಲ್ಲಾಡಳಿತ

    ಕಾರವಾರ : ಉತ್ತರ ಕನ್ನಡ (Uttara Kannada) ಜಿಲ್ಲೆಯಲ್ಲಿ ಮಳೆಯ (Rain) ಅಬ್ಬರ ಇಂದು ಸಹ ಮುಂದುವರೆದಿದೆ. ಇದರಿಂದಾಗಿ ಕರಾವಳಿ (Karavali) ಭಾಗದ ತಗ್ಗು ಪ್ರದೇಶದಲ್ಲಿ ನೀರು ನುಗ್ಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.

    ಕಾರವಾರ ತಾಲೂಕಿನ ಬಿಣಗಾ, ಅರಗಾ ಭಾಗದಲ್ಲಿ ಗುಡ್ಡದಿಂದ ಹರಿದು ಬಂದ ನೀರು ಹೆದ್ದಾರಿ ಮತ್ತು ಮನೆಗಳಿಗೆ ನುಗ್ಗಿದೆ. ಬಿಣಗಾದಲ್ಲಿ ಮೂಡಲಮಕ್ಕಿ ಗ್ರಾಮದ ಸೇತುವೆ ಮುಳುಗಿ 300 ಮನೆಗಳಿಗೆ ಸಂಪರ್ಕ ಕಡಿತವಾಗಿದೆ. ಅರಗಾದ ನೌಕಾ ನೆಲೆ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನೀರು ತುಂಬಿ ನೌಕಾ ನೆಲೆಯ ಹೆದ್ದಾರಿ ಪ್ರದೇಶ ಸಂಪೂರ್ಣ ಜಲಾವೃತವಾಗಿ ವಾಹನ ಸವಾರರು ಪರದಾಡುವಂತಾಗಿದೆ. ಕಾರವಾರದ ನೌಕಾನೆಲೆ ಭಾಗದ ಬೈತಕೋಲಿನಲ್ಲಿ ಗುಡ್ಡ ಕುಸಿತವಾಗಿದೆ. ನಗರದ ಪದ್ಮನಾಭ ನಗರ, ಕಾಯ್ಕಿಣಿ ರಸ್ತೆಯಲ್ಲಿ ಹಲವು ಮನೆಗಳಿಗೆ ನೀರು ನುಗ್ಗಿ ಲಕ್ಷಾಂತರ ಮೌಲ್ಯದ ವಸ್ತುಗಳು ನಾಶವಾಗಿದೆ. ಇದನ್ನೂ ಓದಿ: ಭಾರೀ ಮಳೆಗೆ ತುಂಗಾ ಜಲಾಶಯ ಭರ್ತಿ

    ಜಿಲ್ಲೆಯ ಕುಮಟಾದ ಹಂದಿಗೋಣ ಭಾಗದಲ್ಲಿ ಅಘನಾಶಿನಿ ನದಿಯಲ್ಲಿ ಪ್ರವಾಹವುಂಟಾಗಿದ್ದು, ಹಲವು ಮನೆಗಳಿಗೆ ನೀರು ನುಗ್ಗಿದೆ. ಈ ಹಿನ್ನಲೆಯಲ್ಲಿ ಕುಮಟಾದ ಹಂದಿಗೋಣ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಾಳಜಿ ಕೇಂದ್ರವನ್ನು (Care Center) ಜಿಲ್ಲಾಡಳಿತ ತೆರೆದಿದ್ದು, 6 ಜನ ಸಂತ್ರಸ್ಥರನ್ನು ಕಾಳಜಿ ಕೇಂದ್ರಕ್ಕೆ ರವಾನೆ ಮಾಡಲಾಗಿದೆ. ಇದನ್ನೂ ಓದಿ: ಹಾಸನ ಜಿಲ್ಲೆಗೆ ಮುಂಗಾರು ಆಗಮನ- ಜಿಲ್ಲೆಯ ಹಲವೆಡೆ ಹಾನಿ

    ಭಟ್ಕಳದ ರಂಗಿನಕಟ್ಟಾ ಸರ್ಕಲ್ ಬಳಿ ರಾಷ್ಟ್ರೀಯ ಹೆದ್ದಾರಿ 66 ಜಲಾವೃತವಾಗಿದ್ದು, ವಾಹನ ಸಂಚಾರ ಸ್ತಬ್ದವಾಗಿದೆ. ಇನ್ನು ಗಾಳಿ ಮಳೆಗೆ ಭಟ್ಕಳದ ಶಿರಾಲಿಯ ಬೇಳೂರ್ ಬಾಯರ್ ಫ್ಯಾಕ್ಟರಿಯ ಮೇಲ್ಚಾವಣಿಯ ಶೀಟುಗಳು ಹಾರಿಹೋಗಿ ಮಳೆ ನೀರು ಯಂತ್ರೋಪಕರಣಗಳ ಮೇಲೆ ಬಿದ್ದು ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ. ಇದಲ್ಲದೇ ಭಟ್ಕಳ ತಾಲೂಕಿನ ಹೆದ್ದಾರಿ ಭಾಗದ ತಗ್ಗು ಪ್ರದೇಶಕ್ಕೆ ನೀರು ನುಗ್ಗಿದ್ದು, ಹಲವು ಮನೆಗಳು ಜಲಾವೃತವಾಗಿ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದನ್ನೂ ಓದಿ: ದೆಹಲಿಗೆ ಮಾನ್ಸೂನ್ ಎಂಟ್ರಿ- ರಾಷ್ಟ್ರ ರಾಜಧಾನಿ ಕೂಲ್ ಕೂಲ್

    ಇನ್ನು ಹೊನ್ನಾವರದಲ್ಲಿ ಮಳೆಯ ಅಬ್ಬರ ಮುಂದುವರೆದಿದ್ದು, ಶರಾವತಿ ತೀರದಲ್ಲಿ ಪ್ರವಾಹದ ಸ್ಥಿತಿ ನಿರ್ಮಾಣವಾಗಿದೆ. ಗುಂಡ್ಲಬಾಳದ ತಗ್ಗು ಪ್ರದೇಶದಲ್ಲಿ ನೀರು ನುಗ್ಗಿದ್ದು, ತೋಟಗಳು ಜಲಾವೃತವಾಗಿದೆ. ಭಾರೀ ಮಳೆಯ ಹಿನ್ನೆಲೆ ಜಿಲ್ಲೆಯಾದ್ಯಂತ ರೆಡ್ ಅಲರ್ಟ್ ನೀಡಲಾಗಿದ್ದು, ಶಾಲಾ ಕಾಲೇಜುಗಳಿಗೆ ರಜೆ (Holiday) ನೀಡಲಾಗಿದೆ. ಇನ್ನೂ ಮೂರು ದಿನ ಕರಾವಳಿ ಭಾಗದಲ್ಲಿ ಮಳೆ ಮುಂದುವರೆಯಲಿದ್ದು, ನದಿ ಪಾತ್ರದ ಜನರು ಬೇರಡೆ ಸ್ಥಳಾಂತರಗೊಳ್ಳಲು ಜಿಲ್ಲಾಡಳಿತ ಸೂಚನೆ ನೀಡಿದೆ. ಇದನ್ನೂ ಓದಿ: ಇಂದಿನಿಂದ 4 ದಿನಗಳ ಕಾಲ ರಾಜ್ಯದ ಹಲವೆಡೆ ಭಾರೀ ಮಳೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಉತ್ತರ ಕನ್ನಡದಲ್ಲಿ ಭಾರೀ ಮಳೆ, ಗುಡ್ಡಕುಸಿತ- ಹಿಮಾಚಲ, ಉತ್ತರಾಖಂಡದಲ್ಲಿ ದಿಢೀರ್ ಪ್ರವಾಹ ಅವಾಂತರ

    ಉತ್ತರ ಕನ್ನಡದಲ್ಲಿ ಭಾರೀ ಮಳೆ, ಗುಡ್ಡಕುಸಿತ- ಹಿಮಾಚಲ, ಉತ್ತರಾಖಂಡದಲ್ಲಿ ದಿಢೀರ್ ಪ್ರವಾಹ ಅವಾಂತರ

    – ರಾಜ್ಯದಲ್ಲಿ 61%ರಷ್ಟು ಮಳೆ ಕೊರತೆ

    ಬೆಂಗಳೂರು: ರಾಜ್ಯದಲ್ಲಿ ಇದೀಗ ಮುಂಗಾರು ಚುರುಕು ಪಡೆಯುತ್ತಿದೆ. ಆದರೆ ನಿರೀಕ್ಷೆಯಷ್ಟು ಪ್ರಮಾಣದಲ್ಲಿ ಮಳೆ ಎಲ್ಲಾ ಕಡೆ ವ್ಯಾಪಿಸಿಲ್ಲ. ಇಂದು ಉತ್ತರಕನ್ನಡ (Rain in Uttarakannada) ದಲ್ಲಿ ಭಾರೀ ಮಳೆಯಾಗಿದೆ.

    ಕಾರವಾರ (Karwar) ದ ಜನವಸತಿ ಪ್ರದೇಶಕ್ಕೆ ನೀರು ನುಗ್ಗಿದೆ. ಬಿಣಗಾ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ರಸ್ತೆ ಮೇಲೆ ಬೃಹತ್ ಬಂಡೆ ಉರುಳಿದೆ. ಪರಿಣಾಮ ಏಕ ಮುಖ ಸಂಚಾರ ಬಂದ್ ಮಾಡಲಾಗಿದೆ. ಅವಘಡಕ್ಕೆ ಅವೈಜ್ಞಾನಿಕ ಕಾಮಗಾರಿ ಕಾರಣ ಎನ್ನಲಾಗ್ತಿದೆ. ಹೊನ್ನಾವರದ ಕಡ್ನೀರ್ ಬಳಿ ರಸ್ತೆಗೆ ಮರ ಬಿದ್ದು ಸಂಚಾರ ಅಸ್ತವ್ಯಸ್ತವಾಗಿದೆ.

    ಉಡುಪಿ, ದಕ್ಷಿಣ ಕನ್ನಡ (Udupi, Dakshina Kannada) ದಲ್ಲೂ ಮಳೆಯಾಗ್ತಿದೆ. ಬೆಳಗಾವಿಯಲ್ಲೂ ಒಂದಿಷ್ಟು ಮಳೆಯಾಗಿದೆ. ಆದರೆ ಇದು ಕೃಷಿಗೆ ಸಾಕಾಗ್ತಿಲ್ಲ. ಹೀಗಾಗಿ ಜನ ಕಪ್ಪೆ ಮದುವೆ, ಕತ್ತೆ ಮದುವೆಗಳಿಗೆ ಮೊರೆ ಹೋಗ್ತಿದ್ದಾರೆ. ವಿಜಯಪುರದ ಕಲಕೇರಿಯ ಜನ ಮಳೆಗಾಗಿ ಸಮಾಧಿಗಳಿಗೆ ನೀರುಣಿಸುವ ಶಾಸ್ತ್ರ ಮಾಡಿದ್ದಾರೆ. ಒಟ್ಟಾರೆ ರಾಜ್ಯದಲ್ಲಿ ಮಳೆ ಚಿತ್ರಣ ಆಶಾದಾಯಕವಾಗಿಲ್ಲ. ಕಳೆದ 26ದಿನದಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ಒಟ್ಟಾರೆ 61%ರಷ್ಟು ಮಳೆ ಕೊರತೆಯಾಗಿದೆ. ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯ ಮೊಬೈಲ್ ಬಳಸುತ್ತಿಲ್ಲವಂತೆ!- ಕಾರಣ ಇಲ್ಲಿದೆ

    ಇತ್ತ ಮುಂಗಾರು ಮಾರುತಗಳು ದೇಶಾದ್ಯಂತ ವ್ಯಾಪಿಸಿವೆ. ಪರಿಣಾಮ ಹಲವು ರಾಜ್ಯಗಳಲ್ಲಿ ಕುಂಭದ್ರೋಣ ಮಳೆ ಆಗ್ತಿದೆ. ಪ್ರವಾಹ, ಮೇಘಸ್ಫೋಟ, ಭೂಕುಸಿತಗಳು ಉಂಟಾಗಿ ನಾನಾ ಅವಾಂತರಗಳು ಉಂಟಾಗ್ತಿವೆ. ಹಿಮಾಚಲಪ್ರದೇಶದ ಬಾಗಿಪುಲ್‍ನಲ್ಲಿ ದಿಢೀರ್ ಪ್ರವಾಹ ಉಂಟಾಗಿ 200 ಮಂದಿ ಅಪಾಯಕ್ಕೆ ಸಿಲುಕಿದ್ದಾರೆ. ಕುಲ್ಲು-ಮಂಡಿ ಹೈವೇಯಲ್ಲಿ ಗುಡ್ಡ ಕುಸಿತ ಉಂಟಾದ ಪರಿಣಾಮ ಸುಮಾರು 15 ಕಿಲೋಮೀಟರ್‍ನಷ್ಟು ಉದ್ದಕ್ಕೆ ವಾಹನಗಳು ಸಾಲುಗಟ್ಟಿವೆ. ಹಿಂದೆ ಹೋಗಲು ಆಗ್ತಿಲ್ಲ ಮುಂದೆ ಹೋಗಲು ದಾರಿ ಇಲ್ಲ. ಅಲ್ಲೆಲ್ಲೂ ಊಟ ವಸತಿಗಾಗಿ ಕನಿಷ್ಠ ಹೋಟೆಲ್ ಕೂಡ ಇಲ್ಲ. ಪ್ರವಾಸಿಗರಂತೂ ದಿಕ್ಕು ತೋಚದೇ ಕುಳಿತುಬಿಟ್ಟಿದ್ದಾರೆ.

    ಕಾಮಾಂಡ್ ಪ್ರಾಂತ್ಯದಲ್ಲಿ ಹತ್ತಾರು ವಾಹನಗಳು ಸಿಲುಕಿವೆ. ಕೆಲವು ವಾಹನಗಳು ನೀರಲ್ಲಿ ಕೊಚ್ಚಿ ಹೋಗಿವೆ. ಮುಂದಿನ ಐದು ದಿನ ಭಾರೀ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಉತ್ತರಾಖಂಡ್, ಹಿಮಾಚಲದಲ್ಲಿ ಮಳೆಗೆ ಐದಾರು ಮಂದಿ ಬಲಿ ಆಗಿದ್ದಾರೆ. ಕೇದಾರನಾಥ ಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಅತ್ತ ಅಸ್ಸಾಂನಲ್ಲಿ ರಣಭೀಕರ ಪ್ರವಾಹಕ್ಕೆ ತತ್ತರಿಸಿದೆ. 15 ಜಿಲ್ಲೆಗಳ 2.72 ಲಕ್ಷ ಮಂದಿ ಪ್ರವಾಹ ಸಂತ್ರಸ್ತರಾಗಿದ್ದಾರೆ. ಮಹಾರಾಷ್ಟ್ರ ಕರಾವಳಿಯಲ್ಲಿ ಭಾರೀ ಮಳೆ ಆಗ್ತಿದೆ. ಒಡಿಶಾ, ರಾಜಸ್ಥಾನ, ಮಧ್ಯಪ್ರದೇಶ, ಗೋವಾ, ಛತ್ತೀಸ್‍ಘಡ, ಹಿಮಾಚಲ ಪ್ರದೇಶ, ಹರಿಯಾಣ, ಪಂಜಾಬ್ ಮತ್ತು ಈಶಾನ್ಯ ರಾಜ್ಯಗಳಲ್ಲಿ ಭಾರೀ ಮಳೆ ಆಗಲಿದೆ ಎಂದು ಐಎಂಡಿ ತಿಳಿಸಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_title” view=”carousel” /]

  • ಉತ್ತರ ಕನ್ನಡದಲ್ಲಿ ಬಿಜೆಪಿಗೆ ಶಾಕ್ – ಕಾಂಗ್ರೆಸ್‍ಗೆ 4 ಕ್ಷೇತ್ರಗಳಲ್ಲಿ ಜಯ

    ಉತ್ತರ ಕನ್ನಡದಲ್ಲಿ ಬಿಜೆಪಿಗೆ ಶಾಕ್ – ಕಾಂಗ್ರೆಸ್‍ಗೆ 4 ಕ್ಷೇತ್ರಗಳಲ್ಲಿ ಜಯ

    ಕಾರವಾರ: ಉತ್ತರ ಕನ್ನಡ (Uttara Kannada) ಜಿಲ್ಲೆಯ 6 ಕ್ಷೇತ್ರಗಳ ಫಲಿತಾಂಶ ಪ್ರಕಟವಾಗಿದೆ. ಈ ಬಾರಿ 6 ಕ್ಷೇತ್ರಗಳಲ್ಲಿ 4 ಕಾಂಗ್ರೆಸ್, 2 ಕಡೆ ಬಿಜೆಪಿ ಗೆಲುವು ಸಾಧಿಸಿದೆ.

    ಶಿರಸಿ: ಬಿಜೆಪಿ (BJP) ಅಭ್ಯರ್ಥಿಯಾಗಿ ಸತತ 6 ಬಾರಿ ಗೆಲುವು ಸಾಧಿಸಿದ್ದ ವಿಶ್ವೇಶ್ವರ ಹೆಗಡೆ ಕಾಗೇರಿಗೆ (Vishweshwar Hegde Kageri) ಈ ಬಾರಿ ಹೀನಾಯ ಸೋಲಾಗಿದೆ. ಸ್ಪೀಕರ್ ಕಾಗೇರಿ ವಿರುದ್ಧ ಕಾಂಗ್ರೆಸ್ (Congress) ಅಭ್ಯರ್ಥಿ ಭೀಮಣ್ಣ ನಾಯ್ಕ್‌ (Bimanna Naik) ಗೆಲುವು ಭರ್ಜರಿ ಗೆಲುವು ಸಾಧಿಸಿದ್ದಾರೆ.

    ಶಿರಸಿ (Sirsi) ಕ್ಷೇತ್ರದಲ್ಲಿ ಕಾಂಗ್ರೆಸ್‍ಯಾಗಿ ಅಭ್ಯರ್ಥಿ ಭೀಮಣ್ಣ ನಾಯ್ಕ್, ಬಿಜೆಪಿಯ ಅಭ್ಯರ್ಥಿಯಾಗಿ ವಿಶ್ವೇಶ್ವರ ಹೆಗಡೆ ಕಾಗೇರಿ, ಜೆಡಿಎಸ್ (JDS) ಅಭ್ಯರ್ಥಿ ಉಪೇಂದ್ರ ಪೈ ಸ್ಪರ್ಧಿಸಿದ್ದರು.

    ಕಾರವಾರ: ಹಾಲಿ ಶಾಸಕ ಬಿಜೆಪಿ ಅಭ್ಯರ್ಥಿ ರೂಪಾಲಿ ನಾಯ್ಕ್ ಅವರು ಕಾರವಾರ (Karwar) ಕ್ಷೇತ್ರದಲ್ಲಿ ಹೀನಾಯ ಸೋಲು ಅನುಭವಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ರೂಪಾಲಿ ನಾಯ್ಕ್ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಸೈಲ್ ಭರ್ಜರಿ ಗೆಲುವು ಸಾಧಿಸಿದ್ದಾರೆ.

    ಕಾರವಾರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸತೀಶ್ ಸಾಯಿಲ್, ಬಿಜೆಪಿ ಅಭ್ಯರ್ಥಿಯಾಗಿ ರೂಪಾಲಿ ನಾಯ್ಕ್, ಜೆಡಿಎಸ್ ಅಭ್ಯರ್ಥಿಯಾಗಿ ಚೈತ್ರಾ ಕೊಟಾರ್ಕರ್ ಸ್ಪರ್ಧಿಸಿದ್ದರು.

    ಯಲ್ಲಾಪುರ: ಬಿಜೆಪಿ ಅಭ್ಯರ್ಥಿಯಾದ ಸಚಿವ ಶಿವರಾಮ ಹೆಬ್ಬಾರ್ (Shivaram Hebbar) ಗೆಲುವು ಸಾಧಿಸಿದ್ದಾರೆ. ಯಲ್ಲಾಪುರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಶಿವರಾಮ ಹೆಬ್ಬಾರ್, ಕಾಂಗ್ರೆಸ್ ಅಭ್ಯರ್ಥಿಯಾಗಿ ವಿ.ಎಸ್ ಪಾಟೀಲ್, ಜೆಡಿಎಸ್ ಅಭ್ಯರ್ಥಿಯಾಗಿ ನಾಗೇಶ್ ನಾಯ್ಕ್ ಸ್ಪರ್ಧಿಸಿದ್ದರು.

    ಕುಮಟಾ: ಬಿಜೆಪಿ ಅಭ್ಯರ್ಥಿ ಹಾಗೂ ಹಾಲಿ ಶಾಸಕರಾದ ದಿನಕರ್ ಶೆಟ್ಟಿ  ಗೆಲುವು ಸಾಧಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ದಿನಕರ್ ಶೆಟ್ಟಿ ಹಾಗೂ ಜೆಡಿಎಸ್ ಅಭ್ಯರ್ಥಿ ಸೂರಜ್ ನಾಯ್ಕ್‍ಗೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಆದರೆ ಕೊನೆ ಕ್ಷಣದಲ್ಲಿ ಬಿಜೆಪಿ ಅಭ್ಯರ್ಥಿ ದಿನಕರ್ ಶೆಟ್ಟಿ  ಗೆಲುವು ಸಾಧಿಸಿದ್ದಾರೆ.

    ಕುಮಟಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಸೂರಜ್ ನಾಯ್ಕ್, ಬಿಜೆಪಿ ಅಭ್ಯರ್ಥಿಯಾಗಿ ದಿನಕರ್ ಶೆಟ್ಟಿ, ಕಾಂಗ್ರೆಸ್ ಅಭ್ಯರ್ಥಿಯಾಗಿ ನಿವೇದಿತ್ ಆಳ್ವ ಸ್ಪರ್ಧಿಸಿದ್ದರು.

    ಹಳಿಯಾಳ: ಹಾಲಿ ಶಾಸಕರಾದ ಕಾಂಗ್ರೆಸ್ ಅಭ್ಯರ್ಥಿ ಆರ್.ವಿ ದೇಶಪಾಂಡೆ ಗೆಲುವು ಸಾಧಿಸಿದ್ದಾರೆ. ಹಳಿಯಾಳದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಆರ್.ವಿ ದೇಶಪಾಂಡೆ ವಿರುದ್ಧ ಬಿಜೆಪಿಯ ಅಭ್ಯರ್ಥಿಯಾಗಿ ಸುನೀಲ್ ಹೆಗಡೆ ಹಾಗೂ ಜೆಡಿಎಸ್ ಅಭ್ಯರ್ಥಿಯಾಗಿ ಎಸ್.ಎಲ್.ಘೋಟ್ನೇಕರ್ ಸ್ಪರ್ಧಿಸಿದ್ದರು. ಇದನ್ನೂ ಓದಿ: Karnataka Election 2023 Result – ಕಾಂಗ್ರೆಸ್‌ 135, ಬಿಜೆಪಿ 65, ಜೆಡಿಎಸ್‌ 20 ಮುನ್ನಡೆ LIVE Updates

    ಭಟ್ಕಳ: ಹಾಲಿ ಶಾಸಕ ಬಿಜೆಪಿ ಅಭ್ಯರ್ಥಿಯಾದ ಸುನೀಲ್ ನಾಯ್ಕ್ ಈ ಬಾರಿ ಸೋಲನುಭವಿಸಿದ್ದಾರೆ. ಸುನೀಲ್ ನಾಯ್ಕ್ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮಾಂಕಾಳ್ ವೈದ್ಯ ಭರ್ಜರಿ ಗೆಲುವು ಸಾಧಿಸಿದ್ದಾರೆ.

    ಭಟ್ಕಳದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸುನೀಲ್ ನಾಯ್ಕ್, ಕಾಂಗ್ರೆಸ್ ಅಭ್ಯರ್ಥಿಯಾಗಿ ಮಾಂಕಾಳ್ ವೈದ್ಯ, ಜೆಡಿಎಸ್ ಅಭ್ಯರ್ಥಿಯಾಗಿ ನಾಗೇಂದ್ರ ನಾಯ್ಕ್ ಸ್ಪರ್ಧಿಸಿದ್ದರು. ಇದನ್ನೂ ಓದಿ:  ರಾಜ್ಯದ ಚುನಾವಣಾ ಫಲಿತಾಂಶ ಲೋಕಸಭೆಗೆ ದಿಕ್ಸೂಚಿ ಅಲ್ಲ: ಬಿಎಸ್‍ವೈ

  • ನಿತ್ರಾಣಗೊಂಡಿದ್ದ ಕಾಡುಕೋಣದ ರಕ್ಷಣೆ

    ನಿತ್ರಾಣಗೊಂಡಿದ್ದ ಕಾಡುಕೋಣದ ರಕ್ಷಣೆ

    ಕಾರವಾರ: ಅರಣ್ಯ (Forest) ಪ್ರದೇಶದಲ್ಲಿ ಗಾಯಗೊಂಡು ನಿತ್ರಾಣ ಸ್ಥಿತಿಯಲ್ಲಿ ಬಿದ್ದುಕೊಂಡಿದ್ದ ಕಾಡುಕೋಣವನ್ನು ರಕ್ಷಣೆ ಮಾಡಲಾಗಿದೆ.

    ಉತ್ತರಕನ್ನಡ (UttaraKannada) ಜಿಲ್ಲೆಯ ಸಿದ್ದಾಪುರ ತಾಲೂಕಿನ ಹೆಗ್ಗೆಕೊಪ್ಪ ಗ್ರಾಮದ ನೆಲ್ಲಿಕೊಪ್ಪ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಕಾಡುಕೋಣವೊಂದು ಗಾಯಗೊಂಡು ನಿತ್ರಾಣವಾಗಿ ಅಸಹಾಯಕ ಸ್ಥಿತಿಯಲ್ಲಿ ಬಿದ್ದುಕೊಂಡಿತ್ತು. ಇದನ್ನು ಗಮನಿಸಿದ ಸ್ಥಳೀಯರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಈ ವೇಳೆ ಶಿವಮೊಗ್ಗ ವನ್ಯಜೀವಿ ವಿಭಾಗದ ವೈದ್ಯ ಡಾ. ಮುರಳಿ ಮನೋಹರ, ಡಾ. ವಿನಯ ಅವರು ಸ್ಥಳಕ್ಕೆ ಧಾವಿಸಿ ಕಾಡುಕೋಣಕ್ಕೆ (Gaur) ಸೂಕ್ತ ಚಿಕಿತ್ಸೆ ನೀಡಿದ್ದಾರೆ.

    ಬಳಿಕ ಅರಣ್ಯ ಇಲಾಖೆ ಸಿಬ್ಬಂದಿ ಸಹಾಯದೊಂದಿಗೆ ಕಾಡುಕೋಣವನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ. ಎಲ್ಲಾ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು ಕಾಡುಕೋಣಕ್ಕೆ ಚಿಕಿತ್ಸೆ ನೀಡಿರುವುದಾಗಿ ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

    ಈ ಕಾರ್ಯಾಚರಣೆಯಲ್ಲಿ ಡಾ. ಅಜ್ಜಯ್ಯ, ಎಸಿಎಫ್ ಹರೀಶ್, ಪಶು ಇಲಾಖೆಯ ಡಾ. ವಿವೇಕ್ ಹೆಗಡೆ ಮತ್ತು ವಲಯ ಅರಣ್ಯ ಅಧಿಕಾರಿ ಬಸವರಾಜ್ ಸೇರಿದಂತೆ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು. ಇದನ್ನೂ ಓದಿ: ಪೌರ ಕಾರ್ಮಿಕರ ಕೆಲಸ ನೋಡಿದ್ರೆ ಕಣ್ಣೀರು ಬರುತ್ತೆ – ಬೊಮ್ಮಾಯಿ ಭಾವುಕ

    Live Tv
    [brid partner=56869869 player=32851 video=960834 autoplay=true]

  • 16ರ ಬಾಲಕಿ ವರಿಸಿದ 52ರ ವ್ಯಕ್ತಿ – ಮೂರು ತಿಂಗಳ ಬಳಿಕ ಬಯಲಾಯ್ತು ರಹಸ್ಯ

    16ರ ಬಾಲಕಿ ವರಿಸಿದ 52ರ ವ್ಯಕ್ತಿ – ಮೂರು ತಿಂಗಳ ಬಳಿಕ ಬಯಲಾಯ್ತು ರಹಸ್ಯ

    ಕಾರವಾರ: 52 ವರ್ಷದ ವ್ಯಕ್ತಿಯೊಬ್ಬ 16ರ ಬಾಲಕಿಯನ್ನು ವರಿಸಿದ ಘಟನೆ ಉತ್ತರಕನ್ನಡ (UttaraKannada) ಜಿಲ್ಲೆಯ ಕಾರವಾರದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

    ಮೂರು ತಿಂಗಳ ನಂತರ ತಾನು ಮದುವೆಯಾದವಳು (Marriage) ಅಪ್ರಾಪ್ತೆ ಎಂದು ತಿಳಿದು ಬಂಧನದ ಭೀತಿಯಿಂದ 52ರ ವ್ಯಕ್ತಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. 16 ವರ್ಷದ ಅಪ್ರಾಪ್ತೆಯನ್ನು ವರಿಸಿದ 52 ವರ್ಷದ ಅನಿಲ್ ಆತ್ಮಹತ್ಯೆಗೆ (Suicide) ಯತ್ನಿಸಿದ್ದಾನೆ. ಇದನ್ನೂ ಓದಿ: ಹಾಡಹಗಲೇ ರೈತ ಮುಖಂಡನ ಮೇಲೆ ಮಾರಕಾಸ್ತ್ರಗಳಿಂದ ಮಾರಣಾಂತಿಕ ಹಲ್ಲೆ

    ಅಂಗನವಾಡಿ ಕಾರ್ಯಕರ್ತರ ಖಚಿತ ಮಾಹಿತಿ ಮೇರೆಗೆ ವಧು ಅಪ್ರಾಪ್ತೆ ಎಂಬ ಮಾಹಿತಿ ಬಹಿರಂಗಗೊಂಡಿದೆ. ಕೂಡಲೆ ಎಚ್ಚೆತ್ತ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ (women and child development) ಅಧಿಕಾರಿಗಳು ವಧುವನ್ನ ಪತ್ತೆ ಹಚ್ಚಿದ್ದಾರೆ. ಬಳಿಕ ವರ ಅನಿಲ್‌ನನ್ನು ಪೋಲಿಸರು (Police) ಬಂಧಿಸಿದ್ದಾರೆ. ಇದರಿಂದ ಆತಂಕಗೊಂಡ ಅನಿಲ್ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಇದನ್ನೂ ಓದಿ: ದಲಿತ ಬಾಲಕಿಯನ್ನ ಇಡೀ ರಾತ್ರಿ ಠಾಣೆಯಲ್ಲಿರಿಸಿ ಥಳಿಸಿದ ಮೂವರು ಪೊಲೀಸ್ ಅಧಿಕಾರಿಗಳು ಅಮಾನತು

    CRIME

    ವಧು-ವರರಿಬ್ಬರೂ ಕಾರವಾರ ನಗರದ ನಿವಾಸಿಗಳಾಗಿದ್ದಾರೆ. ಕಳೆದ ಜುಲೈ 19ರಂದು ಕಾರವಾರದ ದೇವಾಲಯವೊಂದರಲ್ಲಿ ಅದ್ಧೂರಿಯಾಗಿ ಅನಿಲ್ ವಿವಾಹವಾಗಿತ್ತು. ಮದುವೆಯಲ್ಲಿ ಭಾಗಿಯಾದ ಸಂಬಂಧಿಕರು ಸೇರಿ ಒಟ್ಟು 60 ಮಂದಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನೋಟಿಸ್ ನೀಡಿದ್ದು, ಕಾರವಾರ ಮಹಿಳಾ ಪೋಲಿಸ್ ಠಾಣೆಯಲ್ಲಿ ಪ್ರಕರಣ (FIR) ದಾಖಲಾಗಿದೆ.

    ಅಪ್ರಾಪ್ತೆ ವಧುವನ್ನು ರಕ್ಷಿಸಿ ಸಾಂತ್ವನ ಕೇಂದ್ರದಲ್ಲಿರಿಸಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಮಳೆ ಎಫೆಕ್ಟ್, ದುಬಾರಿ ವಸ್ತುಗಳು ಅರ್ಧ ಬೆಲೆಗೆ ಸೇಲ್- ಮುಗಿಬಿದ್ದ ಗ್ರಾಹಕರು

    ಮಳೆ ಎಫೆಕ್ಟ್, ದುಬಾರಿ ವಸ್ತುಗಳು ಅರ್ಧ ಬೆಲೆಗೆ ಸೇಲ್- ಮುಗಿಬಿದ್ದ ಗ್ರಾಹಕರು

    ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಸುರಿದ ಭಾರಿ ಮಳೆ ಜೀವ ಹಾನಿ ಜೊತೆಗೆ ಅಪಾರ ಆಸ್ತಿ-ಪಾಸ್ತಿಗಳಿಗೂ ಹಾನಿಮಾಡಿದೆ. ಆದರೆ ಮಳೆಯಿಂದ ಅಂಗಡಿ ಮುಂಗಟ್ಟುಗಳಿಗೆ ನೀರು ನುಗ್ಗಿ ಲಕ್ಷಾಂತರ ನಷ್ಟವಾದ ವ್ಯಾಪಾರಸ್ಥರು ತಮ್ಮ ವಸ್ತುಗಳನ್ನು ಕಡಿಮೆ ದರದಲ್ಲಿ ಮಾರಾಟ ಮಾಡುತ್ತಿದ್ದು, ಜನ ಮುಗಿಬಿದ್ದು ಖರೀದಿಸುತ್ತಿದ್ದಾರೆ.

    ಉತ್ತರ ಕನ್ನಡದ ಭಟ್ಕಳದಲ್ಲಿ ಸುರಿದ ಭಾರೀ ಮಳೆ ನೀರು ಮನೆ, ಅಂಗಡಿಗಳಿಗೆ ನುಗ್ಗಿ ಅವಾಂತರವನ್ನೇ ಸೃಷ್ಟಿಸಿದೆ. ಮನೆಗಳಿಗೆ ಪರಿಹಾರ ಸಿಕ್ಕರೂ ಅಂಗಡಿ ಮುಂಗಟ್ಟುಗಳಲ್ಲಿ ಆದ ಹಾನಿಗೆ ಸರ್ಕಾರದಿಂದ ಪರಿಹಾರ ಸಿಗುವುದಿಲ್ಲ. ಅಂಗಡಿಗೆ ಇನ್ಸುರೆನ್ಸ್ ಮಾಡಿಸಿದ್ದವರಿಗೆ ಮಾತ್ರ ಪರಿಹಾರ ಸಿಗುತ್ತದೆ. ಹೀಗಾಗಿ ಭಟ್ಕಳ ಮುಖ್ಯ ರಸ್ತೆಯಲ್ಲಿರುವ 200ಕ್ಕೂ ಹೆಚ್ಚು ಮಳಿಗೆಗಳಲ್ಲಿ ನೀರು ನುಗ್ಗಿ ಲಕ್ಷಾಂತರ ರೂಪಾಯಿ ನಷ್ಟವಾಗಿದ್ರು, ಬಹುತೇಕ ಅಂಗಡಿಗಳಿಗೆ ಇನ್ಸುರೆನ್ಸ್ ಇಲ್ಲದ ಕಾರಣ ಪರಿಹಾರ ಸಿಕ್ತಿಲ್ಲ. ಹಾಗೆ ಅಂಗಡಿಗಳಲ್ಲಿದ್ದ ವಸ್ತುಗಳನ್ನು ಮಾರುವುದು ಸಹ ಕಷ್ಟ. ಈ ಹಿನ್ನೆಲೆಯಲ್ಲಿ ಭಟ್ಕಳ ನಗರದ ಮುಖ್ಯರಸ್ತೆಯಲ್ಲಿರುವ ಬಹುತೇಕ ಅಂಗಡಿಯವರು ತಮ್ಮ ವಸ್ತುಗಳನ್ನು ಅರ್ಧಕ್ಕಿಂತ ಕಮ್ಮಿ ಬೆಲೆಯಲ್ಲಿ ಮಾರಾಟ ಮಾಡಿದ್ದಾರೆ. ಇದರ ಖರೀದಿಗೆ ಜನರು ಮುಗಿಬಿದ್ದಿದ್ದಾರೆ.

    ಭಟ್ಕಳ ನಗರದ ಮುಖ್ಯರಸ್ತೆಯಲ್ಲಿ ದುಬಾರಿ ವಸ್ತುಗಳನ್ನು ಕಮ್ಮಿ ಬೆಲೆಗೆ ಮಾರಾಟ ಮಾಡಲಾಗ್ತಿದೆ. ಶಾಲಾ ಬ್ಯಾಗ್, ಎಲಿಕ್ಟ್ರಾನಿಕ್ಸ್ ವಸ್ತುಗಳು,ಪಾತ್ರೆಗಳು, ಬಟ್ಟೆಗಳು, ಚಪ್ಪಲಿಗಳು ಸೇರಿದಂತೆ ಅನೇಕ ವಸ್ತುಗಳನ್ನು ಅರ್ಧ ಬೆಲೆಗೆ ಸೇಲ್ ಮಾಡಲಾಗ್ತಿದೆ. ಮನೆ ಹಾನಿ ಪರಿಹಾರದ ಮಾದರಿಯಲ್ಲಿ ತಮಗೂ ಪರಿಹಾರ ನೀಡುವಂತೆ ಸರ್ಕಾರಕ್ಕೆ ಅಂಗಡಿ ಮಾಲೀಕರು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ತಡರಾತ್ರಿ ರಾಜ್ಯಕ್ಕೆ ಅಮಿತ್ ಶಾ – ಸರಣಿ ಕೊಲೆ, ಕಾರ್ಯಕರ್ತರ ಆಕ್ರೋಶದ ಬಗ್ಗೆ ವರದಿ ಸಾಧ್ಯತೆ

    ಭಟ್ಕಳದಲ್ಲಿ ನೀರಿನ ಅಬ್ಬರಕ್ಕೆ ತೇಲಿಹೋದ ಬೋಟುಗಳು ಸಮುದ್ರದಲ್ಲಿ ಪತ್ತೆಯಾಗುತ್ತಿದೆ. ಈ ಮಧ್ಯೆ ಮಳೆಯಿಂದಾಗಿ ಧರೆಯ ಮಣ್ಣು ಕೊಚ್ಚಿಹೋಗಿ ಸಮುದ್ರ ಕೆಂಪು ಬಣ್ಣಕ್ಕೆ ತಿರುಗಿದೆ. ಮುಂಗಾರು ಮಳೆ ಭಟ್ಕಳದ ಜನರನ್ನ ಅಕ್ಷರಶಃ ಕಾಡಿದೆ. ಸಾವು ನೋವುಗಳ ಜೊತೆ ಆರ್ಥಿಕ ನಷ್ಟವನ್ನೂ ತಂದೊಡ್ಡಿದೆ. ಇದರಿಂದ ಭಟ್ಕಳ ಮಂದಿ ಕಂಗಾಲಾಗಿ ಸರ್ಕಾರದತ್ತ ಮುಖ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕಸ್ತೂರಿ ರಂಗನ್ ವರದಿ ಸ್ಥಳಕ್ಕೆ ಭೇಟಿ ನೀಡಿ ಮಾಡಿದ ವರದಿಯಲ್ಲ, ಸಂಪೂರ್ಣ ಅವೈಜ್ಞಾನಿಕ: ಆರ್.ವಿ ದೇಶಪಾಂಡೆ

    ಕಸ್ತೂರಿ ರಂಗನ್ ವರದಿ ಸ್ಥಳಕ್ಕೆ ಭೇಟಿ ನೀಡಿ ಮಾಡಿದ ವರದಿಯಲ್ಲ, ಸಂಪೂರ್ಣ ಅವೈಜ್ಞಾನಿಕ: ಆರ್.ವಿ ದೇಶಪಾಂಡೆ

    ಕಾರವಾರ: ಕಸ್ತೂರಿ ರಂಗನ್ ವರದಿ ಸ್ಥಳಕ್ಕೆ ಭೇಟಿ ನೀಡಿ ಮಾಡಿದ ವರದಿಯಲ್ಲ, ಬದಲಿಗೆ ಈ ವರದಿ ಸಂಪೂರ್ಣ ಅವೈಜ್ಞಾನಿಕವಾಗಿದೆ ಎಂದು ಮಾಜಿ ಸಚಿವ ಆರ್.ವಿ. ದೇಶಪಾಂಡೆ ಕಿಡಿಕಾರಿದರು.

    ಕೇಂದ್ರ ಸರ್ಕಾರ ಕಸ್ತೂರಿ ರಂಗನ್ ವರದಿಯನ್ನು ಅನುಷ್ಠಾನಕ್ಕೆ ತರಬಾರದೆಂದು ಆಗ್ರಹಿಸಿದ ಪ್ರತಿಭಟನಾಗಾರರು ಜೊಯಿಡಾ ನಗರದ ವೃತ್ತದಿಂದ ತಹಶೀಲ್ದಾರ್ ಕಚೇರಿಯವರೆಗೆ ಕಾಲ್ನಡಿಗೆಯಲ್ಲಿ ಸಾಗಿ ಜೋಯಿಡಾ ತಹಶೀಲ್ದಾರ್‌ಗೆ ವರದಿ ವಿರೋಧಿಸಿ ಮನವಿ ಸಲ್ಲಿಸಿದರು.

    ಇದೇ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸಚಿವ ದೇಶಪಾಂಡೆ ಅವರು, ಕಸ್ತೂರಿ ರಂಗನ್ ವರದಿ ಸ್ಥಳಕ್ಕೆ ಭೇಟಿ ನೀಡಿ ಮಾಡಿದ ವರದಿಯಲ್ಲ. ಸಂಪೂರ್ಣ ಅವೈಜ್ಞಾನಿಕವಾಗಿದೆ. ನಮ್ಮ ರಾಜ್ಯವೂ ಸೇರಿದಂತೆ ದೇಶದ 6 ರಾಜ್ಯಗಳಲ್ಲಿ ವ್ಯಾಪಿಸಿರುವ ಪಶ್ಚಿಮ ಘಟ್ಟದ 56,825 ಚದರ ಕಿ.ಮೀ ವಿಸ್ತೀರ್ಣದ ಪ್ರದೇಶವನ್ನು ಸುಪ್ರೀಂ ಕೋರ್ಟ್‍ನ ಆದೇಶದನ್ವಯ ಪರಿಸರ ಸೂಕ್ಷ್ಮ ವಲಯ ಎಂದು ಗುರುತಿಸಿ ಕೇಂದ್ರ ಸರ್ಕಾರ ಜುಲೈ 1 ರಂದು ಕರಡು ಅಧಿಸೂಚನೆ ಹೊರಡಿಸಿದೆ.

    ಈ ಹಿಂದೆ 3 ಬಾರಿ ಅಧಿಸೂಚನೆಯನ್ನು ಹೊರಡಿಸಿದ್ದ ಕೇಂದ್ರದ ಈ ಪ್ರಯತ್ನಕ್ಕೆ ರಾಜ್ಯ ಸರ್ಕಾರವು ವಿರೋಧವನ್ನು ವ್ಯಕ್ತಪಡಿಸುತ್ತಲೇ ಇದೆ. ಈಗ ಇನ್ನೊಮ್ಮೆ ಅಧಿಸೂಚನೆ ಹೊರಡಿಸಿರುವುದು ರಾಜ್ಯದ ಜನತೆಗೆ ಆತಂಕವನ್ನು ತಂದೊಡ್ಡಿದೆ ಎಂದರು.

    ಇನ್ನೂ ಪಶ್ಚಿಮ ಘಟ್ಟದ ಜೀವ ವೈವಿಧ್ಯ ರಕ್ಷಣೆ ಮತ್ತು ಸಂರಕ್ಷಣೆ ಉದ್ದೇಶದಿಂದ ಕೇಂದ್ರ ಪರಿಸರ, ಅರಣ್ಯ ಸಚಿವಾಲಯವು ಕಸ್ತೂರಿ ರಂಗನ್ ವರದಿಯಂತೆ ಪರಿಸರ ಸೂಕ್ಷ್ಮ ವಲಯವೆಂದು ಗುರುತಿಸಲಾದ ಪ್ರದೇಶದಲ್ಲಿ ನಮ್ಮ ರಾಜ್ಯದ 10ಜಿಲ್ಲೆಗಳ 1,572 ಗ್ರಾಮಗಳನ್ನು ಮತ್ತು ಉತ್ತರ ಕನ್ನಡ ಜಿಲ್ಲೆಯ 9 ತಾಲೂಕುಗಳಿಂದ 704 ಗ್ರಾಮಗಳು ಸೇರ್ಪಡೆಗೊಂಡಿದೆ.

    ಅತಿ ಹೆಚ್ಚು ಭೂ ಪ್ರದೇಶದ ಸುಮಾರು 2,06,681 ಚದರ ಕಿ.ಮೀ ವಿಸ್ತೀರ್ಣ ಪ್ರದೇಶವು ನಮ್ಮ ರಾಜ್ಯದ ಭಾಗವೇ ಆಗಿರುವುದು ತೀವ್ರ ಆತಂಕಕ್ಕೆ ಎಡೆಮಾಡಿ ಕೊಟ್ಟಿದೆ. ಇದನ್ನೂ ಓದಿ: ಹುಬ್ಬಳ್ಳಿ ತಾರಿಹಾಳ ಅಗ್ನಿ ಅವಘಡ- ಸಂತ್ರಸ್ತರಿಗೆ ಪರಿಹಾರ ಕೊಡಿಸುವ ಜೋಶಿ ಕಾಳಜಿಗೆ ಸಿಎಂ ಸ್ಪಂದನೆ

    ಪಶ್ಚಿಮ ಘಟ್ಟಗಳಿಂದಲೇ ಆವರಿಸಿರುವ ನಮ್ಮ ಉತ್ತರ ಕನ್ನಡ ಜಿಲ್ಲೆಯ ಹಲವು ತಾಲೂಕುಗಳಲ್ಲಿ, ವಿಶೇಷವಾಗಿ ಜೋಯಿಡಾ ತಾಲೂಕಿನಲ್ಲಿ ಈಗಾಗಲೇ ಹಲವಾರು ಬೃಹತ್ ಯೋಜನೆಗಳು, ಅಭಯಾರಣ್ಯಗಳು ಇದ್ದು, ಈ ಯೋಜನೆಗಳಿಂದ ಇಲ್ಲಿಯೇ ಬದುಕನ್ನು ಕಟ್ಟಿಕೊಂಡ ಜನಸಾಮಾನ್ಯರು, ನಿರಾಶ್ರಿತರಾಗಿ ಸಾಕಷ್ಟು ತೊಂದರೆಯನ್ನು ಅನುಭವಿಸುತ್ತಿದ್ದಾರೆ.

    ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ 96 ಗ್ರಾಮಗಳು ಪರಿಸರ ಸೂಕ್ಷ್ಮ ವಲಯದಲ್ಲಿ ಗುರುತಿಸಿಕೊಂಡಿದ್ದು, ತಾಲೂಕಿನ ಕೇಂದ್ರ ಸ್ಥಾನವೂ ಸೇರಿದಂತೆ ಶೇ. 90ರಷ್ಟು ಹೆಚ್ಚಿನ ಪ್ರದೇಶವು ಈ ವಲಯದ ವ್ಯಾಪ್ತಿಯಲ್ಲಿ ಬರುತ್ತದೆ. ಇದರಿಂದ ತಾಲೂಕಿನಲ್ಲಿ ಕೈಗೊಳ್ಳುವ ಎಲ್ಲಾ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾಗುವ ಆತಂಕ ಎದುರಾಗಿದೆ. ಇದನ್ನೂ ಓದಿ: ರಾಜಕಾರಣದಲ್ಲಿ ಯಶಸ್ವಿಯಾಗಬೇಕಾದರೆ, ಕಬಡ್ಡಿನೂ ಗೊತ್ತಿರಬೇಕು, ಚದುರಂಗದಾಟನೂ ಗೊತ್ತಿರಬೇಕು: ಬಿ.ವೈ.ವಿಜಯೇಂದ್ರ

    ಪಶ್ಚಿಮ ಘಟ್ಟಗಳ ಪ್ರದೇಶದ ಆರಣ್ಯಜೀವಸಂಕುಲಗಳ ಸಂರಕ್ಷಣೆ ಮತ್ತು ಪರಿಸರದ ಸಮತೋಲನದ ಜೊತೆಗೆ ಅಭಿವೃದ್ಧಿಯೂ ಆಗಬೇಕು ಎಂಬುದು ನನ್ನ ನಿಲುವು. ಆದರೆ, ಹಲವಾರು ವರ್ಷಗಳಿಂದ ಅರಣ್ಯ ಪ್ರದೇಶದಲ್ಲಿರುವ ವಾಸಿಸುತ್ತಿರುವ ಜನರು ಬೃಹತ ಯೋಜನೆಗಳಿಗೆ ತಮ್ಮನ್ನು ಸಮರ್ಪಿಸಿಕೊಂಡಿದ್ದು, ಅವರ ಹಿತವನ್ನು ಕಾಪಾಡುವುದು ನಮ್ಮ ಆದ್ಯತೆಯಾಗಬೇಕಾಗಿದೆ. ರಾಜ್ಯ ಸರ್ಕಾರ ಈ ಯೋಜನೆ ಜಾರಿಯನ್ನು ವಿರೋಧಿಸಿ ಶೀಘ್ರವಾಗಿ ಆಕ್ಷೇಪಣಾ ಅರ್ಜಿಯನ್ನು ಸಲ್ಲಿಸಿ ಪಶ್ಚಿಮ ಘಟ್ಟದಲ್ಲಿ ವಾಸಿಸುವ ಜನರ ಹಿತಕಾಪಾಡಬೇಕಿದೆ ಎಂದರು.

    Live Tv
    [brid partner=56869869 player=32851 video=960834 autoplay=true]

  • ಆಭರಣ ಸಮೇತ ಗಣಪತಿಯನ್ನು ವಿಸರ್ಜಿಸಿ ಪೇಚಿಗೆ ಸಿಲುಕಿದ ಗ್ರಾಮಸ್ಥರು

    ಆಭರಣ ಸಮೇತ ಗಣಪತಿಯನ್ನು ವಿಸರ್ಜಿಸಿ ಪೇಚಿಗೆ ಸಿಲುಕಿದ ಗ್ರಾಮಸ್ಥರು

    ಕಾರವಾರ: ಚಿನ್ನದ ಉಂಗುರ ಹಾಗೂ ಬೆಳ್ಳಿ ಆಭರಣಗಳನ್ನು ಗಣಪತಿಯೊಂದಿಗೆ ಕೆರೆಯಲ್ಲಿ ವಿಸರ್ಜಿಸಿ, ಪೇಚಿಗೆ ಸಿಲುಕಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣದ ಮಳಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೋನರಹಳ್ಳಿಯಲ್ಲಿ ನಡೆದಿದೆ.

    ಇಂದು ವಿದ್ಯುಕ್ತವಾಗಿ ಗಣಪತಿಗೆ ಪೂಜೆ ಸಲ್ಲಿಸಿ ಸಮೀಪದ ಕೆರೆಗೆ ತಂದ ಗೊನೆಹಳ್ಳಿ ಗ್ರಾಮಸ್ಥರು, ದೇವರಿಗೆ ಹಾಕಿದ್ದ ಉಂಗುರ, ಬೆಳ್ಳಿ ಸರಪಳಿಯನ್ನು ತೆಗೆಯುವುದನ್ನು ಮರೆತಿದ್ದರು. ಈ ವೇಳೆ ಗಣಪತಿಯನ್ನು ಕೆರೆಯ ನಡುಭಾಗದಲ್ಲಿ ವಿಸರ್ಜಿಸಲಾಗಿತ್ತು. ನಂತರ ಮರಳಿ ಬಂದಾಗ ಗಣೇಶನಿಗೆ ಹಾಕಿದ್ದ ಆಭರಣಗಳು ಕಾಣದಾದಾಗ ತಾವು ಮಾಡಿದ ತಪ್ಪು ಅರಿವಾಗಿದೆ.  ಇದನ್ನೂ ಓದಿ: ಗಣೇಶ ಹಬ್ಬದ ಸಂಭ್ರಮದಲ್ಲಿ ಕುಚುಕು ಗೆಳೆಯರು

    ಕೆಲವರು ನೀರಿನಲ್ಲಿ ಮುಳಗಿ ಹುಡುಕುವ ಪ್ರಯತ್ನ ಮಾಡಿದರೂ ಕೈ ಚಲ್ಲಿ ಕೂರುವಂತಾಯಿತು. ನಂತರ ದೇವರಭಾವಿ ಗ್ರಾಮದ ಯುವಕ ವಿನಯ್ ನಾಯಕ್ ಎಂಬುವವರು ಸ್ಕೂಬಾ ಡೈ ಗೆ ಬಳಸುವ ಪರಿಕರ ಬಳಸಿ ನೀರಿನಲ್ಲಿ ಮುಳಗಿ ಕೊನೆಗೂ ಗಣಪತಿಯೊಂದಿಗೆ ವಿಸರ್ಜಿಸಿದ ಆಭರಣಗಳನ್ನು ತೆಗೆದುಕೊಟ್ಟಿದ್ದಾರೆ. ಇದನ್ನೂ ಓದಿ:ನಿಧಿ ಆಸೆಗೆ ಕಿಡಿಗೇಡಿಗಳಿಂದ ಪ್ರಾಚೀನ ಶಿವನ ದೇವಾಲಯ ಧ್ವಂಸ

  • ಮುರುಡೇಶ್ವರದಲ್ಲಿ ಸಮುದ್ರ ಪಾಲಾಗುತ್ತಿದ್ದ ಒಂದೇ ಕುಟುಂಬದ ಮೂವರ ರಕ್ಷಣೆ

    ಮುರುಡೇಶ್ವರದಲ್ಲಿ ಸಮುದ್ರ ಪಾಲಾಗುತ್ತಿದ್ದ ಒಂದೇ ಕುಟುಂಬದ ಮೂವರ ರಕ್ಷಣೆ

    – ಬೆಂಗಳೂರಿನಿಂದ ಪ್ರವಾಸಕ್ಕೆ ತೆರಳಿದ್ದ ಕುಟುಂಬ

    ಕಾರವಾರ: ಸಮುದ್ರ ಪಾಲಾಗುತಿದ್ದ ಒಂದೇ ಕುಟುಂಬದ ಮೂವರು ಪ್ರವಾಸಿಗರನ್ನು ರಕ್ಷಣೆ ಮಾಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುರಡೇಶ್ವರ ಕಡಲ ತೀರದಲ್ಲಿ ನಡೆದಿದೆ.

    ಸಂಜನ (15), ಸಂಜಯ್ (18),ಕಮಲಮ್ಮ (40) ರಕ್ಷಣೆಗೊಳಗಾದವವಾಗಿದ್ದಾರೆ. ಮೂಲತಃ ಬೆಂಗಳೂರಿನ ಕತ್ರಗುಪ್ಪೆಯ ನಿವಾಸಿಗಳಾದ ಇವರು ಮುರುಡೇಶ್ವರಕ್ಕೆ ಪ್ರವಾಸಕ್ಕೆಂದು ಹೋಗಿದ್ದಾಗ ಈ ಅವಘಡ ಸಂಭವಿಸಿದೆ. ಸಮುದ್ರದಲ್ಲಿ ಮುಳುಗುತ್ತಿದ್ದ ಇವರನ್ನು ಗಮನಿಸಿದ ಓಷನ್ ಅಡ್ವೇಂಚರ್ ನ ಸಂಜೀವ್ ಹರಿಕಾಂತ್, ಚಂದ್ರಶೇಖರ್ ದೇವಾಡಿಗ್ ಎಂಬುವವರು ತಕ್ಷಣ ಬೋಟ್ ಮೂಲಕ ತೆರಳಿ ರಕ್ಷಣೆ ಮಾಡಿದ್ದಾರೆ.

    ಒಂದೇ ಕುಟುಂಬದ ಐವರು ಸೇರಿ ವೀಕೆಂಡ್ ಮಸ್ತಿ ಮಾಡಲು ಬೆಂಗಳುರಿನಿಂದ ಮುರುಡೇಶ್ವರಕ್ಕೆ ಹೋಗಿದ್ದಾರೆ. ಈ ವೇಳೆ ಸಮುದ್ರದಲ್ಲಿ ಈಜಾಡಲು ನೀರಿಗೆ ಇಳಿದಿದ್ದಾರೆ. ಆಗ ಅಲೆಯ ರಭಸಕ್ಕೆ ಕೊಚ್ಚಿ ಹೋಗಿದ್ದಾರೆ. ಮೂವರು ನೀರಿನಲ್ಲಿ ಕೊಚ್ಚಿಹೋಗುತ್ತಿರುವುದನ್ನು ಗಮನಿಸಿದ ಸಂಜೀವ್ ಹರಿಕಾಂತ್, ಚಂದ್ರಶೇಖರ್ ದೇವಾಡಿಗ್ ಎಂಬುವವರು ರಕ್ಷಣೆ ಮಾಡಿ ಮೂವರ ಪ್ರಾಣವನ್ನು ಕಾಪಾಡಿದ್ದಾರೆ.

    ಲೈಫ್ ಗಾರ್ಡ ನೇಮಕಕ್ಕೆ ಆಗ್ರಹ
    ಮುರುಡೇಶ್ವರದಲ್ಲಿ ಪ್ರತಿ ಶನಿವಾರ ಮತ್ತು ಭಾನುವಾರ ಅತೀ ಹೆಚ್ಚು ಪ್ರವಾಸಿಗರು ಭೇಟಿ ನೀಡುತ್ತಾರೆ. ಸಮುದ್ರದಲ್ಲಿ ಮೋಜು ಮಸ್ತಿ ಮಾಡುವ ಇವರು, ಯಾವುದೇ ಸುರಕ್ಷಾ ಸಾಧನವಿಲ್ಲದೇ ಸಮುದ್ರಕ್ಕೆ ಇಳಿದು ಅಲೆಗಳಿಗೆ ಸಿಲುಕಿ ಪ್ರಾಣ ಕಳೆದುಕೊಳ್ಳುತಿದ್ದಾರೆ. ಕಳೆದ ನಾಲ್ಕು ತಿಂಗಳಿಂದ ಜಿಲ್ಲಾ ಪ್ರವಾಸೋದ್ಯಮ ಇಲಾಖೆ ಈ ಭಾಗದಲ್ಲಿ ಲೈಫ್ ಗಾರ್ಡಗಳನ್ನು ನಿಯೋಜನೆ ಮಾಡಿಲ್ಲ. ಹೀಗಾಗಿ ಪ್ರವಾಸಕ್ಕೆ ಬಂದ ಜನರು ಸಮುದ್ರ ಪಾಲಾದಾಗ ರಕ್ಷಣೆ ಮಾಡುವುದೇ ಒಂದು ಸವಾಲಾಗಿದ್ದು, ಸ್ಥಳೀಯ ಮೀನುಗಾರರು ಹಾಗೂ ಅಡ್ವೇಂಚರ್ ಕಂಪನಿಯ ಕೆಲಸಗಾರರೇ ಲೈಪ್ ಗಾರ್ಡನಂತೆ ಪ್ರವಾಸಿಗರ ಜೀವ ರಕ್ಷಣೆ ಮಾಡುತಿದ್ದಾರೆ. ಹೀಗಾಗಿ ತಕ್ಷಣ ಜಿಲ್ಲೆಯ ಪ್ರಮುಖ ಕಡಲತೀರದಲ್ಲಿ ಲೈಪ್ ಗಾರ್ಡ ನೇಮಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

  • ಓರ್ವನಿಂದ ಐವರಿಗೆ, ಒಂದೇ ಕುಟುಂಬದ ನಾಲ್ವರಿಗೆ ಕೊರೊನಾ

    ಓರ್ವನಿಂದ ಐವರಿಗೆ, ಒಂದೇ ಕುಟುಂಬದ ನಾಲ್ವರಿಗೆ ಕೊರೊನಾ

    ಕಾರವಾರ: ಒಂದೇ ಕುಟುಂಬದ ನಾಲ್ವರಿಗೆ ಸೋಂಕು ಹರಡಿದ್ದು ಕರ್ನಾಟಕದಲ್ಲಿ ಕೊರೊನಾ ಪೀಡಿತರ ಸಂಖ್ಯೆ 74ಕ್ಕೆ ಏರಿಕೆಯಾಗಿದೆ.

    ಉತ್ತರ ಕನ್ನಡದಲ್ಲಿ ರೋಗಿ ನಂಬರ್ 36ರ ಪತ್ನಿ ಹಾಗೂ ಇಬ್ಬರು ಮಕ್ಕಳಿಗೆ ಕೊರೊನಾ ಸೋಂಕು ತಗುಲಿದೆ. ಈ ಮೂಲಕ ಒಂದೇ ರೋಗಿಯಿಂದ ಮೂವರಿಗೆ ಕೊರೊನಾ ಹರಡಿದೆ. ಚಿಕ್ಕಬಳ್ಳಾಪುರದ ರೋಗಿಯಿಂದ ಐವರಿಗೆ ಕೊರೊನಾ ಸೋಂಕು ಬಂದಿದೆ.

    ಉತ್ತರ ಕನ್ನಡ ಮೂಲದ ವ್ಯಕ್ತಿ ಮಾರ್ಚ್ 21 ರಂದು ದುಬೈಯಿಂದ ಮಂಗಳೂರಿಗೆ ಆಗಮಿಸಿ ಭಟ್ಕಳಕ್ಕೆ ತೆರಳಿದ್ದರು. ಇವರ ಸಂಪರ್ಕಕ್ಕೆ ಬಂದಿದ್ದರಿಂದ 54 ವರ್ಷದ ಪತ್ನಿ(ರೋಗಿ 65), 28 ವರ್ಷದ ಮಗಳು(ರೋಗಿ 28), 23 ವರ್ಷದ ಮಗಳು(ರೋಗಿ) ಕೊರೊನಾ ಪೀಡಿತರಾಗಿದ್ದು ಕುಟುಂಬದ ಎಲ್ಲ ಸದಸ್ಯರನ್ನು ಉತ್ತರ ಕನ್ನಡದ ಆಸ್ಪತ್ರೆಗೆ ದಾಖಲಿಸಲಾಗಿದೆ.

    ರೋಗಿ 68: 21 ವರ್ಷದ ಪುರುಷರೊಬ್ಬರು, ಬೆಂಗಳೂರಿನ ನಿವಾಸಿಯಾಗಿದ್ದು, ಲಂಡನ್ ದೇಶಕ್ಕೆ ಪ್ರಯಾಣ ಬೆಳೆಸಿ ಮಾರ್ಚ್ 17ರಂದು ಭಾರತಕ್ಕೆ ಹಿಂದಿರುಗಿರುವ ಪ್ರಯಾಣ ಹಿನ್ನೆಲೆಯಿರುತ್ತದೆ ಮತ್ತು ರೋಗಿ-25ರ(ಮಗ) ಸಂಪರ್ಕ ಹೊಂದಿರುತ್ತಾರೆ. ಈ ವ್ಯಕ್ತಿಯನ್ನು ಉತ್ತರ ಕನ್ನಡದ ನಿಗದಿತ ಆಸ್ಪತ್ರೆಯಲ್ಲಿ ಪ್ರತ್ಯೇಕಗೊಳಿಸಲಾಗಿರುತ್ತದೆ.

    ರೋಗಿ 69: 23 ವರ್ಷದ ಪುರುಷರೊಬ್ಬರು ಹಿಂದುಪುರ, ಆಂಧ್ರಪ್ರದೇಶದ ನಿವಾಸಿಯಾಗಿದ್ದು, ರೋಗಿ-19ರ ಸಂಪರ್ಕ ಹೊಂದಿರುತ್ತಾರೆ. ಈ ವ್ಯಕ್ತಿಯನ್ನು ಚಿಕ್ಕಬಳ್ಳಾಪುರದ ನಿಗದಿತ ಆಸ್ಪತ್ರೆಯಲ್ಲಿ ಪ್ರತ್ಯೇಕಗೊಳಿಸಲಾಗಿರುತ್ತದೆ.

    ರೋಗಿ 70: 70 ವರ್ಷದ ಪುರುಷರೊಬ್ಬರು ಚಿಕ್ಕಬಳ್ಳಾಪುರದ ನಿವಾಸಿಯಾಗಿದ್ದು, ರೋಗಿ-19ರ ಸಂಪರ್ಕ ಹೊಂದಿರುತ್ತಾರೆ. ಈ ವ್ಯಕ್ತಿಯನ್ನು ಚಿಕ್ಕಬಳ್ಳಾಪುರದ ನಿಗದಿತ ಆಸ್ಪತ್ರೆಗೆ ದಾಖಲಿಸಲಾಗಿದೆ.

    ರೋಗಿ 71: 32 ವರ್ಷದ ಮಹಿಳೆ ಚಿಕ್ಕಬಳ್ಳಾಪುರದ ನಿವಾಸಿಯಾಗಿದ್ದು, ರೋಗಿ-19ರ ಸಂಪರ್ಕ ಹೊಂದಿರುತ್ತಾರೆ. ಈ ವ್ಯಕ್ತಿಯನ್ನು ಚಿಕ್ಕಬಳ್ಳಾಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

    ರೋಗಿ 72: 38 ವರ್ಷದ ಪುರುಷರೊಬ್ಬರು ಚಿಕ್ಕಬಳ್ಳಾಪುರದ ನಿವಾಸಿಯಾಗಿದ್ದು, ರೋಗಿ-19ರ ಸಂಪರ್ಕ ಹೊಂದಿರುತ್ತಾರೆ. ಈ ವ್ಯಕ್ತಿಯನ್ನು ಚಿಕ್ಕಬಳ್ಳಾಪುರದ ನಿಗದಿತ ಆಸ್ಪತ್ರೆಯಲ್ಲಿ ಪ್ರತ್ಯೇಕಗೊಳಿಸಲಾಗಿರುತ್ತದೆ.

    ರೋಗಿ 73: 18 ವರ್ಷದ ಪುರುಷರೊಬ್ಬರು ಹಿಂದುಪುರ, ಆಂಧ್ರಪ್ರದೇಶದ ನಿವಾಸಿಯಾಗಿದ್ದು, ರೋಗಿ-19ರ ಸಂಪರ್ಕ ಹೊಂದಿರುತ್ತಾರೆ. ಈ ವ್ಯಕ್ತಿಯನ್ನು ಚಿಕ್ಕಬಳ್ಳಾಪುರದ ಆಸ್ಪತ್ರೆಗೆ ದಾಖಲಿಸಲಾಗಿದೆ.

    ರೋಗಿ 74: 63 ವರ್ಷದ ಮಹಿಳೆ ಬೆಂಗಳೂರಿನ ನಿವಾಸಿಯಾಗಿದ್ದು, ಲಂಡನ್ ದೇಶಕ್ಕೆ ಪ್ರಯಾಣ ಮಾಡಿ ಮಾರ್ಚ್ 16ರಂದು ಭಾರತಕ್ಕೆ ಮರಳಿದ್ದು ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.