Tag: uttara korea

  • ಕಿಮ್‌ ಜಾಂಗ್‌ ಉನ್‌ಗೆ ವಿಶೇಷ ಕಾರು ಗಿಫ್ಟ್‌ ಕೊಟ್ಟ ರಷ್ಯಾ ಅಧ್ಯಕ್ಷ!

    ಕಿಮ್‌ ಜಾಂಗ್‌ ಉನ್‌ಗೆ ವಿಶೇಷ ಕಾರು ಗಿಫ್ಟ್‌ ಕೊಟ್ಟ ರಷ್ಯಾ ಅಧ್ಯಕ್ಷ!

    ಮಾಸ್ಕೋ: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin)  ಅವರು ಉತ್ತರ ಕೊರಿಯಾದ ನಾಯಕ ಕಿಮ್ ಜಾಂಗ್ ಉನ್ (Kim Jong Un) ಅವರಿಗೆ ವಿಶೇಷ ಕಾರೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ ಎಂಬುದಾಗಿ ವರದಿಯಾಗಿದೆ.

    ಕಿಮ್ ಜಾಂಗ್ ಅವರ ವೈಯಕ್ತಿಕ ಬಳಕೆಗಾಗಿ ಈ ಕಾರು ನೀಡಲಾಗಿದೆಯಂತೆ. ಉಡುಗೊರೆ ಸಂಬಂಧ ಕಿಮ್ ಅವರ ಸಹೋದರಿ ಪುಟಿನ್ ಅವರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. ಜೊತೆಗೆ ಉಡುಗೊರೆಯು ಇಬ್ಬರು ಉನ್ನತ ನಾಯಕರ ನಡುವಿನ ವೈಯಕ್ತಿಕ ಸಂಬಂಧವನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದ್ದಾರೆ. ಈ ಉಡುಗೊರೆ ವಿಶ್ವಸಂಸ್ಥೆಯ ನಿಯಮಗಳ ಉಲ್ಲಂಘನೆಯಾಗಿರಬಹುದು ಎಂದು ಹೇಳಲಾಗುತ್ತಿದೆ. ಯಾಕೆಂದರೆ ವಿಶ್ವಸಂಸ್ಥೆಯು ರಷ್ಯಾ ಮತ್ತು ಉತ್ತರ ಕೊರಿಯಾ ನಡುವಿನ ವಹಿವಾಟುಗಳನ್ನು ನಿಷೇಧಿಸಿದೆ.

    ರಷ್ಯಾ ನಿರ್ಮಿತ ಕಾರನ್ನು ಫೆಬ್ರವರಿ 18 ರಂದು ಕಿಮ್‌ನ ಉನ್ನತ ಸಹಾಯಕರಿಗೆ ಹಸ್ತಾಂತರಿಸಲಾಗಿದೆ ಸುದ್ದಿ ಸಂಸ್ಥೆಯೊಂದು ವರಿ ಮಾಡಿದ್ದು, ಆದರೆ ಈ ಕಾರನ್ನು ರಷ್ಯಾದಿಂದ ಕಳುಹಿಸಲಾಗಿದೆ ಎಂಬುದನ್ನು ಉಲ್ಲೇಖಿಸಿಲ್ಲ. ಐಷಾರಾಮಿ ಕಾರುಗಳ ಮೇಲಿನ ಕಿಮ್‌ ಒಲವನ್ನು ಪರಿಗಣಿಸಿ ಪುಟಿನ್ ಈ ವಿಶೇಷ ಉಡುಗೊರೆಯನ್ನು ಕಳುಹಿಸಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಆಸನಗಳು ಬಹುತೇಕ ಭರ್ತಿ – ಬೆಂಗಳೂರು ಟು ಅಯೋಧ್ಯೆ ವಿಮಾನ ಪ್ರಯಾಣಕ್ಕೆ ಭರ್ಜರಿ ಸ್ಪಂದನೆ

    ಕಳೆದ ವರ್ಷ ರಷ್ಯಾಕ್ಕೆ ಭೇಟಿ ನೀಡಿದ್ದ ಕಿಮ್: ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಕಿಮ್ ಜಾಂಗ್ ರೈಲಿನಲ್ಲಿ ರಷ್ಯಾಕ್ಕೆ ಭೇಟಿ ನೀಡಿದ್ದರು. ಈ ಸಮಯದಲ್ಲಿ ಕಿಮ್ ಪುಟಿನ್ ಅಧ್ಯಕ್ಷ ಓರಸ್ ಸೆನೆಟ್ ಲಿಮೋಸಿನ್ ಅನ್ನು ಪರಿಶೀಲಿಸಿದರು. ಕಿಮ್ ಜಾಂಗ್ ರಷ್ಯಾಕ್ಕೆ ಭೇಟಿ ನೀಡಿದಾಗಿನಿಂದ ಉಭಯ ದೇಶಗಳ ನಡುವಿನ ವಿನಿಮಯವು ವೇಗವಾಗಿ ಹೆಚ್ಚುತ್ತಿದೆ.

  • ಒಂದೇ ದಿನ 1.74 ಲಕ್ಷ ಮಂದಿಗೆ ಜ್ವರ- ಉತ್ತರ ಕೊರಿಯಾದಲ್ಲಿ 21 ಸಾವು

    ಒಂದೇ ದಿನ 1.74 ಲಕ್ಷ ಮಂದಿಗೆ ಜ್ವರ- ಉತ್ತರ ಕೊರಿಯಾದಲ್ಲಿ 21 ಸಾವು

    ಪೋನ್ಗ್ ಯಾಂಗ್: ಕೊರೊನಾ ವೈರಸ್ ಮೊದಲ ಪ್ರಕರಣ ಕಾಣಿಸಿಕೊಂಡ ಬೆನ್ನಲ್ಲೇ ಉತ್ತರ ಕೊರಿಯಾದಲ್ಲಿ 1 ಲಕ್ಷದ 74 ಸಾವಿರದ 440 ಮಂದಿಯಲ್ಲಿ ಜ್ವರ ಕಾಣಿಸಿಕೊಂಡಿದೆ. ಅಲ್ಲದೆ ಒಂದೇ ದಿನ 27 ಮಂದಿ ಮೃತಪಟ್ಟಿದ್ದಾರೆ.

    ಆದರೆ ಮೃತಪಟ್ಟಿರುವ 27 ಮಂದಿ ಕೊರೊನಾದಿಂದಲೇ ಮೃತಪಟ್ಟಿದ್ದಾರೆಯಾ ಎಂಬುದು ದೃಢವಾಗಿಲ್ಲ. ಮೇ ತಿಂಗಳಲ್ಲಿ ಇದುವರೆಗೆ 5,24,440 ಮಂದಿಗೆ ಜ್ವರ ಬಂದಿದೆ. ಇದರಲ್ಲಿ 2,43,630 ಮಂದಿ ಚೇತರಿಸಿಕೊಂಡಿದ್ದಾರೆ. ಇದು ಕೂಡ ಕೊರೊನಾದಿಂದ ಜ್ವರ ಬಂದಿದೆಯಾ ಇಲ್ಲವೋ ಎಂಬುದು ಖಚಿತವಾಗಿಲ್ಲ.

    ಇದೇ ತಿಂಗಳ 13 ರಂದು ದೇಶದಲ್ಲಿ ಮೊದಲ ಬಾರಿಗೆ ಕೊರೊನಾ ವೈರಸ್ ಪ್ರಕರಣ ಬೆಳಕಿಗೆ ಬಂದಿತ್ತು. ಈ ಬೆನ್ನಲ್ಲೇ ಅಲ್ಲಿ ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗಿತ್ತು. ಇದನ್ನೂ ಓದಿ: ಉತ್ತರ ಕೊರಿಯಾದಲ್ಲಿ ಮೊದಲ ಬಾರಿಗೆ ಕೊರೊನಾ ಪ್ರಕರಣ ಪತ್ತೆ- ಕಟ್ಟುನಿಟ್ಟಿನ ಲಾಕ್‌ಡೌನ್‌ ಘೋಷಣೆ

    ಈ ಸಂಬಂಧ ಅಲ್ಲಿನ ತಜ್ಞರು, ಆರೋಗ್ಯ ಕ್ಷೇತ್ರದಲ್ಲಿ ಮೂಲಸೌಕರ್ಯಗಳ ಕೊರತೆ ಇದೆ. ದೇಶದ 2.5 ಕೋಟಿ ಜನರು ಲಸಿಕೆ ಪಡೆಯದೇ ಇರುವ ಕಾರಣ ಕೋವಿಡ್ ಪ್ರಕರಣ ಎದುರಿಸಲು ಕಷ್ಟವಾಗಬಹುದು ಎಂದು ತಿಳಿಸಿದ್ದಾರೆ.

  • ಉತ್ತರ ಕೊರಿಯಾದಲ್ಲಿ ಮೊದಲ ಬಾರಿಗೆ ಕೊರೊನಾ ಪ್ರಕರಣ ಪತ್ತೆ- ಕಟ್ಟುನಿಟ್ಟಿನ ಲಾಕ್‌ಡೌನ್‌ ಘೋಷಣೆ

    ಉತ್ತರ ಕೊರಿಯಾದಲ್ಲಿ ಮೊದಲ ಬಾರಿಗೆ ಕೊರೊನಾ ಪ್ರಕರಣ ಪತ್ತೆ- ಕಟ್ಟುನಿಟ್ಟಿನ ಲಾಕ್‌ಡೌನ್‌ ಘೋಷಣೆ

    ಪ್ಯೊನ್ಗ್‌ಯಾಂಗ್: ಇದೇ ಮೊದಲ ಬಾರಿಗೆ ಉತ್ತರ ಕೊರಿಯಾದಲ್ಲಿ ಕೋವಿಡ್ 19 ಪ್ರಕರಣ ಪತ್ತೆಯಾಗಿದ್ದು, ಈ ಹಿನ್ನೆಲೆಯಲ್ಲಿ ತೀವ್ರ ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ.

    ದೇಶಕ್ಕೆ ಇದುವರೆಗೆ ಕೋವಿಡ್ ಸಾಂಕ್ರಾಮಿಕ ರೋಗ ಪ್ರವೇಶಿಸಿಲ್ಲ ಎಂದು ಇದುವರೆಗೆ ಉತ್ತರ ಕೊರಿಯಾ ಪ್ರತಿಪಾದಿಸಿತ್ತು. ಆದರೆ ಇದೀಗ ಮೊದಲ ಬಾರಿಗೆ ಕೋವಿಡ್ 19 ಪ್ರಕರಣ ಪತ್ತೆಯಾಗಿದ್ದು, ಸೋಂಕು ನಿರ್ಮೂಲನೆ ಮಾಡಲು ಅಧ್ಯಕ್ಷ ಕಿಮ್ ಜಾಂಗ್ ಉನ್ ಪ್ರತಿಜ್ಞೆ ಮಾಡಿದ್ದಾರೆ.

    ರಾಜಧಾನಿಯಲ್ಲಿ ಜ್ವರದಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ವೇಳೆ ಅವರಿಗೆ ಒಮಿಕ್ರಾನ್ ಸೋಂಕು ತಗುಲಿರುವುದು ದೃಢವಾಗಿದೆ ಎಂದು ಉತ್ತರ ಕೊರಿಯಾದ ಸರ್ಕಾರಿ ಸುದ್ದಿ ಸಂಸ್ಥೆಯೊಂದು ತಿಳಿಸಿದೆ. ಇದನ್ನೂ ಓದಿ: ಅಸನಿ ಎಫೆಕ್ಟ್‌ನಿಂದ ಬಿಟ್ಟು ಬಿಡದೆ ಮಳೆ – ಡೆಂಗ್ಯೂ, ಮಲೇರಿಯಾ, ಗುನ್ಯಾ ಹೆಚ್ಚಳ ಭೀತಿ

    ಕೊರೊನಾ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ತುರ್ತು ಸಭೆ ನಡೆಸಲಾಯಿತು. ಈ ವೇಳೆ ವೈರಸ್ ನಿಯಂತ್ರಣ ಮಾಡಲು ಗರಿಷ್ಠ ತುರ್ತು ನಿಯಂತ್ರಣ ವ್ಯವಸ್ಥೆಯನ್ನು ಜಾರಿಗೊಳಿಸುವುದಾಗಿ ಕಿನ್ ಘೋಷಣೆ ಮಾಡಿದರು. ಅಲ್ಲದೆ ಅತ್ಯಂತ ಕಡಿಮೆ ಅವಧಿಯಲ್ಲೇ ಕೋವಿಡ್ 19 ವೈರಸ್ ಅನ್ನು ಹತ್ತಿಕ್ಕುವ ಗುರಿಯನ್ನು ಎಲ್ಲರೂ ಹೊಂದಿರಬೇಕು. ಕಟ್ಟುನಿಟ್ಟಿನ ಗಡಿ ನಿಯಂತ್ರಣಗಳ ಮತ್ತು ಲಾಕ್ ಡೌನ್ ಕ್ರಮಗಳನ್ನು ಜಾರಿಗೊಳಿಸುವಂತೆ ಕಿಮ್ ಅಧಿಕಾರಿಗಳಿಗೆ ಸೂಚನೆ ನೀಡಿದರು.