Tag: Uttara Kanda

  • ಶೂಟಿಂಗ್ ಮುನ್ನ ದೇವರ ದರ್ಶನ ಪಡೆದ ಡಾಲಿ ಧನಂಜಯ್

    ಶೂಟಿಂಗ್ ಮುನ್ನ ದೇವರ ದರ್ಶನ ಪಡೆದ ಡಾಲಿ ಧನಂಜಯ್

    ತ್ತರಕಾಂಡ ಚಿತ್ರದ ಚಿತ್ರೀಕರಣ ಮುಂದಿನ ವಾರದಲ್ಲಿ ಆರಂಭಗೊಳ್ಳಲಿದ್ದು, ಈ ಹಿನ್ನೆಲೆಯಲ್ಲಿ ನಟರಾಕ್ಷಸ ಡಾಲಿ‌ ಧನಂಜಯ್ (Dolly Dhananjay) , ಉತ್ತರಕಾಂಡದ ನಿರ್ದೇಶಕ ರೋಹಿತ್ ಪದಕಿ (Rohit Padaki) ಮತ್ತು ನಿರ್ಮಾಪಕ ಕಾರ್ತಿಕ್ ಗೌಡ ಇಂದು ಧಾರವಾಡದ ನುಗ್ಗೇಕೇರಿಯ ಶ್ರೀ ಹನುಮಂತ ದೇವಾಲಯಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದರು.

    ನುಗ್ಗೇಕೇರಿ‌ ಶ್ರೀ ಹನುಮಂತ ದೇವಾಲಯ ಧಾರವಾಡದ ಪುರಾತನ ಮತ್ತು ಪ್ರಖ್ಯಾತ ದೇವಾಲಯವಾಗಿದೆ‌. ಉತ್ತರಕಾಂಡ ಒಂದು ಆಕ್ಷನ್ ಡ್ರಾಮಾ ಚಿತ್ರವಾಗಿದ್ದು ಚಿತ್ರದಲ್ಲಿ   ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್, ಡಾಲಿ ಧನಂಜಯ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ, ಹಾಗೂ ಕೆ ಆರ್ ಜಿ ಸ್ಟುಡಿಯೋಸ್ ನಿರ್ಮಾಣದಲ್ಲಿ ಮೂಡಿ‌‌ ಬರಲಿದೆ.

    ಈ ನಡುವೆ ರಮ್ಯಾ ತಮ್ಮ ಅಭಿಮಾನಿಗಳಿಗೆ ನಿರಾಸೆ ಸುದ್ದಿ ನೀಡಿದ್ದರು. ಉತ್ತರ ಕಾಂಡ ಸಿನಿಮಾದ ಮೂಲಕ ರಮ್ಯಾ (Ramya) ಮತ್ತೆ ಬೆಳ್ಳಿಪರದೆಗೆ ಕಮ್‌ಬ್ಯಾಕ್ ಆಗುತ್ತಿದ್ದಾರೆ ಎಂಬ ಸುದ್ದಿ ಕೇಳಿಯೇ ಫ್ಯಾನ್ಸ್ ಖುಷಿಪಟ್ಟಿದ್ದರು. ಇದೀಗ ಅಭಿಮಾನಿಗಳಿಗೆ ರಮ್ಯಾ ನಿರಾಸೆ ಮೂಡಿಸಿದ್ದಾರೆ. ಬಹುನಿರೀಕ್ಷಿತ ‘ಉತ್ತರಕಾಂಡ’ ಚಿತ್ರಕ್ಕೆ ನಟಿ ಕೈಕೊಟ್ಟಿದ್ದಾರೆ.

     

    ಡೇಟ್ಸ್ ಹೊಂದಾಣಿಕೆ ಆಗದ ಕಾರಣ, ನಾನು ಉತ್ತರಕಾಂಡ (Uttarakanda Film) ಸಿನಿಮಾದಲ್ಲಿ ನಟಿಸುತ್ತಿಲ್ಲ. ನನ್ನ ಸಿನಿಮಾ ಮತ್ತು ರಾಜಕೀಯ ಕೆಲಸಗಳನ್ನು ಸದ್ಯ ಕಾಯ್ದಿರಿಸಿದ್ದೇನೆ. ಆದರೆ ಚಿತ್ರತಂಡಕ್ಕೆ ಶುಭವಾಗಲಿ ಎಂದು ರಮ್ಯಾ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿದ್ದಾರೆ.

  • ಡಾಲಿ ಧನಂಜಯ್ ಜೊತೆ ರಮ್ಯಾ ಮಾತ್ರವಲ್ಲ, ‘ಕಾಂತಾರ’ ಸಪ್ತಮಿ ಕೂಡ ಡುಯೆಟ್

    ಡಾಲಿ ಧನಂಜಯ್ ಜೊತೆ ರಮ್ಯಾ ಮಾತ್ರವಲ್ಲ, ‘ಕಾಂತಾರ’ ಸಪ್ತಮಿ ಕೂಡ ಡುಯೆಟ್

    ಕಾಂತಾರ ಸಿನಿಮಾದ ನಾಯಕಿ ಸಪ್ತಮಿ ಗೌಡ (Sapthami Gowda) ಇದೀಗ ಸಿನಿಮಾ ರಂಗದಲ್ಲಿ ಸಿಕ್ಕಾಪಟ್ಟೆ ಬ್ಯುಸಿ ಆಗುತ್ತಿದ್ದಾರೆ. ಸ್ಯಾಂಡಲ್ ವುಡ್ ನಿಂದ ಮಾತ್ರವಲ್ಲ, ಪರಭಾಷೆಯಿಂದಲೂ ಅವರನ್ನು ಅವಕಾಶಗಳು ಹುಡುಕಿಕೊಂಡು ಬರುತ್ತಿವೆ. ಈಗಾಗಲೇ ಅಭಿಷೇಕ್ ಅಂಬರೀಶ್ ನಟನೆಯ ಕಾಳಿ ಸಿನಿಮಾದಲ್ಲಿ ನಟಿಸಲು ಸಪ್ತಮಿ ಒಪ್ಪಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಸಿಹಿ ಸುದ್ದಿಯ ಬೆನ್ನಲ್ಲೆ ಮತ್ತೊಂದು ಸಂಭ‍್ರಮದ ವಿಷಯ ಗಾಂಧಿನಗರದಲ್ಲಿ ಹರಿದಾಡುತ್ತಿದೆ. ಡಾಲಿ ಜೊತೆಯೂ ಸಪ್ತಮಿ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

    ಮೊನ್ನೆಯಷ್ಟೇ ಡಾಲಿ ಧನಂಜಯ್ (Dali Dhananjay) ಮತ್ತು ರಮ್ಯಾ (Ramya) ಕಾಂಬಿನೇಷನ್ ನ ‘ಉತ್ತರಕಾಂಡ’ ಸಿನಿಮಾದ ಮುಹೂರ್ತವಾಗಿದೆ. ಈ ಸಿನಿಮಾದ ಮೂಲಕ ರಮ್ಯಾ ಮತ್ತೆ ಸಿನಿಮಾ ರಂಗವನ್ನು ಪ್ರವೇಶ ಮಾಡುತ್ತಿದ್ದಾರೆ. ಮುಂದಿನ ತಿಂಗಳಿಂದ ಈ ಸಿನಿಮಾದ ಚಿತ್ರೀಕರಣ ಪ್ರಾರಂಭಿಸಲಾಗುತ್ತಿದೆ. ಈ ಚಿತ್ರದಲ್ಲಿ ಡಾಲಿ ಜೊತೆ ಸಪ್ತಮಿ ಗೌಡ ಕೂಡ ನಟಿಸುತ್ತಿದ್ದಾರಂತೆ. ಅದೂ ರಗಡ್ ರೀತಿಯ ಪಾತ್ರದಲ್ಲಿ ಎನ್ನುವುದು ವಿಶೇಷ. ಇದನ್ನೂ ಓದಿ: ಭಾರತಕ್ಕೆ ಬೈ ಹೇಳಿದ ಬೆನ್ನಲ್ಲೇ ಕ್ರಿಸ್‌ಮಸ್‌ಗೆ ಪ್ರಿಯಾಂಕಾ ಚೋಪ್ರಾ ತಯಾರಿ

    ರಮ್ಯಾ ಮತ್ತು ಡಾಲಿ ಧನಂಜಯ್ ಕಾಂಬಿನೇಷನ್ ನ ಈ ಸಿನಿಮಾದ ಬಗ್ಗೆ ಶೂಟಿಂಗ್ ಮುಂಚೆನೇ ಕುತೂಹಲ ಮೂಡಿಸಿತ್ತು. ಈಗ ಕಾಂತಾರದ ಬೆಡಗಿ ಕೂಡ ಜೊತೆಯಾಗಿರುವುದರಿಂದ ನಿರೀಕ್ಷೆ ಇಮ್ಮಡಿಯಾಗಲಿದೆ. ಅಧಿಕೃತವಾಗಿ ಈ ಸುದ್ದಿಯನ್ನು ಸಿನಿಮಾ ಟೀಮ್ ಆಗಲಿ, ಸಪ್ತಮಿ ಗೌಡ ಆಗಲಿ ಹಂಚಿಕೊಳ್ಳದೇ ಇದ್ದರೂ, ಗಾಂಧಿನಗರದಲ್ಲಿ ಹರಡಿರುವ ಈ ಸುದ್ದಿ ಸುಳ್ಳಾಗದು. ಯಾಕೆಂದರೆ, ಸಪ್ತಮಿ ಗೌಡ ಈಗಾಗಲೇ ಡಾಲಿ ಮತ್ತು ರಮ್ಯಾ ಜೊತೆ ಹಲವು ಸಿನಿಮಾಗಳ ಪ್ರಮೋಷನ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಮೂಲಕ ಸಣ್ಣದೊಂದು ಸುಳಿವು ಕೂಡ ನೀಡಿದ್ದಾರೆ.


    Live Tv

    [brid partner=56869869 player=32851 video=960834 autoplay=true]

  • ಸ್ಟಾರ್ ನಟನ ಚಿತ್ರದ ಮೂಲಕ ಸಿನಿಮಾ ರಂಗಕ್ಕೆ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಕಮ್ ಬ್ಯಾಕ್

    ಸ್ಟಾರ್ ನಟನ ಚಿತ್ರದ ಮೂಲಕ ಸಿನಿಮಾ ರಂಗಕ್ಕೆ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಕಮ್ ಬ್ಯಾಕ್

    ಅಂದುಕೊಂಡಂತೆ ಆಗಿದ್ದರೆ, ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ (Ramya) ತಮ್ಮದೇ ನಿರ್ಮಾಣದ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಕಮ್ ಬ್ಯಾಕ್ ಆಗಬೇಕಿತ್ತು. ಆದರೆ, ಬೇರೊಬ್ಬ ನಾಯಕಿಯನ್ನು ತಮ್ಮ ಚಿತ್ರಕ್ಕೆ ಆಯ್ಕೆ ಮಾಡಿಕೊಳ್ಳುವ ಮೂಲಕ ರಮ್ಯಾ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದರು. ಇದೀಗ ಮತ್ತೊಂದು ಸಿಹಿ ಸುದ್ದಿ ಸಿಕ್ಕಿದ್ದು, ಡಾಲಿ ಧನಂಜಯ್ ನಟನೆಯ ಉತ್ತರಕಾಂಡ (Uttara Kanda) ಚಿತ್ರದ ಮೂಲಕ ರಮ್ಯಾ ಬಣ್ಣದ ಪ್ರಪಂಚಕ್ಕೆ ಕಾಲಿಡಲಿದ್ದಾರೆ ಎನ್ನುವ ಮಾಹಿತಿ ಇದೆ. ಸದ್ಯದಲ್ಲೇ ಈ ಸುದ್ದಿ ಅಧಿಕೃತವಾಗಲಿದೆ ಎಂದೂ ಹೇಳಲಾಗುತ್ತಿದೆ.

    ವಿಜಯ್ ಕಿರಗಂದೂರು ಅವರು ಪ್ರಸ್ತುತ ಪಡಿಸುತ್ತಿರುವ ಚಿತ್ರ “ಉತ್ತರಕಾಂಡ ” ವನ್ನು ಕೆ.ಆರ್.ಜಿ. ಸ್ಟುಡಿಯೋಸ್ ಸಂಸ್ಥೆಯ ಕಾರ್ತಿಕ್ (Karthik Gowda) ಮತ್ತು ಯೋಗಿ.ಜಿ.ರಾಜ್ ಅವರು ನಿರ್ಮಿಸುತ್ತಿದ್ದಾರೆ.  ಡಾಲಿ ಧನಂಜಯ (Dolly Dhananjay) ಮುಖ್ಯ ಪಾತ್ರದಲ್ಲಿ ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿರುವ ಈ ಚಿತ್ರವನ್ನು ರೋಹಿತ್ ಪದಕಿ (Rohit Padaki) ಅವರು ನಿರ್ದೇಶಿಸುತ್ತಿದ್ದಾರೆ. ರತ್ನನ್ ಪ್ರಪಂಚ ಯಶಸ್ಸಿನ ನಂತರ ಕೆ.ಆರ್.ಜಿ ಸ್ಟುಡಿಯೋಸ್ , ಡಾಲಿ ಧನಂಜಯ ಮತ್ತು ರೋಹಿತ್ ಪದಕಿ ಅವರ ತಂಡ ಮತ್ತೊಮ್ಮೆ ಕೈ ಜೋಡಿಸುತಿದ್ದಾರೆ. ಇದನ್ನೂ ಓದಿ:ಚಿಲ್ಲರೆ, ಮಾನಗೆಟ್ಟವನೇ ಎಂದು ರೂಪೇಶ್ ರಾಜಣ್ಣಗೆ ಸಂಬರ್ಗಿ ಕ್ಲಾಸ್

    ಚಿತ್ರವನ್ನು ಉತ್ತರ ಕರ್ನಾಟಕದ ಹಿನ್ನೆಲೆಯಲ್ಲಿ ಚಿತ್ರೀಕರಿಸಲಾಗುತ್ತದೆ ಅನ್ನುವುದು ವಿಷೇಶ  ಸಂಗತಿ. ರಾಜ್ಯೋತ್ಸವದ ದಿನ ಮಾಡಿದ ಹೊಸ ಪ್ರಕಟಣೆಯಂತೆ ನವಂಬರ್ 6ರಂದು  , ಮಧ್ಯಾಹ್ನ 3.22 ಕ್ಕೆ ಚಿತ್ರದ ಪೂಜೆ ಕಾರ್ಯಕ್ರಮ ಅದ್ದೂರಿಯಾಗಿ ಬೆಂಗಳೂರಿನಲ್ಲಿ  ನಡೆಯಲಿದೆ. ಚಿತ್ರ ತಂಡದ ಬಗ್ಗೆ ಮತ್ತು ಚಿತ್ರದ ಬಗ್ಗೆ ಮತ್ತಷ್ಟು ವಿವರಗಳನ್ನು ಆ ದಿನ ಹಂಚಿಕೊಳ್ಳಲಾಗುತ್ತದೆ .

    ಮನುಷ್ಯನ ಮನಸ್ಸಿನ ಒಳಗಿನ ಖೇದಗಳನ್ನು, ಗೊಂದಲಗಳನ್ನು, ತಳಮಳಗಳನ್ನು ಬಹಳ ಸುಂದರವಾಗಿ ಕಥೆಯ ರೂಪದಲ್ಲಿ ರೋಹಿತ್ ಅವರು ಹೆಣೆದಿದ್ದಾರೆ.  ಚರಣ್ ರಾಜ್ ಅವರು ಸಂಗೀತ ನಿರ್ದೇಶನ ಮಾಡುತ್ತಿರುವ ಈ ಚಿತ್ರಕ್ಕೆ ಸ್ವಾಮಿ ಅವರು ಛಾಯಾಗ್ರಾಹಕರಾಗಿದ್ದಾರೆ. ದೀಪು ಎಸ್ ಕುಮಾರ್ ಅವರು ಸಂಕಲನ ಮತ್ತು  ವಿಶ್ವಾಸ್ ಕಶ್ಯಪ್ ಅವರು ವಿನ್ಯಾಸದ ಜವಾಬ್ಧಾರಿ ವಹಿಸಿಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಡಾಲಿ ಧನಂಜಯ ಹುಟ್ಟು ಹಬ್ಬಕ್ಕೆ ‘ಉತ್ತರಕಾಂಡ’ ಸಿನಿಮಾದ ಖದರ್ ಲುಕ್

    ಡಾಲಿ ಧನಂಜಯ ಹುಟ್ಟು ಹಬ್ಬಕ್ಕೆ ‘ಉತ್ತರಕಾಂಡ’ ಸಿನಿಮಾದ ಖದರ್ ಲುಕ್

    ವಿಜಯ್ ಕಿರಗಂದೂರು ಅರ್ಪಿಸುವ,ಕೆ.ಆರ್.ಜಿ ಸ್ಟುಡಿಯೋಸ್ ಲಾಂಛನದಲ್ಲಿ ಕಾರ್ತಿಕ್ ಹಾಗೂ ಯೋಗಿ ಜಿ ರಾಜ್ ನಿರ್ಮಿಸುತ್ತಿರುವ ” ಉತ್ತರಕಾಂಡ” ಚಿತ್ರದ ನಾಯಕನಾಗಿ ಡಾಲಿ ಧನಂಜಯ ಅಭಿನಯಿಸುತ್ತಿದ್ದಾರೆ.  ಈ ಹಿಂದೆ ಕೆ.ಆರ್.ಜಿ ಸ್ಟುಡಿಯೋಸ್ ನಿರ್ಮಾಣದಲ್ಲಿ ಡಾಲಿ ಧನಂಜಯ ನಾಯಕನಾಗಿ ನಟಿಸಿದ್ದ “ರತ್ನನ ಪ್ರಪಂಚ” ಚಿತ್ರ ಸಹ ಪ್ರಚಂಡ ಯಶಸ್ಸು ಕಂಡಿತ್ತು. ಇದೇ ಕಾಂಬಿನೇಶನ್ ನಲ್ಲಿ “ಹೊಯ್ಸಳ” ಚಿತ್ರ ಸಹ ಬರುತ್ತಿದ್ದು, ಮೂರನೇ ಚಿತ್ರವಾಗಿ “ಉತ್ತರಕಾಂಡ” ನಿರ್ಮಾಣವಾಗಲಿದೆ.

    “ದಯವಿಟ್ಟು ಗಮನಿಸಿ”, ” ರತ್ನನ ಪ್ರಪಂಚ” ದಂತಹ ವಿಭಿನ್ನ ಚಿತ್ರಗಳ ನಿರ್ದೇಶಕ ರೋಹಿತ್ ಪದಕಿ ನಿರ್ದೇಶನದಲ್ಲಿ ಈ ಚಿತ್ರ ಮೂಡಿಬರುತ್ತಿದೆ. ಕೆಲವು ದಿನಗಳ ಹಿಂದೆ ಈ ಚಿತ್ರದ ಪೋಸ್ಟರ್ ಬಿಡುಗಡೆಯಾಗಿತ್ತು. ಆದರೆ ನಾಯಕ ಯಾರು ? ಎಂಬ ಕುತೂಹಲವಿತ್ತು‌. ಆ ಕುತೂಹಲಕ್ಕೆ ಈಗ ತೆರೆ ಬಿದ್ದಿದೆ. ಚಿತ್ರದ ನಾಯಕನಾಗಿ ಡಾಲಿ ಧನಂಜಯ ಅಭಿನಯಿಸುತ್ತಿದ್ದಾರೆ. ಧನಂಜಯ ಅವರ ಹುಟ್ಟುಹಬ್ಬದ ದಿನದಂದೇ ಕೆ.ಆರ್.ಜಿ ಸ್ಟುಡಿಯೋಸ್ ಸಂಸ್ಥೆ ಈ ಸುದ್ದಿಯನ್ನು ಹಂಚಿಕೊಂಡು, ನಾಯಕನಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದೆ. ಇದನ್ನೂ ಓದಿ:ಮೂರನೇ ವಾರ ನಾಮಿನೇಷನ್‌ ಸ್ಟಾರ್ಟ್‌: ಉದಯ್‌ ಸೂರ್ಯಗೆ ಮನೆಯಿಂದ ಗೇಟ್‌ ಪಾಸ್?

    “ಉತ್ತರ ಕಾಂಡ” ಉತ್ತರ ಕರ್ನಾಟಕದ ಗ್ಯಾಂಗ್ ಸ್ಟರ್ ಕಥೆ ಆಧರಿಸಿದೆ.‌ ಉತ್ತರ ಕರ್ನಾಟಕದಲ್ಲೇ ಹೆಚ್ಚಿನ ಭಾಗದ ಚಿತ್ರೀಕರಣ ನಡೆಯುತ್ತದೆ. “ಹೊಯ್ಸಳ” ಚಿತ್ರದ ನಂತರ, ಜನವರಿಯಲ್ಲಿ ಈ ಚಿತ್ರದ ಚಿತ್ರೀಕರಣ ಆರಂಭವಾಗುತ್ತದೆ ಎಂದು ನಿರ್ದೇಶಕ ರೋಹಿತ್   ತಿಳಿಸಿದ್ದಾರೆ. ಚರಣ್ ರಾಜ್ “ಉತ್ತರ ಕಾಂಡ” ಚಿತ್ರಕ್ಕೆ ಸಂಗೀತ ನೀಡುತ್ತಿದ್ದು, ಸ್ವಾಮಿ  ಛಾಯಾಗ್ರಹಣ ಹಾಗೂ ದೀಪು ಎಸ್ ಕುಮಾರ್  ಸಂಕಲನ ಹಾಗೂ ವಿಶ್ವಾಸ್ ಅವರ ಕಲಾ ನಿರ್ದೇಶನವಿರುತ್ತದೆ.

    Live Tv
    [brid partner=56869869 player=32851 video=960834 autoplay=true]